ಅಭಿಪ್ರಾಯ / ಸಲಹೆಗಳು

 

1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.27/2021 ಕಲಂ. 420 ಐ.ಪಿ.ಸಿ  :-

  ದಿನಾಂಕ; 19-04-2021 ರಂದು ಮದ್ಯಾಹ್ನ 2.30 ಗಂಟೆಗೆ ಪಿರ್ಯಾದಿಯಾದ ಶ್ರೀಮತಿ ಗೈಕ್ವಾಡ್ ರಾಜೇಶ್ವರಿ ಕೋಂ ಗೈಕ್ವಾಡ್ ಈರಣ್ಣ, 58  ವರ್ಷ, ಸ್ವಕುಲ ಸಾಳಿ ಮರಾಠಿ ಜನಾಂಗ, ಮನೆ ಕೆಲಸ, ವಾರ್ಡ್ ನಂ: 29, ರೈಲ್ವೆ ಸ್ಟೇಷನ್ ರಸ್ತ, ಚಾಮರಾಜಪೇಟೆ, ಚಿಕ್ಕಬಳ್ಳಾಪುರ ನಗರ. ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ತಾನು ತನ್ನ ಗಂಡ ಇಬ್ಬರು ತನ್ನ ಮಗನಾದ ಗೈಕ್ವಾಡೆ ಕೃಷ್ಣ ಮತ್ತು ಆತನ ಪತ್ನಿ ರವರೊಂದಿಗೆ ವಾಸವಾಗಿದ್ದು, ತನ್ನ ಮಗ ಚಿಕ್ಕಬಳ್ಳಾಪುರ ನಗರದ ಪಂಜಾಬ್ ನ್ಯಾಷ್ಯನಲ್ ಬ್ಯಾಂಕಿನಲ್ಲಿ ಅಸಿಸ್ಟೇಂಟ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು, ನಾವುಗಳು ಎಲ್ಲರೂ ಚಿಕ್ಕಬಳ್ಳಾಪುರ ನಗರದ ಚಾಮರಾಜಪೇಟೆಯಲ್ಲಿ ಬಾಡಿಗೆ ಮನೆಯಲ್ಲಿಯೇ ವಾಸ ಮಾಡಿಕೊಂಡಿದ್ದು. ದಿನಾಂಕ:19/04/2021 ರಂದು ತಾನು ಮತ್ತು ತನ್ನ ಸೂಸೆ ಶ್ರೀಮತಿ ಸ್ವಾತಿ ರವರೊಂದಿಗೆ ಚಾಮರಾಜಪೇಟೆಯ ರೈಲ್ವೇ ಸ್ಟೇಷನ್ ರಸ್ತೆಯ ಬಳಿಯಿರುವ ಬಲಮುರಿ ಗಣಪತಿ ದೇವಸ್ಥಾನಕ್ಕೆ ಬೆಳಗ್ಗೆ 11-15 ಗಂಟೆಗೆ ಹೊರಟು ದೇವಸ್ಥಾನಕ್ಕೆ ಹೋಗಿ ಸೋಲಾರ್ ಆಂಗಡಿ ಕಡೆಯಿಂದ ವಾಪಸ್ಸು ಮನೆಗೆ ಬರುವಾಗ ನಾನು ನಿಧಾನವಾಗಿ ನಡೆಯುತ್ತಿದ್ದು ತನ್ನ ಮುಂದೆ ಸೊಸೆ ಸ್ವಾತಿ ಐದು ಆರು ಹೆಜ್ಜೆ ಮುಂದೆ ಹೋಗುತ್ತಿದ್ದು ಸುಮಾರು 11-45 ಗಂಟೆಯಲ್ಲಿ ನಮ್ಮ ಮುಂದೆ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಯಾವುದೋ ದ್ವಿ ಚಕ್ರ ವಾಹನದಲ್ಲಿ ಬರುತ್ತಿದ್ದು ತನ್ನ ಬಳಿ ಬಂದು ಮುಂದೆ ವಾಹನವನ್ನು ನಿಲ್ಲಿಸಿದಂತೆ ಆಯಿತು ಸ್ವಲ್ಪ ಸಮಯದ ಬಳಿಕ ಅವರು ವಾಹನದಲ್ಲಿ ಹೊರಟು ಹೋದರು ತಾನು ನೋಡಿಕೊಂಡಾಗ ತನ್ನ ಕತ್ತಿನಲ್ಲಿದ್ದ ಬಂಗಾರದ ಮಾಂಗಲ್ಯ ಚೈನ್ ಇರಲಿಲ್ಲ. ತಾನು ಪುನಃ ಇನ್ನೋಮ್ಮೆ ನೋಡಿಕೊಂಡಾಗ ತನ್ನ ಕತ್ತಿನಲ್ಲಿದ್ದ ಚೈನ್ ಇಲ್ಲದಿದ್ದಾಗ ಕೂಗಿ ಮುಂದೆ ಹೋಗುತ್ತಿದ್ದ ತನ್ನ ಸೊಸೆ ಶ್ರೀಮತಿ ಸ್ವಾತಿರವರಿಗೆ ತಿಳಿಸಿದ್ದು. ಸ್ವಾತಿ ತನ್ನ ಬಳಿ ಬಂದು ನೋಡಿದ್ದು ತನ್ನ ಕತ್ತಿನಲ್ಲಿದ್ದ ಚೈನ್ ಇಲ್ಲದೆಯಿದ್ದುದರಿಂದ ತನ್ನ ಗಮನವನ್ನು ಬೇರೆಡೆ ಸೆಳೆದು ತನ್ನ ಕತ್ತಿನ ಚೈನ್ ಯಾರೋ ಅಪರಿಚಿತ ವ್ಯಕ್ತಿಗಳು ತೆಗೆದುಕೊಂಡು ಹೋಗಿರುತ್ತಾರೆ. ಅದರ ಅರಿವು ತನಗೆ ಇರಲಿಲ್ಲ. ಈ ಚೈನ್ ಆಂದಾಜು ಸುಮಾರು 16 ಗ್ರಾಂ ಇದ್ದು ಇದರ ಬೆಲೆ ಅಂದಾಜು 48000/- ರೂ ಗಳಾಗಿರುತ್ತದೆ. ತನ್ನ ಗಮನವನ್ನು ಬೇರೆಡೆ ಸೆಳೆದು ತನ್ನ ಮಾಂಗಲ್ಯ ಚೈನ್ ತೆಗೆದುಕೊಂಡ ಹೋದ ಆಪರಿಚಿತರನ್ನು ಪತ್ತೆ ಮಾಡಿ ಅವರುಗಳ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಮೇರೆಗೆ ಈ ಪ್ರ.ವ.ವರದಿ.

 

2. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.92/2021 ಕಲಂ. 506,504,143,147,149,323,324 ಐ.ಪಿ.ಸಿ :-

  ದಿನಾಂಕ 19/04/2021 ರಮದು ಸಂಜೆ 17 -00 ಗಂಟೆಗೆ ಠಾಣೆಯ ಬಳಿ ಪಿರ್ಯಾಧಿದಾರರಾದ ದುರ್ಗಮ್ಮ ಕೋಂ ಶಿವಣ್ಣ ,30ವರ್ಷ, ಬುಡಗ ಜಂಗಮ ಜನಾಂಗ, ಕೂಲಿ ಕೆಲಸ , ವಾಸ ನಗರಗೆರೆ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ-  ನಾನು ನನ್ನ ಗಂಡನ ವಿರುದ್ದ ಗುಡಿಬಂಡೆ ನ್ಯಾಯಾಲಯದಲ್ಲಿ ಈಗ್ಗೆ 4 ವರ್ಷಗಳ ಹಿಂದೆ ಸಂಸಾರ ನಿರ್ವಹಣೆ ಪ್ರಕರಣ (ಮೈಂಟೇನೆನ್ಸ್) ದಾಖಲು ಮಾಡಿದ್ದು ಅದರಂತೆ ನನಗೂ ಹಾಗೂ ನನ್ನ ಇಬ್ಬರು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗುವಿ ಪೊಷಣೆಗಾಗಿ ಪ್ರತಿ ತಿಂಗಳು 5000/- ರೂಗಳನ್ನು ನೀಡುವಂತೆ ನನ್ನ ಗಂಡನಾದ ಶಿವಣ್ಣ ರವರಿಗೆ  ನ್ಯಾಯಾಲಯವು ಆದೇಶ ಮಾಡಿರುತ್ತೆ .ಆದರೆ ಇದುವರೆಗೂ ನನ್ನ ಗಂಡ ಹಣ ನೀಡಿರುವುದಿಲ್ಲ. ಈಗಿರುವಲ್ಲಿ ದಿನಾಂಕ 17/04/2021 ಸಂಜೆ 5-00 ಗಂಟೆಯಲ್ಲಿ ನಾನು ನನ್ನ ಗಂಡನ ಮನೆಯ ಬಳಿ ಹೋಗಿ ನ್ಯಾಯಾಲಯದ ಆದೇಶದಂತೆ ಹಣವನ್ನು ನೀಡಲು ಕೇಳಿದ್ದಕ್ಕೆ ಆಗ ಗಂಡ ಶಿವಣ್ಣ ಕೋಲು ತೆಗೆದುಕೊಂಡು ಬಂದು ನಿನಗೆ ಹಣ ಬೇಕಾದರೆ ಗುಡಿಬಂಡೆ ನ್ಯಾಯಾಲಯಕ್ಕೆ ಹೋಗು ಎಂತ ಹೇಳಿ ತನ್ನ ಕೈಯಲ್ಲಿದ್ದ ಕೊಲಿನಿಂದ ಹೊಡೆದು ನನ್ನ ಹಣೆಗೆ ರಕ್ತ ಗಾಯವಾಗಿರುತ್ತೆ. ಹಾಗೂ ನನ್ನ ಮೈದುನನಾದ ಶಂಕರ ಬಂದು ಈಕೆಯನ್ನು ಇಲ್ಲೆ ಸಾಯಿಸಿ ಬಿಡು ಎಂದು ಹೇಳುತ್ತಾನೆ. ಮತ್ತು ನನ್ನ ಅತ್ತೆ ಸಿದ್ದಮ್ಮ ಬಂದು ನನ್ನ ಜುಟ್ಟು ಹಿಡಿದ್ದು ಎಳೆದು ಮೊರಿಗೆ ತಳ್ಳಿರುತ್ತಾಳೆ ಆಗ ನನ್ನ ಅತ್ತೆಯ ತಂಗಿಯರಾದ ಮುತ್ತಕ್ಕ ಮತ್ತು ದೊಡ್ಡಕ್ಕ ರವರು ನನ್ನ ಕಣ್ಣಿಗೆ ಕಾರದ ಪುಡಿ ಹಾಕಿ ಕಾಲಿನಿಂದ  ಹೊಡದಿರುತ್ತಾರೆ.ಆಗ ಗಲಾಟೆ ಬಿಡಿಸಲು ಬಂದು ನನ್ನ ಅಣ್ಣ ರಾಘವೇಂದ್ರ ಮತ್ತು ರಂಗ ರವರು ಬಂದಾಗ ಶಿವಣ್ಣನ ಮಕ್ಕಳಾದ ಮಂಜು ಮತ್ತು ಆನಂದ ಮುತ್ತಕ್ಕನ ಮಕ್ಕಳಾದ ದರ್ಶನ್ ಮತ್ತು ಸೀನಾ ಹಾಗೂ ಇತರೆ ಸುಮಾರು 30 ಜನರು ಸೇರಿ ನನಗೂ ಮತ್ತು ನನ್ನ ಅಣ್ಣ ತಮ್ಮಂದರಿಗೆ ಕೋಲುಗಳಿಂದ ಹೊಡೆದು ಮೂಗೇಟುಗಳನ್ನುಂಟು ಮಾಡಿರುತ್ತಾರೆ. ಹಾಗೂ ಸಾಯಿಸಿ ಬಿಡಿ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆಗ ನಾವುಗಳು ಅಲ್ಲಿಂದ ಬಿಡಿಸಿಕೊಂಡು ನಾವು ಚಿಕ್ಕಬಳ್ಳಾಪುರ ಆಸ್ವತ್ರೆಗೆ  ಹೋಗಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಈ ದಿನ ದಿನಾಂಕ 19/04/2021 ರಂದು ತಡವಾಗಿ ಬಂದು ದೂರು ನೀಡುತ್ತಿರುತ್ತೇನೆ.ಆದ ಕಾರನ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ದೂರು.

 

3. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.93/2021 ಕಲಂ. 15(A),32(3) ಕೆ.ಇ ಆಕ್ಟ್:-

  ಈ ದಿನ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ಮೋಹನ್ ಎನ್. ಪಿ.ಎಸ್.ಐ ಆದ ನಾನು ಸೂಚಿಸುವುದೇನೆಂದರೆ, ದಿನಾಂಕ: 11/02/2021 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಬಂದಾರ್ಲಹಳ್ಳಿ ಗ್ರಾಮದಲ್ಲಿ ಯಾರೋ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಪಿಸಿ 512 ರಾಜಶೇಖರ್ , ಪಿಸಿ 33 ಕೃಷ್ಣಪ್ಪ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ ಬಂದಾರ್ಲಹಳ್ಳಿ ಗ್ರಾಮಕ್ಕೆ ಬೆಳಿಗ್ಗೆ 11-00 ಗಂಟೆಗೆ ಹೋಗಿ ಅಲ್ಲಿ, ಪಂಚಾಯ್ತಿದಾರರನ್ನು ಕರೆದುಕೊಂಡು ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ ತನ್ನ ಅಂಗಡಿಯ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಇಬ್ಬರು ವ್ಯಕ್ತಿಗಳಿಗೆ ತೆಗೆದುಕೊಡುತ್ತಿದ್ದು, ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ. ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿಯ ಹೆಸರು ವಿಳಾಸ ಕೇಳಲಾಗಿ, ತನ್ನ ಹೆಸರು ನರಸಿಂಹಮೂರ್ತಿ ಬಿನ್ ಲೇಟ್ ಶ್ರೀನಿವಾಸ , 38 ವರ್ಷ, ಈಡಿಗ ಜನಾಂಗ,ವ್ಯವಸಾಯ , ಬಂದಾರ್ಲಹಳ್ಳಿ ಗ್ರಾಮ ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ, ಅದರಲ್ಲಿ 90 ಎಂ.ಎಲ್.ಸಾಮರ್ಥ್ಯದ HAY WARDS CHEERS WHISKY ಯ 21 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ 1 ಲೀಟರ್ 890 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 737.73/- ರೂ.ಗಳಾಗಿರುತ್ತೆ. ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ ಇದೆಯೇ ಎಂದು ಕೇಳಿದಾಗ ಯಾವುದೇ ಪರವಾನಗಿ ಇಲ್ಲವೆಂದು ತಿಳಿದು ಬಂದಿರುತ್ತದೆ. ಆದ್ದರಿಂದ ಸ್ಥಳದಲ್ಲಿ ಬೆಳಿಗ್ಗೆ 11-00 ಗಂಟೆಯಿಂದ 12-000 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಸ್ಥಳದಲ್ಲಿ ದೊರೆತ 90 ಎಂ.ಎಲ್ ಸಾಮರ್ಥ್ಯದ HAYWARDS CHEERS WHISKY ಯ 21 ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ 04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS WHISKY ಯ 4 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಬೆಳಿಗ್ಗೆ 12-30 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು, ಈ ಮೆಮೋನೊಂದಿಗೆ ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿರುತ್ತೇನೆ.ದಿನಾಂಕ 20/04/2021 ರಮದು ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ.

 

4. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.94/2021 ಕಲಂ. 87 ಕೆ.ಪಿ ಆಕ್ಟ್:-

  ದಿನಾಂಕ 04-04-2021 ರಂದು ಸಂಜೆ 5-15 ಗಂಟೆಗೆ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಮೋಹನ್ ಎನ್. ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ 05 ಜನ ಆಸಾಮಿಗಳು, ಮಾಲು ಮತ್ತು ಪಂಚನಾಮೆಯನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ: 04/04/2021 ರಂದು ಮದ್ಯಾಹ್ನ 3-13 ಗಂಟೆಗೆ ಹೊಸೂರು ಹೊರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿ.ಸಿ-520 ಶ್ರೀನಾಥ್ ರವರಿಗೆ 112 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎ.ಹೆಚ್.ಸಿ-65 ಚಂದ್ರಶೇಖರ್ ರವರು ಮೊಬೈಲ್ ಮೂಲಕ ಕರೆ ಮಾಡಿ ಜಿಲ್ಲಾ ನಿಸ್ತಂತು ಇವೆಂಟ್ ನಂ 66595 ರಂತೆ ಗೌರಿಬಿದನೂರು ತಾಲ್ಲೂಕು ಕೆಳಗಿನ ದಿಮ್ಮಘಟ್ಟಹಳ್ಳಿ ಗ್ರಾಮದ ಬಳಿ ಇರುವ ಕೆರೆಯ ಅಂಗಳದಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಕ್ರಮ ಜೂಜಾಟವನ್ನು ಆಡುತ್ತಿರುವುದಾಗಿ ಕರೆ ಬಂದಿರುವುದಾಗಿ ಮಾಹಿತಿ ತಿಳಿಸಿದ್ದು, ಅದರಂತೆ ಹೊಸೂರು ಹೊರ ಠಾಣೆಯ ಪಿ.ಸಿ-582 ಶ್ರೀನಾಥ ರವರು ಮದ್ಯಾಹ್ನ 3-15 ಗಂಟೆಗೆ ನನಗೆ ದೂರವಾಣಿ ಮೂಲಕ ಕರೆ ಮಾಡಿ ಸದರಿ ವಿಚಾರವನ್ನು ತಿಳಿಸಿದ್ದು , ಆಗ ನಾನು ಈ ವಿಚಾರದಲ್ಲಿ ನನಗೂ ಖಚಿತವಾದ ಮಾಹಿತಿ ಬಂದಿದೆ ಎಂದು ಹೇಳಿ ನಾನು ಮತ್ತು ಸಿಬ್ಬಂದಿಯವರಾದ, ಪಿ.ಸಿ-512 ರಾಜಶೇಖರ, ಪಿ.ಸಿ-518 ಆನಂದ , ಪಿ.ಸಿ-208 ತಿಪ್ಪೇಶ, ಪಿ.ಸಿ-520 ಶ್ರೀನಾಥ , ಪಿ.ಸಿ-582 ಮಂಜುನಾಥ ಕಾಳೇಲ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ ಕೆಳಗಿನ ದಿಮ್ಮಘಟ್ಟನಹಳ್ಳಿ ಗ್ರಾಮಕ್ಕೆ ಮದ್ಯಾಹ್ನ 3-45 ಗಂಟೆಗೆ ಹೋಗಿ ಸ್ವಲ್ಪ ದೂರದಲ್ಲಿ ಸರ್ಕಾರಿ ವಾಹನವನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಗ್ರಾಮದ ಹೊರವಲಯದಲ್ಲಿ ಇರುವ ಕೆರೆಯ ಅಂಗಳದಲ್ಲಿ ಬೆಳಕಿನಲ್ಲಿ ಸುಮಾರು 05 ಜನರು ಗುಂಪಾಗಿ ಕುಳಿತುಕೊಂಡು ಅಂದರ್ ಗೆ 500 ರೂ, ಬಾಹರ್ ಗೆ 500 ರೂ ಎಂದು ಕೂಗುತ್ತಿದ್ದು ಆಸಾಮಿಗಳು ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂದಿಯವರು ಜೂಜಾಡುತ್ತಿದ್ದವರನ್ನು ಸುತ್ತುವರೆದು ಹಿಡಿದುಕೊಂಡು ಒಬ್ಬೊಬ್ಬರನ್ನಾಗಿ ಅವರ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ 1) ಮಂಜುನಾಥ ಬಿನ್ ಈರಪ್ಪ , 38 ವರ್ಷ, ಸಾಧರ ಗೌಡ ಜನಾಂಗ, ಚಾಲಕ ವೃತ್ತಿ, ವಾಸ ಗುಂಡಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು. 2) ಅಂಬರೀಶ ಬಿನ್ ಮರಿಯಪ್ಪ, 31 ವರ್ಷ, ಆದಿ ಕರ್ನಾಟಕ, ಗಾರೆ ಕೆಲಸ, ವಾಸ ಕೆಳಗಿನದಿಮ್ಮಗಟ್ಟನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು. 3) ರಮೇಶ್ ಬಿನ್ ಚಿಕ್ಕನರಸಯ್ಯ, 31 ವರ್ಷ, ಆದಿ ಕರ್ನಾಟಕ, ಪ್ಯಾಕ್ಟರಿಯಲ್ಲಿ ಕೆಲಸ, ವಾಸ ಗುಂಡಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು. 4) ಸುರೇಶ ಬಿನ್ ಗಂಗಪ್ಪ, 35 ವರ್ಷ, ಈಡಿಗರು, ಪೈಂಟಿಂಗ್ ಕೆಲಸ ವಾಸ ಗುಂಡಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು. 5) ವೆಂಕಟೇಶ್ ಬಿನ್ ಗಂಗಪ್ಪ, 53 ವರ್ಷ, ವಕ್ಕಲಿಗರು, ಜಿರಾಯ್ತಿ, ಕಾಚಮಾಚೇನಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು.ಎಂದು ತಿಳಿಸಿರುತ್ತಾರೆ. ಸ್ಥಳದಲ್ಲಿ ಜೂಜಾಟಕ್ಕೆ ಪಣಕ್ಕೆ ಕಟ್ಟಿದ್ದ ಹಣ ಇದ್ದು ಎಣಿಸಲಾಗಿ 1) 13880 /- ರೂ ಹಣ , 2) 52 ಸ್ಪೀಟ್ ಎಲೆಗಳು ಇರುತ್ತೆ. ಸ್ಥಳದಲ್ಲಿ ಮದ್ಯಾಹ್ನ 3-45 ಗಂಟೆಯಿಂದ 4-45 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಮಾಲನ್ನು ವಶಪಡಿಸಿಕೊಂಡು, ಠಾಣೆಗೆ ಸಂಜೆ 5-15 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು, ಆರೋಪಿಗಳು, ಪಂಚನಾಮೆ ಮತ್ತು ಮಾಲನ್ನು ಸಹ ನೀಡುತ್ತಿದ್ದು, ಆರೋಪಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಎನ.ಸಿ.ಆರ್ ಅನ್ನು ನೊಂದಾಯಿಸಿಕೊಂಡಿರುತ್ತೆ.ದಿನಾಂಕ 20/04/2021 ರಮದು ನ್ಯಾಯಾಲಯದ  ಅನುಮತಿಯನ್ನು ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ.

 

5. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.73/2021 ಕಲಂ. 15(A),32(3) ಕೆ.ಇ  ಆಕ್ಟ್:-

  ದಿನಾಂಕ: 19/04/2021 ರಂದು  ನ್ಯಾಯಾಲಯದ ಪಿಸಿ-89 ರವರು ಠಾಣಾ NCR NO:98/2021 ರಲ್ಲಿ ಕ್ರಮಿನಲ್ ಪ್ರಕರಣವನ್ನು ದಾಖಲಿಸಲು  ಅನುಮತಿಯನ್ನು  ನೀಡಿದ ಮೇರೆಗೆ  ಈ ದಿನ 15-30 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ಪ್ರತಿಯ   ಸಾರಾಂಶವೇನೆಂದರೆ: ದಿನಾಂಕ:18/04/2021 ರಂದು ಬೆಳಿಗ್ಗೆ 9-00 ಗಂಟೆಯ ಸಮಯದಲ್ಲಿ  ತಾನು ಠಾಣೆಯಲ್ಲಿರುವಾಗ ನನಗೆ 21 ನೇ ಬೀಟ್ ಕರ್ತವ್ಯ ಹೆಚ್.ಸಿ. 35 ಶ್ರೀ ನಾರಾಯಣಸ್ವಾಮಿ ರವರು ತಿಳಿಸಿದ್ದೇನೆಂದರೆ ಬಾತ್ಮೀದಾರರರಿಂದ ಗುಡಿಬಂಡೆ ತಾಲ್ಲೂಕು ಸೋಮೇನಹಳ್ಳಿ ಗ್ರಾಮದ ಶ್ರೀನಿವಾಸ ಬಿನ್ ಸೇಂದಿ ಆದೆಪ್ಪ ರವರು ಅವರ ಮನೆಯ ಬಳಿ ಯಾವುದೇ ರೀತಿಯ ಲೈಸನ್ಸ್ ಇಲ್ಲದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿರುತ್ತೆಂದು ತಿಳಿಸಿದ್ದರ ಮೇರೆಗೆ ನಾನು ದ್ವಿಚಕ್ರವಾಹನದಲ್ಲಿ ಸೋಮೇನಹಳ್ಳಿ ಗ್ರಾಮದ ಬಸ್ಸು ನಿಲ್ದಾಣದ ಬಳಿ ಬೆಳಿಗ್ಗೆ 9-45 ಗಂಟೆಗೆ ಹೋಗಿ ಅಲ್ಲಿದ್ದ ಹೆಚ್.ಸಿ 35 ಶ್ರೀ ನಾರಾಯಣಸ್ವಾಮಿ ರವರನ್ನು ಹಾಗೂ ಅಲ್ಲಿಯೇ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿಗೆ ಶ್ರೀನಿವಾಸ ಬಿನ್ ಸೇಂದಿ ಆದೆಪ್ಪ ರವರ ಮನೆಯ ಬಳಿಯಿಂದ  ಸ್ವಲ್ಪ ದೂರದಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಶ್ರೀನಿವಾಸ ಬಿನ್ ಸೇಂದಿ ಆದೆಪ್ಪ  ರವರ ಮನೆಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅನುಮತಿ ನೀಡಿ ಸ್ಥಳಾವಕಾಶ ಮಾಡಿಕೊಟ್ಟಿದ್ದು, ಸಾರ್ವಜನಿಕರು ಸದರಿ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದು ಕಂಡುಬಂದಿದ್ದು, ಸದರಿ ಸ್ಥಳಕ್ಕೆ ನಾವುಗಳು ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಅಲ್ಲಿದ್ದ ಮದ್ಯ ಸೇವನೆ ಮಾಡುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಸಾರ್ವಜನಿಕರಿಗೆ  ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರವ ಸದರಿ ಚಿಲ್ಲರೆ ಅಂಗಡಿ ಮಾಲೀಕನನ್ನು ವಶಕ್ಕೆ ಪಡೆದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಶ್ರೀನಿವಾಸ ಬಿನ್ ಸೇಂದಿ ಆದೆಪ್ಪ 43 ವರ್ಷ, ಈಡಿಗ ಜನಾಂಗ ಜಿರಾಯ್ತಿ, ವಾಸ ಸೋಮೇನಹಳ್ಳಿ  ಗ್ರಾಮ, ಗುಡಿಬಂಡೆ ತಾಲ್ಲೂಕು ಎಂತ ತಿಳಿಸಿದ್ದು, ಮದ್ಯಪಾನ ಸೇವೆನೆ ಮಾಡಲು ಸ್ಥಳಾವಕಾಶ ಮಾಡಿಕಟ್ಟಿದ್ದಕ್ಕೆ ಅನುಮತಿ ಪಡೆದಿರುವ ಲೈಸನ್ಸ್ ತೋರಿಸುವಂತೆ ಕೇಳಲಾಗಿ ಸದರಿಯವರು ಯಾವುದೇ ರೀತಿಯ ಲೈಸನ್ಸ್ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ಸದರಿ ಸ್ಥಳದಲ್ಲಿ ಹೈವಾಡ್ಸರ್್ ಚೀರ್ಸ್ ಕಂಪನಿಯ 90 ಎಂ.ಎಲ್ ಸಾಮಥ್ರ್ಯದ 10 ವಿಸ್ಕಿ ಟೆಟ್ರಾ ಪ್ಯಾಕೇಟ್ಗಳು ಇದ್ದವು, 2 ಖಾಲಿ ಟೆಟ್ರಾ ಪ್ಯಾಕೇಟ್ಗಳು ಬಿದ್ದಿದ್ದು, ಮದ್ಯವನ್ನು ಕುಡಿದು ಬಿಸಾಹಾಕಿದ್ದ 2 ಪ್ಲಾಸ್ಟಿಕ್ ಗ್ಲಾಸುಗಳು ಅಲ್ಲಿಯೇ ಪಕ್ಕದಲ್ಲಿಯೇ ಒಂದು ಲೀಟರ್ ಸಾಮಥ್ರ್ಯದ ಪ್ಲಾಸ್ಟಿಕ್ ವಾಟರ್ ಬಾಟಲ್ ಇದ್ದು, ಅದರಲ್ಲಿದ್ದ ನೀರು ಕೆಳಗಡೆಗೆ ಚೆಲ್ಲಿತ್ತು, ಮದ್ಯವಿರು ಪ್ಯಾಕೇಟ್ ಗಳ ಒಟ್ಟು ಬೆಲೆ 35.13*10 =351-10 ರೂಗಳು (900 ಎಂ.ಎಲ್) ಆಗಿರುತ್ತದೆ. ಸದರಿ ಮೇಲ್ಕಂಡ 10 ಮದ್ಯದ ಟೆಟ್ರಾ ಪ್ಯಾಕೇಟ್ಗಳನ್ನು, 2 ಖಾಲಿ ಟೆಟ್ರಾ ಪ್ಯಾಕೆಟ್ ಗಳನ್ನು  ಹಾಗೂ 2 ಪ್ಲಾಸ್ಟಿಕ್ ಗ್ಲಾಸುಗಳು, ಒಂದು ಪ್ಲಾಸ್ಟಿಕ್ ವಾಟರ್ ಬಾಟಲ್ನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಬೆಳಿಗ್ಗೆ 10-00 ಗಂಟೆಯಿಂದ ಬೆಳಿಗ್ಗೆ 10-45 ಘಂಟೆಯವರೆಗೆ ಪಂಚನಾಮೆ ಜರುಗಿಸಿ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ. ಮೇಲ್ಕಂಡ ಶ್ರೀನಿವಾಸ ಬಿನ್ ಸೇಂದಿ ಆದೆಪ್ಪ ರವರನ್ನು ವಶಕ್ಕೆ ಪಡೆದುಕೊಂಡು ಬೆಳಿಗ್ಗೆ 11-15 ಘಂಟೆಗೆ ಠಾಣೆಗೆ ಬಂದು 11-45 ಗಂಟೆಗೆ ವರಧಿಯನ್ನು ಸಿದ್ದಪಡಿಸಿ ಮೇಲ್ಕಂಡ ಆರೋಪಿ, ಮಾಲುಗಳು ಹಾಗೂ ಅಸಲು ಪಂಚನಾಮೆಯನ್ನು ಮುಂದಿನ ಕ್ರಮದ ಬಗ್ಗೆ ನೀಡುತ್ತಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚಿಸಿದ್ದರ  ದೂರಾಗಿರುತ್ತೆ.

 

6. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.74/2021 ಕಲಂ. 15(A),32(3) ಕೆ.ಇ  ಆಕ್ಟ್:-

  ದಿನಾಂಕ:19/04/2021 ರಂದು ನ್ಯಾಯಾಲಯದ ಪಿಸಿ-89 ರವರು ಠಾಣೆಗೆ  ಹಾಜರಾಗಿ ಠಾಣಾ NCR NO-1010/2021 ರಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲು ಅನುಮತಿಯನ್ನು  ಪಡೆದು ಕೊಂಡು ಬಂದ ಪ್ರತಿಯ ಸಾರಾಂಶವೇನೆಂದರೆ ದಿನಾಂಕ:18/04/2021 ರಂದು ಮದ್ಯಾಹ್ನ: 01.00 ಗಂಟೆಯಲ್ಲಿ ಪಿ,ಐ ಸಾಹೇಬರು ಠಾಣೆಯಲ್ಲಿದ್ದಾಗ ಠಾಣಾ 10 ನೇ ಬೀಟ್ ಸಿಬ್ಬಂದಿ ಸಿ,ಹೆಚ್,ಸಿ-186 ಗಂಗಾಧರಪ್ಪ ರವರು ತನಗೆ ಪೋನ್ ಮಾಡಿ ತಾನು ಪಾತೂರು ಗ್ರಾಮದಲ್ಲಿ ಗಸ್ತುನಲ್ಲಿರುವಾಗ ಚಿಕ್ಕಪಾಪಯ್ಯ ಬಿನ್ ಗುಡ್ಲ ಮಲ್ಲಪ್ಪ ರವರ ಮನೆಯ ಮುಂಬಾಗ ಸಾರ್ವಜನಿಕ ಸ್ಥಳದಲ್ಲಿ ಚಿಕ್ಕಪಾಪಯ್ಯ ರವರು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ತಾನು ಠಾಣಾ ಸಿಬ್ಬಂದಿಯಾದ ಸಿ.ಹೆಚ್.ಸಿ-73 ಹನುಮಂತರಾಯಪ್ಪ ರವರನ್ನು ಕರೆದುಕೊಂಡು ಸರ್ಕಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎ,ಹೆಚ್,ಸಿ-43 ವೆಂಕಟಾಚಲ ರವರೊಂದಿಗೆ ಪಾತೂರು ಗ್ರಾಮಕ್ಕೆ ಮದ್ಯಾಹ್ನ 1-30 ಗಂಟೆ ಸಮಯಕ್ಕೆ ಹೋಗಿ ಗ್ರಾಮದಲ್ಲಿದ್ದ ಮಾಹಿತಿ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ. ಪಂಚರೊಂದಿಗೆ ಚಿಕ್ಕಪಾಪಯ್ಯ ರವರ ಮನೆಯ ದೂರದ ಮರೆಯಲ್ಲಿ ಜೀಪ್ ನ್ನು ನಿಲ್ಲಿಸಿ ಚಿಕ್ಕಪಾಪಯ್ಯ ರವರ ಮನೆಯ ಮುಂಭಾಗ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಮದ್ಯಾಹ್ನ 1-45 ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯನ್ನು ವಶಕ್ಕೆ ಪಡೆದು ಆತನ ಹೆಸರು & ವಿಳಾಸ ತಿಳಿಯಲಾಗಿ ಚಿಕ್ಕಪಾಪಯ್ಯ ಬಿನ್ ಗುಡ್ಲ ಮಲ್ಲಪ್ಪ 70 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ ವಾಸ:ಪಾತೂರು ಗ್ರಾಮ, ಚಿಕ್ಕಬಳ್ಳಾಪು ತಾಲ್ಲೂಕು, ಎಂದು ತಿಳಿಸಿದ್ದು. ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 12 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 03 ಖಾಲಿ ಟೆಟ್ರಾ ಪಾಕೆಟ್ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 03 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 1 ಲೀಟರ್ 80 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*12=421/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಮದ್ಯಾಹ್ನ 2-00 ಗಂಟೆಯಿಂದ ಮದ್ಯಾಹ್ನ 2-45 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಮದ್ಯಾಹ್ನ 3-15 ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಮದ್ಯಾಹ್ನ 3-30 ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ ದೂರಾಗಿರುತ್ತೆ.

 

7. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.76/2021 ಕಲಂ. 279,337 ಐ.ಪಿ.ಸಿ:-

  ದಿನಾಂಕ:19/04/2021 ರಂದು ಪಿರ್ಯಾದಿದಾರರಾದ ಶ್ರೀ ನಾರಾಯಣಸ್ವಾಮಿ ಬಿನ್ ತಿಮ್ಮಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನನ್ನ ತಮ್ಮನಾದ ಕೃಷ್ಣಮೂರ್ತಿ ಬಿನ್ ತಿಮ್ಮಪ್ಪ, 28 ವರ್ಷ, ಹಾಗೂ ನನ್ನ ನಾದಿನಿಯಾದ ಗಾಯಿತ್ರಿ ಕೊಂ ಕೃಷ್ಣಮೂರ್ತಿ ರವರು ಕೆಲಸದ ನಿಮಿತ್ತ ನಮ್ಮ ಗ್ರಾಮ ಇಂದಿರಾ ನಗರದಿಂದ ಹಾಲಗಾನಹಳ್ಳಿ ಗ್ರಾಮಕ್ಕೆ ಹೋಗಲು ತನ್ನ ಮಗನಾದ ತರುಣ್ ಬಿನ್ ಕೃಷ್ಣಮೂರ್ತಿ, 5 ವರ್ಷ ಹಾಗೂ ನಮ್ಮ ಅಜ್ಜಿ ಗಂಗಮ್ಮ ಕೊಂ ಲೇಟ್ ಗಂಗಪ್ಪ ರವರೊಂದಿಗೆ ದಿನಾಂಕ:15/04/2021 ರಂದು ಸಂಜೆ 5-50 ಗಂಟೆಗೆ ತಮ್ಮ ಬಾಬತ್ತು ಕೆ.ಎ-05, ಕೆ.ಎಸ್-2663 ಸ್ಲ್ಪಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಕುಂಟಚಿಕ್ಕನಹಳ್ಳಿ ಮತ್ತು ಜಿ.ಬೊಮ್ಮಸಂದ್ರ ಗ್ರಾಮದ ಮಧ್ಯೆ ರಸ್ತೆಯಲ್ಲಿ ಎದುರುಗಡೆಯಿಂದ ಬಂದ ವೇಣುಗೋಪಾಲರೆಡ್ಡಿ ಬಿನ್ ನಾಗರೆಡ್ಡಿ ರವರು ತಮ್ಮ ದ್ವಿಚಕ್ರ ವಾಹನ ಸಂಖ್ಯೆ ಕೆ.ಎ-04, ಹೆಚ್.ಕ್ಯೂ-7668 ಹೊಂಡಾಶೈನ್ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ತಮ್ಮನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನನ್ನ ತಮ್ಮ ಕೃಷ್ಣಮೂರ್ತಿ ಹಾಗೂ ನಾದಿನಿ ಗಾಯಿತ್ರಿ, ಮಗ ತರುಣ್ ಹಾಗೂ ಅಜ್ಜಿನ ಗಂಗಮ್ಮ ರವರು ಕೆಳಗೆ ಬಿದ್ದು ಹೋಗಿ ನನ್ನ ತಮ್ಮ ಕೃಷ್ಣಮೂರ್ತಿ ರವರಿಗೆ ಬಲ ಕಾಲಿನ ಮೊಣಕಾಲಿನ ಬಳಿ ಹಾಗೂ ಎರಡೂ ಕಾಲಿನ ಪಾದದ ಬಳಿ ಮತ್ತು ಬಲಗಡೆಯ ಹಣೆಯ ಮೇಲೆ ರಕ್ತಗಾಯವಾಗಿದ್ದು, ತಮ್ಮನ ಮಗ ತರುಣ್ ರವರಿಗೆ ಬಲಕಾಲಿನ ತೊಡೆ ಹಾಗೂ ಎಡಭಾಗದ ಭುಜಕ್ಕೆ ರಕ್ತಗಾಯವಾಗಿ, ನಾದಿನಿ ಗಾಯತ್ರಿ ರವರಿಗೆ ಬಲಕಾಲಿನ ಪಾದದ ಬಳಿ ರಕ್ತಗಾಯವಾಗಿದ್ದು, ಆಗ ತಕ್ಷಣ ಅಲ್ಲಿದ್ದ ಸಾರ್ವಜನಿಕರು ಗಾಯಾಳುಗಳನ್ನು ಉಪಚರಿಸಿ ನಮಗೆ ದೂರವಾಣಿ ಮುಖಾಂತರ ವಿಷಯ ತಿಳಿಸಿದ್ದು, ಆಗ ತಕ್ಷಣ ನನ್ನ ಭಾವನಾದ ರವಿಕುಮಾರ್ ರವರು 108 ಅಂಬ್ಯೂಲೇನ್ಸ್ನಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆಗೆ ದಾಖಲಿಸಿ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಗೌರಿಬಿದನೂರಿನ ಸೋಮೇಶ್ವರ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ನನ್ನ ತಮ್ಮನ ದ್ವಿಚಕ್ರ ವಾಹನಕ್ಕೆ ಅಪಘಾತ ಪಡಿಸಿದ ಕೆ.ಎ-04, ಹೆಚ್.ಕ್ಯೂ-7668 ಹೊಂಡಾಶೈನ್ ದ್ವಿಚಕ್ರ ವಾಹನ ಸವಾರ ವೇಣುಗೋಪಾಲರೆಡ್ಡಿ ಬಿನ್ ನಾಗರೆಡ್ಡಿ ಕುಂಟಚಿಕ್ಕನಹಳ್ಳಿ ಗ್ರಾಮ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 

8. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.42/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:19/04/2021 ರಂದು ಸಂಜೆ 7:00 ಗಂಟೆ ಸಮಯಲ್ಲಿ ಪಿ.ಎಸ್.ಐ ಶ್ರಿ. ಸುನೀಲ್ ಕುಮಾರ್ ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ಜ್ಞಾಪನದ ಸಾರಾಂಶವೇನೆಂದರೆ ದಿನಾಂಕ:19-04-2021 ರಂದು ಸಂಜೆ 5:30 ಗಂಟೆ ಸಮಯದಲ್ಲಿ ನಾನು ಮತ್ತು ಠಾಣಾ ಸಿಬ್ಬಂದಿಯಾದ ಪಿಸಿ-436 ಬಾಲಕೃಷ್ಣ ಮತ್ತು ಪಿಸಿ-240 ಮಧುಸೂದನ್ ರವರೊಂದಿಗೆ ಠಾಣೆಗೆ ನೀಡಿರುವ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-1555 ಜೀಪಿನಲ್ಲಿ ಚಾಲಕನೊಂದಿಗೆ ಜಡಲತಿಮ್ಮನಹಳ್ಳಿ ಕಡೆ ಗಸ್ತಿನಲ್ಲಿದ್ದಾಗ ನನಗೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಕಂದವಾರ ಗ್ರಾಮದ ವಿಜಯ್ ಎಂಬುವರು ಯಾವುದೇ ಲೈಸನ್ಸ್ ಇಲ್ಲದೆ ಮುದ್ದೇನಹಳ್ಳಿ ಗ್ರಾಮದಲ್ಲಿ ಬೇಕರಿ ಪಕ್ಕದ ಡೈರಿಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದು ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ತಿರ್ನಹಳ್ಳಿ ಗ್ರಾಮದ ಬಳಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಸಂಜೆ 5:50 ಗಂಟೆಗೆ ಮೇಲ್ಕಂಡ ಸ್ಥಳದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸದರಿ ಸ್ಥಳದಲ್ಲಿ ಮದ್ಯವಿರುವ ಟೆಟ್ರಾ ಪಾಕೇಟುಗಳು ಇದ್ದು ಅದರ ಪಕ್ಕದಲ್ಲಿ ಖಾಲಿ ಟೆಟ್ರಾ ಪಾಕೇಟುಗಳು, ಖಾಲಿ ಲೋಟಗಳು ಬಿದ್ದಿರುತ್ತವೆ. ಸದರಿ ಪಾಕೇಟುಗಳನ್ನು ವಶದಲ್ಲಿ ಇಟ್ಟುಕೊಂಡಿರುವ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ವಿಜಯ್ ಬಿನ್ ಶ್ರೀನಿವಾಸ, 39 ವರ್ಷ, ಬಲಜಿಗರು, ಕ್ಯಾಷಿಯರ್ ಕೆಲಸ, ವಾಸ: ಕಂದವಾರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ. ನಂತರ ಸ್ಥಳದಲ್ಲಿ ಇದ್ದ ಮದ್ಯವಿರುವ ಟೆಟ್ರಾ ಪಾಕೇಟುಗಳನ್ನು ಪರಿಶೀಲಿಸಲಾಗಿ 1) 90 ML ಸಾಮರ್ಥ್ಯದ HAYWARDS CHEERS WHISKY ಯ 20 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 35.13 ಪೈಸೆ ಆಗಿದ್ದು 20 ಟೆಟ್ರಾ ಪ್ಯಾಕೇಟುಗಳ ಬೆಲೆ 702 ರೂಪಾಯಿ ಆಗಿದ್ದು ಓಟ್ಟು ಮದ್ಯ 1 ಲೀಟರ್ 800 ಮೀಲಿ ಮದ್ಯವಿರುತ್ತೆ. 2) 90 ML ಸಾಮರ್ಥ್ಯದ HAYWARDS CHEERS  WHISKY ಯ 7 ಖಾಲಿ  ಟೆಟ್ರಾ  ಪ್ಯಾಕೇಟುಗಳು, 3) ಉಪಯೋಗಿಸಿರುವ 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಸಾಮಿಗೆ ಇವುಗಳನ್ನು ಸಾರ್ವಜನ ಸ್ಥಳದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಸಂಜೆ 6:00 ಗಂಟೆಯಿಂದ ಸಂಜೆ 6:40 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಬಂದು ಆರೋಪಿನ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು  ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 

9. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.43/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ 20-04-2021 ರಂದು ಮದ್ಯಾಹ್ನ 12-20 ಗಂಟೆಗೆ ಪಿಎಸ್ಐ  ಸಾಹೇಬರು ದಾಳಿಯಿಂದ ಠಾಣೆಗೆ  ಆರೋಫಿ. ಮಾಲು ಮತ್ತು ಪಂಚನಾಮೆಯೊಂದಿಗೆ  ವಾಪಸ್ಸು ಬಂದು ನೀಡಿದ ಜ್ಞಾಫನದ ಸಾರಾಂಶವೇನೆಂದರೆ ತಾನು ಇದೆ ದಿನ   ಬೆಳಗ್ಗೆ 10-00 ಗಂಟೆ ಸಮಯದಲ್ಲಿ ಸರ್ಕಾರಿ ಜೀಪು ಸಂಖ್ಯೆ  KA-40-G-1555  ರ ವಾಹನದಲ್ಲಿ  ಚಾಲಕ  ಪಾರೂಖ್ ಮತ್ತು  ಸಿಬ್ಬಂದಿಯಾದ  ಮಧುಸೂದನ  ಮತ್ತು  ಬಾಲಕೃಷ್ಣ   ರವರೊಂದಿಗೆ ಮುದ್ದೇನಹಳ್ಳಿ   ಗ್ರಾಮದ ಕಡೆ ಹಗಲು ಗಸ್ತಿನಲ್ಲಿದ್ದಾಗ  ನನಗೆ ಬಂದ  ಖಚಿತವಾದ ಮಾಹಿತಿ ಎನೆಂದರೆ  ಗವಿಚೇನಹಳ್ಳಿ  ಗ್ರಾಮದ ಕೃಷ್ಣಪ್ಪ   ಬಿನ್ ಲೇಟ್ ತಿಪ್ಪಣ್ಣ  ರವರು ತನ್ನ ಚಿಲ್ಲರೆ ಅಂಗಡಿಯಲ್ಲಿ ಯಾವುದೇ  ಪರವಾನಗಿಯನ್ನು ಪಡೆಯದೇ ತನ್ನ  ಅಂಗಡಿಯ ಬಳಿ ಸಾರ್ವಜನಿಕರಿಗೆ ಮದ್ಯವನ್ನು  ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು ಮಾಹಿತಿಯಂತೆ ದಾಳಿ ನಡೆಸಲು ಕಂಗಾನಹಳ್ಳಿ ಗೇಟಿನ ಬಳಿ ಇದ್ದಂತಹ ಪಂಚರನ್ನು ಬರಮಾಡಿಕೊಂಡು ಅವರುಗಳ ಸಮಕ್ಷಮದಲ್ಲಿ  ಬೆಳಗ್ಗೆ 10-30 ಗಂಟೆಗೆ ಕೃಷ್ಣಪ್ಪ   ಬಿನ್ ಲೇಟ್ ತಿಪ್ಪಣ್ಣ  ರವರ ಬಾಬತ್ತು ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಜನರು ಓಡಿ ಕುಡಿಯುತ್ತಿದ್ದ ಲೋಟಗಳನ್ನು ಬಿಸಾಡಿ ಓಡಿ ಹೋಗಿದ್ದು  ಅಂಗಡಿಯಲ್ಲಿದ್ದವನ  ಹೆಸರು ವಿಳಾಸವನ್ನು ಕೇಳಲಾಗಿ  ಕೃಷ್ಣಪ್ಪ   ಬಿನ್ ಲೇಟ್ ತಿಪ್ಪಣ್ಣ  60 ವರ್ಷ  ಪಜಾತಿ ಜನಾಂಗ  ಚಿಲ್ಲರೆ ಅಂಗಡಿ ವ್ಯಾಪಾರಿ  ಗವಿಚೇನಹಳ್ಳಿ   ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಎಂತಾ ತಿಳಿಸಿದ್ದು ಇವನ  ಅಂಗಡಿಯ  ಮುಂದೆ  ಒಂದು ಪ್ಲಾಸ್ಟಿಕ್ ಕವರೊಂದಿದ್ದು ಅದನ್ನು ಪರಿಶೀಲಿಸಲಾಗಿ ಅದರಲ್ಲಿ 1) 90 ML ಸಾಮರ್ಥದ HAYWARDS CHEERS  WHISKY  ಹೆಸರಿನ 22 ಮದ್ಯದ ಪಾಕೇಟುಗಳಿದ್ದು ಪ್ರತಿ ಪಾಕೇಟಿನ ಮೇಲೆ ಬೆಲೆ 35.13 ರೂ.ಎಂದು ಮುದ್ರಿತ ವಾಗಿರುತ್ತದೆ.ಇದು ಒಟ್ಟು-1980/- ML ಮದ್ಯವಿದ್ದು ಒಟ್ಟು ಬೆಲೆ 773/- ರೂ ಆಗುತ್ತದೆ.2) 90 ಎಂ ಎಲ್ ಸಾಮರ್ಥ್ಯದ HAYWARDS CHEERS  WHISKY  ಖಾಲಿ 5 ಟೆಟ್ರಾ ಪ್ಯಾಕೇಟುಗಳು ಇರುತ್ತವೆ, 3) 5 ಖಾಲಿ ಲೋಟಗಳು ಸಿಕ್ಕಿದ್ದು ಇವುಗಳನ್ನು ತನ್ನ ಅಂಗಡಿಯ ಬಳಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಸ್ಥಳವಕಾಶ ಮಾಡಿಕೊಟ್ಟ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು  ಅಂಗಡಿ ಮಾಲೀಕ  ಕೃಷ್ಣಪ್ಪ  ಬಿನ್ ಲೇಟ್ ತಿಪ್ಪಣ್ಣ  ರವರನ್ನು ಕೇಳಿದಾಗ ತನ್ನ ಬಳಿ ಯಾವುದೇ ಪರವಾನಗಿ  ಇಲ್ಲವೆಂದು ಹೇಳಿದ್ದು ಸದರಿ  ಮಾಲನ್ನು ಪಂಚರ ಸಮಕ್ಷಮ  ಬೆಳಗ್ಗೆ 10-40 ಗಂಟೆಯಿಂದ 11-40 ಗಂಟೆಯವರೆವಿಗೆ ಅಂಗಡಿಯ ಬಳಿ ಮಹಜರ್ ಕ್ರಮವನ್ನು ಜರುಗಿಸಿ ಮೇಲ್ಕಂಡ ಸ್ಥಳದಲ್ಲಿ ದೊರೆತ ಟೆಟ್ರಾ ಪ್ಯಾಕೇಟುಗಳನ್ನು ಮತ್ತು  ಅಂಗಡಿ  ಮಾಲೀಕ ಕೃಷ್ಣಪ್ಪ ಬಿನ್ ಲೇಟ್ ತಿಪ್ಪಣ್ಣ  ರವರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ವಾಪಸ್ಸು ಬಂದು ವರದಿಯನ್ನು ನೀಡುತ್ತಿದ್ದು ಆರೋಪಿಯ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಈ ಪ್ರವರವದಿ.

 

10. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.111/2021 ಕಲಂ. 323,324,504,506,34 ಐ.ಪಿ.ಸಿ:-

  ದಿನಾಂಕ:19.04.2021 ರಂದು ರಾತ್ರಿ 10.10 ಗಂಟೆಗೆ ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆಯಲ್ಲಿ ಗಾಯಾಳು ಸುನೀಲ್ ಬಿನ್ ನಾಗರಾಜ, 29 ವರ್ಷ, ಪ.ಜಾತಿ ಶೀಗೆಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ಈಗ್ಗೆ ಸುಮಾರು 4 ತಿಂಗಳ ಹಿಂದೆ ತಮ್ಮ ಗ್ರಾಮದ ಮುರಳಿ ಬಿನ್ ಚಿಕ್ಕನಾರಯಣಪ್ಪ ರವರಿಗೆ ಕೈ ಬದಲಿಗೆ 7000 ರೂ ಹಣವನ್ನು ಸಾಲವಾಗಿ ಕೊಟ್ಟಿರುತ್ತೇನೆ. ತಾನು ಕೊಟಿದ್ದ ಹಣವನ್ನು ವಾಪಸ್ಸು ಕೊಡುವಂತೆ ಮುರಳಿ ಬಳಿ ಹಲವಾರು ಬಾರಿ ಕೇಳಿದರೂ ಸಹ ಈಗ ಕೊಡುತ್ತೇನೆ. ಆಗ ಕೋಡುತ್ತೇನೆ ಎಂದು ಸಬೂಬು ಹೇಳಿಕೊಂಡು ಬರುತಿದ್ದನು. ಈಗಿರುವಲ್ಲಿ ದಿನಾಂಕ:19.04.2021 ರಂದು ಸಂಜೆ 5.30 ಗಂಟೆಯಲ್ಲಿ ಅಲ್ಲಿಯೇ ತಮ್ಮ ಮನೆಯ ಬಳಿ ಬರುತಿದ್ದ ಮುರಳಿ ರವರ ತಂದೆಯಾದ ಚಿಕ್ಕನಾರಾಯುಣಪ್ಪ ರವರ ಬಳಿ ನಿನ್ನ ಮಗ ತನಗೆ 7000 ರೂ ಹಣವನ್ನು ಕೊಡಬೇಕು ಪೋನ್ ಮಾಡಿದರೂ ತೆಗೆಯುತಿಲ್ಲ ಸದರಿ ಹಣವನ್ನು ನೀವು ಕೊಡಿ ಎಂದು ಕೇಳಿದಕ್ಕೆ ಏ ನನ್ನ ಏಕೆ ಕೇಳುತ್ತಿಯಾ ನೀನು ಯಾರಿಗೆ ಕೊಟ್ಟಿದ್ದಿಯೋ ಅವರನ್ನು ಕೇಳಿಕೋ ಲೋಪರ್ ನನ್ನ ಮಗನೇ ಎಂದು ಕೆಟ್ಟ ಮಾತುಗಳಿಂದ ಬೈದು ತನ್ನ ಮೇಲೆ ಗಲಾಟೆ ಮಾಡಿ ಅಲ್ಲಿಯೇ ಇದ್ದ ಯಾವುದೋ ಒಂದು ಕೋಲನ್ನು ಎತ್ತಿಕೊಂಡು ತನ್ನ ಬಲಭಜುಕ್ಕೆ ಮತ್ತು ಹೊಟ್ಟೆಗೆ ಹೊಡೆದಿರುತ್ತಾನೆ. ಅದೇ ಸಮಯಕ್ಕೆ ಅಲ್ಲಿಗೆ ಬಂದು ಚಿಕ್ಕನಾರಾಯಣಪ್ಪ ರವರ ಹೆಂಡತಿಯಾದ ವೆಂಕಟಲಕ್ಷ್ಮಮ್ಮ ರವರು ಸಹ ತನ್ನ ಮೇಲೆ ಗಲಾಟೆ ಮಾಡಿ ಕೈಗಳಿಂದ ಹಲ್ಲೆ ಮಾಡಿರುತ್ತಾಳೆ. ಇಬ್ಬರೂ ಸೇರಿ ತನ್ನ ಮೇಲೆ ಹಲ್ಲೆ ಮಾಡಿ ಪ್ರಾಣಬೆದರಿಕೆ ಹಾಕಿರುತ್ತಾರೆ. ಆಗ ಅಲ್ಲಿಗೆ ಬಂದು ತಮ್ಮ ಗ್ರಾಮದ ಚಂದ್ರಶೇಖರ್ ಬಿನ್ ಶ್ರೀನಿವಾಸ, ಭರತ್ ಬಿನ್ ನಾಗರಾಜ ರವರುಗಳು ಗಲಾಟೆಯನ್ನು ಬಿಡಿಸಿರುತ್ತಾರೆ. ನಂತರ ತಾನು ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ದಾಖಲಾಗಿರುತ್ತೇನೆ. ತನ್ನ ಮೇಲೆ ಹಲ್ಲೆ ಮಾಡಿದ ಮೇಲ್ಕಂಡವರುಗಳು ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಬಂದು ಪ್ರಕರಣ ದಾಖಲಿಸಿರುತ್ತೆ.

 

11. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.112/2021 ಕಲಂ. 323,324,504,506,34 ಐ.ಪಿ.ಸಿ:-

  ದಿನಾಂಕ:19.04.2021 ರಂದು ರಾತ್ರಿ 11.45 ಗಂಟೆಗೆ ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆಯಲ್ಲಿ ಗಾಯಾಳು ರಮೇಶ ಎ ಬಿನ್ ಆಂಜಿನಪ್ಪ, 29 ವರ್ಷ, ಗೊಲ್ಲರು, ಜಿರಾಯ್ತಿ, ಹೊಸಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೆನೆಂದರೆ, ತಮ್ಮ ಗ್ರಾಮದ ಬಳಿ ಪಿಂಡಿಪಾಪನಹಳ್ಳಿ ಗ್ರಾಮದ ಸರ್ವೆ ನಂ 55 ರಲ್ಲಿ 4 ಎಕರೆ 12 ಗುಂಟೆ ಜಮೀನು ಇದ್ದು ಸದರಿ ಜಮೀನನ್ನು ನಮ್ಮ ತಾತಂದಿರಾದ 1 ನೇ ಪೆದ್ದಪ್ಪಯ್ಯ, 2 ನೇ ಲಕ್ಷ್ಮಯ್ಯ, 3 ನೇ ಮುನಿಶಾಮಪ್ಪ, 4 ನೇ ಚಿಕ್ಕಮುನಿಶಾಮಿ ರವರುಗಳು ಮೇಲ್ಕಂಡ ಜಮೀನನ್ನು 4 ಭಾಗಗಳಾಗಿ ವಿಭಾಗಗಳು ಮಾಡಿಕೊಂಡಿರುತ್ತಾರೆ. ಸದರಿ ಜಮೀನು ಒಂದೇ ಸರ್ವೆ ನಂಬರ್ ಆಗಿರುವುದರಿಂದ ಎಲ್ಲಾರು ಓಡಾಡಲು ಸದರಿ ಜಮೀನಿನ ಪೂರ್ವಕ್ಕೆ 10 ಅಡಿ ದಾರಿಯನ್ನು ಬಿಟ್ಟುಕೊಂಡಿರುತ್ತಾರೆ. ಸದರಿ ಜಮೀನಿನಲ್ಲಿ ತಮ್ಮ ತಂದೆಯಾದ ಆಂಜಿನಪ್ಪ ಬಿನ್ ಲಕ್ಷ್ಮಯ್ಯ ರವರ ಭಾಗಕ್ಕೆ ಸರ್ವೆ ನಂ 55/2 ರಲ್ಲಿ 1 ಎಕರೆ 3 ಗುಂಟೆ ಜಮೀನು ಬಂದಿರುತ್ತೆ ತಮ್ಮ ಜಮೀನಿಗೆ ಹೋಗಲು ತಮ್ಮ ದೊಡ್ಡಪ್ಪ ಕೃಷ್ಣಪ್ಪ ರವರ ಭಾಗಕ್ಕೆ ಬಂದಿರುವ ಜಮೀನಿನಲ್ಲೇ ದಾರಿ ಇರುತ್ತೆ. ಸದರಿ ದಾರಿಯಲ್ಲಿ ತಮ್ಮ ಕುಟುಂಬದವರು ಹೋಗಿ ಬರುತಿದ್ದು ತಮ್ಮ ದೊಡ್ಡಪ್ಪನ ಮಗನಾದ ಮುರಳಿ ಬಿನ್ ಕೃಷ್ಣಪ್ಪ ರವರು ಈಗ್ಗೆ ಒಂದು ವರ್ಷದಿಂದ ತಮ್ಮ ಮೇಲೆ ಗಲಾಟೆ ಮಾಡಿ ಈ ದಾರಿಯಲ್ಲಿ ಬರಬೇಡಿ ಎಂದು ಅಡ್ಡ ಹಾಕುತಿದ್ದನು ಈಗಿರುವಲ್ಲಿ ದಿನಾಂಕ:19.04.2021 ರಂದು ಸಂಜೆ 5.30 ಗಂಟೆಯಲ್ಲಿ ತಾನು ತಮ್ಮ ತೋಟದ ಬಳಿ ಸದರಿ ದಾರಿಯಲ್ಲಿ ಹೋಗುತಿದ್ದಾಗ ಮುರಳಿ ಬಿನ್ ಕೃಷ್ಣಪ್ಪ, ಮತ್ತು ಕೃಷ್ಣಪ್ಪ ಬಿನ್ ಪೆದ್ದಪ್ಪಯ್ಯ ರವರು ಬಂದು ಈ ದಾರಿಯಲ್ಲಿ ಬರಬೇಡಿ ಎಂದು ಏಕಾಏಕಿ ತನ್ನ ಮೇಲೆ ಗಲಾಟೆ ಮಾಡಿ ಏ ನಿಮ್ಮಮ್ಮನ್ನು ಕ್ಯಾಯ ಎಂದು ಕೆಟ್ಟ ಮಾತುಗಳಿಂದ ಬೈದು ಆ ಪೈಕಿ ಮುರಳಿ ರವರು ಯಾವುದೋ ಒಂದು ಕಲ್ಲಿನಿಂದ ತನ್ನ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯವನ್ನುಂಟು ಮಾಡಿರುತ್ತೇನೆ. ಕೃಷ್ಣಪ್ಪ ರವರು ಕೈಗಳಿಂದ ತನ್ನ ಬೆನ್ನಿನ ಮೇಲೆ ಹೊಡೆದಿರುತ್ತಾನೆ. ಇಬ್ಬರೂ ಸೇರಿ ಮತ್ತೆ ಈ ದಾರಿಯಲ್ಲಿ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಗಲಾಟೆಯನ್ನು ತಮ್ಮ ಗ್ರಾಮದ ನವೀನ್ ಬಿನ್ ಮುದ್ದಪ್ಪ, ಸುನೀಲ್ ಬಿನ್ ಆಂಜಿನಪ್ಪ ರವರು ಬಿಡಿಸಿರುತ್ತಾರೆ. ನಂತರ ಗಾಯವಾಗಿದ್ದ ತನ್ನನ್ನು ವಿಚಾರ ತಿಳಿದು ಸ್ಥಳಕ್ಕೆ ಬಂದ ತನ್ನ ತಂದೆ ಆಂಜಿನಪ್ಪ ರವರು ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ. ತನ್ನ ಮೇಲೆ ಹಲ್ಲೆ ಮಾಡಿದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಬಂದು ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 20-04-2021 06:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080