ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.242/2021 ಕಲಂ. 20(b) NARCOTIC DRUGS & PSYCHOTROPIC SUBSTANCES ACT, 1985:-

     ದಿನಾಂಕ: 18/08/2021 ರಂದು ಮದ್ಯಾಹ್ನ 1-30 ಗಂಟೆಗೆ ಗೋಪಾಲರೆಡ್ಡಿ ಪಿಎಸ್ಐ ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ದೂರಿನ ಸಾರಾಂಶವೇನೆಂದರೆ  ನಾನು ದಿನಾಂಕ: 18/08/2021 ರಂದು ಬೆಳಿಗ್ಗೆ 10.00 ಗಟೆಯಲ್ಲಿ ಪೊಲೀಸ್ ಠಾಣೆಯಲ್ಲಿದ್ದಾಗ ಬಾತ್ಮೀದಾರರಿಂದ ಖಚಿತ ಮಾಹಿತಿ ಬಂದಿದ್ದು, ಏನೆಂದರೆ ಬಾಗೇಪಲ್ಲಿ ಪೊಲೀಸ್ ಠಾಣಾ ಸರಹದ್ದಿನ ನ್ಯಾಷನಲ್ ಕಾಲೇಜು ಪಕ್ಕದಲ್ಲಿ ಯಾರೋ ಒಬ್ಬ ಆಸಾಮಿಯು ನಿಂತುಕೊಂಡು ಸಾರ್ವಜನಿಕರಿಗೆ ಗಾಂಜಾ ಎಂಬ ಮಾದಕ ವಸ್ತುವನ್ನು ಅದರಲ್ಲಿ ಗಾಂಜಾ ಪೊಟ್ಟಣಕ್ಕೆ 200 ರೂಗಳಂತೆ ಮಾರಾಟ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ನಾನು ವಿಷಯವನ್ನು ಠಾಣಾ ದಿನಚರಿಯಲ್ಲಿ ನಮೂದಿಸಿ ಎನ್ ಡಿಪಿಎಸ್ ಕಾಯಿದೆ ಕಲಂ:51 ರ ಪ್ರಕಾರ ಬೆಳಿಗ್ಗೆ 10.10 ಗಂಟೆಗೆ ಮಾನ್ಯ ಡಿವೈಎಸ್ ಪಿ ಚಿಕ್ಕಬಳ್ಳಾಪುರ ಉಪ-ವಿಭಾಗ ರವರಿಗೆ ಲಿಖಿತವಾಗಿ ಮಾಹಿತಿಯನ್ನು ಸಲ್ಲಿಸಿ ದಾಳಿ ಮಾಡಲು ಅನುಮತಿ ನೀಡಿ ಸ್ಥಳದಲ್ಲಿ ಹಾಜರಿದ್ದು ಮಾರ್ಗದರ್ಶನ ನೀಡಬೇಕೆಂದು ಕೋರಿ ಪಿಸಿ-134 ಧನಂಜಯ ರವರನ್ನು ಕಳುಹಿಸಿಕೊಟ್ಟಿರುತ್ತೆ. ನಂತರ ಗೆಜೆಟೆಡ್ ಅಧಿಕಾರಿಗಳಾದ ಮಾನ್ಯ ತಹಸೀಲ್ದಾರ್ ಬಾಗೇಪಲ್ಲಿ ತಾಲ್ಲೂಕು ರವರಿಗೆ ಪಂಚನಾಮೆಗೆ ಸಹಕರಿಸಲು ಮನವಿಯನ್ನು ಹೆಚ್ಸಿ-178 ಶ್ರೀಪತಿ ರವರೊಂದಿಗೆ ಕಳುಹಿಸಿಕೊಟ್ಟಿರುತ್ತೆ. ನಂತರ ಪೊಲೀಸ್ ಠಾಣೆಗೆ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರಿಗೆ ವಿಷಯ ತಿಳಿಸಿ ಪಂಚರಾಗಲು ಒಪ್ಪಿಸಿದ್ದು ನಂತರ ದಾಳಿ ಮಾಡಲು ಅನುವಾಗುವಂತೆ ನಾನು ಮತ್ತು ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಪಿಸಿ-18 ಅರುಣ್, ಪಿಸಿ-278 ಶಬ್ಬೀರ್ ಊರಾನಮನಿ, ಪಿಸಿ-319 ವಿನಾಯಕ ವಿಶ್ವ ಬ್ರಾಹ್ಮಣ, ಪಿಸಿ-214 ಅಶೋಕ ಸದರಿ ಸ್ಥಳಕ್ಕೆ ಡಿಕಾಯ್ ಆಗಿ ಹೋಗಿ ವ್ಯವಹರಿಸಲು ಹೆಚ್ ಸಿ-156 ನಟರಾಜ್ ರವರನ್ನು ಮಫ್ತಿಯಲ್ಲಿ ಕರೆದುಕೊಂಡು ಪಂಚರು ಮತ್ತು ಪೊಲೀಸ್ ಅಧಿಕಾರಿಗಳಾದ ನಾವು ಪರಸ್ಪರ ಬದನ್ ಜಪ್ತಿ ಮಾಡಿಕೊಂಡು ಯಾರ ಬಳಿಯೂ ಗಾಂಜಾ ಇಲ್ಲದಿರುವ ಬಗ್ಗೆ ಖಚಿತ ಪಡಿಸಿಕೊಂಡು ಎಲ್ಲಾರೂ ಸೇರಿ ಬೆಳಿಗ್ಗೆ 11.15 ಗಂಟೆಗೆ ಪೊಲೀಸ್ ಠಾಣೆ ಬಿಟ್ಟು ಸರ್ಕಾರಿ ಜೀಪ್ ನಂ-ಕೆಎ 40 ಜಿ 537 ರಲ್ಲಿ ತನಿಖಾ ಪರಿಕರಗಳೊಂದಿಗೆ ಹೊರಟು ಬೆಳಿಗ್ಗೆ 11.25 ಗಂಟೆಗೆ ನ್ಯಾಷನಲ್ ಕಾಲೇಜು ಬಳಿ ಜೀಪನ್ನು ನಿಲ್ಲಿಸಿ ಕಾಲೇಜು ಕಾಂಪೌಂಡಿನ ಬಳಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಯು ಕಾಲೇಜಿನ ಹಿಂಭಾಗದಲ್ಲಿ ಕಾಲೇಜು ಬ್ಯಾಗ್ ಸಮೇತ ನಿಂತಿದ್ದು ಓಡಾಡು ಜನರಿಗೆ ಗಾಂಜಾ ಮಾರಾಟ ಮಾಡುತ್ತಿರುವುದು ಕಂಡು ಬಂತು. ನಮ್ಮ ಜೊತೆಯಲ್ಲಿದ್ದ ಹೆಚ್ ಸಿ-156 ನಟರಾಜ್ ರವರಿಗೆ 200 ರೂಗಳನ್ನು ನೀಡಿ ನೀವು ಡಿಕಾಯ್ ಆಗಿ ಸದರಿ ಆಸಾಮಿ ಬಳಿ ಹೋಗಿ ಹಣ ನೀಡಿ ಗಾಂಜಾ ಖರೀದಿಸಿ ಮಾರಾಟ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಕೈಯನ್ನು ಮೇಲೆತ್ತುವ ಮೂಲಕ ಸನ್ನೆ ಮಾಡಿದರೆ ನಾವುಗಳು ದಾಳಿ ಮಾಡುವುದಾಗಿ ತಿಳಿಸಿ ಕಳುಹಿಸಿದೆವು. ಅದರಂತೆ ಹೆಚ್ ಸಿ-156 ನಟರಾಜ್ ರವರು ಸದರಿ ಆಸಾಮಿಯ ಬಳಿ ಹೋಗಿ ವ್ಯವಹರಿಸಿ ಕೈಯನ್ನು ಮೇಲೆತ್ತಿದಾಗ ನಾನು ಮತ್ತು ಸಿಬ್ಬಂದಿಯವರು ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದು ಕೊಂಡೆವು. ಆಗ ನಾನು ಸದರಿ ಆಸಾಮಿಗೆ ನನ್ನ ಪರಿಚಯ ತಿಳಿಸಿ ನೀವು ಮಾದಕ ವಸ್ತು ಗಾಂಜಾ ವಸ್ತುವನ್ನು ಮಾರಾಟ ಮಾಡುತ್ತರುವ ಬಗ್ಗೆ ನನಗೆ ಖಚಿತ ವರ್ತಮಾನ ಬಂದಿದ್ದು ನಿಮ್ಮನ್ನು ಶೋಧನೆ ಮಾಡಿ  ಗಾಂಜಾವನ್ನು ಅಮಾನತ್ತು ಪಡಿಸಬೇಕಾಗಿದೆ. ಕಾನೂನಿನಲ್ಲಿ ನೀವು ಇಷ್ಟ ಪಟ್ಟರೆ ನಿಮ್ಮ ಅಂಗ ಶೋಧನೆಯನ್ನು ನ್ಯಾಯಾಧೀಶರ ಮುಂದೆ ಅಥವಾ  ಗೆಜೆಟೆಡ್ ಅಧಿಕಾರಿಗಳ ಮುಂದೆ ಮಾಡಿಸ ಬೇಕೆ? ಅಥವಾ ಪೊಲೀಸ್ ಅಧಿಕಾರಿಗಳಾದ ನಾವೇ ಅಂಗ ಶೋಧನೆ ಮಾಡಬಹುದೇ ಎಂದು ತಿಳಿಸಿದಾಗ ಸದರಿ ಆಸಾಮಿಯು ನನಗೆ ಗೆಜೆಟೆಡ್ ಅಧಿಕಾರಿಗಳಿಂದ ಅಂಗಶೋಧನೆ ಮಾಡಿಸಿರಿ ಎಂದಾಗ ಆಸಾಮಿಗೆ ಪ್ರಶ್ನಾವಳಿಯ ಪೊಲೀಸ್ ನೋಟೀಸ್ ನೀಡಿ ಆತನ ಒಪ್ಪಿಗೆ ಸಹಿಯನ್ನು ಪಡೆಯಲಾಯಿತು ಅಷ್ಟರಲ್ಲಿ ಸ್ಥಳಕ್ಕೆ ಮಾನ್ಯ ತಹಸೀಲ್ದಾರ್ ರವರು ಬಂದಿದ್ದು ಅವರಿಗೆ ಆರೋಪಿ ಗೆಜೆಟೆಡ್ ಅಧಿಕಾರಿಗಳಿಂದ ಅಂಗಶೋಧನೆ ಮಾಡಿಸಬೇಕೆಂದು ತಿಳಿಸಿರುವ ವಿಷಯವನ್ನು ತಿಳಿಸಿ ಸದರಿಯವರ ಸಮಕ್ಷಮ ಪೊಲೀಸ್ ಸಿಬ್ಬಂದಿಯವರು ಹಿಡಿದುಕೊಂಡಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಭರತ್ ಬಿನ್ ಶ್ರಿನಿವಾಸ, 21 ವರ್ಷ, ಬಲಜಿಗರು, ವಿದ್ಯಾರ್ಥಿ, ವಾಸ: ಐವಾರ್ಲಪಲ್ಲಿ ಗ್ರಾಮ ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿದ್ದು ಆರೋಪಿದಯ ಅಂಗಶೋಧನೆ ಮಾಡಲಾಗಿ 1,000/- ರೂಪಾಯಿಗಳು ಹಣವಿದ್ದು ಅದನ್ನು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಪಿಎಸ್ಐ ಹಾಗೂ ಪಂಚರ ಸಹಿ ಇರುವ ಚೀಟಿ ಅಂಟಿಸಿ ಆರ್ಟಿಕಲ್-1 ಎಂದು ನಮೂದಿಸಲಾಯಿತು. ಆತನ ಕೈಯಲ್ಲಿದ್ದ ನೀಲಿ ಮತ್ತು ಕೇಸರಿ ಬಣ್ಣದ ಬ್ಯಾಗ್ನ್ನು ತೆಗೆದು ಪರಿಶೀಲಿಸಲಾಗಿ ಅದರಲ್ಲಿ ಮಾದಕ ವಸ್ತು ಗಾಂಜಾ ರೀತಿಯಲ್ಲಿ ರೀತಿಯಲ್ಲಿ ಕಂಡು ಬಂದಿದ್ದು ಕಾಫೀ ಬಣ್ಣದ ಟೇಪ್ ಸುತ್ತಿರುವ 2 ಪಾಕೆಟ್ ಗಳಿದ್ದು ಹಾಗೂ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಕವರಿನ 10 ಪಾಕೆಟ್ ಗಳಿರುತ್ತವೆ. ಮೇಲ್ಕಂಡ 2 ಪಾಕೆಟ್ ಗಳಲ್ಲಿ 1ನೇ ಪಾಕೆಟ್ ನ್ನು ಪರಿಶೀಲಿಸಿ ನೋಡಲಾಗಿ ಗಾಂಜಾ ಸೊಪ್ಪಿನ ಪಾಕೆಟ್ ಆಗಿದ್ದು ತೂಕ ಮಾಡಲಾಗಿ 1 ಕೆಜಿ 150 ಗ್ರಾಂ ಇದ್ದು, ಸ್ವಲ್ಪ ಹಸಿಯಾಗಿದ್ದು ತೂಕ ಕಡಿಮೆಯಾಗುವ ಸಾಧ್ಯತೆ ಇರುತ್ತದೆ, ಇದನ್ನು ಬಿಳಿಯ ಬಟ್ಟೆಯ ಚೀಲದಲ್ಲಿ ಹಾಕಿ ಪಿಎಸ್ಐ ಮತ್ತು ಪಂಚರ ಸಹಿ ಇರುವ ಚೀಟಿ ಅಂಟಿಸಿ ಆರ್ಟಿಕಲ್-2 ಎಂದು ನಮೂದಿಸಿರುತ್ತೆ. 2ನೇ ಪಾಕೆಟ್ ನ್ನು ಪರಿಶೀಲಿಸಿ ನೋಡಲಾಗಿ ಗಾಂಜಾ ಸೊಪ್ಪಿನ ಪಾಕೆಟ್ ಆಗಿದ್ದು ತೂಕ ಮಾಡಲಾಗಿ 1 ಕೆಜಿ 750 ಗ್ರಾಂ ಇದ್ದು ಸ್ವಲ್ಪ ಹಸಿಯಾಗಿದ್ದು ತೂಕ ಕಡಿಮೆಯಾಗುವ ಸಾಧ್ಯತೆ ಇರುತ್ತದೆ,  ಇದನ್ನು ಬಿಳಿಯ ಬಟ್ಟೆಯ ಚೀಲದಲ್ಲಿ ಹಾಕಿ ಪಿಎಸ್ಐ ಮತ್ತು ಪಂಚರ ಸಹಿ ಇರುವ ಚೀಟಿ ಅಂಟಿಸಿ ಆರ್ಟಿಕಲ್-3 ಎಂದು ನಮೂದಿಸಿರುತ್ತೆ. ಹಾಗೂ ಚಿಕ್ಕ ಚಿಕ್ಕ 10 ಪಾಕೆಟ್ ಗಳನ್ನು ಪರಿಶೀಲಿಸಲಾಗಿ ಗಾಂಜಾ ಸೊಪ್ಪಿನ ಪಾಕೆಟ್ಗಳು ಆಗಿದ್ದು ಅವುಗಳನ್ನು ತೂಕ ಮಾಡಲಾಗಿ ಪ್ರತಿ ಪಾಕೆಟ್ ನಲ್ಲಿ ತಲಾ 10 ಗ್ರಾಂ ನಂತೆ ಒಟ್ಟು  100 ಗ್ರಾಂ ನಷ್ಟು ಗಾಂಜಾಸೊಪ್ಪು ಇದ್ದು ಇವುಗಳನ್ನು ಬಿಳಿಯ ಬಟ್ಟೆಯ ಚೀಲದಲ್ಲಿ ಹಾಕಿ ಪಿಎಸ್ಐ ಮತ್ತು ಪಂಚರ ಸಹಿ ಇರುವ ಚೀಟಿ ಅಂಟಿಸಿ ಆರ್ಟಿಕಲ್-4 ಎಂದು ನಮೂದಿಸಿರುತ್ತೆ. ಇವುಗಳ ಒಟ್ಟು ಅಂದಾಜು ಬೆಲೆ ಸುಮಾರು 1,50,000/- ರೂಗಳಾಗಿರುತ್ತೆ, ನಂತರ ಸ್ಥಳದಲ್ಲೇ ಮದ್ಯಾಹ್ನ 12.10 ಗಂಟೆಯಿಂದ 1.10 ಗಂಟೆ ವರೆಗೆ ಪಂಚನಾಮೆ ಕ್ರಮ ಜರುಗಿಸಿ ಆರೋಪಿ, ಅಸಲು ಪಂಚನಾಮೆ ಮತ್ತು ಮಾಲಿನೊಂದಿಗೆ ಮದ್ಯಾಹ್ನ 1.30 ಗಂಟೆಗೆ ಪೊಲೀಸ್ ಠಾಣೆಗೆ ಹಿಂದಿರುಗಿ ಬಂದು ಆರೋಪಿ ಭರತ್ ರವರು ಕಲಂ:20(ಬಿ) ಎನ್ ಡಿಪಿಎಸ್ ಕಾಯಿದೆ ಅನ್ವಯವೆಸಗಿರುವುದರಿಂದ ಸರ್ಕಾರದ ಪರವಾಗಿ ನಾನೇ ಪಿರ್ಯಾದುದಾರರನ್ನಾಗಿ ವರದಿ ಹಾಗೂ ಆರೋಪಿ ಅಸಲು ಪಂಚನಾಮೆ ಮತ್ತು ಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದರಿಂದ ಸದರಿ ಆರೋಪಿದಯ ವಿರುದ್ದ ಕಲಂ: 20(ಬಿ) ಎನ್ ಡಿಪಿಎಸ್ ಕಾಯಿದೆ ರೀತ್ಯ ಪ್ರಕರಣವನ್ನು,ದಾಖಲುಮಾಡಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.364/2021 ಕಲಂ. 20(b) NARCOTIC DRUGS & PSYCHOTROPIC SUBSTANCES ACT, 1985:-

     ದಿನಾಂಕ: 18/08/2021 ರಂದು ಬೆಳಿಗ್ಗೆ 11.45 ಗಂಟೆಗೆ ಠಾಣೆಯ ಶ್ರೀ ನಾರಾಯಣಸ್ವಾಮಿ, ಪಿ.ಎಸ್.ಐ ರವರು ಠಾಣೆಯ ಸಿ.ಪಿ.ಸಿ-544 ರವರೊಂದಿಗೆ ಠಾಣೆಗೆ ಕಳುಹಿಸಿಕೊಟ್ಟ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ 18/08/2021 ರಂದು ಬೆಳಿಗ್ಗೆ 10.00 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ಠಾಣಾ ಸರಹದ್ದಿಗೆ ಸೇರಿದ ಅಂಬಾಜಿದುರ್ಗ ಹೋಬಳಿ ಕೋಟಗಲ್ ಗ್ರಾಮದ ಲೇಟ್ ಗುಲಾಬ್ ಜಾನ್ ಕೋಂ ಲೇಟ್ ಚಿಕ್ಕಖಾಸಿಂ ಸಾಬ್ ರವರ ಬಾಬ್ತು ಸರ್ವೇನಂ:9 ರಲ್ಲಿನ ಜಮೀನಿನಲ್ಲಿ ಅದೇ ಗ್ರಾಮದ ಅವರ ಸಂಬಂಧಿಯಾದ ಹುಸೇನ್ ಬಿನ್ ಮದಾರ್ ಸಾಬ್ ರವರು ಮಾದಕ ವಸ್ತುವಾದ ಗಾಂಜಾ ಗಿಡಗಳನ್ನು ಬೆಳೆದು ಅವುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಜಮೀನಿನಲ್ಲಿ ಬೆಳೆಸಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಸದರಿ ಮಾಹಿತಿಯನ್ನು ತಾನು ಡೈರಿಯಲ್ಲಿ ನಮೂದಿಸಿಕೊಂಡು ಸದರಿ ಆಸಾಮಿಯು ಗಾಂಜಾ ಗಿಡಗಳನ್ನು ಯಾರಿಗಾದರೂ ಮಾರಾಟ ಮಾಡಬಹುದೆಂಬ ಸಂಶಯದಿಂದ ತಕ್ಷಣ ತಾನು ಮಾನ್ಯ ಡಿ.ಎಸ್.ಪಿ ಸಾಹೇಬರವರಿಗೆ ಮಾಹಿತಿಯನ್ನು ತಿಳಿಸಿ ಅವರ ಮಾರ್ಗದರ್ಶನದಂತೆ ಠಾಣೆಯ ಸಿಬ್ಬಂದಿಯವರಾದ ಸಿ.ಹೆಚ್.ಸಿ-41 ಜಗದೀಶ್, ಸಿ.ಹೆಚ್.ಸಿ-249 ಸಂದೀಪ್ ಕುಮಾರ್, ಸಿ.ಪಿ.ಸಿ-116 ಸುಬ್ರಮಣಿ, ಸಿ.ಪಿ.ಸಿ-544 ವೆಂಕಟರಣ ಮತ್ತು ಸಿ.ಪಿ.ಸಿ-16 ಲೋಕೇಶ ರವರೊಂದಿಗೆ ಬೆಳಿಗ್ಗೆ 10.45 ಗಂಟೆಗೆ ಸರ್ಕಾರಿ ಜೀಪ್ ನಲ್ಲಿ ಕೋಟಗಲ್ ಗ್ರಾಮದ ಹುಸೇನ್ ರವರು ಬೆಳೆಸಿದ್ದ ಗಾಂಜಾ ಗಿಡಗಳಿರುವ ಜಮೀನಿನ ಬಳಿ ಹೋಗಿ ಜೀಪನ್ನು ನಿಲ್ಲಿಸಿ ಅಲ್ಲಿಂದ ನಾವೆಲ್ಲರೂ ನಡೆದುಕೊಂಡು ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು, ಸದರಿ ಹುಸೇನ್ ರವರು ಜಮೀನಿನ ಒಂದು ಮೂಲೆಯಲ್ಲಿರುವ ಕಲ್ಲು ಬಂಡೆಯ ಪಕ್ಕದಲ್ಲಿ ಸುಮಾರು 10 ಅಡಿ ಉದ್ದದ ಸುಮಾರು 4 ಕೆ.ಜಿ 70 ಗ್ರಾಂ ತೂಕದ 7 ಗಾಂಜಾ ಗಿಡಗಳನ್ನು ಬೆಳೆಸಿದ್ದು ಇವರು ಮಾದಕವಸ್ತು ಆದ ಗಾಂಜಾ ಗಿಡಗಳನ್ನು ಬೆಳೆದು ಅವುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಜಮೀನಿನಲ್ಲಿ ಸರ್ಕಾರದ ಯಾವುದೇ ಆದೇಶ ಇಲ್ಲದೆ ಕಾನೂನು ಬಾಹಿರವಾಗಿ ಬೆಳೆಸಿರುವುದು ಕಂಡು ಬಂದಿದ್ದು, ಸದರಿ ಗಿಡಗಳನ್ನು ಹುಸೇನ್ ರವರು ಅದೇ ಗ್ರಾಮದ ತನ್ನ ಸಂಬಂಧಿಯಾದ ಲೇಟ್ ಗುಲಾಬ್ ಜಾನ್ ರವರ ಜಮೀನಿನಲ್ಲಿ ಬೆಳೆಸಿರುತ್ತಾರೆ. ನಂತರ ಗ್ರಾಮದಲ್ಲಿ ಹುಸೇನ್ ಬಿನ್ ಮದಾರ್ ಸಾಬ್ ರವರನ್ನು ಹುಡುಕಾಡಲಾಗಿ ಆತನು ತಲೆಮರೆಸಿಕೊಂಡಿದ್ದು, ನಂತರ ತಾನು ಸ್ಥಳದಲ್ಲಿಯೇ ಲ್ಯಾಪ್ ಟಾಪ್ ಮೂಲಕ ವರದಿ ತಯಾರಿಸಿ ಮೇಲ್ಕಂಡ ಹುಸೇನ್ ರವರ ವಿರುಧ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿ ವರದಿಯನ್ನು ಸಿ.ಪಿ.ಸಿ 544 ವೆಂಕಟರವಣ ರವರ ಮುಖಾಂತರ ಠಾಣೆಗೆ ಕಳುಹಿಸಿರುವುದಾಗಿರುತ್ತೆ.

 

3. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.196/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ 19/08/2021 ರಂದು ಬೆಳಿಗ್ಗೆ 8-30 ಗಂಟೆಯಲ್ಲಿ ಪಿರ್ಯಾಧಿದಾರರು ರಘುವೀರ ಬಿನ್ ಪಾಪಣ್ಣ , 25 ವರ್ಷ, ಆದಿಕರ್ನಾಟಕ ಜನಾಂಗ, ಸೋಮಶೆಟ್ಟಿ ಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂರು, ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ- ದಿನಾಂಕ 15/08/2021 ರಂದು ರಾತ್ರಿ ಸುಮಾರು 8-30 ಗಂಟೆಗೆಯಲ್ಲಿ  ನಮ್ಮ ಗ್ರಾಮದ ಖಾಲಿ ಜಾಗದಲ್ಲಿ ಬಹ್ಮಿದಸಿ ಮಾಡಿಕೊಂಡು ನನ್ನ ಸ್ನೇಹಿತನಾದ ಹರೀಶ್ ಬಿನ್ ನರಸಿಂಹಮೂರ್ತಿ ನಮ್ಮ ದೊಡ್ಡಪ್ಪನ ಮಗನಾದ ಮಹೇಶ್ ಬಿನ್ ಗಂಗಾಧರಪ್ಪ ರವರೊಂದಿಗೆ ನಮ್ಮ ಗ್ರಾಮದಲ್ಲಿರುವ ಮಧುಗಿರಿ ಯಿಂದ ತೊಂಡೇಬಾವಿಗೆ ಹೋಗುವ ರಸ್ತೆ  ದಾಟುತ್ತಿರುವಾಗ ಯಾವುದೋ ಒಂದು ವಾಹನ ಅತಿವೇಗ ಮತ್ತು ಅಜಾಗ್ರಕತೆಯಿಂದ ಚಲಾಯಿಸಿಕೊಂಡು ಬಂದು ನನಗೆ ಗುದ್ದಿ ನನ್ನ ಹಲ್ಲಿನ ಅತ್ತಿರ ಮೂಳೆ ಮುರಿದು ಎಯಡಗೈ ಮತ್ತು ಬಲಗೈ ತರಚಿದಗಾಯ ಹಾಗೂ ಹಲ್ಲು ದವಡೆಗೆ ಮೂಳೆ ಮುರಿದು ಹಲ್ಲುಗಳು ಅಲ್ಲಾಡುತ್ತಿದವು ನಂತರ ನಮ್ಮ ಸ್ನೇಹಿತರು ಗುದ್ದಿದವರನ್ನು  ರವರಿಗೆ ಹುಡುಕಲಾಗಿ  ಅವನು ಚಲಾಹಿಸಿದ ದ್ವಿಚಕ್ರ ವಾಹನ KA 50 L 1662 ಬಿಟ್ಟು ಓಡಿ ಹೋಗಿರುತ್ತಾನೆ. ಗುದ್ದಿ ಬಿಟ್ಟು ಹೋಗಿರುವ  ವಾಹನವನ್ನು ಅಪಘಾತವಾಗಿರುವ ಸ್ಥಳದಲ್ಲಿ ಬಿಟ್ಟು ಚಿಕಿತ್ಸೆಗಾಗಿ ಅಂಬುಲೆನ್ಸ್ ನಲ್ಲಿ ನನ್ನ ದೊಡ್ಡಪ್ಪನ ಮಗನಾದ  ಮಹೇಶ್ ರವರ ಅಂಬುಲೆನ್ಸ್ ನಲ್ಲಿ ಹಾಕಿಕೊಂಡು ಗೌರಿಬಿದನೂರುಗೆ ಬಂದು ಚಿಕಿತ್ಸೆ ಗಾಗಿ ಗೌರಿಬಿದನೂರು ಸರ್ಕಾರಿ ಆಸ್ವತ್ರೆ  ಗೆ ದಾಖಲೆ ಮಾಡಿದ್ರು ನಂತರ ನನಗೆ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ನಲ್ಲಿ ಹಾಕಿ ಜಿಲ್ಲಾ ಆಸ್ವತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ.ಅಲ್ಲಿಂದ ಸಂಜಯ ಗಾಂಧಿ ಆಸ್ವತ್ರೆಗೆ ಕಳುಹಿಸಿ ಕೊಟ್ಟಿದ್ದು ಅಲ್ಲಿ ಚಿಕಿತ್ಸೆಯನ್ನು ಪಡೆದು  ಈ ದಿನ ಠಾಣೆಯಲ್ಲಿ ದೂರು ನೀಡಿರುತ್ತೇನೆ. ನನಗೆ ಗುದ್ದಿ ತಪ್ಪಿಸಿಕೊಂಡು ಓಡಿ ಹೋಗಿರುವನನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆ.

 

4. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.198/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:19/08/2021 ರಂದು ಮದ್ಯಾಹ್ನ 12-05 ಗಂಟೆ ಸಮಯದಲ್ಲಿ ಫಿರ್ಯಾದುದಾರರಾದ ಸಂದೀಪರೆಡ್ಡಿ ಬಿನ್ ನಾರಾಯಣ ರೆಡ್ಡಿ, ವೆಂಕಟಾಪುರ ಗ್ರಾಮ, ಡಿಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು. ರವರು ಠಾಣೆಗ ಹಾಜರಾಗಿ  ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ದೊಡ್ಡಪ್ಪನ ಮಗನಾದ ಸ್ವರೂಪ್ ರೆಡ್ಡಿ ಬಿನ್ ಸೂರ್ಯ ನಾರಾಯಣ ರೆಡ್ಡಿ ,29 ವರ್ಷ, ರವರು ಏಂಜಲ್ ಬ್ರೋಕಿಂಗ್ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ದಿನಾಂಕ:01/08/2021 ರಂದು ಬೆಂಗಳೂರಿನಿಂದ ತನ್ನ ಸ್ವಂತ ಗ್ರಾಮವಾದ ಕೊತ್ತನೂರು ಹಿಂದೂಪುರ ತಾಲ್ಲೂಕು ಕಡೆಗೆ ತನ್ನ ಬಾಬತ್ತು ದ್ವಿ-ಚಕ್ರ ವಾಹನ KA-03 JR-9801 ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಬೆಳಿಗ್ಗೆ ಸುಮಾರು 7-30 ಗಂಟೆಯಲ್ಲಿ ಚಿಕ್ಕಕುರುಗೋಡು ಗ್ರಾಮದ ಬಳಿ ಹಿಂದೂಪುರ ಕಡೆಯಿಂದ ಬಂದ ವೆಂಕಟೇಶ್ವರ ಬಸ್ಸು ನೊಂದಣಿ ಸಂಖ್ಯೆ:KA-04 AB-8600 ಬಸ್ಸಿನ ಚಾಲಕ ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸ್ವರೂಪ್ ರೆಡ್ಡಿ ಬಿನ್ ಸೂರ್ಯ ನಾರಾಯಣ ರೆಡ್ಡಿ ರವರು ಹೋಗುತ್ತಿದ್ದ ದ್ವಿ-ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ ಕಾರಣ ಸ್ವರೂಪರೆಡ್ಡ ರವರಿಗೆ ಬಲಕೈನ ತೋರ್ಬೆರಳು ಮುರಿದು ಹೋಗಿರುತ್ತೆ. ಹಾಗೂ ಬಲಕಾಲಿಗೆ ತೀವ್ರ ಸ್ವರೂಪದ ಗಾಯವಾಗಿರುತ್ತೆ, ನಂತರ ಸ್ವರೂಪ ರೆಡ್ಡಿ ರವರನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಎಡ ಕಣ್ಣಿನ ರೆಪ್ಪೆ ಬಳಿ ಮೂರು ಹೊಲಿಗೆ ಹಾಗೂ ಬಲ ಕಾಲಿಗೆ ಎರಡು ಹೊಲಿಗೆ ಹಾಕಿ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಹಿಂದೂಪುರದ ಸರ್ವೋದಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲು ಮಾಡಿ ಈ ದಿನ ತಡವಾಗಿ ಠಾಣೆಗೆ ಬಂದು KA-04 AB-8600 ನೊಂದಣಿ ಸಂಖ್ಯೆಯ ವೆಂಕಟೇಶ್ವರ ಬಸ್ಸಿನ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಾಗಿರುತ್ತೆ.

 

5. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.85/2021 ಕಲಂ. 13(1)(a),32,34,38A ಕೆ.ಇ ಆಕ್ಟ್:-

     ದಿನಾಂಕ 19/08/2021 ರಂದು ಮಧ್ಯಾನ್ನ 12-00 ಗಂಟೆಗೆ ಪಿ.ಎಸ್.ಐ ರವರು ಆರೋಪಿತೆ, ಮಾಲು ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶ ತಾನು  ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯ ಬಳಿ ಇದ್ದಾಗ  ಠಾಣಾ ವ್ಯಾಪ್ತಿಯ ನೇರಡಗುಂಟಹಳ್ಳಿ ಗ್ರಾಮದಲ್ಲಿ ಸಾಲೇಮ್ಮ ಕೋಂ ಲೇಟ್ ಗೋಪಾಲಪ್ಪ ಮತ್ತು ಇತರರು  ತಮ್ಮ ವಾಸದ ಮನೆಯ ಮುಂದೆ ದನದ ಕೊಟ್ಟಿಗೆಯಲ್ಲಿ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಸದರಿ ಮಾಹಿತಿ ಮೇರೆಗೆ ಕಳ್ಳಭಟ್ಟಿ ಸಾರಾಯಿ ಮಾರಾಟ ದಂಧೆಯ ಮೇಲೆ ದಾಳಿ ಮಾಡುವ ಸಲುವಾಗಿ  ಪಿ.ಎಸ್. ಐ ಎಂ. ನಾರಾಯಣಪ್ಪ ರವರು ಕೆಎ-40-ಜಿ-539 ಸರ್ಕಾರಿ ವಾಹನದಲ್ಲಿ ಪ್ರೋಬೆಷನರಿ ಪಿಎಸ್ಐ- ಅರುಣ್ ಗೌಡ ಪಾಟೀಲ್, ಗ್ರಾಮ ಗಸ್ತಿನ ಸಿಬ್ಬಂದಿಯಾದ ಸಿಹೆಚ್ಸಿ-200 ಏಜಾಜ್ ಪಾಷ, ಸಿಹೆಚ್ಸಿ-161 ಕೃಷ್ಣಪ್ಪ, ಮಪಿಸಿ-496 ಶಿಲ್ಪಾ, ಮಪಿಸಿ-495 ಗಾಯತ್ರಿ ರವರೊಂದಿಗೆ ನೇರಡಗುಂಟಹಳ್ಳಿ ಗ್ರಾಮಕ್ಕೆ ಹೋಗಿ ಗ್ರಾಮದ ಹೊರವಲಯದಲ್ಲಿ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ಅಲ್ಲಿದ್ದವರಿಗೆ ವಿಚಾರವನ್ನು ತಿಳಿಸಿ ಪಂಚಾಯ್ತಿದಾರರಾಗಿ ಬಂದು ತನಿಖೆಗೆ ಸಹಕರಿಸಲು ಕೋರಿ ಸದರಿಯವರನ್ನು ಪಂಚಾಯ್ತಿದಾರರಾಗಿ ಬರಮಾಡಿಕೊಂಡು ಅವರೊಂದಿಗೆ ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ನೇರಡಗುಂಟಹಳ್ಳಿ ಗ್ರಾಮದೊಳಗೆ ಹೋಗಿ ಗ್ರಾಮದ ಸಾಲೇಮ್ಮ ಕೋಂ ಲೇಟ್ ಗೋಪಾಲಪ್ಪ ರವರ ಮನೆಯ ಬಳಿ ನಡೆದುಕೊಂಡು ಹೋಗಿ ಪಂಚರ ಸಮಕ್ಷಮ ಅಲ್ಲಿನ ಒಂದು ಮನೆಯ ಮುಂದಿನ ದನದ ಕೊಟ್ಟಿಗೆಯಲ್ಲಿ ನೋಡಲಾಗಿ ಅಲ್ಲಿ ಯಾರೋ ಒಬ್ಬ ಮಹಿಳೆಯು ಇತರೇ ಮೂವರು ಗಂಡಸರೊಂದಿಗೆ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಸಮವಸ್ತ್ರದಲ್ಲಿದ್ದ ಪೋಲಿಸರನ್ನು ಕಂಡ ಕೂಡಲೇ ಅಲ್ಲಿದ್ದ ಮೂರು ಜನ ಗಂಡಸರು ಓಡಿ ಹೋಗಿದ್ದು, ಅಲ್ಲಿದ್ದ ಮಹಿಳೆಯನ್ನು ಪಂಚರ ಸಮಕ್ಷಮ ಮಹಿಳಾ ಸಿಬ್ಬಂದಿ ಸಹಾಯದಿಂದ ವಶಕ್ಕೆ ಪಡೆದುಕೊಂಡು ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ ಎರಡು ಲೀಟರ್ ಪ್ಲಾಸ್ಟಿಕ್ ವಾಟರ್ ಬಾಟಲ್ ನ ತುಂಬಾ ಮದ್ಯ ಇದ್ದು, ಮುಚ್ಚಳ ತೆಗೆದು ನೋಡಲಾಗಿ ಕಳ್ಳಭಟ್ಟಿ ಸಾರಾಯಿಯ ಘಾಟು ವಾಸನೆ ಬರುತ್ತಿರುತ್ತದೆ. ಪಕ್ಕದಲ್ಲಿಯೇ ಒಂದು ಖಾಲಿ ಎರಡು ಲೀಟರ್ ಖಾಲಿ ಬಾಟಲ್ ಇದ್ದು, ಸದರಿ ಬಾಟಲ್ ಸಹ ಕಳ್ಳಭಟ್ಟಿ ಸಾರಾಯಿಯ ಘಾಟು ವಾಸನೆ ಬರುತ್ತಿರುತ್ತದೆ. ಅಲ್ಲಿದ್ದ ಮಹಿಳೆಯನ್ನು ಹೆಸರು ವಿಳಾಸ ಕೇಳಲಾಗಿ ಸಾಲೆಮ್ಮ ಕೋಂ ಲೇಟ್ ಗೋಪಾಲಪ್ಪ, 58 ವರ್ಷ, ನಾಯಕರು, ವಾಸ ನೇರಡಗುಂಟಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು, ಓಡಿಹೋದ ಆಸಾಮಿಗಳ ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಮಕ್ಕಳಾದ 2. ಶಂಕರಪ್ಪ ಬಿನ್ ಲೇಟ್ ಗೋಪಾಲಪ್ಪ, 42 ವರ್ಷ, 3. ಮಂಜುನಾಥ ಬಿನ್ ಲೇಟ್ ಗೋಪಾಲಪ್ಪ, 40 ವರ್ಷ, ಹಾಗೂ ಅಳಿಯನಾದ 4. ಗೆಂಗಿರೆಡ್ಡಿ ಬಿನ್ ಕದಿರಪ್ಪ, 40 ವರ್ಷ, ಎಲ್ಲರೂ ನೇರಡಗುಂಟಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿ ತನ್ನ ಮಕ್ಕಳು ಮತ್ತು ಅಳಿಯ ಸ್ವತಃ ಕಚ್ಚಾ ಮಾಲು ಆದ ಬಿಳಿ ಜಾಲಿಮರದ ಚಕ್ಕೆ, ಬೆಲ್ಲದಿಂದ ಗ್ರಾಮದ ಹೊರವಲಯದಲ್ಲಿ ಕಳ್ಳಭಟ್ಟಿ ತಯಾರಿಸಿಕೊಂಡು ಮನೆಯಲ್ಲಿ ದಾಸ್ತಾನು ಮಾಡಿರುವ ಕಳ್ಳಭಟ್ಟಿಯನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಸುಮಾರು 4 ಕೆ.ಜಿಯಷ್ಠು ಕಳ್ಳಭಟ್ಟಿ ತಯಾರಿಸಲು ಉಪಯೋಗಿಸುವ ಕಚ್ಚಾ ಮಾಲು ಆದ ಬಿಳಿ ಜಾಲಿಮರದ ಚಕ್ಕೆ  ಇರುತ್ತದೆ. ಮತ್ತೊಂದು ಪ್ಲಾಸ್ಟಿಕ್ ಚೀಲದಲ್ಲಿ ಸುಮಾರು 5 ಕೆ.ಜಿ ಯಷ್ಠು ಬೆಲ್ಲ ಸಹ ಇರುತ್ತದೆ. ಪ್ಲಾಸ್ಟಿಕ್ ಬಾಟಲ್ ನಲ್ಲಿರುವ ಸುಮಾರು 2 ಲೀಟರ್ ನಷ್ಠು ಕಳ್ಳಭಟ್ಟಿ ಸಾರಾಯಿಯಲ್ಲಿ ಸುಮಾರು 200 ಎಂ.ಎಲ್ ನಷ್ಠು ಪ್ರತ್ಯೇಕವಾಗಿ ಅರ್ಧ ಲೀಟರ್ ಪ್ಲಾಸ್ಟಿಕ್ ಬಾಟಲ್ ನಲ್ಲಿ ತೆಗೆದು ಮುಚ್ಚಳ ಹಾಕಿ ಸದರಿ ಬಾಟಲ್ ನ್ನು ಎಫ್.ಎಸ್.ಎಲ್ ಪರೀಕ್ಷೆಗಾಗಿ  ಬಿಳಿ ಬಟ್ಟೆಯ ಚೀಲದಲ್ಲಿಟ್ಟು ಹೊಲೆದು “VH” ಎಂದು ಸೀಲ್ ಹಾಕಿರುತ್ತೆ.  ಬೆಲ್ಲದ ಅಂದಾಜು ಬೆಲೆ 400/- ರೂ, 2 ಲೀಟರ್ ಕಳ್ಳಭಟ್ಟಿ ಸಾರಾಯಿ ಅಂದಾಜು ಬೆಲೆ 2000/- ರೂ, ಕಚ್ಚಾ ಮಾಲಾದ ಬಿಳಿ ಜಾಲಿಮರದ ಚಕ್ಕೆ  ಅಂದಾಜು ಬೆಲೆ 200/- ರೂ ಎಂದು ಪಂಚರ ಸಮಕ್ಷಮ ಅಂದಾಜು ಮಾಡಲಾಯಿತು. ಸದರಿ ಮಾಲುಗಳನ್ನು ಪಂಚರ ಸಮಕ್ಷಮ ಸ್ಥಳದಲ್ಲಿಯೇ ಬೆಳಿಗ್ಗೆ: 8-00 ರಿಂದ 9-15 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿದ್ದು, ಮಹಜರ್, ಮಾಲುಗಳು ಹಾಗೂ ಆರೋಪಿತಳೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ತಮ್ಮಲ್ಲಿ ವರದಿ ನೀಡುತ್ತಿದ್ದು, ಆರೋಪಿತಳಾದ ಸಾಲೇಮ್ಮ ಕೋಂ ಲೇಟ್ ಗೋಪಾಲಪ್ಪ ಮತ್ತು ಓಡಿಹೋದವರ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲುಕೋರಿದ್ದರ ಮೇರೆಗೆ   ಠಾಣಾ ಮೊ.ಸಂ.85/2021 ಕಲಂ 13(1)(ಎ), 32,34,38(ಎ) ಕೆ.ಇ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

6. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.86/2021 ಕಲಂ. 13(1)(a),32,34,38A ಕೆ.ಇ ಆಕ್ಟ್:-

     ದಿನಾಂಕ 19/08/2021 ರಂದು ಮಧ್ಯಾನ್ನ 12-15 ಗಂಟೆಗೆ ಪಿ.ಎಸ್.ಐ ರವರು ಆರೋಪಿತೆ, ಮಾಲು ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶ ತಾನು ದಿನಾಂಕ:19/08/2021 ರಂದು ಬೆಳಿಗ್ಗೆ 7-00 ಗಂಟೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯ ಬಳಿ ಇದ್ದಾಗ ಠಾಣಾ ವ್ಯಾಪ್ತಿಯ ನೇರಡಗುಂಟಹಳ್ಳಿ ಗ್ರಾಮದಲ್ಲಿ ಪದ್ಮಮ್ಮ ಮತ್ತು ಆಕೆಯ ಗಂಡನಾದ ಶಂಕರಪ್ಪ  ತಮ್ಮ ವಾಸದ ಮನೆಯ ಮುಂದೆ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಸದರಿ ಮಾಹಿತಿ ಮೇರೆಗೆ ಕಳ್ಳಭಟ್ಟಿ ಸಾರಾಯಿ ಮಾರಾಟ ದಂಧೆಯ ಮೇಲೆ ದಾಳಿ ಮಾಡುವ ಸಲುವಾಗಿ ನಾನು ಕೆಎ-40-ಜಿ-539 ಸರ್ಕಾರಿ  ವಾಹನದಲ್ಲಿ ಪ್ರೋಬೆಷನರಿ ಪಿಎಸ್ಐ- ಅರುಣ್ ಗೌಡ ಪಾಟೀಲ್, ಗ್ರಾಮ ಗಸ್ತಿನ ಸಿಬ್ಬಂದಿಯಾದ ಸಿಹೆಚ್ಸಿ-200 ಏಜಾಜ್ ಪಾಷ, ಸಿಹೆಚ್ಸಿ-161 ಕೃಷ್ಣಪ್ಪ, ಮಪಿಸಿ-496 ಶಿಲ್ಪಾ, ಮಪಿಸಿ-495 ಗಾಯತ್ರಿ ರವರೊಂದಿಗೆ ನೇರಡಗುಂಟಹಳ್ಳಿ ಗ್ರಾಮಕ್ಕೆ ಹೋಗಿ ಗ್ರಾಮದ ಹೊರವಲಯದಲ್ಲಿ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ಅಲ್ಲಿದ್ದವರಿಗೆ ವಿಚಾರವನ್ನು ತಿಳಿಸಿ ಪಂಚಾಯ್ತಿದಾರರಾಗಿ ಬಂದು ತನಿಖೆಗೆ ಸಹಕರಿಸಲು ಕೋರಿ ಸದರಿಯವರನ್ನು ಪಂಚಾಯ್ತಿದಾರರಾಗಿ ಬರಮಾಡಿಕೊಂಡು ಅವರೊಂದಿಗೆ ನೇರಡಗುಂಟಹಳ್ಳಿ ಗ್ರಾಮದೊಳಗೆ ಹೋಗಿ ಗ್ರಾಮದಲ್ಲಿ ಸಾಲೆಮ್ಮ ರವರ ಮನೆಯ ಮುಂದೆ ದಾಳಿ ನಿರ್ವಹಿಸಿ ನಂತರ ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಸದರಿ ಗ್ರಾಮದ ಪದ್ಮಮ್ಮ ಕೋಂ ಶಂಕರಪ್ಪ ರವರ ಮನೆಯ ಬಳಿ ನಡೆದುಕೊಂಡು ಹೋಗಿ ಪಂಚರ ಸಮಕ್ಷಮ ಅಲ್ಲಿನ ಒಂದು ಮನೆಯ ಮುಂದಿನ ಶೀಟ್ ಕೆಳಗೆ ನೋಡಲಾಗಿ ಅಲ್ಲಿ ಯಾರೋ ಒಬ್ಬ ಮಹಿಳೆಯು ಮತ್ತೊಬ್ಬ ಗಂಡಸಿನೊಂದಿಗೆ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಸಮವಸ್ತ್ರದಲ್ಲಿದ್ದ ಪೋಲಿಸರನ್ನು ಕಂಡ ಕೂಡಲೇ ಅಲ್ಲಿದ್ದ ಗಂಡಸು ಓಡಿ ಹೋಗಿದ್ದು, ಅಲ್ಲಿದ್ದ ಮಹಿಳೆಯನ್ನು ಪಂಚರ ಸಮಕ್ಷಮ ಮಹಿಳಾ ಸಿಬ್ಬಂದಿ ಸಹಾಯದಿಂದ ವಶಕ್ಕೆ ಪಡೆದುಕೊಂಡು ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ ಎರಡು ಲೀಟರ್ ಪ್ಲಾಸ್ಟಿಕ್ ಬಾಟಲ್ ನಲ್ಲಿ ಮದ್ಯ ಇದ್ದು, ಮುಚ್ಚಳ ತೆಗೆದು ನೋಡಲಾಗಿ ಕಳ್ಳಭಟ್ಟಿ ಸಾರಾಯಿಯ ಘಾಟು ವಾಸನೆ ಬರುತ್ತಿರುತ್ತದೆ. ಅಲ್ಲಿದ್ದ ಮಹಿಳೆಯನ್ನು ಹೆಸರು ವಿಳಾಸ ಕೇಳಲಾಗಿ ಪದ್ಮಮ್ಮ ಕೋಂ ಶಂಕರಪ್ಪ, 35 ವರ್ಷ, ನಾಯಕರು, ವಾಸ ನೇರಡಗುಂಟಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು, ಓಡಿಹೋದ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಗಂಡನಾದ ಶಂಕರಪ್ಪ ಬಿನ್ ಲೇಟ್ ಯಾಮನ್ನ, 45 ವರ್ಷ, ನಾಯಕರು, ಜಿರಾಯ್ತಿ, ವಾಸ ನೇರಡಗುಂಟಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿ ತನ್ನ ಗಂಡ ಸ್ವತಃ ಕಚ್ಚಾ ಮಾಲು ಆದ ಬಿಳಿ ಜಾಲಿಮರದ ಚಕ್ಕೆ, ಬೆಲ್ಲದಿಂದ ಗ್ರಾಮದ ಹೊರವಲಯದಲ್ಲಿ ಕಳ್ಳಭಟ್ಟಿ ತಯಾರಿಸಿಕೊಂಡು ಮನೆಯಲ್ಲಿ ದಾಸ್ತಾನು ಮಾಡಿರುವ ಕಳ್ಳಭಟ್ಟಿಯನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಸುಮಾರು 06 ಕೆ.ಜಿ ಯಷ್ಠು ಬೆಲ್ಲ ಸಹ ಇರುತ್ತದೆ. ಪ್ಲಾಸ್ಟಿಕ್ ಬಾಟಲ್ ನಲ್ಲಿರುವ ಸುಮಾರು 1.200 ಎಂ.ಎಲ್ ನಷ್ಠು ಕಳ್ಳಭಟ್ಟಿ ಸಾರಾಯಿಯಲ್ಲಿ ಸುಮಾರು 200 ಎಂ.ಎಲ್ ನಷ್ಠು ಪ್ರತ್ಯೇಕವಾಗಿ ಅರ್ಧ ಲೀಟರ್ ಪ್ಲಾಸ್ಟಿಕ್ ಬಾಟಲ್ ನಲ್ಲಿ ತೆಗೆದು ಮುಚ್ಚಳ ಹಾಕಿ ಸದರಿ ಬಾಟಲ್ ನ್ನು ಎಫ್.ಎಸ್.ಎಲ್ ಪರೀಕ್ಷೆಗಾಗಿ ಬಿಳಿ ಬಟ್ಟೆಯ ಚೀಲದಲ್ಲಿಟ್ಟು ಹೊಲೆದು”VH”  ಎಂದು ಸೀಲ್ ಹಾಕಿರುತ್ತೆ. ಬೆಲ್ಲದ ಅಂದಾಜು ಬೆಲೆ 500/- ರೂ, 1.200 ಎಂ.ಎಲ್ ಕಳ್ಳಭಟ್ಟಿ ಸಾರಾಯಿ ಅಂದಾಜು ಬೆಲೆ 1200/- ರೂ ಎಂದು ಪಂಚರ ಸಮಕ್ಷಮ ಅಂದಾಜು ಮಾಡಲಾಯಿತು. ಸದರಿ ಮಾಲುಗಳನ್ನು ಪಂಚರ ಸಮಕ್ಷಮ ಸ್ಥಳದಲ್ಲಿಯೇ ಬೆಳಿಗ್ಗೆ 9-30 ರಿಂದ 10-45 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿದ್ದು, ಮಹಜರ್, ಮಾಲುಗಳು ಹಾಗೂ ಆರೋಪಿತಳೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ತಮ್ಮಲ್ಲಿ ವರದಿ ನೀಡುತ್ತಿದ್ದು, ಆರೋಪಿತಳಾದ ಪದ್ಮಮ್ಮ ಮತ್ತು ಓಡಿಹೋದ ಶಂಕರಪ್ಪ ರವರ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಠಾಣಾ ಮೊ.ಸಂ.86/2021 ಕಲಂ 13(1)(ಎ), 32,34,38(ಎ) ಕೆ.ಇ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

7. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.91/2021 ಕಲಂ. 87 ಕೆ.ಪಿ  ಆಕ್ಟ್:-

     ದಿನಾಂಕ:18/08/2021 ರಂದು ನಾನು ಠಾಣೆಯಲ್ಲಿರುವಾಗ ಮದ್ಯಾಹ್ನ 3:00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷಕರು ತನಗೆ ಪೋನ್ ಮಾಡಿ ಕೊಂಡೇನಹಳ್ಳಿ ಮತ್ತು ಚಲುಮೇನಹಳ್ಳಿ ಗ್ರಾಮಗಳ ಮದ್ಯೆವಿರುವ ಸರ್ಕಾರಿ ಅರಣ್ಯಪ್ರದೇಶದಲ್ಲಿ ಅಕ್ರಮವಾಗಿ ಕೆಲವರು ಹಣವನ್ನು ಪಣಕಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವವರ ಬಗ್ಗೆ ಬಾತ್ಮಿದಾರರಿಂದ ಮಾಹಿತಿ ಬಂದಿರುವುದಾಗಿ ತಿಳಿಸಿ ದಾಳಿ ನಡೆಸಲು ಎನ್.ಸಿ.ಆರ್ ದಾಖಲಿಸಿಕೊಂಡು ಪ್ರ.ವ.ವರದಿ ದಾಖಲಿಸಿಕೊಂಡು ದಾಳಿ ನಡೆಸಲು ಕೋರ್ಟಿನಿಂದ ಅನುಮತಿ ಪಡೆದುಕೊಳ್ಳಿ ತಾನು ದಾಳಿಗೆ ಬರುವುದಾಗಿ ತಿಳಿಸಿದ್ದರ ಮೇರೆಗೆ ಸದರಿ ಮಾಹಿತಿಯನ್ನು ಎನ್.ಸಿ.ಆರ್ ನಂ: 96/2021 ರೀತ್ಯ ದಾಖಲಿಸಿಕೊಂಡು ನಂತರ ಪ್ರ.ವ.ವರದಿ ದಾಖಲಿಸಿಕೊಳ್ಳಲು ಘನ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದ್ದು ಅಂದರ್-ಬಾಹರ್ ಇಸ್ಪೀಟ್ ಜೂಜಾಟದ ಮೇಲೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಮುಂದಿನ ಕ್ರಮ ಜರುಗಿಸಲು ಈ ಪ್ರ.ವ.ವರದಿ.

 

8. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.86/2021 ಕಲಂ. 15(A),32(3) ಕೆ.ಇ  ಆಕ್ಟ್:-

     ದಿನಾಂಕ:18/08/2021 ರಂದು ಸಂಜೆ 17-15 ಗಂಟೆಗೆ ಪಾತಪಾಳ್ಯ ಠಾಣೆಯ PSI ಸಾಹೇಬರು ಮಾಲು, ಅಸಲು ಪಂಚನಾಮೆಯೊಂದಿಗೆ ಠಾನೆಗೆ ಬಂದು ನೀಡಿದ ವರದಿ ಸಾರಾಂಶವೇನೆಂದರೆ, ದಿನಾಂಕ:18-08-2021 ರಂದು ತಾವು ಸಿಪಿಸಿ-119 ಗಿರೀಶ್ ಹಾಗೂ ಚಾಲಕ ಎಪಿಸಿ-98 ಶ್ರೀನಾಥ ರವರೊಂದಿಗೆ ಕೆಎ-40-ಜಿ-59 ಸರ್ಕಾರಿ ಜೀಪಿನಲ್ಲಿ ಗಸ್ತಿನಲ್ಲಿದ್ದಾಗ ಯರ್ರಪೆಂಟ್ಲ ಗ್ರಾಮದ ವರಲಕ್ಷ್ಮೀ ಕೋಂ ಲೇಟ್ ನರಸಿಂಹಪ್ಪ ಎಂಬುವವರು ತಮ್ಮ ಚಿಲ್ಲರೆ ಅಂಗಡಿಯ ಬಳಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ದಾಳಿ ಮಾಡುವ ಸಲುವಾಗಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಮೇಲ್ಕಂಡ ಸಿಬ್ಬಂದಿ ಹಾಗೂ ಪಂಚಾಯ್ತಿದಾರರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮೇಲ್ಕಂಡ ವರಲಕ್ಷ್ಮೀ ರವರು ತಮ್ಮ ಚಿಲ್ಲರೆ ಅಂಗಡಿಯ ಬಳಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ನಂತರ ತಾವು ಅಲ್ಲಿಗೆ ಹೋಗುತ್ತಿದ್ದಂತೆ ಜೀಪನ್ನು ಕಂಡು ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಆಸಾಮಿಗಳು ಹಾಗೂ ಅಂಗಡಿ ಮಾಲೀಕರು ಅಲ್ಲಿಂದ ಓಡಿ ಹೋಗಿದ್ದು, ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸ ತಿಳಿಯಲಾಗಿ ವರಲಕ್ಷ್ಮೀ ಕೋಂ ಲೇಟ್ ನರಸಿಂಹಪ್ಪ,  30 ವರ್ಷ, ಭೋವಿ ಜನಾಂಗ, ವ್ಯಾಪಾರ, ವಾಸ: ಯರ್ರಪೆಂಟ್ಲ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 90 ಎಂ.ಎಲ್.ನ ಓಲ್ಡ್ ಟಾವೆರ್ನ್ ವಿಸ್ಕಿಯ 15 ಟೆಟ್ರಾ ಪ್ಯಾಕೇಟ್ ಗಳು ಇದ್ದು, (1 ಲೀಟರ್ 350 ಎಂ.ಎಲ್, ಅದರ ಬೆಲೆ 526/-ರೂಗಳು), ಒಂದು ಲೀಟರ್ ನ ಒಂದು ಖಾಲಿ ಪ್ಲಾಸ್ಟಿಕ್ ವಾಟರ್ ಬಾಟಲ್, 1 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಮತ್ತು 90 ಎಂ.ಎಲ್ ನ ಒಂದು ಖಾಲಿ ಓಲ್ಡ್ ಟಾವೆರ್ನ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಇದ್ದು, ಮೇಲ್ಕಂಡ ಮಾಲುಗಳನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ಸಂಜೆ 4-00 ಗಂಟೆಯಿಂದ 4-45 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡು ಅಸಲು ಪಂಚನಾಮೆ, ಆರೋಪಿ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಮೇಲ್ಕಂಡ ವರಲಕ್ಷ್ಮೀ ರವರ ವಿರುದ್ದ ಸೂಕ್ತ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.274/2021 ಕಲಂ. 379 ಐ.ಪಿ.ಸಿ:-

     ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ  ಶ್ರೀ ಆನಂದ ಬಿನ್ ಪಿಳ್ಳಪ್ಪ, 48 ವರ್ಷ, ಗಾಣಿಗರು, ಅಡುಗೆ ಭಟ್ಟ ಕೆಲಸ, ಮಳಮಾಚನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ, ತಾನು ಅಡುಗೆ ಭಟ್ಟ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ತಾನು 2019 ನೇ ಸಾಲಿನಲ್ಲಿ ಕೆ.ಎ-67 ಇ-6730 ನೋಂದಣಿ ಸಂಖ್ಯೆಯ ಜುಪಿಟರ್ ದ್ವಿಚಕ್ರ ವಾಹನವನ್ನು ಖರೀದಿ ಮಾಡಿರುತ್ತೇನೆ. ದಿನಾಂಕ: 17/08/2021 ರಂದು ಬೆಳಿಗ್ಗೆ ತಾನು ತನ್ನ ದ್ವಿಚಕ್ರ ವಾಹನದಲ್ಲಿ ಹೊಸಕೋಟೆಯಲ್ಲಿ ಭಟ್ಟರ ಕೆಲಸಕ್ಕೆ ಹೋಗಿ ಕೆಲಸವನ್ನು ಮುಗಿಸಿಕೊಂಡು ವಾಪಸ್ಸು ತಮ್ಮ ಗ್ರಾಮಕ್ಕೆ ಬರಲು ಅದೇ ದಿನ ರಾತ್ರಿ ಸುಮಾರು 10:00 ಗಂಟೆ ಸಮಯದಲ್ಲಿ ಯಣ್ಣಂಗೂರು ಗ್ರಾಮದ ಗೇಟ್ ಸಮೀಪ ಬಂದಾಗ ತನಗೆ ಬಹಿರ್ದೆಸೆಗೆ ಅವಸರವಾಗಿ ತಾನು ತನ್ನ ದ್ವಿಚಕ್ರ ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ರಸ್ತೆಯಿಂದ ಸ್ವಲ್ಪ ದೂರದಲ್ಲಿ ಬಹಿರ್ದೆಸೆಗೆ ಕುಳಿತಿದ್ದಾಗ, ಆ ಸಮಯದಲ್ಲಿ ರಾತ್ರಿಯಲ್ಲಿ ರಸ್ತೆಯಲ್ಲಿ ಒಂದು ದ್ವಿಚಕ್ರ ವಾಹನದಲ್ಲಿ 03 ಜನ ಆಸಾಮಿಗಳು ಬಂದು ತನ್ನ ದ್ವಿಚಕ್ರ ವಾಹನದ ಬಳಿ ನಿಲ್ಲಿಸಿ ಆ ಪೈಕಿ ಒಬ್ಬ ಆಸಾಮಿ ತನ್ನ ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು, ಕಳ್ಳತನ ಮಾಡಿಕೊಂಡು ಹೊರಟು ಹೋಗಿರುತ್ತಾರೆ. ಆಗ ತಾನು ಗಾಬರಿಯಾಗಿ ಎದ್ದು, ಓಡಿ ಬಂದಾಗ ಕೆಳಗೆ ಬಿದ್ದು ಹೋಗಿರುತ್ತೇನೆ. ಕಳುವಾಗಿರುವ ತನ್ನ ದ್ವಿಚಕ್ರ ವಾಹನವು ಪರ್ಪಲ್ ಬಣ್ಣದಿಂದ ಕೂಡಿದ್ದು, ಇದು ಸುಮಾರು 60,000 ರೂ ಬೆಲೆ ಬಾಳುವುದ್ದಾಗಿರುತ್ತದೆ. ಆದ ಕಾರಣ ಕಳುವಾಗಿರುವ ತನ್ನ ಬಾಬತ್ತು ಕೆ.ಎ-67 ಇ-6730 ಜುಪೀಟರ್ ದ್ವಿಚಕ್ರ ವಾಹನವನ್ನು ಮತ್ತು ಅದನ್ನು ಕಳ್ಳತನ ಮಾಡಿಕೊಂಡು ಹೋದ 03 ಜನ ಆಸಾಮಿಗಳನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ. ತಾನು ನಿನ್ನೆ ಬಿದ್ದು ಹೋದ ಕಾರಣ ತನ್ನ ಮೈಯಲ್ಲಿ ನೋವು ಇದ್ದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ತನ್ನ ಹೇಳಿಕೆಯನ್ನು ನೀಡುತ್ತಿರುವುದಾಗಿ ನೀಡಿದ ಹೇಳಿಕೆ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

10.ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.275/2021 ಕಲಂ. 379 ಐ.ಪಿ.ಸಿ:-

     ದಿನಾಂಕ: 19/08/2021 ರಂದು ಮದ್ಯಾಹ್ನ 12-30 ಗಂಟೆಯಲ್ಲಿ ಪಿರ್ಯಾದಿದಾರಾದ ಶ್ರೀಮತಿ ಜಯಮಾಲ.ಎಸ್ ಕೋಂ ಪ್ರತಾಪ್ ಸಿ.ಕೆ, 36 ವರ್ಷ, ಚೌಡಸಂದ್ರ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು. ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಾರಳಾಗಿದ್ದು, ಬೆಂಗಳೂರು ಜಿಲ್ಲೆ ದೇವನಹಳ್ಳಿ ತಾಲ್ಲೂಕು ವಿಜಯಪುರದಲ್ಲಿರುವ ಮಾಯಾ ಆಂಗ್ಲ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿರುತ್ತೇನೆ. ತಾನು 2017 ನೇ ಸಾಲಿನಲ್ಲಿ ದೇವನಹಳ್ಳಿ ತಾಲ್ಲೂಕು ಬೂದಿಗೆರೆ ಗ್ರಾಮದ ಶ್ರೀಮತಿ ಜ್ಯೋತಿ ಕೋಂ ಮುನಿರಾಜು ಎಂಬುವವರಿಂದ ಕೆ.ಎ-43 ಯು-5306 ನೋಂದಣಿ ಸಂಖ್ಯೆಯ ಹೋಂಡಾ ಕಂಪನಿಯ ಆಕ್ಟೀವಾ ಹೋಂಡಾ ದ್ವಿಚಕ್ರ ವಾಹನವನ್ನು ಖರೀದಿಸಿ ಉಪಯೋಗಿಸುತ್ತಿರುತ್ತೇನೆ. ತಾನು ವಿಜಯಪುರದ ಶಾಲೆಗೆ ಕೆಲಸಕ್ಕೆ ಹೋಗಲು ಮೇಲ್ಕಂಡ ದ್ವಿಚಕ್ರ ವಾಹನದಲ್ಲಿ ನಮ್ಮ ಗ್ರಾಮದಿಂದ ಮೇಲೂರಿಗೆ ಹೋಗಿ, ದ್ವಿಚಕ್ರವಾಹನವನ್ನು ಮೇಲೂರು ಗ್ರಾಮ ಪಂಚಾಯ್ತಿ ಕಛೇರಿ ಮುಂಭಾಗ, ನಿಲ್ಲಿಸಿ ನಂತರ ಬಸ್ಸಿನಲ್ಲಿ ವಿಜಯಪುರಕ್ಕೆ ಹೋಗಿಬರುತ್ತಿರುತ್ತೇನೆ. ಎಂದಿನಂತೆ ತಾನು ದಿನಾಂಕ: 17/08/2021 ರಂದು ಬೆಳಿಗ್ಗೆ ಶಾಲೆಗೆ ಹೋಗಲು ತನ್ನ ಕೆ.ಎ-43 ಯು-5306 ದ್ವಿಚಕ್ರ ವಾಹನದಲ್ಲಿ ತಮ್ಮ ಗ್ರಾಮದಿಂದ ಮೇಲೂರಿಗೆ ಹೋಗಿ, ಬೆಳಿಗ್ಗೆ ಸುಮಾರು 9-30 ಗಂಟೆಯಲ್ಲಿ ದ್ವಿಚಕ್ರ ವಾಹನವನ್ನು ಮೇಲೂರು ಗ್ರಾಮ ಪಂಚಾಯ್ತಿ ಕಛೇರಿ ಮುಂದೆ ನಿಲ್ಲಿಸಿ, ಬೀಗ ಹಾಕಿ ನಂತರ ತಾನು ಬಸ್ ನಲ್ಲಿ ವಿಜಯಪುರಕ್ಕೆ ಹೋಗಿರುತ್ತೇನೆ. ಇದೇ ದಿನ ತಾನು ಕೆಲಸ ಮುಗಿಸಿಕೊಂಡು ಬಸ್ನಲ್ಲಿ ವಿಜಯಪುರದಿಂದ ಮೇಲೂರಿಗೆ ಬಂದು, ಮದ್ಯಾಹ್ನ 3-00 ಗಂಟೆಯಲ್ಲಿ ಗ್ರಾಮ ಪಂಚಾಯ್ತಿ ಕಛೇರಿ ಮುಂದೆ ಬಂದು ನೋಡಿದಾಗ, ಸ್ಥಳದಲ್ಲಿ ನಿಲ್ಲಿಸಿದ್ದ ಸುಮಾರು 20,000/- ರೂ ಬೆಲೆಬಾಳುವ ತನ್ನ ಕೆ.ಎ-43 ಯು-5306 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನ ಇರಲಿಲ್ಲ ನಂತರ ಅಕ್ಕಪಕ್ಕದಲ್ಲಿ ವಿಚಾರಿಸಲಾಗಿ ಯಾವುದೇ ಸುಳಿವು ಸಿಕ್ಕಿರುವುದಿಲ್ಲ. ತನ್ನ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು, ಕಳುವಾಗಿರುವ ತನ್ನ ವಾಹನ ಮತ್ತು ಕಳ್ಳರನ್ನು ಪತ್ತೆ ಮಾಡಿ ಕಾನೂನು ರಿತ್ಯಾ ಕ್ರಮ ಜರುಗಿಸಲು ಕೋರುತ್ತೇನೆ. ತಾವು ಇದುವರೆವಿಗೂ ಅಕ್ಕಪಕ್ಕದ ಊರುಗಳಲ್ಲಿ ಹುಡುಕಾಡಿಕೊಂಡಿದ್ದು, ದ್ವಿಚಕ್ರ ವಾಹನ ಸಿಗದೇ ಇದ್ದುದರಿಂದ ಈ ದಿನ ತಡವಾಗಿ ದೂರು ನೀಡುತ್ತಿರುವುದಾಗಿ ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

 

11. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.102/2021 ಕಲಂ. 307 ಐ.ಪಿ.ಸಿ & 3,25 INDIAN ARMS ACT, 1959:-

     ದಿನಾಂಕ.18.08.2021 ರಂದು  ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೊಮೋವನ್ನು ಪಡೆದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಗೋವಿಂದಪ್ಪ ಬಿನ್ ವೆಂಕಟೇಶಪ್ಪ ರವರಿಂದ ಪಡೆದು ಬಂದ ಹೇಳಿಕೆ ಸಾರಾಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಮ್ಮ ಸ್ವಂತ ಊರು ಶಿಡ್ಲಘಟ್ಟ ತಾಲ್ಲೂಕು ಆನೆ ಮಡಗು ಗ್ರಾಮವಾಗಿರುತ್ತೆ. ನಾನು ಸುಮಾರು 14 ವರ್ಷಗಳ ಹಿಂದೆ ಶಿಡ್ಲಘಟ್ಟಕ್ಕೆ ಬಂದು ಗಾರೆ ಮೇಸ್ತ್ರಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ: 18/08/2021 ರಂದು ಬೆಳಿಗ್ಗೆ ಸುಮಾರು 7-30 ಗಂಟೆಯಲ್ಲಿ ಮಾರುತಿ ನಗರದಲ್ಲಿರುವ ನಮ್ಮ ಸ್ವಂತ ಮನೆಯಿಂದ ಗಾರೆ ಕೆಲಸಕ್ಕೆ ಹೋಗಲು ನನ್ನ ದ್ವಿಚಕ್ರ ವಾಹನದಲ್ಲಿ ಶಿಡ್ಲಘಟ್ಟ ನಗರಕ್ಕೆ ಬರಲು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ MSIL ನಿಂದ ಸ್ವಲ್ಪ ಮುಂದೆ ಹೊಸದಾಗಿ ಮಾಡಿರುವ ಲೇಔಟ್ ಗೇಟ್ ಸರಿಯಾಗಿ ಯಾರೋ ಅಪರಿಚಿತರು ಬಂದೂಕಿನಿಂದ ಶೂಟ್ ಮಾಡಿದ ಶಬ್ದ ಬಂದು ಅಷ್ಟರಲ್ಲಿ ಬಂದೂಕಿನಲ್ಲಿರುವ ಗುಂಡುಗಳು ನನ್ನ ಬೆನ್ನಿನ ಮೇಲ್ಬಾಗ, ತಲೆಯ ಹಿಂಭಾಗ,ಎಡ ಕಿವಿ ಮೇಲ್ಬಾಗ ತಗುಳಿ ನನಗೆ ರಕ್ತಗಾಯಗಳಾಗಿರುತ್ತೆ. ತಕ್ಷಣ ನನಗೆ ತಲೆ ಸುತ್ತಿ ದ್ವಿ ಚಕ್ರ ವಾಹನ ಸಮೇತ ಕೆಳಗೆ ಬಿದ್ದು ಹೋದೆ ನಂತರ ರಸ್ತೆಯಲ್ಲಿ ಬರುವ ಯಾರೋ ಸಾರ್ವಜನಿಕರು ನನ್ನನ್ನು ಉಪಚರಿಸಿ ನನ್ನ ಹೆಂಡತಿ ಸುಮಿತ್ರಾರವರಿಗೆ ವಿಚಾರ ತಿಳಿಸಿ ತಕ್ಷಣ ನನ್ನ ಹೆಂಡತಿ ಮತ್ತು ನನ್ನ ಜೊತೆ ಕೆಲಸ ಮಾಡುವ ಅರುಣ್ ಬಿನ್ ಸುರೇಶಪ್ಪ ಮಾರುತಿ ನಗರ ರವರು ನನ್ನನ್ನು ಯಾವುದೋ ಆಟೋ ವಾಹನದಲ್ಲಿ ಕರೆದುಕೊಂಡು ಚಿಕಿತ್ಸೆ ಬಗ್ಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಯಾರೋ ಅಪರಿಚಿತರು ನನ್ನ ಮೇಲೆ ಯಾವುದೋ ದ್ವೇಶ ಇಟ್ಟುಕೊಂಡು ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಅವರು ತಂದಿದ್ದ ಯಾವುದೋ ಬಂದೂಕಿನಿಂದ ಗುಂಡು ಹಾರಿಸಿದ್ದರಿಂದ ನನಗೆ ಗಾಯಗಳಾಗಿರುತ್ತೆ. ಅಪರಿಚಿತ ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಈ ಪ್ರಕರಣದ ದಾಖಲಿಸಿರುತ್ತೆ.

 

12.ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.103/2021 ಕಲಂ. 379 ಐ.ಪಿ.ಸಿ :-

     ದಿನಾಂಕ.19.08.2021 ರಂದು ಬೆಳಿಗನ ಜಾವ 2.45 ಗಂಟೆಗೆ ಪಿರ್ಯಾದಿ ಮಣಿ ಬಿನ್ ಲೇಟ್ ಗಂಗಪ್ಪ, ಪ್ರೇಮನಗರ, ಶಿಡ್ಲಘಟ್ಟ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ತಾನು ಜೀವನಾಧಾರಕ್ಕೆ ವ್ಯವಸಾಯದ ಜೊತೆಗೆ ಮನೆಯಲ್ಲಿ ಒಚಿದು ಸಈಮೆ ಹಸುವನ್ನು ಸಾಕಿಕೊಂಡಿರುತ್ತೇನೆ. ದಿನಾಂಕ.18.08.2021 ರಂದು ರಾತ್ರಿ ಅಂದರೆ ದಿನಾಂಕ.19.08.2021 ರಂದು ಬೆಳಗಿನ ಜಾವ 1.30 ಗಂಟೆಯಲ್ಲಿ ನಮ್ಮ ಮನೆಯ ಬಳಿ ನಾಯಿ ಬೊಗಳುವ ಶಬ್ದ ಕೇಳಿ ನಾನು ಮನೆಯಿಂದ ಹೊರಗೆ ಬಂದು ನೋಡಿದಾಗ ಯಾರೋ ಅಪರಿಚಿತ ವ್ಯಕ್ತಿ ಮನೆಯ ಮುಂದೆ ಸೀಮೆ ಸಹುಗಳ ಶೆಡ್ ನಲ್ಲಿ ಕಟ್ಟು ಹಾಕಿರುವ ಸುಮಾರು 50,000/-ರೂ ಬೆಲೆ ಬಾಳುವ ಸೀಮೆ ಹಸುವನ್ನು ಹಗ್ಗ ಬಿಚ್ಚಿಕೊಂಡು ಕಳ್ಳತನ ಮಾಡಿ ಚಿಂತಾಮಣಿ ರಸ್ತೆ ಕಡೆ ಹೊಡೆದು ಕೊಂಡು ಹೋಗುತ್ತಿದ್ದು, ಆಗ ನಾನು ಯಾರೋ ಕಳ್ಳ ಸೀಮೆ ಹಸು ಹೊಡೆದುಕೊಂಡು ಹೋಗುತ್ತಿದ್ದಾರೆಂದು ಕಿರುಚಿಕೊಮಡಾಗ ಪಕ್ಕದ ಮನೆಗಳ ಮಂಜು, ದೇವರಾಜ ಮತ್ತು ರವಿ ರವರು ಬಂದು ಎಲ್ಲರೂ ಆ ವ್ಯಕ್ತಿಯನ್ನು ಹಿಡಿದು ವಿಚಾರಿಸಲಾಗಿ ಆಸ್ಲಾಂ ಎಂದು ಮತ್ತೊಂದು ಬಾರಿ ಇಸ್ಮಾಯಿಲ್ ಬಿನ  ಸುಭಾನ್ ಸಾಬ್, 33 ವರ್ಷ, ಆಟೋ ಚಾಲಕ, ಕೆ.ಕೆ.ಪೇಟೆ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿರುತ್ತಾರೆ. ನಾವು ಏಕೆ ಸೀಮೆ ಹಸು ಕಳ್ಳತನ ಮಾಡುತ್ತಿರುವೆ ಎಂದು ಕೇಳಿದ್ದಕ್ಕೆ ನನ್ನದು ತಪ್ಪಾಗಿರುತ್ತದೆ ಎಂದು ಒಪ್ಪಿಕೊಂಡಿರುತ್ತಾನೆ. ನಮ್ಮ ಮನೆ ಬಳಿ ಬರಲು ಆತನ ದ್ವಿಚಕ್ರ ವಾಹನ KA.04.HJ.5317 ಟಿ.ವಿ.ಎಸ್ ವೆಗೋ ವಾಹನದಲ್ಲಿ ಬಂದಿರುತ್ತಾರೆ. ದ್ವಿಚಕ್ರ ವಾಹನ ಮನೆ ಬಳಿ ಇರುತ್ತೆ. ನಮ್ಮ ಸೀಮೆ ಹಸುವನ್ನು ನಮ್ಮ ವಶಕ್ಕೆ ಪಡೆದುಕೊಂಡಿರುತ್ತೇವೆ. ಆದ್ದರಿಂದ ನಮ್ಮ ಸಈಮೆ ಹಸು ಕಳ್ಳತನ ಮಾಡಲು ಬಂದಿರುವ ಇಸ್ಲಾಯಿಲ್ ರವರನ್ನು ನಿಮ್ಮ ವಶಕ್ಕೆ ಒಪ್ಪಿಸುತ್ತಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 19-08-2021 07:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080