Feedback / Suggestions

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.73/2021 ಕಲಂ. 379 ಐ.ಪಿ.ಸಿ :-

          ದಿನಾಂಕ: 20-03-2021 ರಂದು ಮದ್ಯಾಹ್ನ 2-30 ಗಂಟೆಗೆ ಪಿರಯಾದಿದಾರರಾದ  ವೆಂಕಟರೆಡ್ಡಿ ಬಿನ್ ಲೇಟ್ ಮದ್ದಪ್ಪ 35 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ:ಆಚೇಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು,ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು  ಈಗ್ಗೆ 2 ವರ್ಷಗಳ ಹಿಂದೆ ನನ್ನ ಸ್ವಂತ ಕೆಲಸಕ್ಕೆ ಕೆಎ 43 ಎಲ್ 7317 ನೋಂದಣಿ ಸಂಖ್ಯೆಯ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನವನ್ನು ಕೊಂಡುಕೊಂಡಿದ್ದು ಎಂದಿನಂತೆ ದಿನಾಂಕ: 07-03-2021 ರಂದು ರಾತ್ರಿ ಸುಮಾರು 11-00 ಗಂಟೆ ಸಮಯದಲ್ಲಿ ತೋಟದ ಬಳಿ ಹೋಗಿ ವಾಪಸ್ಸು ಬಂದು ನಮ್ಮ ಮನೆಯ ಮುಂದೆ ಖಾಲಿ ಜಾಗದಲ್ಲಿ ನಿಲ್ಲಿಸಿದ್ದು, ನಂತರ ದಿನಾಂಕ: 08-03-2021 ರಂದು ಬೆಳಿಗ್ಗೆ  6-30 ಗಂಟೆ ಸಮಯದಲ್ಲಿ ಎದ್ದು ನೋಡಿದಾಗ ದ್ವಿಚಕ್ರ ವಾಹನವು ಕಾಣಿಸಿರುವುದಿಲ್ಲ ನಂತರ ನಾನು ಅಕ್ಕ ಪಕ್ಕದ ಮನೆ ಮತ್ತು ಗ್ರಾಮದ ಜನರನ್ನು ವಿಚಾರಿಸಲಾಗಿ ಗೊತ್ತಿಲ್ಲವೆಂದು ತಿಳಿಸಿದ್ದು. ನಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಕೆಎ 43 ಎಲ್ 7317 ನೋಂದಣಿ ಸಂಖ್ಯೆಯ ಸ್ಪ್ಲೆಂಡರ್ ಪ್ಲಸ್ ನನ್ನ ದ್ವಿಚಕ್ರ ವಾಹನವನ್ನು ರಾತ್ರಿ ವೇಳೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ದ್ವಿಚಕ್ರ ವಾಹನದ ಬೆಲೆ ಸುಮಾರು 15000/- ರೂ ಗಳಾಗಿರುತ್ತದೆ. ಸದರಿ ವಾಹನವನ್ನು ಎಲ್ಲಾ ಕಡೆ ಹುಡುಕಾಡಿ ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು ನನ್ನ ದ್ವಿಚಕ್ರ ವಾಹನವನ್ನು ಮತ್ತು ಕಳವು ಮಾಡಿಕೊಂಡವರನ್ನು ಪತ್ತೆ ಹಚ್ಚಿ, ಆರೋಪಿಯ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರು.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.40/2021 ಕಲಂ. 420,120B,504,506,149 ಐ.ಪಿ.ಸಿ :-

          ದಿನಾಂಕ: 20/03/2021 ರಂದು  ಮದ್ಯಾಹ್ನ 2-00 ಗಂಟೆಯ ಸಮಯಕ್ಕೆ ಶ್ರೀಮತಿ ಅನುಪಮ ಶ್ರೀಧರ  ಕೋಂ ಶ್ರೀಧರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ದಿನಾಂಕ: 14/11/2019 ರಂದು ಚಿಕ್ಕಬಳ್ಳಾಪುರ  ತಾಲ್ಲೂಕು  ಕಸಬಾ ಹೋಬಳಿ   ನೆಲ್ಲಿಮರದಹಳ್ಳಿ  ಗ್ರಾಮದ  ಸರ್ವೆ  ನಂಬರ್: 22/1 ರಲ್ಲಿನ  01 ಎಕರೆ 30 ಗುಂಟೆ,  ಸರ್ವೆ ನಂಬರ್: 22/2 ರಲ್ಲಿನ 04 ಎಕರೆ 14 ಗುಂಟೆ  ಒಟ್ಟು 06 ಎಕರೆ 04 ಗುಂಟೆ ಜಮೀನನ್ನು  ದೇವನಹಳ್ಳಿ  ವಾಸಿ ಎನ್. ಎಂ.ಮಂಜುನಾಥ  ಬಿನ್  ಮುನಿಯಪ್ಪ  ಮತ್ತು ಅವರ  ಕುಟುಂಬದವರು  (1) ಎಸ್. ರಾಜಾರೆಡ್ಡಿ ಬಿನ್  ಎಸ್. ಚಿನ್ನಪ್ಪರೆಡ್ಡಿ ಧರ್ಮಾವರಂ.  ಆಂದ್ರ ಪ್ರದೇಶ (2) ಕೊತ್ತಕೋಟ ಕೇಶವ ಬಿನ್  ಕೊತ್ತಕೋಟ ಆಂಜಿನಪ್ಪ  ಧರ್ಮಾವರಂ ಆಂದ್ರಪ್ರದೇಶ (3) ಡಿ. ತಾತಯ್ಯ  ಬಿನ್  ಡಿ.  ಚಿನ್ನಪ್ಪ ಧರ್ಮಾವರಂ (4) ಜಿ. ಸೂರ್ಯ ನಾಗೇಂದ್ರ  ಬಿನ್  ಜಿ. ನರಸಿಂಹಲು  (5) ಪುಜಾರಿ ರಮೇಶ ಬಿನ್ ಪುಜಾರಿ ಈಶ್ವರಯ್ಯ  (6) ಶೇಕ್ ಸಿರಾಜುದ್ದೀನ್  ಬಿನ್  ನಸೀರ್ ಅಹಮದ್ ಮತ್ತು (7) ಪಿ. ರಾಮಾಂಜಿನೇಯಲು ಬಿನ್   ಓಬಳೇಶ  ಹಾಗೂ  ನನಗೆ  ಕ್ರಯ ಕರಾರು ಪತ್ರ ಮಾಡಿಕೊಟ್ಟಿದ್ದು  ನನ್ನಿಂದ  ಮೇಲ್ಕಂಢ ರಾಜಾರೆಡ್ಡಿ  ಮತ್ತು  06 ಜನರು  ಮಂಜುನಾಥ ರವರ   ಜೊತೆ ಸೇರಿ  ಎಕರೆ ಜಮೀನಿಗೆ 18.00.000/- ರೂಪಾಯಿಗಳಂತೆ  ಮಾರಾಟ ಮಾಡುವುದಾಗಿ  ಒಪ್ಪಿ  ಸದರಿ ಮಾತುಕತೆಯಂತೆ  ನನ್ನಿಂದ  ಕ್ರಯದ  ಕರಾರಿಗೆ ಮುಂಗಡವಾಗಿ  9.00.000/-ರೂಪಾಯಿಗಳನ್ನು ಪಡೆದು  01 ಎಕರೆ  ಜಮೀನನ್ನು   ನನ್ನ ಹೆಸರಿಗೆ ಕ್ರಯ ಪತ್ರವನ್ನು ಮಾಡಿಕೊಡುವುದಾಗಿ ನಂಬಿಸಿದ್ದು ದಿನಾಂಕ: 14/11/2019 ರಿಂದ 2-3 ಕಂತುಗಳಲ್ಲಿ 09.00.000/-ರೂಪಾಯಿಗಳನ್ನು  ನಗದಾಗಿ ಪಡೆದುಕೊಂಡು ಸದರಿ ಜಮೀನಿಗೆ ಎಲ್ಲಾ ದಾಖಲಾತಿಗಳನ್ನು ಸಿದ್ದಪಡಿಸಿ ನೊಂದಣಿ ಮಾಡಿಕೊಡುವುದಾಗಿ  ಭರವಸೆ ಕೊಟ್ಟಿದ್ದು  ಹಲವಾರಿ ಬಾರಿ  ತಾತಯ್ಯ,  ರಾಜಾರೆಡ್ಡಿ. ಕೇಶವ, ಮತ್ತು ಮಂಜುನಾಥ ರವರುಗಳನ್ನು  ಬೇಟಿಯಾಗಿ ಉಳಿಕೆ  ಹಣವನ್ನು  ಪಡೆದು ಪಿರ್ಯಾದಿಯವರ  ಹೆಸರಿಗೆ  ನೊಂದಾಯಿಸಿಕೊಡುವಂತೆ  ಕೇಳಿಕೊಂಡಿದ್ದು   ಸದರಿಯವರು  ಒಂದಲ್ಲ ಒಂದು ಸಬೂಬು ಹೇಳಿ ಕ್ರಯ ಪತ್ರ ಮಾಡಿಕೊಡುವುದನ್ನು ಮುಂದೂಡಿದರು. ದಿನಾಂಕ: 17/08/2020 ರಂದು  ಮೇಲ್ಕಂಡ  ಎಲ್ಲಾ  ವ್ಯಕ್ತಿಗಳು  ಎನ್.ಎಂ. ಮಂಜುನಾಥ ರವರ ಜೊತೆ ಶಾಮೀಲಾಗಿ ಸಂಚು ರೂಪಿಸಿ  ತನಗೆ ಮೋಸ ಮಾಡುವ ಉದ್ದೇಶದಿಂದ  ಲಕ್ಷ್ಮಣರಾವ್ ತಂಗಿ ಮತ್ತು ಇತರರಿಗೆ  ಕ್ರಯ ಪತ್ರ ಮಾಡಿ ಮಾರಾಟ ಮಾಡಿರುತ್ತಾರೆ. ಈ ವಿಚಾರ ನನ್ನ  ಗಮನಕ್ಕೆ ಬಂದ ನಂತರ  ನಾನು  (1) ಡಿ. ತಾತಯ್ಯ  ಬಿನ್  ಡಿ.  ಚಿನ್ನಪ್ಪ  (2) ಎಸ್. ರಾಜಾರೆಡ್ಡಿ ಬಿನ್  ಎಸ್. ಚಿನ್ನಪ್ಪರೆಡ್ಡಿ ಧರ್ಮಾವರಂ.  ಆಂದ್ರ ಪ್ರದೇಶ (3) ಕೊತ್ತಕೋಟ ಕೇಶವ ಬಿನ್  ಕೊತ್ತಕೋಟ ಆಂಜಿನಪ್ಪ  ಧರ್ಮಾವರಂ ಆಂದ್ರಪ್ರದೇಶ (4) ಲಕ್ಷ್ಮಣರಾವ್ ತಂಗಿ ಬಿನ್  ಕೃಷ್ಣಮೂರ್ತಿ  (5)  ಜಿ. ಸೂರ್ಯ ನಾಗೇಂದ್ರ  ಬಿನ್  ಜಿ. ನರಸಿಂಹಲು  (6 ) ಪಿ. ರಾಮಾಂಜಿನೇಯಲು ಬಿನ  ಓಬಳೇಶ   (7)  ಪುಜಾರಿ ರಮೇಶ ಬಿನ್ ಪುಜಾರಿ ಈಶ್ವರಯ್ಯ ಮತ್ತು ಕ್ರಯದಾರ ಎನ್.ಎಂ. ಮಂಜುನಾಥ  ಬಿನ್  ಮುನಿಯಪ್ಪ ರವರುಗಳು ನನಗೆ  ಮೋಸ ಮಾಡುವ ಉದ್ದೇಶದಿಂದ  ಮೇಲ್ಕಂಡ ಜಮೀನನ್ನು  ಮೋಸದಿಂದ  ಮಾರಾಟ ಮಾಡಿರುತ್ತಾರೆಂದು ದಿನಾಂಕ: 14/03/2021 ರಂದು ಚಿಕ್ಕಬಳ್ಳಾಪುರ ತಾಲ್ಲೂಕು  ತಾನು ನೆಲ್ಲಿಮರದಹಳ್ಳಿ  ಗ್ರಾಮಕ್ಕೆ ಬಂದಿದ್ದಾಗ  ಮೇಲ್ಕಂಢ  ಆಸಾಮಿಗಳೆಲ್ಲರೂ ಸರ್ವೆ ನಂಬರ್ ಸರ್ವೆ  ನಂಬರ್: 22/1 ರಲ್ಲಿನ  ಬಳಿ ಇದ್ದು ಅವರುಗಳನ್ನು  ಕುರಿತು ನನಗೆ  ಕೊಡುವುದಾಗಿ ಹೇಳೀದ್ದ  ಜಮೀನನ್ನು  ಬೇರೆಯವರಿಗೆ ಮಾರಾಟ ಮಾಡಿದ್ದೀರಿ. ತಾನು ಮುಂಗಡವಾಗಿ ಕೊಟ್ಟಿರುವ ತನ್ನ  ಹಣವನ್ನು  ವಾಪಸ್ಸು ಕೊಡದೇ   ಮೇಲ್ಕಂಡವರೆಲ್ಲರೂ ತನ್ನನ್ನು  ಅವಾಚ್ಯ ಶಬ್ದಗಳಿಂದ ಬೈದು,  ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆಂದು ಸದರಿಯವರ  ವಿರುದ್ದ  ಕಾನೂನು  ರೀತಿಯ ಕ್ರಮ ಜರುಗಿಸಲು  ಕೋರಿದ ದೂರಿನ ಮೇರೆಗೆ ಪ್ರ.ವ,ವರದಿ.

 

3. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.14/2021 ಕಲಂ. 120B,420,506,511,34 ಐ.ಪಿ.ಸಿ :-

          ದಿನಾಂಕ:20-03-2021 ರಂದು ರಾತ್ರಿ 8-00 ಗಂಟೆಯಲ್ಲಿ ಈ ಕೇಸಿನ ಪಿರ್ಯಾಧಿಯಾದ ಶ್ರೀಮತಿ ಕವಿತಾ ಎಸ್ ಕೊಂ  ಸತ್ಯನಾರಾಯಣ ಬಿಟಿಎಂ ಲೇಹೌಟ್ ಬೆಂಗಳೂರುರವರು ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶವೇನೆಂದರೆ, ತಾನು ಈ ಹಿಂದೆ ಶ್ರೀ ವೆಂಕಟೇಶ್ವರ ಎಜುಕೇಷನಲ್ ಟ್ರಸ್ಟ್ ನ ಪ್ರಾಂಶುಪಾಲೆಯಾಗಿದ್ದು  ಹಾಗೂ ನಮಗೆ ಬೆಂಗಳೂರಿನಲ್ಲಿ ತನ್ನ ಹೆಸರಿನಲ್ಲಿರುವ ಕೆಲವು ಆಸ್ತಿಗಳನ್ನು  ಅಕ್ರಮವಾಗಿ ವಶಪಡಿಸಿಕೊಳ್ಳುವು ಉದ್ದೇಶವಾಗಿ  ಚಿಕ್ಕಬಳ್ಳಾಪುರ ನಗರದ ವಾಸಿಯಾದ ರಾಜೇಶ ಎಂಬುವವನ್ನು ಸೃಷ್ಠಿ ಮಾಡಿ ಅತನು ತನ್ನೊಂದಿಗೆ ಅನೈತಿಕ ಸಂಬಂಧ ವಿರುವುದಾಗಿ ದಾಖಲೆ ಸೃಷ್ಠಿಸಿ  ರಾಜೇಶ ರವರ ಹೆಂಡತಿಯಾದ ಮಂಜುಳಾ  ಮತ್ತು  ಅವರ ಅಕ್ಕ ಕುಮಾರಿಯೊಂದಿಗೆ ಸಂಚು ಮಾಡಿ  ತನ್ನ ಹೆಸರಿನಲ್ಲಿರುವ ಆಸ್ತಿಗಳನ್ನು ತಮ್ಮ ತಾಯಿಯ ಮುಖಾಂತರ  ಆಸ್ತಿಗಳನ್ನು ಜಿಪಿಎ ಮಾಡಿಸಿಕೊಂಡು ತಮ್ಮ ತನ್ನ ಗಂಡ ಸತ್ಯನಾರಾಯಣ, ದೊಡ್ಡಪ್ಪನ ಮಗ  ಪದ್ಮನಾಭರವರು ಆಸ್ತಿಗಳನ್ನು ಬರೆಸಿಕೊಂಡು ಮೋಸ ಮಾಡಲು ಪ್ರಯತ್ತಿಸಿರುತ್ತಾರೆ. ಹಾಗೂ  ರಾಜೇಶ್ ಎಂಬುವವನು ತನ್ನೊಂದಿಗೆ ಅನೈತಿಕ ಸಂಬಂಧ ಇರುವುದಾಗಿ  ಪತ್ರ ಬರೆದು ಸಹಿ ಮಾಡಿಕೊಟ್ಟಿದ್ದು  ಹಾಗೂ ಅತನ ಹೆಂಡತಿ  ಮಂಜುಳ  ಕೆಟ್ಟ ಮಾತುಗಳಿಂದ ಬೈದಿದ್ದು ಉಳಿದವರು  ಪ್ರಾಣಬೆದರಿಕೆ ಹಾಕಿರುತ್ತಾರೆಂದು ನೀಡಿರುವ ದೂರಿನ ಮೇರೆಗೆ ಈ ಪ್ರ.ವ.ವರದಿ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.117/2021 ಕಲಂ. 15(A) ಕೆ.ಇ ಆಕ್ಟ್:-

          ದಿನಾಂಕ: 20/03/2021 ರಂದು ಮದ್ಯಾಹ್ನ 2.15 ಗಂಟೆಗೆ ಠಾಣೆಯ ಸಿ.ಹೆಚ್.ಸಿ-165 ರವರು ಮಾಲು ಮತ್ತು ಅಮಾನತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ,  ಈ ದಿನ ದಿನಾಂಕ: 20/03/2021 ರಂದು ತಾನು ಪಿ.ಎಸ್.ಐ ಸಾಹೇಬರ ಆಧೇಶದಂತೆ ಬೆಳಿಗ್ಗೆ ಗಸ್ತು ಕರ್ತವ್ಯಕ್ಕೆ ಹೋಗಿದ್ದು, ಅದರಂತೆ ಠಾಣಾ ವ್ಯಾಪ್ತಿಯ ನಾಯನಹಳ್ಳಿ, ನೆಲಮಾಚನಹಳ್ಳಿ ಮುಂತಾದ ಗ್ರಾಮಗಳ ಕಡೆಗಳಲ್ಲಿ ಗಸ್ತು ಕರ್ತವ್ಯವನ್ನು ನಿರ್ವಹಿಸಿಕೊಂಡು ಇದೇ ದಿನ ಮದ್ಯಾಹ್ನ 12-00 ಗಂಟೆಗೆ ಧನಮಿಟ್ಟೇನಹಳ್ಳಿ ಗ್ರಾಮದ ಬಳಿಗೆ ಹೋದಾಗ ಧನಮಿಟ್ಟೇನಹಳ್ಳಿ ಗ್ರಾಮದ ವಾಸಿ ವೆಂಕಟರೆಡ್ಡಿ ಬಿನ್ ಬೈಯಣ್ಣ ಎಂಬುವರು ಅವರ ಮನೆಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಾತ್ಮೀದಾರರಿಂದ ತಮಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚಾಯ್ತಿದಾರರೊಂದಿಗೆ ಸದರಿ ಸ್ಥಳಕ್ಕೆ ಹೋಗಿ ಧಾಳಿ ಮಾಡಲಾಗಿ ಸ್ಥಳದಲ್ಲಿದ್ದವರು ಸ್ಥಳದಿಂದ ಓಡಿ ಹೋಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವರ ಬಗ್ಗೆ ಬಾತ್ಮಿದಾರರಲ್ಲಿ ವಿಚಾರಿಸಲಾಗಿ ಸದರಿಯವರ ಹೆಸರು ವೆಂಕಟರೆಡ್ಡಿ ಬಿನ್ ಬೈಯಣ್ಣ, 45 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಧನಮಿಟ್ಟೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ 1)  ಓಲ್ಡ್ ಟಾವರಿನ್ ವಿಸ್ಕಿ 180 ಎಂ .ಎಲ್ 04 ಟೆಟ್ರಾ ಪ್ಯಾಕೆಟ್ ಗಳು 2)ಹೈವಾಡ್ಡ್ ಚೀಯರ್ಸ್ ವಿಸ್ಕಿ 90 ಎಂ.ಎಲ್ ನ 04 ಟೆಟ್ರಾ ಪ್ಯಾಕೆಟ್ ಗಳು 3) ಒಂದು ಲೀಟರ್ ಸಾಮರ್ಥ್ಯದ ಓಪನ್ ಆಗಿರುವ ಒಂದು ಖಾಲಿ ನೀರಿನ ಪ್ಲಾಸ್ಟಿಕ್ ಬಾಟಲ್ 4) 02 ಪ್ಲಾಸ್ಟಿಕ್ ಗ್ಲಾಸ್ ಗಳಿದ್ದು, ಸದರಿಯವುಗಳನ್ನು ಇದೇ ದಿನ ಮದ್ಯಾಹ್ನ 12-30 ಗಂಟೆಯಿಂದ 13-30 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೇವೆ. ಆದ್ದರಿಂದ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಮೇಲ್ಕಂಡ ವೆಂಕಟರೆಡ್ಡಿ ಬಿನ್ ಬೈಯಣ್ಣ ರವರ ವಿರುದ್ದ ಕಾನೂನು ರೀತ್ಯ ಸೂಕ್ತ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.118/2021 ಕಲಂ. 15(A) ಕೆ.ಇ ಆಕ್ಟ್:-

          ದಿನಾಂಕ: 20/03/2021 ರಂದು ಸಂಜೆ 4.30 ಗಂಟೆಗೆ ಠಾಣೆಯ ಎ.ಎಸ್.ಐ ಅಶ್ವಥನಾರಾಯಣಸ್ವಾಮಿ ರವರು ಮಾಲು ಮತ್ತು ಅಮಾನತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ:20/03/2021 ರಂದು ಪಿ.ಎಸ್.ಐ ಸಾಹೇಬರ ನೇಮಕದಂತೆ ತಾನು, ಸಿ.ಹೆಚ್.ಸಿ-249 ಸಂದೀಪ್ ಕುಮಾರ್ ರವರು ಠಾಣಾ ಸರಹದ್ದಿನ ನಾಯನಹಳ್ಳಿ, ಮಸಲಹಳ್ಳಿ, ತಮ್ಮೇಪಲ್ಲಿ, ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 3-00 ಗಂಟೆಯ ಸಮಯದಲ್ಲಿ ಧನಮಿಟ್ಟೇನಹಳ್ಳಿ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ಚೆನ್ನಕ್ರಿಷ್ಣಪ್ಪ ಬಿನ್ ಸೀತಪ್ಪರವರು ತನ್ನ ಅಂಗಡಿಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಧನಮಿಟ್ಟೇನಹಳ್ಳಿ ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಅಂಗಡಿಯ ಮುಂದೆ ನೋಡಲಾಗಿ 1).90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 2 ಟೆಟ್ರಾ ಪಾಕೆಟ್ ಗಳು, 2).ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು, 3). ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ, ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ನೀರಿನ ಬಾಟಲಿಗಳನ್ನು ಪರಿಶೀಲಿಸಲಾಗಿ, ಸದರಿ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಚೆನ್ನಕ್ರಿಷ್ಣ ಬಿನ್ ಸೀತಪ್ಪ 45ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ:ಧನಮಿಟ್ಟೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಮದ್ಯಾಹ್ನ 3-15 ರಿಂದ 4-00 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ದೂರನ್ನು ನೀಡುತ್ತಿದ್ದು, ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಚೆನ್ನಕ್ರಿಷ್ಣ ಬಿನ್ ಸೀತಪ್ಪ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.119/2021 ಕಲಂ. 379 ಐ.ಪಿ.ಸಿ:-

          ದಿನಾಂಕ: 20/03/2021 ರಂದು ಸಂಜೆ 5.00 ಗಂಟೆಗೆ ನಾಗರಾಜ ಬಿನ್ ಲೇಟ್  ತಿಪ್ಪಣ್ಣ, 64 ವರ್ಷ, ವಕ್ಕಲಿಗರು, ಜಿರಾಯ್ತಿ, ಚೌಡದೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದಲ್ಲಿ ತನಗೆ ಸುಮಾರು ಮೂರುವರೆ ಎಕರೆ ಜಮೀನು ಇದ್ದು, ಸದರಿ ಜಮೀನಿನಲ್ಲಿ ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ. ಈಗ್ಗೆ ಸುಮಾರು 4 ವರ್ಷಗಳ ಹಿಂದೆ ಈ ಜಮೀನಿನಲ್ಲಿ ಕೊಳವೆ ಬಾವಿಯನ್ನು ಕೊರೆಸಿ ಮೋಟಾರ್ ಪಂಪ್ ಹಾಗೂ ಇದಕ್ಕೆ ಕೆ.ಜಿ.ಎಫ್ ಕಂಪನಿಯ ಪುಲ್ ಆಟೋಮ್ಯಾಟಿಕ್ ಸ್ಟಾಟರ್  ನ್ನು ಅಳವಡಿಸಿಕೊಂಡು ಜಮೀನಿಗೆ  ನೀರನ್ನು ಬಳಸಿಕೊಳ್ಳುತ್ತಿದ್ದೆನು. ಹೀಗಿರುವಲ್ಲಿ ಈಗ್ಗೆ ಸುಮಾರು ಎರಡು ವರ್ಷದ ಹಿಂದೆ ದಿನಾಂಕ: 10/02/2019 ರ ರಾತ್ರಿ ಯಾವುದೋ ಸಮಯದಲ್ಲಿ ತಮ್ಮ ಜಮೀನಿನಲ್ಲಿ ನಿರ್ಮಿಸಿರುವ ಶೆಡ್ ನಿಂದ ಕೊಳವೆ ಬಾವಿಯ ವರೆಗೆ ನೆಲದ ಮೇಲೆ ಹಾಕಿದ್ದ  ಸುಮಾರು  3,000/- ರೂ ಬೆಲೆಯ  30 ಮೀಟರ ಕೇಬಲ್ ವೈರ್ ನ್ನು   ಹಾಗೂ ಮೋಟಾರ್ ಗೆ ಅಳವಡಿಸಿದ್ದ ಸುಮಾರು 14.000/- ರೂ ಬೆಲೆಯ ಕೆ.ಜಿ.ಎಫ್ ಕಂಪನಿಯ ಪುಲ್ ಆಟೋಮ್ಯಾಟಿಕ್ ಸ್ಟಾಟರ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳುವಾಗಿರುವ ವಸ್ತುಗಳ ಒಟ್ಟು  ಬೆಲೆ 17,000/- ರೂಗಳಾಗಿರುತ್ತದೆ. ತಾನು ಇದೂವರೆವಿಗೂ ಕಳುವು ಮಾಡಿದ ಕಳ್ಳರು ಸಿಗಬಹುದೆಂಬ ಉದ್ದೇಶದಿಂದ ಇಲ್ಲಿಯವರೆಗೂ ಠಾಣೆಯಲ್ಲಿ ದೂರನ್ನು ನೀಡಿರಲಿಲ್ಲ. ಆದರೆ ಇದುವರೆವಿಗೂ ತನಗೆ ಗೊತ್ತಿರುವ ಎಲ್ಲಾ ಸ್ಥಳಗಳಲ್ಲಿ ಹುಡುಕಾಡಲಾಗಿ ಪತ್ತೆಯಾಗದೆ ಇದ್ದುದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿರುತ್ತೇನೆ. ಆದ್ದರಿಂದ ತಾವುಗಳು ತಮ್ಮ ಜಮೀನಿನಲ್ಲಿ ಆಳವಡಿಸಿದ್ದ ಕೆ.ಜಿ.ಎಫ್ ಕಂಪನಿಯ ಪುಲ್ ಆಟೋಮ್ಯಾಟಿಕ್ ಸ್ಟಾಟರ್ ನ್ನು ಹಾಗೂ ಕೇಬಲ್ ವೈರ್ ನ್ನು ಕಳುವು ಮಾಡಿರುವ ಕಳ್ಳರನ್ನು ಪತ್ತೆ ಮಾಡಿ ಅವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿರುವುದಾಗಿರುತ್ತೆ.

 

7. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.120/2021 ಕಲಂ. 323,324,504,506,34 ಐ.ಪಿ.ಸಿ:-

          ದಿನಾಂಕ:20/03/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಾದ ಶಿವಲಿಂಗಯ್ಯ ಬಿನ್ ಆಂಜಿನಪ್ಪ 30 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ನಾಯೀಂದ್ರಹಳ್ಳಿ ಕಾಲೋನಿ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 10.30 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದಲ್ಲಿನ ಪ್ರತಿ ಮನೆಗಳ ಬಳಿ ಗ್ರಾಮ ಪಂಚಾಯ್ತಿ ವತಿಯಿಂದ ನೀರಿನ ನಲ್ಲಿಗಳನ್ನು ಹಾಕಿರುತ್ತಾರೆ. ತಮ್ಮ ಗ್ರಾಮದ ವಾಸಿಯಾದ ತಮ್ಮ ಜನಾಂಗದ ವೆಂಕಟರಾಮಪ್ಪ ಬಿನ್ ನಾರೆಪ್ಪ ರವರು ಪೆರಮಾಚನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ತಮ್ಮ ಮನೆಗಳ ಕಡೆ ಜಾಸ್ತಿ ನೀರು ಬರುತ್ತಿದೆ ಅವರಿಗೆ ನೀರನ್ನು ಕಡಿಮೆ ಬಿಡಬೇಕೆಂದು ದೂರು ನೀಡಿರುತ್ತಾರೆ. ಈ ವಿಚಾರ ತಿಳಿದ ತನ್ನ ತಂದೆಯಾದ ಆಂಜಿನಪ್ಪ ಬಿನ್ ಲೇಟ್ ಪಿಳ್ಳಪ್ಪರವರು ಈ ದಿನ ದಿನಾಂಕ:20/03/2021 ರಂದು ರಾತ್ರಿ 8.00 ಗಂಟೆ ಸಮಯದಲ್ಲಿ ತಮ್ಮ ಮನೆಯ ಬಳಿ ನೀರಿನ ವಿಚಾರದಲ್ಲಿ ಪಂಚಾಯ್ತಿಯಲ್ಲಿ ದೂರು ನೀಡಿರುವ ವೆಂಕಟರಾಮಪ್ಪರವರನ್ನು ಬೈದುಕೊಳ್ಳುತ್ತಿದ್ದಾಗ ಮೇಲ್ಕಂಡ ವೆಂಕಟರಾಮಪ್ಪ, ಪ್ರವೀಣ್ ಕುಮಾರ್ ಬಿನ್ ವೆಂಕಟರಾಮಪ್ಪ, ಬೋಚಪ್ಪ ಬಿನ್ ವೆಂಕಟೇಶಪ್ಪ ಮತ್ತು ಕಾಂತಮ್ಮ ಕೋಂ ವೆಂಕಟರಾಮಪ್ಪ ರವರುಗಳು ಸಮಾನ ಉದ್ದೇಶದಿಂದ ತನ್ನ ತಂದೆಯಾದ ಆಂಜಿನಪ್ಪ ರವರ ಮೇಲೆ ಜಗಳ ಮಾಡುತ್ತಿದ್ದಾಗ ಮನೆಯಲ್ಲಿದ್ದ ತಾನು ಹೊರಗೆ ಬಂದು ಜಗಳ ಬಿಡಿಸಲು ಹೋದಾಗ ವೆಂಕಟರಾಮಪ್ಪ ತನ್ನನ್ನು ಕುರಿತು “ಬೋಳಿ ನನ್ನ ಮಗನೆ ನಿಮ್ಮ ತಂದೆಗೆ ಎಷ್ಟು ಧೈರ್ಯ, ಅವನು ನನ್ನನ್ನು ಬೈಯುತ್ತಿದ್ದಾನೆ” ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಲ್ಲಿದ್ದ ದೊಣ್ಣೆಯಿಂದ ತನ್ನ ತಲೆಗೆ ಹೊಡೆದು ರಕ್ತಗಾಯಪಡಿಸಿದನು. ಪ್ರವೀಣ್ ಕುಮಾರ್ ಕೈಗಳಿಂದ ತನ್ನ ಮೈಮೇಲೆ ಹೊಡೆದು ಮೂಗೇಟು ಮಾಡಿರುತ್ತಾನೆ. ಬೋಚಪ್ಪ ಮತ್ತು ಕಾಂತಮ್ಮ ರವರು ಸ್ಥಳದಲ್ಲಿದ್ದ ತನ್ನ ತಂದೆ ಆಂಜಿನಪ್ಪರವರ ಮೈಕೈಗೆ ಕೈಗಳಿಂದ ಹೊಡೆದು ನೋವುಂಟುಮಾಡಿ “ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಸಾಯಿಸುತ್ತೇವೆ” ಎಂದು ಪ್ರಾಣ ಬೆದರಿಕೆಯನ್ನು ಹಾಕಿದರು. ಅಷ್ಟರಲ್ಲಿ ತಮ್ಮ ಗ್ರಾಮದ ನರಸಿಂಹಪ್ಪ ಬಿನ್ ಲೇಟ್ ನರಸಿಂಹಪ್ಪ ಮತ್ತು ಶ್ರೀನಿವಾಸು ಬಿನ್ ವೆಂಕಟಪ್ಪ ರವರು ಅಡ್ಡ ಬಂದು ಜಗಳ ಬಿಡಿಸಿದರು. ನರಸಿಂಹಪ್ಪ ಗಾಯಗೊಂಡಿದ್ದ ತನ್ನನ್ನು ಯಾವುದೇ ಕಾರಿನಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲುಮಾಡಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

8. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.121/2021 ಕಲಂ. 143,147,148,323,324,504,506,149 ಐ.ಪಿ.ಸಿ:-

          ದಿನಾಂಕ:20/03/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಾದ ಪ್ರವೀಣ್ ಕುಮಾರ್ ಬಿನ್ ವೆಂಕಟರಾಮಪ್ಪ, 29 ವರ್ಷ, ಆದಿ ಕರ್ನಾಟಕ ಜನಾಂಗ, ಖಾಸಗಿ ಕೆಲಸ, ನಾಯೀಂದ್ರಹಳ್ಳಿ ಕಾಲೋನಿ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 11.00 ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ಈಗ್ಗೆ ಸುಮಾರು 3 ತಿಂಗಳ ಹಿಂದೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ತಾನು ಮತ್ತು ತಮ್ಮ ಮನೆಯವರು ಮಂಜುನಾಥ್ ಎಂಬ ಅಭ್ಯರ್ಥಿಗೆ ಬೆಂಬಲ ನೀಡಿರುತ್ತೇವೆ. ತಮ್ಮ ಗ್ರಾಮದ ತಮ್ಮ ಜನಾಂಗದ ಆಂಜಿನಪ್ಪ ಬಿನ್ ಲೇಟ್ ಪಿಳ್ಳಪ್ಪ ಮತ್ತು ಅವರ ಮನೆಯವರು ಬೇರೆ ಅಭ್ಯರ್ಥಿಗೆ ಬೆಂಬಲ ನೀಡಿರುತ್ತಾರೆ. ಈ ಹಿನ್ನೆಲೆಯಲ್ಲಿ ತಮಗೂ ಮತ್ತು ಆಂಜಿನಪ್ಪ ಕಡೆಯವರಿಗೆ ವೈಶಮ್ಯವಿರುತ್ತೆ. ಈ ದಿನ ದಿನಾಂಕ:20/03/2021 ರಂದು ರಾತ್ರಿ ಸುಮಾರು 8.00 ಗಂಟೆ ಸಮಯದಲ್ಲಿ ತಾನು ಮತ್ತು ತನ್ನ ತಾಯಿ ಕಾಂತಮ್ಮ ಕೋಂ ವೆಂಕಟರಾಮಪ್ಪ ರವರು ತಮ್ಮ ಮನೆಯ ಬಳಿಯಿದ್ದಾಗ ಅಂಜಿನಪ್ಪ ರವರು ತಮ್ಮನ್ನು ನೋಡಿ ವಿನಾ ಕಾರಣ ಬೈಯುತ್ತಿದ್ದಾಗ ತಾನು ಮತ್ತು ತನ್ನ ತಾಯಿ ಕಾಂತಮ್ಮ ಆತನನ್ನು ಕುರಿತು ಏಕೆ ವಿನಾಕಾರಣ ಬೈಯುತ್ತಿರುವುದು ಎಂದು ಕೇಳಿದಕ್ಕೆ ಆಂಜಿನಪ್ಪ ದೊಣ್ಣೆಯಿಂದ ತನ್ನ ಬೆನ್ನಿನ ಮೇಲೆ ಹೊಡೆದು ಗಾಯಪಡಿಸಿ“ಬೋಳಿ ನನ್ನ ಮಗನೆ ನೀನು ನಮಗೆ ವಿರುದ್ದವಾಗಿ ಚುನಾವಣೆಯಲ್ಲಿ ಬೇರೆಯವರಿಗೆ ಬೆಂಬಲ ನೀಡಿದ್ದೀಯಾ ಎಂದು ಕೆಟ್ಟ ಮಾತುಗಳಿಂದ ಬೈದಿರುತ್ತಾನೆ. ಅಷ್ಟರಲ್ಲಿ ಆಂಜಿನಪ್ಪ ರವರ ಮನೆಯವರಾದ ಶಿವಲಿಂಗಯ್ಯ ಬಿನ್ ಆಂಜಿನಪ್ಪ, ಮೌನಿಷ್ ಬಿನ್ ವೆಂಕಟೇಶಪ್ಪ, ವೆಂಕಟೇಶಪ್ಪ ಬಿನ್ ಆಂಜಿನಪ್ಪ, ಸ್ವಾತಿ ಕೋಂ ಶಿವಲಿಂಗಯ್ಯ, ನೇತ್ರಾವತಿ ಕೋಂ ನಾನೆಪ್ಪ ಎಂಬುವರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ತಮ್ಮ ಮೇಲೆ ಜಗಳ ತೆಗೆದು ಶಿವಲಿಂಗಯ್ಯ ದೊಣ್ಣೆಯಿಂದ ತನ್ನ ಕತ್ತಿನ ಮೇಲೆ ಮತ್ತು ಭುಜದ ಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿದರು. ಆಗ ತನ್ನ ತಾಯಿ ಕಾಂತಮ್ಮ ಜಗಳ ಬಿಡಿಸಲು ಬಂದಾಗ ಮೌನಿಷ್, ವೆಂಕಟೇಶಪ್ಪ, ಸ್ವಾತಿ ಮತ್ತು ನೇತ್ರಾವತಿ ರವರು ಕೈಗಳಿಂದ ತನ್ನ ತಾಯಿ ಕಾಂತಮ್ಮ ಮೈ ಮೇಲೆ ಹೊಡೆದು ನೋವುಂಟುಮಾಡಿ ಇನ್ನೊಂದು ಸಲ ನಮ್ಮಗಳ ತಂಟೆಗೆ ಬಂದರೆ ನಿಮ್ಮನ್ನು ಸಾಯಿಸದೆ ಬಿಡುವುದಿಲ್ಲವೆಂತ ಪ್ರಾಣ ಬೆದರಿಕೆಯನ್ನು ಹಾಕಿದರು. ಆಗ ತನ್ನ ಬಾವನಾದ ಮಾಲೂರು ತಾಲ್ಲೂಕು, ಕಾಟೇರಿ ಗ್ರಾಮದ ವಾಸಿ ಬೈಚಪ್ಪ ಬಿನ್ ವೆಂಕಟೇಶಪ್ಪ, ಹೇಮಂತ್ ಬಿನ್ ರಾಮಕೃಷ್ಣ, ಮಂಜುನಾಥ್ ಬಿನ್ ಕೃಷ್ಣಪ್ಪ ರವರು ಬಂದು ಜಗಳ ಬಿಡಿಸಿರುತ್ತಾರೆ. ತನ್ನ ಭಾವ ಬೈಚಪ್ಪರವರು ತನ್ನನ್ನು ಮತ್ತು ತನ್ನ ತಾಯಿಯನ್ನು ಆತನ ಕಾರಿನಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

9. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.66/2021 ಕಲಂ. 279,337 ಐ.ಪಿ.ಸಿ:-

          ದಿನಾಂಕ 20/03/2021 ರಂದು ಸಂಜೆ 6-45 ಗಂಟೆಗೆ ಪಿರ್ಯಾಧಿದಾರಾದ ಹರೀಶ್ ಬಿನ್ ಪಾಪಣ್ಣ , 27 ವರ್ಷ, ಆದಿ ಕರ್ನಾಟಕ ಜನಾಂಗ , ಕೋಡಗದಾಲ ಗ್ರಾಮ, ಪುರವಾರ ಹೋಬಳಿ , ಮಧುಗಿರಿ ತಾಲ್ಲೂಕು , ತುಮಕೂರು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ-ದಿನಾಂಕ 07/03/2021 ರಂದು ಬೆಳಿಗ್ಗೆ 9-20 ಗಂಟೆಗೆ ನಾನು ಮತ್ತು ನಮ್ಮ ಅಣ್ಣ ಮಾರತಿ ಬಿನ್ ಪಾಪಣ್ಣ , 32 ವರ್ಷ, ರವರು ನಮ್ಮ ಅಕ್ಕನವರಾದ ವನಿತ ರವರ  ಮನೆಗೆ ಬರುತ್ತಿದ್ದಾಗ, ಮಧುಗಿರಿ –ಗೌರಿಬಿದನೂರು ರಸ್ತೆಯ ಹೊಸಕೊಟೆ ಆಂಜಿನೇಯ ಸ್ವಾಮಿ ದೇವಸ್ಥಾನದಿಂದ 06 ಮೀಟರ್ ಮುಂದೆ ನಾನು ಮತ್ತು ನನ್ನ ಅಣ್ಣ ಹೆಲ್ಮೇಟ್ ದರಿಸಿಕೊಂಡು ಎಡಬದಿಯಲ್ಲಿ ನಿಧಾನವಾಗಿ ನಮ್ಮ ವಾಹನ ಟಿ.ವಿ.ಎಸ್ ಎಕ್ಸ್ ಎಲ್ ಹೆವಿ ಡ್ಯೂಟಿ 100 ವಾಹನ ಸಂಖ್ಯೆ KA-64 –S 4364 ಸುಮಾರು 10-10 ಸಮಯದಲ್ಲಿ ಹೋಗುತ್ತಿರುವಾಗ ನಮ್ಮ  ಹಿಂಬದಿಯಿಂದ ಅತಿ ವೇಗವಾಗಿ ಅಜಾಗರೂಕತೆ ಇಂದ ಬಂದಂತಹ ವಾಹನ ಟಿ.ವಿ.ಎಸ್ ಎಕ್ಸ್  ಎಲ್ ಹೆವಿ ಡ್ಯೂಟಿ 100 ವಾಹನ ಸಂಖ್ಯೆ ಕೆಎ 40 ಇಡಿ 0673 ಈ ವಾಹನವು ನಮ್ಮ ವಾಹನಕ್ಕೆ ಹಿಂಬಂದಿಯಿಂದ ಡಿಕ್ಕಿ ಹೊಡೆದ ಪರಿಣಾಮ ನಾವುಗಳು ಕೆಳಗೆ ಬಿದ್ದು ನನಗೆ ತೀವ್ರ ವಾದ ಪೆಟ್ಟಾಗಿದ್ದು ನನ್ನ ಹಿಂದೆ ಕೂತಿದ್ದಂತಹ ನನ್ನ ಅಣ್ಣನಿಗೆ ಬಲಗೈ ಬುಜಕ್ಕೆ ಪೆಟ್ಟಾಗಿದ್ದು ಎಡ ಗೈ ಮೂಳೆಗೆ ಗಂಬೀರವಾದ ಪೆಟ್ಟಾಗಿದ್ದು ಹಾಗೂ ಮುಖಕ್ಕೆ ತೀವ್ರವಾದ ಗಾಯಗಳಾಗಿದ್ದು ಯಾವುದೊ ಕಾರು ಬಂದಾಗ ಅದರಲ್ಲಿ ಕೊಟಾಲದಿನ್ನೆ ಸರ್ಕಾರಿ ಆಸ್ವತ್ರೆಗೆ ಹೋದರು ನಂತರ ಅಲ್ಲಿ ಚಿಕಿತ್ಸೆಯನ್ನು ನೀಡಿ ಅದೇ ದಿನ ಸದರಿಯವರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ವತ್ರೆಗೆ ಹೋದೆವು ನಂತರ ಅಲ್ಲಿಂದ ಸಿದ್ದಗಂಗಾ ಆಸ್ವತ್ರೆಗೆ ಹೊದೆವು ಅಲ್ಲಿಂದ ಸಿದ್ದಾರ್ಥ ಆಸ್ವತ್ರೆಗೆ ದಾಖಲು ಮಾಡಿದ್ದು ಅಲ್ಲಿ ಚಿಕಿತ್ಸೆ ಪಡೆದಿದ್ದು ನಂತರ ನಾಟಿ ಔಷದಿಯ ಚಿಕಿತ್ಸೆ ಪಡೆದು ನನ್ನ ಅಣ್ಣನವರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರಿಂದ ನಾನು ಈ ದಿನ  ತಡವಾಗಿ ಬಂದು ದೂರು ನೀಡಿರುತ್ತೇನೆ. ಆ ದಿನ ದಂದು ಅಜಾಗರೂಕತೆಯಿಂದ ಗಾಡಿ ಹೊಡಿಸಿ ನಮಗೆ ಡಿಕ್ಕಿ ಹೊಡೆದ ವ್ಯಕ್ತಿಯ ಮೇಲೆ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಜರುಗಿಸಬೇಕಾಗಿ ತಮ್ಮಲ್ಲಿ ಕೋರಿ.

 

10. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.67/2021 ಕಲಂ. 279,304(A) ಐ.ಪಿ.ಸಿ:-

          ದಿನಾಂಕ 21/03/2021 ರಂದು ಪಿರ್ಯಾಧಿದಾರರಾದ ಶ್ರೀಮತಿ ರಾಜಮ್ಮ ಕೋಂ ನರಸಿಂಹಮೂರ್ತಿ , 38 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ಹೆಚ್ ನಾಗಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ- ನನ್ನ ಗಂಡ ನರಸಿಂಹ ಮೂರ್ತಿ ಬಿನ್ ಲೇಟ್ ಎದ್ದುಲ ಗಂಗಪ್ಪ, 42 ವರ್ಷ, ಆದಿ ಕರ್ನಾಟಕ ರವರು ಕೂಲಿ ಕೆಲಸವನ್ನು ಮಾಡಿಕೊಂಡಿರುತ್ತಾರೆ. ನಮಗೆ 3 ಜನ ಹೆಣ್ಣು ಮಕ್ಕಳು ಇರುತ್ತಾರೆ. 1 ನೇ ಪವಿತ್ರ 20 ವರ್ಷ, 2 ನೇ ಮಮತ 14 ವರ್ಷ, 3 ನೇ ಜೆಸ್ಸಿಕಾ 5 ವರ್ಷ, ಆಗಿರುತ್ತಾರೆ. ದಿನಾಂಕ 20-03-2021 ರಂದು ಬೆಳಿಗ್ಗೆ 08-30 ಗಂಟೆಗೆ ನನ್ನ ಗಂಡ ನರಸಿಂಹ ಮೂರ್ತಿರವರು ತನ್ನ ಅಕ್ಕ ಹುಲಿಕುಂಟೆಯಲ್ಲಿ ತೀರಿಕೊಂಡಿದ್ದು ಮಣ್ಣಿಗೆ ಹೋಗಿಬರುತ್ತೇನೆಂದು ಹೇಳಿ ತನ್ನ ಬಾಬತ್ತು ಕೆ.ಎ. 06-ಇ.ಎಕ್ಸ್-5476 ಟಿ.ವಿ.ಎಸ್. ದ್ವಿಚಕ್ರವಾಹನದಲ್ಲಿ ಹೋದರು. ರಾತ್ರಿ ಸುಮಾರು 7-30 ಗಂಟೆಯಲ್ಲಿ ನಾನು ಮನೆಯಲ್ಲಿದ್ದಾಗ ನನ್ನ ಬಾವನವರಾದ ಅಶ್ವಥಪ್ಪ ಬಿನ್ ಗಂಗಪ್ಪರವರು ಮನೆಯ ಬಳಿಗೆ ಬಂದು ನರಸಿಂಹ ಮೂರ್ತಿಗೆ ಅಪಘಾತವಾಗಿರುವ ಬಗ್ಗೆ ಹೇಳಿದರು. ನಾನು , ನನ್ನ ಅಳಿಯನಾದ ನರಸಿಂಹ ಮೂರ್ತಿ ಬಿನ್ ಸತ್ಯಪ್ಪ ಮತ್ತು ರವಿ ಬಿನ್ ಗಂಗಾಧರಪ್ಪ 3 ಜನರು  ಹೋಗಿ ನೋಡಲಾಗಿ ವಿಧುರಾಶ್ವಥ – ಇಡಗೂರು ರಸ್ತೆಯಲ್ಲಿ ಹೆಚ್. ನಾಗಸಂದ್ರ ಕ್ರಾಸ್ ನಲ್ಲಿ  ಸಂಜೆ  ಸುಮಾರು 6-30 ಗಂಟೆಯಲ್ಲಿ ನನ್ನ ಗಂಡ ನರಸಿಂಹ ಮೂರ್ತಿರವರು ಹುಲಿಕುಂಟೆಯಿಂದ  ವಾಪಸ್ ನಾಗಸಂದ್ರಕ್ಕೆ ದ್ವಿಚಕ್ರವಾಹನದಲ್ಲಿ ಬರುತ್ತಿದ್ದಾಗ  ಹೆಚ್. ನಾಗಸಂದ್ರ ಕಡೆಯಿಂದ ಟಿ.ಎನ್. 10-ಜೆ-6311 ದ್ವಿಚಕ್ರವಾಹನ ಸವಾರ ತನ್ನ ದ್ವಿಚಕ್ರವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಗಂಡನ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿದ್ದು ನನ್ನ ಗಂಡ ಕೆಳಗೆ ಬಿದ್ದುಹೋಗಿದ್ದರು. ಕೂಡಲೇ ನಾನು, ನರಸಿಂಹ ಮೂರ್ತಿ ಮತ್ತು ರವಿ 3 ಜನರು ಗೌರಿಬಿದನೂರು  ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ವೈದ್ಯರು ಪರೀಕ್ಷಿಸಿ ರಾತ್ರಿ ಸುಮಾರು 08-30 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿದರು. ನನ್ನ ಗಂಡನಿಗೆ ಅಪಘಾತಪಡಿಸಿದ ಮೇಲ್ಕಂಡ ದ್ವಿಚಕ್ರವಾಹನ ಮತ್ತು ಸವಾರನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಾಗಿರುತ್ತೆ.

 

11.  ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.53/2021 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ:20/03/2021 ರಂದು ಠಾಣಾ ಹೆಚ್.ಸಿ.137 ಮಂಜುನಾಥ ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದರ ಸಾರಾಂಶವೇನೆಂದರೆ ದಿನಾಂಕ:20/03/2021 ರಂದು ಪಿ.ಎಸ್.ಐ ಶ್ರೀ ಲಕ್ಷ್ಮೀನಾರಾಯಣ ರವರು ಮಾಲು ಮತ್ತು ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ನಾನು ದಿನಾಂಕ: 20-03-2021 ರಂದು ಮದ್ಯಾಹ್ನ 15-00 ಗಂಟೆಯ ಸಮಯದಲ್ಲಿ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿರುವಾಗ ತೋಡೇಬಾವಿ ಹೋಬಳಿ ಮುತ್ತಕದಹಳ್ಳಿ ಗ್ರಾಮದ ಚಿಕ್ಕಮಲ್ಲೇಕೆರೆ ಕೆರೆ ಅಂಗಳದ ಮರದ ಕೆಳಗೆ ಯಾರೋ ಕೆಲವರು ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಎಲೆಗಳ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲು ಕೆ.ಎ-40-ಜಿ.-395 ರ ಜೀಪಿನಲ್ಲಿ ನಟೇಶ್ ಜೀಪ್ ಚಾಲಕನಾಗಿ ಠಾಣೆಯಲ್ಲಿದ್ದ ಸಿಬ್ಬಂದಿಯವರಾದ,ಪಿ.ಸಿ. 537 ಆನಂದ ಕುಮಾರ್ ಪಿ.ಸಿ. 175 ನವೀನ್ ಕುಮಾರ್,ಪಿ.ಸಿ 336 ಉಮೇಶ, ಪಿ.ಸಿ 238 ದಿಲೀಪ್ ಕುಮಾರ್ ಪಿ.ಸಿ.111 ಲೋಕೇಶ, ಪಿ.ಸಿ 483  ರಮೇಶ ರವರು ಮತ್ತು ಪಂಚರೊಂದಿಗೆ ತೊಂಡೇಬಾವಿ  ಹೋಬಳಿ ಮುತ್ತಕದಹಳ್ಳಿ ಗ್ರಾಮದ ಚಿಕ್ಕಮಲ್ಲೇಕೆರೆ ಕೆರೆ ಅಂಗಳದ ಮರದ ಬಳಿ ಹೋಗಿ ಸ್ವಲ್ಪ ದೂರದಲ್ಲಿ ವಾಹನವನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಗುಂಪಾಗಿ ಕುಳಿತು ಕೆಳಕ್ಕೆ ಪ್ಲಾಸ್ಟಿಕ್ ಚೀಲಹಾಕಿಕೊಂಡು ಅದರ ಮೇಲೆ ಹಣವನ್ನು ಪಣವಾಗಿಟ್ಟು ಅಂದರ್ಗೆ 200/-ರೂ. ಬಾಹರ್ಗೆ 200/-ರೂ.ಗಳು ಎಂದು ಕೂಗುತ್ತಾ ಜೂಜಾಟವಾಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಪಂಚರೊಂದಿಗೆ ನಾವು ಸದರಿಯವರ ಮೇಲೆ ದಾಳಿ ಮಾಡಿ ಜೂಜಾಟವಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆ ನೀಡಿ ಸುತ್ತುವರೆದು ಅಲ್ಲಿದ್ದವರನ್ನು ಹಿಡಿದುಕೊಂಡಿದ್ದು, ಅವರ ಹೆಸರು ವಿಳಾಸ ಕೇಳಲಾಗಿ 1)ಶ್ರೀನಿವಾಸ ಬಿನ್ ವೆಂಕಟೇಶಪ್ಪ 27 ವರ್ಷ ಬೋವಿ ಜನಾಂಗ ಚಾಲಕ ವೃತ್ತಿ ಮುತ್ತಕದಹಳ್ಳಿ ತೊಂಡೇಬಾವಿ ಹೋಬಳಿ ಗೌರೀಬಿದನೂರು ತಾಲ್ಲೂಕು. 2,ದನ್ಯ ಕುಮಾರ್ ಬಿನ್ ಸುಬ್ಬರಾಯಪ್ಪ 24 ಬೋವಿ ಜನಾಂಗ ಚಾಲಕ ವೃತ್ತಿ ಮುತ್ತಕದಹಳ್ಳಿ ತೊಂಡೇಬಾವಿ ಹೋಬಳಿ ಗೌರೀಬಿದನೂರು ತಾಲ್ಲೂಕು. 3. ಮರೇಶ್ ಬಿನ್ ಪೆದ್ದನ್ನ 24 ವರ್ಷ ಆದಿ ಕರ್ನಾಟಕ ಜನಾಂಗ ಚಾಲಕ ವೃತ್ತಿ ಇಂದಿರಾನಗರ ತೊಂಡೇಬಾವಿ ಹೋಬಳಿ ಗೌರೀಬಿದನೂರು ತಾಲ್ಲೂಕು. 4. ಹರೀಶ ಬಿನ್ ಶಿವಣ್ಣ 26 ವರ್ಷ ಬೋವಿ ಜನಾಂಗ  ಚಾಲಕ ವೃತ್ತಿ ಬ್ರಮ್ಮಸಂದ್ರ ಕಳ್ಲಂಬಳ್ಳ ಹೋಬಳಿ ಶಿರಾ ತಾಲ್ಲೂಕು ತುಮಕೂರು ಜಿಲ್ಲೆ, 5.ಗೋವಿಂದ ಬಿನ್ ವೆಂಕಟರಾಯಪ್ಪ 35 ವರ್ಷ ಪ.ಜಾತಿ (ಆದಿ ಕರ್ನಾಟಕ) ಕೂಲಿ ಕೆಲಸ ಇಂದಿರಾನಗರ ತೊಂಡೇಬಾವಿ ಹೋಬಳಿ ಗೌರೀಬಿದನೂರು ತಾಲ್ಲೂಕು.6. ಮಹೇಶ್ ಕುಮಾರ್ ಬಿನ್ ಸುಬ್ಬರಾಯಪ್ಪ 27 ವರ್ಷ ಬೋವಿ ಜನಾಂಗ ಮುತ್ತಕದಹಳ್ಳಿ ತೊಂಡೇಬಾವಿ ಹೋಬಳಿ ಗೌರೀಬಿದನೂರು ತಾಲ್ಲೂಕು. 7.ಮುನಿರಾಜು ಬಿನ್ ಲೇ, ಗಂಗಧರಪ್ಪ 38 ವರ್ಷ ಕುರುಬರು ಕೂಲಿ ಕೆಲಸ ಮುತ್ತಕದಹಳ್ಳಿ ತೊಂಡೇಬಾವಿ ಹೋಬಳಿ ಗೌರೀಬಿದನೂರು ತಾಲ್ಲೂಕು. 8. ಮಂಜುನಾಥ ಬಿನ್ ಗಂಗಾಧರಪ್ಪ 42 ವರ್ಷ ಕುರುಬರು ಚಾಲಕ ವೃತ್ತಿ ಮುತ್ತಕದಹಳ್ಳಿ ತೊಂಡೇಬಾವಿ ಹೋಬಳಿ ಗೌರೀಬಿದನೂರು ತಾಲ್ಲೂಕು. 9. ಶ್ರೀನಾಥ ಬಿನ್ ಗಂಗಾಧರಪ್ಪ 22 ವರ್ಷ ಬೋವಿ ಜನಾಂಗ  ಚಾಲಕ ವೃತ್ತಿ ಯರ್ರಗುಂಟೆ ತೊಂಡೇಬಾವಿ ಹೋಬಳಿ ಗೌರೀಬಿದನೂರು ತಾಲ್ಲೂಕು. ಎಂದು ತಿಳಿಸಿದ್ದು, ಸದರಿಯವರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದರು. ನಂತರ ಪಂಚನಾಮೆಯ ಮೂಲಕ ಸ್ಥಳದಲ್ಲಿ ದೊರೆತ ನಗದು ಹಣ ರೂ. 5800/-(ಐದು ಸಾವಿರದ ಎಂಟುನೂರು ರೂಪಾಯಿಗಳು ಮಾತ್ರ.) 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಚೀಲವನ್ನು ಮದ್ಯಾಹ್ನ 15-45 ಗಂಟೆಯಿಂದ ಸಂಜೆ. 16-45 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಆರೋಪಿಗಳನ್ನು ಮತ್ತು ಮಾಲನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ನೀಡುತ್ತಿದ್ದು ಇವರ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರೆಗೆ ಠಾಣಾ ಎನ್.ಸಿ.ಆರ್ ನಂಬರ್ 79/2021 ರಂತೆ ದಾಖಲಿಸಿ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಮೇಲ್ಕಂಡ ಕಲಂ ರೀತ್ಯ ಪ್ರಕರಣ ದಾಖಲಿಸಿರುತ್ತದೆ.

 

12. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.30/2021 ಕಲಂ. 279,337 ಐ.ಪಿ.ಸಿ:-

          ದಿನಾಂಕ 21-03-2021 ರಂದು ಬೆಳಗ್ಗೆ 11-00 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ  ದಿನಾಂಕ 21-03-2021 ರಂದು ಸಂಜೆ 7-45 ಗಂಟೆಯ ಸಮಯದಲ್ಲಿ ತಾನು ಹಾಗೂ ತಮ್ಮ ಗ್ರಾಮದ ವೆಂಕಟೇಶ್ ರವರು ನಮ್ಮ ಗ್ರಾಮದ ಬಸ್ ನಿಲ್ದಾನದಲ್ಲಿ ನಿಂತಿದ್ದು  ನಮ್ಮ ಸಮೀಪವೆ ನಮ್ಮ ಗ್ರಾಮದ ಸರಸ್ವತಮ್ಮ ಕೊಂ ಮುನಿಕೃಷ್ಣಪ್ಪ  ರವರ ಮನೆ ಇದ್ದು ಮನೆಯ ಮುಂದೆ ಸರಸ್ವತಮ್ಮಳು ನಿಂತಿದ್ದಳು  ಆಗ ಮುದ್ದೇನಹಳ್ಳಿ ಕಡೆಯಿಂದ  ಒಂದು ದ್ವಿಚಕ್ರ ವಾಹನವು ಬರುತ್ತಿದ್ದು ದ್ವಚಕ್ರ ವಾಹನವನ್ನು ಅದರ ಚಾಲಕ  ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದು ನಿಂತಿದ್ದ ಸರಸ್ವತಮ್ಮಳಿಗೆ  ಡಿಕ್ಕಿ ಹೊಡೆಯಿಸಿದ ಪರಿಣಾಮ  ಸರಸ್ವತಮ್ಮಳು  ನೆಲದ ಮೇಲೆ ಬಿದ್ದು ಹೋಗಿ ದ್ದು ಅಪಘಾತಪಡಿಸಿದ ದ್ವಿಚಕ್ರ ವಾಹನದ ಸವಾರ ಮತ್ತು ಆತನ ಹಿಂಬದಿಯಲ್ಲಿ ಇದ್ದವನೂ ಸಹಃ ಕೆಳಕ್ಕೆ ಬಿದ್ದು ಹೋದರು ನಾವಿಬ್ಬರೂ ಸ್ಥಳಕ್ಕೆ ಹೋಗಿ ನೋಡಲಾಗಿ ಸರಸ್ವತಮ್ಮಳಿಗೆ ಎಡಗಾಲಿಗೆ ಹಾಗೂ ಮೈಮೇಲೆ ಗಾಯಗಳಾಗಿದ್ದವು,  ನಾವು ಸರಸ್ವತಮ್ಮಳ ಮಗ ಮದು ರವರನ್ನು ಮನೆಯಿಂದ ಕರೆಯಿಸಿ ಆಕೆಯನ್ನು ಉಪಚರಿಸಿ ಚಿಕಿತ್ಸೆಗಾಗಿ ನಮ್ಮೂರಿನ  ವೆಂಕಟೇಶ ಬಿನ್ ಚಿಕ್ಕಣ್ಣ ರವರ ಕಾರಿನಲ್ಲಿ ಆಸ್ಪತ್ರಗೆ ಕಳುಹಿಸಿಕೊಟ್ಟೆವು, ದ್ವಿಚಕ್ರ ವಾಹನದ  ನಂಬರನ್ನು ನೋಡಲಾಗಿ ಬಜಾಜ್ ಸಿಟಿ 100 ನ  ಕೆಎ-51-ಇಎಸ್-2075 ಆಗಿತ್ತು,  ದ್ವಿಚಕ್ರ ವಾಹನದ ಚಾಲಕ ಮತ್ತು ಹಿಂಬದಿಯಲ್ಲಿ ಕುಳಿತಿದ್ದವರು ಸ್ವಲ್ಪ ಹೊತ್ತು ಅಲ್ಲಿಯೇ ಇದ್ದು ನಂತರ ಕಾಣಲಿಲ್ಲಾ, ಆಸ್ಪತ್ರೆಗ ಕರೆದುಕೊಂಡು ಹೋಗಿದ್ದ ಸರಸ್ವತಮ್ಮಳಿಗೆ  ಚಿಕ್ಕಬಳ್ಳಾಪುರದ  ವೈದ್ಯರು ಪ್ರಥಮ ಚಿಕಿತ್ಸೆಯನ್ನು ನೀಡಿ  ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸಂಜಯ್ ಗಾಂದೀ ಆಸ್ಪತ್ರಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರ ಮೇರೆಗೆ ಆಕೆಯನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿರುವುದಾಗಿ ಗಾಯಾಳು ಮಗ ಮಧು ರವರು ನನಗೆ ತಿಳಿಸಿ ಅಫಗಾತದ ವಿಚಾರದಲ್ಲಿ ದೂರನ್ನು ನೀಡುವಂತೆ ಹೇಳಿದ್ದರಿಂದ ನಾನು ತಡವಾಗಿ ಬಂದು ದೂರನ್ನು ನೀಡುತ್ತಿದ್ದು ಅಪಘಾತಕ್ಕೆ ಕಾರಣನಾದ ಕೆಎ-51-ಇಎಸ್-2075 ನೊಂದಣಿಯ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ,

 

13. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.76/2021 ಕಲಂ. ಮನುಷ್ಯ ಕಾಣೆ:-

          ದಿನಾಂಕ:20.03.2021 ರಂದು ಸಂಜೆ 7.00 ಗಂಟೆಗೆ ಪಿರ್ಯಾದಿದಾರರಾದ ಶಿವರಾಮ್ ಬಿನ್ ರಾಮಕೃಷ್ಣಪ್ಪ, 40 ವರ್ಷ, ವಕ್ಕಲಿಗರು, ಕೆಂಪನಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ನಮ್ಮ ತಂದೆ ತಾಯಿಗೆ ಇಬ್ಬರು ಗಂಡು ಮಕ್ಕಳು 3 ಜನ ಹೆಣ್ಣು ಮಕ್ಕಳಿದ್ದು ಎಲ್ಲರಿಗೂ ಮದುವೆಗಳಾಗಿದ್ದು ಹೆಣ್ಣು ಮಕ್ಕಳು ಅವರ ಗಂಡನ ಮನೆಯಲ್ಲಿ ವಾಸವಾಗಿರುತೇವೆ. ನಾವುಗಳು ನಮ್ಮ ತಂದೆ ತಾಯಿಯೊಂದಿಗೆ ನಮ್ಮ ಮನೆಯಲ್ಲಿ ವಾಸವಾಗಿರುತ್ತೇವೆ. ನಮ್ಮ ತಂದೆಯಾದ ರಾಮಕೃಷ್ಣಪ್ಪ 70 ವರ್ಷ, ರವರು ಪ್ರತಿ ದಿನ ಬೆಳಿಗ್ಗೆ ತೋಟದ ಕಡೆ ಹೋಗಿ ವಾಪಸ್ಸು ಮನೆಗೆ ಬರುತಿದ್ದರು ಎಂದಿನಂತೆ ದಿನಾಂಕ:17.03.2021 ರಂದು ಬೆಳಿಗ್ಗೆ 8.00 ಗಂಟೆಯ ಸಮದಯಲ್ಲಿ ಎಂದಿನಂತೆ ನಮ್ಮ ತಂದೆಯವರು ತೋಟದ ಕಡೆಗೆ ಹೋಗಿದ್ದು ನಂತರ ಸಂಜೆಯಾದರೂ ಸಹ ಮನೆಗೆ ವಾಪಸ್ಸು ಬಂದಿರುವುದಿಲ್ಲ. ನಂತರ ನಾನು ನಮ್ಮ ಮನೆಯವರು ನಮ್ಮ ಗ್ರಾಮದಲ್ಲಿ ಅಕ್ಕ ಪಕ್ಕದ ಮನೆಗಳಲ್ಲಿ ಮತ್ತು ನಮ್ಮ ಸಂಬಂದಿಕರ ಊರುಗಳಲ್ಲಿ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲಿ ನಮ್ಮ ತಂದೆ ರಾಮಕೃಷ್ಣಪ್ಪ ರವರು ಉಪಯೋಗಿಸುತಿದ್ದ 9483308650 ಮೊಬೈಲ್ ನಂಬರ್ ಸ್ವೀಚ್ ಆಪ್ ಬರುತಿದ್ದು ನಾವುಗಳು ನಮ್ಮ ತಂದೆಯರನ್ನು ಹುಡುಕಾಡಿಕೊಂಡಿದ್ದು ಪತ್ತೆಯಾಗದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತಿದ್ದು ಕಾಣೆಯಾಗಿರುವ ನನ್ನ ತಂದೆಯಾದ ರಾಮಕೃಷ್ಣಪ್ಪ ರವರನ್ನು ಪತ್ತೆಮಾಡಿಕೊಡಬೇಕಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

14. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.77/2021 ಕಲಂ. 143,147,447,341,427,504,506(2),149 ಐ.ಪಿ.ಸಿ:-

          ದಿನಾಂಕ 20/03/2021 ರಂದು ರಾತ್ರಿ 8-00 ಗಂಟೆಗೆ ಪಿರ್ಯಾದಿದಾರರಾದ ಬಿ.ಎನ್ ಸತೀಶ ಚಂದ್ರ ಬಿನ್ ಲೇಟ್ ಬಿ.ನಾರಾಯಣಪ್ಪ ವಾಸ-ಭಕ್ತರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ತಂದೆಯಾದ ಲೇಟ್ ನಾರಾಯಣಪ್ಪ ರವರಿಗೆ ಅವರ ಅಣ್ಣನಾದ ಬಿ.ವೆಂಕಟರಾಯಪ್ಪ ನವರು ಇದ್ದು, ಸದರಿ ಬಿ.ವೆಂಕಟರಾಯಪ್ಪ ರವರು ಮತ್ತು ತನ್ನ ತಂದೆ ದಿನಾಂಕ 30/12/1974 ಇಸವಿಯಲ್ಲಿ ಅವರ ವಿಶಿಷ್ಟ ಚರ ಮತ್ತು ಸ್ಥಿರ ಆಸ್ತಿಗಳನ್ನು ವಿಭಾಗಗಳನ್ನಾಗಿ ಮಾಡಿಕೊಂಡು ಆ ವಿಭಾಗದಲ್ಲಿ ತನ್ನ ತಂದೆಗೆ ಜಂಗಮಕೋಟೆ ಹೋಬಳಿ, ಭಕ್ತರಹಳ್ಳಿ ಗ್ರಾಮದ ಸರ್ವೇ ನಂಬರ್ 186 ರಲ್ಲಿ 2-19 ಗುಂಟೆ ಜಮೀನು ವಿಭಾಗದ ಮೂಲಕ ಬಂದಿದ್ದು, ಆ ಜಮೀನಿಗೆ ಪೂರ್ವಕ್ಕೆ ದಾರಿ ಮತ್ತು ಸೊಣ್ಣೇಗೌಡ ಮತ್ತು ಬಿ.ಮುನಿಶಾಮಿಗೌಡ ರವರ ಜಮೀನು ಇರುತ್ತದೆ. ಈಗ ಇರುವುದು ನಾರಾಯಣಸ್ವಾಮಿ, ಬಿ.ವಿ ಮುನೇಗೌಡ ಜಮೀನುಗಳು ಪಶ್ಚಿಮಕ್ಕೆ ಸರ್ವೇ ನಂಬರ್ 87, ಉತ್ತರಕ್ಕೆ ಸರ್ವೇ ನಂಬರ್ 201, ದಕ್ಷಿಣಕ್ಕೆ 185 ಈಗ ಬಸವರಾಜ್ ಮತ್ತು ಮುನೇಗೌಡ ರವರ ಜಮೀನು, ಈ ಮೇಲ್ಕಂಡ ಜಮೀನು ತನ್ನ ತಂದೆ ಇರುವವರೆವಿಗೂ ತಾವು ಮತ್ತು ತಮ್ಮ ತಂದೆಯವರು ಸ್ವಾಧೀನ ಅನುಭವದಲ್ಲಿದ್ದು, ಸದರಿ ಜಮೀನಿನ ಖಾತೆ ಪಹಣಿಗಳು ಅವರ ಹೆಸರಿನಲ್ಲಿದ್ದು, ತಮ್ಮ ತಂದೆಯವರು 1986 ರಲ್ಲಿ ನಿಧನ ಹೊಂದಿ ತದ ನಂತರ ಮೇಲ್ಕಂಡ ಸ್ವತ್ತು ಮತ್ತು ಇತರೇ ವಸ್ತುಗಳು ಫವತಿ ವಾರಸು ಮುಖಾಂತರ ತನ್ನ ಹಿರಿಯ ಅಣ್ಣನಾದ ಬಿ.ಎನ್ ಬಸವರಾಜ್ ರವರಿಗೆ ಖಾತೆ ಪಹಣಿ ಬಂದಿದ್ದು, ಹೀಗಿರುವಲ್ಲಿ ತನ್ನ ಅಣ್ಣಂದಿರಾದ ಬಿ.ಎನ್ ಬಸವರಾಜು, ಬಿ,ಎನ್ ರಾಮಮೂರ್ತಿ, ಅಮರೇಶ್, ಸತೀಶ್ ಚಂದ್ರ ರವರು ಒಟ್ಟು ಕುಟುಂಬಕ್ಕೆ ಸೇರಿದ ಚರ ಮತ್ತು ಸ್ಥಿರಾ ಆಸ್ತಿಗಳನ್ನು 4 ಭಾಗಗಳನ್ನಾಗಿ ವಿಭಾಗ ಮಾಡಿಕೊಂಡು ಅದರಲ್ಲಿ ತನ್ನ ಹಿಸ್ಸಿಗೆ ಡಿ ಷೆಡ್ಯೂಲ್ ಸ್ವತ್ತುಗಳು ಬಂದಿದ್ದು, ಆ ಡಿ ಷಡ್ಯೂಲ್ ಸ್ವತ್ತುಗಳಲ್ಲಿ ಮೇಲ್ಕಂಡ ಸರ್ವೇ ನಂಬರ್ 186 ಒಟ್ಟು 2-19 ಗುಂಟೆ ಜಮೀನು ಇದ್ದು, ಆದರೆ ಸರ್ವೇ ನಂಬರ್ 186 ರ ಜಮೀನು ಒಟ್ಟು 7 ಸಬ್ ನಂಬರ್ ಗಳಾಗಿದ್ದು ಈ ಜಮೀನುಗಳು ಎಲ್ಲಾ ಅಕ್ಕ ಪಕ್ಕದಲ್ಲಿದ್ದು ಇದು ಒಟ್ಟು 2-19 ಗುಂಟೆ ಇರುತ್ತದೆ. ಈ ಜಮೀನಿನಲ್ಲಿ ತಾನು ದಿನಾಂಕ 25/04/2006 ರಿಂದ ಸ್ವಂತ ಸಾಗುವಳಿ ಮಾಡಿಕೊಂಡು ಬೆಳೆ ಇಟ್ಟುಕೊಂಡು ಸ್ವಾಧೀನದಲ್ಲಿ ಇದ್ದು, ಈ ಜಮೀನಿನ ಪೂರ್ವಕ್ಕೆ ಇರುವ ರಸ್ತೆಯು ದಿ:30/03/1974 ರಿಂದ ತನ್ನ ತಂದೆ ಭಾಗದ ಜಮೀನುಗಳಿಗೆ ಮತ್ತು ತನ್ನ ದೊಡ್ಡಪ್ಪನ ಜಮೀನು ಭಾಗಗಳಿಗೆ ಓಡಾಡಲು ಸ್ವಂತ ರಸ್ತೆ ಮಾಡಿಕೊಂಡಿರುತ್ತೇವೆ. ಹೀಗಿರುವಾಗ ಚಂದ್ರಪ್ಪ ಬಿನ್ ಚಿಕ್ಕಣ್ಣ, ಕೇಶವ ಬಿನ್ ಮುನಿವೆಂಕಟಪ್ಪ, ಆಂಜಿನಪ್ಪ ಬಿನ್ ಮುನಿಶಾಮಪ್ಪ, ಚಿಕ್ಕ ನಾರಾಯಣಸ್ವಾಮಿ ಬಿನ್ ಕೆಂಪಣ್ಣ, ಕೆಂಪಣ್ಣ ಬಿನ್ ವೆಂಕಟಪ್ಪ, ವಿಶ್ವನಾಥ ಬಿನ್ ಆಂಜಿನಪ್ಪ, ಕೆಂಪೇಗೌಡ ಬಿನ್ ಚಿಕ್ಕ ನಾರಾಯಣಸ್ವಾಮಿ, ಅನುಷ್ ಬಿನ್ ಕೇಶವ ರವರು ಅಕ್ರಮವಾಗಿ ಗುಂಪುಕಟ್ಟಿಕೊಂಡು ಕೈಗಳಲ್ಲಿ ದೊಣ್ಣೆ, ಕಲ್ಲು, ಲಾಂಗ್ ಗಳನ್ನು ಹಿಡಿದುಕೊಂಡು ದಿನಾಂಕ 19/03/2021 ರಂದು ಸಂಜೆ 5-00 ಗಂಟೆ ಸಮಯದಲ್ಲಿ ತಾನು ಮತ್ತು ತನ್ನ ಅಣ್ಣಂದಿರಾದ ರಾಮಮೂರ್ತಿ, ಅಮರೇಶ್ ರವರು ಜಮೀನಿನಲ್ಲಿ ಕೆಲಸ ಮಾಡುವ ಸಮಯದಲ್ಲಿ ತಮಗೆ ಆಯುಧಗಳನ್ನು ತೋರಿಸಿ ಪ್ರಾಣ ಬೆದರಿಕೆ ವೊಡ್ಡಿ ನೀವು ಏನಾದರೂ ನಾವುಗಳು ಮಾಡುವ ಹೀನ ಕೃತ್ಯಕ್ಕೆ ಅಡ್ಡ ಬಂದಿದ್ದೇ ಆದರೆ ನಿಮ್ಮನ್ನು ಸಾಯಿಸುತ್ತೇವೆಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ತಮ್ಮನ್ನು ಅಡ್ಡಗಟ್ಟಿ ಮೇಲ್ಕಂಡ ಜಮೀನುಗಳಿಗೆ ಅಕ್ರಮ ಪ್ರವೇಶ ಮಾಡಿ ತಮ್ಮ ಸ್ವಂತ ರಸ್ತೆಯನ್ನು ಅಗೆದು ಸುಮಾರು 4 ಅಡಿ ಅಗಲ, 3 ಅಡಿ ಆಳ ತೋಡಿ ಸುಮಾರು 100 ಅಡಿಗಳಷ್ಟು ರಸ್ತೆಯನ್ನು ಉಳುಮೆ ಮಾಡಿ ತಮಗೆ ಸುಮಾರು 25000 ರೂಗಳ ನಷ್ಟವನ್ನುಂಟು ಮಾಡಿರುತ್ತಾರೆ. ತನ್ನ ಗ್ರಾಮಸ್ಥರುಗಳ ಹಿತವಚನದಿಂದ ಈ ದಿನ ತಡವಾಗಿ ದೂರನ್ನು ನೀಡುತ್ತಿದ್ದು ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

 

15. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.26/2021 ಕಲಂ. 302,120B,34 ಐ.ಪಿ.ಸಿ:-

          ದಿನಾಂಕ:20/03/2021 ರಂದು ಮದ್ಯಾಹ್ನ 3.15 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ನಮ್ಮ ತಂದೆ-ತಾಯಿಯವರಿಗೆ ನಾವು ಒಟ್ಟು 07 ಜನ ಮಕ್ಕಳಿದ್ದು 1ನೇ ರಿಹಾನಾ ಖಾನಮ್, 2ನೇ ಅಮ್ಜಾದ್ ನವಾಜ್, 3ನೇ ವಾಜೀದ್ ನವಾಜ್, 4ನೇ ಪರ್ಜನಾ ಖಾನಂ, 05ನೇ ವಾಹಿದ್ ನವಾಜ್ 6 ನೇ ರಿಜ್ವಾನ್ ಖಾನಂ, 7ನೇ ಆದಿಲ್ ನವಾಜ್ ಆಗಿರುತ್ತಾರೆ. ನಮ್ಮ 2ನೇ ಅಣ್ಣ ಅಮ್ಜಾದ್ ನವಾಜ್ ರವರಿಗೆ ಈಗ್ಗೆ ಸುಮಾರು 18 ವರ್ಷಗಳ ಹಿಂದೆ ಶಿಡ್ಲಘಟ್ಟ ನಗರದ ವಾಸಿ ಮಹಬೂಬ್ ಸಾಬ್ ರವರ ಮಗಳಾದ ಷಬನಮ್ ತಾಜ್ ರವರೊಂದಿಗೆ ಮದುವೆಯಾಗಿದ್ದು ಅವರಿಗೆ 1ನೇ ರಿಯಾನ್ ಖಾನ್ 2ನೇ ರಿಹಾನ 3ನೇ ರುಮಾನ್ ಖಾನ್ ಆಗಿರುತ್ತಾರೆ. ನಮ್ಮ ಅಣ್ಣ ಶಿಡ್ಲಘಟ್ಟ ನಗರದಲ್ಲಿ ಪುಟ್ ವೇರ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತಾರೆ.    ದಿನಾಂಕ; 20-03-2021 ರಂದು ನಮ್ಮ ಅಣ್ಣ ಅಮ್ಜದ್ ರವರು ಮನೆಯಿಂದ ಅವರು ನೂತನವಾಗಿ ಮದೀನ ಮಸೀದಿ ಮುಂಭಾಗ ಮದರಸಾ ಪಕ್ಕ ನಿರ್ಮಿಸುತ್ತಿರುವ ಕಟ್ಟಡದ ಉಸ್ತುವಾರಿ ವಹಿಸಲು ನಮ್ಮ ಸಂಬಂಧಿ ನವಾಜ್ ಪಾಷ ರವರ ಜತೆಯಲ್ಲಿ ದ್ವಿ ಚಕ್ರ ವಾಹನ ಸಂಖ್ಯೆ ಕೆಎ40ಇಬಿ 7786 ಟಿವಿಎಸ್. ಜುಪಿಟರ್ ವಾಹನದಲ್ಲಿ ಹೋಗಿದ್ದು ಕೆಲಸದ ಉಸ್ತುವಾರಿ ಮುಗಿಸಿ 2.30 ಗಂಟೆ ಸಮಯದಲ್ಲಿ ಹೊಸ ಅಂಗಡಿ ಮಳಿಗೆಯ ಬಳಿಯಿಂದ ಮನೆಗೆ ಮೇಲ್ಕಂಡ ದ್ವಿ ಚಕ್ರ ವಾಹನದಲ್ಲಿ ನವಾಜ್ ಪಾಷ ರವರ ಹಿಂಬದಿ ಸವಾರನಾಗಿ ಬರುತ್ತಿದ್ದಾಗ ಯಾರೋ ದುಷ್ಕರ್ಮಿಗಳು ಕೆಎ40ಎಂ1633 ನೀಲಿ ತರಹದ ಬಣ್ಣದ ಮಾರುತಿ ಓಮಿನಿ ಕಾರ್ ನಲ್ಲಿ ಬಂದು ನಮ್ಮ ಅಣ್ಣ ಶಿಡ್ಲಘಟ್ಟ ರೈಲ್ವೆ ಬ್ರಿಡ್ಜ್ ಕೆಳಗೆ ಬರುತ್ತಿದ್ದಾಗ ಹಿಂದೆಯಿಂದ ಬಂದು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಸಿ ಅಮ್ಜದ್ ರವರು ವಾಹನದಿಂದ ಕೆಳಗಡೆ ಬಿದ್ದಾಗ ಮಾರಕಾಸ್ತ್ರಗಳಾದ ಮಚ್ಚು ಮತ್ತು ತಲವಾರ್ ನಿಂದ ನಮ್ಮ ಅಣ್ಣನ ತಲೆಗೆ ಕತ್ತರಿಸಿ ಹಲ್ಲೆ ಮಾಡಿ ಪರಾರಿಯಾಗಿರುತ್ತಾರೆ. ಶಿಡ್ಲಘಟ್ಟ ನಗರದ ದರ್ಗಾ ಮೊಹಲ್ಲಾದ ವಾಸಿ ಖಲ್ಲು @ ಖಲಂದರ್ ಖಾನ್ ಬಿನ್ ಇಬ್ರಾಹಿಂ ಖಾನ್ ಎಂಬುವರು ನಮಗೆ ಸಂಬಂಧಿಕರಾಗಿದ್ದು ಈಗ್ಗೆ 2007-2008 ನೇ ಇಸವಿಯಲ್ಲಿ ಅವನಿಗೂ ಹಾಗೂ ನಮ್ಮ ಅಣ್ಣನಿಗೆ ಗಲಾಟೆಗಳಾಗಿ ಶಿಡ್ಲಘಟ್ಟ ನಗರ ಠಾಣೆಯಲ್ಲಿ ಕೇಸುಗಳು ದಾಖಲಾಗಿತ್ತು. ಅಂದಿನಿಂದ ನಮ್ಮ ಅಣ್ಣನ ಮೇಲೆ ಖಲಂದರ್ ರವರಿಗೆ ದ್ವೇಷಗಳಿದ್ದು ಇತ್ತೀಚಿನ ದಿನಗಳಲ್ಲಿ ನಮ್ಮ ಅಣ್ಣನನ್ನು ಖಲಂದರ್ ಖಾನ್ ಕೊಲೆ ಮಾಡಲು ಸಂಚು ರೂಪಿಸುತ್ತಿರುವುದಾಗಿ ನಮಗೆ ಆಪ್ತರಾಗಿದ್ದವರು ನಮ್ಮ ಬಳಿ ಹೇಳುತ್ತಿದ್ದು ನಾವು ಆಯ್ತು ಬಿಡು ನೋಡಿಕೊಳ್ಳೋಣವೆಂತ ನಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದೆವು. ಸದರಿ ಖಲಂದರ್ ಖಾನ್ ಹಾಗೂ ನಮ್ಮ ಅಣ್ಣನಿಗೆ ಈ ಹಿಂದೆ ಆದಂತಹ ಗಲಾಟೆಗಳಿಂದ ಖಲಂದರ್ ಖಾನ್ ನಮ್ಮ ಅಣ್ಣನನ್ನು ಶಿಡ್ಲಘಟ್ಟ ನಗರದಲ್ಲಿ ಸಾರ್ವಜನಿಕರು ನೋಡುವ ರೀತಿಯಲ್ಲಿ ಹಗಲಿನಲ್ಲಿಯೇ ಕೊಲೆ ಮಾಡುವುದಾಗಿ ಸಾರ್ವಜನಿಕರ ಬಳಿ ಹೇಳಿಕೊಂಡಿದ್ದು ಈಗ ನಮ್ಮ ಅಣ್ಣನ ಕೊಲೆಯಾಗಿದ್ದು ಇವನೇ ಇವನ ಸ್ನೇಹಿತರಾದ ಶಿಡ್ಲಘಟ್ಟ ನಗರ ವಾಸಿಗಳಾದ ಡಾಂಬರ್ ಮೌಲ, ಅಮಿತ್, ಮುಭಾರಕ್ ಬಿನ್ ಸನಾವುಲ್ಲಾ, ಜಾವಿದ್, ತಬ್ರೇಜ್ @ ಸಿತಾರ, ರಘು ಹಾಗೂ ಇತರೆಯವರನ್ನು ಸೇರಿಸಿಕೊಂಡು ಈ ದಿನ ಕೊಲೆ ಮಾಡಿರುವ ಸಾದ್ಯತೆಯಿರುತ್ತದೆ ಅಥವಾ ಬೇರೆ ಯಾರಾದರೂ ಯಾವುದೋ ಕಾರಣದಿಂದ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಸಾದ್ಯತೆ ಇರುತ್ತೆ.  ಕೊಲೆಯಾದ ಸಮಯದಲ್ಲಿ ಕೃತ್ಯವನ್ನು ಸಾಧಿಕ ಪಾಷ ಬಿನ್ ಲೇಟ್ ಫಯಾಜ್ ಅಹಮದ್ ಮತ್ತು ಮುಕಾಮಿಲ್ ಬಿನ್ ಅಬ್ದುಲ್  ವಹಾಬ್ ಸಾಬ್ ರವರು ನೋಡಿ ನನಗೆ ವಿಚಾರ ತಿಳಿಸಿರುತ್ತಾರೆ. ಆ ಸಮಯದಲ್ಲಿ ಪೊಲೀಸರು ವಾಹನವನ್ನು ತಡೆಯಲು ಪ್ರಯತ್ನಿಸಿದಾಗ ಆರೋಪಿಗಳ ಪೊಲೀಸರ ಮೇಲೆ ಮಾರುತಿ ಓಮಿನಿ ಕಾರನ್ನು ಹತ್ತಿಸಲು ಪ್ರಯತ್ನಿಸಿ ದಿಬ್ಬೂರಹಳ್ಳಿ ರಸ್ತೆ ಕಡೆ ಅತಿ ವೇಗವಾಗಿ ಚಾಲನೆ ಮಾಡಿಕೊಂಡು ಹೋದ ಸಮಯದಲ್ಲಿ ಪೊಲೀಸರು ವಾಹನವನ್ನು ಹಿಂಬಾಲಿಸಿ ಹಿಡಿಯಲು ಪ್ರಯತ್ನಿಸಲಾಗಿ ಕೊಲೆ ಆರೋಪಿಗಳು ಪರಾರಿಯಾಗಿರುತ್ತಾರೆ. ಅದರಿಂದ  ಕೊಲೆ ಮಾಡಿರುವ ಆರೋಪಿಗಳ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಠಾಣಾ ಮೊ.ಸಂಖ್ಯೆ 26/2021 ಕಲಂ 302, 120(ಬಿ), ರೆ/ವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

Last Updated: 21-03-2021 05:31 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080