ಅಭಿಪ್ರಾಯ / ಸಲಹೆಗಳು

 

1. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.113/2021 ಕಲಂ. 143,147,148,323,324,504,506,149 ಐ.ಪಿ.ಸಿ:-

      ದಿನಾಂಕ 19/08/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಪ್ರತಾಪ್ ಬಿನ್ ಸತ್ಯನಾರಾಯಣ 31 ವರ್ಷ ಆದಿಕರ್ನಾಟಕ ಜನಾಂಗ ಹಣ್ಣಿನ ವ್ಯಾಪಾರ ವಾಸ ಗುಟ್ಟಪಾಳ್ಯ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯ ದೂರನ್ನು ಪಡೆದು ಠಾಣಾ ಸಿಬ್ಬಂದಿ HC 176 ರವರು ಸಂಜೆ 18-00 ಗಂಟೆಗೆ ಠಾಣೆಗೆ ಹಾಜರುಪಡಿಸಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ನಾನು ನಮ್ಮ ಗ್ರಾಮದ ವಾಸಿಯಾದ ರೆಡ್ಡಪ್ಪ ಬಿನ್ ವೆಂಕಟಸ್ವಾಮಿ ರವರ ಬಾಬತ್ತು ಸೀತಾಫಲಗಳನ್ನು ಕೊಂಡು ಕೊಂಡಿದ್ದು ನಾನು ಕೊಂಡುಕೊಂಡಿದ್ದ ಸೀತಾಫಲಗಳನ್ನು ನಮ್ಮ ಗ್ರಾಮದ ನಮ್ಮ ಸಂಬಂಧಿಕರಾದ ಸೌಮ್ಯ ಮತ್ತು ಶಾರದ ರವರು ದಿನಾಂಕ 16/08/2021 ರಂದು ಕಿತ್ತುಕೊಂಡು ಹೋಗಿದ್ದು ಈ ವಿಚಾರದಲ್ಲಿ ನಮ್ಮ ಗ್ರಾಮದ ಹಿರಿಯರು ಪಂಚಾಯ್ತಿಯ ಮಾಡಲು ನೆನ್ನೆ ದಿನ ದಿನಾಂಕ 18/08/2021 ರಂದು ಪಂಚಾಯ್ತಿಗೆ ಬರುವಂತೆ ನನಗೆ ತಿಳಿಸಿದರು ಅದಕ್ಕೆ ನಾನು ಒಪ್ಪಿ ಬರುತ್ತೇನೆ ಎಂದು ಹೇಳಿದ್ದೆ ಅದರಂತೆ ನಾನು ನೆನ್ನೆ ದಿನ ದಿನಾಂಕ 18/08/2021 ರಂದು ರಾತ್ರಿ ಸುಮಾರು 9-30 ಗಂಟೆ ಸಮಯದಲ್ಲಿ ಪಂಚಾಯ್ತಿಗೆ ಹೋಗಲೆಂದು ನಮ್ಮ ಮನೆಯ ಮುಂಭಾಗದಲ್ಲಿ ನಿಂತುಕೊಂಡಿದ್ದಾಗ ನಮ್ಮ ಗ್ರಾಮದ ನಮ್ಮ ಸಂಬಂಧಿಕರಾದ ಕದಿರಮ್ಮ W/O  ಮ್ಯಾಕಲವೆಂಕಟಪ್ಪ,ಶಾರದ W/O ಮುನಿರಾಜು,ಸೌಮ್ಯ W/O ಲೇಟ್ ಆಂಜಿ,ಶಕುಂತಲ W/O ಲೇಟ್ ಆಂಜಿ,ವಿಜಯಮ್ಮ W/O ವೆಂಕಟರವಣಪ್ಪ,ಅಭಿ ಬಿನ್ ವೆಂಕಟರವಣಪ್ಪ,ವೆಂಕಟರವಣಪ್ಪ ಬಿನ್ ಚಿನ್ನಪ್ಪ,ನರಸಿಂಹ ಬಿನ್ ನಾರಾಯಣಸ್ವಾಮಿ ಮತ್ತು ಅವರ ಸಂಬಂಧಿಕರು ಯಾರೋ 3-4 ಜನ ಅಕ್ರಮ ಗುಂಪು ಕಟ್ಟಿಕೊಂಡು ನನ್ನ ಬಳಿಗೆ ಬಂದು ಶಾರದಮ್ಮ ರವರು ನನ್ನನ್ನು ಕುರಿತು ಲೋಫರ್ ನನ್ನ ಮಗನೇ ಏನೋ ನೀನು ಪಂಚಾಯ್ತಿ ಮಾಡಿಸುವುದು ಎಂದು ಅವಾಚ್ಯವಾಗಿ ಬೈದು ನನ್ನ ಗಲ್ಲಾಪಟ್ಟಿಯನ್ನು ಹಿಡಿದು ಎಳೆದಾಡಿ ಕೈಯಿಂದ ನನ್ನ ಕೆನ್ನೆಗೆ ಹೊಡೆದಳು,ವೆಂಕಟರವಣಪ್ಪ ರವರು ಆತನ ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ದೊಣ್ಣೆಯಿಂದ ನನ್ನ ಹಣೆಯ ಬಲ ಭಾಗಕ್ಕೆ ಹೊಡೆದು ಗಾಯಪಡಿಸಿದನು ಆಗ ಜಗಳ ಬಿಡಿಸಲು ನಮ್ಮ ಚಿಕ್ಕಪ್ಪ ವೆಂಕಟರವಣಪ್ಪ ಬಿನ್ ಲೇಟ್ ವೆಂಕಟರಾಯಪ್ಪ,ನಮ್ಮ ತಂದೆ ಸತ್ಯನಾರಾಯಣ ಬಿನ್ ಲೇಟ್ ವೆಂಕಟರಾಯಪ್ಪ,ನನ್ನ ನಾದಿನಿ ಲಕ್ಷ್ಮೀನರಸಮ್ಮ W/O ಕದಿರಪ್ಪ ರವರು ಅಡ್ಡ ಬಂದಿದಕ್ಕೆ ನರಸಿಂಹರವರು ಆತನ ಕೈಯಲ್ಲಿ ಇದ್ದ ದೊಣ್ಣೆಯಿಂದ ನಮ್ಮ ಚಿಕ್ಕಪ್ಪ ವೆಂಕಟರವಣಪ್ಪ ರವರ ತಲೆಯ ಮುಂಭಾಗದಲ್ಲಿ ಹೊಡೆದು ರಕ್ತಗಾಯವನ್ನು ಉಂಟು ಮಾಡಿದನು ಕದಿರಮ್ಮ ರವರು ವೆಂಕಟರವಣಪ್ಪ ರವರನ್ನು ಕೈಗಳಿಂದ ಹೊಡೆದು ಕಾಲಿನಿಂದ ಒದ್ದರು ಶಾರದ ಮತ್ತು ಸೌಮ್ಯ ರವರು ಲಕ್ಷ್ಮೀನರಸಮ್ಮ ರವರ ಜುಟ್ಟನ್ನು ಹಿಡಿದು ಎಳೆದಾಡಿ ಕೈಗಳಿಂದ ಆಕೆಯನ್ನು ಹೊಡೆದು ಆಕೆಯ ಎಡಕೈ ಮೇಲೆ ಶಾರದ ರವರು ಉಗುರುಗಳಿಂದ ಪರಚಿರುತ್ತಾರೆ ವೆಂಕಟರವಣಪ್ಪ ರವರು ಆತನ ಕೈಯಲ್ಲಿದ್ದ ದೊಣ್ಣೆಯಿಂದ ನಮ್ಮ ತಂದೆ ಸತ್ಯನಾರಾಯಣ ರವರ ಎದೆಗೆ ಹೊಡೆದನು ಶಕುಂತಲಮ್ಮ ರವರು ಮತ್ತು ಅವರೊಂದಿಗೆ ಬಂದಿದ್ದ ಯಾರೋ ಇಬ್ಬರು ನಮ್ಮ ತಂದೆಯನ್ನು ಕೆಳಕ್ಕೆ ತಳ್ಳಿ ಕಾಲಿನಿಂದ ಒದ್ದು ಕೈಗಳಿಂದ ಹೊಡೆದರು ಅಭಿ ಮತ್ತು ವಿಜಯಮ್ಮ ರವರು ನನ್ನ ಮೈಕೈ ಮೇಲೆ ಕೈಗಳಿಂದ ಹೊಡೆದು ಕಾಲಿನಿಂದ ಒದ್ದರು ನಂತರ ಎಲ್ಲರೂ ಸೇರಿಕೊಂಡು ನಮ್ಮನ್ನು ಕುರಿತು ಲೋಫರ್ ನನ್ನ ಮಕ್ಕಳೆ ಹೆಚ್ಚಿಗೆ ಮಾತನಾಡಿದರೆ ನಿಮ್ಮನ್ನು ಸಾಯಿಸಿಬಿಡುತ್ತೇವೆ ಎಂದು ಪ್ರಾಣ ಬೆದರಿಕೆಯನ್ನು ಹಾಕಿದರು ಅಷ್ಟರಲ್ಲಿ ನಮ್ಮ ದೊಡ್ಡಪ್ಪನ ಮಗ ಕದಿರಪ್ಪ ಬಿನ್ ಚಿನ್ನಪ್ಪ,ನನ್ನ ಭಾವಮೈದುನ ಸಂತೋಷ ಬಿನ್ ಮುನಿಶಾಮಿ,ನಮ್ಮ ಗ್ರಾಮದ ಸೋಮಶೇಖರರೆಡ್ಡಿ ಬಿನ್ ವೆಂಕಟಸ್ವಾಮಿರೆಡ್ಡಿ ರವರು ಅಡ್ಡ ಬಂದು ಜಗಳ ಬಿಡಿಸಿದರು ನಂತರ ಗಾಯಗೊಂಡಿದ್ದ ನಾನು ನಮ್ಮ ತಂದೆ ಸತ್ಯನಾರಾಯಣ ನಮ್ಮ ಚಿಕ್ಕಪ್ಪ ವೆಂಕಟರವಣ ರವರು 108 ಅಂಬುಲೆನ್ಸ್ ನಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ದಾಖಲಾಗಿರುತ್ತೇವೆ ವೈದ್ಯರು ನಮ್ಮನ್ನು ಪರೀಕ್ಷಿಸಿ ಚಿಕಿತ್ಸೆಯನ್ನು ನೀಡಿ ನಮ್ಮ ತಂದೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರದ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ ಮೇಲ್ಕಂಡಂತೆ ನಮ್ಮ ಮೇಲೆ ಗಲಾಟೆಯನ್ನು ಮಾಡಿ ಹೊಡೆದು ಹಲ್ಲೆ ಮಾಡಿದವರ ಮೇಲೆ ಕಾನೂನುರೀತ್ಯ ಕ್ರಮ ಕೈಗೊಳ್ಳಲು ಕೋರಿ ನೀಡಿದ ಹೇಳಿಕೆಯ ದೂರಾಗಿದೆ.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.132/2021 ಕಲಂ. 15(A),32(3) ಕೆ.ಇ ಆಕ್ಟ್:-

   ದಿನಾಂಕ:19.08.2021 ರಂದು ಸಂಜೆ 4-10 ಗಂಟೆ ಸಮಯದಲ್ಲಿ ಮಾನ್ಯ ಪಿ,ಎಸ್,ಐ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ ಈ ದಿನ ದಿನಾಂಕ:19.08.2021 ರಂದು ಸಂಜೆ 4-05 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಚಿಕ್ಕಪೈಯಲಗುರ್ಕಿ ಗ್ರಾಮದ ವಾಸಿ ಶ್ರೀನಿವಾಸ ಬಿನ್ ಮುನಿಯಪ್ಪ, 30 ವರ್ಷ, ಆದಿ ಕರ್ನಾಟಕ ಜನಾಂಗ, ವ್ಯಾಪಾರ ವೃತ್ತಿ , ವಾಸ: ಚಿಕ್ಕಪೈಯಲಗುರ್ಕಿ ಗ್ರಾಮ ರವರು ತಮ್ಮ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ನನಗೆ ಖಚಿತ ಮಾಹಿತಿ ಬಂದಿರುತ್ತದೆ. ಈ ಬಗ್ಗೆ ಮೇಲ್ಕಂಡ ಆಸಾಮಿಯ ವಿರುದ್ದ ಕಲಂ: 15[ಎ], 32[3] ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಕೊಳ್ಳಲು  ಸೂಚಿಸಿದ ಮೇರೆಗೆ ಈ ಪ್ರ.ವ.ವರದಿ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.365/2021 ಕಲಂ. 279,304(A) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ 19-08-2021 ರಂದು ಮದ್ಯಾಹ್ನ 15-30 ಗಂಟೆಗೆ ಸಂತೋಷ.ಸಿ.ಕೆ. ಬಿನ್ ವಿ.ಕುಮಾರ್. 22ವರ್ಷ, ಕುಂಬಾರ ಜನಾಂಗ, ಕೆ.ಪಿ.ಟಿ.ಸಿ.ಎಲ್ ಆಪರೆಟರ್ ಕೆಲಸ. ವಾಸ: ಚನ್ನಕೇಶವಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ತಮ್ಮ ತಂದೆ ವಿ. ಕುಮಾರ್ ಮತ್ತು ತಾಯಿ ಶಾಂತಮ್ಮ ರವರಿಗೆ ತಾವು ಒಟ್ಟು ಇಬ್ಬರು ಮಕ್ಕಳಿದ್ದು, ಒಂದನೇ ತಾನು ಮತ್ತು 2 ನೇ ಹೆಮಂತ್ ರವರಾಗಿರುತ್ತೇವೆ. ತಮ್ಮ ತಂದೆ ವಿ.ಕುಮಾರ್ ಬಿನ್ ವೆಂಕಟಪ್ಪ, 45 ವರ್ಷ, ರವರು ವ್ಯವಸಾಯ ಮಾಡಿಕೊಂಡು ಜೀವನ ಮಾಡುತ್ತಿದ್ದು, ತಮ್ಮ ಕುಟುಂಬ ಪೋಷಣೆ ಮಾಡುತ್ತಿದ್ದನು. ದಿನಾಂಕ:19/08/2021 ರಂದು ಬೆಳಿಗ್ಗೆ 7-00 ಗಂಟೆಯ ಸಮಯದಲ್ಲಿ ತಮ್ಮ ತಂದೆ ವಿ.ಕುಮಾರ್ ರವರು ಚಿಂತಾಮಣಿ ತಾಲ್ಲೂಕು ಬೂರಗಮಾಕಲಹಳ್ಳಿ ಗ್ರಾಮದಲ್ಲಿ ತಮ್ಮ ಅತ್ತೆ ಮಗ ಅನಂದ ರವರ ಮದುವೆಗೆ ಹೋಗಿ ಬರುವುದಾಗಿ ತಮಗೆ ಹೇಳಿ ತಮ್ಮ ತಂದೆಯ ಬಾಬತ್ತು ನೊಂದಣಿ ಸಂಖ್ಯೆ ಕೆಎ-40 ಎಸ್ 0244 ರ ಟಿವಿಎಸ್ ಸ್ಟಾರ್ ಸಿಟಿ ಕಂಪನಿಯ ದ್ವಿಚಕ್ರವಾಹನದಲ್ಲಿ ಮನೆಯಿಂದ ಮದುವೆಗೆ ಹೋದರು. ನಂತರ ಇದೇ ದಿನ ಮದ್ಯಾಹ್ನ 13-13 ಗಂಟೆಯ ಸಮಯದಲ್ಲಿ ಯಾರೋ ತಮ್ಮ ತಂದೆಯ ಪೋನ್ ನಿಂದ ತನಗೆ ಪೋನ್ ಮಾಡಿ ಚಿಂತಾಮಣಿ ತಾಲ್ಲೂಕು ಕೆಂದನಹಳ್ಳಿ ಗ್ರಾಮದ ಗೆಟ್ ಬಳಿ ಚಿಂತಾಮಣಿ-ಬೆಂಗಳುರು ಥಾರ್ ರಸ್ತೆಯಲ್ಲಿ ನಿಮ್ಮ ತಂದೆಗೆ ಅಪಘಾತವಾಗಿದೆ ಕೂಡಲೆ ಬನ್ನಿ ಎಂದು ತಿಳಿಸಿದ್ದು, ತಾನು ಮತ್ತು ತಮ್ಮ ಗ್ರಾಮದ ತನ್ನ ಸ್ನೇಹಿತ ನಾಗೇಶ್ ಬಿನ್ ರಾಮಪ್ಪ, 31 ವರ್ಷ, ಕುರುಬರು ರವರು ದ್ವಿಚಕ್ರವಾಹನದಲ್ಲಿ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು, ತಮ್ಮ ತಂದೆಯ ತಲೆಯ ಹಿಂಭಾಕ್ಕೆ, ಬಲಕಾಲಿಗೆ ರಕ್ತಗಾಯಗಳಾಗಿದ್ದು, ಮೂಗಿನಲ್ಲಿ ರಕ್ತ ಬಂದಿದ್ದು, ಮೈ ಕೈ ಮೇಲೆ ತರಚಿದ ಗಾಯಗಳಾಗಿದ್ದವು, ತಾನು ತನ್ನ ತಂದೆಯನ್ನು ಉಪಚರಿಸಿ ವಿಚಾರ ಮಾಡಲಾಗಿ ತಾನು ಬೂರಗಮಾಕಲಹಳ್ಳಿಯಲ್ಲಿ ಮದುವೆ ಮುಗಿಸಿಕೊಂಡು ಕೈವಾರಕ್ಕೆ ಹೋಗಲು ರಸ್ತೆಯ ಎಡ ಬದಿಯಲ್ಲಿ ದ್ವಿಚಕ್ರವಾಹನ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ, ಬೆಂಗಳೂರು ಕಡೆಯಿಂದ ಯಾರೋ ಒಬ್ಬ ಆಸಾಮಿಯು ಆತನ ಬಾಬತ್ತು ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನಗೆ ಮುಂಭಾಗದಿಂದ ಡಿಕ್ಕಿ ಹೊಡೆಸಿ ಅಪಾಘತವನ್ನುಂಟು ಮಾಡಿ ದ್ವಿಚಕ್ರವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋದ ಪರಿಣಾಮ ತಾನು ದ್ವಿಚಕ್ರವಾಹನ ಸಮೇತ ರಸ್ತೆಯಲ್ಲಿ ಬಿದ್ದುಹೋದಾಗ ತನ್ನ ತಲೆಗೆ, ಬಲ ಕಾಲಿಗೆ ರಕ್ತಗಾಯಗಳಾಗಿರುತ್ತೆ. ದ್ವಿಚಕ್ರವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಹೊರಟು ಹೋದ ಪರಿಣಾಮ ದ್ವಿಚಕ್ರವಾಹನದ ನೊಂದಣಿ ಸಂಖ್ಯೆಯನ್ನು ಮತ್ತು ದ್ವಿಚಕ್ರವಾಹನ ಯಾವ ಕಂಪನಿಯದು ಎಂಬುದು ತಾನು ನೋಡಿರುವುದಿಲ್ಲವೆಂದು ವಿಚಾರ ತಿಳಿಸಿದನು. ನಂತರ ತಾವು ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಕಾರನ್ನು ನಿಲ್ಲಿಸಿ ತಮ್ಮ ತಂದೆಯನ್ನು ಕಾರಿನಲ್ಲಿ ಚಿಕಿತ್ಸೆಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾಗ ಮಾರ್ಗ ಮದ್ಯೆ ನಮ್ಮ ತಂದೆ ವಿ.ಕುಮಾರ್ ರವರು ಅಪಘಾತದಿಂದುಂಟಾದ ಗಾಯಗಳಿಂದ ಮೃತಪಟ್ಟಿರುತ್ತಾರೆ. ಆದ್ದರಿಂದ ತನ್ನ ತಂದೆಗೆ ಅಪಘಾತವನ್ನುಂಟು ಮಾಡಿ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುವ ದ್ವಿಚಕ್ರವಾಹನ ಮತ್ತು ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಕೋರಿರುತ್ತೆ.

ಇತ್ತೀಚಿನ ನವೀಕರಣ​ : 20-08-2021 05:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080