ಅಭಿಪ್ರಾಯ / ಸಲಹೆಗಳು

 

1. ಚೇಳೂರು ಪೊಲೀಸ್ ಠಾಣೆ ಮೊ.ಸಂ.61/2021 ಕಲಂ. 279,304(A) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ:20/06/2021 ರಂದು ಸಂಜೆ 6:00 ಗಂಟೆಗೆ  ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ ಗಣಕಯಂತ್ರ ಮುದ್ರಿತ ದೂರಿನ ಸಾರಾಂಶವೇನೆಂದರೆ ನಾನು ಈ ಮೇಲ್ಕಂಡ ವಿಳಾಸದಲ್ಲಿ ಕೂಲಿ  ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇವೆ, ನಮಗೆ ನಾಲ್ಕು ಜನರು ಮಕ್ಕಳಿದ್ದು ಎಲ್ಲಾ ಮಕ್ಕಳಿಗೂ ಮದುವೆಯಾಗಿರುತ್ತೆ, ಇತ್ತೀಚೆಗೆ ಒಂದು ವಾರದ ಹಿಂದೆ ಕೂಲಿ ಕೆಲಸದ ನಿಮಿತ್ತ  ನಾನು ಮತ್ತು  ನನ್ನ ಗಂಡ ರಾಮಚಂದ್ರಪ್ಪ ಬಿನ್ ಲೇಟ್ ವೆಂಕಟಪ್ಪ, 60 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ, ಊದುವಾರಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ಕೋಲಾರದ  ಶ್ರೀನಿವಾಸಪುರದಲ್ಲಿನ  ಮಾವಿನ ಕಾಯಿ ಮಂಡಿಗಳಲ್ಲಿ ಕೂಲಿ ಕೆಲಸಕ್ಕೆಂದು ಹೋಗಿದ್ದು ಕೂಲಿ ಕೆಲಸ ಮಾಡಿಕೊಂಡು ಅಲ್ಲಿಯೇ ಇರುತ್ತಿದ್ದೆವು, ದಿನಾಂಕ:19/06/2021 ರಂದು ಸಂಜೆ ನನ್ನ ಗಂಡ ಮಾವಿನ ಕಾಯಿಗಳನ್ನು ತೆಗೆದುಕೊಂಡು ನಮ್ಮ  ಊದುವಾರಪಲ್ಲಿ ಗ್ರಾಮದಲ್ಲಿರುವ ನಮ್ಮ ಮಕ್ಕಳಿಗೆ ಕೊಟ್ಟು ನನ್ನ ಟಿವಿಎಸ್ ಎಕ್ಸ್ ಎಲ್ ಹೆವಿ ಡ್ಯೂಟಿ ವಾಹನವನ್ನು ತೆಗೆದುಕೊಂಡು ವಾಪಸ್ಸು ಬರುತ್ತೇನೆಂದು ಹೇಳಿ ಗ್ರಾಮಕ್ಕೆ ಬಂದಿದ್ದು , ದಿನಾಂಕ:20/06/2021 ರಂದು ಮದ್ಯಾಹ್ನ 12:00 ಗಂಟೆ  ಸುಮಾರಿನಲ್ಲಿ ನನ್ನ ಮಗಳಾದ ನೇತ್ರ ರವರು ಶ್ರೀನಿವಾಸಪುರ ದಲ್ಲಿ ನಮ್ಮ ಜೊತೆಯಲ್ಲಿ ಕೂಲಿ ಕೆಲಸಕ್ಕೆಂದು ಬಂದಿದ್ದ ರಮಣ ರವರಿಗೆ ಫೋನ್ ಮಾಡಿ ಅಪ್ಪನಿಗೆ ಈ ದಿನ 11:30 ಗಂಟೆ ಸುಮಾರಿನಲ್ಲಿ  ಪುಲಿಗಲ್ ಕ್ರಾಸ್ ನ STMB ಹೋಟಲ್ ಬಳಿ ರಸ್ತೆಯಲ್ಲಿ ತನ್ನ ಕೆಎ 40 ಜೆ 2495 ಎಕ್ಸ್ ಎಲ್ ಸೂಪರ್ ಹೆವಿಡ್ಯೂಟಿ  ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ  ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದು ಹೋಗಿರುವ ಪರಿಣಾಮ  ಅಪಘಾತವಾಗಿ  ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದು ಯಾರೋ ಸಾರ್ವಜನಿಕರು ಆಸ್ಪತ್ರೆಗೆ ಕಳುಹಿಸುವ ಸಲುವಾಗಿ 108 ಆಂಬುಲೆನ್ಸ್ ಗೆ ಕರೆ ಮಾಡಿ ಕಳುಹಿಸಿರುತ್ತಾರೆ, ನಂತರ ನಮಗೆ ನಮ್ಮ ಗ್ರಾಮದ ವಾಸಿ ಕೃಷ್ಣಪ್ಪ ರವರು ಫೋನ್ ಮಾಡಿ ವಿಷಯ ತಿಳಿಸಿದಾಗ ನಮಗೆ ವಿಷಯ ತಿಳಿದಿರುತ್ತೆ. ನಾವುಗಳು ಅಪ್ಪನನ್ನು  ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು  ಅಲ್ಲಿನ ವೈದ್ಯರ ಶಿಫಾರಸ್ಸಿನ ಮೇರೆಗೆ  ಹೆಚ್ಚಿನ ಚಿಕಿತ್ಸೆಯ ಸಲುವಾಗಿ  ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂದು ಹೇಳಿದಳು ನನ್ನ ಗಂಡ ರಾಮಚಂದ್ರಪ್ಪ ರವರು ದಿನಾಂಕ:20/06/2021 ರಂದು ಬೆಳಗ್ಗೆ 11:30 ಗಂಟೆ ಸುಮಾರಿನಲ್ಲಿ ತನ್ನ ಬಾಬತ್ತು  ಕೆಎ- 40- ಜೆ 2495  ಎಕ್ಸ್ ಎಲ್ ಸೂಪರ್ ಹೆವಿಡ್ಯೂಟಿ  ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಯಾವುದೋ ಅಪರಿಚಿತ ವಾಹನ ಅತಿ ವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದು ಅಪಘಾತಪಡಿಸಿ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುವವನ ಹಾಗೂ ಈ ಮೂಲಕ ನನ್ನ ಗಂಡನ ಸಾವಿಗೆ ಕಾರಣವಾಗಿರುವವನ  ವಿರುದ್ದ ಕಾನೂನು  ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊಸಂ:61/2021 ಕಲಂ 279,304(ಎ) ಐಪಿಸಿ, 187 ಐಎಮ್ ವಿ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.

 

2. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.46/2021 ಕಲಂ. 323,326,504,506 ಐ.ಪಿ.ಸಿ :-

          ದಿನಾಂಕ; 20-06-2021 ರಂದು ಮದ್ಯರಾತ್ರಿ 12-55 ಗಂಟೆಗೆ  ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ವೈದ್ಯಾಧಿಕಾರಿಗಳು ರವಾನಿಸಿರುವ ಮೆಮೋವನ್ನು ರಾತ್ರಿ ಠಾಣಾ ಪ್ರಭಾರದಲ್ಲಿದ್ದ ಎ.ಎಸ್.ಐ ಕೃಷ್ಣಪ್ಪ ರವರು ಸ್ವೀಕರಿಸಿ ನಂತರ ಆಸ್ಪತ್ರೆಗೆ ಬೇಟಿ ನೀಡಿ ವೈದ್ಯರ ಸಮಕ್ಷಮ ಗಾಯಾಳು ಶ್ರೀನಿವಾಸ ಸಿ.ಪಿ.ಸಿ-08 ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ವಾಸ: ಬಾಪೂಜಿ ನಗರ, ಚಿಕ್ಕಬಳ್ಳಾಪುರ ನಗರ,  ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ತಾನು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಒಂದು ವರ್ಷ ಆರು ತಿಂಗಳಿಂದ  ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ; 19-06-2021 ರಂದು ರಾತ್ರಿ 10.00 ಗಂಟೆ ಸಮಯದಲ್ಲಿ ವಿನಾಕಾರಣ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ಮಾಡುತ್ತಿದ್ದ ತನ್ನ ಸಹೋದ್ಯೋಗಿ ಸಿ.ಪಿ.ಸಿ-88 ರಮೇಶ್ ಅವರು ತನ್ನ ಮನೆಗೆ ಊಟ ಮಾಡು ಬಾ ಎಂದು ಕರೆದು ಊಟ ಮಾಡುವ ಸಮಯದಲ್ಲಿ ವಿನಾಕಾರಣ ಜಗಳ ತೆಗೆದು ತನ್ನ ಮೇಲೆ ಹಲ್ಲೆ ಮಾಡಿ ಮನೆಯಲ್ಲಿದ್ದ ಹಿಡಿಗಾತ್ರದ ಡಂಬಲ್ಸ್(ಸ್ಟೀಲ್) ನಲ್ಲಿ ತನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ತನ್ನ ತಲೆಗೆ ಒಟ್ಟು 16 ಹೊಲಿಗೆಗಳು ಬಿದ್ದಿದ್ದು, ರಕ್ತ ಸ್ರಾವವಾಗಿದ್ದು, ತಡೆಯಲಾರದೇ ತನ್ನ ಮನೆಯ ಹತ್ತಿರ ಇದ್ದ ನಂದು ರವರನ್ನು ಕರೆದುಕೊಂಡು ಇವರ ಮುಖಾಂತರ ಜಿಲ್ಲಾಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದಿದ್ದು, ತನಗೆ ಎಡಗಣ್ಣಿನ ಹುಬ್ಬಿನ ಮೇಲೆ ಬಲವಾದ ಪೆಟ್ಟು ಬಿದ್ದಿರುತ್ತದೆ. ಬಾಯಿಗೂ ಮತ್ತು ಎಡ ಕೆನ್ನೆಯ ಮೇಲೆ ಮೂಗೇಟು ಬಿದ್ದಿದ್ದು, ತನ್ನ ಎದೆಗೂ ಸ್ಟೀಲ್ ಡಂಬಲ್ಸ್ ನಿಂದ ಹೊಡೆದಿರುತ್ತಾನೆ. ತನಗೆ ಬಲವಾದ ಏಟುಗಳು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತನಗೆ ಮೂಗಿಗೂ ಕೂಡ ಏಟು ಬಿದ್ದಿರುತ್ತದೆ. ತನ್ನನ್ನು ಅವಾಚ್ಯ ಶಬ್ದಗಳಿಂದ ಬೈದು ಉದ್ದೇಶ ಪೂರ್ವಕವಾಗಿ “ನನ್ನ ಹೆಂಡತಿಯನ್ನೆ ಕೊಲ್ಲಲು ಹೋದ ನನ್ನ ಮಗ ನೀನು ಯಾವ ಮಾತು ನಿನ್ನನ್ನು ಮುಗಿಸಿ ಬಿಡುತ್ತೇನೆ ನೀನು ಇಲ್ಲಿಂದ ಹೋದರೂ ಸಹ ನಿನ್ನ ಮನೆಯ ಹತ್ತಿರ ಬಂದು ಕೊಲ್ಲುತ್ತೇನೆ. ಎಂದು ಬೆದರಿಕೆ ಹಾಕಿರುತ್ತಾನೆ. ಆದ್ದರಿಂದ ಸಿ.ಪಿ.ಸಿ-88 ಶ್ರೀ ರಮೇಶ್ ರವರ ವಿರುದ್ದ ಕಾನೂನು ರೀತ್ಯಾ ಕ್ರಮ  ಜರುಗಿಸಬೇಕೆಂದು ಕೋರಿ ನೀಡಿದ ಹೇಳಿಕೆಯ ದೂರಿನ ಮೇರೆಗೆ ಠಾಣೆಗೆ ವಾಪಸ್ಸು ಬಂದು ವರದಿ ಮಾಡಿದ್ದು,ಮೇಲಾಧಿಕಾರಿಗಳಿಗೆ ಮಾಹಿತಿಯನ್ನು ತಿಳಿಸಿ  ಅನುಮತಿಯನ್ನು ಪಡೆದುಕೊಂಡು ಈ ದಿನ ಬೆಳಗ್ಗೆ 11.00 ಗಂಟೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

3. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.47/2021 ಕಲಂ. 379 ಐ.ಪಿ.ಸಿ :-

          ದಿನಾಂಕ:20/06/2021 ರಂದು ಮದ್ಯಾಹ್ನ 2.30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ತಾನು ಈ ಹಿಂದೆ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ಮತ್ತು ಮಾನ್ಯ ಅರಕ್ಷಕ ಆಧಿಕ್ಷಕರು ಚಿಕ್ಕಬಳ್ಳಾಪುರ ಜಿಲ್ಲೆ ರವರಿಗೆ ದೂರು ಅರ್ಜಿಯನ್ನು ಸಲ್ಲಿಸಿಕೊಂಡಿದ್ದು ಸದರಿ ದೂರಿನ ಸಂಬಂಧ ತಮಗೆ ನಗರ ಠಾಣೆಯವರು ನಿಮ್ಮ ದೂರಿನಲ್ಲಿ ದೂರು ದಾಖಲಿಸಲು ತಮ್ಮ ಮಾಹಿತಿಯು ಆಪೂರ್ಣವಾಗಿದ್ದು ಗಣಕಯಂತ್ರದಲ್ಲಿ ಪ್ರ.ವ.ವರದಿಯನ್ನು ದಾಖಲಿಸಲು ನಮೋದಿಸಲೇಬೇಕಾದ ಕೆಲವು ಅಂಶಗಳು ಬೇಕಾಗಿದ್ದು ತಾವು ಅಂಚೆ ಮೂಲಕ ಕಳುಹಿಸಿದ ದೂರಿನಲ್ಲಿ ಅ ಮಾಹಿತಿಯು ಇಲ್ಲವಾದುದರಿಂದ ಪೂರ್ಣ ಮಾಹಿತಿಯನ್ನು ಠಾಣೆಗೆ ಬಂದು ಒದಗಿಸುವಂತೆ ತನಗೆ ನಗರ ಠಾಣೆಯವರು ಪೊಲೀಸ್ ನೋಟಿಸ್ ಜಾರಿ ಮಾಡಿದರು ಅದರಂತೆ ತಾನು ಈ ದಿನ ದಿನಾಂಕ :20/06/2021 ರಂದು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ಬಂದು ಸಂಪೂರ್ಣ ಮಾಹಿತಿಯೊಂದಿಗೆ ಈ ದಿನ ದೂರನ್ನು ನೀಡುತ್ತಿದ್ದು ಸದರಿ ದೂರಿನ ಸರಾಂಶವೇನೆಂದರೆ ತಮ್ಮ ತಾಯಿ ಜಯಮ್ಮ ರವರಿಗೆ ಕೋವಿಡ್ ಖಾಯಿಲೆ ಬಂದು ಆಸ್ವಸ್ಥರಾಗಿದ್ದುರಿಂದ ದಿನಾಂಕ:07/05/2021 ರಂದು ಚಿಕ್ಕಬಳ್ಳಾಪುರ ನಗರದ ಹಳೇ ಅಸ್ಪತ್ರಗೆ ಚಿಕಿತ್ಸೆಗಾಗಿ ದಾಖಲಿಸಿದ್ದು ಅಂದಿನಿಂದ ದಿನಾಂಕ:12/05/2021 ರವರೆವಿಗೂ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ದಿನಾಂಕ:13/05/2021 ಮದ್ಯಾಹ್ನ 3.30 ಗಂಟೆಗೆ ಅಸ್ಪತ್ರೆಯ ಸಿಬ್ಬಂದಿಯವರು ಕರೆ ಮಾಡಿ ನಿಮ್ಮ ತಾಯಿ ಜಯಮ್ಮ ರವರು ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಎಂದು ತಿಳಿಸಿದರು. ತಾನು ಮರುದಿವಸ ಬೆಳಗ್ಗೆ ಬಂದು ಮೃತದೇಹವನ್ನು ಪಡೆಯುವುದಾಗಿ ತಿಳಿಸಿದ್ದು. ದಿನಾಂಕ: 14/05/2021 ರಂದು ಬೆಳಗ್ಗೆ 10.30 ಗಂಟೆಗೆ ತಾನು ಅಸ್ಪತ್ರಗೆ ಬಳಿ ಬಂದಾಗ ತಮ್ಮ ತಾಯಿಯ ಮೃತದೇಹವನ್ನು ಸಿಬ್ಬಂದಿಯು ನೀಡಿದ್ದು ಮೃತದೇಹವನ್ನು ಪಡೆದು ನೋಡಲಾಗಿ ತಮ್ಮ ತಾಯಿಯ ಮೈ ಮೇಲೆಯಿದ್ದಂತಹ  ಚಿನ್ನದ ತಾಳಿ, ಕತ್ತಿನ ಮಾಂಗಲ್ಯ ಸರ, ಕಿವಿಯ ಓಲೆ, ಚಿನ್ನದ ಬಳೆ, ಬೆಳ್ಳಿಕಾಲುಂಗರ ಹಾಗೂ ನೋಕಿಯ ಮೊಬೈಲ್ ಸುಮಾರು 60 ಗ್ರಾಂ ತೂಕದ ಚಿನ್ನದ ಒಡವೆಗಳು ಇರಲಿಲ್ಲವಾದುದರಿಂದ ಅಸ್ಪತ್ರೆಯ ಸಿಬ್ಬಂದಿಯವರಿಗೆ ತಾನು ಕೇಳಿದಾಗ ತಮ್ಮ ತಾಯಿಯ ಮೈಮೇಲೆ ಯಾವುದೇ ಒಡವೆಗಳು ಇರುವುದಿಲ್ಲ ಎಂದು ಹೇಳಿರುತ್ತಾರೆ. ನಂತರ ವ್ಶೆದ್ಯರಿಗೆ ಕೇಳಿದಾಗ ಅದರ ಬಗ್ಗೆ ನಮಗೆ ಸಂಬಂದವಿಲ್ಲ ನಾವು ಅದಕ್ಕೆ ಜವಬ್ದಾರರಲ್ಲ ಎಂದು ಹೇಳಿರುತ್ತಾರೆ. ಅಸ್ಪತ್ರೆಯ ಸಿಬ್ಬಂದಿಯವರಿಗೆ ಕೇಳಿದಾಗ ನಾವು ನೋಡಿಲ್ಲ ಎಂದು ಉತ್ತರ ನೀಡಿದ್ದು ತಮ್ಮ ತಾಯಿಯವರ ದಫನ್ ಅಂತ್ಯಕ್ರೀಯೆ ಮಾಡಬೇಕಾಗಿರುವುದರಿಂದ ವೈದ್ಯರಿಗೆ ಮತ್ತು ಸಿಬ್ಬಂದಿಯವರಿಗೆ ತಿಳಿಸಿ  ಹೋಗಿರುತ್ತೇನೆ. ಇಷ್ಟು ದಿವಸವಾದರೂ ತನ್ನ ತಾಯಿಯ ಮೈ ಮೇಲೆಯಿದ್ದ ಓಡವೆಗಳು ಕೊಡದೆಯಿದ್ದರಿಂದ ತಾನು ಅಂಚೆ ಮೂಲಕ ಮೇಲಾಧಿಕಾರಿಗಳಿಗೆ ದೂರನ್ನು ನೀಡಿದ್ದು. ತಮ್ಮ ತಾಯಿ ಶ್ರೀಮತಿ ಜಯಮ್ಮ ರವರ ಮೈಮೇಲೆಯಿದ್ದ ಸುಮಾರು 60 ಗ್ರಾಂ ತೂಕದ ಸುಮಾರು 3.5 ಲಕ್ಷ ಬೆಲೆ ಬಾಳುವ ಚಿನ್ನದ ಓಡವೆಗಳನ್ನು ಕಳವು ಮಾಡಿರುವ ಅಸ್ಪತ್ರೆಯ ಸಿಬ್ಬಂದಿಯವರ ಮೇಲೆ ದೂರನ್ನು ನೀಡಿ ಅರೋಪಿಗಳನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂಖ್ಯೆ:47/2021 ಕಲಂ:379 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿ ಪ್ರ.ವ.ವರದಿಯನ್ನು ಘನ ನ್ಯಾಯಾಲಯಕ್ಕೆ ಮತ್ತು ಮೇಲಾಧಿಕಾರಿಗಳಿಗೆ ನಿವೇದಿಸಿಕೊಂಡಿರುತ್ತೇನೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.280/2021 ಕಲಂ. 323,324,448,504,506 ಐ.ಪಿ.ಸಿ :-

          ದಿನಾಂಕ: 20/06/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀಮತಿ ಲತಾ ಕೋಂ ಶಂಕರಪ್ಪ, 38 ವರ್ಷ, ಲಿಂಗಾಯಿತರು, ಗೃಹಣಿ, ತಿಪ್ಪನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಸಂಜೆ 6.45 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮಗೆ ತಮ್ಮ ಗ್ರಾಮದಲ್ಲಿ  ಜಮೀನಿದ್ದು, ಆ ಜಮೀನಿನಲ್ಲಿ ಎರಡು ಹುಣಸೇಮರಗಳನ್ನು ಬೆಳೆಸಿರುತ್ತೇವೆ. ಹೀಗಿರುವಾಗ ಈ ದಿನ ದಿನಾಂಕ: 20/06/2021 ರಂದು ಬೆಳಿಗ್ಗೆ ತಮ್ಮ ಜಮೀನಿನಲ್ಲಿದ್ದ ಹುಣಸೇಮರಗಳ ಕೊಂಬೆಗಳನ್ನು ಯಾರೋ ಕತ್ತರಿಸುತ್ತಿದ್ದು, ತನ್ನ ಮಾವ ಚಿಕ್ಕ ವೀರಣ್ಣ ರವರು ಅಲ್ಲಿಗೆ ಹೋಗಿ ಏಕೆ ನಮ್ಮ ಹುಣಸೇಮರಗಳ ಕೊಂಬೆಗಳನ್ನು ಕತ್ತರಿಸುತ್ತಿರುವುದು ಎಂದು ಕೇಳಿದ್ದಕ್ಕೆ ಅವರು ನಿಮ್ಮ ಗ್ರಾಮದ ಮಂಜುನಾಥ ಬಿನ್ ಲೇಟ್ ವೀರಭದ್ರಪ್ಪ ರವರು ಹುಣಸೇಮರದ ಕೊಂಬೆಗಳು ರಸ್ತೆಗೆ ಅಡ್ಡವಾಗಿವೆ ಅದನ್ನು ಕತ್ತರಿಸಿ ಎಂದು ಹೇಳಿದ್ದು ನಾವು ಕೂಲಿ ಕೆಲಸಕ್ಕಾಗಿ ಬಂದಿರುತ್ತೇವೆ ಎಂದು ಹೇಳಿರುತ್ತಾರೆ. ನಂತರ ಇದೇ ದಿನ ಮದ್ಯಾಹ್ನ 3.00 ಗಂಟೆ ಸಮಯದಲ್ಲಿ ತಾನು, ತನ್ನ ಅತ್ತೆ ನಾಗಮ್ಮ ಮತ್ತು ತನ್ನ ಮಗ ವಿಜಯ್ ರವರು ತಮ್ಮ ಮನೆಯಲ್ಲಿದ್ದಾಗ ಮೇಲ್ಕಂಡ ತಮ್ಮ ಜನಾಂಗದ ತಮ್ಮ ದಾಯಾಧಿ ಮಂಜುನಾಥ ಬಿನ್ ಲೇಟ್ ವೀರಭದ್ರಪ್ಪ ರವರು ತಮ್ಮ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ, ತನ್ನನ್ನು ಕುರಿತು ನಿಮ್ಮ ಮಾವ ಚಿಕ್ಕವೀರಣ್ಣ ಎಲ್ಲಿ, ಅವನು ನಮ್ಮ ಕೂಲಿಕೆಲಸದವರ ಮೇಲೆ ಗಲಾಟೆ ಮಾಡಿದ್ದಾನೆ ಅವನನ್ನು ಬಿಡುವುದಿಲ್ಲವೆಂದು ಹೇಳಿದ್ದು, ಆಗ ತಾನು ಏಕೆ ವಿನಾ ಕಾರಣ ಗಲಾಟೆ ಮಾಡುತ್ತಿದ್ದೀಯಾ ಎಂದು ಕೇಳಿದ್ದು, ಆಗ ಮಂಜುನಾಥ ರವರು ಏನೇ ಸೂಳೆ ಮುಂಡೆ ನನಗೆ ಎದುರು ಮಾತನಾಡುತ್ತೀಯಾ ಎಂದು ಅವಾಚ್ಯಶಬ್ದಗಳಿಂದ ಬೈದು, ಕೈಗಳಿಂದ ಮೈ ಮೇಲೆ ಹೊಡೆದು ಅತನ ಕೈಯಲ್ಲಿದ್ದ ಮಚ್ಚಿನಿಂದ ತನ್ನ ಬಲಗೈಗೆ ಹೊಡೆದು ರಕ್ತಗಾಯ ಪಡಿಸಿದನು. ಅಷ್ಟರಲ್ಲಿ ತನ್ನ ಮಗ ವಿಜಯ್ ಮತ್ತು ತನ್ನ ಅತ್ತೆ ನಾಗಮ್ಮರವರು ಅಡ್ಡ ಬಂದಿದ್ದು, ಆಗ ಮಂಜುನಾಥ ರವರು ನಾಗಮ್ಮ ರವರಿಗೆ ಕೈಗಳಿಂದ ಮೈ ಮೇಲೆ ಹೊಡೆದು, ವಿಜಯ್ ರವರಿಗೆ ಅದೇ ಮಚ್ಚಿನಿಂದ ಎಡಕಾಲಿಗೆ ಮತ್ತು ಎಡ ಕೈಗೆ ಹೊಡೆದು ರಕ್ತಗಾಯಪಡಿಸಿದನು. ಅಷ್ಟರಲ್ಲಿ ತಮ್ಮ ಗ್ರಾಮದ ರಾಜೇಶ್ವರಿ ಹಾಗೂ ಗಂಗರಾಜ ರವರು ಬಂದು ಮಂಜುನಾಥ ರವರಿಂದ ತಮ್ಮನ್ನು ಬಿಡಿಸಿದರು. ನಂತರ ಮಂಜುನಾಥ ತಮ್ಮನ್ನು ಕುರಿತು ಈ ದಿನ ಉಳಿದುಕೊಂಡಿದ್ದೀರಾ, ನಿಮ್ಮನ್ನು ಪ್ರಾಣಸಹಿತ ಬಿಡುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿ ಆತನು ತಂದಿದ್ದ ಮಚ್ಚನ್ನು ತಮ್ಮ ಮನೆಯಲ್ಲಿಯೇ ಬಿಸಾಡಿ, ಆತನು ಬಂದಿದ್ದ ಆತನ ಬಾಬತ್ತು ಕೆಎ-03 ಎಂಇ-7464 ನೊಂದಣಿ ಸಂಖ್ಯೆಯ ಸ್ವಿಪ್ಟ್ ಕಾರನ್ನು ತಮ್ಮ ಮನೆಯ ಬಳಿ ಬಿಟ್ಟು ಹೊರಟು ಹೋದನು. ಆದ್ದರಿಂದ ಮೇಲ್ಕಂಡ ಮಂಜುನಾಥ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.281/2021 ಕಲಂ. 457,380 ಐ.ಪಿ.ಸಿ :-

          ದಿನಾಂಕ: 20/06/2021 ರಂದು ಸಂಜೆ 7.30 ಗಂಟೆಗೆ ಕೆಂಪರೆಡ್ಡಿ ಬಿನ್ ಬೈರೆಡ್ಡಿ, 44 ವರ್ಷ, ವಕ್ಕಲಿಗರು, ಹೋಟೆಲ್ ಮಾಲೀಕರು, ಕಲ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಕನಂಪಲ್ಲಿ ಹಾಲಿನ ಡೈರಿ ಪಕ್ಕದಲ್ಲಿ ಈಗ್ಗೆ ಸುಮಾರು 6 ವರ್ಷಗಳಿಂದ ರೆಡ್ಡಿ ಹಿಂದೂ ಮಿಲ್ಟ್ರೀ ಹೋಟಲ್ ನ್ನು ನಡೆಸುತ್ತಿರುತ್ತೇನೆ. ತಾನು ಪ್ರತಿದಿನ ತಮ್ಮ ಗ್ರಾಮದಿಂದ ಬೆಳಿಗ್ಗೆ 06-00 ಗಂಟೆಗೆ ಹೋಟಲ್ ಗೆ ಬಂದು ವ್ಯಾಪಾರ ಮುಗಿಸಿಕೊಂಡು ರಾತ್ರಿ 9-00 ಗಂಟೆಗೆ ವಾಪಸ್ಸು ತಮ್ಮ ಗ್ರಾಮಕ್ಕೆ ಹೋಗುತ್ತಿರುತ್ತೇನೆ. ಹೀಗಿರುವಾಗ ದಿನಾಂಕ:19-06-2021 ರಂದು ರಾತ್ರಿ 9-00 ಗಂಟೆಗೆ ತಾನು ಹೋಟಲ್ ನಲ್ಲಿ ಕೆಲಸ ಮುಗಿಸಿಕೊಂಡು ಹೋಟಲ್ ನ ಬೀಗ ಹಾಕಿಕೊಂಡು ತಮ್ಮ ಊರಿಗೆ ಹೋಗಿರುತ್ತೇನೆ. ನಂತರ ಈ ದಿನ ದಿನಾಂಕ:20-06-2021 ರಂದು ಬೆಳಿಗ್ಗೆ 6-00 ಗಂಟೆಗೆ ತಮ್ಮ ಹೋಟಲ್ ಬಳಿ ಹೋಗಿದ್ದು, ನೋಡಲಾಗಿ ಯಾರೋ ಕಳ್ಳರು ಹೋಟಲ್ ನ ಮುಂಭಾಗದ ಕಬ್ಬಿಣದ ಗ್ರಿಲ್ ನ ಗೇಟ್ ಬೀಗವನ್ನು ಹೊಡೆದು ನಂತರ ಹೋಟಲ್ ನ ಮುಂಬಾಗದ ಕಬ್ಬಿಣದ ಶೆಟರ್ ಅನ್ನು ಯಾವುದೋ ಆಯುಧದಿಂದ ಮೀಟಿ ಹೋಟಲ್ ಒಳಗೆ ಹೋಗಿ ಹೋಟಲ್ ನಲ್ಲಿದ್ದ ಸುಮಾರು 3000/- ರೂ ಬೆಲೆ ಬಾಳುವ ಒಂದು ಮಿಕ್ಸಿ ಮತ್ತು ಟೇಬಲ್ ನ ಕ್ಯಾಶ್ ಬಾಕ್ಸ್ ನಲ್ಲಿದ್ದ 2000/-ರೂ ನಗದು ಹಣವನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಈ ಕಳ್ಳತನವು ದಿನಾಂಕ:19-06-2021 ರಂದು ರಾತ್ರಿ 9-00 ಗಂಟೆಯಿಂದ ಈ ದಿನ ಬೆಳಿಗ್ಗೆ 6-00 ಗಂಟೆಗೆ ಮದ್ಯೆ ಸಂಭವಿಸಿರುತ್ತೆ. ಆದ್ದರಿಂದ ತನ್ನ ಹೋಟಲ್ ನಲ್ಲಿ ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆ ಹಚ್ಚಿ ಕಳುವಾಗಿರುವ ಮಾಲು, ನಗದು ಹಣವನ್ನು ಪತ್ತೆ ಮಾಡಲು ಕೋರಿರುವುದಾಗಿರುತ್ತೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.282/2021 ಕಲಂ. 323,324,504,506,34 ಐ.ಪಿ.ಸಿ :-

          ದಿನಾಂಕ: 21/06/2021 ರಂದು ಬೆಳಿಗ್ಗೆ 11.00 ಗಂಟೆಗೆ ನವೀನ್ ಬಿನ್ ಶಂಕರಪ್ಪ, 24 ವರ್ಷ, ವಕ್ಕಲಿಗರು, ಚಾಲಕ ವೃತ್ತಿ, ಧನಮಿಟ್ಟೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದಲ್ಲಿ ಇರುವ ಜಮೀನಿನ ಹಂಚಿಕೆ ಬಗ್ಗೆ ಈಗ್ಗೆ 7-8 ವರ್ಷಗಳಿಂದ ತಮಗೂ ಮತ್ತು ತಮ್ಮ ಗ್ರಾಮದ ತಮ್ಮ ದಾಯಾದಿ ವೆಂಕಟರೆಡ್ಡಿ ಬಿನ್ ಲೇಟ್ ಅಶ್ವಥಪ್ಪ ರವರಿಗೂ ತಕರಾರು ಇದ್ದು ಅಂದಿನಿಂದಲೂ ವೆಂಕಟರೆಡ್ಡಿ ರವರು ತಮ್ಮ ಮೇಲೆ ದ್ವೇಷವನ್ನಿಟ್ಟು ಕೊಂಡಿರುತ್ತಾರೆ. ಹೀಗಿರುವಾಗ ದಿನಾಂಕ: 20/06/2021 ರಂದು ರಾತ್ರಿ 9.00 ಗಂಟೆ ಸಮಯದಲ್ಲಿ ತಾನು ಮತ್ತು ತನ್ನ ತಾಯಿ ಭಾರತಮ್ಮ ಕೊಂ ಶಂಕರಪ್ಪ ರವರು ತಮ್ಮ ಮನೆಯ ಬಳಿ ಇದ್ದಾಗ ಮೇಲ್ಕಂಡ ವೆಂಕಟರೆಡ್ಡಿ ಮತ್ತು ಸಹೋದರರಾದ ಮೋಹನ್ ಮತ್ತು ಸುರೇಶ ರವರು ತಮ್ಮ ಮನೆ ಬಳಿ ಬಂದು ಹಳೇ ದ್ವೇಷದಿಂದ ತನ್ನ ಮೇಲೆ ಗಲಾಟೆ ಮಾಡಿ ಆ ಪೈಕಿ ವೆಂಕಟರೆಡ್ಡಿ ರವರು ತನ್ನನ್ನು ಕುರಿತು “ಏಯ್ ಬೋಳಿ ಮಗನೇ ನಮ್ಮ ಜಮೀನಿನಲ್ಲಿ ಭಾಗ ಕೇಳುತ್ತಿಯಾ ಎಷ್ಟು ದೈರ್ಯ ನಿನಗೆ” ಎಂದು ಅವಾಶ್ಚ ಶಬ್ದಗಳಿಂದ ಬೈದು, ಕೈ ಗಳಿಂದ ಮೈ ಮೇಲೆ ಹೊಡೆದು ಅಲ್ಲಿಯೇ ಬಿದ್ದಿದ್ದ ದೊಣ್ಣೆಯಿಂದ ತನ್ನ ತಲೆಗೆ ಹೊಡೆದು ರಕ್ತಗಾಯ ಮಾಡಿದನು. ಅಷ್ಟರಲ್ಲಿ ತನ್ನ ತಾಯಿ ಭಾರತಮ್ಮ ರವರು ಅಡ್ಡ ಬಂದಿದ್ದು ಮೋಹನ್ ಮತ್ತು ಸುರೇಶ ರವರು ಆಕೆಯ ಮೈ ಕೈ ಮೇಲೆ ಕೈಗಳಿಂದ ಹೊಡೆದು ಮೂಗೇಟು ಮಾಡಿ ನೋವುಂಟು ಮಾಡಿದರು. ಅಷ್ಟರಲ್ಲಿ ತಮ್ಮ ಪಕ್ಕದ ಗ್ರಾಮದ ವಾಸಿಗಳಾದ ಚೊಕ್ಕಹಳ್ಳಿ ಗ್ರಾಮದ ಅಶೋಕ ಮತ್ತು ನಾಗಸಂದ್ರಗಡ್ಡೆ ಗ್ರಾಮದ ಹರೀಶ ರವರು ಬಂದು ಮೇಲ್ಕಂಡವರಿಂದ ತಮ್ಮನ್ನು ರಕ್ಷಿಸಿದ್ದು ಅವರು ತಮಗೆ ಹೊಡೆದ ದೊಣ್ಣೆಯನ್ನು ಅಲ್ಲಿಯೇ ಬಿಸಾಕಿ ಅಲ್ಲಿಂದ ಹೋಗುವಾಗ “ಈ ದಿನ ಉಳಿದು ಕೊಂಡಿದ್ದಿಯಾ ಇನ್ನೋಂದು ಸಾರಿ ಜಮೀನಿನ ಭಾಗಗಳ ವಿಚಾರಕ್ಕೆ ಬಂದರೆ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲ” ಎಂದು ಪ್ರಾಣ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋದರು. ನಂತರ ಗಾಯಗೊಂಡಿದ್ದ ತಮ್ಮನ್ನು ಅಶೋಕ ಮತ್ತು ಹರೀಶ ರವರು ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದರು. ಈ ಗಲಾಟೆ ಬಗ್ಗೆ ತಮ್ಮ ಗ್ರಾಮದ ಹಿರಿಯರು ನ್ಯಾಯ ಪಂಚಾಯ್ತಿ ಮಾಡೋಣವೆಂದು ಹೇಳಿದ್ದು ಇದುವರೆಗೂ ನ್ಯಾಯ ಪಂಚಾಯ್ತಿ ಮಾಡದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಆದ್ದರಿಂದ ತಮ್ಮ ಮೇಲೆ ಗಲಾಟೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

7. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.139/2021 ಕಲಂ. 279,337,304(A) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್ :-

          ದಿನಾಂಕ20-06-2021 ರಂದು ಬೆಳಿಗ್ಗೆ 09-00 ಗಂಟೆಗೆ ಪಿರ್ಯಾದಿದಾರರಾದ ಮಧು ಬಿ. ಬಿನ್ ಬೈರಪ್ಪ.ಬಿ.ಹೆಚ್,24 ವರ್ಷ, ಒಕ್ಕಲಿಗರು, ಮಣಪ್ಪುರಂ ಗೋಲ್ಡ್ ನಲ್ಲಿ ಕೆಲಸ. ವಾಸ ಬೊಮ್ಮಶೆಟ್ಟಿಹಳ್ಳಿ ಗ್ರಾಮ, ಹೋಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನನ್ನ ತಂದೆ ತಾಯಿಗೆ ನಾವು ಇಬ್ಬರು ಮಕ್ಕಳಿರುತ್ತೇವೆ. 1 ನೇ ಹನುಮಂತರೆಡ್ಡಿ, 2 ನೇ ಮಧು ಆದ ನಾನಾಗಿರುತ್ತೇನೆ. ನನ್ನ ಅಣ್ಣ ಹನುಮಂತರೆಡ್ಡಿ ಬಿನ್ ಬೈರಪ್ಪ, 28 ವರ್ಷ ರವರು ಎಸ್.ಎಲ್.ಆರ್. ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುತ್ತಿರುತ್ತಾರೆ.  ದಿನಾಂಕ 19-06-2021 ರಂದು ಸಂಜೆ 07-30 ಗಂಟೆಯಲ್ಲಿ ನನ್ನ ಅಣ್ಣ ಹನುಮಂತರೆಡ್ಡಿ ನಮ್ಮ ಗ್ರಾಮದ ವಾಸಿಗಳಾದ ಅನಿಲ್ ಬಿನ್ ಸಿದ್ದಪ್ಪ, 28 ವರ್ಷ, ಬೊಮ್ಮಶೆಟ್ಟಿಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಮತ್ತು ಮಧುಸೂದನ್ ಬಿನ್ ಲಿಂಗಪ್ಪ, 28 ವರ್ಷ ಭಕ್ತರಹಳ್ಳಿ ಗ್ರಾಮರವರೊಂದಿಗೆ ಮಧುಸೂದನ್ ರವರ ದ್ವಿಚಕ್ರವಾಹನ ಸಂಖ್ಯೆ ಕೆ.ಎ.40-ಯು.-2758  ಹಿರೋ ಸ್ಪ್ಲೆಂಡರ್ ಬೈಕಿನಲ್ಲಿ  ಹೊಸೂರಿನಲ್ಲಿ ಮದುವೆಗೆ ಹೋದರು. ರಾತ್ರಿ 12-00 ಗಂಟೆಗೆ ನಾನು ಮನೆಯಲ್ಲಿದ್ದಾಗ ನಮ್ಮ ಚಿಕ್ಕಪ್ಪ ಬೈರಪ್ಪರವರು ಮನೆಯ ಬಳಿಗೆ ಬಂದು ಹನುಮಂತರೆಡ್ಡಿಗೆ ಅಪಘಾತವಾಗಿರುವ ಬಗ್ಗೆ ತಿಳಿಸಿದ್ದು ನಾನು 12-20 ಗಂಟೆಗೆ ಗೌರಿಬಿದನೂರು ಆಸ್ಪತ್ರೆಗೆ ಬಂದು ನೋಡಿದೆನು. ನನ್ನ ಅಣ್ಣನಿಗೆ ತಲೆಯ ಎಡಭಾಗದಲ್ಲಿ ರಕ್ತಗಾಯವಾಗಿದ್ದು  ವೈದ್ಯರು 12-45 ಗಂಟೆಗೆ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು. ನಂತರ ವಿಚಾರ ತಿಳಿಯಲಾಗಿ ದಿನಾಂಕ 19-06-2021 ರಂದು ರಾತ್ರಿ ಸುಮಾರು 11-00 ಗಂಟೆಯಲ್ಲಿ ನನ್ನ ಅಣ್ಣ ಹನುಮಂತರೆಡ್ಡಿ, ಮಧುಸೂಧನ್ ಮತ್ತು ಅನಿಲ್ ಕುಮಾರ್ 3 ಜನರು ಹೊಸೂರಿನಿಂದ ಮದುವೆಯನ್ನು ಮುಗಿಸಿಕೊಂಡು ವಾಪಸ್ ಬೊಮ್ಮಶೆಟ್ಟಿಹಳ್ಳಿಗೆ  ದ್ವಿಚಕ್ರವಾಹನ ಸಂಖ್ಯೆ ಕೆ.ಎ.40-ಯು.-2758  ಹಿರೋ ಸ್ಪ್ಲೆಂಡರ್ ಬೈಕಿನಲ್ಲಿ ಕೋಟಾಲದಿನ್ನೆ ಕ್ರಾಸ್ ನಲ್ಲಿ  ಬರುತ್ತಿದ್ದಾಗ  ಮಧುಗಿರಿ ಕಡೆಯಿಂದ ಯಾವುದೋ ಒಂದು ಲಾರಿಯ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯನ್ನು ದಾಟುತ್ತಿದ್ದ ಮದುಸೂದನ್ ರವರ ಬೈಕಿಗೆ ಅಪಘಾತಪಡಿಸಿ ಸ್ಥಳದಲ್ಲಿ ನಿಲ್ಲಿಸದೇ ಹೊರಟುಹೋಗಿರುತ್ತಾನೆ. ಅಪಘಾತದಿಂದ  ನನ್ನ ಅಣ್ಣ ಹನುಮಂತರೆಡ್ಡಿಗೆ ತಲೆಯಲ್ಲಿ ಎಡಗಡೆ ರಕ್ತಗಾಯವಾಗಿದ್ದು ಎಡಕಿವಿಯಲ್ಲಿ ರಕ್ತ ಬರುತ್ತಿರುತ್ತೆ, ಚಿಕಿತ್ಸೆ ಫಲಕಾರಿಯಾಗದೇ ಹನುಮಂತರೆಡ್ಡಿ ರಾತ್ರಿ 12-45 ಗಂಟೆಗೆ ಮೃತಪಟ್ಟಿರುತ್ತಾರೆ. ಮಧುಸೂದನನಿಗೆ ಮೂಗಿನ ಬಳಿ ತರಚಿದ ಗಾಯವಾಗಿದ್ದು ಅನಿಲನಿಗೆ ತಲೆಗೆ ರಕ್ತಗಾಯವಾಗಿರುತ್ತೆ. ಮತ್ತು ಸೊಂಟಕ್ಕೆ ಮೂಗೇಟುಗಳಾಗಿರುತ್ತೆ. ಗಾಯಗೊಂಡಿದ್ದ ಅನಿಲ್ ಮತ್ತು ಮಧುಸೂಧನ್ ರವೆರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಿದ್ದು ಇಬ್ಬರನ್ನು ಆಸ್ಪತ್ರೆಗೆ ಸೇರಿಸಿ ಬಂದು ತಡವಾಗಿ ದೂರು ನೀಡಿರುತ್ತೇನೆ. ದ್ವಿಚಕ್ರವಾಹನವು ಜಖಂಗೊಡಿರುತ್ತೆ. ನನ್ನ ಅಣ್ಣನಿಗೆ ಮತ್ತು ಅನಿಲ್ ಹಾಗೂ ಮಧುಸೂದನ್ ರವರಿಗೆ ಅಪಘಾತಪಡಿಸಿ ರಕ್ತಗಾಯವನ್ನು ಮಾಡಿರುವ ಯಾವುದೋ ಲಾರಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಾಗಿರುತ್ತೆ.

 

8. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.129/2021 ಕಲಂ. 279,337 ಐ.ಪಿ.ಸಿ :-

          ದಿನಾಂಕ:20/06/2021 ರಂದು ಫಿರ್ಯಾದುದಾರರಾದ ಅಮರನಾರಾಯಣಚಾರಿ ಬಿನ್ ನಾರಾಯಾಣಚಾರಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ: ದಿನಾಂಕ:18/06/2021 ರಂದು ರಾತ್ರಿ 8-00 ಗಂಟೆಗೆ ತಮ್ಮ ಅಣ್ಣ ಚೆಂಡೂರು ಗ್ರಾಮದಲ್ಲಿ ಹಲಸಿನ ಕಾಯಿ ವ್ಯಾಪಾರ ಸಂಬಂಧ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಮನೆಯಿಂದ ತನ್ನ ಸ್ನೇಹಿತನಾದ ರಾಜೇಶ್ ಬಿನ್ ವರದರಾಜು ರವರ ಬಾಬತ್ತು ಕೆಎ-02 ಜೆ.ಹೆಚ್-3087 ಡುಯೆಟ್ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಹೋಗಿರುತ್ತಾರೆ. ಇದೇ ದಿನ ರಾತ್ರಿ ತಮ್ಮ ಮತ್ತೊಬ್ಬ ಅಣ್ಣನಾದ ಕೇಶವಚಾರಿ ರವರು ರಾತ್ರಿ 9-00 ಗಂಟೆಯಲ್ಲಿ ತನಗೆ ದೂರವಾಣಿ ಕರೆಯನ್ನು ಮಾಡಿ ನಮ್ಮ ಅಣ್ಣನಾದ ಶ್ರೀನಿವಾಸಚಾರಿ ರವರು ಚೆಂಡೂರು ಗ್ರಾಮಕ್ಕೆ ಗುಡಿಬಂಡೆ ತಾಲ್ಲೂಕು ವರ್ಲಕೊಂಡ ಗ್ರಾಮದ ಬಳಿ ಎನ್.ಹೆಚ್-7 ರಸ್ತೆಯಲ್ಲಿ ಸುಮಾರು ರಾತ್ರಿ 8-20 ಗಂಟೆಯಲ್ಲಿ ಹೋಗುತ್ತಿದ್ದಾಗ ನಮ್ಮ ಅಣ್ಣ ಚಾಲನೆ ಮಾಡುತ್ತಿದ್ದ ಕೆಎ-02 ಜೆ.ಹೆಚ್-3087 ದ್ವಿ-ಚಕ್ರ ವಾಹನದ ಮುಂಭಾಗ ಹೋಗುತ್ತಿದ್ದ ಹೆಚ್.ಆರ್-38 ವೈ-4957 ನೊಂದಣಿ ಸಂಖ್ಯೆಯ ಅಶೋಕ್ ಲೈಲ್ಯಾಂಡ್ ಲಾರಿಯ ಚಾಲಕ ತನ್ನ ಲಾರಿಯನ್ನು ಯಾವುದೇ ಮುನ್ಸುಚನೆಯನ್ನು ನೀಡದೆ ಏಕಾಏಕಿ ಬ್ರೇಕ್ ಹೊಡೆದು ನಿಲ್ಲಿಸಿದ್ದರಿಂದ ಅಣ್ಣ ಶ್ರೀನಿವಾಸಚಾರಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ದ್ವಿಚಕ್ರ ವಾಹನವು ಸದರಿ ಲಾರಿಗೆ ಹಿಂಭಾಗದಲ್ಲಿ ಡಿಕ್ಕಿ ಹೊಡೆದ ಪರಿಣಾಮ ಅಣ್ಣ ಶ್ರೀನಿವಾಸಚಾರಿ ಅಪಘಾತವಾಗಿರುವುದಾಗಿ ಅಣ್ಣ ಶ್ರೀನಿವಾಸಚಾರಿ ರವರಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿರುತ್ತಾರೆ. ಕೂಡಲೇ ತಾನು  ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯ ಬಳಿ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು ತಮ್ಮ ಅಣ್ಣ ಶ್ರೀನಿವಾಸಚಾರಿ ರವರಿಗೆ ಮುಖದ ಮೇಲೆ ಹಣೆಯ ಮಧ್ಯಭಾಗ ಹಾಗೂ ಎರಡು ಕಣ್ಣಿನ ಮಧ್ಯ ಮೂಗಿನ ಎಡಭಾಗದಲ್ಲಿ ರಕ್ತಗಾಯವಾಗಿರುತ್ತೆ ಹಾಗೂ ಎಡಕಾಲಿಗೆ ರಕ್ತಗಾಯ ಹಾಗೂ ಸೊಂಟದ ಬಳಿ ಮೂಗೇಟಾಗಿರುತ್ತೆ ಹಾಗೂ ಎರಡು ಕೈಗಳ ಬೆರಳುಗಳಿಗೆ ತರಚಿದ ಗಾಯಗಳಾಗಿರುತ್ತೆ. ವೈಧ್ಯಾಧಿಕಾರಿಗಳ ಸೂಚನೆ ಮೇರೆಗೆ ತಮ್ಮ ಅಣ್ಣ ಶ್ರೀನಿವಾಸಚಾರಿ ರವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಅದರಂತೆ ತಾವು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗಾಗಿ  ದಾಖಲು ಮಾಡಿದ್ದು ನಂತರ ಅಲ್ಲಿನ ವೈಧ್ಯಾಧಿಕಾರಿಗಳ ಸೂಚನೆ ಮೇರೆಗೆ ದಿನಾಂಕ:19/06/2021 ರಂದು ಬೆಳಿಗ್ಗೆ 08-30 ಗಂಟೆಗೆ ಬೆಂಗಳೂರಿನ ಮಹಾವೀರ ಜೈನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಿ ಈ ದಿನ ದಿನಾಂಕ:20/06/2021 ರಂದು ತಡವಾಗಿ ಠಾಣೆಗೆ ಬಂದು ನಮ್ಮ ಅಣ್ಣ ಶ್ರೀನಿವಾಸಚಾರಿ ರವರ ಅಪಘಾತಕ್ಕೆ ಹೆಚ್.ಆರ್-38 ವೈ-4957 ನೊಂದಣಿ ಸಂಖ್ಯೆಯ ಅಶೋಕ್ ಲೈಲ್ಯಾಂಡ್ ಲಾರಿಯ ಚಾಲಕ ತನ್ನ ವಾಹನವನ್ನು ನಿಲ್ಲಿಸುವಾಗ ಯಾವುದೇ ಮುನ್ಸೂಚನೆ ನೀಡದೆ ಬ್ರೇಕ್ ಹೊಡೆದುದರಿಂದ ಸಂಭವಿಸಿರುವುದಾಗಿರುತ್ತೆ. ಆದುದರಿಂದ ತಮ್ಮ ಅಣ್ಣನಿಗೆ ಅಪಘಾತ ಪಡಿಸಿದ ಹೆಚ್.ಆರ್-38 ವೈ-4957 ನೊಂದಣಿ ಸಂಖ್ಯೆಯ ಅಶೋಕ್ ಲೈಲ್ಯಾಂಡ್ ಲಾರಿಯ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಾಗಿರುತ್ತೆ.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.203/2021 ಕಲಂ. 323,324,504,506,34 ಐ.ಪಿ.ಸಿ :-

          ದಿನಾಂಕ:-20/06/2021 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ವೆಂಕಟೇಶ್ ಬಿನ್ ಚನ್ನರಾಯಪ್ಪ, 50 ವರ್ಷ, ಗೊಲ್ಲರು, ಜಿರಾಯ್ತಿ, ವಾಸ-ಇದ್ಲೂಡು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ 20/06/2021 ರಂದು ಬೆಳಿಗ್ಗೆ ಸುಮಾರು 8-30 ಗಂಟೆ ಸಮಯದಲ್ಲಿ ತನ್ನ ಸೊಸೆಯಾದ ಕೀರ್ತಿ ರವರು ತಮ್ಮ ಮನೆಯ ಬಳಿ ಇರುವ ಸಾರ್ವಜನಿಕ ನೀರಿನ ಟ್ಯಾಂಕಿ ಬಳಿ ನೀರನ್ನು ಬಿಂದಿಗೆಯಲ್ಲಿ ಹಿಡಿದು ಅದನ್ನು ಪಕ್ಕಕ್ಕೆ ಇಟ್ಟಿದ್ದಾಗ ತಮ್ಮ ಪಕ್ಕದ ಮನೆಯ ವಾಸಿಯಾದ ಮುನಿರಾಜು ರವರ ಮಗಳಾದ ಸಿರಿಷಾ ರವರು ನೀರಿನ ವಿಚಾರದಲ್ಲಿ ತನ್ನ ಸೊಸೆಯ ಮೇಲೆ ಜಗಳವನ್ನು ಮಾಡಿ, ಬಿಂದಿಗೆಯನ್ನು ತಳ್ಳಿ ಹಾಕಿರುತ್ತಾಳೆ. ನಂತರ ತನ್ನ ಸೊಸೆ ಮನೆಗೆ ಬಂದು ವಿಷಯವನ್ನು ತಿಳಿಸಿದಾಗ, ತಾನು ಮತ್ತು ತನ್ನ ಹೆಂಡತಿ ಶಾರದ ರವರು ರವರು ತನ್ನ ಸೊಸೆಗೆ ಬೈದು, ಬುದ್ದಿವಾದ ಹೇಳಿ ತಾನು ತಮ್ಮ ಜಮೀನಿನ ಬಳಿ ಹೋಗಿದ್ದು, ಇದೇ ದಿನ ಬೆಳಿಗ್ಗೆ ಸುಮಾರು 10-15 ಗಂಟೆ ಸಮಯದಲ್ಲಿ ತಮ್ಮ ಪಕ್ಕದ ಮನೆಯ ವಾಸಿ ಮುನಿರಾಜು ಬಿನ್ ಚನ್ನರಾಯಪ್ಪ ಮತ್ತು ಈತನ ಹೆಂಡತಿ ಮುನಿರತ್ನ ರವರು ತಮ್ಮ ಮನೆಯ ಬಳಿ ಬಂದು ತನ್ನ ಸೊಸೆಯನ್ನು ಕುರಿತು ಬಾರೇ ಬೇವರ್ಸಿ ಮುಂಡೆ, ನೀನು ನಮ್ಮ ಮಗಳ ಮೇಲೆ ಜಗಳ ಮಾಡುತ್ತೀಯಾ ಎಂದು ಬೈದಾಡುತ್ತಿದ್ದಾಗ ತನ್ನ ಸೊಸೆಯು ತನಗೆ ಪೋನ್ ಮಾಡಿ ವಿಷಯವನ್ನು ತಿಳಿಸಿದಾಗ ಕೂಡಲೇ ತಾನು ಮನೆಯ ಬಳಿ ಬಂದು ಮೇಲ್ಕಂಡವರಿಗೆ ಯಾಕೇ ನೀವು ಸಣ್ಣ ಪುಟ್ಟ ನೀರಿನ ವಿಚಾರದಲ್ಲಿ ನಮ್ಮ ಮನೆಯ ಬಳಿ ಬಂದು ಜಗಳ ಮಾಡುತ್ತೀರಾ, ಇಲ್ಲಿಂದ ಹೋಗಿ ಎಂದು ಹೇಳಿದಾಗ ಇಬ್ಬರು ಸಹ ತನ್ನ ಮೇಲೂ ಸಹ ಗಲಾಟೆ ಮಾಡಿ, ಲೋಫರ್ ನನ್ನ ಮಗನೇ, ನೀನು ನಿನ್ನ ಸೊಸೆಗೆ ಬುದ್ದಿ ಹೇಳು ನಮಗೆ ಏನು ಹೇಳುತ್ತೀಯಾ ಎಂದು ಬಾಯಿಗೆ ಬಂದ ಹಾಗೇ ಕೆಟ್ಟ ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಮೈ ಮೇಲೆ ಹೊಡೆದು, ಮುನಿರಾಜು ರವರು ಅಲ್ಲಿಯೇ ಬಿದ್ದಿದ್ದ ಒಂದು ಇಟ್ಟಿಗೆಯನ್ನು ತೆಗೆದುಕೊಂಡು ತನ್ನ ತಲೆಗೆ ಹೊಡೆದು ರಕ್ತಗಾಯವನ್ನುಂಟು ಮಾಡಿರುತ್ತಾನೆ. ಆಗ ತಾನು ಕೆಳಗೆ ಬಿದ್ದು ಹೋದಾಗ ತನ್ನ ಮಗ ಪೃಥ್ವಿರಾಜ್ ಹಾಗು ತಮ್ಮ ಅಕ್ಕ ಪಕ್ಕದ ಮನೆಯವರಾದ ಸತೀಶ್, ಮಂಜುಳ ರವರು ಅಡ್ಡ ಬಂದು ಆತನ ಕೈಯಲ್ಲಿದ್ದ ಇಟ್ಟಿಗೆಯನ್ನು ಕಿತ್ತುಕೊಂಡು ಜಗಳವನ್ನು ಬಿಡಿಸಿದಾಗ ಮೇಲ್ಕಂಡವರು ಇನ್ನೊಂದು ಸಲ ನಮ್ಮ ಸುದ್ದಿಗೆ ಬಂದರೆ ನಿನಗೆ ಸಾಯಿಸಿ ಬಿಡುತ್ತೇವೆಂದು ಪ್ರಾಣ ಬೆದರಿಕೆಯನ್ನು ಹಾಕಿ ಅಲ್ಲಿಂದ ಹೊರಟು ಹೊರಟು ಹೋಗಿರುತ್ತಾರೆ. ನಂತರ ತನ್ನ ಮಗ ತನ್ನನ್ನು ತನ್ನ ದ್ವಿ ಚಕ್ರ ವಾಹನದಲ್ಲಿ ಕರೆದುಕೊಂಡು ಬಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಸಿರುತ್ತಾನೆ. ಆದ ಕಾರಣ ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

ಇತ್ತೀಚಿನ ನವೀಕರಣ​ : 21-06-2021 05:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080