Feedback / Suggestions

1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.111/2021 ಕಲಂ. 15(A),32(3) ಕೆ.ಇ ಆಕ್ಟ್:-

      ದಿನಾಂಕ:-20/07/2021 ರಂದು ಸಂಜೆ 18-15 ಗಂಟೆ ಸಮಯದಲ್ಲಿ  ಚಿಕ್ಕಬಳ್ಳಾಪುರ ಉಪ ವಿಭಾಗದ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್.ಸಿ 205 ರಮೇಶ್ ರವರು ಮಾಲು ಮತ್ತು ಆರೋಪಿಯನ್ನು ಹಾಜರುಪಡಿಸಿ ನೀಡಿದ ದೂರನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ಮಾನ್ಯ ಡಿ.ವೈ.ಎಸ್.ಪಿ ಸಾಹೇಬರು ಚಿಕ್ಕಬಳ್ಳಾಪುರ ಉಪ ವಿಭಾಗ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಚ್.ಸಿ 205 ರಮೇಶ್ ಮತ್ತು ಪಿ.ಸಿ 286 ಗೌತಮ್ ರವರಿಗೆ ಚಿಕ್ಕಬಳ್ಳಾಪುರದ ಕಡೆ ಅಕ್ರಮ ಚಟುವಟಿಕೆಗಳ ದಾಳಿ ಮತ್ತು ಮಾಹಿತಿಗಾಗಿ ನೇಮಿಸಿದ್ದು ಅದರಂತೆ ಗಸ್ತಿನಲ್ಲಿದ್ದಾಗ ಸುಮಾರು  ಸಂಜೆ   4-30  ಗಂಟೆ ಸಮಯದಲ್ಲಿ ತಿಪ್ಪೇನಹಳ್ಳಿ  ಗ್ರಾಮದಲ್ಲಿ ಗಸ್ತು ಮಾಡುತ್ತಿದ್ದಾಗ  ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಅಲ್ಲಿಯೇ  ಪಂಚಾಯ್ತಿದಾರರನ್ನು ಬರ ಮಾಡಿಕೊಂಡು ತಿಪ್ಪೇನಹಳ್ಳಿ ಗ್ರಾಮದ ಚಿಕ್ಕಬಳ್ಳಾಪುರ- ಗೌರಿಬಿದನೂರು ರಸ್ತೆಯ ಎಡಭಾಗದ  ಬದಿಯಲ್ಲಿರುವ ನಾರಾಯಣಸ್ವಾಮಿ ಬಿನ್ ಲೇಟ್ ಮುನಿಯಪ್ಪ 55 ವರ್ಷ. ಕುಂಬಾರ ಜನಾಂಗ. ಚಿಲ್ಲರೆ ಅಂಗಡಿ ವ್ಯಾಪಾರ ವಾಸ ತಿಪ್ಪೇನಹಳ್ಳಿ ಗ್ರಾಮ ರವರ ಚಿಲ್ಲರೆ ಅಂಗಡಿ ಮುಂಬಾಗ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು ಪರವಾನಗಿಯನ್ನು ಕೇಳಲಾಗಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದು ಸ್ಥಳದಲ್ಲಿದ್ದ ಮಾಲುಗಳು ಮತ್ತು ಆರೋಪಿಯನ್ನು ಪಂಚನಾಮೆಯ ಮುಖಾಂತರ ವಶಕ್ಕೆ ಪಡೆದುಕೊಂಡು ಮಾಲನ್ನು ಪರಿಶೀಲಿಸಲಾಗಿ 1] 90 ML ನ 21 HAYWARDS CHEERS WHISKY TETRA POCKETS ಇದರ ಬೆಲೆ 737.73 /- ರೂಗಳು ಅಗಿರುತ್ತೆ. 2] 90 ML ನ 02 ಖಾಲಿ HAYWARDS CHEERS WHISKY TETRA POCKETS 3] 02 ಖಾಲಿ ನೀರಿನ ಪ್ಲಾಸ್ಟಿಕ್ ಗ್ಲಾಸುಗಳು 4] 1/2 ಲೀಟರ್ ನ  02 ಖಾಲಿ ಬಾಟೆಲ್ ಗಳು ಇದ್ದು  ಈ ಬಗ್ಗೆ ಸದರಿ ಆಸಾಮಿಯ ವಿರುದ್ದ ಕಲಂ: 15[ಎ], 32[3] ಕೆ.ಇ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

2. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.54/2021 ಕಲಂ. 420 ಐ.ಪಿ.ಸಿ:-

      ದಿನಾಂಕ; 20-07-2021 ರಂದು ಸಂಜೆ 4.00 ಗಂಟೆ ಸಮಯದಲ್ಲಿ ಪಿರ್ಯಾದಿಯಾದ ಶ್ರೀನಿವಾಸಯ್ಯ ಬಿನ್ ಲೇಟ್ ನಾರಾಯಣಪ್ಪ, 74 ವರ್ಷ, ಬಲಜಿಗರು, ಜಿರಾಯ್ತಿ, ವಾಸ: ಮುಷ್ಟೂರು, ಕೆ.ಎಸ್.ಆರ್.ಟಿ.ಸಿ ಗ್ಯಾರೇಜ್ ಮುಂಭಾಗ, ಚಿಕ್ಕಬಳ್ಳಾಪುರ ನಗರ. ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ತಾನು ಮತ್ತು ತನ್ನ ಪತ್ನಿ ರತ್ನಮ್ಮ ರವರಿಬ್ಬರು ಚಿಕ್ಕಬಳ್ಳಾಪುರ ಹೂರವಲಯದಲ್ಲಿರುವ ಕೆ.ಎಸ್.ಆರ್.ಟಿ.ಸಿ ಗ್ಯಾರೇಜ್ ಮುಂಬಾಗದ ತಿರುವಿನಲ್ಲಿ ಕೂನೆಯ ನಮ್ಮ ತೋಟದ ಮನೆಯಲ್ಲಿ ವಾಸ ಮಾಡುತ್ತಿದ್ದು ದಿನಾಂಕ:20/07/2021 ರಂದು ತಾನು ಮತ್ತು ತನ್ನ ಪತ್ನಿ ರತ್ನಮ್ಮ ರವರಿಬ್ಬರು ಮನೆಯಲ್ಲಿ ಇರುವಾಗ ಬೆಳಗ್ಗೆ ಸುಮಾರು 8.00 ಗಂಟೆಯ ಸಮಯದಲ್ಲಿ ಮನೆಯ ಮುಂದೆ ಹೂಗಳನ್ನು ಕೀಳುತ್ತಿರುವಾಗ ಅಲ್ಲಿಗೆ ಓಬ್ಬ ಸುಮಾರು 35 ರಿಂದ 40 ವರ್ಷದ ಅಪರಿಚಿತ ಗಂಡಸು ವ್ಯಕ್ತಿ ಬಂದು ತನ್ನನು ಮಾತನಾಡಿಸಿಕೊಂಡು ನಿಮಗೆ ಪೋಸ್ಟ ಆಫೀಸ್ ನಲ್ಲಿ 5.000/-ರೂಗಳು ಪೆನಷನ್ ಬರುವುದಾಗಿ ಮಾಡಿಸಿಕೊಡುತ್ತೇನೆ ಎಂದು ತಿಳಿಸಿದ ನಾನು ನಿಜವೆಂದು ಅತನನ್ನು ಮನೆಯ ಒಳಗೆ ಬರಲು ತಿಳಿಸಿದೆನು ತನ್ನ ಪತ್ನಿ ರತ್ನಮ್ಮ ರವರು ಅತನ ಬಗ್ಗೆ ವಿಚಾರಿಸಿದಾಗ ಅತನ ಹೆಸರು ವಿಶ್ವ ಎಂದು ತಾನೂ ಕಣಜೇನಹಳ್ಳಿ ಗ್ರಾಮದ ವಾಸಿ ಎಂದು ತಿಳಿಸಿದ್ದು, ಅದುದರಿಂದ ತಾನು ಮತ್ತು ತನ್ನ ಪತ್ನಿ ಅತನ ಮಾತುಗಳನ್ನು ನಂಬಿದೆವು ಅಗ ಅ ವ್ಯಕ್ತಿಯು ನೀವು ನನ್ನ ಜೋತೆಯಲ್ಲಿ ಬಂದರೆ ನಿಮಗೆ ಪೆನಷನ್ ಮಾಡಿಸಿಕೊಡುತ್ತೇನೆ ಎಂದು ಬರಲು ತಿಳಿಸಿದ ತಾನು ಮತ್ತು ತನ್ನ ಪತ್ನಿ ಅತನ ಜೋತೆ ಹೋಗಲು ರೆಡಿಯಾದಾಗ ತನ್ನ ಪತ್ನಿಗೆ ಕತ್ತಿನಲ್ಲಿದ್ದ ಚಿನ್ನದ ಸರವನ್ನು ತೆಗೆದು ಮನೆಯಲ್ಲಿ ಇಟ್ಟು ಬಾ ಅದನ್ನು ನೋಡಿದರೆ ಅವರು ಪೆನಷನ್ ಕೊಡುವುದಿಲ್ಲ ಎಂದು ತಿಳಿಸಿದ ಅದರಿಂದ ತನ್ನ ಪತ್ನಿ ರತ್ನಮ್ಮ ರವರು ಕತ್ತಿನಲ್ಲಿದ್ದ ಸರವನ್ನು ತೆಗದು ಬೀರುವಿನಲ್ಲಿಯಿಟ್ಟು ಬೀಗ ಹಾಕಿ ಬೀಗದ ಕೈಯನ್ನು ಅಲ್ಲೇಯಿದ್ದ ಡಬ್ಬದಲ್ಲಿ ಹಾಕಿದ್ದು. ಅ ವ್ಯಕ್ತಿ ಅಲ್ಲೇಯಿದ್ದು ಅದನ್ನು ಗಮನಿಸುತ್ತಿದ್ದ ಮೊದಲಿಗೆ ತನ್ನನ್ನು ತನ್ನ ಸಿಮೆಂಟ್ ಬಣ್ಣದ ಸ್ಕೂಟಿ ವಾಹನದಲ್ಲಿ ಕುರಿಸಿಕೊಂಡು ಹಳೇ ಸರ್ಕಾರಿ ಅಸ್ಪತ್ರೆಯ ರಸ್ತೆಯ ಮಾರ್ಗವಾಗಿ ಗಂಗಮ್ಮ ಗುಡಿ ರಸ್ತೆಯಲ್ಲಿ ಕರೆದುಕೊಂಡು ಹೋಗಿ ಸ್ಟೂಡಿಯೋ ಬಳಿ ನಿಲ್ಲಿಸಿ ಪುನಃ ಹೂಸ ಸರ್ಕಾರಿ ಅಸ್ಪತ್ರೆಯ ಬಳಿ ಕರೆದುಕೊಂಡು ಹೋಗಿ ತನ್ನನ್ನು ಅಲ್ಲೇ ಕುರಿಸಿ ಅಜ್ಜಿಯನ್ನು ಕರೆದುಕೊಂಡು ಬರುತ್ತೇನೆಂದು ನೀನು ಇಲ್ಲೇಯಿರು ಎಂದು ಹೇಳಿ ನಮ್ಮ ಮನೆಯ ಬಳಿ ಅ ವ್ಯಕ್ತಿ ಹೋಗಿ ತನ್ನ ಪತ್ನಿಯನ್ನು ಕರೆದುಕೊಂಡು ಬಂದು ಇಬ್ಬರನ್ನು ಇಲ್ಲೇಯಿರು ಎಂದು ಹೇಳಿ ನಿಮ್ಮ ಆದಾರಕಾರ್ಡ ಮತ್ತು ಚುನಾವಣೆ ಕಾರ್ಡ ಬೇಕು ಎಂದು ಹೇಳಿ ತೆಗೆದುಕೊಂಡು ಬರಲು ನನ್ನನ್ನು ಪುನಃ ಮನೆಗೆ ತನ್ನ ವಾಹನದಲ್ಲಿ ಕರೆದುಕೊಂಡು ಹೋಗಿ ಮನೆಯಲ್ಲಿ ತಾನು ಆದಾರ್ಕಾರ್ಡ್ ತೆಗೆದುಕೊಂಡು ಮನೆಯ ಬೀಗವನ್ನು ಹಾಕುವಾಗ ಅತನೇ ಬೀಗದ ಕೈ ತೆಗೆದುಕೋಂಡು ಬೀಗ ಹಾಕಿ ತನಗೆ ಬೀಗ ಕೊಟ್ಟು ತನ್ನನ್ನು ಹೂಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಬಿಟ್ಟು ನಮಗೆ ನೀವು ಇಲ್ಲೇಯಿರಿ ತಾನು ಸಾಹೇಬರನ್ನು ನೋಡಿಕೊಂಡು ಬರುತ್ತೇನೆ ಎಂದು ಹೇಳಿ ಹೋಗಿ ಸುಮಾರು 20 ನಿಮಿಷಗಳ ಬಳಿಕ ವಾಪಸ್ಸು ನಮ್ಮ ಬಳಿ ಬಂದು ನೀವು ಮನೆಗೆ ಹೋಗಿ ತಾನು ಮಧ್ಯಾಹ್ನ ನಿಮ್ಮ ಮನೆಗೆ ಬಂದು ಕರೆದುಕೊಂಡು ಹೋಗುವೆ ಎಂದು ಹೇಳಿ ಹೂರಟುಹೋದ ನಾವುಗಳು ಆಟೋದಲ್ಲಿ ಮನಗೆ ಸುಮಾರು 12.00 ಗಂಟೆಗೆ ಮನಗೆ ಹೋದೆವು ಮನೆಯ ಬಾಗಿಲು ಆರ್ಧ ತೆಗೆದಿದ್ದು ಮನೆಯ ಒಳಗೆ ಹೋಗಿ ನೋಡಲಾಗಿ ಬೀರುವುನಲ್ಲಿಯಿಟ್ಟಿದ್ದ ಕತ್ತಿನ ಸರ ಮತ್ತು 5000/-ರೂಗಳು ಕಾಣೆಯಾಗಿದ್ದು ತನ್ನ ಗಮನವನ್ನು ಬೇರೆಡೆ ಸೆಳೆದು ಮೋಸ ಮಾಡಿ ಮನೆಯಲ್ಲಿದ್ದ ಸುಮಾರು 35 ರಿಂದ 40 ಗ್ರಾಂ ತೂಕದ ಕತ್ತಿನ ಚಿನ್ನದ ಸರವನ್ನು ಮತ್ತು 5000/-ರೂ ಹಣವನ್ನು ತೆಗೆದುಕೊಂಡು ಹೋಗಿರುವ ಅಪರಿಚಿತ ವ್ಯಕ್ತಿಯನ್ನು ಮತ್ತು ನಮ್ಮ ಚಿನ್ನದ ಸರವನ್ನು ಪತ್ತೆಮಾಡಿ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

3. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.100/2021 ಕಲಂ. ಮನುಷ್ಯ ಕಾಣೆ:-

     ದಿನಾಂಕ:20/07/2021 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಶ್ರೀಮತಿ ವಾಣಿ ಕೋಂ ಕರುಣಕರ್, 36 ವರ್ಷ, ಕ್ರಿಶ್ಚಿಯನ್ ಜನಾಂಗ, ವಾಸ: ನದಿಗಡ್ಡೆ ಗೌರಿಬಿದನೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡದ ದೂರಿನ ಸಾರಾಂಶವೆಂದರೆ ತಾನು ಮೆಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ತನ್ನ ತಂದೆ ತಾಯಿಗೆ 01 ನೇ ಶಂಕರ, 02 ನೇ ಗಂಗಾದೇವಿ, 03 ನೇ ಅಮರ್ ಮತು 04 ನೇ ವಾಣಿ ಎಂಬ 04 ಜನ ಮಕ್ಕಳಿದ್ದು ತಾನು ಚಿಕ್ಕವಳಾಗಿದ್ದು. ತಾನು 05 ನೇ ತರಗತಿಯ ವರೆಗೆ ಓದಿಕೊಂಡಿರುತ್ತೇನೆ. ತಾವು ಆದಿ ಕರ್ನಾಟಕ ಜನಾಂಗಕ್ಕೆ ಸೇರಿದ್ದು ತಾನು ಗೌರಿಬಿದನೂರು ನಗರದ ಕ್ರಿಶ್ಚಿಯನ್ ಕಾಲೋನಿಯ ವಾಸಿಯಾದ ಕರುಣಾಕರ್ ಬಿನ್ ರಾಜಶೇಖರಪ್ಪ, ಕ್ರಿಶ್ಚಿಯನ್ ಜನಾಂಗ, ರವರನ್ನು ಪ್ರೀತಿಸಿ ಸುಮಾರು 18 ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿರುತ್ತೇನೆ. ತಾವುಗಳ ಸಂಸಾರದಲ್ಲಿ ಅನ್ಯೂನ್ಯವಾಗಿರುತ್ತೇವೆ, ತಮ್ಮ ಸಂಸಾರದಲ್ಲಿ ತಮಗೆ ಸೋನಿ ಇಂಚರ್ಯ, 17 ವರ್ಷ, ಮತ್ತು ಪ್ರಭುತೇಜ, 14 ವರ್ಷ ಎಂಬ ಇಬ್ಬರು ಮಕ್ಕಳಿರುತ್ತಾರೆ. ತನ್ನ ಗಂಡ ಟೈಲ್ಸ್ ಕೆಲಸ ಮಾಡಿಕೊಂಡಿರುತ್ತಾನೆ. ಅದರೆ ಇವನು ಗೌರಿಬಿದನೂರು ಅನ್ನಪೂರ್ಣ ದೇವಸ್ಥಾನ ಬಳಿ ವಾಸವಾಗಿರುವ ಸುವರ್ಣ (ಪೊನ್:7026898940) ರವರೊಂದಿಗೆ ಅಕ್ರಮ ಸಂಬಂದವನ್ನು ಇಟ್ಟುಕೊಂಡಿರುವ ವಿವಾರ ತನಗೆ ಈಗ್ಗೆ ಮೂರು ತಿಂಗಳ ಹಿಂದೆ ತಿಳಿಯಿತು, ತಾನೂ ಈ ಬಗ್ಗೆ ಆತನೊಂದಿಗೆ ಮಾತನಾಡಿ ಬುದ್ದಿ ಹೇಳಿರುತ್ತೇನೆ. ದಿನಾಂಕ:15/07/2021 ರಂದು ಬೆಳಿಗ್ಗೆ ತಾನು ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಹೋದನು ದಿನಾಂಕ:16/07/2021 ರಂದು ಸಂಜೆ ತನ್ನ ಗಂಡ ಪೋನ್ ನಂ 9148308914 ನಿಂದ ಪೊನ್ ಮಾಡಿ ತಾನು ಕೆಲಸಕ್ಕೆ ಬಾಬುರಾವ್ ಬಳಿಯಿದ್ದು ಕೆಲಸವನ್ನು ಮುಗಿಸಿಕೊಂಡು ರಾತ್ರಿಗೆ ಬರುವುದಾಗಿ ತಿಳಿಸಿದನು. ರಾತ್ರಿ 10-00 ಗಂಟೆಯಾದರೂ ತನ್ನ ಗಂಡ ಮನೆಗೆ ಬಂದಿರುವುದಿಲ್ಲ ತಾನು ತನ್ನ ಸಂಬಂದಿಕರಿಗೆಲ್ಲಾ ಪೊನ್ ಮಾಡಿ ವಿಚಾರಿಸಿದ್ದು ಎಲ್ಲಿಗೂ ಬಂದಿರುವುದಿಲ್ಲ, ತಾನು ಎಲ್ಲಾ ಕಡೆಗೆ ಹುಡುಕಾಡಿದ್ದು ಎಲ್ಲಿಯೂ ಪತ್ತೆಯಾಗದ ಕಾರಣ ದೂರು ನೀಡಲು ತಡವಾಗಿರುತ್ತೆ. ತನ್ನ ಗಂಡನ ಚಹರೆ ಗುರುತುಗಳು 1) ಎತ್ತರ-5.7 ಅಡಿಗಳು, 2) ಕೋಲು ಮುಖ, 3) ಗೊದಿ ಮೈಬಣ್ಣ, 4) ದೃಢಕಯ ಶರೀರ ಎಡ ಕೈ ಮೇಲೆ ಅಮ್ಮ ಎಂದು ಅಚ್ಚೆ ಇರುತ್ತೆ. ಮನೆಯಿಂದ ಹೊರಗೆ ಹೋಗುವಾಗ 1) ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್, 2) ಕೆಸರಿ ಬಣ್ಣದ ಅರ್ಧ ತೋಳಿನ ಶರ್ಟ್, ಧರಿಸಿರುತ್ತಾರೆ.  ತನಗೆ ಸುವರ್ಣ ರವರ ಜೊತೆಯಲ್ಲಿ ಹೋಗಿರಬಹುದೆಂದು ಅನುಮಾನ ಇದ್ದು ತನ್ನ ಗಂಡನನ್ನು ಪತ್ತೆ ಮಾಡಿಕೊಡಲು ಕೋರಿ ನೀಡಿದ ದೂರಾಗಿದೆ.

 

4. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.159/2021 ಕಲಂ. 379 ಐ.ಪಿ.ಸಿ:-

     ದಿನಾಂಕ 20/07/2021 ರಂದು ಸಂಜೆ 5-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ. ರಮೇಶ ಬಾಬು ಬಿನ್ ಕೆ.ಎನ್ ಪಾಪಣ್ಣ, 47 ವರ್ಷ, ಬಲಜಿಗರು,  ವ್ಯಾಪಾರ ಮತ್ತು ಅತಿಥಿ ಎಂಟರ್ ಪ್ರೈಸಸ್  ಕ್ರಷರ್ ನ ಮಾಲೀಕರು,       ವಾಸ:ಬ್ರಾಹ್ಮಣರ ಬೀದಿ, ಪೆರೇಸಂದ್ರ ಗ್ರಾಮ, ಚಿಕ್ಕಬಳ್ಳಾಪುರ  ತಾಲ್ಲೂಕು  ರವರು ಠಾಣೆಗೆ ಹಾಜರಾಗಿ  ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು  ಚಿಕ್ಕಬಳ್ಳಾಪುರ ತಾಲ್ಲೂಕು ಮಂಡಿಕಲ್ಲು ಹೋಬಳಿ ಚಿಕ್ಕನಾಗವಲ್ಲಿ ಗ್ರಾಮದ ಸವರ್ೆ ನಂಬರ್ 66/1,66/6,66/7 ರಲ್ಲಿ ಅತಿಥಿ ಎಂಟರ್ ಪ್ರೈಸಸ್  ಕ್ರಷರ್ ನ ಕಾಮಗಾರಿಯನ್ನು   ಸುಮಾರು 03 ವರ್ಷಗಳಿಂದ ಮಾಡುತ್ತಿರುತ್ತೇವೆ.  ಈ ಕ್ರಷರ್ ಗೆ ಬೇಕಾದಂತಹ ಕಬ್ಬಿಣದ ಬಿಡಿ ಬಾಗಗಳನ್ನು  ಈ ಜಮೀನಿನಲ್ಲಿಯೇ ಹಾಕಿದ್ದು, ದಿನಾಂಕ 18/07/2021 ರಂದು ರಾತ್ರಿ ಸುಮಾರು 8-00 ಗಂಟೆ ಸಮಯದಲ್ಲಿ ತಾನು ಕ್ರಷರ್ ಕಾಮಗಾರಿಯನ್ನು  ನೋಡಿಕೊಂಡು ಬರಲು  ಹೋಗಿದ್ದು  ಕ್ರಷರ್ ನಲ್ಲಿ ಆಗಾಗ್ಗೆ ಕೆಲಸಕ್ಕೆ ಬರುತ್ತಿದ್ದ ಆದೆಗಾರಹಳ್ಳಿ ಗ್ರಾಮದ ವಾಸಿ ನಾರಾಯಣಪ್ಪ ರವರು ತನ್ನ ಬಳಿ ಬಂದು ಇದೇ ದಿನ ರಾತ್ರಿ ಸುಮಾರು 7-30 ಗಂಟೆ ಸಮಯದಲ್ಲಿ   ಕ್ರಷರ್ ನಲ್ಲಿ  ಯಾವುದೋ ಒಂದು ಲಗೇಜ್ ಅಫೆ ಆಟೋದಲ್ಲಿ ಕ್ರಷರ್ಗೆ ಬಳಸುವ ಕಬ್ಬಿಣದ ರೋಲರ್, ಗಾರ್ಡರ್ ಗಳು ಮತ್ತು  ಇತರೆ ಕ್ರಷರ್ ನ ಬಿಡಿ ಭಾಗಗಳನ್ನು ತುಂಬಿಸಿಕೊಂಡಿದ್ದು ನಾನು ಬರುತ್ತಿರುವುದನ್ನು  ನೋಡಿ ಆಸಾಮಿಯು ಅಫೇ ಲಗೇಜ್ ಆಟೋವನ್ನು ಚಾಲನೆ ಮಾಡಿಕೊಂಡು ಹೊರಟು ಹೋಗಿದ್ದು, ಅಫೆ ಲಗೇಜ್ ಆಟೋವಿನ ನೊಂದಣೆ ಸಂಖ್ಯೆಯನ್ನು ನೋಡಲಾಗಿ ಕೆ.ಎ-02-ಸಿ-7830 ಆಗಿರುತ್ತೆಂದು ತಿಳಿಸಿರುತ್ತಾರೆ. ತಾನು ಕ್ರಷರ್ ಗೆ ತಂದಿದ್ದ ಕಬ್ಬಿಣದ ಬಿಡಿ ಭಾಗಗಳನ್ನು ಹಾಕಿದ್ದ ಸ್ಥಳದಲ್ಲಿ ಹೋಗಿ ನೋಡಲಾಗಿ ಸುಮಾರು ಒಂದು ಲಕ್ಷ ಬೆಲೆ ಬಾಳುವ ಕಬ್ಬಿಣದ ರೋಲರ್, ಗಾರ್ಡರ್ ಗಳು ಮತ್ತು ಇತರೆ ಕ್ರಷರ್ ನ ಬಿಡಿ ಭಾಗಗಳು ಕಳವು ಆಗಿರುತ್ತೆ.  ತಾನು ತಮ್ಮ ಗ್ರಾಮದ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಹುಡುಕಲಾಗಿ ಪತ್ತೆಯಾಗದ ಕಾರಣ ಈ ದಿನ ಠಾಣೆಗೆ ತಡವಾಗಿ ಹಾಜರಾಗಿ ದೂರು ನೀಡುತ್ತಿದ್ದು ನಮ್ಮ ಕ್ರಷರ್ ನಲ್ಲಿ ಕಬ್ಬಿಣದ ರೋಲರ್, ಗಾರ್ಡರ್ ಗಳು ಮತ್ತು ಇತರೆ ಕ್ರಷರ್ ನ ಬಿಡಿ ಭಾಗಗಳನ್ನು ಕೆ.ಎ-02-ಸಿ-7830 ಅಪೇ ಲಗೇಜ್ ಆಟೋದಲ್ಲಿ  ಕಳವು ಮಾಡಿಕೊಂಡು ಹೋಗಿರುವವರನ್ನು ಪತ್ತೆ ಮಾಡಿ ಕಳ್ಳರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ದೂರು.

 

5. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.123/2021 ಕಲಂ. 87 ಕೆ.ಪಿ ಆಕ್ಟ್:-

      ದಿನಾಂಕ: 20/07/2021 ರಂದು ಸಂಜೆ 6-15 ಗಂಟೆಗೆ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು  ಪಿ.ಸಿ-137 ರವರು ತಂದು ಹಾಜರುಪಡಿಸಿದ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ: 19/07/2021 ರಂದು ಮದ್ಯಾಹ್ನ 2-30 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ತೊಂಡೇಬಾವಿ ಹೋಬಳಿ ರಾಯರೇಖಲಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಹಿಂಭಾಗದಲ್ಲಿ ಯಾರೋ ಕೆಲವರು ಅಂದರ್- ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು ಮತ್ತು ಮಂಚೇನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಪಿ.ಸಿ-483 ರಮೇಶ್ ಬಾಬು, ಪಿ.ಸಿ-311 ಗೂಳಪ್ಪ ನಿಂಗನೂರ್, ಪಿ.ಸಿ-283 ಅರವಿಂದ, ಪಿ.ಸಿ-175 ನವೀನ್ ಕುಮಾರ್, ಪಿ.ಸಿ-336 ಉಮೇಶ್ ಶಿರಶ್ಯಾಡ, ಪಿ.ಸಿ-238 ದಿಲೀಪ್ ಕುಮಾರ್, ಪಿ.ಸಿ-111 ಲೋಕೇಶ್ ಮತ್ತು ಜೀಪು ಚಾಲಕ ಎ.ಪಿ.ಸಿ-120 ನಟೇಶ್ ರವರು ಮತ್ತು ಪಂಚರೊಂದಿಗೆ ಸರ್ಕಾರಿ ಜೀಪು ಸಂಖ್ಯೆ ಕೆ.ಎ-40, ಜಿ-395 ರಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಮದ್ಯಾಹ್ನ 3-00 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಪಂಚರು ಮತ್ತು ನಾವು ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಂದರ್ ಗೆ 200/- ರೂ.ಗಳು, ಬಾಹರ್ ಗೆ 200/- ರೂ.ಗಳು ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿಯವರನ್ನು ನಾವು ಸುತ್ತುವರೆದು ಜೂಜಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆ ನೀಡಿದ್ದು, ಸ್ಥಳದಲ್ಲಿದ್ದವರನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1] ರಮೇಶ್ ಬಿನ್ ಪುಟ್ಟೇಗೌಡ, 48 ವರ್ಷ, ಸಾದರ ಗೌಡ ಜನಾಂಗ, ಸೊಸೈಟಿಯಲ್ಲಿ ಕೆಲಸ, ರಾಯರೇಖಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 2] ಶ್ರೀನಿವಾಸ ಬಿನ್ ರಾಮಯ್ಯ, 52 ವರ್ಷ, ಸಾದರಗೌಡ ಜನಾಂಗ, ಜಿರಾಯ್ತಿ, ರಾಯರೇಖಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 3] ಸೋಮಶೇಖರ್ ಬಿನ್ ಜಯರಾಮ, 40 ವರ್ಷ, ಸಾದರಗೌಡ ಜನಾಂಗ, ಜಿರಾಯ್ತಿ, ರಾಯರೇಖಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 4] ಅಪೀಸ್ ಖಾನ್ ಬಿನ್ ತಾಜ್ ಪೀರ್ ಖಾನ್, 23 ವರ್ಷ, ಮುಸ್ಲೀಂ ಜನಾಂಗ, ಗಾರೆಕೆಲಸ, ಅಲಕಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು 5] ಸುಬಾನಿ ಬಿನ್ ಶೇಕ್ ಅಬ್ದುಲ್ಲಾ, 26 ವರ್ಷ, ಮುಸ್ಲೀಂ ಜನಾಂಗ, ಕೂಲಿಕೆಲಸ, ಅಲಕಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು, 6] ನಾಗಪ್ಪ ಬಿನ್ ವೆಂಕಟರಾಯಪ್ಪ, 54 ವರ್ಷ, ವಕ್ಕಲಿಗರು, ಜಿರಾಯ್ತಿ, ಗಿಡಗಾನಹಳ್ಳೀ ಗ್ರಾಮ, ಗೌರಿಬಿದನೂರು ತಾಲ್ಲೂಕು, 7] ರಾಮಕೃಷ್ಣ ಬಿನ್ ಗಂಗಪ್ಪ, 40 ವರ್ಷ, ಪರಿಶಿಷ್ಟ ಜಾತಿ, ಜಿರಾಯ್ತಿ, ರಾಯರೇಖಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 8] ಅಶ್ವಥಪ್ಪ ಬಿನ್ ನಂಜುಂಡಪ್ಪ, 40 ವರ್ಷ, ಸಾದರಗೌಡ ಜನಾಂಗ, ಜಿರಾಯ್ತಿ, ರಾಯರೇಖಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, ಎಂದುತಿಳಿಸಿದ್ದು, ಎಲ್ಲರನ್ನೂ ಸಹಾ ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಸೇರಿಕೊಂಡು ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದ್ದು, ನಂತರ ಪಂಚನಾಮೆ ಮೂಲಕ ಸ್ಥಳದಲ್ಲಿ ದೊರೆತ 27,150/- ರೂ.ಗಳು [ಇಪ್ಪತ್ತೇಳು ಸಾವಿರದ ನೂರಾ ಐವತ್ತು ರೂಪಾಯಿಗಳು] ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಪೇಪರ್ ನ್ನು ಮದ್ಯಾಹ್ನ 3-00 ಗಂಟೆಯಿಂದ 4-00 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡು ಮೇಲ್ಕಂಡ ಮಾಲನ್ನು ವಶಪಡಿಕಸಿಕೊಂಡು ಮಾಲು, ಮಹಜರ್ ಮತ್ತು ಆರೋಪಿತರೊಂದಿಗೆ ಸಾಯಂಕಾಲ 4-30 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಆರೋಪಿತರ ಮೇಲೆ ಮುಂದಿನ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಲು ಸ್ವತಃ ಠಾಣಾ ಎನ್.ಸಿ.ಆರ್ ನಂ-200/2021 ರಂತೆ ದಾಖಲಿಸಿಕೊಂಡಿರುತ್ತದೆ.

 

6. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.124/2021 ಕಲಂ. 32,34 ಕೆ.ಇ ಆಕ್ಟ್:-

     ಘನ ನ್ಯಾಯಾಲಯದಲ್ಲಿ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಎಸ್.ಐ. ಲಕ್ಷ್ಮೀನಾರಾಯಣ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ: 21-07-2021   ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ನಾನು ಸಿಬ್ಬಂದಿಯವರಾದ ಪಿ.ಸಿ-483 ರಮೇಶ ಬಾಬು, ಪಿ.ಸಿ-283 ಅರವಿಂದರವರುಗಳು ಠಾಣೆಯ ಜೀಪ್ ನಂ ಕೆ.ಎ-40 ಜಿ-395 ರಲ್ಲಿ ಬಕ್ರಿದ್ ಹಬ್ಬದ ಪ್ರಯುಕ್ತ ಗುಯ್ಯಲಹಳ್ಳಿ, ಕಾಮಗಾನಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡುತ್ತಿದ್ದಾಗ ನನಗೆ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಸಾದೇನಹಳ್ಳಿ ಗ್ರಾಮದ ಕೃಷ್ಣಪ್ಪ ಬಿನ್ ಕದಿರಪ್ಪ, 32 ವರ್ಷ, ಪ.ಜಾತಿ ರವರು ಅವರ ಚಿಲ್ಲರೆ ಅಂಗಡಿಯಲ್ಲಿ ಯಾವುದೇ ಲೈಸೆನ್ಸ್ ಇಲ್ಲದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಮಾರಾಟ ಮಾಡುವ ಸಲುವಾಗಿ ಮಂಚೇನಹಳ್ಳಿ ಗ್ರಾಮದ ಕಡೆಯಿಂದ ದ್ವಿಚಕ್ರವಾಹನದಲ್ಲಿ ಮದ್ಯವನ್ನು ತೆಗೆದುಕೊಂಡು ಬರುತ್ತಿರುವುದಾಗಿ ಮಾಹಿತಿ ಬಂದಿದ್ದು, ದಾಳಿ ಮಾಡಲು ಸಿಬ್ಬಂದಿಯವರೊಂದಿಗೆ ಪಂಚರನ್ನು ಕರೆದುಕೊಂಡು ಮದ್ಯಾಹ್ನ 12-00 ಗಂಟೆ ಸಮಯದಲ್ಲಿ ನಾನು ಅದ್ದೆಕೊಪ್ಪ ಗ್ರಾಮದ ಸರ್ಕಾರಿ ಶಾಲೆಯ ಬಳಿ  ರಸ್ತೆಯಲ್ಲಿ ಬರುತ್ತಿರುವಾಗ ನಮ್ಮ ಎದುರಿಗೆ ಒಬ್ಬ ಆಸಾಮಿ ದ್ವಿ ಚಕ್ರವಾಹನದಲ್ಲಿ ಮುಂಭಾಗ ಒಂದು ಪ್ಲಾಸ್ಟಿಕ್ ಚೀಲವನ್ನು ಇಟ್ಟುಕೊಂಡು ಬರುತ್ತಿದ್ದು. ನಮ್ಮ ಪೊಲೀಸ್ ಜೀಪನ್ನು ನೋಡಿ ಸದರಿ ಆಸಾಮಿ ತನ್ನ ದ್ವಿಚಕ್ರವಾಹನವನ್ನು ಪ್ಲಾಸ್ಟಿಕ್ ಚೀಲದ ಸಮೇತ ಬಿಟ್ಟು ಓಡಿ ಹೋದನು. ನಾನು ಸಿಬ್ಬಂದಿ ಹಾಗೂ ಪಂಚರೊಂದಿಗೆ ದ್ವಿಚಕ್ರವಾಹನ ಮತ್ತು ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ ಕೆಎ-40, ಎಸ್ - 9121 ನೊಂದಣಿ ಸಂಖ್ಯೆ ಇರುವ ನೀಲಿ ಬಣ್ಣದ ಟಿ.ವಿ.ಎಸ್. ಕಂಪನಿಯ ಸ್ವಾರ್ ಸಿಟಿ ದ್ವಿಚಕ್ರವಾಹನವಾಗಿದ್ದು. ನಂತರ ಪ್ಲಾಸ್ಟಿಕ್ ಚೀಲವನ್ನು ಬಿಚ್ಚಿ ಪರಿಶೀಲಿಸಲಾಗಿ ಅದರಲ್ಲಿ 03 ಕಾಟನ್ ಬಾಕ್ಸ್ ಗಳಿದ್ದು, ಕಾಟನ್ ಬಾಕ್ಸ್ ಗಳನ್ನು ಒಂದೊಂದನ್ನು ತೆಗೆದು ಪರಿಶೀಲಿಸಲಾಗಿ 02 ಬಾಕ್ಸ್ ಗಳಲ್ಲಿ 90 ML ಸಾಮರ್ಥ್ಯದ HAYWARDS CHEERS WHISKY ಯ ಒಟ್ಟು 96 + 96 = 192 ಮದ್ಯದ ಟೆಟ್ರಾ ಪ್ಯಾಕೇಟ್ ಗಳಿದ್ದು, ಪ್ರತಿ ಪ್ಯಾಕೇಟಿನ ಮೇಲೆ 35.13  ರೂಗಳೆಂದು ಇದ್ದು, ಇವುಗಳ ಒಟ್ಟು ಬೆಲೆ ಸುಮಾರು 6744.96/-ರೂಗಳಾಗಿರುತ್ತೆ. ಮತ್ತೊಂದು ಬಾಕ್ಸ್ ನಲ್ಲಿ 180 ML ಸಾಮರ್ಥ್ಯದ OLD TAVERN WHISKY ಯ ಒಟ್ಟು 32 ಮದ್ಯದ ಟೆಟ್ರಾ ಪ್ಯಾಕೇಟ್ ಗಳಿದ್ದು, ಪ್ರತಿ ಪ್ಯಾಕೇಟಿನ ಮೇಲೆ 86.75 ರೂಗಳೆಂದು ಇದ್ದು, ಇವುಗಳ ಒಟ್ಟು ಬೆಲೆ ಸುಮಾರು 2776/- ರೂಗಳಾಗಿರುತ್ತದೆ. ಎಲ್ಲವೂ ಸೇರಿ ಒಟ್ಟು 23.06 ಲೀಟರ್ ಮದ್ಯ ಇದ್ದು, ಒಟ್ಟು ಬೆಲೆ 9520.96/- ರೂ.ಗಳಾಗಿರುತ್ತೆ. ಮೇಲ್ಕಂಡ ಮದ್ಯವು ಯಾವುದೇ ಲೈಸೆನ್ಸ್ ಇಲ್ಲದೇ ಸಾರ್ವಜನಿಕರಿಗೆ ಅಕ್ರಮವಾಗಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಮದ್ಯವಾಗಿದ್ದರಿಂದ ಆಸಾಮಿ ಸ್ಥಳದಿಂದ ಪರಾರಿಯಾಗಿರುವುದಾಗಿ ಪಂಚರು ದೃಢಪಡಿಸಿದ್ದು, ಓಡಿ ಹೋದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಕೃಷ್ಣಪ್ಪ ಬಿನ್ ಕದಿರಪ್ಪ 32 ವರ್ಷ ಪ.ಜಾತಿ ಚಿಲ್ಲರೆ ಅಂಗಡಿ ವ್ಯಾಪಾರ ಸಾದೇನಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ಮೇಲ್ಕಂಡ 02 ಬಾಕ್ಸ್ ನಲ್ಲಿನ 90 ML ಸಾಮರ್ಥ್ಯದ HAYWARDS CHEERS WHISKY ಯ ಒಟ್ಟು 96 + 96 ಒಟ್ಟು 192 ಮದ್ಯದ ಟೆಟ್ರಾ ಪ್ಯಾಕೇಟ್ ಗಳ ಪೈಕಿ ಒಂದೊಂದು ಬಾಕ್ಸ್ ನಲ್ಲಿ ರಾಸಾಯನಿಕ ತಜ್ಞರ ಪರೀಕ್ಷೆಗೆ ಕಳುಹಿಸುವ ಸಲುವಾಗಿ ತಲಾ 10 ಟೆಟ್ರಾ ಪ್ಯಾಕೇಟ್ ಗಳನ್ನು ತೆಗೆದು ಹಾಗೂ ಮತ್ತೊಂದು ಬಾಕ್ಸ್ ನಲ್ಲಿದ್ದ 180 ML ಸಾಮರ್ಥ್ಯದ OLD TAVERN  WHISKY ಯ ಒಟ್ಟು 32 ಮದ್ಯದ ಟೆಟ್ರಾ ಪ್ಯಾಕೇಟ್ ಗಳ ಪೈಕಿ ರಾಸಾಯನಿಕ ತಜ್ಞರ ಪರೀಕ್ಷೆಗೆ ಕಳುಹಿಸುವ ಸಲುವಾಗಿ 05 ಟೆಟ್ರಾ ಪ್ಯಾಕೇಟ್ ಗಳನ್ನು ತೆಗೆದು ಪ್ರತ್ಯೇಕವಾಗಿ ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಮೂತಿಯನ್ನು ದಾರದಿಂದ ಕಟ್ಟಿ ಅರಗು ಮಾಡಿ P ಎಂಬ ಇಂಗ್ಲೀಷ್ ಅಕ್ಷರ ದಿಂದ ಸೀಲು ಮಾಡಿ ರಾಸಾಯನಿಕ ತಜ್ಞರ ಪರೀಕ್ಷೆಗೆ ಶೇಖರಿಸಿರುತ್ತದೆ.  ಸ್ಥಳದಲ್ಲಿ ದೊರೆತ ಮಧ್ಯವನ್ನು ಹಾಗೂ ಮೇಲ್ಕಂಡ ಕೆ.ಎ-40, ಎಸ್-9121 ದ್ವಿಚಕ್ರವಾಹನವನ್ನು ಪಂಚರ ಸಮಕ್ಷಮ ಮದ್ಯಾಹ್ನ 12-30 ಗಂಟೆಯಿಂದ 13-45 ಗಂಟೆಯವರೆಗೆ ಪಂಚನಾಮೆಯ ಕ್ರಮಗಳನ್ನು ಜರುಗಿಸಿ ಅಮಾನತ್ತು ಪಡಿಸಿಕೊಂಡಿದ್ದು, ಮೇಲ್ಕಂಡ ಮದ್ಯ ಹಾಗೂ ದ್ವಿಚಕ್ರ ವಾಹನನೊಂದಿಗೆ ಮದ್ಯಾಹ್ನ 14-30 ಗಂಟೆಗೆ ಠಾಣೆಗೆ ವಾಪಸ್ ಬಂದು ತಪ್ಪಿಸಿಕೊಂಡು ಓಡಿ ಹೋದ ಆಸಾಮಿ ಕೃಷ್ಣಪ್ಪರವರ ವಿರುದ್ದ ಠಾಣಾ ಮೊ.ಸಂ – 124/2021 ಕಲಂ 32,34 ಕೆ.ಇ.ಆಕ್ಟ್ ರೀತ್ಯಾ ನಾನೇ ಸ್ವತಃ ಪ್ರಕರಣವನ್ನು ದಾಖಲಿಸಿರುತ್ತೇನೆ.

 

7. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.70/2021 ಕಲಂ. 87 ಕೆ.ಪಿ ಆಕ್ಟ್:-

      ದಿನಾಂಕ:20-07-2021 ರಂದು ಸಂಜೆ 17-00 ಗಂಟೆಗೆ ನ್ಯಾಯಾಲಯ ಕರ್ತವ್ಯದ ಸಿಬ್ಬಂದಿ ಪಿಸಿ-174 ರವರು NCR NO. 101/2021  ರಲ್ಲಿ ಘನ ನ್ಯಾಯಾಲಯದ ಅನುಮತಿಯನ್ನು ಆದೇಶವನ್ನು ಪಡೆದುಕೊಂಡು ಬಂದು ಹಾಜರುಪಡಿಸಿದ್ದು, ದಾಖಲಿಸಿದ ಪ್ರಕರಣದ ಸಾರಾಂಶವೇನೆಂದರೆ, ದಿನಾಂಕ:19-07-2021 ರಂದು ಸಂಜೆ 5-45 ಗಂಟೆಯಲ್ಲಿ PSI ರವರು ಪಾತಪಾಳ್ಯ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಪಾತಪಾಳ್ಯ ಗ್ರಾಮದ ಗ್ರಾಮದ ಸರ್ಕಾರಿ ಶಾಲೆಯ ಹಿಂಭಾಗದಲ್ಲಿರುವ ಹೊಂಗೆ ಮರದ ಕೆಳಗೆ ಯಾರೋ ಕೆಲವರು ಹಣವನ್ನು ಪಣವನ್ನಾಗಿಟ್ಟುಕೊಂಡು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರಾದ ಸಿ.ಹೆಚ್.ಸಿ-250, ಹೆಚ್.ಸಿ-183, ಸಿಪಿಸಿ-234, ಸಿಪಿಸಿ-324, ಸಿಪಿಸಿ-321, ಸಿಪಿಸಿ-584, ಸಿಪಿಸಿ-436 & ಪಂಚರೊಂದಿಗೆ KA-40-G-59 ಜೀಪಿನಲ್ಲಿ ಚಾಲಕ APC-98 ಶ್ರೀನಾಥರವರೊಂದಿಗೆ ಮೇಲ್ಕಂಡ ಸ್ಥಳದಿಂದ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು 100 ರೂ ಅಂದರ್, 100 ರೂ ಬಾಹರ್ ಎಂದು ಕೂಗಿಕೊಂಡು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದು, ಸುತ್ತುವರೆದು ಜೂಜಾಟ ಆಡುತ್ತಿದ್ದವರನ್ನು ಎಲ್ಲಿಯೂ ಕದಲಬೇಡಿ ಎಂದು ಎಚ್ಚರಿಕೆ ನೀಡಿ ವಶಕ್ಕೆ ಪಡೆದು ಹೆಸರು ಮತ್ತು ವಿಳಾಸ ಕೇಳಲಾಗಿ 1) ಮಹಮದ್ ರಫಿಕ್ ಬಿನ್ ಸಮದ್, 35 ವರ್ಷ, ಮುಸ್ಲಿಂ ಜನಾಂಗ, ಚಾಲಕ, 1ನೇ ಬ್ಲಾಕ್, ಪಾತಪಾಳ್ಯ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, 2)ಲಾಜಿಂ ಉಲ್ಲಾ ಬಿನ್ ಅಲ್ಲಾಬಕಾಶ್, 30 ವರ್ಷ,  ಮುಸ್ಲಿಂ ಜನಾಂಗ, ಚಾಲಕ, 2ನೇ ಬ್ಲಾಕ್, ಪಾತಪಾಳ್ಯ ಗ್ರಾಮ, ಬಾಗೇಪಲ್ಲಿ ತಾಲ್ಲೂಕು,3) ಅನ್ಸರ್ ಪಾಷಾ ಬಿನ್ ರಿಯಾಜ್ ಉಲ್ಲಾ, 22 ವರ್ಷ, ಮುಸ್ಲಿಂ ಜನಾಂಗ, ಪೈಯಿಂಟಿಂಗ್ ಕೆಲಸ, 2ನೇ ಬ್ಲಾಕ್, ಪಾತಪಾಳ್ಯ ಗ್ರಾಮ, ಬಾಗೇಪಲ್ಲಿ ತಾಲ್ಲೂಕು,4) ಇಲಿಯಾಜ್ ಬಿನ್ ಅಮಾನುಲ್ಲಾ, 29 ವರ್ಷ, ಚಾಲಕ, 1ನೇ ಬ್ಲಾಕ್, ಪಾತಪಾಳ್ಯ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, 5)ಇರ್ಷಾದ್ ಬಿನ್ ಅಬ್ದುಲ್ ಸಮದ್, 29 ವರ್ಷ, ಚಾಲಕ ವೃತ್ತಿ, 2ನೇ ವಾರ್ಡ್, ಪಾತಪಾಳ್ಯ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಸಿಕ್ಕಿಬಿದ್ದಿದ್ದ ಐವರನ್ನು ವಶಕ್ಕೆ ಪಡೆದು ಪಣಕ್ಕಿಟ್ಟಿದ್ದ  2,800/- ರೂ ನಗದು ಹಣ, ಒಂದು ಹಳೆಯ ಪ್ಲಾಸ್ಟಿಕ್ ಪೇಪರ್ ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಸಂಜೆ 6-00 ರಿಂದ 6-45 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಗಳು, ಪಂಚನಾಮೆ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

Last Updated: 21-07-2021 05:05 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080