Feedback / Suggestions

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.302/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ: 16/09/2021 ರಂದು ಸಂಜೆ 5-00 ಗಂಟೆಗೆ ಶ್ರೀ ನಾಗರಾಜ್ ಡಿ ಆರ್ ಪೊಲೀಸ್ ನಿರೀಕ್ಷಕರು, ಬಾಗೇಪಲ್ಲಿ ಪೊಲೀಸ್ ಠಾಣೆ ಮಾಲು,ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ: 16/09/2021 ರಂದು ಮದ್ಯಾಹ್ನ 3-15 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು, ಕಸಬಾ ಹೋಬಳಿ, ಹೊಸಹುಡ್ಯ ಗ್ರಾಮದ ಹೊರಭಾಗದಲ್ಲಿರುವ ಗುಡ್ಡದ ಬಳಿ ಇರುವ ಹುಣಸೇಮರದ ಕೆಳಗೆ ಯಾರೋ ಕೆಲವರು ಹಣವನ್ನು ಪಣವಾಗಿ ಇಟ್ಟು ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಬಾಗೇಪಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಹೆಚ್ ಸಿ-34 ರಾಮಚಂದ್ರ, ಪಿಸಿ-18 ಅರುಣ್, ಪಿಸಿ-214 ಅಶೋಕ್, ಪಿಸಿ-278 ಶಬ್ಬೀರ್, ಪಿಸಿ-319 ವಿನಾಯಕ ವಿಶ್ವ ಬ್ರಾಹ್ಮಣ, ಪಿಸಿ-422 ಲಕ್ಷ್ಮಣ್, ಪಿಸಿ 176 ಶಶಿಕುಮಾರ್ ಮತ್ತು ಜೀಪ್ ಚಾಲಕ ಎ.ಪಿ.ಸಿ-57 ನೂರ್ ಭಾಷ  ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-1444 ಜೀಪಿನಲ್ಲಿ ಬಾಗೇಪಲ್ಲಿ ತಾಲ್ಲೂಕು ಹೊಸಹುಡ್ಯ ಗ್ರಾಮದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಧಾಳಿ ಮಾಡಲು ತಮ್ಮೊಂದಿಗೆ ಸಹಕರಿಸಿ ಧಾಳಿ ಕಾಲದಲ್ಲಿ ಪಂಚರಾಗಿ  ಹಾಜರಿದ್ದು ತನಿಖೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು. ಅದರಂತೆ ನಾವುಗಳು ಮತ್ತು ಪಂಚರು ಸರ್ಕಾರಿ ಜೀಪ್ ಸಂಖ್ಯೆ ಕೆಎ 40 ಜಿ 1444 ರಲ್ಲಿ ಕುಳಿತುಕೊಂಡು ಗ್ರಾಮದ ಹೊರಭಾಗದಲ್ಲಿರುವ ಗುಡ್ಡಕ್ಕೆ ಹೋಗುವ ರಸ್ತೆಯಲ್ಲಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ, ಎಲ್ಲರೂ ಜೀಪಿನಿಂದ ಇಳಿದು ದಾರಿಯಲ್ಲಿ ಎಲ್ಲರೂ ನಡೆದುಕೊಂಡು ಮದ್ಯಾಹ್ನ 3-45 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ನಾವುಗಳು & ಪಂಚರು ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಹುಣಸೇಮರದ ಕೆಳಗೆ ಕುಳಿತು ಹಣವನ್ನು ಪಣವಾಗಿ ಇಟ್ಟು, 100 ರೂ. ಅಂದರ್ಗೆ 100 ರೂ. ಬಾಹರ್ಗೆ ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದು, ಮಾಹಿತಿಯನ್ನು ಖಚಿತಪಡಿಸಿಕೊಂಡು, ನಾನು ನೀಡಿದ ಸೂಚನೆಯ ಮೇರೆಗೆ ಪೊಲೀಸ್ ಸಿಬ್ಬಂದಿಯರೆಲ್ಲರೂ ಒಟ್ಟಾಗಿ ಪಂಚರ ಸಮಕ್ಷಮ ಇಸ್ಪೀಟ್ ಜೂಜಾಟವಾಡುತ್ತಿದ್ದವರನ್ನು ಸುತ್ತುವರೆದಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಲು ಪ್ರಯತ್ನಿಸುತ್ತಿದ್ದವರನ್ನು ಓಡಿ ಹೋಗದಂತೆ ನಾವು ಸೂಚನೆ ನೀಡಿ ಆಸಾಮಿಗಳನ್ನು ಹಿಡಿದುಕೊಂಡು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ 1) ಸಮೀಉಲ್ಲಾ ಬಿನ್ ರಹಮತ್ ಉಲ್ಲಾ, 26 ವರ್ಷ, ಮುಸ್ಲಿಂ ಜನಾಂಗ, ಬೇಲ್ದಾರ್ ಕೆಲಸ, ವಾಸ: 10 ನೇ ವಾರ್ಡ, ಬಾಗೇಪಲ್ಲಿ ಪುರ 2) ಜುಬೇರ್ ಬಿನ್ ಷರೀಪ್, 22 ವರ್ಷ, ಮುಸ್ಲಿಂ ಜನಾಂಗ, ಕೂಲಿ ಕೆಲಸ, ವಾಸ:ಬಿಸಿಎಮ್ ಹಾಸ್ಟೆಲ್ ಹಿಂಭಾಗ, 3ನೇ ವಾರ್ಡ, ಬಾಗೇಪಲ್ಲಿ ತಾಲ್ಲೂಕು 3) ಜಮೀರ್ ಬಿನ್ ಲೇಟ್ ರಷೀದ್, 20 ವರ್ಷ, ಮುಸ್ಲಿಂ ಜನಾಂಗ, ಮೆಕಾನಿಕ್ ಕೆಲಸ, ವಾಸ: ಷಾದಿ ಮಹಲ್ ಹಿಂಭಾಗ, 3 ನೇ ವಾರ್ಡ, ಬಾಗೇಪಲ್ಲಿ ಪುರ 4) ಶಂಷುದ್ದೀನ್ ಬಿನ್ ಪಕ್ರುದ್ದೀನ್, 40 ವರ್ಷ, ಮುಸ್ಲಿಂ ಜನಾಂಗ, ಮೀನಿನ ವ್ಯಾಪಾರ, ವಾಸ: 11ನೇ ವಾರ್ಡ, ಬಾಗೇಪಲ್ಲಿ ಪುರ ಎಂತ ತಿಳಿಸಿರುತ್ತಾರೆ, ಸ್ಥಳದಲ್ಲಿದ್ದ ಮೇಲ್ಕಂಡ 4 ಜನ ಆರೋಪಿಗಳನ್ನು ವಶಕ್ಕೆ ಪಡೆದು, ಪಂಚಾಯ್ತಿದಾರರ ಸಮಕ್ಷಮ ಪರಿಶೀಲಿಸಲಾಗಿ ಇಸ್ಪೀಟ್ ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ ಒಟ್ಟು 1000/- ರೂ ಹಣವನ್ನು, ಸ್ಥಳದಲ್ಲಿ ಬಿದ್ದಿದ್ದ ಜೂಜಾಟವಾಡಲು ಬಳಸಿದ್ದ 52 ಇಸ್ಪೀಟ್ ಎಲೆಗಳನ್ನು ಮುಂದಿನ ಕ್ರಮಕ್ಕಾಗಿ ಪಂಚನಾಮೆಯ ಮೂಲಕ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು, ಅಸಲು ಧಾಳಿ ಪಂಚನಾಮೆ, ಮಾಲು & ಆರೋಪಿತರನ್ನು ಠಾಣೆಯಲ್ಲಿ ಸಂಜೆ 5-00  ಗಂಟೆಗೆ ಹಾಜರುಪಡಿಸುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್ ಸಿಆರ್ ನಂ-271/2021 ರಂತೆ ದಾಖಲಿಸಿಕೊಂಡಿರುತ್ತೆ.  ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ:19-09-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.303/2021 ಕಲಂ. 78(3) ಕೆ.ಪಿ ಆಕ್ಟ್:-

     ದಿನಾಂಕ: 16/09/2021 ರಂದು ಸಂಜೆ 7-00 ಗಂಟೆಗೆ ಶ್ರೀ ನಾಗರಾಜ್ ಡಿ ಆರ್ ಪೊಲೀಸ್ ನಿರೀಕ್ಷಕರು, ಬಾಗೇಪಲ್ಲಿ ಪೊಲೀಸ್ ಠಾಣೆ ಮಾಲು,ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ 16.09.2021 ರಂದು ಸಂಜೆ 6-00 ಗಂಟೆಯಲ್ಲಿ ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಪುರದ 15 ನೇ ವಾರ್ಡನ ಕುಂಬಾರಪೇಟೆಯಲ್ಲಿರುವ ಸಂಜೀವರೆಡ್ಡಿ ಬಿನ್ ಲೇಟ್ ನರಸರೆಡ್ಡಿ ರವರ ಮನೆಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ, ಕಾನೂನು ಬಾಹಿರವಾಗಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ್ತಾ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯಾದ ಸಿಪಿಸಿ-214 ಅಶೋಕ್, ಸಿಪಿಸಿ-319 ವಿನಾಯಕ ವಿಶ್ವಬ್ರಾಹ್ಮಣ ಮತ್ತು  ಜೀಪ್ ಚಾಲಕ ವೆಂಕಟೇಶ್ ಎ.ಹೆಚ್.ಸಿ-57 ನೂರ್ ಭಾಷ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-1444 ವಾಹನದಲ್ಲಿ  ಡಿವಿಜಿ ರಸ್ತೆಯ ಕುಂಬಾರಪೇಟೆ ಕ್ರಾಸ್ ಬಳಿ ಇದ್ದ ಪಂಚಾಯ್ತಿದಾರರನ್ನು ಕರೆದುಕೊಂಡು ಮೇಲ್ಕಂಡ ವಿಚಾರವನ್ನು ತಿಳಿಸಿ, ಪಂಚರೊಂದಿಗೆ ಸಂಜೆ 6-15 ಗಂಟೆಗೆ ಹೋಗಿ ಕುಂಬಾರಪೇಟೆಯ ರಸ್ತೆಯಲ್ಲಿ ಜೀಪನ್ನು ನಿಲ್ಲಿಸಿ ನಾವು ಮತ್ತು ಪಂಚರು ನಡೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಸಂಜೀವರೆಡ್ಡಿ ಬಿನ್ ಲೇಟ್ ನರಸರೆಡ್ಡಿ ರವರ ಮನೆಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಬನ್ನಿ ಬನ್ನಿ ಮಟ್ಕಾ ಅಂಕಿಗಳನ್ನು  ಬರೆಸಿ, 1 ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ಎಂದು ಕೂಗುತ್ತಾ, ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ ಮಟ್ಕಾ ಜೂಜಾಟವಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಆತನನ್ನು ಸುತ್ತುವರೆದು ಹಿಡಿದು ಆತನ ಬಳಿ ಪರಿಶೀಲಿಸಲಾಗಿ  ವಿವಿಧ ಅಂಕಿಗಳು ಬರೆದಿರುವ ಒಂದು  ಮಟ್ಕಾ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ನು ಹಾಗೂ 310/-ರೂ.ಹಣ ಇದ್ದು,  ಆಸಾಮಿಯ ಹೆಸರು ಮತ್ತು ವಿಳಾಸವನ್ನು  ಕೇಳಲಾಗಿ  ಸಂಜೀವರೆಡ್ಡಿ ಬಿನ್ ಲೇಟ್ ನರಸರೆಡ್ಡಿ, 72 ವರ್ಷ, ವಕ್ಕಲಿಗರು, ಕೂಲಿ ಕೆಲಸ, ವಾಸ: 15 ನೇ ವಾರ್ಡ, ಕುಂಬಾರಪೇಟೆ, ಬಾಗೇಪಲ್ಲಿ ಟೌನ್ ಎಂದು ತಿಳಿಸಿದ್ದು, ಸದರಿ ಆಸಾಮಿಗೆ  ಮಟ್ಕಾ ಜೂಜಾಟವಾಡಲು ಯಾವುದಾದರು ಪರವಾನಿಗೆ ಇದೆಯೇ ಎಂದು  ಕೇಳಲಾಗಿ ಆತನು  ಯಾವುದೇ ಪರವಾನಿಗೆ ಇಲ್ಲವೆಂದು  ತಿಳಿಸಿರುತ್ತಾನೆ. ಪಂಚಾಯ್ತಿದಾರರಾರ ಸಮಕ್ಷಮ ಆತನ ಬಳಿ ಇದ್ದ ಹಣದ ಬಗ್ಗೆ ವಿಚಾರ ಮಾಡಲಾಗಿ ಸಾರ್ವಜನಿಕರಿಂದ ಜೂಜಾಟದ ಸಮಯದಲ್ಲಿ ವಸೂಲಿ ಮಾಡಿದ ಹಣವೆಂದು ತಿಳಿಸಿರುತ್ತಾನೆ.  ಪಂಚಾಯ್ತಿದಾರರ ಸಮಕ್ಷಮ  ಒಂದು ಬಾಲ್ ಪಾಯಿಂಟ್ ಪೆನ್, ಹಾಗೂ ಒಂದು ಮಟ್ಕ ಚೀಟಿ, ಮತ್ತು 310/- ರೂ ನಗದು ಹಣವನ್ನು  ಪಂಚನಾಮೆಯನ್ನು ಜರುಗಿಸಿ, ಮುಂದಿನ ತನಿಖೆಗಾಗಿ ಅಮಾನತ್ತು ಪಡಿಸಿಕೊಂಡೆವು ಅಸಲು ಪಂಚನಾಮೆ,  ಮಾಲು ಮತ್ತು ಆಸಾಮಿಯನ್ನು ಸಂಜೆ 7-30  ಗಂಟೆಗೆ ಠಾಣೆಯಲ್ಲಿ ಮುಂದಿನ ಕ್ರಮ ಜರುಗಿಸಲು ನಿಮಗೆ ಸೂಚಿಸಿದ್ದರ ಮೇರೆಗೆ ಠಾಣಾ ಎನ್ ಸಿಆರ್ ನಂ-272/2021 ರಂತೆ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನುದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ:19-09-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.304/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ: 16/09/2021 ರಂದು ಸಂಜೆ 8-10 ಗಂಟೆಗೆ ಶ್ರೀ ಗೋಪಾಲರೆಡ್ಡಿ  ಪೊಲೀಸ್ ಉಪ-ನಿರೀಕ್ಷಕರು, ಬಾಗೇಪಲ್ಲಿ ಪೊಲೀಸ್ ಠಾಣೆ ಮಾಲು,ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ: 16/09/2021 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು, ಕಸಬಾ ಹೋಬಳಿ, ಹೊಸಹುಡ್ಯ ಗ್ರಾಮದ ಶಾಲೆಯ ಆವರಣದಲ್ಲಿ ಯಾರೋ ಕೆಲವರು ಹಣವನ್ನು ಪಣವಾಗಿ ಇಟ್ಟು ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಬಾಗೇಪಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಪಿಸಿ-18 ಅರುಣ್, ಪಿಸಿ-237 ವಿನಯ್ ಕುಮಾರ್ ಯಾದವ್,  ಪಿಸಿ-278 ಶಬ್ಬೀರ್, ಪಿಸಿ-319 ವಿನಾಯಕ ವಿಶ್ವ ಬ್ರಾಹ್ಮಣ, ಪಿಸಿ-130 ಬಾಬಾವಲಿ, ಪಿಸಿ 280 ಮುರಳಿ ಮತ್ತು ಜೀಪ್ ಚಾಲಕ ಎ.ಪಿ.ಸಿ-14 ವೆಂಕಟೇಶ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-537 ಜೀಪಿನಲ್ಲಿ ಬಾಗೇಪಲ್ಲಿ ಪುರ ಡಿಪೋ ರಸ್ತೆಯ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಧಾಳಿ ಮಾಡಲು ತಮ್ಮೊಂದಿಗೆ ಸಹಕರಿಸಿ ಧಾಳಿ ಕಾಲದಲ್ಲಿ ಪಂಚರಾಗಿ  ಹಾಜರಿದ್ದು ತನಿಖೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು. ಅದರಂತೆ ನಾವುಗಳು ಮತ್ತು ಪಂಚರು ಸರ್ಕಾರಿ ಜೀಪ್ ಸಂಖ್ಯೆ ಕೆಎ 40 ಜಿ 537 ರಲ್ಲಿ ಕುಳಿತುಕೊಂಡು ಹೊಸಹುಡ್ಯ ಗ್ರಾಮದ ರಸ್ತೆಯಲ್ಲಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ, ಎಲ್ಲರೂ ಜೀಪಿನಿಂದ ಇಳಿದು ದಾರಿಯಲ್ಲಿ ಎಲ್ಲರೂ ನಡೆದುಕೊಂಡು ಸಂಜೆ 7-15 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ನಾವುಗಳು & ಪಂಚರು ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಶಾಲೆಯ ಆವರಣದಲ್ಲಿ ಕುಳಿತು ಹಣವನ್ನು ಪಣವಾಗಿ ಇಟ್ಟು, 100 ರೂ. ಅಂದರ್ಗೆ 100 ರೂ. ಬಾಹರ್ಗೆ ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದು, ಮಾಹಿತಿಯನ್ನು ಖಚಿತಪಡಿಸಿಕೊಂಡು, ನಾನು ನೀಡಿದ ಸೂಚನೆಯ ಮೇರೆಗೆ ಪೊಲೀಸ್ ಸಿಬ್ಬಂದಿಯರೆಲ್ಲರೂ ಒಟ್ಟಾಗಿ ಪಂಚರ ಸಮಕ್ಷಮ ಇಸ್ಪೀಟ್ ಜೂಜಾಟವಾಡುತ್ತಿದ್ದವರನ್ನು ಸುತ್ತುವರೆದಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಲು ಪ್ರಯತ್ನಿಸುತ್ತಿದ್ದವರನ್ನು ಓಡಿ ಹೋಗದಂತೆ ನಾವು ಸೂಚನೆ ನೀಡಿ ಆಸಾಮಿಗಳನ್ನು ಹಿಡಿದುಕೊಂಡು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ 1) ವೆಂಕಟಶಿವಪ್ಪ ಬಿನ್ ವೆಂಕಟಪ್ಪ, 59 ವರ್ಷ, ಬಲಜಿಗರು, ಜಿರಾಯ್ತಿ ವಾಸ:ಪೆದ್ದತುಂಕೇಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು 2) ಹರಿಕೃಷ್ಣ ಬಿನ್ ವೆಂಕಟರಾಮಪ್ಪ, 37 ವರ್ಷ, ಪಟ್ರ ಜನಾಂಗ, ಕೂಲಿ ಕೆಲಸ, ವಾಸ: ಹೊಸಹುಡ್ಯ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿರುತ್ತಾರೆ, ಸ್ಥಳದಲ್ಲಿದ್ದ ಮೇಲ್ಕಂಡ 2 ಜನ ಆರೋಪಿಗಳನ್ನು ವಶಕ್ಕೆ ಪಡೆದು, ಪಂಚಾಯ್ತಿದಾರರ ಸಮಕ್ಷಮ ಪರಿಶೀಲಿಸಲಾಗಿ ಇಸ್ಪೀಟ್ ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ ಒಟ್ಟು 1300/- ರೂ ಹಣವನ್ನು, ಸ್ಥಳದಲ್ಲಿ ಬಿದ್ದಿದ್ದ ಜೂಜಾಟವಾಡಲು ಬಳಸಿದ್ದ 52 ಇಸ್ಪೀಟ್ ಎಲೆಗಳನ್ನು ಮುಂದಿನ ಕ್ರಮಕ್ಕಾಗಿ ಪಂಚನಾಮೆಯ ಮೂಲಕ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು, ಅಸಲು ಧಾಳಿ ಪಂಚನಾಮೆ, ಮಾಲು & ಆರೋಪಿತರನ್ನು ಠಾಣೆಯಲ್ಲಿ ರಾತ್ರಿ 8-10 ಗಂಟೆಗೆ ಹಾಜರುಪಡಿಸುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್ ಸಿಆರ್ ನಂ-273/2021 ರಂತೆ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ:19-09-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

4. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.305/2021 ಕಲಂ. 78(3) ಕೆ.ಪಿ ಆಕ್ಟ್:-

     ದಿನಾಂಕ 17.09.2021 ರಂದು ರಾತ್ರಿ 8-45 ಗಂಟೆಗೆ  ಶ್ರೀ ನಾಗರಾಜ್ ಡಿ ಆರ್ ಪೊಲೀಸ್ ನಿರೀಕ್ಷಕರು, ಬಾಗೇಪಲ್ಲಿ ಪೊಲೀಸ್ ಠಾಣೆ  ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 17.09.2021 ರಂದು ಸಂಜೆ 7-30 ಗಂಟೆಯಲ್ಲಿ  ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಪುರದ ಗೂಳೂರು ವೃತ್ತದ ಬಳಿ ಸಾರ್ವಜನಿಕ ಸ್ಥಳದಲ್ಲಿ, ಕಾನೂನು ಬಾಹಿರವಾಗಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ್ತಾ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯಾದ ಸಿಪಿಸಿ-214 ಅಶೋಕ್, ಸಿಪಿಸಿ-278 ಶಬ್ಬೀರ್ ಮತ್ತು  ಜೀಪ್ ಚಾಲಕ ಎ.ಹೆಚ್.ಸಿ-57 ನೂರ್ ಭಾಷ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-1444 ವಾಹನದಲ್ಲಿ  ಡಿವಿಜಿ ರಸ್ತೆಯ ಕುಂಬಾರಪೇಟೆ ಕ್ರಾಸ್ ಬಳಿ ಇದ್ದ ಪಂಚಾಯ್ತಿದಾರರನ್ನು ಕರೆದುಕೊಂಡು ಮೇಲ್ಕಂಡ ವಿಚಾರವನ್ನು ತಿಳಿಸಿ, ಪಂಚರೊಂದಿಗೆ ಸಂಜೆ 7-45 ಗಂಟೆಗೆ ಹೋಗಿ ಗೂಳೂರು ವೃತ್ತದ ಬಳಿ ರಸ್ತೆಯಲ್ಲಿ ಜೀಪನ್ನು ನಿಲ್ಲಿಸಿ ನಾವು ಮತ್ತು ಪಂಚರು ನಡೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಗೂಳೂರು ವೃತ್ತದ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಬನ್ನಿ ಬನ್ನಿ ಮಟ್ಕಾ ಅಂಕಿಗಳನ್ನು  ಬರೆಸಿ, 1 ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ಎಂದು ಕೂಗುತ್ತಾ, ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ ಮಟ್ಕಾ ಜೂಜಾಟವಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಆತನನ್ನು ಸುತ್ತುವರೆದು ಹಿಡಿದು ಆತನ ಬಳಿ ಪರಿಶೀಲಿಸಲಾಗಿ  ವಿವಿಧ ಅಂಕಿಗಳು ಬರೆದಿರುವ ಒಂದು  ಮಟ್ಕಾ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ನು ಹಾಗೂ 280/-ರೂ.ಹಣ ಇದ್ದು,  ಆಸಾಮಿಯ ಹೆಸರು ಮತ್ತು ವಿಳಾಸವನ್ನು  ಕೇಳಲಾಗಿ  ರಹಮತ್ ಉಲ್ಲಾ ಬಿನ್ ಲೇಟ್ ಅಬ್ದುಲ್ ರೆಹಮಾನ್, 40 ವರ್ಷ, ಮುಸ್ಲಿಂ ಜನಾಂಗ, ಕಾರು ಚಾಲಕ, ವಾಸ: 5 ನೇ ವಾರ್ಡ, ಬಾಗೇಪಲ್ಲಿ ಪುರ ಎಂದು ತಿಳಿಸಿದ್ದು, ಸದರಿ ಆಸಾಮಿಗೆ  ಮಟ್ಕಾ ಜೂಜಾಟವಾಡಲು ಯಾವುದಾದರು ಪರವಾನಿಗೆ ಇದೆಯೇ ಎಂದು  ಕೇಳಲಾಗಿ ಆತನು  ಯಾವುದೇ ಪರವಾನಿಗೆ ಇಲ್ಲವೆಂದು  ತಿಳಿಸಿರುತ್ತಾನೆ. ಪಂಚಾಯ್ತಿದಾರರಾರ ಸಮಕ್ಷಮ ಆತನ ಬಳಿ ಇದ್ದ ಹಣದ ಬಗ್ಗೆ ವಿಚಾರ ಮಾಡಲಾಗಿ ಸಾರ್ವಜನಿಕರಿಂದ ಜೂಜಾಟದ ಸಮಯದಲ್ಲಿ ವಸೂಲಿ ಮಾಡಿದ ಹಣವೆಂದು ತಿಳಿಸಿರುತ್ತಾನೆ.  ಪಂಚಾಯ್ತಿದಾರರ ಸಮಕ್ಷಮ  ಒಂದು ಬಾಲ್ ಪಾಯಿಂಟ್ ಪೆನ್, ಹಾಗೂ ಒಂದು ಮಟ್ಕ ಚೀಟಿ, ಮತ್ತು 280/- ರೂ ನಗದು ಹಣವನ್ನು  ಪಂಚನಾಮೆಯನ್ನು ಜರುಗಿಸಿ, ಮುಂದಿನ ತನಿಖೆಗಾಗಿ ಅಮಾನತ್ತು ಪಡಿಸಿಕೊಂಡೆವು ಅಸಲು ಪಂಚನಾಮೆ,  ಮಾಲು ಮತ್ತು ಆಸಾಮಿಯನ್ನು ರಾತ್ರಿ 8-45 ಗಂಟೆಗೆ ಠಾಣೆಯಲ್ಲಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್ ಸಿಆರ್ ನಂ- 274 /2021 ರಂತೆ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನುದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ:19-09-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

5. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.306/2021 ಕಲಂ. 279,304(A) ಐ.ಪಿ.ಸಿ:-

     ದಿನಾಂಕ: 19/09/2021 ರಂದು ರಾತ್ರಿ 9-15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ವೆಂಕಟೇಶ ಬಿನ್ ಮುನಿಯಪ್ಪ 38 ವರ್ಷ, ಆದಿ ದ್ರಾವಿಡ ಜನಾಂಗ, ಕೂಲಿಕೆಲಸ, ಚೌಡಂಪಲ್ಲಿ ಗ್ರಾಮ, ಓಡಿಸಿ ಮಂಡಲಂ ಕದಿರಿ ತಾಲ್ಲೂಕು, ಆನಂತಪುರ ಜಿಲ್ಲೆ. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ನಮ್ಮ ತಂದೆ ಮುನಿಯಪ್ಪ ಎಂ. ಮತ್ತು ತಾಯಿ ಲಕ್ಷ್ಮೀದೇವಮ್ಮ ರವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗಳು ಇದ್ದು, 1ನೇ ನಾನು, 2ನೇ ರವಣಮ್ಮ 3ನೇ ಶ್ರೀನಿವಾಸಲು ಆಗಿರುತ್ತಾರೆ, ಎಲ್ಲಾರಿಗೂ ಮದುವೆಗಳು ಆಗಿದ್ದು, ನಾನು ಮತ್ತು ನನ್ನ ತಮ್ಮ ಶ್ರೀನಿವಾಸಲು ಒಟ್ಟಿಗೆ  ನಮ್ಮ ತಂದೆ-ತಾಯಿ ಜೊತೆ ನಮ್ಮ ಗ್ರಾಮದಲ್ಲಿ ವಾಸವಾಗಿರುತ್ತೇವೆ, ನಮ್ಮ ಗ್ರಾಮದ ಅಶ್ವತ್ಥಪ್ಪ ರವರು ಒಂದು ವಾರದ ಹಿಂದೆ ಮೃತಪಟ್ಟಿದ್ದು, ತಿಥಿ ಇರುವುದರಿಂದ ತಿಥಿಗೆ ನೆಂಟರನ್ನು ಕರೆಯಲು ಅಶ್ವತ್ಥಪ್ಪ ರವರ  ಮಗ ನಾರಾಯಣಸ್ವಾಮಿ ರವರು ನಮ್ಮ ತಂದೆಯನ್ನು ಕರೆದುಕೊಂಡು ಈ ದಿನ ದಿನಾಂಕ:19/09/2021  ರಂದು ಬೆಳಗ್ಗೆ 10;00 ಗಂಟೆ ಸಮಯದಲ್ಲಿ ಆತನ ಬಾಬತ್ತು ಎಪಿ 02 ಸಿಜಿ 4603 ಪಲ್ಸರ್ ದ್ವಿ ಚಕ್ರ ವಾಹನದಲ್ಲಿ ನಮ್ಮ ಗ್ರಾಮದಿಂದ ಬಂದಿರುತ್ತಾರೆ.  ಸಂಜೆ ಸುಮಾರು 5:00 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ಶಿವಪ್ಪ ಬಿನ್ ತಿಮ್ಮಯ್ಯ ಎಂಬುವವರು ನನಗೆ ದೂರವಾಣಿ ಕರೆ ಮಾಡಿ ನಮ್ಮ ತಂದೆಯವರಿಗೆ ಬಾಗೇಪಲ್ಲಿ ತಾಲ್ಲೂಕು, ಗೂಳೂರು ಹೋಬಳಿ, ಗುಂಡ್ಲಪಲ್ಲಿ ಗ್ರಾಮದ ಬಳಿ ದ್ವಿ ಚಕ್ರ ವಾಹನ ಅಪಘಾತವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ,  ತಕ್ಷಣ ನಾನು, ನನ್ನ ಹೆಂಡತಿ ಜಯಮ್ಮ ರವರು ಸ್ಥಳಕ್ಕೆ ಬಂದು ನೋಡಲಾಗಿ ನಮ್ಮ ತಂದೆಗೆ ತಲೆಗೆ, ಮೈಮೇಲೆ ರಕ್ತಗಾಯಗಳಾಗಿ, ಎಡಕಾಲಿಗೆ ಮೂಳೆ ಮುರಿತದ ಗಾಯವಾಗಿ, ಮೂಗಿನಲ್ಲಿ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ, ಅಪಘಾತದ ಬಗ್ಗೆ ವಿಚಾರಿಸಲಾಗಿ ಈ ದಿನ ದಿನಾಂಕ:19/09/2021 ರಂದು  ನಾರಾಯಣಸ್ವಾಮಿ ಮತ್ತು ನಮ್ಮ ತಂದೆಯವರು ಬೊಮ್ಮಯ್ಯಗಾರಿಪಲ್ಲಿ ಗ್ರಾಮಕ್ಕೆ ಹೋಗಿ ನೆಂಟರಿಗೆ ತಿಳಿಸಿ,  ನಮ್ಮ ಗ್ರಾಮಕ್ಕೆ ವಾಪಸ್ಸು ಬರಲು ನಾರಾಯಣಸ್ವಾಮಿ ಬಿನ್ ಅಶ್ವತ್ಥಪ್ಪ ರವರು  ಎಪಿ 02 ಸಿಜಿ 4603 ಪಲ್ಸರ್ ದ್ವಿ ಚಕ್ರ ಸವಾರ ಮಾಡಿಕೊಂಡು ನಮ್ಮ ತಂದೆಯನ್ನು ದ್ವಿ ಚಕ್ರ ವಾಹನದ ಹಿಂಬದಿಯಲ್ಲಿ ಕುಳ್ಳರಿಸಿಕೊಂಡು ಂಜೆ ಸುಮಾರು 4:30 ಗಂಟೆ ಸಮಯದಲ್ಲಿ ಗುಂಡ್ಲಪಲ್ಲಿ ಗ್ರಾಮದ ಬಳಿ ಬರುವಾಗ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರ ಮಾಡಿಕೊಂಡು ಬಂದು ರಸ್ತೆಯಲ್ಲಿ ದ್ವಿ ಚಕ್ರ ವಾಹನವನ್ನು ನಿಯಂತ್ರಿಸಲಾಗದೇ ರಸ್ತೆಯಲ್ಲಿ ಬಿದ್ದು ಹೋದ ಪರಿಣಾಮ ನಮ್ಮ ತಂದೆಯವರಿಗೆ ತಲೆಗೆ, ಮೈಮೇಲೆ ರಕ್ತಗಾಯಗಳಾಗಿ, ಎಡಕಾಲಿಗೆ ಮೂಳೆ ಮುರಿತದ ಗಾಯವಾಗಿ ಮೂಗಿನಲ್ಲಿ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ತಿಳಿಯಿತು, ನಂತರ ನಾವು ಮೃತ ದೇಹವನ್ನು ಯಾವುದೂ ವಾಹನದಲ್ಲಿ ಬಾಗೇಪಲ್ಲಿ ಸರ್ಕಾರಿ ಅಸ್ಪತ್ರೆಯ ಶವಗಾರಕ್ಕೆ ಸಾಗಿಸಿರುತ್ತೇವೆ.  ಈ ಅಪಘಾತವನ್ನುಂಟು ಮಾಡಿರುವ ಎಪಿ 02 ಸಿಜಿ 4603 ಪಲ್ಸರ್ ದ್ವಿ ಚಕ್ರ ವಾಹನದ ಸವಾರನಾದ ನಮ್ಮ ಗ್ರಾಮದ ನಾರಾಯಣಸ್ವಾಮಿ ಬಿನ್ ಅಶ್ವತ್ಥಪ್ಪ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

6. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.89/2021 ಕಲಂ. 323,324,504,506 ಐ.ಪಿ.ಸಿ:-

     ದಿನಾಂಕ 20/09/2021 ರಂದು ಪಿರ್ಯಾದಿದಾರರಾದ ಶ್ರೀಮತಿ ಈಶ್ವರಮ್ಮ ಕೋಂ ವೆಂಕಟರವಣ ನಾಯ್ಕ, ಜಿಲಿಪಿಗಾರಿಪಲ್ಲಿ ತಾಂಡ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ,   ತಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ. ತಾನು ವೆಂಕಟರವಣ ನಾಯ್ಕ ರವರನ್ನು ವಿವಾಹವಾಗಿರುತ್ತೇನೆ. ತನ್ನ ಗಂಡನ ಜೊತೆ ಇನ್ನು 04 ಜನ ಅಣ್ಣತಮ್ಮಂದಿರಿದ್ದು, ಬೋರ್ ವೆಲ್ ಒಂದು ಇದ್ದು ಅದರಲ್ಲಿ ಬರುವ ನೀರನ್ನು ಎಲ್ಲರೂ ಸಮಾನವಾಗಿ ಹಂಚಿಕೊಂಡು ವ್ಯವಸಾಯ ಮಾಡಿಕೊಂಡು ಇರುತ್ತೇವೆ. ದಿನಾಂಕ 18-09-2021 ರಂದು ಬೆಳಗಿನ ಜಾವ 03:00 ಗಂಟೆಯ ಸಮಯದಲ್ಲಿ ತಾನು ಮತ್ತು ತನ್ನ ಗಂಡ ಜಮೀನಿನ ಬಳಿ ನೀರು ಹರಿಸಲು ಹೋಗಿದ್ದಾಗ ನಮ್ಮ ಬಾವನಾದ ಶಿವನಾಯ್ಕ ರವರು ಅಲ್ಲಿಯೆ ಇದ್ದು ಜಮೀನಿನಗೆ ನೀರು ಹರಿಸುವ ವಿಚಾರದಲ್ಲಿ ತನ್ನ ಗಂಡನ ಮೇಲೆ ಜಗಳತೆಗೆದು  ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನ ಸಾಯಿಸುವವರೆಗೂ ಬಿಡುವುದಿಲ್ಲ ಎಂತ  ಪ್ರಾಣ ಬೆದಿರಿಕೆ ಹಾಕಿ ಅಲ್ಲಿಯೇ ಇದ್ದ ಮಚ್ಚಿನಿಂದ ತನ್ನ ಗಂಡನ ತಲೆಗೆ ಹೊಡೆದು ರಕ್ತ ಗಾಯಪಡಿಸಿ  ನನ್ನ ಗಂಡನಿಗೆ ಕಾಲುಗಳಿಂದ ಒದ್ದಿರುತ್ತಾನೆ. ನಂತರ ತಾನು ಜಗಳವನ್ನು ಬಿಡಿಸಿದ್ದು  ತಾನು ಅಂಬ್ಯುಲೆನ್ಸ್ ಗೆ ಕರೆ ಮಾಡಿ 108 ಆಂಬುಲೇನ್ಸ್ ನಲ್ಲಿ  ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ನನ್ನ ಗಂಡನನ್ನು ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿರುತ್ತೇನೆ. ಗ್ರಾಮದಲ್ಲಿ ಹಿರಿಯರು ರಾಜಿ ಪಂಚಾಯ್ತಿ ಮಾಡೋಣ ಎಂತ ಹೇಳಿ ಪಂಚಾಯ್ತಿ ಮಾಡದೆ ಇದ್ದರಿಂದ ಈ ದಿನ ತಡವಾಗಿ ದೂರನ್ನು ನೀಡುತ್ತಿದ್ದು  ಮೇಲ್ಕಂಡ ಶಿವನಾಯ್ಕ ರವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ.

 

7. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.159/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 19/09/2021 ರಂದು ಸಂಜೆ 4-10 ಗಂಟೆ ಸಮಯದಲ್ಲಿ ಮಾನ್ಯ ಪಿ,ಎಸ್,ಐ ರವರು ನೀಡಿದ ದೂರಿನ ಸಾರಾಂಶವೆನಂದರೆ ದಿನಾಂಕ:19.09.2021 ರಂದು ಸಂಜೆ 4-00 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಅಂಕಣಗೊಂದಿ ಗ್ರಾಮದ ವಾಸಿ ತಿಮ್ಮರಾಯಪ್ಪ ಬಿನ್ ಲೇಟ್ ನಾರಾಯಣಪ್ಪ. 53 ವರ್ಷ. ಆದಿ ಕರ್ನಾಟಕ ಜನಾಂಗ. ಕೂಲಿ ಕೆಲಸ. ರವರು ತಮ್ಮ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿರುತ್ತದೆ. ಈ ಬಗ್ಗೆ ಮೇಲ್ಕಂಡ ಆಸಾಮಿಯ ವಿರುದ್ದ ಕಲಂ: 15[ಎ], 32[3] ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಕೊಳ್ಳಲು  ಸೂಚಿಸಲಾಗಿದೆ.

 

8. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.70/2021 ಕಲಂ. 454,457,380 ಐ.ಪಿ.ಸಿ:-

     ಈ ದಿನ ದಿನಾಂಕ:-19/09/2021 ರಂದು ರಾತ್ರಿ 08-30 ಗಂಟೆಗೆ ಪಿರ್ಯಾಧಿದಾರರಾದ ಶ್ರೀ.ಆನಂದ ಎನ್.ಕೆ ಬಿನ್ ಎನ್.ಜಿ ಕೃಷ್ಣಪ್ಪ 38 ವರ್ಷ, ವಕ್ಕಲಿಗರು, ಹೂವಿನ ವ್ಯಾಪಾರ, ಎ.ಪಿ.ಎಂ.ಸಿ ಯಾರ್ಡ್, ನ್ಯಾಸ ತಿಮ್ಮನಹಳ್ಳಿ ಗ್ರಾಮ, ಮಂಡಿಕಲ್ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಹಾಲೀ ವಾಸ: ಪ್ರಶಾಂತ ನಗರ, ಶನಿ ಮಹಾತ್ಮ ದೇವಾಲಯ, ಚಿಕ್ಕಬಳ್ಳಾಪುರ ಟೌನ್ ಮತ್ತು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತಾನು ಚಿಕ್ಕಬಳ್ಳಾಪುರ ನಗರದ ಎ.ಪಿ.ಎಂ.ಸಿ ಯಾರ್ಡ್ ಮಾರುಕಟ್ಟೆಯಲ್ಲಿ ಎನ್.ಕೆ.ಜಿ ಹೂವಿನ ಮಂಡಿಯನ್ನು ಹಾಕಿಕೊಂಡು ವ್ಯಾಪಾರ ಮಾಡಿ ಜೀವನ ಮಾಡುತ್ತಿದ್ದು, ಹೀಗಿರುವಾಗ ದಿನಾಂಕ:-15/09/2021 ರಂದು ತಾನು ಮತ್ತು ತನ್ನ ಹೆಂಡತಿ ಮಕ್ಕಳನ್ನು ತನ್ನ ತಂಗಿಯ ಮನೆಯಲ್ಲಿ ಬಿಟ್ಟು ತಾನು ಹೂವು ಮಾರಿರುವ ಅಂಗಡಿಯ ಮಾಲೀಕರಿಂದ ಹಣವನ್ನು ಪಡೆಯಲು ಬಳ್ಳಾರಿಗೆ ಹೋಗಿ ಮಾಲೀಕರಿಂದ/ವರ್ತಕರಿಂದ ಹಣವನ್ನು ಪಡೆದು ದಿನಾಂಕ:-16/09/2021 ರಂದು ಸಂಜೆ 6-00 ಗಂಟೆಗೆ ವಾಪಸ್ಸು ತಮ್ಮ ಮನೆಗೆ ಬಂದು ವರ್ತಕರಿಂದ ಪಡೆದ ಹಣವನ್ನು ಸುಮಾರು 2,00,000 ರೂ ಬೀರುವಿನಲ್ಲಿ ಇಟ್ಟು ನಾನು ಸ್ನಾನ ಮಾಡಿಕೊಂಡು ನಮ್ಮ ಮನೆಯ ಪಕ್ಕದಲ್ಲಿರುವ ಪ್ರದೀಪ್ ರವರ ಭಾವಮೈದನ ಮದುವೆಗೆ ಚಿಕ್ಕ ತಿರುಪತಿಗೆ ಹೋಗಿ ಮದುವೆ ಮುಗಿಸಿಕೊಂಡು ದಿನಾಂಕ:-17/09/2021 ರಂದು ನಾನು ಮತ್ತು ಶಂಕರ ಹೊಸಕೋಟೆಗೆ ಬಂದು ಹೊಸಕೋಟೆಯಿಂದ ತಾನು ಡ್ರೈವರ್ ರಾಖಿಯ ಜೊತೆ ಕಾರಿನಲ್ಲಿ ಕಲೆಕ್ಷನ್ ಹಣಕ್ಕಾಗಿ ಆಂದ್ರಪ್ರದೇಶದ ನೆಲ್ಲೂರಿಗೆ ಹೋಗಿ ಹಣವನ್ನು ವಸೂಲಿ ಮಾಡಿಕೊಂಡು ಈ ದಿನ ದಿನಾಂಕ:-19/09/2021 ರಂದು ಸಂಜೆ 04-00 ಗಂಟೆಗೆ ಮನೆಯ ಬಳಿ ಬಂದು ನೋಡಿದಾಗ ಮನೆಯ ಬಾಗಿಲಿನ ಬೀಗ ಹೊಡೆದು ಬಾಗಿಲು ಓಪನ್ ಆಗಿದ್ದು, ತಾವು ಗಾಬರಿಯಿಂದ ಮನೆಯ ಬಾಗಿಲನ್ನು ತೆರೆದು ಮನೆಯ ಓಳಗೆ ಬಂದು ನೋಡಿದಾಗ ಬೀರುವಿನ ಬಾಗಿಲನ್ನು ಮುರಿದು ಲಾಕನ್ನು ಓಪನ್ ಮಾಡಿ ಓಳಗಡೆ ಇದ್ದ ಸುಮಾರು 1) 35 ಗ್ರಾಂ ತೂಕದ ಬಂಗಾರದ ಕತ್ತಿನ ಚೈನು 2) ಸುಮಾರು 10 ಗ್ರಾಂ ತೂಕದ ಬಂಗಾರದ ಓಲೆ, 3) 1 ಜೊತೆ ಬೆಳ್ಳಿ ಕಾಲು ಚೈನು 4) ಬೆಳ್ಳಿಯ ಕತ್ತಿನ ಚೈನು ಎರಡು 5) ಬೆಳ್ಳಿಯ ಕೈ ಬಳೆ ಒಂದು ಒಟ್ಟು ಸುಮಾರು 150 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಮತ್ತು ಬೀರುವಿನಲ್ಲಿದ್ದ ಸುಮಾರು 2,50,000 ರೂ ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ಕಳುವಾಗಿರುವ ಮಾಲು ಮತ್ತು ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

9. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.414/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 19/09/2021 ರಂದು ರಾತ್ರಿ 8.15 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಶ್ರೀ ವೇಣು, ಸಿ.ಹೆಚ್.ಸಿ-110 ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 19/09/2021 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಶ್ರೀ ರಾಜಣ್ಣ.ಪಿ.ಐ ರವರು ತನಗೆ ಹಾಗೂ ತಮ್ಮ ಠಾಣೆಯ ಸಿ.ಹೆಚ್.ಸಿ-198 ಮಂಜುನಾಥ ರವರಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳ ಪತ್ತೆ ಕಾರ್ಯಕ್ಕೆ ನೇಮಿಸಿದ್ದು, ಅದರಂತೆ ತಾವುಗಳು ಈ ದಿನ ಸಂಜೆ 5.00 ಗಂಟೆ ಸಮಯದಲ್ಲಿ ಚಿಂತಾಮಣಿ ತಾಲ್ಲೂಕು, ಸಿ.ವಡ್ಡಹಳ್ಳಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಸದರಿ ಗ್ರಾಮದ ರಾಮಕೃಷ್ಣಪ್ಪ ಬಿನ್ ಲೇಟ್.ರಾಮಯ್ಯ ರವರ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಬಗ್ಗೆ ಬಂದಂತಹ ಖಚಿತ ಮಾಹಿತಿಯ ಮೇರೆಗೆ, ಸದರಿ ರಾಮಕೃಷ್ಣಪ್ಪ ಬಿನ್ ಲೆಟ್ ರಾಮಯ್ಯ ರವರ ಚಿಲ್ಲರೆ ಅಂಗಡಿಯ ಬಳಿ ದಾಳಿ ಮಾಡುವ ಸಲುವಾಗಿ ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ರಾಮಕೃಷ್ಣಪ್ಪ ರವರ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಅಂಗಡಿಯ ಮುಂಭಾಗದಲ್ಲಿ ಕುಳಿತಿದ್ದ ವ್ಯಕ್ತಿಗಳು ಹಾಗೂ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದ ರಾಮಕೃಷ್ಣಪ್ಪ ಸ್ಥಳದಿಂದ ಓಡಿಹೋಗಿದ್ದು.  ಸದರಿ ಅಂಗಡಿಯ ಮುಂಭಾಗದ ಸ್ಥಳದಲ್ಲಿ ಪರಿಶೀಲಿಸಲಾಗಿ 1) Haywards Cheers Whisky ಯ 90 ML ನ ಮದ್ಯ ತುಂಬಿದ 20 ಟೆಟ್ರಾ ಪಾಕೇಟ್ ಗಳು, 2) 2 ಪ್ಲಾಸ್ಟಿಕ್ ಗ್ಲಾಸ್ ಗಳು, 3) Haywards Cheers Whisky ಯ 90 ML ನ 2 ಖಾಲಿ ಟೆಟ್ರಾ ಪಾಕೇಟ್ ಗಳು, 4). ಒಂದು ಲೀಟರ್ ನ ಒಂದು ಖಾಲಿ ನೀರಿನ ಬಾಟೆಲ್ ಇರುತ್ತೆ. (ಒಟ್ಟು ಮದ್ಯ 01 ಲೀಟರ್ 800 ML ಇದ್ದು ಇದರ ಬೆಲೆ ಸುಮಾರು 702/- ರೂಗಳು). ನಂತರ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆಸಾಮಿಯ ಹೆಸರು ಹಾಗೂ ವಿಳಾಸ ತಿಳಿಯಲಾಗಿ ರಾಮಕೃಷ್ಣಪ್ಪ ಬಿನ್ ಲೇಟ್ ರಾಮಯ್ಯ, 69 ವರ್ಷ, ವಕ್ಕಲಿಗರು ಅಂಗಡಿ ವ್ಯಾಪಾರ, ದೊಡ್ಡಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಮೇಲ್ಕಂಡ ಮಾಲುಗಳನ್ನು ಸಂಜೆ 5.15 ಗಂಟೆಯಿಂದ 6.15 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮುಖಾಂತರ ಅಮಾನತ್ತು ಪಡಿಸಿಕೊಂಡಿರುತ್ತೆ. ನಂತರ ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಬಂದು ಯಾವುದೇ ಪರವಾನಿಗೆಯನ್ನು ಪಡೆಯದೆ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ರಾಮಕೃಷ್ಣಪ್ಪ ಬಿನ್ ಲೇಟ್ ರಾಮಯ್ಯ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದೆ.

 

10. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.250/2021 ಕಲಂ. 78(I),78(III) ಕೆ.ಇ ಆಕ್ಟ್:-

     ದಿನಾಂಕ:19/09/2021 ರಂದು ಬೇಳಿಗ್ಗೆ 18-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ 205 ಮೋಹನ್ ಕುಮಾರ್ ರವರು ತಂದು ಹಾಜರು ಪಡಿಸಿದ ಘನ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ:09/09/2021 ರಂದು ಮದ್ಯಾಹ್ನ 2-15 ಗಂಟೆಗೆ ಪಿ.ಎಸ್.ಐ ಸಾಹೇಬರು  ಮಾಲು, ಆರೋಪಿ ಹಾಗೂ ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ಮೆಮೋವಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 09/09/2021 ರಂದು ಮದ್ಯಾಹ್ನ 12-00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ವಿಧುರಾಶ್ವತ್ಥ ಹೊರ ಠಾಣೆ ವ್ಯಾಪ್ತಿಯ ಕುಡುಮಲಕುಂಟೆ  ಗ್ರಾಮದಲ್ಲಿ, ರಾಮಾಂಜಿನಪ್ಪ ರವರ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಆಸಾಮಿ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಗಸ್ತಿನ ಪಿ.ಸಿ-312 ಸೋಮನಾಥ ಮಾಲಗಾರ್, ವಿಧುರಾಶ್ವತ್ಥ ಹೊರಠಾಣೆಯ ಸಿ.ಪಿ.ಸಿ- 302 ಕುಮಾರ ನಾಯ್ಕ  ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ  ಪಂಚಾಯ್ತಿದಾರರನ್ನು ಕರೆದುಕೊಂಡು ಮದ್ಯಾಹ್ನ 12-30 ಗಂಟೆಗೆ ಮಾಹಿತಿ ಇದ್ದ  ಸ್ಥಳಕ್ಕೆ  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ ರಾಮಾಂಜಿನಪ್ಪ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋದರು. ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿ ಹೆಸರು ವಿಳಾಸ ಕೇಳಲಾಗಿ, ಮದ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿ ತನ್ನ ಹೆಸರು  ಅಭಿಷೇಕ್ ಬಿನ್ ಚಿಕ್ಕಮಾರಯ್ಯ, 20 ವರ್ಷ, ಗೊಲ್ಲರು, ವಿ.ವಿ ಪುರಂ, ಗೌರೀಬಿದನೂರು ಟೌನ್, ಸ್ವಂತ ಸ್ಥಳ ಜೀಗನಹಳ್ಳಿ ಗೊಲ್ಲರಟ್ಟಿ, ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆ ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ,  ಅದರಲ್ಲಿ  90 ಎಂ.ಎಲ್. ಸಾಮರ್ಥ್ಯದ HAY WARDS CHEERS  WHISKY ಯ 21 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 890 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 737.73 /- ರೂ.ಗಳಾಗಿರುತ್ತೆ.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗಳಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ ಸ್ಥಳದಲ್ಲಿ ಮದ್ಯಾಹ್ನ 12-45 ಗಂಟೆಯಿಂದ 13-45  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ 90 ಎಂ.ಎಲ್ ಸಾಮರ್ಥ್ಯದ HAYWARDS CHEERS  WHISKY ಯ 21 ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ  04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಮದ್ಯಾಹ್ನ 14-15 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು,  ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ ನಂ.408/2021 ರಂತೆ ದಾಖಲಿಸಿರುತ್ತೆ.

 

11. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.251/2021 ಕಲಂ. 379 ಐ.ಪಿ.ಸಿ:-

     ದಿನಾಂಕ;19/09/2021 ರಂದು ಸಂಜೆ 7-30 ಗಂಟೆಗೆ ಫಿರ್ಯಾದುದಾರರಾದ ಮಂಜುನಾಥ್ ಬಿನ್ ನಂಜಪ್ಪ, 29 ವರ್ಷ, ತೊಗಟೆ ಜನಾಂಗ, ಮಗ್ಗದ ಕೆಲಸ, ಮನೆ ಸಮುದ್ರಂ ಗ್ರಾಮ, ಹಿಂದೂಪುರಂ ಮಂಡಲಂ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ: ದಿನಾಂಕ16/09/2021 ರಂದು ಮದ್ಯಯಾಹ್ನ 2-30 ಗಂಟೆಗೆ ತಾನು ಮತ್ತು ತನ್ನ ಸ್ನೇಹಿತ ವೇನು ಗೋಪಾಲ್ ಬಿನ್ ದಾದಲೂರಪ್ಪ, ಮದ್ಯ ಸೇವನೆ  ಮಾಡಲು ಕರ್ನಾಟಕ ರಾಜ್ಯದ ಗೌರಿಬಿದನೂರು  ಹುಣೇಸನಹಳ್ಳಿ ಗ್ರಾಮದ ವೈಷ್ಣವಿ ಬಾರ್ ಅಂಡ್ ರೆಸ್ಟೋರೆಂಟ್ ಗೆ ಬಂದು ಮದ್ಯಸೇವನೆ ಮತ್ತು ಊಟ ಮಾಡಿ ನಮ್ಮ ಊರಿಗೆ ಹೋಗಲು ನನ್ನ ಬಾಬತ್ತು ಎಪಿ-02 ಬಿ.ಎಫ್-3629 ಚಾಸ್ಸಿ ನಂ:MD634K41G2B78678 ಇಂಜಿನ್ ನಂ:0E4BG2925748 ಇದರ ಬೆಲೆ ಸುಮಾರು 75000/- ಆಗಿರುತ್ತೆ. ಇದನ್ನು ನೋಡಲಾಗಿ ನಮ್ಮ ದ್ವಿ ಚಕ್ರ ವಾಹನವು ಕಳವು ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ಕಳ್ಳತನವಾಗಿರುವ ದ್ವಿ ಚಕ್ರ ವಾಹನ ಮತ್ತು ಕಳ್ಳರನ್ನು ಪತ್ತೆ ಮಾಡಬೇಕಾಗಿ ನೀಡಿದ ದೂರಾಗಿರುತ್ತೆ.

 

12. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.252/2021 ಕಲಂ. 302 ಐ.ಪಿ.ಸಿ:-

     ದಿನಾಂಕ 19-09-2021 ರಂದು 20-30 ಗಂಟೆಗೆ ಪಿರ್ಯಾದಿದಾರರಾದ ವೆಂಕಟರವಣಪ್ಪ ಬಿನ್ ಲೇಟ್ ವೆಂಕಟರವಣಪ್ಪ,65 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ವಾಸ ಹಳೇಮಣಿವಾಲ ಗ್ರಾಮ, ಗೌರಿಬಿದನೂರು ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂಧರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ತನಗೆ 03 ಜನ ಮಕ್ಕಳಿದ್ದು, 1ನೇ ಬಾಲಪ್ಪ, 2 ನೇ ಶಿವ @ ಶಿವಪ್ಪ, 3 ನೇ ಮಮತ ಆಗಿರುತ್ತಾರೆ. ನನ್ನ 2 ನೇ ಮಗನಾದ ಶಿವ @ ಶಿವಪ್ಪ ಎಂಬುವನು ಈಗ್ಗೆ  ಸುಮಾರು 13 ವರ್ಷಗಳ ಹಿಂದೆ ನಮ್ಮ ಗ್ರಾಮದ ಪಕ್ಕದ ಊರಾದ ಮುಸಲ್ಮಾನರಹಳ್ಳಿ ಗ್ರಾಮದ ಮುಸ್ಲೀಂ ಜನಾಂಗದ ಫಯಾಜ್ ಎಂಬುವರ ಮಗಳಾದ ಮುಬಾರಕ್ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ, ಮದುವೆಯಾದ ನಂತರ ಮುಭಾರಕ್ ತನ್ನ ಹೆಸರನ್ನು ಶಿಲ್ಪ ಎಂದು ಬದಲಾಯಿಸಿಕೊಂಡಿದ್ದಳು. ಮದುವೆ ನಂತರ ಅವರು ಆಂಧ್ರಪ್ರದೇಶದ ಹಿಂದೂಪುರ ತಾಲ್ಲೂಕು ಸಂತೆಬಿದನೂರಿನ ದೇವರಪಲ್ಲಿ ಗ್ರಾಮದಲ್ಲಿ ವಾಸವಾಗಿದ್ದರು. ಇವರಿಗೆ 11 ವರ್ಷದ ಗಣೇಶ ಎಂಬ ಮಗ ಸಹ ಇರುತ್ತಾನೆ. ಈಗ್ಗೆ ಸುಮಾರು 01 ವರ್ಷದ ಹಿಂದೆ ನನ್ನ ಮಗನಾದ ಶಿವಪ್ಪನಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಸಂಪಾದನೆ ಇಲ್ಲದೆ ಇವರ ಸಂಸಾರ ನಡೆಸಲು ಕಷ್ಟವಾಗಿದ್ದರಿಂದ ನಮ್ಮ ಗ್ರಾಮಕ್ಕೆ ವಾಪಸ್ಸು ಬಂದು ನಮ್ಮ ಮನೆಯಲ್ಲಿಯೇ ಇದ್ದರು, ಶಿವಪ್ಪನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೆವು. ನನ್ನ ಮಗ ತನಗೆ ಇದ್ದ ಖಾಯಿಲೆಯಿಂದ ಗುಣಮುಖನಾಗದೆ, ದಿನಾಂಕ:22/10/2020 ರಂದು ಮೃತಪಟ್ಟಿದ್ದನು. ನನ್ನ ಮಗ ಮೃತಪಟ್ಟ ನಂತರ ಶಿಲ್ಪ ತನ್ನ ಮಗನಾದ 11 ವರ್ಷದ ಗಣೇಶನನ್ನು ನಮ್ಮ ಮನೆಯಲ್ಲಿಯೇ ಬಿಟ್ಟು ವಾಟದಹೊಸಹಳ್ಳಿ ಗ್ರಾಮದ ಈಡಿಗರ ಜನಾಂಗದ ವಿನಯ್ ಕುಮಾರ್ ಬಿನ್ ನಾಗರಾಜುರವರನ್ನು ಪ್ರೀತಿಸಿ ಆತನೊಂದಿಗೆ ಸಂಬಂಧ ಇಟ್ಟುಕೊಂಡು  ವಾಟದಹೊಸಹಳ್ಳಿ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದಳು. ಶಿಲ್ಪ ದೊಡ್ಡಬಳ್ಳಾಪುರ ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗುತ್ತಿದ್ದಳು.  ದಿನಾಂಕ:28/08/2021 ರಂದು ವಿನಯ್ ಕುಮಾರ್ ಹಿಂದೂಪುರ-ಬೆಂಗಳೂರು ರಸ್ತೆ ಹಳೇ ಆರ್.ಟಿ.ಓ ಕಛೇರಿ ಹತ್ತಿರ ಅಪಘಾತದಲ್ಲಿ ಮೃತಪಟ್ಟಿದ್ದನು. ಇದಾದ 08 ದಿನಗಳ ನಂತರ ದಿನಾಂಕ: 05/09/2021 ರಂದು ಶಿಲ್ಪ ನಮ್ಮ ಗ್ರಾಮದ ಹೊರವಲಯದಲ್ಲಿರುವ ರಾಮಪ್ಪ ರವರ ಜಮೀನಿನಲ್ಲಿರುವ ಪಾಳುಬಾವಿಯಲ್ಲಿ ಮೃತಪಟ್ಟಿದ್ದಳು. ನನ್ನ ಸೊಸೆ ಶಿಲ್ಪ ರವರ ಸಾವಿನಲ್ಲಿ ಅನುಮಾನವಿರುವುದಾಗಿ  ರಾಜಶೇಖರ ಬಿನ್  ರಾಮಪ್ಪ, ಹಳೇ ಮಣಿವಾಳ ಗ್ರಾಮರವರು ದೂರು ನೀಡಿದ್ದು  ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಯು.ಡಿ.ಆರ್ ನಂ.26/2021 ಕಲಂ.174(ಸಿ), ಸಿ.ಆರ್.ಪಿ.ಸಿ ರೀತ್ಯ ಪ್ರಕರಣ ದಾಖಲಾಗಿರುವ ವಿಚಾರ ತಿಳಿಯಿತು. ನಮ್ಮ ಗ್ರಾಮದಲ್ಲಿ ನನ್ನ ಸೊಸೆ ಶಿಲ್ಪ @ ಮುಭಾರಕ್ ರನ್ನು ಯಾರೋ ಕೊಲೆ ಮಾಡಿ ಬಾವಿಯಲ್ಲಿ ಬಿಸಾಡಿರುವುದಾಗಿ ಮಾತನಾಡಿಕೊಳ್ಳುತ್ತಿದ್ದರು ನಾನು ನಮ್ಮ ಗ್ರಾಮದ ವಾಸಿ ಅಶ್ವಥನಾರಾಯಣ ಬಿನ್  ಲೇಟ್ ಹನುಮಂತಪ್ಪರವರನ್ನು ಕರೆದುಕೊಂಡು ಈ ದಿನ ಗೌರಿಬಿದನೂರು ಗ್ರಾಮಾಂತರ ಠಾಣೆಗೆ ಬಂದು  ನನ್ನ ಸೊಸೆಯ ಕೇಸಿನ ವಿಚಾರದಲ್ಲಿ  ನಮ್ಮ ಗ್ರಾಮದಲ್ಲಿ  ಶಿಲ್ಪ @ ಮುಬಾರಕ್ ಎಂಬುವರನ್ನು  ಯಾರೋ ಕೊಲೆ ಮಾಡಿ ಬಾವಿಯಲ್ಲಿ ಬಿಸಾಡಿರುವುದಾಗಿ ಮಾತನಾಡಿಕೊಳ್ಳುತ್ತಿರುವುದಾಗಿ ಹೇಳಿದಾಗ ಠಾಣೆಯಲ್ಲಿ ಗೌರಿಬಿದನೂರು ಸರ್ಕಾರಿ ಅಸ್ಪತ್ರೆಯ ವೈದ್ಯಾಧಿಕಾರಿಗಳು  ಶವಪರೀಕ್ಷಾ ವರದಿಯಲ್ಲಿ LIGATURE MARK SURROUNDING THE NECK AT THE LEVEL OF THYROID CARTILAGE MEASURING 28 CMS IN LENGTH AND 1.5 CM IN WIDTH  ಮತ್ತು  The cause of  death  is due to asphyxia due to lligature(Mark) around neck ಎಂತ ಅಭಿಪ್ರಾಯ ನೀಡಿರುತ್ತಾರೆಂದು ತಿಳಿಯಿತು. ನನ್ನ ಸೊಸೆ ಶಿಲ್ಪ @ ಮುಬಾರಕ್ ಕೋಂ ಲೇಟ್ ಶಿವಪ್ಪ, 28 ವರ್ಷ, ಮುಸ್ಲೀಂ ಜನಾಂಗ, ವಾಸ ವಾಟದಹೊಸಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲುಕುರವರನ್ನು ಯಾರೋ ಕುತ್ತಿಗೆಗೆ ಯಾವುದೋ ಆಯುಧದಿಂದ ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶದಿಂದ  ಬಿಗಿದು ಕೊಲೆ ಮಾಡಿ ನಮ್ಮ ಗ್ರಾಮದ ಪಾಳು ಬಿದ್ದ ಬಾವಿಯಲ್ಲಿ ಬಿಸಾಡಿರುತ್ತಾರೆ.  ಸದರಿಯವರನ್ನು ಪತ್ತೆ ಮಾಡಿ ಅವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆ. ನಾನು ಈ ಹಿಂದೆ ದೂರುಕೊಡಲು ಬರುವ ವೇಳೆಗೆ ರಾಜಶೇಖರ ಬಿನ್  ರಾಮಪ್ಪ, ಹಳೇ ಮಣಿವಾಳ ಗ್ರಾಮರವರು ದೂರು ನೀಡಿದ್ದು  ನಮ್ಮ ಗ್ರಾಮದಲ್ಲಿ ನನ್ನ ಸೊಸೆ ಶಿಲ್ಪ @ ಮುಭಾರಕ್ ರನ್ನು ಯಾರೋ ಕೊಲೆ ಮಾಡಿ ಬಾವಿಯಲ್ಲಿ ಬಿಸಾಡಿರುವುದಾಗಿ ಮಾತನಾಡಿಕೊಳ್ಳುತ್ತಿದ್ದರಿಂದ ಈ ದಿನ ನಾನು ತಡವಾಗಿ ಬಂದು ದೂರು ನೀಡಿರುತ್ತೇನೆ.

 

13. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.253/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:20/09/2021 ರಂದು ಬೇಳಿಗ್ಗೆ 09-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ 205 ಮೋಹನ್ ಕುಮಾರ್ ರವರು ತಂದು ಹಾಜರು ಪಡಿಸಿದ ಘನ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ:09/09/2021 ರಂದು ರಾತ್ರಿ 8-40 ಗಂಟೆಗೆ ಮಾಲು, ಆರೋಪಿ, ಹಾಗೂ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ಮೆಮೋವಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 09/09/2021 ರಂದು ಸಂಜೆ 5-00 ಗಂಟೆಯಲ್ಲಿ ಪಿರ್ಯಾದಿದಾರರು ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಕಸಬಾ ಹೋಬಳಿ ದೇವಗಾನಹಳ್ಳಿ ಗ್ರಾಮದಲ್ಲಿ ಪಾರ್ವತಮ್ಮ @ ಕೊಂಡೂರಾಯಮ್ಮ ಕೋಂ ಲೇಟ್ ನಂಜರೆಡ್ಡಿ ರವರ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಆಸಾಮಿ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಠಾಣೆಯ ಪಿ.ಸಿ-512 ರಾಜಶೇಖರ, ಪಿ.ಸಿ-179 ಶಿವಶೇಖರ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ  ಪಂಚಾಯ್ತಿದಾರರನ್ನು ಕರೆದುಕೊಂಡು ಸಂಜೆ 5-30 ಗಂಟೆಗೆ ಮಾಹಿತಿ ಇದ್ದ  ಸ್ಥಳಕ್ಕೆ  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ ಕೊಂಡೂರಮ್ಮ ರವರ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋದರು. ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿ ಹೆಸರು ವಿಳಾಸ ಕೇಳಲಾಗಿ, ಮದ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿ ತನ್ನ ಹೆಸರು  ವಿಷ್ಣು  ಹೆಚ್. ಬಿನ್  ಹನುಮಂತರೆಡ್ಡಿ, 38 ವರ್ಷ, ಒಕ್ಕಲಿಗರು, ಕೂಲಿ  ವಾಸ  ದ್ಯಾವಗಾನಹಳ್ಳಿ ಗ್ರಾಮ, ಕಸಬಾ ಹೋಬಳಿ, ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ,  ಅದರಲ್ಲಿ  90 ಎಂ.ಎಲ್. ಸಾಮರ್ಥ್ಯದ HAY WARDS CHEERS  WHISKY ಯ 21 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 890 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 737.73 /- ರೂ.ಗಳಾಗಿರುತ್ತೆ.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗಳಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ ಸ್ಥಳದಲ್ಲಿ ಸಂಜೆ  5-45 ಗಂಟೆಯಿಂದ 6-45  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ 90 ಎಂ.ಎಲ್ ಸಾಮರ್ಥ್ಯದ HAYWARDS CHEERS  WHISKY ಯ 21 ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ  04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ರಾತ್ರಿ 8-15 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು,  ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ ನಂ.409/2021 ರಂತೆ ದಾಖಲಿಸಿರುತ್ತೆ.

 

14. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.254/2021 ಕಲಂ. 78(I),78(III) ಕೆ.ಪಿ ಆಕ್ಟ್:-

     ದಿನಾಂಕ:20/09/2021 ರಂದು ಬೇಳಿಗ್ಗೆ 10-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ 205 ಮೋಹನ್ ಕುಮಾರ್ ರವರು ತಂದು ಹಾಜರು ಪಡಿಸಿದ ಘನ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ 10/09/2021 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ಗೌರೀಬಿದನೂರು ಗ್ರಾಮಾಂತರ ಠಾಣೆಯಲ್ಲಿದ್ದಾಗ, ಗೌರೀಬಿದನೂರು ತಾಲ್ಲೂಕು, ಹುದುಗೂರು ಗ್ರಾಮದ ಬಸ್ ನಿಲ್ದಾಣದ ಬಳಿ ಯಾರೋ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಹಾಗು ಪೊಲೀಸ್ ಸಿಬ್ಬಂದಿಯವರಾದ ಪಿಸಿ 33 ಕೃಷ್ಣಪ್ಪ ,ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ ನಂ. ಕೆ.ಎ.40-ಜಿ.140  ರಲ್ಲಿ ಹುದಗೂರು ಗ್ರಾಮಕ್ಕೆ ಬೆಳಿಗ್ಗೆ 10-30  ಗಂಟೆಗೆ ಹೋಗಿ, ಅಲ್ಲಿ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ,  ಮರೆಯಲ್ಲಿ ನಿಂತು ನೋಡಲಾಗಿ,  ಯೋರೋ ಒಬ್ಬ ಹುದುಗೂರು ಗ್ರಾಮದ ಬಸ್ ನಿಲ್ದಾಣದ ಬಳಿ ರಸ್ತೆಯಲ್ಲಿ  ಓಡಾಡುವ ಸಾರ್ವಜನಿಕರಿಗೆ  ಒಂದು ರೂಪಾಯಿಗೆ ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ನಾನು ಮತ್ತು ಪೊಲೀಸ್ ಸಿಬ್ಬಂದಿಯವರು  ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ, ಆತ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು, ಆತನ  ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು ಅಬು ಬಿನ್ ಮುಸ್ತಾಫನ್ ,21 ವರ್ಷ,ಮುಸ್ಲಿಂ ಜನಾಂಗ,ಖಾಸಗಿ ಕೆಲಸ,ನಗರಗೆರೆ ಗ್ರಾಮ,ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಆತನ ಬಳಿ ಪರಿಶೀಲಿಸಲಾಗಿ  ನಗದು ಹಣ 1150/-ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿ ಅಬು ಬಿನ್ ಮುಸ್ತಾಫನ್, ಹಾಗು ಈತನ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್  ಮತ್ತು 1150/- ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ಬೆಳಿಗ್ಗೆ 10-30 ಗಂಟೆಯಿಂದ 11-30  ಗಂಟೆಯವರೆಗೆ  ಪಂಚನಾಮೆ ಕ್ರಮ ಜರುಗಿಸಿ ಕಾನೂನು ಕ್ರಮ ಜರುಗಿಸಲು ಸೂಚಿಸಿರುತ್ತೆ.

 

15. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.255/2021 ಕಲಂ. 15(A),32(3) ಕೆ.ಇ  ಆಕ್ಟ್:-

     ದಿನಾಂಕ:20/09/2021 ರಂದು ಬೇಳಿಗ್ಗೆ 11-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ 205 ಮೋಹನ್ ಕುಮಾರ್ ರವರು ತಂದು ಹಾಜರು ಪಡಿಸಿದ ಘನ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ:11/09/2021 ರಂದು 7-30 ಗಂಟೆಗೆ ಫಿರ್ಯಾದುದಾರರಾದ ಶ್ರೀ ವಿಜಯ್ ಕುಮಾರ್ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂಧರೆ: ದಿನಾಂಕ: 11/09/2021 ರಂದು  ಮದ್ಯಾಹ್ನ 3-00  ಗಂಟೆಯಲ್ಲಿ  ಗೌರಿಬಿದನೂರು ತಾಲ್ಲೂಕು  ಕಸಬಾ ಹೋಬಳಿ ಸೋನಗಾನಹಳ್ಳಿ ಗ್ರಾಮದಲ್ಲಿ ಯಾರೋ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು  ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಪಿ.ಸಿ-312 ಸೋಮನಾಥ್ ಮಾಲಗಾರ್ ಪಿ.ಸಿ-179 ಶಿವಶೇಖರ್ ಹಾಗೂ ಡಬ್ಲ್ಯೂ ಪಿ.ಸಿ-222 ಶಿಲ್ಪ  ರವರೊಂದಿಗೆ   ಸರ್ಕಾರಿ ಜೀಪ್ ಸಂಖ್ಯೆ:   ಕೆ.ಎ-40, ಜಿ-538  ರಲ್ಲಿ  ಸೋನಗಾನಹಳ್ಳಿ ಗ್ರಾಮದಲ್ಲಿ  ಹೋಗಿ , ಅಲ್ಲಿ  ಪಂಚಾಯ್ತಿದಾರರನ್ನು ಕರೆದುಕೊಂಡು  ಮಾಹಿತಿ ಇದ್ದ  ಸ್ಥಳಕ್ಕೆ  ಮದ್ಯಾಹ್ನ 3-30 ಗಂಟೆಗೆ ಹೋಗಿ   ಜೀಪ್ ಅನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ತನ್ನ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು , ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್  ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು  ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ. ಮದ್ಯದ ಪಾಕೆಟ್ ಗಳನ್ನು ತಂದು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ,  ತನ್ನ ಹೆಸರು   ನರಸಿಂಹ ಮೂರ್ತಿ ಬಿನ್ ನರಸಿಂಗಪ್ಪ, 33 ವರ್ಷ, ನಾಯಕ ಜನಾಂಗ, ಅಂಗಡಿ ವ್ಯಾಪಾರ,  ಸೋನಗಾನಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ತನ್ನ ಬಳಿ ಇದ್ದ ಪ್ಲಾಸ್ಟಿಕ್ ಚೀಲವನ್ನು    ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್.ಸಾಮರ್ಥ್ಯದ HAY WARDS CHEERS  WHISKY ಯ 22  ಟೆಟ್ರಾ ಪಾಕೆಟ್ ಗಳು ಇದ್ದು,   ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 980 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 772.86/-  ರೂ.ಗಳಾಗಿರುತ್ತೆ. ಸದರಿ ವ್ಯಕ್ತಿ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು  ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ   ಸ್ಥಳದಲ್ಲಿ ಸಂಜೆ 4-00 ಗಂಟೆಯಿಂದ   ಸಂಜೆ  5-00  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ   ಕ್ರಮ ಜರುಗಿಸಿ  ಸ್ಥಳದಲ್ಲಿದ್ದ   90 ಎಂ.ಎಲ್.ಸಾಮರ್ಥ್ಯದ HAY WARDS CHEERS  WHISKY ಯ 22  ಟೆಟ್ರಾ ಪಾಕೆಟ್ ಗಳನ್ನು ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡು ಸಂಜೆ    5-30 ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು  ಈ ಮೆಮೋನೊಂದಿಗೆ  ಮಾಲನ್ನು ಹಾಗೂ ಆರೋಪಿಯನ್ನು ಹಾಜರುಪಡಿಸಿ ಆರೋಪಿಯ  ವಿರುದ್ಧ  15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು .  ಸೂಚಿಸಿದದುರಾಗಿರುತ್ತೆ.

 

16. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.146/2021 ಕಲಂ. 78(3) ಕೆ.ಇ  ಆಕ್ಟ್:-

     ದಿನಾಂಕ 20/09/2021 ರಂದು ಬೆಳಿಗ್ಗೆ 10:00 ಗಂಟೆಯಲ್ಲಿ ಪಡೆದ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ: 08-09-2021 ರಂದು ಮದ್ಯಾಹ್ನ 3:00 ಗಂಟೆಯಲ್ಲಿ ಹೆಚ್.ಸಿ 244 ಗೋಪಾಲ ರವರಿಗೆ ನಗರದ ಪೀರುಸಾಬ್ ಗಲ್ಲಿಯಲ್ಲಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಟ್ಕಾ ಅಂಕಿಗಳನ್ನು ಬರೆದುಕೊಡುತ್ತಿರುವುದಾಗಿ ಮಾಹಿತಿ ಬಂದಿದ್ದು ಕೂಡಲೇ ತಾನು ಪಿ.ಎಸ್.ಐ ರವರಿಗೆ ಮಾಹಿತಿ ನೀಡಿ ಅನುಮತಿಯನ್ನು ಪಡೆದು ಎಂ.ಜಿ ವೃತ್ತದಲ್ಲಿದ್ದ ಪಿ.ಸಿ 34 ಮಂಜುನಾಥ ರವರನ್ನು ಕರೆದುಕೊಂಡು ಪಂಚರನ್ನು ಬರಮಾಡಿಕೊಂಡು ಸ್ವಲ್ಪ ದೂರ ನಡೆದುಕೊಂಡು ಪೀರುಸಾಬ್ ಗಲ್ಲಿಯ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿ ಟೀ ಅಂಗಡಿ ಮುಂಭಾಗದಲ್ಲಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ 1/- ರೂಪಾಯಿಗೆ 70/- ರೂಪಾಯಿಗಳನ್ನು ಕೊಡುವುದಾಗಿ ಮಟ್ಕಾ ಅಂಕಿಗಳನ್ನು ಬರೆಯಿಸಿ ನಿಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಿ ಎಂದು ಕೂಗಾಡುತ್ತಿರುವುದು ಕಂಡುಬಂದಿತು. ನಂತರ ಪಂಚರ ಸಮ್ಮುಖದಲ್ಲಿ ಅವನನ್ನು ಸುತ್ತುವರಿದು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಬಾಲಪ್ಪ ಬಿನ್ ಲೇಟ್ ನರಸಿಂಹಪ್ಪ, 65 ವರ್ಷ, ಪರಿಶಿಷ್ಟ ಜಾತಿ, ವ್ಯವಸಾಯ, ಹುದುಗೂರು, ಗೌರಿಬಿದನೂರು ತಾಲ್ಲೂಕು. ಪೋ: 9901324889 ಎಂದು ತಿಳಿಸಿದ್ದು ಅವನಿಗೆ ಮಟ್ಕಾ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವನ ಬಳಿ ಯಾವುದೆ ಪರವಾನಗಿ ಇಲ್ಲವೆಂದು ತಿಳಿಸಿದನು ನಂತರ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಒಂದು ಮಟ್ಕಾಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ನು ಮತ್ತು ನಗದು ಹಣ 480/- ರೂಪಾಯಿಗಳು ಇದ್ದು, ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಜೂಜಾಟದಿಂದ ಬಂದ ಹಣ ಎಂದು ತಿಳಿಸಿದನು ನಂತರ ಆರೋಪಿಯನ್ನು ವಶಕ್ಕೆ ಪಡೆದು ಪಂಚನಾಮೆ ಜರುಗಿಸಿ ಆರೋಪಿ ಹಾಗೂ ಮಾಲಿನೊಂದಿಗೆ ಠಾಣೆಗೆ ವಾಪಸ್ಸಾಗಿ ನೀಡಿದ ವರದಿಯನ್ನು ಪಡೆದು ಎನ್.ಸಿ.ಆರ್ ಪ್ರಕರಣ ದಾಖಲಿಸಿದ್ದು ಈ ದಿನ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿರುತ್ತೇನೆ.

 

17. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.147/2021 ಕಲಂ. 379 ಐ.ಪಿ.ಸಿ:-

     ದಿನಾಂಕ 20/09/2021 ರಂದು ಬೆಳಿಗ್ಗೆ 10:30 ಗಂಟೆಯಲ್ಲಿ ಪಿರ್ಯಾದಿ ಗೋವಿಂದಗೌಡ ಬಿನ್ ಗಂಗಾಧರಗೌಡ, 56 ವರ್ಷ, BMTC ಬಸ್ ಚಾಲಕ, ಸಾದರಗೌಡರು, ಕಡಬೂರು ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 18/09/2021 ರಂದು ಬೆಳಿಗ್ಗೆ 10:45 ಗಂಟೆಯಲ್ಲಿ ಕೆಲಸಕ್ಕೆ ಹೋಗುವ ಸಲುವಾಗಿ ತನ್ನ ದ್ವಿಚಕ್ರ ವಾಹನ ಸಂಖ್ಯೆ KA-50-E-2252 ದ್ವಿಚಕ್ರ ವಾಹನವನ್ನು KSRTC ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ಬೆಂಗಳೂರಿಗೆ ಹೋಗಿದ್ದು ನಂತರ ತನ್ನ ಮಗನಾದ ನಟರಾಜ ಕೆ.ಜಿ ರವರಿಗೆ ದ್ವಿಚಕ್ರ ವಾಹನದ ಕೀಯನ್ನು ಕೊಟ್ಟಿದ್ದು ಮಗನಾದ ನಟರಾಜ ರವರು ರಾತ್ರಿ 9:30 ಗಂಟೆಯಲ್ಲಿ ಬಂದು ನೋಡಲಾಗಿ ದ್ವಿಚಕ್ರ ವಾಹನ ಬಸ್ ನಿಲ್ದಾಣದಲ್ಲಿ ಇಲ್ಲದೇ ಇದ್ದು ಎಲ್ಲಾ ಕಡೆಗಳಲ್ಲಿ ಹುಡಿಕಾಡಿ ಈ ದಿನ ತಡವಾಗಿ ದೂರು ನೀಡುತ್ತಿದ್ದು ಕಳೆದು ಹೋದ ತನ್ನ ದ್ವಿಚಕ್ರ ವಾಹನವನ್ನು ಹುಡುಕಿಕೊಡಬೇಕಾಗಿ ನೀಡಿದ ದೂರನ್ನು ಪಡೆದು ಪ್ರಕರಣದ ದಾಖಲಿಸಿರುತ್ತೇನೆ.

 

18. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.227/2021 ಕಲಂ. 379 ಐ.ಪಿ.ಸಿ & 41(D),102 ಸಿ.ಆರ್.ಪಿ.ಸಿ:-

     ದಿನಾಂಕ: 19.09.2021 ರಂದು 17-30 ಗಂಟೆ ಸಮಯದಲ್ಲಿ ಸಿಹೆಚ್ ಸಿ. 222 ನಾಗರಾಜ್ ರವರು ಆರೋಪಿ ಮತ್ತು ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ,ಗುಡಿಬಂಡೆ ಪೊಲೀಸ್ ಠಾಣೆಯ ಮೊ.ಸಂ:149/2021 ರಲ್ಲಿ ಆರೋಪಿಗಳ ಪತ್ತೆಗಾಗಿ ನನಗೆ ಮತ್ತು ಸಿಪಿಸಿ-141. ಸಂತೋಷಕುಮಾರ್ ರವರಿಗೆ ನೇಮಿಸಿದ್ದು ಅದರಂತೆ ನಾವು ಗರುಡಚಾರ್ಲಹಳ್ಳಿ, ಪಸುಪಲೋಡು, ಲಕ್ಕೇನಹಳ್ಳಿ, ಗ್ರಾಮಗಳಲ್ಲಿ ಆರೋಪಿತರ ಬಗ್ಗೆ ವಿಚಾರ ಮಾಡಿ ಮಾಹಿತಿಯನ್ನು ಸಂಗ್ರಹಿಸಿಕೊಂಡು  ಗುಡಿಬಂಢೆ ಟೌನ್ ಗೆ ಬಂದು ಗುಡಿಬಂಡೆ ಟೌನಿನ ಮಾರುತಿ ವೃತ್ತದಲ್ಲಿ ಈ ದಿನ ದಿನಾಂಕ 19.09.2021 ರಂದು ಸಂಜೆ ಸುಮಾರು 5-00  ಗಂಟೆಯ ಸಮಯದಲ್ಲಿ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾಗ ವಾಟದ ಹೊಸಹಳ್ಳಿ ಕಡೆಯಿಂದ ದ್ವಿಚಕ್ರವಾಹನದಲ್ಲಿ ಬಂದ ಒಬ್ಬ ಆಸಾಮಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ದ್ವಿಚಕ್ರವಾಹನವನ್ನು ವಾಪಸ್ಸು ತಿರುಗಿಸಿಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಆಗ ನಾವು ಸದರಿ ಆಸಾಮಿಯನ್ನು ಹಿಡಿದು ವಶಕ್ಕೆ ಪಡೆದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ಲಕ್ಷ್ಮಿನರಸಿಂಹಪ್ಪ ಬಿನ್ ಗಂಗಪ್ಪ, 34 ವರ್ಷ, ಆದಿ ಕರ್ನಾಟಕ, ಜಿರಾಯ್ತಿ, ವೆಂಕಟಾಪುರ ಗ್ರಾಮ, ಡೀಪಾಳ್ಯ ಹೋಬಳಿ, ಗೌರೀಬಿದನೂರು ತಾಲ್ಲೂಕು ಎಂತ ತಿಳಿಸಿದನು, ದ್ವಿಚಕ್ರವಾಹನದ ಬಗ್ಗೆ ವಿಚಾರಣೆ ಮಾಡಲಾಗಿ ಸಮಂಜಸವಾದ ಉತ್ತರ ನೀಡಲಿಲ್ಲ, ಸದರಿ ದ್ವಿಚಕ್ರವಾಹನವನ್ನು ಪರಿಶೀಲಿಸಲಾಗಿ ನೊಂದಣಿ ಸಂಖ್ಯೆ ಇಲ್ಲದ ಹೀರೋ ಹೋಂಡಾ ಸ್ಪ್ಲಂಡರ್ ಪ್ಲಸ್ ದ್ವಿಚಕ್ರವಾಹನವಾಗಿರುತ್ತೆ. ಇದು ಸುಮಾರು 30,000/-ರೂಗಳು ಬೆಲೆ ಬಾಳುವಂತದ್ದಾಗಿರುತ್ತೆ. ಮೇಲ್ಕಂಡ ಆಸಾಮಿಯು ನೊಂದಣಿ ಸಂಖ್ಯೆ ಇಲ್ಲದ ಹೀರೋ ಹೋಂಡಾ ಸ್ಪ್ಲಂಡರ್ ಪ್ಲಸ್ ದ್ವಿಚಕ್ರವಾಹನವನ್ನು ಎಲ್ಲಿಯೋ ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ಕಂಡು ಬಂದಿದ್ದರಿಂದ ಸದರಿ ಆಸಾಮಿಯನ್ನು ದ್ವಿಚಕ್ರವಾಹನದ ಸಮೇತ ವಶಕ್ಕೆ ಪಡೆದುಕೊಂಡು ಸಂಜೆ  5-10 ಗಂಟೆಗೆ ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮಕ್ಕಾಗಿ ವರಧಿಯೊಂದಿಗೆ ಸಂಜೆ 5-30 ಗಂಟೆಗೆ ಮೇಲ್ಕಂಡ ಆಸಾಮಿ ಮತ್ತು ಮಾಲನ್ನು ಹಾಜರುಪಡಿಸುತ್ತಿದ್ದು, ಮೇಲ್ಕಂಡ ಆಸಾಮಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ ಎಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

 

19. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.228/2021 ಕಲಂ. 78(I),78(III) ಕೆ.ಪಿ ಆಕ್ಟ್:-

     ದಿನಾಂಕ 20/09/2021 ರಂದು ಬೆಳಿಗ್ಗೆ 9-00 ಗಂಟೆಗೆ ಘನ ನ್ಯಾಯಾಲಯದ ಕರ್ತವ್ಯ ಪಿಸಿ 430 ರವರು ಠಾಣೆಗೆ ಹಾಜರಾಗಿ ಠಾಣಾ ಎನ್.ಸಿ. ಆರ್ ನಂ 290/2021 ರನ್ನು ಪ್ರಕರಣವನ್ನು ದಾಖಲಿಸಿಕೊಳ್ಳಲು ಘನ ನ್ಯಾಯಾಲಯದಲ್ಲಿ ಅನುಮತಿಯನ್ನು ನೀಡಿದ್ದನ್ನು ಪಡೆದಿಕೊಂಡಿದ್ದರ ಸಾರಾಂಶವೇನೆಂದರೆ ದಿನಾಂಕ:18/09/2021 ರಂದು ಸಂಜೆ 7-00 ಘಂಟೆಗೆ ಪಿರ್ಯಾಧಿ ಶ್ರೀ ಕೆ.ಆರ್. ಪ್ರತಾಪ್ ಪಿ.ಎಸ್.ಐ ಗುಡಿಬಂಡೆ ರವರು ಠಾಣೆಯಲ್ಲಿ ಹಾಜರಾಗಿ ಆರೋಪಿ, ಮಾಲು, ಮಹಜರ್ ನೊಂದಿಗೆ ನೀಡಿದ ದೂರಿನ ಸಾರಾಮಶವೇನೆಂದರೆ, ಈ ದಿನ ದಿನಾಂಕ:18/09/2021 ರಂದು ಸಂಜೆ 4-45  ಗಂಟೆಯ ಸಮಯದಲ್ಲ್ಲಿ ತಾನು ಠಾಣೆಯಲ್ಲಿದ್ದಾಗ ಗುಪ್ತ ಮಾಹಿತಿ ಕರ್ತವ್ಯ ನಿರ್ವಹಿಸುವ ಠಾಣಾ ಹೆಚ್.ಸಿ. 73 ಶ್ರೀ ಹನುಮಂತರಾಯಪ್ಪ ರವರು ತನಗೆ ಪೋನ್ ಮಾಡಿ ತಿಳಿಸಿದ್ದೇನೆಂದರೆ, ಗುಡಿಬಂಡೆ ಟೌನ್ ನ ದೊಡ್ಡ ಮಸೀದಿ ಹತ್ತಿರ ಮೋರಿಯ ಬಳಿ  ಸಾರ್ವಜನಿಕ ರಸ್ತೆಯಲ್ಲಿ ಯಾರೋ ಇಬ್ಬ ವ್ಯಕ್ತಿಯು ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿರವುದಾಗಿ ತಿಳಿಸಿದ್ದರ ಮೇರೆಗೆ ಸದರಿ ಮಾಹಿತಿಯಂತೆ ನಾನು ಜೊತೆಯಲ್ಲಿದ್ದ ಸಿಬ್ಬಂದಿಯಾದ ಹೆಚ್.ಸಿ.102 ಶ್ರೀ ಆನಂದ ರವರೊಂದಿಗೆ ಕೆಎ40-ಜಿ-64 ರ ಪೊಲೀಸ್ ಜೀಪಿನಲ್ಲಿ ಗುಡಿಬಂಡೆ ಟೌನ್ ತಾಲ್ಲೂಕು ಕಛೇರಿ ಮುಂಭಾಗಕ್ಕೆ ಹೋಗಿ ಅಲ್ಲಿದ್ದ ಠಾಣಾ ಹೆಚ್.ಸಿ. 73 ಶ್ರೀ ಹನುಮಂತರಾಯಪ್ಪ ರವರನ್ನು ಮತ್ತು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರು ಮತ್ತು ಸಿಬ್ಬಂದಿಯೊಂದಿಗೆ ದೊಡ್ಡ ಮಸೀದಿ ಯಿಂದ ಸ್ವಲ್ಪ ದೂರದಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯಲ್ಲಿ ಇಬ್ಬರು ಆಸಾಮಿಗಳು ಸೇರಿಕೊಂಡು  1/- ರೂ 70/- ರೂಗಳನ್ನು ನೀಡುವುದಾಗಿ ಮಟ್ಕಾ ಚೀಟಿ ಬರೆಯುತ್ತಾ ಹಣವನ್ನು ಪಣವನ್ನಾಗಿ ಇಡಲು ಸಾರ್ವಜನಿಕರಿಗೆ ಪ್ರೇರೇಪಿಸುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದು ಚೀಟಿಯನ್ನು ಬರೆದು ಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಸದರಿ ಆಸಾಮಿಗಳನ್ನು ಸುತ್ತುವರೆದು ಹಿಡಿದುಕೊಳ್ಳುವಷ್ಟರಲ್ಲಿ ಹಣವನ್ನು ಪಡೆದುಕೊಳ್ಳುವನು ಹಣವನ್ನು ಸ್ಥಳದಲ್ಲಿ ಬಿಸಾಡಿ ಓಡಿಹೋಗಿದ್ದು, ಚೀಟಿಯನ್ನು ಬರೆದುಕೊಡುತ್ತಿದ್ದ ಆಸಾಮಿಯನ್ನು ವಶಕ್ಕೆ ಪಡೆದು ಹೆಸರು ಮತ್ತು ವಿಳಾಸ ಕೇಳಲಾಗಿ ಈಶ್ವರಪ್ಪ@ಈಶ್ವರ ಬಿನ್ ಲೇಟ್ ನಾರಾಯಣಮೂರ್ತಿ, 45 ವರ್ಷ, ಬಲಜಿಗ ಜನಾಂಗ, ಜಿರಾಯ್ತಿ ಕೆಲಸ, ವಾಸ: ಉಪ್ಪರಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಆಸಾಮಿಯ ಅಂಗಶೋಧನೆ ಮಾಡಿ ನೋಡಲಾಗಿ ಒಂದು ಮಟ್ಕಾ ಚೀಟಿ, ಒಂದು ಬಾಲ್ ಪೆನ್ನು ಇತ್ತು. ಸ್ಥಳದಲ್ಲಿ ಬಿಸಾಡಿದ್ದ ಹಣವನ್ನು ಪರಿಶೀಲಿಸಲಾಗಿ  460/- ರೂಗಳು ನಗದು ಹಣ ಇತ್ತು. ಓಡಿ ಹೋದ ಆಸಾಮಿಯ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಹರೀಶ ಬಿನ್ ಪ್ರಕಾಶ್, 26 ವರ್ಷ, ಬಲಜಿಗರು ಕೂಲಿಕೆಲಸ, 7ನೇ ವಾರ್ಡ್ ಗಾಯತ್ರಿದೇವಸ್ಥಾನದ ಹಿಂಭಾಗ, ಗುಡಿಬಂಡೆ ಟೌನ್ ಎಂತ ತಿಳಿಯಿತು. ಸದರಿ ಸ್ಥಳದಲ್ಲಿ ಪಂಚಾಯ್ತಿದಾರರ ಸಮಕ್ಷಮದಲ್ಲಿ ಸಂಜೆ 5-15 ಗಂಟೆಯಿಂದ ಸಂಜೆ 6-15 ಘಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು, ಆರೋಪಿಯನ್ನು ವಶಕ್ಕೆ ಪಡೆದು ಅಸಲು ಪಂಚನಾಮೆ, ಮಾಲುಗಳು ಹಾಗೂ ಆರೋಪಿಯೊಂದಿಗೆ ಠಾಣೆಗೆ ಸಂಜೆ 6-30 ಗಂಟೆಗೆ ಬಂದು ವರಧಿಯನ್ನು ಸಿದ್ದಪಡಿಸಿ ಸಂಜೆ 7-00 ಗಂಟೆಗೆ ವರಧಿಯನ್ನು ಸಿದ್ದಪಡಿಸಿ ಮೇಲ್ಕಂಡ ಮಾಲುಗಳು ಹಾಗೂ ಅಸಲು ಪಂಚನಾಮೆಯನ್ನು ಆರೋಪಿತನನು ಮುಂದಿನ ಕ್ರಮದ ಬಗ್ಗೆ ನೀಡುತ್ತಿದ್ದು, ಆರೋಪಿತನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

20. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.229/2021 ಕಲಂ. 379 ಐ.ಪಿ.ಸಿ:-

     ದಿನಾಂಕ: 20.09.2021 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ನವೀನ್ ಬಿ.ವಿ. ಬಿನ್ ಲೇಟ್ ಬೀಮಪ್ಪ. 23 ವರ್ಷ, ಬೋವಿ ಜನಾಂಗ, ವರ್ಲಕೊಂಡ ಗ್ರಾಮ, ಸೋಮೇನಹಳ್ಳಿ ಹೋಬಳಿ, ಗುಡಿಬಂಡೆ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂಧರೆ ವರ್ಲಕೊಂಡ ಗ್ರಾಮದ ಸಮೀಪವಿರುವ ರೆಡ್ಡಿ ಡಾಭದ ಎದುರು ಇರುವ ಸರ್ವೆ ನಂಬರ್ 3/1 ಬಿ4 ರಲ್ಲಿ ಲೇಟ್ ಅಶ್ವತ್ಥಮ್ಮನವರ ತೋಟದ ಮನೆಯಲ್ಲಿ ನಾವು ವಾಸವಾಗಿರುತ್ತೇವೆ. ದಿ:19.09.2021 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ನಮ್ಮ ದೊಡ್ಡಪ್ಪ ವಿ.ಗೋಪಾಲ ಬಿನ್ ಲೇಟ್ ವೆಂಕಟರಾಮಪ್ಪನವರ ಬಾಬತ್ತು ಕೆ.ಎ.04.ವೈ. 5407 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನವನ್ನು ನಮ್ಮ ಮನೆಯ ಬಳಿ ನಿಲ್ಲಿಸಿರುತ್ತೇವೆ, ಬೆಳಿಗ್ಗೆ 6-00 ಗಂಟೆ ಸಮಯದಲ್ಲಿ ನೋಡಿದಾಗ ದ್ವಿಚಕ್ರ ವಾಹನ ಸ್ಥಳದಲ್ಲಿ ಇರಲಿಲ್ಲ. ಸುತ್ತ ಮುತ್ತ ಹುಡುಕಲಾಗಿ ಸಿಕ್ಕಿರುವುದಿಲ್ಲ. ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ದ್ವಿಚಕ್ರ ವಾಹನದ ಈಗಿನ ಅಂದಾಜು ಬೆಲೆ 20000/- (ಇಪ್ಪತ್ತು ಸಾವಿರ) ರೂಗಳು ಆಗಿರುತ್ತೆ. ಸದರಿ ದ್ವಿಚಕ್ರ ವಾಹನ ಕಳ್ಳತನ ಮಾಡಿಕೊಂಡು ಹೋಗಿರುವವರನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಕೈಗೊಂಡು, ನಮ್ಮ ಬಾಬತ್ತು ದ್ವಿಚಕ್ರ ವಾಹನವನ್ನು ಪತ್ತೆ ಮಾಡಿಕೊಡಲು ಕೋರಿದೆ ಎಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

 

21. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.96/2021 ಕಲಂ. 143,447,427,504,506,149 ಐ.ಪಿ.ಸಿ:-

     ದಿನಾಂಕ 19/09/2021 ರಂದು ಸಂಜೆ 6.00 ಗಂಟೆಗೆ ಪಿರ್ಯಾಧಿದಾರರಾದ ಎಂ.ಎಸ್.ಶಿವಣ್ಣ ಬಿನ್ ಲೇಟ್ ಶ್ರೀರಾಮರೆಡ್ಡಿ, 45 ವರ್ಷ,ವಕ್ಕಲಿಗರು, ಜಿರಾಯ್ತಿ,ಮರಿನಾಯಕನಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,ಚಿಕ್ಕಕರಕಮಾಕಲಹಳ್ಳಿ ಗ್ರಾಮದ ಸರ್ವೆ ನಂ 76 ರ ವಿಸ್ತೀರ್ಣ 4 ಎಕರೆ 10 ಗುಂಟೆ ಜಮೀನಿಗೆ ಸಂಬಂಧಿಸಿದಂತೆ  ತಾನು ಮತ್ತು ತನ್ನ ತಮ್ಮ ಬೈಯಾರೆಡ್ಡಿ ಹಕ್ಕುಳ್ಳ ಮಾಲೀಕರಾಗಿ ಸ್ವಾಧೀನಾನುಭವದಲ್ಲಿರುತ್ತೇವೆ. ದಿನಾಂಕ 19/09/2021 ರಂದು ಬೆಳಿಗ್ಗೆ 11.30 ಗಂಟೆ ಸಮಯದಲ್ಲಿ ಚಿಕ್ಕಕರಕಮಾಕಲಹಳ್ಳಿ ಗ್ರಾಮದ ಚೌಡಪ್ಪ, ನರಸಿಂಹಪ್ಪ, ನಾಗೇಶ, ಮಂಜುನಾಥ, ಶ್ರೀರಾಮ, ಶಂಕರಪ್ಪ ಮತ್ತಿತರೆ ಅಪರಿಚಿತ 5 ಜನರು ತಮ್ಮ ಬಾಬತ್ತು ಸರ್ವೆ ನಂ 76 ರಲ್ಲಿ ಅನಧಿಕೃತವಾಗಿ ಅಕ್ರಮ ಪ್ರವೇಶ ಮಾಡಿ ಸದರಿ ಜಮೀನಿನಗೆ ಕಾಂಪೌಂಡ್ ಹಾಕಲಾಗಿದ್ದು, ಅದರ ಕಲ್ಲು ಕೂಚ ಮತ್ತು ಮುಳ್ಳುತಂತಿ ಬೇಲಿಯನ್ನು ಧ್ವಂಸಗೊಳಿಸಿರುತ್ತಾರೆ. ಸುಮಾರು 70 ಕಲ್ಲುಕೂಚಗಳನ್ನು ಹೊಡೆದು ಮುರಿದು ಹಾಕಿದ್ದು, ಮುಳ್ಳುತಂತಿ ನಾಶ ಮಾಡಿದ್ದು, ಸುಮಾರು 2,00,000/-(ಎರಡು ಲಕ್ಷ ರೂಗಳು) ನಷ್ಟ ಉಂಟುಮಾಡಿರುತ್ತಾರೆ. ಈ ಕೃತ್ಯವನ್ನುಮಾಡುತ್ತಿದ್ದಾಗ ತಾನು ತನ್ನ ಸ್ವಗ್ರಾಮ ಮರಿನಾಯಕನಹಳ್ಳಿ ಯಿಂದ ಮುರಗಮಲ್ಲ ಕಡೆಗೆ ಹೋಗುತ್ತಿದ್ದು, ಈ ದುಷ್ಕೃತ್ಯವೆಸಗುತ್ತಿದ್ದನ್ನು ನೋಡಿ ಕೇಳಲಾಗಿ ಸದರಿ ಆಸಾಮಿಗಳು ತನ್ನನ್ನು ಸಾಯಿಸಿ ಎಂದು ಕೂಗಿಕೊಂಡು ಮುನ್ನುಗ್ಗಿ ಮಚ್ಚುಗಳಿಂದ ಹಲ್ಲೆ ಮಾಡಲು ಮುಂದಾದಾಗ ತಾನು ದ್ವಿಚಕ್ರವಾಹನದಲ್ಲಿ ತಪ್ಪಿಸಿಕೊಂಡು ಮುಂದೆ  ಹೋಗುತ್ತಿದ್ದಾಗ ಈ ದಿನ ತಪ್ಪಿಸಿಕೊಂಡದ್ದೀಯ ನಿನ್ನ ಮುಂದೊಂದು ದಿನ ಕೊಲೆ ಮಾಡಿ ಬಿಸಾಕುತ್ತೇವೆಂದು ಕೊಲೆ ಬೆದರಿಕೆ ಹಾಕಿರುತ್ತಾರೆ. ಸದರಿ ಘಟನೆ ನಡೆಯುವ ಸಮಯದಲ್ಲಿ ಸ್ವಲ್ಪ ದೂರದಲ್ಲಿ ತಮ್ಮ ಗ್ರಾಮದ ಬಾಲಾಜಿ ಮತ್ತು ಚೇತನ್ ರವರು ನೋಡಿ ತನಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿರುತ್ತಾರೆ. ಸದರಿ ಜಮೀನಿಗೆ ಸಂಬಂಧಿಸಿದಂತೆ ಮೇಲ್ಕಂಡ ಆಸಾಮಿಗಳ ವಿರುದ್ದ ಅನೇಕ ದೂರುಗಳಿದ್ದು, ತಮ್ಮ ಪರವಾಗಿ ಓ.ಎಸ್ ಸಂಖ್ಯೆ 99/2004 ರಂತೆ ಶಾಶ್ವತ ನಿರ್ಭಂದಾಜ್ಞೆ ಆದೇಶವಾಗಿರುತ್ತದೆ.ತಮಗೆ ರಕ್ಷಣೆ ಕೋರಿ ಹಾಕಿದ್ದ W.P 709/2006 & CCC NO 484/2007 ರಂತೆ ರಕ್ಷಣೆಗೆ ಆದೇಶವಾಗಿದ್ದು, ಅದರಂತೆ ರಕ್ಷಣೆ ನೀಡಲಾಗಿರುತ್ತದೆ. ಆದ್ದರಿಂದ ತಾವುಗಳು ಮೇಲ್ಕಂಡ ಆಸಾಮಿಗಳಾದ ಚೌಡಪ್ಪ, ನರಸಿಂಹಪ್ಪ, ನಾಗೇಶ, ಮಂಜುನಾಥ, ಶ್ರೀರಾಮ, ಶಂಕರಪ್ಪ ಇತರೆ 5 ಜನರ ವಿರುದ್ದ  ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.

 

22. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.171/2021 ಕಲಂ. 279,337,304(A) ಐ.ಪಿ.ಸಿ:-

     ದಿನಾಂಕ:20/09/2021 ರಂದು ಬೆಳಗ್ಗೆ 00.30 ಗಂಟೆಗೆ ಪಿರ್ಯಾದಿದಾರರಾದ ನಟರಾಜ ಬಿನ್ ರೆಡ್ಡಿ, 22 ವರ್ಷ, ಪ.ಜಾತಿ, ಖಾಸಗಿ ಕಂಪನಿಯಲ್ಲಿ ಕೆಲಸ, ವಾಸ:ಬನವಾತಿ ಗ್ರಾಮ, ಆರೂಡಿ ಪಂಚಾಯಿತಿ, ದೊಡ್ಡಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:19.09.2021 ರಂದು ತನ್ನ ಭಾವನಾದ ಗಂಗರಾಜ ಬಿನ್ ನರಸಿಂಹಪ್ಪ ರವರು ಫೋನ್ ಮಾಡಿ ಗಗನ ಮತ್ತು ಉಪೇಂದ್ರ ರವರಿಗೆ ಅಪಘಾತವಾಗಿರುತ್ತದೆ ಬೇಗ ಬಾ ಎಂದು ತಿಳಿಸಿದ್ದು ಬಂದು ನೋಡಿ ವಿಚಾರ ಮಾಡಲಾಗಿ ನನ್ನ ತಂಗಿಯಾದ ಗಗನ ಹಾಗೂ ಉಪೇಂದ್ರ ರವರು ಉಪೇಂದ್ರ ರವರಿಗೆ ಸೇರಿದ ದ್ವಿಚಕ್ರ ವಾಹನ ಸಂಖ್ಯೆ KA-40-EE-1901 ರಲ್ಲಿ ತನ್ನ ತಾಯಿಯಾದ ಹನುಮಕ್ಕ ರವರು ಬನವಾತಿ ಗ್ರಾಮಕ್ಕೆ ಬರಲು ತಿಳಿಸಿದ್ದರಿಂದ ಪುಲಗಾನಹಳ್ಳಿ ಗ್ರಾಮದಿಂದ ಉಪೇಂದ್ರ ಹಾಗೂ ನನ್ನ ತಂಗಿ ಗಗನ ರವರು ಸುಮಾರು 6.00 ಗಂಟೆಗೆ ಮನೆಯನ್ನು ಬಿಟ್ಟು ಊರಿಗೆ ಬರುವಾಗ ಅಗ್ರಹಾರ-ಹೊಸಹಳ್ಳಿ (ವಡ್ಡನಹಳ್ಳಿ ಗೇಟ್) ಸಮೀಪ ಬರುತ್ತದ್ದಾಗ  ರಸ್ತೆಯಲ್ಲಿ ಸೀಮೆ ಹಸು ಅಡ್ಡ ಬಂದಿದ್ದು ವಾಹನ ಚಾಲನೆ ಮಾಡುತ್ತಿದ್ದ ಉಪೇಂದ್ರ ರವರು ವಾಹನವನ್ನು ನಿಯಂತ್ರಿಸಲು ಬ್ರೇಕ್ ಇಡಿದ ಪರಿಣಾಮ ಚಾಲನೆ ಮಾಡುತ್ತಿದ್ದ ಉಪೇಂದ್ರ ಹಾಗೂ ಹಿಂಬದಿ ಕುಳಿತಿದ್ದ ಗಗನ ರವರು ಕೆಳಗಡೆ ಬಿದ್ದು ಗಗನ ರವರಿಗೆ ಬಲಕಿವಿಯಲ್ಲಿ ರಕ್ತ ಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಉಪೇಂದ್ರ ರವರಿಗೆ ಬಲವಾದ ಗಾಯವಾಗಿರುತ್ತದೆ. ತಕ್ಷಣ ಅವರನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು ವೈದ್ಯಾಧಿಕಾರಿಗಳು ಉಪೇಂದ್ರ ರವರನ್ನು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಿರುತ್ತಾರೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಇರುವುದಿಲ್ಲ. ಉಪೇಂದ್ರ ರವರು ಸೀಮೆಹಸು ಅಡ್ಡಬಂದಿದ್ದರಿಂದ  ಆಕಸ್ಮಿಕವಾಗಿ ಆಯಾ ತಪ್ಪಿ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಿಂದ ಈ ಅಪಘಾತವು ಸಂಭವಿಸಿ ನನ್ನ ತಂಗಿ ಗಗನ ರವರು ಮೃತಪಟ್ಟಿರುತ್ತಾರೆ. ಆದ್ದರಿಂದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

 

23. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.99/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ-20-09-2021 ರಂದು ನ್ಯಾಯಾಲಯದ ಸಿಬ್ಬಂದಿ ಪಿಸಿ-174 ಯಮನೂರಪ್ಪ ಹದರಿ ರವರು ಠಾಣಾ ಎನ್ ಸಿ ಆರ್ ನಂ 136/2021 ರಲ್ಲಿ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಹಾಜರುಪಡಿಸಿದ್ದು,ಪರಿಶೀಲಿಸಿ ದಾಖಲಿಸಿದ ಪ್ರಕರಣದ ಸಾರಾಂಶವೆನೆಂದರೆ ದಿನಾಂಕ:19-09-2021 ರಂದು ಮದ್ಯಾಹ್ನ 13-00ಗಂಟೆಯಲ್ಲಿ ಕರ್ತವ್ಯದಲ್ಲಿದ್ದಾಗ ಮಾನ್ಯ  ಸಿಪಿಐ ಸಾಹೇಬರಿಗೆ ಬಂದ  ಮಾಹಿತಿ ಮೇರೆಗೆ ದಾಳಿ ಮಾಡಲು ತನ್ನನ್ನು & ಪಿಸಿ-281 ರವರನ್ನು ಕಳುಹಿಸಿಕೊಟ್ಟಿರುವುದಾಗಿ ತಾವು ದಾಳಿ ಮಾಡಲು ಪಂಚರನ್ನು ಕರೆದುಕೊಂಡು ಹೋಗಿ ಬೆಸ್ತಲಪಲ್ಲಿ ಗ್ರಾಮದ ವೆಂಕಟರವಣಪ್ಪ ರವರ ಹೋಟೇಲ್ ನಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ವೆಂಕಟರವಣಪ್ಪ ರವರು ತಮ್ಮ ಹೋಟೇಲ್ ಬಳಿ ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸದರಿ ಸ್ಥಳಕ್ಕೆ ಹೋಗುವಷ್ಟರಲ್ಲಿ ಸ್ಥಳದಲ್ಲಿ ಮಧ್ಯಸೇವನೆ ಮಾಡುತ್ತಿದ್ದ ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕ ಓಡಿ ಹೋಗಿದ್ದು, ಮಾಲೀಕರ ಹೆಸರು& ವಿಳಾಸ ಕೇಳಿ ತಿಳಿಯಲಾಗಿ ವೆಂಟಕರವಣಪ್ಪ ಬಿನ್ ಸುಬ್ಬರಾಯಪ್ಪ, 45 ವರ್ಷ, ಒಕ್ಕಲಿಗರು, ವ್ಯಾಪಾರ, ಬೆಸ್ತಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿದು ಬಂದಿದ್ದು, ಸ್ಥಳದಲ್ಲಿ 180 ML ನ Old Tavern Whisky ಯ 10 ಟೆಟ್ರಾ ಪಾಕೇಟ್ ಗಳಿದ್ದು,(1ಲೀಟರ್ 800 ಎಂ,ಎಲ್ ಅದರ ಬೆಲೆ 867/-ರೂ) ಗಳು., 1 ವಾಟರ್ ಬಾಟಲ್, 1 ಪ್ಲಾಸ್ಟಿಕ್ ಗ್ಲಾಸ್, 180 ML ನ Old Tavern Whisky ಯ 1 ಖಾಲಿ ಟೆಟ್ರಾ ಪಾಕೇಟ್ ಇದ್ದು, ಮದ್ಯಾಹ್ನ 14-00 ಗಂಟೆಯಿಂದ 14-45 ಗಂಟೆಯವರೆಗೆ ಪಂಚನಾಮೆ ಮೂಲಕ ಸದರಿಯವುಗಳನ್ನು ಅಮಾನತ್ತುಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

24. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.100/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ : 20-09-2021 ರಂದು ನ್ಯಾಯಾಲಯ  ಕರ್ತವ್ಯದ ಸಿಬ್ಬಂದಿ ಸಿಪಿಸಿ-174 ಯಮನೂರಪ್ಪ ಹದರಿ ರವರು ಠಾಣಾ ಎನ್ ಸಿ ಆರ್ ನಂ.137/2021 ರಲ್ಲಿ ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ಬಂದು ಹಾಜರುಪಡಸಿದ್ದು, ಪರಿಶೀಲಿಸಿ ಧಾಖಲಿಸಿದ ಪ್ರಕರಣದ ಸಾರಾಂಶವೆನೆಂದರೆ. ದಿನಾಂಕ:19-09-2021 ರಂದು ಸಂಜೆ 16-00 ಗಂಟೆಯಲ್ಲಿ ಕರ್ತವ್ಯದಲ್ಲಿದ್ದಾಗ ಮಾನ್ಯ ಸಿ.ಪಿ.ಐ., ಚೇಳೂರು ವೃತ್ತ ರವರು ತನ್ನನ್ನು ಕರೆದು ಬಾಗೇಪಲ್ಲಿ ತಾಲ್ಲೂಕು ಬಿಳ್ಳೂರು ಕ್ರಾಸ್ ಬಳಿ ಕಾಮಸಾನಿಪಲ್ಲಿ ಗ್ರಾಮದ ಶಿವಾರೆಡ್ಡಿ ಬಿನ್ ನಾರಾಯಣಪ್ಪ ರವರು ತಮ್ಮ ಬಾಬತ್ತು ಹೋಟೇಲ್ ಬಳಿ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತಮಗೆ ಮಾಹಿತಿ ಬಂದಿದ್ದು, ದಾಳಿ ಮಾಡಲು ತನ್ನನ್ನು ಮತ್ತು ಸಿಪಿಸಿ-281 ಶಂಕ್ರಪ್ಪ ಕಿರವಾಡಿ ರವರನ್ನು ಕಳುಹಿಸಿಕೊಟ್ಟಿದ್ದು, ಅದರಂತೆ ನಾವಿಬ್ಬರೂ ದಾಳಿ ಮಾಡುವ ಸಲುವಾಗಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮೇಲ್ಕಂಡ ಶಿವಾರೆಡ್ಡಿ ಬಿನ್ ನಾರಾಯಣಪ್ಪ ರವರು ತಮ್ಮ ಹೋಟೇಲ್ ಬಳಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ನಂತರ ನಾವುಗಳು ಅಲ್ಲಿಗೆ ಹೋಗುತ್ತಿದ್ದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಆಸಾಮಿಗಳು ಹಾಗೂ ಅಂಗಡಿ ಮಾಲೀಕರು ಅಲ್ಲಿಂದ ಓಡಿ ಹೋಗಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸ ತಿಳಿಯಲಾಗಿ ಶಿವಾರೆಡ್ಡಿ ಬಿನ್ ನಾರಾಯಣಪ್ಪ, 45 ವರ್ಷ, ಒಕ್ಕಲಿಗರು, ಹೋಟೇಲ್ ವ್ಯಾಪಾರ, ವಾಸ:ಕಾಮಸಾನಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿದು ಬಂದಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 90 ಎಂ.ಎಲ್.ನ ಹೈವಾಡ್ಸ ಚಿಯರ್ಸ್ ವಿಸ್ಕಿಯ 15 ಟೆಟ್ರಾ ಪ್ಯಾಕೆಟ್ ಗಳು ಇದ್ದು, (1 ಲೀಟರ್ 350 ಎಂ.ಎಲ್, ಅದರ ಬೆಲೆ 525/-ರೂಗಳು), ಒಂದು ಲೀಟರನ ಒಂದು ಖಾಲಿ ಪ್ಲಾಸ್ಟಿಕ್ ವಾಟರ್ ಬಾಟಲ್, 1 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಮತ್ತು 180 ಎಂ.ಎಲ್ ನ ಒಂದು ಹೈವಾಡ್ಸ ಚಿಯರ್ಸ್ ಖಾಲಿ ಟೆಟ್ರಾ ಪ್ಯಾಕೆಟ್ ಇದ್ದು, ಮೇಲ್ಕಂಡ ಮಾಲುಗಳನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ಮದ್ಯಾಹ್ನ 17-00 ಗಂಟೆಯಿಂದ 17-45 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡು ಅಸಲು ಪಂಚನಾಮೆ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಮೇಲ್ಕಂಡ ಶಿವಾರೆಡ್ಡಿ ಬಿನ್ ನಾರಾಯಣಪ್ಪ ರವರ ವಿರುದ್ದ ಸೂಕ್ತ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

25. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.117/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:-19-09-2021 ರಂದು ಸಂಜೆ 06:15 ಗಂಟೆಗೆ ಪಿಎಸ್ಐ (ಕಾ&ಸು) ರವರು ಆರೋಪಿಗಳು ಮತ್ತು ಮಾಲುಗಳನ್ನು ಮಹಜರ್ ನೊಂದಿಗೆ ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ , ದಿನಾಂಕ:-19-09-2021 ರಂದು ಮದ್ಯಾಹ್ನ 3.30 ಗಂಟೆಯಲ್ಲಿ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ.ಸು) ಕೆ.ಸತೀಶ್ ಆದ ನಾನು ಠಾಣೆಯ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್, ಸಂತೋಷನಗರದ ಹಳೆಯ ಇಟ್ಟಿಗೆ ಪ್ಯಾಕ್ಟರಿ ಬಳಿ ಇರುವ ಖಾಲಿ ಜಾಗದಲ್ಲಿ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡಿರುತ್ತೆ. ನಂತರ ದಾಳಿ ಮಾಡಲು ಸಿಬ್ಬಂದಿಯವರಾದ ಹೆಚ್.ಸಿ 95, ಪ್ರಕಾಶ್, ಪಿ.ಸಿ-280 ಶಶಿಕುಮಾರ್ ಪಿ.ಸಿ-327 ಮುರಳಿ ಕೃಷ್ಣೇಗೌಡ ಹಾಗೂ ಪಂಚಾಯ್ತಿದಾರರನ್ನು ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಸಂಜೆ 5-15 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 100/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 100/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿದಾಗ ನಮ್ಮನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಸಿಬ್ಬಂದಿಯವರು ಹಿಂಬಾಲಿಸಿ ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1] ಖಾದರ್ ಬಾಷ ಬಿನ್ ಮುಬಾರಕ್ , 26 ವರ್ಷ, ಮುಸ್ಲಿಂ, ರೇಷ್ಮೆ ಹುಳು ಹೊಡೆಯುವ ಕೆಲಸ, ಅಶ್ರಯ ಲೇಔಟ್, ಶಿಡ್ಲಘಟ್ಟ ನಗರ. 2] ನಿಸಾರ್ ಅಹಮದ್ ಬಿನ್ ಮೌಲ, 25 ವರ್ಷ, ಮುಸ್ಲಿಂ, ರೇಷ್ಮೆ ಹುಳು ಹೊಡೆಯುವ ಕೆಲಸ, ರಹಮತ್ ನಗರ. 3] ಮನ್ಸೂರ್ ಬಿನ್ ಸಾಧೀಕ್ ಪಾಷ, 24 ವರ್ಷ, ಮುಸ್ಲಿಂ, ಮೆಕಾನಿಕ್ ಕೆಲಸ, ರಾಜೀವ್ ಗಾಂಧಿ ಲೇಔಟ್, ಶಿಡ್ಲಘಟ್ಟ ನಗರ ಎಂದು ತಿಳಿಸಿದ್ದು. ಇವರುಗಳು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 1200/- ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು, ಇವುಗಳನ್ನು ಸಂಜೆ:05-20 ಗಂಟೆಯಿಂದ 05.50 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ಸಿಕ್ಕಿದ ಮೇಲ್ಕಂಡ 03 ಜನರು ಮತ್ತು ಅಮಾನತ್ತು ಪಡಿಸಿದ ಮಾಲು ಸಮೇತ ಮಹಜರ್ ನೊಂದಿಗೆ ಒಪ್ಪಿಸುತ್ತಿದ್ದು, ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

Last Updated: 20-09-2021 05:58 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080