ಅಭಿಪ್ರಾಯ / ಸಲಹೆಗಳು

 

1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.35/2021 ಕಲಂ. 279,304(A) ಐ.ಪಿ.ಸಿ :-

     ದಿನಾಂಕ 19/03/2021 ರಂದು ಪಿರ್ಯಾದಿ ಈರಪ್ಪ ಬಿನ್ ವೆಂಕಟಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ತಂದೆ ತಾಯಿಗೆ ತಾವು ಇಬ್ಬರು ಗಂಡು ಮಕ್ಕಳು ನಾಲ್ಕು ಜನ ಹೆಣ್ಣು ಮಕ್ಕಳಾಗಿರುತ್ತೇವೆ. ತಮ್ಮ ತಂದೆ ಮತ್ತು ತಾಯಿ ತಮ್ಮ ಗ್ರಾಮದಲ್ಲಿಯೇ ತಮ್ಮ ಅಕ್ಕಳಾದ ವೆಂಕಟಮ್ಮ ರವರ ಜೊತೆಯಲ್ಲಿ ವಾಸವಾಗಿರುತ್ತಾರೆ. ದಿನಾಂಕ 05/03/2021 ರಂದು ತಾನು ಕೂಲಿ ಕೆಲಸಕ್ಕೆ ಹೋಗಿ ಸಂಜೆ  ಮನೆಗೆ ಬಂದಾಗ ತಮ್ಮ ಅಕ್ಕಳಾದ ವೆಂಕಟಮ್ಮರವರು ತಮ್ಮ ಮನೆಯ ಬಳಿ ಬಂದು ತಮ್ಮ ತಂದೆಯಾದ ವೆಂಕಟಪ್ಪರವರಿಗೆ ಅಫಘಾತವಾಗಿ ಕಾಲಿಗೆ ಗಾಯವಾಗಿರುವ ವಿಚಾರವನ್ನು ತಿಳಿಸಿರುತ್ತಾರೆ. ತಾನು ತಮ್ಮ ತಂದೆಯವರ ಬಳಿ ಹೋಗಿ ವಿಚಾರ ಮಾಡಲಾಗಿ ತಮ್ಮ ತಂದೆಯವರು ತಾನು ಈ ದಿನ ಬೆಳಿಗ್ಗೆ ತಲಕಾಯಲಬೆಟ್ಟ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಇದೇ ದಿನ ಮದ್ಯಾಹ್ನ ಸುಮಾರು 2.00 ಗಂಟೆ ಸಮಯದಲ್ಲಿ ತಲಕಾಯಲಬೆಟ್ಟ ದೇವಾಲಯದ ಬಳಿಯಿಂದ ದಾಸಾರ್ಲಹಳ್ಳಿ ಗ್ರಾಮದ ಕಡೆಗೆ ಕೆರೆಯಲ್ಲಿ ಬರುವ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ತನ್ನ ಹಿಂದೆ ಒಂದು ಕಾರು ಬಂದಿದ್ದು ಕಾರು ಸ್ವಲ್ಪ ಮುಂದೆ ಹೋಗಿ ನಂತರ ಅದನ್ನು ತಿರುಗಿಸಿಕೊಳ್ಳಲು ಹಿಂದಕ್ಕೆ ಬರುತ್ತಿದ್ದು ಕಾರಿನ ಹಿಂದೆ ನಡೆದುಕೊಂಡು ಬರುತ್ತಿದ್ದ ತಾನು ಕಿರುಚಿಕೊಂಡರೂ ಕಾರಿನ ಚಾಲಕ ಕೇಳಿಸಿಕೊಳ್ಳದೇ ತನಗೆ ಹಿಂದಿನಿಂದ ಡಿಕ್ಕಿ ಹೊಡೆಸಿದ್ದು ತಾನು ಕೆಳಕ್ಕೆ  ಬಿದ್ದು ಹೋದಾಗ ಕಾರಿನ ಚಕ್ರ ತನ್ನ ಬಲಕಾಲಿನ ಹಿಮ್ಮಡಿ ಮೇಲೆ ಹತ್ತಿ ರಕ್ತ ಗಾಯವಾಗಿರುತ್ತೆ. ಕಾರಿನಲ್ಲಿದ್ದ ಮರಳಪ್ಪನಹಳ್ಳಿ ಗ್ರಾಮದ ಲಕ್ಷ್ಮೀನಾರಾಯಣರೆಡ್ಡಿ ರವರ ಮಗನಾದ ಚಂದ್ರಶೇಖರ ಮತ್ತು ಅವರ ಸಂಭಂದಿಕರು ಸೇರಿ ಒಟ್ಟು ಮೂರು ಜನ ಕಾರಿನಲ್ಲಿ ಇದ್ದು ನಂತರ ಅವರು ಅದೇ ಕಾರಿನಲ್ಲಿ ತನ್ನನ್ನು ದಿಬ್ಬೂರಹಳ್ಳಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಪಡಿಸಿ ನಂತರ ಮನೆಯ ಬಳಿ ಬಿಟ್ಟು ಹೋಗಿರುತ್ತಾರೆಂತ ತಿಳಿಸಿರುತ್ತಾರೆ. ನಂತರ ತಾನು ತಮ್ಮ ತಂದೆಯವರಿಗೆ ಕಾಲಿಗೆ ಆದ ಗಾಯದಿಂದ ರಕ್ತ ಸ್ರಾವ ಆಗುತ್ತಿದ್ದರಿಂದ ಇದೇ ದಿನ ರಾತ್ರಿ ಚಿಂತಾಮಣಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲಿಸಿರುತ್ತೇನೆ. ತಮ್ಮ ತಂದೆಯವರಿಗೆ ಅಫಘಾತ ಪಡಿಸಿದ ಬಗ್ಗೆ ಮರಳಪ್ಪನಹಳ್ಳಿ ಗ್ರಾಮದ ಲಕ್ಷ್ಮೀನಾರಾಯಣರೆಡ್ಡಿ ರವರನ್ನು ವಿಚಾರ ಮಾಡಲಾಗಿ ದಿನಾಂಕ: 05/03/2021 ರಂದು ತಮ್ಮ ಅಣ್ಣನ ಮನೆಯ ಗೃಹಪ್ರವೇಶ ಕಾರ್ಯಕ್ರಮಕ್ಕೆ ತಮ್ಮ ಸಂಭಂದಿಕರಾದ ಚಿಕ್ಕಬಳ್ಳಾಪುರ ತಾಲ್ಲೂಕು ಹಾರೋಬಂಡೆ ಗ್ರಾಮದ ವಾಸಿ ಮುನೀಷ್ ಬಿನ್ ಚಂದ್ರಪ್ಪ ರವರು ಆತನ ಬಾಬತ್ತು ಸ್ವಿಪ್ಟ್ ಕಾರಿನಲ್ಲಿ ಕಾರಿನಲ್ಲಿ ಬಂದಿದ್ದು ಸದರೀಯರು ನಿಮ್ಮ ತಂದೆಯವರಿಗೆ ಅಫಘಾತಪಡಿಸಿದ್ದು ಈ ಬಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಸುವುದಾಗಿ ತಿಳಿಸಿರುತ್ತಾರೆ. ಅದರಂತೆ ತಾವು ಈ ಬಗ್ಗೆ ದೂರು ನೀಡದೇ ದಿನಾಂಕ: 07/03/2021 ರಂದು ತಮ್ಮ ತಂದೆಯವರನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬಂದು ನಂತರ ಚಿಂತಾಮಣಿ ನಗರದ ರಾಧಾಕೃಷ್ಣ ಆಸ್ಪತ್ರೆ, ಮತ್ತು ದಿಬ್ಬೂರಹಳ್ಳಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡಿಸುತ್ತಿದ್ದೆನು. ನಂತರ ದಿನಾಂಕ: 18/03/2021 ರಂದು ನಮ್ಮ ತಂದೆಯವರು ಕಾಲಿಗೆ ಆದ ಗಾಯದಿಂದ ಸುಸ್ತಾಗಿದ್ದು ತಾನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನಂತರ ಅಲ್ಲಿನ ವೈಧ್ಯರ ಸಲಹೆಯಂತೆ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ತಮ್ಮ ತಂದೆ ದಿನಾಂಕ; 18/03/2021 ರಂದು ರಾತ್ರಿ ಸುಮಾರು 11.45 ಗಂಟೆ ಸಮಯದಲ್ಲಿ ಮೃತರಾಗಿದ್ದು ಮೃತ ದೇಹವು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ವತ್ರೆಯ ಶವಾಗಾರದಲಿರುತ್ತೆ.  ಆದ್ದರಿಂದ ತಮ್ಮ ತಂದೆ ವೆಂಕಟಪ್ಪ ಬಿನ್ ಲೇಟ್ ಮಾವಕೀರಪ್ಪ, 65 ವರ್ಷ ರವರಿಗೆ ದಿನಾಂಕ: 05/03/2021 ರಂದು ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಗಾಯಪಡಿಸಿದ ಸ್ವಿಪ್ಟ್ ಕಾರಿನ ನೊಂದಣಿ ಸಂಖ್ಯೆ ತಿಳಿಯದೇ ಇದ್ದು  ತಮ್ಮ ತಂದೆಯ ಸಾವಿಗೆ ಕಾರಣರಾದ  ಕಾರಿನ ಚಾಲಕರಾದ ಚಿಕ್ಕಬಳ್ಳಾಪುರ ತಾಲ್ಲೂಕು ಹಾರೋಬಂಡೆ ಗ್ರಾಮದ ವಾಸಿ ಮುನೀಷ್ ಬಿನ್ ಚಂದ್ರಪ್ಪ ರವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

2. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.64/2021 ಕಲಂ. 504,323,324 ಐ.ಪಿ.ಸಿ :-

     ದಿನಾಂಕ 19/03/2021 ರಂದು ಬೆಳಿಗ್ಗೆ 7-30 ಗಂಟೆಗೆ ಗೌರಿಬಿದನೂರು ಸರ್ಕಾರಿ ಆಸ್ವತ್ರೆಯಿಂದ ಬಂದ ಮೇಮೊವನ್ನು ಸ್ವೀಕರಿಸಿ ಆಸ್ವತ್ರೆಗೆ ಭೇಟಿ ನೀಡಿ ಗಾಯಾಳು ರಾಮಾಂಜಿನಮ್ಮ ಕೊಂ  ಅಶ್ವತ್ಥಪ್ಪ,45 ವರ್ಷ,ಆದಿ ಕರ್ನಾಟಕ ಜನಾಂಗ, ವ್ಯವಸಾಯ ವೆಳಪಿ ಗ್ರಾಮ,ಗೌರಿಬಿದನೂರು ತಾಲ್ಲೂಕು ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ- ನನ್ನ ದೊಡ್ಡ ಮಗಳಾದ ಅರುಣ ರವರನ್ನು 8 ವರ್ಷ ಗಳ ಹಿಂದೆ ಕಡಬೂರಿನ ರವಿಕುಮಾರ್ ಎಂಬುವವರಿಗೆ ಮದುವೆ ಮಾಡಿಕೊಟ್ಟಿರುತ್ತೇವೆ. ದಿನಾಂಕ 18/03/2021 ರಂದು ಸಂಜೆ ಸುಮಾರು 6-00 ಗಂಟೆಗೆ ಸಮಯದಲ್ಲಿ ಕಡಬೂರಿನಿಂದ ನವೀನ್ ಕುಮಾರ್ ಮತ್ತು ವಿಶ್ವ ಹಾಗೂ ರವಿಕುಮಾರ್ ತಾಯಿ ಅಶ್ವತ್ಥಮ್ಮ ಮತ್ತು ನವೀನ್ ಕುಮಾರ್ ರವರ ತಾಯಿ ರಾಮಕ್ಕ ರವರೊಂದಿಗೆ ನಮ್ಮ ಮನೆಗೆ ಬಂದು ನನ್ನ ಮಗಳಾದ ಅರುಣಾ ರವರನ್ನು ಅವರ ಮನೆಗೆ ಕಳುಹಿಸಿಕೊಡುವಂತೆ ಹೇಳಿದರು ಆನಂತರ ಬಂದಿದ್ದ ನಾಲ್ಕು ಜನ ಹೊರಟು ಹೋದರು ಆನಂತರ ನನ್ನ ಅಳಿಯ ರವಿಕುಮಾರ್ ರಾತ್ರಿ ಸುಮಾರು 9-30 ಗಂಟೆಗೆ ಕುಡಿದು ಬಂದು ವಿನಾಕಾರಣ ನನ್ನ ಮಗಳನ್ನು ಅವಶ್ಯಶಬ್ದಗಳಿಂದ ಬೈಯ್ದು ಕೈಗಳಿಂದ ಹೊಡೆಯುತ್ತಿದ್ದಾಗ ನಾನು ಯಾಕೆ ಸುಮ್ಮನೆ ನನ್ನ ಮಗಳನ್ನು ಹೊಡೆಯುತ್ತಿಯ ಎಂತ  ಕೇಳಿದಕ್ಕೆ ನನ್ನನ್ನು ಕೆಟ್ಟ ಮಾತುಗಳಿಂದ ಬೈದು ಅಲ್ಲೆ ಇದ್ದ ಕಬ್ಬಿಣದ ರಾಡ್ ನಿಂದ ನನ್ನ ಮುಖಕ್ಕೆ ಹೊಡೆದಾಗ ನನ್ನ ಮೂಗಿನ ಮೇಲೆ ಹೊಡೆತ ಬಿದ್ದು ಮೂಗು ಮತ್ತು ಎಡಕಣ್ಣಿನ ಬಳಿ ರಕ್ತಗಾಯವಾಗಿರತ್ತೆ.ಆಗ ಪಕ್ಕದ ಮನೆಯ ರಾಧಮ್ಮ ಮತ್ತು ನಾರಾಯಣಸ್ವಾಮಿ ರವರು ನಮ್ಮನ್ನು ಅವರಿಂದ ಬಿಡಿಸಿ ಗೌರಿಬಿದನೂರು ಸರ್ಕಾರಿ ಆಸ್ವತ್ರೆ ಕಳುಹಿರುತ್ತಾರೆ ನನ್ನನ್ನು ಮತ್ತು ನನ್ನ ಮಗಳನ್ನು ಕೆಟ್ಟ ಮಾತುಗಳಿಂದ ಬೈದು ಹೊಡೆದಿರುವ ರವಿಕುಮಾರ್ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ.

 

3. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.35/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್ :-

     ದಿನಾಂಕ:18/03/2021 ರಂದು 7-30 ಗಂಟೆಯಲ್ಲಿ ಗೌರಿಬಿದನೂರು ಸರ್ಕಾರಿ ಅಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಅಸ್ಪತ್ರೆಗೆ ಹೋಗಿ ಗಾಯಾಳು ಆದ ರಿಹಾನ ಬಾನು ಬಿನ್ ಇಬ್ರಾಹಿಂ ಸಾಬ್, 35 ವರ್ಷ,  ಮುಸ್ಲಿಂ ಜನಾಂಗ, ವಾಸ: ಬಿ.ಜಿ,ಎಸ್ ಕಾಲೇಜಿನ ಹತ್ತಿರ, ಉಪ್ಪಾರ ಕಾಲೋನಿ, ಗೌರಿಬಿದನೂರು ರವರು ನೀಡಿದ ಹೇಳಿಕೆಯನ್ನು ಡೆದುಕೊಂಡು ಠಾಣೆಗೆ 8-00 ಗಂಟೆಗೆ ವಾಪಸ್ಸು ಬಂದಿದ್ದು ಗಾಯಾಳು ನೀಡಿದ ಹೇಳಿಕೆಯ ಸಾರಾಂಶವೆನೆಂದರೆ ದಿನಾಂಕ: 18/03/2021 ರಂದು ಸಂಜೆ 6-30 ಗಂಟೆಯಲ್ಲಿ ತನ್ನ ಮನೆಯ ಮುಂದೆ ರಸ್ತೆಯಲ್ಲಿ ನಿಂತಿದ್ದಾಗ ಉಡಮಲೋಡು ಕಡೆಯಿಂದ ದ್ವಿ ಚಕ್ರ ವಾಹನದ ಸವಾರನು ತನ್ನ ದ್ವಿ ಚಕ್ರವಾಹವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ತನಗೆ ಡಿಕ್ಕಿ ಹೊಡೆಸಿ ಸ್ಥಳದಲ್ಲಿ ನಿಲ್ಲಿಸದೇ ಹೋರಟು ಹೋಗಿದ್ದು ದ್ವಿ ಚಕ್ರ ವಾಹನದಲ್ಲಿ ಡಿಕ್ಕಿ ಹೊಡೆಸಿದ ಪರಿಣಾಮ ತಾನು ಕೇಳಗೆ ಬಿದ್ದು ತನ್ನ ಎಡಕಾಲಿಗೆ ಮೂಳೆ ಮುರಿತ ಗಾಯವಾಗಿದ್ದು ಬಲಕಾಲಿನ ಪಾದದ ಬಳಿ ತರಚಿದ ರಕ್ತ ಗಾಯವಾಗಿದ್ದು ತನ್ನನ್ನು ತನ್ನ ತಾಯಿ ತಾಹೇರಾಭಿ ರವರು ಉಪಚರಿಸಿ 108 ಅಂಬುಲೇನ್ಸ್ ನಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿತ್ತಾರೆ.

   ಆದ್ದರಿಂದ ತನಗೆ ಡಿಕ್ಕಿ ಹೊಡೆಸಿ ರಸ್ತೆ ಅಪಘಾತ ಮಾಡಿದ ದ್ವಿ ಚಕ್ರ ವಾಹನ ಮತ್ತು ವಾಹನದ ಸವಾರ ಮೇಲೆ ಕಾನೂನು ಕ್ರಮವನ್ನು ಜರುಗಿಸಬೇಕಾಗಿ ಕೋರಿ ನೀಡಿದ ಹೇಳಿಕೆಯ ಮೇರೆಗೆ ಠಾಣೆಗೆ ವಾಪಸ್ಸು ಬಂದು ಠಾಣಾ ಮೊ.ಸಂ:35/2021 ಕಲಂ 279,337 ಐಪಿಸಿ ರೆ/ವಿ 187 ಐ ಎಂ ವಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

4. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.36/2021 ಕಲಂ. 380,457 ಐ.ಪಿ.ಸಿ :-

     ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ತಾನು ತನ್ನ ಸ್ವಂತ ಮನೆಗೆ ಹೊಂದಿಕೊಂಡಂತೆ ಮನೆಯ ಮುಂಭಾಗದಲ್ಲಿ ಒಂದು ಶೆಡ್ ಇದ್ದು ಇದರಲ್ಲಿ ತಾನು ಕೆಲಸ ಮಾಡಲು ಕಟ್ ಆಫ್ ಮಿಷಿನ್, ಹ್ಯಾಂಟ್ ಡ್ರೀಲ್ಲಿಂಗ್ ಮಿಷಿನ್, ಗ್ರೈಂಡಿಂಗ್ ಮಿಷಿನ ಮತ್ತು ಇತರ ಸಾಮಾಗ್ರಿಗಳು ಇಟ್ಟುಕೊಂಡು ತಾನು ಕೆಲಸವನ್ನು ಮಾಡಿಕೊಂಡು ನಂತರ ಮಿಷನ್ ಗಳನ್ನು ತಮ್ಮ ಮನೆಯಲ್ಲಿ ಇಡುತ್ತೀದ್ದೆ. ಹೀಗಿರುವಲ್ಲಿ ದಿನಾಂಕ:17/03/2021 ರಂದು ರಾತ್ರಿ ಸುಮಾರು 8-00 ಗಂಟೆಯಲ್ಲಿ ತನ್ನ ಸ್ನೇಹಿತನ ಮಗಳ ಮದುವೆಗೆಂದು ತಾನು ತನ್ನ ಕುಟುಂಬ ಸಮೇತ ತಮ್ಮ ಮನೆಗೆ ಬೀಗವನ್ನು ಹಾಕಿಕೊಂಡು ವಿದುರಾಶ್ವತ್ಥಕ್ಕೆ ಹೋಗಿ ರಾತ್ರಿಯಲ್ಲಿ ಅಲ್ಲಿಯೇ ಇದ್ದೇವು. ನಂತರ ದಿನಾಂಕ:18/03/2021 ರಂದು ಬೆಳಿಗ್ಗೆ 9-00 ಗಂಟೆಯಲ್ಲಿ ಸಮಯದಲ್ಲಿ ತನ್ನ ಮನೆಯ ಹಿಂಭಾಗದಲ್ಲಿರುವ ಮನೆಯವರು ತನಗೆ ಪೊನ್ ಮಾಡಿ ನಿಮ್ಮ ಮನೆಯ ಬಾಗಿಲನ್ನು ಯಾರೋ ಕಳ್ಳರು ಹೊಡೆದು ಹಾಕಿರುತ್ತಾರೆಂದು ತಿಳಿಸಿದ್ದು ತಾನು ಕೂಡಲೇ ತಮ್ಮ ಮನೆಯ ಹತ್ತೀರ ಬಂದು ನೋಡಲಾಗಿ ವಿಚಾರವು ನಿಜವಾಗಿರುತ್ತೆ. ನಂತರ ತಾನು ತಮ್ಮ ಮನೆಯಲ್ಲಿ ಪರಿಶೀಲನೆ ಮಾಡಲಾಗಿ ತಮ್ಮ ಮನೆಯಲ್ಲಿ ತಾನು ಕೆಲಸವನ್ನು  ಮಾಡಲು ಇಟ್ಟುಕೊಂಡಿದ್ದ ಕಟ್ ಆಫ್ ಮಿಷಿನ್, ಹ್ಯಾಂಟ್ ಡ್ರೀಲ್ಲಿಂಗ್ ಮಿಷಿನ್, ಗ್ರೈಂಡಿಂಗ್ ಮಿಷಿನ ಮತ್ತು ಇತರ ಸಾಮಾಗ್ರಿಗಳು ಯಾರೋ ಕಳ್ಳರು ಯಾವುದೋ ಸಮಯದಲ್ಲಿ ತಮ್ಮ ಮನೆಯ ಬಾಗಿಲಿಗೆ ಹಾಕಿರುವ ಬೀಗವನ್ನು ಮುರಿದು ಮನೆಯ ಒಳಗೆ ಹೋಗಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಮಿಷನ್ಗಳ ಬೆಲೆಯು ಒಟ್ಟು 89,000=00 ರೂಗಳು ಆಗಿರುತ್ತೆ. ಆದ್ದರಿಂದ ತಮ್ಮ ಮನೆಯಲ್ಲಿ ಕಳ್ಳತನವಾಗಿರುವ ಕಟ್ ಆಫ್ ಮಿಷಿನ್, ಹ್ಯಾಂಟ್ ಡ್ರೀಲ್ಲಿಂಗ್ ಮಿಷಿನ್, ಗ್ರೈಂಡಿಂಗ್ ಮಿಷಿನ ಮತ್ತು ಇತರ ಸಾಮಾಗ್ರಿಗಳನ್ನು ಪತ್ತೆ ಮಾಡಿಕೊಡಬೇಕಾಗಿ ಮತ್ತು ಕಳ್ಳರ ವಿರುದ್ದ ಕಾನೂನು ಕ್ರಮವನ್ನು ಜರುಗಿಸಬೇಕಾಗಿ ತಾನು ಎಲ್ಲಾ ಕಡೆಯಲ್ಲಿ ಹುಡುಕಾಡಿದ್ದರಿಂದ ದೂರು ನೀಡಲು ತಡವಾಗಿರುತ್ತೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲು ಮಾಡಿರುತ್ತೆ.

 

5. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.28/2021 ಕಲಂ. 379 ಐ.ಪಿ.ಸಿ :-

     ದಿನಾಂಕ:19/03/2021 ರಂದು ಮದ್ಯಾಹ್ನ 13:30 ಗಂಟೆಯಲ್ಲಿ ಪಿರ್ಯಾದಿ ಆರ್ ರವಿತೇಜ ಬಿನ್ ರಾಜೇಂದ್ರ, ನಂ.565, ಜಟ್ಟಿಗರ ಬೀದಿ, ಕೋಟೆ, ವಾರ್ಡ ನಂ:19 ಚಿಕ್ಕಬಳ್ಳಾಪುರ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ನಂದಿ ಕ್ರಾಸಿನಲ್ಲಿರುವ ನಂದಿನಿ ಮೇಗಾ ಡೈರಿಯಲ್ಲಿ ಕೆಲಸ ಮಾಡಿಕೊಂಡಿದ್ದು ದಿ:07/03/2021 ರಂದು ಕೆಲಸಕ್ಕೆಂದು ಮದ್ಯಾಹ್ನ 2:00 ಗಂಟೆಗೆ ಮನೆಯಿಂದ ಟಿ.ವಿ.ಎಸ್ ಕಂಪನಿಯ ಕೆ.ಎ-14 ಎಕ್ಸ್-4960 ಆರ್.ಟಿ.ಆರ್ ಬಜಾಜ್-160 ರಲ್ಲಿ ಡೈರಿಯ ಬಳಿಗೆ ಬಂದು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಕೆಲಸಕ್ಕೆ ಹೋಗಿ ರಾತ್ರಿ 9:00 ಗಂಟೆಗೆ ಕೆಲಸ ಮುಗಿಸಿಕೊಂಡು ಬಂದು ನೋಡಲಾಗಿ ತಾನು ನಿಲ್ಲಿಸಿದ ಸ್ಥಳದಲ್ಲಿ ದ್ವಿಚಕ್ರ ವಾಹನ ಇರುವುದಿಲ್ಲ ಸೆಕ್ಯೂರಿಟಿ ರವರನ್ನು ಕೇಳಿದಾಗ ಅವರು ತಮಗೆ ಗೊತ್ತಿರುವುದಿಲ್ಲವೆಂದು ತಿಳಿಸಿರುತ್ತಾರೆ. ಎಷ್ಟು ಹುಡುಕಾಡಿದರು ಸಹ ಪತ್ತೆಯಾಗಿರುವುದಿಲ್ಲ. ತನ್ನ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಅವರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಿ ತನ್ನ ದ್ವಿಚಕ್ರ ವಾಹನವನ್ನು ಪತ್ತೆಮಾಡಿಕೊಡಲು ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ.

 

6. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.70/2021 ಕಲಂ. ಮನುಷ್ಯ ಕಾಣೆ :-

     ದಿನಾಂಕ:-19/03/2021 ರಂದು ಮದ್ಯಾಹ್ನ 12-00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಆಂಜಿನಮ್ಮ ಕೋಂ ಮುನೀಂದ್ರ, 29 ವರ್ಷ, ಪ ಜಾತಿ, ಕೂಲಿ ಕೆಲಸ, ವಾಸ-ಚೀಮಂಗಲ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಸ್ವಂತ ಚೀಮಂಗಲ ಗ್ರಾಮವಾಗಿದ್ದು, ತನಗೆ ಈಗ್ಗೆ ಸುಮಾರು 7 ವರ್ಷಗಳ ಹಿಂದೆ ಹೊಸಪೇಟೆ ಗ್ರಾಮದ ವಾಸಿ ಮುನಿಯಪ್ಪ ರವರ ಮಗನಾದ ಮುನೀಂದ್ರ ರವರೊಂದಿಗೆ ಮದುವೆಯಾಗಿದ್ದು, ಮದುವೆಯಾದ ನಂತರ ತಾವು ಚೀಮಂಗಲ ಗ್ರಾಮದಲ್ಲಿ ವಾಸವಾಗಿರುತ್ತೇವೆ. ಹೀಗಿರುವಾಗ ದಿನಾಂಕ 15/03/2021 ರಂದು ಸಂಜೆ ಸುಮಾರು 4-00 ಗಂಟೆ ಸಮಯದಲ್ಲಿ ತನ್ನ ಗಂಡನಾದ ಮುನೀಂದ್ರ ರವರು ಮನೆಯಿಂದ ಎಲ್ಲಿಗೋ ಹೋದವರು ರಾತ್ರಿಯಾದರೂ ಸಹ ಮನೆಗೆ ವಾಪಸ್ಸು ಬಂದಿರುವುದಿಲ್ಲ. ತಾನು ತನ್ನ ಗಂಡನನ್ನು ತಮ್ಮ ಗ್ರಾಮದಲ್ಲಿ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ. ತನ್ನ ಗಂಡನಾದ ಮುನೀಂದ್ರ ರವರು ಕಾಣೆಯಾಗಿದ್ದು, ತಾನು ಇದುವರೆವಿಗೂ ತನ್ನ ಗಂಡನನ್ನು ಹುಡುಕಾಡಿಕೊಂಡಿದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಕಾಣೆಯಾಗಿರುವ ತನ್ನ ಗಂಡ ಮುನೀಂದ್ರ ರವರನ್ನು ಪತ್ತೆ ಮಾಡಿ ಕೊಡ ಬೇಕಾಗಿ ಕೊಟ್ಟ ದೂರು.

ಇತ್ತೀಚಿನ ನವೀಕರಣ​ : 19-03-2021 06:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080