ಅಭಿಪ್ರಾಯ / ಸಲಹೆಗಳು

 

1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.23/2021 ಕಲಂ. 143,144,147,323,324,504,506,149  ಐ.ಪಿ.ಸಿ:-

     ದಿನಾಂಕ:19-02-2021 ರಂದು ಹೆಚ್.ಸಿ 53 ರವರು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳಾದ ಮುನೀರ್ ಬಿನ್  ಕೆ. ಪರೀದ್ ಸಾಬಿ, 40 ವರ್ಷ, ಮುಸ್ಲಿಂ ಜನಾಂಗ, ಸಿಲಿಂಡರ್ ವ್ಯಾಪಾರ,  ಈ ತಿಮ್ಮಸಂದ್ರ ಗ್ರಾಮ ರವರ ಹೇಳಿಕೆಯನ್ನು ಪಡೆದು ತಂದು ಠಾಣೆಯಲ್ಲಿ ಹಾಜರುಪಡಿಸಿದ ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ:18-02-2021 ರಂದು ಬೆಳಗ್ಗೆ 09-30 ಗಂಟೆ ಸಮಯದಲ್ಲಿ ತಾನು ಮತ್ತು ತನ್ನ ಹೆಂಡತಿ ಆಯಿಷಾಭಾನು ರವರು ತಮ್ಮ ಮನೆಯ ಹಿಂದೆ ಇರುವ ಜಮೀನಿನಲ್ಲಿ ಜೆ.ಸಿ.ಬಿ ಮೂಲಕ ಗಿಡಗಳನ್ನು ಕೀಳುಸುತ್ತಿದ್ದಾಗ ತಮ್ಮ ಪಕ್ಕದ ಜಮೀನಿನವರಾದ ಸಮೀವುಲ್ಲಾ ಬಿನ್ ಹೈದರ್ ಸಾಬಿ, ಹಮೀದ್ ಸಾಬಿ  ಬಿನ್ ಹೈದರ್ ಸಾಬಿ, ಮದರ್ ಸಾಬಿ ಬಿನ್ ಖಾಜಾಸಾಬಿ, ವಹಿದಾ ಕೋಂ ಸಮೀವುಲ್ಲಾ, ಕಂರುನ್ ಬೀ ಕೊಂ ಮದರ್ ಸಾಬಿ ರವರುಗಳು ಗುಂಪುಕಟ್ಟಿಕೊಂಡು ಬಂದು ಆ ಪೈಕಿ ಸಮೀವುಲ್ಲಾ ತನ್ನನ್ನು ಕುರಿತು ಏನೋ ಲೋಪರ್ ತನ್ನ ಮಗನೆ ತಮ್ಮ ಜಮೀನಿನಲ್ಲಿ ಏಕೆ ಜೆ.ಸಿ. ಬಿ ಯನ್ನು ಬಿಟ್ಟಿರುವುದು ಎಂದು ಕೆಟ್ಟಕೆಟ್ಟದಾಗಿ ಬೈಯ್ದಿರುತ್ತಾನೆ. ಆಗ ತಾನು ನಿಮ್ಮ ಜಮೀನಿನಲ್ಲಿ ಜೆ.ಸಿ.ಬಿ ಯನ್ನು ಬಿಟ್ಟಲ್ಲ ನಮ್ಮ ಜಮೀನಿನಲ್ಲಿರುವ ಗಿಡಗಳನ್ನು ಕೀಳಿಸುತ್ತಿರುವುದು ಎಂದು ಹೇಳಿದ್ದಕ್ಕೆ ಸಮೀವುಲ್ಲಾ ರವರು ಹಳೇಯ ದ್ವೇಷವನ್ನಿಟ್ಟುಕೊಂಡು ಏಕಾಏಕಿ ಅಲ್ಲಿ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ತನ್ನ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯ ಪಡಿಸಿದ್ದು,  ನಂತರ ಅದೇ ಕಲ್ಲಿನಿಂದ ತನ್ನ ಎಡಭುಜ ಮತ್ತು ಬಲ ಭುಜಕ್ಕೆ ಹೊಡೆದು ನೋವುಂಟು ಮಾಡಿದ್ದು, ಆಗ ತನ್ನ ಹೆಂಡತಿ ಅಡ್ಡ ಬರಲಾಗಿ ವಹೀದಾ ಮತ್ತು ಕರ್ಮನ್ ಕೈಗಳಿಂದ ಮೈ ಮೇಲೆ ಹೊಡೆದು ಮೂಗೇಟುಗಳುಂಟು ಮಾಡಿದ್ದು, ನಂತರ ಸಮೀಉಲ್ಲಾರವರು ತನ್ನ ಹೆಂಡತಿಯ ಡಗೈ ಮೇಲೆ ಹೊಡೆದು ಗಾಯಪಡಿಸಿದ್ದು, ನಂತರ ಲ್ಲರೂ ಸೇರಿ ಇವರಿಬ್ಬರನ್ನೂ ಸಾಯಿಸಿದರೆ ಊರಿನಲ್ಲಿ ನಮಗೆ ಯಾರೂ ಅಡ್ಡ ಬರಲ್ಲಾ ಎಂದು ಪ್ರಾಣ ಬೆದರಿಕೆ ಹಾಕಿದ್ದು, ಗಾಯಗೊಂಡಿದ್ದ ತಾನು ಹಾಗೂ ತನ್ನ ಹೆಂಡತಿ ಶಿಡ್ಲಘಟ್ಟ ಸರ್ಕಾರಿ ಆಸ್ವತ್ರೆಗೆ ದಾಖಲಾಗಿದ್ದು, ಮೇಲ್ಕಂಡವರ ಮೇಲೆ ಸೂಕ್ತ ಕಾನೂನಿ ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

  1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.24/2021 ಕಲಂ. 143,144,147,323,324,504,506,149 ಐ.ಪಿ.ಸಿ:-

     ದಿನಾಂಕ 19/02/2021 ರಂದು ಸಂಜೆ 4.00 ಗಂಟೆಗೆ ಪಿರ್ಯಾದಿ ಶಮೀವುಲ್ಲಾ ಬಿನ್ ಲೇಟ್ ಹೈದರ್ ಸಾಬಿರವರ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ,  ದಿನಾಂಕ 18/02/2021 ರಂದು ಬೆಳಗ್ಗೆ ಸುಮಾರು 9.30 ಗಂಟೆಯಲ್ಲಿ ತನ್ನ ಔಷಧಿಯ ಅಂಗಡಿಯಲ್ಲಿದ್ದಾಗ ತನ್ನ ಹೆಂಡತಿಯಾದ ವಹೀದಾಬೇಗಂ ರವರು ಬಂದು ನಾನು ಮತ್ತು ನಿಮ್ಮ ಅಣ್ಣ ಹಮೀದ್ ಸಾಬಿರವರುಗಳು ನಮ್ಮ ಜಮೀನಿನಲ್ಲಿ ಸ್ವಚ್ಚ ಮಾಡಿಕೊಳ್ಳುತ್ತಿದ್ದಾಗ ನಮ್ಮ ಗ್ರಾಮದ  ಮುಜೀರ್ ಬಿನ್ ಪರೀದ್ಸಾಬಿ, ನಜೀರ್ ಬಿನ್ ಲೇಟ್ ಸುಭಾನ್ಸಾಬಿ, ಅಯೂಬ್ ಬಿನ್ ಫರೀದ್ ಸಾಬಿ, ಆಯಿಶಾಭಾನು ಕೋಂ ಮುನೀರ್, ಮತ್ತು ತಬುಸಮ್ ಸುಲ್ತಾನಾ ಕೋಂ ಅಯೂಬ್ ರವರುಗಳು ಜೆ.ಸಿ.ಬಿ ಯನ್ನು ತೆಗೆದುಕೊಂಡು ಬಂದು ಈ ಜಮೀನು ನಮ್ಮದು, ಏಕೆ ನೀವು ಸ್ವಚ್ಚ ಮಾಡುತ್ತಿದ್ದೀರ ಎಂದು ಗಲಾಟೆ ಮಾಡುತ್ತಿರುವುದಾಗಿ ತಿಳಿಸಿದ್ದು, ಆಗ ತಾನು ಮತ್ತು ತಮ್ಮ ಹೆಂಡತಿ ವಹೀದಾರವರು ಬೆಳಗ್ಗೆ 09.40 ನಮ್ಮ ಜಮೀನಿ ಬಳಿ ಹೋಗಿ ಏಕೆ ನಮ್ಮ ಜಮೀನಿನಲ್ಲಿ ಜೆ.ಸಿ.ಬಿ ತಂದಿರುವುದು ಎನ್ನಲಾಗಿ, ಅಲ್ಲ್ಲಿದ್ದವರ ಪೈಕಿ ಮುನೀರ್ ರವರು ನಿನ್ನಮ್ಮನೇ ಕ್ಯಾಯಾ, ಲೋಫರ್ ನನ್ ಮಗನೆ ಯಾವುದೋ ನಿಮ್ಮ ಜಮೀನು, ಮೊದಲು ಇಲ್ಲಿಂದ ಹೊರಟುಹೋದರೆ ಸರಿ ಇಲ್ಲವಾದರೆ ನಿಮ್ಮನ್ನು ಪ್ರಾಣದ ಸಹಿತ ಬಿಡುವುದಿಲ್ಲವೆಂದು ಅಲ್ಲಿಯೇ ಬಿದ್ದಿದ್ದ ಒಂದು ಕಲ್ಲನ್ನು ಎತ್ತಿಕೊಂಡು ತನ್ನ ಬೆನ್ನಿನ ಹಿಂಭಾಗಕ್ಕೆ, ಸೊಂಟದ ಮೇಲೆ ಗುದ್ದಿ ಮೂಗೇಟು ಉಂಟು ಮಾಡಿ, ಕಾಲಿನಿಂದ ತನ್ನ ಮರ್ಮಸ್ಥಾನಕ್ಕೆ ಒದ್ದು ನೋವುಂಟು ಮಾಡಿದನು. ನಂತರ ನಜೀರ್ ರವರು ತನ್ನನ್ನು ಕೈಗಳಿಂದ ಮೈ ಮೇಲೆ ಹೊಡೆದು, ಕೆಳಕ್ಕೆ ತಳ್ಳಿ ಕಾಲಿನಿಂದ ಒದ್ದನು, ನಂತರ ಅಯೂಬ್ ರವರು ಅದೇ ಕಲ್ಲನ್ನು ಎತ್ತಿಕೊಂಡು ತನ್ನ ಬಲ ಕಾಲಿಗೆ ಹೊಡೆದು, ಕೈಗಳಿಂದ ಮೈ ಮೇಲೆ ಹೊಡೆದು ಮೂಗೇಟುಗಳುಂಟುಮಾಡಿದರು. ಅಷ್ಟರಲ್ಲಿ ಅಡ್ಡ ಬಂದ ತನ್ನ ಹೆಂಡತಿ ವಹಿದಾಬೇಗಂ ರವರನ್ನು ಅಲ್ಲಿಯೇ ಇದ್ದ ಆಯಿಶಾ ಭಾಬುರವರು ಕೈಗಳಿಂದ ಮೈ ಮೇಲೆ ಹೊಡೆದು ಜುಟ್ಟು ಹಿಡಿದು ಎಳೆದಾಡಿ ಕೆಳಕ್ಕೆ ತಳ್ಳಿ ಮೂಗೇಟುಗಳುಂಟು ಮಾಡಿದರು, ತಬುಸಮ್ ಸುಲ್ತಾನಾ ರವರು ತನ್ನ ಹೆಂಡತಿಯನ್ನು ಕಾಲಿನಿಂದ ಒದ್ದು, ಅವಾಚ್ಚ ಶಬ್ದಗಳಿಂದ ಬೈದರು. ನಂತರ ಮೇಲ್ಕಂಡವರು ತಮ್ಮಗಳನ್ನು ಕುರಿತು ಇನ್ನು ಮುಂದೆ ನಮ್ಮ ತಂಟೆಗಾಗಲೀ ಅಥವ ಈ ಜಮೀನಿನ ತಂಟೆಗಾಗಲೀ ಬಂದರೆ ನಿಮ್ಮನ್ನು ಸಾಯಿಸುತ್ತೇವೆಂದು ಪ್ರಾಣ ಬೆದರಿಕೆ ಹಾಕಿದ್ದು. ನಂತರ ಸ್ಥಳದಲ್ಲಿದ್ದ ತಮ್ಮ ಗ್ರಾಮದ ವರಧಪ್ಪ ಬಿನ್ ಮುನಿಯಪ್ಪ ಮತ್ತು ಬೈರೆಡ್ಡಿ ಬಿನ್ ಪೆದ್ದಪ್ಪಯ್ಯ ರವರುಗಳು ಅಡ್ಡ ಬಂದು ಗಲಾಟೆಯನ್ನು ಬಿಡಿಸಿ ಅವರಿಗೆ ಬುದ್ದಿ ಹೇಳಿ ಕಳುಹಿಸಿರುತ್ತಾರೆ. ತನಗೆ ಮೈ-ಕೈ ನೋವು ಜಾಸ್ತಿಯಾಗಿದ್ದರಿಂದ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ವತ್ರೆಗೆ 108 ಆಂಬುಲೆನ್ಸ್ ನಲ್ಲಿ ಹೋಗಿ ದಾಖಲಾಗಿದ್ದು. ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮದಲ್ಲಿ ನ್ಯಾಯಾ-ಪಂಚಾಯ್ತಿ ಮಾಡುವುದಾಗಿ ಹಿರಿಯರು ತಿಳಿಸಿದ್ದರಿಂದ ಈ ದಿನ ತಡವಾಗಿ ಠಾಣೆ ಬಂದು ದೂರನ್ನು ನೀಡುತ್ತಿದ್ದು, ಮೇಲ್ಕಂಡವರ ಮೇಲೆ ಸೂಕ್ತ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.43/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ 19/02/2021 ರಂದು ಸಂಜೆ 5-30 ಗಂಟೆಗೆ ಸಿಪಿಸಿ 543 ಸುಧಾಕರ್ ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ವರದಿಯ ಸಾರಾಂಶವೇನೆಂದರೆ, ದಿನಾಂಕ 19.02.2021 ರಂದು ಠಾಣಾಧಿಕಾರಿಗಳು ತನಗೆ ಗುಪ್ತ ಮಾಹಿತಿ ಸಂಗ್ರಹ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು ಠಾಣಾ ಸರಹದ್ದಿನ ಗ್ರಾಮಗಳಾದ ವರದನಾಯಕನಹಳ್ಳಿ ಹರಳಹಳ್ಳಿ, ಚೀಮನಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಸಂಜೆ 4.00 ಗಂಟೆ ಸಮಯದಲ್ಲಿ ಅಬ್ಲೂಡು  ಗ್ರಾಮದಲ್ಲಿ ಮಾಹಿತಿ ಸಂಗ್ರಹದಲ್ಲಿದ್ದಾಗ ಗ್ರಾಮದ ಬಾತ್ಮೀದಾರರಿಂದ ಯಾರೋ ಅಸಾಮಿ ಅಬ್ಲೂಡು ಗ್ರಾಮದ ಸರ್ಕಲ್ ನಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪಾಕೇಟುಗಳನ್ನಿಟ್ಟುಕೊಂಡು ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ತಾನು ಅಬ್ಲೂಡು ಗ್ರಾಮದ ಸರ್ಕಲ್  ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ  ಯಾರೋ ಮೂರು ಜನ ಆಸಾಮಿಗಳು ಮದ್ಯವನ್ನು ಸೇವನೆ ಮಾಡುತ್ತಾ ಕುಳಿತಿದ್ದು ಒಬ್ಬ ಅಸಾಮಿ ತನ್ನ ಬಳಿ ಇದ್ದ ಒಂದು ಕಪ್ಪು ಬಣ್ಣದ ಕವರ್ ನಲ್ಲಿ ಮದ್ಯದ ಟೆಟ್ರಾ ಪಾಕೇಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯದ ಪಾಕೇಟ್ ಗಳನ್ನು ಮಾರಾಟ ಮಾಡುತ್ತಾ ಕುಡಿಯಲು ಅನುವು ಮಾಡಿಕೊಟ್ಟಿರುವುದು ಖಚಿತವಾದ ಮೇಲೆ ದಾಳಿ ಮಾಡಲಾಗಿ ಮಧ್ಯವನ್ನು ಕುಡಿಯುತ್ತಿದ್ದ ಸಾರ್ವಜನಿಕರು ಸಮವಸ್ತ್ರದಲ್ಲಿದ್ದ ತನ್ನನ್ನು ಕಂಡು ಓಡಿ ಹೋಗಿದ್ದು, ಮದ್ಯವನ್ನು ಹಿಡಿದುಕೊಂಡು ಕುಳಿತಿದ್ದ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ಮಂಜುನಾಥ ಬಿನ್ ಲೇಟ್ ಮುನಿಯಪ್ಪ,ಸುಮಾರು 43 ವರ್ಷ,ಕೂಲಿಕೆಲಸ, ನಾಯಕರು, ವಾಸ: ಗೊರಮಿಲ್ಲಹಳ್ಳಿ ಗ್ರಾಮ,ದೊಡ್ಡತೇಕಹಳ್ಳಿ ಪಂಚಾಯಿತಿ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಸದರಿ ಆಸಾಮಿ ಬಳಿ ಇದ್ದ ಕವರ್ ನಲ್ಲಿ ಪರಿಶೀಲಿಸಲಾಗಿ ಅದರಲ್ಲಿ 180 ಎಂ.ಎಲ್ ನ Old Tavern Whisky ಯ 8 ಟೆಟ್ರಾ ಪಾಕೇಟ್ ಗಳಿದ್ದು ಪ್ರತಿ ಟೆಟ್ರಾ ಪಾಕೇಟ್ ನ ಬೆಲೆ 86.75 ರೂ ಎಂದು ಇದ್ದು ಇವುಗಳ ಒಟ್ಟು ಬೆಲೆ 694.00 ರೂ.ಗಳಾಗಿರುತ್ತೆ, ಸ್ಥಳದಲ್ಲಿ 4 ಪ್ಲಾಸ್ಟಿಕ್ ಗ್ಲಾಸುಗಳು, 3 ಖಾಲಿ ನೀರಿನ ಪಾಕೇಟುಗಳು ಹಾಗು 180 ಎಂ.ಎಲ್ ನ Old Tavern Whisky 2 ಖಾಲಿ ಟೆಟ್ರಾ ಪಾಕೇಟ್ ಗಳಿದ್ದು, ಮೇಲ್ಕಂಡ ಆಸಾಮಿ ಮಂಜುನಾಥ ಬಿನ್ ಲೇಟ್ ಮುನಿಯಪ್ಪ ರವರು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಾ ಹಾಗೂ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಮಾಲು ಮತ್ತು ಅರೋಪಿಯನ್ನು ವಶಕ್ಕೆ ಪಡೆದುಕೊಂಡು ಬಂದು ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿ ನೀಡಿದ ವರದಿಯ ಸಾರಾಂಶವಾಗಿರುತ್ತದೆ. 

ಇತ್ತೀಚಿನ ನವೀಕರಣ​ : 20-02-2021 05:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080