ಅಭಿಪ್ರಾಯ / ಸಲಹೆಗಳು

 

1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.65/2021 ಕಲಂ. 392 ಐ.ಪಿ.ಸಿ :-

          ದಿನಾಂಕ:19/03/2021 ರಂದು ರಾತ್ರಿ 9-30 ಗಂಟೆಯಲ್ಲಿ, ಗೌರೀಬಿದನೂರು ತಾಲ್ಲೂಕು, ನಗರಗೆರೆ ಹೋಬಳಿ, ಕೆರೆಒಳಗಿನಹಳ್ಳಿ ಗ್ರಾಮದ ವಾಸಿಯಾದ ಶ್ರೀಮತಿ .ಎನ್. ಪಾರ್ವತಮ್ಮ ಕೋಂ ಕೆ.ಟಿ.ಬಾಬು.  44 ವರ್ಷ, ವಯಸ್ಸು, ಪ.ಜಾತಿ,  ಅಂಗನವಾಡಿ ಶಿಕ್ಷಕಿ ಎಂಬುವವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಾನು ಇದೇ ಗೌರೀಬಿದನೂರು ತಾಲ್ಲೂಕು, ನಗರಗೆರೆ ಹೋಬಳಿಗೆ ಸೇರಿದ ನರ್ಲಹಳ್ಳಿ ಗ್ರಾಮದಲ್ಲಿರುವ ಅಂಗನವಾಡಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದು, ವಾಟದಹೊಸಹಳ್ಳಿ ಪಂಚಾಯ್ತಿ ಕೆರೆಒಳಗಿನಹಳ್ಳಿ ಗ್ರಾಮದಲ್ಲಿ ವಾಸವಾಗಿರುತ್ತೇನೆ.   ಕೆರೆಒಳಗಿನಹಳ್ಳಿಯಲ್ಲಿ  ನಮ್ಮ ಮನೆಯು, ವಾಟದಹೊಸಹಳ್ಳಿಯಿಂದ ಗುಡಿಬಂಡೆಗೆ ಹೋಗುವ ರಸ್ತೆಯಲ್ಲೇ ಇರುತ್ತೆ. ಮನೆಯಲ್ಲೇ ಒಂದು ದಿವಾನಾ ಮೇಲೆ ಚಿಲ್ಲರೆ ಅಂಗಡಿಯನ್ನು ಸಹ ಇಟ್ಟುಕೊಂಡು ವ್ಯಾಪಾರ ಸಹ ಮಾಡಿಕೊಂಡಿರುತ್ತೇನೆ. ದಿನಾಂಕ:19/03/2021 ರಂದು ಸಂಜೆ ಸುಮಾರು 7-00 ಗಂಟೆಯಲ್ಲಿ ನಾನು ಅಂಗಡಿಯಲ್ಲಿದ್ದಾಗ, ಯಾರೋ ಒಬ್ಬ ಆಸಾಮಿಯು ಗುಡಿಬಂಡೆ ಕಡೆಯಿಂದ ಹೀರೋ ಹೋಂಡಾ ಸ್ಪ್ಲೆಂಡರ್ ದ್ವಿಚಕ್ರ ವಾಹನದಲ್ಲಿ  ಬಂದವನು, ನಮ್ಮ ಅಂಗಡಿಯಿಂದ ಸ್ವಲ್ಪ ಮುಂದೆ  ತನ್ನ ದ್ವಿಚಕ್ರ ವಾಹನವನ್ನು ರನ್ನಿಂಗ್ ನಲ್ಲಿ  ನಿಲ್ಲಿಸಿ ನಮ್ಮ ಅಂಗಡಿಯ ಬಳಿಗೆ ನಡೆದುಕೊಂಡು ಬಂದು  “ ಇಲ್ಲಿ ಗುಡಿಬಂಡ ಸ್ಕೂಲ್ ಕಿ ಟೀಚರ್ ಒಕ್ಕರು ಪೋತಾರು ವಾಳ್ಳ ಅಡ್ರಸ್ ಏಮೈನಾ ತೆಲುಸಾ ಎಂದು ಕೇಳಿದನು. ಅದಕ್ಕೆ ನಾನು ನಾಕಿ ತೆಲಿಯದು ಎಂದು ಹೇಳಿದೆ.  ಅದಕ್ಕೆ ಆತನು ಪೋನಿ ತಾಗಡಾನಿಕಿ ನೀಳ್ಳು ಇವ್ವಂಡಿ ಎಂದು ಕೇಳಿದನು.  ನಾನು ನೀರನ್ನು ತಂದು ಕೊಟ್ಟೆನು.  ನೀರು ಕುಡಿದು,   ಕಾಲು ಪದಿ ರೂಪಾಯಿಲಕಿ  ಮಿಕ್ಸರ್ ಇವ್ವಂಡಿ ಎಂದನು. ನಾನು  ಪ್ಲಾಸ್ಟಿಕ್ ಡಬ್ಬದಲ್ಲಿದ್ದ ಮಿಕ್ಸರ್ ನ್ನು ತೂಕ ಮಾಡಿ ಕೊಡಲು  ಹಿಂದಕ್ಕೆ ತಿರುಗಿದಾಗ,  ನಮ್ಮ ಅಂಗಡಿಯ ಸುತ್ತ ಮುತ್ತ ಯಾರೂ ಇಲ್ಲದೇ ಇರುವುದನ್ನು ನೋಡಿ, ಸದರಿ ಆಸಾಮಿಯು ಏಕಾಏಕಿ ಅಂಗಡಿಯೊಳಕ್ಕೆ ನುಗ್ಗಿ ನನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಚೈನಿಗೆ ಚೈನಿಗೆ ಕೈಹಾಕಿದನು.  ನಾನು ಜೋರಾಗಿ  ಕಿರುಚಿಕೊಳ್ಳಲು ಹೋದಾಗ, ಕುರುಚಿಕೊಳ್ಳದಂತೆ ಬಾಯನ್ನು ಮುಚ್ಚಿ ನನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯದ  ಚೈನನ್ನು ಕಿತ್ತುಕೊಂಡು ಸುಲಿಗೆ ಮಾಡಿಕೊಂಡು ಓಡಿ ಹೋಗಿ, ಆತ ನಿಲ್ಲಿಸಿ ಬಂದಿದ್ದ ದ್ವಿಚಕ್ರ ವಾಹನದಲ್ಲೇ ಪರಾರಿಯಾಗಿರುತ್ತಾನೆ.  ನಾನು ಭಯ ಹಾಗು ಗಾಬರಿಯಾಗಿ, ಕೆಲವು ಕ್ಷಣ ಅಲ್ಲೆ ಕುಸಿದು ಕುಳಿಕೊಂಡು ನಂತರ ಎದ್ದು ಕಿರುಚಿಕೊಂಡಾಗ, ನಮ್ಮ ಮನೆಯ ಅಕ್ಕಪಕ್ಕದವರು ಬಂದಾಗ, ಸದರಿ ಆಸಾಮಿಯನ್ನು ಹುಡುಕಾಡಿದೆವು.  ಆದರೆ ಸಿಗಲಿಲ್ಲ.   ನನ್ನ ಮಾಂಗಲ್ಯದ ಚೈನನ್ನು ಕಿತ್ತುಕೊಂಡು ಸುಲಿಗೆ ಮಾಡಿಕೊಂಡು ಹೋಗಿರುವ  ಆಸಾಮಿಯು ಗೋದಿ ಮೈಬಣ್ಣದವನಾಗಿದ್ದು, ದೃಡಕಾಯ ಶರೀರದವನಾಗಿರುತ್ತಾನೆ. ಎತ್ತರ ಸುಮಾರು 5.6 ಅಡಿ ಎತ್ತರವಿರುತ್ತಾನೆ. ತಲೆಯಲ್ಲಿ ಕಪ್ಪು ಕೂದಲಿದ್ದು, ಹಿಂದಕ್ಕೆಬಾಚಿದ್ದು,  ತುಂಬು ತೋಳಿನ ಬಿಳೀ ಶರ್ಟ್, ಹಾಗು ಕಪ್ಪು ಪ್ಯಾಂಟ್ ಧರಿಸಿದ್ದನು. ಆತನನ್ನು ಪುನಃ ನೋಡಿದರೆ ಗುರ್ತಿಸುತ್ತೇನೆ. ಸದರಿ ಆಸಾಮಿಯು ಕಿತ್ತುಕೊಂಡು ಹೋಗಿರುವ ನನ್ನ ಮಾಂಗಲ್ಯದ ಚಿನ್ನದ ಚೈನಿನ ತೂಕ 40 ಗ್ರಾಂ ಇದ್ದು,  ಇದರ ಬೆಲೆ ಸುಮಾರು 1,50,000 ರೂ ಬೆಲೆ ಬಾಳುತ್ತದೆ. ನನ್ನ ಚಿನ್ನದ ಕತ್ತಿನ ಮಾಂಗಲ್ಯದ  ಚೈನನ್ನು ಕಿತ್ತುಕೊಂಡು ಸುಲಿಗೆ ಮಾಡಿಕೊಂಡು ಹೋಗಿರುವ ವ್ಯಕ್ತಿಯನ್ನು ಪತ್ತೆ ಮಾಡಿ, ನನ್ನ ಚೈನನ್ನು ಪತ್ತೆ ಮಾಡಿಕೊಡಬೇಕಾಗಿ ತಮ್ಮಲ್ಲಿ ಕೋರುತ್ತೇನೆ. ಈ ಕೃತ್ಯ ನಡೆದ ತಕ್ಷಣ ಅಕ್ಕ ಪಕ್ಕದ ಮನೆಯವರೊಂದಿಗೆ  ಸದರಿ ಆಸಾಮಿಯನ್ನು ಹುಡುಕಾಡಿ, ಆತ ಪತ್ತೆಯಾಗದೇ ಇರುವ ಕಾರಣ ಠಾಣೆಗೆ ತಡವಾಗಿ ದೂರು ನೀಡುತ್ತಿರುವುದಾಗಿ ಇದ್ದ ದೂರಿನ ಸಾರಾಂಶದ ಮೇರೆಗೆ ಠಾಣೆಯ ಮೊ.ಸಂ. 65/2021 ಕಲಂ:392 ಐಪಿಸಿ ರೀತ್ಯಾ ಕೇಸು ದಾಖಲಾಗಿರುತ್ತೆ.

 

2. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.37/2021 ಕಲಂ. 87 ಕೆ.ಪಿ ಆಕ್ಟ್ :-

          ದಿನಾಂಕ:19/03/2021 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ ಘನ ನ್ಯಾಯಾಲಯದ ಮ.ಪಿಸಿ-364 ರವರು ಕ್ರಿಮಿನಲ್ ಮೊಕದ್ದಮೆಯನ್ನು ದಾಖಲು ಮಾಡಿಕೊಳ್ಳಲು ಅನುಮತಿಯನ್ನು ಪಡೆದು ತಂದು ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ:12/03/2021 ರಂದು ಸಂಜೆ 6-30 ಗಂಟೆ ಮಾನ್ಯ ಪಿ.ಎಸ್.ಐ ಸಾಹೇಬರು ಮಾಲು, ಅಸಲು ಪಂಚನಾಮೆಯೊಂದಿಗೆ ನೀಡಿದ ವರದಿಯ ಸಾರಾಂಶವೆನೆಂದರೆ  ದಿನಾಂಕ:12/03/2021 ರಂದು ಸಂಜೆ 4-30 ಗಂಟೆಯಲ್ಲಿ ತಾನು ಠಾಣೆಯಲ್ಲಿದ್ದಾಗ ಬಾತ್ಮಿದಾರರು ತನಗೆ ಪೊನ್ ರಾಮಲಿಂಗೇಶ್ವರ ಬಡವಾಣೆ ಪಕ್ಕದ ಹಳ್ಳದಲ್ಲಿರುವ ಹೊಂಗೆ ಮರದ ಕೆಳಗೆ ಯಾರೋ ಕೆಲವು ಮಂದಿ ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವನ್ನು ಆಡುತ್ತೀರುವುದಾಗಿ ಮಾಹಿತಿಯನ್ನು ತಿಳಿಸಿದ್ದು ಅದರಂತೆ ತಮ್ಮ ಠಾಣೆಯ ಸಿಬ್ಬಂದಿಯಾದ ಹೆಚ್ ಸಿ-12 ಶಿವಶಂಕರ್, ಹೆಚ್ ಸಿ-214 ಲೋಕೇಶ್, ಸಿಹೆಚ್ ಸಿ-226 ಲಿಂಗಪ್ಪ, ಸಿಪಿಸಿ-201 ಸುರೇಶ್  ಮತ್ತು ಸಿಪಿಸಿ-507 ಹನುಮಂತರಾಯಪ್ಪ ರವರಿಗೆ ಮಾಹಿತಿಯನ್ನು ತಿಳಿಸಿ ಅವರನ್ನು ಸರ್ಕಾರಿ  ಜೀಪ್ ಸಂಖ್ಯೆ ಕೆ.ಎ-40 ಜಿ-281 ರಲ್ಲಿ  ಎ.ಪಿಸಿ-105 ಅಶ್ವತ್ಥರೆಡ್ಡಿ ರವರು ಚಾಲನೆ ಮಾಡಿಕೊಂಡು ಸಂಜೆ 4-40 ಗಂಟೆಗೆ ರಾಮಲಿಂಗೇಶ್ವರ ಬಡವಾಣೆಯ  ಆಟೋ ನಿಲ್ದಾಣದ ಬಿಳಿ ಹೋಗಿ ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿ ಸದರಿ ದಾಳಿಗೆ ಪಂಚರು ಒಪ್ಪಿದರು. ಅವರನ್ನು ತಮ್ಮ ಜೀಪ್ನಲ್ಲಿ ಕರೆದುಕೊಂಡು ಸಂಜೆ 4-45 ಗಂಟೆಗೆ ರಾಮಲಿಂಗೇಶ್ವರ ಬಡವಾಣೆ ಹಳ್ಳದ ಬಳಿ ಹೋಗಿ ಮರೆಯಲ್ಲಿ ಜೀಪ್ ನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಜಾಲಿ ಮರದ ಕೆಳಗೆ ಕೆಲವು ಮಂದಿ ಗುಂಪಾಗಿ ಕೊಳಿತುಕೊಂಡು ಅಂದರ್-500 ಬಾಹರ್-500 ಎಂದು ಕೂಗಾಡುತ್ತಾ ಇಸ್ಪೀಟ್ ಜೂಜಾಟವನ್ನು ಅಡುತ್ತೀರುವುದು ಕಂಡು ಬಂದಿದ್ದು ಅಡುತ್ತೀದ್ದವರ ಮೇಲೆ ದಾಳಿ ಮಾಡಲು ಹೋದಾಗ ಕೆಲವರು ಓಡಿ ಹೋಗಿದ್ದು ಅದರಲ್ಲಿ 05 ಜನರನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಮಲ್ಲಿಕಾರ್ಜುನ್ ಬಿನ್ ರುದ್ರಪ್ಪ, 39 ವರ್ಷ, ಅಡುಗೆ ಕೆಲಸ, ಲಿಂಗಾಯಿತರು, ವಾಸ: ಹಾಲಿನ ಡೈರಿ ಹತ್ತಿರ, ಹಿರೇಬಿದನೂರು ಗ್ರಾಮ, ಗೌರಿಬಿದನೂರು ನಗರ, 2) ಶಿವರಂಜನ್ ಬಿನ್ ಮುನಿಆವುಲಪ್ಪ, 30 ವರ್ಷ, ಅಡುಗೆ ಕೆಲಸ,  ವಾಸ: ಹೊಸಪೇಟೆ, ಗೌರಿಬಿದನೂರು ನಗರ, 3) ಚಂದ್ರಶೇಖರ್ ಬಿನ್ ಮುದ್ದರಾಜು, 25 ವರ್ಷ, ಬಲಜಿಗರು, ಡ್ರೈವರ್ ಕೆಲಸ, ವಾಸ: ನಂಬಣ್ಣ ಬಡವಾಣೆ, ಗೌರಿಬಿದನೂರು ನಗರ, 4) ಚಂದ್ರಮೌಳಿ ಬಿನ್ ಎನ್ ನಂಜುಂಡಪ್ಪ, 47 ವರ್ಷ, ಸಾದರು ಜನಾಂಗ, ಹಣ್ಣಿನ ವ್ಯಾಪಾರ, ವಾಸ: ರಾಮಾಲಿಂಗೇಶ್ವರ ಬಡವಾಣೆ, ಗೌರಿಬಿದನೂರು ನಗರ, 5) ನಾರಾಯಣಸ್ವಾಮಿ ಬಿನ್ ಗೋಪಾಲಪ್ಪ, 25 ವರ್ಷ, ಕ್ಯಾಂಟರ್ ಮಾಲಿಕರು, ವಾಸ: ರಾಮಾಲಿಂಗೇಶ್ವರ ಬಡವಾಣೆ, ಗೌರಿಬಿದನೂರು ನಗರ ಎಂದು ತಿಳಿಸಿದ್ದು ಓಡಿ ಹೋದರವರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 6) ರಾಕೇಶ್ @ ರಾಕಿ ಬಿನ್ ಹನುಮಂತಪ್ಪ, 22 ವರ್ಷ, ಬಲಜಿಗರು, ಜೆ.ಸಿ.ಬಿ ಮಾಲಿಕರು, ವಾಸ: ರಾಮಾಲಿಂಗೇಶ್ವರ ಬಡವಾಣೆ, ಗೌರಿಬಿದನೂರು ನಗರ, 7) ರಾಮು ಬಿನ್ ಗೋಪಾಲಪ್ಪ,  28 ವರ್ಷ, ಬಲಜಿಗರು, ಡ್ರೈವರ್ ಕೆಲಸ, ವಾಸ:ರಾಮಾಲಿಂಗೇಶ್ವರ ಬಡವಾಣೆ, ಗೌರಿಬಿದನೂರು ನಗರ, 8) ಪವನ್ ಬಿನ್ ವೆಂಕಟೇಶ್, 28 ವರ್ಷ, ಜಿರಾಯ್ತಿ, ಸಾದರು ಜನಾಂಗ, ವಾಸ: ರಾಮಾಲಿಂಗೇಶ್ವರ ಬಡವಾಣೆ, ಗೌರಿಬಿದನೂರು ನಗರ, ಎಂದು ತಿಳಿಸಿದ್ದು ನಂತರ ಸ್ಥಳದಲ್ಲಿ  ಪಂಚರ ಸಮಕ್ಷಮ ಪರಿಶೀಲನೆ ಮಾಡಲಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಇಸ್ಪೀಟ್ ಎಲೆಗಳನ್ನು ಲೆಕ್ಕ ಮಾಡಲಾಗಿ ಓಟ್ಟು 52 ಇಸ್ಫೀಟ್ ಎಲೆಗಳು ಇದ್ದು ಅಲ್ಲಲ್ಲಿ ಬಿದ್ದಿದ್ದ ಹಣವನ್ನು ಲೆಕ್ಕ ಮಾಡಲಾಗಿ ಓಟ್ಟು 8910/- ರೂಗಳು ಇರುತ್ತೆ. ಮತ್ತು ಒಂದು ನ್ಯಾಸ್ ಪೇಪರ್ ಇವುಗಳನ್ನು ಸಮಕ್ಷಮ ಸಂಜೆ 5-00 ಗಂಟೆಯಿಂದ 5-45 ಗಂಟೆಯವರೆಗೆ ಜರುಗಿಸಿದ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಮೇಲ್ಕಂಡ ಆರೋಪಿತರನ್ನು ಮತ್ತು ಮಾಲುಗಳನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 6-00 ಗಂಟೆಗೆ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ 6-30 ಗಂಟೆಗೆ ಹಾಜರುಪಡಿಸಿ ಸದರಿ ಆರೋಪಿತರ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ ಎನ್.ಸಿ ಆರ್   60/2021 ರಂತೆ ದಾಖಲು ಮಾಡಿಕೋಂಡಿರುತ್ತೆ.

 

3. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.30/2021 ಕಲಂ. 87 ಕೆ.ಪಿ ಆಕ್ಟ್ :-

          ದಿನಾಂಕ:19/03/2021 ರಂದು ಸಂಜೆ 04.45 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಆರೋಪಿಗಳು, ಮಾಲು ಮತ್ತು ಪಂಚನಾಮೆಯೊಂದಿಗೆ ನೀಡಿದ ವರದಿ ಸಾರಾಂಶವೇನೆಂದರೆ,  ತಾನು ಠಾಣೆಯಲ್ಲಿದ್ದಾಗ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ಸರಹದ್ದು ಚಿಲಕಲನೇರ್ಪು ಗ್ರಾಮದ ಶ್ರೀನಿವಾಸ ಬಿನ್ ಓಬಳೇಶ ಬಾಬತ್ತು ಜಮೀನಿನ ಪಕ್ಕದಲ್ಲಿರುವ ಸರ್ಕಾರಿ ಬಂಡೆ ಮೇಲೆ ಯಾರೋ ಕೆಲವರು ಕಾನೂನು ಬಾಹಿರವಾಗಿ ಇಸ್ಟೀಟು ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನ ಮೇರೆಗೆ ದಾಳಿ ಮಾಡುವ ಸಲುವಾಗಿ ಕೆಎ-40-ಜಿ- 539 ಸರ್ಕಾರಿ ವಾಹನದಲ್ಲಿ ಠಾಣಾ ಸಿಬ್ಬಂದಿಯವರಾದ ಸಿಹೆಚ್ಸಿ-161 ಕೃಷ್ಣಪ್ಪ , ಸಿಹೆಚ್ಸಿ 56 ಅಶ್ವತ್ಥಪ್ಪ, ಸಿ.ಹೆಚ್.ಸಿ 148 ಕ್ರಿಷ್ಣಪ್ಪ, ಸಿಪಿಸಿ-484 ವಿ.ಎಸ್.ಶಿವಣ್ಣ, ಸಿಪಿಸಿ-499 ರಾಮಕೃಷ್ಣ, ರವರೊಂದಿಗೆ ಚಿಲಕಲನೇರ್ಪು ಗ್ರಾಮದ ಬಳಿ ಹೋಗಿ ಅಲ್ಲಿದ್ದವರನ್ನು ಪಂಚಾಯ್ತಿದಾರರಾಗಿ ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ ಅವರೊಂದಿಗೆ ಗ್ರಾಮದಿಂದ ಪಶ್ಚಿಮಕ್ಕೆ 500 ಮೀಟರ್ ದೂರದಲ್ಲಿರುವ ಚಿಲಕಲನೇರ್ಪು ಗ್ರಾಮದ ಶ್ರೀನಿವಾಸ ಬಿನ್ ಓಬಳೇಶ ಬಾಬತ್ತು ಜಮೀನಿನ ಪಕ್ಕದಲ್ಲಿರುವ ಸರ್ಕಾರಿ ಬಂಡೆ  ಮೇಲೆ  ಯಾರೋ ಕೆಲವರು ಹಣವನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ ಅಕ್ರಮ ಇಸ್ಟೀಟು ಜೂಜಾಟವಾಡುತ್ತಿದ್ದು ಸದರಿಯವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ಜೂಜಾಡುತ್ತಿದ್ದ ಸದರಿಯವರು ಇಸ್ಟೀಟ್ ಎಲೆ  ಹಾಗೂ ಹಣವನ್ನು ಅಲ್ಲಿಯೇ ಬಿಸಾಡಿ ಓಡಲು ಪ್ರಯತ್ನಿಸಿದ್ದು, ಅವರನ್ನು ಬೆನ್ನಟ್ಟಿ ವಶಕ್ಕೆ ಪಡೆದು  ಹೆಸರು ಮತ್ತು ವಿಳಾಸ ಕೇಳಲಾಗಿ 1) ಶ್ರೀನಿವಾಸ ಬಿನ್ ಓಬಳಪ್ಪ, 48 ವರ್ಷ, ಆದಿ ದ್ರಾವಿಡ ಜನಾಂಗ, ಜಿರಾಯ್ತಿ, ಚಿಲಕಲನೇರ್ಪು ಗ್ರಾಮ, ಚಿಂತಾಮಣಿ ತಾಲ್ಲೂಕು. 2) ಮಂಜುನಾಥ ಬಿನ್ ಚೌಡಪ್ಪ, 26 ವರ್ಷ, ಒಕ್ಕಲಿಗರು, ಖಾಸಗಿ ಕೆಲಸ, ವಾಸ ಮಿಂಚಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು. 3) ಮಂಜುನಾಥ ಬಿನ್ ವೆಂಕಟರವಣಪ್ಪ, 42 ವರ್ಷ, ಗಾಣಿಗ ಜನಾಂಗ, ದಳ್ಳಾಲಿ ವ್ಯಾಪಾರ, ವಾಸ ಚಿಲಕಲನೇರ್ಪು ಗ್ರಾಮ, ಚಿಂತಾಮಣಿ ತಾಲ್ಲೂಕು, 4) ನಾಗರಾಜ ಬಿನ್ ಮುನಿಯಪ್ಪ, 30 ವರ್ಷ, ಬಲಜಿಗ ಜನಾಂಗ, ಬಳೇ ವ್ಯಾಪಾರ, ಪಾಲಿಮೊಳ್ಳಪಲ್ಲಿ ಗ್ರಾಮ, ತನಕಲ್ ಮಂಡಲ್, ಕದಿರಿ ತಾಲ್ಲೂಕು, ಅನಂತಪುರ ಜಿಲ್ಲೆ, 5) ಸುರೇಶ ಬಿನ್ ಶ್ರೀರಾಮಪ್ಪ, 26 ವರ್ಷ, ಆದಿ ಕರ್ನಾಟಕ ಜನಾಂಗ, ತರಕಾರಿ ವ್ಯಾಪಾರ,  ಕೊತ್ತಪೇಟ ಗ್ರಾಮ, ಶ್ರೀನಿವಾಸಪುರ ತಾಲ್ಲೂಕು, ಕೋಲಾರ ಜಿಲ್ಲೆ, ಎಂದು ತಿಳಿಸಿದರು. ಸ್ಥಳದಲ್ಲಿ ಪರಿಶೀಲಿಸಲಾಗಿ ಸದರಿಯವರು ಜೂಜಾಟವಾಡಲು ಪಣವಾಗಿಟ್ಟಿದ್ದ ಹಣ ಇದ್ದು,  ಪಂಚರ  ಸಮಕ್ಷಮ ಪರಿಶೀಲಿಸಲಾಗಿ 4250/- ರೂ ನಗದು ಹಣ ಇದ್ದು, ಸದರಿ ನಗದು ಹಣ,  52 ಇಸ್ಟೀಟ್ ಎಲೆಗಳು ಹಾಗೂ ಒಂದು ನ್ಯೂಸ್ ಪೇಪರ್ ನ್ನು ಈ ಕೇಸಿನ ಮುಂದಿನ ನಡಾವಳಿಗಾಗಿ ಅಮಾನತ್ತುಪಡಿಸಿಕೊಂಡು ಸ್ಥಳದಲ್ಲಿಯೇ ಸಂಜೆ: 03-15 ರಿಂದ 04-00 ಗಂಟೆ ವರೆಗೆ ಪಂಚನಾಮೆ ಕ್ರಮ ಜರುಗಿಸಿ ಆರೋಪಿತರು, ಮಾಲು ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿದ್ದು, ಆರೋಪಿತರು, ಮಾಲು ಹಾಗೂ ಮಹಜರ್ ನ್ನು ಮುಂದಿನ ಕ್ರಮಕ್ಕಾಗಿ ತಮ್ಮಲ್ಲಿ ನೀಡುತ್ತಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ ಸಂಖ್ಯೆ: 23/2021 ರಂತೆ ದಾಖಲು ಮಾಡಿಕೊಂಡು  ಘನ ನ್ಯಾಯಾಲಯದ ಅನುಮತಿ ಪಡೆದು ರಾತ್ರಿ 08.00 ಗಂಟೆಗೆ ಠಾಣಾ ಮೊ.ಸಂ 30/2021  ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

4. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.52/2021 ಕಲಂ. 87 ಕೆ.ಪಿ ಆಕ್ಟ್ :-

          ಮಂಚೇನಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ. ಶ್ರೀ.ಕೆ.ಆರ್. ಪ್ರತಾಪ್  ಆದ ನಾನು ದಿನಾಂಕ: 05-06-2020 ರಂದು ಮದ್ಯಾಹ್ನ 1-00 ಗಂಟೆಯ ಸಮಯದಲ್ಲಿ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿರುವಾಗ ಡಿ.ಪಾಳ್ಯ ಹೋಬಳಿ ಹೊಸಪೇಟೆ ಗ್ರಾಮದ ಬಳಿಯ ಕೆರೆಯ ಬಳಿಯ ಮರದ ಕೆಳಗೆ ಯಾರೋ ಕೆಲವರು ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಎಲೆಗಳ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲು ಕೆ.ಎ-40 ಜಿ. 395 ರ ಜೀಪಿನಲ್ಲಿ ನಟೇಶ್ ಜೀಪ್ ಚಾಲಕನಾಗಿ ಠಾಣೆಯಲ್ಲಿದ್ದ ಸಿಬ್ಬಂದಿಯವರಾದ ಪಿ.ಸಿ. 537 ಆನಂದ ಕುಮಾರ್ ಪಿ.ಸಿ 311 ಗೂಳಪ್ಪ. ಪಿ.ಸಿ 336 ಉಮೇಶ, ಪಿ.ಸಿ 283 ಅರವಿಂದ, ಪಿ.ಸಿ.238 ದೀಲೀಪ  ರವರು ಮತ್ತು ಪಂಚರೊಂದಿಗೆ ಡಿ.ಪಾಳ್ಯ ಹೋಬಳಿ ಹೊಸಪೇಟೆ ಗ್ರಾಮದ ಬಳಿಯ ಕೆರೆಯ ಬಳಿಯ ಮರದ ಬಳಿ ಹೋಗಿ ಸ್ವಲ್ಪ ದೂರದಲ್ಲಿ ವಾಹನವನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಗುಂಪಾಗಿ ಕುಳಿತು ಕೆಳಕ್ಕೆ ಪ್ಲಾಸ್ಟಿಕ್ ಚೀಲಹಾಕಿಕೊಂಡು ಅದರ ಮೇಲೆ ಹಣವನ್ನು ಪಣವಾಗಿಟ್ಟು ಅಂದರ್ಗೆ 50/-ರೂ. ಬಾಹರ್ಗೆ 50/-ರೂ.ಗಳು ಎಂದು ಕೂಗುತ್ತಾ ಜೂಜಾಟವಾಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಪಂಚರೊಂದಿಗೆ ನಾವು ಸದರಿಯವರ ಮೇಲೆ ದಾಳಿ ಮಾಡಿ ಜೂಜಾಟವಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆ ನೀಡಿ ಸುತ್ತುವರೆದು ಅಲ್ಲಿದ್ದವರನ್ನು ಹಿಡಿದುಕೊಂಡಿದ್ದು, ಅವರ ಹೆಸರು ವಿಳಾಸ ಕೇಳಲಾಗಿ 1) ಯಲ್ಲಪ್ಪ ಬಿನ್ ಹನುಮಂತರಾಯಪ್ಪ 52 ವರ್ಷ ಬೋವಿ ಜನಾಂಗ  ಜಿರಾಯ್ತಿ ಹೊಸಪೇಟೆ ಡಿ.ಪಾಳ್ಯ ಹೋಬಳಿ ಗೌರಿಬಿನದನೂರು ತಾಲ್ಲೂಕು 2).ರವಿಕುಮಾರ್ ಬಿನ್ ಜಗದೀಶ್ವರಾಚಾರಿ 35 ವರ್ಷ ಆಚಾರಿ ಜನಾಂಗ ಚಾಲಕ ವೃತ್ತಿ ಬಚ್ಚಿರೆಡ್ಡಿಹಳ್ಳಿ ಡಿ.ಪಾಳ್ಯ ಹೋಬಳಿ ಗೌರೀಬಿದನೂರು ತಾಲ್ಲೂಕು, 3. ಲಕ್ಷೀನಾರಾಯಣ ಬಿನ್ ಚಿಕ್ಕನರಸಿಂಹಪ್ಪ 28 ವರ್ಷ ನಾಯಕ ಜನಾಂಗ ಜಿರಾಯ್ತಿ ಗುಡಿಬಂಡೆ, 4, ಗಂಗರೆಡ್ಡಿ ಬಿನ್ ಅಶ್ವತ್ಥನಾರಾಯಣರೆಡ್ಡಿ 32 ವರ್ಷ ವಕ್ಕಲಿಗರು ಜಿರಾಯ್ತಿ ಬಚ್ಚಿರೆಡ್ಡಿಹಳ್ಳಿ ಡಿ.ಪಾಳ್ಯ ಹೋಬಳಿ ಗೌರೀಬಿದನೂರು ತಾಲ್ಲೂಕು 5. ರವೀಂದ್ರ ಬಿನ್ ಗಂಗಾಧರಪ್ಪ 28 ವರ್ಷ ನಾಯಕ ಜನಾಂಗ ಜಿರಾಯ್ತಿ ಪೂಲ ಮಾಲಕಲಹಳ್ಳಿ ಡಿ.ಪಾಳ್ಯ ಹೋಬಳಿ ಗೌರೀಬಿದನೂರು ತಾಲ್ಲೂಕು. 6.ನಾರಾಯಣಸ್ವಾಮಿ ಬಿನ್ ರಾಮಪ್ಪ 48 ವರ್ಷ ಗೊಲ್ಲ ಜನಾಂಗ ಜಿರಾಯ್ತಿ ಅನಗಟ್ಟಹಳ್ಲಿ ಡಿ.ಪಾಳ್ಯ ಹೋಬಳಿ ಗೌರೀಬಿದನೂರು ತಾಲ್ಲೂಕು, 7.ಗೋಪಾಲ ಬಿನ್ ಚಿಕ್ಕನರಸಪ್ಪ 49 ವರ್ಷ ನಾಯಕ ಜನಾಂಗ ಜಿರಾಯ್ತಿ ವದ್ದೇನಹಳ್ಳಿ ಡಿ.ಪಾಳ್ಯ ಹೋಬಳಿ ಗೌರೀಬಿದನೂರು ತಾಲ್ಲೂಕು, 8.ನರಸಿಂಹರೆಡ್ಡಿ ಬಿನ್ ರಾಮರೆಡ್ಡಿ 50 ವರ್ಷ ವಕ್ಕಲಿಗರು ಜಿರಾಯ್ತಿ ಬಚ್ಚಿರೆಡ್ಡಿಹಳ್ಳಿ ಡಿ.ಪಾಳ್ಯ ಹೋಬಳಿ ಗೌರೀಬಿದನೂರು ತಾಲ್ಲೂಕು, 9.ನಾಗಪ್ಪ ಬಿನ್ ನರಸಿಂಹಪ್ಪ 32 ವರ್ಷ ನಾಯಕ ಜನಾಂಗ ಜಿರಾಯ್ತಿ ವದ್ದೇನಹಳ್ಳಿ ಡಿ.ಪಾಳ್ಯ ಹೋಬಳಿ ಗೌರೀಬಿದನೂರು ತಾಲ್ಲೂಕು. 10.ನರಸಿಂಹಮೂತರ್ಿ ಬಿನ್ ಸಂಜೀವಪ್ಪ 40 ವರ್ಷ ನಾಯಕ ಜನಾಂಗ ಜಿರಾಯ್ತಿ ವದ್ದೇನಹಳ್ಳಿ ಡಿ.ಪಾಳ್ಯ ಹೋಬಳಿ ಗೌರೀಬಿದನೂರು ತಾಲ್ಲೂಕು. ಎಂದು ತಿಳಿಸಿದ್ದು, ನಮ್ಮಗಳ  ಕೈಗೆ ಸಿಕ್ಕಿದವರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದರು. ಪಂಚನಾಮೆಯ ಮೂಲಕ ಸ್ಥಳದಲ್ಲಿ ದೊರೆತ ನಗದು ಹಣ ರೂ. 5000/- (ಐದುಸಾವಿರ ರೂಪಾಯಿಗಳು ಮಾತ್ರ.) 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಚೀಲವನ್ನು ಮದ್ಯಾಹ್ನ 2-15 ಗಂಟೆಯಿಂದ ಮದ್ಯಾಹ್ನ 3-15 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಆರೋಪಿಗಳನ್ನು ಮತ್ತು ಮಾಲನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ನೀಡುತ್ತಿದ್ದು ಇವರ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸ ಬೇಕೆಂದು ಕೋರುತ್ತೇನೆ.

 

5. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.29/2021 ಕಲಂ. 506,504,307,324 ಐ.ಪಿ.ಸಿ:-

          ದಿನಾಂಕ 19-03-2021 ರಂದು ಸಂಜೆ 16-30 ಗಂಟೆಗೆ ಪಿರ್ಯಾದುದಾರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಸಾರಾಂಶವೇನೆಂದರೆ ತಾನು ಚಿಕ್ಕ ಕಿರುಗಂಬಿ ಗ್ರಾಮದ ವಾಸಿಯಾಗಿದ್ದು  ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ,ದಿನಾಂಕ;18-03-2021 ರಂದು ಸಂಜೆ 5-30 ಗಂಟೆಯ ಸಮಯದಲ್ಲಿ  ನಾನು ಜಮೀನಿನಲ್ಲಿ ಕೆಲಸವನ್ನು ಮುಗಿಸಿ ಕೊಂಡು  ಮನೆಯ ಬಳಿ ಬಂದಾಗ ನಮ್ಮೂರಿನ  ಪ್ರತಾಪ ಬಿನ್ ಮುನಿಶ್ಯಾಮಪ್ಪ 28  ವರ್ಷ ನಾಯಕ ಜನಾಂಗ ರವರು  ಕೈಯಲ್ಲಿ  ಮಚ್ಚನ್ನು ಹಿಡಿದುಕೊಂಡು ನನ್ನನ್ನು ಕುರಿತು  ನಿನ್ನಮ್ಮನೆ ಕೇಯಾ, ಬೋಳಿ ಮಗನೆ .ಸೋಳೆ ಮಗನೆ ಎಂದು ನನ್ನನ್ನು ಬೈದಾಡಿಕೊಂಡು ಹೋರಾಡುತ್ತಿದ್ದನು, ಆ ಸಮಯದಲ್ಲಿ ನಾನು ಏಕೆ ನನ್ನನ್ನು ನೋಡಿ  ಬೈಯುತ್ತಿರುವುದು ಎಂದು ಕೇಳಿದಾಗ  ನೀನು ನಮ್ಮ  ಅತ್ತಿಗೆಯಾದ ಸವಿತಮ್ಮ ರವರಿಗೆ ಪೋನ್ ಮಾಡಿಅವರ ಜೊತೆ ಮಾತನಾಡುತ್ತೀಯಾ ಎಂದು ಕೇಳಿ ನನ್ನ ಮಗನೆ ನಿನ್ನನ್ನು ಸಾಯುಸುತ್ತೇನೆಂದು ತನ್ನ ಕೈಯಲ್ಲಿದ್ದ ಮಚ್ಚಿನಿಂದ  ನನ್ನ ಎಡ ಭುಜಕ್ಕೆ ಹೊಡೆಯಲು ಬಂದನು. ಅಷ್ಟರಲ್ಲಿ ನಾನು ಎಡಕೈಯನ್ನು ಅಡ್ಡ ಇಟ್ಟಾಗ  ರಕ್ತಗಾಯವಾಯಿತು, ಅಷ್ಟರಲ್ಲಿ ನಮ್ಮೂರಿನವರಾದ  ನರಸಪ್ಪ, ಚಂದ್ರ, ಶಿವಪ್ಪ, ಮೂರ್ತಿ ಬಿನ್ ಚಿನ್ನಪ್ಪ ರವರುಗಳು ಅಡ್ಡ ಬಂದು ಜಗಳ ಬಿಡಿಸಿ ಬೆಳಗ್ಗೆ ಮಾತನಾಡೋಣವೆಂದು ಅವನನ್ನು ಕರೆದುಕೊಂಡು ಹೋದರು ಪ್ರತಾಪನು  ಹೋಗುವಾಗ ನನ್ನ ಮಗನೆ ನಿನ್ನನ್ನು ಬಿಡುವುದಿಲ್ಲಾ ಮತ್ತೆ ಬರುತ್ತೇನೆಂದು ಹೇಳಿ ಹೋದನು, ನಾನು ಮನೆಯ ಮೇಲೆ ಹೋಗಿ ಮಲಗಿಕೊಂಡನು, ಪುನಃ ರಾತ್ರಿ ಸುಮಾರು 9-30 ಗಂಟೆಯ ಸಮಯದಲ್ಲಿ ಪ್ರತಾಪನು ಆನನ್ನ ಮಗನನ್ನು ಇವತ್ತು ಬಿಡುವುದಿಲ್ಲಾ ಸಾಯಿಸುತ್ತೇನೆಂದು ತನ್ನ ಕೈಯಲ್ಲಿದ್ದ  ಒಂದು ವಸ್ತುವನ್ನು ಎಸೆದು ಹೋದನೆಂದು ವಿಚಾರ ತಿಳಿಯಿತು,  ದಿನಾಂಕ;19-03-2021 ರಂದು ಬೆಳಗ್ಗೆ 6-10 ಗಂಟೆಯ ಸಮಯದಲ್ಲಿ ನಾನು ಮನೆಯ ಮೇಲೆ ಮಲಗಿಕೊಂಡಿದ್ದಾಗ ಮೂರ್ತಿ ಬಿನ್ ಲೇಟ್ ಚಿನ್ನಪ್ಪ  ರವರ ಮನೆಯ ಮುಂದೆ  ಜೋರಾದ ಶಬ್ದ ಕೇಳಿ ಬಂದಿತು, ನಾನು ಮತ್ತು ನಮ್ಮೂರಿನವರು ಅಲ್ಲಿಗೆ ಹೋಗುವಷ್ಟರಲ್ಲಿ ಮೂರ್ತಿ ರವರ ಸಾಕು ನಾಯಿಯು ಸತ್ತು ಹೋಗಿತ್ತು, ಮೂರ್ತಿ ರವರ ಸಾಕು ನಾಯಿಯು ಸತ್ತು ಹೋದ ವಿಚಾರದಲ್ಲೂ ತನಗೆ ಅನುಮಾನವಿರುತ್ತದೆ, ಗಲಾಟೆಯ ವಿಚಾರವನ್ನು ಗ್ರಾಮದ ಮುಖಂಡರೆಲ್ಲರೊಂದಿಗೆ ಚರ್ಚಿಸಿ ತಡವಾಗಿ ಬಂದು ದೂರನ್ನು ನೀಡಿತ್ತಿದ್ದು ತನ್ನನ್ನು ಸಾಯಿಸಲು ಪ್ರಯತ್ನಿಸಿದ ಪ್ರತಾಪನ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಿಬೇಕೆಂದು  ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ,

 

6. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.16/2021 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ:20/03/2021 ರಂದು ಮದ್ಯಾಹ್ನ 3-00 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಸಿಪಿಸಿ-174 ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದನ್ನು ಪಡೆದು ಪ್ರಕರಣ ದಾಖಲಿಸಿದ್ದರ ಸಾರಾಂಶವೇಂದರೆ, ಪಿರ್ಯಾದುದಾರರಾದ ನಯಾಜ್ ಬೇಗ್, ಸಿ.ಪಿ.ಐ ಬಾಗೇಪಲ್ಲಿ ವೃತ್ತ ರವರು ದಿನಾಂಕ:20-03-2021 ರಂದು  ಬೆಳಿಗ್ಗೆ 09-00 ಗಂಟೆಯಲ್ಲಿ ಕಚೇರಿಯಲ್ಲಿದ್ದಾಗ ಬಾಗೇಪಲ್ಲಿ ವೃತ್ತ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು ನಾರೇಮದ್ದೇಪಲ್ಲಿ ಗ್ರಾಮದ ಸರ್ಕಾರಿ ಕೆರೆ ಅಂಗಳದಲ್ಲಿರುವ ಪೊದೆಯ ಬಳಿ ಯಾರೋ ಕೆಲವರು ಹಣವನ್ನು ಪಣವನ್ನಾಗಿಟ್ಟುಕೊಂಡು ಆಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಪಾತಪಾಳ್ಯ ಪೊಲೀಸ್ ಠಾಣೆಯ ಸಬ್-ಇನ್ಸ್ ಪೆಕ್ಟರ್ ಎನ್.ರತ್ನಯ್ಯ ಪಾತಪಾಳ್ಯ ಠಾಣೆಯ ಸಿಬ್ಬಂದಿಯವರಾದ ಸಿಪಿಸಿ-148 ದನಂಜಯ, ಪಿಸಿ-234 ಸುರೇಶ ಕೊಂಡಗೂಳಿ, ಪಿಸಿ-324 ಮುಸ್ತಾಕ್ ಅಹಮದ್, ಪಿಸಿ-303 ಬಸವರಾಜ ಕುಂಬಾರ, ಸಿಪಿಸಿ-281 ಶಂಕರಪ್ಪ ಕಿರವಾಡಿ, ಸಿಪಿಸಿ-577 ಮಂಜುನಾಥ, ಸಿಪಿಸಿ-436 ನಂದೀಶ್ವರ ನಲ್ಕುದ್ರಿ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-6399 ಹಾಗೂ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-59 ವಾಹನಗಳಲ್ಲಿ ಚಾಲಕರಾದ AHC-21 ಸತ್ಯಾನಾಯ್ಕ್, APC-110 ನರಸಿಂಹಮೂರ್ತಿ ರವರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು 100 ರೂ ಅಂದರ್, 100 ರೂ ಬಾಹರ್ ಎಂದು ಕೂಗಿಕೊಂಡು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ನಾವು ದಾಳಿ ಮಾಡಲು ಸುತ್ತುವರೆದು ಜೂಜಾಟ ಆಡುತ್ತಿದ್ದವರನ್ನು ಎಲ್ಲಿಯೂ ಕದಲಬೇಡಿ ಎಂದು ಎಚ್ಚರಿಕೆ ನೀಡಿದರೂ ಸಹಾ ಕೆಲವರು ಓಡಿ ಹೋಗಿದ್ದು, ಓಡಿಹೋದ ಆಸಾಮಿಗಳನ್ನು ನಾವು ಬೆನ್ನಟ್ಟಿಹಿಡಿಯಲು ಪ್ರಯತ್ನಿಸಿದರೂ ಸಿಕ್ಕಿರುವುದಿಲ್ಲಾ. ಸಿಕ್ಕಿಬಿದ್ದ ಆಸಾಮಿಗಳ ಹೆಸರು ಮತ್ತು ವಿಳಾಸ ಕೇಳಲಾಗಿ 1)ಭರತ್ ರೆಡ್ಡಿ ಬಿನ್ ಶಂಕರರೆಡ್ಡಿ, 30 ವರ್ಷ, ಒಕ್ಕಲಿಗರು, ಜಿರಾಯ್ತಿ, ಗ್ಯಾದವಾಂಡ್ಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು. 2)ಶ್ರೀನಾಥ ಬಿನ್  ಚೌಡರೆಡ್ಡಿ, 35 ವರ್ಷ, ಒಕ್ಕಲಿಗರು, ಜಿರಾಯ್ತಿ, ಬೆಸ್ತಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು 3)ಚಿಕ್ಕರೆಡ್ಡಪ್ಪ ಬಿನ್ ವೆಂಕಟರಾಮಪ್ಪ, 30 ವರ್ಷ, ಪಿಚ್ಚಕುಂಟ್ಲ ಜನಾಂಗ, ಜಿರಾಯ್ತಿ, ಶಿವಪುರ ಗ್ರಾಮ, ಬಾಗೇಪಲ್ಲಿ ತಾಲ್ಲೂಕು 4)ಕೃಷ್ಣಪ್ಪ ಬಿನ್ ಲೇಟ್ ನರಸಿಂಹಪ್ಪ, 62 ವರ್ಷ, ಬಲಜಿಗರು, ಜಿರಾಯ್ತಿ, ಜಂಗಾಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು 5)ಚಂದ್ರ ಬಿನ್ ಲೇಟ್ ನಾರಾಯಣಪ್ಪ, 44 ವರ್ಷ,  ಕುಂಬಾರ ಜನಾಂಗ, ಜಿರಾಯ್ತಿ, ಪೆದ್ದರೆಡ್ಡಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಸದರಿಯವರನ್ನು ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ 6)ಶಬ್ಬೀರ್ ಬಿನ್ ಚಿಂತಮಾನುಲ ಸುಬಾನ್, 35 ವರ್ಷ, ಮುಸ್ಲಿಂ ಜನಾಂಗ, ಜಿರಾಯ್ತಿ, ನಾರೇಮದ್ದೇಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು 7)ಪೆದ್ದರಾಮುಡು @ವೆಂಕಟರಮಣ ಬಿನ್ ಸುಬ್ಬರಾಯಪ್ಪ, 40 ವರ್ಷ, ಒಕ್ಕಲಿಗರು, ಜಿರಾಯ್ತಿ, ಬೆಸ್ತಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, 8)ಪಿ.ಟಿ.ಶ್ರೀರಾಮ ಬಿನ್ ತುಮ್ಮಲಪ್ಪ, 45 ವರ್ಷ, ಭೋವಿ ಜನಾಂಗ, ಜಿರಾಯ್ತಿ, ಪೆದ್ದರೆಡ್ಡಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಮತ್ತು 9)ರಜಿನಿ ಬಿನ್ ಮಾರಪ್ಪ, 40 ವರ್ಷ, ಒಕ್ಕಲಿಗರು, ಜಿರಾಯ್ತಿ, ಶಿವಪುರ ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಸಿಕ್ಕಿಬಿದ್ದಿದ್ದವರನ್ನು ವಶಕ್ಕೆ ಪಡೆದು ಪಣಕ್ಕಿಟ್ಟಿದ್ದ  10,100/- ರೂ ನಗದು ಹಣ, ಒಂದು ಹಳೆಯ ಪ್ಲಾಸ್ಟಿಕ್ ಚೀಲ ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಬೆಳಿಗ್ಗೆ 10-15 ರಿಂದ 11-15 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿಗಳು, ಪಂಚನಾಮೆ ಮತ್ತು ಮಾಲುಗಳೊಂದಿಗೆ ಠಾಣೆಗೆ ಬಂದು ಮೇಲ್ಕಂಡವರ ವಿರುದ್ದ ಮುಂದಿನ ಕ್ರಮ ಜರುಗಿಸಲು ಸೂಚಿಸಿರುವುದ್ದಾಗಿರುತ್ತೆ.

 

7. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.72/2021 ಕಲಂ. 379 ಐ.ಪಿ.ಸಿ:-

          ದಿನಾಂಕ:-18.03.2021 ರಂದು ಸಂಜೆ 4-30 ಗಂಟೆಗೆ ಪಿರ್ಯಾದಿದಾರರಾದ ವೆಂಕಟಾಚಲಪತಿ ಬಿನ್ ನಾರಾಯಣಸ್ವಾಮಿ, 29 ವರ್ಷ, ಪದ್ಮಶಾಲಿ, ಮಗ್ಗದ ಕೆಲಸ, ಎ ಬ್ಲಾಕ್ ವೇಮಗಲ್, ಕೋಲಾರ ತಾಲ್ಲೂಕು ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಮದುವೆ ಮುಂತಾದ ಸಮಾರಂಭಗಳಲ್ಲಿ ಪ್ಲವರ್ ಡೆಕೋರೆಷನ್ ಗಾಗಿ ಹಲವಾರು ಕಡೆಗಳಿಗೆ ಹೋಗಿ ಪ್ಲವರ್ ಡೆಕೋರೇಷನ್ ಮಾಡಿ ಬರುತ್ತಿರುತ್ತೇನೆ. ಎಂದಿನಂತೆ ದಿನಾಂಕ:02.03.2021 ರಂದು ಶಿಡ್ಲಘಟ್ಟ ತಾಲ್ಲೂಕು ಹೆಚ್.ಕ್ರಾಸ್ ನ ಚನ್ನಮ್ಮ ದೇವೆಗೌಡ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭದ ಪ್ಲವರ್ ಡೆಕೋರೆಷನ್ ಕೆಲಸ ಇದ್ದ ಕಾರಣ ಇದೇ ದಿನ ಮದ್ಯಾಹ್ನ ಸುಮಾರು 2.30 ಗಂಟೆ ಸಮಯದಲ್ಲಿ ತಾನು ತಮ್ಮ ಗ್ರಾಮದಿಂದ ತನ್ನ ಬಾಬತ್ತು ನೀಲಿ ಬಣ್ಣದ ಕೆಎ.07.ವಿ.7246 ಸ್ಲೆಂಡರ್ ಪ್ರೋ ದ್ವಿ ಚಕ್ರ ವಾಹನದಲ್ಲಿ ಹೋಗಿ ದ್ವಿ ಚಕ್ರ ವಾಹನವನ್ನು ಕಲ್ಯಾಣ ಮಂಟಪದ ಮುಂಭಾಗದಲ್ಲಿ ನಿಲ್ಲಿಸಿ ಕಲ್ಯಾಣ ಮಂಟಪದಲ್ಲಿ ಕೆಲಸ ಮುಗಿಸಿಕೊಂಡು ಸಂಜೆ ಸುಮಾರು 6.00 ಗಂಟೆ ಸಮಯದಲ್ಲಿ ವಾಪಸ್ಸು ತಮ್ಮ ಗ್ರಾಮಕ್ಕೆ ಹೋಗಲು ಕಲ್ಯಾಣ ಮಂಟಪದಲ್ಲಿಂದ ತಾನು ದ್ವಿ ಚಕ್ರ ವಾಹನವನ್ನು ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಲಾಗಿ ತನ್ನ ಬಾಬತ್ತು ಕೆಎ.07.ವಿ.7246 ಸ್ಲೆಂಡರ್ ಪ್ರೋ ದ್ವಿ ಚಕ್ರ ವಾಹನವನ್ನು ಕಾಣದೇ ಇದ್ದು ಯಾರೋ ಅಸಾಮಿಗಳು ತಾನು ಕಲ್ಯಾಣ ಮಂಟಪದಲ್ಲಿ ಕೆಲಸ ಮಾಡಿಕೊಂಡಿದ್ದ ಸಮಯದಲ್ಲಿ ಕಲ್ಯಾಣ ಮಂಟಪದ ಮುಂಬಾಗದಲ್ಲಿ ನಿಲ್ಲಿಸಿದ್ದ ದ್ವಿ ಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ತನ್ನ ದ್ವಿ ಚಕ್ರ ವಾಹನ ಮೌಲ್ಯ ಸುಮಾರು 40000 ಸಾವಿರ ರೂಗಳಾಗಿರುತ್ತೆ. ನಂತರ ತಾನು ತನ್ನ ದ್ವಿ ಚಕ್ರ ವಾಹವನ್ನು ಹೆಚ್.ಕ್ರಾಸ್ ನ ಹಲವಾರು ಕಡೆಗಳಲ್ಲಿ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ. ತಾನು ತನ್ನ ದ್ವಿ ಚಕ್ರ ವಾಹನ ಕಳವಾದ ಬಗ್ಗೆ ನಮ್ಮ ಮನೆಯಲ್ಲಿ ತಿಳಿಸಿ ಈ ದಿನ ತಡವಾಗಿ ಬಂದು ದೂರು ನೀಡುತಿದ್ದು ಕಳವಾಗಿರುವ ಕೆಎ.07.ವಿ.7246 ಸ್ಲೆಂಡರ್ ಪ್ರೋ ದ್ವಿ ಚಕ್ರ ವಾಹನವನ್ನು ಪತ್ತೆ ಮಾಡಿ ಕಳವು ಮಾಡಿರುವ ಅಸಾಮಿಗಳ ಮೇಲೆ ಕಾನೂನು ಕ್ರಮಕೈಗೊಳ್ಳಬೇಕಾಗಿ ಕೊಟ್ಟ ದೂರು.

 

8. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.73/2021 ಕಲಂ. 448,504,506,34 ಐ.ಪಿ.ಸಿ:-

          ದಿನಾಂಕ 19/03/2021 ರಂದು ರಾತ್ರಿ 8-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಸೌಮ್ಯ ಬಿ.ಆರ್ ಬಿನ್ ಜೆ.ಎನ್ ರಮೇಶ್, 31 ವರ್ಷ, ವಕ್ಕಲಿಗರು, ವ್ಯಾಪಾರ, ವಾಸ-ಆಕ್ಸ್ ಫರ್ಡ್ ಶಾಲೆ ಹಿಂಭಾಗ ಅಂಕತಟ್ಟಿ ಗೇಟ್, ಜಂಗಮಕೋಟೆ ಹೋಬಳಿ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಗಂಡನಾದ ವಿಜಯಪುರದಲ್ಲಿ ಟೈಲ್ಸ್ ಅಂಗಡಿಯನ್ನಿಟ್ಟುಕೊಂಡು ಜೀವನ ಮಾಡಿಕೊಂಡಿದ್ದು, ಪ್ರತಿ ದಿನ ತನ್ನ ಗಂಡ ರಮೇಶ್ ರವರು ಬೆಳಿಗ್ಗೆ ಅಂಗಡಿಗೆ ಹೋಗಿ ವ್ಯಾಪಾರವನ್ನು ಮುಗಿಸಿಕೊಂಡು ವಾಪಸ್ಸು ಮನೆಗೆ ಬರುತ್ತಿದ್ದು, ದಿನಾಂಕ 19/03/2021 ರಂದು ಸಹ ತನ್ನ ಗಂಡ ಎಂದಿನಂತೆ ಅಂಗಡಿಗೆ ಹೋಗಿದ್ದು ತಾನು ಮನೆಯಲ್ಲಿ ಒಬ್ಬಳೇ ಮಕ್ಕಳೊಂದಿಗೆ ಇದ್ದಾಗ ಇದೇ ದಿನ ಮದ್ಯಾಹ್ನ ಸುಮಾರು 3-30 ಗಂಟೆ ಸಮಯದಲ್ಲಿ ದೇವನಹಳ್ಳಿ ತಾಲ್ಲೂಕು ವಿಜಯಪುರ ಹೋಬಳಿ ತಿಮ್ಮಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ತಮ್ಮ ಸಂಬಂಧಿಕರಾದ ನಾರಾಯಣಸ್ವಾಮಿ ಈತನ ಮಗನಾದ ಅನೂಪ್ ಕುಮಾರ್, ದ್ವಾವಮ್ಮ ಕೋಂ ರಾಮಣ್ಣ, ರಾಮಣ್ಣ ರವರು ಇತರರೊಂದಿಗೆ ಕಾರಿನಲ್ಲಿ ತಮ್ಮ ಮನೆಯ ಬಳಿ ಬಂದು ಮೇಲ್ಕಂಡ 4 ಜನರು ತನ್ನ ಮನೆಯ ಬಾಗಿಲನ್ನು ಕಾಲುಗಳಿಂದ ಒದ್ದು, ಎಲ್ಲಿ ನಿನ್ನ ಗಂಡ, ಕರಿ ಅವನನ್ನು ಲೋಫರ್ ನನ್ನ ಮಗನನ್ನು ಎಂದು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದಾಗ ತಾನು ಮನೆಯ ಬಾಗಿಲನ್ನು ತೆಗೆದಾಗ ಮೇಲ್ಕಂಡ 4 ಜನರು ತಮ್ಮ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಎಲ್ಲಿ ನಿನ್ನ ಗಂಡ, ಕರಿ ಆ ನನ್ನ ಮಗನನ್ನು ಇವತ್ತು ಸಾಯಿಸಿ ಬಿಡುತ್ತೇವೆಂದು ಬೆದರಿಕೆಯನ್ನು ಹಾಕಿದಾಗ ತಾನು ನನ್ನ ಗಂಡ ಮನೆಯಲ್ಲಿ ಇಲ್ಲ, ನೀವು ಯಾಕೇ ಗಲಾಟೆಯನ್ನು ಮಾಡುತ್ತೀರಿ ಇಲ್ಲಿಂದ ಹೋಗಿ ಎಂದು ಹೇಳಿದಾಗ ಅವರು ತನಗೂ ಸಹ ಕೆಟ್ಟ ಕೆಟ್ಟ ಮಾತುಗಳಿಂದ ಬೈದು, ನಿನ್ನ ಗಂಡನಿಗೆ ಹೇಳು ಇನ್ನು ಮುಂದೆ ನಮ್ಮ ತಂಟೆಗೆ ಬಂದರೆ ಅವರಿಗೆ ಒಂದು ಗತಿ ಕಾಣಿಸುತ್ತೇವೆಂದು ಪ್ರಾಣ ಬೆದರಿಕೆಯನ್ನು ಹಾಕಿ ಅಲ್ಲಿಂದ ಹೊರಟು ಹೋಗಿರುತ್ತಾರೆ. ಈ ದಿನ ರಾತ್ರಿ ತನ್ನ ಗಂಡ ಮನೆಗೆ ಬಂದಾಗ ಅವರಿಗೆ ವಿಷಯವನ್ನು ತಿಳಿಸಿ, ಅವರ ಜೊತೆಯಲ್ಲಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.74/2021 ಕಲಂ. 143,447,323,341,504,506,149 ಐ.ಪಿ.ಸಿ:-

          ದಿನಾಂಕ:-19/03/2021 ರಂದು ರಾತ್ರಿ 9-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಹೆಚ್.ಸಿ ಸಿದ್ದಪ್ಪ ಬಿನ್ ಮುನಿಶಾಮಪ್ಪ, 75 ವರ್ಷ, ಗೊಲ್ಲರು, ಜಿರಾಯ್ತಿ, ವಾಸ-ಹುಜಗೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದ ಸರ್ವೇ ನಂಬರ್ 92 ರಲ್ಲಿ 4 ಎಕರೆ ಜಮೀನು ತನ್ನ ಬಾಬತ್ತು ಆಗಿದ್ದು, ಸದರಿ ಜಮೀನಿನ ಪಹಣಿಯು ತನ್ನ ಹೆಸರಿನಲ್ಲಿದ್ದು ಸುಮಾರು 50 ವರ್ಷಗಳಿಂದ ಅನುಭೋಗದಲ್ಲಿದ್ದು, ರಾಗಿ ಬೆಳೆಯನ್ನು ಬೆಳೆದುಕೊಂಡು ತಾನು ಮತ್ತು ತನ್ನ ಕುಟುಂಬ ಆ ಜಮೀನಿನ ಮೇಲೆಯೇ ಅವಲಂಬಿತರಾಗಿರುತ್ತೇವೆ. ಈ ಜಮೀನಿನ ಬಗ್ಗೆ ತಮ್ಮ ಗ್ರಾಮದ ವಾಸಿ ದೇವರಾಜು.ಎಂ ಬಿನ್ ಮುನಿಶಾಮಪ್ಪ ರವರು ತನಗೆ ಸೇರಬೇಕೆಂದು ತಕರಾರು ಮಾಡಿದಾಗ ತಾನು ಘನ ನ್ಯಾಯಾಲಯದಲ್ಲಿ ಓ.ಎಸ್ ನಂಬರ್-174/2011 ರಂತೆ ದಾವೆಯನ್ನು ಹೂಡಿದ್ದು, ಕೋರ್ಟ್ ನಲ್ಲಿ ತಮ್ಮ ಪರವಾಗಿ ಡಿಕ್ರಿ ಆದೇಶವಾಗಿರುತ್ತದೆ. ಈ ಜಮೀನಿನ ವಿಚಾರದಲ್ಲಿ ದೇವರಾಜು ರವರು ಈ ಹಿಂದೆ ತನ್ನ ಮೇಲೆ ಠಾಣೆಯಲ್ಲಿ ಕೇಸುಗಳನ್ನು ನೀಡಿದ್ದು, ತಾನು ಸಹ ಆತನ ವಿರುದ್ದ ದೂರನ್ನು ನೀಡಿದ್ದು, ಆ ಸಮಯದಲ್ಲಿ ದೇವರಾಜ ರವರು ತನ್ನ ಜಮೀನಿನ ತಂಟೆಗೆ ಬರುವುದಿಲ್ಲ ಎಂದು ಮುಚ್ಚಳಿಕೆಯನ್ನು ಸಹ ಬರೆದುಕೊಟ್ಟಿದ್ದು, ತಹಶೀಲ್ದಾರ್ ಶಿಡ್ಲಘಟ್ಟ ರವರು ತನ್ನ ಜಮೀನಿನ ಜಂಟಿ ಸರ್ವೇ ಮಾಡಿಸಿದ್ದು, ಅದು ಸಹ ತನ್ನ ಪರವಾಗಿರುತ್ತದೆ. ಆದರೂ ಸಹ ಮೇಲ್ಕಂಡ ದೇವರಾಜ ಹಾಗು ಆತನ ಮನೆಯವರು ವಿನಾ ಕಾರಣ ಜಮೀನಿನ ವಿಚಾರದಲ್ಲಿ ತನ್ನ ಮೇಲೆ ಗಲಾಟೆಯನ್ನು ಮಾಡಿ, ತನಗೆ ತೊಂದರೆಯನ್ನು ಕೊಟ್ಟು, ನಿನ್ನ ಮೇಲೆ ಇನ್ನು ಅಟ್ರಾಸಿಟಿ ಕೇಸ್ ಗಳನ್ನು ಹಾಕಿಸುತ್ತೇನೆಂದು ಬೆದರಿಕೆಯನ್ನು ಹಾಕುತ್ತಿರುತ್ತಾರೆ. ಹೀಗಿರುವಾಗ ದಿನಾಂಕ 19/03/2021 ರಂದು ಬೆಳಿಗ್ಗೆ ಸುಮಾರು 9-30 ಗಂಟೆ ಸಮಯದಲ್ಲಿ ತಾನು ತನ್ನ ಜಮೀನಿನಲ್ಲಿ ಕೆಲಸ ಮಾಡಿಕೊಂಡಿದ್ದಾಗ ಮೇಲ್ಕಂಡ ದೇವರಾಜು ಹಾಗು ಆತನ ಮನೆಯವರಾದ ಗೋವಿಂದಪ್ಪ, ಸುನೀಲ್ ಬಿನ್ ಗೋವಿಂದಪ್ಪ, ಪಾರ್ವತಮ್ಮ ಕೋಂ ಗೋವಿಂದಪ್ಪ, ಸುನೀತಾ ಬಿನ್ ಗೋವಿಂದಪ್ಪ, ಪುಷ್ಪಾ ಬಿನ್ ಗೋವಿಂದಪ್ಪ, ದ್ವಾವಮ್ಮ ಕೋಂ ದೇವರಾಜು, ವೆಂಕಟಲಕ್ಷ್ಮಮ್ಮ ಕೋಂ ದೇವರಾಜು, ಪ್ರಸಾದ್ ಬಿನ್ ದೇವರಾಜು, ನಳಿನಾ ಬಿನ್ ದೇವರಾಜು, ನೇತ್ರಾವತಿ ಬಿನ್ ದೇವರಾಜು ರವರು ಅಕ್ರಮವಾಗಿ ಗುಂಪುಕಟ್ಟಿಕೊಂಡು ತನ್ನ ಜಮೀನೊಳಗೆ ಅಕ್ರಮ ಪ್ರವೇಶ ಮಾಡಿ ಕೆಲಸ ಮಾಡದಂತೆ ತನ್ನನ್ನು ಅಡ್ಡಗಟ್ಟಿ ತನ್ನನ್ನು ಕುರಿತು ಲೇ ಲೋಫರ್ ನನ್ನ ಮಗನೇ, ಈ ಜಮೀನು ನಮಗೆ ಸೇರ ಬೇಕು, ಈ ಜಮೀನು ನೀನು ಖಾಲಿ ಮಾಡದಿದ್ದರೆ ನಿನ್ನನ್ನು ಇಲ್ಲಿಯೇ ಹೂತಿ ಬಿಡುತ್ತೇವೆಂದು ಪ್ರಾಣ ಬೆದರಿಕೆಯನ್ನು ಹಾಕಿ ಎಲ್ಲರೂ ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ. ಆಗ ತಾನು ಅವರಿಂದ ತಪ್ಪಿಸಿಕೊಂಡಿರುತ್ತೇನೆ. ಆದ ಕಾರಣ ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

ಇತ್ತೀಚಿನ ನವೀಕರಣ​ : 20-03-2021 06:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080