ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.299/2021 ಕಲಂ. 279,337,304(A) ಐ.ಪಿ.ಸಿ:-

      ದಿನಾಂಕ: 19/09/2021 ರಂದು ಬೆಳಿಗ್ಗೆ 6-00 ಗಂಟೆಗೆ ಪಿರ್ಯಾದಿದಾರರಾದ ಪೈಯಾಜ್ ಬಾಷ @ ಶೇಕ್ ಪೈಯಾಜ್ ಬಿನ್ ಮೆಹಬೂಬ್ ಬಾಷ @ ಶೇಖ್ ಮೆಹಬೂಬ್ ಪೀರಾ, 43 ವರ್ಷ, ಮುಸ್ಲಿಂ ಜನಾಂಗ, ಚಾಲಕ ವೃತ್ತ, #17-505-2 ಬೋಯ ವೀದಿ, ಧರ್ಮವರಂ, ಆನಂತಪುರ ಜಿಲ್ಲೆ. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಈಗ್ಗೆ ಸುಮಾರು 2 ತಿಂಗಳಿನಿಂದ ಆನಂತಪುರ ಟೌನ್ ನ ಕುಮಾರ ಬಿನ್ ಬೆಸ್ತ ಚನ್ನರಾಯಡು ಎಂಬುವವರ ಬಳಿ ಚಾಲಕ ವೃತ್ತಿಗೆ ಸೇರಿಕೊಂಡು ಅವರ ಬಾಬತ್ತು ಎಪಿ 02 ಎಕ್ಸ್ 6667 ನೊಂದಣಿ ಸಂಖ್ಯೆಯ ಲಾರಿಯನ್ನು ಓಡಿಸಿಕೊಂಡು ಇರುತ್ತೇನೆ, ದಿನಾಂಕ:18/09/2021 ರಂದು ಬೆಂಗಳೂರಿನ ಹೂಸೂರುಗೆ ತೆಗೆದುಕೊಂಡು ಹೋಗಲು ಮುಸಕಿನಜೋಳದ ಲೋಡ್ ಆಗಿದ್ದು, ರಾತ್ರಿ ಸುಮಾರು 9:00 ಗಂಟೆ ಸಮಯಕ್ಕೆ  ಆನಂತಪುರ ಬಿಟ್ಟು ಬೆಂಗಳೂರು ಕಡೆಗೆ ಎನ್ ಹೆಚ್ 44 ರಸ್ತೆಯಲ್ಲಿ ಬಂದಿರುತ್ತೇನೆ,  ರಾತ್ರಿ ಸುಮಾರು 1:30 ಗಂಟೆ ಸಮಯದಲ್ಲಿ ಬಾಗೇಪಲ್ಲಿ ತಾಲ್ಲೂಕು, ಸಾಲುಮರದ ತಿಮ್ಮಕ್ಕ ಪಾರೆಸ್ಟ್ ಸಮೀಪ ಎನ್ ಹೆಚ್ 44 ರಸ್ತೆಯಲ್ಲಿ ನಾನು ಬೆಂಗಳೂರು ಕಡೆಗೆ ಹೋಗುತ್ತಿದ್ದಾಗ, ಹಿಂಬದಿಯಿಂದ ಬಾಗೇಪಲ್ಲಿ ಕಡೆಯಿಂದ ಕೆ ಎ 04 ಎಂ ವೈ 3905 ಪೋರ್ಡ್ ಪಿಗೂ ಕಾರನ್ನು ಅದರ ಚಾಲಕ  ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದು ನಾನು ಚಾಲನೆ ಮಾಡಿಕೊಂಡು ಮುಂದೆ ಹೋಗುತ್ತಿದ್ದ ಲಾರಿಯ ಹಿಂಭಾಗದ ಬಲಗಡೆಗೆ  ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ್ದು, ತಕ್ಷಣ ನಾನು ಲಾರಿಯನ್ನು ನಿಲ್ಲಿಸಿ, ನಾನು ಮತ್ತು ನಮ್ಮ ಲಾರಿಯ ಕ್ಲೀನರ್ ಟಿ. ಗೌಸ್ಪೀರ್ ಬಿನ್ ಟಿ ಅಬುಬಕಾರ್ ರವರು ಮತ್ತು ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳಲ್ಲಿ ಸಾರ್ವಜನಿಕರು ಬಂದು ನೋಡಲಾಗಿ ಕಾರಿನಲ್ಲಿ  ಒಬ್ಬ ಮಹಿಳೆಗೆ ತಲೆಗೆ, ಮತ್ತು ಮೈಮೇಲೆ  ರಕ್ತಗಾಯಗಳಾಗಿ ಕಾರಿನಲ್ಲೇ ಮೃತಪಟ್ಟಿರುತ್ತಾರೆ ಮತ್ತು ಚಾಲಕನಿಗೂ ಸಹ ಮೈಮೇಲೆ ಗಾಯಗಳಾಗಿದ್ದು, ನಾವು ಗಾಯಾಳುವನ್ನು ಉಪಚರಿಸಿ ತಕ್ಷಣ ಸ್ಥಳಕ್ಕೆ ಅಂಬುಲೆನ್ಸ್ ವಾಹನವನ್ನು ಕರೆಯಿಸಿಕೊಂಡು ಮೃತದೇಹವನ್ನು ಮತ್ತು ಗಾಯಾಳುವನ್ನು ಬಾಗೇಪಲ್ಲಿ ಸರ್ಕಾರಿ ಅಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೇವೆ, ನಂತರ ಅವರ ಹೆಸರು ವಿಳಾಸಗಳನ್ನು ತಿಳಿಯಲಾಗಿ ಚಾಲಕ ಎಂ.ಮೋಹನ್ ಕುಮಾರ್ ಬಿನ್ ಮುನಿಚಿಕ್ಕಣ್ಣ  ಮತ್ತು ಮೃತಪಟ್ಟಿರುವವರು ಶ್ರೀಮತಿ ಮೌನೀಷಾ ಕೋಂ ಎಂ ಮೋಹನ ಕುಮಾರ್   ಹೆಚ್ ಬಿ ಆರ್ ಲೇಔಟ್, ಹೆಣ್ಣೂರು, ಬೆಂಗಳೂರು ನಗರ ಎಂದು ತಿಳಿದು ಬಂದಿರುತ್ತೆ   ನಾನು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿರುವ ಕೆ ಎ 04 ಎಂ ವೈ 3905 ಪೋರ್ಡ್ ಪಿಗೂ ಕಾರಿನ ಚಾಲಕನ ವಿರುದ್ದ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

2. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.247/2021 ಕಲಂ. 78(I),78(III) ಕೆ.ಪಿ ಆಕ್ಟ್:-

      ದಿನಾಂಕ:18/09/2021 ರಂದು ಬೇಳಿಗ್ಗೆ 12-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ 205 ಮೋಹನ್ ಕುಮಾರ್ ರವರು ತಂದು ಹಾಜರು ಪಡಿಸಿದ ಘನ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ಗೌರೀಬಿದನೂರು ಪೊಲೀಸ್ ಠಾಣೆಯ, ಪೊಲೀಸ್ ಉಪನಿರೀಕ್ಷಕರಾದ ಶ್ರೀಮತಿ ಲಲಿತಮ್ಮ ಆದ ನಾನು ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ಸೂಚಿಸುವುದೇನೆಂದರೆ, ಈ ದಿನ ದಿನಾಂಕ 08/09/2021 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ಗೌರೀಬಿದನೂರು ಗ್ರಾಮಾಂತರ ಠಾಣೆಯಲ್ಲಿದ್ದಾಗ, ಗೌರೀಬಿದನೂರು ತಾಲ್ಲೂಕು, ಕೋಟಾಲದಿನ್ನೆ ಗ್ರಾಮದ ಹಳೆ ಟಾಕಿಸ್ ಬಳಿ ಯಾರೋ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಹಾಗು ಪೊಲೀಸ್ ಸಿಬ್ಬಂದಿಯವರಾದ ಹೆಚ್ ಸಿ 187 ಅಶ್ವತ್ಥ,ಹೆಚ್ ಸಿ ಶ್ರೀನಿವಾಸರೆಡ್ಡಿ ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ ನಂ. ಕೆ.ಎ.40-ಜಿ.140  ರಲ್ಲಿ ಕೋಟಾಲದಿನ್ನೆ ಗ್ರಾಮಕ್ಕೆ ಬೆಳಿಗ್ಗೆ 10-30  ಗಂಟೆಗೆ ಹೋಗಿ, ಅಲ್ಲಿ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ,  ಮರೆಯಲ್ಲಿ ನಿಂತು ನೋಡಲಾಗಿ,  ಯೋರೋ ಒಬ್ಬ ಕೋಟಾಲದಿನ್ನೆ ಗ್ರಾಮದ ಹಳೆ ಟಾಕಿಸ್ ಬಳಿ ರಸ್ತೆಯಲ್ಲಿ  ಓಡಾಡುವ ಸಾರ್ವಜನಿಕರಿಗೆ  ಒಂದು ರೂಪಾಯಿಗೆ  ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ನಾನು ಮತ್ತು ಪೊಲೀಸ್ ಸಿಬ್ಬಂದಿಯವರು  ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ, ಆತ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು, ಆತನ  ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು ನಯಾಜ್ ಬಿನ್ ಮಹಬೂಬ್ ಪಾಷಾ, 35 ವರ್ಷ, ಮುಸ್ಲಿಂ ಜನಾಂಗ, ಜಿರಾಯ್ತಿ, ಹೊಸೂರು ಗ್ರಾಮ,ಗೌರೀಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ಆತನ ಬಳಿ ಪರಿಶೀಲಿಸಲಾಗಿ  ನಗದು ಹಣ 1050/-ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿ ನಯಾಜ್ ಬಿನ್ ಮಹಬೂಬ್ ಪಾಷಾ,  ಹಾಗು ಈತನ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್  ಮತ್ತು 1050/- ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ಬೆಳಿಗ್ಗೆ 10-30 ಗಂಟೆಯಿಂದ 11-30  ಗಂಟೆಯವರೆಗೆ  ಪಂಚನಾಮೆ ಕ್ರಮ ಜರುಗಿಸಿ ಕಾನೂನು ಕ್ರಮ ಜರುಗಿಸಲು ಸೂಚಿಸಿರುತ್ತೆ.

 

3. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.248/2021 ಕಲಂ. 78(I),78(III) ಕೆ.ಪಿ ಆಕ್ಟ್:-

       ದಿನಾಂಕ:18/09/2021 ರಂದು ಬೇಳಿಗ್ಗೆ 02-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ 205 ಮೋಹನ್ ಕುಮಾರ್ ರವರು ತಂದು ಹಾಜರು ಪಡಿಸಿದ ಘನ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ:08/09/2021 ರಂದು ಫಿರ್ಯಾದುದಾಆರರಾದ ಶ್ರೀಮತಿ ಲಲಿತಮ್ಮ  ಮ.ಪಿ.ಎಸ್.ಐ ರವರು ಮದ್ಯಾಹ್ನ 3-30 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ: ದಿನಾಂಕ 08/09/2021 ರಂದು  ಮದ್ಯಾಹ್ನ 12-30  ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು  ಹೊಸೂರು ಹೋಬಳಿ ಕೋಟಾಲದಿನ್ನೆ ಗ್ರಾಮದ ಬಸ್ ನಿಲ್ದಾಣದ ಬಳಿ   ಯಾರೋ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಹಾಗು ಪೊಲೀಸ್ ಸಿಬ್ಬಂದಿಯವರಾದ ಪಿ.ಸಿ-312 ಸೋಮನಾಥ ಮಾಲಗಾರ್,  ಹೆಚ್.ಸಿ-187 ಅಶ್ವತ್ಥಪ್ಪ ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ ನಂ. ಕೆ.ಎ.40 ಜಿ.140 ರಲ್ಲಿ ಗ್ರಾಮಕ್ಕೆ   ಮದ್ಯಾಹ್ನ 1-00  ಗಂಟೆಗೆ ಹೋಗಿ, ಅಲ್ಲಿ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ,  ಮರೆಯಲ್ಲಿ ನಿಂತು ನೋಡಲಾಗಿ,  ಯೋರೋ ಒಬ್ಬ  ಆಸಾಮಿಯು  ಕೋಟಾಲದಿನ್ನೆ ಗ್ರಾಮದ ಬಸ್ ನಿಲ್ದಾಣದ ಬಳಿ  ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ  ಒಂದು ರೂಪಾಯಿಗೆ  ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ನಾನು ಮತ್ತು ಪೊಲೀಸ್ ಸಿಬ್ಬಂದಿಯವರು  ಸದರಿ ಆಸಾಮಿಯನ್ನು  ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ, ಅವರು ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು  ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ ಆಸಾಮಿ ಸಿಕ್ಕಿದ್ದು,   ಆಸಾಮಿಯ ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು   ಫಕೃದ್ದೀನ್ ಬಿನ್ ಘಫಾರ್ ಸಾಬ್, 59 ವರ್ಷ, ಗುಜರಿ ವ್ಯಾಪಾರಿ ಮುಸ್ಲೀಂ ಜನಾಂಗ, ಕೋಟಾಲದಿನ್ನೆ ಗ್ರಾಮ ಗೌರಿಬಿದನೂರು ತಾಲ್ಲೂಕು. ಎಂದು ತಿಳಿಸಿದ್ದು,  ಫಕೃದ್ದೀನ್ ಬಿನ್ ಘಫಾರ್ ಸಾಬ್,, ರವರ ಬಳಿ   ನಗದು ಹಣ 1550-00 ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿ ಫಕೃದ್ದೀನ್ ಬಿನ್ ಘಫಾರ್ ಸಾಬ್,  ಹಾಗು ಈತನ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್  ಮತ್ತು 1550-00 ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ಮದ್ಯಾಹ್ನ 1-30 ಗಂಟೆಯಿಂದ 2-30 ಗಂಟೆಯವರೆಗೆ  ಬೀದಿ ದೀಪದ ಬೆಳಕಿನಲ್ಲಿ ಪಂಚನಾಮೆ ಕ್ರಮ ಜರುಗಿಸಿ  ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಠಾಣೆಗೆ  ಮದ್ಯಾಹ್ನ 3-30 ಗಂಟೆಗೆ  ಬಂದು  ಮುಂದಿನ ಕ್ರಮಕ್ಕಾಗಿ ನಿಮ್ಮ ವಶಕ್ಕೆ ನೀಡುತ್ತಿದ್ದು, ಕಾನೂನು ಕ್ರಮ ಜರುಗಿಸಲು ಸೂಚಿಸಿದ ದೂರಾಗಿರುತ್ತೆ.

 

4. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.249/2021 ಕಲಂ. 78(I),78(III) ಕೆ.ಪಿ ಆಕ್ಟ್:-

      ದಿನಾಂಕ:19/09/2021 ರಂದು ಬೇಳಿಗ್ಗೆ 10-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ 205 ಮೋಹನ್ ಕುಮಾರ್ ರವರು ತಂದು ಹಾಜರು ಪಡಿಸಿದ ಘನ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ:08/09/2021 ರಂದು ಸಂಜೆ 6-30 ಗಂಟೆಗೆ ಫಿರ್ಯಾದುದಾರರಾದ ಶ್ರೀ ಕೆ.ಸಿ ವಿಜಯ್ ಕುಮಾರ್ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ: ದಿನಾಂಕ 08/09/2021 ರಂದು  ಸಂಜೆ 4-00  ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು  ಹೊಸೂರು ಹೋಬಳಿ ಕೋಟಾಲದಿನ್ನೆ ಗ್ರಾಮದ ಬಳಿ   ರಮಾಪುರ ರಸ್ತೆಯ ಬಳಿ ಯಾರೋ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಹಾಗು ಪೊಲೀಸ್ ಸಿಬ್ಬಂದಿಯವರಾದ ಪಿ.ಸಿ-312 ಸೋಮನಾಥ ಮಾಲಗಾರ್,  ಹೆಚ್.ಸಿ-187 ಅಶ್ವತ್ಥಪ್ಪ ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ ನಂ. ಕೆ.ಎ.40 ಜಿ.538 ರಲ್ಲಿ ಗ್ರಾಮಕ್ಕೆ   ಸಂಜೆ 4-30  ಗಂಟೆಗೆ ಹೋಗಿ, ಅಲ್ಲಿ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ,  ಮರೆಯಲ್ಲಿ ನಿಂತು ನೋಡಲಾಗಿ,  ಯೋರೋ ಒಬ್ಬ  ಆಸಾಮಿಯು  ಹೊಸೂರು ಹೋಬಳಿ ಕೋಟಾಲದಿನ್ನೆ ಗ್ರಾಮದ ಬಳಿ   ರಮಾಪುರ ರಸ್ತೆಯ ಬಳಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ  ಒಂದು ರೂಪಾಯಿಗೆ  ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ನಾನು ಮತ್ತು ಪೊಲೀಸ್ ಸಿಬ್ಬಂದಿಯವರು  ಸದರಿ ಆಸಾಮಿಯನ್ನು  ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ, ಅವರು ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು  ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ ಆಸಾಮಿ ಸಿಕ್ಕಿದ್ದು,   ಆಸಾಮಿಯ ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು   ಬಾಲರಾಜು ಬಿನ್ ನಾರಾಯಣಪ್ಪ, 42 ವರ್ಷ, ನಾಯಕ ಜನಾಂಗ, ಮುದುಗೆರೆ ಗ್ರಾಮ, ಗ್ರಾಮ ಗೌರಿಬಿದನೂರು ತಾಲ್ಲೂಕು. ಎಂದು ತಿಳಿಸಿದ್ದು,  ಬಾಲರಾಜು ಬಿನ್ ನಾರಾಯಣಪ್ಪ,  ರವರ ಬಳಿ   ನಗದು ಹಣ 1100-00 ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿ ಬಾಲರಾಜು ಬಿನ್ ನಾರಾಯಣಪ್ಪ, ಹಾಗು ಈತನ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್  ಮತ್ತು 1100-00 ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ಸಂಜೆ 5-00 ಗಂಟೆಯಿಂದ 6-00 ಗಂಟೆಯವರೆಗೆ  ಬೀದಿ ದೀಪದ ಬೆಳಕಿನಲ್ಲಿ ಪಂಚನಾಮೆ ಕ್ರಮ ಜರುಗಿಸಿ  ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಠಾಣೆಗೆ  ಸಂಜೆ 6-30 ಗಂಟೆಗೆ  ಬಂದು  ಮುಂದಿನ ಕ್ರಮಕ್ಕಾಗಿ ನಿಮ್ಮ ವಶಕ್ಕೆ ನೀಡುತ್ತಿದ್ದು, ಕಾನೂನು ಕ್ರಮ ಜರುಗಿಸಲು ಸೂಚಿಸಿದ ದೂರಾಗಿರುತ್ತೆ.

 

5. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.226/2021 ಕಲಂ. 511,427,380 ಐ.ಪಿ.ಸಿ & 3 PREVENTION OF DAMAGE TO PUBLIC PROPERTY ACT, 1984:-

      ದಿನಾಂಕ 18/09/2021 ರಂದು ಸಂಜೆ 4-00 ಗಂಟೆಗೆ ಪಿರ್ಯಾದಿದಾರರು ವಿವೇಕ್ ಕುಮಾರ್ ಪಾಂಡೆ , ಬ್ರಾಂಚ್ ಮೇನೇಜರ್, ಎಸ್.ಬಿ.ಐ , ಪೆರೇಸಂದ್ರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ಆಂಗ್ಲ ಬಾಷೆಯಲ್ಲಿ ನೀಡಿದ  ಮುದ್ರಿತ ದೂರಿನ ಸಾರಾಂಶವೇನೆಂದರೆ ದಿನಾಂಕ 18/09/2021 ರಂದು ಬೆಳಿಗ್ಗೆ ತಮ್ಮ ಬ್ಯಾಂಕಿನ ಗ್ರಾಹಕರೊಬ್ಬರು ಪೋನ್ ಮಾಡಿ ಎ.ಟಿ.ಎಂ. ಕಳ್ಳತನವಾಗಿರುವುದಾಗಿ ತಿಳಿಸಿದ್ದು, ಅದರಂತೆ ತಾನು ಬಂದು ನೋಡಲಾಗಿ ಎ.ಟಿ.ಎಂ. ಅನ್ನು ಕಳ್ಳತನ ಮಾಡಲು ಯಾರೋ ಕಳ್ಳರು ಪ್ರಯತ್ನಪಟ್ಟಿರುತ್ತಾರೆ. ಸಿ.ಸಿ ಟಿ.ವಿ ಕ್ಯಾಮೆರಾ ಮತ್ತು ಎ.ಟಿ.ಎಂ. ಡಿಜಿಟಲ್ ಲಾಕ್ ಗಳನ್ನು ಮುರಿದಿರುತ್ತಾರೆ. ಈ ಘಟನೆಯು ಸಿ.,ಸಿ ಕ್ಯಾಮರಾ ದಲ್ಲಿ ನೋಡಲಾಗಿ ದಿನಾಂಕ 18/09/2021 ರ 00-46 ಗಂಟೆ ಸಮಯದಲ್ಲಿ ಯಾರೋ ಮಾಸ್ಕ್ ಧರಿಸಿದ ಇಬ್ಬರು  ಬಂದು ಈ ಕೃತ್ಯ ವೆಸಗಿದ್ದು ಸಿ.ಸಿ ಕ್ಯಾಮೆರಾ ಫೂಟೇಜ್ ನಲ್ಲಿ ಕಂಡು ಬಂದಿರುತ್ತೆ. ಸದರಿ ಘಟನೆಯ ಬಗ್ಗೆ ಸದ್ಯದಲ್ಲಿ ಎ.ಟಿ.ಎಂ.  ಇಂಜಿನಿಯರ್ ಒಬ್ಬರು ಬಂದು ಭೇಟಿ ನೀಡಿ ಪರಿಶೀಲಿಸುತ್ತಾರೆ. ಆದ್ದರಿಂದ ಈ ಬಗ್ಗೆ  ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

6. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.109/2021 ಕಲಂ. 283,337 ಐ.ಪಿ.ಸಿ & 122,177 INDIAN MOTOR VEHICLES ACT, 1988:-

      ದಿನಾಂಕ:19/09/2021 ರಂದು ಮದ್ಯಾಹ್ನ 12:45 ಗಂಟೆಗೆ ಪಿರ್ಯಾದಿದಾರರಾದ ಜಾಫರ್ ಬಿನ್ ಷೇಖ್ ಜಾಫರ್ 36 ವರ್ಷ, ಮುಸ್ಲೀಮರು, ವ್ಯಾಪಾರ, 25-220, ಮಟ್ಟಿ ಮಸೀದಿ ಬೀದಿ, ಪೊದ್ದಟೂರು ಟೌನ್, ಕಡಪ ಜಿಲ್ಲೆ ಆಂಧ್ರ ಪ್ರದೇಶ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:18/09/2021 ರಂದು ರಾತ್ರಿ 11.30 ಗಂಟೆಯಲ್ಲಿ ಪೊದ್ದಟೂರು ಬಿಟ್ಟು ನಂದಿ ಬೆಟ್ಟಕ್ಕೆ ಟ್ರಿಪ್ ಹೋಗಲು ನಮ್ಮ ಸ್ನೇಹಿತನಾದ ಕೃಷ್ಣಚೈತನ್ಯ ಇವರ AP-04 BW-5909 INNOVA CRYISTA ಕಾರಿನಲ್ಲಿ ಹೆದ್ದಾರಿ-7 ರಲ್ಲಿ ನಾನು ಮತ್ತು ಸಮೀರ್ ಬಿನ್ ಷೇಕ್ ಯೂಸೂಪ್ ಅಲಿ, 36ವರ್ಷ, ಟೀ ವ್ಯಪಾರ, ಎಲ್.ಐ.ಸಿ ಆಫೀಸ್ ಹಿಂಭಾಗ ಪೊದ್ದಟೂರು.9849323646, ಫಜಲ್ ಬಿನ್ ಕಲಂದರ್, 36 ವರ್ಷ, ಚಿನ್ನದ ಕೆಲಸ, ಮೌಲನಾ ಆಜಾದ್ ಬೀದಿ ಪೊದ್ದಟೂರು.8008631125. ಭಾಷ ಬಿನ್ ಇಮಾಮ್ ಹುಸೇನ್, 47 ವರ್ಷ, ಮೊಬೈಲ್ ವ್ಯಾಪಾರ, ಶಾಂತಕುಮಾರಿ ಬೀದಿ, ಪೊದ್ದಟೂರು,9700242526. ಷೇಕ್ ಗೌಸ್ ಬಿನ್ ಮೆಹಬೂಬ್ಭಾಷ, 32 ವರ್ಷ, ಮೊಬೈಲ್ ವ್ಯಾಪಾರ, ಮಹಮದೀಯ ಕಾಲೊನಿ. ಪೊದ್ದಟೂರು.9000048010, ಷೇಕ್ ಕರೀಂ ಬಿನ್ ಷೇಕ್ ಮೆಹಬೂಬ್ ಷರೀಪ್, 38 ಮೊಬೈಲ್ ವ್ಯಾಪಾರ, ಮಟ್ಟಿ ಮಸೀದಿ ಬೀದಿ ಪೊದ್ದಟೂರು.8328420509, ಷೇಕ್ ರಫೀಕ್ ಬಿನ್ ಷೇಕ್ ಭಾಷ, 30 ವರ್ಷ, ಆಯಿಲ್ ಬಿಜಿನಸ್, ವೆದುರುಲ್ಲಾ ಬಜಾರ್, ಪೊದ್ದಟೂರು.9290620031. ಚಾಲಕ ಜನಾರ್ಧನಗೌಡ ಎಂಬುವವರು ಕಾರನ್ನು ಚಾಲನೆ ಮಾಡುತ್ತಿದ್ದು ದಿನಾಂಕ-19/09/2021 ರಂದು ಬೆಳಗಿನ ಜಾವ 04.45 ಗಂಟೆಯಲ್ಲಿ ಹೆದ್ದಾರಿ-7 ರ ನಾಗಾರ್ಜುನ ಕಾಲೇಜು(ಬೀಡಗಾನಹಳ್ಳಿ) ಫ್ಲೈಓವರ್ ಬಳಿ ಲಾರಿಯೊಂದನ್ನು ಅದರ ಚಾಲಕ ಕತ್ತಲಲ್ಲಿ ರಸ್ತೆಯ ಮೇಲೆ ಯಾವುದೇ ಇಂಡಿಕೇಟರ್, ಲೈಟ್, ರಿಫ್ಲೆಕ್ಟರ್ಸ್ ಇಲ್ಲದೇ ಅಪಾಯಕಾರಿಯಾಗಿ ನಿಲ್ಲಿಸಿಕೊಂಡಿದ್ದು ನಮ್ಮ ಚಾಲಕ ಎದುರಿಗೆ ಬರುತ್ತಿದ್ದ ವಾಹನಗಳ ಲೈಟ್ ಬೆಳಕಿನ ಪ್ರಖರತೆಯಲ್ಲಿ ಕಾರನ್ನು ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದನು. ಇದರ ಪ್ರಯುಕ್ತ ಕಾರಿನ ಮುಂಭಾಗ ಪೂರ್ತಿ ಜಖಂಗೊಂಡು ಟಾಪ್ ಸಹ ಜಖಂಗೊಂಡಿದ್ದು ಮುಂದೆ ಕುಳಿತಿದ್ದ ಫಜಲ್ ಗೆ ಮೂಗಿಗೆ ರಕ್ತಗಾಯವಾಯಿತು. ಮಧ್ಯ ಕುಳಿತಿದ್ದ ನನಗೆ ಗಾಜಿನ ಚೂರುಗಳು ಹಾಗೂ ಸೀಟ್ ನ ಆಂಗಲ್ ಬಡಿದು  ಮುಖ ಮತ್ತು ಕೈಗಳಿಗೆ ಮೂಗೆಟು ಉಂಟಾಗಿರುತ್ತದೆ ಸಮೀರ್ಗೆ ಬಲ ಕೆನ್ನೆ ಊದಿಕೊಂಡಿರುತ್ತದೆ. ಭಾಷ ರವರಿಗೆ ಆಂಗಲ್ ಬಡಿದು ಎಡಗಾಲು ಊದಿಕೊಂಡಿರುತ್ತದೆ. ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಾಲಕ ಜನಾರ್ಧನ ಗೌಡನಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ನಂತರ ಅಪಘಾತಕ್ಕೆ ಕಾರಣವಾದ ಲಾರಿಯನ್ನು ನೋಡಲಾಗಿ ಪೆನ್ನಾ ಸಿಮೆಂಟಿನ ಲೋಡ್ ಲಾರಿಯಾಗಿದ್ದು ನೊಂದಣಿ ಸಂಖ್ಯೆ AP-39-TH-8657ಎಂದು ಇರುತ್ತದೆ, ಸದರಿ ಲಾರಿಯ ಚಾಲಕ ಲಾರಿಯಲ್ಲೇ ಇದ್ದು ಹೆಸರು ವಿಳಾಸ ಕೇಳಿದಾಗ ಬಿಜಯ್ ರಾಣಾ ಬಿನ್ ಲೇ ಜಿಬಲಾಲ್ ರಾಣಾ 50 ವರ್ಷ, ರಾಣಾ ಜನಾಂಗ, ಲಾರಿ ಚಾಲಕ, ನೇರೋನಾವಾಡಿ ಗ್ರಾಮ, ಇಂದರವಾ(ಪೋ) ಕೋಡಾರಮ(ತಾ&ಜಿ) ಜಾರ್ಖಂಡ್ ರಾಜ್ಯ ಎಂದು ತಿಳಿಸಿದನು. ನಂತರ ನಾವೆಲ್ಲರೂ ಹೆದ್ದಾರಿಯಲ್ಲಿ ಬರುತ್ತಿದ್ದ ಆಂಬ್ಯೂಲೆನ್ಸ್ನಲ್ಲಿ ದೇವನಹಳ್ಳಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಅಲ್ಲಿಂದ ಫಜಲ್, ಸಮೀರ್ ಮತ್ತು ಭಾಷ ಹೆಚ್ಚಿನ ಚಿಕಿತ್ಸೆಗೆ ಹೆಬ್ಬಾಳದ ಟ್ರೂ ಲೈಫ್ ಕೇರ್ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಪಘಾತಕ್ಕೆ ಕಾರಣನಾದ ಲಾರಿಯ ಚಾಲಕ ಲಾರಿಗೆ ಯಾವುದೇ ಇಂಡಿಕೇಟರ್, ಸಿಗ್ನಲ್ ಲೈಟ್, ರಿಫ್ಲೆಕ್ಟರ್ಸ್ ಹಾಕದೇ ಸಿಮೆಂಟ್ ಲಾರಿಯನ್ನು ಹೆದ್ದಾರಿಯಲ್ಲಿ ಅಜಾಗರೂಕತತೆಯಿಂದ ಅಪಾಯಕಾರಿಯಾಗಿ ನಿಲ್ಲಿಸಿರುವ ಲಾರಿ ಚಾಲಕ ಬಿಜಯ್ ರಾಣಾ ಬಿನ್ ಲೇ.ಜಿಬಲಾಲ್ ರಾಣಾ ರವರು ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

ಇತ್ತೀಚಿನ ನವೀಕರಣ​ : 19-09-2021 06:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080