ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.142/2021 ಕಲಂ. 269,270 ಐ.ಪಿ.ಸಿ:-

          ದಿನಾಂಕ:20/05/2021 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿದಾರರಾದ  ಡಾ.ತೀರ್ಥದೀಪಿಕಾ, ಆಡಳಿತ ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ.  ಮಾರ್ಗಾನುಕುಂಟೆ  ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 19/05/2021 ರಂದು ಮದ್ಯಾಹ್ನ ಸುಮಾರು 2-00 ಗಂಟೆ ಸಮಯದಲ್ಲಿ ಗೂಳೂರು ಹೋಬಳಿ ಕೊಲಿಂಪಲ್ಲಿ ಗ್ರಾದ ವಾಸಿಯಾದ, 48 ವರ್ಷ, ನಾಯಕ ಜನಾಂಗ, ಇವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಅದರಂತೆ ನಾನು ಮತ್ತು ಸಿಬ್ಬಂದಿಯವರಾದ ನಿರ್ಮಲ ಡಿ,ಎಸ್ ಮತ್ತು ಅನಿತ ರವರು ಗಂಗುಲಪ್ಪ ರವರ ಮನೆಗ ಭೇಟಿ ಮಾಡಿದಾಗ ಮನೆಗೆ ಬೀಗ ಹಾಕಿದ್ದು ನಿರ್ಮಲ ರವರ ಪೊ ನಂ-9591782149. ರಿಂದ ಗಂಗುಲಪ್ಪರವರ ಪೊ ನಂ-9741024067 ಗೆ ಕರೆಮಾಡಿ ಕೊರೋನಾ ಪಾಸಿಟಿವ್ ಬಂದಿರುವ ಬಗ್ಗೆ ಮಾತನಾಡಿ ತಿಳುವಳಿಕೆ ಹೇಳಿದಾಗ ಗಂಗುಲಪ್ಪ ರವರು ಪೋನ್ ನಲ್ಲಿ ನನಗೆ ಮತ್ತು ಸಿಬ್ಬಂದಿಯವರಿಗೆ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಹಾಗೂ ತನಗೆ ಪಾಸಿಟಿವ್ ಬಂದಿರುವ ಬಗ್ಗೆ ಒಪ್ಪದೇ ಎಲ್ಲಂದರಲ್ಲೆ ಓಡಾಡಿ ಕೋವಿಡ್ ಸಾಂಕ್ರಾಮಿಕ ರೋಗವನ್ನು ಹರಡುತ್ತಿರುತ್ತಾರೆ. ಆದ್ದರಿಂದ ಗಂಗುಲಪ್ಪ ಬಿನ್ ಬಾವಣ್ಣ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.46/2021 ಕಲಂ. 188,269,270 ಐ.ಪಿ.ಸಿ & 51(b) THE DISASTER MANAGEMENT ACT, 2005 :-

          ದಿನಾಂಕ 19-05-2021 ರಂದು ಬೆಳಿಗ್ಗೆ 8-30 ಗಂಟೆ ಪಿರ್ಯಾದಿ  ಸಿ.ಹೆಚ್.ಸಿ 129 ರವಣಪ್ಪ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ  ನನಗೆ ಮತ್ತು  ಸಿಪಿಸಿ -468 ಆಂಜೀನಪ್ಪ ರವರಿಗೆ  ಕೋವಿಡ್- 19 ಹಿನ್ನೆಲೆಯಲ್ಲಿ ಚೇಳೂರು  ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ಗಸ್ತು ಕರ್ತವ್ಯದಲ್ಲಿದ್ದು ಎಲ್ಲಾ ಅಂಗಡಿಯವರಿಗೆ ಮತ್ತು ಸಾರ್ವಜನಿಕರಿಗೆ ಕೋವಿಡ್ 19 ಕರೋನ ವೈರಸ್ ಹರಡುವಿಕೆಯನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಬೆಳಿಗ್ಗೆ  6-00 ಗಂಟೆಯಿಂದ 10-00 ಗಂಟೆವರೆಗೆ ಅಗತ್ಯ ವಸ್ತುಗಳನ್ನು ತಗೆದುಕೊಂಡು ಹೋಗಲು ಮತ್ತು ಸರ್ಕಾರ ಹೊರಡಿಸಿರುವ ಆದೇಶವನ್ನು ಪಾಲಿಸಲು ಹಾಗೂ ಪ್ರತಿಯೊಬ್ಬರಿಗೂ ಮಾಸ್ಕ್ ಧರಿಸುವಂತೆ ಹಾಗೂ ಒಬ್ಬರಿಂದ ಒಬ್ಬರಿಗೆ ಸಾಮಾಜಿಕ ಅಂತರವನ್ನು ಕಾಪಾಡುವಂತೆ ಸೂಚಿಸುತ್ತಿರುವಾಗ  ಬೆಳಿಗ್ಗೆ ಸುಮಾರು 8-00 ಗಂಟೆ ಸಮಯದಲ್ಲಿ ಚೇಳೂರಿನಿಂದ ಬಾಗೇಪಲ್ಲಿಗೆ ಹೋಗುವ ರಸ್ತೆಯಲ್ಲಿರುವ ಯಾವುದೇ ಹೆಸರು ಇರದ ಕಬ್ಬಿಣದ ಕಂಬಿ ಅಂಗಡಿ ಬಳಿ ಜನ ಗುಂಪಾಗಿ ಸೇರಿದ್ದರು  ನಾವು ಸ್ಥಳಕ್ಕೆ ಹೋಗಿ ನೋಡಲಾಗಿ ಸದರಿ ಅಂಗಡಿಯ ಮಾಲೀಕರು ಕೋವಿಡ್- 19 ರೋಗ ತಡೆಗಟ್ಟುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳದೆ ನಿರ್ಲಕ್ಷತನದಿಂದ ಜನರನ್ನು ಗುಂಪು -ಗುಂಪಾಗಿ ಸೇರಿಸಿಕೊಂಡು ವ್ಯಾಪಾರ ಮಾಡುತ್ತಿದ್ದು ಸದರಿ ಅಂಗಡಿಯ ಮಾಲೀಕರ ಹೆಸರು  ವಿಳಾಸ ಕೇಳಲಾಗಿ ಭಾಗ್ಯಮ್ಮ ಕೊಂ ಈಶ್ವರ ರೆಡ್ಡಿ ,35ವರ್ಷ, ವಕ್ಕಲಿಗರು , ಕಂಬಿ ಅಂಗಡಿ, ಎಂತ ತಿಳಿಸಿರುತ್ತಾರೆ ಸದರಿ ಅಂಗಡಿಯ ಮಾಲೀಕರಾದ ಭಾಗ್ಯಮ್ಮ  ರವರು ಕೋವಿಡ್ 19 ರೋಗವನ್ನು ತಡೆಗಟ್ಟುವ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ಸಾರ್ವಜನಿಕರನ್ನು ಗುಂಪಾಗಿ ಸೇರಿಸಿಕೊಂಡು ವ್ಯಾಪಾರ ಮಾಡುತ್ತಾ ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಆದೇಶಗಳನ್ನು ಪಾಲಿಸದೆ ಉಲ್ಲಂಘನೆ ಮಾಡಿ ಪ್ರಾಣಕ್ಕೆ ಅಪಾಯಕಾರಿಯಾದ ಸಾಂಕ್ರಾಮಿಕ  ರೋಗದ ಸೊಂಕನ್ನು ಹರಡುವ ಸಂಭವ ಇರುವುದೆಂದು ತಿಳಿದಿದ್ದರೂ ಸಹ ಉದ್ದೇಶ ಪೂರ್ವಕವಾಗಿ ನಿರ್ಲಕ್ಷತನ ತೋರ್ಪಡಿಸಿರುವುದು ಕಂಡು ಬಂದಿದ್ದು ಸದರಿ ಅಂಗಡಿಯ ಮಾಲೀಕರಾದ ಭಾಗ್ಯಮ್ಮ ಕೊಂ ಈಶ್ವರ ರೆಡ್ಡಿ ಎಂಬುವವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರು .

 

3. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.47/2021 ಕಲಂ. 188,269,270 ಐ.ಪಿ.ಸಿ & 51(b) THE DISASTER MANAGEMENT ACT, 2005 :-

          ದಿನಾಂಕ 19-05-2021 ರಂದು ಬೆಳಿಗ್ಗೆ 8-30 ಗಂಟೆ ಪಿರ್ಯಾದಿ  ಸಿ.ಹೆಚ್.ಸಿ 129 ರವಣಪ್ಪ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ  ನನಗೆ ಮತ್ತು ಸಿಪಿಸಿ 468 ಆಂಜೀನಪ್ಪ ರವರಿಗೆ  ಕೋವಿಡ್- 19 ಹಿನ್ನೆಲೆಯಲ್ಲಿ ಚೇಳೂರು  ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ಗಸ್ತು ಕರ್ತವ್ಯದಲ್ಲಿದ್ದು ಎಲ್ಲಾ ಅಂಗಡಿಯವರಿಗೆ ಮತ್ತು ಸಾರ್ವಜನಿಕರಿಗೆ ಕೋವಿಡ್ 19 ಕರೋನ ವೈರಸ್ ಹರಡುವಿಕೆಯನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಬೆಳಿಗ್ಗೆ  6-00 ಗಂಟೆಯಿಂದ 10-00 ಗಂಟೆವರೆಗೆ ಅಗತ್ಯ ವಸ್ತುಗಳನ್ನು ತಗೆದುಕೊಂಡು ಹೋಗಲು ಮತ್ತು ಸರ್ಕಾರ ಹೊರಡಿಸಿರುವ ಆದೇಶವನ್ನು ಪಾಲಿಸಲು ಹಾಗೂ ಪ್ರತಿಯೊಬ್ಬರಿಗೂ ಮಾಸ್ಕ್ ಧರಿಸುವಂತೆ ಹಾಗೂ ಒಬ್ಬರಿಂದ ಒಬ್ಬರಿಗೆ ಸಾಮಾಜಿಕ ಅಂತರವನ್ನು ಕಾಪಾಡುವಂತೆ ಸೂಚಿಸುತ್ತಿರುವಾಗ  ಬೆಳಿಗ್ಗೆ ಸುಮಾರು 9-00 ಗಂಟೆ ಸಮಯದಲ್ಲಿ ಚೇಳೂರು ಗ್ರಾಮದ ಬಸ್ ನಿಲ್ದಾಣ ಬಳಿಯ ಶ್ರೀ ಮಾರುತಿ ಪ್ರಾವಿಜನ್ ಸ್ಟೋರ್  ಅಂಗಡಿ ಬಳಿ ಜನ ಗುಂಪಾಗಿ ಸೇರಿದ್ದರು  ನಾವು ಸ್ಥಳಕ್ಕೆ ಹೋಗಿ ನೋಡಲಾಗಿ ಸದರಿ ಅಂಗಡಿಯ ಮಾಲೀಕರು ಕೋವಿಡ್- 19 ರೋಗ ತಡೆಗಟ್ಟುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳದೆ ನಿರ್ಲಕ್ಷತನದಿಂದ ಜನರನ್ನು ಗುಂಪು -ಗುಂಪಾಗಿ ಸೇರಿಸಿಕೊಂಡು ವ್ಯಾಪಾರ ಮಾಡುತ್ತಿದ್ದು ಸದರಿ ಅಂಗಡಿಯ ಮಾಲೀಕರ ಹೆಸರು  ವಿಳಾಸ ಕೇಳಲಾಗಿ ಈಶ್ವರ ರೆಡ್ಡಿ ಬಿನ್ ವೆಂಕಟರವಣಪ್ಪ,32 ವರ್ಷ, ವಕ್ಕಲಿಗರು , ಶ್ರೀ ಮಾರುತಿ ಪ್ರಾವಿಜನ್ ಸ್ಟೋರ್ ,ಪಂಚಾಯಿತಿ ಮಳಿಗೆ , ವಾಸ ಷೇರಖಾನ್ ಕೋಟ  ಎಂತ ತಿಳಿಸಿರುತ್ತಾರೆ ಸದರಿ ಅಂಗಡಿಯ ಮಾಲೀಕರಾದ ಈಶ್ವರ ರೆಡ್ಡಿ   ರವರು ಕೋವಿಡ್ 19 ರೋಗವನ್ನು ತಡೆಗಟ್ಟುವ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ಸಾರ್ವಜನಿಕರನ್ನು ಗುಂಪಾಗಿ ಸೇರಿಸಿಕೊಂಡು ವ್ಯಾಪಾರ ಮಾಡುತ್ತಾ ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಆದೇಶಗಳನ್ನು ಪಾಲಿಸದೆ ಉಲ್ಲಂಘನೆ ಮಾಡಿ ಪ್ರಾಣಕ್ಕೆ ಅಪಾಯಕಾರಿಯಾದ ಸಾಂಕ್ರಾಮಿಕ  ರೋಗದ ಸೊಂಕನ್ನು ಹರಡುವ ಸಂಭವ ಇರುವುದೆಂದು ತಿಳಿದಿದ್ದರೂ ಸಹ ಉದ್ದೇಶ ಪೂರ್ವಕವಾಗಿ ನಿರ್ಲಕ್ಷತನ ತೋರ್ಪಡಿಸಿರುವುದು ಕಂಡು ಬಂದಿದ್ದು ಸದರಿ ಅಂಗಡಿಯ ಮಾಲೀಕರಾದ ಈಶ್ವರ ರೆಡ್ಡಿ ಎಂಬುವವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರು .

 

4. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.48/2021 ಕಲಂ. 188,269,270 ಐ.ಪಿ.ಸಿ & 51(b) THE DISASTER MANAGEMENT ACT, 2005 :-

          ದಿನಾಂಕ 19-05-2021 ರಂದು ಬೆಳಿಗ್ಗೆ 8-30 ಗಂಟೆ ಪಿರ್ಯಾದಿ  ಸಿ.ಹೆಚ್.ಸಿ 129 ರವಣಪ್ಪ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ  ನನಗೆ ಮತ್ತು ಸಿಪಿಸಿ 468 ಆಂಜೀನಪ್ಪ ರವರಿಗೆ  ಕೋವಿಡ್- 19 ಹಿನ್ನೆಲೆಯಲ್ಲಿ ಚೇಳೂರು  ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ಗಸ್ತು ಕರ್ತವ್ಯದಲ್ಲಿದ್ದು ಎಲ್ಲಾ ಅಂಗಡಿಯವರಿಗೆ ಮತ್ತು ಸಾರ್ವಜನಿಕರಿಗೆ ಕೋವಿಡ್ 19 ಕರೋನ ವೈರಸ್ ಹರಡುವಿಕೆಯನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಬೆಳಿಗ್ಗೆ  6-00 ಗಂಟೆಯಿಂದ 10-00 ಗಂಟೆವರೆಗೆ ಅಗತ್ಯ ವಸ್ತುಗಳನ್ನು ತಗೆದುಕೊಂಡು ಹೋಗಲು ಮತ್ತು ಸರ್ಕಾರ ಹೊರಡಿಸಿರುವ ಆದೇಶವನ್ನು ಪಾಲಿಸಲು ಹಾಗೂ ಪ್ರತಿಯೊಬ್ಬರಿಗೂ ಮಾಸ್ಕ್ ಧರಿಸುವಂತೆ ಹಾಗೂ ಒಬ್ಬರಿಂದ ಒಬ್ಬರಿಗೆ ಸಾಮಾಜಿಕ ಅಂತರವನ್ನು ಕಾಪಾಡುವಂತೆ ಸೂಚಿಸುತ್ತಿರುವಾಗ  ಬೆಳಿಗ್ಗೆ ಸುಮಾರು 10-00 ಗಂಟೆ ಸಮಯದಲ್ಲಿ ಚೇಳೂರು ಗ್ರಾಮದ ಕಂದಕೂರು ರಸ್ತೆಯಲ್ಲಿರುವ  ಮುರಳಿ  ಪ್ರಾವಿಜನ್ ಸ್ಟೋರ್  ಅಂಗಡಿ ಬಳಿ ಜನ ಗುಂಪಾಗಿ ಸೇರಿದ್ದರು  ನಾವು ಸ್ಥಳಕ್ಕೆ ಹೋಗಿ ನೋಡಲಾಗಿ ಸದರಿ ಅಂಗಡಿಯ ಮಾಲೀಕರು ಕೋವಿಡ್- 19 ರೋಗ ತಡೆಗಟ್ಟುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳದೆ ನಿರ್ಲಕ್ಷತನದಿಂದ ಜನರನ್ನು ಗುಂಪು -ಗುಂಪಾಗಿ ಸೇರಿಸಿಕೊಂಡು ವ್ಯಾಪಾರ ಮಾಡುತ್ತಿದ್ದು ಸದರಿ ಅಂಗಡಿಯ ಮಾಲೀಕರ ಹೆಸರು  ವಿಳಾಸ ಕೇಳಲಾಗಿ ಮುರಳಿ ಬಿನ್ ವೆಂಕಟರವಣ ರೆಡ್ಡಿ,33 ವರ್ಷ ,ವಕ್ಕಲಿಗರು,ಮುರಳಿ ಪ್ರಾವಿಜನ್ ಸ್ಟೋರ್,ಕಂದಕೂರು ರಸ್ತೆ, ಚೇಳೂರು,  ಎಂತ ತಿಳಿಸಿರುತ್ತಾರೆ ಸದರಿ ಅಂಗಡಿಯ ಮಾಲೀಕರಾದ ಮುರಳಿ ರವರು ಕೋವಿಡ್ 19 ರೋಗವನ್ನು ತಡೆಗಟ್ಟುವ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ಸಾರ್ವಜನಿಕರನ್ನು ಗುಂಪಾಗಿ ಸೇರಿಸಿಕೊಂಡು ವ್ಯಾಪಾರ ಮಾಡುತ್ತಾ ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಆದೇಶಗಳನ್ನು ಪಾಲಿಸದೆ ಉಲ್ಲಂಘನೆ ಮಾಡಿ ಪ್ರಾಣಕ್ಕೆ ಅಪಾಯಕಾರಿಯಾದ ಸಾಂಕ್ರಾಮಿಕ  ರೋಗದ ಸೊಂಕನ್ನು ಹರಡುವ ಸಂಭವ ಇರುವುದೆಂದು ತಿಳಿದಿದ್ದರೂ ಸಹ ಉದ್ದೇಶ ಪೂರ್ವಕವಾಗಿ ನಿರ್ಲಕ್ಷತನ ತೋರ್ಪಡಿಸಿರುವುದು ಕಂಡು ಬಂದಿದ್ದು ಸದರಿ ಅಂಗಡಿಯ ಮಾಲೀಕರಾದ ಈಶ್ವರ ರೆಡ್ಡಿ ಎಂಬುವವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರು .

 

5. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.76/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:19.05.2021 ರಂದು ಮದ್ಯಾಹ್ನ 15-15 ಗಂಟೆ ಸಮಯದಲ್ಲಿ ಪಿ.ಎಸ್.ಐ ಸಾಹೇಬರು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:19.05.2021 ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಪಟ್ರೇನಹಳ್ಳಿ ಗ್ರಾಮದ ವಾಸಿ  ನಾಗೇಶ ಬಿನ್ ನಾರಾಯಣಸ್ವಾಮಿ 30 ವರ್ಷ ಆದಿ ಕರ್ನಾಟಕ ಜನಾಂಗ ಚಿಲ್ಲರೆ ಅಂಗಡಿ  ವ್ಯಾಪಾರ  ರವರು ತಮ್ಮ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿರುತ್ತದೆ. ಈ ಬಗ್ಗೆ  ಮೇಲ್ಕಂಡ ಆಸಾಮಿಯ ವಿರುದ್ದ ಕಲಂ 15[ಎ] , 32[3] ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.

 

6. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.77/2021 ಕಲಂ. 15(A),32(3)  ಕೆ.ಇ ಆಕ್ಟ್:-

          ದಿನಾಂಕ:20.05.2021 ರಂದು ಬೆಳಿಗ್ಗೆ 11-15 ಗಂಟೆಗೆ ಪಿ.ಎಸ್.ಐ ಸಾಹೇಬರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:20.05.2021 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಠಾ ಸರಹದ್ದಿಗೆ ಸೇರಿದ ದೊಡ್ಡಪೈಯಲಗುರ್ಕಿ ಗ್ರಾಮದ ವಾಸಿ ನರಸಿಂಹರೆಡ್ಡಿ ಬಿನ್ ನಾರಾಯಣಪ್ಪ , 37 ವರ್ಷ ವಕ್ಕಲಿಗರು ಜಿರಾಯ್ತಿ ರವರು ತಮ್ಮ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೇ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿರುತ್ತದೆಂದು ಈ ಬಗ್ಗೆ  ಮೇಲ್ಕಂಡ ಆಸಾಮಿಯ ವಿರುದ್ದ ಕಲಂ 15[ಎ] , 32[3] ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.

 

7. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.81/2021 ಕಲಂ. 188 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ದಿನಾಂಕ: 19/05/2021 ರಂದು ಬೆಳಿಗ್ಗೆ 11:45 ಗಂಟೆಗೆ ಪಿ ಎಸ್ ಐ (ಕಾ & ಸು -1 ) ರವರು ನೀಡಿದ ಜ್ಞಾಪನವನ್ನು ಪಡೆದುಕೊಂಡು ಸಾರಾಂಶವೇನೆಂದರೆ ದಿ: 19/05/2021 ರಂದು ಬೆಳಿಗ್ಗೆ ತಾನು ಮತ್ತು ಠಾಣಾ ಸಿಬ್ಬಂದಿ ಪಿ.ಸಿ 426 ಸರ್ವೇಶ್ ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ಸಂಖ್ಯೆ ಕೆಎ 40 ಜಿ 138  ರಲ್ಲಿ ಚಿಂತಾಮಣಿ ನಗರ ಗಸ್ತಿನಲ್ಲಿದ್ದಾಗ  ಕೋಲಾರ ಕ್ರಾಸ್ ಕಡೆ ಗಸ್ತು ಮಾಡುತ್ತಿದ್ದಾಗ ರಸ್ತೆಯ ಎಡಗಡೆ ಇರುವ ಧನಲಕ್ಷ್ಮೀ ಟ್ರೇಡರ್ಸ್ ಅಂಗಡಿಯ ಮಾಲೀಕರು ಸರ್ಕಾರದ ಕೋವಿಡ್ -19 ಆದೇಶಗಳನ್ನು ಪಾಲಿಸದೇ, ಲಾಕ್ ಡೌನ್ ಆದೇಶ ಹೊರಡಿಸಿದರೂ ಸಹ ಕೋವಿಡ್ – 19 ನಿಯಮಗಳನ್ನು ಉಲ್ಲಂಘಿಸಿ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಒಬ್ಬರಿಗೊಬ್ಬರು ಅಕ್ಕ – ಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಸದರಿ ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್ – 19 ಆದೇಶಗಳನ್ನು ಉಲ್ಲಂಘನೆ ಮಾಡಿದ್ದು, ಸದರಿ ಅಂಗಡಿಯ ಮಾಲೀಕನ ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ಶೇಖರ್ ಬಿನ್ ವೈ .ಆರ್ ಪ್ರಸಾದ್ , 43 ವರ್ಷ, ವೈಶ್ಯರು, ವ್ಯಾಪಾರ, ವಾಸ ವೆಂಕಟೇಶ್ವರ ಬಡಾವಣೆ, ಚಿಂತಾಮಣಿ ನಗರ ಎಂದು ತಿಳಿಸಿರುತ್ತಾರೆ. ಆದ್ದರಿಂದ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೆ ಅಂಗಡಿಯ ಬಳಿ ಸಾಮಾಜಿಕ ಅಂತರವನ್ನು ಪಾಲೀಸದೆ ಸರ್ಕಾರದ ಕೋವಿಡ್ 19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮತ್ತು ರಾಷ್ರ್ಟೀಯ ವಿಪತ್ತು ಕಾಯ್ದೆಯಡಿ ಸದರಿ ಅಂಗಡಿ ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

8. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.98/2021 ಕಲಂ. 32,34 ಕೆ.ಇ ಆಕ್ಟ್:-

          ದಿನಾಂಕ:19/05/2021 ರಂದು ರಾತ್ರಿ 9-00 ಗಂಟೆಯಲ್ಲಿ ಗುಡಿಬಂಡೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಚೇತನ್ ಕುಮಾರ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ. ತಾನು ಈ ದಿನ ದಿನಾಂಕ:19/05/2021 ರಂದು ಸಂಜೆ 6-30 ಗಂಟೆಯ ಸಮಯದಲ್ಲಿ ಗುಡಿಬಂಡೆ ತಾಲ್ಲೂಕು ಸೋಮೇನಹಳ್ಳಿ ಗ್ರಾಮದಲ್ಲಿ ಸಂಕ್ರಾಮಿಕ ಕೋವಿಡ್-19 ಕಾಯಿಲೆಯ ಬಗ್ಗೆ ಮುನ್ನೆಚರಿಕೆ ಕ್ರಮಗಳನ್ನು ನೀಡಲು ಸರ್ಕಾರಿ ಜೀಪು ಸಂಖ್ಯೆ ಕೆ,ಎ 40 ಜಿ-0855 ನೊಂದಣಿ ಸಂಖ್ಯೆಯ ವಾಹನದಲ್ಲಿ ಚಿಕ್ಕಬಳ್ಳಾಪುರ ಉಪ ವಿಭಾಗದ ಡಿ,ವೈ,ಎಸ್,ಪಿ ಸಾಹೇಬರು ಮತ್ತು ಸರ್ಕಾರಿ ಜೀಪು ಸಂಖ್ಯೆ ಕೆ,ಎ 40 ಜಿ-1777 ನೊಂದಣಿ ಸಂಖ್ಯೆಯ ವಾಹನದಲ್ಲಿ ನಾನು ಮತ್ತು ಚಾಲಕ 05 ಮದುಕುಮಾರ್ ಹಾಗೂ ಸಿಬ್ಬಂಧಿ ಹೆಚ್,ಸಿ 77 ಶಂಕರಪ್ಪ ರವರೊಂದಿಗೆ ಗಸ್ತಿನಲ್ಲಿದ್ದಾಗ ಗುಡಿಬಂಡೆ ತಾಲ್ಲೂಕು ಕಾಟೇನಹಳ್ಳಿ ಗ್ರಾಮದ ಕೆ,ಎನ್ ಮಂಜುನಾಥ ಬಿನ್ ಲೇಟ್ ನಾರಾಯಣಪ್ಪ ರವರ ಪೆಟ್ಟಿಗೆ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯವನ್ನು ಶೇಖರಿಸಿಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಮಾರಟ ಮಾಡುತ್ತಿರುವುದಾಗಿ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಸದರಿ ಮಾಹಿತಿಯನ್ನು ಡಿ,ವೈ,ಎಸ್,ಪಿ ಸಾಹೇಬರಿಗೆ ತಿಳಿಸಿ ಸಾಹೇಬರ ಮಾರ್ಗದರ್ಶನದಲ್ಲಿ ಸೋಮೇನಹಳ್ಳಿ ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿ ತಿಳಿಸಿ ದಾಳಿ ಸಮಯದಲ್ಲಿ ಪಂಚರಾಗಿ ಸಹಕರಿಸಲು ಕೋರಿದ್ದು ಅದಕ್ಕೆ ಅವರು ಒಪ್ಪಿಕೊಂಡು ನಂತರ ನಾವು ಬಂದಿದ್ದ ವಾಹನದಲ್ಲಿ ಪಂಚರನ್ನು ಕರೆದುಕೊಂಡು ನಾವು ಮತ್ತು ಡಿ,ವೈ,ಎಸ್,ಪಿ ಸಾಹೇಬರು ಕೆ,ಎ 40 ಜಿ-0855 ನೊಂದಣಿ ಸಂಖ್ಯೆಯ ಸರ್ಕಾರಿ ವಾಹನದಲ್ಲಿ ಚಾಲಕ ಹೆಚ್,ಸಿ 59 ಶ್ರೀನಿವಾಸ ರವರೊಂದಿಗೆ ಕಾಟೇನಹಳ್ಳಿ ಗ್ರಾಮಕ್ಕೆ ಹೋಗಿ ಮಂಜುನಾಥ ರವರ ಚಿಲ್ಲರೆ ಪೆಟ್ಟಿಗೆ ಅಂಗಡಿಯ ಬಳಿ ವಾಹನಗಳನ್ನು ನಿಲ್ಲಿಸಿ ಚಿಲ್ಲರೆ ಪೆಟ್ಟಿಗೆ ಅಂಗಡಿಯನ್ನು ಪರಿಶೀಲಿಸಿದಾಗ ಅಂಗಡಿಯಲ್ಲಿ ಒಂದು ಬಿಳಿ ಪ್ಲಾಸ್ಟಿಕ್ ಚೀಲವಿದ್ದು ಚೀಲವನ್ನು ತೆರೆದು ನೋಡಿದಾಗ ಚೀಲದಲ್ಲಿ 1) ಹೈವಾರ್ಡ್ಸ  ಚೀರ್ಸ್ ವೀಸ್ಕಿ ಕಂಪನಿಯ 90 ಎಂ.ಎಲ್. ಸಾಮಥ್ರ್ಯದ  ಮದ್ಯವುಳ್ಳ  16 ಟೆಟ್ರಾ ಪಾಕೇಟ್ಗಳು, ಇದ್ದು ಇದರ ಒಟ್ಟು ಮದ್ಯ 1 ಲೀಟರ್ 440 ಎಂ.ಎಲ್. ಆಗಿದ್ದು ಒಂದು ಟೆಟ್ರಾ ಪಾಕೇಟ್ ನ ಬೆಲೆ 35.13 ರೂಗಳಿದ್ದು ಇದರ ಒಟ್ಟು ಮೌಲ್ಯವು 562 ರೂಗಳಾಗಿದ್ದು. 2) ಕಿಂಗ್ ಪಿಷರ್ ಸ್ರ್ಟಾಂಗ್ ಪ್ರೀಮಿಯಮ್ ಬೀರ್ 500 ಎಮ್,ಎಲ್ ಸಾಮಥ್ಯದ ಮದ್ಯವುಳ್ಳ 18 ಟಿನ್ ಗಳು ಇದ್ದು ಇದರ ಒಟ್ಟು ಮದ್ಯ 9 ಲೀಟರ್ ಆಗಿದ್ದು ಒಂದು ಟಿನ್ ಬೀರ್ ಬೆಲೆ 120 ರೂಗಳಿದ್ದು. ಇದರ ಒಟ್ಟು ಮೌಲ್ಯವು 120*18=2160 ರೂಗಳಾಗಿದ್ದು. 3) ನಾಕ್ ಔಟ್ ಹೈ ಪಂಚ್ ಸ್ರ್ಟಾಂಗ್ ಬೀರ್ 650 ಎಮ್,ಎಲ್ ಸಾಮಥ್ಯದ ಮದ್ಯವುಳ್ಳ 10 ಬಾಟಲ್ ಗಳು ಇದ್ದು ಇದರ ಒಟ್ಟು ಮದ್ಯ 6 ಲೀಟರ್ 500 ಎಮ್,ಎಲ್ ಆಗಿದ್ದು ಒಂದು ಬಾಟಲ್ ಬೀರ್ ಬೆಲೆ 145 ರೂಗಳಿದ್ದು ಇದರ ಒಟ್ಟು ಮೌಲ್ಯವು 145*10=1450 ರೂಗಳಾಗಿದ್ದು. 4) ಬ್ಯಾಗ್ ಪೈಪರ್ ಡಿಲಕ್ಸ ವೀಸ್ಕಿ ಕಂಪನಿಯ 180 ಎಂ.ಎಲ್. ಸಾಮಥ್ರ್ಯದ ಮದ್ಯವುಳ್ಳ 08 ಟೆಟ್ರಾ ಪಾಕೇಟ್ಗಳು ಇದ್ದು ಇದರ ಒಟ್ಟು ಮದ್ಯ 1 ಲೀಟರ್ 440 ಎಂ.ಎಲ್. ಆಗಿದ್ದು ಒಂದು ಟೆಟ್ರಾ ಪಾಕೇಟ್ ನ ಬೆಲೆ 106.23 ರೂಗಳಿದ್ದು ಇದರ ಒಟ್ಟು ಮೌಲ್ಯವು 106.23* 8= 849 ರೂಗಳಾಗಿದ್ದು, 5) ಓಲ್ಡ ತವರೇನ್ ಕಂಪನಿಯ 180 ಎಂ.ಎಲ್. ಸಾಮಥ್ರ್ಯದ ಮದ್ಯವುಳ್ಳ 08 ಟೆಟ್ರಾ ಪಾಕೇಟ್ಗಳು ಇದ್ದು ಇದರ ಒಟ್ಟು ಮದ್ಯ 1 ಲೀಟರ್ 440 ಎಂ.ಎಲ್. ಆಗಿದ್ದು ಒಂದು ಟೆಟ್ರಾ ಪಾಕೇಟ್ ನ ಬೆಲೆ 86.75 ರೂಗಳಿದ್ದು ಇದರ ಒಟ್ಟು ಮೌಲ್ಯವು 86.75* 8=694 ರೂಗಳಾಗಿದ್ದು, ಸ್ಥಳದಲ್ಲಿದ್ದ ಚಿಲ್ಲರೆ ಪೆಟ್ಟಿಗೆ ಅಂಗಡಿ ಮಾಲೀಕನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಕೆ,ಎನ್ ಮಂಜನಾಥ ಬಿನ್ ಲೇಟ್ ನಾರಾಯಣಪ್ಪ, 50 ವರ್ಷ, ಈಡಿಗರು ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ:ಕಟೇನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಇಷ್ಟು ಪ್ರಮಾಣದ ಮದ್ಯವನ್ನು ಸಾಗಾಣಿಕೆ ಮಾಡಲು ಇರುವ ಪರವಾನಿಗೆಯನ್ನು ಹಾಜರ್ ಪಡಿಸುವಂತೆ ಕೇಳಲಾಗಿ ತಮ್ಮ ಬಳಿ ಯಾವುದೇ ಪರವಾನಿಗೆ ಇಲ್ಲ ಎಂದು ತಿಳಿಸಿದ್ದು ಸದರಿ ಆಸಾಮಿಯನ್ನು ವಿಚಾರಿಸುತ್ತಿದ್ದಾಗ ಕತ್ತಲಿನಲ್ಲಿ ಓಡಿ ಹೋಗಿದ್ದು ನಾವು ಆತನನ್ನು ಹಿಡಿಯಲು ಪ್ರಯತ್ನಿಸಲಾಗಿ ಕತ್ತಲಲ್ಲಿ ಸಿಕ್ಕಿರುವುದಿಲ್ಲ. ಸದರಿ ಅಸಾಮಿಯು ಯಾವುದೇ ಪರವಾನಿಗೆ ಇಲ್ಲದೇ ಕಾನೂನು ಬಾಹಿರವಾಗಿ ಮೇಲ್ಕಂಡ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದರಿಂದ ನಂತರ ಪಂಚರ ಸಮಕ್ಷಮ ಸ್ಥಳದಲ್ಲಿ ಮೇಲ್ಕಂಡ ಪ್ರತಿ ಐಟಂನಲ್ಲಿ ಒಂದೊಂದನ್ನು ಪ್ರತ್ಯೇಕವಾಗಿ ಬಿಳಿ ಬಟ್ಟೆ ಚೀಲದಲ್ಲಿ ಇಟ್ಟು ಅರಗು ಮಾಡಿ 'P' ಎಂಬ ಅಕ್ಷರದಿಂದ ಸೀಲ್ ಮಾಡಿ ಎಫ್.ಎಸ್.ಎಲ್. ಗೆ ಪರೀಕ್ಷೆಗೆ ಕಳುಹಿಸಿ ಕೊಡಲು ಶೇಖರಿಸಿರುತ್ತೆ. ಸದರಿ ಮಾಲನ್ನು ರಾತ್ರಿ 7-00 ಗಂಟೆಯಿಂದ 8-00 ಗಂಟೆಯವರೆಗೂ ಪಂಚರ ಸಮಕ್ಷಮ ಆರೋಪಿಯ ಮನೆಯ ಮುಂದಿನ ವಿದ್ಯುತ್ ಬೆಳಕಿನಲ್ಲಿ ಜರುಗಿಸಿದ ಪಂಚನಾಮೆ ಕಾಲದಲ್ಲಿ ಅಮಾನತ್ತು ಪಡಿಸಿಕೊಂಡು ಸದರಿ ಮಾಲನ್ನು ಅಸಲು ಪಂಚನಾಮೆ ಯೊಂದಿಗೆ ರಾತ್ರಿ 8-30 ಗಂಟೆಗೆ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ರಾತ್ರಿ 9-00 ಗಂಟೆಗೆ ಸದರಿ ಆರೋಪಿತನ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರು.      

ಇತ್ತೀಚಿನ ನವೀಕರಣ​ : 20-05-2021 05:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080