ಅಭಿಪ್ರಾಯ / ಸಲಹೆಗಳು

 

1. ಸಿ.ಇ.ಎನ್ ಪೊಲೀಸ್‌ ಠಾಣೆ ಮೊ.ಸಂ.39/2021 ಕಲಂ. 419,420 ಐ.ಪಿ.ಸಿ & 66(D) (INFORMATION TECHNOLOGY ACT 2000:-

     ದಿನಾಂಕ:21/9/2021 ರಂದು ಪಿರ್ಯಾಧಿ ಶ್ರೀ ಅಶೋಕ್  ಬಿನ್ ವೆಂಕಟರೆಡ್ಡಿ, 44 ವರ್ಷ, ಒಕ್ಕಲಿಗರು, ಹೂವು ವ್ಯಾಪಾರ ವಾಸ ಪ್ರಶಾಂತ್ ನಗರ, ಚಿಕ್ಕಬಳ್ಳಾಪುರ ಟೌನ್. ಮೊ ಸಂಖ್ಯೆ:8971431619 ರವರು ಠಾಣೆಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶವೇನೆಂದರೆ  ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಿದ್ದು, ಚಿಕ್ಕಬಳ್ಳಾಪುರ ಎ ಪಿ ಎಂ ಸಿ ಮಾರುಕಟ್ಟೆಯಲ್ಲಿ ಹೂವುಗಳನ್ನು ತೆಗೆದು ಬೇರೆ ಕಡೆಗೆ ಮಾರಾಟ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನಾನು ನನ್ನ ವ್ಯವಹಾರಗಳಿಗೋಸ್ಕರ ಚಿಕ್ಕಬಳ್ಳಾಪುರ ನಗರದಲ್ಲಿನ  ಬ್ಯಾಂಕ್  ಆಪ್ ಇಂಡಿಯದಲ್ಲಿ  ಅಕೌಂಟ್ ನಂಬರ್:846320110000283  ಮತ್ತು ಆಂದ್ರ ಬ್ಯಾಂಕ್ ನಲ್ಲಿನ ಅಕೌಂಟ್ ನಂ:170810100072697 ರಂತೆ ಖಾತೆಗಳನ್ನು ಹೊಂದಿದ್ದು. ಈ ಖಾತೆಗಳಿಗೆ ನನ್ನ ಮೇಲ್ಕಂಡ ಪೋನ್ ನಂಬರ್ ನ್ನು ಲಿಂಕ್ ಮಾಡಿಕೊಂಡು ಪೋನ್ ಫೇ & ಗೂಗಲ್ ಫೇ  ವ್ಯಾಲೆಟ್ ಗಳನ್ನು ಇನ್ಸಾಟಾಲ್ ಮಾಡಿಕೊಂಡು ಅದರಲ್ಲಿ ನನ್ನ ಹಣ ಕಾಸಿನ ವ್ಯವಹಾರಗಳನ್ನು ಮಾಡಿಕೊಂಡಿರುತ್ತೇನೆ. ಈಗಿರುವಲ್ಲಿ ದಿನಾಂಕ:4/9/2021 ರಂದು ಮೊ ನಂ:8583902017 ಸಂಖ್ಯೆಯಿಂದ ನನ್ನ ಮೊಬೈಲ್ ಗೆ ಒಂದು ಸಂದೇಶ ಬಂದಿದ್ದು. ಅದರಲ್ಲಿ 1-5 ಲಕ್ಷಗಳ ವರಿಗೆ ಲೋನ್ ಕೊಡುವುದಾಗಿ ಇತ್ತು. ನನಗೆ ಹಣದ ಆವಶ್ಯಕತೆ ಇದ್ದುದರಿಂದ ಸಾಲವನ್ನು ಪಡೆಯೋಣವೆಂತ ಅದನ್ನು ಕ್ಲಿಕ್ ಮಾಡಿದೆ. ನಂತರ ಅವರು ಮೇಲ್ಕಂಡ ಮೊಬೈಲ್ ನಂಬರ್ ನಿಂದ ಕರೆ ಮಾಡಿ ನಿಮಗೆ ಎಷ್ಟು ಸಾಲ  ಬೇಕು ಅಂತ ಕೇಳಿದರು. ನಮಗೆ 05 ಲಕ್ಷಗಳು ಬೇಕು ಅಂತ ಹೇಳಿದೆ. ನಿಮ್ಮ ಆಧಾರ್ ಕಾರ್ಢ, ಫಾನ್ ಕಾರ್ಢ & ಬ್ಯಾಂಕ್ ಸ್ಟೇಟ್ಮೆಂಟ್ & ಒಂದು ಭಾವ ಚಿತ್ರವನ್ನು ಕಳುಹಿಸಿಕೊಡುವಂತೆ  ತಿಳಿಸಿದ. ನಾನು ಅವರು ಹೇಳಿದಂತೆ  ಎಲ್ಲಾ ದಾಖಲೆಗಳನ್ನು ಅವರ ವ್ಯಾಟ್ಸಾಪ್ ನಂಬರ್ : 8583902017 ಕ್ಕೆ ಕಳುಹಿಸಿದೆ. ನಂತರ ಸ್ವಲ್ಪ ಸಮಯದ ನಂತರ ಪ್ರೋಸಸಿಂಗ್ ಚಾರ್ಜ ಅಂತ 2100/- ರೂಗಳನ್ನು  ಪೋನ್ ಫೇ ಅಕೌಂಟ್ ನಂ; 9471690657 ಸಂಖ್ಯೆಗೆ ಕಳುಹಿಸಲು ತಿಳಿಸಿದ. ಅದರಂತೆ ನನ್ನ ಪೋನ್ ಫೇಗೆ ಲಿಂಕ್ ಆಗಿರುವ ಬ್ಯಾಂಕ್ ಆಪ್ ಇಂಡಿಯ ಅಕೌಂಟ್ ನಂ: 846320110000283 ರಿಂದ 2100/- ರೂಗಳನ್ನು ಕಳುಹಿಸಿದೆ. ನಂತರ ಪುನಃ ಅವನು ಕರೆ ಮಾಡಿ ಇನ್ಸೂರೆನ್ಸ್ ಸರ್ವೀಸ್ ಚಾರ್ಜ 8250/- ರೂಗಳನ್ನು ಕಳುಹಿಸಲು ತಿಳಿಸಿದ. ನಾನು ಬ್ಯಾಂಕ್ ಆಪ್ ಇಂಡಿಯ ಅಕೌಂಟ್ ನಂ: 846320110000283 ರಿಂದ 8250/- ರೂಗಳನ್ನು ಕಳುಹಿಸಿದೆ. ನಂತರ ಪುನಃ ಕರೆ ಮಾಡಿ ಜಿ ಎಸ್ ಟಿ ಪ್ರಾಬ್ಲಂ ಆಗಿದೆ. ಅದಕ್ಕೆ 10000/- ರೂಗಳನ್ನು ಕಳುಹಿಸಲು ತಿಳಿಸಿ ನಿಮಗೆ ಲೋನ್ ಹಣ  ಸ್ವಲ್ಪ ಸಮಯಕ್ಕೆ ನಿಮ್ಮ ಖಾತೆಗೆ  ಕ್ರೆಡಿಟ್ ಆಗುತ್ತದೆಂತ ತಿಳಿಸಿದ. ನಾನು  ಬ್ಯಾಂಕ್ ಆಪ್ ಇಂಡಿಯ ಅಕೌಂಟ್ ನಂ: 846320110000283 ರಿಂದ 10000/- ರೂಗಳನ್ನು ಅವನ ಕಳುಹಿಸಿದ ಕೆನರ ಬ್ಯಾಂಕ್ ಅಕೌಂಟ್ ನಂ:2519101011482  IFSC CODE: CNRB0002519 ಖಾತೆಗೆ ಕಳುಹಿಸಿದೆ. ಅದೇ  ರೀತಿ ಅವನು ವಿವಿದ ಚಾರ್ಜಗಳು ಅಂತ ನನ್ನ ಬಳಿ ಮೇಲ್ಕಂಡ  ನನ್ನ ಎರಡು ಬ್ಯಾಂಕ್ ಖಾತೆಗಳಿಂದ ಒಟ್ಟು 1,99,850/- ರೂಗಳನ್ನು ಮೇಲ್ಕಂಡ ಗೂಗಲ್ ಫೇ ಅಕೌಂಟ್  ಜೊತೆಗೆ 9631401899 ಗೂಗಲ್ ಫೇ ಖಾತೆಗಳಿಗೆ ಜಮೇ ಮಾಡಿಸಿಕೊಂಡ ನಂತರ ನಾನು ನಮ್ಮ ಹಣವನ್ನು ನಮಗೆ ವಾಪಸ್ಸು ಕೊಡಲು ಹೇಳಿದಾಗ ಇನ್ನು  75,000/- ರೂಗಳನ್ನು SBI A/C NO:20383858871 & IFSC CODE: SBIN0003068 ಖಾತೆಗೆ ಕಳುಹಿಸಿದರೆ. 10 ನಿಮಿಷದಲ್ಲಿ ನಿಮ್ಮ ಖಾತೆಗೆ ಲೋನ್ ಹಣ ಮತ್ತು ನಿಮ್ಮ ಹಣ ಕ್ರೆಡಿಟ್ ಆಗುತ್ತದೆಂತ ತಿಳಿಸಿದ. ನನಗೆ ಇವನು ಏನೋ ನನಗೆ ಮೋಸ ಮಾಡುತ್ತಿರುತ್ತಾನೆಂತ ಅನುಮಾನ ಬಂಧು ಈ ದಿನ ದೂರನ್ನು ನೀಡುತ್ತಿದ್ದು. ಸದರಿ ಲೋನ್ ಕೊಡುವುದಾಗಿ ನಂಬಿಸಿ 1,99,850/- ರೂಗಳನ್ನು ವಂಚಿಸಿರುವ ಆಪಾಧಿತರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸಿ ನಮ್ಮ ಹಣವನ್ನು ನಮಗೆ ವಾಪಸ್ಸು ಕೊಡಿಸಿಕೊಡಲು ಕೋರಿ ದೂರು.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.160/2021 ಕಲಂ. 504,323,324 ಐ.ಪಿ.ಸಿ:-

     ದಿನಾಂಕ;20-09-2021 ರಂದು ಸಂಜೆ 4-00 ಗಂಟೆ ಸಮಯದಲ್ಲಿ  ಗಾಯಾಳು ನಾಗರಾಜ್ ಬಿನ್ ಓಬಪ್ಪ, ರವರ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಪಡೆದ ಹೇಳಿಕೆಯ ಸಾರಾಂಶವೆನೆಂದರೆ  ಈ ಹಿಂದೆ ರಾಕ್ ಸ್ಯಾಂಡ್ ಮಿನರಲ್ಸ್ ಜಲ್ಲಿ ಕ್ರಷರ್ ನ ಮಾಲೀಕರಾದ ಹೆಮಂತ್ ರೆಡ್ಡಿ  ರವರ ಬಳಿ ತನ್ನ ತೋಟದಲ್ಲಿ ಗುಲಾಬಿ ಹೂವಿನ  ಬೆಳೆಯನ್ನು ಬೆಳೆದಿದ್ದು ಕ್ರಷರ್ ನ ವಾಹನಗಳು ಹೋಗಿ ಬರುವಾಗ ದೂಳು ಬಿದ್ದು ತನ್ನ ಗುಲಾಬಿ ತೋಟ ನಾಶವಾಗಿರುತ್ತದೆ. ಈ ವಿಚಾರವಾಗಿ ತಾನು ಕ್ರಷರ್ ಮಾಲೀಕರ ಬಳಿ ಮಾತನಾಡಿದಾಗ ಮಾಲೀಕರು ನಿನ್ನ ಜಮೀನಿಗೆ ಸೀಟ್ ಗಳನ್ನು ಹಾಕಿಕೊಡುತ್ತೇನೆ ಹಾಗೂ ಬೆಳೆ ನಷ್ಠದ ಪರಿಹಾರವಾಗಿ ವರ್ಷಕ್ಕೆ 30,000/- ಸಾವಿರ ರೂಪಾಯಿಗಳನ್ನು ನೀಡುತ್ತೇನೆಂದು ತಿಳಿಸಿದ್ದು ಅದರೆ ಅವರು ಹೇಳಿದಂತೆ ನಡೆದುಕೊಂಡಿಲ್ಲ ಆದ್ದರಿಂದ ದಿನಾಂಕ: 20-09-2021 ರಂದು ಬೆಳಿಗ್ಗೆ 8-40 ಗಂಟೆ ಸಮಯದಲ್ಲಿ ಗಾಯಾಳು ತೋಟದ ಬಳಿ ಇದ್ದಾಗ ಕ್ರಷರ್ ನ 02 ಟ್ರಾಕ್ಟರ್ ಗಳನ್ನು ನಿಲ್ಲಿಸಿದ್ದು ಇದೇ ಸಮಯಕ್ಕೆ ಪ್ರಶಾಂತ್ ಚಾಲಕರು ಟ್ರಾಕ್ಟರ್ ಗಳನ್ನು ಯಾಕೆ ನಿಲ್ಲಿಸಿದ್ದು ಎಂದು ಕೇಳಿದ್ದು ಅದಕ್ಕೆ ತಾನು ಮಾಲೀಕರು ಮೇಲ್ಕಂಡಂತೆ ನಡೆದುಕೊಂಡಿಲ್ಲವೆಂದು ತಿಳಿಸಿರುತ್ತಾರೆ ಆಗ ಪ್ರಶಾಂತ್ ರವರು ತನ್ನನ್ನು ಲೋಪರ್ ನನ್ನ ಮಗನೇ, ಮತ್ತು  ತೆಲುಗಿನಲ್ಲಿ ಮಾತಂಟಕಿ ವಸ್ತೆ ಬಾಗುಂಡೆಲೇದು, ಎಂದು ಅವಾಚ್ಯ ಶಬ್ದಗಳಿಂದ ತೆಲುಗಿನಲ್ಲಿ ಬೈದು ಕಲ್ಲಿನಿಂದ ತನ್ನ ಎದೆಗೆ ಹೊಡೆದು ಮೂಗೇಟುಗಳುಂಟು ಮಾಡಿರುತ್ತಾರೆ ಆದ್ದರಿಂದ ಮೇಲ್ಕಂಡರವರ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ಹೇಳಿಕೆ ಮೇರೆಗೆ ಈ ಪ್ರ. ವ.ವರದಿ.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.161/2021 ಕಲಂ. 323,324,504 ಐ.ಪಿ.ಸಿ:-

     ದಿನಾಂಕ:20.09.2021 ರಂದು ರಾತ್ರಿ 8-40 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಜಿಲ್ಲಾಸ್ಪೆತ್ರೆಯಲ್ಲಿ ಗಾಯಾಳು ಪ್ರಶಾಂತ್ ಕುಮಾರ ಬಿನ್ ರಾಜೇಶ್ ನಾಯಕ್.22 ವರ್ಷ. ಬಿಳ್ಳೂರು ಗ್ರಾಮ ಬಾಗೇಪಲ್ಲಿ ತಾಲ್ಲುಕು ರವರು ನೀಡಿದ ಹೇಳಿಕೆಯ ದೂರಿನ ಸಾರಾಂಶವೆನೆಂದರೆ ತಾನು ಸುಮಾರು 04 ವರ್ಷಗಳಿಂದ ನೀರಿನ ಟ್ಯಾಂಕರ್ ನಲ್ಲಿ ಚಾಲಕನಾಗಿ ಎಸ್ ಗೊಲ್ಲಹಳ್ಳಿ ಗ್ರಾಮದ ಬಳಿ ಇರುವ ಕ್ರಷರ್ ಬಳಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು. ಪ್ರತಿ ನಿತ್ಯ ನಾಗರಾಜ ಬಿನ್ ಒಬಳಪ್ಪ ರವರ ಜಮೀನಿನ ರಸ್ತೆಯ ಪಕ್ಕದಲ್ಲಿ ನೀರಿನ ಟ್ಯಾಂಕರನ್ನು ಚಲಾಯಿಸಿಕೊಂಡು ಹೋಗುತ್ತಿದ್ದು ಈಗಿರುವಾಗ ಈ ದಿನ ದಿನಾಂಕ;20.09.2021 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಪಿರ್ಯಾದಿದಾರರು ಎಸ್ ಗೊಲ್ಲಹಳ್ಳಿ ಗ್ರಾಮದ ನಾಗರಾಜ ರವರ ಜಮೀನಿನ ಪಕ್ಕದ ರಸ್ತೆಯಲ್ಲಿ 04 ಟ್ರಾಕ್ಟರ್ ಗಳು ನಿಲ್ಲಿಸಿದ್ದು. ರಸ್ತೆ ಬಂದ್ ಆಗಿತ್ತು. ನಂತರ ತಾನು ಹೋಗಿ “ಯಾಕೆ ನಾಗರಾಜಣ್ಣ ಟ್ರಾಕ್ಟರ್ ನಿಲ್ಲಿಸಿದ್ದಿಯಾ ಎಂದು ಕೇಳಿದ್ದಕ್ಕೆ ನಿಮ್ಮ ಮಾಲೀಕರಾದ ಹೇಮಂತ್ ರೆಡ್ಡಿ ರವರು ಬರಲಿ ಅಲ್ಲಿಯವರೆಗೆ ರಸ್ತೆ ಬಿಡುವುದಿಲ್ಲವೆಂದು ಹೇಳಿದರು. ನಂತರ ತಾನು ಅವರು ಬರಲು ಆಗುವುದಿಲ್ಲ ಬಿಡಣ್ಣಾ ಎಂದು ಕೇಳಿದ್ದಕ್ಕೆ ನಾಗರಾಜ ರವರು ” ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಬೆನ್ನಿನ ಮೇಲೆ ಹೊಡೆದು ಕೆಳಕ್ಕೆ ತಳ್ಳಿ ತನಗೆ ಕೈಗಳಿಂದ ಹೊಡೆದಿರುತ್ತಾರೆ ಅದೇ ಸಮಯಕ್ಕೆಕ್ರಷರ ನಲ್ಲಿ ಕೆಲಸ ಮಾಡುತ್ತಿದ್ದ ಅಮೀತ್ ರವರು ಗಲಾಟೆ ಬಿಡಿಸಿ ತನ್ನನ್ನು ಯಾವುದೊ ವಾಹನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪೆತ್ರೆ ಚಿಕಿತ್ಸೆಗಾಗಿ ದಾಖಲಿಸಿದ್ದು ಆದ್ದರಿಂದ ಮೇಲ್ಕಂಡ ನಾಗರಾಜ ರವರ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ಹೇಳಿಕೆಯ ಮೇರೆಗೆ ಈ ಪ್ರ,ವ,ವರದಿ.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.162/2021 ಕಲಂ. 279,337 ಐ.ಪಿ.ಸಿ & 192(A) ಐ.ಎಂ.ವಿ ಆಕ್ಟ್:-

     ದಿನಾಂಕ: 21/09/2021 ರಂದು  ಪಿರ್ಯಾದಿ ಶ್ರೀ. ಕೆ.ಜಿ.ಸಂತೋಷ ಬಿನ್ ಗೋಪಾಲರೆಡ್ಡಿ 25ವರ್ಷ  ವಕ್ಕಲಿಗರು   ಚಾಲಕ ಕೆಲಸ ವಾಸ: ಕೇತೆನಹಳ್ಳಿ  ಗ್ರಾಮ  ಚಿಕ್ಕಬಳ್ಳಾಪುರ ತಾಲ್ಲೂಕು. ರವರು  ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:21/09/2021 ರಂದು ಬೆಳಗ್ಗೆ ಸುಮಾರು 08-30 ಗಂಟೆಯ ಸಮಯದಲ್ಲಿ  ಚಿಕ್ಕಬಳ್ಳಾಪುರಕ್ಕೆ  ಬರಲು  ತಮ್ಮ  ಗ್ರಾಮಕ್ಕೆ ಬಂದಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ  ಹತ್ತಿಕೊಂಡು ಮುಂಭಾಗದ ಸೀಟಿನಲ್ಲಿ ಕುಳಿತುಕೊಂಡೆನು.  ಅದೇ ಸಮಯಕ್ಕೆ  ನಮ್ಮ  ಊರಿಗೆ ಬಂದಿದ್ದ  ಅಶೋಕ ಲೈಲ್ಯಾಂಡ್ ಕಂಪನಿಯ ಸರಕು ಸಾಗಾಣಿಕೆ ವಾಹನದ ನೊಂದಾವಣೆ ನಂಬರ್:KA-40-B-0943 ರಲ್ಲಿ  ತಮ್ಮ ಗ್ರಾಮದ (1) ನಂದ ಬಿನ್  ನರಸಿಂಹಪ್ಪ 14ವರ್ಷ  (2) ದರ್ಶನ್  ಬಿನ್ ನರಸಿಂಹಪ್ಪ  16ವರ್ಷ (3) ಗಂಗಾಧರ ಬಿನ್ ಮಂಜುನಾಥ  14 ವರ್ಷ (4) ರೇವಂತ್  ಬಿನ್ ನಾಗರಾಜ 16ವರ್ಷ  (5) ವಂಶಿಕೃಷ್ಣ  ಬಿನ್ ಮಂಜುನಾಥ 14ವರ್ಷ (6) ಪುರುಷೋತ್ತಮ್  ಬಿನ್ ನಾಗರಾಜ 16ವರ್ಷ (7) ನರಸಿಂಹಮೂರ್ತಿ ಬಿನ್  ಜಯಪ್ಪ 16ವರ್ಷ  ರವರುಗಳು ಮತ್ತು ಇತರರು ಆವಲಗುರ್ಕಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ  ಹೋಗಲು ಸದರಿ ವಾಹನದಲ್ಲಿ ಹತ್ತಿಕೊಂಡರು. ಈ ವಾಹನವನ್ನು  ತಮ್ಮ  ಊರಿನ ವಾಸಿ  ಧನುಷ್  ಬಿನ್ ಲೇಟ್ ನರಸಿಂಹರೆಡ್ಡಿ @ ಬಿಸಪ್ಪರವರು ಚಾಲನೆ ಮಾಡಿಕೊಂಡು ಕೇತೆನಹಳ್ಳಿ  ಗ್ರಾಮದಿಂದ  ಚಿಕ್ಕಬಳ್ಳಾಪುರ ಮಾರ್ಗವಾಗಿ ಚಿಕ್ಕಬಳ್ಳಾಪುರಕ್ಕೆ ಹೋಗಲು ನಮ್ಮ ಮುಂದೆ ಹೋಗುತ್ತಿದ್ದರು. ತಾನು ಬಸ್ಸಿನಲ್ಲಿ ಮುಂಭಾಗದ ಸೀಟಿನಲ್ಲಿ ಕುಳಿತುಕೊಂಡಿದ್ದು ಅವರ ಹಿಂದೆ ಹೋಗುತ್ತಿದ್ದೆನು. ಬೆಳಗ್ಗೆ ಸುಮಾರು 08-45 ಗಂಟೆಯ ಸಮಯದಲ್ಲಿ ಸಾದೇನಹಳ್ಳಿ  ಗ್ರಾಮದ  ಶಿವಪ್ಪ  ಬಿನ್ ನಾಯನಪ್ಪ ರವರ  ಜಮೀನಿನ ಸಮಪ  ರಸ್ತೆಯ ತಿರುವಿನಲ್ಲಿ  ಧನುಷ್ ರವರು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು  ಹೋಗಿ  ರಸ್ತೆಯ ಎಡ ಬದಿಯಲ್ಲಿರುವ ಹಳ್ಳದೊಳಕ್ಕೆ ಉರುಳಿಸಿ ಅಪಘಾತ ಮಾಡಿದನು. ಈ ಅಪಘಾತದಲ್ಲಿ ವಾಹನ ಜಖಂಗೊಂಡು ವಾಹನದಲ್ಲಿದ್ದ ಶಾಲಾ ಹುಡುಗರಿಗೆ ಸಣ್ಣಪುಟ್ಟ ರಕ್ತಗಾಯಗಳಾಯಿತು. ಆ ಕೂಡಲೇ ಬಸ್ಸನ್ನು  ನಿಲ್ಲಿಸಿದ್ದು ಬಸ್ಸಿನಲ್ಲಿದ್ದ ನಾನು,  ಸ್ಥಳಕ್ಕೆ ಬಂದ ಸಾರ್ವಜನಿಕರು  ಮತ್ತು ಇತರರು  ಗಾಯಾಳುಗಳನ್ನು ಉಪಚರಿಸಿ ಅದೇ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ  ಗಾಯಾಳುಗಳನ್ನು  ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲು ಮಾಡಿದೆವು.  ಈ ಅಪಘಾತಕ್ಕೆ  KA-40-B-0943 ರ ಅಶೋಕ ಲೈಲ್ಯಾಂಡ್ ಕಂಪನಿಯ ಸರಕು ಸಾಗಾಣಿಕೆ ವಾಹನದ ಚಾಲಕ ಧನುಷ್ ರವರು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯೇ  ಕಾರಣವಾಗಿರುತ್ತದೆ.  ಆರೋಪಿ KA-40-B-0943 ರ ಅಶೋಕ ಲೈಲ್ಯಾಂಡ್ ಕಂಪನಿಯ ಸರಕು ಸಾಗಾಣಿಕೆ ವಾಹನದ ಚಾಲಕನ  ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ  ದೂರಿನ  ಮೇರೆಗೆ ಈ ಪ್ರ.ವ.ವರದಿ.

 

5. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.163/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:21.09.2021 ಮದ್ಯಾಹ್ನ 13:30 ಗಂಟೆಯಲ್ಲಿ ಡಿ,ಸಿ,ಬಿ/ಸಿ,ಇ,ಎನ್ ಠಾಣೆಯ ಹೆಚ್,ಸಿ-195 ಮುರಳಿಧರ ರವರು ನೀಡಿದ ಪಂಚನಾಮೆ ಮಾಲು ಮತ್ತು ದೂರನ್ನು ಆರೋಪಿಯನ್ನು ಹಾಜರುಪಡಿಸಿ ನೀಡಿದ ವರದಿಯ ಸಾರಾಂಶವೆನೆಂದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿ,ಸಿ,ಬಿ/ಸಿ,ಇ,ಎನ್ ಪೊಲೀಸ್ ಠಾಣೆಯ ಸಿ.ಹೆಚ್.ಸಿ-195 ಮುರಳಿಧರ. ಆದ ತನಗೆ ಮತ್ತು ಮಧು ಸಿ.ಪಿ.ಸಿ-527 ರವರುಗಳಿಗೆ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವರು ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಕಾನೂನು ಬಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ನೇಮಕ ಮಾಡಿದ್ದು ಅದರಂತೆ ತಾನು ಮತ್ತು ಮಧು ರವರುಗಳು ತಾಲ್ಲೂಕಿನ ತಿಪ್ಪೇನಹಳ್ಳಿ ಕಣಿವೆ ಕಡೆ ಗಸ್ತು ಮಾಡಿಕೊಂಡು ಬೆಳಿಗ್ಗೆ 10-30 ಗಂಟೆಗೆ ಮೊಟ್ಲೂರು ಗ್ರಾಮಕ್ಕೆ ಬಂದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ ನಲ್ಲಕದಿರೇನಹಳ್ಳಿ ಗ್ರಾಮದ ವಾಸಿಯಾದ ಗೋಪಾಲ ಬಿನ್ ಲೇಟ್ ಮುತ್ತಪ್ಪ ರವರು ತನ್ನ ಬಾಬತ್ತು ಚಿಲ್ಲರೆ ಅಂಗಡಿಯ ಮುಂಬಾಗದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು ಈ ಸಂಬಂದ ಯಾರೋ ಕೆಲವರು ಕುಳಿತು,ಕೊಂಡು ಮದ್ಯವನ್ನು ಸೇವನೆ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ಬಂದ ಮಾಹಿತಿಯನ್ನು ಪಂಚರಿಗೆ ತಿಳಿಸಿ ಪಂಚರೊಂದಿಗೆ ಮೆಲ್ಕಂಡ ಸ್ಥಳಕ್ಕೆ ಬೆಳಿಗ್ಗೆ 10-45 ಗಂಟೆಗೆ ಹೋಗಿ ಮರೆಯಲ್ಲಿ ನೋಡಲಾಗಿ ಯಾರೋ ಕೆಲವರು ಸೇರಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದು ನಮ್ಮಗಳನ್ನು ನೋಡಿ ಸ್ಥಳದಿಂದ ಓಡಿ ಹೋದರು ಸದರಿ ಸ್ಥಳದಲ್ಲಿ ಒಬ್ಬ ಆಸಾಮಿಯನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ತನ್ನ ಹೆಸರು ಗೋಪಾಲ ಬಿನ್ ಲೇಟ್ ಮುತ್ತಪ್ಪ 53 ವರ್ಷ. ದೋಬಿ ಜನಾಂಗ. ಚಿಲ್ಲರೆ ಅಂಗಡಿ ವ್ಯಾಪಾರ. ವಾಸ: ನಲ್ಲಕದಿರೇನಹಳ್ಳಿ ಗ್ರಾಮ. ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದರು ಸದರಿ ಸ್ಥಳದಲ್ಲಿ 90 ಎಂ.ಎಲ್ ಮದ್ಯ ತುಂಬಿರುವ 20 HAYWARDS CHEERS WHISKY TETRA POCKET  ಗಳು, ಒಂದು ಖಾಲಿ ವಾಟರ್ ಬಾಟೆಲ್, 02 ಖಾಲಿಯಾಗಿರುವ  90 ಎಂ.ಎಲ್ HAYWARDS CHEERS WHISKY TETRA POCKET ಗಳಿರುತ್ತೆ. ಮದ್ಯ ತುಂಬಿರುವ ಪ್ರತಿಯೊಂದರ ಬೆಲೆ 35.13/- ರೂಗಳಂತೆ ಒಟ್ಟು 702/-  ರೂಗಳಾಗಿದ್ದು ಒಟ್ಟು ಮದ್ಯವು 01 ಲೀಟರ್ 800 ಎಂ.ಎಲ್ ಆಗಿರುತ್ತೆ ನಂತರ ಮೇಲ್ಕಂಡ ಸ್ಥಳದಲ್ಲಿ ಪಂಚನಾಮೆ ಕ್ರಮವನ್ನು ಜರುಗಿಸಿ ಮಾಲುಗಳನ್ನು ಅಮಾನತ್ತುಪಡಿಸಿಕೊಂಡಿರುತ್ತೆ. ಆರೋಪಿ ಮಾಲುಗಳನ್ನು ಮತ್ತು ಅಸಲು ಪಂಚನಾಮೆಯೊಂದಿಗೆ ವಶಕ್ಕೆ ನೀಡಿದರ ಮೇರೆಗೆ ಈ ಪ್ರ.ವ.ವರದಿ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.415/2021 ಕಲಂ. 323,324,504,506,34 ಐ.ಪಿ.ಸಿ:-

     ದಿನಾಂಕ: 20/09/2021 ರಂದು ಚಿಂತಾಮಣಿ ಸರ್ಕಾರಿ ಅಸ್ಪತ್ರೆಯಲ್ಲಿ ಗಾಯಾಳು ಪ್ರಸಾದ್ ಬಿನ್ ಮುನಿಯಪ್ಪ, 37 ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ದೊಡ್ಡ ಬೊಮ್ಮನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬೆಳಿಗ್ಗೆ 09.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡು ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ದಿನಾಂಕ: 19/09/2021 ರಂದು ರಾತ್ರಿ 8.30 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ತಮ್ಮ ಮನೆಯ ಪಕ್ಕದಲ್ಲಿರುವ ಅರಳಿಮರದ ಕಟ್ಟೆಯ ಬಳಿ ತಾನು ಕುಳಿತುಕೊಂಡಿದ್ದಾಗ ತಮ್ಮ ಗ್ರಾಮದ ಅಂಬರೀಶ ಬಿನ್ ಆಂಜಿನಪ್ಪ ರವರು ಅಲ್ಲಿಯೇ ಇದ್ದು, ತಾನು ಆತನನ್ನು ಕುರಿತು ಏಕೆ ಇಲ್ಲಿ ಇದ್ದೀಯಾ ಎಂದು ಕೇಳಿದ್ದು, ಆಗ ಆತನು ನಮ್ಮ ಗ್ರಾಮದ ಮಂಜುನಾಥ ಬಿನ್ ಮುನಿವೆಂಕಟರಾಮಪ್ಪ ರವರು ನನಗೆ ಪೋನಿನಲ್ಲಿ ಹಣದ ವಿಚಾರ ಮಾತನಾಡಬೇಕು ಬಾ ಎಂದು ಹೇಳಿದ್ದು, ಅದರ ಸಲುವಾಗಿ ಬಂದಿರುವುದಾಗಿ ಹೇಳಿರುತ್ತಾನೆ. ಅಷ್ಠರಲ್ಲಿ ಸದರಿ ಮಂಜುನಾಥ ರವರು ಬಂದು ಅಂಬರೀಶ ರವರಿಗೆ ಏಕಾ ಏಕೀ ಹೊಡೆದು ಕೈಯಿಂದ ಎದೆಗೆ ಗುದ್ದಿ ಅವಾಚ್ಯಶಬ್ದಗಳಿಂದ ಬೈದಿದ್ದು ಅಷ್ಠರಲ್ಲಿ ತಾನು ಅಂಬರೀಶ ರವರನ್ನು ವಿಚಾರಿಸಲು ಹತ್ತಿರ ಹೋದಾಗ ಮಂಜುನಾಥ ರವರು ತನಗೆ ಕೈಗಳಿಂದ ಹೊಡೆದು, ತನ್ನನ್ನು ಕೆಟ್ಟ ಮಾತುಗಳಿಂದ ಬೈದಿದ್ದು, ಅಲ್ಲಿಯೇ ಇದ್ದ ಮಂಜುನಾಥ ರವರ ಅಣ್ಣ ಮುನಿರಾಜ ಹಾಗೂ ಚಂದ್ರ ಬಂದು ತನ್ನನ್ನು ಕಾಲಿನಿಂದ ಒದ್ದರು. ಅಷ್ಠರಲ್ಲಿ ತನ್ನ ಹೆಂಡತಿ ಅಮರಾವತಿ, ತನ್ನ ತಮ್ಮ ಮುರಳಿ ಬಿಡಿಸಲು ಬಂದಿದ್ದು, ಮುನಿರಾಜು ರವರು ಅಲ್ಲಿಯೇ ಬಿದ್ದಿದ್ದ ಯಾವುದೋ ದೊಣ್ಣೆಯಿಂದ ತನ್ನ ತಮ್ಮ ಮುರಳಿಯ ಎಡ ಕೈಗೆ ಹಾಗೂ ತಲೆಗೆ ಹೊಡೆದು ರಕ್ತಗಾಯ ಮಾಡಿರುತ್ತಾರೆ. ತನ್ನ ಹೆಂಡತಿ ಅಮರಾವತಿ ರವರಿಗೆ ಮಂಜುನಾಥ, ಮುನಿರಾಜು ಹಾಗೂ ಚಂದ್ರು ರವರು ಕೈಗಳಿಂದ ಎಳೆದು, ತಲೆ ಕೂದಲು ಹಿಡಿದು ಬೆನ್ನು, ಕೈ ಕಾಲುಗಳಿಗೆ ಕೈಗಳಿಂದ ಹೊಡೆದು, ಅವಾಚ್ಯಶಬ್ದಗಳಿಂದ ಬೈದು ತಮ್ಮ ತಂಟೆಗೆ ಬಂದರೆ ಪ್ರಾಣಸಹಿತ ಬಿಡುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

7. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.416/2021 ಕಲಂ. 457,380 ಐ.ಪಿ.ಸಿ:-

     ದಿನಾಂಕ: 20/09/2021 ರಂದು ಮದ್ಯಾಹ್ನ 1.00 ಗಂಟೆಗೆ ಶ್ರೀಮತಿ ಸುಂದರಮ್ಮ, 54 ವರ್ಷ,  ಹಾಸ್ಟಲ್ ಮೇಲ್ವಿಚಾರಕಿ, ಸಾರ್ವಜನಿಕ ಬಾಲಕರ ವಿದ್ಯಾರ್ಥಿ ನಿಲಯ, ಆನೂರು ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಚಿಂತಾಮಣಿ ತಾಲ್ಲೂಕು ಆನೂರು ಗ್ರಾಮದಲ್ಲಿರುವ ಸಾರ್ವಜನಿಕ ಬಾಲಕರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿಯಾಗಿ ಕೆಲಸ ಮಾಡಿಕೊಂಡಿರುತ್ತೇನೆ. ತಾನು ಪ್ರತಿ ದಿನ ಬೆಳಗ್ಗೆ 08.00 ಗಂಟೆಗೆ ಹಾಸ್ಟಲ್ ಗೆ ಬಂದು ಸಂಜೆ 7.00 ಗಂಟೆಯವರೆಗೂ ಹಾಸ್ಟಲ್ ನಲ್ಲಿದ್ದು ನಂತರ ಮನೆಗೆ ಹೋಗುತ್ತಿರುತ್ತೇನೆ. ತಮ್ಮ ಹಾಸ್ಟಲ್ ನಲ್ಲಿ ರಾತ್ರಿ ವೇಳೆ ಮಹೇಶ ಬಿನ್ ವೆಂಕಟರಾಯಪ್ಪ, 30 ವರ್ಷ, ಅಡುಗೆ ಕೆಲಸ, ರಾಂಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಹಾಸ್ಟಲ್ ನಲ್ಲಿ ಮಲಗಿಕೊಳ್ಳುತ್ತಿರುತ್ತಾರೆ. ದಿನಾಂಕ 19/09/2021 ರಂದು ಮಹೇಶ್ ರವರಿಗೆ ಮನೆಯಲ್ಲಿ ಕೆಲಸವಿದ್ದರಿಂದ ಆತನು ಹಾಸ್ಟಲ್ ಗೆ ಬಂದಿರುವುದಿಲ್ಲ. ತಾನು ಸಂಜೆ 7.00 ಗಂಟೆಯ ವರೆಗೂ ಹಾಸ್ಟಲ್ ನಲ್ಲಿದ್ದು ನಂತರ ಈ ದಿನ ಭಾನುವಾರವಾದ್ದರಿಂದ ವಿದ್ಯಾರ್ಥಿಗಳೆಲ್ಲರೂ ಮನೆಗಳಿಗೆ ಹೋಗಿದ್ದರಿಂದ ಹಾಸ್ಟಲ್ ಗೆ ಬೀಗ ಹಾಕಿಕೊಂಡು ಹೋಗಿರುತ್ತೇನೆ. ನಂತರ ಈ ದಿನ ದಿನಾಂಕ 20/09/2021 ರಂದೆ ಬೆಳಗ್ಗೆ 08.00 ಗಂಟೆಗೆ ತಮ್ಮ ಹಾಸ್ಟಲ್ ಗೆ ಬಂದು ನೋಡಲಾಗಿ  ಹಾಸ್ಟಲ್ ನ ಮರದ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ, ಬೀಗವನ್ನು ಕಿತ್ತು ಹಾಕಿದ್ದು ತಾನು ಒಳಗೆ ಹೋಗಿ ನೋಡಲಾಗಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು ಹಾಸ್ಟಲ್ ನಲ್ಲಿದ್ದ 1) 02 ಯುಪಿಎಸ್ ಗಳು, ಬೆಲೆ ಅಂದಾಜು 25 ಸಾವಿರ, 2) 10 ಬ್ಯಾಟರಿಗಳು, ಬೆಲೆ ಅಂದಾಜು 20 ಸಾವಿರ, 3) 01 ಗ್ಯಾಸ್ ಸಿಲಿಂಡರ್, ಬೆಲೆ ಅಂದಾಜು 02 ಸಾವಿರ. ಇವುಗಳ ಒಟ್ಟು ಬೆಲೆ 47,000/ರೂ ಬೆಲೆ ಬಾಳುವುದಾಗಿರುತ್ತವೆ. ಸದರಿ ಮೇಲ್ಕಂಡ ವಸ್ತುಗಳನ್ನು ಯಾರೋ ಕಳ್ಳರು ದಿನಾಂಕ 19/09/2021 ರಂದು ಸಂಜೆ 7.00 ಗಂಟೆಯಿಂದ ಈ ದಿನ ಬೆಳಗ್ಗೆ 20/09/2021 ರಂದು ಬೆಳಗ್ಗೆ 08.00 ಗಂಟೆ ಮದ್ಯೆ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ಸದರಿ ಕಳ್ಳರನ್ನು ಪತ್ತೆ ಮಾಡಿ ಮೇಲ್ಕಂಡ ತಮ್ಮ ವಸ್ತುಗಳನ್ನು ಪತ್ತೆ ಮಾಡಿಕೊಡಲು ಕೋರಿರುವುದಾಗಿರುತ್ತೆ.

 

8. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.132/2021 ಕಲಂ. 380 ಐ.ಪಿ.ಸಿ:-

     ದಿನಾಂಕ 21/09/2021 ರಂದು ಮದ್ಯಾಹ್ನ 14.30 ಗಂಟೆಗೆ ಬಶೆಟ್ಟಹಳ್ಳಿ ಹೋಬಳಿ, ಬೈರಗಾನಹಳ್ಳಿ ಗ್ರಾಮದ ವಾಸಿ ಪಿರ್ಯಾದಿ ಅಶೋಕ್ ಕುಮಾರ್ ಬಿನ್ ನಾರಾಯಣಪ್ಪರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು,ತನಮ್ಮ ತಂದೆ-ತಾಯಿಗೆ ತಾವು ನಾಲ್ಕು ಜನ ಮಕ್ಕಳಿದ್ದು ಎರಡು ಹೆಣ್ಣು ಎರಡು ಗಂಡ ಮಕ್ಕಳಾಗಿದ್ದು. ಎಲ್ಲರಿಗೂ ಮದುವೆಗಳಾಗಿದ್ದು ತಾನು ಮತ್ತು ತಮ್ಮ ಅಣ್ಣ ರವರ ಗೋವಿಂದರಾಜು ರವರುಗಳು ತಮ್ಮ ಗ್ರಾಮದಲ್ಲಿಯೇ ಬೇರೆ ಬೇರೆಯಾಗಿ ವಾಸವಾಗಿರುತ್ತೇವೆ. ತನಗೆ ಈಗ್ಗೆ 4 ವರ್ಷಗಳ ಹಿಂದೆ ಕೋಲಾರ ತಾಲ್ಲೂಕಿನ ವೇಮಗಲ್ ಬಳಿ ಆರ್ಜೆನಹಗಳ್ಳಿ ಗ್ರಾಮದ ಆರತಿ ರವರೊಂದಿಗೆ ಮಧುವೆಯಾಗಿರುತ್ತೆ.  ತಮ್ಮ ಮನೆಯಲ್ಲಿ ಪ್ರಸ್ತುತ ತಾನು ಮತ್ತು ತನ್ನ ಹೆಂಡತಿ ಆರತಿ ಹಾಗೂ ತಮ್ಮ ಅಕ್ಕನಾದ ಗಾಯತ್ರಿ ರವರುಗಳು ವಾಸವಾಗಿದ್ದು,  ದಿನಾಂಕ:11/09/2021 ರಂದು ಸಂಜೆ 4-30 ಗಂಟೆಯ ಸಮಯದಲ್ಲಿ  ತನ್ನ ಹೆಂಡತಿಯ ತಂದೆಯರಿಗೆ ಮೈಯಲ್ಲಿ ಜಾಸ್ತಿ ಹುಷಾರಿಲ್ಲವೆಂದು ಫೋನ್ ಬಂದಿದ್ದು ಆದರಂತೆ  ತಾನು ಮತ್ತು ತನ್ನ ಹೆಂಡತಿ ಆರತಿರವರುಗಳು ತನ್ನ ಬಾಬತ್ತು ದ್ವಿಚಕ್ರವಾಹನದಲ್ಲಿ ಆರ್ಜೆನಹಳ್ಳಿ ಗ್ರಾಮಕ್ಕೆ ಹೋಗಿದ್ದು, ತಮ್ಮ ಅಕ್ಕನಾದ ಗಾಯತ್ರಿ ರವರು ಮನೆಯಲ್ಲಿಯೇ ಇದ್ದು ಅವರು ಸಹ ಅದೇ ದಿನ  ಸಂಜೆ 6-30 ಗಂಟೆಗೆ  ಮನೆಗೆ ಬೀಗ ಹಾಕಿಕೊಂಡು ಮನೆಯ ಬೀಗ ಕೀಯನ್ನು ಮನೆಯ ಮುಂದೆ ಇಟ್ಟಿದ್ದ ಗ್ಯಾಸ್ ಸಿಲಿಂಡರ್ ನ ಕೆಳಗೆ ಇಟ್ಟು ಆರ್ಜೆಹಳ್ಳಿ ಗ್ರಾಮಕ್ಕೆ ಬಂದಿದ್ದು. ನಂತರ ತಮ್ಮ ಮಾನವನವರನ್ನು ನೋಡಿಕೊಂಡು ಅಲ್ಲಿಂದ ಅದೇ ದಿನ ರಾತ್ರಿ ಸುಮಾರು 10-30 ಗಂಟೆಗೆ ವಾಪಸ್ಸು ತಮ್ಮ ಗ್ರಾಮಕ್ಕೆ ಬಂದು ಮನೆಯಲ್ಲಿಯೇ ಇದ್ದಿದ್ದು. ನಂತರ  ದಿನಾಂಕ:12/09/2021 ರಂದು ಬೆಳಗ್ಗೆ 10-30 ಗಂಟೆಗೆ ತಮ್ಮ ಮಾವನವರು ಮರಣ ಹೊಂದಿದ್ದು ದಹನ ಕ್ರಿಯೇಗೆ ತಮ್ಮ ಗ್ರಾಮದಲ್ಲಿ ತಮ್ಮ ಮನೆಯಲ್ಲಿದ್ದ  ತಮ್ಮ ಅಕ್ಕ ಗಾಯತ್ರಿರವರು ಮನೆಗೆ ಬೀಗ ಹಾಕಿಕೊಂಡು ಮನೆಯ ಬೀಗ ಕೀಯನ್ನು ಮನೆಯ ಮುಂದೆ ಇಟ್ಟಿದ ಗ್ಯಾಸ್ ಸಿಲಿಂಡರ್ ಕೆಳಗೆ ಬೀಗದ ಕೀಯನ್ನು ಇಟ್ಟು ಮನೆಯ ಮುಂದಿನ ಗ್ರಿಲ್ಸ್ ಬಾಗಿಲನ್ನು ಮುಚ್ಚಿಕೊಂಡು ಸುಮಾರು 11-30 ಗಂಟೆಯ ಸಮಯಕ್ಕೆ ಆರ್ಜೆನಹಳ್ಳಿಗೆ ಬಂದರು ನಂತರ ತಮ್ಮ ಅಕ್ಕ ಗಾಯತ್ರಿರವರು ಅದೇ ದಿನ ಸಂಜೆ ಸುಮಾರು 6-30 ಗಂಟೆಗೆ  ತಮ್ಮ ಗ್ರಾಮದ ಮನೆಗೆ ಬಂದು ಮನೆಯಲ್ಲಿದ್ದರು. ತಾನು ಮತ್ತು ತನ್ನ ಹೆಂಡತಿ ಆರತಿ ರವರುಗಳು 14-09-2021 ರಂದು ಸಂಜೆ 4-30 ಗಂಟೆಗೆ  ಮನೆಗೆ ಬಂದಿರುತ್ತೇವೆ. ಆ ದಿನ ರಾತ್ರಿ ಮನೆಯಲ್ಲಿಯೇ ಇದ್ದೆವು, ದಿನಾಂಕ:15/09/2021 ರಂದು ಬೆಳಗ್ಗೆ 9-00 ಗಂಟೆಯ ಸಮಯದಲ್ಲಿ  ತಮ್ಮ ಸಂಬಂದಿಕರದ್ದು ಮದುವೆ ಇದ್ದು  ಮದುವೆಗೆ ಹೋಗೋಣಾ ವೆಂದು ತನ್ನ ಹೆಂಡತಿ ಆರತಿ ರವರು ಬೀರುವಿನಲ್ಲಿದ್ದು ಒಡವೆಗಳನ್ನು ಹಾಕಿಕೊಳ್ಳಲು ನೋಡಿದ್ದು ಬೀರುವಿನಲ್ಲಿಟ್ಟಿದ್ದ ಒಡವೆಗಳ ಬಾಕ್ಸ್ ಕಾಣಿಸಿರುವುದಿಲ್ಲ ನಂತರ ಬೀರುವಿನಲ್ಲಿ  ಎಲ್ಲಾ ಕಡೆ  ಹಿಡುಕಿದರೂ ಪತ್ತೆಯಾಗಿರುವುದಿಲ್ಲ. ನಂತರ ಮನೆಯಲ್ಲಿ ನೋಡುತ್ತಿದ್ದಾಗ ಒಡವೆಗಳ ಬಾಕ್ಸ್ ಮನೆಯ ಹಲಮಾರಿನಲ್ಲಿ ಒಡವೆಗಳು ಇಟ್ಟಿದ್ದ ಬಾಕ್ಸ್ ಸಿಕ್ಕಿದ್ದು ಬಾಕ್ಸ್ ನಲ್ಲಿ ಒಂದು ಜೊತೆ ಬಂಗಾರದ ಕಿವಿಗುಂಡುಗಳು, ವೆಂಕಟರವಣ ಸ್ವಾಮಿ ಡಾಲರ್ ಹಾಗೂ  ತಾಳಿ ಇದ್ದು ಬಂಗಾರದ ಲಾಂಗ್ ಚೈನ್ ಮತ್ತು ಕಿವಿ ಸೆಟ್ ಹಾಗೂ ಮಾಟೆಗಳು ಕಾಣಿಸಿರುವುದಿಲ್ಲ.  ಆದ್ದರಿಂದ ದಿನಾಂಕ:11-09-2021  ರಿಂದ 15-09-2021ರ ವರೆಗೆ  ತಾವು ಮನೆಯಲ್ಲಿ ಇಲ್ಲದೆ ಇದ್ದಾಗ ಯಾರೋ ಕಳ್ಳರು ತಮ್ಮ ಮನೆಯ ಬೀರುವಿನ ಡ್ರಾನಲ್ಲಿ ಬಂಗಾರದ 38 ಗ್ರಾಂ ತೂಕದ ಲಾಂಗ್ ಚೈನ್ ಮತ್ತು 10 ಗ್ರಾಂ ತೂಕದ ಕಿವಿ ಓಲೆ  ಹಾಗೂ 10 ಗ್ರಾಂ ತೂಕದ ಮಾಟೆಗಳನ್ನು ಒಟ್ಟು 58 ಗ್ರಾಂ ತೂಕದ ವಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಬೆಲೆ ಸುಮಾರು 2,00000/- ( ಎರಡು ಲಕ್ಷ ರೂಗಳು) ರೂಗಳಾಗಿರುತ್ತೆ. ಈ ಬಗ್ಗೆ ತಮ್ಮ ಗ್ರಾಮದ ಮನೋಜ್ ಬಿನ್ ದ್ಯಾವ ಕೃಷ್ಣಪ್ಪ, 27 ವರ್ಷ, ಆದಿ ದ್ರಾವಿಡ ಜನಾಂಗ ರವರ ಹಾಗೂ  ಮೂರ್ತಿ ಬಿನ್ ರಾಮಪ್ಪ , 24ವರ್ಷ, ಆದಿ ದ್ರಾವಿಡ ಜನಾಂಗ, ರವರುಗಳ ಮೇಲೆ  ಅನುಮಾನವಿದ್ದು, ತಾವು ಕಳೆದು ಹೋದ ನಮ್ಮ ವಡವೆಗಳ ಬಗ್ಗೆ ತಮ್ಮ ಸುತ್ತ-ಮುತ್ತ ಮನೆಗಳಲ್ಲಿ ಹಾಗೂ ಪರಿಚಯಸ್ಥರಲ್ಲಿ ಕೇಳಲಾಗಿ ತಡವಾಗಿರುತ್ತೆ, ಆದ್ದರಿಂದ  ದಿನ ತಡವಾಗಿ ಠಾಣೆ ಹಾಜರಾಗಿ ದೂರನ್ನು ನೀಡುತ್ತಿದ್ದು. ತಮ್ಮ ಮನೆಯ  ಒಳಗೆ ಇದ್ದ ಬೀರುವಿನ ಬಾಗಿಲನ್ನು ತೆಗೆದು  ಬೀರುವಿನಲ್ಲಿಟ್ಟಿದ್ದ ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

9. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.256/2021 ಕಲಂ. 15(A),32(3)  ಕೆ.ಇ ಆಕ್ಟ್:-

     ದಿನಾಂಕ:20/09/2021 ರಂದು ಮದ್ಯಾಹ್ನ 13-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ 205 ಮೋಹನ್ ಕುಮಾರ್ ರವರು ತಂದು ಹಾಜರು ಪಡಿಸಿದ ಘನ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ:11/09/2021 ರಂದು ಫಿರ್ಯಾದುದಾರರಾದ ಶ್ರೀಮತಿ ಲಲಿತಮ್ಮ ಮ.ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಮದರೆ: ದಿನಾಂಕ: 11/09/2021 ರಂದು  ಸಂಜೆ 5-15 ಗಂಟೆಯಲ್ಲಿ  ಗೌರಿಬಿದನೂರು ತಾಲ್ಲೂಕು  ಕಸಬಾ ಹೋಬಳಿ ಹುದೂತಿ ಗ್ರಾಮದಲ್ಲಿ ಯಾರೋ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು  ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಹೆಚ್.ಸಿ-184 ಅನ್ಸರ್ ಬಾಷ ಹೆಚ್.ಸಿ-170 ಜೂಲಪ್ಪ ಪಿ.ಸಿ.302 ಕುಮಾರ ನಾಯ್ಕ ರವರೊಂದಿಗೆ   ಸರ್ಕಾರಿ ಜೀಪ್ ಸಂಖ್ಯೆ:   ಕೆ.ಎ-40, ಜಿ-140  ರಲ್ಲಿ  ಹುದೂತಿ ಗ್ರಾಮದಲ್ಲಿ  ಹೋಗಿ , ಅಲ್ಲಿ  ಪಂಚಾಯ್ತಿದಾರರನ್ನು ಕರೆದುಕೊಂಡು  ಮಾಹಿತಿ ಇದ್ದ  ಸ್ಥಳಕ್ಕೆ  ಸಂಜೆ 5-30 ಗಂಟೆಗೆ ಹೋಗಿ   ಜೀಪ್ ಅನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ತನ್ನ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು , ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್  ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು  ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ.  ಮದ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ,  ತನ್ನ ಹೆಸರು   ಮಾಳ್ಳೂರಪ್ಪ ಬಿನ್ ದೊಡ್ಡ ಗಂಗಪ್ಪ, 50 ವರ್ಷ, ಕುರುಬರು, ವ್ಯವಸಾಯ, ಹುದೂತಿ ಗ್ರಾಮ ಗೌರಿಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ತನ್ನ ಬಳಿ ಇದ್ದ ಪ್ಲಾಸ್ಟಿಕ್ ಚೀಲವನ್ನು    ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್.ಸಾಮರ್ಥ್ಯದ HAY WARDS CHEERS  WHISKY ಯ 22  ಟೆಟ್ರಾ ಪಾಕೆಟ್ ಗಳು ಇದ್ದು,   ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 710 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 772.86/-  ರೂ.ಗಳಾಗಿರುತ್ತೆ. ಸದರಿ ವ್ಯಕ್ತಿ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು  ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ   ಸ್ಥಳದಲ್ಲಿ ಸಂಜೆ 5-45  ಗಂಟೆಯಿಂದ   ಸಂಜೆ  6-45  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ   ಕ್ರಮ ಜರುಗಿಸಿ  ಸ್ಥಳದಲ್ಲಿದ್ದ   90 ಎಂ.ಎಲ್.ಸಾಮರ್ಥ್ಯದ HAY WARDS CHEERS  WHISKY ಯ 22  ಟೆಟ್ರಾ ಪಾಕೆಟ್ ಗಳನ್ನು ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡು ಸಂಜೆ 8-15 ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು  ಈ ಮೆಮೋನೊಂದಿಗೆ  ಮಾಲನ್ನು ಹಾಗೂ ಆರೋಪಿಯನ್ನು ಹಾಜರುಪಡಿಸಿ ಆರೋಪಿಯ  ವಿರುದ್ಧ  15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿರುತ್ತೇನೆ ದುರಾಗಿರುತ್ತೆ.

 

10. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.257/2021 ಕಲಂ. 15(A),32(3)  ಕೆ.ಇ ಆಕ್ಟ್:-

     ದಿನಾಂಕ:21/09/2021 ರಂದು ಮದ್ಯಾಹ್ನ 09-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ 205 ಮೋಹನ್ ಕುಮಾರ್ ರವರು ತಂದು ಹಾಜರು ಪಡಿಸಿದ ಘನ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ:11/09/2021 ರಂದು ರಾತ್ರಿ 8-20 ಗಂಟೆಗೆ ಮಾನ್ಯ ಪಿ.ಎಸ್.ಐ ಶ್ರೀಮತಿ ಲಲಿತಮ್ಮ ರವರು ಮಾಲು, ಆರೋಪಿ ಮತ್ತು ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ಮೆಮೋವಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 11/09/2021 ರಂದು ಸಂಜೆ 7-00 ಗಂಟೆಯಲ್ಲಿ ಪಿರ್ಯಾದಿದಾರರು ಹುದೂತಿ ಗ್ರಾಮದಲ್ಲಿ ಠಾಣೆಯ ಹೆಚ್.ಸಿ-10 ಶ್ರೀರಾಮಯ್ಯ, ಹೆಚ್.ಸಿ-184 ಅನ್ಸರ್ ಬಾಷಾ, ಹೆಚ್.ಸಿ-170 ಜೂಲಪ್ಪ, ಪಿ.ಸಿ-179 ಶಿವಶೇಖರ, ಪಿ.ಸಿ-302 ಕುಮಾರ ನಾಯ್ಕ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-140 ರಲ್ಲಿ ಗಸ್ತು ಮಾಡುತ್ತಿದ್ದಾಗ ಹುದೂತಿ ಗ್ರಾಮದ ವಾಸಿ ಹನಮಂತಪ್ಪ ಬಿನ್ ಲೇಟ್ ಚಿಕ್ಕಗಂಗಪ್ಪ ರವರ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಆಸಾಮಿ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ,  ಹುದೂತಿ ಗ್ರಾಮದಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಸಂಜೆ 7-10 ಗಂಟೆಗೆ ಮಾಹಿತಿ ಇದ್ದ  ಸ್ಥಳಕ್ಕೆ  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ ಹನುಂಮತಪ್ಪ ರವರ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋದರು. ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿ ಹೆಸರು ವಿಳಾಸ ಕೇಳಲಾಗಿ, ತನ್ನ ಹೆಸರು  ಹನುಂತಪ್ಪ ಬಿನ್ ಲೇಟ್ ಚಿಕ್ಕಗಂಗಪ್ಪ, 40 ವರ್ಷ, ಕುರುಬರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಹುದೂತಿ ಗ್ರಾಮ,  ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ,  ಅದರಲ್ಲಿ  90 ಎಂ.ಎಲ್. ಸಾಮರ್ಥ್ಯದ HAY WARDS CHEERS  WHISKY ಯ 21 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 890 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 737.73 /- ರೂ.ಗಳಾಗಿರುತ್ತೆ.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗಳಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ ಸ್ಥಳದಲ್ಲಿ ಸಂಜೆ 7-15 ಗಂಟೆಯಿಂದ ರಾತ್ರಿ 8-00  ಗಂಟೆಯವರೆಗೆ ಬೀದಿ ದೀಪದ ಬೆಳಕಿನಲ್ಲಿ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ 90 ಎಂ.ಎಲ್ ಸಾಮರ್ಥ್ಯದ HAYWARDS CHEERS  WHISKY ಯ 21 ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ  04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ರಾತ್ರಿ 8-20  ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು,  ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ ನಂ.414/2021 ರಂತೆ ದಾಖಲಿಸಿಕೊಂಡಿರುತ್ತೆ.

 

11. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.258/2021 ಕಲಂ. 15(A),32(3)  ಕೆ.ಇ ಆಕ್ಟ್:-

     ದಿನಾಂಕ:21/09/2021 ರಂದು ಮದ್ಯಾಹ್ನ 10-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ 205 ಮೋಹನ್ ಕುಮಾರ್ ರವರು ತಂದು ಹಾಜರು ಪಡಿಸಿದ ಘನ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ಈ ಮೂಲಕ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ಪಿ.ಎಸ್.ಐ ವಿಜಯಕುಮಾರ್ ಕೆ.ಸಿ ಆದ ನಾನು  ಸೂಚಿಸುವುದೇನೆಂದರೆ, ಈ ದಿನ ದಿನಾಂಕ: 15/09/2021 ರಂದು ಮಧ್ಯಾಹ್ನ 12-00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಸೊನಗಾನಹಳ್ಳಿ ಗ್ರಾಮದಲ್ಲಿ ಯಾರೋ ಒಬ್ಬ ವ್ಯಕ್ತಿ ತನ್ನ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಠಾಣೆಯ ಪಿ.ಸಿ-312 ಸೋಮನಾಥ್ ಮಾಲಗಾರ, ಪಿ.ಸಿ-179 ಶಿವಶೇಖರ, ಮ.ಪಿ.ಸಿ 222 ಶಿಲ್ಪ  ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ  ಪಂಚಾಯ್ತಿದಾರರನ್ನು ಕರೆದುಕೊಂಡು ಮಧ್ಯಾಹ್ನ 12-30 ಗಂಟೆಗೆ ಮಾಹಿತಿ ಇದ್ದ  ಸ್ಥಳಕ್ಕೆ  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋದರು. ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿ ಹೆಸರು ವಿಳಾಸ ಕೇಳಲಾಗಿ, ಮದ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿ ತನ್ನ ಹೆಸರು  ಗೋಪಾಲ್ ಬಿನ್ ಲೇಟ್ ಮಾಳೂರಪ್ಪ, 43 ವರ್ಷ, ಕುರುಬ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಸೋನಗಾನಹಳ್ಳಿ ಗ್ರಾಮ, ಹೊಸೂರು ಹೋಬಳಿ, ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ,  ಅದರಲ್ಲಿ  90 ಎಂ.ಎಲ್. ಸಾಮರ್ಥ್ಯದ HAY WARDS CHEERS  WHISKY ಯ 14 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 260  ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 491.82 ರೂ.ಗಳಾಗಿರುತ್ತೆ.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗಳಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ ಸ್ಥಳದಲ್ಲಿ ಮಧ್ಯಾಹ್ನ 12-30 ಗಂಟೆಯಿಂದ 13-30  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ 90 ಎಂ.ಎಲ್ ಸಾಮರ್ಥ್ಯದ HAYWARDS CHEERS  WHISKY ಯ 14 ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ  04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಮಧ್ಯಾಹ್ನ 14-00  ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು,  ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿರುತ್ತೇನೆ.

 

12. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.148/2021 ಕಲಂ. 78(3) ಕೆ.ಪಿ ಆಕ್ಟ್:-

     ದಿನಾಂಕ;20/09/2021 ರಂದು ಮದ್ಯಾಹ್ನ 2-00 ಗಂಟೆಯಲ್ಲಿ  ನ್ಯಾಯಾಲಯದ ಪಿಸಿ 318 ರವರು ಠಾಣಾ ಎನ್,ಸಿ,ಆರ್ 215/2021 ರಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ತಂದು ಹಾರುಪಿಡಿಸಿದರ ಸಾರಾಂಶವೇನೆಂಧರೆ ದಿನಾಂಕ:07/09/2021 ರಂದು ಸಂಜೆ 5-00 ಗಂಟೆಯಲ್ಲಿ ಗೌರಿಬಿದನೂರು ನಗರದ ಎನ್,ಆರ್ ವೃತ್ತದ ಕಡೆ ಗಸ್ತಿನಲ್ಲಿ ಇದ್ದಾಗ ಸಾರ್ವಜನಿಕರು ಪೋನ್ ಮಾಡಿ  ಗೌರಿಬಿದನೂರು ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಯಾರೋ ಒಬ್ಬ ಆಸಾಮಿ ಮಟ್ಕಾ ಜೂಜಾಟವಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು,ಕೂಡಲೇ ಬಂದ ಮಾಹಿತಿಯನ್ನು ಪಿ,ಎಸ್ ಐ ಸಾಹೇಬರಿಗೆ  ತಿಳಿಸಿ ಅನುಮತಿಯನ್ನು ಪಡೆದುಕೊಂಡು ಅದರಂತೆ ನಮ್ಮ ಠಾಣೆಯ, ಸಿಪಿಸಿ-34 ಮಂಜುನಾಥ  ರವರ  ಜೊತೆಯಲ್ಲಿ ಎಮ್.ಜಿ ವೃತ್ತದ ಬಳಿ ಪಂಚರನ್ನು ಬರ ಮಾಡಿಕೊಂಡು ,ಪಂಚರೊಂದಿಗೆ ಗೌರಿಬಿದನುರು ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿ ಬಜಾರ್ ರಸ್ತೆಯ ಮುನಿಸಿಪಲ್ ಶಾಲೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ 1/- ರೂಪಾಯಿಗೆ 70/- ರೂಪಾಯಿಗಳನ್ನು ಕೊಡುವುದಾಗಿ ಕೂಗಾಡುತ್ತಿರುವುದು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜಜನಿಕರಿಗೆ ಮಟ್ಕಾ ಜೂಜಾಟ ವಾಡಲು ಪ್ರೇರೇಪಿಸುತ್ತಾ ಮತ್ತು ಮಟ್ಜಾ ಜೂಜಾಟವಾಡುತ್ತಿದ್ದನ್ನು ಖಚಿತ ಪಡಿಸಿಕೊಂಡು ಪಂಚರೊಂದಿಗೆ ಸದರಿ ಆಸಾಮಿಯ ಮೇಲೆ ದಾಳಿ ಮಾಡಿ ಸುತ್ತುವರೆದು ಆತನ ಹೆಸರು ಮತ್ತು ವಿಳಾಸ ಕೇಳಲಾಗಿ ಶೌಕತ್ ಬಿನ್ ಲೇಟ್ ಸತ್ತರ್ ಖಾನ್ 45 ವರ್ಷ.ಮುಸ್ಲಿಂ ಜನಾಂಗ ಕೂಲಿಕೆಲಸ ,ವಾಸ;ಟಿಪ್ಪು ನಗರ ಗೌರಿಬಿದನೂರು ನಗರ ಪೋನ್;9606114453 ಎಂತ ತಿಳಿಸಿದ    ನಂತರ ಸದರಿ ಆಸಾಮಿಯನ್ನು  ಮಟ್ಕಾ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವನ ಬಳಿ ಯಾವುದೆ ಪರವಾನಗಿ ಇಲ್ಲವೆಂದು ತಿಳಿಸಿದನು ಈ ಸಮಯದಲ್ಲಿ ಪಂಚರ ಸಮಕ್ಷಮ ಸದರಿ ಆಸಾಮಿಯ  ಅಂಗಶೋಧನೆ ಮಾಡಲಾಗಿ ಒಂದು ಮಟ್ಕಾಚೀಟಿ ಬರೆಯುವ ಪುಸ್ತಕ, ಒಂದು ಬಾಲ್ ಪಾಯಿಂಟ್ ಪೆನ್ನು ಮತ್ತು ನಗದು ಹಣ 1200/- ರೂಪಾಯಿಗಳು ಇದ್ದು, ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಜೂಜಾಟದಿಂದ ಬಂದ ಹಣ ಎಂದು ತಿಳಿಸಿದನು ನಂತರ ಸದರಿ ಆಸಾಮಿಯನ್ನು ಮತ್ತು ಮಾಲನ್ನು  ಸದರಿಯವುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಸಂಜೆ 5-15 ಗಂಟೆಯಿಂದ 6:00 ಗಂಟೆಯವರೆಗೆ  ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡು ಠಾಣೆಗೆ ಬಂದು ನೀಡಿದ ವರಧಿಯನ್ನುಪಡೆದು ಎನ್.ಸಿ.ಆರ್ ಪ್ರಕರಣ ದಾಖಲಿಸಿಕೊಂಡು ಈ ದಿನ ಘನ ನ್ಯಾಯಾಲಯದ ಅನುಮತಿಯನ್ನು ಪಡೆಕೊಂಡು ಪ್ರಕರಣ ದಾಖಲಿಸಿರುತ್ತೆ.

 

13. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.149/2021 ಕಲಂ. 78(3) ಕೆ.ಪಿ ಆಕ್ಟ್:-

     ದಿನಾಂಕ;20/09/2021 ರಂದು ಸಂಜೆ 4-00 ಗಂಟೆಗೆ ನ್ಯಾಯಾಲಯದ ಪಿಸಿ -318 ರವರು ಠಾಣಾ ಎನ್,ಸಿ,ಆರ್ 214/2021 ರಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿಯನ್ನು ಪಡೆದು  ಹಾಜರುಪಡಿಸಿದರ ಸಾರಾಂಶವೇನೆಂದರೆ  ದಿನಾಂಕ 07/09/2021 ರಂದು ಸಂಜೆ 4:15 ಗಂಟೆಯಲ್ಲಿ ಶ್ರೀ ವಿಶ್ವನಾಥ ಎಂ.ಸಿ ಹೆಚ್.ಸಿ-146 ರವರು ಠಾಣೆಗೆ ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ನಾನು ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಂಕ: 07-09-2021 ರಂದು ಮದ್ಯಾಹ್ನ 3:00 ಗಂಟೆಯಲ್ಲಿ ನಗರದ ಸಂತೇಮೈದಾನದಲ್ಲಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಟ್ಕಾ ಅಂಕಿಗಳನ್ನು ಬರೆದುಕೊಡುತ್ತಿರುವುದಾಗಿ ಮಾಹಿತಿ ಬಂದಿದ್ದು ಕೂಡಲೇ ನಾನು ಪಿ.ಎಸ್.ಐ ರವರಿಗೆ ಮಾಹಿತಿ ನೀಡಿ ಅನುಮತಿಯನ್ನು ಪಡೆದು ಠಾಣೆಯಲ್ಲಿದ್ದ ಪಿ.ಸಿ 34 ಮಂಜುನಾಥ ಹಾಗೂ ಪಿ.ಸಿ 102 ಪ್ರತಾಪ್ ಕುಮಾರ್ ರವರ ಜೊತೆ KSRTC ಬಸ್ ನಿಲ್ದಾಣದಲ್ಲಿ ಪಂಚರನ್ನು ಕರೆದುಕೊಂಡು ಸ್ವಲ್ಪ ದೂರ ನಡೆದುಕೊಂಡು ಹೋಗಿ ಸಂತೇಮೈದಾನದಲ್ಲಿ ಮುನಿಸಿಪಲ್ ಶಾಲೆ ಹಿಂಭಾಗದ ರಸ್ತೆಯ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿ ಶಾಲೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ 1/- ರೂಪಾಯಿಗೆ 70/- ರೂಪಾಯಿಗಳನ್ನು ಕೊಡುವುದಾಗಿ ನಿಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಿ ಎಂದು ಕೂಗಾಡುತ್ತಿರುವುದು ಕಂಡುಬಂದಿತು. ನಾನು, ಪಿ.ಸಿ 102 ಪ್ರತಾಪ್ ಕುಮಾರ್ ಮತ್ತು ಪಿ.ಸಿ 34 ಮಂಜುನಾಥ ರವರು ಪಂಚರ ಸಮ್ಮುಖದಲ್ಲಿ ಅವನನ್ನು ಸುತ್ತುವರಿದು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಶೇಖ್ ಅಹಮದ್ ಬಿನ್ ಲೇಟ್ ಇಮಾಂಸಾಬ್, 48 ವರ್ಷ, ಹಿತ್ತಾಳೆ ತಾಮ್ರದ ಕೆಲಸ, ನದಿಗಡ್ಡೆ ಗೌರಿಬಿದನೂರು ನಗರ ಫೋ: 9731003246 ಎಂದು ತಿಳಿಸಿದ್ದು, ಅವನಿಗೆ ಮಟ್ಕಾ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವನ ಬಳಿ ಯಾವುದೆ ಪರವಾನಗಿ ಇಲ್ಲವೆಂದು ತಿಳಿಸಿದನು ಆ ಸಮಯದಲ್ಲಿ ಆ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಒಂದು ಮಟ್ಕಾಚೀಟಿ ಬರೆಯುವ ಪುಸ್ತಕ, ಒಂದು ಬಾಲ್ ಪಾಯಿಂಟ್ ಪೆನ್ನು ಮತ್ತು ನಗದು ಹಣ 1160/- ರೂಪಾಯಿಗಳು ಇದ್ದು, ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಜೂಜಾಟದಿಂದ ಬಂದ ಹಣ ಎಂದು ತಿಳಿಸಿದನು ನಂತರ ಆರೋಪಿಯನ್ನು ವಶಕ್ಕೆ ಪಡೆದು ಪಂಚನಾಮೆ ಜರುಗಿಸಿ ಆರೋಪಿ ಹಾಗೂ ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಬಂದು ಕ್ರಮ ಕೈಗೊಳ್ಳುವುದಕ್ಕಾಗಿ ನೀಡಿದ ವರದಿಯನ್ನು ಪಡೆದು ಎನ್.ಸಿ.ಆರ್ ಪ್ರಕರಣ ದಾಖಲಿಸಿ ಈ ದಿನ ಘನ ನ್ಯಾಯಾಲಯದ ಅನುಮತಿಯನ್ನು ಪಡೆದು  ಕ್ರಿಮಿನಲ್ ಪ್ರಕರಣ ದಾಖಲಿಸಿರುತ್ತೆ.

 

14. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.150/2021 ಕಲಂ. 15(A),32(3) ಕೆ.ಇ  ಆಕ್ಟ್:-

     ದಿನಾಂಕ;21/09/2021 ರಂದು ಬೆಳಿಗ್ಗೆ 10-00 ಗಂಟೆಗೆ ಠಾಣಾ ನ್ಯಾಯಾಲಯದ ಪಿಸಿ 318 ರವರು ಠಾಣಾ ಎನ್,ಸಿ,ಆರ್ ;217/2021 ರಲ್ಲಿ ಕ್ರಿಮಿನಲ್ ಪ್ರಕರಣ ದಾಖಲಸಿಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದರ ಸಾರಾಂಶವೇನೆಂಧರೆ ದಿನಾಂಕ:08/09/2021 ರಂದು ಬೆಳಿಗ್ಗೆ 10-00  ಗಂಟೆಯಲ್ಲಿ ನಗರ ಗಸ್ತಿನಲ್ಲಿದ್ದಾಗ ಬಂದ ಖಚಿತ ಮಾಹಿತಿಯ ಮೇರೆಗೆ ನದಿಗಡ್ಡೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ  ಆಸಾಮಿ ಸಾರ್ವಜನಿಕರಿಗೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿದರು, ಕೂಡಲೇ ತಮ್ಮ ಠಾಣೆಯ ಸಿಬ್ಬಂದಿಯಾದ ಹೆಚ್ ಸಿ-244 ಗೋಪಾಲ್, ರವರೊಂದಿಗೆ  ಸರ್ಕಾರಿ  ಜೀಪ್ ಸಂಖ್ಯೆ ಕೆ.ಎ-40 ಜಿ-281 ರಲ್ಲಿ ಎ.ಪಿಸಿ-76 ಹರೀಶ್ ರವರು ಚಾಲನೆ ಮಾಡಿಕೊಂಡು ಮುನಿಸಿಪಲ್ ಕಾಲೇಜು ಬಳಿ ಪಂಚರನ್ನು ಬರಮಾಡಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ  ಮಾಹಿತಿಯಂತೆ ನದಿಗಡ್ಡೆ  ಆಂಜನೇಯಸ್ವಾಮಿ ದೇವಸ್ಥಾನದ ಹತ್ತಿರ ಹೋಗಿ ಮರೆಲ್ಲಿ ಜೀಪು ಅನ್ನು ನಿಲ್ಲಿಸಿ ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಯಾರೋ ಆಸಾಮಿಗಳು ಸಾರ್ವಜನಿಕ ಸ್ಥಳದಲ್ಲಿ  ಮದ್ಯ ಸೇವನೆ ಮಾಡುತ್ತಿರುವುದು ಖಚಿತ ಪಡಿಸಿಕೊಂಡು ಪಂಚರೊಂದಿಗೆ ಮದ್ಯ ಸೇವನೆ ಮಾಡುತ್ತಿದ್ದವರ ಮೇಲೆ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿ ಇದ್ದ ನಮ್ಮನ್ನು ಕಂಡು ಮದ್ಯ ಸೇವನೆ ಮಾಡುತ್ತಿದ್ದ ಆಸಾಮಿಗಳು ಓಡಿ ಹೋದರು ಮಾಹಿತಿಯಂತೆ ಮದ್ಯ ಸರಬರಾಜು ಮಾಡುತ್ತಿದ್ದ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ  ಗೋವಿಂದಪ್ಪ ಬಿನ್ ಲೇಟ್ ಆಂಜಿನಪ್ಪ . 69 ವರ್ಷ,ವಕ್ಕಲಿಗರು,ವ್ಯವಸಾಯ. ವಾಸ;ಬಿಸಿಲಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು ಪೋನ್;9380166403 ಎಂದು ತಿಳಿಸಿದನು. ಆಸಾಮಿಗೆ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಯಾವುದದಾರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ರೀತಿಯ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮ ಸ್ಥಳವನ್ನು ಪರಿಶೀಲಿಸಲಾಗಿ 1) 90 ಎಮ್ ಎಲ್ ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿ ಕಂಪನಿಯ 20 ಟೆಟ್ರಾ ಪಾಕೆಟ್ ಗಳು 2)  90 ಎಮ್ ಎಲ್ ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿ ಕಂಪನಿಯ 04 ಖಾಲಿ ಟೆಟ್ರಾ ಪಾಕೆಟ್ ಗಳು 3) 03 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು 4) ಎರಡು ಲೀಟರ್ ಸಾಮರ್ಥ್ಯದ ಒಂದು ಖಾಲಿ ಪ್ಲಾಸ್ಟಿಕ್  ವಾಟರ್ ಬಾಟಲ್ ಇರುತ್ತೆ. ಮದ್ಯವಿರುವ ಪಾಕೆಟ್ಗಗಳ ಮೇಲೆ ಇರುವ ಬೆಲೆಯನ್ನು ನೋಡಲಾಗಿ 35.13 ರೂಪಾಯಿಗಳೆಂತ ಇರುತ್ತೆ ಇದರ ಒಟ್ಟು ಬೆಲೆ 702  ರೂ ಗಳಾಗಿರುತ್ತೆ.ಮತ್ತು ಇದರ ಒಟ್ಟು ಮಧ್ಯೆ ದ ದ್ರವ್ಯ  ಪ್ರಮಾಣ  ಆಸಾಮಿ ಮತ್ತು ಮಾಲುಗಳನ್ನುಬೆಳಿಗ್ಗೆ 10-15 ಗಂಟೆಯಿಂದ 11-00 ಗಂಟೆಯವರೆಗೆ  ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿ ಠಾಣಾಧಿಕಾರಿಗಳಿಗೆ ವರದಿಯನ್ನು ಪಡೆದು ಈ ದಿನ ಕ್ರಿಮಿನಿಲ್ ಪ್ರಕರಣ ದಾಖಲಿಸಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

15. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.97/2021 ಕಲಂ. 323,324,114,504,34 ಐ.ಪಿ.ಸಿ:-

     ದಿನಾಂಕ 21/09/2021 ರಂದು ಬೆಳಿಗ್ಗೆ 09.30 ಗಂಟೆಗೆ ಹೆಚ್.ಸಿ 200 ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಪಿರ್ಯಾದಿ ಶ್ರೀಮತಿ ಶೋಭ ಕೋಂ ಶ್ರೀನಿವಾಸ ,25 ವರ್ಷ, ಬೋವಿ ಜನಾಂಗ, ಮನೆಕೆಲಸ ಮತ್ತು ಬೆಂಗಳೂರಿನ ಮಹದೇವಪುರದ ಕಾಫಿಡೇನಲ್ಲಿ ಕೆಲಸ, ವಾಸ ಎಗವಬಸವಾಪುರ ಗ್ರಾಮ ಚಿಂತಾಮಣಿ ತಾಲ್ಲೂಕು, ರವರು ವೈದ್ಯರ ಸಮಕ್ಷಮ ನೀಡಿದ ಹೇಳಿಕೆಯನ್ನು ಪಡೆದು ಠಾಣೆಯಲ್ಲಿ ಹಾಜರುಪಡಿಸಿದ ಹೇಳಿಕೆ ದೂರಿನ ಸಾರಾಂಶವೇನೆಂದರೆ ತಾನು ಮನೆಕೆಲಸ ಮತ್ತು ಬೆಂಗಳೂರಿನ ಮಹದೇವಪುರದ ಕಾಫಿಡೇನಲ್ಲಿ ಈಗ್ಗೆ 2 ವರ್ಷಗಳಿಂದ ಕೆಲಸ ಮಾಡಿಕೊಂಡು ಮಾರತಹಳ್ಳಿಯಲ್ಲಿನ ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತೇನೆ. ಈಗ್ಗೆ ಸುಮಾರು 4 ವರ್ಷಗಳ ಹಿಂದೆ ಈ.ತಿಮ್ಮಸಂದ್ರದ ಬಳಿಯಿರುವ ನೀರಗಂಟಿಪಲ್ಲಿ ಗ್ರಾಮದ ವಾಸಿಯಾದ ಶ್ರೀನಿವಾಸ ಬಿನ್ ಲೇಟ್ ಶಿವಪ್ಪರವರೊಂದಿಗೆ ಪ್ರೀತಿಸಿ ಮದುವೆಯಾಗಿದ್ದು, ಅಂದಿನಿಂದ ಸಂಸಾರ ಮಾಡಿಕೊಂಡಿದ್ದೆವು, ನಂತರ ಸುಮಾರು 7-8 ತಿಂಗಳ ಹಿಂದೆ ತನ್ನ ಗಂಡ ತಾನು ಕೆಲಸಕ್ಕೆ ಹೋಗುತ್ತಿದ್ದ ಕಡೆ ಸುಕನ್ಯಾ ಶ್ರೀನಿವಾಸಪುರ ತಾಲ್ಲೂಕು, ಸೋಮಯಾಜಲಹಳ್ಳಿ ಗ್ರಾಮದ ವಾಸಿ ರವರೊಂದಿಗೆ ಅಕ್ರಮ ಸಂಬಂಧ ಹೊಂದಿಕೊಂಡು ಮನೆಯಲ್ಲಿ ಗಲಾಟೆ ಮಾಡುತ್ತಿದ್ದನು, ತಾನು ಬುದ್ದಿವಾದ ಹೇಳಿದರೂ ಕೇಳದೇ ಇದ್ದಾಗ ತಾನು ಬೆಂಗಳೂರಿನ ಹೆಚ್.ಎ.ಎಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಬಗ್ಗೆ ಅಲ್ಲಿನ ಪೊಲೀಸರು ತನ್ನ ಗಂಡನಿಗೆ ಕರೆಯಿಸಿ ಬುದ್ದಿ ಹೇಳಿ ಬಂದೋಬಸ್ತ್ ಮಾಡಿ ಕಳುಹಿಸಿದರು. ಕೆಲವು ದಿನ ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದು,ನಂತರ ಸುಮಾರು 15 ದಿನಗಳ ಹಿಂದೆ ತಾನು ಗಣೇಶ ಹಬ್ಬಕ್ಕಾಗಿ ತಮ್ಮ ಸ್ವಂತ ಗ್ರಾಮಕ್ಕೆ ಬಂದಿದ್ದಾಗ ದಿನಾಂಕ 18/09/2021 ರಂದು ಸಂಜೆ ಸುಮಾರು 5.00 ಗಂಟೆಯಲ್ಲಿ ತನ್ನ ಗಂಡ ಶ್ರೀನಿವಾಸ ತಾನು ಇರುವಲ್ಲಿಗೆ ಬಂದು ಮನೆಯಲ್ಲಿ ತಮ್ಮ ತಂದೆ-ತಾಯಿ ಕೂಲಿಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿ ಜಗಳ ತೆಗೆದು ಕೆಟ್ಟಮಾತುಗಳಿಂದ ಬೈದು ನೀನು ತನಗೆ ಇಷ್ಟವಿಲ್ಲ ತಾನು ಸುಕನ್ಯಾಳಿಗೆ ಮದುವೆ ಮಾಡಿಕೊಳ್ಳುತ್ತೇನೆಂತ ಹೇಳಿ ಕೋಲಿನಿಂದ ತನ್ನ ಎಡರೆಟ್ಟೆಗೆ, ಬೆನ್ನಿಗೆ ಮತ್ತು ಎಡಕಾಲಿಗೆ ಹೊಡೆದು ಊತಗಾಯಪಡೆಸಿ ಕೆಳಕ್ಕೆ ಕೂದಲು ಎಳೆದು ತಳ್ಳಿ ಕಾಲುಗಳಿಂದ ಒದ್ದು, ಕೈಗಳಿಂದ ಹೊಡೆದು ಮೈನೋವುಂಟು ಮಾಡಿರುತ್ತಾನೆ. ಆಗ ತಾನು ಕಿರುಚಿಕೊಂಡಾಗ ತಮ್ಮ ಪೋಷಕರು ಕೂಲಿ ಕೆಲಸದಿಂದ ವಾಪಸ್ಸು ಬಂದು ಜಗಳ ಬಿಡಿಸಿ ಉಪಚರಿಸಿರುತ್ತಾರೆ. ತನಗೆ ಮೈನೋವು ಜಾಸ್ತಯಾಗಿದ್ದರಿಂದ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ. ತಮ್ಮ ಅತ್ತೆ ಶಾಂತಮ್ಮ ತನ್ನ ಗಂಡನಿಗೆ ಕುಮ್ಮಕ್ಕು ನೀಡಿ ತನಗೆ ಹೊಡೆದು ಜಗಳ ಮಾಡಿ ಗಾಯಪಡೆಸಿದ ತನ್ನ ಗಂಡ ಶ್ರೀನಿವಾಸ ಎಂಬುವನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.

 

16. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.98/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ 21/09/2021 ರಂದು ಮದ್ಯಾಹ್ನ 13.00 ಗಂಟೆಗೆ ಪಿ.ಎಸ್.ಐ ರವರು ಮಾಲು,ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿ ಸಾರಾಂಶವೇನೆಂದರೆ, ದಿನಾಂಕ:21/09/2021 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿದ್ದಾಗ ಗುಡಿಸಲಹಳ್ಳಿ ಗ್ರಾಮದ ವೆಂಕಟರವಣಪ್ಪ ಬಿನ್ ಲೇಟ್ ತಿಮ್ಮರಾಯಪ್ಪ ಕೋಟಗಲ್ ಕ್ರಾಸ್ ನಲ್ಲಿರುವ ತಮ್ಮ ಚಿಲ್ಲರೆ ಅಂಗಡಿ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ 7 ನೇ ಗ್ರಾಮ ಗಸ್ತಿನ ಸಿಬ್ಬಂದಿಯಾದ ಸಿ.ಪಿ.ಸಿ 484 ವಿ.ಎಸ್.ಶಿವಣ್ಣ ರವರು ಖಚಿತ ಮಾಹಿತಿ ನೀಡಿದ್ದು, ಅದರಂತೆ ಸದರಿ ಸ್ಥಳದ ಮೇಲೆ ದಾಳಿ ನಡೆಸುವ ಸಲುವಾಗಿ ತಾನು ಸಿಬ್ಬಂದಿಯಾದ ಸಿ.ಪಿ.ಸಿ-484 ವಿ.ಎಸ್.ಶಿವಣ್ಣ ರವರೊಂದಿಗೆ ಸರ್ಕಾರಿ ವಾಹನ ಸಂಖ್ಯೆ ಕೆಎ-40-ಜಿ-539 ಜೀಪ್ ನಲ್ಲಿ ಗುಡಿಸಲಹಳ್ಳಿ ಕ್ರಾಸ್ ಬಳಿ ಹೋಗಿ ಕ್ರಾಸ್ ನಲ್ಲಿದ್ದವರಿಗೆ ವಿಚಾರವನ್ನು ತಿಳಿಸಿ ಅವರನ್ನು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರೊಂದಿಗೆ ಸರ್ಕಾರಿ ಜೀಪ್ ನಲ್ಲಿ ಕೋಟಗಲ್ ಕ್ರಾಸ್ ನಲ್ಲಿರುವ ಗ್ರಾಮದ ವೆಂಕಟರವಣಪ್ಪ ಬಿನ್ ಲೇಟ್ ತಿಮ್ಮರಾಯಪ್ಪ ಚಿಲ್ಲರೆ ಅಂಗಡಿ ಮುಂದೆ ನೋಡಲಾಗಿ ಅಂಗಡಿ ಮಾಲೀಕನಾದ ವೆಂಕಟರವಣಪ್ಪ ಬಿನ್ ಲೇಟ್ ತಿಮ್ಮರಾಯಪ್ಪ ರವರು ತಮ್ಮ ಮನೆಯ ಮುಂದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಪೊಲೀಸರನ್ನು ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು, ಅಂಗಡಿ ಮಾಲೀಕ ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಓಡಿಹೋಗಿದ್ದು,ಓಡಿ ಹೋದ ಅಂಗಡಿ ಮಾಲೀಕನ ಹೆಸರು ಮತ್ತು ವಿಳಾಸ ಕೇಳಲಾಗಿ ವೆಂಕಟರವಣಪ್ಪ ಬಿನ್ ಲೇಟ್ ತಿಮ್ಮರಾಯಪ್ಪ 55 ವರ್ಷ, ವಕ್ಕಲಿಗ ಜನಾಂಗ, ವಾಸ ಗುಡಿಸಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು  ಎಂದು ತಿಳಿದು ಬಂದಿರುತ್ತದೆ. ಸ್ಥಳವನ್ನು ಪರಿಶೀಲಿಸಲಾಗಿ ಚಿಲ್ಲರೆ ಅಂಗಡಿ ಮುಂದಿನ ಶೀಟ್ ಹಾಕಿರುವ ಸ್ಥಳವಾಗಿದ್ದು, ಸ್ಥಳದಲ್ಲಿ ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 2 ಪ್ಲಾಸ್ಟಿಕ್ ಗ್ಲಾಸ್ ಗಳು, ಖಾಲಿ ಇದ್ದ ಎರಡು OLD TAVREN WHISKEY 180 ಎಂ.ಎಲ್ ಟೆಟ್ರಾ ಪ್ಯಾಕೆಟ್ ಇದ್ದು, ಸ್ಥಳದಲ್ಲಿಯೇ  180 ಎಂ.ಎಲ್ ನ OLD TAVREN WHISKEY ಮಧ್ಯದ 8 ಟೆಟ್ರಾ ಪ್ಯಾಕೆಟ್ ಗಳು ಇದ್ದು, ಒಂದರ ಬೆಲೆ 86.75/- ರೂ  ಆಗಿದ್ದು, 8 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 694/-ರೂ ಆಗಿರುತ್ತೆ. ಮದ್ಯ ಒಟ್ಟು 1440 ಮೀಲಿ ಆಗಿರುತ್ತೆ. ಮಧ್ಯವನ್ನು ಕುಡಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೇ ಇರುವುದರಿಂದ ಚಿಲ್ಲರೆ ಅಂಗಡಿ ಮಾಲೀಕ ವೆಂಕಟರವಣಪ್ಪ ಬಿನ್ ಲೇಟ್ ತಿಮ್ಮರಾಯಪ್ಪ ಓಡಿಹೋಗಿರುವುದಾಗಿ ತಿಳಿಯಿತು.  ಮೇಲ್ಕಂಡ ಎಲ್ಲಾ ಮಾಲುಗಳನ್ನು ಮಧ್ಯಾಹ್ನ 11.30 ರಿಂದ  ಮದ್ಯಾಹ್ನ 12.30 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸದರಿ ಮಾಲನ್ನು ಮಹಜರ್, ನಿಮ್ಮ ಮುಂದೆ ವರದಿ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು, ಈ ಬಗ್ಗೆ ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ವೆಂಕಟರವಣಪ್ಪ ಬಿನ್ ಲೇಟ್ ತಿಮ್ಮರಾಯಪ್ಪ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುಲು ನೀಡಿದ ವರದಿ ಸಾರಾಂಶವಾಗಿರುತ್ತೆ.

 

17. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.99/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ 21/09/2021 ರಂದು ಮದ್ಯಾಹ್ನ 3.30 ಗಂಟೆಗೆ ಪಿ.ಎಸ್.ಐ ರವರು ಮಾಲು,ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿ ಸಾರಾಂಶವೇನೆಂದರೆ, ದಿನಾಂಕ:21/09/2021 ರಂದು ಬೆಳಿಗ್ಗೆ 01.15 ಗಂಟೆ ಸಮಯದಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿದ್ದಾಗ ಸಿದ್ದೇಪಲ್ಲಿ ಕ್ರಾಸ್ ನಲ್ಲಿರುವ ಸುಧಮ್ಮ ಕೋಂ ರಾಮನ್ನರವರು ತಮ್ಮ ಚಿಲ್ಲರೆ ಅಂಗಡಿ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ 05 ನೇ ಗ್ರಾಮ ಗಸ್ತಿನ ಸಿಬ್ಬಂದಿಯಾದ ಸಿ.ಹೆಚ್.ಸಿ 215 ಮಂಜುನಾಥರೆಡ್ಡಿರವರು ಖಚಿತ ಮಾಹಿತಿ ನೀಡಿದ್ದು, ಅದರಂತೆ ಸದರಿ ಸ್ಥಳದ ಮೇಲೆ ದಾಳಿ ನಡೆಸುವ ಸಲುವಾಗಿ ತಾನು ಸಿಬ್ಬಂದಿಯಾದ ಸಿ.ಹೆಚ್.ಸಿ 215 ಮಂಜುನಾಥರೆಡ್ಡಿ ಮತ್ತು ಮಹಿಳಾ ಸಿಬ್ಬಂದಿ ಮ.ಪಿ.ಸಿ 495 ಗಾಯತ್ರಿರವರೊಂದಿಗೆ ಸರ್ಕಾರಿ ವಾಹನ ಸಂಖ್ಯೆ ಕೆಎ-40-ಜಿ-539 ಜೀಪ್ ನಲ್ಲಿ ಸಿದ್ದೇಪಲ್ಲಿ ಕ್ರಾಸ್ ಬಳಿ ಹೋಗಿ ಅಲ್ಲಿದ್ದವರಿಗೆ ವಿಚಾರವನ್ನು ತಿಳಿಸಿ ಅವರನ್ನು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರೊಂದಿಗೆ ಸಿದ್ದೇಪಲ್ಲಿ ಕ್ರಾಸ್ ನಿಂದ ಬಟ್ಲಹಳ್ಳಿ ಗ್ರಾಮದ ಕಡೆಗೆ ಹೋಗುವ ರಸ್ತೆಯ ಬಳಿ ಹೋಗಿ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ನಡೆದುಕೊಂಡು ಸಿದ್ದೇಪಲ್ಲಿ ಕ್ರಾಸ್ ನ ಸುಧಮ್ಮ ಕೋಂ ರಾಮನ್ನರವರು ಚಿಲ್ಲರೆ ಅಂಗಡಿ ಬಳಿ ಹೋಗಿ ನೋಡಲಾಗಿ ಅಂಗಡಿ ಮಾಲೀಕಳು ತಮ್ಮ ಚಿಲ್ಲರೆ ಅಂಗಡಿಯ ಮುಂದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಪೊಲೀಸರನ್ನು ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು, ಅಂಗಡಿ ಮಾಲೀಕಳು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಓಡಿಹೋಗಿದ್ದು, ಓಡಿ ಹೋದ ಅಂಗಡಿ ಮಾಲೀಕಳ ಹೆಸರು ಮತ್ತು ವಿಳಾಸ ಕೇಳಲಾಗಿ ಸುಧಮ್ಮ ಕೋಂ ರಾಮನ್ನ, 55 ವರ್ಷ, ನಾಯಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಸಿದ್ದೇಪಲ್ಲಿ ಕ್ರಾಸ್, ಚಿಂತಾಮಣಿ ತಾಲ್ಲೂಕು  ಎಂದು ತಿಳಿದು ಬಂದಿರುತ್ತದೆ. ಸ್ಥಳವನ್ನು ಪರಿಶೀಲಿಸಲಾಗಿ ಚಿಲ್ಲರೆ ಅಂಗಡಿ ಮನೆಯ ಮುಂದೆ ಇಟ್ಟುಕೊಂಡಿರುವ ಸ್ಥಳವಾಗಿದ್ದು, ಸ್ಥಳದಲ್ಲಿ ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 2 ಪ್ಲಾಸ್ಟಿಕ್ ಗ್ಲಾಸ್ ಗಳು, ಖಾಲಿ ಇದ್ದ ಎರಡು HAYWARDS CHEERS WHISKEY 90 ಎಂ.ಎಲ್ ಟೆಟ್ರಾ ಪ್ಯಾಕೆಟ್ ಇದ್ದು, ಸ್ಥಳದಲ್ಲಿಯೇ  90 ಎಂ.ಎಲ್ ನ HAYWARDS CHEERS WHISKEY ಮಧ್ಯದ 11 ಟೆಟ್ರಾ ಪ್ಯಾಕೆಟ್ ಗಳು ಇದ್ದು, ಒಂದರ ಬೆಲೆ 35.13/- ರೂ  ಆಗಿದ್ದು, 11 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 386/-ರೂ ಆಗಿರುತ್ತೆ. ಮದ್ಯ ಒಟ್ಟು 990 ಮೀಲಿ ಆಗಿರುತ್ತೆ. ಮಧ್ಯವನ್ನು ಕುಡಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೇ ಇರುವುದರಿಂದ ಚಿಲ್ಲರೆ ಅಂಗಡಿ ಮಾಲೀಕಳಾದ ಸುಧಮ್ಮ ಕೋಂ ರಾಮನ್ನ ಓಡಿಹೋಗಿರುವುದಾಗಿ ತಿಳಿಯಿತು.  ಮೇಲ್ಕಂಡ ಎಲ್ಲಾ ಮಾಲುಗಳನ್ನು ಮಧ್ಯಾಹ್ನ 01.45 ರಿಂದ  ಮದ್ಯಾಹ್ನ 02.45 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸದರಿ ಮಾಲನ್ನು ಮಹಜರ್, ನಿಮ್ಮ ಮುಂದೆ ವರದಿ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು, ಈ ಬಗ್ಗೆ ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ಸುಧಮ್ಮ ಕೋಂ ರಾಮನ್ನ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುಲು ನೀಡಿದ ವರದಿ ಸಾರಾಂಶವಾಗಿರುತ್ತೆ.

 

18. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.110/2021 ಕಲಂ. 427,380 ಐ.ಪಿ.ಸಿ:-

     ದಿನಾಂಕ:20/09/2021 ರಂದು ಸಂಜೆ 6:15 ಗಂಟೆಯಲ್ಲಿ ಪಿರ್ಯಾದಿದಾರಾದ ರಾಮಕೃಷ್ಣ ಬಿನ್ ಮುತ್ತು, ನಂದಿ ಇಂಡಸ್ಟ್ರೀಸ್ ಕ್ರಷರ್ ಮಾಲೀಕರು, ವಾಸ: 4754/1 ಶ್ರೀನಿವಾಸ ನಿಲಯ, ಎಸ್.ಎಲ್.ವಿ ಟಿಸಿಹೆಚ್ ರಸ್ತೆ, ಬಂಗಾರಪೇಟೆ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಚಿಕ್ಕಬಳ್ಳಾಪುರ ತಾಲ್ಲೂಕು ಕಣಿವೆನಾರಾಯಣಪುರ ಗ್ರಾಮದಲ್ಲಿ ನಂದಿ ಇಂಡಸ್ಟ್ರೀಸ್ ಕ್ರಷರ್ (ಎಂ.ಆರ್ ಕ್ರಷರ್) ನ್ನು ಸುಮಾರು 14 ವರ್ಷಗಳಿಂದ ನಡೆಸುತ್ತಿರುತ್ತೇನೆ. ಸದರಿ ಕ್ರಷರನ್ನು ಪ್ರಾರಂಭಿಸಲು ಕೊಟ್ಯಾಂತರ ಬಂಡವಾಳವನ್ನು ಹೂಡಿರುತ್ತೇನೆ. ಸದರಿ ಕ್ರಷರ್ ಮೂರು ವರ್ಷಗಳಿಂದ ರಿನ್ಯೂವಲ್ ಆಗದೆ ಇದ್ದುದ್ದರಿಂದ ಮುಚ್ಚಿರುತ್ತೆ ಹಾಗೂ ಕೋವಿಡ್-19 ಪ್ರಯುಕ್ತ ಹೆಚ್ಚಿನ ಗಮನ ಕ್ರಷರ್ ಬಗ್ಗೆ ಗಮನಹರಿಸಿರುವುದಿಲ್ಲ. ಸೆಕ್ಯೂರಿಟಿ ರವರು ಸಹ ಕೋವಿಡ್-19 ಪ್ರಯುಕ್ತ ಕೆಲಸಕ್ಕೆ ಬಂದಿರಲಿಲ್ಲ. ಕ್ರಷರಿನ ದೊಡ್ಡ ದೊಡ್ಡ ಮೀಷರಿನಗಳು ಹಾಗೂ ಮೋಟಾರುಗಳಿದ್ದು ಆವುಗಳನ್ನು ಯಾರೋ ಕಳ್ಳರು ಸುಮಾರು ಒಂದುವರೆ ವರ್ಷಗಳಿಂದ ಬಳಕೆಗೆ ಯೋಗ್ಯವಾಗದ ರೀತಿ ಜಖಂಗೊಳಿಸಿ ನಷ್ಟ ಉಂಟು ಮಾಡಿ ಸದರಿ ಮೀಷನರಿಗಳಲ್ಲಿರುವ ಹಾಗೂ ಮೋಟಾರುಗಳಲ್ಲಿರುವ ಸುಮಾರು 300 ಕೆ.ಜಿ ಆಗುವಷ್ಟು ಕಾಫರ್ ವೈರನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಅಂದಾಜು ಬೆಲೆ 45,000 ರೂಗಳಷ್ಟಾಗಿರುತ್ತೆ. ಆದ್ದರಿಂದ ಸದರಿ ಮೀಷನರಿಗಳನ್ನು ಮತ್ತು ಮೋಟಾರುಗಳನ್ನು ಬಳಕೆಗೆ ಯೋಗ್ಯವಾಗದ ರೀತಿ ಜಖಂಗೊಳಿಸಿ ಅದರಲ್ಲಿರುವ ಕಾಫರ್ ವೈರನ್ನು ಕಳವು ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ.

 

19. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.111/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:21/09/2021 ರಂದು ಮದ್ಯಾಹ್ನ 12:05 ಗಂಟೆಗೆ ಪಿ.ಎಸ್.ಐ ಶ್ರಿ. ಸುನೀಲ್ ಕುಮಾರ್ ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿಯ ಸಾರಾಂಶವೇನೆಂದರೆ ದಿನಾಂಕ:21-09-2021 ರಂದು  ಬೆಳಿಗ್ಗೆ 10:30 ಗಂಟೆ ಸಮಯದಲ್ಲಿ ನಾನು ಮತ್ತು ಠಾಣಾ ಸಿಬ್ಬಂದಿಯಾದ ಹೆಚ್.ಸಿ-230 ನಾಗರಾಜ ಮತ್ತು ಪಿಸಿ-06 ರಾಮಕೃಷ್ಣ ರವರೊಂದಿಗೆ ಠಾಣೆಗೆ ನೀಡಿರುವ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-1555 ಜೀಪಿನಲ್ಲಿ ಚಾಲಕನೊಂದಿಗೆ ಚದಲಪುರ ಕ್ರಾಸ್ ಕಡೆ ಗಸ್ತಿನಲ್ಲಿದ್ದಾಗ ನನಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಜಡಲತಿಮ್ಮನಹಳ್ಳಿ ಗ್ರಾಮದ ಸಮೀಪವಿರುವ ಕೊಲ್ಡ್ ಸ್ಟೋರೆಜ್ ಪಕ್ಕದಲ್ಲಿರುವ ಸುಮಿತ್ರ ಮಿಲ್ಟ್ರಿ ಹೋಟೆಲ್ ಮುಂಭಾಗದಲ್ಲಿ ಯಾವುದೇ ಲೈಸನ್ಸ್ ಇಲ್ಲದೆ ತನ್ನ ಹೋಟೆಲ್ ಮುಂಭಾಗದ ಬಳಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ಜಡಲತಿಮ್ಮನಹಳ್ಳಿ ಕ್ರಾಸಿನ ಸಮೀಪ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಬೆಳಿಗ್ಗೆ 10:45 ಗಂಟೆಗೆ ಮೇಲ್ಕಂಡ ಸ್ಥಳದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸದರಿ ಸ್ಥಳದಲ್ಲಿ ಮದ್ಯವಿರುವ ಟೆಟ್ರಾ ಪಾಕೇಟುಗಳು ಇದ್ದು ಅದರ ಪಕ್ಕದಲ್ಲಿ ಖಾಲಿ ಟೆಟ್ರಾ ಪಾಕೇಟುಗಳು, ಖಾಲಿ ಲೋಟಗಳು ಬಿದ್ದಿರುತ್ತವೆ. ಸದರಿ ಪಾಕೇಟುಗಳನ್ನು ವಶದಲ್ಲಿ ಇಟ್ಟುಕೊಂಡಿರುವ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಕೇಳಲಾಗಿ ಶ್ರೀನಿವಾಸ ಬಿನ್ ಲೇಟ್ ನರಸಿಂಹಪ್ಪ, 48 ವರ್ಷ, ನಾಯಕರು, ಹೋಟೆಲ್ ವ್ಯಾಪಾರ, ವಾಸ: ಕೆಳಗಿನ ತೋಟಗಳು, ವಾಲ್ಮಿಕಿ ನಗರ, ಚಿಕ್ಕಬಳ್ಳಾಪುರ ನಗರ ಎಂದು ತಿಳಿಸಿದ. ನಂತರ ಸ್ಥಳದಲ್ಲಿ ಇದ್ದ ಮದ್ಯವಿರುವ ಟೆಟ್ರಾ ಪಾಕೇಟುಗಳನ್ನು ಪರಿಶೀಲಿಸಲಾಗಿ 1) 90 ML ಸಾಮರ್ಥ್ಯದ HAYWARDS CHEERS WHISKY ಯ 8 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 35.13 ಪೈಸೆ ಆಗಿದ್ದು 8 ಟೆಟ್ರಾ ಪ್ಯಾಕೇಟುಗಳ ಬೆಲೆ 281 ರೂಪಾಯಿ ಆಗಿದ್ದು ಒಟ್ಟು ಮದ್ಯ 720 ಮೀಲಿ ಮದ್ಯವಿರುತ್ತೆ. 2) 90 ML ಸಾಮರ್ಥ್ಯದ HAYWARDS CHEERS WHISKY ಯ 6 ಖಾಲಿ ಟೆಟ್ರಾ ಪ್ಯಾಕೇಟುಗಳು, 3) ಉಪಯೋಗಿಸಿರುವ 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಸಾಮಿಗೆ ಇವುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಬೆಳಿಗ್ಗೆ 10:50 ಗಂಟೆಯಿಂದ ಬೆಳಿಗ್ಗೆ 11:40 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಬಂದು ಆರೋಪಿನ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು  ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

20. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.112/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:21/09/2021 ರಂದು ಮದ್ಯಾಹ್ನ 13:45 ಗಂಟೆಗೆ ಪಿ.ಎಸ್.ಐ ಶ್ರಿ. ಸುನೀಲ್ ಕುಮಾರ್ ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ವರದಿಯ ಸಾರಾಂಶವೇನೆಂದರೆ ದಿನಾಂಕ:21-09-2021 ರಂದು  ಮದ್ಯಾಹ್ನ 12:20 ಗಂಟೆ ಸಮಯದಲ್ಲಿ ನಾನು ಮತ್ತು ಠಾಣಾ ಸಿಬ್ಬಂದಿಯಾದ ಹೆಚ್.ಸಿ-230 ನಾಗರಾಜ ಮತ್ತು ಹೆಚ್.ಸಿ-94 ಪ್ರಕಾಶ್ ರವರೊಂದಿಗೆ ಠಾಣೆಗೆ ನೀಡಿರುವ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-1555 ಜೀಪಿನಲ್ಲಿ ಚಾಲಕನೊಂದಿಗೆ ನಂದಿ ಕ್ರಾಸಿನ ಕಡೆ ಗಸ್ತಿನಲ್ಲಿದ್ದಾಗ ನನಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಜಡಲತಿಮ್ಮನಹಳ್ಳಿ ಗ್ರಾಮದ ಸಮೀಪವಿರುವ ಕೊಲ್ಡ್ ಸ್ಟೋರೆಜ್ ಪಕ್ಕದಲ್ಲಿರುವ ಗೊಲ್ಡನ್ ಮಿಲ್ಟ್ರಿ ಹೋಟೆಲ್ ಮುಂಭಾಗದಲ್ಲಿ ಯಾವುದೇ ಲೈಸನ್ಸ್ ಇಲ್ಲದೆ ತನ್ನ ಹೋಟೆಲ್ ಮುಂಭಾಗದ ಬಳಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ಜಡಲತಿಮ್ಮನಹಳ್ಳಿ ಕ್ರಾಸಿನ ಸಮೀಪ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಮದ್ಯಾಹ್ನ 12:45 ಗಂಟೆಗೆ ಮೇಲ್ಕಂಡ ಸ್ಥಳದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸದರಿ ಸ್ಥಳದಲ್ಲಿ ಮದ್ಯವಿರುವ ಟೆಟ್ರಾ ಪಾಕೇಟುಗಳು ಇದ್ದು ಅದರ ಪಕ್ಕದಲ್ಲಿ ಖಾಲಿ ಟೆಟ್ರಾ ಪಾಕೇಟುಗಳು, ಖಾಲಿ ಲೋಟಗಳು ಬಿದ್ದಿರುತ್ತವೆ. ಸದರಿ ಪಾಕೇಟುಗಳನ್ನು ವಶದಲ್ಲಿ ಇಟ್ಟುಕೊಂಡಿರುವ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಕೇಳಲಾಗಿ ರಾಮಚಂದ್ರಪ್ಪ ಬಿನ್ ತಿಮ್ಮಯ್ಯ, 53 ವರ್ಷ, ಒಕ್ಕಲಿಗರು, ಹೋಟೆಲ್ ಮಾಲೀಕರು, ವಾಸ: ಕಂದವಾರ, 14 ನೇ ವಾರ್ಡ, ಚಿಕ್ಕಬಳ್ಳಾಪುರ ನಗರ ಎಂದು ತಿಳಿಸಿದ. ನಂತರ ಸ್ಥಳದಲ್ಲಿ ಇದ್ದ ಮದ್ಯವಿರುವ ಟೆಟ್ರಾ ಪಾಕೇಟುಗಳನ್ನು ಪರಿಶೀಲಿಸಲಾಗಿ 1) 90 ML ಸಾಮರ್ಥ್ಯದ HAYWARDS CHEERS WHISKY ಯ 8 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 35.13 ಪೈಸೆ ಆಗಿದ್ದು 8 ಟೆಟ್ರಾ ಪ್ಯಾಕೇಟುಗಳ ಬೆಲೆ 281 ರೂಪಾಯಿ ಆಗಿದ್ದು ಒಟ್ಟು ಮದ್ಯ 720 ಮೀಲಿ ಮದ್ಯವಿರುತ್ತೆ. 2) 90 ML ಸಾಮರ್ಥ್ಯದ HAYWARDS CHEERS WHISKY ಯ 6 ಖಾಲಿ ಟೆಟ್ರಾ ಪ್ಯಾಕೇಟುಗಳು, 3) ಉಪಯೋಗಿಸಿರುವ 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಸಾಮಿಗೆ ಇವುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಮದ್ಯಾಹ್ನ 12:50 ಗಂಟೆಯಿಂದ ಮದ್ಯಾಹ್ನ 1:30 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಬಂದು ಆರೋಪಿನ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು  ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

21. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.296/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:20.09.2021 ರಂದು ರಾತ್ರಿ 8.15 ಗಂಟೆಗೆ ಪಿರ್ಯಾದಿದಾರರಾದ ಕದೀರ್ ಅಹಮದ್ ಬಿನ್ ಅಬ್ದುಲ್ ರಿಯಾಜ್, 43 ವರ್ಷ, ಮುಸ್ಲಿಂ, ರೇಷ್ಮೆ ಕೆಲಸ, ಮೆಹಬೂಬ್ ನಗರ ಶಿಡ್ಲಘಟ್ಟ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತಮ್ಮ ತಾತ ಅಜ್ಜಿಗೆ 1 ನೇ ಗುಲಾಬ್ ಜಾನ್, 2 ನೇ ಪೈರೋಜ್ ಪಾಷ, 3 ನೇ ಫಯಾಜ್ ಪಾಷ, 4 ನೇ ನಯಾಜ್ ಪಾಷ, 5 ನೇ ಗುಲ್ನಾಜ್, 6 ನೇ ಕಲವ ನಾಜ್, 7 ನೇ ಸಾಧಿಕ್ ಪಾಷ, 8 ನೇ ಶಹನಾಜ್ ಎಂಬ 8 ಜನ ಮಕ್ಕಳಿದ್ದು ಎಲ್ಲರಿಗೂ ಮದುವೆಗಳಾಗಿ ಬೇರೆ ಬೇರೆಯಾಗಿ ವಾಸವಾಗಿರುತ್ತಾರೆ. ಶಹನಾಜ್ ರವರನ್ನು ಕೋಲಾರಕ್ಕೆ ಕೊಟ್ಟು ಮದುವೆ ಮಾಡಿದ್ದು ಅವರು ಕೋಲಾರದಲ್ಲಿ ವಾಸವಾಗಿರುತ್ತಾರೆ. ದಿನಾಂಕ:20.09.2021 ರಂದು ಬೆಳಿಗ್ಗೆ 11.40 ಗಂಟೆಯಲ್ಲಿ ತನ್ನ ತಾಯಿ ತಂಗಿಯ ಮಗನಿಗೆ ಶಿಡ್ಲಘಟ್ಟ ತಾಲ್ಲೂಕು ಹಾರಡಿ ಗ್ರಾಮದ ಬಳಿ ಅಪಘಾತವಾಗಿರುವುದಾಗಿ ಯಾರೋ ಸಾರ್ವಜನಿಕರು ತಮಗೆ ಪೋನ್ ಮಾಡಿ ತಿಳಿಸಿದ್ದು ನಂತರ ನಾವುಗಳು ಹೋಗಿ ಗುಲ್ನಾಜ್ ರವರನ್ನು ವಿಚಾರ ಮಾಡಲಾಗಿ ಈ ದಿನ ಬೆಳಿಗ್ಗೆ 11.00 ಗಂಟೆ ಸಮಯದಲ್ಲಿ ಗುಲ್ನಾಜ್ ಹಾಗೂ ಅವರ ಮಗ ಸಾಬೀರ್ ಖಾನ್ ರವರು ಅವರ ಬಾಬತ್ತು ಕೆಎ.40.ಇಎಫ್.5644 ನೊಂದಣಿ ಸಂಖ್ಯೆಯ ಪಲ್ಸರ್ ದ್ವಿ ಚಕ್ರ ವಾಹನದಲ್ಲಿ ಸಾಬೀರ್ ಖಾನ್ ರವರು ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಗಲ್ನಾಜ್ ರವರನ್ನು ದ್ವಿ ಚಕ್ರ ವಾಹನದ ಹಿಂಬಂದಿಯಲ್ಲಿ ಕುಳ್ಳರಿಸಿಕೊಂಡು ಶಿಡ್ಲಘಟ್ಟದಿಂದ ಕೋಲಾರಕ್ಕೆ ಹೋಗಲು ಬೆಳಿಗ್ಗೆ 11.30 ಗಂಟೆಯ ಸಮಯದಲ್ಲಿ ಹಾರಡಿ ಗ್ರಾಮದ ಸಮೀಪ ಹೋಗುತಿದ್ದಾಗ ಎದರುಗಡೆಯಿಂದ ಅಂದರೆ ಹೆಚ್.ಕ್ರಾಸ್ ಕಡೆಯಿಂದ ಬಂದ ಕೆಎ.04.ಎಂಎಫ್.5869 ನೊಂದಣಿ ಸಂಖ್ಯೆಯ ಟಾಟಾ ಸಪಾರಿ ಕಾರಿನ ಚಾಲಕ ಕೆಎ.04.ಎಂಎಫ್.5869 ನೊಂದಣಿ ಸಂಖ್ಯೆಯ ಟಾಟಾ ಸಪಾರಿ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಕಾರಿನ ಚಾಲಕನು ತನ್ನ ಕಾರಿನ ಮುಂಬಾಗದಲ್ಲಿ ಹೊಗುತಿದ್ದ ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ ರಸ್ತೆಯ ಎಡಬಾಗದಲ್ಲಿ ಸಾಬೀರ್ ಖಾನ್ ರವರು ಚಾಲನೆ ಮಾಡಿಕೊಂಡು ಹೋಗುತಿದ್ದ ಕೆಎ.40.ಇಎಫ್.5644 ನೊಂದಣಿ ಸಂಖ್ಯೆಯ ಪಲ್ಸರ್ ದ್ವಿ ಚಕ್ರ ವಾಹನಕ್ಕೆ ಡಿಕ್ಕಿಪಡಿಸಿ ಅಪಘಾತವನ್ನುಂಟು ಮಾಡಿದ ಪರಿಣಾಮ ದ್ವಿ ಚಕ್ರ ವಾಹನ ಸಮೇತ ರಸ್ತೆಯಲ್ಲಿ ಬಿದ್ದು ಹೋಗಿ ದ್ವಿ ಚಕ್ರ ವಾಹನ ಜಖಂಗೊಂಡು, ಸಾಬೀರ್ ಖಾನ್ ರವರ ಎಡಕೈ, ಬಲಕಾಲು, ತಲೆಗೆ ರಕ್ತಗಾಯವಾಗಿ ತನ್ನ ಚಿಕ್ಕಮ್ಮಳಾದ ಗುಲ್ನಾಜ್ ರವರ ಎರಡು ಕಾಲುಗಳಿಗೆ, ತಲೆಗೆ ರಕ್ತಗಾಯಗಳಾಗಿರುವುದಾಗಿ ತಿಳಿಸಿದ್ದು ನಂತರ ನಾವುಗಳು ಕೂಡಲೇ ಗಾಯಗಳಾಗಿದ್ದ ಸಾಬೀರ್ ಖಾನ್ ಹಾಗೂ ಗುಲ್ನಾಜ್ ರವರುಗಳನ್ನು ಅಂಬ್ಯೂಲೇನ್ಸ್ ವಾಹನದಲ್ಲಿ ಹೊಸಕೋಟೆಯ ಎಂವಿಜೆ ಅಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕೋಲಂಬಿಯಾ ಏಷ್ಯಾ ಅಸ್ಪತ್ರೆಗೆ ದಾಖಲಿಸಿ ಅವರುಗಳ ಹಾರೈಕೆ ಮಾಡಿಕೊಂಡು ಬಂದು ದೂರು ನೀಡುತಿದ್ದು ಅತಿವೇಗ ಮತ್ತು ಅಜಾಗೂರಕತೆಯಿಂದ ಚಾಲನೆ ಮಡಿಕೊಂಡು ಬಂದು ಸಾಬೀರ್ ಖಾನ್ ರವರು ಕೆಎ.40.ಇಎಫ್.5644 ನೊಂದಣಿ ಸಂಖ್ಯೆಯ ಪಲ್ಸರ್ ದ್ವಿ ಚಕ್ರವಾಹನದ ಹಿಂಬದಿಯಲ್ಲಿ ಗುಲ್ನಾಜ್ ರವರನ್ನು ಕುಳ್ಳರಿಸಿಕೊಂಡು ಚಾಲನೆ ಮಾಡಿಕೊಂಡು ಹೋಗುತಿದ್ದ ದ್ವಿ ಚಕ್ರ ವಾಹನಕ್ಕೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿಪಿಡಿಸಿ ಅಪಘಾತವನ್ನುಂಟು ಮಾಡಿದ ಕೆಎ.04.ಎಂಎಫ್.5869 ನೊಂದಣಿ ಸಂಖ್ಯೆಯ ಟಾಟಾ ಸಪಾರಿ ಕಾರಿನ ಚಾಲಕನ ವಿರುದ್ದ ಕಾನೂನು ರೀತಿಯ ಕ್ರಮಕೈಗೊಳ್ಳಲು ಕೋರಿದೆ.

 

22. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.118/2021 ಕಲಂ. 96(B) ಕೆ.ಪಿ, ಆಕ್ಟ್:-

     ಶಿಡ್ಲಘಟ್ಟ ಘನ ಹಿರಿಯ ಸಿ.ಜೆ. ಮತ್ತು ಜೆ.ಂ.ಎಫ್.ಸಿ ನ್ಯಾಯಾಲಯದಲ್ಲಿ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ. ಪದ್ಮಾವತಮ್ಮ ಪಿ.ಎಸ್.ಐ (ಅಪರಾದ ವಿಭಾಗ) ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ, ದಿನಾಂಕ:21.09.2021 ರಂದು ಬೆಳಗಿನ ಜಾವ 5.00 ಗಂಟೆಗೆ ಸರಕಳ್ಳತನ ಮತ್ತು ಕಳ್ಳತನ ಅಪರಾದಗಳನ್ನು ತಡೆಯುವ ಸಲುವಾಗಿ ಗುಡ್ ಮಾರ್ನಿಂಗ್ ಬೀಟ್ ಗಸ್ತಿನ ಬಗ್ಗೆ ಪಿ.ಸಿ 554 ಧರಣೇಶ್, ಜೀಪ್ ಚಾಲಕ ಅಂಬರೀಶ್ ರವರೊಂದಿಗೆ ಪೊಲೀಸ್ ವಾಹನ ಸಂಖ್ಯೆ-ಕೆಎ.40.ಜಿ.141 ರಲ್ಲಿ ಠಾಣೆಯಿಂದ ಹೊರಟು ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿ ರಸ್ತೆ, ಜೂನಿಯರ್ ಕಾಲೇಜ್, ಅಮೀರ್ ಬಾಬಾ ದರ್ಗಾ, ಅಜಾದ್ ನಗರ, ಚಚರ್ಚು ಕಡೆಗಳಲ್ಲಿ ಗಸ್ತು ಮಾಡಿಕೊಂಡು ಬೆಳಗಿನ ಜಾವ ಸುಮಾರು 05-15 ಗಂಟೆ ಸಮಯದಲ್ಲಿ ಶಿಡ್ಲಘಟ್ಟ ನಗರದ ದಿಬ್ಬೂರಹಳ್ಳಿ ರಸ್ತೆಯ ಬಾಷು ಬಾಬಾ ದರ್ಗಾ ಬಳಿ ಗಸ್ತು ಮಾಡುತ್ತಿದ್ದಾಗ ಯಾರೋ ಒಬ್ಬ ಆಸಾಮಿ ಬಾಷು ಬಾಬಾ ದರ್ಗಾ ಬಳಿ ಇರುವ ದ್ವಿಚಕ್ರ ವಾಹನಗಳ ಮೆಕಾನಿಕ್ ಅಂಗಡಿ ಬಳಿ ಕುಳಿತಿದ್ದು ಪೊಲೀಸ್ ವಾಹನವನ್ನು ಕಂಡು ಕತ್ತಲಲ್ಲಿ ಮುಖ ಮರೆಮಾಚಿಕೊಂಡು ಯಾವುದೋ ಕೃತ್ಯ ವೆಸಗಲು ಹೊಂಚು ಹಾಕುತ್ತಿದ್ದವನು ನಮ್ಮಗಳನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದವನನ್ನು ಪಿ.ಸಿ.554 ರವರು ಕೂಡಲೇ ಪೊಲೀಸ್ ವಾಹನದಿಂದ ಇಳಿದು ಹಿಂಬಾಲಿಸಿ ಹಿಡಿದುಕೊಂಡು ಬಂದಿದ್ದು, ವಿಚಾರ ಮಾಡಲಾಗಿ ಗಾಬರಿಯಿಂದ ಇದ್ದು ಆತನ ಹೆಸರು ವಿಳಾಸ ಕೇಳಲಾಗಿ ಚೂಟು ಎಚಿತಲೂ ಮತ್ತೊಂದು ಬಾರಿ ಚೋಟುಬೇಗ್ ಬಿನ್ ಸಿರಾಜ್ ಬೇಗ್, 25 ವರ್ಷ, ಮುಸ್ಲೀಂರು, ಕೂಲಿ ಕೆಲಸ, ವಾಸ-ರಹಮತ್ ನಗರ,  ಶಿಡ್ಲಘಟ್ಟ ನಗರ ಎಂತ ತಿಳಿಸಿದ್ದು. ಆತನ ಬಳಿ ತಪಾಸಣೆ ಮಾಡಿದಾಗ ಸ್ಕ್ರೂ ಡೈವರ್ ಮತ್ತು ಕಬ್ಬಿಣದ ರಾಡು ಇಟ್ಟುಕೊಂಡಿದ್ದು, ಆತನನ್ನು ಆ ವೇಳೆ ಹೊತ್ತಿನಲ್ಲಿ ಇಲ್ಲಿ ಇರುವಿಕೆಯ ಬಗ್ಗೆ ಹಾಗೂ ಅಯುಧಗಳನ್ನು ಇಟ್ಟುಕೊಂಡಿರುವ ಬಗ್ಗೆ ಪ್ರಶ್ನಿಸಲಾಗಿ ಸಮಂಜಸವಾದ ಉತ್ತರ ನೀಡಿರುವುದಿಲ್ಲ. ಸದರಿ ಆಸಾಮಿ ಯಾವುದೋ ಸಂಜ್ಞೆಯ ಅಪರಾದ (ಕಳ್ಳತನ) ಮಾಡಲು ಹೊಂಚು ಹಾಕುತ್ತಿದ್ದನೆಂಬ ಅನುಮಾನ ಕಂಡು ಬಂದಿರುತ್ತೆ. ಆದ್ದರಿಂದ ಸದರಿ ಆಸಾಮಿಯನ್ನು ವಶಕ್ಕೆ ಪಡೆದು ನಂತರ ಸ್ಥಳಕ್ಕೆ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಆರೋಪಿ ವಶದಲ್ಲಿರುವ ಕಬ್ಬಿಣದ ರಾಡು & ಸ್ಕ್ರೂ ಡೈವರ್ ಅನ್ನು ಅಮಾನತ್ತುಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ಬೆಳಗಿನ ಜಾವ 6-30 ಗಂಟೆಗೆ ಠಾಣೆಗೆ ಕರೆತಂದು ಮುಂದಿನ ಕ್ರಮದ ಬಗ್ಗೆ ಠಾಣಾ ಮೊ.ಸಂ.118/2021 ಕಲಂ.96(ಬಿ) ಕೆ.ಪಿ.ಆಕ್ಟ್ ರೀತ್ಯಾ ಸ್ವತಃ ಪ್ರಕರಣ ದಾಖಲಿಸಿರುತ್ತೇನೆ.

 

ಇತ್ತೀಚಿನ ನವೀಕರಣ​ : 21-09-2021 06:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080