ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.161/2021 ಕಲಂ. 324,504,506 ಐ.ಪಿ.ಸಿ:-

          ದಿನಾಂಕ: 18/06/2021 ರಂದು ರಾತ್ರಿ 11-15 ಗಂಟೆಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ತೆರಳಿ ಗಾಯಾಳು ಮದ್ದಿರೆಡ್ಡಿ ಬಿನ್ ಲೇಟ್ ಚೌಡಪ್ಪ, 61 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ:ಬೂರಗಮಡಗು ಗ್ರಾಮ ಬಾಗೇಪಲ್ಲಿ ತಾಲ್ಲೂಕು. ರವರ ಹೇಳಿಕೆಯ ಸಾರಾಂಶವೇನೆಂದರೆ ನಮ್ಮ ತಂದೆ ಚೌಡಪ್ಪ, ತಾಯಿ ಮಾರಮ್ಮ ರವರಿಗೆ 5 ಜನ ಮಕ್ಕಳಿದ್ದು 1ನೇ ವೆಂಕಟರಾಯಪ್ಪ, 2ನೇ ಮದ್ದಕ್ಕ, 3ನೇ ವೆಂಕಟಮ್ಮ, 4ನೇ ಪೋತುಲಪ್ಪ, 5ನೇ ಮದ್ದಿರೆಡ್ಡಿ ಆಗಿರುತ್ತೇವೆ.ಎಲ್ಲರಿಗೂ ವಿವಾಹಗಳಾಗಿದ್ದು ಅಣ್ಣ ತಮ್ಮಂದಿರುಗಳಾದ ಪೋತುಲಪ್ಪ ಮತ್ತು ನಾನು ಜಮೀನು ವಿಭಾಗ ಮಾಡಿಕೊಂಡು ಪೋತುಲಪ್ಪ ಮತ್ತು ನನ್ನ ಹೆಸರಿಗೆ ಖಾತೆಗಳಾಗಿರುತ್ತವೆ. ಹೀಗಿರುವಾಗ್ಗೆ ನನ್ನ ಅಣ್ಣ ಪೋತುಲಪ್ಪ ರವರ ಮಗನಾದ ಮಂಜುನಾಥ ಆಗಾಗ ಜಮೀನು ವಿಭಾಗ ಸರಿಯಾಗಿ ಮಾಡಿಲ್ಲವೆಂದು ನನ್ನ ಮೇಲೆ ಗಲಾಟೆ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಮಂಜುನಾಥ ಸರಿಹೋತ್ತಾನೆಂದು ಸುಮ್ಮನಿದ್ದೆನು. ಹೀಗಿರುವಾಗ ದಿನಾಂಕ:18/06/2021 ರಂದು ಸಂಜೆ ಸುಮಾರು 7-30 ಗಂಟೆಯಲ್ಲಿ ನಮ್ಮ ಮನೆಯ ಬಳಿ ಬಂದ ಮಂಜುನಾಥನು ನನ್ನ ಅಳಿಯನಾದ ವೆಂಕಟರೆಡ್ಡಿ ಜಿ ಎಲ್. ಬಿನ್ ಲಕ್ಷ್ಮೀನಾರಾಯಣಪ್ಪ, 33 ವರ್ಷ, ವಕ್ಕಲಿಗರು, ಜಿರಾಯ್ತಿ, ಬೈರೇಪಲ್ಲಿ ಗ್ರಾಮ ಚಿಂತಾಮಣಿ,ತಾಲ್ಲೂಕು ರವರನ್ನು ಕುರಿತು ನಮ್ಮ ಜಮೀನು ಉಳುಮೆ ಮಾಡಲು ಟ್ರಾಕ್ಟರ್ ತೆಗೆದುಕೊಂಡು ಬಾ ಎಂದು ಕೇಳಿದೆನು, ಅದಕ್ಕೆ ನನ್ನ ಅಳಿಯನಾದ ವೆಂಕಟರೆಡ್ಡಿ ರವರು  ನನಗೆ ಕೆಲಸವಿದೆ ಮಂಗಳಾವಾರ ಬರುತ್ತೇನೆಂದು ಹೇಳಿದನು, ಇದಕ್ಕೆ ಕೋಪಗೊಂಡ ಮಂಜುನಾಥನು ನಾನು ಜಮೀನು ಉಳುಮೆ ಮಾಡಲು ಕರೆದರೆ ಬರುವುದಿಲ್ಲವೆಂದು ಹೇಳುತ್ತೀಯೇನೋ ಲೋಫರ್ ನನ್ನ ಮಗನೆ, ಎಂದು ಅವಾಚ್ಯ ಶಬ್ದಗಳಿಂದ ಬೈದು ನಿಮಗೆ ಏನು ಮಾಡುತ್ತೇನೆ ನೋಡಿ ಎಂದು ತನ್ನ ಮನೆಯಿಂದ ಮಚ್ಚು ಕುಡುಗೋಲನ್ನು ತೆಗೆದುಕೊಂಡು ಬಂದು ನೀನು ಜಮೀನು ಸಹ ನನಗೆ ಸರಿಯಾಗಿ ಭಾಗ ಮಾಡಿಕೊಟ್ಟಿಲ್ಲ ನಿನ್ನಮ್ಮನ್ ನಿನ್ನಕ್ಕನ್ ಇತ್ಯಾದಿಯಾಗಿ ಬೈದು ಮಚ್ಚು ಕುಡುಗೋಲಿನಿಂದ ನನ್ನ ತಲೆಗೆ, ಎಡಕೈಗೆ, ಎಡ ಕೆನ್ನೆಗೆ ಹೊಡೆದು ರಕ್ತಗಾಯವನ್ನುಂಟು ಮಾಡಿದನು. ಬಿಡಿಸಲು ಅಡ್ಡ ಬಂದ ನನ್ನ ಹೆಂಡತಿಯಾದ ಸಾವಿತ್ರಮ್ಮ ರವರಿಗೆ ಅದೇ ಮಚ್ಚು ಕುಡುಗೋಲಿನಿಂದ ಬಲ ಕೆನ್ನಗೆ, ಬಲ ಭುಜದ ಬಳಿ ಹೊಡೆದು ರಕ್ತಗಾಯವನ್ನುಂಟು ಮಾಡಿದನು ಬಿಡಿಸಲು ಬಂದ ನನ್ನ ಅಳಿಯನಾದ ವೆಂಕಟರೆಡ್ಡಿ ಜಿ ಎಲ್ ರವರಿಗೆ ಅದೇ ಮಚ್ಚು ಕುಡುಗೋಲಿನಿಂದ ಎಡ ಮುಂಗೈಗೆ ಹೊಡೆದು ರಕ್ತಗಾಯವನ್ನುಂಟು ಮಾಡಿರುತ್ತಾನೆ. ಆಗ ನಮ್ಮ ಪಕ್ಕದ ಮನೆಯ ವಾಸಿ ಮಂಜುನಾಥ ಬಿನ್ ನಂಜುಂಡಪ್ಪ ಹಾಗೂ ಇತರರು ಜಗಳವನ್ನು ಬಿಡಿಸಿರುತ್ತಾರೆ. ಗಾಯಗೊಂಡಿದ್ದ ನಮ್ಮನ್ನು ರಾಮಾಂಜಿನಪ್ಪ ಬಿನ್ ವೆಂಕಟರವಣಪ್ಪ ರವರು ಯಾವುದೋ ಆಟೋದಲ್ಲಿ ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ನನಗೆ ಅವಾಚ್ಯ ಶಬ್ದಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿ ಮಚ್ಚು ಕುಡಗೋಲಿನಿಂದ ಹೊಡೆದು ರಕ್ತಗಾಯಪಡಿಸಿರುವ ಮಂಜುನಾಥ ಬಿನ್ ಪೋತುಲಪ್ಪ, 35 ವರ್ಷ, ವಕ್ಕಲಿಗರು, ಜಿರಾಯ್ತಿ, ಬೂರಗಮಡಗು ಗ್ರಾಮ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ಹೇಳಿಕೆಯನ್ನು ಪಡೆದು ದಿನಾಂಕ:19/06/2021 ರಂದು ಬೆಳಗಿನ ಜಾವ 12-15 ಗಂಟೆಗೆ ಠಾಣೆಗೆ ವಾಪಸ್ಸಾಗಿ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.86/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ: 19.06.2021 ರಂದು ಮದ್ಯಾಹ್ನ 12-20  ಗಂಟೆ ಸಮಯದಲ್ಲಿ ಪಿ.ಎಸ್.ಐ ಸಾಹೇಬರವರು ಠಾಣೆಯಲ್ಲಿ ನೀಡಿದ ದೂರನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ಈ ದಿನ ದಿನಾಂಕ: 19/06/2021 ರಂದು ಮದ್ಯಾಹ್ನ 12-10  ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸರಹದ್ದಿಗೆ ಸೇರಿದ ಚಿಕ್ಕಬಳ್ಳಾಪುರ ತಾಲ್ಲೂಕು  ಹುನೇಗಲ್ ಗ್ರಾಮದ ವಾಸಿ ಗುರ್ರಪ್ಪ ಬಿನ್ ಮುನಿದಾಸಪ್ಪ.55 ವರ್ಷ.ಜಿರಾಯ್ತಿ.ಭೋವಿ ಜನಾಂಗ.ಹುನೇಗಲ್ ಗ್ರಾಮದ ತನ್ನ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೇ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿದ್ದು, ಈ ಬಗ್ಗೆ ಸದರಿ ಆಸಾಮಿಯ ವಿರುದ್ದ ಕಲಂ: 15[ಎ], 32[3] ಕೆ.ಇ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರ.ವ.ವರದಿ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.277/2021 ಕಲಂ. 323,324,447,504,506,34 ಐ.ಪಿ.ಸಿ :-

          ದಿನಾಂಕ: 18/06/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಎಂ.ಎನ್.ರವಿ ಬಿನ್ ಲೇಟ್ ನಾರಾಯಣಸ್ವಾಮಿ, 38 ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ಮೈಲಾಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 9.15 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದ ಸರ್ವೇ ನಂಬರ್ 186/2 ರಲ್ಲಿ ತಮ್ಮ ತಾಯಿಯ ಹೆಸರಿನಲ್ಲಿ 20 ಗುಂಟೆ ಜಮೀನಿದ್ದು, ಸದರಿ ಜಮೀನಿನ ಬದುವಿನ ಮೇಲೆ ಎರಡು ಮೂರು ತೊಗರೀಮರ(ತಬಸಿ ಮರ) ಗಳಿರುತ್ತೆ. ಹೀಗಿರುವಾಗ ಈ ದಿನ ದಿನಾಂಕ: 18/06/2021 ರಂದು ಮದ್ಯಾಹ್ನ 1.30 ಗಂಟೆ ಸಮಯದಲ್ಲಿ ತಾನು ತಮ್ಮ ಮನೆಯಲ್ಲಿರುವ ಮೇಕೆಗಳಿಗೆ ಹೊಲದಲ್ಲಿ ಬೆಳೆದರುವ ತೊಗರೀಮರದ ಸೊಪ್ಪನ್ನು ಕತ್ತರಿಸಿಕೊಂಡು ಬರಲು ಹೋದಾಗ ದೊಡ್ಡಕೊಂಡ್ರಹಳ್ಳಿ ಗ್ರಾಮದ ವಾಸಿಯಾದ ವೆಂಕಟರಾಯಪ್ಪ ಬಿನ್ ನರಸಿಂಹಪ್ಪ ರವರು ಅವರ ಮೇಕೆಗಳನ್ನು ಮೇಯಿಸಿಕೊಂಡು ತಮ್ಮ ತೊಗರೀ ಮರದಲ್ಲಿರುವ ಸೊಪ್ಪನ್ನು ಹೊಡೆದು ಮೇಕೆಗಳಿಗೆ ಹಾಕುತ್ತಿದ್ದನು. ಇದನ್ನು ಕಂಡ ತಾನು ಏಕೆ ನಮ್ಮ ಮರದ ಸೊಪ್ಪನ್ನು ಕಡೆಯುತ್ತಿದ್ದೀಯಾ, ನಮಗೂ ಮೇಕೆಗಳಿವೆ ಎಂತ ಕೇಳಿದ್ದಕ್ಕೆ ಆತನು ಇದು ಸರ್ಕಾರಿ ಜಮೀನು ಎಂದು ತನ್ನ ಮೇಲೆ ವಿನಾ ಕಾರಣ ಜಗಳ ತೆಗೆದು ಅವರ ತಂದೆಯನ್ನು ಪೋನ್ ಮಾಡಿ ಕರೆಸಿದನು. ತಾನು ಅವರು ಕಟ್ ಮಾಡಿ ಕೆಳಗೆ ಬಿಸಾಡಿದ್ದ ಸೊಪ್ಪನ್ನು ಹೊಂದಿಸಿಕೊಳ್ಳುತ್ತಿದ್ದಾಗ ಮೇಲ್ಕಂಡ ವೆಂಕಟರಾಯಪ್ಪ ಹಾಗೂ ಆತನ ತಂದೆ ನರಸಿಂಹಪ್ಪ ಬಿನ್ ಲೇಟ್ ವೆಂಕಟರಾಯಪ್ಪ ರವರು ತಮ್ಮ ಜಮೀನಿನೊಳಗೆ ಅಕ್ರಮವಾಗಿ ಬಂದು ತನ್ನನ್ನು ಕೆಟ್ಟ ಮಾತುಗಳಿಂದ ಬೈಯ್ಯುತ್ತಾ, ಆ ಪೈಕಿ ನರಸಿಂಹಪ್ಪ ರವರು ಸೊಪ್ಪು ಕೊಯ್ಯಲು ತಂದಿದ್ದ ಮಚ್ಚು(ಕುಡುಗೂಲು) ನಿಂದ ತನ್ನ ತಲೆಯ ಮೇಲ್ಬಾಗದ ಬಲಗಡೆ ಹೊಡೆದು ರಕ್ತಗಾಯ ಪಡಿಸಿದನು. ವೆಂಕಟರಾಯಪ್ಪ ರವರು ಕೋಲಿನಿಂದ ಮೈ ಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿದನು. ನಂತರ ಇಬ್ಬರೂ ತನ್ನನ್ನು ಹೊಲದಲ್ಲಿ ಹೊರಳಾಡಿಸಿ, ಒದ್ದು, ಕೈಗಳಿಂದ ಹೊಡೆದಿರುತ್ತಾರೆ. ಅಷ್ಟರಲ್ಲಿ ತಮ್ಮ ಗ್ರಾಮದ ನರಸಿಂಹಮೂರ್ತಿ ಹಾಗೂ ಹರೀಶ ರವರು ಬಂದು ಜಗಳ ಬಿಡಿಸಿದಾಗ ಮೇಲ್ಕಂಡವರು ಸ್ಥಳದಿಂದ ಹೋಗುವಾಗ ತನ್ನನ್ನು ಕುರಿತು ಈ ದಿನ ತಪ್ಪಿಸಿಕೊಂಡಿದ್ದೀಯಾ, ನಿನ್ನನ್ನು ಸಾಯಿಸದೆ ಬಿಡುವುದಿಲ್ಲವೆಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡ ವೆಂಕಟರಾಯಪ್ಪ ಮತ್ತು ಆತನ ತಂದೆ ನರಸಿಂಹಪ್ಪ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

4. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.111/2021 ಕಲಂ. 506,504,143,144,147,148,149,448,323 ಐ.ಪಿ.ಸಿ :-

          ದಿನಾಂಕ 19/06/2021 ರಂದು ಪಿರ್ಯಾದುದಾರರಾದ ವೆಂಕಟಾಚಲಪತಿ ಬಿನ್ ಲೇಟ್ ಮುನಿವೆಂಕಟಪ್ಪ,  ಎಸ್.ಸಿ ಜನಾಂಗ, ಮಾಳಪಲ್ಲಿ, ಚಿಂತಾಮಣಿ ನಗರ ರವರು ನೀಡಿದ ದೂರಿನ ಸಾರಾಂಶವೇನೆಮದರೆ,  ನಮಗೂ ಹಾಗೂ ಲೇಟ್ ಮುಳವಾಗಿಲಪ್ಪ ರವರ ಕುಟುಂಬದವರಿಗೆ ಸುಮಾರು ವರ್ಷಗಳಿಂದ ಹಳೇ ವೈಶಮ್ಯ ದಿಂದ ಆಗಾಗ ಗಲಾಟೆಗಳು ಆಗುತ್ತಿದ್ದು ಈ ವಿಚಾರದಲ್ಲಿ ನಮಗೂ ಮತ್ತು  ಲೇಟ್ ಮುಳವಾಗಿಲಪ್ಪ ರವರ ಕುಟುಂಬದವರಿಗೆ ಹಿರಿಯರು ರಾಜಿ ಪಂಚಾಯ್ತಿ ಮಾಡಿರುತ್ತಾರೆ. ಹೀಗಿರುವಾಗ ದಿನಾಂಕ 15/06/2021 ರಂದು ರಾತ್ರಿ ಸುಮಾರು 8-30 ಗಂಟೆ ಸಮಯದಲ್ಲಿ  ನಾನು ಹಾಗೂ ನಮ್ಮ ಕುಟುಂಬದವರು ನಮ್ಮ ಮನೆಯಲ್ಲಿದ್ದಾಗ  ಲೇಟ್ ಮುಳವಾಗಿಲಪ್ಪ ರವರ ಕುಟುಂಬದವರಾದ ಬಾಬು ಬಿನ್ ಲೇಟ್ ಮುಳವಾಗಿಲಪ್ಪ, ರವಿ ಬಿನ್ ಲೇಟ್ ಮುಳವಾಗಿಲಪ್ಪ, ಜಯರಾಜ್ ಬಿನ್ ಅಂಜಿನಪ್ಪ, ಪಾಂಡು ಬಿನ್ ಮಂಜುನಾಥ, ಸುರೇಶ್ ಬಿನ್ ನಾರಾಯಣಸ್ವಾಮಿ , ಸುಮಿತ್ರ ಕೋಂ ಆಂಜಿನಪ್ಪ, ಅಂಜಪ್ಪರವರು ಅಕ್ರಮ ಗುಂಪು ಕಟ್ಟಿಕೊಂಡು ಕೈಯಲ್ಲಿ ದೊಣ್ಣೆ ಮತ್ತು ಕಬ್ಬಿಣದ ರಾಡು ಹಿಡಿದುಕೊಂಡು ಏಕಾ ಏಕಿ ನಮ್ಮ ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದ ನನ್ನ, ನನ್ನ ಹೆಂಡತಿಯನ್ನು ಹಾಗೂ, ನನ್ನ ಮಕ್ಕಳಾದ ತೇಜಸ್ವಿನಿ ಮತ್ತು ಅನಿಲ್ ಕುಮಾರ್ ರವರನ್ನು ಮನೆಯಿಂದ ಎಳೆದಾಡಿ ದೈಹಿಕವಾಗಿ ಹಲ್ಲೆ ಮಾಡಿ  ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ನಂತರ ನನ್ನನ್ನು ಹಾಗೂ ನನ್ನ ಮಗ ಮತ್ತು ಮಗಳನ್ನು ಕೈಗಳಿಂದ ಹೊಡೆದು   ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

 

5. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.69/2021 ಕಲಂ. 392 ಐ.ಪಿ.ಸಿ :-

          ದಿನಾಂಕ:18-06-2021 ರಂದು ಮದ್ಯಾಹ್ನ 03-30 ಗಂಟೆಗೆ ಪಿರ್ಯಾಧಿಯಾದ ಮುನಿರಾಜು ಬಿನ್ ಚೌಡಪ್ಪ, 35 ವರ್ಷ,ಗ್ರಾಹಕರ ಸಂಪರ್ಕ ಕೆಲಸ, ಸಿಂಗ್ ಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಉಜ್ಜೀವನ್ ಸ್ಮಾಲ್ ಪೈನಾನ್ಸ್ ಬ್ಯಾಂಕ್, ಚಿಂತಾಮಣಿ ಶಾಖೆ, ಮುಖ್ಯ ಕೋರಮಂಗಲದಲ್ಲಿರುತ್ತದೆ. ತಾನು ಚಿಂತಾಮಣಿ ಶಾಖೆಯಲ್ಲಿ ಗ್ರಾಹಕರ ಸಂಪರ್ಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದು, ದಿನಾಂಕ:18-06-2021 ರಂದು ಗ್ರಾಹಕರ ಸಾಲದ ಕಂತಿನ ಹಣವನ್ನು ಕಟ್ಟಿಸಿಕೊಳ್ಳುವ ಸಲುವಾಗಿ ಕುರುಬರಹಳ್ಳಿ, (ಕುರ್ಲಪಲ್ಲಿ), ಹಳೇಹಳ್ಳಿ, ಕರಿಯಪ್ಪನಹಳ್ಳಿ, ಕೊಮ್ಮಸಂದ್ರ ಹಳ್ಳಿಗಳಿಗೆ ಬೇಟಿ ನೀಡಿರುತ್ತೇನೆ. ಒಟ್ಟು 62 ಗ್ರಾಹಕರ ಪೈಕಿ 56 ಗ್ರಾಹಕರ ಕಂತಿನ ಹಣವನ್ನು ಕಟ್ಟಿರುತ್ತಾರೆ. ಒಟ್ಟು ಮೊತ್ತ 1,21,157 /- ರೂಗಳಾಗಿರುತ್ತದೆ. ತಾನು ಕಂತಿನ ಹಣವನ್ನು ಕಟ್ಟಿಸಿಕೊಂಡು ಶಾಖೆಯಲ್ಲಿ ಜಮಾ ಮಾಡಲು ಕೊಮ್ಮಸಂದ್ರದಿಂದ ಕೋರ್ಲಪರ್ತಿ ಮಾರ್ಗದಲ್ಲಿ ಬರಬೇಕಾದರೆ, ಕೊಮ್ಮಸಂದ್ರದಿಂದ ಸುಮಾರು 1 ಕಿ.ಮೀ ದೂರದಲ್ಲಿ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಇಬ್ಬರು ವ್ಯಕ್ತಿಗಳು ನಿಂತುಕೊಂಡಿದ್ದರು. ಹಾಗೂ ತಾನು ಬರುವಾಗ ತನ್ನನ್ನು ತೆಡೆದು ಮುಂದೆ ರಸ್ತೆ ಮುಚ್ಚಲಾಗಿದೆ. ಆದ್ದರಿಂದ ಬೇರೆ ಮಾರ್ಗದಲ್ಲಿ ಹೋಗಿ ಎಂದು ಸಲಹೆ ಕೊಡುತ್ತಾರೆ. ಅವರ ಮಾತನ್ನು ನಂಭಿ ತಾನು ತನ್ನ ಗಾಡಿಯನ್ನು ತಿರುಗಿಸಿಕೊಳ್ಳುತ್ತಿದ್ದಾಗ  ಇಬ್ಬರು ತನ್ನ ಬಳಿ ಬಂದು ಕೆಳಗೆ ತಳ್ಳಿದರು. ತಳ್ಳಿದ ನಂತರ ತಾನು ಕೆಳಗೆ ಬಿದ್ದಾಗ ತನ್ನ ಮುಖಕ್ಕೆ ಅವರು ಕಾರದ ಪುಡಿಯನ್ನು ಎರಚಿರುತ್ತಾರೆ.  ಹಾಗು ತನ್ನನ್ನು ಚಾಕು ತೋರಿಸಿ ತನ್ನ ಬೆನ್ನಿಗೆ ಹಾಕಿಕೊಂಡಿದ್ದ ಬ್ಯಾಗನ್ನು ಕಸಿದುಕೊಂಡು , ಕಪ್ಪು ಬಣ್ಣದ  ಪಲ್ಸರ್ ಗಾಡಿಯಲ್ಲಿ ಹತ್ತಿಕೊಂಡು ಕೋರ್ಲಪರ್ತಿ ಮಾರ್ಗವಾಗಿ ಹೋರಟರು. ತಾನು ತನ್ನ ಕಣ್ಣು ಉಜ್ಜಿಕೊಂಡು ತನ್ನ ಗಾಡಿಯಲ್ಲಿ ಕೊಮ್ಮಸಂದ್ರ ಗ್ರಾಮವರೆಗೂ ಹಿಂಬಾಲಿಸುತ್ತೇನೆ. ಆದರೆ ಅವರು ಗಾಡಿಯನ್ನು ಜೋರಾಗಿ ಓಡಿಸಿಕೊಂಡು ಹೋರಟು ಹೋಗಿರುತ್ತಾರೆ.  ತಾನು ಅವರನ್ನು ಹಿಂಬಾಲಿಸುವಾಗ ಅವರ ಗಾಡಿಯ ನಂಬರ್ ನ್ನು ನೋಡಿರುತ್ತೇನೆ. ಅದು ಏನೆಂದರೆ HQ-2882 ಆಗಿರುತ್ತದೆ ಆ ಅಪರಿಚಿತ ವ್ಯಕ್ತಿಗಳು ಮುಖಕ್ಕೆ ಮುಖ ಕವಚ ಹಾಕಿಕೊಂಡಿದ್ದು, ಅವರ ಮುಖದ ಚಹರೆ ಗುರ್ತಿಸಲಾಗಲಿಲ್ಲ. ತನ್ನ ಬಳಿ ಕಸಿದುಕೊಂಡು ಹೋದ ಬ್ಯಾಗಿನಲ್ಲಿ ಒಂದು HHD ಟ್ಯಾಬ್, ರಸೀದಿ ಪುಸ್ತಕ, 1,21,157 /- ರೂಗಳ ಹಣ, ಪಾನ್ ಕಾರ್ಡ್, HDFC ಬ್ಯಾಂಕ್ ನ ಚೆಕ್ ಪುಸ್ತಕ ಮತ್ತು ಆಧಾರ ಕಾರ್ಡ್ ಇರುತ್ತೆಂತ ನೀಡಿದ ದೂರನ್ನು ಪಡೆದು ಠಾಣಾ ಮೊ.ಸಂಖ್ಯೆ:69/2021 ಕಲಂ:392 ರೆ/ವಿ 34  ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

6. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.126/2021 ಕಲಂ. 279,337 ಐ.ಪಿ.ಸಿ :-

          ದಿನಾಂಕ 19/06/2021 ರಂದು ಮದ್ಯಾಹ್ನ1-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಶ್ರೀಮತಿ  ರಾಧ ಕೊಂ ಮಾರುತಿ ,  34 ವರ್ಷ,  ಆದಿ ಕರ್ನಾಟಕ,  ಗೃಹಿಣಿ,   ಸ್ವಂತ ವಾಸ ಮಲ್ಲಪಲ್ಲಿ ಗ್ರಾಮ, ಗೋರೆಂಟ್ಲ ಮಂಡಲಂ,  ಹಿಂದೂಪುರಂ ತಾಲ್ಲೂಕು. ಅನಂತಪುರ ಜಿಲ್ಲೆ. ಎ.ಪಿ.  ಹಾಲಿ ವಾಸ 6 ನೇ ಮುಖ್ಯ ರಸ್ತೆ, 8 ನೇ ಕ್ರಾಸ್, ಬಾಲಾಜಿ ಲೇ ಔಟ್,   ಹೊಂಗಸಂದ್ರ , ಬೆಂಗಳೂರು-560068, ಮೊ. 9686741253 ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತನ್ನ  ಗಂಡ ಮಾರುತಿ ರವರು  ಕೆ.ಎ-03-ಎಸಿ-5273 ನೊಂದಣೀ ಸಂಖ್ಯೆಯ ಟಾಟಾ ಸುಮೋ ಗ್ರಾಂಡ್ ವಾಹನವನ್ನು   ಬಾಡಿಗೆಗಾಗಿ ಸುಮಾರು ಒಂದು ವರ್ಷದಿಂದ ಓಡಿಸುತ್ತಿದ್ದರು. ದಿನಾಂಕ 18/06/2021 ರಂದು ಬೆಳಗಿನ ಜಾವ ಸುಮಾರು 3-00 ಗಂಟೆಗೆ ಆಂದ್ರದ ಗೋರೆಂಟ್ಲ ಗೆ ಬಾಡಿಗೆ ಇದ್ದು ಹೋಗುವುದಾಗಿ ಹೇಳಿ  ಮನೆಯಿಂದ ಹೊರಟರು. ನಂತರ ಇದೇ ದಿನ ಬೆಳಗ್ಗೆ ಸುಮಾರು 7-00 ಗಂಟೆಗೆ ತನ್ನ ಗಂಡ ತನ್ನ ಮೊಬೈಲ್ ನಂಬರ್ ಗೆ ಕರೆ ಮಾಡಿ ಗುಡಿಬಂಡೆ ತಾಲ್ಲುಕು ತಟ್ಟಹಳ್ಳಿ  ಕ್ರಾಸ್ ಬಳಿ ಅಪಘಾತವಾಗಿದ್ದು  ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಅಸ್ಪತ್ರೆಯಲ್ಲಿ ಇರುವುದಾಗಿ  ಹೇಳಿದರು.  ಕೂಡಲೇ ತಾನು ಬೆಂಗಳೂರಿನಿಂದ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು, ವಿಚಾರ ಮಾಡಲಾಗಿ ತನ್ನ ಗಂಡ  ಮಾರುತಿ ರವರು  ಕೆ.ಎ-03-ಎಸಿ-5273 ನೊಂದಣೀ ಸಂಖ್ಯೆಯ ಟಾಟಾ ಸುಮೋ ಗ್ರಾಂಡ್ ವಾಹನದಲ್ಲಿ  ಆಂದ್ರದ ಗೋರೆಂಟ್ಲ ಮಂಡಲಂ ದಾಸರೆಡ್ಡಿಪಲ್ಲಿ ಗ್ರಾಮದ ವಾಸಿಗಳಾದ 1) ಮುನೀ ನಾಯಕ್ ಬಿನ್ ರಾಮೆ ನಾಯಕ್, 42 ವರ್ಷ, 2) ಕಳಾ ಬಾಯಿ ಕೋಂ  ಮುನೀನಾಯಕ್, 45 ವರ್ಷ, 3) ಅಮ್ಮಿಬಾಯಿ ಕೊಂ ತಿಪ್ಪನ್ನ, 45 ವರ್ಷ, 4) ಸೀತಾ ನಾಯಕ್ ಬಿನ್ ನಾನೀ ನಾಯಕ್, 55 ವರ್ಷ,  5) ಜಯಬಾಯಿ ಕೊಂ ಸೀತಾ ನಾಯಕ್  ,50 ವರ್ಷ, ಮತ್ತು ಆಂದ್ರದ ಗೋರೆಂಟ್ಲ ಮಲ್ಲೆಪಲ್ಲಿ ಗ್ರಾಮದ ವಾಸಿಗಳಾದ  6) ನಾಗಮ್ಮ ಕೊಂ ನರಸಿಂಹಪ್ಪ, 45 ವರ್ಷ,  7) ಓಡಿಸಿ ಗ್ರಾಮದ ವಾಸಿ ಅಶ್ವತ್ಥಮ್ಮ ಕೊಂ ಅಶ್ವತ್ಥಪ್ಪ, 45 ವರ್ಷ, ರವರನ್ನು ವಾಹನದಲ್ಲಿ ಕರೆದುಕೊಂಡು ಬೆಂಗಳೂರಿನಿಂದ  ಆಂದ್ರದ ಗೋರೆಂಟ್ಲ ಗ್ರಾಮಕ್ಕೆ ಬಾಡಿಗೆಗಾಗಿ ಕರೆದುಕೊಂಡು ಗುಡಿಬಂಡೆ ತಾಲ್ಲೂಕು  ತಟ್ಟಹಳ್ಳಿ ಕ್ರಾಸ್ ಬಳಿ ಬೆಂಗಳೂರಿನಿಂದ ಹೈದರಾಬಾದ್ ಕಡೆಗೆ ಹೋಗುವ ಎನ್.ಹೆಚ್-44 ರಸ್ತೆಯಲ್ಲಿ ಹೋಗುತ್ತಿರುವಾಗ ರಸ್ತೆಯಲ್ಲಿ ಬೆಳಿಗ್ಗೆ ಸುಮಾರು 6-00 ಗಂಟೆ ಸಮಯದಲ್ಲಿ ಡಿ.ಎಲ್.-1-ಎಲ್.ಎ.ಸಿ-1986 ನೊಂದಣಿ ಸಂಖ್ಯೆಯ ಕ್ಯಾಂಟರ್ ವಾಹನದ ಚಾಲಕ ತನ್ನ ವಾಹನವನ್ನು ಯಾವುದೇ  ಮುನ್ಸೂಚನೆಗಳನ್ನು ನೀಡದೇ  ಅಜಾಗರೂಕತೆಯಿಂದ ನಿಲ್ಲಿಸಿದ್ದು, ತಾನು ತನ್ನ ಕೆ.ಎ-03-ಎಸಿ-5273 ನೊಂದಣೀ ಸಂಖ್ಯೆಯ ಟಾಟಾ ಸುಮೋ ಗ್ರಾಂಡ್  ವಾಹನವನ್ನು ಅತಿವೇಗವಾಗಿ ಚಾಲನೆ ಮಾಡಿಕೊಂಡು ಮೇಲ್ಕಂಡ  ನೊಂದಣಿ ಸಂಖ್ಯೆಯ ಕ್ಯಾಂಟರ್ ಗೆ ಹಿಂಬದಿಯಲ್ಲಿ ಡಿಕ್ಕಿ ಹೊಡೆಯಿಸಿದ ಪರಿಣಾಮ ಎರಡೂ ವಾಹನಗಳು ಜಖಂಗೊಂಡು , ತನಗೆ ತಲೆಯ ಮುಂಬಾಗ ರಕ್ತಗಾಯ, ಎದೆಗೆ  ಮೂಗೇಟು ಆಗಿರುವುದಾಗಿ  ತಿಳಿಸಿದರು. ವಾಹನದಲ್ಲಿ ಇದ್ದ  ಮುನೀ ನಾಯಕ್  ರವರಿಗೆ ಮೊಣಕಾಲಿಗೆ ರಕ್ತಗಾಯ, ಕಳಾ ಬಾಯಿ ರವರಿಗೆ ಎಡ ಕೈಗೆ ರಕ್ತಗಾಯ, ಅಮ್ಮಿಬಾಯಿ ರವರಿಗೆ ಹಣೆಗೆ ರಕ್ತಗಾಯ,  ಸೀತಾ ನಾಯಕ್ ರವರಿಗೆ ಬಲ ಕೈಗೆ ರಕ್ತಗಾಯ, ನಾಗಮ್ಮ ರವರಿಗೆ ಬಲಭುಜಕ್ಕೆ ರಕ್ತಗಾಯ, ಅತ್ಥಮ್ಮ ರವರಿಗೆ ಬಲಭುಜಕ್ಕೆ ರಕ್ತಗಾಯ, ಜಯಬಾಯಿ ರವರಿಗೆ ಎರಡೂ ಮೊಣಕಾಲಿಗೆ ರಕ್ತಗಾಯವಾಗಿರುವುದಾಗಿ ವಿಚಾರ ತಿಳಿಸಿದರು. ನಂತರ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ   ವೈದ್ಯರ ಸಲಹೆ ಮೇರೆಗೆ ಕಳಾ ಬಾಯಿ, ಅಮ್ಮಿಬಾಯಿ, ಸೀತಾನಾಯಕ್ ಮತ್ತು ಮಾರುತಿ ರವರನ್ನು ಹಿಂದೂಪುರ  ಟೌನಿನ ಖಾಸಗಿ ಆಸ್ಪತ್ರೆಯಲ್ಲಿ  ಚಿಕಿತ್ಸೆಗಾಗಿ ದಾಖಲಾಗಿರುತ್ತಾರೆ. ತನ್ನ ಗಂಡನನ್ನು ಆಸ್ಪತ್ರೆಯಲ್ಲಿ ನೋಡಿಕೊಳ್ಳುತ್ತಿದ್ದರಿಂದ   ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು  ಅಜಾಗರೂಕತೆಯಿಂದ ರಸ್ತೆಯಲ್ಲಿ ನಿಲ್ಲಿಸಿದ್ದ ಡಿ.ಎಲ್.-1-ಎಲ್.ಎ.ಸಿ-1986 ನೊಂದಣಿ ಸಂಖ್ಯೆಯ ಕ್ಯಾಂಟರ್ ವಾಹನದ ಚಾಲಕನ ವಿರುದ್ದ ಮತ್ತು ಅತಿವೇಗವಾಗಿ ಚಾಲನೆ ಮಾಡಿದ ಕೆ.ಎ-03-ಎಸಿ-5273 ನೊಂದಣೀ ಸಂಖ್ಯೆಯ ಟಾಟಾ ಸುಮೋ ಗ್ರಾಂಡ್ ವಾಹನದ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

 

7. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.54/2021 ಕಲಂ. 323,324,504,506,34 ಐ.ಪಿ.ಸಿ :-

          ದಿನಾಂಕ:18-06-2021 ರಂದು ಠಾಣೆಯ ಹೆಚ್.ಸಿ-250 ಶ್ರೀನಾಥರವರು ಪಾತಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀಮತಿ ಪ್ರಿಯಾಂಕ ಕೋಂ ಕೃಷ್ಣಪ್ಪರವರ ಹೇಳಿಕೆಯನ್ನು ಪಡೆದು ಸಂಜೆ 5-30 ಗಂಟೆ ಸಮಯದಲ್ಲಿ ಠಾಣೆಗೆ ವಾಪಸ್ಸಾಗಿ ಹಾಜರುಪಡಿಸಿದ್ದನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿದ್ದರ ಸಾರಾಂಶವೇನೆಂದರೆ,  ಪ್ರಿಯಾಂಕರವರಿಗೆ  2019ನೇ ಸಾಲಿನಲ್ಲಿ ಕೃಷ್ಣಪ್ಪರವರೊಂದಿಗೆ ವಿವಾಹವಾಗಿದ್ದು, ತಮಗೆ ಇನ್ನೂ ಮಕ್ಕಳಾಗಿರುವುದಿಲ್ಲಾ. ತನ್ನ ಗಂಡನಿಗೂ ಹಾಗೂ ತಮ್ಮ ಭಾವನ ಹೆಂಡತಿ ರತ್ನಮ್ಮರವರಿಗೂ ಅಕ್ರಮ ಸಂಬಂಧವಿರುವ ಬಗ್ಗೆ ತಾನೇ ಖುದ್ದಾಗಿ ನೋಡಿ ಸದರಿ ವಿಚಾರವನ್ನು ತನ್ನ ಗಂಡನಿಗೆ ಕೇಳಿದ್ದು, ಅಂದಿನಿಂದ ತನ್ನ ಗಂಡ ತನ್ನನ್ನು ಬೈಯ್ಯುವುದು, ಹೊಡೆಯುವುದು ಮಾಡುತ್ತಿದ್ದು, ದಿನಾಂಕ:16-06-2021 ರಂದು ಸಂಜೆ 5-30 ಗಂಟೆಯ ಸಮಯದಲ್ಲಿ ತನ್ನ ಗಂಡ ವಿನಾ ಕಾರಣ ತನ್ನ ಮೇಲೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಹೊಡೆದಿದ್ದು, ನಂತರ ತಮ್ಮ ಭಾವ ಮನೋಹರ, ತಮ್ಮ ಭಾವನ ಹೆಂಡತಿ ರತ್ನಮ್ಮರವರು ಬಂದು ಪ್ರಾಣಬೆದರಿಕೆ ಹಾಕಿ ಕೈಗಳಿಂದ ತನ್ನ ಮೈಮೇಲೆ ಹೊಡೆದಿದ್ದು, ತನ್ನ ಗಂಡ ಕಟ್ಟಿಗೆಯನ್ನು ತೆಗೆದುಕೊಂಡು ತನ್ನ ಮೈಮೇಲೆ ಹೊಡೆದು ಗಾಯಗಳನ್ನುಂಟು ಮಾಡಿರುತ್ತಾನೆ. ಸದರಿಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

8. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.67/2021 ಕಲಂ. 87 ಕೆ.ಪಿ ಆಕ್ಟ್ :-

          ದಿನಾಂಕ.18-06-2021 ರಂದು ಸಂಜೆ 6.55 ಗಂಟೆಗೆ ಪಿ.ಎಸ್.ಐ ರವರು ಆರೋಪಿಗಳು ಮತ್ತು ಮಾಲುಗಳನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ದಿನಾಂಕ.18-06-2021 ರಂದು ಸಂಜೆ 05-30 ಗಂಟೆಯಲ್ಲಿ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ.ಸು) ಕೆ.ಸತೀಶ್ ಆದ ನಾನು ಠಾಣೆಯ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್, ವಿಜಯಲಕ್ಷ್ಮಿ ಸರ್ಕಲ್ ಬಳಿ ಇರುವ ಕೆ.ಜಿ.ಎನ್ ಶಾದಿ ಮಹಲ್ ಹಿಂಭಾಗದಲ್ಲಿರುವ ಖಾಲಿ ನಿವೇಶದಲ್ಲಿ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಸಿಬ್ಬಂದಿಯವರಾದ ಹೆಚ್.ಸಿ 97, ಸುಬ್ರಮಣಿ, ಪಿಸಿ-278 ನಾರಾಯಣ, ಪಿಸಿ.280 ಶಶಿಕುಮಾರ್, ಪಿಸಿ.540 ಶಿವಕುಮಾರ್, ಜೀಪ್ ಚಾಲಕ ಮಂಜುನಾಥ ಹಾಗೂ ಪಂಚಾಯ್ತಿದಾರರನ್ನು ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಸಂಜೆ 05-50 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 200/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 200/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿದಾಗ ನಮ್ಮನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಹಿಂಬಾಲಿಸಿ ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1] ದಾದಾಫೀರ್ ಬಿನ್ ಮಹಬೂಬ್ ಪಾಷ, 26 ವರ್ಷ, ಮುಸ್ಲೀಂರು, ವಾಟರ್ ಡಿಸ್ಟಿಬೂಟರ್ ಕೆಲಸ, ವಾಸ-ಹಳೆ ಆಸ್ಪತ್ರೆ ರಸ್ತೆ, ಶಿಡ್ಲಘಟ್ಟ ನಗರ 2] ಅಮ್ಜದ್ ಖಾನ್ ಬಿನ್ ಮಕ್ಬುಲ್ ಖಾನ್, 26 ವರ್ಷ, ಮುಸ್ಲೀಂರು, ಸೌದೆ ಮಂಡಿಯಲ್ಲಿ ಕೆಲಸ, ವಾಸ-ಕದರಿಪಾಳ್ಯ, ಶಿಡ್ಲಘಟ್ಟ ನಗರ, 3] ನವಾಜ್ ಪಾಷ ಬಿನ್ ಮುಬಾರಕ್ ಪಾಷ, 20 ವರ್ಷ, ಮುಸ್ಲೀಂ, ಸೆಂಟ್ರಿಂಗ್ ಕೆಲಸ, ವಾಸ-ಕುಂಬಾರ ಪೇಟೆ, ಶಿಡ್ಲಘಟ್ಟ ನಗರ  4) ಮೌಲ ಬಿನ್ ಅಜೀಜ್ ಉಲ್ಲಾ, 24 ವರ್ಷ, ಮುಸ್ಲೀಂರು, ಖಾಸಗಿ ಕಂಪನಿಯಲ್ಲಿ ಕೆಲಸ, ವಾಸ-ವಿ.ಜಿ.ಟಿ ರಸ್ತೆ, ಶಿಡ್ಲಘಟ್ಟ ನಗರ, 5] ಸಾಬೀರ್ ಖಾನ್ ಬಿನ್ ಮಕ್ಬುಲ್ ಖಾನ್, 34 ವರ್ಷ, ಮುಸ್ಲೀಂರು, ರೇಷ್ಮೆಕೆಲಸ, ವಾಸ-ಕದರಿಪಾಳ್ಯ, ಶಿಡ್ಲಘಟ್ಟ ನಗರ 6] ತಬ್ರೇಜ್ ಪಾಷ ಬಿನ್ ರಹಮತುಲ್ಲಾ, 28 ವರ್ಷ, ಮುಸ್ಲೀಂರು, ಪ್ರಿಂಟಿಂಗ್ ಪ್ರೆಸ್ನಲ್ಲಿ ಕೆಲಸ, ವಾಸ-02ನೇ ಕಾರ್ಮಿಕ ನಗರ, ಶಿಡ್ಲಘಟ್ಟ ನಗರ 7] ಶ್ರೀನಿವಾಸ ಬಿನ್ ವೆಂಕಟನರಸಪ್ಪ, 48 ವರ್ಷ, ಬೆಸ್ತರು, ಎಲೆಕ್ಟ್ರಿಷಿಯನ್ ಕೆಲಸ, ವಾಸ-ಕುಂಬಾರ ಪೇಟೆ, ಶಿಡ್ಲಘಟ್ಟ ನಗರ ಎಂದು ತಿಳಿಸಿದ್ದು. ಇವರುಗಳು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 4,210/- ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು, ಇವುಗಳನ್ನು ಸಂಜೆ 6-00 ಗಂಟೆಯಿಂದ 6-45 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ಸಿಕ್ಕಿದ ಮೇಲ್ಕಂಡ 07 ಜನರು ಮತ್ತು ಅಮಾನತ್ತು ಪಡಿಸಿದ ಮಾಲು ಸಮೇತ ಮಹಜರ್ ನೊಂದಿಗೆ ಒಪ್ಪಿಸುತ್ತಿದ್ದು, ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 19-06-2021 05:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080