ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.45/2021  ಕಲಂ. 323,324,355,365,504,506,34 ಐ.ಪಿ.ಸಿ:-

     ದಿನಾಂಕ:20/02/2021 ರಂದು 20.00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಚಿಕ್ಕಬಳ್ಳಾಪುರ ನಗರದ ಸಿದ್ದರಾಮಯ್ಯ ಕಾನೂನು ಮಹಾ ವಿದ್ಯಾಲಯದಲ್ಲಿ ಬಿಎಎಲ್ಎಲ್ ಬಿ  3ನೇ ವರ್ಷದ ವ್ಯಾಸಂಗ ಮಾಡುತ್ತಿರುತ್ತೇನೆ. ದಿನಾಂಕ:04-02-2021 ರಂಧು ಮದ್ಯಾಹ್ನ ಸುಮಾರು 1-30 ಗಂಟೆಗೆ ನಮ್ಮ ಜಚನಿ ಕಾಲೇಜಿನ ಬಿಕಾಂ ವಿದ್ಯಾರ್ಥಿ ಲೋಕೇಶ್ ಬಾಗೇಪಲ್ಲಿ ರವರು ಕಾಲೇಜಿನ ಸ್ವಾಗತ ಸಮಾರಂಭಕ್ಕೆ 2000/-  ಹಣ ನೀಡಲು ಕೇಳಿದನು. ನಾನು ನನ್ನ ಬಳಿ ಇಲ್ಲವೆಂದು ಹೇಳಿದಕ್ಕೆ ನನ್ನ ಮೇಲೆ ಗಲಾಟೆ ಮಾಡಿದ್ದನು. ದಿನಾಂಕ: 19-02-2021 ರಂದು ನಾನು ನನ್ನ ಭಾವನಾದ ಹರೀಶ ನನ್ನ ಸ್ನೇಹಿತನಾದ ಜೋಣ ನಾಯಕ್ ರವರೊಂದಿಗೆ ಬಾಗೇಪಲ್ಲಿ ರವರರೊಂದಿಗೆ ಬಾಗೇಪಲ್ಲಿಗೆ ಸಿನಿಮಾಗೆ ಬಂದಿದ್ದು. ವೆಂಕಟೇಶ್ವರ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ವಾಪಸ್ಸು ಹೊರಗಡೆ ಬಂದಾಗ ಮದ್ಯಾಹ್ನ ಸುಮಾರು 1-30 ಗಂಟೆ ಸಮಯದಲ್ಲಿ ನಮ್ಮ ಭಾವ ದ್ವಿಚಕ್ರ ವಾಹನವನ್ನು ತರಲು ಹೋದನು. ನಾನು ವೆಂಕಟೇಶ್ವರ ಚಿತ್ರಮಂದಿರದ ಮುಂಭಾಗದಲ್ಲಿ ನಿಂತಿದ್ದಾಗ ನನ್ನನ್ನು ಲೋಕೇಶ್ ಮಾತನಾಡಿಸಿಕೊಂಡು ನನ್ನನ್ನು ಸ್ವಲ್ಪ ದೂರ ಕರೆದುಕೊಂಡು ಹೋಗಿ ರಸ್ತೆ ಬದಿ ನಿಂತಿದ್ದ ಅಂಬರೀಶ ರವರ ಕಾರಿನಲ್ಲಿ ನನ್ನನ್ನು ಬಲವಂತವಾಗಿ ಕುಳಿತುಕೊಳ್ಳುವಂತೆ ಹೇಳಿ ಚಾಕು ತೋರಿಸಿ ನನ್ನನ್ನು ಕಾರಿನಲ್ಲಿ ಲೋಕೇಶ್ ಆತನ ಇಬ್ಬರು ಸ್ನೇಹಿತರು ಕೈಗಳಿಂದ ಹೊಡೆದಿರುತ್ತಾರೆ. ಕಾರಿನಲ್ಲಿ ಅಂಬರೀಶ ಅಡ್ಡ ಬಂದಿದ್ದಕ್ಕೆ ಅವನಿಗೂ ಕೈಗಳಿಂದ ಹೊಡೆದು ನಾವು ಹೇಳಿದಂತೆ ಕಾರು ಚಾಲನೆ ಮಾಡು ಎಂದು ನನ್ನನ್ನು ಆದಿನಾರಾಯಣಸ್ವಾಮಿ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಲೋಕೇಶ್ ಮತ್ತು ಆತನ ಸ್ನೇಹಿತ ಹಾಕಿ ಬ್ಯಾಟ್ ನಿಂದ ನನ್ನ ಕಾಲಿಗೆ ಮತ್ತು ತಲೆಗೆ ಹೊಡೆದನು, ಇದನ್ನು ಕಂಡ ಅಂಬರೀಶ ಭಯಗೊಂಡು ತನ್ನ ಕಾರನ್ನು ತೆಗೆದುಕೊಂಡು ಹೊರಟು ಹೋದನು. ನಂತರ ಲೋಕೇಶ್ ನು ನನಗೆ ಚಾಕುವನ್ನು ತೋರಿಸಿ ಬಟ್ಟೆಬಿಚ್ಚುವಂತೆ ಹೇಳಿದನು, ನನ್ನ ಬಟ್ಟೆ ಬಿಚ್ಚಿಸಿ ತನ್ನ ಮೊಬೈಲ್ ನಲ್ಲಿ ವೀಡಿಯೋ ಮಾಡಿಕೊಂಡನು, ನೀನು ನನ್ನ ಮೇಲೆ ಕಂಪ್ಲೇಂಟ್ ಎನಾದರೂ ಕೊಟ್ಟರೇ ನೀನ್ನನ್ನು ಸಾಹಿಸುವುದಾಗಿ ಬೆದರಿಕೆ ಹಾಕಿ ಅಲ್ಲಿಂದ ಮೂರು ಜನ ಹೊರಟು ಹೋದರು. ನಾನು ನನ್ನ ಸ್ನೇಹಿತನಾದ ಜೋಣ ನಾಯಕ್ ಗೆ ಪೋನ್ ಮಾಢಿ ನಮ್ಮ ಊರಿಗೆ ದ್ವಿಚಕ್ರ ವಾಹನದಲ್ಲಿ ಬಂದೆನು. ಭಯಗೊಂಡಿದ್ದ ನಾನು ಈ ದಿನ ಮನೆಯಲ್ಲಿ ವಿಚಾರ ತಿಳಿಸಿ ದೂರನ್ನು ನೀಡುತ್ತಿದ್ದು, ನಾನು ಸ್ವಾಗತ ಸಮಾರಂಭ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ನನ್ನನ್ನು ಅಪಹರಿಸಿ, ಅವಾಚ್ಯ ಶಬ್ದಗಳಿಂದ ಬೈದು, ಚಾಕುವಿನಿಂದ ಬೆದರಿಸಿ, ಹಾಕಿ ಬ್ಯಾಟ್ ನಿಂದ ಹೊಡೆದು, ನನ್ನ ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿಕೊಂಡು ನನ್ನಗೆ ಅವಮಾನ ಮಾಡಿ ಕಂಪ್ಲೆಂಟ್  ಕೊಟ್ಟರೇ ಯೂಟೂಬ್ ನಲ್ಲಿ ಆಪ್ ಲೋಡ್ ಮಾಡುವುದಾಗಿ ಹಾಗೂ ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಲೋಕೇಶ್ ಆತನ ಇಬ್ಬರು ಸ್ನೇಹಿತರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.30/2021 ಕಲಂ. 323,307,506,120B,114,34  ಐ.ಪಿ.ಸಿ:-

     ದಿನಾಂಕ:19-02-2021 ರಂದು ರಾತ್ರಿ 10.30 ಗಂಟೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ  ಕರ್ತವ್ಯ ನಿರತ ವೈದ್ಯಾಧಿಕಾರಿಗಳು  ಅರ್ಜುನ್ ಬಿನ್ ಲೇಟ್ ಶ್ರೀನಿವಾಸ, ಮೈಲಪನ್ನಹಳ್ಳಿ ಗ್ರಾಮ ರವರು ಹಲ್ಲೇಯಿಂದ ಗಾಯಾಳುವಾಗಿ ಚಿಕಿತ್ಸೆಗಾಗಿ ದಾಖಲಾಗಿರುವ ಬಗ್ಗೆ  ರವಾನಿಸಿದ ಪೊಲೀಸ್ ಮಾಹಿತಿಯ ಮೇರೆಗೆ ಆಸ್ಪತ್ರೆಗೆ ಬೇಟಿ ಮಾಡಿ ಗಾಯಾಳು  ಶ್ರೀ. ಅರ್ಜುನ್ ಬಿನ್ ಲೇಟ್ ಶ್ರೀನಿವಾಸ, 29ವರ್ಷ, ಕೊರಮ ಜನಾಂಗ, ಕಾರು ಚಾಲಕ, ಮೈಲಪ್ಪನಹಳ್ಳಿ ಗ್ರಾಮ, ನಂದಿ ಹೋಬಳಿ ಚಿಕ್ಕಬಳ್ಳಾಪುರ ತಾಲ್ಲೂಕು ರವರ ಹೇಳಿಕೆಯನ್ನು ವೈದ್ಯಾಧಿಕಾರಿಗಳ ಸಮಕ್ಷಮ ರಾತ್ರಿ 11.30 ಗಂಟೆಯವರೆಗೆ ಪಡೆದಕೊಂಡಿದ್ದರ ಸಾರಾಂಶವೇನೆಂದರೆ,  ತಮ್ಮ ಗ್ರಾಮ ವಕ್ಕಲಿಗರ ಜಾತಿಯ ಪಾರ್ವತಮ್ಮ ರವರ ಮಗಳಾದ ಶ್ರೀಮತಿ.ಶ್ಯಾಮಲ ಎಂಬಾಕೆಯನ್ನು ಶಿಡ್ಲಘಟ್ಟ ತಾಲ್ಲೂಕು ಮಳ್ಳೂರು ಗ್ರಾಮದ ವಾಸಿ  ವೆಂಕಟೇಶ ಬಿನ್ ನಾರಾಯಣಪ್ಪ  ಎಂಬುವನೊಂದಿಗೆ ಮದುವೆಯಾಗಿದ್ದು  ಈಗ್ಗೆ ಸುಮಾರು 10ವರ್ಷಗಳಿಂದ ಶ್ಯಾಮಲ ರವರು ತನ್ನ ಗಂಡನಾದ  ವೆಂಕಟೇಶರವರೊಂದಿಗೆ ನಮ್ಮ ಊರಿನಲ್ಲಿ ವಾಸವಾಗಿರುತ್ತಾರೆ.  ತಾನು ಈಗ್ಗೆ ಸುಮಾರು 9 ವರ್ಷಗಳಿಂದ ಶ್ಯಾಮಲ ಕೋಂ ವೆಂಕಟೇಶರವರೊಂದಿಗೆ ಸಂಬಂದ  ಇಟ್ಟುಕೊಂಡಿದ್ದು ಕಾರು ಚಾಲನೆ ಮಾಡುವ ಸಂಪಾದನೆಯಿಂದ ಬರುವ ಹಣವನ್ನು ಆಕೆಗೆ ಕೊಡು ತ್ತಿದ್ದೆ. ಈ ವಿಚಾರದಲ್ಲಿ ಸುಮಾರು 8 ವರ್ಷಗಳ ಹಿಂದೆ ವೆಂಕಟೇಶನು ತನ್ನ ತಾಯಿಯಾದ ಶ್ರೀಮತಿ. ಜಯಮ್ಮ, ಅಣ್ಣನಾದ ಶಿವರಾಜ್  ಮತ್ತು ತನ್ನ ಮೇಲೆ ಲಾಂಗ್ ಎತ್ತಿಕೊಂಡು ಬಂದು ಗಲಾಟೆ ಮಾಡಿದ್ದ  ವಿಚಾರದಲ್ಲಿ  ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು ಪೊಲೀಸರು ಬುದ್ದಿ ಮಾತು ಹೇಳಿ ಕಳುಹಿಸಿದ್ದರು. ಹೀಗಿದ್ದು ದಿನಾಂಕ:19-02-2021 ರಂದು ತಾನು ಕೆಲಸಕ್ಕೆ ಹೋಗಿ ಚಿಕ್ಕಬಳ್ಳಾಪುರಕ್ಕೆ ಬಂದು ಪಲ್ಲವಿ ಬಾರ್ ನಲ್ಲಿ ಕುಡಿದು ರಾತ್ರಿ ಊರಿಗೆ ಹೋದೆ. ರಾತ್ರಿ ಸುಮಾರು 9.30 ಗಂಟೆ ಸಮಯದಲ್ಲಿ ತಾನು ಗ್ರಾಮದ ಹಾಲು ಡೈರಿಯ ಬಳಿ ಇದ್ದಾಗ ವೆಂಕಟೇಶನು ತನ್ನ ಹೆಂಡತಿ ಶ್ಯಾಮಲ ರವರ ಪ್ರಚೋದನೆಯ ಮೇರೆಗೆ ಡೈರಿ ಬಳಿ ಬಂದು ತನ್ನ  ಮೇಲೆ ಎಕಾ ಎಕೀ ಜನಗ ತೆಗೆದು ಎನೋ  ನನ್ನ ಮಗೆನೇ ನನ್ನ ಸಂಸಾರ ಹಾಳು ಮಾಡುತ್ತಿದ್ದಿಯ   ಈ ದಿನ  ನಿನ್ನನ್ನು ಮುಗಿಸುವ ತನಕ ಬಿಡುವುದಿಲ್ಲ ಎಂದು ತನ್ನ ಮೇಲೆ ಜಗಳ ತೆಗೆದು ಕೈಗಳಿಂದ ಮೈ ಮೇಲೆ ಹೊಡೆದು ತನ್ನ ಜೇಬಿನಲ್ಲಿ ಬಚ್ಚಿಟ್ಟುಕೊಂಡಿದ್ದ ಚಾಕುವಿನಿಂದ ತನ್ನ ಕುತ್ತಿಗೆಗೆ ಮತ್ತು ಎಡ ಕೆನ್ನೆಗೆ ಕೊಯ್ದು ಭಾರಿ ರಕ್ತಗಾಯ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ. ಕೂಡಲೇ  ಆಟೋ ಸೀನಪ್ಪ ರವರು  ಜಗಳ ಬಿಡಿಸಿ ತನ್ನ ಅಟೋದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ  ಕರೆ ತಂದು ಚಿಕಿತ್ಸೆಗಾಗಿ ದಾಖಲಿಸಿದ. ತನ್ನನ್ನು ಕೊಲೆ ಮಾಡಲು ಪ್ರಯತ್ನಿಸಿದ ವೆಂಕಟೇಶ ಮತ್ತು ಕೊಲೆ ಮಾಡಲು ಪ್ರಚೋದಿಸಿದ ಶ್ಯಾಮಲ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ನೀಡಿದ ಹೇಳಿಕೆಯ ಮೇರೆಗೆ ಪ್ರ. ವ.ವರದಿ.

 

3. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.23/2021 ಕಲಂ. 341,323,420,504,506 ಐ.ಪಿ.ಸಿ:-

     ದಿನಾಂಕ 21/02/2021 ರಂದು ಬೆಳಿಗ್ಗೆ 11-30 ಗಂಟೆಗೆ  ಪಿರ್ಯಾದುದಾರರಾದ ನಾಗಾನಂದ್ ಪಿ.ಆರ್  ಬಿನ್ ಪಿ.ಎಸ್ ರಾಮ ಮೋಹನ್, ಎನ್ ಆರ್ ಬಡಾವಣೆ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ನಾನು 2005 ನೇ ಸಾಲಿನಿಂದ 2017 ನೇ ಸಾಲಿನವರೆಗೆ ಹೋಸಕೋಟೆಯಲ್ಲಿ ಸಾಯಿಶ್ರೀ ಮೋಟಾರ್ಸ್ ಷೋ ರೂಂ ಇಟ್ಟುಕೊಂಡಿದ್ದು ಸದರಿ ವ್ಯಾಪಾರಕ್ಕೆ ಸಂಬಂಧಿಸಿದ ಆಧಾಯ ತೆರಿಗೆ ಪೈಲ್  ಗಳನ್ನು ಚಿಂತಾಮಣಿ ನಗರದ ಪ್ರಭಾಕರ್ ಬಡಾವಣೆಯಲ್ಲಿ ವಾಸಿಯಾದ  ಹರೀಶ್ ವಿ ಆಚಾರಿ ಬಿನ್ ವೆಂಕಟಾಚಾರಿ ಎಂಬ ಆಡಿಟರ್ ಗೆ ಕೊಡುತ್ತಿದ್ದೇವು.  2011-12 ನೇ ಸಾಲಿನಲ್ಲಿ ನನ್ನ ಷೋರೂಂ ಗೆ ಸಂಬಂಧಿಸಿದಂತೆ ಆದಾಯ ತೆರಿಗೆ ದಾಖಲೆಗಳನ್ನು ಹಾಜರುಪಡಿಸಿ ತೆರಿಗೆ ಪಾವತಿಸುವಂತೆ ಕೋಲಾರ ಆದಾಯ ತೆರಿಗೆ ಇಲಾಖೆ ಕಛೇರಿಯಿಂದ ನನಗೆ ನೋಟಿಸ್ ಜಾರಿಯಾಗಿತ್ತು. ಆಗ ನಾನು ನಮ್ಮ ಆಡಿಟರ್ ಕೆಲಸ ನೋಡಿಕೊಳ್ಳುತ್ತಿದ್ದ ಹರೀಶ್ ವಿ ಆಚಾರಿ ರವರಿಗೆ ತೆರಿಗೆ ಕಟ್ಟುವಂತೆ 13,90,000/- ರೂ ಗಳನ್ನು ನೀಡಿರುತ್ತೇನೆ. ಆದರೆ ಆತನು ತೆರಿಗೆಯನ್ನು ಕಟ್ಟದೆ ನನಗೆ ಮೋಸ ಮಾಡಿರುತ್ತಾನೆ. ಇದರಿಂದ ನನಗೆ ದಿನಾಂಕ 04/10/2016 ರಂದು ತೆರಿಗೆ ಕಟ್ಟುವಂತೆ ಆದಾಯ ತೆರಿಗೆ ನೋಟಿಸ್ ಬಂದಿರುತ್ತೆ. ಇದರ ಬಗ್ಗೆ ನಾನು ಹರೀಶ್ ವಿ ಆಚಾರಿ ರವರನ್ನು ಕೇಳಿದಾಗ  ನಿಮಗೆ ನೋಟಿಸ್ ಬರದಂತೆ ಮಾಡುತ್ತೇನೆಂದು ತಿಳಿಸಿದ್ದು ಪುನಃ ನನಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಗಳು  ಬರುತ್ತಿದ್ದವು. ಹರೀಶ್ ವಿ ಆಚಾರಿ ರವರು ನಾನು  ಆದಾಯ ತೆರಿಗೆ ಇಲಾಖೆಗೆ ಕಟ್ಟಲು ನೀಡಿದ ಹಣವನ್ನು ಸ್ವಂತಕ್ಕೆ ಬಳಸಿಕೊಂಡು  ನನಗೆ ಯಾವುದೇ ಹಣ ಸಂದ ಸ್ವೀಕೃತಿಯನ್ನು ನೀಡದೇ ಮೋಸ ಮಾಡಿರುತ್ತಾನೆ. ನಾನು ಹಾಗೂ ಹರೀಶ್ ವಿ ಆಚಾರಿ ರವರು ಜೊತೆಯಾಗಿ ಸೇರಿ ಬೆಂಗಳೂರಿನ ಕೆ.ಆರ್ ಮಾರುಕಟ್ಟೆಯಲ್ಲಿ ಬಿ.ಬಿ.ಎಂ.ಪಿ ಗೆ ಸೇರಿದ ಅಂಗಡ ಮಳಿಗೆಯೊಂದನ್ನು ಖರೀಧಿ ಮಾಡಿದ್ದು ಹರೀಶ್ ವಿ ಆಚಾರಿ ರವರು ನನಗೆ ಆಧಾಯ ತೆರಿಗೆ ಹಣವನ್ನು ಕಟ್ಟುತ್ತೇನೆಂದು ತೆಗೆದುಕೊಂಡು ಇಲಾಖೆಗೆ ಹಣವನ್ನು ಕಟ್ಟದೆ ನನಗೆ ನೋಟಿಸ್ ಗಳು  ಜಾರಿಯಾಗುವಂತೆ ಮಾಡಿದ್ದರಿಂದ ನನಗೆ ಬೇಸರವಾಗಿ ಹರೀಶ್ ವಿ ಆಚಾರಿ ರವರ ಮೇಲೆ ಅನುಮಾನವುಂಟಾಗಿ ಬೇರೆ ತೆರಿಗೆ ಇಲಾಖೆ ಆಡಿಟರ್ ಗಳ ಬಳಿ ಈ ನೋಟಿಸ್ ನ್ನು ತೋರಿಸಿ ವಿಚಾರಿಸಲಾಗಿ ಅವು ಬೋಗಸ್ ನೋಟಿಸ್ ಗಳಾಗಿವೆ ನಿಮಗೆ ಮೋಸ ಮಾಡಿ ಬೆದರಿಸಲು ಈ ರೀತಿ ಬ್ಲಾಕ್ ಮೇಲ್ ಮಾಡಿದ್ದಾರೆಂದು ತಿಳಿಸಿದರು. ಈ ವಿಚಾರದಲ್ಲಿ ನನಗೂ ಹಾಗೂ ಹರೀಶ್ ವಿ ಆಚಾರಿ ರವರಿಗೆ ಮನಸ್ತಾಪವುಂಟಾಗಿ  ನಾನು ಇನ್ನೂ ಮುಂದೆ ಅವರಿಗೆ ಯಾವುದೇ ವ್ಯವಹಾರ ನೀಡಬಾರದೆಂದು ತಿರ್ಮಾನಿಸಿ ಅಂಗಡಿಯ ವಿಚಾರದಲ್ಲಿ ನಮ್ಮ ಬಾಬತ್ತಿಗೆ ಬರುವ 25 ಲಕ್ಷ ರೂ ಹಣವನ್ನು ವಾಪಸ್ ನೀಡಲು ತಿರ್ಮಾನಿಸಿ ಎಂ.ಎಂ.ಎಸ್ ಶ್ರೀನಿವಾಸ್ ರವರ ಬಳಿ ಕುಳಿತು ಚರ್ಚಿಸಿ ಹರೀಶ್ ವಿ ಆಚಾರಿ ರವರಿಗೆ ನಾನು 25 ಲಕ್ಷ ರೂ ಹಣವನ್ನು ನೀಡುವುದಾಗಿ ಒಪ್ಪಿ ಇನ್ನೂ ಮುಂದೆ ನನಗೆ ಯಾವುದೇ ನೋಟಿಸ್ ಬರದಂತೆ ಮಾಡಿ ನನಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನೀಡುವುದಾಗಿ ಒಪ್ಪಿಕೊಂಡಿರುತ್ತಾನೆ.  ಆದರೆ  ಹರೀಶ್ ವಿ ಆಚಾರಿ ರವರು ನನಗೆ ಯಾವುದೇ ದಾಖಲಾತಿಗಳನ್ನು ನೀಡದೇ  ಬದಲಿಗೆ ನನ್ನ ಮೇಲೆ ತೆರಿಗೆ ಇಲಾಖೆಯವರಿಂದ ನೋಟಿಸ್ ಕೊಡಿಸಿ ರೈಡ್ ಮಾಡಿಸುತ್ತೇನೆಂದು ಬೆದರಿಕೆ ಹಾಕಿರುತ್ತಾರೆ.  ಅದು ಅಲ್ಲದೆ ಅನಾಮದೇಯ ವ್ಯಕ್ತಿಗಳಿಂದ ನನಗೆ ಪೋನ್ ಮಾಡಿಸಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿಸಿರುತ್ತಾನೆ.  ಇದರಿಂದ ನಾನು ಹರೀಶ್ ವಿ ಆಚಾರಿ ರವರ ಸಹವಾಸ ಬೇಡವೆಂದು 2020 ನೇ ಸಾಲಿನ ಡಿಸೆಂಬರ್ ನಲ್ಲಿ 5 ಲಕ್ಷ ರೂ ಹಾಗೂ 2021 ನೇ ಸಾಲಿನಲ್ಲಿ ಜನವರಿಯಲ್ಲಿ 20 ಲಕ್ಷ ರೂ ಹಣವನ್ನು ಎಂ.ಎಂ.ಎಸ್ ಶ್ರೀನಿವಾಸ ರವರ ಸಮಕ್ಷಮ ನೀಡಿ ನನಗೆ ಸಂಬಂಧಿಸಿದ ದಾಖಲೆಗಳನ್ನು ನೀಡುವುದಾಗಿ ಹೇಳಿದರು ಸಹ ಇದುವರೆಗೂ   ಸಹ ನೀಡಿರುವುದಿಲ್ಲ.                 ಹೀಗಿರುವಾಗ ದಿನಾಂಕ 21/02/2021 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ನಾನು ಮತ್ತು ನಾಮಾ ಸುನೀಲ್ ರವರೊಂದಿಗೆ ಹರೀಶ್ ವಿ ಆಚಾರಿ ರವರ ಕಛೇರಿ ರಸ್ತೆಯಲ್ಲಿ ಬರುತ್ತಿದ್ದಾಗ ಹರೀಶ್ ವಿ ಆಚಾರಿ ರವರು ನನ್ನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ನನ್ನ ಕೆನ್ನೆಗೆ ಕೈಯಿಂದ ಹೊಡೆದು ನಿನ್ನನ್ನು ಸಾಯಿಸದೇ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾನೆ.  ಆದ್ದರಿಂದ  ನನಗೆ ಕೊಡಬೇಕಾದ ಆದಾಯ ತೆರಿಗೆ ದಾಖಲೆಗಳನ್ನು  ಹಾಗೂ ಹಣವನ್ನು ಇದುವರೆಗೂ ನೀಡದೇ ನನಗೆ ಮೋಸ ಮಾಡಿ  ಪ್ರಾಣ ಬೆದರಿಕೆ ಹಾಕುತ್ತಿರುವ ಹರೀಶ್ ವಿ ಆಚಾರಿ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

 

4. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.43/2021 ಕಲಂ. 160  ಐ.ಪಿ.ಸಿ:-

     ದಿನಾಂಕ:20/02/2021 ರಂದು 16-00 ಗಂಟೆಗೆ ಸಿ.ಪಿ.ಸಿ-80 ಶ್ರೀನಾಥ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:20/02/2021 ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ಪಿರ್ಯಾದಿದಾರರು ಹೊಸೂರು ಹೊರ ಠಾಣೆಯಲ್ಲಿ ಕರ್ತವ್ಯ ಮಾಡುತ್ತಿದ್ದಾಗ ದ್ರೋಣಕುಂಟೆ ಗ್ರಾಮದಲ್ಲಿ ಗಲಾಟೆ ನಡೆಯುತ್ತಿರುವ ವಿಚಾರ ತಿಳಿದು ಹೋಗಿ ನೋಡಲಾಗಿ ದ್ರೋಣಕುಂಟೆ ಗ್ರಾಮದ ಸಾರ್ವಜನಿಕ ಸ್ಥಳವಾದ ಮುತ್ತುರಾಯನ ದೇವಸ್ಥಾನದ ಹಿಂಭಾಗದ ಹಳ್ಳದಲ್ಲಿ ದ್ರೋಣಕುಂಟೆ ಗ್ರಾಮದ ವಾಸಿಗಳಾದ ಶಿವರಾಜು ಬಿನ್ ಜಟ್ಟಿಗಂಗಪ್ಪ ಕಡೆಯವರಾದ 1) ಗುರುಲಿಂಗಯ್ಯ ಬಿನ್ ಶಿವರಾಜು, 28 ವರ್ಷ, ಕುರುಬರು ಜಿರಾಯ್ತಿ, ವಾಸ ದ್ರೋಣಕುಂಟೆ ಗ್ರಾಮ, ಗೌರೀಬಿದನೂರು ತಾಲ್ಲೂಕು 2) ನರಸಮ್ಮ ಕೋಂ ಶಿವರಾಜು, ಕುರುಬರು, ಜಿರಾಯ್ತಿ, ವಾಸ ದ್ರೋಣಕುಂಟೆ ಗ್ರಾಮ, ಗೌರೀಬಿದನೂರು ತಾಲ್ಲೂಕು, 3) ಕಿರಣ್ ಕುಮಾರ್ ಬಿನ್ ಶಿವರಾಜಪ್ಪ , 25 ವರ್ಷ, ಕುರುಬರು, ಜಿರಾಯ್ತಿ, ವಾಸ ದ್ರೋಣಕುಂಟೆ ಗ್ರಾಮ, ಗೌರೀಬಿದನೂರು ತಾಲ್ಲೂಕು. ಮತ್ತು ರಾಮಲಿಂಗಯ್ಯ ಬಿನ್ ಜಟ್ಟಿಗಂಗಪ್ಪ ಕಡೆಯವರಾದ, 1) ಅಶ್ವತ್ಥಯ್ಯ ಬಿನ್ ರಾಮಲಿಂಗಯ್ಯ, 30 ವರ್ಷ, ಕುರುಬ ಜನಾಂಗ, ಜಿರಾಯ್ತಿ, ದ್ರೋಣಕುಂಟೆ ಗ್ರಾಮ, ಗೌರೀಬಿದನೂರು ತಾಲ್ಲೂಕು. 2) ಲಕ್ಷ್ಮೀನರಸಮ್ಮ ಕೋಂ ರಾಮಲಿಂಗಯ್ಯ, 45 ವರ್ಷ, ಕುರುಬ ಜನಾಂಗ, ಜಿರಾಯ್ತಿ, ದ್ರೋಣಕುಂಟೆ ಗ್ರಾಮ, ಗೌರೀಬಿದನೂರು ತಾಲ್ಲೂಕು ರವರು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಬೈದಾಡಿಕೊಳ್ಳುತ್ತಾ ಹೊಡೆದಾಡಿಕೊಳ್ಳುತ್ತಿದ್ದು, ನಾನು ಎರಡೂ ಕಡೆಯವರಿಗೂ ಎಚ್ಚರಿಕೆಯನ್ನು ನೀಡಿದರೂ ಸಹ ಪುನಃ ಅದೇ ರೀತಿ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುತ್ತಿದ್ದು, ನಾನು ಇಬ್ಬರನ್ನು ಹಿಡಿದುಕೊಂಡಿದ್ದು, ಅವರ ಹೆಸರು ವಿಳಾಸ ಕೇಳಲಾಗಿ 1) ಗುರುಲಿಂಗಯ್ಯ ಬಿನ್ ಶಿವರಾಜು, 28 ವರ್ಷ, ಕುರುಬರು ಜಿರಾಯ್ತಿ, ವಾಸ ದ್ರೋಣಕುಂಟೆ ಗ್ರಾಮ, ಗೌರೀಬಿದನೂರು ತಾಲ್ಲೂಕು 2) ಅಶ್ವತ್ಥಯ್ಯ ಬಿನ್ ರಾಮಲಿಂಗಯ್ಯ, 30 ವರ್ಷ, ಕುರುಬ ಜನಾಂಗ, ಜಿರಾಯ್ತಿ, ದ್ರೋಣಕುಂಟೆ ಗ್ರಾಮ, ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದರು, ಉಳಿದವರು ಅಲ್ಲಿಂದ ಓಡಿ ಹೋಗಿದ್ದು ಎರಡೂ ಗುಂಪಿನವರು ದ್ರೋಣಕುಂಟೆ ಗ್ರಾಮದ ಸರ್ವೆ ನಂ.13/24, 26, 16/3, ಸರ್ವೆ ನಂ.7/7 ಮತ್ತು 4/3, ರ ಜಮೀನುಗಳ ವಿಚಾರದಲ್ಲಿ ಗ್ರಾಮದಲ್ಲಿ ಗಲಾಟೆಗಳನ್ನು ಮಾಡುಕೊಳ್ಳುತ್ತಿದ್ದರೆಂದು ತಿಳಿಯಿತು. ಎರಡೂ ಕಡೆಯವರು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಬೈದಾಡಿಕೊಳ್ಳುತ್ತಾ ಹೊಡೆದಾಡಿಕೊಳ್ಳುತ್ತಿದ್ದು ಮೇಲ್ಕಂಡವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯಾಗಿರುತ್ತದೆ.

 

5. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.44/2021 ಕಲಂ. 324,427,341,506  ಐ.ಪಿ.ಸಿ:-

     ದಿನಾಂಕ:20/02/2021 ರಂದು ಸಂಜೆ 17-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಅಂಬರೀಶ್ ಬಿನ್ ರಾಮಪ್ಪ, 26 ವರ್ಷ, ಉಪ್ಪಾರರು,  ಜಿರಾಯ್ತಿ, ವಾಸ .ಜಾಲಹಳ್ಳಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:14/02/2021 ರಂದು ಪಿರ್ಯಾದಿದಾರರು ಹೊಲದ ಹತ್ತಿರ ಬದನೆಕಾಯಿ ಬೆಳೆಗೆ ನೀರು ಹಾಯಿಸುವಾಗ ಪಿರ್ಯಾದಿದಾರರ ಚಿಕ್ಕಪ್ಪ ಚಂದ್ರಯ್ಯ ಬಿನ್ ಹನುಮಂತಪ್ಪ, ರವರು ಬಂದು ಬೆದರಿಸಿ ಕಲ್ಲುಗಳನ್ನು ಎಸೆದು ಮಚ್ಚು ತೆಗೆದುಕೊಂಡು ಸಾಯಿಸುತ್ತೀನಿ ಅಂತ ಬೆದರಿಕೆ ಹಾಕಿದ್ದು, ಪಿರ್ಯಾದಿದಾರರು ಬೈಕಿನಲ್ಲಿ ಓಡಾಡುವಾಗ ಅಡ್ಡಗಟ್ಟಿ ನಿಲ್ಲಿಸಿ, ದಿನಾಂಕ:14/02/2021 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಪಿರ್ಯಾದಿದಾರರ ಚಿಕ್ಕಪ್ಪ, ಅಶ್ವತ್ಥಪ್ಪ ಎಂಬುವರಿಗೆ ಹೊಡೆದು ಗಾಯಪಡಿಸಿ, ಪ್ರತ್ಯಕ್ಷವಾಗಿ ಇದ್ದ ರಾಮಪ್ಪ ಮತ್ತು ನಲ್ಲಪ್ಪ ಬಿಡಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಟ್ರಾಕ್ಟರ್ ಅನ್ನು ರಸ್ತೆಯಲ್ಲಿ ಓಡಿಸುವುದಕ್ಕೆ ಬಿಡದೆ ದೊಡ್ಡಪ್ಪ ನಾರಾಯಣಪ್ಪ ರವರ ಬಾಗಿಲನ್ನು ಹೊಡೆದು ಹಾಕಿ ರಾತ್ರಿ 10-00 ರ ತನಕ ದಾರಿ ಕಾಯುತ್ತಾನೆ. ಮತ್ತು ತರಕಾರಿ ವ್ಯಾಪಾರಕ್ಕೂ ತೊಂದರೆ ಕೊಡುತ್ತಿದ್ದು ಸದರಿಯವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ದೂರು.

 

6. ನಂದಿಗಿರಿಧಾಮ  ಪೊಲೀಸ್ ಠಾಣೆ ಮೊ.ಸಂ.20/2021  ಕಲಂ. ಮನುಷ್ಯ ಕಾಣೆ:-

     ದಿನಾಂಕ:20/02/2021 ರಂದು ಸಂಜೆ 7:00 ಗಂಟೆಗೆ ಪಿರ್ಯಾದಿ ಶ್ರೀಮತಿ ಸ್ವಾತಿ ಕೋಂ ಮುನಿರಾಜು, 21 ವರ್ಷ, ಪ.ಜಾತಿ, ಗೃಹಿಣಿ, ವಾಸ: ಡಿ.ಹೊಸೂರು ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನ್ನನ್ನು ನಾರಾಯಣಪುರದ ವಾಸಿ ಮುನಿರಾಜು ಬಿನ್ ವೆಂಕಟೇಶಪ್ಪ ರವರನ್ನು 3 ವರ್ಷದಿಂದ ಪ್ರೀತಿಸಿದ್ದು ತನ್ನನ್ನು ದಿನಾಂಕ:04/03/2020 ರಂದು ತನ್ನನ್ನು ಪ್ರೀತಿಸಿರುವ ಮುನಿರಾಜು ರವರು ಚದಲಪುರ ರೇಷ್ಮೆ ಗ್ರಾನೇಜ್ ಕಾಂಪೌಂಡ್ನಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ತಮ್ಮ ಮನೆಯ ಕಡೆಯವರು ಮತ್ತು ಮುನಿರಾಜು ರವರ ಮನೆಯವರು ಸೇರಿ ನಮ್ಮಿಬ್ಬರಿಗೂ ದೇವಾಲಯದಲ್ಲಿ ಮದುವೆ ಮಾಡಿದ್ದು ನಂತರ ತನ್ನ ಜೊತೆಯಲ್ಲಿ ತನ್ನ ಗಂಡನಾದ ಮುನಿರಾಜು ರವರು ತನ್ನ ಜೊತೆಯಲ್ಲಿ ಮದುವೆಯಾದ ನಂತರ ತಮ್ಮ ತಾಯಿ ಮನೆಯವರಾದ ಡಿ.ಹೊಸೂರು ಗ್ರಾಮದಲ್ಲಿ 3 ತಿಂಗಳ ಕಾಲ ಸಂಸಾರ ಮಾಡಿದ್ದು ದಿನಾಂಕ:15/06/2020 ರಂದು ಸಂಜೆ 6 ಗಂಟೆಯಲ್ಲಿ ತಮ್ಮ ಮಾವನ ಮನೆಯಾದ ನಾರಾಯಣಪುರ ಗ್ರಾಮಕ್ಕೆ ಹೋಗಿದ್ದು ತನ್ನ ತಂದೆಯ ಮನೆಯಿಂದ ಹೋದವನು ಎಷ್ಟು ದಿನಗಳಾದರು ಬಾರದೆ ಇದ್ದಾಗ ತಾನು ನಾರಾಯಣಪುರ ಗ್ರಾಮಕ್ಕೆ ಹೋಗಿ ತಮ್ಮ ಮಾವನಾದ ವೆಂಕಟೇಶಪ್ಪನವರನ್ನು ತನ್ನ ಗಂಡ ಇರುವಿಕೆಯ ಬಗ್ಗೆ ವಿಚಾರಸಿದಾಗ ಅವರು ನಮ್ಮ ಮನೆಯಲ್ಲಿ ಇಲ್ಲ ನಮ್ಮ ಮನೆಗೆ ಬಂದಿರುವುದಿಲ್ಲವೆಂದು ಹೇಳಿದರು. ಆಗ ತಾನು ಅವರ ಸ್ನೇಹಿತರ ಬಳಿ ಮತ್ತು ನೆಂಟರ ಮನೆಗಳಲ್ಲಿ ವಿಚಾರಣೆ ಮಾಡಿದಾಗ ತನ್ನ ಗಂಡ ಪತ್ತೆಯಾಗದ ಇದ್ದುದ್ದರಿಂದ ಈ ದಿನ ತಡವಾಗಿ ಬಂದು ತನ್ನ ಗಂಡ ಕಾಣೆಯಾಗಿರುವ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ.

 

7. ಶಿಡ್ಲಘಟ್ಟ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.46/2021  ಕಲಂ. 143,323,324,341,504,506,149 ಐ.ಪಿ.ಸಿ:-

     ದಿನಾಂಕ: 20-02-2021 ರಂದು ಸಂಜೆ 5.30 ಗಂಟೆಯಲ್ಲಿ ನ್ಯಾಯಾಲಯದ ಕರ್ತವ್ಯಕ್ಕೆ ನೇಮಕವಾಗಿದ್ದ ಸಿಪಿಸಿ-90 ರಾಜಕುಮಾರ ರವರು ಘನ ನ್ಯಾಯಾಲಯದಿಂದ ಸಾದರಾದ ಪಿಸಿಆರ್ ನಂ. 09/2021 ರ ದೂರನ್ನು ಪಡೆದುಕೊಂಡು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ಫಿರ್ಯಾದಿದಾರರಾದ ಶ್ರೀ ಎಸ್.ಎಂ. ಕೃಷ್ಣ ಬಿನ್ ಲೇಟ್ ಎಸ್. ಮುನಿಯಪ್ಪ, 45 ವರ್ಷ, ಕದಿರಿನಾಯಕನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಸಾದರಪಡಿಸಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 13-01-2020 ರಂದು ಫಿರ್ಯಾದಿದಾರರು ಸಹಾಯಕ ನಿರ್ದೇಶಕರು, ಎಂ.ಪಿ.ಸಿ.ಎಸ್. ಚಿಕ್ಕಬಳ್ಳಾಪುರ ಉಪ ವಿಭಾಗ, ಚಿಕ್ಕಬಳ್ಳಾಪುರ ರವರಿಗೆ ಕದಿರಿನಾಯಕನಹಳ್ಳಿ ಗ್ರಾಮದ ಎಂ.ಪಿ.ಸಿ.ಎಸ್. ನಲ್ಲಿ ಕೆಲಸ ಮಾಡುತ್ತಿರುವ ಸೆಕ್ರೇಟರಿ ಯವರಾದ ಕೆ.ಬಿ. ನಾರಾಯಣಸ್ವಾಮಿ ರವರಿಗೆ 60-65 ವರ್ಷ ವಯಸ್ಸಾಗಿದ್ದು ಆತನ ಬದಲಿಗೆ ವಿದ್ಯಾವಂತ ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡುವಂತೆ ಮನವಿ ಪತ್ರವನ್ನು ಬರೆದಿದ್ದು, ಅದರಂತೆ ಎಂ.ಪಿ.ಸಿ.ಎಸ್. ಅಧಿಕಾರಿಗಳು ನಿಯಮಾನುಸಾರ ಕದಿರಿನಾಯಕನಹಳ್ಳಿ ಗ್ರಾಮದ 55 ವರ್ಷದ ಮುನಿರಾಜು ಎಂಬುವರನ್ನು ಕದಿರಿನಾಯಕನಹಳ್ಳಿ ಗ್ರಾಮದ ಎಂ.ಪಿ.ಸಿ.ಎಸ್. ಸಂಸ್ಥೆಯ ಸೆಕ್ರೇಟರಿಯನ್ನಾಗಿ ನೇಮಕ ಮಾಡಿದ್ದು, ನಂತರ ದಿನಾಂಕ: 11-0-2020 ರಂದು ಫಿರ್ಯಾದಿದಾರರು ಪುನಃ ಸದರಿ ಮುನಿರಾಜು ರವರು ಸಹ ಸದರಿ ಹುದ್ದೆಗೆ ಅರ್ಹರಲ್ಲವೆಂದು ಬೇರೆ ವ್ಯಕ್ತಿಯನ್ನು ಆಯ್ದೆ ಮಾಡುವಂತೆ ಮರು ಮನವಿ ಪತ್ರವನ್ನು ಸಲ್ಲಿಸಿಕೊಂಡಿರುತ್ತಾರೆ. ದಿನಾಂಕ: 14-03-2020 ರಂದು ಸಂಜೆ 7.30 ಗಂಟೆಯಲ್ಲಿ ಕದಿರಿನಾಯಕನಹಳ್ಳಿ ಗ್ರಾಮದ ಕುಡಿಯು ನೀರಿನ ಶುದ್ದೀಕರಣ ಘಟಕದ ಬಳಿಯಿದ್ದಾಗ ನಮ್ಮ ಗ್ರಾಮದ ವಾಟರ್ ಮ್ಯಾನ್ ರವರಾದ ಮುನಿಶಾಮಿ ಬಿನ್ ಲೇಟ್ ಗಂಗಪ್ಪ ರವರು ಫಿಲ್ಟರ್ ನೀರನ್ನು ಲೀಟರ್ ಗೆ 10-00 ರೂಗಳಂತೆ ಮಾರಾಟ ಮಾಡುತ್ತಿದ್ದು, ತಾನು ಗ್ರಾಮದ ಜನರಿಗಾಗಿ ಇರುವ ಕುಡಿಯುವ ಶುದ್ದ ನೀರನ್ನು ಏಕೆ ಮಾರಾಟ ಮಾಡುತ್ತಿದ್ದೀರಿ ಎಂದು ಕೇಳಿದ್ದಕ್ಕೆ ಆರೋಪಿಗಳೆಲ್ಲರೂ ಅಕ್ರಮ ಗುಂಪು ಕಟ್ಟಿಕೊಂಡು ಫಿರ್ಯಾದಾರರಿಗೆ ಎಡಕಣ್ಣಿನ ಬಳಿ, ಎಡಭಾಗದ ಹಣೆಯ ಬಳಿ, ಎದೆಯ ಮೇಲೆ ಹಾಗೂ ಹೊಟ್ಟೆಯ ಮೇಲೆ ಹೊಡೆದು ಕೈಗಳಿಂದ ಹಾಗೂ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದ್ದು ಅಲ್ಲದೆ ಫಿರ್ಯಾದಿದಾರರನ್ನು ಅವಾಚ್ಯ ಶಬ್ದಗಳಿಂದ ಬೈದು ಇನ್ನು ಮುಂದೆ ಗ್ರಾಮದ ವಿಚಾರಕ್ಕೆ ಬಂದರೆ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದ ಆಗ ಗ್ರಾಮಸ್ಥರು ಗಲಾಟೆಯನ್ನು ಬಿಡಿಸಿ ಗಾಯಗೊಂಡಿದ್ದವರನ್ನು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿರುವುದಾಗಿ ಇತ್ಯಾದಿಯಾಗಿ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ. 36/2021 ಕಲಂ 143, 323, 324, 341, 504, 506 ರ/ಜೊ 149 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

ಇತ್ತೀಚಿನ ನವೀಕರಣ​ : 21-02-2021 05:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080