ಅಭಿಪ್ರಾಯ / ಸಲಹೆಗಳು

 

1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.278/2021 ಕಲಂ. 323,324,504,506,34 ಐ.ಪಿ.ಸಿ:-

          ದಿನಾಂಕ: 20/06/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಚಾಂದ್ ಪಾಷಾ ಬಿನ್ ಲೇಟ್ ಹೈದರ್ ಸಾಬ್, 38 ವರ್ಷ, ಮುಸ್ಲೀಂ ಜನಾಂಗ, ಜಿರಾಯ್ತಿ, ಕೋಟಗಲ್ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಮದ್ಯಾಹ್ನ 1.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮ್ಮ ತಂದೆ ತಾಯಿಯವರಿಗೆ ತಾವು 5 ಜನ ಗಂಡು ಮಕ್ಕಳಿದ್ದು, ಎಲ್ಲರೂ ಬೇರೆ ಬೇರೆಯಾಗಿ ವಾಸವಾಗಿರುತ್ತಾರೆ. ಹೀಗಿರುವಾಗ ಈ ದಿನ ದಿನಾಂಕ: 20/06/2021 ರಂದು ಬೆಳಿಗ್ಗೆ 10.00 ಗಂಟೆ ಸಮಯದಲ್ಲಿ ತಾನು ಮತ್ತು ತನ್ನ ಹೆಂಡತಿ ಅರ್ಶೀಯಾ ಬಾನು ರವರು ತಮ್ಮ ಗ್ರಾಮದಲ್ಲಿ ತಮ್ಮ ಜಮೀನಿನ ಬಳಿ ಇದ್ದಾಗ ತನ್ನ ತಮ್ಮ ಅತಾವುಲ್ಲಾ ಮತ್ತು ಆತನ ಹೆಂಡತಿ ಯಾಸ್ಮೀನ್ ರವರು ಅಲ್ಲಿಗೆ ಬಂದು ಈ ಜಮೀನಿನಲ್ಲಿ ನಮಗೆ ಭಾಗ ಬರಬೇಕು, ನೀವು ಇಲ್ಲಿ ಕೆಲಸ ಮಾಡಬೇಡಿ ಎಂದು ಹೇಳಿದ್ದು ಆಗ ತಾನು ಮತ್ತು ತನ್ನ ಹೆಂಡತಿ “ನಾವು ನಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದೇವೆ. ನೀವು ಏಕೆ ವಿನಾ ಕಾರಣ ಗಲಾಟೆ ಮಾಡುತ್ತಿದ್ದೀರಾ” ಎಂದು ಹೇಳಿದ್ದು, ಆಗ ಅತಾವುಲ್ಲಾ ರವರು ತನ್ನನ್ನು ಕುರಿತು “ಏ ಲೋಫರ್ ನನ್ನ ಮಗನೇ ನನಗೆ ಎದರು ಮಾತನಾಡುತ್ತೀಯಾ” ಎಂದು ಅವಾಚ್ಯಶಬ್ದಗಳಿಂದ ಬೈದು, ಕೈಗಳಿಂದ ಮೈ ಮೇಲೆ ಹೊಡೆದು, ಅಲ್ಲಿಯೇ ಬಿದ್ದದ್ದ ದೊಣ್ಣೆಯಿಂದ ತನ್ನ ಬಲಗೈ ಮುಂಗೈಗೆ ಹೊಡೆದು ನೋವನ್ನುಂಟು ಮಾಡಿ, ತನ್ನ ಎಡಕೈ ಮದ್ಯದ ಬೆರಳನ್ನು ಹಲ್ಲುಗಳಿಂದ ಕಚ್ಚಿ ರಕ್ತಗಾಯಪಡಿಸಿದನು. ಆಗ ತನ್ನ ಹೆಂಡತಿ ಅರ್ಶೀಯಾ ಬಾನು ರವರು ಗಲಾಟೆ ಬಿಡಿಸಲು ಬಂದಾಗ ಯಾಸ್ಮೀನ್ ರವರು ತನ್ನ ಹೆಂಡತಿಯ ಮೇಲೆ ಗಲಾಟೆ ಮಾಡಿ, ಅವಾಚ್ಯಶಬ್ದಗಳಿಂದ ಬೈದು, ಕೈಗಳಿಂದ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿರುತ್ತಾರೆ. ನಂತರ ಮೇಲ್ಕಂಡ ಇಬ್ಬರು ತಮ್ಮನ್ನು ಕುರಿತು ಈ ದಿನ ನೀವು ಉಳುದುಕೊಂಡಿದ್ದಿರಾ, ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.279/2021 ಕಲಂ. 323,324,504,506,34 ಐ.ಪಿ.ಸಿ:-

          ದಿನಾಂಕ: 20/06/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಅತಾವುಲ್ಲಾ ಬಿನ್ ಲೇಟ್ ಹೈದರ್ ಸಾಬ್, 32 ವರ್ಷ, ಮುಸ್ಲೀಂ ಜನಾಂಗ, ಗಾರೆಕೆಲಸ, ಕೋಟಗಲ್ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಮದ್ಯಾಹ್ನ 2.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮ್ಮ ತಂದೆ ತಾಯಿಯವರಿಗೆ ತಾವು 5 ಜನ ಗಂಡು ಮಕ್ಕಳಿರುತ್ತೇವೆ. ತಮ್ಮ ಗ್ರಾಮದಲ್ಲಿ ತಮ್ಮ ಕುಟುಂಬದ ಆಸ್ತಿಯ ವಿಚಾರವಾಗಿ ತಮ್ಮ ಅಣ್ಣ ತಮ್ಮಂದಿರ ನಡುವೆ ಮೊದಲಿನಿಂದಲೂ ತಕರಾರುಗಳಿರುತ್ತೆ. ಹೀಗಿರುವಾಗ ಈ ದಿನ ದಿನಾಂಕ: 20/06/2021 ರಂದು ಬೆಳಿಗ್ಗೆ 10.00 ಗಂಟೆ ಸಮಯದಲ್ಲಿ ತಮ್ಮ ಗ್ರಾಮದಲ್ಲಿ ತಮ್ಮ ಜಮೀನಿನ ಬಳಿ ತಾನು ಮತ್ತು ತನ್ನ ಹೆಂಡತಿ ಯಾಸ್ಮೀನ್ ತಾಜ್ ರವರು ಇದ್ದಾಗ ತನ್ನ ಅಣ್ಣ ಚಾಂದ್ ಪಾಷಾ ಮತ್ತು ಆತನ ಹೆಂಡತಿ ಅರ್ಶೀಯಾ ಬಾನು ರವರು ಅಲ್ಲಿಗೆ ಬಂದು ಈ ಜಮೀನಿನಲ್ಲಿ ನಿಮಗೆ ಭಾಗ ಇಲ್ಲ. ಏಕೆ ಇಲ್ಲಿಗೆ ಬಂದಿದ್ದೀರಾ ಎಂದು ಗಲಾಟೆ ಮಾಡಿ, ಚಾಂದ್ ಪಾಷಾ ರವರು ಲೋಫರ್ ನನ್ನ ಮಗನೇ ಇಲ್ಲಿಂದ ಹೋಗು ಎಂದು ಹೇಳಿದ್ದು, ಆಗ ತಾನು ಈ ಜಮೀನಿನಲ್ಲಿ ನನಗೂ ಭಾಗ ಬರಬೇಕು ಎಂದು ಹೇಳಿದ್ದು, ಆತನು ತನಗೆ ಕೈಗಳಿಂದ ಮೈ ಮೇಲೆ ಹೊಡೆದು ಅಲ್ಲಿಯೇ ಬಿದ್ದಿದ್ದ ದೊಣ್ಣೆಯಿಂದ ತನ್ನ ಕೈ ಕಾಲುಗಳ ಮೇಲೆ ಹೊಡೆದು ನೋವನ್ನುಂಟು ಮಾಡಿದನು. ಅಷ್ಟರಲ್ಲಿ ತನ್ನ ಹೆಂಡತಿ ಯಾಸ್ಮೀನ್ ತಾಜ್ ರವರು ಜಗಳ ಬಿಡಿಸಲು ಬಂದಿದ್ದು ಆಗ ಅರ್ಶೀಯಾ ಬಾನು ತನ್ನ ಹೆಂಡತಿಯ ಮೇಲೆ ಗಲಾಟೆ ಮಾಡಿ, ತನ್ನ ಹೆಂಡತಿಯ ಎಡಕಣ್ಣಿನ ಬಳಿ ಮುಷ್ಠಿಯಿಂದ ಗುದ್ದಿ ಗಾಯವನ್ನುಂಟು ಮಾಡದಳು. ನಂತರ ಮೇಲ್ಕಂಡ ಇಬ್ಬರು ತಮ್ಮನ್ನು ಕುರಿತು ಇನ್ನೋಂದು ಸಾರಿ ಜಮೀನಿನಲ್ಲಿ ಭಾಗಬೇಕು ಎಂದು ಬಂದರೆ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

3. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.112/2021 ಕಲಂ. 143,144,147,148,448,323,324,504,506,149 ಐ.ಪಿ.ಸಿ:-

          ದಿನಾಂಕ 19/06/2021 ರಂದು ಮದ್ಯಾಹ್ನ 3--00 ಗಮಟೆ ಸಮಯದಲ್ಲಿ ಪಿರ್ಯಾದುದಾರರಾದ  ಬಾಬು ಎಂ ಬಿನ್ ಲೇಟ್ ಮುಳಬಾಗಿಲಪ್ಪ, 39 ವರ್ಷ, ಎಸ್ ಸಿ ಜನಾಂಗ, ಮಾಳಪಲ್ಲಿ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಚಿಂತಾಮಣಿ ತಾಲ್ಲೂಕು ಕಲ್ಲಹಳ್ಳಿ ಗ್ರಾಮದ ಸರ್ವೇ ನಂ 81/5 ರ 1 ಎಕರೆ 10 ಗುಂಟೆ ಜಮೀನು ನಮ್ಮ ಅನುಭವದಲ್ಲಿದ್ದು ಈ ಜಮೀನು ವಿಚಾರದಲ್ಲಿ ನಮಗೂ ಹಾಗೂ ನಮ್ಮ ಏರಿಯಾದ ವಾಸಿಯಾದ ವೆಂಕಟಾಚಲಪತಿ ಬಿನ್ ಲೇಟ್ ಮುನಿವೆಂಕಟಪ್ಪ ರವರಿಗೆ ತಕಾರರಿದ್ದು ವೆಂಕಟಾಚಲಪತಿ ಹಾಗೂ ಅವರ ಕಡೆಯವರು ನಮ್ಮ ಮೇಲೆ ಆಗಾಗ ಗಲಾಟೆ ಮಾಡುತ್ತಿದ್ದು ಈ ವಿಚಾರದಲ್ಲಿ ಹಿರಿಯರು ರಾಜಿ ಪಂಚಾಯ್ತಿ ಮಾಡಿರುತ್ತಾರೆ.  ಹೀಗಿರುವಾಗ ದಿನಾಂಕ 15/06/2021 ರಂದು ಬೆಳಿಗ್ಗೆ ನಾನು ಹಾಗೂ ನನ್ನ ಅಣ್ಣನಾದ ಅಂಜಪ್ಪ ರವರು ನಮ್ಮ ಜಮೀನು ಕಡೆ ಹೋಗಿ ಕೆಲಸ ಮುಗಿಸಿಕೊಂಡು ರಾತ್ರಿ 9-00 ಗಂಟೆ ಸಮಯದಲ್ಲಿ ಮನೆಯಲ್ಲಿ ಊಟ ಮಾಡುತ್ತಿದ್ದಾಗ 1] ವೆಂಕಟಾಚಲಪತಿ ಬಿನ್ ಮುನಿವೆಂಕಟಪ್ಪ, 2] ನಾರಾಯಣಸ್ವಾಮಿ ಬಿನ್ ಮುನಿವೆಂಕಟಪ್ಪ,3] ಸರೋಜಮ್ಮ ಕೋಂ ನಾರಾಯಣಸ್ವಾಮಿ, 4] ಉಮಾದೇವಿ ಕೋಂ ವೆಂಕಟಾಚಲಪತಿ, 5] ತೇಜಸ್ವಿನಿ ಬಿನ್ ವೆಂಕಟಾಚಲಪತಿ ಮತ್ತು 6] ಅನಿಲ್ ಕುಮಾರ್ ಬಿನ್ ವೆಂಕಟಾಚಲಪತಿ ರವರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ನಮ್ಮ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಆ ಪೈಕಿ ವೆಂಕಟಾಚಲಪತಿರವರು ನನ್ನನ್ನು ಕುರಿತು ಏ ಲೋಪರ್ ನನ್ನ ಮಗನೇ, ತೊಟ್ಟಿ ನನ್ನ ಮಗನೇ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದು ಅದಕ್ಕೆ ನಾನು ಏಕೆ ಈ ರೀತಿ ಬೈಯ್ಯುತ್ತಿದ್ದೀರಾ ಎಂದು ಕೇಳುವಷ್ಟರಲ್ಲಿ ನಾರಾಯಣಸ್ವಾಮಿ ರವರು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ನನ್ನ ಬಲಭುಜಕ್ಕೆ ಹೊಡೆದು ಮೂಗೇಟುಂಟು ಮಾಡಿರುತ್ತಾನೆ. ನನ್ನ ಅಣ್ಣನಾದ ಅಂಜಪ್ಪ ರವರಿಗೆ ಅನಿಲ್ ಕುಮಾರ್ ಹಾಗೂ ತೇಜಸ್ವಿನಿ ರವರು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ಕೆಳಕ್ಕೆ ತಳ್ಳಿದಾಗ ವೆಂಕಟಾಚಲಪತಿರವರು ಅಂಜಪ್ಪ ರವರನ್ನು ಕಾಲಿನಿಂದ ಒದ್ದು ಬೆನ್ನಿಗೆ ಮೂಗೇಟು ಮಾಡಿರುತ್ತಾರೆ. ಜಗಳ ಬಿಡಿಸಲು ಅಡ್ಡ ಬಂದ ಜಯರಾಜ್ ರವರನ್ನು ಉಮಾದೇವಿ ಹಾಗೂ ಅನಿಲ್ ಕುಮಾರ್ ರವರು ಕೈಗಳಿಂದ ಹೊಡೆದು ಪಕ್ಕಕ್ಕೆ ತಳ್ಳಿರುತ್ತಾರೆ. ಎಲ್ಲರೂ ಸೇರಿ ಇನ್ನೋಂದು ಸಾರಿ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ  ನಮ್ಮ ಮೇಲೆ ಜಮೀನು ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು  ಕೈಗಳಿಂದ ಹಾಗೂ ದೊಣ್ಣೆಯಿಂದ ಹೊಡೆದು ಮೂಗೇಟುಂಟು ಮಾಡಿ ಪ್ರಾಣ ಬೆದರಿಕೆ ಹಾಕಿರುವ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

 

4. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.126/2021 ಕಲಂ. 279,337 ಐ.ಪಿ.ಸಿ:-

          ದಿನಾಂಕ 19/06/2021 ರಂದು ಮದ್ಯಾಹ್ನ1-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಶ್ರೀಮತಿ  ರಾಧ ಕೊಂ ಮಾರುತಿ ,  34 ವರ್ಷ,  ಆದಿ ಕರ್ನಾಟಕ,  ಗೃಹಿಣಿ,   ಸ್ವಂತ ವಾಸ ಮಲ್ಲಪಲ್ಲಿ ಗ್ರಾಮ, ಗೋರೆಂಟ್ಲ ಮಂಡಲಂ,  ಹಿಂದೂಪುರಂ ತಾಲ್ಲೂಕು. ಅನಂತಪುರ ಜಿಲ್ಲೆ. ಎ.ಪಿ.  ಹಾಲಿ ವಾಸ 6 ನೇ ಮುಖ್ಯ ರಸ್ತೆ, 8 ನೇ ಕ್ರಾಸ್, ಬಾಲಾಜಿ ಲೇ ಔಟ್,   ಹೊಂಗಸಂದ್ರ , ಬೆಂಗಳೂರು-560068, ಮೊ. 9686741253 ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತನ್ನ  ಗಂಡ ಮಾರುತಿ ರವರು  ಕೆ.ಎ-03-ಎಸಿ-5273 ನೊಂದಣೀ ಸಂಖ್ಯೆಯ ಟಾಟಾ ಸುಮೋ ಗ್ರಾಂಡ್ ವಾಹನವನ್ನು   ಬಾಡಿಗೆಗಾಗಿ ಸುಮಾರು ಒಂದು ವರ್ಷದಿಂದ ಓಡಿಸುತ್ತಿದ್ದರು. ದಿನಾಂಕ 18/06/2021 ರಂದು ಬೆಳಗಿನ ಜಾವ ಸುಮಾರು 3-00 ಗಂಟೆಗೆ ಆಂದ್ರದ ಗೋರೆಂಟ್ಲ ಗೆ ಬಾಡಿಗೆ ಇದ್ದು ಹೋಗುವುದಾಗಿ ಹೇಳಿ  ಮನೆಯಿಂದ ಹೊರಟರು. ನಂತರ ಇದೇ ದಿನ ಬೆಳಗ್ಗೆ ಸುಮಾರು 7-00 ಗಂಟೆಗೆ ತನ್ನ ಗಂಡ ತನ್ನ ಮೊಬೈಲ್ ನಂಬರ್ ಗೆ ಕರೆ ಮಾಡಿ ಗುಡಿಬಂಡೆ ತಾಲ್ಲುಕು ತಟ್ಟಹಳ್ಳಿ  ಕ್ರಾಸ್ ಬಳಿ ಅಪಘಾತವಾಗಿದ್ದು  ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಅಸ್ಪತ್ರೆಯಲ್ಲಿ ಇರುವುದಾಗಿ  ಹೇಳಿದರು.  ಕೂಡಲೇ ತಾನು ಬೆಂಗಳೂರಿನಿಂದ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು, ವಿಚಾರ ಮಾಡಲಾಗಿ ತನ್ನ ಗಂಡ  ಮಾರುತಿ ರವರು  ಕೆ.ಎ-03-ಎಸಿ-5273 ನೊಂದಣೀ ಸಂಖ್ಯೆಯ ಟಾಟಾ ಸುಮೋ ಗ್ರಾಂಡ್ ವಾಹನದಲ್ಲಿ  ಆಂದ್ರದ ಗೋರೆಂಟ್ಲ ಮಂಡಲಂ ದಾಸರೆಡ್ಡಿಪಲ್ಲಿ ಗ್ರಾಮದ ವಾಸಿಗಳಾದ 1) ಮುನೀ ನಾಯಕ್ ಬಿನ್ ರಾಮೆ ನಾಯಕ್, 42 ವರ್ಷ, 2) ಕಳಾ ಬಾಯಿ ಕೋಂ  ಮುನೀನಾಯಕ್, 45 ವರ್ಷ, 3) ಅಮ್ಮಿಬಾಯಿ ಕೊಂ ತಿಪ್ಪನ್ನ, 45 ವರ್ಷ, 4) ಸೀತಾ ನಾಯಕ್ ಬಿನ್ ನಾನೀ ನಾಯಕ್, 55 ವರ್ಷ,  5) ಜಯಬಾಯಿ ಕೊಂ ಸೀತಾ ನಾಯಕ್  ,50 ವರ್ಷ, ಮತ್ತು ಆಂದ್ರದ ಗೋರೆಂಟ್ಲ ಮಲ್ಲೆಪಲ್ಲಿ ಗ್ರಾಮದ ವಾಸಿಗಳಾದ  6) ನಾಗಮ್ಮ ಕೊಂ ನರಸಿಂಹಪ್ಪ, 45 ವರ್ಷ,  7) ಓಡಿಸಿ ಗ್ರಾಮದ ವಾಸಿ ಅಶ್ವತ್ಥಮ್ಮ ಕೊಂ ಅಶ್ವತ್ಥಪ್ಪ, 45 ವರ್ಷ, ರವರನ್ನು ವಾಹನದಲ್ಲಿ ಕರೆದುಕೊಂಡು ಬೆಂಗಳೂರಿನಿಂದ  ಆಂದ್ರದ ಗೋರೆಂಟ್ಲ ಗ್ರಾಮಕ್ಕೆ ಬಾಡಿಗೆಗಾಗಿ ಕರೆದುಕೊಂಡು ಗುಡಿಬಂಡೆ ತಾಲ್ಲೂಕು  ತಟ್ಟಹಳ್ಳಿ ಕ್ರಾಸ್ ಬಳಿ ಬೆಂಗಳೂರಿನಿಂದ ಹೈದರಾಬಾದ್ ಕಡೆಗೆ ಹೋಗುವ ಎನ್.ಹೆಚ್-44 ರಸ್ತೆಯಲ್ಲಿ ಹೋಗುತ್ತಿರುವಾಗ ರಸ್ತೆಯಲ್ಲಿ ಬೆಳಿಗ್ಗೆ ಸುಮಾರು 6-00 ಗಂಟೆ ಸಮಯದಲ್ಲಿ ಡಿ.ಎಲ್.-1-ಎಲ್.ಎ.ಸಿ-1986 ನೊಂದಣಿ ಸಂಖ್ಯೆಯ ಕ್ಯಾಂಟರ್ ವಾಹನದ ಚಾಲಕ ತನ್ನ ವಾಹನವನ್ನು ಯಾವುದೇ  ಮುನ್ಸೂಚನೆಗಳನ್ನು ನೀಡದೇ  ಅಜಾಗರೂಕತೆಯಿಂದ ನಿಲ್ಲಿಸಿದ್ದು, ತಾನು ತನ್ನ ಕೆ.ಎ-03-ಎಸಿ-5273 ನೊಂದಣೀ ಸಂಖ್ಯೆಯ ಟಾಟಾ ಸುಮೋ ಗ್ರಾಂಡ್  ವಾಹನವನ್ನು ಅತಿವೇಗವಾಗಿ ಚಾಲನೆ ಮಾಡಿಕೊಂಡು ಮೇಲ್ಕಂಡ  ನೊಂದಣಿ ಸಂಖ್ಯೆಯ ಕ್ಯಾಂಟರ್ ಗೆ ಹಿಂಬದಿಯಲ್ಲಿ ಡಿಕ್ಕಿ ಹೊಡೆಯಿಸಿದ ಪರಿಣಾಮ ಎರಡೂ ವಾಹನಗಳು ಜಖಂಗೊಂಡು , ತನಗೆ ತಲೆಯ ಮುಂಬಾಗ ರಕ್ತಗಾಯ, ಎದೆಗೆ  ಮೂಗೇಟು ಆಗಿರುವುದಾಗಿ  ತಿಳಿಸಿದರು. ವಾಹನದಲ್ಲಿ ಇದ್ದ  ಮುನೀ ನಾಯಕ್  ರವರಿಗೆ ಮೊಣಕಾಲಿಗೆ ರಕ್ತಗಾಯ, ಕಳಾ ಬಾಯಿ ರವರಿಗೆ ಎಡ ಕೈಗೆ ರಕ್ತಗಾಯ, ಅಮ್ಮಿಬಾಯಿ ರವರಿಗೆ ಹಣೆಗೆ ರಕ್ತಗಾಯ,  ಸೀತಾ ನಾಯಕ್ ರವರಿಗೆ ಬಲ ಕೈಗೆ ರಕ್ತಗಾಯ, ನಾಗಮ್ಮ ರವರಿಗೆ ಬಲಭುಜಕ್ಕೆ ರಕ್ತಗಾಯ, ಅತ್ಥಮ್ಮ ರವರಿಗೆ ಬಲಭುಜಕ್ಕೆ ರಕ್ತಗಾಯ, ಜಯಬಾಯಿ ರವರಿಗೆ ಎರಡೂ ಮೊಣಕಾಲಿಗೆ ರಕ್ತಗಾಯವಾಗಿರುವುದಾಗಿ ವಿಚಾರ ತಿಳಿಸಿದರು. ನಂತರ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ   ವೈದ್ಯರ ಸಲಹೆ ಮೇರೆಗೆ ಕಳಾ ಬಾಯಿ, ಅಮ್ಮಿಬಾಯಿ, ಸೀತಾನಾಯಕ್ ಮತ್ತು ಮಾರುತಿ ರವರನ್ನು ಹಿಂದೂಪುರ  ಟೌನಿನ ಖಾಸಗಿ ಆಸ್ಪತ್ರೆಯಲ್ಲಿ  ಚಿಕಿತ್ಸೆಗಾಗಿ ದಾಖಲಾಗಿರುತ್ತಾರೆ. ತನ್ನ ಗಂಡನನ್ನು ಆಸ್ಪತ್ರೆಯಲ್ಲಿ ನೋಡಿಕೊಳ್ಳುತ್ತಿದ್ದರಿಂದ   ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು  ಅಜಾಗರೂಕತೆಯಿಂದ ರಸ್ತೆಯಲ್ಲಿ ನಿಲ್ಲಿಸಿದ್ದ ಡಿ.ಎಲ್.-1-ಎಲ್.ಎ.ಸಿ-1986 ನೊಂದಣಿ ಸಂಖ್ಯೆಯ ಕ್ಯಾಂಟರ್ ವಾಹನದ ಚಾಲಕನ ವಿರುದ್ದ ಮತ್ತು ಅತಿವೇಗವಾಗಿ ಚಾಲನೆ ಮಾಡಿದ ಕೆ.ಎ-03-ಎಸಿ-5273 ನೊಂದಣೀ ಸಂಖ್ಯೆಯ ಟಾಟಾ ಸುಮೋ ಗ್ರಾಂಡ್ ವಾಹನದ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

 

5. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.127/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ 19/06/2021 ರಂದು ಮದ್ಯಾಹ್ನ 2-15 ಗಂಟೆಗೆ ಪಿರ್ಯಾದಿದಾರರಾದ ಶ್ರೀ. ಚಂದ್ರಪ್ಪ ಎ.ಎಂ. ಬಿನ್ ಲೇಟ್ ಮುನಿವೆಂಕಟಪ್ಪ,33 ವರ್ಷ, ಆದಿದ್ರಾವಿಡ ಜನಾಂಗ, ವ್ಯವಸಾಯ, ಆಮೂರುತಿಮ್ಮನಹಳ್ಳಿ ಗ್ರಾಮ, ಬಶೇಟ್ಟಿಹಳ್ಳಿ ಹೋಬಳಿ.ಶಿಡ್ಲಘಟ್ಟ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ. ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಈಗ್ಗೆ ಸುಮಾರು 3 ವರ್ಷಗಳ ಹಿಂದೆ ಗೌರೀಭಿದನೂರು ತಾಲ್ಲೂಕು ನಾಮಗೊಂಡ್ಲು ಗ್ರಾಮದ ಲೇಟ್ ಬಾಲಕೃಷ್ಣ ಎಂಬುವರ ಮಗಳಾದ ನವಲತ ಎಂಬುವರನ್ನು ಮದುವೆ ಮಾಡಿಕೊಡಿರುತ್ತೇನೆ. ತನ್ನ ಹೆಂಡತಿ ನವಲತರವರಿಗೆ ಸುಮಾರು 22 ವರ್ಷ ವಯಸ್ಸಿನ ಧನಂಜಯ ಎಂಬ ಒಬ್ಬ ತಮ್ಮನಿರುತ್ತಾನೆ. ಧನಂಜಯ ರವರು ಈಗ್ಗೆ ಸುಮಾರು 1 ವರ್ಷದಿಂದ ಚಿಕ್ಕಬಳ್ಳಾಪುರದಲ್ಲಿರುವ ಪಿನ್ ಕೇರ್ ಸ್ಮಾಲ್ ಪೈನಾನ್ಸ್ ಬ್ಯಾಂಕ್ ನಲ್ಲಿ ಕೆಲಸ ಮಾಡಿಕೊಂಡಿದ್ದನು. ಸದರಿ ಪೈನಾನ್ಸ್ ನಲ್ಲಿ ನೀಡಿರುವ ಸಾಲ ವಸೂಲಿ ಮಾಡಿಕೊಂಡು ಬರುವುದು ಧನಂಜಯನವರ ಕೆಲಸವಾಗಿರುತ್ತೆ. ದಿ:17.06.2021 ರಂದು ತಾನು ತಮ್ಮ ಗ್ರಾಮದಲ್ಲಿದ್ದಾಗ ಬೆಳಿಗ್ಗೆ ಸುಮಾರು 9-00 ಗಂಟೆ ಸಮಯದಲ್ಲಿ ತನಗೆ ತಮ್ಮ ಸಂಬಂದಿಕರಾದ ಶ್ರೀಮತಿ ಲಕ್ಷ್ಮಿನರಸಮ್ಮ ಕೋಂ ಮುನಿರಾಜು, ಹೆಣ್ಣೂರು ಕದಿರೇನಹಳ್ಳಿ ಗ್ರಾಮದ( ಪರಸದಿನ್ನೆ ) ವರು ಪೋನ್ ಮಾಡಿ ಈ ದಿನ ದಿನಾಂಕ:17.06.2021 ರಂದು ಬೆಳಿಗ್ಗೆ 8-40 ಗಂಟೆ ಸಮಯದಲ್ಲಿ ದಿ:17.06.2021 ರಂದು ಬೆಳಿಗ್ಗೆ 7-30 ಗಂಟೆ ಸಮಯದಲ್ಲಿ ಧನಂಜಯರವರಿಗೆ ರಾಷ್ಟ್ರೀಯ ಹೆದ್ದಾರಿ 44 ರಲ್ಲಿರುವ ಜನಕ ಡಾಬದ ಬಳಿ  ರಸ್ತೆ ಅಪಘಾತವಾಗಿದ್ದು ಗಾಯಾಳು ಧನಂಜಯರವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ  ಆಸ್ಪತ್ರೆಗೆ 108 ಆಂಬುಲೆನ್ಸ್ ನಲ್ಲಿ ಕಳುಹಿಸಿರುವುದಾಗಿ ನಿಕಿಲ್ ಎಂಬುವರು ತನಗೆ ತಿಳಿಸಿರುತ್ತಾರೆ ಎಂದು  ತಿಳಿಸಿದ್ದು,  ತಕ್ಷಣ ತಾನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ಧನಂಜಯನಿಗೆ ತಲೆಯ ಬಲಭಾಗಕ್ಕೆ ಮತ್ತು ಹಿಂಬದಿಯ ತಲೆಗೆ, ಹಾಗೂ ಎಡಕಾಲಿಗೆ ಮತ್ತು ಬಲಕಾಲಿಗೆ ರಕ್ತಗಾಯಗಳಾಗಿರುತ್ತೆ. ನಂತರ ಆಸ್ಪತ್ರೆಯಲ್ಲಿದ್ದ ನಿಕಿಲ್ ರವರು ತನಗೆ ತಿಳಿಸಿದ್ದೇನೆಂದರೆ ತಾನು ಮತ್ತು ಧನಂಜಯರವರು ಹಿಂದೆ ಮತ್ತು ಮುಂದೆ ತಮ್ಮ ಬಾಬತ್ತು ದ್ವಿಚಕ್ರ ವಾಹನಗಳಲ್ಲಿ ಬಾಗೇಪಲ್ಲಿ ಕಡೆಗೆ ಕೆಲಸಕ್ಕೆ ಹೊಗುತ್ತಿದ್ದಾಗ ಬೆಳಿಗ್ಗೆ ಸುಮಾರು 7-30 ಗಂಟೆ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ-44 ರಲ್ಲಿ ರುವ ಜನಕ ಡಾಬದ ಬಳಿಯಿಂದ ಸ್ವಲ್ಪ ಹಿಂದೆ ಕ್ರಷರ್ ಗಳಿಗೆ ಹೋಗುವ ರಸ್ತೆಯ ಬಳಿ ಬಾಗೇಪಲ್ಲಿ ಕಡೆಯಿಂದ ವಿರುದ್ದ ದಿಕ್ಕಿನಲ್ಲಿ ಬಂದ ಕೆ.ಎ.50.ಬಿ.8151 ನೊಂದಣಿ ಸಂಖ್ಯೆಯ ಭಾರತ್ ಬೆಂಜ್ ವಾಹನದ ಚಾಲಕ  ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕೆ.ಎ. 40. ಇ.ಬಿ. 2623 ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಧನಂಜಯ ರವರಿಗೆ ಡಿಕ್ಕಿ ಹೊಡೆಸಿ ರಸ್ತೆ ಅಪಘಾತವನ್ನುಂಟು ಮಾಡಿದ ಪರಿಣಾಮ, ದ್ವಿಚಕ್ರ ವಾಹನ ಜಖಂಗೊಂಡು, ದ್ವಿಚಕ್ರ ವಾಹನದ ಸವಾರ ಧನಂಜಯರವರ ತಲೆಯ ಬಲಭಾಗಕ್ಕೆ ಮತ್ತು ಹಿಂಬದಿಯ ತಲೆಗೆ, ಹಾಗೂ ಎಡಕಾಲಿಗೆ ಮತ್ತು ಬಲಕಾಲಿಗೆ ರಕ್ತಗಾಯಗಳಾಗಿರುತ್ತೆ. ಲಾರಿ ಚಾಲಕ ಲಾರಿಯನ್ನು ಅಪಘಾತವನ್ನುಂಟು ಮಾಡಿರುವ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುತ್ತಾನೆ. ಗಾಯಗಳಾಗಿದ್ದ ಧನಂಜಯರವರನ್ನು ತಾನು 108 ಆಂಬುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದಿರುತ್ತೇನೆ, ಎಂದು ತಿಳಿಸಿರುತ್ತಾನೆ. ನಂತರ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯಾದಿಕಾರಿಗಳ ಸಲಹೆಯಂತೆ ಧನಂಜಯರವರನ್ನು ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿರುತ್ತೇನೆ. ಧನಂಜಯನನ್ನು ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿಚಿಕಿತ್ಸೆಯನ್ನು ಕೊಡಿಸುತ್ತಿದ್ದುದ್ದರಿಂದ ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು, ಈ  ರಸ್ತೆ ಅಪಘಾತವನ್ನುಂಟು ಮಾಡಿರುವ ಕೆ.ಎ.50. ಬಿ. 8151 ನೊಂದಣಿ ಸಂಖ್ಯೆಯ ಭರತ್ ಬೆಂಜ್ ವಾಹನದ ಚಾಲಕ ನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ದೂರು.

 

6. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.128/2021 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ:18/06/2021 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಫಿರ್ಯಾದುದಾರರಾದ ಗುಡಿಬಂಡೆ ಪೊಲೀಸ್ ಠಾಣೆಯ ಎ.ಎಸ್.ಐ ಚಂದ್ರಶೇಖರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ    ದಿನಾಂಕ:18-06-2021 ರಂದು ಮದ್ಯಾಹ್ನ 3-45 ಗಂಟೆಯಲ್ಲಿ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿದ್ದಾಗ ಗುಡಿಬಂಡೆ ಪೊಲೀಸ್ ಠಾಣೆಯ 1ನೇ ಬೀಟ್ ಸಿಬ್ಬಂದಿ ಹನುಮಂತರಾಯಪ್ಪ ಸಿ.ಹೆಚ್.ಸಿ-73 ರವರು ನನಗೆ ಪೋನ್ ಮಾಡಿ ಈ ದಿನ ದಿನಾಂಕ:18/06/2021 ರಂದು ನಾನು ಗುಡಿಬಂಡೆ ಟೌನ್ ನ ಇಂದಿರಾ ನಗರದ ಕಡೆ ಗಸ್ತು ಮಾಡುತ್ತಿರುವಾಗ ಗುಡಿಬಂಡೆ ಟೌನ್ ನ ಗುಡಿಬಂಡೆಯ ಐ.ಬಿ ಹಿಂಭಾಗ ಉಗ್ರಾಣ ರವರ ಜಮೀನಿನಲ್ಲಿ ಕೆಲವರು ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ನನಗೆ ಮಾಹಿತಿ ನೀಡಿದರ ಮೇರೆಗೆ, ಠಾಣಾ ಸಿಬ್ಬಂದಿಯಾದ ಸಿ.ಪಿ.ಸಿ-198 ನಾಗೇಶ್ ಸಿ,ಎಚ್,ಸಿ-102 ಆನಂದ ಸಿ,ಪಿ,ಸಿ-85 ಸುನೀಲ್ ಕುಮಾರ್ ರವರನ್ನು ಕರೆಯಿಸಿಕೊಂಡು ಸಿಬ್ಬಂದಿಯವರಿಗೆ ಮಾಹಿತಿಯನ್ನು ಸಂಜೆ 4-00 ಗಂಟೆಗೆ ಗುಡಿಬಂಡೆ ಪೊಲೀಸ್ ಠಾಣೆಯಿಂದ ಬಿಟ್ಟು ಸಂಜೆ 4-10 ಇಂದಿರಾನಗರದ  ಹೋಗಿ  ಗಸ್ತಿನಲ್ಲಿದ್ದ ಸಿ,ಹೆಚ್,ಸಿ-73 ಹನುಮಂತರಾಯಪ್ಪ ರವರನ್ನು ಕರೆದುಕೊಂಡು ಹಾಗೂ ಅಲ್ಲಿಯೇ ಇದ್ದ ಪಂಚರನ್ನು ಬರಮಾಡಿಕೊಂಡು ಇಂದಿರಾನಗರದ  ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ, ಕೆಲ ಮಂದಿ ಗುಂಪಾಗಿ ಕುಳಿತುಕೊಂಡು ಅಂದರ್-100 ಬಾಹರ್-100 ಎಂದು ಕೂಗುತ್ತಾ ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಸಂಜೆ 4-30 ಗಂಟೆಗೆ ದಾಳಿ ಮಾಡಿದಾಗ, ಜೂಜಾಟವನ್ನು ಆಡುತ್ತಿದ್ದವರು ಓಡಿ ಹೋಗಿದ್ದು ಓಡಿ ಹೋದವರ  ಪೈಕಿ ನಾವುಗಳು ಕೆಲವರನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ 1) ಮಂಜುನಾಥ ಬಿನ್ ವೆಂಕಟೇಶಪ್ಪ 28 ವರ್ಷ ನಾಯಕರು ಜಿರಾಯ್ತಿ ರೂರಲ್ಗುಡಿಬಂಡೆ, ಗುಡಿಬಂಡೆ ಟೌನ್ 2) ಮಂಜುನಾಥ ಬಿನ್ ಗಂಗಪ್ಪ 40 ವರ್ಷ ನಾಯಕರು ಕಂಬಿ ಕೆಲಸ 1 ನೇ ವಾಡರ್್ ಗುಡಿಬಂಡೆ ಟೌನ್ 3) ರಾಮಾಂಜಿ ಬಿನ್ ನಂಜುಂಡಪ್ಪ 47 ವರ್ಷ, ನಾಯಕರು, ಅಡುಗೆ ಮಾಡುವ ಕೆಲಸ, ಇಂದಿರಾನಗರ ಗುಡಿಬಂಡೆ ಟೌನ್  4) ಶಂಕರ್ ಬಿನ್ ರಾಮಪ್ಪ 30ವರ್ಷ ನಾಯಕರು ಸ್ಟುಡಿಯೊನಲ್ಲಿ ಕೆಲಸ ನಿಚ್ಚನಬಂಡಹಳ್ಳಿ ಗ್ರಾಮ ಗುಡಿಬಂಡೆ ತಾಲ್ಲುಕು. 5) ಶ್ರೀನಿವಾಸ ಬಿನ್ ಜಯರಾಮಪ್ಪ 45ವರ್ಷ ವಕ್ಕಲಿಗರು ಟಡುಗೆ ಮಾಡುವ ಕೆಲಸ ಗುಡಿಬಂಡೆ ಟೌನ್ 6) ಸೂರ್ಯನಾರಾಯಣ ಬಿನ್ ಸುಬ್ಬನ್ನ 56ವರ್ಷ ಬಲಜಿಗರು ವ್ಯೆವಸಾಯ ಇಂದಿರಾನಗರ  ಗುಡಿಬಂಡೆ ಟೌನ್  ಎಂದು ತಿಳಿಸಿರುತ್ತಾರೆ.  ನಂತರ ಪಂಚರ ಸಮಕ್ಷಮ ವಶದಲಿದ್ದ್ಲ ಆಸಾಮಿಗಳನ್ನು ಪರಿಶೀಲನೆ ಮಾಡಲಾಗಿ ಒಟ್ಟು ಲೆಕ್ಕ ಮಾಡಲಾಗಿ 4810/- ರೂ ಗಳಿದ್ದು ಸ್ಥಳದಲ್ಲಿ 52 ಇಸ್ಪೀಟ್ ಎಲೆಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ನಂತರ ಜೂಜಾಟಕ್ಕೆ ಪಣಕ್ಕೆ ಇಟ್ಟಿದ್ದ 4810 ರೂ & 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಸಂಜೆ 4-10 ಗಂಟೆಯಿಂದ ಸಂಜೆ 5-10 ಗಂಟೆಯವರೆಗೆ ಜರುಗಿಸಿದ ಧಾಳಿ ಪಂಚನಾಮೆ ಕಾಲದಲ್ಲಿ ಅಮಾನತ್ತುಪಡಿಸಿಕೊಂಡಿರುತ್ತೆ. ಮೇಲ್ಕಂಡ ಆರೋಪಿತರನ್ನು & ಮಾಲುಗಳನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 5-15 ಗಂಟೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ 5-30 ಗಂಟೆಗೆ ಹಾಜರುಪಡಿಸಿ ಸದರಿ ಆರೋಪಿತರ ವಿರುದ್ದ ಮುಂದಿನ ಕಾನೂನು ಕ್ರಮಕೈಗೊಳ್ಳು ನೀಡಿದ ದೂರಾಗಿರುತ್ತೆ.

 

7. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.63/2021 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ 19/06/2021 ರಂದು ಮಧ್ಯಾಹ್ನ 14-30 ಗಂಟೆ ಸಮಯದಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಶ್ರೀ ಎಂ. ನಾರಾಯಣಪ್ಪ ರವರಿಗೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ಸರಹದ್ದು ಗೌಡನಹಳ್ಳಿ ಗ್ರಾಮದ ಮುನಿಶಾಮಿ ರವರ ಜಮೀನಿನಲ್ಲಿನ ಹುಣಸೇ ಮರದ ಕೆಳಗೆ  ಯಾರೋ ಕೆಲವರು ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಟೀಟು ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನ ಮೇರೆಗೆ ಸಿಬ್ಬಂದಿಯೊಂದಿಗೆ ದಾಳಿ ಮಾಡುವ ಸಲುವಾಗಿ ಕೆಎ-40-ಜಿ-539 ಸಕರ್ಾರಿ ವಾಹನದಲ್ಲಿ ಪಿ.ಎಸ್.ಐ ಎಂ. ನಾರಾಯಣಪ್ಪ ರವರು  ಪ್ರೋಬೆಷನರಿ ಪಿ.ಎಸ್.ಐ ಅರುಣ್ಗೌಡ ಪಾಟೀಲ್, ಠಾಣಾ ಸಿಬ್ಬಂದಿಯವರಾದ ಸಿಹೆಚ್ಸಿ-161 ಕೃಷ್ಣಪ್ಪ, ಸಿಹೆಚ್ಸಿ-210 ಕೆ.ಬಿ.ಶಿವಪ್ಪ ಸಿಹೆಚ್ಸಿ-216  ಶ್ರೀರಾಮಪ್ಪ, ಸಿಪಿಸಿ-499 ರಾಮಕೃಷ್ಣ ರವರೊಂದಿಗೆ ಗೌಡನಹಳ್ಳಿ ಗ್ರಾಮದ ಬಳಿ ಹೋಗಿ ಅಲ್ಲಿದ್ದವರನ್ನು ಪಂಚಾಯ್ತಿದಾರನ್ನು ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ ಅವರೊಂದಿಗೆ ಗ್ರಾಮದಿಂದ ಪಶ್ಚಿಮಕ್ಕೆ ಸುಮಾರು 500 ಮೀಟರ್ ದೂರದ ಗೌಡನಹಳ್ಳಿ ಗ್ರಾಮದ ಮುನಿಶಾಮಿ ರವರ ಜಮೀನಿನ ಬಳಿ ಹೋಗಿ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ವಾಹನದಿಂದ ಇಳಿದು  ಸ್ವಲ್ಪ ದೂರ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಸದರಿ ಜಮೀನಿನ ಹುಣಸೇಮರದ ಕೆಳಗೆ ಯಾರೋ ಕೆಲವರು ಹಣವನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ ಅಂದರ್ ಬಾಹರ್ ಎಂದು ಇಸ್ಟೀಟು ಜೂಜಾಟವಾಡುತ್ತಿದ್ದು, ಸದರಿಯವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ಜೂಜಾಡುತ್ತಿದ್ದ ಸದರಿಯವರು ಇಸ್ಟೀಟ್ ಎಲೆ. ಹಣವನ್ನು ಸ್ಥಳದಲ್ಲಿಯೇ ಬಿಸಾಡಿ ಓಡಲು ಪ್ರಯತ್ನಿಸಿದ್ದು, ಅವರನ್ನು ಬೆನ್ನಟ್ಟಿ ವಶಕ್ಕೆ ಪಡೆದಿದ್ದು ಸದರಿಯವರನ್ನು  ಸ್ಥಳಕ್ಕೆ ಕರೆದುಕೊಂಡು ಬಂದು ಹೆಸರು ಮತ್ತು ವಿಳಾಸ ಕೇಳಲಾಗಿ 1) ಶ್ರೀನಾಥ ಬಿನ್ ಸುಬ್ರಮಣಿ, 28 ವರ್ಷ, ದೋಬಿ ಜನಾಂಗ, ಚಾಲಕ ವೃತ್ತಿ, ವಾಸ ಕೆಂಚಾರ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು  2) ಬಾಬು ಬಿನ್ ನಾಗರಾಜಪ್ಪ, 26 ವರ್ಷ, ದೋಬಿ ಜನಾಂಗ, ಜಿರಾಯ್ತಿ, ವಾಸ ಗೌಡನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು 3) ಕುಮಾರ ಬಿನ್ ಚಂದ್ರಪ್ಪ, 23 ವರ್ಷ, ಪೂಸಲ ಜನಾಂಗ, ಜಿರಾಯ್ತಿ, ವಾಸ ಗೌಡನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು. 4) ಚಲಪತಿ ಬಿನ್ ನಾರೆಪ್ಪ, 30 ವರ್ಷ, ಕೊರಚ ಜನಾಂಗ, ಜಿರಾಯ್ತಿ, ವಾಸ ಗೌಡನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದರು. ಸ್ಥಳದಲ್ಲಿ ಪಂಚರ  ಸಮಕ್ಷಮ ಪರಿಶೀಲಿಸಲಾಗಿ 1600/- ರೂ ನಗದು ಹಣ, 52 ಇಸ್ಟೀಟ್ ಎಲೆಗಳು ಹಾಗೂ ಒಂದು ನ್ಯೂಸ್ ಪೇಪರ್ ಇದ್ದು, ಸದರಿಯವುಗಳನ್ನು ಈ ಕೇಸಿನ ಮುಂದಿನ ನಡಾವಳಿಗಾಗಿ ಅಮಾನತ್ತುಪಡಿಸಿಕೊಂಡು ಆಸಾಮಿಗಳನ್ನು ವಶಕ್ಕೆ ಪಡೆದು ಸ್ಥಳದಲ್ಲಿಯೇ ಮಧ್ಯಾಹ್ನ 15-00 ರಿಂದ 16-00 ಗಂಟೆ ವರೆಗೆ ಪಂಚನಾಮೆ ಕ್ರಮ ಜರುಗಿಸಿ ಆರೋಪಿತರು, ಮಾಲು ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ಆರೋಪಿತರು, ಮಾಲು ಹಾಗೂ ಮಹಜರ್ ನ್ನು ಮುಂದಿನ ಕ್ರಮಕ್ಕಾಗಿ ತಮ್ಮಲ್ಲಿ ನೀಡುತ್ತಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ ಸಂಖ್ಯೆ: 55/2021 ರಂತೆ ದಾಖಲು ಮಾಡಿಕೊಂಡು ಇ-ಮೇಲ್ ಮುಖಾಂತರ ಘನ ನ್ಯಾಯಾಲಯಕ್ಕೆ ಅನುಮತಿಗಾಗಿ ಮನವಿ ಪತ್ರ ರವಾನಿಸಿಕೊಂಡು ಸಂಜೆ 17-45 ಗಂಟೆಗೆ ಘನ ನ್ಯಾಯಾಲಯದಿಂದ ಇ-ಮೇಲ್ ಮುಖಾಂತರ ಅನುಮತಿ ಪಡೆದು ಠಾಣಾ ಮೊಸಂ 63/2021 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

8. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.68/2021 ಕಲಂ. 32(3),15(A) ಕೆ.ಇ ಆಕ್ಟ್:-

          ದಿನಾಂಕ.19.06.2021 ರಂದು ಕೆ.ಸತೀಶ್ ಪಿ.ಎಸ್.ಐ (ಕಾ.ಸು) ರವರು ಆರೋಪಿ ಮತ್ತು ಮಾಲನ್ನು ಠಾಣೆಗೆ ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ತಾನು ಕೋವಿಡ್-19 ಲಾಕ್ ಡೌನ್ ಪ್ರಯುಕ್ತ ದಿನಾಂಕ:19-06-2021 ರಂದು ಸಂಜೆ ಸುಮಾರು 6-15 ಗಂಟೆಗೆ ನಾನು ಹೆಚ್.ಸಿ.97 ಸುಬ್ರಮಣಿ ಜೀಪ್ ಚಾಲಕ ಮಂಜುನಾಥ ರವರೊಂದಿಗೆ ಠಾಣೆಯಿಂದ ಹೊರಟು ಶಿಡ್ಲಘಟ್ಟ ನಗರದ ಕೋಟೆ, ಆಶೋಕ ರಸ್ತೆ ಕಡೆ ಗಸ್ತು ಮಾಡುತ್ತಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ನಗರದ ಗಾಂಧೀನಗರದ ಲೇಔಟ್ ಪಕ್ಕದ ಮೈದಾನದಲ್ಲಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕರಿಗೆ ಪರವಾನಗಿ ಇಲ್ಲದೆ ಮದ್ಯಪಾನ ಮಾಡಲು ಅನುವು ಮಾಡಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ಪಂಚರೊಂದಿಗೆ ನಾವು ಮೇಲ್ಕಂಡ ಸ್ಥಳಕ್ಕೆ ಸಂಜೆ 6-45 ಗಂಟೆಯಲ್ಲಿ ಹೋಗಿ ನೋಡಿದಾಗ ಯಾರೋ ಇಬ್ಬರು ಮದ್ಯಪಾನ ಸೇವನೆ ಮಾಡುತ್ತಿದ್ದವರು ಪೊಲೀಸ್ ವಾಹನವನ್ನು ಕಂಡು ಓಡಿ ಹೋಗಿರುತ್ತಾರೆ. ಸ್ಥಳದಲ್ಲಿ ಮದ್ಯಪಾನ ಮಾಡಲು ಅನುವು ಮಾಡಿದ್ದ ಆಸಾಮಿಯನ್ನು ಹಿಡಿದು ಅವರ ಹೆಸರು ವಿಳಾಸ ಕೇಳಲಾಗಿ ನಾರಾಯಣಸ್ವಾಮಿ ಬಿನ್ ಲೇಟ್ ಸೊಣ್ಣಪ್ಪ, 65 ವರ್ಷ, ವಕ್ಕಲಿಗರು, ಜಿರಾಯ್ತಿ, ವರದನಾಯಕನಹಳ್ಳಿ ಗ್ರಾಮ, ಹಾಲಿ ವಾಸ ಮಾರುತಿ ನಗರದ ಮೂರ್ತಿ ರವರ ಮನೆಯಲ್ಲಿ ಬಾಡಿಗೆ ವಾಸ ಎಂದು ತಿಳಿಸಿದ್ದು, ಆತನ ಬಳಿ ಇದ್ದ ರಟ್ಟಿನ ಬಾಕ್ಸಿನಲ್ಲಿ ಪರಿಶೀಲಿಸಲಾಗಿ Original Choice Delux Whisky 90 ML ನ 19 ಮದ್ಯದ ಪಾಕೆಟ್ ಗಳಿದ್ದು, ಒಂದರ ಬೆಲೆ 35.13 ರೂಗಳಾಗಿದ್ದು, 19 ರ ಬೆಲೆ ಒಟ್ಟು 667-00 ರೂಗಳಾಗಿರುತ್ತೆ. ಇದೇ ಸ್ಥಳದಲ್ಲಿ ಮದ್ಯಪಾನ ಮಾಡಿದ Original Choice Delux Whisky 90 ML ನ 04 ಖಾಲಿ ಮದ್ಯದ ಪಾಕೇಟ್ ಗಳಿರುತ್ತೆ. ಹಾಗೂ 02 ಪ್ಲಾಸ್ಟಿಕ್ ಗ್ಲಾಸ್ಗಳಿರುತ್ತೆ. ಸದರಿ ಆಸಾಮಿಯನ್ನು ಮದ್ಯದ ಪಾಕೇಟ್ ಗಳನ್ನು ಮಾರಾಟ ಮಾಡಲು ಪರವಾನಗಿ ಇದೆಯೇ ಎಂದು ಪ್ರಶ್ನಿಸಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಸಿಕ್ಕಿದ 19 ಮದ್ಯದ ಪಾಕೇಟ್, 4-ಖಾಲಿ ಪಾಕೇಟ್ & ಖಾಲಿ ಗ್ಲಾಸ್ಗಳನ್ನು ಮುಂದಿನ ತನಿಖೆ ಬಗ್ಗೆ ಸಂಜೆ 7-00 ರಿಂದ 7-30 ಗಂಟೆಯವರೆಗೆ ಮಹಜರ್ ಮಾಡಿ ಅಮಾನತ್ತು ಪಡಿಸಿಕೊಂಡಿರುತ್ತೆ. ಸಾರ್ವಜನಿಕರ ಸ್ಥಳದಲ್ಲಿ ಮದ್ಯಪಾನ ಮಾಡಲು ಅನುವು ಮಾಡಿಕೊಟ್ಟಿರುವ ಮೇಲ್ಕಂಡ ನಾರಾಯಣಸ್ವಾಮಿ ರವರನ್ನು ವಶಕ್ಕೆ ಪಡೆದು ಮಾಲು ಸಮೇತ ಠಾಣೆಗೆ ಕರೆದುಕೊಂಡು ಬಂದು ಒಪ್ಪಿಸಿದ್ದು, ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 20-06-2021 04:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080