ಅಭಿಪ್ರಾಯ / ಸಲಹೆಗಳು

 

1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.31/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:22.02.2021 ರಂದು ಬೆಳಿಗ್ಗೆ 11-30 ಗಂಟೆಗೆ ಚಿಕ್ಕಬಳ್ಳಾಪುರ ನಗರದ ಮಂಜುನಾಥ ಆಸ್ಪತ್ರೆಯಲ್ಲಿ ಗಾಯಾಳು ಬಿಬಿನ್ ವಿಲ್ಲಿಂಗ್ ಟನ್ ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ದಿನಾಂಕ:21.02.2021 ರಂದು ಶಿಡ್ಲಘಟ್ಟ ವಾಸಿ ತನ್ನ ಸ್ನೇಹಿತ ಯಶ್ವಂತ್ ರವರ ಮದುವೆ ಅರತಕ್ಷತೆ ಕಾರ್ಯಕ್ರಮ ಕೈವಾರ ದೇವಸ್ಥಾನದಲ್ಲಿದ್ದುದರಿಂದ ತಾನು ತನ್ನ ಸ್ನೇಹಿತರುಗಳಾದ ಜೀವನ್ ಕುಮಾರ್, ಹೇಮಂತ್ , ದರ್ಶನ್ & ಚಿರಾಗ್ ರವರುಗಳು ದ್ವಿ ಚಕ್ರ ವಾಹನಗಳಲ್ಲಿ ಹೋಗಿದ್ದು, ಮದುವೆ ಅರತಕ್ಷತೆ ಮುಗಿಸಿಕೊಂಡು ಈ ದಿನ ದಿನಾಂಕ:22.02.2021 ರಂದು ಬೆಳಿಗ್ಗೆ 5-30 ಗಂಟೆಗೆ ಕೈವಾರ ಬಿಟ್ಟು ತಾನು , ಜೀವನ್ ಕುಮಾರ್ & ಹೆಮಂತ್ ರವರುಗಳು ದರ್ಶನ್ ತಂದಿದ್ದ ಕೆಎ 40 ಇ.ಇ 8763 ನೊಂದಣಿ ಸಂಖ್ಯೆಯ ಯಮಹಾ ಫ್ಯಾಸಿನೋ ದ್ವಿ ಚಕ್ರ ವಾಹನದಲ್ಲಿ ಕುಳಿತಿದ್ದು, ಹೇಮಂತ್ ರವರು ದ್ವಿ ಚಕ್ರ ವಾಹನವನ್ನು ಓಡಿಸುತ್ತಿದ್ದು, ದರ್ಶನ್ & ಚಿರಾಗ್ ಮತ್ತೊಂದು ದ್ವಿ ಚಕ್ರ ವಾಹನದಲ್ಲಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದು, ಬೆಳಿಗ್ಗೆ 6-30 ಗಂಟೆಗೆ ಶಿಡ್ಲಘಟ್ಟ-ಚಿಕ್ಕಬಳ್ಳಾಪುರ  ರಸ್ತೆಯಲ್ಲಿ ಹೊಸಹುಡ್ಯ ಗ್ರಾಮದ ಬಳಿ ಬರುತ್ತಿದ್ದಾಗ ಹಿಂದೆಯಿಂದ ಬರುತ್ತಿದ್ದ ಐಚರ್ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಂದಿನಿಂದ ತಮ್ಮ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದು, ತಾವುಗಳು ದ್ವಿ ಚಕ್ರ ವಾಹನದ ಸಮೇತ ರಸ್ತೆಯಲ್ಲಿ ಬಿದ್ದು ಹೋಗಿದ್ದು, ಆಗ ಸಾರ್ವಜನಿಕರು & ತಮ್ಮ ಹಿಂದೆ ಬರುತ್ತಿದ್ದ ದರ್ಶನ್ & ಚಿರಾಗ್ ರವರುಗಳು ತಮ್ಮನ್ನು ಉಪಚರಿಸಿದ್ದು, ತನಗೆ ಎಡಕಾಲ ಮಂಡಿಗೆ, ಜೀವನ್ ಕುಮಾರ್ ರವರಿಗೆ ಎಡಮೊಣಕಾಲಿಗೆ , ಎಡಮೊಣಕೈಗೆ ರಕ್ತ ಗಾಯಗಳಾಗಿದ್ದು, ಹೇಮಂತ್ ರವರಿಗೆ ತಲೆಗೆ ಗಾಯವಾಗಿದ್ದು,  ಕೈ ಕಾಲುಗಳಿಗೆ ತರಚಿದ ಗಾಯಗಳಾಗಿರುತ್ತೆಂದು ನಂತರ ಅಲ್ಲಿಯೇ ಇದ್ದ ಐಚರ್ ವಾಹನದ ನಂಬರ್ ನೊಡಲಾಗಿ ಎಪಿ 03 ಟಿ.ಇ 4920 ಆಗಿದ್ದು, ನಂತರ 108 ಅಂಬುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಬಂದು ದಾಖಲಾಗಿ ಚಿಕಿತ್ಸೆ ನೀಡಿದ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ತಾನು ಮಂಜುನಾಥ ಆಸ್ಪತ್ರೆಗೆ ಬಂದು ದಾಖಲಾಗಿದ್ದು, ಜೀವನ್ ಕುಮಾರ್ ಬೆಂಗಳೂರಿನ ಪ್ರೋಲೈಫ್ ಆಸ್ಪತ್ರೆಗೆ , ಹೇಮಂತ್ ರವರನ್ನು ಯಲಹಂಕದ ಕೆ.ಕೆ ಆಸ್ಪತ್ರೆಗೆ  ಕಳುಹಿಸಿಕೊಟ್ಟಿರುತ್ತಾರೆಂದು ಈ ಅಪಘಾತಕ್ಕೆ ಕಾರಣನಾದ ಎಪಿ 03 ಟಿ.ಇ 4920 ಐಚರ್ ವಾಹನದ ಚಾಲಕನ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ಮೇರೆಗೆ ಈ ಪ್ರ ವ ವರಧಿ.

 

2. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.08/2021 ಕಲಂ. 323,324,504,506 ಐ.ಪಿ.ಸಿ:-

     ದಿನಾಂಕ; 21-02-2021 ರಂದು ಸಂಜೆ 4.00 ಗಂಟೆಗೆ ಪಿರ್ಯಾದಿಯಾದ ಶ್ರೀ ವಿ. ಮಂಜುನಾಥ ಬಿನ್ ವೆಂಕಟಪ್ಪ, ಇಂದಿರಾ ನಗರ, ವಾರ್ಡ್ ನಂ: 31, ಚಿಕ್ಕಬಳ್ಳಾಪುರ ನಗರ. ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ; 19-10-2020 ರಂದು ಜೋಸೆಫ್ ಎಂಬುವವರಿಗೆ ಮರಗೆಲಸ ಅಂಗಡಿ ತೆಗೆಯಲು 5 ಲಕ್ಷ ರೂಪಾಯಿಗಳು ಅಗ್ರಿಮೆಂಟ್ ಮಾಡಿ ತೆಗೆದುಕೊಂಡಿದ್ದು, ನಂತರ 2 ತಿಂಗಳು ಕಳೆದ ಮೇಲೆ ಕೈ ಸಾಲವಾಗಿ ಜೋಸೆಪ್ ರವರ ಮಾವನಾದ ಶ್ರೀನಿವಾಸ ಬಿನ್ ಪಿವಿ ನಾರಾಯಣಪ್ಪ ಸಮಕ್ಷಮದಲ್ಲಿ 5 ಲಕ್ಷ ರೂಪಾಯಿಗಳನ್ನು ನಗದಾಗಿ ತೆಗೆದುಕೊಂಡಿರುತ್ತಾರೆ. ಒಟ್ಟುತನ್ನಿಂದ 10 ಲಕ್ಷ ರೂಗಳನ್ನು ತೆಗೆದುಕೊಂಡಿದ್ದು, ದಿನಾಂಕ; 11-02-2021 ರಂದು ಮದ್ಯಾಹ್ನ ತಾನು ಹಣ ಕೇಳಲು ಹೋದಾಗ ಜೋಸೆಫ್ ರವರ ಅಂಗಡಿ ಹತ್ತಿರ ಹೋಗಿ ಕೇಳಿದಾಗ ತನ್ನ ಮೇಲೆ ನಿನ್ನಮ್ಮನ್ ನಿನ್ನಕ್ಕನ್ ಎಂದು ಅವಾಚ್ಯ ಶಬ್ದಗಳಿಂದ ಜೋರಾಗಿ ಕೂಗಾಡಿ ತನ್ನ ಬಲಗೈ ಮುಷ್ಟಿಯಿಂದ ಜೋರಾಗಿ ತನ್ನ ಮೂತಿಗೆ ಬಲವಾಗಿ ಗುದ್ದಿರುವುದರಿಂದ ತನ್ನ ಹಲ್ಲುಗಳಿಗೆ ಅಪಾಯವಾಗಿದ್ದು, ಮತ್ತು ಪಕ್ಕದಲ್ಲಿ ಇದ್ದ ಮುಂದೆ ದೊಣ್ಣೆಯಿಂದ ತನಗೆ ಹಿಂಬಾಗದಿಂದ ಹೊಡೆದು ಕೆಳಗೆ ಬೀಳಿಸಿ ದೌರ್ಜನ್ಯದಿಂದ ಸಾಯಿಸಲು ಉದ್ದೇಶ ಪೂರಕವಾಗಿ ಬಂದು ಹಣ ಕೇಳಿದರೆ ನಿನ್ನನ್ನು ಭೂಮಿಯ ಮೇಲೆ ಇರಿಸದೆ ದೂರ ಕರೆದುಕೊಂಡು ಹೋಗಿ ಕಾಣದ ಜಾಗದಲ್ಲಿ ಸಾಯಿಸಿ ಹೂತು ಹಾಕುತ್ತೇನೆ. ತನಗೆ ಹಣ ಕೇಳಬೇಡ ಎಂದು ಮನಸ್ಸಿಗೆ ಬಂದಂತೆ ಗುದ್ದಿ ಎಳೆದಾಡಿ ಗಾಯಪಡಿಸಿ ದೌರ್ಜನ್ಯದಿಂದ ಸಾಯಿಸಲು ಮುಂದಾಗಿರುವ ಜೋಸೇಪ್ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ. ಹಿರಿಯರು ನ್ಯಾಯ ಪಂಚಾಯ್ತಿ ಮಾಡುವುದಾಗಿ ಹೇಳಿದ್ದು, ನ್ಯಾಯ ಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ದೂರು ಬಂದು ದೂರು ನೀಡಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.75/2021 ಕಲಂ. 392  ಐ.ಪಿ.ಸಿ:-

     ದಿನಾಂಕ:22/02/2021 ರಂದು ಮದ್ಯಾಹ್ನ 12.00 ಗಂಟೆಗೆ ಶ್ರೀಮತಿ ಗಾಯತ್ರಿ ಕೋಂ ಜಿ.ಕೆ.ಶ್ರೀನಾಥ, 21 ವರ್ಷ, ಭೋವಿ ಜನಾಂಗ, ಬಿ.ಕಾಂ ವಿದ್ಯಾರ್ಥಿ, ಗಾಜಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ತವರು ಮನೆ ಕೋಲಾರ ತಾಲ್ಲೂಕು, ಸೊಣ್ಣೇನಹಳ್ಳಿ ಗ್ರಾಮ ಆಗಿದ್ದು, ಈಗ್ಗೆ ಸುಮಾರು 2 ವರ್ಷಗಳ ಹಿಂದೆ ತನಗೆ ಚಿಂತಾಮಣಿ ತಾಲ್ಲೂಕು ಗಾಜಲಹಳ್ಳಿ ಗ್ರಾಮದ ವಾಸಿ ಜಿ.ಕೆ.ಶ್ರೀನಾಥ ಬಿನ್ ಕೃಷ್ಣಪ್ಪ ರವರೊಂದಿಗೆ ಮದುವೆ ಆಗಿರುತ್ತೆ. ತಾನು ಚಿಂತಾಮಣಿ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ವ್ಯಾಸಂಗ ಮಾಡಿಕೊಂಡಿರುತ್ತೇನೆ. ತಾನು ಪ್ರತಿದಿನ ತಮ್ಮ ಗ್ರಾಮದಿಂದ ನನ್ನ ಬಾಬ್ತು ಕೆಎ-07 ವೈ-7661 ನೋಂದಣಿ ಸಂಖ್ಯೆಯ ಹೋಂಡಾ ಡಿಯೋ ದ್ವಿಚಕ್ರ ವಾಹನದಲ್ಲಿ ಮೈಲಾಂಡ್ಲಹಳ್ಳಿ ಗೇಟ್ ಗೆ ಬಂದು ದ್ವಿಚಕ್ರ ವಾಹನವನ್ನು ನಿಲ್ಲಿಸಿ ನಂತರ ಅಲ್ಲಿಂದ ಬಸ್ಸು ಮುಖಾಂತರ ಚಿಂತಾಮಣಿ ನಗರದಲ್ಲಿರುವ ಸರ್ಕಾರಿ ಮಹಿಳೆ ಕಾಲೇಜ್ ಗೆ ಬಂದು ಹೋಗುತ್ತಿದ್ದೆನು. ಎಂದಿನಂತೆ ಈ ದಿನ ದಿನಾಂಕ: 22/02/2021 ರಂದು ತಾನು ತಮ್ಮ ಗ್ರಾಮದಿಂದ ತನ್ನ ಬಾಬ್ತು ಮೇಲ್ಕಂಡ ದ್ವಿಚಕ್ರ ವಾಹನದಲ್ಲಿ ತಮ್ಮ ಗ್ರಾಮದಿಂದ ಮೈಲಾಂಡ್ಲಹಳ್ಳಿ ಗೇಟ್ ಗೆ ಬಂದು ದ್ವಿಚಕ್ರ ವಾಹನವನ್ನು ನಿಲ್ಲಿಸಿ ಬಸ್ಸಿಗೆ ಕಾಯುತ್ತಿದ್ದಾಗ, ಸಮಯಕ್ಕೆ ಬಸ್ಸು ಬಾರದ ಕಾರಣ ಕಾಲೇಜಿಗೆ ಸಮಯವಾಗುತ್ತೆಂದು ತಾನು ದ್ವಿಚಕ್ರ ವಾಹನವನ್ನು ನಡೆಸಿಕೊಂಡು ಬೆಳಿಗ್ಗೆ ಸುಮಾರು 09.35 ಗಂಟೆ ಸಮಯದಲ್ಲಿ ಚಿಂತಾಮಣಿ-ಕೋಲಾರ ಮುಖ್ಯರಸ್ತೆಯ ಕುರುಬೂರು ಪಾರ್ಮ್-ಕಾಚಹಳ್ಳಿ ಗೇಟ್ ಮಾರ್ಗಮದ್ಯೆ ಇರುವ ರಸ್ತೆಯ ತಿರುವು ಬಿಟ್ಟು ಸ್ವಲ್ವ ಮುಂದೆ ಹೋಗುತ್ತಿದ್ದಾಗ, ತನ್ನ ಹಿಂದುಗಡೆಯಿಂದ 2 ದ್ವಿಚಕ್ರ ವಾಹನಗಳಲ್ಲಿ 4 ಜನರು ಬರುತ್ತಿದ್ದು, ಆ ಪೈಕಿ ಮುಂದೆ ಬರುತ್ತಿದ್ದ ಪಲ್ಸರ್ ವಾಹನದ ಹಿಂದುಗಡೆ ಕುಳಿತಿದ್ದ ವ್ಯಕ್ತಿಯು ತನ್ನ ಕತ್ತಿನಲ್ಲಿದ್ದ ಚೈನ್ ಗೆ ಕೈ ಹಾಕಿ ಎಳೆದಾಗ ತಾನು ತಪ್ಪಿಸಿಕೊಂಡು ವಾಹನವನ್ನು ನಡೆಸಿಕೊಂಡು ಹೋದಾಗ. ಪಲ್ಸರ್ ವಾಹನದ ಸವಾರ ಮುಂದೆ ಬಂದು ತನ್ನ ವಾಹನವನ್ನು ನಿಲ್ಲಿಸಿ ಆತನ ಬಳಿ ಇದ್ದ ಚಾಕುವನ್ನು ತನಗೆ ತೋರಿಸಿ ತನ್ನ ಕತ್ತಿನಲ್ಲಿದ್ದ ಉಮಾ ಗೋಲ್ಡ್ ಚೈನು ಮತ್ತು ಅದರಲ್ಲಿದ್ದ ಬಂಗಾರದ 2 ತಾಳಿ ಬೊಟ್ಟುಗಳನ್ನು ಕಿತ್ತುಕೊಂಡು ಚಿಂತಾಮಣಿ ಕಡೆಗೆ ಹೊರಟು ಹೋಗಿರುತ್ತಾರೆ. ಇದರಿಂದ ತನ್ನ ಕತ್ತಿನ ಬಲಭಾಗದಲ್ಲಿ ತರಚಿದ ಗಾಯವಾಗಿರುತ್ತೆ. ತಾನು ಕಿರುಚುಕೊಂಡಾಗ ದಾರಿಯಲ್ಲಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದವರು ತನ್ನನ್ನು ಉಪಚರಿಸಿರುತ್ತಾರೆ. ಬಂಗಾರದ ತಾಳಿ ಬೊಟ್ಟುಗಳು ಐದೂವರೆ ಗ್ರಾಂ ತೂಕವಿದ್ದು, ಸುಮಾರು 22,000/-ರೂ ಬೆಲೆ ಬಾಳುತ್ತೆ. ಉಮಾ ಗೋಲ್ಡ್ ಚೈನು ಸುಮಾರು 2,000/- ರೂ ಬೆಲೆ ಬಾಳುತ್ತೆ. ತಾನು ಸದರಿ ದ್ವಿಚಕ್ರ ವಾಹನಗಳ ನೊಂದಣಿ ಸಂಖ್ಯೆಯನ್ನು ಗಮನಿಸಿರುವುದಿಲ್ಲ. ಪಲ್ಸರ್ ವಾಹನವು ಕಪ್ಪು ಬಣ್ಣಿದಿಂದ ಕೂಡಿದ್ದು, ಟಿವಿಎಸ್ ಅಪಾಚಿ ವಾಹನವು ಬಿಳಿ ಬಣ್ಣದಿಂದ ಕೂಡಿರುತ್ತೆ. ಮೇಲ್ಕಂಡ 4 ಜನರು ಸುಮಾರು 20 ರಿಂದ 25 ವರ್ಷ ವಯಸ್ಸುಳ್ಳವರಾಗಿರುತ್ತಾರೆ. ತಾನು ಈ ವಿಷಯವನ್ನು ತನ್ನ ಗಂಡನಾದ ಜಿ.ಕೆ.ಶ್ರೀನಾಥ ರವರಿಗೆ ಪೋನ್ ಮಾಡಿ ತಿಳಿಸಿದ್ದು, ಸ್ವಲ್ವ ಸಮಯದ ನಂತರ ತನ್ನ ಗಂಡ ಸ್ಥಳಕ್ಕೆ ಬಂದು ತನ್ನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿರುತ್ತಾರೆ. ತನ್ನ ಕತ್ತಿನಲ್ಲಿದ್ದ ಉಮಾ ಗೋಲ್ಡ್ ಚೈನ್ ಮತ್ತು ಅದರಲ್ಲಿದ್ದ ಬಂಗಾರದ ತಾಳಿ ಬೊಟ್ಟುಗಳನ್ನು ಕಿತ್ತುಕೊಂಡು ಪರಾರಿಯಾಗಿರುವ ಮೇಲ್ಕಂಡವರನ್ನು ಪತ್ತೆ ಮಾಡಿ ಅವರ ವಿರುಧ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿರುವುದಾಗಿರುತ್ತೆ.

 

4. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.13/2021 ಕಲಂ. 323,324,504,506,34  ಐ.ಪಿ.ಸಿ:-

     ದಿನಾಂಕ:-22-02-2021 ರಂದು ಠಾಣೆಯ ಹೆಚ್ ಸಿ-250 ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಗಾಯಾಳುಯಾದ ಶ್ರೀ ಮತಿ ಮಂಜುಳ ಕೋಂ ಶ್ರೀನಿವಾಸರವರ ಹೇಳಿಕೆಯನ್ನು ಪಡೆದು ಠಾಣೆಯಲ್ಲಿ ಹಾಜರು ಪಡಿಸಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ, ತನಗೆ ಈಗ್ಗೆ ಸುಮಾರು 20 ವರ್ಷಗಳ ಹಿಂದೆ ಶೀಗಲಪಲ್ಲಿ ಗ್ರಾಮದ ಶ್ರೀನಿವಾಸರವರೊಂದಿಗೆ ಮದುವೆಯಾಗಿದ್ದು, ತಮಗೆ ಒಂದನೇ ವಿನೋದಕುಮಾರ, ಎರಡನೇ ರಾಜೇಂದ್ರ  ಇಬ್ಬರು ಗಂಡು ಮಕ್ಕಳಿದ್ದು, ತಾನು ಸರ್ಕಾರಿ ಶಾಲೆಯಲ್ಲಿ ಅಡುಗೆ ಮಾಡುತ್ತಿರುತ್ತೇನೆ. ತನ್ನ ಗಂಡ ಈಗ್ಗೆ ಸುಮಾರು 2 ವರ್ಷಗಳಿಂದ ಜೂಲಪಾಳ್ಯ ಗ್ರಾಮದ ಈಶ್ವರಮ್ಮ ಎಂಬುವವರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ನಾವು ಎಷ್ಟು ಬುದ್ದಿ ಹೇಳಿದರೂ ಕೇಳದೇ ಈಶ್ವರಮ್ಮರವರ ಗ್ರಾಮವಾದ ಜೂಲಪಾಳ್ಯಕ್ಕೆ ಹೋಗಿ ಅಲ್ಲಿಯೇ ಇರುತ್ತಿದ್ದರು, 12 ದಿನಗಳ ಹಿಂದೆ ತನ್ನ ಗಂಡ ಜೂಲಪಾಳ್ಯ ಗ್ರಾಮದ ಈಶ್ವರಮ್ಮರವರ ಮನೆಗೆ ಹೋಗಿದ್ದು, ನಿನ್ನೆ ದಿನಾಂಕ:-21-02-2021 ರಂದು ರಾತ್ರಿ 7-30 ಗಂಟೆ ತಮ್ಮ ಮನೆಗೆ ಬಂದು ವಿನಾಕಾರಣ ತನ್ನ ಮೇಲೆ ಜಗಳ ತೆಗೆದು “ನೀನು ಸೊಳೇ ಮುಂಡೆ, ಲೋಪರ್ ಮುಂಡೆ” ಎಂದು ಕೆಟ್ಟ ಕೆಟ್ಟ ಮಾತುಗಳಿಂದ ಬೈದಾಡಿ ಕಟ್ಟಿಗೆಯಿಂದ ತನ್ನ ಎರಡು ಕೈಗಳಿಗೆ ಮೈ ಮೇಲೆ ಹೊಡೆದಿರುತ್ತಾನೆ, ನಂತರ ತಮ್ಮ ಅತ್ತೆ ನರಸಮ್ಮ ಕೋಂ ಲೇಟ್ ಗೋಪಾಲಪ್ಪರವರು ಸಹ ಕೈಗಳಿಂದ ತನ್ನನ್ನು ಹೊಡೆದು, ತಮ್ಮ ಅತ್ತಿಗೆ ಲಕ್ಷ್ಮೀದೇವಮ್ಮ ಕೋಂ ವೆಂಕಟರವಣಪ್ಪರವರು ಸಹ ಕೈಗಳಿಂದ ತನ್ನನ್ನು ಹೊಡೆದರು, ಇವರು ಮೂರು ಜನರು ಮೂದಲೇ ಮಾತನಾಡಿಕೊಂಡು ತನ್ನನ್ನು ಹೊಡಿದಿರುತ್ತಾರೆ. ನಂತರ ತನ್ನ ಗಂಡ ತನ್ನನ್ನು ಕುರಿತು “ನಿನ್ನನ್ನು ಸಾಯಿಸುವವರೆಗೆ ಬಿಡುವುದಿಲ್ಲ, ನಿನ್ನನ್ನು ಸಾಯಿಸುತ್ತೇನೆ” ಎಂದು ಪ್ರಾಣಬೆದರಿಕೆ ಹಾಕಿದನು, ಮೇಲ್ಕಂಡವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ತನಗೆ ನ್ಯಾಯ ಕೊಡಿಸಲು ಕೋರುತ್ತೇನೆ ತಮ್ಮ ಗ್ರಾಮದ ಪ್ರಶಾಂತ ಬಿನ್ ನರಸಿಂಹಪ್ಪ, ಮತ್ತು ಮುತ್ತರಾಯಪ್ಪ ಬಿನ್ ಲೇಟ್ ಕೊಂಡಪ್ಪರವರು ಜಗಳ ಬಿಡಿಸಿರುತ್ತಾರೆ, ತನ್ನ ಮಗ ರಾಜೇಂದ್ರರವರಿಗೆ ಪೋನ್ ಮಾಡಿ ವಿಚಾರ ತಿಳಿಸಿ ತನ್ನ ಮಗನ ಜೊತೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿರುತ್ತೇನೆ,ಮೇಲ್ಕಂಡ ಮೂರು ಜನರ ವಿರುದ್ದ ಸೂಕ್ತ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

5. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.47/2021 ಕಲಂ. 392  ಐ.ಪಿ.ಸಿ:-

     ದಿನಾಂಕ:22.02.2021 ರಂದು ಮದ್ಯಾಹ್ನ 1.00 ಗಂಟೆಗೆ ಪಿರ್ಯಾದಿದಾರರಾದ ಎ ಸುಜಾತ ಕೋಂ ಮನ್ನಾರಸ್ವಾಮಿ, 45 ವರ್ಷ, ಗುಡ್ಲನರಸಿಂಹನಹಳ್ಳಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತಾನು ಶಿಡ್ಲಘಟ್ಟ ತಾಲ್ಲೂಕು ಗೊರಮಡಗು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 10 ವರ್ಷಗಳಿಂದ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡು ಇರುತ್ತೇನೆ. ತಾನು ಪ್ರತಿ ದಿನ ತಮ್ಮ ಗ್ರಾಮವಾದ ಗುಡ್ಲನರಸಿಂಹನಹಳ್ಳಿ ಗ್ರಾಮದಿಂದ ತಮ್ಮ ಬಾಬತ್ತು ದ್ವಿ ಚಕ್ರ ವಾಹನದಲ್ಲಿ ಹೋಗಿ ಬರುತ್ತಿರುತ್ತೇನೆ. ಎಂದಿನಂತೆ ದಿನಾಂಕ:22.02.2021 ರಂದು ಬೆಳಿಗ್ಗೆ ತನ್ನ ಬಾಬತ್ತು ದ್ವಿ ಚಕ್ರ ವಾಹನದಲ್ಲಿ ಗೊರಮಡಗು ಗ್ರಾಮಕ್ಕೆ ಹೋಗಲು ಬೆಳಿಗ್ಗೆ 10.30 ಗಂಟೆ ಸಮಯದಲ್ಲಿ ಗೊರಮಡಗು ಕ್ರಾಸ್ ನಿಂದ ಸ್ವಲ್ಪ ಮುಂದೆ ಹೋದಾಗ ತನ್ನ ಹಿಂದೆ ಯಾರೋ ಇಬ್ಬರು ಅಸಾಮಿಗಳು ದ್ವಿ ಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದು ತನ್ನ ದ್ವಿ ಚಕ್ರ ವಾಹನದ ಪಕ್ಕದಲ್ಲಿ ಬಂದು ದ್ವಿ ಚಕ್ರ ವಾಹನದ ಹಿಂಬಾಗದಲ್ಲಿ ಕುಳಿತುಕೊಂಡಿದ್ದ ಅಸಾಮಿ ತನ್ನ ಎಡಗೈಯನ್ನು ತನ್ನ ಕತ್ತಿಗೆ ಹಾಕಿ ತನ್ನ ಕತ್ತಿನಲ್ಲಿದ್ದ ಸುಮಾರು 60 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಚೈನು ಹಾಗು ಅದರಲ್ಲಿ ಎರಡು ತಾಳಿ ಮತ್ತು ನಾಲ್ಕು ಗುಂಡುಗಳಿದ್ದು ಇದರ ಒಟ್ಟು ಬೆಲೆ ಸುಮಾರು 2,10,000 ರೂಗಳಾಗಿರುತ್ತೆ. ನಂತರ ನಾನು ದ್ವಿ ಚಕ್ರ ವಾಹನ ಸಮೇತ ಕೆಳಗಡೆ ಬಿದ್ದು ಹೋದಾಗ ಗೊರಮಡಗು ಕಡೆಯಿಂದ ಮತ್ತೇ ಯಾರೋ ಇಬ್ಬರು ಅಸಾಮಿಗಳು ಬಂದು ತನಗೆ ಏನೂ ಆಗುವುದಿಲ್ಲ ನೀನು ಕಿರುಚಬೇಡ ಎಂದ ಬೆದರಿಕೆ ಹಾಕಿ ಹೊರಟು ಹೋಗಿರುತ್ತಾರೆ. ಆದ್ದರಿಂದ ದ್ವಿ ಚಕ್ರ ವಾಹನಗಳಲ್ಲಿ ಬಂದು ನನ್ನ ಕತ್ತಿನಲ್ಲಿದ್ದ ಬಂಗಾರದ ಮಾಂಗಲ್ಯ ಚೈನು, ತಾಳಿ, ನಾಲ್ಕು ಗುಂಡುಗಳನ್ನು ಕಿತ್ತುಕೊಂಡು ಹೋದ ಹಾಗೂ ನನ್ನ ಮೇಲೆ ಬೆದರಿಕೆ ಹಾಕಿದ 4 ಜನ ಅಸಾಮಿಗಳನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮಕೈಗೊಳ್ಳಬೇಕಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 22-02-2021 05:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080