ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.141/2021 ಕಲಂ. 87  ಕೆ.ಪಿ  ಆಕ್ಟ್:-

          ದಿನಾಂಕ: 18/05/2021 ರಂದು ನ್ಯಾಯಾಲಯದ ಪಿ.ಸಿ  276 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದರ ಸಾರಾಂಶವೇನೆಂದರೆ   ದಿನಾಂಕ: 15/05/2021 ರಂದು ಸಂಜೆ 6-15 ಗಂಟೆಗೆ ಶ್ರೀ ರೆಡ್ಡಪ್ಪ ಎ.ಎಸ್.ಐ ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು ಮತ್ತು ಆರೋಪಿಗಳು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ. ಈ ದಿನ ದಿನಾಂಕ:15-05-2021 ರಂದು ಬೆಳಗ್ಗೆ 8.00 ಗಂಟೆ  ಸಮಯದಲ್ಲಿ ನನಗೆ ಮತ್ತು ನನ್ನೊಂದಿಗೆ ಸಿಪಿಸಿ 134 ಧನಂಜಯ, ಸಿಪಿಸಿ 214 ಅಶೋಕ್ ಮತ್ತು ಸಿಪಿಸಿ 276 ಸಾಗರ್ ರವರಿಗೆ ಸಿಪಿಐ ಸಾಹೇಬರು ಬಾಗೇಪಲ್ಲಿ ರವರು ಕೋವಿಡ್-19 ಲಾಕ್ ಡೌನ್ ಪ್ರಯುಕ್ತ ಬಾಗೇಪಲ್ಲಿ ಪುರದಲ್ಲಿ ಗಸ್ತು ನಿರ್ವಹಿಸುವ ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ದ್ವಿಚಕ್ರ ವಾಹನಗಳಲ್ಲಿ ಬಾಗೇಪಲ್ಲಿ ಪುರದಲ್ಲಿ ಗಸ್ತು ನಿರ್ವಹಿಸುತ್ತಿದ್ದಾಗ ಸಂಜೆ 4.15 ಗಂಟೆ ಸಮಯದಲ್ಲಿ  ಬಾಗೇಪಲ್ಲಿ ತಾಲ್ಲೂಕು ಕಸಬಾ ಹೋಬಳಿ, ಕೊಂಡರೆಡ್ಡಿಪಲ್ಲಿ ಗ್ರಾಮದ ಕೆರೆಯ ಬಳಿಯಿರುವ ಶಾಕರಾಯ ಕಲ್ಲು ಗುಂಡಿನ ಕೆಳಗೆ  ಯಾರೋ ಕೆಲವರು ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟಿನ ಜೂಜಾಟವಾಡುತ್ತಿರುವುದಾಗಿ ಬಾತ್ಮೀದಾರರಿಂದ ಖಚಿತ ಮಾಹಿತಿ ಬಂದಿದ್ದು, ಮಾಹಿತಿಯನ್ನು ಸಿಪಿಐ ಸಾಹೇಬರಿಗೆ ತಿಳಿಸಿ, ಜೂಜಾಟವಾಡುತ್ತಿದ್ದವರ ಮೇಲೆ ದಾಳಿ ಮಾಡಲು ಸಾಹೇಬರ ಮೌಖಿಕ ಅನುಮತಿ ಪಡೆದು,  ಜೂಜಾಟವಾಡುತ್ತಿದ್ದವರ ಮೇಲೆ ದಾಳಿ ನಡೆಸುವ ಸಲುವಾಗಿ ನಾನು ಹಾಗೂ ಸಿಬ್ಬಂದಿಗಳಾದ ಸಿಪಿಸಿ 134 ಧನಂಜಯ, ಸಿಪಿಸಿ 214 ಅಶೋಕ್ ಮತ್ತು ಸಿಪಿಸಿ 276 ಸಾಗರ್ ರೊಂದಿಗೆ ದ್ವಿಚಕ್ರ ವಾಹನಗಳಲ್ಲಿ ಕೊಂಡರೆಡ್ಡಿಪಲ್ಲಿ ಗ್ರಾಮದ ಬಸ್ ನಿಲ್ದಾಣಕ್ಕೆ ಹೋಗಿ ಪಂಚರನ್ನು ಬರಮಾಡಿಕೊಂಡು ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ, ದಾಳಿಗೆ ಸಹಕರಿಸಲು ಕೋರಿ, ಪಂಚರೊಂದಿಗೆ ಮೇಲ್ಕಂಡ ಸ್ಥಳಕ್ಕೆ ದ್ವಿಚಕ್ರ ವಾಹನಗಳಲ್ಲಿ ಸಂಜೆ 4.30 ಗಂಟೆಗೆ ಕೊಂಡರೆಡ್ಡಿಪಲ್ಲಿ ಗ್ರಾಮದ ರಸ್ತೆಯ ಮರೆಯಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಹೊಲಗಳಲ್ಲಿ ನಡೆದುಕೊಂಡು ಹೋಗಿ ಮರದ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಆಸಾಮಿಗಳು ಗುಂಪಾಗಿ ಕುಳಿತು ಅಂದರ್ 100 ಬಾಹರ್ 100 ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು, ಸಮವಸ್ತ್ರದಲ್ಲಿದ್ದ ನಾನು ಮತ್ತು ಸಿಬ್ಬಂದಿಗಳು ಸುತ್ತಲೂ ಕುಳಿತು ಜೂಜಾಟವಾಡುತ್ತಿದ್ದ ಗುಂಪಿನ ಮೇಲೆ ಧಾಳಿ ಮಾಡಿ ಜೂಜಾಟವಾಡುತ್ತಿದ್ದ ಆಸಾಮಿಗಳಿಗೆ ಓಡಿಹೋಗದಂತೆ ಎಚ್ಚರಿಕೆ ನೀಡಿ ಸುತ್ತುವರೆದು ಆಸಾಮಿಗಳನ್ನು ಹಿಡಿದುಕೊಂಡು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ 1] ಜಿ. ಮೂರ್ತಿ @ ನಾನಿ ಬಿನ್ ಲೇಟ್ ಗಂಗಪ್ಪ,  37 ವರ್ಷ, ಆದಿಕರ್ನಾಟಕ  ಜನಾಂಗ, ಕೂಲಿ ಕೆಲಸ,  ವಾಸ ಕೊಂಡರೆಡ್ಡಿಪಲ್ಲಿ ಕಾಲೋನಿ, ಕೊಂಡರೆಡ್ಡಿಪಲ್ಲಿ ಗ್ರಾಮ, ಕಸಬಾ ಹೋಬಳಿ,  ಬಾಗೇಪಲ್ಲಿ ತಾಲ್ಲೂಕು, ಈತನ ಬಲಭಾಗದಲ್ಲಿ ಕುಳಿತಿದ್ದ 2] ನಡಿಪಿ ನರಸಿಂಹಪ್ಪ ಬಿನ್ ಲೇಟ್ ವೆಂಕಟರಾಯಪ್ಪ, 45 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, , ವಾಸ ಕೊಂಡರೆಡ್ಡಿಪಲ್ಲಿ ಕಾಲೋನಿ, ಕೊಂಡರೆಡ್ಡಿಪಲ್ಲಿ ಗ್ರಾಮ, ಕಸಬಾ ಹೋಬಳಿ,  ಬಾಗೇಪಲ್ಲಿ ತಾಲ್ಲೂಕು ಈತನ ಬಲಭಾಗದಲ್ಲಿ ಕುಳಿತಿದ್ದ 3] ವೆಂಕಟರಾಮಪ್ಪ ಬಿನ್ ಲೇಟ್ ವೆಂಕಟರಾಯಪ್ಪ, 65 ವರ್ಷ, ಬಲಜಿಗರು, ಎಪಿಎಂಸಿ ಮಾರ್ಕೇಟ್ ನಲ್ಲಿ ಕೂಲಿ ಕೆಲಸ, ವಾಸ ಘಂಟಂವಾರಿಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು. ಈತನ ಬಲಭಾಗದಲ್ಲಿ ಕುಳಿತಿದ್ದ 4] ಜಿ. ಗಂಗರಾಜು  @ ಸಿ.ಎನ್. ಬಿನ್ ಲೇಟ್ ನಾರಾಯಣಪ್ಪ, 35 ವರ್ಷ, ಆದಿ ಕರ್ನಾಟಕ ಜನಾಂಗ, ಡ್ರೈವರ್ ಕೆಲಸ, ವಾಸ ಕೊಂಡರೆಡ್ಡಿಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದರು. ಸದರಿ ಆಸಾಮಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟವಾಡಲು ನಿಮ್ಮ ಬಳಿ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಇಲ್ಲವೆಂದು ತಿಳಿಸಿದರು.  ಸ್ಥಳದಲ್ಲಿ ಆಸಾಮಿಗಳು ಜೂಜಾಟವಾಡಲು ಬಳಸಿದ್ದ  ಒಟ್ಟು 52 ಇಸ್ಪೀಟ್ ಎಲೆಗಳು, ಪಣಕ್ಕಾಗಿ ಇಟ್ಟಿದ್ದ ಒಟ್ಟು 1,350/- ರೂ ಹಣವನ್ನು. ಮತ್ತು ಪ್ಲಾಸ್ಟೀಕ್ ಚೀಲವನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು 4 ಜನ ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಸಂಜೆ 6.15 ಗಂಟೆಗೆ ಹಾಜರಾಗಿ 4 ಜನ ಆರೋಪಿಗಳು ಮಾಲು ಮತ್ತು ಅಸಲು ಧಾಳಿ ಪಂಚನಾಮೆ ವರಧಿಯ ಸಮೇತ ಠಾಣೆಯಲ್ಲಿ ಹಾಜರು ಪಡಿಸಿ ನೀಡಿದ ದೂರನ್ನು ಪಡೆದು ಠಾಣಾ ಎನ್ ಸಿ ಆರ್ ನಂಬರ್ 138-2021 ರಂತೆ ದಾಖಲಿಸಿರುತ್ತೆ.ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 18-05-2021 ರಂದು ಘನ ನ್ಯಾಯಾಲಯದ ಪಿ.ಸಿ  276 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.74/2021 ಕಲಂ. 15(A),32(3)  ಕೆ.ಇ  ಆಕ್ಟ್:-

          ದಿನಾಂಕ:  18/05/2021 ರಂದು ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ ಟಿ ಎನ್ ಪಾಪಣ್ಣ ಆದ ನಾನು  ಸಂಜೆ 4-00 ಗಂಟೆ ಸಮಯದಲ್ಲಿ  ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಕರೋನ ಮಹಾಮಾರಿ ಸಾಂಕ್ರಾಮಿಕ ಖಾಯಿಲೆಯ ಸುರಕ್ಷತಾ ಕ್ರಮಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡಲು ಠಾಣೆಯ ಹೆಚ್.ಸಿ 36 ವಿಜಯ್ ಕುಮಾರ್ ಮತ್ತು ಜೀಪ್ ಚಾಲಕ ಎಪಿಸಿ 65 ವೆಂಕಟೇಶ್ ರವರೊಂದಿಗೆ ಗಸ್ತಿನಲ್ಲಿದ್ದಾಗ ನನಗೆ ಬೈನಹಳ್ಳಿ ಗ್ರಾಮದ ವಾಸಿಯಾದ ಕದಿರಮ್ಮ ಕೋಂ ಮುನಿಯಪ್ಪ ರವರು ತಮ್ಮ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ, ನಾನು ಠಾಣೆಯ ಜೀಪ್ ಚಾಲಕ ಎಪಿಸಿ-65 ವೆಂಕಟೇಶ್ ಮತ್ತು ಹೆಚ್ ಸಿ 36 ವಿಜಯ್ ಕುಮಾರ್ ರವರೊಂದಿಗೆ ಬೈನಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚರನ್ನು ಕರೆದುಕೊಂಡು ಸಂಜೆ 04-15 ಗಂಟೆಗೆ ಕದಿರಮ್ಮ ಕೋಂ ಮುನಿಯಪ್ಪ ರವರು ಮನೆಯ ಬಳಿಗೆ ಹೋಗಿ ನೋಡಲಾಗಿ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಮತ್ತು ಮಧ್ಯ ನೀಡುತ್ತಿದ್ದ ಒಬ್ಬ ಮಹಿಳೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟಗಳು ಮತ್ತು ಮದ್ಯದ ಖಾಲಿ ಪ್ಯಾಕೇಟಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ಮನೆಯ ಬಳಿ ಮಧ್ಯವನ್ನು ನೀಡುತ್ತಿದ್ದ ಮಹಿಳೆಯ ಹೆಸರು ಮತ್ತು ವಿಳಾಸ ಕೇಳಲಾಗಿ  ಶ್ರೀಮತಿ.ಕದಿರಮ್ಮ ಕೋಂ ಮುನಿಯಪ್ಪ 48 ವರ್ಷ ಆದಿಕರ್ನಾಟಕ ಜನಾಂಗ ಜಿರಾಯ್ತಿ ವಾಸ ಬೈನಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು ಸದರಿ ಮಹಿಳೆಯು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಮದ್ಯದ ಪ್ಯಾಕೇಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು. ನಂತರ ಪಂಚರ ಸಮಕ್ಷಮ ಸಂಜೆ 04-30 ಗಂಟೆಯಿಂದ ಸಂಜೆ 05-15 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ ಒಟ್ಟು 1 ಲೀಟರ್ 350 ಎಂ.ಎಲ್ ನ 526.95 ರೂಗಳ ಬೆಲೆ ಬಾಳುವ ಹೈವಾರ್ಡ್ಸ್ ವಿಸ್ಕಿಯ 15 ಮದ್ಯದ ಟೆಟ್ರಾ ಪ್ಯಾಕೆಟ್ ಗಳು ಮತ್ತು 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲ್ ನ್ನು ಅಮಾನತ್ತುಪಡಿಸಿಕೊಂಡು ಠಾಣೆಗೆ  ಸಂಜೆ  5-45 ಗಂಟೆಗೆ ವಾಪಸ್ಸು ಬಂದು ಠಾಣೆಯ ಮೊ,ಸಂಖ್ಯೆ:74/2020 ಕಲಂ:15(A) 32(3) KE ACT ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

3. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.45/2021 ಕಲಂ. 279,337,304(A) ಐ.ಪಿ.ಸಿ:-

          ದಿನಾಂಕ:18/05/2021 ರಂದು ರಾತ್ರಿ 10:30 ಗಂಟೆಯಲ್ಲಿ ಪಿರ್ಯಾಧಿದಾರರಾದ  ಸಾವಿತ್ರಮ್ಮ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕಯಂತ್ರ ಮುದ್ರಿತ  ದೂರಿನ ಸಾರಾಂಶವೇನೆಂದರೆ ದಿನಾಂಕ:18/05/2021 ರಂದು ಬೆಳಗ್ಗೆ 7:00 ಗಂಟೆ ಸಮಯದಲ್ಲಿ  ನನ್ನ ಮಗಳಾದ ಶಾಂತಮ್ಮ ರವರು  ಬಂದು  ಇದ್ದಿಲವಾರಪಲ್ಲಿ ಗ್ರಾಮದ ವಾಸಿ ಬೇಲ್ ದಾರಿ ಕೃಷ್ಣಪ್ಪ ರವರ ಜಮೀನಿನಲ್ಲಿ  ಕೊತ್ತಂಬರಿ ಸೊಪ್ಪನ್ನು ಕೀಳಲು  ಕೂಲಿ ಕೆಲಸಕ್ಕೆಂದು  ನಾನು ಮತ್ತು ಜಯಮ್ಮ, ಸಿದ್ದಮ್ಮ , ಚೇಳೂರಿನ ರಾಧಮ್ಮ, ಮಣಿ ರವರುಗಳ  ಜೊತೆಯಲ್ಲಿ  ಹೋಗಿ ಬರುವುದಾಗಿ ಹೇಳಿ ಮನೆಯಿಂದ  ಹೋಗಿದ್ದಳು, ಈ ದಿನ ಮದ್ಯಾಹ್ನ 2:20 ಗಂಟೆ ಸುಮಾರಿನಲ್ಲಿ ನಮ್ಮ ಗ್ರಾಮದ ಜನರು ನಿನ್ನ ಮಗಳು ಬರುತ್ತಿದ್ದ   ಟಾಟಾಏಸ್ ಅಪಘಾತವಾಗಿ ವಾಹನದಲ್ಲಿದ್ದ ಜನರಿಗೆ ತುಂಬಾ ಗಾಯಗಳಾಗಿದೆಯೆಂದು ತಿಳಿಸಿದ್ದು ಕೂಡಲೇ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗಳಿಗೆ ತಲೆಯ ಹಿಂಭಾಗಕ್ಕೆ ತೀವ್ರವಾಗಿ ಪೆಟ್ಟು ಬಿದ್ದು ತಲೆಯಿಂದ ಮತ್ತು ಕಿವಿಯಿಂದ  ರಕ್ತ ಸೋರುತ್ತಿತ್ತು,  ನಮ್ಮ ಸಂಬಂಧಿಯಾದ ಜಯಮ್ಮ ರವರಿಗೆ ತಲೆಗೆ ಮತ್ತು ಬೆನ್ನಿಗೆ  ಗಾಯಗಳಾಗಿರುತ್ತೆ, ಸಿದ್ದಮ್ಮ , ರಾಧಮ್ಮ , ಮಣಿ ರವರಿಗೆ ಮೂಗೇಟುಗಳಾಗಿರುತ್ತವೆ, ಗಾಯಗೊಂಡಿದ್ದ ಗಾಯಾಳುಗಳನ್ನು   ನಾವುಗಳು  ಕೂಡಲೇ 108 ಆಂಬುಲೆನ್ಸ್ ನಲ್ಲಿ  ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಯ ಸಲುವಾಗಿ ದಾಖಲಿಸಿದೆವು, ನಂತರ ನಮ್ಮ ಸಂಬಂಧಿಯವರಾದ ಜಯಮ್ಮ ರವರನ್ನು ವಿಚಾರಿಸಲಾಗಿ ಈ ದಿನ ಮದ್ಯಾಹ್ನ 2:00 ಗಂಟೆ ಸಮಯದಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ಕೊತ್ತಂಬರಿ ಸೊಪ್ಪನ್ನು ಲೋಡ್ ಮಾಡಿದ್ದ ಕೆಎ 11 ಬಿ 5577  ನೋಂದಣಿ ಸಂಖ್ಯೆಯ   ಟಾಟಾ ಏಸ್ ವಾಹನದಲ್ಲಿ ಊರಿಗೆ  ಬರುತ್ತಿದ್ದಾಗ  ಸದರಿ   ಟಾಟಾ ಏಸ್  ವಾಹನದ ಚಾಲಕ ರಾಮಚಂದ್ರಪ್ಪ ಬಿನ್ ಲೇಟ್ ಮಾರಪ್ಪ ,  ಚೊಕ್ಕನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು   ಶೇರ್ ಖಾನ್ ಕೋಟೆ ಸಮೀಪವಿರುವ ರೆಡ್ಡೀಸ್ ಹೋಟಲ್   ಸಮೀಪದಲ್ಲಿ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ವಾಹನ   ನಿಯಂತ್ರಣಕ್ಕೆ ಸಿಗದೇ  ಅಪಘಾತಪಡಿಸಿದ್ದರ ಪರಿಣಾಮ ನಾವುಗಳು ಬಿದ್ದು ಹೋಗಿರುತ್ತೇವೆಂದು ತಿಳಿಸಿದರು.  ನಂತರ ನನ್ನ ಮಗಳಾದ ಶಾಂತಮ್ಮ ರವರಿಗೆ ತೀವ್ರತರವಾದ ಗಾಯಗಳಾಗಿ ತಲೆ ಮತ್ತು ಕಿವಿಯಿಂದ ರಕ್ತ ಸೋರುತ್ತಿದ್ದರಿಂದ  ನನ್ನ ಮಗಳನ್ನು ಹೆಚ್ಚಿನ ಚಿಕಿತ್ಸೆಯ ಸಲುವಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಹೋಗಿದ್ದು ಅಲ್ಲಿನ ವೈದ್ಯರ ಶಿಫಾರಸ್ಸಿನ ಮೇರೆಗೆ ಬೆಂಗಳೂರಿನ  ನಿಮ್ಹಾನ್ಸ್  ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ  ನನ್ನ ಅಳಿಯ  ಮಂಜುನಾಥರೆಡ್ಡಿಯವರ  ಜೊತೆಯಲ್ಲಿ ನನ್ನ ಮಗಳನ್ನು  ಕಳುಹಿಸಿದ್ದು  ಈ ದಿನ ರಾತ್ರಿ 8:30 ಗಂಟೆ ಸಮಯದಲ್ಲಿ ನನ್ನ ಅಳಿಯ ನನಗೆ ಫೋನ್   ಮಾಡಿ ನನ್ನ ಮಗಳು ಶಾಂತಮ್ಮ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ, ಆದ್ದರಿಂದ  ಅತಿವೇಗ ಮತ್ತು ಅಜಾಗರೂಕತೆಯಿಂದ ಟಾಟಾ ಏಸ್ ವಾಹನ ಚಾಲನೆ ಮಾಡಿಕೊಂಡು  ಬಂದು ಅಪಘಾತವುಂಟುಮಾಡಿರುವ ಮೇಲ್ಕಂಡ ಟಾಟಾಏಸ್ ವಾಹನ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊಸಂ:45/2021 ಕಲಂ 279,337,304(ಎ) ಐಪಿಸಿ ರೀತ್ಯ ಪ್ರಕರಣ ದಾಖಲಿಸಿರುತ್ತೇನೆ.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.75/2021 ಕಲಂ. 279,337,304(A)  ಐ.ಪಿ.ಸಿ:-

          ದಿನಾಂಕ: 19/05/2021 ರಂದು ಬೆಳಗ್ಗೆ 09-30 ಗಂಟೆಯಲ್ಲಿ ಶ್ರೀ. ವೈ.ಆನಂದಪ್ಪ ಬಿನ್ ಲೇಟ್ ಯರ್ರಪ್ಪ ಇನಮಿಂಚೇನಹಳ್ಳಿ  ಗ್ರಾಮ  ಚಿಕ್ಕಬಳ್ಳಾಪುರ  ತಾಲ್ಲೂಕು ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ  ಸಾರಾಂಶವೇನೆಂದರೆ,  ತನ್ನ ಅಕ್ಕನ ಮಗನಾದ  ಗಂಗರಾಜು ಬಿನ್  ಮುನಿಯಪ್ಪ 30ವರ್ಷ ಆದಿ ಕರ್ನಾಟಕ  ಜನಾಂಗ  ಇನಮಿಂಚೇನಹಳ್ಳಿ  ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ರವರು  ಕಂಬಿ ಕೆಲಸ ಮಾಡಿಕೊಂಡಿದ್ದು ದಿನಾಂಕ: 18/05/2021 ರಂದು  ಗಂಗರಾಜು ಮತ್ತು  ತಮ್ಮ ಗ್ರಾಮದ ಅಂಬರೀಶ ಬಿನ್ ವೆಂಕಟನಾರಾಯಣಪ್ಪ 26ವರ್ಷ  ಕುರಬರು ಕಂಬಿ ಕೆಲಸ ರವರು ಪೆರೆಸಂದ್ರ ಗ್ರಾಮದಲ್ಲಿ ಕೆಲಸ ಇರುವುದಾಗಿ ನೋಡಿಕೊಂಡು ಬರೋಣವೆಂತ ಮನೆಯಲ್ಲಿ ಹೇಳಿ ಮದ್ಯಾಹ್ನ 2-00 ಗಂಟೆಯಲ್ಲಿ ಅಂಬರೀಶನ  ಬಾಬತ್ತು  ಕೆ.ಎ.40.ಇ.ಸಿ.4506 ನಂಬರಿನ ದ್ವಿ ಚಕ್ರ  ವಾಹನದಲ್ಲಿ  ಗಂಗರಾಜು ದ್ವಿ ಚಕ್ರ  ವಾಹನವನ್ನು  ಚಾಲನೆ ಮಾಡಿಕೊಂಡು, ಅಂಬರೀಶನನ್ನು ಹಿಂಬದಿಯಲ್ಲಿ  ಕುಳ್ಳರಿಸಿ ಕೊಂಡು ಪೆರೆಸಂದ್ರಕ್ಕೆ ಹೋಗುವುದಾಗಿ  ಹೇಳಿ ಹೋದರು. ಇದೇ ದಿನ ಮದ್ಯಾಹ್ನ ಸುಮಾರು 3-30 ಗಂಟೆಯಲ್ಲಿ  ಮೇಲ್ಕಂಡ ಗಂಗರಾಜು ಮತ್ತು ಅಂಬರೀಶ ರವರು  ಪೆರೆಸಂದ್ರ  ವಾಪಸ್ಸು ನಮ್ಮ ಗ್ರಾಮಕ್ಕೆ ಬರಲು ಹೆಚ್.ಹೆಚ್.44  ರಸ್ತೆಯ ರೆಡ್ಡಿಗೊಲ್ಲ ವಾರಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ  ಸಮೀಪ  ಬರುತ್ತಿದ್ದಾಗ  ಗಂಗರಾಜು ರವರು ದ್ವಿ ಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದು  ರಸ್ತೆಯ  ಬಲಭಾಗದಲ್ಲಿರುವ  ಡಿವೈಡರ್ ಗೆ ಡಿಕ್ಕಿ  ಹೊಡೆದು ಅಪಘಾತವುಂಟು ಮಾಡಿರುವುದಾಗಿ  ಅದರ ಪರಿಣಾಮ  ಗಂಗರಾಜು ಮತ್ತು ಅಂಬರೀಶನಿಗೆ ರಕ್ತಗಾಯಗಳಾಗಿರುವುದಾಗಿ ಅವರ ಹಿಂದೆಯೇ ದ್ವಿ ಚಕ್ರ ವಾಹನದಲ್ಲಿ ಬರುತ್ತಿದ್ದ ಮಂಜುನಾಥ ಬಿನ್ ವೆಂಕಟೇಶಪ್ಪ ರವರು  ಮೊಬೈಲ್  ಪೋನಿನ  ಮುಖಾಂತರ ತನಗೆ  ವಿಚಾರ ತಿಳಿಸಿದರು. ತಕ್ಷಣ ತಾನು  ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು ಗಾಯಾಳುಗಳನ್ನು ಹೆದ್ದಾರಿ ಆಂಬುಲೆನ್ಸ್ ವಾಹನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ  ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ದಾಖಲು ಮಾಡಿದ್ದು  ವೈದ್ಯಾಧಿಕಾರಿಗಳು  ಗಂಗರಾಜುನಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಬೆಂಗಳೂರು  ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಿದರು. ಅದರಂತೆ ಗಂಗರಾಜುನನ್ನು ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದಾಗ ದಿನಾಂಕ:19/05/2021 ರಂದು ಬೆಳಗಿನ ಜಾವ 02-00 ಗಂಟೆಯಲ್ಲಿ ಗಂಗರಾಜು ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟರುತ್ತಾನೆಂತ  ಮುಂದಿನ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ  ಮೊ.ಸಂ.223/2021 ಕಲಂ. 506,504,323,324,34 ಐ.ಪಿ.ಸಿ:-

          ದಿನಾಂಕ: 19/05/2021 ರಂದು ಬೆಳಿಗ್ಗೆ 10.00 ಗಂಟೆಗೆ ಶ್ರೀಮತಿ ವಿಜಯಲಕ್ಷ್ಮಿ ಕೋಂ ಮಂಜುನಾಥ, 35 ವರ್ಷ, ಬೋವಿ ಜನಾಂಗ, ಕೂಲಿಕೆಲಸ, ರಾಂಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ದಿನಾಂಕ: 18/05/2021 ರಂದು ರಾತ್ರಿ 7.00 ಗಂಟೆ ಸಮಯದಲ್ಲಿ ತಾನು ತಮ್ಮ ಮಾವ ವೆಂಕಟೇಶಪ್ಪ ಬಿನ್ ಗಂಗುಲಪ್ಪ ರವರನ್ನು ಕುರಿತು ತನಗೆ ಜೀವನ ನಡೆಸಲು ಕಷ್ಠವಾಗಿದೆ. ನೀವು ನಿಮ್ಮ ಚಿಕ್ಕ ಮಗ ರಾಮಚಂದ್ರ ರವರ ಮನೆಗೆ ಹೋಗಿ ಎಂದು ಹೆಳಿದ್ದು, ಆಗ ತನ್ನ ಮಾವ ವೆಂಕಟೇಶಪ್ಪ ರವರು ತನ್ನನ್ನು ಕುರಿತು ಏನೋ ಬೋಳಿ ಮುಂಡೆ ನನಗೆ ಬುದ್ದಿ ಹೇಳಲು ಬರುತ್ತೀಯಾ ಎಂದು ಅವಾಚ್ಯಶಬ್ದಗಳಿಂದ ಬೈದು, ಕೈಗಳಿಂದ ಮೈ ಮೇಲೆ ಹೊಡೆದು ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ತನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು. ಅಷ್ಠರಲ್ಲಿ ತನ್ನ ಮೈದುನ ರಾಮಚಂದ್ರ ಬಿನ್ ವೆಂಕಟೇಶಪ್ಪ ರವರು ಅಲ್ಲಿಗೆ ಬಂದು ಏನೋ ಸೂಳೇ ಮುಂದೆ ನೀನು ನಮ್ಮ ತಂದೆಯನ್ನು ಬೈಯುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿದನು. ನಂತರ ಅವರು ತನ್ನನ್ನು ಕುರಿತು ಈ ದಿನ ಉಳಿದುಕೊಂಡಿದ್ದೀಯಾ, ನಿನ್ನನ್ನು ಪ್ರಾಣಸಹಿತ ಬಿಡುವುದಿಲ್ಲವೆಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ  ಮೊ.ಸಂ.224/2021 ಕಲಂ. 323,324,504,506,34 ಐ.ಪಿ.ಸಿ:-

          ದಿನಾಂಕ: 19/05/2021 ರಂದು ಬೆಳಿಗ್ಗೆ 11.00 ಗಂಟೆಗೆ ವೆಂಕಟೇಶಪ್ಪ ಬಿನ್ ಲೇಟ್ ಗಂಗುಲಪ್ಪ, 65 ವರ್ಷ, ಬೋವಿ ಜನಾಂಗ, ಕೂಲಿಕೆಲಸ, ರಾಂಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತನ್ನ ಮಗನಾದ ಮಂಜುನಾಥ ಮತ್ತು ತನ್ನ ಸೊಸೆ ವಿಜಯಮ್ಮ ರವರಿಗೆ ಸಂಸಾರದ ವಿಚಾರದಲ್ಲಿ ಹೊಂದಾಣಿಕೆ ಇಲ್ಲದೆ ಇದ್ದು, ಹಲವಾರು ಬಾರಿ ಗಲಾಟೆ ಮಾಡಿಕೊಂಡಿರುತ್ತಾರೆ. ಹೀಗಿರುವಾಗ ನಿನ್ನೆ ದಿನ ದಿನಾಂಕ: 18/05/2021 ರಂದು ರಾತ್ರಿ ಸುಮಾರು 8.00 ಗಂಟೆ ಸಮಯದಲ್ಲಿ ತನ್ನ ಮಗ ಮತ್ತು ತನ್ನ ಸೊಸೆ ಗಲಾಟೆ ಮಾಡಿಕೊಂಡಿರುತ್ತಾರೆ. ಹೀಗಿರುವಾಗ ಈ ದಿನ ದಿನಾಂಕ: 19/05/2021 ರಂದು ಬೆಳಿಗ್ಗೆ 08.00 ಗಂಟೆ ಸಮಯದಲ್ಲಿ ತಾನು ತಮ್ಮ ಮನೆಯ ಬಳಿ ಇದ್ದಾಗ ತನ್ನ ಸೊಸೆಯಾದ ವಿಜಯಮ್ಮ ರವರ ತವರು ಮನೆಯವರಾದ ವೇಗಲಪಲ್ಲಿ ಗ್ರಾಮದ ವಾಸಿಗಳಾದ ರಾಮಕೃಷ್ಣಪ್ಪ ಬಿನ್ ವೇಮಣ್ಣ, ರವಿ ಬಿನ್ ರಾಮಕೃಷ್ಣಪ್ಪ, ರಮೇಶ ಬಿನ್ ರಾಮಕೃಷ್ಪ ಮತ್ತು ಚೌಡಮ್ಮ ರವರು ತನ್ನ ಮನೆ ಬಳಿ ಬಂದು ತನ್ನನ್ನು ಕುರಿತು ಏನೋ ಬೋಳಿ ಮಗನೇ ನಿನ್ನ ಸೊಸೆಯನ್ನು ಸರಿಯಾಗಿ ನೋಡಿಕೊಳ್ಳುವುದಕ್ಕೆ ಆಗುವುದಿಲ್ಲವಾ ಎಂದು ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿ, ಆ ಪೈಕಿ ರಮೇಶ ರವರು ತಮ್ಮ ಮನೆಯ ಬಳಿ ಬಿದ್ದಿದ್ದ ನೀಲಗಿರಿ ದೊಣ್ಣೆಯಿಂದ ತನ್ನ ಬಲ ಕಿವಿ, ಎಡಕಣ್ಣಿನ ಬಳಿ ಹೊಡೆದು ರಕ್ತಗಾಯಪಡಿಸಿದನು. ಅಷ್ಟರಲ್ಲಿ ತನ್ನ ಮಗನಾದ ಮಂಜುನಾಥ ರವರು ಗಲಾಟೆ ಬಿಡಿಸಲು ಬಂದಿದ್ದು, ಆತನಿಗೂ ಸಹ ಮೇಲ್ಕಂಡವರು ಕೈಗಳಿಂದ ಮೈ ಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿದರು. ನಂತರ ಅವರು ತಮ್ಮನ್ನು ಕುರಿತು ಈ ದಿನ ಉಳಿದುಕೊಂಡಿದ್ದೀರಾ, ನಿಮ್ಮನ್ನು ಪ್ರಾಣಸಹಿತ ಬಿಡುವುದಿಲ್ಲವೆಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

7. ಚಿಂತಾಮಣಿ ನಗರ ಪೊಲೀಸ್‌ ಠಾಣೆ  ಮೊ.ಸಂ.79/2021 ಕಲಂ. 188 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ದಿನಾಂಕ: 18/05/2021 ರಂದು ಬೆಳಿಗ್ಗೆ 10:15 ಗಂಟೆಗೆ ಪಿ.ಐ ಜೆ.ಎನ್. ಆನಂದಕುಮಾರ್ ಪೊಲೀಸ್ ಇನ್ಸ್ ಪೆಕ್ಟರ್ ರವರು ನೀಡಿದ ಜ್ಷಾಪನಾ ಸಾರಾಂಶವೇನೆಂದರೆ  ದಿನಾಂಕ: 18/05/2021 ರಂದು ಬೆಳಿಗ್ಗೆ ತಾನು ಠಾಣೆಯ ಸಿಬ್ಬಂದಿಯಾದ ಸರ್ವೇಶ, ಸಿಪಿಸಿ-426 ಜೀಪ್ ಚಾಲಕ ಆಂಜೀನಪ್ಪ ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ನಂಬರ್ ಕೆಎ-40-ಜಿ-3699  ರಲ್ಲಿ ನಗರ ಠಾಣಾ ಸರಹದ್ದಿನಲ್ಲಿ ಗಸ್ತು ಮಾಡಿಕೊಂಡು ಇದೇ ದಿನ  ಬೆಳಿಗ್ಗೆ 9-45 ಗಂಟೆ ಸಮಯದಲ್ಲಿ ಚಿಂತಾಮಣಿ ನಗರ ಆರ್.ಕೆ.ನರ್ಸಿಂಗ್ ಹೋಂ ರಸ್ತೆಯಲ್ಲಿ ಬರು ಶ್ರೀ.ವಿನಾಯಕ ಹೋಂ ನೀಡ್ಸ್ ಪ್ರಾವೀಜನ್ ಸ್ಟೋರ್ ಮುಂದೆ ಜನರು ಸೇರಿದ್ದು, ಕರ್ನಾಟಕ ಸರ್ಕಾರದ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ, ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಒಬ್ಬರಿಗೊಬ್ಬರು ಅಕ್ಕ-ಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿದ್ದು, ಸದರಿ ಅಂಗಡಿಯ ಮಾಲೀಕನ ಹೆಸರು ಮತ್ತು ವಿಳಾಸ ಕೇಳಲಾಗಿ ಸುನಿಲ್ ಬಿನ್ ಶ್ರೀನಿವಾಸಮೂರ್ತಿ,37 ವರ್ಷ, ವ್ಯಾಪಾರ, ವೈಶ್ಯರು ವಾಸ ಎನ್.ಆರ್.ಬಡಾವಣೆ, ಚಿಂತಾಮಣಿ ಟೌನ್ ಮೊಬೈಲ್ ನಂ:9902232500 ಎಂತ ತಿಳಿಸಿದ್ದು, ಸರ್ಕಾರದ ಆದೇಶಗಳನ್ನು ಉಲ್ಲಂಘನೆ ಮಾಡಿರುವ ಹಾಗು ರಾಷ್ಟ್ರೀಯ ವಿಪತ್ತು ಕಾಯ್ದೆ ಅಡಿ ಮೇಲ್ಕಂಡ ಪ್ರಾವೀಜನ್ ಸ್ಟೋರ್  ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

8. ಚಿಂತಾಮಣಿ ನಗರ ಪೊಲೀಸ್‌ ಠಾಣೆ  ಮೊ.ಸಂ.80/2021 ಕಲಂ. 323,324,504,506 ಐ.ಪಿ.ಸಿ :-

          ದಿನಾಂಕ: 19/05/2021 ರಂದು ಬೆಳಿಗ್ಗೆ 11:30  ಗಂಟೆಗೆ  ಪಿರ್ಯಾದಿದಾರರಾದ ಪ್ರಕಾಶ್ ಬಾಬು ಬಿನ್ ಮದ್ದೇರಿ ಮುನಿವೆಂಕಟಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ತಂದೆಗೆ 3 ಜನ ಮಕ್ಕಳು ಇದ್ದು 1 ನೇ ಮಂಜುನಾಥ, 2 ನೇ ತಾನು, 3 ನೇ ರಮೇಶ್ ಬಾಬು  ರವರರಾಗಿರುತ್ತೇವೆ. ತಾವು ಎಲ್ಲರೂ ಅಲಾಯಿದೆಯಾಗಿ ಸಂಸಾರ ಮಾಡಿಕೊಂಡಿರುತ್ತೇವೆ. ಹೀಗಿರುವಾಗ ಈ ದಿನ ದಿ: 18/05/2021 ರಂದು ರಾತ್ರಿ ಸುಮಾರು 9:30 ಗಂಟೆ ಸಮಯದಲ್ಲಿ  ತಾನು ಮನೆಯಲ್ಲಿರುವಾಗ ಮನೆಯ ಪಕ್ಕದಲ್ಲಿಯೇ ವಾಸವಿರುವ ತಮ್ಮ ಅಣ್ಣನಾದ ಮಂಜುನಾಥ ರವರು ಮಗನಾದ ಪ್ರದೀಪ್ ಕುಮಾರ್ ರವರು ಪ್ರತಿದಿನ ಮದ್ಯಪಾನ ಮಾಡಿಕೊಂಡು ಬಂದು ಅವರ ತಂದೆಯ ಮೇಲೆ ಗಲಾಟೆ ಮಾಡಿ ಕೈಗಳಿಂದ ಹೊಡೆಯಲು ಹೋಗುತ್ತಿದ್ದಾಗ ಅದನ್ನು ಕಂಡ ತಾನು ಮನೆಯಿಂದ ಆಚೆ ಬಂದು ನೋಡಲಾಗಿ ಪ್ರದೀಪ್ ಕುಮಾರ್ ರವರು ತನ್ನ ಅಣ್ಣನ ಮೇಲೆ ಕೂಗಾಡಿಕೊಂಡು ಜಗಳ ಮಾಡುತ್ತಿದ್ದನ್ನು ಕಂಡು ತಾನು ಯಾಕೆ ನಿಮ್ಮ ತಂದೆಯ ಮೇಲೆ ಆ ರೀತಿಯಾಗಿ ಗಲಾಟೆ ಮಾಡಿ ಹೊಡೆಯುತ್ತಿದ್ದೀಯಾ ಎಂತ ಕೇಳಿದ್ದಕ್ಕೆ ಏ ನೀನು ಯಾರೊ ಕೇಳುವುದಕ್ಕೆ ಬೋಳಿ ಮಗನೇ ಎಂತ ಕೆಟ್ಟ ಮಾತುಗಳಿಂದ ಬೈದು ತನ್ನ ಮೇಲೆ ಸಹ ಗಲಾಟೆ ಮಾಡಿ ಕೈಗಳಿಂದ  ಮುಖದ ಮೇಲೆ ಹೊಡೆದು ಮತ್ತು ತುಟಿಯ ಮೇಲೆ ಬಾಯಿಯಿಂದ ಕಚ್ಚಿ ರಕ್ತಗಾಯಪಡಿಸಿದನು. ಅದೇ ವೇಳೆಗೆ ಅಲ್ಲಿಗೆ ಬಂದ ತನ್ನ ತಮ್ಮನಾದ ರಮೇಶ್ ಬಾಬು ರವರು ಸದರಿ ಪ್ರದೀಪ್ ಕುಮಾರ್ ನನ್ನು ಯಾಕೆ ನೀನು ನಿಮ್ಮ ಚಿಕ್ಕಪ್ಪನ ಮೇಲೆ ಗಲಾಟೆ ಮಾಡುತ್ತಿದ್ದೀಯಾ ಎಂದು ಜಗಳ ಬಿಡಿಸಲು ಬಂದಾಗ ಅವರನ್ನು ಸಹ  ಪಕ್ಕಕ್ಕೆ ತಳ್ಳಿ ಅವರ ಮೇಲೆ ಸಹ ಕೆಟ್ಟ ಮಾತುಗಳಿಂದ ಬೈದು ಕೈಗಳಿಂದ ಮೈ ಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿ ಏ ಬೋಳಿ ನನ್ನ ಮಕ್ಕಳಾ ನೀವು ಅಡ್ಡಬಂದರೆ ನಿಮ್ಮ ಇಬ್ಬರನ್ನು ಸಾಯಿಸುವುದಾಗಿ ಬೆದರಿಕೆ ಹಾಕಿ  ಅಲ್ಲಿಯಿಂದ ಹೊರಟು ಹೋಗಿರುತ್ತಾನೆ. ತದನಂತರ ತಮಗೆ ಮೈ ಕೈ ನೋವು ಜಾಸ್ತಿಯಾದ್ದರಿಂದ ತಮ್ಮ ಪಕ್ಕದ ಮನೆಯ ವಾಸಿ ಶಂಕರ್ ಎಂಬುವವರು ಬಂದು ತಮ್ಮನ್ನು ಉಪಚರಿಸಿ ಯಾವುದೋ ಒಂದು ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿರುತ್ತಾರೆ, ನಂತರ ತಮ್ಮ ಏರಿಯಾದ ಹಿರಿಯರು ಸೇರಿಕೊಂಡು ಈ ಬಗ್ಗೆ ಬೆಳಿಗ್ಗೆ ಮಾತನಾಡೋಣವೆಂತ ತಿಳಿಸಿದ್ದರಿಂದ ನಾವು ಮನೆಗೆ ಹೊರಟು ಹೋಗಿರುತ್ತೇವೆ. ಸದರಿ ಮೇಲ್ಕಂಡರವರು ಯಾವುದೇ ಪಂಚಾಯ್ತಿತಿಗೆ ಬಾರದ ಕಾರಣ ಈ ದಿನ ತಡವಾಗಿ ದೂರುನ್ನು ನೀಡುತ್ತಿರುತ್ತೇವೆ. ಆದ್ದರಿಂದ ತಮ್ಮ ಮೇಲೆ ಗಲಾಟೆ ಮಾಡಿ ಕೆಟ್ಟ ಮಾತುಗಳಿಂದ ಬೈದು ಹಲ್ಲೆ ಮಾಡಿ ಪ್ರಾಣಬೆದರಿಕೆ ಹಾಕಿದ ಮೇಲ್ಕಂಡ ಪ್ರದೀಪ್ ಕುಮಾರ್ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

9. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.72/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:18/05/2021 ರಂದು  ಸಂಜೆ 4-00 ಗಂಟೆಯಲ್ಲಿ ನ್ಯಾಯಾಲಯದ ಮ.ಪಿ.ಸಿ-364 ರವರು ಎನ್.ಸಿ.ಆರ್-103/2021 ರಲ್ಲಿ ಕ್ರಿಮಿನಲ್ ಕೇಸನ್ನು ದಾಖಲು ಮಾಡಿಕೊಳ್ಳಲು ಅನುಮತಿ ಪತ್ರದ ಸಾರಾಂಶವೆನೆಂದರೆ ದಿನಂಕ:08/05/2021 ರಂದು ಬೆಳಿಗ್ಗೆ 9-00 ಗಂಟೆಯಲ್ಲಿ ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ:08/05/2021 ರಂದು ಬೆಳಿಗ್ಗೆ 7-15 ಗಂಟೆಯಲ್ಲಿ ಕೆ.ಎ-40 ಜಿ-281 ನೊಂದಣಿ ಸಂಖ್ಯೆ ಸರ್ಕಾರಿ ಜೀಪ್ ನಲ್ಲಿ ಎಪಿಸಿ-105 ಅಶ್ವತ್ಥರೆಡ್ಡಿ ರವರೊಂದಿಗೆ ಠಾಣಾ ಸಿಬ್ಬಂದಿಯಾದ ಸಿ ಹೆಚ್ ಸಿ-214 ಲೋಕೇಶ್ ರವರೊಂದಿಗೆ ಗೌರಿಬಿದನೂರು ನಗರದಲ್ಲಿ ಗಸ್ತು ಮಾಡುತ್ತೀದ್ದಾಗ ಸಿಪಿಸಿ-318 ದೇವರಾಜ್ ರವರು ಪೊನ್ ಮಾಡಿ ಆನಂದಪುರ ಗೇಟ್ ಬಳಿ ಯಾರೋ ಒಬ್ಬ ಅಸಾಮಿಯು ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು  ಸ್ಥಳವಾಕಾಶವನ್ನು ಮಾಡಿಕೊಟ್ಟು ಮದ್ಯ ಸೇವನೆಯನ್ನು ಮಾಡುತ್ತೀರುವುದಾಗಿ ತಿಳಿಸಿದ್ದು  ಅದರಂತೆ ನಾನು ಮಾದನಹಳ್ಳಿ ಗೇಟ್ ಬಳಿ ಪಂಚರನ್ನು ಕರೆದುಕೊಂಡು ಆನಂದಪುರ ಗೇಟ್ ಬಳಿ ಮರೆಯಲ್ಲಿ ಜೀಪ್ ನ್ನು ನಿಲ್ಲಿಸಿ ಮರೆಯಲ್ಲಿ ನಿಂತಿ ನೋಡಲಾಗಿ ಯಾರೋ ಒಬ್ಬ ಅಸಾಮಿಯು ಸಾರ್ವಜನಿಕರಿಗೆ ಮದ್ಯವನ್ನು ಸರಬರಾಜು ಮಾಡುತ್ತಿದ್ದು ಅಲ್ಲಿ ಸಾರ್ವಜನಿಕರು ಮದ್ಯವನ್ನು ಸೇವನೆ ಮಾಡುತ್ತೀರುವುದು ಕಂಡು ಬಂದಿದ್ದು ಸದರಿ ದಾಳಿ ಮಾಡಲು ಹೋಗುವಷ್ಟರಲ್ಲಿ ಅಲ್ಲಿ ಮದ್ಯ ಸೇವನೆ ಮಾಡುತ್ತೀದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು ಅಲ್ಲಿ ಮದ್ಯವನ್ನು ಸರಬರಾಜು ಮಾಡುತ್ತೀದ್ದ ಅಸಾಮಿಯನ್ನ ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ರಾಮಚಂದ್ರಪ್ಪ ಬಿನ್ ನರಸಿಂಹಪ್ಪ, 72 ವರ್ಷ, ನಾಯಕರು , ದ್ವಾರಗಾನಹಳ್ಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು  ಸ್ಥಳದಲ್ಲಿ ಮದ್ಯಪಾನ ಮಾಡಲು  ಯಾವುದಾರರು ಪರವಾನಿಗೆಯೇ ಇದ್ದರೇ ತೋರಿಸುವಂತೆ ಕೇಳಲಾಗಿ ತನ್ನ ಬಳಿ ಯಾವುದೂ ಇಲ್ಲವೆಂತ ತಿಳಿಸಿದ್ದು ನಂತರ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ 1) HAYWARDS CHEERS WHISKY 90 ML  ಮದ್ಯವಿರುವ 14 ಟೆಟ್ರಾ ಪ್ಯಾಕೇಟ್ ಗಳು 2) HAYWARDS CHEERS WHISKY 90 ML  ಖಾಲಿ 02 ಟೆಟ್ರಾ ಪಾಕೇಟ್ ಗಳು, 3) ಖಾಲಿ 02 ಪ್ಲಾಸ್ಟಿಕ್ ಗ್ಲಾಸ್ ಗಳು 4) ಒಂದು ಲೀಟರ್ ಸಾಮರ್ಥ್ಯದ ಒಂದು ಖಾಲಿ ವಾಟರ್ ಬಾಟೆಲ್ ಇದ್ದು ಇವುಗಳನ್ನು ಬೆಳಿಗ್ಗೆ 7-30 ಗಂಟೆಯಿಂದ 8-30 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಬೆಳಿಗ್ಗೆ 9-00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ವರದಿಯನ್ನು ಸಿದ್ದಪಡಿಸಿ ಮಾಲು ಮತ್ತು ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಸೂಚಿಸಿರುತ್ತೆ.

 

10. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.73/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:18/05/2021 ರಂದು  ಸಂಜೆ 4-30 ಗಂಟೆಯಲ್ಲಿ ನ್ಯಾಯಾಲಯದ ಮ.ಪಿ.ಸಿ-364 ರವರು ಎನ್.ಸಿ.ಆರ್-104/2021 ರಲ್ಲಿ ಕ್ರಿಮಿನಲ್ ಕೇಸನ್ನು ದಾಖಲು ಮಾಡಿಕೊಳ್ಳಲು ಅನುಮತಿ ಪತ್ರದ ಸಾರಾಂಶವೆನೆಂದರೆ ದಿನಾಂಕ:08/05/2021 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದುರಿನ ಸಾರಾಂಶವೆನೆಂದರೆ ದಿನಾಂಕ:08/05/2021 ರಂದು ಬೆಳಿಗ್ಗೆ 9-15 ಗಂಟೆಯಲ್ಲಿ ಕೆ.ಎ-40 ಜಿ-281 ನೊಂದಣಿ ಸಂಖ್ಯೆ ಸರ್ಕಾರಿ ಜೀಪ್ ನಲ್ಲಿ ಎಪಿಸಿ-105 ಅಶ್ವತ್ಥರೆಡ್ಡಿ ರವರೊಂದಿಗೆ ಠಾಣಾ ಸಿಬ್ಬಂದಿಯಾದ ಸಿ ಹೆಚ್ ಸಿ-244 ಗೋಪಾಲ ರವರೊಂದಿಗೆ ಗೌರಿಬಿದನೂರು ನಗರದಲ್ಲಿ ಗಸ್ತು ಮಾಡುತ್ತೀದ್ದಾಗ ಸಿಪಿಸಿ-282 ರಮೇಶ್ ರವರು ಪೊನ್ ಮಾಡಿ ಕರೆಕಲ್ಲಹಳ್ಳಿಯಿಂದ ನಾಗಿರೆಡ್ಡಿ ಬಡಾವಣೆಗೆ ಹೋಗುವ ತಿರುವಿನಲ್ಲಿ ಯಾರೋ ಒಬ್ಬ ಅಸಾಮಿಯು ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು  ಸ್ಥಳವಾಕಾಶವನ್ನು ಮಾಡಿಕೊಟ್ಟು ಮದ್ಯ ಸೇವನೆಯನ್ನು ಮಾಡುತ್ತೀರುವುದಾಗಿ ತಿಳಿಸಿದ್ದು  ಅದರಂತೆ ನಾನು ಕರೆಕಲ್ಲಿಹಳ್ಳಿ ಆಟೋ ನಿಲ್ದಾಣದ ಬಳಿ ಪಂಚರನ್ನು ಕರೆದುಕೊಂಡು ಸ್ವಲ್ಪ ದೂರ ಹೋಗಿ ಮರೆಯಲ್ಲಿ ಜೀಪ್ ನ್ನು ನಿಲ್ಲಿಸಿ ಮರೆಯಲ್ಲಿ ನಿಂತಿ ನೋಡಲಾಗಿ ಯಾರೋ ಒಬ್ಬ ಅಸಾಮಿಯು ಸಾರ್ವಜನಿಕರಿಗೆ ಮದ್ಯವನ್ನು ಸರಬರಾಜು ಮಾಡುತ್ತಿದ್ದು ಅಲ್ಲಿ ಸಾರ್ವಜನಿಕರು ಮದ್ಯವನ್ನು ಸೇವನೆ ಮಾಡುತ್ತೀರುವುದು ಕಂಡು ಬಂದಿದ್ದು ಸದರಿ ದಾಳಿ ಮಾಡಲು ಹೋಗುವಷ್ಟರಲ್ಲಿ ಅಲ್ಲಿ ಮದ್ಯ ಸೇವನೆ ಮಾಡುತ್ತೀದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು ಅಲ್ಲಿ ಮದ್ಯವನ್ನು ಸರಬರಾಜು ಮಾಡುತ್ತೀದ್ದ ಅಸಾಮಿಯನ್ನ ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಲೋಕನಾಯ್ಕ ಬಿನ್ ಸಕ್ಕರೇ ನಾಯ್ಕ, 70 ವರ್ಷ, ಲಂಬಾಣಿ ಜನಾಂಗ, ವಾಸ: ಹಂಪಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು  ಸ್ಥಳದಲ್ಲಿ ಮದ್ಯಪಾನ ಮಾಡಲು  ಯಾವುದಾರರು ಪರವಾನಿಗೆಯೇ ಇದ್ದರೇ ತೋರಿಸುವಂತೆ ಕೇಳಲಾಗಿ ತನ್ನ ಬಳಿ ಯಾವುದೂ ಇಲ್ಲವೆಂತ ತಿಳಿಸಿದ್ದು ನಂತರ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ 1) HAYWARDS CHEERS WHISKY 90 ML  ಮದ್ಯವಿರುವ 16 ಟೆಟ್ರಾ ಪ್ಯಾಕೇಟ್ ಗಳು ಮದ್ಯದ ಪ್ರಮಾಣವನ್ನು ಲೆಕ್ಕ ಮಾಡಲಾಗಿ 1 ಲೀ 440 ML ಇದರ ಮೌಲ್ಯವು 562-00/- ಆಗಿದ್ದು, 2) HAYWARDS CHEERS WHISKY 90 ML  ಖಾಲಿ 02 ಟೆಟ್ರಾ ಪಾಕೇಟ್ ಗಳು, 3) ಖಾಲಿ 02 ಪ್ಲಾಸ್ಟಿಕ್ ಗ್ಲಾಸ್ ಗಳು 4) ಒಂದು ಲೀಟರ್ ಸಾಮರ್ಥ್ಯದ ಒಂದು ಖಾಲಿ ವಾಟರ್ ಬಾಟೆಲ್ ಇದ್ದು ಇವುಗಳನ್ನು ಬೆಳಿಗ್ಗೆ 9-30 ಗಂಟೆಯಿಂದ 10-30 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಬೆಳಿಗ್ಗೆ 11-00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ವರದಿಯನ್ನು ಸಿದ್ದಪಡಿಸಿ ಮಾಲು ಮತ್ತು ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಸೂಚಿಸಿರುತ್ತೆ.

 

11. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.74/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:18/05/2021 ರಂದು  ಸಂಜೆ 17-00 ಗಂಟೆಯಲ್ಲಿ ನ್ಯಾಯಾಲಯದ ಮ.ಪಿ.ಸಿ-364 ರವರು ಎನ್.ಸಿ.ಆರ್-105/2021 ರಲ್ಲಿ ಕ್ರಿಮಿನಲ್ ಕೇಸನ್ನು ದಾಖಲು ಮಾಡಿಕೊಳ್ಳಲು ಅನುಮತಿ ಪತ್ರದ ಸಾರಾಂಶವೆನೆಂದರೆ ದಿನಾಂಕ:08/05/2021 ರಂದು ಬೆಳಿಗ್ಗೆ 11-15 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ:08/05/2021 ರಂದು ಬೆಳಿಗ್ಗೆ PSI ಸಾಹೇಬರು ಗೌರಿಬಿದನೂರು ನಗರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಗುಪ್ತ ಮಾಹಿತಿಯನ್ನು ಸಂಗ್ರಹಣೆ ಮಾಡಲು ಮತ್ತು ಕಾನೂನು ಕ್ರಮ ಕೈಗೊಳ್ಳಲು ತಿಳಿಸಿದ್ದು ಅದರಂತೆ ನಾನು ಬೆಳಿಗ್ಗೆ 9-00 ಗಂಟೆಯಲ್ಲಿ ಗೌರಿಬಿದನೂರು ನಗರದಲ್ಲಿ ಗಸ್ತು ಮಾಡುತ್ತೀದ್ದಾಗ ಸಾರ್ವಜನಿಕರು ರವರು ಪೊನ್ ಮಾಡಿ ಮಾದನಹಳ್ಳಿ ಗೇಟ್ ಬಳಿ ಯಾರೋ ಒಬ್ಬ ಅಸಾಮಿಯು ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು  ಸ್ಥಳವಾಕಾಶವನ್ನು ಮಾಡಿಕೊಟ್ಟು ಮದ್ಯ ಸೇವನೆಯನ್ನು ಮಾಡುತ್ತೀರುವುದಾಗಿ ತಿಳಿಸಿದ್ದು  ಅದರಂತೆ ನಾನು ಮಾದನಹಳ್ಳಿ ದೇವಸ್ಥಾನದ ಬಳಿ ಪಂಚರನ್ನು ಕರೆದುಕೊಂಡು ಸ್ವಲ್ಪ ದೂರ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮಾದನಹಳ್ಳಿ ಗೇಟ್ ಬಳಿ ಯಾರೋ ಒಬ್ಬ ಅಸಾಮಿಯು ಸಾರ್ವಜನಿಕರಿಗೆ ಮದ್ಯವನ್ನು ಸರಬರಾಜು ಮಾಡುತ್ತಿದ್ದು ಅಲ್ಲಿ ಸಾರ್ವಜನಿಕರು ಮದ್ಯವನ್ನು ಸೇವನೆ ಮಾಡುತ್ತೀರುವುದು ಕಂಡು ಬಂದಿದ್ದು ಸದರಿ ದಾಳಿ ಮಾಡಲು ಹೋಗುವಷ್ಟರಲ್ಲಿ ಅಲ್ಲಿ ಮದ್ಯ ಸೇವನೆ ಮಾಡುತ್ತೀದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು ಅಲ್ಲಿ ಮದ್ಯವನ್ನು ಸರಬರಾಜು ಮಾಡುತ್ತೀದ್ದ ಅಸಾಮಿಯನ್ನ ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಶ್ರೀಕಾಂತ್ ಬಿನ್ ನಾರಾಯಣಸ್ವಾಮಿ, 29 ವರ್ಷ, ಈಡಿಗರು, ನಂದಿಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು  ಸ್ಥಳದಲ್ಲಿ ಮದ್ಯಪಾನ ಮಾಡಲು  ಯಾವುದಾರರು ಪರವಾನಿಗೆಯೇ ಇದ್ದರೇ ತೋರಿಸುವಂತೆ ಕೇಳಲಾಗಿ ತನ್ನ ಬಳಿ ಯಾವುದೂ ಇಲ್ಲವೆಂತ ತಿಳಿಸಿದ್ದು ನಂತರ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ 1) HAYWARDS CHEERS WHISKY 90 ML  ಮದ್ಯವಿರುವ 18 ಟೆಟ್ರಾ ಪ್ಯಾಕೇಟ್ ಗಳು ಮದ್ಯದ ಪ್ರಮಾಣವನ್ನು ಲೆಕ್ಕ ಮಾಡಲಾಗಿ 1 ಲೀ 200 ML ಇದರ ಮೌಲ್ಯವು 632-00/- ಆಗಿದ್ದು, 2) HAYWARDS CHEERS WHISKY 90 ML  ಖಾಲಿ 02 ಟೆಟ್ರಾ ಪಾಕೇಟ್ ಗಳು, 3) ಖಾಲಿ 02 ಪ್ಲಾಸ್ಟಿಕ್ ಗ್ಲಾಸ್ ಗಳು 4) ಒಂದು ಲೀಟರ್ ಸಾಮರ್ಥ್ಯದ ಒಂದು ಖಾಲಿ ವಾಟರ್ ಬಾಟೆಲ್ ಇದ್ದು ಇವುಗಳನ್ನು ಬೆಳಿಗ್ಗೆ 9-30 ಗಂಟೆಯಿಂದ 10-30 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಬೆಳಿಗ್ಗೆ 11-00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ವರದಿಯನ್ನು ಸಿದ್ದಪಡಿಸಿ ಮಾಲು ಮತ್ತು ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ  ಕೋರಿರುತ್ತೆ.

 

12. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.51/2021 ಕಲಂ. 279,337 ಐ.ಪಿ.ಸಿ:-

          ದಿನಾಂಕ; 19-05-2021 ರಂದು ಬೆಳಗ್ಗೆ 10-30 ಗಂಟೆಗೆ  ಪಿರ್ಯಾದಿಯಾದ  ಗವಿಕುಂಟನಹಳ್ಳಿ  ಗ್ರಾಮದ ವಾಸಿ ಶ್ರೀ, ಬಾಬು ಬಿನ್ ನಂಜಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ  ತನ್ನ ತಂದೆ-ತಾಯಿಯವರಿಗೆ ಒಟ್ಟು 4 ಜನ ಮಕ್ಕಳು ಅದರಲ್ಲಿ  ತಾನು 3 ನೇಯವನು ನಾನು 2 ನೇ ದೇವೇಂದ್ರ ಎಂಬುವರಿದ್ದು ಎಲ್ಲರಿಗೂ ಮದುವೆಗಳಾಗಿದ್ದು  ಒಟ್ಟಿಗೆ  ವಾಸವಿದ್ದು  ತಮ್ಮ ತಂದೆಯವರು ಜಿರಾಯ್ತಿದಾರರಾಗಿದ್ದು  ಸದರಿ ಜಮೀನಿನಲ್ಲಿ ತರಕಾರಿ ಸೊಪ್ಪು ಬೆಳೆಗಳನ್ನು ಬೆಳೆಯುತ್ತಿದ್ದು  ದಿನಾಂಕ 16-05-2021 ರಂದು ನಮ್ಮ ಅಣ್ಣ  ದೇವೇಂದ್ರನು  ಜಮೀನಿನಲ್ಲಿ ಬೆಳೆದಿರುವ  ಕೊತ್ತಂಬರಿ ಸೊಪ್ಪನ್ನು ಕಿತ್ತು ಬೆಂಗಳೂರು ನಗರದ ಸಿಟಿ  ಮಾರ್ಕೇಟಿನಲ್ಲಿ  ಮಾರಿಕೊಂಡು ಬರಲು ನಮ್ಮಣ್ಣ ಸ್ನೇಹಿತ ನವೀನ್ಕುಮಾರ್ ಬಿನ್ ಅಶ್ವತ್ಥಪ್ಪ ರವರೊಂದಿಗೆ ಪಕ್ಕದ ಗ್ರಾಮವಾದ ಮುದ್ದಲಹಳ್ಳಿ ಗ್ರಾಮದ ನವೀನ್ಕುಮಾರ್ ಎಂಬುವವರ ಬಾಬತ್ತು ಕೆಎ-40-ಎ-8095 ಲಗೇಜ್ ಗಾಡಿಯನ್ನು ಕರೆಯಿಸಿಕೊಂಡು ಅದಕ್ಕೆ ಕೊತ್ತಂಬರಿ ಸೊಪ್ಪನ್ನು ತುಂಬಿಕೊಂಡು  ಹೋದರು ದಿನಾಂಕ;17-05-2021 ರಂದು ಬೆಳಗಿನ ಜಾವ 4-00 ಗಂಟೆಯಲ್ಲಿ ನಮ್ಮ ಅಣ್ಣನ ಜೊತೆಯಲ್ಲಿ ಹೋಗಿದ್ದಂತಹ ನವೀನ್ ಕುಮಾರನು ನನಗೆ ಪೋನ್ ಮಾಡಿ ತಿಳಿಸಿದ ವಿಚಾರವೇನೆಂದರೆ  ಕೊತ್ತಂಬರಿ ಸೊಪ್ಪನ್ನು ಮಾರಾಟ ಮಾಡಿಕೊಂಡು ಊರಿಗೆ ವಾಪಸ್ಸು ಬರಲು ಬೆಳಗಿನ ಜಾವ 3-00 ಗಂಟೆಯ ಸಮಯದಲ್ಲಿ ನಾಗಾರ್ಜುನ ಕಾಲೇಜು ಪ್ಲೈ ಓವರ್ ಬಳಿ ಎನ್–ಎಚ್-7 ರಸ್ತೆಯಲ್ಲಿ  ಬರುತ್ತಿದ್ದಾಗ   ಲಗೇಜ್ ಆಟೋವನ್ನು ಚಾಲನೆ ಮಾಡುತ್ತಿದ್ದ ಚಾಲಕ ಕುಮಾರ್ ರವರು  ತನ್ನ ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ  ಎಡಬದಿಯ  ಬ್ರಿಡ್ಜ್ ನ ಗೋಡೆಗೆ  ಡಿಕ್ಕಿ ಹೊಡೆಯಿಸಿ ಅಪಘಾತ ಪಡಿಸಿದ್ದರಿಂದ ಟೊಂಪೂವಿನ ಮುಂಬಾಗ ಜಖಂಗೊಂಡು ತನಗೆ ಮೈಮೇಲೆ ಸಣ್ಣ-ಪುಟ್ಟ ಗಾಯಗಳಾಗಿ  ದೇವೇಂದ್ರನಿಗೆ ತಲೆಯ ಹಿಂಬಾಗ ಮತ್ತು ಕತ್ತಿನ ಹಿಂಬಾಗ  ಗಾಯಗಳಾಗಿರುತ್ತವೆ,  ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಬಳಿ ಬರುತ್ತಿದ್ದು  ತನೆಗ ಬರುವಂತೆ ತಿಳಿಸಿದನು, ತಕ್ಷಣ ನಾನು ನಮ್ಮಣ್ಣ ಶ್ರೀನಿವಾಸ ರವರು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರಗೆ ಬಂದಾಗ ವಿಚಾರ ನಿಜವಾಗಿತ್ತು,  ದೇವೇಂದ್ರನಿಗೆ  ಪ್ರಥಮ ಚಿಕಿತ್ಸೆಯನ್ನು ನೀಡಿ  ಹೆಚ್ಚಿನ ಚಿಕಿತ್ಸೆಗಾಗಿ  ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರ ಮೇರೆಗೆ   ನಾನು ನಮ್ಮಣ್ಣನನ್ನು  ನಿಮ್ಹಾನ್ಸ್ ಆಸ್ಪತ್ರಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ನಮ್ಮಣ್ಣನಿಗೆ  ಚಿಕಿತ್ಸೆ ನೀಡುತ್ತಿರುತ್ತಾರೆ, ನಾನು ನಮ್ಮಣ್ಣನಿಗೆ ಚಿಕಿತ್ಸೆಯನ್ನು ಕೊಡಿಸಿಕೊಂಡಿದ್ದರಿಂದ ದೂರನ್ನು ಕೊಡಲು ತಡವಾಗಿದ್ದು  ಅಪಘಾತ ಪಡಿಸಿದ  ಕೆಎ-40-ಎ-8095 ಲಗೇಜ್ ಆಟೋ ಚಾಲಕ ಕುಮಾರ್ ರವರ ಮೇಲೆ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ.

 

13. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.162/2021 ಕಲಂ. 15(3),32(3) ಕೆ.ಇ ಆಕ್ಟ್:-

          ದಿನಾಂಕ:-19/05/2021 ರಂದು ಬೆಳಿಗ್ಗೆ 10-00 ಗಂಟೆಗೆ ಪಿಸಿ-543 ಸುದಾಕರ್ ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ 19/05/2021 ರಂದು ಬೆಳಿಗ್ಗೆ ಠಾಣಾಧಿಕಾರಿಗಳು ತನಗೆ ಗುಪ್ತ ಮಾಹಿತಿ ಸಂಗ್ರಹ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು ಠಾಣಾ ಸರಹದ್ದಿನ ಗ್ರಾಮವಾದ ಹಂಡಿಗನಾಳ ಗ್ರಾಮದ ಕಡೆ ಗಸ್ತು ಮಾಡಿಕೊಂಡು ಬೆಳಿಗ್ಗೆ 9-15 ಗಂಟೆ ಸಮಯದಲ್ಲಿ ಕೇಶವಪುರ ಗ್ರಾಮದಲ್ಲಿ ಮಾಹಿತಿ ಸಂಗ್ರಹದಲ್ಲಿದ್ದಾಗ ಗ್ರಾಮದ ಬಾತ್ಮೀದಾರರಿಂದ ಸದರಿ ಗ್ರಾಮದ ವಾಸಿ ಮಂಜುನಾಥ ಬಿನ್ ನಾಗರಾಜಪ್ಪ ಎಂಬುವನು ತನ್ನ ಮನೆಯ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಮಧ್ಯದ ಪಾಕೇಟುಗಳನ್ನಿಟ್ಟುಕೊಂಡು ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ತಾನು ಮಂಜುನಾಥ ರವರ ಮನೆಯ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮನೆಯ ಮುಂಭಾಗದ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ಆಸಾಮಿಯು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಟೆಟ್ರಾ ಪಾಕೇಟ್ ಗಳನ್ನಿಟ್ಟುಕೊಂಡು ಯಾರೋ 2 ಜನ ಆಸಾಮಿಗಳಿಗೆ ಮದ್ಯದ ಟೆಟ್ರಾ ಪಾಕೇಟ್ ಗಳನ್ನು ನೀಡಿ ಕುಡಿಯಲು ಅನುವು ಮಾಡಿಕೊಟ್ಟಿದ್ದು, ಸದರಿ ಸಾರ್ವಜನಿಕರು ಮದ್ಯವನ್ನು ಸೇವನೆ ಮಾಡುತ್ತಿರುವುದು ಖಚಿತವಾದ ಮೇಲೆ ದಾಳಿ ಮಾಡಲಾಗಿ ಮಧ್ಯವನ್ನು ಕುಡಿಯುತ್ತಿದ್ದ ಸಾರ್ವಜನಿಕರು ಸಮವಸ್ತ್ರದಲ್ಲಿದ್ದ ತನ್ನನ್ನು ಕಂಡು ಓಡಿ ಹೋಗಿದ್ದು, ಮದ್ಯವನ್ನು ಹಿಡಿದುಕೊಂಡು ಕುಳಿತಿದ್ದ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಆವರ ಹೆಸರು ವಿಳಾಸ ಕೇಳಲಾಗಿ ಮಂಜುನಾಥ ಬಿನ್ ನಾಗರಾಜಪ್ಪ, 37 ವರ್ಷ, ನಾಯಕರು, ಕೂಲಿ ಕೆಲಸ, ವಾಸ-ಕೇಶವಾಪುರ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಸದರಿ ಆಸಾಮಿ ಬಳಿ ಇದ್ದ ಕವರ್ ನಲ್ಲಿ ಪರಿಶೀಲಿಸಲಾಗಿ ಅದರಲ್ಲಿ ರಾಜ ವಿಸ್ಕಿಯ ಯ 8 ಟೆಟ್ರಾ ಪಾಕೇಟ್ ಗಳಿದ್ದು ಪ್ರತಿ ಟೆಟ್ರಾ ಪಾಕೇಟ್ ನ ಬೆಲೆ 35.13 ರೂ ಎಂದು ಇದ್ದು ಇವುಗಳ ಒಟ್ಟು ಬೆಲೆ 281.04 ರೂ.ಗಳಾಗಿರುತ್ತೆ ಸ್ಥಳದಲ್ಲಿ 2 ಪ್ಲಾಸ್ಟಿಕ್ ಗ್ಲಾಸುಗಳು, 2 ಖಾಲಿ ನೀರಿನ ಪಾಕೇಟುಗಳು ಹಾಗು 90 ಎಂ.ಎಲ್ ನ ರಾಜ ವಿಸ್ಕಿಯ 2 ಖಾಲಿ ಟೆಟ್ರಾ ಪಾಕೇಟ್ ಗಳಿದ್ದು, ಮೇಲ್ಕಂಡ ಆಸಾಮಿ ಮಂಜುನಾಥ ಬಿನ್ ನಾಗರಾಜಪ್ಪ ರವರು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಾ ಹಾಗೂ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಮಾಲು ಮತ್ತು ಅರೋಪಿಯನ್ನು ವಶಕ್ಕೆ ಪಡೆದುಕೊಂಡು ಬಂದು ಹಾಜರುಪಡಿಸಿದ್ದು ಸದರಿ ಆಸಾಮಿಯ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

 

14. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.163/2021 ಕಲಂ. 15(3),32(3) ಕೆ.ಇ ಆಕ್ಟ್:-

          ದಿನಾಂಕ:-19/05/2021 ರಂದು ಬೆಳಿಗ್ಗೆ 11-45 ಗಂಟೆಗೆ ಪಿಸಿ-543 ಸುದಾಕರ್ ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ 19/05/2021 ರಂದು ಬೆಳಿಗ್ಗೆ ಠಾಣಾಧಿಕಾರಿಗಳು ತನಗೆ ಗುಪ್ತ ಮಾಹಿತಿ ಸಂಗ್ರಹ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು ಠಾಣಾ ಸರಹದ್ದಿನ ಗ್ರಾಮಗಳಾದ ವೀರಾಪುರ, ಭೂದಾಳ, ಸೊಣ್ಣೇನಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ದೇವರಮಳ್ಳೂರು ಗ್ರಾಮದಲ್ಲಿ ಗುಪ್ತ ಮಾಹಿತಿ ಸಂಗ್ರಹದಲ್ಲಿದ್ದಾಗ ಗ್ರಾಮದ ಬಾತ್ಮೀದಾರರಿಂದ ಸದರಿ ಗ್ರಾಮದ ವಾಸಿ ಗೌಡಯ್ಯ ಬಿನ್ ನಾರಾಯಣಸ್ವಾಮಿ ಎಂಬುವನು ತನ್ನ ಮನೆಯ ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಮಧ್ಯದ ಪಾಕೇಟುಗಳನ್ನಿಟ್ಟುಕೊಂಡು ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ತಾನು ಗೌಡಯ್ಯ ರವರ ಮನೆಯ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮನೆಯ ಪಕ್ಕದ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ಆಸಾಮಿಯು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಟೆಟ್ರಾ ಪಾಕೇಟ್ ಗಳನ್ನಿಟ್ಟುಕೊಂಡು ಯಾರೋ ಒಬ್ಬ ಆಸಾಮಿಗೆ ಮದ್ಯದ ಟೆಟ್ರಾ ಪಾಕೇಟ್ ಗಳನ್ನು ನೀಡಿ ಕುಡಿಯಲು ಅನುವು ಮಾಡಿಕೊಟ್ಟಿದ್ದು, ಸದರಿ ಸಾರ್ವಜನಿಕ ಆಸಾಮಿಯು ಮದ್ಯವನ್ನು ಸೇವನೆ ಮಾಡುತ್ತಿರುವುದು ಖಚಿತವಾದ ಮೇಲೆ ದಾಳಿ ಮಾಡಲಾಗಿ ಮಧ್ಯವನ್ನು ಕುಡಿಯುತ್ತಿದ್ದ ಸಾರ್ವಜನಿಕನು ಸಮವಸ್ತ್ರದಲ್ಲಿದ್ದ ತನ್ನನ್ನು ಕಂಡು ಓಡಿ ಹೋಗಿದ್ದು, ಮದ್ಯವನ್ನು ಹಿಡಿದುಕೊಂಡು ಕುಳಿತಿದ್ದ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ಗೌಡಯ್ಯ ಬಿನ್ ನಾರಾಯಣಸ್ವಾಮಿ, 35 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ದೇವರಮಳ್ಳೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಸದರಿ ಆಸಾಮಿಯ ಬಳಿ ಇದ್ದ ಕವರ್ ನಲ್ಲಿ ಪರಿಶೀಲಿಸಲಾಗಿ ಅದರಲ್ಲಿ ರಾಜ ವಿಸ್ಕಿಯ ಯ 9 ಟೆಟ್ರಾ ಪಾಕೇಟ್ ಗಳಿದ್ದು ಪ್ರತಿ ಟೆಟ್ರಾ ಪಾಕೇಟ್ ನ ಬೆಲೆ 35.13 ರೂ ಎಂದು ಇದ್ದು ಇವುಗಳ ಒಟ್ಟು ಬೆಲೆ 316.17 ರೂ.ಗಳಾಗಿರುತ್ತೆ ಸ್ಥಳದಲ್ಲಿ 1 ಪ್ಲಾಸ್ಟಿಕ್ ಗ್ಲಾಸು, 1 ಖಾಲಿ ನೀರಿನ ಪಾಕೇಟುಗಳು ಹಾಗು 90 ಎಂ.ಎಲ್ ನ ರಾಜ ವಿಸ್ಕಿಯ 1 ಖಾಲಿ ಟೆಟ್ರಾ ಪಾಕೇಟ್ ಗಳಿದ್ದು, ಮೇಲ್ಕಂಡ ಆಸಾಮಿ ಗೌಡಯ್ಯ ಬಿನ್ ನಾರಾಯಣಸ್ವಾಮಿ ರವರು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಾ ಹಾಗೂ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಮಾಲು ಮತ್ತು ಅರೋಪಿಯನ್ನು ವಶಕ್ಕೆ ಪಡೆದುಕೊಂಡು ಬಂದು ಹಾಜರುಪಡಿಸಿದ್ದು ಸದರಿ ಆಸಾಮಿಯ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

 

15. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.164/2021 ಕಲಂ. 15(3),32(3) ಕೆ.ಇ ಆಕ್ಟ್:-

          ದಿನಾಂಕ:-19/05/2021 ರಂದು ಮದ್ಯಾಹ್ನ 1-45 ಗಂಟೆಗೆ ಪಿಸಿ-543 ಸುದಾಕರ್ ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ 19/05/2021 ರಂದು ಬೆಳಿಗ್ಗೆ ಠಾಣಾಧಿಕಾರಿಗಳು ತನಗೆ ಗುಪ್ತ ಮಾಹಿತಿ ಸಂಗ್ರಹ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು ಠಾಣಾ ಸರಹದ್ದಿನ ಗ್ರಾಮಗಳಾದ ಹಿತ್ತಲಹಳ್ಳಿ, ಬೆಳ್ಳೂಟಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಮದ್ಯಾಹ್ನ 1-00 ಗಂಟೆ ಸಮಯದಲ್ಲಿ ಭಕ್ತರಹಳ್ಳಿ ಗ್ರಾಮದಲ್ಲಿ ಗುಪ್ತ ಮಾಹಿತಿ ಸಂಗ್ರಹದಲ್ಲಿದ್ದಾಗ ಗ್ರಾಮದ ಬಾತ್ಮೀದಾರರಿಂದ ಸದರಿ ಗ್ರಾಮದ ವಾಸಿ ದೇವರಾಜ ಎಂಬುವರ ಮನೆಯ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿಯು ಅಕ್ರಮವಾಗಿ ಮಧ್ಯದ ಪಾಕೇಟುಗಳನ್ನಿಟ್ಟುಕೊಂಡು ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ತಾನು ದೇವರಾಜ ರವರ ಮನೆಯ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮನೆಯ ಮುಂಭಾಗದ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ಆಸಾಮಿಯು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಟೆಟ್ರಾ ಪಾಕೇಟ್ ಗಳನ್ನಿಟ್ಟುಕೊಂಡು ಯಾರೋ 3 ಜನ ಆಸಾಮಿಗಳಿಗೆ ಮದ್ಯದ ಟೆಟ್ರಾ ಪಾಕೇಟ್ ಗಳನ್ನು ನೀಡಿ ಕುಡಿಯಲು ಅನುವು ಮಾಡಿಕೊಟ್ಟಿದ್ದು, ಸದರಿ ಸಾರ್ವಜನಿಕರು ಮದ್ಯವನ್ನು ಸೇವನೆ ಮಾಡುತ್ತಿರುವುದು ಖಚಿತವಾದ ಮೇಲೆ ದಾಳಿ ಮಾಡಲಾಗಿ ಮಧ್ಯವನ್ನು ಕುಡಿಯುತ್ತಿದ್ದ ಸಾರ್ವಜನಿಕರು ಸಮವಸ್ತ್ರದಲ್ಲಿದ್ದ ತನ್ನನ್ನು ಕಂಡು ಓಡಿ ಹೋಗಿದ್ದು, ಮದ್ಯವನ್ನು ಹಿಡಿದುಕೊಂಡು ಕುಳಿತಿದ್ದ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ತಾರಕರಾಮ್ ಬಿನ್ ಮುತ್ತುರಾಜ್, 30 ವರ್ಷ, ಪ ಜಾತಿ, ಕೂಲಿ ಕೆಲಸ, ವಾಸ-ಭಕ್ತರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಸದರಿ ಆಸಾಮಿಯ ಬಳಿ ಇದ್ದ ಕವರ್ ನಲ್ಲಿ ಪರಿಶೀಲಿಸಲಾಗಿ ಅದರಲ್ಲಿ ರಾಜ ವಿಸ್ಕಿಯ ಯ 10 ಟೆಟ್ರಾ ಪಾಕೇಟ್ ಗಳಿದ್ದು ಪ್ರತಿ ಟೆಟ್ರಾ ಪಾಕೇಟ್ ನ ಬೆಲೆ 35.13 ರೂ ಎಂದು ಇದ್ದು ಇವುಗಳ ಒಟ್ಟು ಬೆಲೆ 351.3 ರೂ.ಗಳಾಗಿರುತ್ತೆ ಸ್ಥಳದಲ್ಲಿ 3 ಪ್ಲಾಸ್ಟಿಕ್ ಗ್ಲಾಸುಗಳು, 3 ಖಾಲಿ ನೀರಿನ ಪಾಕೇಟುಗಳು ಹಾಗು 90 ಎಂ.ಎಲ್ ನ ರಾಜ ವಿಸ್ಕಿಯ 3 ಖಾಲಿ ಟೆಟ್ರಾ ಪಾಕೇಟ್ ಗಳಿದ್ದು, ಮೇಲ್ಕಂಡ ಆಸಾಮಿ ತಾರಕರಾಮ್ ಬಿನ್ ಮುತ್ತುರಾಜ್ ರವರು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಾ ಹಾಗೂ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಮಾಲು ಮತ್ತು ಅರೋಪಿಯನ್ನು ವಶಕ್ಕೆ ಪಡೆದುಕೊಂಡು ಬಂದು ಹಾಜರುಪಡಿಸಿದ್ದು ಸದರಿ ಆಸಾಮಿಯ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

 

16. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.55/2021 ಕಲಂ. ಮನುಷ್ಯ ಕಾಣೆ:-

          ದಿನಾಂಕ-19.05.2021 ರಂದು ಬೆಳಿಗ್ಗೆ 11.00 ಗಂಟೆಗೆ ಪಿರ್ಯಾದಿ ಗಂಗಾಧರ ಬಿನ್ ಅಂಜಿನಪ್ಪ, ಪಿಲೇಚರ್ ಕ್ವಾಟ್ರಸ್, ಶಿಡ್ಲಘಟ್ಟ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನ್ನ ತಮ್ಮ ನಾದ ಚಂದ್ರಶೇಖರ್ ಬಿನ್ ಅಂಜಿನಪ್ಪ, 22 ವರ್ಷ, ರವರು ದಿನಾಂಕ.06.05.2021 ರಂದು ರಾತ್ರಿ 9-10 ಗಂಟೆಯಲ್ಲಿ ಮನೆಯಲ್ಲಿದ್ದಾಗ ತಮ್ಮನ ಮೊಬೈಲ್ ನಂ.7022111139 ನಂಬರ್ ಗೆ ಕರೆ ಬಂದಿದ್ದು, ಕರೆಯನ್ನು ಸ್ವೀಕರಿಸಿ ತಮ್ಮ ಹೊರಗಡೆ ಹೊರಗಡೆ ಸ್ವಲ್ಪ ಕೆಲಸವಿದೆ ಈಗಲೇ ಹೋಗಿ ಬರುವೆ ಎಂದು ಹೇಳಿ ಟಿ.ವಿ.ಎಸ್. ಪಿನಿಕ್ 125 ದ್ವಿಚಕ್ರ ವಾಹನ ತೆಗೆದುಕೊಂಡು ಹೋದವನು ಮನೆಗೆ ವಾಪಸ್ಸು ಬಂದಿರುವುದಿಲ್ಲ ಮೊಬೈಲ್ ಗೆ ಕರೆ ಮಾಡಿದರೆ ಸ್ವೀಚ್ ಆಫ್ ಆಗಿರುತ್ತೆ. ಅಂದಿನಿಂದ ಇದುವರೆಗೂ ಸಂಬಂದಿಕರು, ಸ್ನೇಹಿತರು ಬಂದುಬಳಗದವರ ಮನೆಗಳಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಆದ್ದರಿಂದ ಕಾಣೆಯಾದ ನನ್ನ ತಮ್ಮ ಚಂದ್ರಶೇಖರ ರವರನ್ನು ಪತ್ತೆ ಮಾಡಿಕೊಡಲು ಕೋರಿ ಈ ದಿನ ತಡವಾಗಿ ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 19-05-2021 05:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080