ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 101/2021 ಕಲಂ. 114,341,353,504,506,34 ಐ.ಪಿ.ಸಿ & 5,6 ESSENTIAL SERVICES MAINTENANCE ACT, 1981 :-

     ದಿನಾಂಕ: 18/04/2021 ರಂದು ರಾತ್ರಿ 9-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ.ಜಿ ರಾಮಯ್ಯ ಬಿನ್ ಲೇಟ್ ಗಂಗಯ್ಯ, 57 ವರ್ಷ, ಘಟಕ ವ್ಯವಸ್ಥಾಪಕರು, ಬಾಗೇಪಲ್ಲಿ ಘಟಕ ಕ.ರಾ.ರ.ಸಾ.ಸಂಸ್ಥೆ, ಚಿಕ್ಕಬಳ್ಳಾಪುರ ವಿಭಾಗ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿ ಕೆಲಸ ನಿರ್ವಹಿಸುವ ನೌಕರರ ಮೇಲೆ ಹಲ್ಲೆ ಮಾಡುವುದು, ಕೆಲಸಕ್ಕೆ ಹೋಗದಂತೆ ಬೆದರಿಕೆ ಹಾಕುತ್ತಿರುವುದು ಕಂಡು ಬಂದಿರುತ್ತದೆ. ಈ ದಿನ ದಿನಾಂಕ 18.04.2021 ರಂದು :- ಶ್ರೀ, ಸಾಹೇಬ್ ಪಟೇಲ್ ಚಾಲಕ , ಬಾಗೇಪಲ್ಲಿ ಘಟಕ ರವರು ಕರ್ತವ್ಯ ಮುಗಿಸಿ ನಂತರ ತನ್ನ ಸ್ವಂತ  ಕೆಲಸದ ನಿಮಿತ್ತ  ಶ್ರೀ, ಹನುಮಂತ ದಾಸರ ಚಾಲಕ ರವರ ಜೊತೆ ಗೂಳೂರಿಗೆ ಹೋಗಿ ಬಾಗೇಪಲ್ಲಿಯಲ್ಲ್ಲಿನ ತನ್ನ ಮನೆಗೆ ಕಾರಿನಲ್ಲಿ  ಹಿಂದಿರುಗುವಾಗ ಸುಮಾರು 19:00 ಗಂಟೆಯ ಸಮಯದಲ್ಲಿ ಬಾಗೇಪಲ್ಲಿ ಶಾಸಕರ ಕಛೇರಿಯ ಮುಂದೆ ಡಿ.ವಿ.ಜಿ ರಸ್ತೆಯಲ್ಲಿ  ನಮ್ಮ ಸಂಸ್ಥೆಯ  ಸಿಬ್ಬಂದಿಗಳಾದ ಶ್ರೀ. ಆರ್.ಜಿ ನಂಜುಂಡಪ್ಪ ಚಾಲಕರು ಬಿಲ್ಲೆ ಸಂಖ್ಯೆ 27681   ಶ್ರೀ. ಆರ್ ಮುನಿಸ್ವಾಮಿ ಚಾಲಕ ಬಿಲ್ಲೆ ಸಂಖ್ಯೆ 221 ರವರುಗಳು ಕಾರನ್ನು ಅಡ್ಡಗಟ್ಟಿ, ಶ್ರೀ. ಸಾಹೇಬ್ ಪಟೇಲ್ ಚಾಲಕ ರವರನ್ನು ಕಾರಿನಿಂದ ಕೆಳಗೆ ಇಳಿಸಿ ಕೊರಳಪಟ್ಟಿಯನ್ನು ಹಿಡಿದುಕೊಂಡು, ಮುಷ್ಕರ ನಡೆಸುತ್ತಿದ್ದರೂ, ಸಹಾ ನೀನು ಕರ್ತವ್ಯಕ್ಕೆ ಏಕೆ ಹೋದೆ? ನಿನ್ನನ್ನು ಕರ್ತವ್ಯ ಮಾಡಲು ಹೇಳಿದವರು ಯಾರು? ಈ ರೀತಿ ಹಾಗೂ ಅವಾಚ್ಯ ಶಬ್ದಗಳನ್ನು ಉಪಯೋಗಿಸಿ ಇನ್ನು ಮುಂದೆ ಕರ್ತವ್ಯ ನಿರ್ವಹಿಸಿದರೆ, ಬಾಗೇಪಲ್ಲಿಯಲ್ಲಿ ಜೀವನ ನಡೆಸಲು ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾರೆ. ಈ ಸಮಯದಲ್ಲಿ ಸದರಿಯವರುಗಳ ಜೊತೆ ಇನ್ನೂ ಕೆಲವು ಮುಷ್ಕರ ನಿರತ ಸಿಬ್ಬಂದಿಗಳಾದ ಸಿದ್ದಪ್ಪ ಚಾಲಕ/ನಿರ್ವಾಹಕ, ಬಿಲ್ಲೆ ಸಂಖ್ಯೆ 561, ಸುಧಾಕರ ಚಾಲಕ/ನಿರ್ವಾಹಕ ಬಿಲ್ಲೆ ಸಂಖ್ಯೆ 6056 ರವರುಗಳು ಸ್ಥಳದಲ್ಲಿ ಇದ್ದು ಕುಮ್ಮಕ್ಕು ನೀಡುತ್ತಾ  ಇದರ ಬಗ್ಗೆ ನಾಳೆ ವಿಚಾರಿಸೋಣ ಈಗ ಏನೂ ಮಾಡುವುದು ಬೇಡವೆಂದು ನಂಜುಂಡಪ್ಪ ಮತ್ತು ಮುನಿಸ್ವಾಮಿ ರವರುಗಳಿಗೆ ಹೇಳಿದರು. ನಂತರ  ಘಟನಾ ಸ್ಥಳಕ್ಕೆ ಪೊಲೀಸರು ಬರುವುದನ್ನು ಕಂಡು ಸ್ಥಳದಿಂದ ಹೊರಟುಹೋಗಿರುತ್ತಾರೆಂದು ಶ್ರೀ. ಸಾಹೇಬ್ ಪಟೇಲ್ ರವರು ನನಗೆ ವಿಚಾರವನ್ನು ತಿಳಿಸಿರುತ್ತಾರೆ.  ಮುಷ್ಕರದ ಸಮಯದಲ್ಲಿ ಕರ್ತವ್ಯಕ್ಕೆ ಹಾಜರಾಗುವ ನಿಷ್ಠಾವಂತ ನೌಕರರಿಗೆ ಈ ರೀತಿ ಕಿರುಕುಳ ನೀಡುತ್ತಿರುವುದು ಆಗಾಗ್ಗೆ ಕಂಡುಬರುತ್ತಿದ್ದು, ಈ ಹಿಂದೆಯೂ ಸಹಾ ದೂರುಗಳನ್ನು ದಾಖಲಿಸಲಾಗಿರುತ್ತದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಅಗತ್ಯ ಸೇವಾ ನಿರ್ವಹಣಾ ಕಾಯ್ದೆಯಡಿ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರವು ESMA ಕಾಯಿದೆ ಜಾರಿ ಮಾಡಿದ್ದು, ಕರ್ತವ್ಯಕ್ಕೆ ಹಾಜರಾಗುವ ನೌಕರರಿಗೆ ಕಿರುಕುಳ ನೀಡುವ ಮೇಲ್ಕಂಡ ಮುಷ್ಕರ ನಿರತ ಸಿಬ್ಬಂದಿಗಳಾದ ಶ್ರೀ. ಆರ್.ಜಿ ನಂಜುಂಡಪ್ಪ ಚಾಲಕರು ಬಿಲ್ಲೆ ಸಂಖ್ಯೆ 27681   ಶ್ರೀ. ಆರ್ ಮುನಿಸ್ವಾಮಿ ಚಾಲಕ ಬಿಲ್ಲೆ ಸಂಖ್ಯೆ 221, ಸಿದ್ದಪ್ಪ ಚಾಲಕ/ನಿರ್ವಾಹಕ, ಬಿಲ್ಲೆ ಸಂಖ್ಯೆ 561, ಸುಧಾಕರ ಚಾಲಕ/ನಿರ್ವಾಹಕ ಬಿಲ್ಲೆ ಸಂಖ್ಯೆ 6056 ರವರುಗಳ ಮೇಲೆ ESMA ಕಾಯಿದೆ ಮತ್ತು ಇತರೆ ಸಂಬಂಧಪಟ್ಟ ಐ.ಪಿ.ಸಿ ಕಾಯ್ದೆಗಳಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

2. ಚೇಳೂರು ಪೊಲೀಸ್ ಠಾಣೆ ಮೊ.ಸಂ. 29/2021 ಕಲಂ. 143,147,148,149,307,323,324 ಐ.ಪಿ.ಸಿ :-

     ದಿನಾಂಕ:19-04-2021 ರಂದು ಬೆಳಗ್ಗೆ 11-15 ಗಂಟೆಗೆ ಪಿರ್ಯಾಧಿದಾರರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಸುಮಾರು 3 ದಿನಗಳ ಹಿಂದೆ ನಾರಾಯಣಪ್ಪ ಮತ್ತು ನಮಗೂ ಕಾಂಪೌಂಡ್ ಗೊಡೆಯ ವಿಚಾರದಲ್ಲಿ ಜಗಳ ಆಗಿದ್ದು, ಈ ವಿಚಾರದಲ್ಲಿ ಗ್ರಾಮದಲ್ಲಿ ಪಂಚಾಯ್ತಿ ದೊಡ್ಡವರ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳತ್ತೇವೆಂದು ಮಾತನಾಡಿಕೊಂಡಿದ್ದೇವು. ಹೀಗಿರುವಲ್ಲಿ ದಿನಾಂಕ:17-04-2021 ರಂದು ಶನಿವಾರ ಮದ್ಯಾಹ್ನ 2 ಗಂಟೆಯ ಸಮಯದಲ್ಲಿ   ವಿನಾಕಾರಣ ಜಗಳ ತೆಗೆದು ಕಾಂಪೌಂಡ್ ಗೋಡೆ ತೆಗೆಯಲಿಲ್ಲ ಎಂದು ದುರುದ್ದೇಶದಿಂದ ಅವರು ಎಲ್ಲಾ ಒಟ್ಟಿಗೆ ಸೇರಿ ನನ್ನ ಮಗನಾದ ಚಂದ್ರಶೇಖರ ಮತ್ತು ನನ್ನ ತಮ್ಮನಾದ ಮದ್ದಿರೆಡ್ಡಿ, ಹಾಗೂ ನನ್ನ ಸೊಸೆ ಲಕ್ಷ್ಮೀದೇವಿ ರವರನ್ನು ಸಾಯಿಸುವ ಉದ್ದೇಶದಿಂದ ಕಲ್ಲು ಮತ್ತು ರಾಡುಗಳಿಂದ ಹೊಡಿದಿರುತ್ತಾರೆ. ಎಲ್ಲರಿಗೂ ರಕ್ತಗಾಯಗಳು ಆಗಿದ್ದು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಹರೀಶ್ ಎಂಬವರು ನನ್ನ ಸೊಸೆಯಾದ ಲಕ್ಷ್ಮೀದೇವಿ ರವರಿಗೆ ಕಾಲುಗಳಿಂದ ಎದೆಯ ಮೇಲೆ ಒದ್ದಿರುತ್ತಾನೆ. 1]ನಾರಾಯಣಪ್ಪ 2] ವೆಂಕಟನರಸಮ್ಮ 3]ಶ್ರೀನಿವಾಸ 4] ಹರೀಶ್ 5] ಅಶೋಕ 6] ನರಸಿಂಹಪ್ಪ 7] ರಮೇಶ್ 8] ವೆಂಕಟರವಣಪ್ಪ 9]ಈರಮ್ಮ ರವರು ಏಕಾ ಏಕೀ ಬಂದು ನನ್ನ ಮಗನಾದ ಚಂದ್ರಶೇಖರ ನನ್ನ ತಮ್ಮನಾದ ಮದ್ದಿರೆಡ್ಡಿ, ಸೊಸೆ ಲಕ್ಷ್ಮೀದೇವಿ ರವರನ್ನು ಕೆಳಗೆ ಬಿಳಿಸಿ ಕಾಲುಗಳಿಂದ ಒದ್ದು ಕಲ್ಲು ಮತ್ತು ಕಬ್ಬಿಣ ರಾಡುಗಳಿಂದ ಸಾಯಿಸುವ ಉದ್ದೇಶದಿಂದ ತಲೆ, ಕಾಲು,ಕೈಗಳಿಗೆ ತೀರ್ವತರ ರಕ್ತಗಾಯಗಳನ್ನು ಉಂಟು ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುವ  ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರೆಗೆ ಠಾಣಾ ಮೊ.ಸಮ: 29/2021 ಕಲಂ: 143,147,148,307,323,324,ರೆ/ವಿ 149 ಐಪಿಸಿ ರೀತ್ಯ ಕೇಸು ದಾಖಲು ಮಾಡಿರುತ್ತೆ.

 

3. ಚೇಳೂರು ಪೊಲೀಸ್ ಠಾಣೆ ಮೊ.ಸಂ. 30/2021 ಕಲಂ. 506,34,504,323,324 ಐ.ಪಿ.ಸಿ & The Scheduled Castes and the Scheduled Tribes (Prevention of Atrocities) Amendment Bill, 2015 :-

     ದಿನಾಂಕ:19-04-2021 ರಂದು ಮದ್ಯಾಹ್ನ 12.30. ಗಂಟೆ ಸಮಯದಲ್ಲಿ ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ   ನಮ್ಮ ಮಾವನಾದ ಯಗುವ ನೆಟ್ಟಕುಂಟಪಲ್ಲಿ ಗ್ರಾಮದ ವಾಸಿ ನಾರಾಯಣಪ್ಪ ರವರ ಖಾತೆ H-L ನಂ.74 ರಲ್ಲಿ ಪೂ- ಪ 30 ಉತ್ತರ-ದಕ್ಷಿಣ 40 ಅಡಿಗಳು ಜಾಗ ಇದ್ದು ಇದೇ ಗ್ರಾಮದ ವಾಸಿ ಚಂದ್ರಶೇಖರ ಬಿನ್ ಸೀತಪ್ಪ ರವರು ನಮ್ಮ ಮಾವನ ಮನೆಯ ಪಕ್ಕದಲ್ಲಿ ಕಲ್ಲುಗಳ ರಾಶಿಯನ್ನು ಹಾಕಿದ್ದ. ಈ ಜಾಗ ತೆರವು ಮಾಡಲು ಹೇಳಿದಾಗ 17-04-2021 ರ ಸಂಜೆ 04-30 ರಲ್ಲಿ ಚಂದ್ರ ಶೇಖರ್ ಪರವಾಗಿ ಬಳೆಹೊಸಹಳ್ಳಿ ಗ್ರಾಮದ ವಾಸಿ ಮದ್ದಿರೆಡ್ಡಿ ಬಿನ್ ನಾರಾಯಣಪ್ಪ ನನ್ನ ಮಾವನ ಮೇಲೆ ಹಲ್ಲೆ ನಡೆಸಿ ನನ್ನ ಮಾವನ ಮಗ ಅಶೋಕ, ಹರಿ   ಮತ್ತು ರಮೇಶ,ರವರಿಗೆ ರಕ್ತದ ಗಾಯಗಳು ಮಾಡಿರುತ್ತಾರೆ. ಅವಾಚ್ಯ ಮಾತುಗಳಿಂದ ಬೈದಿರುತ್ತಾರೆ.1)ಚಂದ್ರಶೇಖರ ಬಿನ್ ಸೀತಪ್ಪ 2) ಲಕ್ಷ್ಮಿದೇವಿ ಕೊಂ ಸುಬ್ಬಿರೆಡ್ಡಿ 3)ಸುಬ್ಬಿರೆಡ್ಡಿ ಬಿನ್ ಸೀತಪ್ಪ 4) ಮದ್ದಿರೆಡ್ಡಿ ಬಿನ್ ನಾರಾಯಣಪ್ಪ  ರವರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿರುತ್ತಾರೆ. ನಾನು ನಮ್ಮ ಮಾವನನ್ನು ನೋಡಲು  ಊರಿಗೆ ಹೋಗಿದ್ದಾಗ ಈ ಗಲಾಟೆ ಆಗುತ್ತಿತ್ತು .ಸದರಿ ಜನರು ನಮಗೆ ನಮ್ಮ ಮಾವನನ್ನು ಕೊಲೆ ಮಾಡಲು ಬೆದರಿಸಿ ನಾಯಕ ಜಾತಿಯನ್ನು ನಡು ಬೀದಿಯಲ್ಲಿ ಜಾತಿ ನಿಂದನೆ ಮಾಡಿರುತ್ತಾರೆ.ನಮ್ಮ ಮಾವನ ಮೇಲೆ ಕೊಲೆ ಬೆದರಿಕೆ ಹಾಕಿರುತ್ತಾರೆ.ಇವರನ್ನು  ಬಾಗೇಪಲ್ಲಿ ಸರ್ಕಾರಿ ಅಸ್ಪತ್ರೆಯಲ್ಲಿ ದಾಖಲು ಮಾಡಿರುತ್ತೇವೆ. ಗ್ರಾಮದಲ್ಲಿ ಪಂಚಾಯ್ತಿ ನಡೆಸಿ ವಿಫಲರಾಗಿ ನ್ಯಾಯ ಸಿಗದೆ ಇದ್ದು ತಡವಾಗಿ ದೂರನ್ನು ನೀಡಿದ್ದನ್ನು ಪಡೆದ ಠಾಣಾ ಮೊ.ಸಂ:30/2021 ಕಲಂ: 323,324,504,506,ರೆ/ವಿ 34 ಐಪಿಸಿ ಮತ್ತು ಕಲಂ: 3(1)(r)(s) SC/ST POA ACT 2015 ರೀತ್ಯ ಪ್ರಕರಣ ದಾಖಲು ಮಾಡಿರರುತ್ತೆ.

 

4. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 26/2021 ಕಲಂ. 279,336 ಐ.ಪಿ.ಸಿ & 134 ಐ.ಎಂ.ವಿ ಆಕ್ಟ್:-

     ದಿನಾಂಕ:-18/04/2021 ರಂದು ಸಂಜೆ-700 ಗಂಟೆಗೆ ಪಿರ್ಯಾಧಿದಾರರಾದ ಶ್ರೀ ಮುನೇಗೌಡ ಸಿ ಬಿನ್ ಚಿಕ್ಕಮುನಿಶ್ಯಾಮಪ್ಪ, 57 ವರ್ಷ, ಜಿರಾಯ್ತಿ, ವಕ್ಕಲಿಗರು, ಹೋಸಹುಡ್ಯ ಗ್ರಾಮ, ವಿಜಯಪುರ ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನಿಡೀದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ದಿನಾಂಕ:-18/04/2021 ರಂದು ನನ್ನ ಬಾಬತ್ತು ಕೆಎ-44-ಎಮ್-0480 ಮಾರುತಿ ಆಲ್ಟೋ ಕಾರಿನಲ್ಲಿ ನಾನು ಮತ್ತು ನನ್ನ ಇಬ್ಬರು ಮಕ್ಕಳಾದ ಕುಮಾರಿ ಹಿತೈಶ್ರಿ ಮತ್ತು ಕುಮಾರಿ ಯಶೀಕಾ ರವರೊಂದಿಗೆ  ಚಿಕ್ಕಬಳ್ಳಾಪುರ ನಗರದ ಗೀರೀಶ್ ದಂತ ಚಿಕಿತ್ಸಾಲಯಕ್ಕೆ ಬಂದು ಚಿಕಿತ್ಸೆ ಪಡೆದುಕೊಂಡು ವಾಪಸ್ಸು ನಮ್ಮ ಗ್ರಾಮಕ್ಕೆ ಹೋಗಲು ಚಿಕ್ಕಬಳ್ಳಾಪುರ –ಬೆಂಗಳೂರು ಬಿಬಿ ರಸ್ತೆಯ ಶನಿಮಾಹತ್ಮ ದೇವಾಲಯದ ಬಳಿ ಇರುವ ಎಸ್.ಬಿ.ಐ ಬ್ಯಾಂಕಿನ ಮುಂದೆ ಸುಮಾರು ಮಧ್ಯಾಹ್ನ 3-00 ಗಂಟೆಯ ಸಮಯದಲ್ಲಿ ನಮ್ಮಕಾರಿನ ಚಾಲಕರಾದ ಗೀರೀಶ್ ರವರು ಕಾರನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಎದುರಿಗೆ ಬಂದ ಕೆಎ-03 ಎಮ್ ಇ-3752 ಇನೋವಾ ಕಾರಿನ ಚಾಲಕ ತಮ್ಮ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ನಮ್ಮ ಕಾರಿನ ಮುಂಬಾಗದ ಗ್ಲಾಸ್, ಬಂಫರ್, ರೇಡಿಯೆಟರ್, ಕಾರಿನ ಬ್ಯಾನೆಟ್ ಜಖಂಗೊಂಡಿರುತ್ತದೆ. ಸದರಿ ಇನೋವಾ ಕಾರನ್ನು ಕಾರಿನ ಚಾಲಕ ಅಪಘಾತದ ಸ್ಥಳದಲ್ಲೆ ನಿಲ್ಲಿಸಿ ಹೊರಟು ಹೋಗಿದ್ದು. ಸದರಿ ಕೆಎ-03-ಎಮ್ ಇ-3752 ಇನೋವಾ ಕಾರಿನ ಚಾಲಕನ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ಗಣಕೀಕೃತ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 157/2021 ಕಲಂ. 279,304(A) ಐ.ಪಿ.ಸಿ :-

     ದಿನಾಂಕ 19-04-2021 ರಂದು ಮದ್ಯಾಹ್ನ 3-15 ಗಂಟೆಗೆ ವೆಂಕಟೇಶಪ್ಪ ಬಿನ್ ಲೇಟ್ ಚಿಕ್ಕಪಾಪಯ್ಯ, 50 ವರ್ಷ, ನಾಯಕರು, ಜಲಗಾರ, ತಿನಕಲ್ಲು ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನಗೆ ಒಂದು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು 1ನೇ ಲಕ್ಷ್ಮಿ, 2ನೇ ಶಶಿಕುಮಾರ್ ಮತ್ತು 3ನೇ ಗೀತಾ ಎಂಬುವರಾಗಿರುತ್ತಾರೆ. ತನ್ನ ಮಗನಾದ ಶಶಿಕುಮಾರ್ ಎಂಬುವನಿಗೆ 21 ವರ್ಷ ವಯಸ್ಸಾಗಿದ್ದು ಜಿರಾಯ್ತಿ ಮಾಡಿಕೊಂಡಿರುತ್ತಾನೆ. ಅವನಿಗೆ ಇನ್ನೂ ಮದುವೆ ಆಗಿರುವುದಿಲ್ಲ. ಈ ದಿನ ದಿನಾಂಕ 19/04/2021 ರಂದು ತನ್ನ ಮಗನಿಗೆ ಉಪ್ಪರಪೇಟೆ ಗ್ರಾಮದಲ್ಲಿ ಕೆಲಸವಿದ್ದ ಪ್ರಯುಕ್ತ ತನ್ನ ಮಗ ಶಶಿಕುಮಾರ್ ತಮ್ಮ ಗ್ರಾಮದ ವಾಸಿಯಾದ ಆಂಜಪ್ಪ ಬಿನ್ ನಾರಾಯಣಪ್ಪ ರವರ ಬಾಬ್ತು ಕೆಎ-53 ಇಡಬ್ಲ್ಯೂ-0010 ನೊಂದಣಿ ಸಂಖ್ಯೆಯ ಬಜಾಜ್ ಪಲ್ಸರ್ 220 ದ್ವಿಚಕ್ರ ವಾಹನದಲ್ಲಿ ತಮ್ಮ ಗ್ರಾಮದ ಬಳಿ ಇರುವ ಪೆಟ್ರೋಲ್ ಬಂಕ್ನಲ್ಲಿ ಗಾಡಿಗೆ ಪೆಟ್ರೋಲ್ ಹಾಕಿಸಿಕೊಂಡು ಹೋಗುವುದಾಗಿ ಮದ್ಯಾಹ್ನ 12.15 ಗಂಟೆಗೆ ಊರಿನಿಂದ ಹೋಗಿರುತ್ತಾನೆ. ಇದೇ ದಿನ ಮದ್ಯಾಹ್ನ 12.45 ಗಂಟೆ ಸಮಯದಲ್ಲಿ ತನ್ನ ಅಕ್ಕನ ಮಗನಾದ ತಮ್ಮ ಗ್ರಾಮದ ಶಿವಕುಮಾರ್ ಬಿನ್ ಆಂಜಪ್ಪ ರವರು ತನಗೆ ಪೋನ್ ಮಾಡಿ ಶಶಿಕುಮಾರ್ಗೆ ತಮ್ಮ ಗ್ರಾಮದ ಬಳಿ ಇರುವ ಮುನಿನಾರಾಯಣಪ್ಪ ರವರ ಜಮೀನಿನ ಪಕ್ಕದಲ್ಲಿ ಹಾದು ಹೋಗಿರುವ ಮುಖ್ಯ ರಸ್ತೆಯಲ್ಲಿ ಅಪಘಾತವಾಗಿರುವುದಾಗಿ ತಿಳಿಸಿದ್ದರ ಮೇರೆಗೆ ತಾನು, ತಮ್ಮ ಗ್ರಾಮದ ಮಂಜುನಾಥ ಬಿನ್ ಚಿಕ್ಕ ನಾರಾಯಣಪ್ಪ ಮತ್ತು ರವಿಕುಮಾರ್ ಬಿನ್ ಆಂಜಪ್ಪ ರವರು ಸ್ಥಳಕ್ಕೆ ಹೋಗಿ ನೋಡಲಾಗಿ ಸ್ಥಳದಲ್ಲಿ ಜನರು ಸೇರಿದ್ದು ನೋಡಲಾಗಿ ತನ್ನ ಮಗನ ಕತ್ತು ಮತ್ತು ಎಡಕಾಲು ಮುರಿದು ಹೋಗಿ ಮೈ-ಕೈಗೆ ತರಚಿದ ಗಾಯಗಳಾಗಿ ಕಿವಿಯಿಂದ ರಕ್ತ ಬಂದಿದ್ದು ತನ್ನ ಮಗ ಮೃತಪಟ್ಟಿದ್ದನು. ರಸ್ತೆಯ ಬದಿಯಲ್ಲಿ ತನ್ನ ಮಗ ತೆಗೆದುಕೊಂಡು ಹೋಗಿದ್ದ ಮೇಲ್ಕಂಡ ದ್ವಿಚಕ್ರ ವಾಹನ ಜಖಂ ಆಗಿ ಬಿದ್ದಿದ್ದು, ಮುನಿನಾರಾಯಣಪ್ಪ ರವರ ಸೇಬಿನ ತೋಟದಲ್ಲಿ ಕೆಎ-05 ಎಂಎನ್-5410 ನೊಂದಣಿ ಸಂಖ್ಯೆಯ ಮಹೇಂದ್ರ ಕಂಪನಿಯ XYLO ಕಾರು ಇದ್ದು ಅದು ಸಹ ಜಖಂ ಆಗಿರುತ್ತೆ. ನಂತರ ತಾವು ತನ್ನ ಮಗನ ಮೃತದೇಹವನ್ನು ಯಾವುದೋ ಒಂದು ವಾಹನದಲ್ಲಿ ಸಾಗಿಸಿಕೊಂಡು ಬಂದು ಚಿಂತಾಮಣಿ ಸಕರ್ಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತೇವೆ.  ತನ್ನ ಅಕ್ಕನ ಮಗ ಶಿವಕುಮಾರ್ ರವರನ್ನು ವಿಚಾರ ಮಾಡಲಾಗಿ ಈ ದಿನ ಮದ್ಯಾಹ್ನ 12.30 ಗಂಟೆ ಸಮಯದಲ್ಲಿ ಶಶಿಕುಮಾರ್ ತಮ್ಮ ಗ್ರಾಮದ ಬಳಿ ಇರುವ ಇಂಡಿಯನ್ ಪೆಟ್ರೋಲ್ ಬಂಕ್ನಲ್ಲಿ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸಿಕೊಂಡು ಉಪ್ಪರಪೇಟೆಗೆ ಹೋಗಲು ತಮ್ಮ ಗ್ರಾಮದ ಮುನಿನಾರಾಯಣಪ್ಪ ರವರ ಜಮೀನಿನ ಪಕ್ಕದಲ್ಲಿ ಹಾದು ಹೋಗಿರುವ ರಸ್ತೆಯಲ್ಲಿ ದ್ವಿಚಕ್ರ ವಾಹನವನ್ನು ನಡೆಸಿಕೊಂಡು ಬರುತ್ತಿದ್ದಾಗ, ಹಿಂದುಗಡೆಯಿಂದ ಅಂದರೆ ವೈ.ಹುಣಸೇನಹಳ್ಳಿ ಕಡೆಯಿಂದ ಬರುತ್ತಿದ್ದ ಕೆಎ-05 ಎಂಎನ್-5410 ಮಹೇಂದ್ರ XYLO ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಶಶಿಕುಮಾರ್ ಹೋಗುತ್ತಿದ್ದ ದ್ವಿಚಕ್ರ ವಾಹನದ ಹಿಂದುಗಡೆ ಡಿಕ್ಕಿ ಹೊಡೆಸಿ ಅಪಫಾತಪಡಿಸಿರುವುದಾಗಿ ತಿಳಿಸಿರುತ್ತಾನೆ. ಕಾರಿನ ಚಾಲಕನ ಹೆಸರು ವಿಳಾಸ ಗೊತ್ತಿರುವುದಿಲ್ಲ. ಆದ್ದರಿಂದ ತಾವು ಆಸ್ಪತ್ರೆಗೆ ಬಂದು ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿರುತ್ತೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 90/2021 ಕಲಂ. 78(I),78(3) ಕೆ.ಪಿ ಆಕ್ಟ್:-

     ದಿನಾಂಕ:19/01/2021  ರಂದು ಮದ್ಯಾಹ್ನ 3-00  ಗಂಟೆಯಲ್ಲಿ ಶ್ರೀ.. ಮೋಹನ್ , ಎನ್.  ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ  ರವರು ಠಾಣೆಯಲ್ಲಿ  ನೀಡಿದ ದೂರಿನ ಸಾರಾಂಶವೇನೆಂದರೆ,  ಇವರಿಗೆ ಮಧ್ಯಾಹ್ನ 3-00 ಗಂಟೆಯಲ್ಲಿ ಬಂದ ಮಾಹಿತಿ ಮೇರೆಗೆ, ಪೊಲೀಸ್ ಸಿಬ್ಬಂದಿ ಹಾಗು ಪಂಚಾಯ್ತಿದಾರರರೊಂದಿಗೆ ಗೌರಿಬಿದನೂರು ತಾಲ್ಲೂಕು  ಕಸಬಾ ಹೋಬಳಿ ವೆಳಪಿ   ಗ್ರಾಮದ ಬಸ್ ನಿಲ್ದಾಣದ ಬಳಿ   ಯಾರೋ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ತಾನು ಹಾಗು ಪೊಲೀಸ್ ಸಿಬ್ಬಂದಿಯವರಾದ ಪಿ.ಸಿ-512 ರಾಜಶೇಖರ  , ಪಿ.ಸಿ-518 ಆನಂದ , ಪಿ.ಸಿ-426 ಲೋಹಿತ್  ,ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ ನಂ. ಕೆ.ಎ.40-ಜಿ.2538 ರಲ್ಲಿ ಗ್ರಾಮಕ್ಕೆ   ಮದ್ಯಾಹ್ನ 1-30  ಗಂಟೆಗೆ ಹೋಗಿ, ಅಲ್ಲಿ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ,  ಮರೆಯಲ್ಲಿ ನಿಂತು ನೋಡಲಾಗಿ,  ಯೋರೋ ಆಸಾಮಿಯು  ವೆಳಪಿ ಗ್ರಾಮದ ಬಸ್ ನಿಲ್ದಾಣದ ಬಳಿ  ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ  ಒಂದು ರೂಪಾಯಿಗೆ  ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ತಾನು ಮತ್ತು ಪೊಲೀಸ್ ಸಿಬ್ಬಂದಿಯವರು  ಸದರಿ ಆಸಾಮಿಯನ್ನು  ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ, ಅವರು ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು  ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ ಆಸಾಮಿ ಸಿಕ್ಕಿದ್ದು,   ಆಸಾಮಿಯ ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು ಪೆದ್ದಾರೆಡ್ಡಿ ಬಿನ್ ಲೇಟ್ ಅಶ್ವತ್ಥಪ್ಪ,  55  ವರ್ಷ,  ನಾಯಕರು, ಕೂಲಿ ಕೆಲಸ,    ವಾಸ ವೆಳಪಿ ಗ್ರಾಮ, ಗೌರೀಬಿದನೂರು  ತಾಲ್ಲೂಕು  ಎಂದು ತಿಳಿಸಿದ್ದು,  ಪೆದ್ದಾರೆಡ್ಡಿ ಬಿನ್ ಲೇಟ್ ಅಶ್ವತ್ಥಪ್ಪ ರವರ ಬಳಿ   ನಗದು ಹಣ 820-00 ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿ ಪೆದ್ದಾರೆಡ್ಡಿ ಬಿನ್ ಲೇಟ್ ಅಶ್ವತ್ಥಪ್ಪ  ಹಾಗು ಈತನ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್  ಮತ್ತು 820/- ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ಮದ್ಯಾಹ್ನ 1-30  ಗಂಟೆಯಿಂದ 2-30    ಗಂಟಯವರೆಗೆ  ಪಂಚನಾಮೆ ಕ್ರಮ ಜರುಗಿಸಿ  ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಠಾಣೆಗೆ  ಮದ್ಯಾಹ್ನ 3-00 ಗಂಟೆಗೆ  ಬಂದು  ಮುಂದಿನ ಕ್ರಮಕ್ಕಾಗಿ ನಿಮ್ಮ ವಶಕ್ಕೆ ನೀಡುತ್ತಿದ್ದು, ದೂರಿನ ಮೂಲಕ  ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.ದಿನಾಂಕ 19/04/ ರಮದು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ.

 

7. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 91/2021 ಕಲಂ. 87 ಕೆ.ಪಿ  ಆಕ್ಟ್:-

     ದಿನಾಂಕ:02/04/2021 ರಂದು ರಾತ್ರಿ 10-45 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ಮೆಮೋವಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:02/04/2021 ರಂದು ರಾತ್ರಿ 8-33 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ಹೊಸೂರು ಹೊರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಚ್.ಸಿ-170 ಜೂಲಪ್ಪ.ಎನ್ ರವರಿಗೆ 112 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎ.ಹೆಚ್.ಸಿ-65 ಚಂದ್ರಶೇಖರ್ ರವರು ಮೊಬೈಲ್ ಮೂಲಕ ಕರೆ ಮಾಡಿ ಜಿಲ್ಲಾ ನಿಸ್ತತಂತು ಇವೆಂಟ್ ನಂ.65525 ರಂತೆ ಗೌರೀಬಿದನೂರು ತಾಲ್ಲೂಕು ಹೊಸೂರು ಹೊರ ಠಾಣೆ ವ್ಯಾಪ್ತಿಗೆ ಸೇರಿದ ಸೊನಗಾನಹಳ್ಳಿ ಗ್ರಾಮದಲ್ಲಿ ಯಾರೋ ಆಸಾಮಿಗಳು ಅಂದರ್ ಬಾಹರ್ ಜೂಜಾಟ ಆಡುತ್ತಿರುವುದಾಗಿ ಕರೆ ಬಂದಿರುವುದಾಗಿ ಮಾಹಿತಿ ತಿಳಿಸಿದ್ದು, ಅದರಂತೆ ಹೊಸೂರು ಹೊರ ಠಾಣೆಯ ಹೆಚ್.ಸಿ-170 ಜೂಲಪ್ಪ.ಎನ್ ರವರು ರಾತ್ರಿ 8-35 ಗಂಟೆಗೆ ನನಗೆ ದೂರವಾಣಿ ಮೂಲಕ ಕರೆ ಮಾಡಿ ಸದರಿ ವಿಚಾರವನ್ನು ತಿಳಿಸಿದ್ದು, ಅದರಂತೆ ನಾನು ಹೆಚ್.ಸಿ-170, ಜೂಲಪ್ಪ.ಎನ್, ಸಿ.ಪಿ.ಸಿ- 520 ಶ್ರೀನಾಥ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ ರಾತ್ರಿ 9-10 ಗಂಟೆಗೆ ಸೊನಗಾನಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ, ಪಂಚಾಯ್ತಿದಾರರನ್ನು ಕರೆದುಕೊಂಡು ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಸ್ವಲ್ಪ ದೂರದಲ್ಲಿ ವಿದ್ಯೂತ್ ಬೀದಿ ದೀಪದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವರು ಗುಂಪು ಕಟ್ಟಿಕೊಂಡಿದ್ದು ಅದರಲ್ಲಿ ಒಬ್ಬ ಆಸಾಮಿ ಅಂದರ್ ಗೆ 100 ರೂ ಎಂತಲೂ ಬಾಹರ್ ಗೆ 100 ರೂ ಎಂತಲೂ ಉಳಿದವರು ಸಹ ಅದೇ ರೀತಿ ಹಣವನ್ನು ಪಣಕ್ಕೆ ಹಾಕಿ ಅಂದರ್ ಬಾಹರ್ ಇಸ್ವೀಟು ಜೂಜಾಟವಾಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಸಿಬ್ಬಂದಿಯನ್ನು ಸದರಿ ಸ್ಥಳವನ್ನು ಸುತ್ತುವರೆಯಲು ತಿಳಿಸಿ ಪಂಚರ ಸಮಕ್ಷಮ ಸದರಿ ಸ್ಥಳದ ಮೇಲೆ ದಾಳಿ ಮಾಡಲಾಗಿ ದಾಳಿಯಲ್ಲಿ 03 ಜನ ಸ್ಥಳದಲ್ಲಿ ಸಿಕ್ಕಿದ್ದು ಅವರ ಹೆಸರು ವಿಳಾಸ ಕೇಳಲಾಗಿ 1) ರಮೇಶ್ ಬಿನ್ ಕೃಷ್ಣಾರೆಡ್ಡಿ, 35 ವರ್ಷ, ಸಾದರ ಜನಾಂಗ, ಜಿರಾಯ್ತಿ, ಸೊನಗಾನಹಳ್ಳಿ ಗ್ರಾಮ, ಗೌರೀಬಿದನೂರು ತಾಲ್ಲೂಕು, 2) ಗೋವಿಂದರಾಜ್ ಬಿನ್ ರಾಮಪ್ಪ, 33 ವರ್ಷ, ಸಾದರ ಜನಾಂಗ, ಜಿರಾಯ್ತಿ, ಸೊನಗಾನಹಳ್ಳಿ ಗ್ರಾಮ, ಗೌರೀಬಿದನೂರು ತಾಲ್ಲೂಕು,3) ವೆಂಕಟಾಚಲ ಬಿನ್ ತಿಮ್ಮಪ್ಪ, 50 ವರ್ಷ, ಸಾದರ ಜನಾಂಗ, ಜಿರಾಯ್ತಿ, ಸೊನಗಾನಹಳ್ಳಿ ಗ್ರಾಮ, ಗೌರೀಬಿದನೂರು ತಾಲ್ಲೂಕು ಎಂತ ತಿಳಿಸಿದ್ದು ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ ಕೆಳಗೆ ಒಂದು ಪ್ಲಾಸ್ಟಿಕ್ ಪೇಪರ್ ಹಾಸಿದ್ದು ಅದರ ಮೇಲೆ ವಿವಿದ ಮುಖ ಬೆಲೆಯ ನೋಟುಗಳು ಮತ್ತು ಇಸ್ವೀಟು ಎಲೆಗಳು ಚಲ್ಲಾ-ಪಿಲ್ಲಿ ಆಗಿ ಬಿದ್ದಿದು ಅವುಗಳನ್ನು ಎಣಿಸಲಾಗಿ 52 ಇಸ್ವೀಟು ಎಲೆಗಳಿದ್ದು 3,370/- ರೂಪಾಯಿ ಹಣವಿರುತ್ತೆ. ನಂತರ ಮೇಲ್ಕಂಡ ಮಾಲುಗಳನ್ನು ರಾತ್ರಿ 9-15 ರಿಂದ 10-15 ಗಂಟೆಯವರೆಗೆ ವಿದ್ಯೂತ್ ಬೀದಿ ದೀಪದ ಬೆಳಕಿನಲ್ಲಿ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಆಸಾಮಿಗಳನ್ನು ಮುಂದಿನ ಕ್ರಮಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್.ನಂ.178/2021 ರಂತೆ ದಾಖಲಿಸಿರುತ್ತೆ.ದಿನಾಂಕ 19/04/2021 ರಂದು ಘನ ನ್ಯಾಯಾಯ ಅನುಮತಿಯನ್ನು ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ.

 

8. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 57/2021 ಕಲಂ. 324,504 ಐ.ಪಿ.ಸಿ:-

     ದಿನಾಂಕ:18/04/2021 ರಂದು ಸಂಜೆ 6-45 ಗಂಟೆಯಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಅಸ್ಪತ್ರೆಗೆ ಹೋಗಿ ಗಾಯಾಳು ಜಿಯಾವುಲ್ಲಾ  ರವರು  ಹೇಳಿಕೆಯ ಪಡೆದು ಠಾಣೆಗೆ ವಾಪಸ್ಸು ಸಂಜೆ 7-30 ಗಂಟೆಗೆ ಬಂದಿದ್ದು ಅಸ್ಪತ್ರೆಯಲ್ಲಿ ಜಿಯಾವುಲ್ಲಾ  ನೀಡಿದ ಹೇಳಿಕೆಯ ಸಾರಾಂಶವೆನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ದಿನಾಂಕ:18/04/2021 ರಂದು ಮದ್ಯಾಹ್ನ ತಾನು ತಮ್ಮ ಮನೆಯ ಬಳಿಯಿದ್ದಾಗ ತಮ್ಮ ಪಕ್ಕದ ಮನೆಯ ವಾಸಿಯಾದ  ರೇಷ್ಮಾ ಕೊಂ ಬಷೀರ್ ಅಹಮದ್, 27 ವರ್ಷ, ರವರು ಮನೆಯ ಬಳಿ ಇದ್ದಾಗ ತಮ್ಮ ಬಡಾವಣೆ ವಾಸಿಯಾದ ವಿಜಿ @ ಬುಜ್ಜಿ ಬಿನ್ ಅಂಜಿನಪ್ಪ,  ಸುಮಾರು 24 ವರ್ಷ,  ಬೋವಿ ಜನಂಗ, ರವರು ಬಂದು ಯಾವುದೋ ಕಾರಣಕ್ಕೆ ಜಗಳವನ್ನು ಮಾಡುತ್ತೀದ್ದಾಗ ತಾನು ಹೋಗಿ ಜಗಳವನ್ನು ಬಿಡಿಸಿ ಬುದ್ದಿ ಹೇಳಿ ಕಳುಹಿಸಿರುತ್ತೇನೆ. ನಂತರ ಸಂಜೆ ಸುಮಾರು 6-00 ಗಂಟೆಯಲ್ಲಿ  ವಿಜಿ @ ಬುಜ್ಜಿ ರವರು ಮತ್ತೆ  ರೇಷ್ಮಾ ರವರ ಮನೆ ಬಳಿ ಜಗಳವನ್ನು ಮಾಡುತ್ತೀದ್ದಾಗ ತಾನು ಅಡ್ಡ ಹೋಗಿ ಯಾಕೇ ರೀತಿ ಮಾಡುತ್ತೀಯಾ ಎಂದು ಕೇಳಿದ್ದಕ್ಕೆ ನೀನೂ ಯಾವನೋ ಲೋಫರ್ ನನ್ನ ಮಗನೆ ಎಂದು ಬೈದನು. ಅಲ್ಲಿಯೇ ಇದ್ದ ರಾಡ್ ನ್ನು ತೆಗೆದುಕೊಂಡು ರೇಷ್ಮಾ ರವರಿಗ ಹೊಡೆಯಲು ಹೋದಾಗ ಅಡ್ಡ ಹೋದ ತನಗೆ ತಲಗೆ ಬಿದ್ದು ರಕ್ತ ಗಾಯವಾಗಿದ್ದು, ವಿಜಿ ರವರು ರಾಡ್ ನನು ಅಲ್ಲಿಯೇ ಬಿಸಾಕಿ ಓಡಿ ಹೋದನು,  ಅಲ್ಲಿಯೇ ಇದ್ದ ಫವರ್ಿನ್ ಬಿನ್ ಜಿಯಾವುಲ್ಲಾ  ರವರು ಬಂದು ತನ್ನನ್ನು ಉಪಚರಿಸಿ  ಯಾವುದೋ ಕಾರಿನಲ್ಲಿ ಗೌರಿಬಿದನೂರು ಸಕರ್ಾರಿ ಅಸ್ಪತ್ರೆಗೆ ದಾಖಲಿಸಿರುತ್ತಾರೆ ಆದ್ದರಿಮದ ತನಗರ ಹೊಡೆದು ರಕ್ತಗಾಯ ಮಾಡಿದ ವಿಜಿ @ ಬುಜ್ಜಿ ರವರ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕಾಗಿ ಕೋರಿ ನೀಡಿದ ದೂರಾಗಿದೆ.

 

9. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 72/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿ:19.04.2021 ರಂದು ಮದ್ಯಾಹ್ನ 13-00 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಶ್ರೀನಿವಾಸಚಾರಿ ರವರು ಹಾಜರಾಗಿ ನೀಡಿದ ದೂರಿನ ಸಾರಾಂಶವೇನದೆ. ದಿ:13.04.2021 ರಂದು ಮದ್ಯಾಹ್ನ 12-00 ಗಂಟೆ ಸಮಯದಲ್ಲಿ ನಾನು ಮತ್ತು ನನ್ನ ಮೊಮ್ಮಗ ಮನೋಜ್ ಬಿನ್ ಗೋವಿಂದಾಚಾರಿ, 15 ವರ್ಷ ರವರು ಕಮ್ಮಗುಟ್ಟಹಳ್ಳಿಕಡೆಯಿಂದ ಮಂಡಿಕಲ್ ಕಡಗೆ ನನ್ನ ಬಾಬತ್ತು ಕೆ.ಎ.40.ಇ.9182 ನೊಂದಣಿ ಸಂಖ್ಯೆಯ ಯಮಹಾ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ, ಜೀಗಾನಹಳ್ಳಿ ಕ್ರಾಸ್ ನ ಬಳಿ ನಮ್ಮ ಮುಂಬಾಗದಲ್ಲಿ ಕೆ.ಎ.40.ಬಿ.1121 ನೊಂದಣಿ ಸಂಖ್ಯೆಯ ಮಹೀಂದ್ರ ಗೂಡ್ಸ್ ಜೀತೋ ಪ್ಲಸ್-16 ವಾಹನವು ಹೋಗುತ್ತಿದ್ದು, ನಾನು ಶಬ್ದ ಮಾಡಿ ದಾರಿ ಕೇಳಲಾಗಿ, ಮಹೀಂದ್ರ ಗೂಡ್ಸ್ ವಾಹನದ ಚಾಲಕನು ಕೈಸನ್ಹೆ ಮಾಡಿ ನಮಗೆ ಮುಂದಕ್ಕೆ ಹೋಗುವಂತೆ ತಿಳಿಸಿದನು.  ನಾವು ಮುಂದಕ್ಕೆ ಹೋಗುತ್ತಿದ್ದಾಗ  ಮಹೀಂದ್ರ ಗೂಡ್ಸ್ ಜೀತೋ ಪ್ಲಸ್-16 ರ ವಾಹನ ಚಾಲಕನು ಯಾವುದೇ ರೀತಿಯ ಸೂಚನೆಗಳನ್ನು ನೀಡದೆ, ವಾಹನವನ್ನು ಅಜಾಗರೂಕತೆಯಿಂದ ಬಲಗಡೆಗೆ ತಿರುಗಿಸಿ ನಮಗೆ ಡಿಕ್ಕಿ ಹೊಡೆಸಿ ರಸ್ತೆ ಅಪಘಾತವನ್ನುಂಟು ಮಾಡಿದ ಪರಿಣಾಮ ನನ್ನ ಮೊಮ್ಮಗನ ಎಡಕಾಲು ಮಹೀಂದ್ರ ವಾಹನದ ಬಂಪರ್ ಗೆ ಸಿಕ್ಕಿಹಾಕಿಕೊಂಡು  ಎಳೆದುಕೊಂಡು ಹೋಯಿತು. ನಾನು ದ್ವಿಚಕ್ರ ವಾಹನದ ಸಮೇತ ಸ್ಥಳದಲ್ಲಿಯೇ ಬಿದ್ದು ಹೋದೆನು. ನನಗೆ ಮೂಗೇಟುಗಳುಂಟಾದವು. ನಂತರ ಕೆ.ಎ.40.ಬಿ.1121 ನೊಂದಣಿ ಸಂಖ್ಯೆಯ ಮಹೀಂದ್ರ ಗೂಡ್ಸ್ ಜೀತೋ ಪ್ಲಸ್-16 ವಾಹನದ ಸವಾರ ಸ್ವಲ್ಪ ದೂರ ಹೋಗಿ ವಾಹನವನ್ನು ನಿಲ್ಲಿಸಿದ್ದು, ತಕ್ಷಣ ನಾನು ಹೋಗಿ ನೋಡಲಾಗಿ ನಮ್ಮ ಮೊಮ್ಮಗ ಮನೋಜನ ಎಡಗಾಲಿನ ತೊಡೆಗೆ ರಕ್ತಗಾಯವಾಗಿ ಮೂಳೆ ಮುರಿದಿರುತ್ತೆ. ನಂತರ ನಮಗೆ ರಸ್ತೆ ಅಪಘಾತವನ್ನುಂಟು ಮಾಡಿದ ವಾಹನದ ಚಾಲಕ ವಾಹನವನ್ನು ಓಡಿಸಿಕೊಂಡು ಹೊರಟು ಹೋದನು. ತಕ್ಷಣ ನಾನು ನನ್ನ ಹೆಂಡತಿ ಶಾರದಮ್ಮನವರಿಗೆ ಪೋನ್ ಮಾಡಿ ನಮಗೆ ರಸ್ತೆ ಅಪಘಾತವಾಗಿರುವ ವಿಚಾರವನ್ನು ತಿಳಿಸಿ, ನಮ್ಮ ಬಾಬತ್ತು ಮಾರುತಿ ಓಮನಿ ವಾಹನವನ್ನು ಕೂಡಲೇ ಜೀಗಾನಹಳ್ಳಿ ಕ್ರಾಸ್ ಗೆ ಕಳುಹಿಸಿಕೊಡುವಂತೆ ತಿಳಿಸಿದೆನು. ನನ್ನ ಹೆಂಡತಿ ಶ್ರೀಮತಿ ಶಾರಮ್ಮ ನಮ್ಮ ಬಾಬತ್ತು ಮಾರುತಿ ಓಮನಿ ವಾಹನವನ್ನು ನಮ್ಮ ಗ್ರಾಮದ ಸುರೇಶ್ ಬಿನ್ ಲೇಟ್ ಮುನಿರಾಜ್ ಎಂಬುವರೊಂದಿಗೆ ಕಳುಹಿಸಿರುತ್ತಾರೆ. ಸ್ಥಳಕ್ಕೆ ಬಂದ ನಮ್ಮ ಬಾಬತ್ತು ಮಾರುತಿ ಓಮನಿ ವಾಹನದಲ್ಲಿ ನನ್ನ ಮೊಮ್ಮಗ ಮನೋಜ್ ರವರನ್ನು ಚಿಕ್ಕಬಳ್ಳಾಪುರ ಜೀವನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿರುತ್ತೇನೆ. ಹಾಗೂ ಚಿಕಿತ್ಸೆಯನ್ನು ಕೊಡಿಸಿ ಡಿಸ್ಚಾರ್ಜ ಮಾಡಿಸಿಕೊಂಡು ಬಂದಿರುತ್ತೇನೆ. ನಾನು ನಮ್ಮ ಮೊಮ್ಮಗನಿಗೆ ಚಿಕಿತ್ಸೆಯನ್ನು ಕೊಡಿಸುತ್ತಿದ್ದುದ್ದರಿಂದ ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದೇನೆ.  ದಿ:13.04.2021 ರಂದು ಮದ್ಯಾಹ್ನ 12-00 ಗಂಟೆ ಸಮಯದಲ್ಲಿ ನಮಗೆ ರಸ್ತೆ ಅಪಘಾತವನ್ನುಂಟು ಮಾಡಿದ ಕೆ.ಎ.40.ಬಿ.1121 ನೊಂದಣಿ ಸಂಖ್ಯೆಯ ಮಹೀಂದ್ರ ಗೂಡ್ಸ್ ಜೀತೋ ಪ್ಲಸ್-16 ವಾಹನದ ಚಾಲಕ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಈ ಮೂಲಕ ಕೋರುತ್ತೇನೆ. ಎಂದು ನೀಡಿದ ದೂರಿಗೆ ಮೇರೆಗೆ ಪ್ರ.ವ.ವರದಿ.

 

10. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 75/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:18/04/2021 ರಂದು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ದಾಖಲಿಸಿದ ಪ್ರಕರಣದ ಸಾರಾಂಶವೇನೆಂದರೆ ಲಕ್ಷ್ಮೀನಾರಾಯಣ ಪಿ.ಎಸ್.ಐ ಮಂಚೇನಹಳ್ಳಿ ಪೊಲೀಸ್ ಠಾಣೆ ಆದ ನಾನು ದಿನಾಂಕ:16/04/2021 ರಂದು ಮದ್ಯಾಹ್ನ 3-15 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ತೊಂಡೇಬಾವಿ ಹೋಬಳಿ ತರಿದಾಳು ಗ್ರಾಮದ ಬಳಿ ಇರುವ ಸರ್ಕಾರಿ ಹಳ್ಳದ ಬೇವಿನ ಮರದ ಕೆಳಗೆ ಯಾರೋ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಮಂಚೇನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ.219 ಶ್ರೀನಿವಾಸಮೂರ್ತಿ, ಪಿಸಿ-537 ಆನಂದ್ ಕುಮಾರ್, ಪಿ.ಸಿ.111 ಲೋಕೇಶ, ಪಿ.ಸಿ.175 ನವೀನ್ ಕುಮಾರ್, ಪಿ.ಸಿ.483 ರಮೇಶ್, ಪಿ.ಸಿ.283 ಅರವಿಂದ ಮತ್ತು ಜೀಪ್ ಚಾಲಕ ಎಪಿಸಿ 120  ನಟೇಶ್ ರವರು ಮತ್ತು ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40, ಜಿ-395 ರಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಸಂಜೆ 3-45 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಪಂಚರು ಮತ್ತು ನಾವು ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಂದರ್ 100/- ಬಾಹರ್ 100/- ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿಯವರನ್ನು ನಾವು ಸುತ್ತುವರೆದು ಜೂಜಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿ ಅವರನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ಚೇತನ್ ಕುಮಾರ್ ಬಿನ್ ವೆಂಕಟರವಣಪ್ಪ, 22 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ವಾಸ ತರಿದಾಳು ಗ್ರಾಮ, ಗೌರಿಬಿದನೂರು ತಾಲ್ಲೂಕು 2) ತಿಮ್ಮರಾಜು ಬಿನ್ ಚಿಕ್ಕನರಸಿಂಹಪ್ಪ, 40 ವರ್ಷ, ಆದಿಕರ್ನಾಟಕ, ಚಾಲಕ, ನಾಗತೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು 3) ನರಸಿಂಹಮೂರ್ತಿ ಬಿನ್ ವೀರಭದ್ರಯ್ಯ, 24 ವರ್ಷ, ಒಕ್ಕಲಿಗರು, ಆಟೋ ಚಾಲಕ, ನಾಗತೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು  4) ನರಸಿಂಹರಾಜು ಬಿನ್ ಲೇಟ್ ಬಸಪ್ಪ, 32 ವರ್ಷ, ಒಕ್ಕಲಿಗರು, ಜಿರಾಯ್ತಿ, ನಾಗತೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು 5) ನಾಗರಾಜು ಬಿನ್ ಸಂಜೀವರಾಯಪ್ಪ, 45 ವರ್ಷ, ಉಪ್ಪಾರ ಜನಾಂಗ, ಕೂಲಿ ಕೆಲಸ, ತರಿದಾಳು ಗ್ರಾಮ, ಗೌರಿಬಿದನೂರು ತಾಲ್ಲೂಕು, 6) ಶಿವ ಬಿನ್ ಸಂಜೀವಪ್ಪ, 40 ವರ್ಷ, ನಾಯಕರು, ಜಿರಾಯ್ತಿ, ವಾಸ ತರಿದಾಳು ಗ್ರಾಮ, ಗೌರಿಬಿದನೂರು ತಾಲ್ಲೂಕು 7) ಆದಿನಾರಾಯಣ ಬಿನ್ ಸಿದ್ದಪ್ಪ, 38 ವರ್ಷ, ಉಪ್ಪಾರ ಜನಾಂಗ, ಕೂಲಿ ಕೆಲಸ, ತರಿದಾಳು ಗ್ರಾಮ ಗೌರಿಬಿದನೂರು ತಾಲ್ಲೂಕು. ಎಂದು ತಿಳಿಸಿದ್ದು, ಸದರಿಯವರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದ್ದು, ನಂತರ ಪಂಚನಾಮೆಯ ಮೂಲಕ ಸ್ಥಳದಲ್ಲಿ ದೊರೆತ 3800/- ( ಮೂರು ಸಾವಿರದ ಎಂಟು ನೂರು ರೂಪಾಯಿಗಳು ಮಾತ್ರ.) ರೂ ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಪೇಪರ್ ಅನ್ನು ಮದ್ಯಾಹ್ನ 4-00 ಗಂಟೆಯಿಂದ 5-00 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಮಾಲನ್ನು ವಶಪಡಿಸಿಕೊಂಡು ಮಾಲು, ಮಹಜರ್ & ಆರೋಪಿತರೊಂದಿಗೆ ಸಂಜೆ 5-30 ಗಂಟೆಗೆ ಠಾಣೆಗೆ ವಾಪಾಸ್ ಬಂದು ಆರೋಪಿತರ ಮೇಲೆ ಮುಂದಿನ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಲು ಸ್ವತಃ ಠಾಣಾ ಎನ್.ಸಿ.ಆರ್ ನಂಬರ್ 113/2021 ರಂತೆ ದಾಖಲಿಸಿ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಮೇಲ್ಕಂಡ ಕಲಂ ರೀತ್ಯ ಪ್ರಕರಣ ದಾಖಲಿಸಿರುತ್ತದೆ.

 

11. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 109/2021 ಕಲಂ. ಮನುಷ್ಯ ಕಾಣೆ:-

     ದಿನಾಂಕ:-18/04/2021 ರಂದು ಮದ್ಯಾಹ್ನ 3-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಸಿಂಧು ಕೋಂ ಪ್ರವೀಣ್, 25 ವರ್ಷ, ವಕ್ಕಲಿಗರು, ಗೃಹಿಣಿ, ವಾಸ-ದೇವರಮಳ್ಳೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಸ್ವಂತ ಗ್ರಾಮ ಇದೇ ಶಿಡ್ಲಘಟ್ಟ ತಾಲ್ಲೂಕು ಶೀಗೇಹಳ್ಳಿ ಗ್ರಾಮವಾಗಿದ್ದು, ತನಗೆ ಈಗ್ಗೆ ಸುಮಾರು 7 ವರ್ಷಗಳ ಹಿಂದೆ ದೇವರಮಳ್ಳೂರು ಗ್ರಾಮದ ವಾಸಿ ವೆಂಕಟೇಶಪ್ಪ ರವರ ಮಗನಾದ ಪ್ರವೀಣ್ ರವರೊಂದಿಗೆ ಮದುವೆಯಾಗಿದ್ದು, ತನ್ನ ಗಂಡನಾದ ಪ್ರವೀಣ್ ರವರು ಬನ್ನೇರುಘಟ್ಟದ ಬಳಿ ಇರುವ ಮಂಟಪ ಗ್ರಾಮದಲ್ಲಿರುವ ಧ್ರುವ ವಾಟರ್ ಕಂಪನಿಗೆ ಕೆಲಸಕ್ಕೆ ಹೋಗುತ್ತಿದ್ದು, ಮದುವೆಯಾದ ನಂತರ ತಾನು ಸಹ ತನ್ನ ಗಂಡನೊಂದಿಗೆ ಅದೇ ಗ್ರಾಮದಲ್ಲಿ ವಾಸವಾಗಿದ್ದೆನು. ಹೀಗಿರುವಾಗ 2020 ನೇ ಸಾಲಿನ ಅಕ್ಟೋಬರ್ ಮಾಹೆಯಲ್ಲಿ ಕರೋನಾ ಇದ್ದ ಕಾರಣ ತನ್ನ ಗಂಡ ತನ್ನನ್ನು ಕರೆದುಕೊಂಡು ದೇವರಮಳ್ಳೂರು ಗ್ರಾಮದಲ್ಲಿರುವ ತನ್ನ ಅತ್ತೆಯವರ ಮನೆಯಲ್ಲಿ ಇಟ್ಟಿದ್ದು, ತನ್ನ ಗಂಡ ದೇವರಮಳ್ಳೂರು ಗ್ರಾಮದಿಂದ ಕೆಲಸಕ್ಕೆ ಹೋಗಿ ವಾರಕ್ಕೊಮ್ಮೆ ಅಥವಾ 2-3 ದಿನಗಳಿಗೊಮ್ಮೆ ಮನೆಗೆ ಬಂದು ಹೋಗುತ್ತಿದ್ದರು. ದಿನಾಂಕ 06/04/2021 ರಂದು ತನ್ನ ಗಂಡ ಕೆಲಸದಿಂದ ತಮ್ಮ ಮನೆಗೆ ಬಂದು ಆ ದಿನ ರಾತ್ರಿ ಮನೆಯಲ್ಲಿ ಉಳಿದುಕೊಂಡು ಮಾರನೇ ದಿನ ದಿನಾಂಕ 07/04/2021 ರಂದು ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ಕೆಲಸಕ್ಕೆ ಹೋಗುತ್ತೇನೆಂದು ತಮ್ಮ ಬಾಬತ್ತು ಕೆಎ-51-ಇವೈ-4251 ನೊಂದಣಿ ಸಂಖ್ಯೆಯ ಡಿಯೋ ದ್ವಿ ಚಕ್ರ ವಾಹನದಲ್ಲಿ ಮನೆಯಿಂದ ಹೋಗಿದ್ದು ಆನಂತರ ಮದ್ಯಾಹ್ನ ತಾನು ತನ್ನ ಗಂಡನ ಮೊಬೈಲ್ ನಂಬರ್-9739034663 & 8904300577 ಗೆ ಕರೆ ಮಾಡಿದರೆ ಸ್ವಿಟ್ಜ್ ಆಫ್ ಬರುತ್ತಿದ್ದು ನಂತರ ತಾನು ತನ್ನ ಗಂಡನ ಸ್ನೇಹಿತರಿಗೆ ಪೋನ್ ಮಾಡಿ ವಿಚಾರ ಮಾಡಲಾಗಿ ತನ್ನ ಗಂಡ ಕೆಲಸಕ್ಕೂ ಬಂದಿರುವುದಿಲ್ಲ ಎಂದು ತಿಳಿಸಿರುತ್ತಾರೆ. ನಂತರ ತಾನು ಮತ್ತು ತನ್ನ ಮನೆಯವರು ತನ್ನ ಗಂಡನನ್ನು ಎಲ್ಲಾ ಕಡೆ ಹುಡಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ. ತಾನು ತನ್ನ ಗಂಡನನ್ನು ಹುಡುಕಾಡಿಕೊಂಡಿದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಕಾಣೆಯಾಗಿರುವ ತನ್ನ ಗಂಡ ಪ್ರವೀಣ್ ರವರನ್ನು ಪತ್ತೆ ಮಾಡಿ ಕೊಡ ಬೇಕಾಗಿ ಕೊಟ್ಟ ದೂರು.

ಇತ್ತೀಚಿನ ನವೀಕರಣ​ : 19-04-2021 06:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080