ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.197/2021 ಕಲಂ. ಮನುಷ್ಯ ಕಾಣೆ:-

  ದಿನಾಂಕ:19/07/2021 ರಂದು ಮದ್ಯಾಹ್ನ 3-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ನಾಗರಾಜ ಬಿನ್ ಲೇಟ್ ಅಂಜಿನಪ್ಪ್ಪ, 48 ವರ್ಷ, ಆದಿಕರ್ನಾಟಕ ಜನಾಂಗ, ಜಿರಾಯ್ತಿ, ವಾಸ ಕೊಂಡರೆಡ್ಡಿಪಲ್ಲ್ಲಿ ಗ್ರಾಮ, ಪರಗೋಡು ಪಂಚಾಯ್ತಿ, ಬಾಗೇಪಲ್ಲಿ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನನಗೆ ಇಬ್ಬರು ಮಕ್ಕಳಿದ್ದು, ಹಿರಿಯ ಮಗನಾದ 29 ವರ್ಷ ವಯಸ್ಸಿನ ಸುರೇಶ ರವರು ಬಾಗೇಪಲ್ಲಿ ಟೌನಿನಲ್ಲಿ ಸೈಬರ್ ಸೆಂಟರ್ ಇಟ್ಟುಕೊಂಡಿದ್ದನು. ಹಾಗೂ ನಮ್ಮ ಗ್ರಾಮದಲ್ಲಿ ಸ್ವಂತ ಇಟ್ಟಿಗೆ ಪ್ಯಾಕ್ಟರಿಯನ್ನು ಸಹ ನಡೆಸುತ್ತಿದ್ದನು. ದಿನಾಂಕ; 16.07.2021 ರಂದು ಮದ್ಯಾಹ್ನ ಸುಮಾರು  12-00 ಗಂಟೆಯ ಸಮಯದಲ್ಲಿ ನನ್ನ ಮಗ ಸುರೇಶನು ಸೈಬರ್ ಸೆಂಟರ್ ಅಂಗಡಿಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋದವನು ಇದುವರೆವಿಗೂ ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾನೆ. ನನ್ನ ಮಗನ ಮೊಬೈಲ್ ನಂ. 9535669359 ಆಗಿದ್ದು, ಸದರಿ ಮೊಬೈಲ್ ಪೋನ್ ಮಾಡಿದಾಗ ಸ್ವಿಚ್ ಆಫ್ ಬರುತ್ತಿದೆ. ಈ ಬಗ್ಗೆ ನಾವು ನಮ್ಮ ಸಂಬಂಧಿಕರ ಹಾಗೂ ಪರಿಚಯಸ್ಥರ ಮನೆಗಳಲ್ಲಿ ಹುಡಕಾಡಿ ಪತ್ತೆಯಾಗದೇ ಇದ್ದುದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾಣೆಯಾದ ನನ್ನ ಮಗ ಸುರೇಶ ರವರನ್ನು ಪತ್ತೆ ಮಾಡಿಕೊಡಲು ಕೋರಿ ನೀಡಿದ ದೂರು. 

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.198/2021 ಕಲಂ. 78(3) ಕೆ.ಪಿ ಆಕ್ಟ್ :-

  ದಿನಾಂಕ: ದಿನಾಂಕ:17/07/2021 ರಂದು  ಹೆಚ್ ಸಿ-212 ಶ್ರೀನಾಥ  ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು,ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಮದ್ಯಾಹ್ನ 1-30 ಗಂಟೆ ಸಮಯದಲ್ಲಿ ಗೂಳೂರು ಹೊರ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು, ಗೂಳೂರು ಹೋಬಳಿ, ಮಾರಾಗಾನಕುಂಟೆ ಗ್ರಾಮದ ಬಳಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕ ಸ್ಥಳದಲ್ಲಿ, ಕಾನೂನು ಬಾಹಿರವಾಗಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ್ತಾ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಸಿ ಪಿ ಸಿ-387 ಮೋಹನ್ ಕುಮಾರ್ ರವರೊಂದಿಗೆ  ದ್ವಿಚಕ್ರ ವಾಹನದಲ್ಲಿ ಹೊರಟು ಮಾರಾಗಾನಕುಂಟೆ ಗ್ರಾಮದ ಬಳಿ ಇದ್ದ  ಪಂಚಾಯ್ತಿದಾರರನ್ನು ಕರೆದುಕೊಂಡು ಮೇಲ್ಕಂಡ ವಿಚಾರವನ್ನು ತಿಳಿಸಿ, ಪಂಚರೊಂದಿಗೆ ಮದ್ಯಾಹ್ನ 1-45 ಗಂಟೆಗೆ ಹೋಗಿ ದ್ವಿಚಕ್ರ ವಾಹನವನ್ನು ನಿಲ್ಲಿಸಿ ನಾವು ಮತ್ತು ಪಂಚರು ನಡೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮನೆಯ ಬಳಿ ಯಾರೋ ಒಬ್ಬ ಆಸಾಮಿ  ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಬನ್ನಿ ಬನ್ನಿ ಮಟ್ಕಾ ಅಂಕಿಗಳನ್ನು  ಬರೆಸಿ 1 ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ಎಂದು ಕೂಗುತ್ತಾ, ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ ಮಟ್ಕಾ ಜೂಜಾಟವಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಆತನನ್ನು ಸುತ್ತುವರೆದು ಹಿಡಿದು ಆತನ ಬಳಿ ಪರಿಶೀಲಿಸಲಾಗಿ  ವಿವಿಧ ಅಂಕಿಗಳು ಬರೆದಿರುವ ಒಂದು  ಮಟ್ಕಾ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ನು ಹಾಗೂ 2150/-ರೂ.ಹಣ ಇದ್ದು,  ಆಸಾಮಿಯ ಹೆಸರು ಮತ್ತು ವಿಳಾಸವನ್ನು  ಕೇಳಲಾಗಿ  ವೆಂಕಟರಾಮಪ್ಪ ಬಿನ್ ಲೇಟ್ ಸುಬ್ಬುರಾಯಪ್ಪ, 55 ವರ್ಷ, ಬಲಜಿಗ ಜನಾಂಗ, ಜಿರಾಯ್ತಿ ವಾಸ: ಮಾರಾಗಾನಕುಂಟೆ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿದ್ದು,  ಸದರಿ ಆಸಾಮಿಗೆ  ಮಟ್ಕಾ ಜೂಜಾಟವಾಡಲು ಯಾವುದಾದರು ಪರವಾನಿಗೆ ಇದೆಯೇ ಎಂದು  ಕೇಳಲಾಗಿ ಆತನು  ಯಾವುದೇ ಪರವಾನಿಗೆ ಇಲ್ಲವೆಂದು  ತಿಳಿಸಿರುತ್ತಾನೆ. ಆತನ ಬಳಿ ಇದ್ದ ಹಣದ ಬಗ್ಗೆ ವಿಚಾರ ಮಾಡಲಾಗಿ ಸಾರ್ವಜನಿಕರಿಂದ ಜೂಜಾಟದ ಸಮಯದಲ್ಲಿ ವಸೂಲಿ ಮಾಡಿದ ಹಣವೆಂದು ತಿಳಿಸಿರುತ್ತಾನೆ. ಪಂಚಾಯ್ತಿದಾರರ ಸಮಕ್ಷಮ ಮದ್ಯಾಹ್ನ 1-45 ಗಂಟೆಯಿಂದ 2-30 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ, ಅಸಲು ಪಂಚನಾಮೆ, ಮಾಲು ಮತ್ತು ಆಸಾಮಿಯನ್ನು ಮದ್ಯಾಹ್ನ 3-00  ಗಂಟೆಗೆ ಠಾಣೆಯಲ್ಲಿ ಮುಂದಿನ ಕ್ರಮಜರುಗಿಸಲು ಕೋರಿ ನೀಡಿದ ವರದಿಯನ್ನು ಪಡೆದು ಠಾಣಾ ಎನ್ ಸಿಆರ್ ನಂ-192/2021 ರಂತೆ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 19-07-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.199/2021 ಕಲಂ. 87 ಕೆ.ಪಿ ಆಕ್ಟ್ :-

  ದಿನಾಂಕ: 18/07/2021 ರಂದು ಸಂಜೆ 5-15 ಗಂಟೆಗೆ  ಶ್ರೀ ನಾಗರಾಜ್ ಡಿ.ಆರ್  ಪೊಲೀಸ್ ಇನ್ಸ್ ಪೆಕ್ಟರ್  ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿಗಳು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ:18-07-2021 ರಂದು ಮದ್ಯಾಹ್ನ 3.45 ಗಂಟೆ ಸಮಯದಲ್ಲಿ  ನಾನು ಮತ್ತು ಸಿಬ್ಬಂದಿಯಾದ  ಸಿಪಿಸಿ 278 ಶಬ್ಬೀರ್ ಊರಾನಮನಿ, ಸಿಪಿಸಿ 319 ವಿನಾಯಕ ವಿಶ್ವಬ್ರಾಹ್ಮಣ ಮತ್ತು ಸಿಪಿಸಿ 418 ಸತ್ಯಪ್ಪ ಕರೆಪ್ಪ ಜಿಟ್ಟಿ ರವರು ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-1444 ಜೀಪ್ ನಲ್ಲಿ ಚಾಲಕ ನೂರ್ ಬಾಷಾ ಸಿಹೆಚ್ ಸಿ 54 ರವರೊಂದಿಗೆ ಬಾಗೇಪಲ್ಲಿ ಪುದಲ್ಲಿ ಗಸ್ತು ನಿರ್ವಹಿಸುತ್ತಿದ್ದಾಗ  ಬಾಗೇಪಲ್ಲಿ ತಾಲ್ಲೂಕು ಕಸಬಾ ಹೋಬಳಿ, ದೇವರಗುಡಿಪಲ್ಲಿ ಗ್ರಾಮದ ಕೆರೆಯ ಬಳಿಯಿರುವ ಖಾಲಿ ಜಾಗದಲ್ಲಿ  ಯಾರೋ ಕೆಲವರು ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟಿನ ಜೂಜಾಟವಾಡುತ್ತಿರುವುದಾಗಿ ಬಾತ್ಮೀದಾರರಿಂದ ಖಚಿತ ಮಾಹಿತಿ ಬಂದಿದ್ದು, ದೇವರಗುಡಿಪಲ್ಲಿ ಗ್ರಾಮದ ಬಸ್ ನಿಲ್ದಾಣಕ್ಕೆ ಹೋಗಿ ಪಂಚರನ್ನು ಬರಮಾಡಿಕೊಂಡು ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ, ದಾಳಿಗೆ ಸಹಕರಿಸಲು ಕೋರಿ, ಪಂಚರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಜೀಪ್ ಮತ್ತು ದ್ವಿಚಕ್ರ ವಾಹನಗಳಲ್ಲಿ ಸಂಜೆ 4.00 ಗಂಟೆಗೆ ದೇವರಗುಡಿಪಲ್ಲಿ ಗ್ರಾಮದ ರಸ್ತೆಯ ಮರೆಯಲ್ಲಿ ಜೀಪ್ ಮತ್ತು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ನಾವು ಮತ್ತು ಪಂಚರು ನಡೆದುಕೊಂಡು ಹೋಗಿ ಸೀಮೆ ಜಾಲಿಮರಗಳ  ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಮೂರು ಜನ ಆಸಾಮಿಗಳು ಗುಂಪಾಗಿ ಕುಳಿತು ಅಂದರ್ 100 ಬಾಹರ್ 100 ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು, ಪಂಚರ ಸಮಕ್ಷಮ ಸಮವಸ್ತ್ರದಲ್ಲಿದ್ದ ನಾನು ಮತ್ತು ಸಿಬ್ಬಂದಿಗಳು ಸುತ್ತಲೂ ಕುಳಿತು ಜೂಜಾಟವಾಡುತ್ತಿದ್ದ ಗುಂಪಿನ ಮೇಲೆ ಧಾಳಿ ಮಾಡಿ ಜೂಜಾಟವಾಡುತ್ತಿದ್ದ ಆಸಾಮಿಗಳಿಗೆ ಓಡಿಹೋಗದಂತೆ ಎಚ್ಚರಿಕೆ ನೀಡಿ ಸುತ್ತುವರೆದು ಆಸಾಮಿಗಳನ್ನು ಹಿಡಿದುಕೊಂಡು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ 1] ಮುನೆಪ್ಪ  ಬಿನ್ ಲೇಟ್ ನಾಗಪ್ಪ,  45 ವರ್ಷ, ಕುರುಬ  ಜನಾಂಗ,  ಜಿರಾಯ್ತಿ,  ವಾಸ ಕಾರಕೂರು ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು, ಈತನ ಬಲಭಾಗದಲ್ಲಿ ಕುಳಿತಿದ್ದ 2] ಸೀನಪ್ಪ  ಬಿನ್ ಲೇಟ್ ವೆಂಕಟರಾಮಪ್ಪ, 48 ವರ್ಷ, ಅಗಸ ಜನಾಂಗ, ಕೂಲಿ ಕೆಲಸ,, ವಾಸ ದೇವರಗುಡಿಪಲ್ಲಿ ಗ್ರಾಮ, ಕಸಬಾ ಹೋಬಳಿ,  ಬಾಗೇಪಲ್ಲಿ ತಾಲ್ಲೂಕು ಈತನ ಬಲಭಾಗದಲ್ಲಿ ಕುಳಿತಿದ್ದ 3] ಅಂಜಿನಪ್ಪ ಬಿನ್ ಲೇಟ್ ಸುಬ್ಬನ್ನ, 56 ವರ್ಷ, ನಾಯಕರು, ಕುರಿ ಕಾಯುವ ಕೆಲಸ, ವಾಸ ದೇವರಗುಡಿಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು. ಎಂದು ತಿಳಿಸಿದರು. ಸದರಿ ಆಸಾಮಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟವಾಡಲು ನಿಮ್ಮ ಬಳಿ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಇಲ್ಲವೆಂದು ತಿಳಿಸಿದರು.  ಸ್ಥಳದಲ್ಲಿ ಆಸಾಮಿಗಳು ಜೂಜಾಟವಾಡಲು ಬಳಸಿದ್ದ  ಒಟ್ಟು 52 ಇಸ್ಪೀಟ್ ಎಲೆಗಳು, ಪಣಕ್ಕಾಗಿ ಇಟ್ಟಿದ್ದ ಒಟ್ಟು 2,360/- ರೂ ಹಣವನ್ನು. ಮತ್ತು ಪ್ಲಾಸ್ಟೀಕ್ ಚೀಲವನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು 3 ಜನ ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಸಂಜೆ 5.15 ಗಂಟೆಗೆ ಹಾಜರಾಗಿ ವರಧಿಯನ್ನು ನೀಡಿ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್ ಸಿಆರ್ ನಂ-193/2021 ರಂತೆ ದಾಖಲಿಸಿಕೊಂಡಿರುತ್ತೆ.  ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 19-07-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

4. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.200/2021 ಕಲಂ. 323,324,504,506,34 ಐ.ಪಿ.ಸಿ:-

  ದಿನಾಂಕ: 20/07/2021 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರರಾದ ಸಾದಿಕ್ ಬಿನ್ ಲೇಟ್ ಅಬ್ದುಲ್ ಅಜೀಜ್ ಸಾಬ್, 44 ವರ್ಷ, ಮುಸ್ಲಿಂ ಜನಾಂಗ, ಮೆಕ್ಯಾನಿಕ್ ಕೆಲಸ, ವಾಸ ರಾಮಕೃಷ್ಣ ಕಲ್ಯಾಣ ಮಂಟಪ, 22ನೇ ವಾರ್ಡ್, ಬಾಗೇಪಲ್ಲಿ ಟೌನ್. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 19/07/2021 ರಂದು ರಾತ್ರಿ ಸುಮಾರು 8-00 ಗಂಟೆ ಸಮಯದಲ್ಲಿ ನಾನು ಮತ್ತು ನಮ್ಮ ಮನೆಯಲ್ಲಿ ಬಾಡಿಗೆದಾರನಾಗಿರುವ ತಬ್ರೇಜ್ ಬಿನ್ ಜಲೀಲ್ ಸಾಬ್ ರವರು ಮನೆಯ ಬಳಿ ಇದ್ದಾಗ ಇದೇ ಬಾಗೇಪಲ್ಲಿ ಟೌನ್ ಬುಜ್ಜಿ ಕ್ಯಾಂಟಿನ್ ಹಿಂಬಾಗದ ಏರಿಯಾದಲ್ಲಿ ವಾಸವಾಗಿರುವ ಸುರೇಶ ನಾಯ್ಡು ಮತ್ತು ಆತನ ಜೊತೆಯಲ್ಲಿದ್ದ ಭಾರ್ಗವ್ ವಾಸ ಪ್ರಗತಿ ಗ್ರಾಮೀಣ ಬ್ಯಾಂಕ್ ಬಳಿ, ಬಾಗೇಪಲ್ಲಿ ಟೌನ್ ರಮೇಶ್ ನಾಯ್ಡು, ವಾಪಸಂದ್ರ ಚಿಕ್ಕಬಳ್ಳಾಪುರ ರವರು 2 ತಿಂಗಳ ಹಿಂದೆ ನನ್ನ ಮಗನಾದ ಮೊಹಮ್ಮದ್ ಇಶ್ರಾಕ್ ರವರಿಗೆ ಹೊಡೆದ ವಿಚಾರವಾಗಿ ನಾನು ಪೊಲೀಸ್ ಠಾಣೆಯಲ್ಲಿ ನೀಡಿದ ವಿಚಾರವಾಗಿ   ದ್ವೇಷವನ್ನು ಇಟ್ಟುಕೊಂಡು ಮೂರು ಜನರು ವಿನಃ ಕಾರಣ ಗಲಾಟೆ ಮಾಡಿ ನನ್ನ ತಂಟೆಗೆ ಬಂದರೆ ನಿನ್ನನ್ನು, ನಿನ್ನ ಮಗನನ್ನು ಸುಮ್ಮನೆ ಬಿಡುವುದಿಲ್ಲವೆಂದು ಅವಾಚ್ಯ ಶಬ್ದಗಳಿಂದ ಬೈಯ್ದು, ಪ್ರಾಣಬೆದರಿಕೆ ಹಾಕಿದ್ದು ನಾನು ಮತ್ತು ತಬ್ರೇಜ್ ರವರು ಪೊಲೀಸ್ ಠಾಣೆಗೆ ಬರಲು ಎಸ್ ಬಿ ಎಂ ಬ್ಯಾಂಕ್ ಬಳಿ ಬರುವಾಗ ನಮ್ಮನ್ನು ಹಿಂಬಾಲಿಸಿಕೊಂಡು ಬಂದು ನನಗೆ ರಮೇಶನಾಯ್ಡು ಕಲ್ಲಿನಿಂದ ತಲೆಗೆ ಮತ್ತು ಮೈ ಕೈಗೆ ಹೊಡೆದು ಗಾಯವನ್ನುಂಟು ಮಾಡಿದ್ದು ನನ್ನ ಜೊತೆಯಲ್ಲಿದ್ದ ತಬ್ರೇಜ್ ರವರಿಗೆ ಬಾರ್ಗವ್ ಮತ್ತು ಸುರೇಶ್ ನಾಯ್ಡು ಇಬ್ಬರು ಕೈ ಗಳಿಂದ ಹೊಡೆದು, ಅಲ್ಲೆ ಬಿದ್ದಿದ್ದ ಕಲ್ಲಿನಿಂದ ತಲೆಗೆ ಹೊಡೆದು ರಕ್ತ ಗಾಯವನ್ನು ಮಾಡಿರುತ್ತಾರೆ. ನನ್ನ ನಮಗೆ ಇಬ್ಬರಿಗೂ ಪ್ರಾಣಬೆದರಿಕೆ ಹಾಕಿ ಓಡಿ ಹೋಗಿರುತ್ತಾರೆ.  ನಂತರ ನಾವು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ  ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು ನನಗೆ ಮತ್ತು  ತಬ್ರೇಜ್ ರವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಕಲ್ಲಿನಿಂದ ಹೊಡೆದು ರಕ್ತ ಗಾಯವನ್ನುಂಟು ಮಾಡಿ, ಪ್ರಾಣ ಬೆದರಿಕೆ ಹಾಕಿರುವ ಮೇಲ್ಕಂಡ ರಮೇಶ್ ನಾಯ್ಡು, ಸುರೇಶ ನಾಯ್ಡು, ಭಾರ್ಗವ್ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿದ ದೂರು.

 

5. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.201/2021 ಕಲಂ. 379 ಐ.ಪಿ.ಸಿ:-

  ದಿನಾಂಕ: 20/07/2021 ರಂದು ಮದ್ಯಾಹ್ನ 12-00 ಗಂಟೆಗೆ ಪಿರ್ಯಾದಿದಾರರಾದ ಅನ್ಸರ್ ಪಾಷ ಬಿನ್ ಸೈಯ್ಯದ್ ಮಹಬೂಬ್ ಸಾಬ್, 57 ವರ್ಷ, ಮುಸ್ಲಿಂ ಜನಾಂಗ, ವೆಲ್ಡಿಂಗ್ ಕೆಲಸ, ವಾಸ: ಕುಂಬಾರಪೇಟೆ, 18ನೇ ವಾರ್ಡ್, ಬಾಗೇಪಲ್ಲಿ ಟೌನ್. ರವರು ಠಾಂಎಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 30/04/2021 ರಂದು ಬೆಳಿಗ್ಗೆ ಸುಮಾರು 10-00 ಗಂಟೆ ಸಮಯದಲ್ಲಿ ಬಾಗೇಪಲ್ಲಿ ಟೌನ್ ಗ್ರಾಮೀಣ ಬ್ಯಾಂಕ್ ರಸ್ತೆಯ ಉಷಾ ಪ್ಯಾಷನ್ ಬಟ್ಟೆ ಅಂಗಡಿಯ ಮುಂಭಾಗ ನನ್ನ ಬಾಬತ್ತು ಕೆಎ-40 ಎಕ್ಸ್-5951 ನೋಂದಣಿ ಸಂಖ್ಯೆಯ ಹೀರೋ ಪ್ಯಾಷನ್ ಪ್ರೋ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದು, ವಾಪಸ್ಸು ಸಂಜೆ 5-00 ಗಂಟೆಗೆ ಬಂದು ನೋಡಲಾಗಿ ಸುಮಾರು 30,000/- ರೂ ಬೆಲೆ ಬಾಳುವ ನನ್ನ ಬಾಬತ್ತು ಮೇಲ್ಕಂಡ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು, ನಾನು ಇದುವರೆಗೂ ಎಲ್ಲಾ ಕಡೆ ಹುಡುಕಾಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ, ಆದ್ದರಿಂದ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ದೂರನ್ನು ನೀಡಿರುತ್ತೆ. ನನ್ನ ದ್ವಿಚಕ್ರವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರು.

 

6. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.110/2021 ಕಲಂ. 279,304(A) ಐ.ಪಿ.ಸಿ & 187 INDIAN MOTOR VEHICLES ACT:-

  ದಿನಾಂಕ;20.07.2021 ರಂದು ಬೆಳಿಗ್ಗೆ 8-00 ಗಂಟೆಗೆ ಪಿರ್ಯಾದಿ ನೀಡಿದ ದೂರಿನ ಸಾರಾಂಶವೆನೆಂದರೆ ತನ್ನ ಸಹೋದರನಾದ ನಾಗರಾಜು ಬಿನ್ ಲೇಟ್ ರೇಣುಕಪ್ಪ ಸುಮಾರು 39 ವರ್ಷ. ರವರು ಆಟೋ ಚಾಲಕನಾಗಿದ್ದು ದಿನಾಂಕ;19-07-2021 ರಂದು  ನಾಗರಾಜು ರವರ ಬಾಬತ್ತು KA 05 C-205 ಆಟೋ ಬಾಡಿಗೆಗಾಗಿ ಪೇರೆಸಂದ್ರದಿಂದ NH44 ರಸ್ತೆ ಮೂಲಕ ಚಿಕ್ಕಬಳ್ಳಾಪುರದ ಕಡೆಗೆ ರಾತ್ರಿ ಸುಮಾರು 11-30 ದೇವಸ್ಥಾನದ ಹೊಸಹಳ್ಳಿ ಗೇಟ್ ಹತ್ತಿರ  ಬರುತ್ತಿದ್ದಾಗ ವಾಹನ ಸಂಖ್ಯೆ SANTRO KA 04 MH 3701 ಕಾರು ಚಾಲಕ ಅತಿವೇಗ ಮತ್ತು ಅಜಾರೂಕತೆಯಿಂದ ಚಾಲನೆ ಮಾಡಿಕೊಂಡು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ತನ್ನ ತಮ್ಮನ ಆಟೋ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ತನ್ನ ತಮ್ಮನ ತಲೆಯ ಮುಂಭಾಗ ಹಿಂಭಾಗ ತೀರ್ವ ಸ್ವರೂಪದ ರಕ್ತ ಸ್ರಾವವಾಗಿ ಕಾಲಿನ ಎಡಭಾಗ ಮುರಿದು ತೀರ್ವ ರಕ್ತಗಾಯಾಗಳಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.  ಕಾರಿನ ಚಾಲಕ ರಸ್ತೆಯ ಬದಿಯಲ್ಲಿ ಕಾರನ್ನು ಬಿಟ್ಟು ಪರಾರಿಯಾಗಿರುತ್ತಾನೆ ಆದ್ದರಿಂದ ಅಪಘಾತಪಡಿಸಿದ ಕಾರಿನ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

7. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.315/2021 ಕಲಂ. 379  ಐ.ಪಿ.ಸಿ :-

  ದಿನಾಂಕ 19-07-2021 ರಂದು ರಾತ್ರಿ 8-45 ಗಂಟೆಗೆ ಚಿನ್ನಸ್ವಾಮಿ ಬಿನ್ ಪೊನ್ನುಸ್ವಾಮಿ. 42 ವರ್ಷ, ಕೊಂಗುವೇಲಾಲರ್ ಜನಾಂಗ, ಮನೆ ನಂ.13/ಎ ತೌಂಟಂಪಾಳ್ಯಂ, ವಟ್ಟೂರು ಪೋಸ್ಟ್, ತಿರುಚಂಗೂಡು ತಾಲ್ಲೂಕು ನಾಮಕಲ್ ಜಿಲ್ಲೆ, ತಮಿಳುನಾಡು ರಾಜ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಈಗ್ಗೆ ಸುಮಾರು 12 ವರ್ಷಗಳಿಂದ ಚಿಂತಾಮಣಿ ತಾಲ್ಲೂಕು ಸಂತೇಕಲ್ಲಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಭಾಗದಲ್ಲಿ ಶಂಗೋಟ್ ವೇಲಾವರ್ ರಾಕ್ಡ್ರಿಲ್ಸ್ ಬೋರ್ವೆಲ್ ಏಜೆನ್ಸಿಯನ್ನು ಇಟ್ಟುಕೊಂಡಿರುತ್ತೇನೆ. ಅಲ್ಲಿಯೇ ತಾನು ಗೋಡನ್ ಮಾಡಿಕೊಂಡಿದ್ದು ಇಲ್ಲಿ ಬೋರ್ವೆಲ್ ಪಾರಟ್ಸ್, ಬೋರ್ವೆಲ್ ಡ್ರಿಲ್ಲಿಂಗ್ ಬಿಟ್ಸ್ ಮತ್ತು ರಿಗ್ಗಳನ್ನು ಹಾಕಿಕೊಂಡಿರುತ್ತೇನೆ. ರಾತ್ರಿ ತನ್ನ ಬೋರ್ವೆಲ್ ಲಾರಿಗಳನ್ನು ಅಲ್ಲಿಯೇ ನಿಲ್ಲಿಸುತ್ತಿರುತ್ತೇವೆ. ಈಗಿರುವಲ್ಲಿ ದಿನಾಂಕ 18/07/2021 ರಂದು ಕೆಎ-01 ಎಂಯು-3955 ನೋಂದಣಿ ಸಂಖ್ಯೆಯ ಬೋರ್ವೆಲ್ ವಾಹನದಲ್ಲಿ ಒಟ್ಟು 33 ಬಿಟ್ ಮತ್ತು ಇದರ ಪಕ್ಕದಲ್ಲಿ ನಿಲ್ಲಿಸಿದ್ದ ಕೆಎ-01 ಎಎಲ್-8889 ನೊಂದಣಿ ಸಂಖ್ಯೆಯ ಸಪೋಟರ್ ವಾಹನದಲ್ಲಿ 6 ಪಿಸ್ಟನ್ ಗಳನ್ನು ಇಟ್ಟಿರುತ್ತೇವೆ. ಎಂದಿನಂತೆ ತಾವು ಟಾರ್ಪಲ್ ಮುಚ್ಚಿ ರಾತ್ರಿ 11.30 ಗಂಟೆಗೆ ವಾಹನ ಪಕ್ಕದ ರೂಂನಲ್ಲಿ ತಾನು ಮತ್ತು ತಮ್ಮ ವ್ಯವಸ್ಥಾಪಕ ಸೆಂದಿಲ್ ರವರು ಮಲಗಿರುತ್ತೇವೆ. ಈ ದಿನ ದಿನಾಂಕ 19/07/2021 ರಂದು ಬೆಳಿಗ್ಗೆ 06.30 ಗಂಟೆ ಸಮಯದಲ್ಲಿ ತಾವು ಎದ್ದು ರೂಂ ಬಾಗಿಲನ್ನು ತೆರೆದಾಗ ಬಾಗಿಲು ಹೊರಗಿನಿಂದ ಲಾಕ್ ಮಾಡಲಾಗಿದ್ದು, ನಂತರ ನಾನು ಅಲ್ಲಿಯೇ ಬೇರೆ ಗಾಡಿಗಳಲ್ಲಿ ಮಲಗಿದ್ದ ನನ್ನ ಕೂಲಿಯವರಿಗೆ ಪೋನ್ ಕರೆ ಮಾಡಿ ಚಿಲಕವನ್ನು ತೆಗೆಸಿದ್ದು, ನನಗೆ ಅನುಮಾನ ಬಂದು ಎಲ್ಲಾ ವಾಹನಗಳನ್ನು ಪರಿಶೀಲನೆ ಮಾಡಲಾಗಿ ಆ ಪೈಕಿ ಕೆಎ-01 ಎಂಯು-3955 ವಾಹನದಲ್ಲಿ ಇಟ್ಟಿದ್ದ ಒಟ್ಟು 33 ಬಿಟ್ ಮತ್ತು ಇದರ ಪಕ್ಕದಲ್ಲಿ ನಿಲ್ಲಿಸಿದ್ದ ಕೆಎ-01 ಎಎಲ್-8889 ಸಪೋಟರ್ ವಾಹನದಲ್ಲಿದ್ದ ಒಟ್ಟು 6 ಪಿಸ್ಟನ್ ಗಳನ್ನು ಸದರಿ ವಾಹನಗಳ ಟಾರ್ಪಲ್ ಕತ್ತರಿಸಿ ಅವುಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಅಂದಾಜು ಬೆಲೆ ಸುಮಾರು 1,20,000/- ರೂಗಳಾಗಿರುತ್ತೆ. ಈ ಕಳ್ಳತನವು ರಾತ್ರಿ 11.30 ಗಂಟೆಯಿಂದ ಈ ದಿನ ಬೆಳಿಗ್ಗೆ 06.30 ಗಂಟೆಯ ಮದ್ಯೆ ಸಂಭವಿಸಿರುತ್ತೆ. ಮೇಲ್ಕಂಡ ವಾಹನಗಳಲ್ಲಿದ್ದ ಬಿಟ್ ಮತ್ತು ಪಿಸ್ಟನ್ಗಳನ್ನು ಕಳವು ಮಾಡಿರುವ ಕಳ್ಳರನ್ನು ಪತ್ತೆ ಮಾಡಿ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿರುತ್ತೆ.

 

8. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.316/2021 ಕಲಂ. 323,324,504,506,34  ಐ.ಪಿ.ಸಿ :-

  ದಿನಾಂಕ 19-07-2021 ರಂದು ರಾತ್ರಿ 9-30 ಗಂಟೆಗೆ ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ನಾಗರಾಜ ಕೆ.ವಿ ಬಿನ್ ಎಸ್.ವಿ ವೆಂಕಟೇಶಪ್ಪ, 52 ವರ್ಷ, ಕುರುಬರು, ಜಿರಾಯ್ತಿ, ಕಾಚಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ  ತನ್ನ ತಾಯಿ ರಾಜಮ್ಮ ಮತ್ತು ತನ್ನ ತಮ್ಮ ಕೇಶವ ಕುಮಾರ್ ರವರು ತನ್ನ ತಾಯಿಯ ಬ್ಯಾಂಕ್ ( ಕೆನರಾ ಬ್ಯಾಂಕ್ ) ಖಾತೆಯಲ್ಲಿದ್ದ 9 ಲಕ್ಷ ಹಣವನ್ನು  ಡ್ರಾ ಮಾಡಿಕೊಂಡು ಖರ್ಚು ಮಾಡಿಕೊಂಡಿದ್ದು ಈ ವಿಚಾರವನ್ನು ತಾನು ಈ ದಿನ ದಿನಾಂಕ 19-07-2021 ರಂದು ಸಂಜೆ 6-00 ಗಂಟೆ ಸಮಯದಲ್ಲಿ ತಮ್ಮ ಮನೆಯ ಬಳಿ ಬಂದಿದ್ದ ತನ್ನ ತಂಗಿಯರಾದ ವಸಂತ, ಅನಸೂಯ, ಶ್ರೀಮತಿ ರವರುಗಳನ್ನು ಕೇಳಿದ್ದು ಆಗ ತನ್ನ ಮಗ ಗುರುಪ್ರಸಾದ್ ರವರು ತನ್ನನ್ನು ಕುರಿತು ನೀನು ಯಾರೋ ಕೇಳುವುದಕ್ಕೆ ಬೋಳಿ ಮಗನೇ ಎಂದು ಅವಾಶ್ಚ ಶಬ್ದಗಳಿಂದ ಬೈದು, ಕೈ ಗಳಿಂದ ಮೈ ಮೇಲೆ ಹೊಡೆದು, ಕಬ್ಬಿಣದ ರಾಡ್ ನಿಂದ  ತನ್ನ ತಲೆಯ  ಎಡಭಾಗಕ್ಕೆ ಹೊಡೆದು ರಕ್ತಗಾಯ ಪಡಿಸಿದನು.  ತನ್ನ ತಂಗಿಯರಾದ ವಸಂತ, ಅನಸೂಯ ಮತ್ತು  ಶ್ರೀಮತಿ ರವರು  ಕೈ ಗಳಿಂದ ತನ್ನ ಮೈ ಮೇಲೆ ಹೊಡೆದು ಕಾಲುಗಳಿಂದ ಒದ್ದು ಈ ನನ್ನ ಮಗನನ್ನು ಇಲ್ಲಿಯೇ ಸಾಯಿಸಿ ಬಿಡೋಣವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿರುತ್ತೆ.

 

9. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.316/2021 ಕಲಂ. 429  ಐ.ಪಿ.ಸಿ & 4,8,9,11  KARNTAKA PREVENTION OF COW SLANGHTER & CATTLE PREVENTION ACT-1964 & 11(1) PREVENTION OF CRUELTY TO ANIMALS ACT, 1960 & 177,192 INDIAN MOTOR VEHICLES ACT, 1988:-

  ದಿನಾಂಕ 20-07-2021 ರಂದು ಮದ್ಯಾಹ್ನ 2-30 ಗಂಟೆ ಸಮಯದಲ್ಲಿ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವ ಹೆಚ್.ಸಿ.96 ಕೆ.ಎಸ್.ಆನಂದ ಕುಮಾರ್  ರವರು  ಆರೋಪಿ ಮತ್ತು ಜಾನುವಾರುಗಳಿದ್ದ ವಾಹನದೊಂದಿಗೆ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ 20/07/2021 ರಂದು ಬೆಳಿಗಿನ ಹಾಜರಾತಿಯಲ್ಲಿ ಪಿ.ಎಸ್.ಐ ರವರು ತನಗೆ ಗ್ರಾಮಗಸ್ತಿಗೆ ನೇಮಕ ಮಾಡಿದ್ದು, ಅದರಂತೆ ತಾನು ಗ್ರಾಮ ಗಸ್ತು ಪ್ರಾರಂಬಿಸಿ ಮದ್ಯಾಹ್ನ 2.00 ಗಂಟೆ ಸಮಯದಲ್ಲಿ ಠಾಣಾ ಸರಹದ್ದಿಗೆ ಸೇರಿದ ಚಿನ್ನಸಂದ್ರ-ಕುರುಟಹಳ್ಳಿ ಮಾರ್ಗಮದ್ಯೆ ದ್ವಿಚಕ್ರ ವಾಹನದಲ್ಲಿ ಕುರುಟಹಳ್ಳಿ ಕಡೆಗೆ ಹೋಗುತ್ತಿದ್ದಾಗ, ಎದುರುಗಡೆಯಿಂದ ಅಂದರೆ ಕುರುಟಹಳ್ಳಿ ಕಡೆಯಿಂದ ಅಶೋಕ ಲೈಲಾಂಡ್ ದೋಸ್ತ್ ವಾಹನ ಬರುತ್ತಿದ್ದು ಅದರಲ್ಲಿ ಹಸುಗಳು ಮತ್ತು ಎತ್ತುಗಳು ಇದ್ದು, ಇವುಗಳನ್ನು ಬಕ್ರೀದ್ ಹಬ್ಬದ ಪ್ರಯುಕ್ತ ವಧೆ ಮಾಡಿ ಮಾಂಸಕ್ಕಾಗಿ ಸಾಗಾಣಿಕೆ ಮಾಡುತ್ತಿರಬಹುದು ಎಂದು ಅನುಮಾನ ಬಂದು ಸದರಿ ವಾಹನವನ್ನು ನಿಲ್ಲಿಸಿ ನೊಂದಣಿ ಸಂಖ್ಯೆಯನ್ನು ನೋಡಲಾಗಿ ಕೆಎ-43-4613 ಆಗಿದ್ದು, ಚಾಲಕನ ಹೆಸರು ಮತ್ತು ವಿಳಾಸ ವಿಚಾರ ಮಾಡಲಾಗಿ ರೆಡ್ಡಪ್ಪ ಬಿನ್ ಚೌಡಪ್ಪ, 38 ವರ್ಷ, ನಾಯಕರು, ಕ್ಯಾಲನೂರು, ವೇಮಗಲ್ ಹೋಬಳಿ, ಕೋಲಾರ ತಾಲ್ಲೂಕು ಎಂದು ತಿಳಿಸಿರುತ್ತಾರೆ. ವಾಹನದಲ್ಲಿ ನೋಡಲಾಗಿ ಒಂದು ಎತ್ತು, ಎರಡು ನಾಟಿ ಹಸುಗಳು ಮತ್ತು 4 ಗಂಡು ಕರುಗಳು ಇದ್ದು, ಸದರಿ ಜಾನುವಾರುಗಳ ಬಗ್ಗೆ ವಿಚಾರ ಮಾಡಲಾಗಿ ಇವಗಳನ್ನು ಈ ದಿನ ಬೆಳಿಗ್ಗೆ ಆಂದ್ರಪ್ರದೇಶದ ಪುಂಗನೂರು ಸಂತೆಯಲ್ಲಿ ತಮ್ಮ ಗ್ರಾಮದ ವಾಸಿಯಾದ ನಸ್ರುಲ್ಲಾ ಭೇಗ್ ಬಿನ್ ಸತ್ತಾರ್ ಬೇಗ್ ರವರು ಸದರಿ ಜಾನುವಾರುಗಳನ್ನು ಕೊಂಡುಕೊಂಡು ಅವುಗಳನ್ನು ಹಬ್ಬದ ಪ್ರಯುಕ್ತ ವಧೆ ಮಾಡಿ ಮಾಂಸವನ್ನು ಮಾರಾಟ ಮಾಡುವ ಸಲುವಾಗಿ ಸದರಿ ಜಾನುವಾರುಗಳನ್ನು ಊರಿಗೆ ಸಾಗಾಣಿಕೆ ಮಾಡಿಕೊಂಡು ಹೋಗು ಎಂದು ಕಳುಹಿಸಿಕೊಟ್ಟಿರುವುದಾಗಿ ತಿಳಿಸಿರುತ್ತಾರೆ. ಸದರಿ ಜಾನುವಾರುಗಳನ್ನು ಒಂದರ ಪಕ್ಕದಲ್ಲೊಂದು ತುಂಬಿ ಕ್ರೂರವಾಗಿ ಸಾಗಾಣಿಕೆ ಮಾಡಿಕೊಂಡು ಹೋಗುತ್ತಿದ್ದು, ನಸ್ರುಲ್ಲಾ ಬೇಗ್ ರವರು ಸದರಿ ಜಾನುವಾರುಗಳನ್ನು ವಧೆ ಮಾಡಲು ಸಂಬಂದಪಟ್ಟ ಇಲಾಖೆಗಳ ಕಡೆಯಿಂದ ಪರವಾನಿಗೆಯನ್ನು ಪಡೆದುಕೊಳ್ಳದೆ ಸದರಿ ಪ್ರಾಣಿಗಳನ್ನು ವಧೆ ಮಾಡಿ ಮಾಂಸವನ್ನು ಮಾರಾಟ ಮಾಡಲು ಚಾಲಕನಾದ ರೆಡ್ಡಪ್ಪ ರವರ ಮುಖಾಂತರ ಸಾಗಾಣಿಕೆ ಮಾಡುತ್ತಿರುವುದಾಗಿ ಕಂಡು ಬಂದಿರುತ್ತೆ. ಆದ್ದರಿಂದ ಸದರಿ ಜಾನುವಾರುಗಳಿದ್ದ ವಾಹನವನ್ನು ವಶಕ್ಕೆ ಪಡೆದು ಮದ್ಯಾಹ್ನ 2.30 ಗಂಟೆಗೆ ಚಾಲಕನೊಂದಿಗೆ ಠಾಣೆಗೆ ಬಂದು ವರದಿಯನ್ನು ನೀಡುತ್ತಿದ್ದು, ಮೇಲ್ಕಂಡ ನಸ್ರುಲ್ಲಾ ಬೇಗ್ ಮತ್ತು ಚಾಲಕನಾದ ರೆಡ್ಡಪ್ಪ ರವರ ವಿರುಧ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿದೆ.

 

10. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.92/2021 ಕಲಂ. 87 ಕೆ.ಪಿ ಆಕ್ಟ್ :-

  ಈ ದಿನ ದಿನಾಂಕ:19/07/2021 ರಂದು ಸುಮಾರು ರಾತ್ರಿ 8-00 ಗಂಟೆಯ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ  ನನಗೆ  ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯ ಎಸ್.ವೆಂಕಟಾಪುರ ಗ್ರಾಮದ ಕೆರೆ ಬಳಿ ಇರುವ  ಮುನೇಶ್ವರ ದೇವಾಲಯದ ಅಂಗಳದ ಖಾಲಿ ಜಾಗದಲ್ಲಿ ದೇವಾಲಯದ ವಿಧ್ಯುತ್ ದ್ವೀಪಗಳ ಬೆಳಕಿನಲ್ಲಿ ಯಾರೋ ಕೆಲವು ಆಸಾಮಿಗಳು ಗುಂಪು ಕಟ್ಟಿಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಖಚಿತ ಬಾತ್ಮಿ ಬಂದಿದ್ದು,ಸದರಿ ಆಸಾಮಿಗಳ ಮೇಲೆ ದಾಳಿ ಮಾಡಿ ಹಾಗೂ ಕಾನೂನು ಕ್ರಮ ಕೈಗೊಳ್ಳಲು ಘನ ನ್ಯಾಯಾಲಯದಿಂದ ಠಾಣೆಯ ನ್ಯಾಯಾಲಯ ಸಿಬ್ಬಂದಿಯಾದ ಸಿ.ಪಿ.ಸಿ 490 ಸೋಮಶೇಖರ ರವರ ಮೂಲಕ ಅನುಮತಿಯನ್ನು ಪಡೆದುಕೊಂಡು  ಠಾಣೆಯ ಬಳಿ ಪಂಚರನ್ನು ಬರಮಾಡಿಕೊಂಡು  ಸದರಿ ಆಸಾಮಿಗಳ ಮೇಲೆ ದಾಳಿ ಮಾಡಲು ಮಾಹಿತಿಯನ್ನು ತಿಳಿಸಿ ಪಂಚರಾಗಿರಲು ಕೋರಿದರ ಮೇರೆಗೆ ಅವರು ಒಪ್ಪಕೊಂಡಿರುತ್ತಾರೆ. ನಂತರ ಠಾಣೆಯ ಸಿಬ್ಬಂದಿಯವರಾದ ಸಿ.ಹೆಚ್.ಸಿ-186 ನರಸಿಂಹಯ್ಯ, ಸಿ,ಹೆಚ್,143 ಶ್ರೀನಾಥ, ಸಿ,ಹೆಚ್.ಸಿ 32 ಮಂಜುನಾಥ, ಸಿ.ಪಿ.ಸಿ 91 ಮಂಜುನಾಥ  ಸಿ.ಪಿ.ಸಿ 557 ಶ್ರೀನಿವಾಸ ಮೂರ್ತಿ, ಸಿ.ಪಿ.ಸಿ 09 ನಾರಾಯಣಸ್ವಾಮಿ, ಸಿ.ಪಿ.ಸಿ 521 ನಾಗರಾಜ್, ಸಿ.ಪಿ.ಸಿ 434 ಹೊನ್ನಪ್ಪ, ಸಿ.ಪಿ.ಸಿ 196 ದೇವರಾಜ ಬಡಿಗೇರ್ ಹಾಗೂ ಜೀಫ್ ಚಾಲಕನಾದ ಎ.ಪಿ.ಸಿ 94 ಬೈರಪ್ಪ ರವರೊಂದಿಗೆ ಠಾಣೆಗೆ ಒದಗಿಸಿರುವ ಸರ್ಕಾರಿ ಜೀಫ್ ಸಂಖ್ಯೆ ಕೆಎ-40-ಜಿ-60 ನಲ್ಲಿ  ಹಾಗೂ ಕೆಲವು ಸಿಬ್ಬಂದಿಯವರುಗಳು ದ್ವಿ ಚಕ್ರವಾಹನಗಳಲ್ಲಿ ಪೂಸಗಾನ ದೊಡ್ಡಿಯ ಗ್ರಾಮದ ಮೂಲಕ  ಎಸ್. ವೆಂಕಟಾಪುರ ಗ್ರಾಮದ ಕೆರೆಯ ಕಟ್ಟಯ  ಬಳಿಗೆ ರಾತ್ರಿ8-45 ಗಂಟೆಗೆ ಹೋಗಿ ಮುಖ್ಯ ರಸ್ತೆಯಿಂದ ಸುಮಾರು 100 ಮೀಟರ್ ದೂರದಲ್ಲಿರುವ   ಮುನೇಶ್ವರ ದೇವಾಲಯದ ಬಳಿ ನಡೆದುಕೊಂಡು ಹೋಗಿ ಪಂಚರು ಮತ್ತು ನಾವುಗಳು ಮರೆಯಲ್ಲಿ ನಿಂತು ನೋಡಲಾಗಿ ಮುನೇಶ್ವರ ದೇವಾಲಯದ ಅಂಗಳದಲ್ಲಿ ವಿಧ್ಯುತ್ ದ್ವೀಪಗಳ ಬೆಳಕಿನಲ್ಲಿ ಯಾರೋ ಕೆಲವು ಆಸಾಮಿಗಳು ದೇವಾಲಯದ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ವೃತ್ತಾಕಾರವಾಗಿ ಕುಳಿತುಕೊಂಡು ಒಬ್ಬ ಆಸಾಮಿಯು ಇಸ್ಪೀಟ್ ಎಲೆಗಳನ್ನು ಹಾಕುತ್ತಿದ್ದು ಒಬ್ಬ ಆಸಾಮಿಯು ಅಂದರ್ 500 ರೂ ಎಂತಲೂ ಮತ್ತೊಬ್ಬ ಆಸಾಮಿಯ ಬಾಹರ್ 500 ರೂ ಎಂತಲೂ, ಇನ್ನುಳಿದ ಆಸಾಮಿಗಳು ಸಹ ಅಂದರ್-ಬಾಹರ್ ಎಂದು ಹಣವನ್ನು ಪಣವಾಗಿ ಕಟ್ಟಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದು ಖಚಿತವಾದ ಮೇಲೆ ಸದರಿ ಆಸಾಮಿಗಳನ್ನು ಸುತ್ತುವರೆದು ಓಡಬಾರದೆಂದು ಎಚ್ಚರಿಸಿದ್ದರು ಸಹ  ಕೆಲವು ಆಸಾಮಿಗಳು ಕತ್ತಲಲ್ಲಿ ಓಡಿ ಹೋಗಿದ್ದು ಉಳಿದಂತೆ 04 ಜನ ಆಸಾಮಿಗಳನ್ನು ವಶಕ್ಕೆ ಪಡೆದು ಅವರ ಹೆಸರು ವಿಳಾಸ ಕೇಳಲಾಗಿ 01) ಜಿ.ಡಿ ವೆಂಕಟೇಶ್ ಬಿನ್ ಲೇಟ್ ದ್ಯಾವಪ್ಪ, 37 ವರ್ಷ, ವಕ್ಕಲಿಗರು, ಗ್ರಾಮ ಪಂಚಾಯ್ತಿ ಸದಸ್ಯರು/ ಜಿರಾಯ್ತಿ, ವಾಸ:ಗಂಗಾನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು,ಪೋನ್ ನಂಬರ್:9945493414,  (02) ಮದ್ದಿರೆಡ್ಡಿ ಬಿನ್  ಲೇಟ್ ಚಿನ್ನ ಲಕ್ಷ್ಮಮಪ್ಪ, 40 ವರ್ಷ, ವಕ್ಕಲಗರು, ಜಿರಾಯ್ತಿ ,ವಾಸ: ದಿನ್ನಮಿಂದ ಹಳ್ಳಿ ಗ್ರಾಮ, (ಸೋಮೇನಹಳ್ಳಿ ಹತ್ತಿರ) ಗುಡಿಬಂಡೆ ತಾಲ್ಲೂಕು, (03) ರಾಮಪ್ಪ ಬಿನ್ ಲೇಟ್ ವೆಂಕಟರಾಯಪ್ಪ,43 ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ವಾಸ: ಕೋರೇನಹಳ್ಳಿ ಗ್ರಾಮ,(ಪೇರೆಸಂದ್ರ ಬಳಿ) ಚಿಕ್ಕಬಳ್ಳಾಪುರ ತಾಲ್ಲೂಕು  (04) ಪಾಪಣ್ಣ ಬಿನ್ ಲೇಟ್ ಮುನಿಯಪ್ಪ, 56 ವರ್ಷ, ಕುರುಬರು, ಜಿರಾಯ್ತಿ, ವಾಸ: ಕೊರೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು  ಎಂತಲೂ ನಂತರ ಓಡಿ ಹೋದ ಆಸಾಮಿಗಳ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ (05)ಶ್ರೀನಿವಾಸ ಬಿನ್ ತಿಮ್ಮನ್ನ, 40 ವರ್ಷ, ಬೋವಿ ಜನಾಂಗ, ಜಿರಾಯ್ತಿ, ವಾಸ: ಕಸುವಗುಟ್ಟಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, (06) ಮುನಿಕೃಷ್ಣಪ್ಪ ಬಿನ್ ಮುನಿಯಪ್ಪ, 45 ವರ್ಷ, ಬೋವಿ ಜನಾಂಗ, ಜಿರಾಯ್ತಿ, ವಾಸ:ಕಸುವಗುಟ್ಟಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, ಪೋನ್ ನಂಬರ್:9353190027, 8095556918,  (07) ಅಶೋಕ್ ಬಿನ್ ಉಜ್ಜಿನಪ್ಪ, 35 ವರ್ಷ, ಕುರುಬರು, ಜಿರಾಯ್ತಿ , ವಾಸ: ದಿನ್ನಮಿಂದಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು , (08) ವೆಂಕಟಗಿರಿ ಕೋಟೆ ಗೋವಿಂದಪ್ಪ,  ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಬಲಜಿಗರು, ವಾಸ:ವೆಂಕಟಗಿರಿಕೋಟೆ ಗ್ರಾಮ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, (09) ಕೃಷ್ಣಪ್ಪ ಬಿನ್ ಪೊಲ್ಲು ಕಿಟ್ಟ, 45 ವರ್ಷ, ಬಲಜಿಗರು, ಜಿರಾಯ್ತಿ, ವಾಸ: ಗಾಜುಲವಾರಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ಪೋನ್ ನಂಬರ್:8971138941 (10) ಕಮ್ಮಡಿಕೆ  ಕೆ.ಆರ್ ಈಶ್ವರಪ್ಪ ಬಿನ್ ರಾಮಪ್ಪ, ಪೋನ್  ನಂಬರ್: 9008861088 (11) ಚಿನ್ನಾರಿಪ್ಪಲ್ಲಿ ನಾಗ , ಗೊಲ್ಲರು, ವಾಸ: ಚಿನ್ನಾರಪ್ಪಲ್ಲಿ ಗ್ರಾಮ ,ಬಾಗೇಪಲ್ಲಿ ತಾಲ್ಲೂಕು ಫೋನ್ ನಂಬರ್:9663882379 (12) ಯರಪರೆಡ್ಡಿ, ಕಮ್ಮಡಿಕೆ  ಪೋನ್ ನಂಬರ್:9902982216 (13) ಗಂಗಾನಹಳ್ಳಿ ಲಕ್ಷ್ಮೀ ಪತಿ ಬಿನ್ ಹನುಂತಪ್ಪ, 36 ವರ್ಷ, ಬಲಜಿಗರು ವಾಸ: ಗಂಗಾನಹಳ್ಳಿ  ಗ್ರಾಮ, ಗುಡಿಬಂಡೆ  ತಾಲ್ಲೂಕು, ಪೋನ್ ನಂಬರ್:9972090547 ರವರುಗಳು ಕತ್ತಲಲ್ಲಿ ದೇವಾಲಯದ ಹಿಂಭಾಗದಿಂದ ಅರಣ್ಯ  ಪ್ರದೇಶದ ಕಡೆಗೆ ಹೋಗಿ ಹೋಗಿರುತ್ತಾರೆ. ನಂತರ ವಶಕ್ಕೆ ಪಡೆದುಕೊಂಡ ಆಸಾಮಿಗಳಿಗೆ  ಇಸ್ಪೀಟ್ ಜೂಜಾಟವಾಡುವ ಬಗ್ಗೆ ಯಾವುದಾದರೂ ಪರವಾನಿಗೆಯನ್ನು  ಪಡೆದುಕೊಂಡಿರುತ್ತೀರೆಯೇ ಎಂದು ಎಂದು ಕೇಳಲಾಗಿ ಸದರಿ ಆಸಾಮಿಗಳು ಯಾವುದೇ ಪರವಾನಿಗೆ ಪಡೆದಿರುವುದಿಲ್ಲವೆಂದು ತಿಳಿಸಿರುತ್ತಾರೆ. ನಂತರ ಪ್ಲಾಸ್ಟಿಕ್ ಪೇಪರ್  ಮೇಲೆ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದ ಇಸ್ಪೀಟ್ ಎಲೆಗಳನ್ನು ಮತ್ತು ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಇಸ್ಪೀಟ್ ಎಲೆಗಳು 52 ಇದ್ದು, ಹಣವನ್ನು ಎಣಿಕೆ ಮಾಡಲಾಗಿ 11,800-00 (ಹನ್ನೊಂದು ಸಾವಿರದ ಎಂಟು ನೂರು ರೂ) ರೂ ಇದ್ದು, ಸದರಿ  ನಗದು ಹಣವನ್ನು, 52 ಇಸ್ಪೀಟ್ ಎಲೆಗಳನ್ನು ಹಾಗು ಪ್ಲಾಸ್ಟಿಕ್ ಪೇಪರ್ ನ್ನು ಹಾಗೂ ಆಸಾಮಿಗಳು ದೇವಾಲಯದ ಬಳಿ ನಿಲ್ಲಿಸಿದ್ದ KA-40-R-7668 ಮತ್ತು KA-02-ET-9988 ದ್ವಿ ಚಕ್ರ ವಾಹನಗಳನ್ನು ದಾಳಿ ಪಂಚನಾಮೆಯ ಮೂಲಕ ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡು 4 ಜನ ಆಸಾಮಿಗಳು, ಮಾಲುಗಳು, ಪಂಚನಾಮೆಯೊಂದಿಗೆ ರಾತ್ರಿ 10-30 ಗಂಟೆಗೆ ಠಾಣೆಗೆ ಹಾಜರಾಗಿ ಆಸಾಮಿಗಳ ವಿರುದ್ದ ಮುಂದಿನ ಕ್ರಮಕ್ಕಾಗಿ ಸ್ವತಃ ಠಾಣಾ ಮೊ.ಸಂಖ್ಯೆ:92/2021 ಕಲಂ:87 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣದ ದಾಖಲಿಸಿರುತ್ತೇನೆ.

 

11. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.165/2021 ಕಲಂ. KARNTAKA PREVENTION OF COW SLANGHTER & CATTLE PREVENTION ACT-1964 U/s 4,8,9,11 ; PREVENTION OF CRUELTY TO ANIMALS ACT, 1960 U/s 11(1) (A),11(1) (D) ; The Central Motor Vehicle Rules 2015 U/s 1,2,3,4,125(E) ; INDIAN MOTOR VEHICLES ACT, 1988 U/s 177,192(A):-

  ದಿನಾಂಕ-19-07-2021 ರಂದು ಮದ್ಯಾನ್ಹ 3-15 ಗಂಟೆಗೆ ಪಿರ್ಯಾದಿ ತಿಪ್ಪೇಸ್ವಾಮಿ ಪಿ.ಸಿ 208 ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ.ಈ ದಿನ ದಿನಾಂಕ: 19/07/2021 ರಂದು ಮಾನ್ಯ ಪಿ.ಎಸ್.ಐ ಸಾಹೇಬರು ನನಗೆ ಮತ್ತು ಸಿ.ಪಿ.ಸಿ-520 ಶ್ರೀನಾಥ ರವರಿಗೆ ಹೊಸೂರಿನ ಸರ್ಕಾರಿ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯ ಬಂದೋಬಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ನಾನು ಮತ್ತು ಸಿ.ಪಿ.ಸಿ-520 ಶ್ರೀನಾಥ ರವರು ಕರ್ತವ್ಯ ನಿರ್ವಹಿಸಿ ವಾಪಸ್ಸು ಬರುತ್ತಿದ್ದಾಗ ಮದ್ಯಾಹ್ನ 2 -30 ಗಂಟೆ ಸಮಯದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಅಲ್ಲೀಪುರದಲ್ಲಿ ಕಟಾವು ಮಾಡಲು ಯರ್ರಪೋತೇನಹಳ್ಳಿ ಕಡೆಯಿಂದ ಹೊಸೂರು ಗ್ರಾಮದ ಮಾರ್ಗವಾಗಿ ಕೆ.ಎ-02, ಎಎ-6865 ಟಾಟಾ ಏಸಿ ಸರಕು ಸಾಗಾಣಿಕೆ ವಾಹನದ ಹಿಂಬದಿಯಲ್ಲಿ ಧನಗಳನ್ನು ತುಂಬಿಕೊಂಡು ಅಕ್ರಮವಾಗಿ ಖಸಾಯಿಕಾನೆಗೆ ಮಾರಾಟಮಾಡುವ ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿರುವುದಾಗಿ ಬಾತ್ಮಿದಾರರಿಂದ ಬಾತ್ಮಿ ಬಂದ ಮೇರೆಗೆ, ನಾನು ಮತ್ತು ಸಿ.ಪಿ.ಸಿ-520 ಶ್ರೀನಾಥ ರವರು ಶಾಲೆಯ ಮುಂದೆ ಇರುವ ರಸ್ತೆಯಲ್ಲಿ ಕಾಯುತ್ತಿದ್ದಾಗ  ಕೆ.ಎ-02, ಎಎ-6865 ಟಾಟಾ ಏಸಿ ಸರಕು ಸಾಗಾಣಿಕೆ ವಾಹನ ಮದ್ಯಾಹ್ನ ಸುಮಾರು 2-45 ಗಂಟೆಗೆ ಹೊಸೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಂದೆ ಇರುವ ರಸ್ತೆಯಲ್ಲಿ ಯರ್ಪೋತೇನಹಳ್ಳಿ ಕಡೆಯಿಂದ  ಬಂದಿದ್ದು ಸದರಿ ವಾಹನವನ್ನು ನಾವು ತಡೆದು ಪರಿಶೀಲಿಸಲಾಗಿ  ಕೆ.ಎ-02, ಎಎ-6865 ಟಾಟಾ ಏಸಿ ಸರಕು ಸಾಗಾಣಿಕೆ  ವಾಹನವಾಗಿದ್ದು  ಇದರ ಚಾಲಕ ಪ್ರಸನ್ನ ಬಿನ್ ವೆಂಕಟೇಶಪ್ಪ, 26 ವರ್ಷ, ಗೊಲ್ಲರು, ಮುದ್ದನಹಳ್ಳಿ ಗ್ರಾಮ, ಹೊಳವನಹಳ್ಳಿ ಗ್ರಾಮ, ಕೊರಟಗೆರೆ ತಾಲ್ಲೂಕು , ತುಮಕೂರು ಜಿಲ್ಲೆ, ರವರಾಗಿದ್ದು, ವಾಹನದ ಹಿಂಬದಿಯಲ್ಲಿ 02 ಸೀಮೆ ಹಸುಗಳು  01 ನಾಟಿ ಹೋರಿ ಇದ್ದವು ಚಾಲಕನನ್ನು ಈ ಬಗ್ಗೆ ವಿಚಾರಿಸಿದಾಗ ಅಲ್ಲೀಪುರ ಗ್ರಾಮದ ಹಜ್ ಗರ್ ಎಂಬ ವ್ಯಕ್ತಿ ನನಗೆ 9945348027 ನಂಬರ್ ನಿಂದ ಪೋನ್ ಮಾಡಿ ಚಿಕ್ಕನಹಳ್ಳಿ ಗ್ರಾಮದ ಗೋಪುರದ ಮುಂದೆ ಇರುವ ರಸ್ತೆಯಲ್ಲಿ ಕಟ್ಟಿಹಾಕಿರುವ ದನಗಳನ್ನು ಖಸಾಯಿಕಾನೆಗೆ ತುಂಬಿಕೊಂಡು ಬರಲು ತಿಳಿಸಿದ್ದು, ಅದರಂತೆ ದನಗಳನ್ನು ತುಂಬಿಕೊಂಡು ಕಸಾಯಿಕಾನೆಗೆ ಸಾಗಿಸುತ್ತಿರುವುದಾಗಿ ತಿಳಿಸಿದ್ದು, ಚಾಲಕ ವಾಹನದಲ್ಲಿ ದನಗಳನ್ನು ಅಮಾನವೀಯ ರೀತಿಯಲ್ಲಿ ತುಂಬಿಕೊಂಡು ಗೋಹತ್ಯ ನಿಷೇದ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ಖಸಾಯಿಕಾನೆಗೆ ಸಾಗಾಣಿಕೆ ಮಾಡುತ್ತಿರುವುದು  ಕಂಡುಬಂದಿರುತ್ತದೆ. ಆದ್ದರಿಂದ ಮುಂದಿನ ಕ್ರಮಕ್ಕಾಗಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು, ವಾಹನ, ಆರೋಪಿ ಹಾಗೂ ದನಗಳೊಂದಿಗೆ ನೀಡಿದ ವರದಿಯನ್ನು ಪಡೆದು ಮೇಲ್ಕಂಡ ಕಲಂ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

 

12. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.166/2021 ಕಲಂ. 15(A),32(3) ಕೆ.ಇ ಆಕ್ಟ್ :-

  ದಿನಾಂಕ:17/07/2021 ರಂದು ಮಾನ್ಯ ಪಿ.ಎಸ್.ಐ   ಕೆ.ಸಿ. ವಿಜಯಕುಮಾರ್   ರವರು ನೀಡಿದ ಮೆಮೋವಿನ ಸಾರಾಂಶವೇನೆಂದರೆ, ಈ ದಿನ  ದಿನಾಂಕ: 17-07-2021 ರಂದು ಸಂಜೆ 05-00  ಗಂಟೆಯಲ್ಲಿ ನಾನು , ಪಿ.ಸಿ. 208 ತಿಪ್ಪೇಸ್ವಾಮಿ ಮತ್ತು ಚಾಲಕ  ಮಹೇಶ ಎ.ಪಿ.ಸಿ.143  ರವರೊಂದಿಗೆ ಹೊಸೂರು  ಗ್ರಾಮದಲ್ಲಿ  ಗಸ್ತಿನಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಹೊಸೂರು ಗ್ರಾಮದಲ್ಲಿ ಕಾಲೋನಿಯಲ್ಲಿ ಸೊನಗಾನಹಳ್ಳಿ –ಹೊಸೂರು ರಸ್ತೆಯಲ್ಲಿ ಮುನೇಶ್ವರ ದೇವಸ್ಥಾನದ ಬಳಿ ಯಾರೋ ಆಸಾಮಿಯು ತನ್ನ ಮನೆಯ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ಮದ್ಯ ಸೇವನೆಯನ್ನು ಮಾಡಲು  ಸ್ಥಳಾವಕಾಶವನ್ನು ಮಾಡಿಕೊಟ್ಟಿರುತ್ತಾನೆಂದು ಖಚಿತವಾದ ಮಾಹಿತಿ ಬಂದಿದ್ದು  ಸದರಿ ಮಾಹಿತಿಯ ಮೇರೆಗೆ ಪಂಚರೊಂದಿಗೆ   ಸದರಿ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಂದು ಮನೆಯ ಮುಂಭಾಗದಲ್ಲಿ  ಯಾರೋ ಒಬ್ಬ ಆಸಾಮಿಯು  ತನ್ನ ಕೈಯಲ್ಲಿ ಪ್ಲಾಸ್ಟೀಕ್ ಚೀಲವನ್ನು ಹಿಡಿದುಕೊಮಡು ನಿಂತಿದ್ದು  ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿಯು  ಕುಳಿತುಕೊಂಡು  ಮದ್ಯ ಸೇವನೆಯನ್ನು ಮಾಡುತ್ತಿದ್ದು  ಆಸಾಮಿಯು ಮದ್ಯವನ್ನು ಮಾರಾಟವನ್ನು ಮಾಡಿ ಕುಡಿಯಲು ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದು ಖಚಿತಪಡಿಸಿಕೊಂಡು   ಪಂಚರ ಸಮಕ್ಷಮ ದಾಳಿ ಮಾಡಲಾಗಿ  ಕುಡಿಯುತ್ತಿದ್ದ ಆಸಾಮಿಯು ಅಲ್ಲಿಂದ ಓಡಿಹೋಗಿದ್ದು ಸದರಿ ಮದ್ಯವನ್ನು ಮಾರಾಟವನ್ನು  ಮಾಡುತ್ತಿದ್ದ ಆಸಾಮಿಯ ಹೆಸರು ವಿಳಾಸವನ್ನು ತಿಳಿಯಲಾಗಿ  ಸುಬ್ರಮಣಿ ಬಿನ್ ಮಾರಪ್ಪ, 40 ವರ್ಷ, ಆದಿ ಕರ್ನಾಟಕ, ಗಾರೆ ಕೆಲಸ, ವಾಸ ಮುನೇಶ್ವರ  ದೇವಸ್ಥಾನದ ಎದುರು, ಸೊನಗಾನಹಳ್ಳಿ ರಸ್ತೆ, ಹೊಸೂರು ಗ್ರಾಮ, ಗೌರಿಬಿದನೂರು ತಾಲ್ಲೂಕು ತಿಳಿಸಿದನು.  ಸದರಿ ಆಸಾಮಿಯು ಯಾವುದೇ ದಾಖಲೆಯನ್ನು ಹೊಂದಿಲ್ಲದೇ ಅಕ್ರಮವಾಗಿ   ಮದ್ಯವನ್ನು ಮಾರಾಟವನ್ನು ಮಾಡಿ ಸ್ಥಳದಲ್ಲಿ ಕುಡಿಯಲು ಸ್ಥಳಾವಕಾಶವನ್ನು ಮಾಡಿಕೊಟ್ಟಿರುತ್ತಾನೆ.   ನಂತರ   ಸ್ಥಳದಲ್ಲಿ  17-30 ಗಂಟೆಯಿಂದ 18-30 ಗಂಟೆಯವರೆಗೆ  ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ,  ಸ್ಥಳದಲ್ಲಿ ದೊರೆತ  1) HAY WARDS CHEERS  WHISKY ಯ 13 ಟೆಟ್ರಾ ಪಾಕೆಟ್ ಗಳು, 2) ಒಂದು ಪ್ಲಾಸ್ಟಿಕ್ ಚೀಲ,3) HAY WARDS CHEERS  WHISKY ಯ 2 ಖಾಲಿ ಟೆಟ್ರಾ ಪಾಕೆಟ್, 4) .ಒಂದು ಪ್ಲಾಸ್ಟೀಕ್ ಲೋಟ,   ವನ್ನು  ವಶಪಡಿಸಿಕೊಂಡು, ಠಾಣೆಗೆ 19-00  ಗಂಟೆಗೆ  ವಾಪಸ್ಸು ಬಂದಿದ್ದು,  ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 15(ಎ), 32(3)  ಕೆ.ಇ.ಆಕ್ಟ್ – 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್.,ಸಿ.ಆರ್ ನ.321/2021 ರಂತೆ ದಾಖಲು ಮಾಡಿರುತ್ತೆ. . ನಂತರ ಈಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು  ಘನ ನ್ಯಾಯಾಲಯದಿಂದ ಅನುಮತಿಯನ್ನು ಕೋರಿದ್ದು, ಘನ ನ್ಯಾಯಾಲಯವು ಈದಿನ ನೀಡಿದ ಅನುಮತಿಯ ಆದೇಶದಂತೆ ಪ್ರಕರಣವನ್ನು ದಾಖಲಿಸಿರುತ್ತೆ.

 

13. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.167/2021 ಕಲಂ. 15(A),32(3) ಕೆ.ಇ ಆಕ್ಟ್ :-

  ದಿನಾಂಕ: 18/07/2021 ರಂದು 17-00 ಗಂಟೆ ಸಮಯಲ್ಲಿ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಸಾಹೇಬರಾದ ಶ್ರೀ.ವಿಜಯ್ ಕುಮಾರ್.ಕೆ.ಸಿ.ರವರು ಠಾಣಾಧಿಕಾರಿಗಳಾದ ತನಗೆ ಸೂಚಿಸಿದ್ದೇನೆಂದರೆ ಈ ದಿನ ದಿನಾಂಕ: 18/07/2021 ರಂದು ನಾನು ಮದ್ಯಾನ್ಹ 3-00 ಗಂಟೆಯಲ್ಲಿ ಪೊಲೀಸ್ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಕಸಬಾ ಹೋಬಳಿ ವಿಧುರಾಶ್ವತ್ಥ ಕ್ರಾಸಿನ  ಸಾರ್ವಜನಿಕ ಸ್ಥಳವಾದ ರಸ್ತೆಯ ಪುಟ್ಬಾತ್ ಬದಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯಾದ, ಹೆಚ್.ಸಿ-10  ಶ್ರೀರಾಮಯ್ಯ, ಪಿಸಿ-179 ಶಿವಶೇಖರ  ಜೀಪ್ ಚಾಲಕ  ಎಪಿಸಿ-143 ಮಹೇಶ್ ರವರೊಂದಿಗೆ  ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ  ಪಂಚಾಯ್ತಿದಾರರನ್ನು ಕರೆದುಕೊಂಡು ಮದ್ಯಾನ್ಹ 3-30 ಗಂಟೆಗೆ ಮಾಹಿತಿ ಇದ್ದ  ಸ್ಥಳಕ್ಕೆ  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ  ವಿಧುರಾಶ್ವತ್ಥ ಕ್ರಾಸಿನ ರಸ್ತೆಯ ಬದಿ  ಸಾರ್ವಜನಿಕ  ಸ್ಥಳವಾದ ಪುಟ್ಬಾತ್ ನಲ್ಲಿ   ಒಂದು ಚೀಲವನ್ನು  ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಮತ್ತು ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಅಲ್ಲಿದ್ದ   ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು  ಓಡಿಹೋಗಿರುತ್ತಾರೆ. ಮಧ್ಯದ ಪಾಕೆಟ್ ಗಳನ್ನು ಹಾಗೂ ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿಯ ಹೆಸರು ವಿಳಾಸ ಕೇಳಲಾಗಿ, ತನ್ನ ಹೆಸರು  ಬಿ.ನವೀನ್ ಕುಮಾರ್ ಬಿನ್ ಗೋಪಿ, 21 ವರ್ಷ, ಬೋವಿ ಜನಾಂಗ,  ಎಳೆನೀರು ವ್ಯಾಪಾರ,  ವಾಸ ನಿಕ್ಕಂಪಲ್ಲಿ ರಸ್ತೆ, ಬಾಲಯೇಸು ಕಾಲೇಜು ಮುಂಭಾಗ, ಹಿಂದೂಪುರ ಟೌನ್, ಅನಂತಪುರ ಜಿಲ್ಲೆ ಆಂದ್ರಪ್ರದೇಶ ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು   ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್. ಸಾಮರ್ಥ್ಯದ HAY WARDS CHEERS  WHISKY ಯ 18  ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ 1 ಲೀಟರ್ 620 ಎಂ.ಎಲ್. ಆಗಿರುತ್ತೆ. 90 ಎಂ.ಎಲ್. ಸಾಮರ್ಥ್ಯದ HAY WARDS CHEERS  WHISKY ಯ ಒಂದು ಟೆಟ್ರಾ ಪಾಕೆಟ್ ಬೆಲೆ ರೂ 35.13 ಗಳಾಗಿದ್ದು, ಇವುಗಳ ಒಟ್ಟು ಬೆಲೆ 632.34 ರೂ.ಗಳಾಗಿರುತ್ತೆ.  ಸ್ಥಳದಲ್ಲಿ 2 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 02 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ ಸ್ಥಳದಲ್ಲಿ ಸಂಜೆ 3-30 ಗಂಟೆಯಿಂದ 4-30  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ 90 ಎಂ.ಎಲ್ ಸಾಮರ್ಥ್ಯದ HAYWARDS CHEERS  WHISKY ಯ 18 ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ  02 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  2 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಸಂಜೆ 5-00 ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು,  ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದು ಈ ದೂರಿನಲ್ಲಿನ ಅಂಶಗಳು ಅಸಂಜ್ಞೇಯ ಅಂಶಗಳಾಗಿರುವುದರಿಂದ ಎನ್.ಸಿ.ಆರ್ ನಂ.322/2021 ರಂತೆ ದಾಖಲಿಸಿಕೊಂಡಿರುತ್ತೇನೆ. ನಂತರ ಈಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು  ಘನ ನ್ಯಾಯಾಲಯದಿಂದ ಅನುಮತಿಯನ್ನು ಕೋರಿದ್ದು, ಘನ ನ್ಯಾಯಾಲಯವು ಈದಿನ ನೀಡಿದ ಅನುಮತಿಯ ಆದೇಶದಂತೆ ಪ್ರಕರಣವನ್ನು ದಾಖಲಿಸಿರುತ್ತೆ.

 

14. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.121/2021 ಕಲಂ. 87 ಕೆ.ಪಿ ಆಕ್ಟ್ :-

  ದಿನಾಂಕ:20.07.2021 ರಂದು ಬೆಳಗ್ಗೆ 9.30 ಗಂಟೆಗೆ ಹೆಚ್.ಸಿ-137 ರವರು ನ್ಯಾಯಾಲಯದ  ಅನುಮತಿಯನ್ನು ಪಡೆದು ದಾಖಲಿಸಿದ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ: 18/07/2021 ರಂದು ಮದ್ಯಾಹ್ನ 2-00 ಗಂಟೆ ಸಮಯದಲ್ಲಿ ನಾನು ಗೌರಿಬಿದನೂರು ವೃತ್ತ ಕಛೇರಿಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಡಿ.ಪಾಳ್ಯ ಹೋಬಳಿ ಗುಟ್ಟೇನಹಳ್ಳಿ ಬಳಿ ಇರುವ ಅರಣ್ಯ ಪ್ರದೇಶದಲ್ಲಿ ಯಾರೋ ಆಸಾಮಿಗಳು ಅಂದರ್ ಬಾಹರ್ ಇಸ್ಪೀಟು ಜೂಜಾಟವಾಡುತ್ತಿರುವುದಾಗಿ ಬಂದ ಬಾತ್ಮಿ ಮೇರೆಗೆ ನಾನು, ಸಿಬ್ಬಂದಿಯವರಾದ ಹೆಚ್.ಸಿ-224 ವೆಂಕಟೇಶ್, ಪಿ.ಸಿ-483 ರಮೇಶ್ ಬಾಬು, ಜೀಪು ಚಾಲಕ ಎ.ಪಿ.ಸಿ-133 ಹೇಮಂತ್ ರವರೊಂದಿಗೆ ಸರ್ಕಾರಿ ಜೀಪು ಸಂಖ್ಯೆ ಕೆ.ಎ-40, ಜಿ-1222 ರಲ್ಲಿ ಗೌರಿಬಿದನೂರು ತಾಲ್ಲೂಕು ಡಿ.ಪಾಳ್ಯ ಹೋಬಳಿ ಗುಟ್ಟೇನಹಳ್ಳಿ ಗ್ರಾಮದ ಬಳಿ ಹೋಗಿ ಅಲ್ಲಿ ಪಂಚರನ್ನು ಬರಮಾಡಿಕೊಂಡು ಅವರಿಗೆ ದಾಳಿಯ ಬಗ್ಗೆ ತಿಳಿಸಿ ಅವರನ್ನೂ ಸಹಾ ಜೊತೆಯಲ್ಲಿ ಕರೆದುಕೊಂಡು ಮಾಹಿತಿ ಬಂದ ಸ್ಥಳವಾದ ಗುಟ್ಟೇನಹಳ್ಳಿ ಬಳಿ ಇರುವ ಅರಣ್ಯ ಪ್ರದೇಶಕ್ಕೆ ಮದ್ಯಾಹ್ನ 2-30 ಗಂಟೆಗೆ ಹೋಗಿ ಜೀಪನ್ನು ಮರೆಯಲ್ಲಿ ನಿಲ್ಲಿಸಿ ಸ್ವಲ್ಪ ದೂರ ನಡೆದುಕೊಂಡು ಹೋಗಿ ಮರಗಳ ಮರೆಯಲ್ಲಿ ನಿಂತು ನೋಡಿದಾಗ 8-10 ಜನರು ಗುಂಪಾಗಿ ಕುಳಿತು ಅಂದರ್ ಗೆ 500/- ರೂ ಬಾಹರ್ ಗೆ 500/- ರೂ ಅಂತ ಕೂಗಿ ಇಸ್ಪೀಟು ಜುಜಾಟವಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ನಾವು ಅವರನ್ನು ಸುತ್ತುವರೆದು ಹಿಡಿದುಕೊಳ್ಳುವಷ್ಟರಲ್ಲಿ ಎಲ್ಲರೂ ಎದ್ದು ಓಡಲು ಪ್ರಾರಂಬಿಸಿದ್ದು, ನಾನು ಮತ್ತು ಸಿಬ್ಬಂದಿಯವರು ಅವರನ್ನು ಹಿಂಬಾಲಿಸಿ ಹಿಡಿದುಕೊಳ್ಳಲಾಗಿ 4 ಜನರು ಸಿಕ್ಕಿದ್ದು, ಉಳಿದ ಆಸಾಮಿಗಳು ಪರಾರಿಯಾಗಿದ್ದು, ಹಿಡಿದುಕೊಂಡ ಆಸಾಮಿಗಳ ಹೆಸರು ವಿಳಾಸಗಳನ್ನು ಕೇಳಲಾಗಿ 1) ರಾಮಕುಮಾರ್ ಬಿನ್ ನರಸಪ್ಪ, 24 ವರ್ಷ, ಬೋವಿ ಜನಾಂಗ, ಕೂಲಿಕೆಲಸ, ಗುಟ್ಟೇನಹಳ್ಳೀ ಗ್ರಾಮ, ಗೌರಿಬಿದನೂರು ತಾಲ್ಲೂಕು 2] ರಾಮೇಗೌಡ ಬಿನ್ ಲೇಟ್ ನಾರಾಯಣಪ್ಪ, 47 ವರ್ಷ, ಸಾದರ ಗೌಡ ಜನಾಂಗ, ಡಿ.ಪಾಳ್ಯ ಗ್ರಾಮ, ಗೌರಿಬಿದನೂರು ತಾಲ್ಲೂಕು, 3] ಚಂದ್ರಶೇಖರ ಬಿನ್ ರಾಮಕೃಷ್ಣಪ್ಪ, 35 ವರ್ಷ, ಕುರುಬರು, ಬಿ.ಬೊಮ್ಮಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು, 4] ಶ್ರೀನಾಥ ಬಿನ್ ಲಕ್ಷ್ಮಯ್ಯ, 36 ವರ್ಷ, ಬೆಸ್ತರು ಜನಾಂಗ, ವಾಟರ್ ಮ್ಯಾನ್, ನಾಮಗೊಂಡ್ಲು ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ 5] ವೆಂಕಟರಮಣ ಬಿನ್ ಲಿಂಗಪ್ಪ, 42 ವರ್ಷ, ಸಾದರ ಗೌಡ ಜನಾಂಗ, ಸಾರಗೊಂಡ್ಲು ಗ್ರಾಮ, ಗೌರಿಬಿದನೂರು ತಾಲ್ಲೂಕು, 6] ಆದಿಮ್ ಬಿನ್ ನೂರುಲ್ಲಾ, 40 ವರ್ಷ, ಮುಸ್ಲೀಮರು, ಜಿರಾಯ್ತಿ, ಡಿ.ಪಾಳ್ಯ ಗ್ರಾಮ, ಗೌರಿಬಿದನೂರು ತಾಲ್ಲೂಕು, 7] ಬಸವರಾಜು ಬಿನ್ ನಂದಿನಾರಾಯಣಪ್ಪ, 50 ವರ್ಷ, ಬಲಜಿಗರು, ಎಂ.ಗುಂಡ್ಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 8] ಚಂದ್ರಪ್ಪ, 40 ವರ್ಷ, ಗುಟ್ಟೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 9] ಮುನಿರಾಜು, 32 ವರ್ಷ, ವಕ್ಕಲಿಗರು, ಪಿಡಿಚಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಜೂಜಾಟದ ಸ್ಥಳವನ್ನು ಪರಿಶೀಲಿಸಲಾಗಿ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲವಿದ್ದು, ಜೂಜಾಟಕ್ಕೆ ಬಳಸಿದ್ದ ಇಸ್ಪೀಟು ಎಲೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಅವುಗಳನ್ನು ಸಂಗ್ರಹಿಸಿ ಎಣಿಸಲಾಗಿ 52 ಇಸ್ಪೀಟು ಎಲೆಗಳಿರುತ್ತವೆ. ಜೂಜಾಟಕ್ಕೆ ಪಣವಾಗಿಟ್ಟಿದ್ದ ನಗದು ಹಣವಿಟ್ಟಿದ್ದು ಎಣಿಸಲಾಗಿ 36,100/- ರೂ. ಗಳಾಗಿರುತ್ತೆ. ಈ ಮೇಲ್ಕಂಡ ನಾಲ್ಕು ಜನ ಆಸಾಮಿಗಳನ್ನು ವಶಕ್ಕೆ ಪಡೆದು 52 ಇಸ್ಪೀಟು ಎಲೆಗಳು, ಒಂದು ಪ್ಲಾಸ್ಟಿಕ್ ಚೀಲ ಹಾಗು 36,100/- ರೂ ನಗದು ಹಣವನ್ನು ಮದ್ಯಾಹ್ನ 2-30 ಗಂಟೆಯಿಂದ 3-30 ಗಂಟೆಯವರೆವಿಗೂ ಪಂಚರ ಸಮಕ್ಷಮ ವಿವರವಾದ ಪಂಚನಾಮೆ ಕ್ರಮವನ್ನು ಜರುಗಿಸಿ ಇದೇ ದಿನ ಸಾಯಂಕಾಲ 4-15 ಗಂಟೆಯಲ್ಲಿ ಮಂಚೇನಹಳ್ಳಿ ಪೊಲೀಸ್ ಠಾಣೆಗೆ ವಾಪಸ್ಸಾಗಿ ಪಂಚನಾಮೆಯೊಂದಿಗೆ ಮಾಲು ಮತ್ತು ಆರೋಪಿತರನ್ನು ವಶಕ್ಕೆ ನೀಡಿ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿ ನೀಡಿದ ವರದಿಯನ್ನು ಪಡೆದು ಠಾಣಾ ಎನ್.ಸಿ.ಆರ್ ನಂಬರ್ 195/2021 ರಂತೆ ದಾಖಲಿಸಿಕೊಂಡು ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತದೆ.

 

15. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.239/2021 ಕಲಂ. 323,324,307,504,506,34 ಐ.ಪಿ.ಸಿ & 3(2)(va) The SC & ST (Prevention of Atrocities) Amendment Act 2015:-

  ದಿನಾಂಕ: 19/07/2021 ರಂದು ಸಂಜೆ 7.00 ಗಂಟೆಯಲ್ಲಿ ಪಿರ್ಯಾದಿದಾರರಾದ ಜೆ.ಎಮ್ ಮುನಿಸ್ವಾಮಿ ಬಿನ್ ಲೇಟ್ ಮುತ್ತಪ್ಪ, ಜಂಗಮಕೋಟೆ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 16/07/2021 ರ ಬೆಳಿಗ್ಗೆ 10-45 ಗಂಟೆಯಲ್ಲಿ ತಾನು ಇದೇ ಜಂಗಮಕೋಟೆ ಗ್ರಾಮದ ಹಳೇ ಆಸ್ಪತ್ರೆ ಎದುರುಗಡೆ ಇರುವ ಫರ್ವೀನ್ ತಾಜ್ ಎಂಬುವವರ ಹೋಟೆಲ್ ಬಳಿ ಟೀ ಕುಡಿಯಲು ಹೋಗಿದ್ದಾಗ, ಇದೇ ಜಂಗಮಕೋಟೆ ಗ್ರಾಮದ ಆರುನುಲ್ಲಾ ಷರೀಪ್ ಬಿನ್ ಸುಬಾನ್ ಸಾಬ್ ಮತ್ತು ಅವರ ಮಕ್ಕಳಾದ ಸಲ್ಮಾನ್ ಬಿನ್ ಆರುನುಲ್ಲಾ ಷರೀಪ್ ಮತ್ತು ಸುಲೇಮಾನ್ ಬಿನ್ ಆರುನುಲ್ಲಾ ಷರೀಪ್ ಎಂಬುವರು ತನ್ನ ಮೇಲೆ ಏಕಾಏಕಿ ಬಂದು  ಏನೋ ನಾಯಕ ನನ್ನ ಮಗನೇ, ನಿಮ್ಮ ಜಾತಿನೇ ಕ್ಯಾಯ, ನಿಮ್ಮನ್ಯೇ ಕ್ಯಾಯ  ಎಂದು ಜಾತಿ ನಿಂದನೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು ಇದರಲ್ಲಿ ಆರುನುಲ್ಲಾ ಷರೀಪ್ ರವರು ಏಕಾಏಕಿ ಮಚ್ಚಿನಿಂದ ತನ್ನ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯ ಉಂಟು ಮಾಡಿ  ನಿನ್ನನ್ನು ಇವತ್ತೇ ಕೊಲೆ ಮಾಡುತ್ತೇನೆ  ಎಂದು ಕಾಲುಗಳಿಂದ ಒದ್ದು ನೆಲಕ್ಕೆ ಉರುಳಿಸಿರುತ್ತಾನೆ ಹಾಗೂ ಕೊಲೆ ಬೆದರಿಕೆ ಹಾಕಿರುತ್ತಾನೆ ಹಾಗೂ ಆರುನುಲ್ಲಾ ಷರೀಪ್ ಮಕ್ಕಳಾದ ಸಲ್ಮಾನ್ ಮತ್ತು ಸುಲೇಮಾನ್ ರವರು ತನ್ನ ಎದೆಗೆ ಹಾಗೂ ತನ್ನ ಕಾಲುಗಳಿಗೆ ದೊಣ್ಣೆಗಳಿಂದ ಹೊಡೆದು  ನಿಮ್ಮ ಜಾತಿನೇ ಕ್ಯಾಯ ನಾಯಕರು ನೀವು ಎಷ್ಠು ಜನ ಇದ್ದೀರ ಬನ್ನಿ ಎಂದು ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆ. ನಂತರ ಹೋಟೆಲ್ ಬಳಿ ಇದ್ದ ಹೋಟೆಲ್ ಮಾಲೀಕರಾದ ಫರ್ವೀನ್ ತಾಜ್  ಕೋಂ ಲೇಟ್ ವಜೀರ್ ರವರು ಮತ್ತು ಇದೇ ಗ್ರಾಮದ ವಾಸಿಯಾದ ನಟರಾಜ ಬಿನ್ ಲೇಟ್ ಪುಟ್ಟಪ್ಪ, ಮುಜಾಯಿದ್ ಬಿನ್ ಲೇಟ್ ಬಾಷಾಸಾಬ್, ಮುನಾವರ್ ಪಾಷ ಬಿನ್ ಮಹಬೂಬ್ ಪಾಷ ಗಲಾಟೆಯನ್ನು ಬಿಡಿಸಿ ತನ್ನನ್ನು ಆಸ್ಪತ್ರೆಗೆ ಸೇರಿಸಿರುತ್ತಾರೆ. ಆದ್ದರಿಂದ ತಾವುಗಳು ಮೇಲ್ಕಂಡ ಆರುನುಲ್ಲಾ, ಸಲ್ಮಾನ್, ಸುಲೇಮಾನ್ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

16. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.240/2021 ಕಲಂ. 279,304(A) ಐ.ಪಿ.ಸಿ &  187 ಐ.ಎಂ.ವಿ ಆಕ್ಟ್:-

  ಪಿರ್ಯಾದಿದಾರರಾದ ಶ್ರೀ ಮೋಹನ್ ಹೆಚ್.ಎನ್ ಬಿನ್ ಕೆ.ನಾರಾಯಣಸ್ವಾಮಿ, ಹಂಡಿಗನಾಳ ಗ್ರಾಮ ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಿರುತ್ತೇನೆ. ತಾನು ಕೂಲಿ ಕೆಲಸದಿಂದ ಜೀವನ ಮಾಡಿಕೊಂಡಿರುತ್ತೇನೆ. ತಮ್ಮ ತಂದೆ ಕೆ.ನಾರಾಯಣಸ್ವಾಮಿ ರವರು ಹಂಡಿಗನಾಳ ಗ್ರಾಮ ಪಂಚಾಯ್ತಿ ಕಛೇರಿಯಲ್ಲಿ ಸುಮಾರು 27 ವರ್ಷಗಳಿಂದ ಕಛೇರಿ ಜವಾನರಾಗಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ: 19/07/2021 ರಂದು ತಮ್ಮ ತಂದೆಯವರು ಕಛೇರಿ ಕೆಲಸ ಮುಗಿಸಿಕೊಂಡು ಸಂಜೆ ಸುಮಾರು 6-00 ಗಂಟೆಯಲ್ಲಿ ಮನೆ ಸಾಮಾಗ್ರಿಗಳನ್ನು ತೆಗೆದುಕೊಂಡು ಬರಲು ಶಿಡ್ಲಘಟ್ಟಕ್ಕೆ ಹೋಗುತ್ತೇನೆಂದು ಹೇಳಿ ಹೋಗಿರುತ್ತಾರೆ. ನಂತರ ರಾತ್ರಿ ಸುಮಾರು 7-45 ಗಂಟೆಯಲ್ಲಿ ತಮ್ಮ ಗ್ರಾಮದ ಚಂದ್ರು ರವರು ತನಗೆ ಪೋನ್ ಮಾಡಿ, ಶಿಡ್ಲಘಟ್ಟ-ಹಂಡಿಗನಾಳ ಮಧ್ಯೆ ಕೆರೆ ಕಟ್ಟೆಯ ಮೇಲೆ ರಸ್ತೆಯಲ್ಲಿ ನಿಮ್ಮ ತಂದೆ ನಡೆದುಕೊಂಡು ಹಂಡಿಗನಾಳ ಗ್ರಾಮಕ್ಕೆ ಬರುತ್ತಿದ್ದಾಗ ಯಾವುದೋ ವಾಹನ ಡಿಕ್ಕಿ ಹೊಡೆದು ಹೊರಟು ಹೋಗಿದ್ದು, ನಿಮ್ಮ ತಂದೆಯವರು ರಕ್ತಗಾಯಗಳಾಗಿ ರಸ್ತೆಯಲ್ಲಿ ಬಿದ್ದು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಕೂಡಲೇ ತಾನು ಹಾಗೂ ತಮ್ಮ ಗ್ರಾಮದ ಕೆಲವರು ಕೆರೆಕಟ್ಟೆ ಬಳಿ ಬಂದು ನೋಡಲಾಗಿ, ತಮ್ಮ ತಂದೆಯವರು ರಸ್ತೆಯಲ್ಲಿ ಬಿದ್ದು ಮೃತಪಟ್ಟಿದ್ದು, ತಲೆಗೆ ತೀವ್ರತರವಾದ ಗಾಯವಾಗಿ ರಕ್ತಸ್ರಾವ ಆಗಿರುತ್ತೆ. ವಿಚಾರ ತಿಳಿಯಲಾಗಿ, ರಾತ್ರಿ ಸುಮಾರು 7-30 ಗಂಟೆಯಲ್ಲಿ ತಮ್ಮ ತಂದೆ ಶಿಡ್ಲಘಟ್ಟದಿಂದ ಹಂಡಿಗನಾಳ ಗ್ರಾಮಕ್ಕೆ ವಾಪಸ್ಸು ನಡೆದುಕೊಂಡು ಬರುತ್ತಿದ್ದಾಗ, ಯಾವುದೋ ವಾಹನ ಚಾಲಕನು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ತಮ್ಮ ತಂದೆಯವರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾದ ಪರಿಣಾಮ ತಮ್ಮ ತಂದೆ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ. ನಂತರ ತಾವು ಮೃತದೇಹವನ್ನು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ವಿಷಯವನ್ನು ತಮ್ಮ ಮನೆಯಲ್ಲಿ ತಿಳಿಸಿಬಂದು ದೂರು ನೀಡುತ್ತಿದ್ದು, ತಮ್ಮ ತಂದೆಯ ಮೃತದೇಹವು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದು, ಶವಗಾರಕ್ಕೆ ಬೇಟಿ ನೀಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ 240/2021 ಕಲಂ 279, 304(ಎ) ಐಪಿಸಿ ರೆ/ವಿ 187 ಐ.ಎಮ್.ವಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

17. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.242/2021 ಕಲಂ. 32,34,43(A) ಕೆ.ಇ  ಆಕ್ಟ್:-

  ಈ ಕೇಸಿನ ಪಿರ್ಯಾದಿದಾರರಾದ ಶ್ರೀ ಲಿಯಾಖತ್ ಉಲ್ಲಾ, ಪಿ.ಎಸ್.ಐ, ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ. ರವರು ಠಾಣೆಯಲ್ಲಿ ಮಾಲನ್ನು ವಶಕ್ಕೆ ನೀಡಿ, ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ 20.07.2021 ರಂದು ನನಗೆ ಮಾನ್ಯ ಪೊಲೀಸ್ ಉಪಾಧೀಕ್ಷಕರು ಚಿಂತಾಮಣಿ ಉಪ ವಿಭಾಗ ರವರ ನಿದೇರ್ಶನದಂತೆ ಹಾಗೂ ಮಾನ್ಯ ಸಿಪಿಐ ಶಿಡ್ಲಘಟ್ಟ ವೃತ್ತ ರವರ ಮಾರ್ಗದರ್ಶನದಂತೆ ಹೆಚ್.ಕ್ರಾಸ್ ವೃತ್ತದಲ್ಲಿ ಈ ದಿನ ಮದ್ಯಾಹ್ನ 1.00 ಗಂಟೆ ಸಮಯದಲ್ಲಿ ತಾನು ಠಾಣೆಯ ಸಿಬ್ಬಂದಿಯಾದ ಪಿಸಿ 137 ಕಿರಣ್ ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ನಂಬರ್ ಕೆಎ-40-ಜಿ-357 ರಲ್ಲಿ ಹೋಗಿ ವಾಹನಗಳನ್ನು ಪರಿಶೀಲಿಸಿ ವಾಹನಗಳ ಸ್ಥಳ ದಂಡ ವಿದಿಸುತ್ತಿದ್ದಾಗ ಚಿಂತಾಮಣಿ ಕಡೆಯಿಂದ ಬರುತಿದ್ದ ವಾಹನಗಳನ್ನು ಪರಿಶೀಲಿಸುತ್ತಿದ್ದು ಆ ಸಮಯದಲ್ಲಿ ಬಂದ ಒಂದು ನೊಂದಣಿ ಸಂಖ್ಯೆ ಇಲ್ಲದ ಟಿವಿಎಸ್ ಎಕ್ಸ್ಎಲ್ ದ್ವಿ ಚಕ್ರ ವಾಹನದಲ್ಲಿ ಒಬ್ಬ ಅಸಾಮಿ ಗೋಣಿ ಚೀಲದ ಮೂಟೆಯೊಂದಿಗೆ ಬಂದು ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ದ್ವಿ ಚಕ್ರ ವಾಹವನ್ನು ಅಲ್ಲಿಯೇ ನಿಲ್ಲಿಸಿ ಓಡಿ ಹೋಗಿರುತ್ತಾನೆ. ನಂತರ ದ್ವಿ ಚಕ್ರ ವಾಹನದಲ್ಲಿದ್ದ ಗೋಣಿ ಚೀಲದ ಮೂಟೆಯನ್ನು ಬಿಚ್ಚಿ ನೋಡಲಾಗಿ ಚೀಲದಲ್ಲಿ ಮೂರು ಕಾಟನ್ ಬಾಕ್ಸ್ಗಳಿದ್ದು ಕಾಟನ್ ಬಾಕ್ಸ್ಗಳನ್ನು ಬಿಚ್ಚಿ ಪರಿಶೀಲಿಸಲಾಗಿ 1) 90 ಎಂ.ಎಲ್ನ ಅಮೃತ್ಸ್ ಸಿಲ್ವರ್ ಕಪ್ ರೇರ್ ಇಂಡಿಯನ್ ಬ್ರಾಂದಿ 94 ಟೆಟ್ರಾ ಪಾಕೇಟುಗಳಿದ್ದು ಪ್ರತಿಯೊಂದು ಟೆಟ್ರಾ ಪಾಕೇಟ್ ಮೇಲೆ ಅದರ ಬೆಲೆ 27.98 ರೂ ಎಂದು ನಮೂದಾಗಿದ್ದು ಇವುಗಳು ಒಟ್ಟು ಬೆಲೆ 2630 ರೂ ಆಗಿದ್ದು, 2) 180 ಎಂ.ಎಲ್ ನ ಓಲ್ಡ್ ಟವೆರಾ ವಿಸ್ಕಿಯ 24 ಟೆಟ್ರಾ ಪಾಕೇಟುಗಳಿದ್ದು ಪ್ರತಿಯೊಂದು ಟೆಟ್ರಾ ಪಾಕೇಟ್ ಮೇಲೆ ರೂ 86.75 ರೂ ಎಂದು ನಮೂದಾಗಿದ್ದು ಒಟ್ಟು ಬೆಲೆ 2082 ರೂ ಆಗಿದ್ದು, 3) 90 ಎಂ.ಎಲ್ ನ ಹೆವಾರ್ಡ್ಸ್ ಪಂಚ್ ಪೈನ್ ವಿಸ್ಕಿಯ 192 ಟೆಟ್ರಾ ಪಾಕೇಟುಗಳಿದ್ದು ಪ್ರತಿಯೊಂದು ಟೆಟ್ರಾ ಪಾಕೇಟುಗಳ ಮೇಲೆ 35.13 ರೂ ಎಂದು ನಮೂದಾಗಿದ್ದು ಇವುಗಳ ಒಟ್ಟು ಬೆಲೆ 6744.96 ರೂ ಆಗಿದ್ದು ಒಟ್ಟು ಮದ್ಯ 30 ಲೀಟರ್ 60 ಎಂಎಲ್ ನಷ್ಟಿದ್ದು ಸದರಿ ಅಸಾಮಿ ಸರ್ಕಾರದಿಂದ ಯಾವುದೇ ಪರವಾನಿಗೆ ಪಡೆಯದೇ ಅಕ್ರಮವಾಗಿ ಎಲ್ಲಿಯೋ ದಾಸ್ತಾನು ಮಾಡಿಕೊಂಡು ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಹೋಗುತ್ತಿರುವುದ ಕಂಡುಬಂದಿದ್ದರಿಂದ ದ್ವಿ ಚಕ್ರ ವಾಹನ ಮತ್ತು ಮದ್ಯದ ಟೆಟ್ರಾ ಪಾಕೇಟುಗಳನ್ನು ವಶಕ್ಕೆ ಪಡೆದುಕೊಂಡು ಬಂದು ತಮ್ಮ ವಶಕ್ಕೆ ನೀಡುತಿದ್ದು ಸದರಿ ಮಾಲನ್ನು ಮತ್ತು ದ್ವಿ ಚಕ್ರ ವಾಹನವನ್ನು ತಮ್ಮ ವಶಕ್ಕೆ ಪಡೆದು ಅಕ್ರಮವಾಗಿ ಮಧ್ಯವನ್ನು ಸರಬರಾಜು ಮಾಡುತಿದ್ದ ಅಸಾಮಿಯನ್ನು ಪತ್ತೆ ಮಾಡಿ ಅಸಾಮಿಯ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ ಮೊ.ಸಂ 242/2021 ಕಲಂ 32, 34, 43(ಎ) ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.   

ಇತ್ತೀಚಿನ ನವೀಕರಣ​ : 20-07-2021 06:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080