Feedback / Suggestions

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.143/2021 ಕಲಂ. 384 ಐ.ಪಿ.ಸಿ & 5(2),5(3),5(4) THE KARNATAKA EPIDEMIC DISEASES ACT, 2020:-

          ದಿನಾಂಕ 20/05/2021 ರಂದು ಮದ್ಯಾಹ್ನ 3-30 ಗಂಟೆಗೆ ಫಿರ್ಯಾದಿಧಾರರಾದ ಬಾಗೇಪಲ್ಲಿ ತಾಲ್ಲೂಕು, ಸಾರ್ವಜನಿಕ ಆಸ್ಪತ್ರೆಯ, ತಾಲ್ಲೂಕು ಆರೋಗ್ಯಾಧಿಕಾರಿಗಳು, ಹಾಗೂ ಪ್ರಭಾರ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳಾದ ಡಾ|| ಸತ್ಯ ನಾರಾಯಣ ರೆಡ್ಡಿ, ಸಿ.ಎನ್. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಡಾ|| ಮುರಳಿ ಕೃಷ್ಣ, ಜಂಟಿ ನಿದೇರ್ಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರವರು ದಿನಾಂಕ 14/05/2021 ರಂದು ಮಾನ್ಯ ಆರೋಗ್ಯ ಸಚಿವರ ಜೊತೆ ಪ್ರಗತಿ ಪರಿಶೀಲನಾ ಸಭೆಗೆ ಬಾಗೇಪಲ್ಲಿಗೆ ಆಗಮಿಸಿ ಸಬೆ ಮುಗಿದ ಮೇಲೆ, ಸಂಜೆ ಸುಮಾರು 5-30 ಗಂಟೆಯಲ್ಲಿ ನಾನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 ಕರ್ತವ್ಯದಲ್ಲಿ ನಾನು ಮತ್ತು ಸಿಬ್ಬಂದಿ ಮುಸ್ತಾಕ್ ರವರು ಕೋವಿಡ್ ಪಾಸಿಟಿವ್ ರೋಗಿಗಳನ್ನು ಐ.ಸಿ.ಯು ನಲ್ಲಿ ತಪಾಸಣೆ ಮಾಡುತ್ತಿರುವಾಗ ಆಸ್ಪತ್ರೆಯ ಸಿಬ್ಬಂದಿ ಐಸಿಯುಗೆ ಬಂದು ಡಾ|| ಮುರಳಿಕೃಷ್ಣ ರವರು ತಮ್ಮ ಕಛೇರಿಗೆ ಬಂದಿದ್ದು ತಮ್ಮನ್ನು ಕರೆಯುತ್ತಿರುವುದಾಗಿ ತಿಳಿಸಿದರು.  ನಾನು ಕಛೇರಿಗೆ ಬಂದು ಡಾ|| ಮುರಳಿಕೃಷ್ಣ ರವರನ್ನು ಮಾತಾನಾಡಿಸಿದಾಗ ಮುರಳಿಕೃಷ್ಣ ರವರು ನನಗೆ Remdesivir injection ಹಾಗೂ ಮಾಸ್ಕಗಳು ಬೇಕೆ ಬೇಕು ಕೊಡು ಎಂದು ಕೇಳಿದ್ದು,  ನಾನು ಕೊಡಲು ಆಗುವುದಿಲ್ಲ ಎಂದು ಹೇಳಿದ್ದಕ್ಕೆ, ನೀನು ಕೊಡದೇ ಇದ್ದರೇ ನಿನಗೆ ಭಾಗೆಪಲ್ಲಿ ಸರ್ಕಾರಿ ಆಸ್ಪತ್ರೆಯ ಆಡಳಿತ ಉಸ್ತುವಾರಿಯಿಂದ ತೆಗೆದುಹಾಕಿ ತೊಂದರೆ ಮಾಡುತ್ತೆನೆಂದು ಹೇಳಿ ಹಾಗೂ ಕರ್ತವ್ಯ ನಿರತನಾಗಿದ್ದ ನನ್ನನ್ನು ಲೆಕ್ಕಿಸದೇ ಕಛೇರಿಗೆ ಕರೆಯಿಸಿ ಅನಾವಶ್ಯಕವಾಗಿ ಸುಮಾರು ಒಂದು ಗಂಟೆಯ ಕಾಲ ಕರ್ತವ್ಯ ನಿರ್ವಹಿಸಲು ತೊಂದರೆ ಮಾಡಿ, ಒತ್ತಾಯ ಪೂರ್ವಕವಾಗಿ Remdesivir injection 5 vial  ಗಳನ್ನು ಹಾಗೂ ಮಾಸ್ಕ ಗಳನ್ನು ತೆಗೆದುಕೊಂಡು ಹೋಗಿರುತ್ತಾರೆ.  ಡಾ|| ಮುರಳಿಕೃಷ್ಣ ರವರು ವೈಯಕ್ತಿಕ ಉದ್ದೇಶಕ್ಕಾಗಿ ಸರ್ಕಾರಿ  ಸ್ವತ್ತಾದ ಮತ್ತು ಕೋವಿಡ್ ರೋಗಿಗಳಿಗೆ ನೀಡುವ Remdesivir injection ಅನ್ನು ಒತ್ತಾಯ ಪೂರ್ವಕವಾಗಿ ತೆಗೆದುಕೊಂಡು ಹೋಗಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿ, ಕೋವಿಡ್ ರೋಗಿಗಳಿಗೆ ತೊಂದರೆ ಉಂಟು ಮಾಡಿರುತ್ತಾರೆ.  ನಾನು ಕೋವಿಡ್ ರೋಗಿಗಳ ತಪಾಸಣೆ ಕರ್ತವ್ಯದಲ್ಲಿ ಇದ್ದುದ್ದರಿಂದ ಹಾಗೂ ಮೇಲಾಧಿಕಾರಿಗಳ ಸೂಚನೆಯಂತೆ ಈ ದಿನ ದೂರನ್ನು ನೀಡುತ್ತಿದ್ದು ಡಾ|| ಮುರಳಿ ಕೃಷ್ಣ ರವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

2. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.49/2021 ಕಲಂ. 32,34 ಕೆ.ಇ ಆಕ್ಟ್:-

          ದಿನಾಂಕ:20/05/2021 ರಂದು ಸಂಜೆ 5:00 ಗಂಟೆಯಲ್ಲಿ  ಚೇಳೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರವರಾದ ಪ್ರತಾಪ್ ಕೆಆರ್ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ನಾನು ಈ ದಿನ ದಿನಾಂಕ:20/05/2021 ರಂದು  ಮಧ್ಯಹ್ನ 2:00 ಗಂಟೆ ಸಮಯದಲ್ಲಿ ಸಿಬ್ಬಂದಿಯವರಾದ ಹೆಚ್ ಸಿ 129 ರವಣಪ್ಪ ಬಿವಿ, ಪಿಸಿ 07 ವಿಧ್ಯಾಧರ್  ಹಾಗೂ ಜೀಪ್ ಚಾಲಕನಾದ ಎಪಿಸಿ 87 ಮೋಹನ್  ರವರೊಂದಿಗೆ ಕೆಎ 42 ಜಿ0061 ಸರ್ಕಾರಿ ಜೀಪ್ ನಲ್ಲಿ ಲಾಕ್ ಡೌನ್ ಪ್ರಯುಕ್ತ  ರಾಶ್ಚೆರುವು ಗ್ರಾಮದ  ಕಡೆ ಗಸ್ತು ಮಾಡಿಕೊಂಡು ಬಾಬೇನಾಯಕನಹಳ್ಳಿ ತಾಂಡ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ, ಇದೇ ಗ್ರಾಮದ ವಾಸಿಯಾದ ಈಶ್ವರ ನಾಯ್ಕ ಬಿನ್ ಲೇಟ್  ಜೇಮ್ಲಾ ನಾಯ್ಕ ಎಂಬುವರು ತನ್ನ ಚಿಲ್ಲರೆ ಅಂಗಡಿಯಲ್ಲಿ ಕಾನೂನು ಬಾಹಿರವಾಗಿ ಮಧ್ಯವನ್ನು ಮಾರಾಟ ಮಾಡಲು ಸಂಗ್ರಹಣೆ ಮಾಡಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಪಂಚರ ಸಮಕ್ಷಮ ಮೇಲ್ಕಂಡ ಸ್ಥಳಕ್ಕೆ ಹೋಗಿದ್ದು ಸದರಿ ಅಂಗಡಿಯ ಬಾಗಿಲು ಹಾಕಿದ್ದು  ಯಾರೂ ಇರಲಿಲ್ಲಾ ಅಲ್ಲಿಯೇ ಇದ್ದ ಆತನ ಮಗನಾದ ಸುರೇಶ ಬಿನ್ ಈಶ್ವರನಾಯಕ ರವರನ್ನು ಕರೆಯಿಸಿ ಪಂಚರ ಸಮಕ್ಷಮ ಚಿಲ್ಲರೆ ಅಂಗಡಿಯ ಬಾಗಿಲನ್ನು ತೆಗೆಸಿ ಪರಿಶೀಲಿಸಲಾಗಿ 1) ಮದ್ಯ ತುಂಬಿರುವ 180 ಎಮ್ ಎಲ್ ನ OLD TAVERN WHISKY  ಯ 37 ಟೆಟ್ರಾ ಪ್ಯಾಕೆಟ್ ಗಳು ಪ್ರತಿಯೊಂದು ಮಧ್ಯದ ಪ್ಯಾಕೆಟ್ ನ ಬೆಲೆ 86.75 ರೂ ಎಂದು ನಮೂದಿಸಿರುತ್ತೆ  2) 180 ಎಂ ಎಲ್ ನ NO1  MC DOWELLSS  INDIAN BRANDY ಕಂಪನಿಯ 12 ಟೆಟ್ರಾ ಪ್ಯಾಕೆಟ್ ಗಳಿದ್ದು ಪ್ರತಿಯೊಂದು ಪ್ಯಾಕೆಟ್ ನ ಮೇಲೆ 175.10 ಎಂದು ನಮೂದಿಸಿರುತ್ತೆ 3) 180 ಎಂ ಎಲ್ ನ NO1  MC DOWELLSS DELUXE XXX RUM ಕಂಪನಿಯ 5 ಟೆಟ್ರಾ ಪ್ಯಾಕೆಟ್ ಗಳಿದ್ದು ಪ್ರತಿ ಪ್ಯಾಕೆಟ್ ನ ಮೇಲೆ 106.23 ರೂ ಎಂದು ನಮೂದಿಸಿರುತ್ತೆ,  4) 180 ಎಮ್ ಎಲ್ ನ IMPERIAL BLUE  ಕಂಪನಿಯ  5 ಬಾಟಲ್ ಗಳಿದ್ದು ಪ್ರತಿ ಬಾಟಲ್ ಮೇಲೆ 198.21 ರೂ ಎಂದು ನಮೂದಿಸಿರುತ್ತೆ 5) 180 ಎಮ್ ಎಲ್ ನ BLACK DELUXE WHISKY ಕಂಪನಿಯ  6 ಬಾಟಲ್ ಗಳಿದ್ದು  ಪ್ರತಿ ಬಾಟಲ್ ಮೇಲೆ 175.10 ರೂ ಎಂದು ನಮೂದಿಸಿರುತ್ತೆ. ಈ ಮೇಲ್ಕಂಡ ಮಾಲುಗಳು ಒಟ್ಟು  11,700 ಎಮ್ ಎಲ್ ಆಗಿದ್ದು ಇವುಗಳ  ಒಟ್ಟು ಮೊತ್ತ 7883.75 ರೂಗಳಾಗಿರುತ್ತೆ. ಸದರಿ ಅಂಗಡಿಯ ಮಾಲೀಕನ ಹೆಸರು ಮತ್ತು ವಿಳಾಸವನ್ನು ಅಲ್ಲಿಯೇ ಇದ್ದ ಆತನ ಮಗನಾದ ಸುರೇಶ್ ರವರ ಬಳಿ ವಿಚಾರಿಸಲಾಗಿ  ಈಶ್ವರನಾಯಕ ಬಿನ್ ಲೇಟ್ ಜೇಮ್ಲಾನಾಯಕ, 48 ವರ್ಷ, ಚಿಲ್ಲರೆ ಅಂಗಡಿ ವ್ಯಾಪಾರ, ಬಾಬೇನಾಯಕನಹಳ್ಳಿ ತಾಂಡ, ಬಾಗೇಪಲ್ಲಿ ತಾಲ್ಲೂಕು ಎಂದು  ತಿಳಿಸಿದ್ದು ಸದರಿಯವರು ಕೆಲಸದ ನಿಮಿತ್ತ ಚಾಕವೇಲು ಗ್ರಾಮಕ್ಕೆ ಹೋಗಿದ್ದಾರೆಂದು ತಿಳಿಸಿರುತ್ತಾರೆ.  ನಂತರ ಸದರಿ ಮಾಲುಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಸಲುವಾಗಿ ಎಲ್ಲಾ ಮಾಲುಗಳ ಪೈಕಿ ಒಂದನ್ನು ಪ್ರತ್ಯೇಕವಾಗಿ ತೆಗೆದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ದಾರದಿಂದ ಕಟ್ಟಿ ಅದರ ಮೂತಿಯನ್ನು  D ಎಂಬ ಅಕ್ಷರದಿಂದ ಸೀಲು ಮಾಡಿರುತ್ತೆ. ನಂತರ ಮಾಲುಗಳನ್ನು ಈ ಕೇಸಿನ ಮುಂದಿನ ತನಿಖೆಯ ಸಲುವಾಗಿ ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡಿರುತ್ತೆ. ಅಕ್ರಮವಾಗಿ ಮಧ್ಯವನ್ನು ಮಾರಾಟ ಮಾಡಲು ಮಧ್ಯವನ್ನು ದಾಸ್ತಾನು ಮಾಡಿದ ಈಶ್ವರನಾಯಕ ಬಿನ್ ಜೇಮ್ಲಾನಾಯಕ ರವರ ವಿರುದ್ದ  ಕಾನೂನು ರೀತ್ಯಾ ಕ್ರಮಜರುಗಿಸಲು ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ವರದಿಯನ್ನು ನೀಡುತ್ತಿದ್ದು, ಈ ಬಗ್ಗೆ ಮುಂದಿನ ಕ್ರಮಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊಸಂ:49/2021 ಕಲಂ 32,34 ಕೆಇ ಆಕ್ಟ್ ರೀತ್ಯ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ  ಮೊ.ಸಂ.78/2021 ಕಲಂ. 279,337 ಐ.ಪಿ.ಸಿ, 4,8,9,11 KARNTAKA PREVENTION OF COW SLANGHTER & CATTLE PREVENTION ACT-1964 & 11(1) (A),11(D) PREVENTION OF CRUELTY TO ANIMALS ACT, 1960 & 192(A) INDIAN MOTOR VEHICLES ACT:-

          ದಿನಾಂಕ: 21/05/2021 ರಂದು ಬೆಳಗ್ಗೆ 8-00 ಗಂಟೆಯ ಸಮಯದಲ್ಲಿ  ಶ್ರೀ.  ಹೆಚ್.ಸಿ. ರಾಮಕೃಷ್ಣಪ್ಪ ಬಿನ್  ಲೇಟ್ ಚಿಕ್ಕಪ್ಪಯ್ಯ ಹೊನ್ನೇನಹಳ್ಳಿ  ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 21/05/2021 ರಂದು  ಬೆಳಗ್ಗೆ  ಸುಮಾರು 06-30  ಗಂಟೆಯ ಸಮಯದಲ್ಲಿ  ತಾನು ತಮ್ಮ ಬಳಿ ಜಮೀನು ಕಡೆಗೆ  ಹೋಗುತ್ತಿದ್ದಾಗ  ಎನ್.ಹೆಚ್.44 ರಸ್ತೆಯಲ್ಲಿ   ಬಾಗೇಪಲ್ಲಿ ಕಡೆಯಿಂದ  ಬೆಂಗಳೂರು ಕಡೆಗೆ  ಒಂದು ಈಚೇರ್ ವಾಹನದ ಚಾಲಕನು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದು  ಸಬ್ಬೇನಹಳ್ಳಿ ಕಡೆಗೆ ಹೋಗುವ ಕ್ರಾಸ್ ಬಳಿ  ರಸ್ತೆಯ  ವಿಭಜಕಕ್ಕೆ ಡಿಕ್ಕಿ ಹೊಡೆಯಿಸಿ  ವಾಹನವನ್ನು ರಸ್ತೆಯಲ್ಲಿ ಉರುಳಿಸಿದ.  ಕೂಡಲೇ ಅಲ್ಲಿಗೆ ಬಂದ ನಮ್ಮ ಊರಿನ  ಹೆಚ್.ಎಲ್. ವೆಂಕಟೇಶ ಬಿನ್  ಲಕ್ಷ್ಮೀನಾರಾಯಣ. ತಾನು  ಮತ್ತು  ಇತರರು ಸ್ಥಳಕ್ಕೆ ಹೋಗಿ ನೋಡಲಾಗಿ  ಈಚೇರ್ ವಾಹನದ ಸಂಖ್ಯೆ.  TS-12-UC-3904  ಆಗಿದ್ದು. ವಾಹನದಲ್ಲಿ  ಒಂಬತ್ತು  ಎತ್ತುಗಳು  ಇದ್ದು  ಆ ಪೈಕಿ ಒಂದು ಎತ್ತು ಅಲ್ಲಿಂದ ಓಡಿ ಹೋಯಿತು.  ಸದರಿ ಎತ್ತುಗಳನ್ನು ಕಬ್ಬಿಣದ ಡೋರ್ ನಿಂದ ಮುಚ್ಚಿದ್ದ ಕ್ಲೋಸ್ಡ್ ಕಂಟೈನರ್ ವಾಹನದಲ್ಲಿ ಅಮಾನೀಯವಾಗಿ, ಉಸಿರಾಡದಂತೆ, ಗಾಳಿಯಾಡದಂತೆ,  ಹಗ್ಗಗಳಿಂದ ಕಟ್ಟಿ ಹಾಕಿದ್ದರು.  ಸದರಿ ವಾಹನ ಜಖಂಗೊಂಡಿದ್ದು,  ವಾಹನದಲ್ಲಿದ್ದ  ಚಾಲಕ ಹಾಗೂ  ಮತ್ತೊಬ್ಬ  ಆಸಾಮಿ ಸ್ಥಳದಿಂದ  ಓಡಿ ಹೋದರು.  ಸದರಿ ವಾಹನದಲ್ಲಿದ್ದ  ಮತ್ತೊಬ್ಬ  ಆಸಾಮಿಯ ಹೆಸರು  ಕೇಳಲಾಗಿ  ಸಿ.ಹೆಚ್.ನಿಖಿಲ್ ಬಿನ್  ಸಿ.ಹೆಚ್.ವಿಜಯ್ ಕುಮಾರ್ 21ವರ್ಷ  ಕ್ಲೀನರ್ ಕೆಲಸ ವಾಸ: ಮನೆ ನಂಬರ್: 4-6-169/2  ರಾಯನ್ ನಗರ್ ಅತ್ತಾಪುರ ಹೈದರಾಬಾದ್  ತೆಲಂಗಾಣ ಎಂಬುದಾಗಿ ತಿಳಿಸಿದನು. ಈತನಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತು.  ಈತನನ್ನು ಚಿಕಿತ್ಸೆಯ  ಬಗ್ಗೆ  ಆಂಬುಲೆನ್ಸ್ ವಾಹನದಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟೆವು.  ಈಚೇರ್ ವಾಹನದ ಸಂಖ್ಯೆ. TS-12-UC-3904  ರ  ಮಾಲೀಕನು, ಚಾಲಕ ಮತ್ತು ಇತರರೊಂದಿಗೆ ಅಕ್ರಮವಾಗಿ ಒಂಬತ್ತು ಎತ್ತುಗಳನ್ನು ಹೈದರಾಬಾದ್ ಕಡೆಯಿಂದ ಬೆಂಗಳೂರುಗೆ  ಕಸಾಯಿಖಾನೆಗೆ ಮಾರಾಟ ಮಾಡಲು ಸಾಗಾಣಿಕೆ ಮಾಡಿಕೊಂಡು  ಹೋಗುತ್ತಿದ್ದಾಗಿ  ತಿಳಿದು ಬಂದಿರುತ್ತೆ. ಈ ಬಗ್ಗೆ ತಾವು ಮುಂದಿನ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ  ದೂರಿನ ಮೇರೆಗೆ  ಈ ಪ್ರ.ವ.ವರದಿ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ  ಮೊ.ಸಂ.226/2021 ಕಲಂ. 323,324,504,34 ಐ.ಪಿ.ಸಿ:-

          ದಿನಾಂಕ: 20/05/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಮಲ್ಲಿಕಾರ್ಜುನ ರೆಡ್ಡಿ ಬಿನ್ ಕೃಷ್ಣಾರೆಡ್ಡಿ, 31 ವರ್ಷ, ವಕ್ಕಲಿಗರು, ಜಿರಾಯ್ತಿ, ಕೋನಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ಸಂಜೆ 4.15 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡು ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದಲ್ಲಿ ತಮ್ಮ ಜಮೀನು ಮತ್ತು ತಮ್ಮ ಗ್ರಾಮದ ಪ್ರಭಾಕರರೆಡ್ಡಿ ಬಿನ್ ಬೈರೆಡ್ಡಿ ರವರ ಜಮೀನುಗಳು ಅಕ್ಕ ಪಕ್ಕ ಇರುತ್ತೆ. ಹೀಗಿರುವಾಗ ಪ್ರಭಾರಕರರೆಡ್ಡಿ ರವರು ತಮ್ಮ ಜಮೀನಿನ ಬದುವನ್ನು ಒತ್ತುವರಿ ಮಾಡಿ ಆ ಜಾಗದಲ್ಲಿ ಸೀಮೇಹುಲ್ಲನ್ನು ಬೆಳೆಸಿದ್ದರಿಂದ ತಾನು ಈ ದಿನ ದಿನಾಂಕ: 20/05/2021 ರಂದು ಮದ್ಯಾಹ್ನ 2.00 ಗಂಟೆ ಸಮಯದಲ್ಲಿ ಪ್ರಭಾರಕರರೆಡ್ಡಿ ರವರಿಗೆ ತಮ್ಮ ಬದುವಿದ್ದ ಜಾಗದಲ್ಲಿ ಸೀಮೇಹುಲ್ಲನ್ನು ತೆರವು ಮಾಡುವಂತೆ ತಿಳಿಸಿದ್ದು, ಆಗ ಆತನು ತನ್ನ ಮೇಲೆ ಜಗಳ ತೆಗೆದು “ಬೋಳಿ ನನ್ನ ಮಗನೇ, ನೀನು ನನಗೆ ಹೇಳುತ್ತೀಯಾ” ಎಂದು ಅವಾಚ್ಯಶಬ್ದಗಳಿಂದ ಬೈದು, ತನ್ನ ಮೇಲೆ ಗಲಾಟೆಮಾಡುತ್ತಿದ್ದಾಗ ಆತನ ಕಡೆಯವರಾದ ಕೋದಂಡರಾಮಿರೆಡ್ಡಿ, ಮಣಿಕಂಠ ಬಿನ್ ಕೋಡಂದರಾಮಿರೆಡ್ಡಿ ಮತ್ತು ಪ್ರಭಾಕರರೆಡ್ಡಿರವರ ಮಗ (ಹೆಸರು ಗೊತ್ತಿಲ್ಲ) ರವರು ಸ್ಥಳಕ್ಕೆ ಬಂದು ಆ ಪೈಕಿ ಪ್ರಭಾಕರರೆಡ್ಡಿ ರವರು ದೊಣ್ಣೆಯಿಂದ ತನ್ನ ಕತ್ತಿನ ಮೇಲೆ ಹೊಡೆದು ಊತಗಾಯಪಡಿಸಿರುತ್ತಾನೆ. ಪ್ರಭಾಕರರೆಡ್ಡಿರವರ ಮಗ ಕೈ ಮುಷ್ಠಿಯಿಂದ ತನ್ನ ಬಲ ಕಣ್ಣಿನ ಮೇಲ್ಬಾಗದಲ್ಲಿ ಗುದ್ದಿ ಗಾಯವನ್ನುಂಟು ಮಾಡಿದ. ಉಳಿದ ಕೋದಂಡರಾಮಿರೆಡ್ಡಿ ಮತ್ತು ಮಣಿಕಂಠ ರವರು ಕೈಗಳಿಂದ ತನ್ನ ಮೈ ಮೇಲೆ ಹೊಡೆದು ಕಾಲುಗಳಿಂದ ಒದ್ದು ನೋವನ್ನುಂಟು ಮಾಡಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆ ದೂರಾಗಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ  ಮೊ.ಸಂ.227/2021 ಕಲಂ. 323,324,307,34 ಐ.ಪಿ.ಸಿ:-

          ದಿನಾಂಕ: 20/05/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಪ್ರಭಾಕರರೆಡ್ಡಿ ಬಿನ್ ಲೇಟ್ ಬೈರಾರೆಡ್ಡಿ, 53 ವರ್ಷ, ವಕ್ಕಲಿಗರು, ಜಿರಾಯ್ತಿ, ಕೋನಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ಸಂಜೆ 6.30 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡು ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದಲ್ಲಿ ತಮ್ಮ ಜಮೀನು ಹಾಗೂ ತಮ್ಮ ಗ್ರಾಮದ ಮಲ್ಲಿಕಾರ್ಜುರೆಡ್ಡಿ ಬಿನ ಕೃಷ್ಣಾರೆಡ್ಡಿ ರವರ ಜಮೀನುಗಳು ಅಕ್ಕ ಪಕ್ಕ ಇರುತ್ತವೆ. ತಾವು ತಮ್ಮ ಜಮೀನಿನಲ್ಲಿ ಸೀಮೇಹುಲ್ಲನ್ನು ಬೆಳೆದಿರುತ್ತೇವೆ. ಜಮೀನಿನ ವಿಚಾರದಲ್ಲಿ ತಮಗೂ ಹಾಗೂ ಮಲ್ಲಿಕಾರ್ಜುನರೆಡ್ಡಿ ರವರಿಗೆ ತಕರಾರುಗಳಿದ್ದು ಈ ಹಿಂದೆ ಮಲ್ಲಿಕಾರ್ಜುನರೆಡ್ಡಿ ರವರು ತಮ್ಮ ಮೇಲೆ ಗಲಾಟೆ ಮಾಡಿದ್ದು, ಹಿರಿಯರು ನ್ಯಾಯ ಪಂಚಾಯ್ತಿ ಮಾಡಿ ರಾಜಿ ಮಾಡಿರುತ್ತಾರೆ. ಆದರೂ ಸಹ ಮಲ್ಲಿಕಾರ್ಜುನರೆಡ್ಡಿ ರಾಜಿಯಾಗಲು ಒಪ್ಪಿರುವುದಿಲ್ಲ. ಹೀಗಿರುವಾಗ ಈ ದಿನ ದಿನಾಂಕ: 20/05/2021 ರಂದು ಮದ್ಯಾಹ್ನ 2.00 ಗಂಟೆ ಸಮಯದಲ್ಲಿ ಮಲ್ಲಿಕಾರ್ಜುನರೆಡ್ಡಿ ಹಾಗೂ ಆತನ ತಂದೆ ಕೃಷ್ಣಾರೆಡ್ಡಿ ರವರು ತಮ್ಮ ಜಮೀನಿನ ಅಂಚಿನಲ್ಲಿ ಬೆಳೆಸಿದ್ದ ಸೀಮೇಹುಲ್ಲನ್ನು ಕೀಳುತ್ತಿದ್ದಾಗ ತಾನು ಹೋಗಿ ಏಕೆ ನೀವು ಹುಲ್ಲನ್ನು ಕಿತ್ತು ಬಿಸಾಕುತ್ತಿರುವುದು ಎಂದು ಕೇಳಿದ್ದಕ್ಕೆ ಮಲ್ಲಿಕಾರ್ಜುನರೆಡ್ಡಿ ಆತನ ಕೈಯಲ್ಲಿದ್ದ ಚನಿಕೆಯಿಂದ ತನ್ನನ್ನು ಕೊಲೆ ಮಾಡುವ ಉದ್ದೇಶದಿಂದ ತನ್ನ ತಲೆಯ ಹಿಂಭಾಗದಲ್ಲಿ ಹೊಡೆದು ರಕ್ತಗಾಯಪಡಿಸಿರುತ್ತಾನೆ. ಆತನ ತಂದೆ ಕೃಷ್ಣಾರೆಡ್ಡಿ ಆತನ ಮಗನ ಕೈಯಲ್ಲಿದ್ದ ಚನಿಕೆಯನ್ನು ತೆಗೆದುಕೊಂಡು ತನ್ನ ಬೆನ್ನಿನ ಮೇಲೆ ಹೊಡೆದು ಗಾಯಪಡಿಸಿರುತ್ತಾನೆ. ನಂತರ ಇಬ್ಬರೂ ಕೈಗಳಿಂದ ತನ್ನನ್ನು ಕೆಳಕ್ಕೆ ತಳ್ಳಿ, ಕಾಲುಗಳಿಂದ ಒದ್ದಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆ ದೂರಾಗಿರುತ್ತೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ  ಮೊ.ಸಂ.228/2021 ಕಲಂ. 15(A) ಕೆ.ಇ ಆಕ್ಟ್:-

          ಈ ದಿನ ದಿನಾಂಕ: 21/05/2021 ರಂದು ಪಿ.ಎಸ್.ಐ ಸಾಹೇಬರ ಆದೇಶದಂತೆ ನಾನು ಹಾಗೂ ಸಿ.ಪಿ.ಸಿ-534 ನಂದೀಶ್ ಕುಮಾರ್ ರವರು ಠಾಣಾ ಸರಹದ್ದಿನ ಕುರುಟಹಳ್ಳಿ, ಮೈಲಾಂಡ್ಲಹಳ್ಳಿ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಬೆಳಗ್ಗೆ 09-00 ಗಂಟೆಯ ಸಮಯದಲ್ಲಿ ಕುರುಬೂರು ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ಸುರೇಶ ಬಿನ್ ರಾಮಕೃಷ್ಣಪ್ಪ ರವರು ಆತನ ಚಿಲ್ಲರೆ ಅಂಗಡಿ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಕುರುಬೂರು ಗ್ರಾಮದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಹೋಟೆಲ್ ಮುಂದೆ  ನೋಡಲಾಗಿ 1) 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 4 ಟೆಟ್ರಾ ಪಾಕೆಟ್ ಗಳು, 2) ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು  3)ಒಂದು ಲೀಟರ್ ಸಾಮರ್ಥ್ಯದ ಎರಡು ನೀರಿನ ಬಾಟಲಿಗಳಿದ್ದು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ ಹಾಗೂ ನೀರಿನ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಸುರೇಶ ಬಿನ್ ರಾಮಕೃಷ್ಣಪ್ಪ, 35 ವರ್ಷ, ಗಾಣಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಕುರುಬೂರು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಬೆಳಗ್ಗೆ 9-15 ರಿಂದ 10-00 ಗಂಟೆಯವರೆಗೆ ಪಂಚನಾಮೆಯ ಮೂಲಕ ಮೇಲ್ಕಂಡ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ದೂರನ್ನು ನೀಡುತ್ತಿದ್ದು, ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಸುರೇಶ ಬಿನ್ ರಾಮಕೃಷ್ಣಪ್ಪ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.

 

7. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.99/2021 ಕಲಂ. 15(A),32(3)  ಕೆ.ಇ ಆಕ್ಟ್:-

          ದಿನಾಂಕ:20/05/2021 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಠಾಣಾ ಎನ,ಸಿ,ಆರ್  120/2021 ರಲ್ಲಿ ನ್ಯಾಯಾಲಯದ ಪಿಸಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲು ಅನುಮತಿ  ಪಡೆದುಕೊಂಡು ಬಂದ  ವರದಿಯ ಸಾರಾಂಶವೇನೆಂದರೆ, ದಿನಾಂಕ:19/05/2021 ರಂದು ಮದ್ಯಾಹ್ನ 1.00 ಗಂಟೆಯಲ್ಲಿ ಪಿರ್ಯಾದಿ ಇಂತಿಯಾಜ್ ರವರು ಠಾಣೆಯಲ್ಲಿದ್ದಾಗ ಠಾಣಾ ಗುಪ್ತ ಮಾಹಿತಿ ಸಿಬ್ಬಂದಿ ಸಿ,ಹೆಚ್,ಸಿ-73 ಹನುಮಂತರಾಯಪ್ಪ ರವರು ನನಗೆ ಪೋನ್ ಮಾಡಿ ಗುಡಿಬಂಡೆ ತಾಲ್ಲೂಕು ಕಂಬಾಲಹಳ್ಳಿ ಗ್ರಾಮದಲ್ಲಿ ಗಸ್ತುನಲ್ಲಿರುವಾಗ ನಾರಾಯಣಸ್ವಾಮಿ ರವರ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ಯರೋ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು ಠಾಣಾ ಸಿಬ್ಬಂದಿಯಾದ ಸಿ.ಹೆಚ್.ಸಿ-102 ಆನಂದ ರವರನ್ನು ಕರೆದುಕೊಂಡು ದ್ವಿಚಕ್ರವಾಹನದಲ್ಲಿ ಮದ್ಯಾಹ್ನ 1-30 ಗಂಟೆ ಸಮಯಕ್ಕೆ ಕಂಬಾಲಹಳ್ಳಿ ಗ್ರಾಮಕ್ಕೆ ಹೋಗಿ ಸ್ಥಳದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ. ಮಾಹಿತಿ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಪಂಚರೊಂದಿಗೆ ನಾರಾಯಣಸ್ವಾಮಿ ರವರ ಅಂಗಡಿಯ ಮುಂಭಾಗದ ಸ್ವಲ್ಪ ದೂರದ ಮರೆಯಲ್ಲಿ ದ್ವಿ ಚಕ್ರವಾಹನಗಳನ್ನು ನಿಲ್ಲಿಸಿ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಮದ್ಯಾಹ್ನ 1-45 ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯನ್ನು ವಶಕ್ಕೆ ಪಡೆದು ಆತನ ಹೆಸರು & ವಿಳಾಸ ತಿಳಿಯಲಾಗಿ ನಾರಾಯಣಸ್ವಾಮಿ ಬಿನ್ ಲೇಟ್ ಗಂಗಪ್ಪ 58 ವರ್ಷ, ಗೊಲ್ಲ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ ವಾಸ:ಕಂಬಾಲಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು, ಎಂದು ತಿಳಿಸಿದ್ದು. ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 10 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 03 ಖಾಲಿ ಟೆಟ್ರಾ ಪಾಕೆಟ್ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 03 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 1 ಲೀಟರ್ 80 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*10=351/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಮದ್ಯಾಹ್ನ 02-00 ಗಂಟೆಯಿಂದ ಮದ್ಯಾಹ್ನ:02-45 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಮದ್ಯಾಹ್ನ;3-15 ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಮದ್ಯಾಹ್ನ:03-30 ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ.

 

8. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.48/2021 ಕಲಂ. 15(A),32(3)  ಕೆ.ಇ ಆಕ್ಟ್:-

          ದಿನಾಂಕ 20-05-2021 ರಂದು ಸಂಜೆ 5.00 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಹಾಜರುಪಡಿಸಿದ ಮಾಲು, ಮಹಜರ್ ರೊಂದಿಗೆ ನೀಡಿದ ವರದಿಯ ಸಾರಾಂಶವೇನೆಂದರೆ,  ದಿನಾಂಕ:20/05/2021 ರಂದು ಮಧ್ಯಾಹ್ನ 15-00 ಗಂಟೆ ಸಮಯದಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಮಿಟ್ಟಹಳ್ಳಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಯಂಡಹಳ್ಳಿ ಗ್ರಾಮದ ವೆಂಕಟರೆಡ್ಡಿ ಬಿನ್ ಮಲ್ಲಪ್ಪ ರವರ ಮನೆ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಅದರಂತೆ ಸದರಿ ಮನೆಯ ಮುಂದೆ ದಾಳಿ ನಡೆಸುವ ಸಲುವಾಗಿ ತಾನು ಸಿಬ್ಬಂದಿಯಾದ ಸಿಹೆಚ್ಸಿ-161  ಕೃಷ್ಣಪ್ಪ ರವರೊಂದಿಗೆ ಸರ್ಕಾರಿ ವಾಹನ ಸಂಖ್ಯೆ ಕೆ.ಎ-40-ಜಿ-539 ಜೀಪ್ ನಲ್ಲಿ ಯಂಡಹಳ್ಳಿ  ಗ್ರಾಮದ ಬಳಿ ಹೋಗಿ ಅಲ್ಲಿನವರಿಗೆ ವಿಚಾರವನ್ನು ತಿಳಿಸಿ ಅವರನ್ನು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರೊಂದಿಗೆ ನಡೆದುಕೊಂಡು ಯಂಡಹಳ್ಳಿ ವೆಂಕಟರೆಡ್ಡಿ ಬಿನ್ ಮಲ್ಲಪ್ಪ ರವರ ಮನೆ ಬಳಿ ಹೋಗಿ  ಮರೆಯಲ್ಲಿ ನಿಂತು ನೋಡಲಾಗಿ ಮನೆಯ ಮಾಲೀಕ ಮನೆಯ ಮುಂದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಪೊಲೀಸರನ್ನು  ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು ಓಡಿಹೋಗಿದ್ದು, ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟ  ಮನೆಯ ಮಾಲೀಕನನ್ನು ಹಿಡಿದುಕೊಳ್ಳಲು ಹೋದಾಗ ಆತನು ಸಹ ಓಡಿಹೋದನು.   ಓಡಿ ಹೋದ ಮನೆಯ ಮಾಲೀಕನ ಹೆಸರು ಮತ್ತು ವಿಳಾಸ ಕೇಳಗಾಗಿ  ವೆಂಕಟರೆಡ್ಡಿ ಬಿನ್ ಮಲ್ಲಪ್ಪ,  45 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ ವಾಸ ಯಂಡಹಳ್ಳಿ  ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಯಿತು.  ಸ್ಥಳದಲ್ಲಿ ಪರಿಶೀಲಿಸಲಾಗಿ ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 2 ಪ್ಲಾಸ್ಟಿಕ್ ಗ್ಲಾಸ್ ಗಳು, ಖಾಲಿ ಇದ್ದ ಎರಡು OLD TAVERN WHISKEY  180 ML ಟೆಟ್ರಾ ಪ್ಯಾಕೆಟ್ ಗಳು ಇದ್ದು, ಸ್ಥಳದಲ್ಲಿಯೇ  ಮದ್ಯದ ಟೆಟ್ರಾ ಪ್ಯಾಕೆಟ್ ಗಳು ಇರುತ್ತವೆ. ಪರಿಶೀಲಿಸಲಾಗಿ 180 ಎಂ.ಎಲ್ ನ OLD TAVERN WHISKEY  ಮಧ್ಯದ 12 ಟೆಟ್ರಾ ಪ್ಯಾಕೆಟ್ ಗಳು ಇದ್ದು, ಒಂದರ ಬೆಲೆ 86.75/- ರೂ  ಆಗಿದ್ದು, 12 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 1041/-ರೂ ಆಗಿರುತ್ತೆ. ಮದ್ಯ ಒಟ್ಟು 2160 ಮೀಲಿ ಆಗಿರುತ್ತೆ. ಮಧ್ಯವನ್ನು ಕುಡಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದೇ ಪರವಾನಗಿ ಇಲ್ಲದೇ ಇರುವುದರಿಂದ ಮನೆಯ ಮಾಲೀಕ ಪೊಲೀಸರನ್ನು ಕಂಡ ಕೂಡಲೇ ಓಡಿ ಹೋಗಿದ್ದು, ನಂತರ ಮೇಲ್ಕಂಡ ಎಲ್ಲಾ ಮಾಲುಗಳನ್ನು ಮಧ್ಯಾಹ್ನ 15-30 ರಿಂದ ಸಂಜೆ 16-30 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸದರಿ ಮಾಲನ್ನು, ಮಹಜರ್ ನ್ನು ನಿಮ್ಮ ಮುಂದೆ ಈ ನನ್ನ ವರದಿ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು ಈ ಬಗ್ಗೆ ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ಮನೆಯ ಮಾಲೀಕ ವೆಂಕಟರೆಡ್ಡಿ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿ ಸಾರಾಂಶವಾಗಿರುತ್ತೆ.

 

9. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.52/2021 ಕಲಂ. 506,143,147,148,149,323,324 ಐ.ಪಿ.ಸಿ:-

          ದಿನಾಂಕ:20/05/2021 ರಂದು ರಾತ್ರಿ 8-30 ಗಂಟೆಗೆ ನಗರ ಠಾಣೆಯಿಂದ ಬಂದ ದೂರವಾಣಿ ಕರೆಯನ್ನು ಪಡೆದು ಪಿಸಿ-314 ರವರೊಂದಿಗೆ ಸರ್ಕಾರಿ ಆಸ್ಪತ್ರೆಗೆ ಹೋಗಿ ಗಾಯಾಳು ಪಿರ್ಯಾದಿ ಶ್ರೀ ತಮ್ಮೇಗೌಡ  ಬಿನ್ ಮುನಿಶ್ವಾಮಪ್ಪ, 44 ವರ್ಷ, ಒಕ್ಕಲಿಗರು, ಜಿರಾಯ್ತಿ  ಕೆಲಸ, ವಾಸ: ಚೀಡಚಿಕ್ಕನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರ ಹೇಳಿಕೆಯನ್ನು ವೈಧ್ಯಾಧಿಕಾರಿ ಸಮಕ್ಷಮ ಸರ್ಕಾರಿ ಆಸ್ಪತ್ರೆಯಲ್ಲಿ ಪಡೆದಿದ್ದ  ಸಾರಾಂಶವೇನೆಂದರೆ, ತಾನು ಈಗ್ಗೆ ಸುಮಾರು 5 ತಿಂಗಳ ಹಿಂದೆ, ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ , ಅಭ್ಯರ್ಥಿಯಾಗಿ ಸ್ಪರ್ದಿಸಿ ತಮ್ಮ ಗ್ರಾಮದ  ಡಿ.ಸಿ.ಮರಿಯಪ್ಪ ಬಿನ್ ಲೇಟ್ ದೊಡ್ಡನಂಜಯಪ್ಪ ರವರು ಮೇಲೆ  ಗೆದ್ದಿದ್ದು, ಸದರಿ  ವಿಚಾರದಲ್ಲಿ ಮರಿಯಪ್ಪ ರವರ ಕುಟುಂಬದವರು   ದ್ವೇಷ ಇಟ್ಟುಕೊಂಡು ಹಗೆ ಸಾದಿಸುತ್ತಿದ್ದರು. ಈ ದಿನ ಸಂಜೆ 5-45 ಗಂಟೆಯಲ್ಲಿ ಪಿರ್ಯಾದಿ  ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ಕಾರ್ಯದರ್ಶಿಯಾಗಿದ್ದು,  ಮನೆಯಿಂದ ಡೈರಿಯ ಹೋಗುತ್ತಿದ್ದಾಗ, ಹಾಲು ಡೈರಿಯ  ಹಿಂಭದಿ ರಸ್ತೆಯಲ್ಲಿ  ತಮ್ಮ ಗ್ರಾಮದ ಡಿ.ಸಿ.ಮರಿಯಪ್ಪನ ಮಗ ಚಾಣಕ್ಯಗೌಡ , ಶ್ರೀರಾಂಪೂರ ಗ್ರಾಮದ ಅಕ್ಷಯಗೌಡ ಬಿನ್ ಸುಬ್ರಮಣಿ, ತಮ್ಮ ಗ್ರಾಮದ ಶ್ರೇಯಸ್ ಬಿನ್ ಮುನಿರಾಜು , ಪ್ರಶಾಂತಗೌಡ ಬಿನ್ ಮುನಿರಾಜು ಇತರರೊಂದಿಗೆ ತನಗೆ ಪರಿಚಯ ಇಲ್ಲದ ಇತರೆ 4 ಜನರು ಅಕ್ರಮ ಗುಂಪು ಕಟ್ಟಿಕೊಂಡು ಕೈಗಳಲ್ಲಿ ಅಫಾಯಕರವಾದ ಲಾಂಗು ದೊಣ್ಣೆಗಳನ್ನು ಹಿಡಿದು, ಏಕಾ ಏಕಿ ಚಾಣಕ್ಯಗೌಡ ಹಿಂದಿನಿಂದ ಲಾಂಗನಲ್ಲಿ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತ ಗಾಯಗೊಳಿಸಿದ , ಅಕ್ಷಯಗೌಡ ರಾಡ್ ನಿಂದ ಬಲಗೈಯಿಗೆ ಹೊಡೆದನು. ಶ್ರೇಯಸ್ ದೊಣ್ಣೆಯಿಂದ ಎಡಕೈಗೆ ಹೊಡೆದನು, ಉಳಿದವರು ಕೈಗಗಳಿಂದ ಮುಖ ಮತ್ತು ಮೈ ಮೇಲೆ ಹೊಡೆದರು , ಆಗ ತನ್ನ ಬಾಮೈದಾ ಮಂಜುಶಂಕರ್ ಓಡಿ ಬಂದು ಬಿಡಿಸಲು ಬಂದಾಗ ಚಾಣಕ್ಯಗೌಡ ರಾಡ್ ನಿಂದ ಮಂಜುಶಂಕರ್ ತಲೆಯ ಎಡಭಾಗ ಹಿಂಭಾಗಕ್ಕೆ ಹೊಡದ ಆಗ ತನ್ನ  ಪತ್ನಿ ಅರುಣಾ ರವರು ಅಡ್ಡ ಬಂದಾಗ ಚಾಣಕ್ಯಗೌಡ ತನ್ನ ಪತ್ನಿಯ ತಲೆಯ ಕೂದಲು ಹಿಡಿದು ನೆಲದ ಮೇಲೆ ತಳ್ಳಿರುತ್ತಾರೆ. ಎಲ್ಲರೂ ಸೇರಿ ನನ್ನನ್ನು  ಈ ನನ್ನ ಮಗನ್ನ ಪ್ರಾಣ ಸಹಿತ ಬಿಡುದು ಬೇಡ ಸಾಹಿಸ್ಸು ಅಂತ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಅಷ್ಟರಲ್ಲಿ ತಮ್ಮ ಗ್ರಾಮದ ಸಿ.ಎಂ.ಮಂಜುನಾಥ ಬಿನ್ ಮುನಿವೆಂಕಟಪ್ಪ ,ಮತ್ತು ಶಿವಕುಮಾರ್ ಎಸ್. ಬಿನ್ ಬಿ.ಶ್ರೀನಿವಾಸ್ ಇತರರು ಬಂದು ಆರೋಪಿಗಳಿಂದ ತಮ್ಮನ್ನು ಬಿಡಿಸಿ  ಮಂಜುನಾಥ ರವರ ಕಾರಿನಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ಸೇರಿಸಿದರು, ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

10. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.53/2021 ಕಲಂ. 279,304(A)  ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ;21-05-2021 ರಂದು ಬೆಳಗ್ಗೆ 8-00 ಗಂಟೆಗೆ  ಪಿರ್ಯಾದಿಯಾದ  ನಾಗರಾಜು ಬಿನ್ ಶ್ರೀರಾಮಪ್ಪ ಚಿಕ್ಕನಾರಪ್ಪನಹಳ್ಳಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತನ್ನ ತಂದೆ ತಾಯಿಗೆ ಮೂರು ಜನ ಮಕ್ಕಳು 1 ನೆ ಅಶ್ವತ್ಥಪ್ಪ 2 ನೆ ನಾನು 3 ನೆ  ಶ್ರೀನಿವಾಸ ನಮ್ಮಣ್ಣ ಅಶ್ವತ್ಥಪ್ಪನು ಮರಣ ಹೊಂದಿರುತ್ತಾನೆ, ನನ್ನ ತಮ್ಮ ಶ್ರೀನಿವಾಸನು ಅಜ್ಜಿಯ ಮನೆಯಾದ ದೇವಶೆಟ್ಟಿಹಳ್ಳಿ ಗ್ರಾಮದಲ್ಲಿಯೇ  ವಾಸವಿದ್ದು  ಆಗಾಗ ನಮ್ಮ ಗ್ರಾಮಕ್ಕೆ ಬಂದು ಹೋಗುತ್ತಿದ್ದನು, ಅದರಂತೆ ದಿನಾಂಕ 21-05-2021 ರಂದು ಬೆಳಗ್ಗೆ 7-00 ಗಂಟೆಗೆ ದೇವಶೆಟ್ಟಿಹಳ್ಳಿ  ಗ್ರಾಮದ ನಮ್ಮ ಸಂಭಂದಿ ರಾಮಲಿಂಗರಾಜು ರವರು ನನಗೆ ಪೋನ್ ಕರೆ ಮಾಡಿ ತಿಳಿಸಿದ ವಿಚಾರವೇನೆಂದರೆ  ಶ್ರೀನಿವಾಸನು ಇದೇ ದಿನ ಬೆಳಗ್ಗೆ 5-30 ಯಿಂದ 5-45 ಗಂಟೆಯ ಸಮಯದಲ್ಲಿ ನಮ್ಮ ಗ್ರಾಮದ ಗೇಟಿಗೆ ಬಂದಾಗ ಯಾವುದೋ ಒಂದು ವಾಹನ  ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ  ಮಾಡಿಕೊಂಡು ಬಂದು  ಶ್ರೀನಿವಾಸನಿಗೆ ಡಿಕ್ಕಿ ಹೊಡೆಯಿಸಿ ಸ್ಥಳದಲ್ಲಿ ನಿಲ್ಲಿಸದೆ ಹೊರಟುಹೋಗಿರುತ್ತದೆಂದು  ಅಫಘಾತದಿಂದ ಶ್ರೀನಿವಾಸನ ಕರಳು ಆಚೆಗ ಬಂದು  ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ವಿಚಾರ ತಿಳಿಸಿದನು, ಶ್ರೀನಿವಾಸನು ಸ್ಥಳದಲ್ಲಿಯೇ ಮೃತಪಟ್ಟಿದ್ದು ಮೃತ ದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರಗೆ ಸಾಗಿಸಿರುವುದಾಗಿ  ಎಂದು ತಿಳಿಸಿದ ಆಗ ತಾನು  ಭಾವನಾದ  ಅಶೋಕ ರವರು  ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಬಳಿ ಬಂದು ನೋಡಲಾಗಿ ವಿಚಾರ ನಿಜವಾಗಿತ್ತು,  ನನ್ನ ತಮ್ಮನಿಗೆ ಅಪಘಾತಪಡಿಸಿ  ಸ್ಥಳದಲ್ಲಿ ನಿಲ್ಲಿಸದೆ ಹೊರಟುಹೋಗಿರುವ  ವಾಹನವನ್ನು ಮತ್ತು ಅದರ ಚಾಲಕನನ್ನು ಪತ್ತೆ ಮಾಡಿ ಅವನ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕಾಗಿ  ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ.

 

11. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.54/2021 ಕಲಂ. 435 ಐ.ಪಿ.ಸಿ :-

          ದಿನಾಂಕ 21-05-2021 ರಂದು  ಬೆಳಗ್ಗೆ 9-30 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ಪಿರ್ಯಾದುದಾರರು  ಗಾರೆ ಕೆಲಸವನ್ನು ಮಾಡುತ್ತಿದ್ದು ತನ್ನ ಸ್ವಂತ ಕೆಲಸಗಳಿಗಾಗಿ ಕೆಎ-40-ಎಕ್ಸ-5214 ಟಿವಿಎಸ್ ಪಿನಿಕ್ಸ್  ದ್ವಿಚಕ್ರ ವಾಹನವನ್ನು 2015 ನೇ ಸಾಲಿನಲ್ಲಿ  ಖರೀದಿಸಿ ನನ್ನ ಸ್ವಂತ ಕೆಲಸಗಳಿಗಾಗಿ ಬಳಸಿಕೊಳ್ಳುತ್ತಿದ್ದೆನು, ಹೀಗಿರುವಲ್ಲಿ ದಿನಾಂಕ;-21-05-2021 ರಂದು ಗಂಟೆಯ ಸಮಯದಲ್ಲಿ ನಮ್ಮೂರಿನ ಪರಮೇಶನು ಮನೆಯನ್ನು ಕಟ್ಟಲು ಮಾರ್ಕಿಂಗ್ ಮಾಡಲು ಬರುವಂತೆ ತಿಳಿಸಿದ್ದರಿಂದ ನಾನು ನನ್ನ ದ್ವಿಚಕ್ರ ವಾಹನದಲ್ಲಿ ಪರಮೇಶ್ ರವರ ಜಮೀನಿನ ಬಳಿ ಮದ್ಯಾಹ್ನ 12-45 ಗಂಟೆಗೆ  ಹೋಗಿದ್ದು ಅಲ್ಲಿ ಪರಮೇಶ ಅವನ ತಮ್ಮ ನಾರಾಯಣಸ್ವಾಮಿ ರವರು ಅಲ್ಲಿದ್ದರು, ನಾನು ಪರಮೇಶರವರಿಗೆ ಮನೆಯನ್ನು ಕಟ್ಟಲು ಮಾರ್ಕಿಂಗ್  ಮಾಡಿ ಬರುವಾಗ ರಮೇಶ ರವರ ಜಮೀನಿನ ಮುಂದೆ ಪ್ರಶಾಂತಿ ಲೇ ಔಟ್ ಇದ್ದು ಸದರಿ ಲೇಔಟಿನಲ್ಲಿ ಮಾವಿನ ಮರಗಳಿದ್ದು ಮರಗಳಲ್ಲಿ ಮಾವಿನ ಕಾಯಿಗಳು ಬಿಟ್ಟಿದ್ದು ಸದರಿ ಮರದಿಂದ ಒಂದು ಮಾವಿನ ಕಾಯಿಯನ್ನು ನಾನು ಕಿತ್ತುಕೊಂಡು ವಾಕ್ ಮಾಡಿಕೊಂಡು 20 ನಿಮಿಷದ ಬಳಿಕ ದ್ವಿಚಕ್ರ ವಾಹನದ ಬಳಿ ಬಂದಾಗ ನನ್ನ  ದ್ವಿಚಕ್ರ ವಾಹನಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿಯನ್ನು ಹಚ್ಚಿ ಹೊರಟುಹೋಗಿದ್ದರು, ತನ್ನ ದ್ವಿಚಕ್ರ ವಾಹನವು ಬೆಂಕಿ ಬಿದ್ದು ಸುಡುತ್ತಿತ್ತು, ನಾನು ಕೂಡಲೆ ಪರಮೇಶ್ ರವರ ತೋಟಕ್ಕೆ ತೆರಳಿ ಬೆಂಕಿ ಬಿದ್ದ ಬಗ್ಗೆ  ನಾರಾಯಣಸ್ವಾಮಿಗೆ ತಿಳಿಸಿದೆನು, ನಂತರ ನಾರಾಯಣಸ್ವಾಮಿ ಅವರ ಮೋಬೈಲಿನಲ್ಲಿ ಸುಡುತ್ತಿದ್ದ  ದ್ವಿಚಕ್ರ ವಾಹನದ ವಿಡಿಯೋ ಮಾಡಿಕೊಂಡನು, ನನ್ನ ದ್ವಿಚಕ್ರ ವಾಹನದ ಬೆಲೆ ಸುಮಾರು 30000/- ರುಪಾಯಿಗಳಾಗ ಬಹುದು. ಈಬಗೆಗ ನನಗೆ ಎನು ಮಾಡಬೇಕೋ ದಿಕ್ಕು ತೋಚದೆ ಸುಮ್ಮನಿದ್ದು ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು , ತಾವು ಸ್ಥಳಕ್ಕೆ ಬೇಟಿ ನೀಡಿ ತನ್ನ ದ್ವಿಚಕ್ರ ವಾಹನಕ್ಕೆ  ಬೆಂಕಿ ಹಚ್ಚಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಮುಂದಿನ ಕಾನೂನು ರೀತ್ಯಾ ಕ್ರಮ  ಜರುಗಿಸಬೇಕಾಗಿ ತಮ್ಮಲ್ಲಿ ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ.

 

12. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.43/2021 ಕಲಂ. 188,269,270  ಐ.ಪಿ.ಸಿ & 51(b) THE DISASTER MANAGEMENT ACT, 2005 :-

          ದಿನಾಂಕ:20-05-2021 ರಂದು ಸಂಜೆ 6-30 ಗಂಟೆಗೆ ಶ್ರೀ ಎನ್.ರತ್ನಯ್ಯ, ಪಿ.ಎಸ್.ಐ, ಪಾತಪಾಳ್ಯ ಪೊಲೀಸ್ ಠಾಣೆರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಕೋವಿಡ್-19 ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾನ್ಯ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ದಿನಾಂಕ:20-05-2021 ರಿಂದ ದಿ:23-05-2021 ರವರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ ಆದೇಶ ಹೊರಡಿಸಿರುತ್ತಾರೆ. ಈ ದಿನ ದಿನಾಂಕ:20-05-2021 ರಂದು ನಾನು ಸಿಬ್ಬಂದಿಯೊಂದಿಗೆ ಠಾಣೆಯ ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-59 ರಲ್ಲಿ ಠಾಣಾ ಸರಹದ್ದಿನಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಗಸ್ತು ಕರ್ತವ್ಯ ನಿರ್ವಹಿಸಿಕೊಂಡು ಸಾರ್ವಜನಿಕರಿಗೆ ಕೋವಿಡ್-19 ಕರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು, ಸರ್ಕಾರ ಹೊರಡಿಸಿರುವ ಆದೇಶಗಳನ್ನು ಪಾಲಿಸಲು ಹಾಗೂ ಪ್ರತಿಯೊಬ್ಬರು ಮಾಸ್ಕ್ ಧರಿಸುವಂತೆ ಹಾಗೂ ಒಬ್ಬರಿಂದ ಒಬ್ಬರಿಗೆ ಸಾಮಾಜಿಕ ಅಂತರವನ್ನು ಪಾಲಿಸುವಂತೆ ಸೂಚಿಸುತ್ತಿರುವಾಗ ಸಂಜೆ 6-00 ಗಂಟೆಯ ಸಮಯದಲ್ಲಿ ಪೆದ್ದರೆಡ್ಡಿಪಲ್ಲಿ ಗ್ರಾಮದಲ್ಲಿ ಒಂದು ಚಿಲ್ಲರೆ ಅಂಗಡಿಯ ಬಳಿ ಜನರು ಗುಂಪಾಗಿ ಸೇರಿದ್ದರು. ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಸದರಿ ಚಿಲ್ಲರೆ ಅಂಗಡಿಯ ಮಾಲೀಕ ಅಂಗಡಿಯನ್ನು ತೆರೆದಿದ್ದು, ಅಂಗಡಿಯನ್ನು ತೆಗೆಯಬಾರದೆಂದು ಸರ್ಕಾರ ಮತ್ತು ಮಾನ್ಯ ಜಿಲ್ಲಾಧಿಕಾರಿಗಳ ಆದೇಶವಿದ್ದರೂ ಸಹಾ ಸದರಿ ಆಸಾಮಿಯು ನಿರ್ಲಕ್ಷ್ಯತನದಿಂದ ಅಂಗಡಿಯನ್ನು ತೆರೆದು ಜನರನ್ನು ಗುಂಪಾಗಿ ಸೇರಿಸಿಕೊಂಡು ವ್ಯಾಪಾರ ಮಾಡುತ್ತಿದ್ದು, ಪ್ರಾಣಕ್ಕೆ ಅಪಾಯಕಾರಿಯಾದ ಸಾಂಕ್ರಾಮಿಕ ರೋಗದ ಸೋಂಕನ್ನು ಹರಡುವ ಸಂಭವವಿರುವುದೆಂದು ತಿಳಿದಿದ್ದರೂ ಸಹ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯತನ ತೋರ್ಪಡಿಸಿರುವುದು ಕಂಡುಬಂದಿರುತ್ತದೆ. ಸದರಿ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಾಲೀಕನ ಹೆಸರು & ವಿಳಾಸ ಕೇಳಲಾಗಿ ರಮೇಶ ಬಿನ್ ವೆಂಕಟರಾಮಪ್ಪ, 30 ವರ್ಷ, ಬೋವಿ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ:ಪೆದ್ದರೆಡ್ಡಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, ಮೊಬೈಲ್ ಸಂಖ್ಯೆ:9380601198 ಎಂದು ತಿಳಿಸಿರುತ್ತಾನೆ. ಸರ್ಕಾರ ಹೊರಡಿಸಿರುವ ಆದೇಶಗಳನ್ನು ಉಲ್ಲಂಘನೆ ಮಾಡಿದ್ದ ಅಂಗಡಿಯ ಮಾಲೀಕ ರಮೇಶರವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

13. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.44/2021 ಕಲಂ. 188,269,270  ಐ.ಪಿ.ಸಿ & 51(b) THE DISASTER MANAGEMENT ACT, 2005 :-

          ದಿನಾಂಕ:20-05-2021 ರಂದು ಸಂಜೆ 7-30 ಗಂಟೆಗೆ ಶ್ರೀ ಎನ್.ರತ್ನಯ್ಯ, ಪಿ.ಎಸ್.ಐ, ಪಾತಪಾಳ್ಯ ಪೊಲೀಸ್ ಠಾಣೆರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಕೋವಿಡ್-19 ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾನ್ಯ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ದಿನಾಂಕ:20-05-2021 ರಿಂದ ದಿ:23-05-2021 ರವರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ ಆದೇಶ ಹೊರಡಿಸಿರುತ್ತಾರೆ. ಈ ದಿನ ದಿನಾಂಕ:20-05-2021 ರಂದು ನಾನು ಸಿಬ್ಬಂದಿಯೊಂದಿಗೆ ಠಾಣೆಯ ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-59 ರಲ್ಲಿ ಠಾಣಾ ಸರಹದ್ದಿನಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಗಸ್ತು ಕರ್ತವ್ಯ ನಿರ್ವಹಿಸಿಕೊಂಡು ಸಾರ್ವಜನಿಕರಿಗೆ ಕೋವಿಡ್-19 ಕರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು, ಸರ್ಕಾರ ಹೊರಡಿಸಿರುವ ಆದೇಶಗಳನ್ನು ಪಾಲಿಸಲು ಹಾಗೂ ಪ್ರತಿಯೊಬ್ಬರು ಮಾಸ್ಕ್ ಧರಿಸುವಂತೆ ಹಾಗೂ ಒಬ್ಬರಿಂದ ಒಬ್ಬರಿಗೆ ಸಾಮಾಜಿಕ ಅಂತರವನ್ನು ಪಾಲಿಸುವಂತೆ ಸೂಚಿಸುತ್ತಿರುವಾಗ ಸಂಜೆ 7-00  ಗಂಟೆಯ ಸಮಯದಲ್ಲಿ ಪಾತಪಾಳ್ಯ ಗ್ರಾಮದ ಟಿಪ್ಪು ಸರ್ಕಲ್ ಬಳಿಯಿರುವ ಅಕ್ರಂಖಾನ್ ಬಿನ್ ಗಫೂರ್ ಖಾನ್ ರವರ ಮನೆಯ ಬಳಿ ಜನರು ಗುಂಪಾಗಿ ಸೇರಿದ್ದರು. ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಸದರಿ ಮನೆಯ ಮಾಲೀಕ ಅಕ್ರಂಖಾನ್ ಸಾರ್ವಜನಿಕ ಪಡಿತರವನ್ನು ತನ್ನ ಮನೆಯ ಬಳಿ ಜನರಿಗೆ ವಿತರಣೆ ಮಾಡುತ್ತಿರುತ್ತಾನೆ. ಜನರನ್ನು ಗುಂಪು ಸೇರಿಸಬಾರದೆಂದು ಸರ್ಕಾರ  ಮತ್ತು ಮಾನ್ಯ ಜಿಲ್ಲಾಧಿಕಾರಿಗಳ ಆದೇಶವಿದ್ದರೂ ಸಹಾ ಸದರಿ ಆಸಾಮಿಯು ನಿರ್ಲಕ್ಷ್ಯತನದಿಂದ ತನ್ನ ಮನೆಯ ಬಳಿ ಜನರನ್ನು ಗುಂಪಾಗಿ ಸೇರಿಸಿಕೊಂಡು ಜನರಿಗೆ ಪಡಿತರ ವಿತರಣೆ ಮಾಡುತ್ತಿದ್ದು, ಪ್ರಾಣಕ್ಕೆ ಅಪಾಯಕಾರಿಯಾದ ಸಾಂಕ್ರಾಮಿಕ ರೋಗದ ಸೋಂಕನ್ನು ಹರಡುವ ಸಂಭವವಿರುವುದೆಂದು ತಿಳಿದಿದ್ದರೂ ಸಹ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯತನ ತೋರ್ಪಡಿಸಿರುವುದು ಕಂಡುಬಂದಿರುತ್ತದೆ. ಪಡಿತರ ವಿತರಣೆ ಮಾಡುತ್ತಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಅಕ್ರಂ ಖಾನ್ ಬಿನ್ ಗಫೂರ್ ಖಾನ್, 24ವರ್ಷ, ಮುಸ್ಲಿಂ ಜನಾಂಗ, ವ್ಯಾಪಾರ, ವಾಸ: ಪಾತಪಾಳ್ಯ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಮೊಬೈಲ್ ಸಂಖ್ಯೆ:8095480295 ಎಂದು ತಿಳಿಸಿರುತ್ತಾನೆ. ಸರ್ಕಾರ ಹೊರಡಿಸಿರುವ ಆದೇಶವನ್ನು ಉಲ್ಲಂಘನೆ ಮಾಡಿದ್ದ ಅಕ್ರಂಖಾನ್ ರವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

Last Updated: 21-05-2021 05:47 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080