ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.102/2021 ಕಲಂ. 188 ಐ.ಪಿ.ಸಿ & 5 THE KARNATAKA EPIDEMIC DISEASES ACT, 2020  :-

     ದಿನಾಂಕ:20/04/201 ರಂದು ಸಂಜೆ 6-30 ಗಂಟೆಗೆ ಹೆಚ್.ಸಿ-178  ಶ್ರೀಪತಿ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ನಾನು ಈಗ್ಗೆ 10 ತಿಂಗಳಿಂದ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಈ ದಿನ ದಿನಾಂಕ 20/04/2021 ರಂದು ನನಗೆ ಠಾಣಾಧಿಕಾರಿಗಳು ಚೀತಾ ಕರ್ತವ್ಯಕ್ಕೆ ನೇಮಿಸಿರುತ್ತಾರೆ.   ಕೋವಿಡ್-19  ಸಾಂಕ್ರಾಮಿಕ ರೋಗದ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಾಂಕ್ರಾಮಿಕ ರೋಗಗಳು ಪ್ರಸರಿಸದಂತೆ ವ್ಯಕ್ತಿಗಳು ಗುಂಪು ಗೂಡುವುದನ್ನು ಯಾವುದೇ ಕಾರ್ಯಕ್ರಮಗಳ ಆಚರಣೆ ಮಾಡುವುದನ್ನು ತಡೆಯಲು ವ್ಯಕ್ತಿಯಿಂದ ವ್ಯಕ್ತಿಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳಲು ಮುಂಜಾಗ್ರತ ಕ್ರಮ ಕೈಗೊಳ್ಳಲು ದಿನಾಂಕ 20/04/2021 ರಂದು ನಾನು ಮತ್ತು ಹೆಚ್.ಸಿ-14 ಮುರಳಿ.ಕೆ.ಎಂ. ರವರು ಬಾಗೇಪಲ್ಲಿ ಟೌನ್ ನಲ್ಲಿ ಗಸ್ತು ನಿರ್ವಹಿಸುತ್ತಿದ್ದಾಗ ಬಾಗೇಪಲ್ಲಿ ಟೌನ್ ಬಸ್ ನಿಲ್ದಾಣದ  ಮುಂಬಾಗ ಸಾಗರ್ ಬಾರ್ ಪಕ್ಕದಲ್ಲಿ ಸಂಜೆ ಸುಮಾರು 6-00 ಗಂಟೆಯಲ್ಲಿ ಸಾಂಕ್ರಾಮಿಕ ರೋಗ ಹರಡುವುದು ಗೊತ್ತಿದ್ದು ಗುಂಪಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಮಾಸ್ಕನ್ನು ಧರಿಸದೇ ವ್ಯಾಪಾರ ಮಾಡುತ್ತಿದ್ದು ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡುತ್ತಿದ್ದುದ್ದು ಕಂಡು ಬಂದಿರುತ್ತದೆ. ಸ್ಥಳದಲ್ಲಿದ್ದ  ಹೂವಿನ ಅಂಗಡಿ ಮಾಲೀಕನ ಹೆಸರು ವಿಳಾಸ ಕೇಳಲಾಗಿ ಮೂರ್ತಿ ಬಿನ್ ಅಂಜಿನಪ್ಪ, 30 ವರ್ಷ, ಹೂವಿನ ವ್ಯಾಪಾರ, ನಾಯಕ ಜನಾಂಗ ,ವಾಸ 21 ನೇ ವಾರ್ಡ, ಬಾಗೇಪಲ್ಲಿ ಟೌನ್ ಎಂದು ತಿಳಿದುಬಂದಿರುತ್ತದೆ. ಸದರಿ ಮಾಲೀಕನು ಗ್ರಾಹಕರನ್ನು ಗುಂಪಾಗಿ ನಿಲ್ಲಿಸಿಕೊಂಡು  ಮಾಸ್ಕ ಧರಿಸದೇ ಸಾಮಾಜಿಕ  ಅಂತರವನ್ನು ಕಾಯ್ದು ಕೊಳ್ಳದೇ  ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆ 

ಆದ್ದರಿಂದ ಮೂರ್ತಿ ಬಿನ್ ಅಂಜಿನಪ್ಪ, 30 ವರ್ಷ, ಹೂವಿನ ವ್ಯಾಪಾರ, ನಾಯಕ ಜನಾಂಗ ,ವಾಸ 21 ನೇ ವಾರ್ಡ, ಬಾಗೇಪಲ್ಲಿ ಟೌನ್ ರವರ ವಿರುದ್ದ ಕರ್ನಾಟಕ ಸಾಂಕ್ರಾಮಿಕ ಆದ್ಯಾದೇಶ-2020 ರ ಅಡಿಯಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ವರದಿಯನ್ನು ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.103/2021 ಕಲಂ. 78(3) ಕೆ.ಪಿ ಆಕ್ಟ್:-

          ದಿನಾಂಕ: 20/04/2021 ರಂದು ಮದ್ಯಾಹ್ನ 2-25 ಗಂಟೆಗೆ ಶ್ರೀ  ಕೃಷ್ಣಪ್ಪ ಎಸ್ ಸಿಹೆಚ್ ಸಿ-80, ಡಿಸಿಬಿ ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಮಾಲು, ಆರೋಪಿ, ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ  ದೂರಿನ ಸಾರಾಂಶವೇನೆಂದರೆ  ನಾನು ಮತ್ತು ಸಿಪಿಸಿ-152 ಜಯಣ್ಣ ರವರಿಗೆ ದಿನಾಂಕ:20/04/2021 ರಂದು ಡಿಸಿಬಿ ಸಿಇಎನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆದ ಶ್ರೀ ರಾಜಣ್ಣ ರವರು ಬಾಗೇಪಲ್ಲಿ ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ದಾಳಿ ಮಾಡಲು ನಮಗೆ ನೇಮಿಸಿದ್ದು ಅದರಂತೆ ನಾವು ಬಾಗೇಪಲ್ಲಿ ತಾಲ್ಲೂಕು ಯಲ್ಲಂಪಲ್ಲಿ, ಮಿಟ್ಟೇಮರಿ, ಕಾರಕೂರು ಕ್ರಾಸ್ ಕಡೆಗಳಲ್ಲಿ ಗಸ್ತಿನಲ್ಲಿದ್ದಾಗ ಮದ್ಯಾಹ್ನ 1-15 ಗಂಟೆಯಲ್ಲಿ ಯಾರೋ ಒಬ್ಬ ಆಸಾಮಿ ದೇವರಗುಡಿಪಲ್ಲಿ ಬಸ್ ನಿಲ್ದಾಣ ಹತ್ತಿರ ಅಕ್ರಮವಾಗಿ ಮಟ್ಕ ಅಂಕಿಗಳನ್ನು ಬರೆದುಕೊಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ಅಲ್ಲಿಯೇ ಇದ್ದ ಪಂಚರನ್ನು ಬರಮಾಡಿಕೊಂಡು ಸದರಿ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಅಸಾಮಿ 1 ರೂಗೆ 70 ರೂ ಕೊಡುವುದಾಗಿ ಕೂಗುತ್ತಿದ್ದವನನ್ನು ಸುತ್ತುವರೆದು ಹಿಡಿದು ಆತನ ಹೆಸರು ವಿಳಾಸ ಕೇಳಲಾಗಿ ಶ್ರೀನಿವಾಸ ಬಿನ್ ರಾಮಚಂದ್ರಪ್ಪ, 45 ವರ್ಷ, ಬಲಜಿಗರು, ವಾಸ:ದೇವರಗುಡಿಪಲ್ಲಿ ಎಂದು ತಿಳಿಸಿಒದ್ದು ಅವನನ್ನು ಪರಿಶಿಲನೆ ಮಾಡಲಾಗಿ ವಿವಿಧ ಸಂಖ್ಯೆಯ ಅಂಕಿಗಳನ್ನು ಬರೆದಿರುವ 1 ಮಟ್ಕಾ ಚೀಟಿ, 1 ಬಾಲ್ ಪಾಯಿಂಟ್ ಪೆನ್ ಹಾಗೂ 1210 ರೂಗಳಿದ್ದು ಮೇಲ್ಕಂಡವುಗಳನ್ನು ಪಂಚರ ಸಮಕ್ಷಮದಲ್ಲಿ ನಮ್ಮ ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಠಾಣಾಧಿಕಾರಿಗಳಾದ ನಿಮ್ಮ ಮುಂದೆ ಮಾಲು, ಆರೋಪಿ, ಮತ್ತು ಅಸಲು ಪಂಚನಾಮೆಯೊಂದಿಗೆ ಹಾಜರುಪಡಿಸಿದ್ದು, ಮುಂದಿನ ಕ್ರಮ ಜರುಗಿಸಲು ಕೋರಿ  ನೀಡಿದ ದೂರನ್ನು ಪಡೆದು ಠಾಣಾ ಎನ್ ಸಿ ಆರ್ 100/2021 ರಂತೆ ಎನ್ ಸಿ ಆರ್ ನ್ನು ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 21-04-2021 ರಂದು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

3. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.104/2021 ಕಲಂ. 78(3) ಕೆ.ಪಿ ಆಕ್ಟ್:-

          ದಿನಾಂಕ: 20/04/2021 ರಂದು ಮದ್ಯಾಹ್ನ 3-45 ಗಂಟೆಗೆ ಶ್ರೀ  ಕೃಷ್ಣಪ್ಪ ಎಸ್ ಸಿಹೆಚ್ ಸಿ-80, ಡಿಸಿಬಿ ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಮಾಲು, ಆರೋಪಿ, ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ  ದೂರಿನ ಸಾರಾಂಶವೇನೆಂದರೆ ನಾನು ಮತ್ತು ಸಿಪಿಸಿ-152 ಜಯಣ್ಣ ರವರಿಗೆ ದಿನಾಂಕ:20/04/2021 ರಂದು ಡಿಸಿಬಿ ಸಿಇಎನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆದ ಶ್ರೀ ರಾಜಣ್ಣ ರವರು ಬಾಗೇಪಲ್ಲಿ ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ದಾಳಿ ಮಾಡಲು ನಮಗೆ ನೇಮಿಸಿದ್ದು ಅದರಂತೆ ನಾವು ಬಾಗೇಪಲ್ಲಿ ತಾಲ್ಲೂಕು ಯಲ್ಲಂಪಲ್ಲಿ, ಮಿಟ್ಟೇಮರಿ, ಕಾರಕೂರು ಕ್ರಾಸ್ ಕಡೆಗಳಲ್ಲಿ ಗಸ್ತಿನಲ್ಲಿದ್ದಾಗ ಮದ್ಯಾಹ್ನ 2-30 ಗಂಟೆಯಲ್ಲಿ ಯಾರೋ ಒಬ್ಬ ಆಸಾಮಿ ಕಾರಕೂರು ಕ್ರಾಸ್ ನ ಹತ್ತಿರ ಅಕ್ರಮವಾಗಿ ಮಟ್ಕ ಅಂಕಿಗಳನ್ನು ಬರೆದುಕೊಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ಕೊಂಡಂವಾರಿಪಲ್ಲಿ ಗ್ರಾಮದಲ್ಲಿದ್ದ ಇದ್ದ ಪಂಚರನ್ನು ಬರಮಾಡಿಕೊಂಡು ಸದರಿ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಅಸಾಮಿ 1 ರೂಗೆ 70 ರೂ ಕೊಡುವುದಾಗಿ ಕೂಗುತ್ತಿದ್ದವನನ್ನು ಸುತ್ತುವರೆದು ಹಿಡಿದು ಆತನ ಹೆಸರು ವಿಳಾಸ ಕೇಳಲಾಗಿ ರವೀಂದ್ರ ಬಿನ್ ಅಂಜಿನಪ್ಪ, 40 ವರ್ಷ, ನಾಯಕರು, ವಾಸ: ಯಲ್ಲಂಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು. ಎಂದು ತಿಳಿಸಿಒದ್ದು ಅವನನ್ನು ಪರಿಶಿಲನೆ ಮಾಡಲಾಗಿ ವಿವಿಧ ಸಂಖ್ಯೆಯ ಅಂಕಿಗಳನ್ನು ಬರೆದಿರುವ 1 ಮಟ್ಕಾ ಚೀಟಿ, 1 ಬಾಲ್ ಪಾಯಿಂಟ್ ಪೆನ್ ಹಾಗೂ 750 ರೂಗಳಿದ್ದು ಮೇಲ್ಕಂಡವುಗಳನ್ನು ಪಂಚರ ಸಮಕ್ಷಮದಲ್ಲಿ ನಮ್ಮ ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಠಾಣಾಧಿಕಾರಿಗಳಾದ ನಿಮ್ಮ ಮುಂದೆ ಮಾಲು, ಆರೋಪಿ, ಮತ್ತು ಅಸಲು ಪಂಚನಾಮೆಯೊಂದಿಗೆ ಹಾಜರುಪಡಿಸಿದ್ದು, ಮುಂದಿನ ಕ್ರಮ ಜರುಗಿಸಲು ಕೋರಿ  ನೀಡಿದ ದೂರನ್ನು ಪಡೆದು ಠಾಣಾ ಎನ್ ಸಿ ಆರ್ 101/2021 ರಂತೆ ಎನ್ ಸಿ ಆರ್ ನ್ನು ದಾಖಲಿಸಿಕೊಂಡಿರುತ್ತೆ.  ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 21-04-2021 ರಂದು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.64/2021 ಕಲಂ. 188 ಐ.ಪಿ.ಸಿ & 5 THE KARNATAKA EPIDEMIC DISEASES ACT, 2020  :-

          ದಿನಾಂಕ: 20/04/2021 ರಂದು ಮದ್ಯಾಹ್ನ 1-45 ಗಂಟೆಯ ಸಮಯದಲ್ಲಿ ಶ್ರೀ.ಬಿ.ಪಿ.ಮಂಜು ಪಿ.ಎಸ್.ಐ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 20/04/2021 ರಂದು ನಾನು ಸಿಬ್ಬಂದಿ ಯವರಾದ ಶ್ರೀ. ಸುರೇಶ. ಹೆಚ್.ಸಿ. 38. ಶ್ರೀ. ಕರಿಬಾಬು ಸಿಪಿಸಿ 446, ಚಾಲಕ ಮಂಜುನಾಥ ಎ.ಹೆಚ್.ಸಿ. 23 ರವರೊಂದಿಗೆ ಕೋವಿಡ್-19 ಸಾಂಕ್ರಾಮಿಕ ರೋಗದ 2ನೇ ಅಲೆ ವ್ಯಾಪಕವಾಗಿ  ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರದ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಾಂಕ್ರಾಮಿಕ ರೋಗಗಳು ಪ್ರಸರಿಸದಂತೆ ವ್ಯಕ್ತಿಗಳು ಗುಂಪುಗೂಡುವುದನ್ನು. ಯಾವುದೇ ಕಾರ್ಯಕ್ರಮಗಳ ಆಚರಣೆ ಮಾಡುವುದನ್ನು  ತಡೆಯಲು,  ವ್ಯಕ್ತಿಯಿಂದ ವ್ಯಕ್ತಿಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಚಿಕ್ಕಬಳ್ಳಾಪುರ  ಗ್ರಾಮಾಂತರ   ಪೊಲೀಸ್ ಠಾಣಾ ಸರಹದ್ದಿನ  ವ್ಯಾಪ್ತಿಯಲ್ಲಿ ಗಸ್ತು  ನಿರ್ವಹಿಸುತ್ತಿದ್ದಾಗ  ಚಿಕ್ಕಬಳ್ಳಾಪುರ ತಾಲ್ಲೂಕು ಎನ್.ಹೆಚ್. 44 ರಸ್ತೆಯ  ಸೇಟ್ ದಿನ್ನೆಯ  ಸಮೀಪ ನಂದಿನಿ ಹೋಟೆಲ್  ಮುಂಭಾಗ ಸೇವಾ ರಸ್ತೆಯ ಬದಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಾಹ್ನ 1-00 ಗಂಟೆಯ ಸಮಯದಲ್ಲಿ AP-02-TH-5001  ಬೊಲೆರೋ ವಾಹನದ ಚಾಲಕನು ರಸ್ತೆಯ ಬದಿಯಲ್ಲಿ ವಾಹನವನ್ನು ನಿಲ್ಲಿಸಿಕೊಂಡು ವಾಹನದ ಒಳಗಡೆ  ಸಾಂಕ್ರಾಮಿಕ ರೋಗ ಹರಡುತ್ತಿರುವುದು  ಗೊತ್ತಿದ್ದು  ಗುಂಪಾಗಿ  ವ್ಯಕ್ತಿಯಿಂದ  ವ್ಯಕ್ತಿಗೆ ಸಾಮಾಜಿಕ  ಅಂತರವನ್ನು  ಕಾಯ್ದುಕೊಳ್ಳದೇ  ಮಾಸ್ಕ್ ನ್ನು ಧರಿಸದೇ , ಚಾಲಕನು 05 ಜನರನ್ನು ವಾಹನದಲ್ಲಿ ಕುಳ್ಳರಿಸಿಕೊಂಡು ಸರ್ಕಾರ ಆದೇಶವನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿರುತ್ತದೆ. ಸ್ಥಳದಲ್ಲಿದ್ದ ಚಾಲಕನ ಹೆಸರು ವಿಳಾಸ ತಿಳಿಯಲಾಗಿ  ರಾಮು ಬಿನ್  ಲೇಟ್ ಚಿನ್ನಪ್ಪ 27ವರ್ಷ ನಾಯಕರು ಸಿದ್ದಯ್ಯಗುಟ್ಟ ಧರ್ಮಾವರಂ ಅನಂತಪುರಂ ಜಿಲ್ಲೆ ಆಂದ್ರ ಪ್ರದೇಶ ಎಂಬುದಾಗಿ ತಿಳಿಸಿದ್ದು ಆತನ ಜೊತೆಯಲ್ಲಿ ವಾಹನದಲ್ಲಿದ್ದವರ ಹೆಸರು ವಿಳಾಸ  ತಿಳಿಯಲಾಗಿ (1)  ರಮೇಶನಾಯ್ಕ ಬಿನ್ ಗೋಪಾಲನಾಯ್ಕ 37ವರ್ಷ ಲಂಬಾಣಿ ಜನಾಂಗ ಸುಂದರಯ್ಯ ನಗರ ಧರ್ಮಾವರಂ. (2) ವಿಜಯಕುಮಾರ ನಾಯ್ಕ  ಬಿನ್  ಚಿನ್ನತಿಪ್ಪಣ್ಣ 48ವರ್ಷ ಲಂಬಾಣಿ ಜನಾಂಗ ಸಿದ್ದಯ್ಯ ಗುಟ್ಟ  ಧರ್ಮಾವರಂ.  (3) ಲಕ್ಷ್ಮನಾಯ್ಕ್  ಬಿನ್ ಲೇಟ್ ರಾಮ್ಲಾ ನಾಯ್ಕ 53ವರ್ಷ  ಶಾರದನಗರ ಧರ್ಮಾವರಂ. (4) ಶ್ರೀನಿವಾಸ ಬಿನ್  ದೇಸಾ ನಾಯ್ಕ್ 46ವರ್ಷ  ಎಸ್.ಟಿ. ಜನಾಂಗ. ಕೊತ್ತಚೆರವು ಗ್ರಾಮ ಅನಂತಪುರಂ ಜಿಲ್ಲೆ , (5) ಹರಿನಾಯ್ಕ ಬಿನ್ ಲೇಟ್ ಲಕ್ಷ್ಮೀನಾಯ್ಕ 37ವರ್ಷ  ಲಂಬಾಣಿ ಜನಾಂಗ ಜಿರಾಯ್ತಿ. ಶಾರದನಗರ ಧರ್ಮಾವರಂ ಟೌನ್ ಎಂತ ತಿಳಿಸಿದರು ಸದರಿ ಆಸಾಮಿಗಳ  ವಿರುದ್ದ  ಕಲಂ: 188 ಐಪಿಸಿ ರೆ/ವಿ ಕಲಂ: 5 ಕರ್ನಾಟಕ ಸಾಂಕ್ರಾಮಿಕ ರೋಗಗಳ ಆದ್ಯಾದೇಶ 2020 ರ ಅಡಿಯಲ್ಲಿ  ಕಾನೂನು  ರೀತ್ಯಾ ಕ್ರಮ  ಕೈಗೊಳ್ಳಲು  ಸೂಚಿಸಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

5. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.65/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:21.04.2021 ರಂದು ಮದ್ಯಾಹ್ನ 12-35 ಗಂಟೆಗೆ ಪಿ.ಎಸ್.ಐ ಸಾಹೇಬರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:21.04.2021 ರಂದು ಮದ್ಯಾಹ್ನ 12-30 ಗಂಟೆಗೆ ಠಾಣೆಯಲ್ಲಿದ್ದಾಗ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಮಂಚನಬಲೆ ಗ್ರಾಮ ವಾಸಿ ನಾಗರಾಜ ಬಿನ್ ರಾಮಯ್ಯ 49 ವರ್ಷ ಬಲಿಜಿಗರು ಚಿಲ್ಲರೆ ಅಂಗಡಿ ವ್ಯಾಪಾರ ರವರು ತಮ್ಮ ಚಿಲ್ಲರೆ ಅಂಗಡಿಯ ಬಳಿ ಯಾವುದೇ ಪರವಾನಗಿ ಇಲ್ಲದೇ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸದರಿ ಆಸಾಮಿಯ ವಿರುದ್ದ ಕಲಂ 15[ಎ], 32[3] ಕೆ.ಇ ಆಕ್ಟ್ ರೀತ್ಯಾ ಪ್ರಕರಣ ಕಾಖಲಿಸಿಕೊಳ್ಳು ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.

 

6. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.29/2021 ಕಲಂ. 454,448,504 ಐ.ಪಿ.ಸಿ:-

          ದಿನಾಂಕ:19-04-2021 ರಂದು ಈ ಕೇಸಿನ ಪಿರ್ಯಾಧಿ ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶವೇನೆಂದರೆ  ತಾನು  ಮೇಲ್ಕಂಡ ವಿಳಾಸದಲ್ಲಿ  ತನ್ನ ಕುಟುಂಭದೊಂದಿಗೆ ವಾಸವಾಗಿದ್ದು ತನಗೆ ತಾನು ವಾಸವಿರುವ  ಮನೆ ಹಾಗೂ ಇನ್ನೂ 2 ಮನೆಗಳಿದ್ದು ಎಲ್ಲಾ ಸ್ವತ್ತುಗಳು ತಮ್ಮ ತಂದೆಯವರಾದ ದಿವಂಗತ  ಎಂ.ಪಿ. ವೆಂಕಟಾಚಲ ರವರ ಹೆಸರಿನಲ್ಲಿರುತ್ತದೆ  ತನ್ನ ತಂದೆ ತಾಯಿಗೆ ಒಟ್ಟು  3 ಗಂಡು ಹಾಗೂ ಒಂದು ಹೆಣ್ಣು ಮಗಳಿರುತ್ತಾರೆ.  ತಮ್ಮ ತಾಯಿಯವರಿಗೆ ತೀವ್ರ ಅನಾರೋಗ್ಯವಿದ್ದು ದಿನಾಂಕ: 22-03-2021 ರಂದು ನಿಧನರಾಗಿದ್ದು  ದಿನಾಂಕ: 01-04-2021 ರಂದು 11 ದಿನಗಳ ಕಾರ್ಯವನ್ನು ಮಾಡಿ ಮುಗಿಸಿರುತ್ತೇವೆ. ದಿನಾಂಕ: 02-04-2021 ರಂದು  ಎದುರು ಅರ್ಜಿಧಾರನಾದ ತನ್ನ ತಮ್ಮ ಎಂ.ವಿ. ರವಿಕುಮಾರ್  ಮತ್ತು ಅತನ ಹೆಂಡತಿ ತಾನು ವಾಸವಾಗಿರುವ  ಮನೆಯ ಬೀಗವನ್ನು ಹೊಡೆದುಹಾಕಿ  ಅತಿಕ್ರಮವಾಗಿ  ಮನೆಗೆ ಪ್ರವೇಶ ಮಾಡಿರುವುದಾಗಿ,  ಈ ಬಗ್ಗೆ ಕೇಳಿದ್ದಕ್ಕೆ  ತನ್ನನ್ನು ಮತ್ತು ತನ್ನ ಮನೆಯವರನ್ನು  ಅವ್ಯಚ್ಯಶಬ್ದಗಳಿಂದ ಬೈದು ಹಲ್ಲೆ ಮಾಡಲು ಪ್ರಯತ್ನಿಸಿದ್ದು ಈ ಬಗ್ಗೆ ಹಿರಿಯರು ಸಮಾಧಾನ ಮಾಡಿ  ಹೇಳಿದರೂ  ಸಹ ತನ್ನ ಮನೆಯ  ಬೀಗದ ಕೀಗಳನ್ನು ತೆಗೆದುಕೊಂಡು ಹೋಗಿರುತ್ತಾರೆ. ನಂತರ  ರವಿಕುಮಾರ್ ರವರ ಹೆಂಡತಿ ಬೀಗ ತೆಗೆದು  ಮನೆಯಲ್ಲಿದ್ದ ಕೆಲವು ಗೃಹೋಪಯೋಗಿ ವಸ್ತುಗಳನ್ನು ತೆಗೆದು ತಮ್ಮ ಮನೆಗೆ ಸಾಗಿಸಿದ್ದೆ ಅಲ್ಲದೆ ಮನೆಯಲ್ಲಿರುತ್ತಾಳೆಂದು  ಈ ಬಗ್ಗೆ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಮೇಲ್ಕಂಡ ಉಲ್ಲೇಖದಂತೆ  ಎನ್ ಸಿ ಅರ್ ಪ್ರಕರಣವನ್ನು ದಾಖಲಿಸಿಕೊಂಡಿದ್ದು  ಸದರಿ ವಿಚಾರವಾಗಿ ಅಣ್ಣತಮ್ಮಂದಿರು ಪದೇ ಪದೇ ಗಲಾಟೆಗಳು ಮಾಡಿಕೊಂಡು  ಠಾಣೆಗೆ ಬಂದು  ದೂರನ್ನು ನೀಡುವುದು ಸಾಮಾನ್ಯ ವಾಗಿರುತ್ತದೆ. ಆದ್ದರಿಂದ   ಪಿರ್ಯಾದಿದಾರರು  ನೀಡಿರುವ ದೂರು ಕಲಂ 454, 448, 504,  ಐಪಿಸಿ ರ ಅನ್ವಯ ಪ್ರಕರಣವು ಅಸಂಜ್ಞೇಯ ಅಪರಾಧವಾಗಿದ್ದು ಸದರಿ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲು  ಘನ  ನ್ಯಾಯಾಲಯದಲ್ಲಿ ಅನುಮತಿಗಾಗಿ ಕೋರಿ  ಮನವಿಯನ್ನು ಸಲ್ಲಿಸಿಕೊಂಡಿದ್ದು   ಅದರಂತೆ  ಈ ದಿನ ದಿನಾಂಕ: 20-04-2021 ರಂದು ಸಂಜೆ 6-00 ಗಂಟೆಗೆ ನ್ಯಾಯಾಲಯದ ಪೇದೆ-332 ಸಂತೋಷ ಜಕ್ಕಣ್ಣನವರ್ ರವರು  ಘನ ನ್ಯಾಯಾಲಯದಿಂದ  ಅನುಮತಿಯನ್ನು ಪಡೆದು ತಂದು ಹಾಜರು ಪಡಿಸಿದ  ದೂರನ್ನು ಪಡೆದು ಠಾಣಾ ಮೊಸಂ 29/2021 ಕಲಂ 454, 448, 504,  ಐಪಿಸಿ ರೀತ್ಯಾ ಕೇಸು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತೆ.

 

7. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.27/2021 ಕಲಂ. 279,337ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ:-20/04/2021 ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಎಂ.ವಿ.ಜೆ ಆಸ್ಪತ್ರೆಯಲ್ಲಿ ಗಾಯಾಳು ಶ್ರೀ. ವಿಜಯ್ ಕುಮಾರ್ ಪಿ ಬಿನ್ ಪೆದ್ದಣ್ಣ 24 ವರ್ಷ, ಭೋವಿ ಜನಾಂಗ, ಚಾಲಕ ವೃತ್ತಿ, ಲಿಂಗಾಪುರ ಗ್ರಾಮ, ದೊಡ್ಡ ಕಡತೂರು ಅಂಚೆ, ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ ರವರು ನೀಡಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ತಾನು ಚಾಲಕ ವೃತ್ತಿಯಿಂದ ಜೀವನ ಮಾಡಿಕೊಂಡಿದ್ದು, ದಿನಾಂಕ:-17/04/2021 ರಂದು ತನಗೆ ಪರಿಚಯವಿರುವ ಮಾಲೂರು ನಗರದ ಆರ್.ಮಧುಕುಮಾರ್ ಬಿನ್ ರುದ್ರಪ್ಪ ರವರ KA-53-D-9251 ರ ಕ್ಯಾಂಟರ್ ಲಾರಿಯಲ್ಲಿ ತರಕಾರಿಯನ್ನು ತುಂಬಿಕೊಂಡು ಮಾಲೂರು ತಾಲ್ಲೂಕಿನ ಮಾಸ್ತಿಯಿಂದ ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ಗಾರ್ಲದಿನ್ನೆ ಗ್ರಾಮದಲ್ಲಿ ತರಕಾರಿಯನ್ನು ಅನ್ ಲೋಡ್ ಮಾಡಿ ನಂತರ ಅಲ್ಲಿಯೇ ವಿಶ್ರಾಂತಿ ಮಾಡಿಕೊಂಡು ದಿನಾಂಕ:-18/04/2021 ರಂದು ಬೆಳಿಗ್ಗೆ 06-45 ಗಂಟೆಯ ಸಮಯದಲ್ಲಿ ತಮ್ಮ ಗ್ರಾಮಕ್ಕೆ ಬರಲು ಬಾಗೇಪಲ್ಲಿ – ಬೆಂಗಳೂರು ಎನ್.ಹೆಚ್-44 ಹೈವೇ ರಸ್ತೆಯಲ್ಲಿ ಬರುತ್ತಿದ್ದಾಗ ಹಿಂದೆ ಬರುತ್ತಿದ್ದ ಯಾವುದೋ ಲಾರಿ ಚಾಲಕ ಆರನ್ ಮಾಡುತ್ತಿದ್ದರಿಂದ ಸದರಿ ಲಾರಿಗೆ ದಾರಿ ಬಿಟ್ಟು ರಸ್ತೆಯ ಎಡ ಬದಿಯಲ್ಲಿ ಹೋಗುತ್ತಿದ್ದಾಗ ಸದರಿ ತಮ್ಮ ವಾಹನದ ಮುಂದೆ ಹೋಗುತ್ತಿದ್ದ ಯಾವುದೋ ಲಾರಿ ವಾಹನದ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಯಾವುದೇ ಸೂಚನೆಯನ್ನು ನೀಡದೇ ಸಡನ್ ಆಗಿ ಬ್ರೇಕ್ ಹಾಕಿದ್ದರಿಂದ ತಾನು ಚಾಲನೆ ಮಾಡುತ್ತಿದ್ದ ಕ್ಯಾಂಟರ್ ಲಾರಿ ವಾಹನವನ್ನು ಮುಂದೆ ಯಾವುದೇ ಸೂಚನೆಯನ್ನು ನೀಡದೇ ಸಡನ್ ಆಗಿ ಬ್ರೇಕ್ ಹಾಕಿದ್ದ ಲಾರಿಯ ಹಿಂಭಾಗಕ್ಕೆ ತಗುಲಿಸಿದ್ದರ ಪರಿಣಾಮ ಕ್ಯಾಂಟರ್ ವಾಹನದ  ಮುಂಭಾಗ ಪೂರಾ ಜಕಂಗೊಂಡಿದ್ದು ತನಗೆ ತಲೆಗೆ, ಕತ್ತಿನ ಬಳಿ, ಬಲಕೈಗೆ, ಬಲ ಭುಜದ ಬಳಿ, ರಕ್ತ ಗಾಯಗಳಾಗಿ ಬಲ ತೊಡೆಗೆ, ಮೊಣ ಕಾಲಿನ ಬಳಿ, ಮೊಣಕಾಲಿನ ಕೆಳಭಾಗ ಮೂಗೇಟುಗಳಾಗಿದ್ದು ತಕ್ಷಣ ಅಲ್ಲಿನ ಸ್ಥಳೀಯರು ತನ್ನನ್ನು ಉಪಚರಿಸಿ ಚಿಕಿತ್ಸೆಗಾಗಿ ಅಲ್ಲಿಗೆ ಬಂದ 108 ಆಂಬ್ಯೂಲೆನ್ಸ್ ವಾಹನದಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಅಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ನಂತರ ವೈಧ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿ ಇರುವ MVJ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ತಡವಾಗಿ ಈ ದಿನ ದಿನಾಂಕ:-20/04/2021 ರಂದು ಸದರಿ ಅಪಘಾತಕ್ಕೆ ಕಾರಣನಾದ ಯಾವುದೋ ಲಾರಿ ವಾಹನವನ್ನು ಹಾಗೂ ಅದರ ಚಾಲಕನನ್ನು ಪತ್ತೇ ಮಾಡಿ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ್ದರ ಹೇಳಿಕೆಯ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

8. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.159/2021 ಕಲಂ. 379 ಐ.ಪಿ.ಸಿ:-

          ದಿನಾಂಕ: 20/04/2021 ರಂದು ಮದ್ಯಾಹ್ನ 15.00 ಗಂಟೆಗೆ ಶ್ರೀಮತಿ ಆದಿಲಕ್ಷ್ಮಿ ಕೊಂ ವೆಂಕಟಾಚಲಪತಿ, 35 ವರ್ಷ. ಆದಿಕರ್ನಾಟಕ, ಸಂತೇಕಲ್ಲಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಗ್ರೇಡ್-1 ಕಾರ್ಯದರ್ಶಿ, ಕಾಗತಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಸಂತೇಕಲ್ಲಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಸುಮಾರು 3 ವರ್ಷಗಳಿಂದ ಗ್ರೇಡ್ -1 ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುತ್ತೇನೆ. ಸಂತೆಕಲ್ಲಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಬೀರ್ಜೇನಹಳ್ಳಿ ಗ್ರಾಮದಲ್ಲಿ ಗ್ರಾಮಪಂಚಾಯ್ತಿ ವತಿಯಿಂದ ಸುಮಾರು 20 ವರ್ಷಗಳ ಹಿಂದೆ 1000 ಅಡಿಯಷ್ಟು ಆಳದ ಕೊಳವೆ ಬಾವಿಯನ್ನು  ಕೊರೆಸಿದ್ದು, ಈ ಕೊಳವೆ ಬಾವಿಗೆ ಡಬಲ್ ಕೇಬಲ್ ವೈರ್ ನ್ನು ಆಳವಡಿಸಿದ್ದು ಆ ಪೈಕಿ ಕೊಳವೆ ಬಾವಿಯಿಂದ ಸಿಸ್ಟನ್ ವರೆಗೆ ಭೂಮಿಯ ಮೇಲ್ಬಾಗದಲ್ಲಿ ಆಳವಡಿಸಿದ್ದ ಸುಮಾರು 150 ಮೀಟರ್ ಉದ್ದದ ಕೇಬಲ್ ವೈರ್ ನ್ನು ಯಾರೋ ಕಳ್ಳರು ದಿನಾಂಕ: 19/04/2021 ರಂದು ರಾತ್ರಿ ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ 150 ಮೀಟರ್ ಕೇಬಲ್ ವೈರ್ ನ ಬೆಲೆ ಸುಮಾರು 30.000 ರೂ ಗಳಾಗಿರುತ್ತೆ. ಇದೂವರೆವಿಗೂ ತಾನು ಪಂಚಾಯ್ತಿಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಆದ್ದುದ್ದರಿಂದ ತಾವುಗಳು ಸ್ಥಳಕ್ಕೆ ಭೇಟಿ ನೀಡಿ ಕಳ್ಳರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗರುತ್ತೆ.

 

9. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.60/2021 ಕಲಂ. 279,337 ಐ.ಪಿ.ಸಿ:-

          ದಿನಾಂಕ: 20/04/2021 ರಂದು ಬೆಳಿಗ್ಗೆ 11:45 ಗಂಟೆಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಾದ  ಮೌನಿಕಾ ಕೋಂ ನರಸಿಂಹಮೂರ್ತಿ, 22 ವರ್ಷ, ಎನ್ ಎನ್ ಟಿ ರಸ್ತೆ, ಚಿಂತಾಮಣಿ ನಗರ ರವರ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ವಾಪಸ್ಸಾಗಿ ಸಾರಾಂಶವೇನೆಂದರೆ, ತಾನು ದಿ: 20/04/2021 ರಂದು ಬೆಳಿಗ್ಗೆ ತಾನು ಮತ್ತು ತನ್ನ ಮಗಳಾದ ನೇಹಾ ರವರು ತಮ್ಮ ತಾಯಿಯಾದ ವೆಂಕಟಲಕ್ಷ್ಮಮ್ಮ ರವರೊಂದಿಗೆ ಚಿಂತಾಮಣಿ ನಗರದ ಅಜಾದ್ ಚೌಕ್ ಬಳಿಯ ಧನಲಕ್ಷ್ಮೀ ಆಸ್ಪತ್ರೆಗೆ ಬಂದು ತನಗೆ ಚಿಕಿತ್ಸೆ ಪಡಿಸಿಕೊಂಡು ತಮ್ಮ ಮನೆಗೆ ವಾಪಸ್ಸು ಹೋಗಲು ಎಂ. ಜಿ ರಸ್ತೆಯಲ್ಲಿರುವ ಭಾರತ್ ಪಾಲಿ ಕ್ಲಿನಿಕ್  ಮುಂಭಾಗದ ಪುಟ್ ಪಾತ್ ನಲ್ಲಿ ನಿಂತಿದ್ದಾಗ ಶಿಡ್ಲಘಟ್ಟ ಕಡೆಯಿಂದ ಬೆಳಿಗ್ಗೆ 9:45 ಗಂಟೆ ಸಮಯದಲ್ಲಿ ಎಪಿ 04 ಆರ್ 3686 ಟ್ರಾಕ್ಟರ್ ನ ಚಾಲಕ ಟ್ರಾಕ್ಟರ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಎಡಗಾಲಿನ ಪಾದದ ಮೇಲೆ ಚಕ್ರವನ್ನು ಹತ್ತಿಸಿದ ಪರಿಣಾಮ ತನ್ನ ಪಾದಕ್ಕೆ ರಕ್ತಗಾಯವಾಗಿರುತ್ತದೆ, ಅಷ್ಟರಲ್ಲಿ ತನ್ನ ಜೊತೆಯಲ್ಲಿ ಇದ್ದ ತನ್ನ ತಾಯಿ ವೆಂಕಟಲಕ್ಷ್ಮಮ್ಮ ಹಾಗೂ ತನಗೆ ಪರಿಚಯವಿರುವ ದೇವರಾಜ್, ವೆಂಕಟಗಿರಿಕೋಟೆ ರವರು ಬಂದು ತನ್ನನ್ನು ಉಪಚರಿಸಿ ಯಾವುದೋ ಒಂದು ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿರುತ್ತಾರೆ, ಆದ್ದರಿಂದ ತನ್ನ ಮೇಲೆ ಮೇಲ್ಕಂಡ ಟ್ರಾಕ್ಟರ್ ನ ಚಾಲಕ  ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿ ರಕ್ತಗಾಯಪಡಿಸಿದ ಟ್ರಾಕ್ಟರ್ ಹಾಗೂ ಅದರ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

10. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.61/2021 ಕಲಂ. 379 ಐ.ಪಿ.ಸಿ:-

          ಪಿರ್ಯಾದಿದಾರರಾದ ಸಂಧ್ಯಾ ಠಾಣಿ. ಸಿ.ವಿ ಕೋಂ ಸತೀಶ್.ಎನ್.ವಿ, 29 ವರ್ಷ, ವಕ್ಕಲಿಗ, ವಾಸ: 416, ಗೌರಿ ಪೇಟೆ, 04 ನೇ ಕ್ರಾಸ್, ಕೋಲಾರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದೆ  ನಾನು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ, ದಿನಾಂಕ: 11/04/2021 ರಂದು ಮಧ್ಯಾಹ್ನ 2:30 ಗಂಟೆಯಲ್ಲಿ ಚಿಂತಾಮಣಿ ತಾಲ್ಲೂಕಿನ ಮಣಿಯಾರ ಮುದ್ದಲಹಳ್ಳಿಗೆ ಹೋಗಲು ಚಿಂತಾಮಣಿ ನಗರದ ಎಂ.ಜಿ ರಸ್ತೆಯಲ್ಲಿರುವ ಮಂಜುನಾಥ ಬೇಕರಿ ಬಳಿ ನನ್ನ ಕೆಎ-07-ಎಕ್ಸ್-7373 (ಚಾಸ್ಸಿ ನಂ:MD626BG46G1A07899  ಇಂಜಿನ್ ಸಂ: BG4AG1798605) ಜೂಪೀಟರ್ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಮನೆಗೆ ಸರಕು ತೆಗೆದುಕೊಂಡು ವಾಪಸ್ಸು ಬಂದು ನೋಡಲಾಗಿ ನನ್ನ ದ್ವೀಚಕ್ರ ವಾಹನವನ್ನು  ನಿಲ್ಲಿಸಿ ಜಾಗದಲ್ಲಿ ಪತ್ತೆಯಾಗಿರುವುದಿಲ್ಲ. ಆಕ್ಕಪಕ್ಕದ ರಸ್ತೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ನನ್ನ ದ್ವಿಚಕ್ರ ವಾಹನವನ್ನು ಯಾರೂ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ದ್ವಿಚಕ್ರ ವಾಹನವನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿದೆ. ಇದರ ಒಟ್ಟು ಬೆಲೆ 25,000 ರೂಗಳಾಗಿರುತ್ತೆ.  ಅಕ್ಕ ಪಕ್ಕದ ರಸ್ತೆಗಳಲ್ಲಿ ಹುಡುಕಾಡಿದರೂ ಸಹ ಪತ್ತೆಯಾಗದ ಕಾರಣ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

11. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.58/2021 ಕಲಂ. 304,338,420,465,471,504,34 ಐ.ಪಿ.ಸಿ:-

          ದಿನಾಂಕ:20/04/2021 ರಂದು ಸಂಜೆ 18-30 ಗಂಟೆಯಲ್ಲಿ ನ್ಯಾಯಾಲಯದ ಮ.ಪಿ.ಸಿ-364 ರವರು ಘನ ನ್ಯಾಯಾಲಯದಿಂದ ಸಾದಾರಪಡಿಸಿದ ಪಿ.ಸಿ.ಆರ್-52/2021 ರ ದೂರಿನ ಸಾರಾಂಶವೆನೇಂದರೆ ನಾಗರಾಜ್ ಬಿನ್ ಲೇಟ್ ವೆಂಕಟರಾಯಪ್ಪ @ ಕೇರ್ ಆಫ್ ಊಟಕೂರು ನಾರಾಯಣಪ್ಪ, 38 ವರ್ಷ, ನಾಯಕ ಜನಾಂಗ, ವಾಸ: ದೊಡ್ಡವದ್ದೇನಹಳ್ಳಿ ಗ್ರಾಮ, ಡಿ.ಪಾಳ್ಯ. ಹೋಬಳಿ, ಗೌರಿಬಿದನೂರು ತಾಲ್ಲೂಕು ರವರು ತನಗೆ ಸುಮಾರು 05 ವರ್ಷಗಳ ಹಿಂದೆ ನಾಗಮಣಿ ಬಿನ್ ಅಶ್ವತ್ಥಪ್ಪ, ದೊಡ್ಡವದ್ದೇನಹಳ್ಳಿ ಗ್ರಾಮ, ಡಿ. ಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರೊಂದಿಗೆ ವಿವಾಹವಾಗಿ, ತನ್ನ ಹೆಂಡತಿಯ ಮನೆಯಲ್ಲಿ ವಾಸವಾಗಿರುವುದಾಗಿ ತನ್ನ ಹೆಂಡತಿಯು ಗರ್ಭೀಣಿಯಾಗಿದ್ದು ದಿನಾಂಕ:31/09/2020 ರಂದು ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದು 1ನೇ ಅರೋಪಿಯು ಪಿರ್ಯಾದಿದಾರರ ಮಾತುಗಳನ್ನು ನಿರ್ಲಕ್ಷ್ಯ ಮಾಡಿ ಬಲವಂತವಾಗಿ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಅಲ್ಲಿನ ಸಿಬ್ಬಂದಿ ಹಾಗೂ 2 ನೇ ಅರೋಪಿಯು ಪಿರ್ಯಾದಿದಾರರ ಹೆಂಡತಿಗೆ ಸರಿಯಾದ ಚಿಕಿತ್ಸೆಯನ್ನು ನೀಡದೇ ಬಲವಂತವಾಗಿ ಹಿಂಸೆ ನೀಡಿ ಹೆರಿಗೆ ಮಾಡಿಸಿ ನಂತರ ಬೆಂಗಳೂರಿನ ವಾಣಿ ವಿಲಾಸ್ ಅಸ್ಪತೆಗೆ ಕಳುಹಿಸಲು ಯಾವುದೇ ಚಿಕಿತ್ಸಾ ಸೌಲಭ್ಯವಿಲ್ಲದ ಖಾಸಗಿ ಅಂಬುಲೆನ್ಸ್ನಲ್ಲಿ 1 ನೇ ಅರೋಪಿಯು ಕರೆಸಿ ಅದರಲ್ಲಿ ಯಾವುದೇ ಸಿಬ್ಬಂದಿ ಇಲ್ಲದೆ ಇರುವಂತಹ ವಾಹನದಲ್ಲಿ ಸರ್ಕಾರಿ ವೈದ್ಯರು ಆಗಿರುವ 2 ನೇ ಅರೋಪಿಯು ಕಳುಹಿಸಿದ್ದು ದೊಡ್ಡಬಳ್ಳಾಪುರ ಡಿ ಕ್ರಾಸ್ ಬಳಿ ಹೋಗುವಾಗ ಪಿರ್ಯಾದಿದಾರರ ಹೆಂಡತಿ ಹೊಟ್ಟೆಯನ್ನು ಹಿಡಿದುಕೊಂಡು ಕಿರುಚಿಕೊಂಡಾಗ ಅಲ್ಲಿ ಹತ್ತಿರದ ಕೊಲಂಬಿಯಾ ಅಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಿಗೆ ತೋರಿಸಿದಾಗ ಪಿರ್ಯಾದಿದಾರರ ಹೆಂಡತಿಯು ಮರಣ ಹೊಂದಿರುದಾಗಿ ವೈದ್ಯರು ತಿಳಿಸಿತ್ತಾರೆ. ರೆಫರ್ ಮಾಡಿರುವ ಬಗ್ಗೆ ಯಾವುದೇ ಲಿಖಿತ ದಾಖಲಾತಿಗಳನ್ನು ನೀಡದೇ ಅಸ್ಪತ್ರೆಯ ದಾಖಲಾತಿಗಳಲ್ಲಿ ಪಿರ್ಯಾದಿಯ ಸಹಿಯನ್ನು ಕನ್ನಡದಲ್ಲಿ  ನಾಗರಾಜ ಎಂದು ಸೃಷ್ಠಿಸಿಕೊಂಡು ವರದಿಯನ್ನು ನೀಡಿ ಸರಿಯಾದ ಚಿಕಿತ್ಸೆಯನ್ನು ನೀಡಲು 2 ನೇ ಅರೋಪಿಯು ನಿರ್ಲಕ್ಷ್ಯ ವಹಿಸಿದ್ದರಿಂದ ಪಿರ್ಯಾದಿದಾರರ ಹೆಂಡತಿಯು ನಾಗಮಣಿ ರವರು ಮರಣ ಹೊಂದಲು ಕಾರಣರಾಗಿರುವುದಾಗಿ ಅದ್ದರಿಂದ ಅರೋಪಿತರ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಲು ಕೋರುತ್ತಾನೆಂತ್ತ  ಇತ್ಯಾದಿಯಾಗಿ ನಮೂದಾಗಿರುವ ಸಾದಾರಪಡಿಸಿದ ದೂರಾಗಿರುತ್ತದೆ.

 

12. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.59/2021 ಕಲಂ. 269,271 ಐ.ಪಿ.ಸಿ & 4,5,10 THE KARNATAKA EPIDEMIC DISEASES ACT, 2020:-

          ದಿನಾಂಕ 20/04/2021 ರಂದು ಮದ್ಯಾಹ್ನ 2:30 ಗಂಟೆಯಲ್ಲಿ ಶ್ರೀ ಶಶಿಧರ್ S D ವೃತ್ತನಿರೀಕ್ಷಕರು ಗೌರಿಬಿದನೂರು ವೃತ್ತ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ತಾನು ದಿನಾಂಕ 20/04/2021 ರಂದು ಮದ್ಯಾಹ್ನ 1:30 ಗಂಟೆಯಲ್ಲಿ ಸರ್ಕಾರಿ ಜೀಪಿನಲ್ಲಿ ಸಿಬ್ಬಂದಿಯಾದ HC 224 ವೆಂಕಟೇಶ್ ರವರೊಂದಿಗೆ ನಗರದ ಗಸ್ತು ಮಾಡುತ್ತಿರುವಾಗ ಗೌರಿಬಿದನೂರು ನಗರದ KSRTC ಬಸ್ ನಿಲ್ದಾಣದ ಮುಂಭಾಗದ ನಾಮ ಫಲಕ ಇಲ್ಲದ ಒಂದು ಹೋಟೆಲ್ ಮುಂಭಾಗದಲ್ಲಿ ಯಾರೋ ಆಸಾಮಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಂತುಕೊಂಡಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕ್ ಗಳನ್ನು ಸಹ ಮಾಡಿರುವುದಿಲ್ಲ ಹಾಗೂ ಮಾಸ್ಕ್ ಗಳನ್ನು ಧರಿಸದೆ ಸರ್ಕಾರದ ಕೋವಿಡ್-19 ಆದೇಶಗಳನ್ನು ಪಾಲಿಸದೆ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ರೋಗವು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಒಬ್ಬರಿಗೊಬ್ಬರು ಪಕ್ಕಪಕ್ಕದಲ್ಲಿ ಕುಳ್ಳರಿಸಿಕೊಂಡು ಊಟ ಕೊಡುವುದು ಹಾಗೂ ಮಾತನಾಡುತ್ತಿದ್ದದ್ದು ಕಂಡು ಜೀಪನ್ನು ನಿಲ್ಲಿಸಿ ಆ ಹೋಟೆಲ್ ಬಳಿ ಹೋಗಿ ಹೋಟೆಲ್ ನಲ್ಲಿ ಕುಳಿತಿದ್ದ ಎಲ್ಲರನ್ನು ಸಾಮಾಜಿಕ ಅಂತರದಲ್ಲಿ ನಿಲ್ಲಿಸಲು ಕೆಲವರು ಸ್ಥಳದಿಂದ ಓಡಿಹೋಗಿದ್ದು ಅಂಗಡಿ ಮಾಲೀಕನ ಬಗ್ಗೆ ವಿಚಾರ ಮಾಡಲಾಗಿ ಆತನು ತನ್ನ ಹೆಸರು ಏಸಾನ್ ಬಿನ್ ಭಾಷುಸಾಬ್ ಎಂದು ತಿಳಿಸಿದನು. ನಂತರ ಹೋಟೆಲ್ ನಲ್ಲಿ ಅಂತರ ಪಾಲಿಸದೇ ಕುಳಿತಿದ್ದ ಪ್ರತಿಯೊಬ್ಬರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ತಮ್ಮನ್ನ ಬಿನ್ ರಾಮಪ್ಪ, 40 ವರ್ಷ, ಕುರುಬರು, ಸಿದ್ದೇಕುಂಟೆ ಗ್ರಾಮ, ಮಧುಗಿರಿ ತಾಲ್ಲೂಕು, 2) ನಾಗರಾಜ್ ಬಿನ್ ಹನುಮಂತರಾಯಪ್ಪ, 31 ವರ್ಷ, ಭೋವಿ ಜನಾಂಗ, ಕೊಡಿಗೇನಹಳ್ಳಿ ಗ್ರಾಮ, ಮಧುಗಿರಿ ತಾಲ್ಲೂಕು, 3) ಗಂಗರಾಜು ಬಿನ್ ಸಂಜೀವರಾಯಪ್ಪ, 21 ವರ್ಷ, ನಾಯಕ ಜನಾಂಗ, ಜಕ್ಕೇನಹಳ್ಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದರು. ಹೋಟೆಲ್ ನಲ್ಲಿ ಕೆಲಸ ಮಾಡುವವರ ಹೆಸರುಗಳನ್ನು ಕೇಳಲಾಗಿ 4) ಇದಾಯತ್ ಬಿನ್ ಏಸಾಸ್, 21 ವರ್ಷ, ಕಾಕನತೋಪು ಗೌರಿಬಿದನೂರು ನಗರ, 5) ರಾಜ ಬಿನ್ ಕೃಷ್ಣಪ್ಪ, 28 ವರ್ಷ, ಪರಿಶಿಷ್ಟ ಜಾತಿ, ಸಂತೇಮೈದಾನ ಗೌರಿಬಿದನೂರು ನಗರ ಎಂದು ತಿಳಿಸಿದ್ದು ನಂತರ ಅಂಗಡಿ ಮಾಲೀಕನಿಗೆ ಓಡಿಹೋದವರ ಬಗ್ಗೆ ವಿಚಾರ ಮಾಡಲಾಗಿ ರಹಮತ್ ಉಲ್ಲಾ ಎಂದು ತಿಳಿಸಿದ್ದು ಅವರು ಸಹ ಹೋಟೆಲ್ ನಲ್ಲಿ ಕೆಲಸ ಮಾಡುವವರು ಎಂದು ತಿಳಿಸಿರುತ್ತಾನೆಂದು ರೋಗ ಹರಡಲು ಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಿಸಿರುತ್ತೇನೆ.

 

13. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.75/2021 ಕಲಂ. 188 ಐ.ಪಿ.ಸಿ & 5 THE KARNATAKA EPIDEMIC DISEASES ACT, 2020  :-

          ದಿನಾಂಕ20/04/2021 ರಂದು ಸಂಜೆ 7-15 ಗಂಟೆಗೆ ಪಿರ್ಯಾಧಿ ಗುಡಿಬಂಡೆ ಪೊಲೀಸ್ ಠಾಣೆಯ ಹೆಚ್.ಸಿ. 73 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಗೆ 1ನೇ ಗ್ರಾಮ ಗಸ್ತಿಗೆ  ಠಾಣಾಧಿಕಾರಿಗಳು ನೇಮಕ ಮಾಡಿರುತ್ತಾರೆ. ಸದರಿ 1 ನೇ ಗ್ರಾಮಗಸ್ತಿಗೆ ಗುಡಿಬಂಡೆ ಪಟ್ಟಣ ಸಹ ಸೇರುತ್ತೆ. ತಾನು ಈ ಮೊದಲು ಸದರಿ ಗ್ರಾಮಸ್ತಿನಲ್ಲಿ ಸಾರ್ವಜನಿಕರಿಗೆ ಮತ್ತು ಅಂಗಡಿಗಳ ಮಾಲಿಕರಿಗೆ ಕೋವಿಡ್ -19 ರೋಗವನ್ನು ತಡೆಗಟ್ಟುವ ಬಗ್ಗೆ ಅಧಿ ಸೂಚನೆಗಳ  ಬಗ್ಗೆ ಪ್ರತಿಯೊಬ್ಬರು ಮಾಸ್ಕ್ ಗಳನ್ನು ಧರಿಸುವಂತೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಜಾಗೃತಿ ಮೂಡಿಸಿರುತ್ತೇನೆ.    ಹೀಗಿರುವಲ್ಲಿ ಈ ದಿನ ದಿನಾಂಕ 20/04/2021 ರಂದು ಮೇಲಾಧಿಕಾರಿಗಳ ಆದೇಶದಂತೆ ಗುಡಿಬಂಡೆ ಟೌನ್ ಸಂಜೆ ಗಸ್ತು ಮಾಡುತ್ತಿದ್ದಾಗ ಸಂಜೆ ಸುಮಾರು 6-30 ಗಂಟೆಯ ಸಮಯದಲ್ಲಿ ಅಂಚೆ ಕಛೇರಿಯ ಮುಂಭಾಗದಲ್ಲಿ ಮುಖ್ಯ ರಸ್ತೆಯಲ್ಲಿ ಗಸ್ತು ಮಾಡುತ್ತಿದ್ದಾಗ  ಅಂಚೆ ಕಛೇರಿಯ ಮುಂಭಾಗದಲ್ಲಿನ ಟೀ ಅಂಗಡಿ ಮುಂಭಾಗ ಜನರು ಗುಂಪಾಗಿ ಸೇರಿ ಟೀ ಕುಡಿಯುತ್ತಿದ್ದರು. ಸ್ಥಳಕ್ಕೆ ಹೋಗಿ ನೋಡಿದಾಗ ಟೀ ಅಂಗಡಿಯ ಮಾಲಿಕ ಕೋವಿಡ್ -19 ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ರೀತಿಯಾ ಮುನ್ನೆಚ್ಚರಿಕೆಯ ಕ್ರಮ ತೆಗೆದುಕೊಳ್ಳದೇ ನಿರ್ಲಕ್ಷದಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಜನರನ್ನು  ಗುಂಪಾಗಿ ಸೇರಿಸಿಕೊಂಡು ಟೀಯನ್ನು ವಿತರಣೆ ಮಾಡುತ್ತಿದ್ದನು. ಸದರಿ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ   ಮುದ್ದುಕೃಷ್ಣ ಬಿನ್ ಲೇಟ್ ಚಿಕ್ಕ ಹನುಮಂತರಾಯಪ್ಪ, 41 ವರ್ಷ, ವಕ್ಕಲಿಗರು ಟೀ ಅಂಗಡಿ ಮಾಲಿಕ ವಾಸ ಉಪ್ಪರಹಳ್ಳಿ ಗ್ರಾಮ,        ಗುಡಿಬಂಡೆ ತಾಲ್ಲೂಕು ಎಂತ ತಿಳಿಸಿದನು. ಸದರಿ ಆಸಾಮಿ ಕೋವಿಡ್ -19 ಸಂಕ್ರಾಮಿಕ ರೋಗ ನಿಯಂತ್ರಣ ಸಂಬಂಧ ನೀಡಿರುವ ನಿಬಂಧನೆಗಳನ್ನು ಉಲ್ಲಂಘಿಸಿರುವುದರಿಂದ ಈತನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

14. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.44/2021 ಕಲಂ. 323,324,504,506,34 ಐ.ಪಿ.ಸಿ:-

          ದಿನಾಂಕ:20/04/2021 ರಂದು ಸಂಜೆ 7:00 ಗಂಟೆಗೆ ಪಿರ್ಯಾದಿ ಶ್ರೀಮತಿ ಗಂಗಾ ಕೋಂ ಮುನಿರಾಜು, 28 ವರ್ಷ, ಒಕ್ಕಲಿಗರು, ಕೂಲಿ  ಕೆಲಸ, ವಾಸ: ತಿಮ್ಮನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:20/04/2021 ರಂದು ಬೆಳಿಗ್ಗೆ 10:30 ಗಂಟೆ ಸಮಯದಲ್ಲಿ ತಾನು ತಮ್ಮ ಮನೆಯ ಬಳಿ ಇದ್ದಾಗ ನಮ್ಮ ಗ್ರಾಮದ ಮುನಿರಾಜು ಬಿನ್ ರಾಮಪ್ಪ, ಚಿಕ್ಕಚನ್ನಪ್ಪ ಬಿನ್ ಚಿಕ್ಕಮುನಿಶಾಮಪ್ಪ ರವರುಗಳು ಬಂದು ಏಕಾ ಏಕಿ ಗಲಾಟೆ ಮಾಡಿ ನಿನ್ನಮ್ಮನೇ ಕ್ಯಾಯ ಸೂಳೆ ಮುಂಡೆ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ತಾನು ಏಕೆ ತನ್ನನ್ನು ಬೈಯುತ್ತಿರುವುದು ಎಂದು ಕೇಳುತ್ತಿದ್ದಂತೆ ಇಬ್ಬರು ತನ್ನ ಮೇಲೆ ಗಲಾಟೆ ಮಾಡಿ ಚಿಕ್ಕಚನ್ನಪ್ಪ ರವರು ದೊಣ್ಣೆಯಿಂದ ತನ್ನ ಎಡ ಭಾಗದ ಹಣೆಗೆ ಹೊಡೆದು ರಕ್ತಗಾಯ ಮಾಡಿದನು. ನಂತರ ಮುನಿರಾಜು ರವರು ಕಾಲಿನಿಂದ ಒದ್ದು ಕೈಗಳಿಂದ ಗುದ್ದಿ ನಿನೇನಾದರು ಇನ್ನೊಂದು ಸಾರಿ ನಮ್ಮ ತಂಟೆಗೆ ಬಂದರೆ ನಿನ್ನನ್ನು ಸಾಯಿಸುತ್ತೇವೆಂದು ಪ್ರಾಣ ಬೆಸರಿಕೆ ಹಾಕುತ್ತಿದ್ದಾಗ ತನ್ನ ಗಂಡನಾದ ಮುನಿರಾಜು ರವರು ಅಡ್ಡ ಬಂದಾಗ ಅವರಿಗೂ ಸಹ ಕೈಗಳಿಂದ ಹೊಡೆದು ಪ್ರಾಣ ಬೆಸರಿಕೆ ಹಾಕಿರುತ್ತಾರೆ. ಆಗ ತಮ್ಮ ಗ್ರಾಮದ ಪ್ರಮೀಳಮ್ಮ ಕೋಂ ಶ್ರೀನಿವಾಸ ಹಾಗೂ ಮುನಿರತ್ನಮ್ಮ ಕೋಂ ಕೋನರೆಡ್ಡಿ ರವರುಗಳು ಜಗಳ  ನೋಡಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

15. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.26/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:20/04/2021 ರಂದು  ರಾತ್ರಿ 07-00 ಗಂಟೆಗೆ ಪಿಎಸ್ಐ ಪಾತಪಾಳ್ಯ ಪೊಲೀಸ್ ಠಾಣೆರವರು  ಠಾಣೆಗೆ ಬಂದು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:20/04/2021 ರಂದು ಸಂಜೆ ಸುಮಾರು  05-00 ಗಂಟೆಗೆ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು  ಬಳೆ ಹೊಸಹಳ್ಳಿ ಗ್ರಾಮದ ಬಳಿ ಗಸ್ತಿನಲ್ಲಿದ್ದಾಗ ಬಳೆ ಹೊಸಹಳ್ಳಿ ಗ್ರಾಮದಲ್ಲಿ  ಮನೆಯ  ಮುಂಬಾಗದ ಖಾಲಿ ಜಾಗದಲ್ಲಿ ಯಾರೋ ಆಸಾಮಿ ಅಕ್ರಮವಾಗಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪಿನ ಸಂಖ್ಯೆ ಕೆ,ಎ-40 ಜಿ-59 ರಲ್ಲಿ ಬಳೆಹೊಸಹಳ್ಳಿ ಗ್ರಾಮದ ಮನೆಯ ಮುಂಬಾಗದ ಖಾಲಿ ಜಾಗದ ಬಳಿಗೆ ಹೋಗಲಾಗಿ ನಾವು ಹೋಗಿದ್ದ  ಜೀಪನ್ನು ನೋಡಿ ಪೆಟ್ಟಿಗೆ ಅಂಗಡಿಯ  ಬಳಿ ಖಾಲಿ ಜಾಗದಲ್ಲಿದ್ದ  ಯಾರೋ ಒಬ್ಬರು  ಓಡಿ ಹೋಗಿದ್ದು  ಪೆಟ್ಟಿಗೆ ಅಂಗಡಿಯ  ಬಳಿ ಖಾಲಿ ಜಾಗದಲ್ಲಿ ಒಬ್ಬ ಆಸಾಮಿ ಇದ್ದು ಆತನ ಹೆಸರು ವಿಳಾಸ ಕೇಳಲಾಗಿ ಕದಿರಪ್ಪ ಬಿನ್  ಲೇಟ್ ಕೋನಪ್ಪ, 48 ವರ್ಷ, ನಾಯಕ ಜನಾಂಗ, ವ್ಯಾಪಾರ ಬಳೆಹೊಸಹಳ್ಳಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು  ಎಂದು ತಿಳಿಸಿದ್ದು ಸದರಿ ಸ್ಥಳದಲ್ಲಿ ನಾವು ಪರಿಶೀಲಿಸಲಾಗಿ  90 ಮಿ,ಲೀಟರ್ ನ   18  ಹೈ ವಾರ್ಡ್ಸ್   ವಿಸ್ಕಿ ಮದ್ಯದ ಟೆಟ್ರಾ ಪಾಕಟೆ ಗಳು (ಸುಮಾರು  630/- ರೂ ಬೆಲೆ ಬಾಳುವುದಾಗಿರುತ್ತೆ,) ಮತ್ತು 01 ಲೀಟರ್ ನ 01 ನೀರಿನ ಖಾಲಿ ಬಾಟಲ್ ಮತ್ತು 01 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಮತ್ತು ಉಪಯೋಗಿಸಿರುವ ಖಾಲಿ 90 ಮಿ,ಲೀಟರ್ ನ  01  ಹೈ ವಾರ್ಡ್ಸ್ ವಿಸ್ಕಿ ಟೆಟ್ರಾ ಪಾಕೆಟ್  ಇದ್ದು ಸ್ಥಳದಲ್ಲಿದ್ದ ಮೇಲ್ಕಂಡ ಆಸಾಮಿಯನ್ನು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿಯನ್ನು ಪಡೆದಿರುವ ಬಗ್ಗೆ ಕೇಳಲಾಗಿ ಯಾವುದೇ ಪರವಾನಗಿಯನ್ನು ಪಡೆದಿಲ್ಲವೆಂದು ತಿಳಿಸಿರುತ್ತಾನೆ, ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮೇಲ್ಕಂಡ ವಸ್ತುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಆಮಾನತ್ತು ಪಡಿಸಿಕೊಂಡು ಆರೋಪಿ ಮತ್ತು ಅಮಾನತ್ತು ಪಡಿಸಿದ ಮಾಲುಗಳೊಂದಿಗೆ ಠಾಣೆಗೆ ವಾಪ್ಪಸ್ಸಾಗಿ ಮೇಲ್ಕಂಡವನ ವಿರುದ್ದ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ,ಸಂ 26/2021 ಕಲಂ 15(a)  32(3) KE ACT ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

16. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.113/2021 ಕಲಂ. 323,324,504,506,34 ಐ.ಪಿ.ಸಿ:-

          ದಿನಾಂಕ 20/04/2021 ರಂದು ಸಂಜೆ 5-30 ಗಂಟೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಗಾಯಾಳು ಮುರಳಿ ಬಿನ್ ಕೃಷ್ಣಪ್ಪ, 29 ವರ್ಷ, ಗೊಲ್ಲರು, ಎಲೆಕ್ಟ್ರಿಷಿಯನ್, ವಾಸ-ಹೊಸಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೇನೆಂದರೆ, ದಿನಾಂಕ 19/04/2021 ರಂದು ಸಂಜೆ ಸುಮಾರು 6-00 ಗಂಟೆ ಸಮಯದಲ್ಲಿ ತಮ್ಮ ಪಕ್ಕದ ಜಮೀನಿನವರು ಹಾಗು ತಮ್ಮ ಗ್ರಾಮದ ವಾಸಿ ಆಂಜಿನಪ್ಪ ರವರ ಮಕ್ಕಳಾದ ರಮೇಶ್ ಬಿನ್ ಸುನೀಲ್ ರವರು ತಮ್ಮ ಮಾವಿನ ತೋಟದಲ್ಲಿ ಟ್ರಾಕ್ಟರ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಆ ಸಮಯದಲ್ಲಿ ಅವರನ್ನು ಕುರಿತು ತಮ್ಮ ಜಮೀನಿನಲ್ಲಿ ಯಾಕೇ ಟ್ರಾಕ್ಟರ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದೀರಾ, ಟ್ರಾಕ್ಟರ್ ಮಾವಿನ ಕೊಂಬೆಗಳಿಗೆ ತಗುಲಿ ಮಾವಿನ ಕಾಯಿ ಉದುರಿ ಹೋಗುತ್ತದೆ ಎಂದು ಅವರಿಗೆ ಬುದ್ದಿವಾದ ಹೇಳುತ್ತಿದ್ದಾಗ ರಮೇಶ್ ಮತ್ತು ಸುನೀಲ್ ರವರು ಏಕಾಏಕಿ ತನ್ನ ಮೇಲೆ ಜಗಳವನ್ನು ತೆಗೆದು ನಿಮ್ಮನ್, ಲೋಫರ್ ನನ್ನ ಮಗನೇ, ನೀನು ಯಾರೋ ನಮಗೆ ಕೇಳಲಿಕ್ಕೆ ಎಂದು ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ತನ್ನ ಬೆನ್ನಿಗೆ, ಮುಖಕ್ಕೆ, ತಲೆಗೆ ಹೊಡೆದು ನೋವುಂಟು ಮಾಡಿ, ಆ ಪೈಕಿ ರಮೇಶ್ ರವರು ಟ್ರಾಕ್ಟರ್ ನಲ್ಲಿ ಇದ್ದ ದೊಣ್ಣೆಯನ್ನು ತೆಗೆದುಕೊಂಡು ತನ್ನ ತಲೆಯ ಹಿಂಭಾಗದಲ್ಲಿ ಹೊಡೆದು ರಕ್ತಗಾಯಪಡಿಸಿದಾಗ ತಾನು ಬಿದ್ದು ಹೋಗಿದ್ದು, ಆಗ ಇಬ್ಬರು ತನ್ನನ್ನು ಕುರಿತು ಇನ್ನೊಂದು ಸಲ ತಮ್ಮ ತಂಟೆಗೆ ಬಂದರೆ ನಿನ್ನನ್ನು ಸಾಯಿಸಿ ಬಿಡುತ್ತೇನೆಂದು ಪ್ರಾಣ ಬೆದರಿಕೆಯನ್ನು ಹಾಕಿ ಅಲ್ಲಿಂದ ಹೊರಟು ಹೋಗಿರುತ್ತಾರೆ. ನಂತರ ತಾನು ಅಲ್ಲಿಂದ ಮನೆಯ ಬಳಿ ಹೋಗಿದ್ದು,ಮನೆಯ ಬಳಿ ಇದ್ದ ತನ್ನ ತಂದೆ ಕೃಷ್ಣಪ್ಪ, ಬಾಮೈದ ಮಂಜುನಾಥ ರವರು ತನ್ನನ್ನು ಕರೆದುಕೊಂಡು ಬಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ, ಇಲ್ಲಿನ ವೈದ್ಯರ ಸಲಹೆಯ ಮೇರೆಗೆ ಇನ್ನು ಹೆಚ್ಚಿನ ಚಿಕಿತ್ಸೆಗೆ ಚಿಕ್ಕಬಳ್ಳಾಪುರದ ಜೀವನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು, ತಾನು ಚಿಕಿತ್ಸೆ ಪಡೆದುಕೊಂಡು ಈ ದಿನ ವಾಪಸ್ಸು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೊಟ್ಟ ಹೇಳಿಕೆ.

 

17. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.114/2021 ಕಲಂ. 394 ಐ.ಪಿ.ಸಿ:-

    ದಿನಾಂಕ 21/04/2021 ರಂದು ಬೆಳಿಗ್ಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದುಕೊಂಡು ಆಸ್ಪತ್ರೆಗೆ ಬೇಟಿಯನ್ನು ನೀಡಿ ಬೆಳಿಗ್ಗೆ 7-00 ಗಂಟೆಯಿಂದ ಬೆಳಿಗ್ಗೆ 7.45 ಗಂಟೆಯವರೆಗೆ ಗಾಯಾಳು ಶ್ರೀ ಎನ್.ನವೀನ್ ಕುಮಾರ್ ಬಿನ್ ನರಸಿಂಹಮೂರ್ತಿ, 26 ವರ್ಷ, ಗೊಲ್ಲರು, ವಕೀಲರು, ವಾಸ-ಹಿರೇಪಾಳ್ಯ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೇನೆಂದರೆ, ತಾನು ಚಿಕ್ಕಬಳ್ಳಾಪುರ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಮಾಡಿಕೊಂಡಿದ್ದು, ತಾನು ಚಿಂತಾಮಣಿ ತಾಲ್ಲೂಕು ಅಟ್ಟೂರು ಗ್ರಾಮದ ಮಾರುತಿ ರವರ ಬಳಿ 50.000-00 ರೂ ಚೀಟಿ ಹಾಕಿದ್ದು, ಪ್ರತಿ ತಿಂಗಳು 20 ನೇ ತಾರೀಖಿನಂದು ಚೀಟಿ ಇದ್ದು, ದಿನಾಂಕ 20/04/2021 ರಂದು ಚೀಟಿ ಇದ್ದು ತನಗೆ ಹಣಕಾಸಿನ ಅವಶ್ಯಕತೆ ಇದ್ದ ಕಾರಣ ಚೀಟಿ ಹಣ ಎತ್ತಿಕೊಳ್ಳಲು ತಮ್ಮ ಗ್ರಾಮದಿಂದ ತನ್ನ ಬಾಬತ್ತು ಕೆಎ-04-ಜೆಎ-5394 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನದಲ್ಲಿ ರಾತ್ರಿ 9-00 ಗಂಟೆಗೆ ಅಟ್ಟೂರು ಗ್ರಾಮಕ್ಕೆ ಹೋಗಿ ಅಲ್ಲಿ ಚೀಟಿ ಮುಗಿಸಿಕೊಂಡು ಚೀಟಿ ಹಣ 33.400-00 ರೂ ಹಣವನ್ನು ಪಡೆದುಕೊಂಡು ತಮ್ಮ ಗ್ರಾಮಕ್ಕೆ ವಾಪಸ್ಸು ಹೋಗಲು ಚೀಮಂಗಲ ಗ್ರಾಮದ ಮೂಲಕ ಕೆ.ಜಿ ಪುರಕ್ಕೆ ಹೋಗಿ ಅಲ್ಲಿಂದ ತಮ್ಮ ಗ್ರಾಮಕ್ಕೆ ರಾತ್ರಿ 9-35 ಗಂಟೆ ಸಮಯದಲ್ಲಿ ಕೆ.ಜಿ ಪುರದಿಂದ ಸಂತೇಕಲ್ಲಹಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿ ಕೆ.ಜಿ ಪುರದಿಂದ ಸ್ವಲ್ಪ ಮುಂದೆ ರಸ್ತೆಯಲ್ಲಿ ತನ್ನ ದ್ವಿ ಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ತನ್ನ ಹಿಂದೆ ದ್ವಿ ಚಕ್ರ ವಾಹನದಲ್ಲಿ 3 ಜನ ಆಸಾಮಿಗಳು ತನ್ನ ದ್ವಿ ಚಕ್ರ ವಾಹನವನ್ನು ಓವರ್ ಟೇಕ್ ಮಾಡಿಕೊಂಡು ಬಂದು ತನ್ನ ದ್ವಿ ಚಕ್ರ ವಾಹನಕ್ಕೆ ಅಡ್ಡಹಾಕಿ ಅದರಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ತನಗೆ ಮುಖ ಪರಿಚಯ ಇರುವ ಕೆ.ಜಿ ಪುರದ ಆಸಾಮಿ ತನ್ನ ಬಳಿ ಬಂದು ಚಾಕುವನ್ನು ತೆಗೆದು ಕತ್ತಿನ ಬಳಿ ಇಟ್ಟು ಕೈಯಿಂದ ತನ್ನ ಮುಖಕ್ಕೆ ಗುದ್ದಿ ನಿನ್ನ ಬಳಿ ಏನೇನು ಇದೆಯೋ ಎಲ್ಲವೂ ಕೊಡು ಎಂದು ತನಗೆ ಬೆದರಿಕೆ ಹಾಕಿ ತನ್ನ ಬಳಿ ಇದ್ದ ಚೀಟಿ ಹಣ 33.400-00 ರೂಗಳನ್ನು ಕಿತ್ತುಕೊಂಡು ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಸಾಯಿಸಿ ಬಿಡುತ್ತೇನೆಂದು ಬೆದರಿಕೆ ಹಾಕಿ ದ್ವಿ ಚಕ್ರ ವಾಹನದಲ್ಲಿ ಕೆ.ಜಿ ಪುರದ ಕಡೆಗೆ ಹೊರಟು ಹೋಗಿರುತ್ತಾರೆ. ನಂತರ ತಾನು ಈ ವಿಷಯವನ್ನು ತನ್ನ ತಂದೆಗೆ ಹಾಗು ಕೆ.ಜಿ. ಪುರದ ತನ್ನ ಸ್ನೇಹಿತರಿಗೆ ತಿಳಿಸಿದಾಗ ಎಲ್ಲರೂ ಸ್ಥಳಕ್ಕೆ ಬಂದು ತನ್ನನ್ನು ಉಪಚರಿಸಿ ತನ್ನ ತಂದೆ ತನ್ನನ್ನು ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ. ಆದ್ದರಿಂದ ತನ್ನ ಬಳಿ ಇದ್ದ ಹಣವನ್ನು ಕಿತ್ತುಕೊಂಡು ಪರಾರಿಯಾಗಿರುವ ಆಸಾಮಿಗಳನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೊಟ್ಟ ಹೇಳಿಕೆ.

    

ಇತ್ತೀಚಿನ ನವೀಕರಣ​ : 21-04-2021 06:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080