Feedback / Suggestions

1. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.114/2021 ಕಲಂ. 279,337  ಐ.ಪಿ.ಸಿ:-

     ಈ ದಿನ ದಿನಾಂಕ 20/08/2021 ರಂದು ಮಧ್ಯಾಹ್ನ 3-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ.ವೆಂಕಟರವಣಪ್ಪ ಬಿನ್ ಲೇಟ್ ದೊಡ್ಡಚೌಡಪ್ಪ 65ವರ್ಷ, ಒಕ್ಕಲಿಗರು, ಜಿರಾಯ್ತಿ, ಮುಂಗಾನಹಳ್ಳಿ ಮಜರಾ ತಿಮ್ಮೇಬಂಡೆ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ನನಗೆ ಇಬ್ಬರು ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಇದ್ದು ನನ್ನ ನಾಲ್ಕೂ ಜನ ಮಕ್ಕಳಿಗೆ ಮದುವೆಯಾಗಿದ್ದು ಹೆಣ್ಣು ಮಕ್ಕಳು ಗಂಡಂದಿರ ಮನೆಗಳಲ್ಲಿ ಇದ್ದು ನನ್ನ ಇಬ್ಬರೂ ಗಂಡು ಮಕ್ಕಳು ಬೇರೆ ಬೇರೆಯಾಗಿ ವಾಸವಾಗಿರುತ್ತಾರೆ. ನಾನು ನನ್ನ ದೊಡ್ಡಮಗನಾದ ಶ್ರೀ.ಸುಧಾಕರ ವಿ ಬಿನ್ ವೆಂಕಟರವಣಪ್ಪ, 45ವರ್ಷ, ಒಕ್ಕಲಿಗರು, ಜಿರಾಯ್ತಿ, ಮುಂಗಾನಹಳ್ಳಿ ಮಜರಾ ತಿಮ್ಮೇಬಂಡೆ  ಗ್ರಾಮ ರವರ ಜೊತೆಯಲ್ಲಿ ಜಿರಾಯ್ತಿಮಾಡಿಕೊಂಡು ವಾಸವಾಗಿರುತ್ತೇನೆ. ಹೀಗಿರುವಲ್ಲಿ ದಿನಾಂಕ 18/08/2021 ರಂದು ಮಧ್ಯಾಹ್ನ ಸುಮಾರು 1-00 ಗಂಟೆ ಸಮಯದಲ್ಲಿ ನನ್ನ ಮಗನಾದ ಸುಧಾಕರ  ರವರು ಬಟ್ಲಹಳ್ಳಿಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ನಮ್ಮ ಬಾಬತ್ತು ನಂ ಕೆಎ 07 ಎಲ್ 8093 ಸ್ಪ್ಲೆಂಡರ್ ದ್ವಿಚಕ್ರ ವಾಹನದಲ್ಲಿ ಹೋದನು ನಂತರ ಮಧ್ಯಾಹ್ನ 2-00 ಗಂಟೆಗೆ ಯಾರೋ ನನಗೆ ಪೋನ್ ಮಾಡಿ ನನ್ನ ಮಗನಾದ ಸುಧಾಕರ ರವರಿಗೆ ಬಟ್ಲಹಳ್ಳಿ ಮುಂಗಾನಹಳ್ಳಿ ರಸ್ತೆಯ ಮಾರ್ಗ ಮಧ್ಯದಲ್ಲಿ ಬೋಡಂಪಲ್ಲಿ ಕ್ರಾಸ್ ಬಳಿ ಅಪಘಾತವಾಗಿರುವುದಾಗಿ ವಿಚಾರವನ್ನು ತಿಳಿಸಿದ್ದರ ಮೇರೆಗೆ ನಾನು ಮತ್ತು ಸುಧಾಕರ್ ರವರ ಮಗನಾದ ಲೋಕೇಶ್ ರವರು ದ್ವಿಚಕ್ರ ವಾಹನದಲ್ಲಿ ಸ್ಥಳಕ್ಕೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು ನನ್ನ ಮಗನಾದ ಸುಧಾಕರ ರವರು ಗಾಯಗೊಂಡು ಅಸ್ವಸ್ಥನಾಗಿ ಬೋಡಂಪಲ್ಲಿ ಕ್ರಾಸ್ ಬಳಿ ರಸ್ತೆಯಲ್ಲಿ ಬಿದ್ದಿದ್ದು ನನ್ನ ಮಗನ ದ್ವಿಚಕ್ರ ವಾಹನ ಮತ್ತು ನಂ ಕೆಎ 05 ಜೆಕ್ಯೂ 2618 ಸ್ಟಾರ್ ಸಿಟಿ ದ್ವಿಚಕ್ರ ವಾಹನಗಳು ಎರಡೂ ಸ್ಥಳದಲ್ಲಿ ಬಿದ್ದಿದ್ದವು ನನ್ನ ಮಗನನ್ನು ಉಪಚರಿಸಲಾಗಿ ನನ್ನ ಮಗನ ಮುಖಕ್ಕೆ, ಮೂಗಿಗೆ ಹಾಗೂ ಹಲ್ಲುಗಳಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು ವಿಚಾರವನ್ನು ತಿಳಿಯಲಾಗಿ ನನ್ನ ಮಗನಾದ ಸುಧಾಕರ ವಿ ರವರು ಕೆಲಸದ ನಿಮಿತ್ತ ಬಟ್ಲಹಳ್ಳಿಗೆ ಹೋಗಿ ಮತ್ತೆ ವಾಪಸ್ ನಮ್ಮ ಗ್ರಾಮಕ್ಕೆ ಬರಲು  ನಮ್ಮ ಬಾಬತ್ತು ನಂ ಕೆಎ 07 ಎಲ್ 8093 ದ್ವಿಚಕ್ರ ವಾಹನದಲ್ಲಿ ಬೋಡಂಪಲ್ಲಿ ಕ್ರಾಸ್ ಬಳಿ  ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ರಸ್ತೆಯ ಎಡಗಡೆ ಬರುತ್ತಿದ್ದಾಗ ಮುಂಗಾನಹಳ್ಳಿ ಕಡೆಯಿಂದ ನಂ ಕೆಎ 05 ಜೆಕ್ಯೂ 2618 ಸ್ಟಾರ್ ಸಿಟಿ ದ್ವಿಚಕ್ರ ವಾಹನವನ್ನು ಅದರ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ನನ್ನ ಮಗನ ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆಯಿಸಿ ಅಪಘಾತವನ್ನು ಉಂಟುಮಾಡಿರುವುದಾಗಿ ತಿಳಿಯಿತು. ಗಾಯಗೊಂಡಿದ್ದ ನನ್ನ ಮಗನನ್ನು ಚಿಕಿತ್ಸೆಗಾಗಿ ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿ ನಂತರ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ಕೊಡಿಸಿ ನಂತರ ವೈದ್ಯರ ಸಲಹೆಯ ಮೇರೆಗೆ ನನ್ನ ಮಗನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದು ನನ್ನ ಮಗ ಕೋಮಾ ಸ್ಥಿತಿಯಲ್ಲಿರುತ್ತಾರೆ. ಅಪಘಾತಕ್ಕೀಡಾಗಿದ್ದ ಎರಡೂ ದ್ವಿಚಕ್ರ ವಾಹನಗಳು ಸ್ಥಳದಲ್ಲಿಯೇ ಇರುತ್ತವೆ. ಅಪಘಾತವನ್ನು ಉಂಟುಮಾಡಿದ ದ್ವಿಚಕ್ರ ವಾಹನದ ಸವಾರನ ಹೆಸರು ವಿಳಾಸ ಗೊತ್ತಿರುವುದಿಲ್ಲ. ಇದುವರೆಗೂ ನನ್ನ ಮಗನಿಗೆ ಚಿಕಿತ್ಸೆಯನ್ನು ಕೊಡಿಸಿಕೊಂಡಿದ್ದು ಈ ದಿನ ದಿನಾಂಕ: 20/08/2021 ರಂದು ತಡವಾಗಿ ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡಂತೆ ಅಪಘಾತವನ್ನು ಉಂಟುಮಾಡಿರುವ ನಂ ಕೆಎ 05 ಜೆಕ್ಯೂ 2618 ದ್ವಿಚಕ್ರ ವಾಹನ ಮತ್ತು ಅದರ ಸವಾರನ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರಿ ನೀಡಿರುವ ದೂರಾಗಿರುತ್ತೆ.

 

2. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.78/2021 ಕಲಂ. 454,457,380 ಐ.ಪಿ.ಸಿ:-

     ದಿನಾಂಕ 21-08-2021 ರಂದು ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ನಾನು ಚೇಳೂರಿನ ಸರ್ಕಾರಿ ಪ್ರೌಡ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ಚೇಳೂರಿನಲ್ಲಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾರಾಯಣರೆಡ್ಡಿರವರ ಮನೆಯಲ್ಲಿ ಬಾಡಿಗೆಗೆ ಕುಟುಂಬದೊಂದಿಗೆ ವಾಸವಾಗಿರುತ್ತೇನೆ, ಹೀಗಿರುವಾಗ ದಿನಾಂಕ:20/08/2021 ರಂದು ಬೆಳಗ್ಗೆ 11-00 ಗಂಟೆಗೆ ನಾನು ಮತ್ತು ನಮ್ಮ ಮನೆಯವರೆಲ್ಲಾ ಆಂದ್ರ ಪ್ರದೇಶದ ಗೋರಂಟ್ಲ ಬಳಿ ಇರುವ ವಾನವೇಲು ಗ್ರಾಮದ ದರ್ಗಾಕ್ಕೆ ಹೋಗಿದ್ದು ರಾತ್ರಿ ಅಲ್ಲಿಯೇ ತಂಗಿರುತ್ತೇವೆ, ನಮ್ಮ ಬಾಮೈದನಾದ ನವಾಜ್ ಬಿನ್ ಮಹಮದ್ ಗೌಸ್ ರವರು ಈ ದಿನ ದಿನಾಂಕ:21/08/2021 ರಂದು ಬೆಳಗ್ಗೆ ಸುಮಾರು 6-30 ಗಂಟೆಯಲ್ಲಿ ಕರೆಮಾಡಿ ನೀವು ವಾಸವಿದ್ದ ಮನೆಯಲ್ಲಿ ಕಳ್ಳತನವಾಗಿದೆ ಬಾ ಎಂದು ವಿಚಾರ ತಿಳಿಸಿದ್ದು ನಾನು ನಮ್ಮ ಕುಟುಂಬದೊಂದಿಗೆ ಬಂದು  ನೋಡಲಾಗಿ ವಿಚಾರ ನಿಜವಾಗಿದ್ದು ನಾವು ವಾಸವಿದ್ದ ಮನೆಯ ಮುಖ್ಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಮುರಿದು ಹಾಕಿ ಚಿಲಕವನ್ನು ಬೆಂಡ್ ಮಾಡಿ ಬಾಗಿಲು ತೆಗೆದು ಒಳಗೆ ಪ್ರವೇಶಿಸಿ ಮನೆಯ ರೂಂ ನಲ್ಲಿಟ್ಟಿದ್ದ  ಪಿಜನ್ ಲಾಕರ್  ಬೀಗವನ್ನು ಹೊಡೆದು ಅದರಲ್ಲಿದ್ದ ಸುಮಾರು 210000/- ರೂ (ಎರಡು ಲಕ್ಷದ ಹತ್ತು ಸಾವಿರ ರೂ ನಗದು) ಹಣವನ್ನು ಕಳ್ಳತನ ಮಾಡಿರುತ್ತಾರೆ ಹಾಗೂ ಮನೆಯ ಹೊರಭಾಗದ ಕಾಂಪೌಂಡ್ ನಲ್ಲಿ ನಿಲ್ಲಿಸಿದ್ದ ಕೆಎ-04 ಹೆಚ್.ವಿ-1266 ನೊಂದಣಿ ಸಂಖ್ಯೆ ಹೀರೋ ಪ್ಯಾಷನ್ ಪ್ರೋ ದ್ವಿ ಚಕ್ರ ವಾಹನವನ್ನು ಮತ್ತು ನಮ್ಮ ಮನೆಯ ಕಾಂಪೌಂಡ್ ನಲ್ಲಿ ನಿಲ್ಲಿಸಿದ್ದ 02 ದ್ವಿ ಚಕ್ರ ವಾಹನಗಳ ಬೀಗದ ಕೀಗಳು ಮನೆಯಲ್ಲಿಟ್ಟಿದ್ದು ಅವುಗಳನ್ನು ಸಹ ಕಳ್ಳತನ ಮಾಡಿಕೊಂಡು  ಹೋಗಿದ್ದು ದ್ವಿ ಚಕ್ರ ವಾಹನದ ಅಂದಾಜು  ಬೆಲೆ ಸುಮಾರು 15000/- ಸಾವಿರ ರೂಗಳಾಗಿರುತ್ತೆ. ಒಟ್ಟು ಕಳುವಾಗಿರುವ ನಗದು ಮತ್ತು ವಾಹನದ ಬೆಲೆ 225000/- ರೂಗಳಾಗಿದ್ದು ಇನ್ನೂ ಮನೆಯಲ್ಲಿ ಇತರೇ ವಸ್ತುಗಳು ಕಳುವಾಗಿರುವ ಬಗ್ಗೆ ತಿಳಿದುಕೊಂಡು ತಿಳಿಸಲಾಗುವುದು, ಆದ್ದರಿಂದ ಮೇಲ್ಕಂಡ ನಗದು ಹಣವನ್ನು ಮತ್ತು ದ್ವಿ ಚಕ್ರ ವಾಹನವನ್ನು ಮತ್ತು ಕಳ್ಳರನ್ನು ಪತ್ತೆಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರುತ್ತೇನೆ.

 

3. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್‌ ಠಾಣೆ ಮೊ.ಸಂ.46/2021 ಕಲಂ. 279,304(A) ಐ.ಪಿ.ಸಿ:-

     ದಿನಾಂಕ;21-08-2021 ರಂದು ಬೆಳಗ್ಗೆ 10-00 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರನ ಸಾರಾಂಶವೇನೆಂದರೆ . ತನ್ನ ತಂಗಿಯಾದ ಉಮಾದೇವಿ ರವರನ್ನು ಈಗ್ಗೆ 23 ವರ್ಷಗಳ ಹಿಂದೆ  ಮಂಡಿಕಲ್ ಗ್ರಾಮದ ರಾಮಯ್ಯನ ಮಗನಾದ ಗೋಪಾಲಕೃಷ್ಣ  ರವರಿಗೆ ಕೊಟ್ಟು ಮದುವೆಯನ್ನು ಮಾಡಿರುತ್ತೇವೆ,  ಇವರು 10 ವರ್ಷಗಳ ಕಾಲ ಮಂಡಿಕಲ್ ಗ್ರಾಮದಲ್ಲಿಯೇ  ಸಂಸಾರವಿದ್ದು ನಂತರ ಗ್ರಾಮದಲ್ಲಿರದೆ ಈಗ್ಗೆ 15 ವರ್ಷಗಳ ಹಿಂದೆ ತನ್ನ ಕುಟುಂಬದೊಂದಿಗೆ ಬೆಂಗಳೂರು ನಗರದ ಮಲ್ಲಸಂದ್ರಕ್ಕೆ  ಹೋಗಿ ಅಲ್ಲಿಯೇ  ವಾಸವಿದ್ದು  ಚಾಲಕ ವೃತ್ತಿಯನ್ನು ಮಾಡಿಕೊಂಡಿರುತ್ತಾನೆ, ನಮ್ಮ ಬಾವ ಗೋಪಾಲಕೃಷ್ಣ  ಈಗ್ಗೆ 15 ದಿನಗಳ ಹಿಂದೆ  ಬನ್ನೆರುಘಟ್ದದ  ಶಂಕರ್ ಎಂಬುವರ ಬಳಿ  KA-42-A-0495  ನೊಂದಣಿಯ ಟಾಟಾ ಎಸ್  ವಾಹನವನ್ನು ಖರೀದಿಸಿ  ಓಡಿಸಿಕೊಂಡಿದ್ದನು, ನಮ್ಮ ಭಾವ ಬೆಂಗಳೂರು ನಗರದಿಂದ ಮಂಡಿಕಲ್ ಗ್ರಾಮಕ್ಕೆ ಆಗಾಗ ಬಂದು ಜಮೀನುಗಳ ಕೆಲಸಗಳನ್ನು ಮಾಡಿಸಿಕೊಂಡು ಹೋಗುತ್ತಿದ್ದನು, ಅದರಂತೆ ದಿನಾಂಕ;;19-08-2021 ರಂದು ಮಂಡಿಕಲ್ ಗ್ರಾಮಕ್ಕೆ ಬಂದು  ಸಂಜೆ ವರೆವಿಗೂ  ಗ್ರಾಮದಲ್ಲಿ  ಜಮೀನಿನ  ಕೆಲಸಗಳನ್ನು ಮಾಡಿಸಿಕೊಂಡಿದ್ದು  ನಾನು ಆ ದಿನ ಸಂಜೆ  ಪೋನ್  ಮಾಡಿದ್ದಾಗ ನನಗೆ ತಿಳಿಸಿದ್ದನು,           ದಿನಾಂಕ;-20-08-2021 ರಂದು ಮುಂಜಾನೆ 1-45 ಗಂಟೆಯ ಸಮಯದಲ್ಲಿ ಮನೆಯಲ್ಲಿ ಮಲಗಿದ್ದಾಗ ನನ್ನ ತಂಗಿ ಉಮಾದೇವಿ ನನ್ನ ಮೊಬೈಲಿಗೆ ಕರೆ ಮಾಡಿ ತಿಳಿಸಿದ ವಿಚಾರ ವೇನೆಂದರೆ  ನಿಮ್ಮ ಭಾವ ಮಂಡಿಕಲ್ ಗ್ರಾಮದಿಂದ  ಬೆಂಗಳೂರಿಗೆ ವಾಪಸ್ಸು ಬರುವಾಗ ಚಿಕ್ಕಬಳ್ಳಾಪುರದ ಸಮೀಪ ಆಫಘಾತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ನೀನು ಬೇಗನೆ ಆಸ್ಪತ್ರೆಯ ಬಳಿ ಬರುವಂತೆ ತಿಳಿಸಿದಳು ,ನಾನು ತಕ್ಷಣ ನಮ್ಮ ಗ್ರಾಮದಿಂದ  ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರಗೆ ಬಂದಾಗ ವಿಚಾರ ನಿಜವಾಗಿದ್ದು ನಮ್ಮ ಭಾವನ ತಲೆಯ ಹಣೆಗೆ  ರಕ್ತಗಾಯ ವಾಗಿದ್ದು ಬೆನ್ನಿನ ಮೂಳೆಗೆ ಒತ್ತಡದ ಗಾಯವಾಗಿತ್ತು, ಅಪಘಾತದ ಬಗ್ಗೆ ತಿಳಿದುಕೊಳ್ಳಲಾಗಿ ನಮ್ಮ ಬಾವ ಗೋಪಾಲಕೃಷ್ಣನನು ಮಂಡಿಕಲ್ ಗ್ರಾಮದಿಂದ ಬೆಂಗಳೂರಿಗೆ ವಾಪಸ್ಸು ಹೋಗುತ್ತಿದ್ದಾಗ ಮುಂಜಾನೆ 1-15 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ ಸಮೀಪದ  ಸಿಎಸ್ ಎನ್ ಪೆಟ್ರೋಲ್ ಬಂಕ್ ಮುಂದೆ ಬರುವಾಗ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ ಯಾವುದೋ ವಾಹನಕ್ಕೆ  ಹಿಂಬದಿಯಿಂದ ಡಿಕ್ಕಿ ಹೊಡೆಯಿಸಿದ್ದು ಡಿಕ್ಕಿ ಹೊಡೆದ ರಭಸಕ್ಕೆ  ಟಾಟಾ ಎಸ್ ಎಡಬದಿಯು ಜಖಂಗೊಂಡು ಗಾಯಗಳಾಗಿರುತ್ತವೆಂದು ತಿಳಿದುಬಂದಿತು, ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು  ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಗರದ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು  ಗೋಪಾಲಕೃಷ್ಣ ರವರನ್ನು  ನಾನು ಮತ್ತು ನನ್ನ ತಮ್ಮ ಕಿರಣ್ ರವರು  ನಿಮ್ಹಾನ್ಸ್ ಆಸ್ಪತ್ರಗೆ ಕರೆದುಕೊಂಡು ಹೋಗಿ ಎಲ್ಲಾ, ಪರೀಕ್ಷೆ ಮಾಡಿಸಿಧಾಗ  ಗೋಪಾಲಕೃಷ್ಣ ರವರ  ಸ್ಪೈನಲ್ ಕಾರ್ಡ ಗೆ ಗಾಯವಾಗಿದ್ದು ಬದುಕುವುದು ಕಷ್ಟವೆಂದು ವೈದ್ಯರು ತಿಳಿಸಿರುತ್ತಾರೆ, ನಂತರ  ಅಲ್ಲಿಂದ  ಗೋಪಾಲಕೃಷ್ಣ ರವರನ್ನು ಬೆಂಗಳೂರು ನಗರದ ಸಪ್ತಗಿರಿ  ಆಸ್ಪತ್ರಗೆ  ಸೇರಿಸಿದ್ದು ಗೋಪಾಲಕೃಷ್ಣ ರವರಿಗೆ ಅಪಘಾತದಲ್ಲುಂಟಾದ ಗಾಯಗಳ ದೆಸೆಯಿಂದ ಗುಣಮುಖ ನಾಗದೆ ಈ ದಿನ ದಿನಾಂಕ21-08-2021 ರಂದು ಬೆಳಗ್ಗೆ 7-45 ಗಂಟೆಗೆ ಮರಣ ಹೊಂದಿರುತ್ತಾನೆ, ನಮ್ಮ ಬಾವನ ಸಾವಿಗೆ  ಚಾಲನೆ ಮಾಡುತ್ತಿದ್ದ KA-42-A-0495 ನೊಂದಣಿಯ ಟಾಟಾ ಎಸ್ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ  ಮಾಡಿಕೊಂಡು ಹೋಗಿ   ಮುಂದೆ ಹೋಗುತ್ತಿದ್ದ  ಯಾವುದೆ ವಾಹನಕ್ಕೆ ಹಿಂಬದಿಯಿಂದ  ಡಿಕ್ಕಿ ಹೊಡೆಯಿಸಿ  ಅಪಘಾತ ದಲ್ಲುಂಟಾದ  ಗಾಯಗಳ ದೆಸೆಯಿಂದ  ಚೇತರಿಸಿಕೊಳ್ಳದೆ  ಮರಣ ಹೊಂದಿರುತ್ತಾನೆ, ಈ ಬಗ್ಗೆ ತಾವು ಆಸ್ಪತ್ರಗೆ ಬೇಟಿ ನೀಡಿ ಮುಂದಿನ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಿಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ.

 

4. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.110/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:20/08/2021ರಂದು ಸಂಜೆ 16-15 ಗಂಟೆಗೆ ಠಾಣೆಯ ಸಿಬ್ಬಂದಿಯಾದ ಸಿ,ಹೆಚ್,ಸಿ 159 ಮೊಹಮ್ಮದ್ ಸೈಯದ್ ರವರು ಮಾಲು ಆಸಾಮಿ ಹಾಗೂ ಪಂಚನಾಮೆಯೊಂದಿಗೆ ಠಾಣೆಗೆ ನೀಡಿದ ವರದಿಯ ಸಾರಾಂಶವೆನೆಂದರೆ, ದಿನಾಂಕ:20/08/2021 ರಂದು ಬೆಳಗ್ಗೆ  ಹಾಜರಾತಿಯಲ್ಲಿ ಸಿ,ಹೆಚ್,ಸಿ 159 ಮೊಹಮ್ಮದ್ ಸೈಯಾದ್ ಆದ ತನಗೆ  ಮತ್ತು ಸಿ,ಹೆಚ್,ಸಿ 186 ನರಸಿಂಹಯ್ಯ ರವರುಗಳಿಗೆ ದಿಬ್ಬೂರಹಳ್ಳಿ ಸರ್ಕಲ್ ನಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಬಂದೋಬಸ್ತ್  ಕರ್ತವ್ಯಕ್ಕೆ ನೇಮಿಸಿ ಕಳುಹಿಸಿದ್ದು ಆದರಂತೆ ನಾವು ಮಧ್ಯಾಹ್ನ14-00 ಗಂಟೆಯಲ್ಲಿ ದಿಬ್ಬೂರಹಳ್ಳಿ ಸರ್ಕಲ್ ನಲ್ಲಿ ಗಸ್ತು ಮಾಡುತ್ತಿದ್ದಾಗ ನಮ್ಮಗಳಿಗೆ ತಲಕಾಯಿಲಬೆಟ್ಟ ಗ್ರಾಮದಲ್ಲಿ ಯಾರೋ ಒಬ್ಬ  ಆಸಾಮಿಯು ತನ್ನ ಚಿಲ್ಲರೆ ಅಂಗಡಿಯ ಮುಂಭಾಗ  ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟು ಆಗುವ ರೀತಿಯಲ್ಲಿ ಅಕ್ರಮವಾಗಿ  ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು  ಸಾರ್ವಜನಿಕರಿಗೆ ಮಧ್ಯಫಾನ ಮಾಡಲು ಸ್ಥಳಾವಾಕಾಶ ಮಾಡಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಸದರಿ ವಿಚಾರವನ್ನು ಪಿ.ಎಸ್.ಐ ರವರ ಗಮನಕ್ಕೆ ತಂದು ಸದರಿ ಆಸಾಮಿಯ ಮೇಲೆ ದಾಳಿ ಮಾಡಲು ಪಿ.ಎಸ್.ಐ ರವರಿಂದ ಮೌಖಿಕ ಆದೇಶವನ್ನು ಪಡೆದುಕೊಂಡು ನಂತರ ದಿಬ್ಬೂರಹಳ್ಳಿ ಸರ್ಕಲ್ ನಿಂದ ಮಧ್ಯಾಹ್ನ 14-15 ಗಂಟೆಗೆ ತಲಕಾಯಲಬೆಟ್ಟ ಗ್ರಾಮದ ಶಾಲೆಯ ಬಳಿ ಹೋಗಿ ಶಾಲೆ ಮುಂದೆ ರಸ್ತೆಯಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ದಾಳಿಯ ವಿಚಾರವನ್ನು ತಿಳಿಸಿ ಸದರಿ ದಾಳಿಗೆ  ಪಂಚರಾಗಿ ಸಹಕರಿಸಲು ಕೋರಿದರ ಮೇರೆಗೆ ಅವರು ಒಪ್ಪಿಕೊಂಡಿರುತ್ತಾರೆ.  ನಂತರ ನಾವು ಪಂಚರೊಂದಿಗೆ ನಡೆದುಕೊಂಡು ತಲಕಾಯಲಬೆಟ್ಟ ಗ್ರಾಮದ ಶಾಲೆಯಿಂದ ಮುಂದೆ ಹೋಗಿ ಗ್ರಾಮದ ಮಂಜುನಾಥ ರವರ ಚಿಲ್ಲರೆ ಅಂಗಡಿಯ ಬಳಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಆಸಾಮಿಯು ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಪ್ಲಾಸ್ಟಿಕ್ ಪೇಪರ್ ನಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡಿದ್ದು ಇನೊಬ್ಬ ಆಸಾಮಿಯು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಮಧ್ಯಪಾನ ಮಾಡುತ್ತಿದ್ದವನ ಮೇಲೆ  ಸಮವಸ್ರದಲ್ಲಿದ್ದ ನಾವುಗಳು ದಾಳಿ ಮಾಡುವಷ್ಟರಲ್ಲಿ  ಮಧ್ಯಪಾನ ಮಡುತ್ತಿದ್ದ ವ್ಯಕ್ತಿಯು ಅಲ್ಲಿಂದ ಓಡಿ ಹೋಗಿರುತ್ತಾನೆ. ನಂತರ ತನ್ನ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿಕೊಟ್ಟಿದ್ದ ಆಸಾಮಿಗೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಳ್ಳಲು ಮತ್ತು ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿಕೊಡಲು ನಿಮ್ಮ ಬಳಿ ಯಾವುದಾದರೂ ಪರವಾನಿಗೆ ಇದಿಯೇ ಎಂದು ಕೇಳಲಾಗಿ ಸದರಿ ಆಸಾಮಿಯು ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲಾವೆಂದು ಹೇಳಿದ್ದು ಸದರಿ ಆಸಾಮಿಯ ಹೆಸರು ಮತ್ತು ಪೂರ್ಣ ವಿಳಾಸವನ್ನು ಕೇಳಲಾಗಿ ಸದರಿ ಆಸಾಮಿಯ ಹೆಸರು ಮಂಜುನಾಥ ಬಿನ್ ಶ್ರೀರಾಮಪ್ಪ, 35 ವರ್ಷ, ಕುಂಬಾರರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ತಲಕಾಯಲಬೆಟ್ಟ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಪೋನ್ ನಂಬರ್:9019565919 ಎಂದು ತಿಳಿಸಿದ್ದು ನಂತರ ಪಂಚರ ಸಮಕ್ಷಮ  ಸದರಿ ಸ್ಥಳದಲ್ಲಿದ್ದ ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 90 ಎಂ.ಎಲ್ ನ HAYWARRDS CHEERS WHISKY ಕಂಪನಿಯ 21 ತುಂಬಿದ ಮಧ್ಯದ ಟೆಟ್ರಾ ಪ್ಯಾಕೇಟ್ ಗಳಿದ್ದು ಇವುಗಳು ಒಟ್ಟು 1890 ಎಂ,ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಮೇಲೆ ಅದರ ಬೆಲೆ 35.13 ಎಂದು ನಮೂದು ಮಾಡಿದ್ದು ಇವುಗಳ ಒಟ್ಟು ಬೆಲೆ 737.73 ರೂಗಳಾಗಿರುತ್ತೆ ಸದರಿ ತುಂಬಿದ 90 ಎಂ,ಎಲ್   HAYWARRDS CHEERS WHISKY ಕಂಪನಿಯ 21 ಟೆಟ್ರಾ ಮಧ್ಯದ ಪ್ಯಾಕೇಟ್ ಗಳನ್ನು ಮತ್ತು  ಸ್ಥಳದಲ್ಲಿಯೇ ಬಿದಿದ್ದ  1 ಖಾಲಿ 90 ಎಂ ಲ್ ನ HAYWARRDS CHEERS WHISKY ಯ  ಟೆಟ್ರಾ ಪ್ಯಾಕೇಟ್ ನ್ನು , ಮಧ್ಯಫಾನ ಮಾಡಿರುವ ನಿಶಾನೆಗಳಿರುವ 1 ಪ್ಲಾಸ್ಟಿಕ್ ಗ್ಲಾಸ್ ನ್ನು ಹಾಗೂ ಒಂದು ಖಾಲಿ ವಾಟರ್ ಬಾಟೆಲ್ ನ್ನು ಮಧ್ಯಾಹ್ನ 14-30 ಗಂಟೆಯಿಂದ ಮಧ್ಯಾಹ್ನ 15-30 ಗಂಟೆಯವರೆಗೆ  ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಪಂಚನಾಮೆ , ಆಸಾಮಿಯೊಂದಿಗೆ ಠಾಣೆಗೆ ಹಾಜರಾಗಿ ಆಸಾಮಿಯ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರಿ ಸಿ.ಹೆಚ್.ಸಿ 159 ಮೊಹಮ್ಮದ್ ಸೈಯಾದ್ ರವರು ನೀಡಿದ ವರದಿಯನ್ನು ಪಡೆದು ಠಾಣಾ ಮೊ.ಸಂಖ್ಯೆ:110/2021 ರಂತೆ ಪ್ರಕರಣ ದಾಖಲಿಸಿರುತ್ತೇನೆ.

 

5. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.111/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:20/08/2021 ರಂದು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ನಾನು ಮತ್ತು ಠಾಣೆಯ ಸಿಬ್ಬಂದಿಯಾದ ಸಿ.ಪಿ.ಸಿ 196 ದೇವರಾಜ್ ಬಡಿಗೇರ ಮತ್ತು ಸಿ.ಪಿ.ಸಿ 490 ಸೋಮಶೇಕರ್ ರವರೊಂದಿಗೆ  ದಿಬ್ಬೂರಹಳ್ಳಿ ಪೊಲೀಸ್ ಠಾಣಾ ಸರಹದ್ದು ಅಜ್ಜಕದಿರೇನಹಳ್ಳಿ ,ಅನೆಮಡುಗು ಗ್ರಾಮ, ಮರಿಹಳ್ಳಿ, ಚೌಡರೆಡ್ಡಿಪಲ್ಲಿ , 11 ನೇ ಮೈಲಿ,ಚೊಕ್ಕನಹಳ್ಳಿ ಕ್ರಾಸ್, ಗಂಜಿಗುಂಟೆ, ತುರಕಾಚನಹಳ್ಳಿ ಕೊಮ್ಮಸಂದ್ರ,ಈ ತಿಮ್ಮಸಂದ್ರ ಗ್ರಾಮಗಳ ಕಡೆ  ಗಸ್ತು ಮಾಡಿಕೊಂಡು ಸಂಜೆ 16-00 ಗಂಟೆಗೆ  ಗಾಂಡ್ಲಚಿಂತೆ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ನನಗೆ ಬಂದ ಖಚಿತವಾದ ಮಾಹಿತಿ ಏನೆಂದರೆ  ಸದರಿ ಗ್ರಾಮದ ವಾಸಿಯಾದ ಶಶಿಕುಮಾರ್ ಎಂಬ ಆಸಾಮಿಯು ತನ್ನ ಮನೆಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕರಿಗೆ ಮಧ್ಯಫಾನ ಮಾಡಲು ಸ್ಥಳಾವಾಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ತಿಳಿದು ಬಂದಿದ್ದು ಈ ಬಗ್ಗೆ ದಾಳಿ ನಡೆಸಲು ಅದೇ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಸದರಿ ಸ್ಥಳದ ಮೇಲೆ ದಾಳಿ ಮಾಡುವ ವಿಚಾರವನ್ನು ತಿಳಿಸಿ ಪಂಚರಾಗಿರಲು ಕೋರಿದರ ಮೇರೆಗೆ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ಪಂಚರೊಂದಿಗೆ ಗಾಂಡ್ಲಚಿಂತೆ ಗ್ರಾಮದ   ಶಶಿಕುಮಾರ್ ಬಿನ್ ವೆಂಕಟರವರಣಪ್ಪ ರವರ ಮನೆಯಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಶಶಿಕುಮಾರ್ ರವರು ತನ್ನ ಮನೆಯ ಮುಂಭಾಗದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿಕೊಟ್ಟಿದ್ದು ಸದರಿ ಆಸಾಮಿಯ ಮೇಲೆ ಪಂಚರೊಂದಿಗೆ ದಾಳಿ ಮಾಡುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ಪೊಲೀಸ್ ರನ್ನು ನೋಡಿ ಮಧ್ಯಫಾನ ಮಾಡುತ್ತಿದ್ದ ಆಸಾಮಿಯು ಅಲ್ಲಿಂದ ಓಡಿ ಹೋಗಿರುತ್ತಾನೆ. ನಂತರ ಸಾರ್ವಜನಿಕ ಸ್ಥಳದಲ್ಲಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡಿದ್ದ ಆಸಾಮಿಯನ್ನು ಕುರಿತು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿಕೊಡಲು ನಿನ್ನ ಬಳಿ ಯಾವುದಾದರೂ ಪರವಾನಿಗೆ ಇದಿಯೇ ಎಂದು ಕೇಳಲಾಗಿ ಸದರಿ ಆಸಾಮಿಯು ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ಹೇಳಿದ್ದು ನಂತರ ಸದರಿ ಆಸಾಮಿಯ ಹೆಸರು ಮತ್ತು ಪೂರ್ಣ ವಿಳಾಸವನ್ನು ಕೇಳಲಾಗಿ ಶಶಿಕುಮಾರ್ ಬಿನ್ ವೆಂಕಟರವಣಪ್ಪ,28 ವರ್ಷ, ಬಜಂತ್ರಿ ಜನಾಂಗ, ಕುಲ ಕಸುಬು, ವಾಸ: ಗಾಂಡ್ಲಚಿಂತೆ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಪೋನ್ ನಂಬರ್:9591753367 ಎಂದು  ತಿಳಿಸಿದ್ದು ನಂತರ ಪಂಚರ ಸಮಕ್ಷಮ ಸದರಿ ಸ್ಥಳದಲ್ಲಿದ್ದ ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 90 ಎಂ,ಎಲ್ ನ ORIGINAL CHOICE DELUX WHISKYಯ  20 ಮಧ್ಯ ತುಂಬಿದ ಟೆಟ್ರಾ ಪ್ಯಾಕೇಟ್ ಗಳಿದ್ದು ಇವುಗಳ ಒಟ್ಟು 1800 ಎಂ,ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಮೇಲೆ ಅದರ ಬೆಲೆ 35.13 ಎಂದು ನಮೂದು ಮಾಡಿದ್ದು ಇವುಗಳ ಒಟ್ಟು ಬೆಲೆ 702.6 ರೂ ಆಗಿದ್ದು  ಸದರಿ ಮಧ್ಯ ತುಂಬಿದ ಪ್ಯಾಕೇಟ್ ಗಳನ್ನು ಮತ್ತು ಸ್ಥಳದಲ್ಲಿಯೇ ಬಿದಿದ್ದ  1 ಖಾಲಿ 90 ಎಂ,ಲ್, ನ  ORIGINAL CHOICE DELUX WHISKYಯ ಟೆಟ್ರಾ ಪ್ಯಾಕೇಟ್ ನ್ನು ಮತ್ತು ಮಧ್ಯಫಾನ ಮಾಡಿರುವ ನಿಶಾನೆಗಳಿರುವ 1 ಪ್ಲಾಸ್ಟಿಕ್ ಗ್ಲಾಸ್ ನ್ನು ಮತ್ತು ಒಂದು ಲೀಟರ್ ನ ಖಾಲಿ ವಾಟರ್ ಬಾಟೆಲ್ ನ್ನು ಸಂಜೆ 16-30 ಗಂಟೆಯಿಂದ ಸಂಜೆ 17-30 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಮಾಲು ಮತ್ತು ಪಂಚನಾಮೆ, ಆಸಾಮಿಯೊಂದಿಗೆ ಸಂಜೆ 18-00 ಗಂಟೆಗೆ ಠಾಣೆಗೆ ಹಾಜರಾಗಿ ಆಸಾಮಿಯ ವಿರುದ್ದ ಸ್ವತಃ ಮೊ.ಸಂಖ್ಯೆ:111/2021 ಕಲಂ:15(A),32(3) K,E ACT ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 

6. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.189/2021 ಕಲಂ. 504,143,147,148,149,324 ಐ.ಪಿ.ಸಿ:-

     ದಿನಾಂಕ 21/08/2021 ರಂದು ಮದ್ಯಾಹ್ನ 01-00 ಗಂಟೆಗೆ ಪಿರ್ಯಾಧಿ ಶ್ರೀನಿವಾಸ ಬಿನ್ ವೆಂಕಟರವಣಪ್ಪ 3ನೇ ವಾರ್ಡ್ ಬೆಟ್ಟದ ಕೆಳಗಿನ ಪೇಟೆ, ಗುಡಿಬಂಡೆ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ,, ದಿನಾಂಕ 20/08/2021 ರಂದು ರಾತ್ರಿ 8-00 ಗಂಟೆಯ ಸಮಯದಲ್ಲಿ ಆರೋಪಿತರು ಹಳೆಯ ದ್ವೇಶದಿಂದ  ಅಕ್ರಮ ಗುಂಪುಕಟ್ಟಿಕೊಂಡು ತಮ್ಮ ಕೈಗಳಲ್ಲಿ ರಾಡು, ಮಚ್ಚು, ಕಲ್ಲುಗಳನ್ನು ಹಿಡಿದುಕೊಂಡು ತಮ್ಮ ಮನೆಯ ಬಳಿ ಬಂದು ಕೆಟ್ಟ ಮಾತುಗಳಿಂದ ಬೈದು, ತಮ್ಮ ಮನೆಯ ಮುಂದೆ ಕುಳಿತ್ತಿದ್ದ ತನ್ನ ತಂದೆಗೆ ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ರಕ್ತಗಾಯ ಉಂಟುಪಡಿಸಿದ್ದು, ಆಗ ತನ್ನ ಹೆಂಡತಿ ರತ್ನಮ್ಮ ರವರಿಗೆ ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ರಕ್ತಗಾಯ ಉಂಟುಪಡಿಸಿದ್ದು,ಚಿಕಿತ್ಸೆಗಾಗಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಿಮ್ಹಾನ್ಸ್ ಆಅ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಕೊಡಿಸಿ ಪುನಃ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದು, ಆರೋಪಿತರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ದೂರಾಗಿರುತ್ತೆ.

 

7. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.190/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:21/08/2021 ರಂದು ಮದ್ಯಾಹ್ನ 1-45 ಗಂಟೆಗೆ ಘನ ನ್ಯಾಯಾಲಯದ ಕರ್ತವ್ಯ ಪಿಸಿ-430  ರವರು ಠಾಣಾ NCR NO-233/2021 ರಲ್ಲಿ ಕ್ರಿಮೀನಲ್ ಪ್ರಕರಣ ದಾಖಲಿಸಲು ಅನುಮತಿ ಪಡೆದುಕೊಂಡು ಬಂದು ಹಾಜರುಪಡಿಸಿದ ವರಧಿಯ ಸಾರಾಂಶವೇನೆಂದರೆ ಪಿರ್ಯಾಧಿದಾರರು ದಿನಾಂಕ:30/07/2021 ರಂದು ಬೆಳಿಗ್ಗೆ 10-00 ಗಂಟೆಯ ಸಮಯದಲ್ಲಿ  ಈ ದಿನ ದಿನಾಂಕ: 19/08/2021 ರಂದು ಬೆಳಿಗ್ಗೆ 10-00 ಗಂಟೆಯ ಸಮಯದಲ್ಲಿ  ತಾನು ಮತ್ತು ಹೆಚ್.ಸಿ. 102 ಶ್ರೀ ಆನಂದ ರವರು ಗುಡಿಬಂಡೆ ಟೌನ್ ನಲ್ಲಿ ಹಗಲು ಗಸ್ತು ಮಾಡುತ್ತಿದ್ದಾಗ ತನಗೆ ಗುಪ್ತ ಮಾಹಿತಿ ಸಂಗ್ರಹಣೆ ಕರ್ತವ್ಯ ನಿರ್ವಹಿಸುತ್ತಿರುವ ಠಾಣಾ ಹೆಚ್.ಸಿ. 73 ಶ್ರೀ ಶ್ರೀ ಹನುಮಂತರಾಯಪ್ಪ ರವರು ತಿಳಿಸಿದ್ದೇನೆಂದರೆ ಬಾತ್ಮೀದಾರರರಿಂದ ಗುಡಿಬಂಡೆ ತಾಲ್ಲೂಕು ಹಂಪಸಂದ್ರ ಗ್ರಾಮದ ಸರೋಜಮ್ಮ ಕೊಂ ಸೂರ್ಯನಾರಾಯಣ ರವರು ಅವರ ಚಿಲ್ಲರೆ ಅಂಗಡಿಯ ಬಳಿ ಯಾವುದೇ ರೀತಿಯ ಲೈಸನ್ಸ್ ಇಲ್ಲದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿರುತ್ತೆಂದು ತಿಳಿಸಿದ್ದರ ಮೇರೆಗೆ ನಾನು ಮತ್ತು ಆನಂದ ರವರೊಂದಿಗೆ ದ್ವಿಚಕ್ರವಾಹನದಲ್ಲಿ ಹಂಪಸಂದ್ರ ಗ್ರಾಮದ ಬಸ್ಸು ನಿಲ್ದಾಣದ ಬಳಿ ಬೆಳಿಗ್ಗೆ 10-30 ಗಂಟೆಗೆ ಹೋಗಿ ಅಲ್ಲಿಯೇ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿ ಸರೋಜಮ್ಮ ಕೊಂ ಸೂರ್ಯನಾರಾಯಣ ರವರ ಚಿಲ್ಲರೆ ಅಂಗಡಿ ಬಳಿಯಿಂದ ಸ್ವಲ್ಪ ದೂರದಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಸರೋಜಮ್ಮ ಕೊಂ ಸೂರ್ಯನಾರಾಯಣ ರವರ ಚಿಲ್ಲರೆ ಅಂಗಡಿ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅನುಮತಿ ನೀಡಿ ಸ್ಥಳಾವಕಾಶ ಮಾಡಿಕೊಟ್ಟಿದ್ದು, ಸಾರ್ವಜನಿಕರು ಸದರಿ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದು ಕಂಡುಬಂದಿದ್ದು, ಸದರಿ ಸ್ಥಳಕ್ಕೆ ನಾವುಗಳು ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಅಲ್ಲಿದ್ದ ಮದ್ಯ ಸೇವನೆ ಮಾಡುತ್ತಿದ್ದ ಸಾರ್ವಜನಿಕರು ಮತ್ತು ಮದ್ಯ ಸರಬರಾಜು ಮಾಡುತ್ತಿದ್ದ ಹೆಂಗಸ್ಸು ಓಡಿ ಹೋಗಿದ್ದು, ಸಾರ್ವಜನಿಕರಿಗೆ  ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರವ ಓಡಿ ಹೋದ ಸದರಿ ಚಿಲ್ಲರೆ ಅಂಗಡಿ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಸರೋಜಮ್ಮ ಕೊಂ ಸೂರ್ಯನಾರಾಯಣ 48 ವರ್ಷ, ಈಡಿಗ ಜನಾಂಗ ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಹಂಪಸಂದ್ರ ಗ್ರಾಮ, ಗುಡಿಬಂಡೆ ತಾಲ್ಲೂಕು ಎಂತ ತಿಳಿಯಿತು, ಮದ್ಯಪಾನ ಸೇವೆನೆ ಮಾಡಲು ಸ್ಥಳಾವಕಾಶ ಮಾಡಿಕಟ್ಟಿದ್ದಕ್ಕೆ ಅನುಮತಿ ಪಡೆದಿರುವ ಲೈಸನ್ಸ್ ಇಲ್ಲದೆ ಅಕ್ರಮವಾಗಿ ಮದ್ಯವನ್ನು ಸರಬರಾಜು ಮಾಡಿರುವುದು ಕಂಡು ಬಂತು. ಸದರಿ ಸ್ಥಳದಲ್ಲಿ ಹೈವಾಡ್ಸರ್್ ಚೀಯರ್ಸ್ ವಿಸ್ಕಿ ಕಂಪನಿಯ 90 ಎಂ.ಎಲ್ ಸಾಮಥ್ರ್ಯದ 10 ಮದ್ಯದ ಟೆಟ್ರಾ ಪ್ಯಾಕೇಟ್ಗಳು ಇದ್ದವು, 2 ಖಾಲಿ ಟೆಟ್ರಾ ಪ್ಯಾಕೇಟ್ಗಳು ಬಿದ್ದಿದ್ದು, ಮದ್ಯವನ್ನು ಕುಡಿದು ಬಿಸಾಹಾಕಿದ್ದ 2 ಪ್ಲಾಸ್ಟಿಕ್ ಗ್ಲಾಸುಗಳು ಅಲ್ಲಿಯೇ ಪಕ್ಕದಲ್ಲಿಯೇ ಒಂದು ಲೀಟರ್ ಸಾಮಥ್ರ್ಯದ ಪ್ಲಾಸ್ಟಿಕ್ ವಾಟರ್ ಬಾಟಲ್ ಇದ್ದು, ಅದರಲ್ಲಿದ್ದ ನೀರು ಕೆಳಗಡೆಗೆ ಚೆಲ್ಲಿತ್ತು, ಮದ್ಯವಿರು ಪ್ಯಾಕೇಟ್ ಗಳ ಒಟ್ಟು ಬೆಲೆ 35.13*10 =351-10 ರೂಗಳು (900 ಎಂ.ಎಲ್) ಆಗಿರುತ್ತದೆ. ಸದರಿ ಮೇಲ್ಕಂಡ 10 ಮದ್ಯದ ಟೆಟ್ರಾ ಪ್ಯಾಕೇಟ್ಗಳನ್ನು, 2 ಖಾಲಿ ಟೆಟ್ರಾ ಪ್ಯಾಕೆಟ್ ಗಳನ್ನು  ಹಾಗೂ 2 ಪ್ಲಾಸ್ಟಿಕ್ ಗ್ಲಾಸುಗಳು, ಒಂದು ಪ್ಲಾಸ್ಟಿಕ್ ವಾಟರ್ ಬಾಟಲ್ನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಬೆಳಿಗ್ಗೆ 10-45 ಗಂಟೆಯಿಂದ ಬೆಳಿಗ್ಗೆ 11-45 ಘಂಟೆಯವರೆಗೆ ಪಂಚನಾಮೆ ಜರುಗಿಸಿ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ. ಮಾಲಿನೊಂದಿಗೆ ಮದ್ಯಾಹ್ನ 2-00 ಘಂಟೆಗೆ ಠಾಣೆಗೆ ಬಂದು 2-30 ಗಂಟೆಗೆ ವರಧಿಯನ್ನು ಸಿದ್ದಪಡಿಸಿ ಮೇಲ್ಕಂಡ ಮಾಲುಗಳು ಹಾಗೂ ಅಸಲು ಪಂಚನಾಮೆಯನ್ನು ಮುಂದಿನ ಕ್ರಮದ ಬಗ್ಗೆ ನೀಡುತ್ತಿದ್ದು, ಆರೋಪಿತಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

8. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.142/2021 ಕಲಂ. 32,34,38A ಕೆ.ಇ ಆಕ್ಟ್:-

     ಘನ ನ್ಯಾಯಾಲಯದಲ್ಲಿ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಎಸ್.ಐ. ಲಕ್ಷ್ಮೀನಾರಾಯಣ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ: 20-08-2021   ರಂದು ಸಂಜೆ 05-00 ಗಂಟೆ ಸಮಯದಲ್ಲಿ ನಾನು ಸಿಬ್ಬಂದಿಯವರಾದ ಪಿ.ಸಿ-483 ರಮೇಶ ಬಾಬು, ಪಿ.ಸಿ-105 ನವೀನ್ ಕುಮಾರ್, ಪಿಸಿ-336 ಉಮೇಶ್ ಶಿರಶ್ಯಾಡ ರವರುಗಳು ಠಾಣೆಯ ಜೀಪ್ ನಂ ಕೆ.ಎ-40 ಜಿ-395 ರಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಅಲ್ಲೀಪುರ, ಮೈಲಗಾನಹಳ್ಳಿ, ತರಿದಾಳು ಗ್ರಾಮಗಳ ಕಡೆ ಗಸ್ತು ಮಾಡುತ್ತಿದ್ದಾಗ ನನಗೆ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ವೀರಮ್ಮನಹಳ್ಳಿ ಗೇಟ್ ನಿಂದ ಸುಮಾರು 100 ಅಡಿ ಮುಂದಕ್ಕೆ ಅಲ್ಲೀಪುರ ಕಡೆ ವಾಹನ ಸಂಖ್ಯೆ KA-05-MP-8181 ಚವರ್ ಲೈಟ್ ಟವೆರೋ ಕಾರಿನಲ್ಲಿ ಯಾರೋ ಒಬ್ಬ ಆಸಾಮಿಯು ಯಾವುದೇ ಲೈಸೆನ್ಸ್ ಇಲ್ಲದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಮಾರಾಟ ಮಾಡುವ ಸಲುವಾಗಿ  ಮದ್ಯವನ್ನು ತೆಗೆದುಕೊಂಡು ಬರುತ್ತಿರುವುದಾಗಿ ಮಾಹಿತಿ ಬಂದಿದ್ದು, ದಾಳಿ ಮಾಡಲು ಸಿಬ್ಬಂದಿಯವರೊಂದಿಗೆ ಪಂಚರನ್ನು ಕರೆದುಕೊಂಡು ಸಂಜೆ 05-00 ಗಂಟೆ ಸಮಯದಲ್ಲಿ ನಾನು ಅಲ್ಲೀಪುರ ಗ್ರಾಮದ ಬಳಿ  ರಸ್ತೆಯಲ್ಲಿ ಬರುತ್ತಿರುವಾಗ ನಮ್ಮ ಎದುರಿಗೆ ಒಬ್ಬ ಆಸಾಮಿ KA-05-MP-8181 ಚವರ್ ಲೈಟ್ ಟವೆರೋ ಕಾರಿನಲ್ಲಿ ಒಂದು ಪ್ಲಾಸ್ಟಿಕ್ ಚೀಲವನ್ನು ಇಟ್ಟುಕೊಂಡು ಬರುತ್ತಿದ್ದು. ನಮ್ಮ ಪೊಲೀಸ್ ಜೀಪನ್ನು ನೋಡಿ ಸದರಿ ಆಸಾಮಿ ವಾಹನದೊಂದಿಗೆ ಓಡಿಹೋಗುತಿದ್ದವನನ್ನು  ನಾನು ಸಿಬ್ಬಂದಿ ಹಾಗೂ ಪಂಚರೊಂದಿಗೆ ಕಾರನ್ನು ಹಿಡಿದು ಆತನ ಬಳಿ ಇದ್ದ ಚೀಲವನ್ನು  ಪರಿಶೀಲಿಸಲಾಗಿ 01 ಬಿಳಿ ಚೀಲದಲ್ಲಿ ಮದ್ಯವನ್ನು ಇಟ್ಟುಕೊಂಡಿದ್ದು ಸದರಿ ಮದ್ಯವನ್ನು ಮಾರಾಟ ಮಾಡಲು ಅನುಮತಿ ಇದೆಯೇ ಎಂತ ಕೇಳಲಾಗಿ ನನಗೆ ದೊಡ್ಡಬಳ್ಳಾಪುರ ತಾಲ್ಲೂಕು ಆರೂಡಿಯಲ್ಲಿ ಬಾರ್ ಮಾಲೀಕರು ಮತ್ತು ಬಾರ್ ನ ಕ್ಯಾಷಿಯರ್ ಅಕ್ರಮವಾಗಿ ಮಾರಾಟ ಮಾಡಲು ನೀಡುತ್ತಿರುವುದಾಗಿ ತಿಳಿಸಿದ್ದು ಸದರಿ ಚೀಲವನ್ನು ತೆಗೆದು ಪರಿಶೀಲಿಸಲಾಗಿ ಅದರಲ್ಲಿ OLD TAVERN WHISKY ಯ ಒಟ್ಟು 240 ಮದ್ಯದ ಟೆಟ್ರಾ ಪ್ಯಾಕೇಟ್ ಗಳು 180 ಎಂ.ಎಲ್ ಆಗಿದ್ದು, ಪ್ರತಿ ಪ್ಯಾಕೇಟಿನ ಮೇಲೆ 86.75 ರೂಗಳೆಂದು ಇದ್ದು ಇದರ ಬೆಲೆ ಸುಮಾರು 20800 ರೂ ಹಾಗೂ  HAYWARDS CHEERS WHISKY ಯ ಒಟ್ಟು 90 ML ಸಾಮರ್ಥ್ಯದ 480 ಮದ್ಯದ ಟೆಟ್ರಾ ಪ್ಯಾಕೇಟ್ ಗಳಿದ್ದು, ಪ್ರತಿ ಪ್ಯಾಕೇಟಿನ ಮೇಲೆ 35.13  ರೂಗಳೆಂದು ಇದ್ದು, ಇದರ ಬೆಲೆ 16860 ರೂ ಮತ್ತು ವಾಹನದ ಸಂಖ್ಯೆ  KA-05-MP-8181 ಚವರ್ ಲೈಟ್ ಟವೆರೋ ಕಾರಿನಲ್ಲಿ ಸಾಗಿಸುತ್ತಿರುವುದಾಗಿ ತಿಳಿಸಿದ್ದು  ಸದರಿ ಆಸಾಮಿಯ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಅಶೋಕರೆಡ್ಡಿ ಬಿನ್ ವೈ ನಾಗರಾಜು, 36 ವರ್ಷ, ವಕ್ಕಲಿಗರು, ವ್ಯಾಪಾರ, ನಂ.94, ಇಂದಿರಾನಗರ, ಕರಿಓಬನಹಳ್ಳಿ ಬಳಿ, ಸಿದ್ದಾರ್ಥ ಶಾಲೆಯ ಪಕ್ಕ, ಬೆಂಗಳೂರು-560079, ಮೊ.ಸಂ.9845623458 ಎಂತ ತಿಳಿಸಿದ್ದು  ಮೇಲ್ಕಂಡ ಚೀಲದಲ್ಲಿದ್ದ 90 ML ಸಾಮರ್ಥ್ಯದ HAYWARDS CHEERS WHISKY ಯ ಒಟ್ಟು 480 ಮದ್ಯದ ಟೆಟ್ರಾ ಪ್ಯಾಕೇಟ್ ಗಳ ಪೈಕಿ  05 ಟೆಟ್ರಾ ಪ್ಯಾಕೆಟ್ ಗಳನ್ನು  ರಾಸಾಯನಿಕ ತಜ್ಞರ ಪರೀಕ್ಷೆಗೆ ಕಳುಹಿಸುವ ಸಲುವಾಗಿ  ಹಾಗೂ ಅದೇ ಚೀಲದಲ್ಲಿದ್ದ ಇನ್ನೋದು  ಕಂಪನಿಯ   180 ಒಟ್ಟು 240 ಮದ್ಯದ ಟೆಟ್ರಾ ಪ್ಯಾಕೇಟ್ ಗಳ ಪೈಕಿ 05,  180 ML ನ ಟೆಟ್ರಾ ಪ್ಯಾಕೆಟ್ ಗಳನ್ನು  ತೆಗೆದು ಪ್ರತ್ಯೇಕವಾಗಿ ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಮೂತಿಯನ್ನು ದಾರದಿಂದ ಕಟ್ಟಿ ಅರಗು ಮಾಡಿ P ಎಂಬ ಇಂಗ್ಲೀಷ್ ಅಕ್ಷರ ದಿಂದ ಸೀಲು ಮಾಡಿ ರಾಸಾಯನಿಕ ತಜ್ಞರ ಪರೀಕ್ಷೆಗೆ ಶೇಖರಿಸಿರುತ್ತದೆ.         ಸ್ಥಳದಲ್ಲಿ ದೊರೆತ ಮಧ್ಯವನ್ನು ಹಾಗೂ ಮೇಲ್ಕಂಡ  KA-05-MP-8181 ಚವರ್ ಲೈಟ್ ಟವೆರೋ ಕಾರನ್ನು ಪಂಚರ ಸಮಕ್ಷಮ  ಸಂಜೆ 05-30 ಗಂಟೆಯಿಂದ 06-30 ಗಂಟೆಯವರೆಗೆ ಪಂಚನಾಮೆಯ ಕ್ರಮಗಳನ್ನು ಜರುಗಿಸಿ ಅಮಾನತ್ತು ಪಡಿಸಿಕೊಂಡಿದ್ದು, ಮೇಲ್ಕಂಡ ಮದ್ಯ ಹಾಗೂ ಕಾರಿನೊಂದಿಗೆ ಸಂಜೆ 19-00 ಗಂಟೆಗೆ ಠಾಣೆಗೆ ವಾಪಸ್ ಬಂದು ಆರೋಪಿ ಅಶ್ವತ್ಥರೆಡ್ಡಿ ರವರ ವಿರುದ್ದ ಠಾಣಾ ಮೊ.ಸಂ – 142/2021 ಕಲಂ 32,34,38(A) ಕೆ.ಇ.ಆಕ್ಟ್ ರೀತ್ಯಾ ನಾನೇ ಸ್ವತಃ ಪ್ರಕರಣವನ್ನು ದಾಖಲಿಸಿರುತ್ತೇನೆ.

 

9. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.143/2021 ಕಲಂ. 87 ಕೆ.ಪಿ  ಆಕ್ಟ್:-

     ದಿನಾಂಕ:18/08/2021 ರಂದು ಪಿ.ಎಸ್.ಐ ಶ್ರೀ ಲಕ್ಷ್ಮೀನಾರಾಯಣ ರವರು ಮಾಲು ಆರೋಪಿತರು ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಈ ದಿನ ದಿನಾಂಕ: 18/08/2021 ರಂದು ಮದ್ಯಾಹ್ನ ಗಸ್ತಿನಲ್ಲಿದ್ದಾಗ 2-30 ಗಂಟೆ ಸಮಯದಲ್ಲಿ ಗೌರಿಬಿದನೂರು ತಾಲ್ಲೂಕು ತೊಂಡೇಬಾವಿ ಹೋಬಳಿ ಚಿಕ್ಕಹುಸೇನ್ ಪುರ ಗ್ರಾಮದ ಬಳಿ ಇರುವ ಸರ್ಕಾರಿ ಕೆರೆಯ ಅಂಗಳದಲ್ಲಿರುವ ಜಾಲಿ ಮರದ ಕೆಳಗೆ ಯಾರೋ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಮಂಚೇನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಪಿ.ಸಿ-483 ರಮೇಶ್ ಬಾಬು, ಪಿ.ಸಿ-105 ನವೀನ್ ಕುಮಾರ್, ಪಿ.ಸಿ-283 ಅರವಿಂದ, ಪಿ.ಸಿ-336 ಉಮೇಶ್ ಶಿರಶ್ಯಾಡ್ ಮತ್ತು ಜೀಪ್ ಚಾಲಕ ಎಪಿಸಿ-120 ನಟೇಶ್ ರವರು ಮತ್ತು ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40, ಜಿ-395 ರಲ್ಲಿ ಮದ್ಯಾಹ್ನ 3-00 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಪಂಚರು ಮತ್ತು ನಾವು ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಂದರ್ 200/- ಬಾಹರ್ 200/- ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿಯವರನ್ನು ನಾವು ಸುತ್ತುವರೆದು ಜೂಜಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿ ಅವರನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1] ಪ್ಯಾರು ಬಿನ್ ಲೇಟ್ ಇಬ್ರಾಹಿಂ, 38 ವರ್ಷ, ಮುಸ್ಲೀಂ ಜನಾಂಗ, ಚಿಲ್ಲರೆ ಅಂಗಡಿಯಲ್ಲಿ ಕೆಲಸ, ವಾಸ: ಚಿಕ್ಕಹುಸೇನ್ ಪುರ ಗ್ರಾಮ, ತೊಂಡೇಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು, 2] ಸುಲ್ತಾನ್ ಬಿನ್ ಜಮೀರ್, 26 ವರ್ಷ, ಮುಸ್ಲೀಂ ಜನಾಂಗ, ಕಂಬಿಕೆಲಸ, ವಾಸ: ಚಿಕ್ಕಹುಸೇನ್ ಪುರ ಗ್ರಾಮ, ತೊಂಡೇಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು, 3] ಬಾಬು ಬಿನ್ ಫಕೃದ್ದೀನ್ ಸಾಬ್, 40 ವರ್ಷ, ಮುಸ್ಲೀಂ ಜನಾಂಗ, ಗಾರೆಕೆಲಸ, ವಾಸ: ಚಿಕ್ಕಹುಸೇನ್ ಪುರ ಗ್ರಾಮ, ತೊಂಡೇಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು, 4] ಗಂಗರಾಜು ಬಿನ್ ಅಶ್ವಥಪ್ಪ, 27 ವರ್ಷ, ಪರಿಶಿಷ್ಟ ಜಾತಿ [ಎ.ಕೆ], ಕಂಬಿಕಟ್ಟುವ ಕೆಲಸ, ವಾಸ: ಕುಡುಮಲಕುಂಟೆ ಗ್ರಾಮ, ಕಸಬಾ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಆರೋಪಿತರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದರು. ಪಂಚನಾಮೆಯ ಮೂಲಕ ಸ್ಥಳದಲ್ಲಿ ದೊರೆತ 7250/- (ಏಳು ಸಾವಿರದ ಇನ್ನೂರ ಐವತ್ತು ರೂಪಾಯಿಗಳು ಮಾತ್ರ) ರೂ ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಬಿಳಿ ಚೀಲವನ್ನು ಮದ್ಯಾಹ್ನ 3-00 ಗಂಟೆಯಿಂದ 4-00 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಮಾಲನ್ನು ವಶಪಡಿಸಿಕೊಂಡು ಮಾಲು, ಮಹಜರ್ & ಆರೋಪಿತರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಕೊಟ್ಟ ದೂರು.

Last Updated: 21-08-2021 06:49 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080