ಅಭಿಪ್ರಾಯ / ಸಲಹೆಗಳು

 

1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.28/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:18.02.2021 ರಂದು ಸಂಜೆ 5-30 ಗಂಟೆಗೆ ಪಿರ್ಯಾದಿದಾರರಾದ ಹೆತೀಶ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತಮ್ಮ ತಂದೆ ಪೆದ್ದಾರೆಡ್ಡಿರವರು ಈಗ್ಗೆ ಸುಮಾರು 20 ವರ್ಷಗಳಿಂದ ಗೌರಿಬಿದನೂರಿನಲ್ಲಿ ಎರಡು ಮತ್ತು ಮಂಚೇನಹಳ್ಳಿಯಲ್ಲಿ ಎರಡು ಬಾರ್ ಗಳನ್ನು ಹೊಂದಿದ್ದು, ಸದರಿ ಬಾರ್ ಗಳಿಗೆ ಚಿಕ್ಕಬಳ್ಳಾಪುರ KSBCL ಡಿಪೋದಿಂದ ಮದ್ಯವನ್ನು ಕೊಂಡುಕೊಂಡು ಹೋಗಿ ಬಾರ್ ಗಳಲ್ಲಿ ಮಾರಾಟ ಮಾಡುತ್ತಿದ್ದರು. ತಮ್ಮ ತಂದೆಯವರು ಒಂದು ತಿಂಗಳ ಹಿಂದೆ ಮೃತಪಟ್ಟಿದ್ದು, ಬಾರ್ ಗಳ ವ್ಯವಹಾರವನ್ನು ತಾನೇ ನೋಡಿಕೊಳ್ಳುತ್ತಿರುತ್ತೇನೆಂದು ದಿನಾಂಕ: 15/02/2021 ರಂದು ತಾನು ಚಿಕ್ಕಬಳ್ಳಾಪುರದಲ್ಲಿರುವ KSBCL ಡಿಪೋದಲ್ಲಿ ಸುಮಾರು 12,16,000/- ರೂ.ಗಳು ಬೆಲೆಬಾಳುವ ವಿವಿಧ ಕಂಪನಿಯ 372 ಕೇಸ್ ಮದ್ಯದ ಪ್ಯಾಕೇಟ್ ಹಾಗೂ ಬಾಟೆಲ್ ಗಳನ್ನು ಕೊಂಡುಕೊಂಡು ಚಿಕ್ಕಬಳ್ಳಾಪುರದಲ್ಲಿ KA-07, 1912 ನೊಂದಣಿ ಸಂಖ್ಯೆಯ 407 ಲಗೇಜ್ ವಾಹನವನ್ನು ಬಾಡಿಗೆಗೆ ಪಡೆದುಕೊಂಡು ಅದರಲ್ಲಿ ಮದ್ಯದ ಕೇಸ್ ಗಳನ್ನು ಲೋಡ್ ಮಾಡಿ ಗೌರಿಬಿದನೂರಿಗೆ ಕಳುಹಿಸಿದ್ದು, ಗೂಡ್ಸ್ ವಾಹನದ ಹಿಂದೆ ತಾನು ದ್ವಿಚಕ್ರವಾಹನದಲ್ಲಿ ಬರುತ್ತಿದ್ದೆನು. ಮದ್ಯದ ಕೇಸ್ ಗಳನ್ನು ಲೋಡು ಮಾಡಿಕೊಂಡಿರುವ KA-07, 1912 ನೊಂದಣಿ ಸಂಖ್ಯೆಯ 407 ಲಗೇಜ್ ವಾಹನದ ಚಾಲಕ ಶೇಕ್ ಮಹಬೂಬ್ ಪಾಷ ಬಿನ್ ಶೇಕ್ ಹುಸೇನ್ ಸಾಬ್, 60 ವರ್ಷ, 5 ನೇ ವಾರ್ಡ್, ಮುನ್ಸಿಪಲ್ ಕಾಲೇಜು ಸಮೀಪ, ಚಿಕ್ಕಬಳ್ಳಾಪುರ ಟೌನ್ ರವರು ತನ್ನ ವಾಹನವನ್ನು ಚಲಾಯಿಸಿಕೊಂಡು ಗೌರಿಬಿದನೂರು ಕಡೆ ಹೋಗಲು ಚಿಕ್ಕಬಳ್ಳಾಪುರ-ಗೌರಿಬಿದನೂರು ರಸ್ತೆಯಲ್ಲಿ ಮೋಟ್ಲೂರು ಸಮೀಪವಿರುವ ವೀರದಿಮ್ಮಮ್ಮನ ಕಣಿವೆಯ ತಿರುವುಗಳಲ್ಲಿ ಹೋಗುತ್ತಿದ್ಧಾಗ ಸಾಯಂಕಾಲ ಸುಮಾರು 5-00 ಗಂಟೆ ಸಮಯದಲ್ಲಿ ಹಿಂದಿನಿಂದ ಹೋಗುತ್ತಿದ್ದ KA-01, AB-6301 ನೊಂದಣಿ ಸಂಖ್ಯೆಯ ಲಾರಿಯ ಚಾಲಕ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಹಿಂದಿನಿಂದ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆಸಿದನು. ತಕ್ಷಣ ಗೂಡ್ಸ್ ವಾಹನ ರಸ್ತೆಯ ಎಡಭಾಗದಲ್ಲಿರುವ ಬಂಡೆಗೆ ಡಿಕ್ಕಿ ಹೊಡೆದು ಸಂಪೂರ್ಣ ಜಖಂಗೊಂಡು ಅದರಲ್ಲಿದ್ದ ಮದ್ಯದ ಕೇಸ್ ಗಳು ರಸ್ತೆಯಲ್ಲಿ ಬಿದ್ದು ಹೊಡೆದು ಹೋಗಿದ್ದು, ಅದೇ ವೇಳೆಗೆ ಹಿಂದಿನಿಂದ ಬಂದ ತಾನು ರಸ್ತೆಯಲ್ಲಿ ಬಂದ ಸಾರ್ವಜನಿಕರ ಸಹಾಯದಿಂದ ಗೂಡ್ಸ್ ವಾಹನದ ಮದ್ಯದಲ್ಲಿ ಸಿಲುಕಿದ್ದ ಚಾಲಕ ಶೇಕ್ ಮಹಬೂಬ್ ಪಾಷರವರನ್ನು ಎತ್ತಿ ಉಪಚರಿಸಿದ್ದು, ಮಹಬೂಬ್ ಪಾಷರವರಿಗೆ ಬೆನ್ನಿಗೆ, ಮುಖಕ್ಕೆ, ಕೈ ಕಾಲುಗಳಿಗೆ ರಕ್ತಗಾಯಗಳಾಗಿದ್ದು, ಸ್ಥಳಕ್ಕೆ 108 ಆಂಬುಲೆನ್ಸ್ ನ್ನು ಕರೆಸಿಕೊಂಡು ಅದರಲ್ಲಿ ಶೇಕ್ ಮಹಬೂಬ್ ಪಾಷರವರನ್ನು ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದೆನು. ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಗರದ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿರುತ್ತೇನೆ. ಗಾಯಾಳು ಶೇಕ್ ಮಹಬೂಬ್ ಪಾಷರವರನ್ನು ನೋಡಿಕೊಳ್ಳುವವರು ಯಾರೂ ಇಲ್ಲದೇ ಇದ್ದುದರಿಂದ ತಾನು ಅವರೊಂದಿಗೆ ಇದ್ದು, ಚಿಕಿತ್ಸೆ ಕೊಡಿಸುತ್ತಿದ್ದೆನು. ಈ ಅಪಘಾತಕ್ಕೆ ಕಾರಣರಾದ KA-01, AB-6301 ನೊಂದಣಿ ಸಂಖ್ಯೆಯ ಲಾರಿಯ ಚಾಲಕನ ಹೆಸರು ವಿಳಾಸ ತಿಳಿಯಬೇಕಾಗಿದ್ದು, ಈ ದಿನ ತಡವಾಗಿ ಠಾಣೆಗೆ ಬಂದು ಈ ಅಪಘಾತಕ್ಕೆ ಕಾರಣರಾದ KA-01, AB-6301 ನೊಂದಣಿ ಸಂಖ್ಯೆಯ ಲಾರಿಯ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದುರಿನ ಮೇರೆಗೆ ಈ ಪ್ರ ವ ವರಧಿ.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.29/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:18.02.2021 ರಂದು ರಾತ್ರಿ 10-10 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ಜೀವನ್ ಆಸ್ಪತ್ರೆಯಲ್ಲಿ ಗಾಯಾಳು ಮಂಜುನಾಥರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ದಿನಾಂಕ:18.02.2021 ರಂದು ಸಂಜೆ 6-30 ಗಂಟೆ ಸಮಯದಲ್ಲಿ ತನ್ನ ಬಾಬತ್ತು ಕೆಎ 03 ಎಂ ಎಸ್ 7034 ನೊಂದಣಿ ಸಂಖ್ಯೆಯ ಎರ್ಟಿಗಾ ಕಾರಿನಲ್ಲಿ ತಾನು ತನ್ನ ಹೆಂಡತಿ ನಳೀನ ಮಗಳು ಗಾಯಿತ್ರಿ ಮತ್ತು ಮಗಳ ಸ್ನೇಹಿತೆ ಕುಮಾರಿ ರಾಧ ಹಾಗೂ ಪಕ್ಕದ ಮನೆಯವರಾದ ಶ್ರೀಮತಿ ಮೀನಾಕ್ಷಿ ಕೋಂ ಗಿರೀಶ್, ಅವರ ಮಕ್ಕಳಾದ ದೀಪ್ತಿ, ಮನ್ವಿತಾ , ಕಲ್ಯಾಣ್ ರವರುಗಳನ್ನು ಕಾರಿನಲ್ಲಿ ಕುಳ್ಳರಿಸಿಕೊಂಡು ತಾನು ಚಾಲನೆ ಮಾಡಿಕೊಂಡು ಚಿತ್ರಾವತಿಯಲ್ಲಿರುವ ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿ ದೇವರ ಜಾತ್ರೆ ಪ್ರಯುಕ್ತ ಪೂಜೆಗೆ ಹೋಗಲು ಎನ್ ಹೆಚ್ 44 ರಸ್ತೆಯ ಹಾರೋಬಂಡೆ ಗೇಟ್ ಸಮೀಪ ಯು ಟರ್ನ್ ಮಾಡಿದಾಗ ರಾತ್ರಿ 7-10 ಗಂಟೆ ಸಮಯದಲ್ಲಿ ಬಾಗೇಪಲ್ಲಿ ಕಡೆಯಿಂದ ಬರುತ್ತಿದ್ದ ಕ್ಯಾಂಟರ್ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ್ದರ ಪರಿಣಾಮ ಕಾರಿನಲ್ಲಿದ್ದ ಎಲ್ಲರಿಗೂ ರಕ್ತ ಗಾಯಗಳಾಗಿದ್ದು, ತಕ್ಷಣ ಸ್ಥಳದಲ್ಲಿದ್ದ ಸಾರ್ವಜನಿಕರ ಸಹಾಯದಿಂದ ಯಾವುದೋ ಕಾರುಗಳಲ್ಲಿ ಚಿಕ್ಕಬಳ್ಳಾಪುರದ ಜೀವನ್ ಆಸ್ಪತ್ರೆಗೆ ಕಳುಹಿಸಿಕೊಟ್ಟು ಅಪಘಾತಪಡಿಸದ ಕ್ಯಾಂಟರಿನ ನೊಂದಣಿ ಸಂಖ್ಯೆಯನ್ನು ನೋಡಲಾಗಿ ಎಪಿ 39 ಟಿಬಿ 4841 ಆಗಿರುತ್ತದೆ. ಈ ಅಪಘಾತಕ್ಕೆ ಕಾರಣನಾದ ಎಪಿ 39 ಟಿಬಿ 4841 ನೊಂದಣಿ ಸಂಖ್ಯೆಯ ಕ್ಯಾಂಟರ್ ಚಾಲಕನ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯಾಗಿರುತ್ತದೆ.

 

3. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.11/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ:-19/02/2021 ರಂದು ಮಧ್ಯಾಹ್ನ 1-30 ಗಂಟೆಗೆ ಪಿರ್ಯಾಧಿದಾರರಾದ ಶ್ರೀಮತಿ. ಸ್ವಾತಿ ಕೋಂ ಗಂಗಾಧರ ಬಿ 36 ವರ್ಷ, ವಕ್ಕಲಿಗರು, ಕಾಂಡಿಮೆಂಟ್ಸ್, ಮನೆ ನಂ-144, ವಾರ್ಡ್ ನಂ-02, ಭಗತ್ ಸಿಂಗ್ ನಗರ, ಚಿಕ್ಕಬಳ್ಳಾಪುರ ಟೌನ್ ಮತ್ತು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನ್ನ ಗಂಡ ಶ್ರೀ. ಗಂಗಾಧರ್ ಬಿನ್ ಲೇಟ್ ಭೊಜರಾಜು 45 ವರ್ಷ, ರವರು ದಿನಾಂಕ:-17/02/2021 ರಂದು ತಮ್ಮ ಬಾಬತ್ತು KA-40-EA-3249 ರ ಹೊಂಡಾ ಲಿವೋ ದ್ವಿಕ್ರವಾಹನದಲ್ಲಿ ಕೆಲಸದ ನಿಮಿತ್ತ ಟೌನ್ ಕಡೆ ಹೋಗಿ ಬರುವುದಾಗಿ ಹೇಳಿ ಸುಮಾರು ರಾತ್ರಿ 9-00 ಗಂಟೆಯ ಸಮಯದಲ್ಲಿ ಮನೆಯಿಂದ ಹೋಗಿದ್ದು, ನಂತರ ಸುಮಾರು 9-40 ಗಂಟೆಯ ಸಮಯದಲ್ಲಿ ತನ್ನ ಗಂಡ ಶ್ರೀ. ಗಂಗಾಧರ್ ರವರಿಗೆ ತಾನು ಮೊಬೈಲ್ ಕರೆಮಾಡಿದಾಗ ಅಪಘಾತವಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿರುವುದಾಗಿ ತಿಳಿಸಿದ್ದು, ತಾನು ತಕ್ಷಣ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು ತನ್ನ ಗಂಡನ್ನು ನೋಡಲಾಗಿ ಅವರಿಗೆ ಮುಖಕ್ಕೆ, ಹಣೆಗೆ, ಬಲಕಾಲಿಗೆ ರಕ್ತಗಾಯಗಳಾಗಿದ್ದು ಸದರಿ ಅಪಘಾತದ ಬಗ್ಗೆ ವಿಚಾರಿಸಲಾಗಿ ದಿನಾಂಕ:-17/02/2021 ರಂದು ತನ್ನ ಗಂಡ ಗಂಗಾಧರ್ ರವರು ಮನೆಯಿಂದ ತಮ್ಮ KA-40-EA-3249 ರ ಹೊಂಡಾ ಲಿವೋ ದ್ವಿಕ್ರವಾಹನದಲ್ಲಿ ಕೆ.ಎಸ್.ಆರ್.ಟಿ ಮುಂಭಾಗದಲ್ಲಿ ಪಿ.ಡಬ್ಲ್ಯೂ.ಡಿ ಕ್ವಾಟರ್ಸ್ ಬಳಿ ತನ್ನ ಸ್ನೇಹಿತನನ್ನು ಮಾತನಾಡಿಸಿಕೊಂಡು ನಂತರ ಅಲ್ಲಿಂದ ಶಿಡ್ಲಘಟ್ಟ ವೃತ್ತದ ಕಡೆಗೆ ಹೋಗಲು ಸುಮಾರು ರಾತ್ರಿ 9-30 ಗಂಟೆಯ ಸಮಯದಲ್ಲಿ ಬಾಗೇಪಲ್ಲಿ - ಚಿಕ್ಕಬಳ್ಳಾಪುರ ಎನ್.ಹೆಚ್-44 ಬಿ.ಬಿ ರಸ್ತೆಯಲ್ಲಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದ ಯೂ-ಟರ್ನ್ ಬಳಿ ಶಿಡ್ಲಘಟ್ಟ ವೃತ್ತದ ಕಡೆಗೆ ಹೋಗುವ ರಸ್ತೆಯ ಕಡೆಗೆ ತನ್ನ ದ್ವಿಚಕ್ರವಾಹನವನ್ನು ತಿರುಗಿಸಿಕೊಳ್ಳುತ್ತಿದ್ದಾಗ ಅದೇ ಸಮಯಕ್ಕೆ ಶಿಡ್ಲಘಟ್ಟ ವೃತ್ತದ ಕಡೆಯಿಂದ ಬಂದ KA-53-Y-7898 ರ ದ್ವಿಚಕ್ರವಾಹನ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ತನ್ನ ಗಂಡ ಗಂಗಾಧರ್ ರವರು ಚಾಲನೆ ಮಾಡುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ತನ್ನ ಗಂಡ ಗಂಗಾಧರ್ ರವರು ದ್ವಿಚಕ್ರವಾಹನ ಸಮೇತ ಠಾರ್ ರಸ್ತೆಯಲ್ಲಿ ಬಿದ್ದಾಗ ಮುಖಕ್ಕೆ, ಹಣೆಗೆ, ಬಲಕಾಲಿಗೆ ರಕ್ತಗಾಯಗಳಾಗಿದ್ದು, ತಕ್ಷಣ ಅಲ್ಲಿಯೇ ಇದ್ದ ತನ್ನ ಗಂಡನ ಸ್ನೇಹಿತರಾದ ಚಿಕ್ಕಬಳ್ಳಾಪುರ ಟೌನ್ ನ ಶ್ರೀ.ಎಂ.ರಮೇಶ್ ಬಿನ್ ಮುನಿಯಪ್ಪ 41 ವರ್ಷ ರವರು ಅಲ್ಲಿನ ಸ್ಥಳೀಯರ ಸಹಾಯದಿಂದ ಉಪಚರಿಸಿ ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಕಾರಿನಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಸದರಿ ಅಪಘಾತ ಪಡಿಸಿದ ದ್ವಿಚಕ್ರವಾಹನ ಸವಾರ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದು, ಆಸ್ಪತ್ರೆಯಲ್ಲಿ ತನ್ನ ಗಂಡ ಗಂಗಾಧರ್ ರವರಿಗೆ ಚಿಕಿತ್ಸೆಯನ್ನು ಕೊಡಿಸಿಕೊಂಡು ಸದರಿ ಅಪಘಾತಪಡಿಸಿದ ದ್ವಿಚಕ್ರವಾಹನ ಸವಾರನ ಮೇಲೆ ಈ ದಿನ ತಡವಾಗಿ ದಿನಾಂಕ:-19/02/2021 ರಂದು ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.74/2021 ಕಲಂ. 279,337 ಐ.ಪಿ.ಸಿ :-

     ದಿನಾಂಕ: 18/02/2021 ರಂದು ಮದ್ಯಾಹ್ನ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಅನಿಲ್ ಕುಮಾರ್.ಎನ್ ಬಿನ್ ನಾರಾಯಣಪ್ಪ, 30 ವರ್ಷ, ಆದಿ ದ್ರಾವಿಡ, ಖಾಸಗಿ ಕಂಪನಿಯಲ್ಲಿ ಕೆಲಸ, ಗುಂಡ್ಲಗುರ್ಕಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಮದ್ಯಾಹ್ನ 2.30 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡು ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 18/02/2021 ರಂದು ತನಗೆ ಚಿಂತಾಮಣಿ ನಗರದಲ್ಲಿ ಕೆಲಸದ ನೀಮಿತ್ತ ತಾನು ಬೆಳಿಗ್ಗೆ 09.30 ಗಂಟೆಗೆ ತಮ್ಮ ಗ್ರಾಮವನ್ನು ಬಿಟ್ಟು ತನ್ನ ಬಾಬತ್ತು KA-50 EA-4403 ಬಜಾಜ್ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಚಿಂತಾಮಣಿ ನಗರಕ್ಕೆ ಬಂದು ಅಲ್ಲಿ ಕೆಲಸವನ್ನು ಮುಗಿಸಿಕೊಂಡು ಬೆಂಗಳೂರಿಗೆ ತಮ್ಮ ಕಂಪನಿಗೆ ಕೆಲಸಕ್ಕೆ ಹೋಗಲೆಂದು ಬೆಳಿಗ್ಗೆ 11.50 ಗಂಟೆ ಸಮಯದಲ್ಲಿ ಚಿಂತಾಮಣಿ-ಬೆಂಗಳೂರು ರಸ್ತೆಯ ಕೈವಾರ ಕ್ರಾಸ್ ಬಳಿ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ತನ್ನ ಎದುರುಗಡೆಯಿಂದ ಅಂದರೆ ಹೆಚ್.ಕ್ರಾಸ್ ಕಡೆಯಿಂದ ಬಂದ ನಂಬರ್ KA-01 HY-9771 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನದ ಸವಾರ ಆತನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಪರಿಣಾಮ ತಾನು ತನ್ನ ದ್ವಿಚಕ್ರ ವಾಹನದ ಸಮೇತ ಕೆಳಗೆ ಬಿದ್ದು ಹೋಗಿ ತನ್ನ ಬಲಕಾಲಿಗೆ ರಕ್ತಗಾಯವಾಗಿ, ಎಡಕಾಲಿಗೆ ಸಣ್ಣ ಪುಟ್ಟ ಮೂಗೇಟುಗಳುಂಟಾಗಿರುತ್ತೆ ಹಾಗೂ ತನ್ನ ದ್ವಿಚಕ್ರ ವಾಹನದ ಮುಂಭಾಗ ಜಖಂಗೊಂಡಿರುತ್ತೆ. ಅಷ್ಟರಲ್ಲಿ ಅಲ್ಲಿದ್ದ ಸಾರ್ವಜನಿಕರು ತನ್ನನ್ನು ಉಪಚರಿಸಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟಿರುತ್ತಾರೆ. ತನ್ನ ಬಾಬತ್ತು ಅಪಘಾತಕ್ಕೀಡಾದ ದ್ವಿಚಕ್ರ ವಾಹನ ಮತ್ತು ತನಗೆ ಅಪಘಾತವನ್ನುಂಟು ಮಾಡಿದ ದ್ವಿಚಕ್ರ ವಾಹನಗಳು ಅಪಘಾತದ ಸ್ಥಳದಲ್ಲಿಯೇ ಇದ್ದು, ತನಗೆ ಅಪಘಾತವನ್ನುಂಟು ಮಾಡಿದ ದ್ವಿಚಕ್ರ ವಾಹನದ ಸವಾರನ ಹೆಸರು ಹಾಗೂ ವಿಳಾಸ ತಿಳಿದು ಬಂದಿರುವುದಿಲ್ಲ. ಆದ್ದರಿಂದ ತನಗೆ ಅಪಘಾತವನ್ನುಂಟು ಮಾಡಿರುವ ಮೇಲ್ಕಂಡ ನಂಬರ್ KA-01 HY-9771 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನದ ಸವಾರನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 

5. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.33/2021 ಕಲಂ. 380  ಐ.ಪಿ.ಸಿ :-

     ದಿನಾಂಕ 19/02/2021 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾಧಿ ಮುಖ್ಯ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಹಳೇ ಪೆರೆಸಂದ್ರ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ 18/02/2021 ರಂದು ಸರ್ಕಾರಿ ಪ್ರೌಢ ಶಾಲೆ ಹಳೇ ಪೆರೆಸಂದ್ರ ಶಾಲೆಯಲ್ಲಿ ಶಾಲಾ ಅವಧಿ ನಂತರ ಮೇಲು ಮಹಡಿ ಸ್ಮಾರ್ಟ್ ಕ್ಲಾಸ್ ನ ಮೊದಲನೇ ಕೊಠಡಿಯಲ್ಲಿದ್ದ ಜಿಲ್ಲಾ ಪಂಚಾಯ್ತಿ ವತಿಯಿಂದ ನೀಡಿದ್ದ ಒಟ್ಟು ಸುಮಾರು 18000/- ರೂ ಬೆಲೆ ಬಾಳುವ ದೊಡ್ಡ ಬ್ಯಾಟರಿ-2 ಹಾಗೂ ಇದಕ್ಕೆ ಸಂಬಂಧಿಸಿದ ಯು.ಪಿ.ಎಸ್.(ಇನ್ವೇಟರ್)ನ್ನು ಈ ದಿನ ದಿನಾಂಕ 19/02/2021 ರಂದು ಬೆಳಿಗ್ಗೆ 10-00 ಗಂಟೆಯ ಮಧ್ಯ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

6. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.20/2021 ಕಲಂ. 323,324,504,34  ಐ.ಪಿ.ಸಿ :-

     ದಿನಾಂಕ 19-02-2021 ರಂದು ಹೆಚ್.ಸಿ-110 ನಾಗರಾಜ ರವರು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಜಿ.ಎಸ್ ರಮೇಶ್ ಬಿನ್ ಶ್ರೀರಾಮಪ್ಪ, 32 ವರ್ಷ, ಭೋವಿ ಜನಾಂಗ, ಖಾಸಗಿ ಬಸ್ ಕಂಡಕ್ಟರ್ ಕೆಲಸ, ವಾಸ ದಿಗುವ ಗೊಳ್ಳಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆ ಪಡೆದು ಬೆಳಗ್ಗೆ 11.30 ಗಂಟೆ ಠಾಣೆಗೆ ಹಾಜರುಪಡಿದ್ದರ ಸಾರಾಂಶವೇನೆಂದರೆ, ದಿನಾಂಕ 18-02-2021 ರಂದು ಸಂಜೆ ಸುಮಾರು 07.30 ಗಂಟೆ ಸಮಯದಲ್ಲಿ ತಾನು ತನ್ನ ಹೆಂಡತಿ ಶೋಭಾ ರವರೊಂದಿಗೆ ಕೌಟುಂಬಿಕ ವಿಚಾರದಲ್ಲಿ ಮನೆಯಲ್ಲಿ ಗಲಾಟೆ ಮಾಡಿಕೊಳ್ಳುತ್ತಿದ್ದು ಆಗ ತಾನು ತನ್ನ ಹೆಂಡತಿಗೆ ಹೊಡೆದಾಗ ಅಲ್ಲಿಯೇ ಇದ್ದ ತನ್ನ ತಂದೆಯಾದ ಶ್ರೀರಾಮಪ್ಪ ಮತ್ತು ತನ್ನ ತಮ್ಮನಾದ ಸುರೇಶ ರವರು ಏಕಾಏಕಿ ಬಂದು ಬೈದು ಸುರೇಶ ಕೈಗಳಿಂದ ಹೊಡೆದು ಕಾಲುಗಳಿಂದ ಒದ್ದು ತನ್ನ ಎಡ ಕಿವಿಯನ್ನು ಕಚ್ಚಿದಾಗ ತನ್ನ ಕಿವಿಯ ಸ್ವಲ್ಪಭಾಗ ಕಟ್ಟಾಗಿ ಕೆಳಗೆ ಬಿದ್ದು ರಕ್ತಗಾಯ ಪಡಿಸಿದ್ದು, ತನ್ನ ತಂದೆ ಶ್ರೀರಾಮಪ್ಪ ಏಕೋ ನನ್ನ ಮಗನೇ ತನ್ನ ಸೋಸೆಯನ್ನು ಹೊಡೆಯುತ್ತಿದ್ದೀಯಾ ಎಂದು ತನ್ನ ಕೈಯಲ್ಲಿದ್ದ ಯಾವುದೋ ಒಂದು ಆಯುಧದಿಂದ ತನ್ನ ಎಡಕೈ ಮೇಲೆ ಹೊಡೆದು ರಕ್ತಗಾಯ ಪಡಿಸಿದರು. ನಂತರ ತಮ್ಮ ಮನೆ ಪಕ್ಕದ ಮನೆಯವರಾದ ಚಿಕ್ಕವೆಂಕಟೇಶಪ್ಪ, ಶಿವಣ್ಣ ರವರು ಬಂದು ಜಗಳ ಬಿಡಿಸಿದ್ದು ತನಗೆ ನೋವು ಜಾಸ್ತಿಯಾದ್ದರಿಂದ ಅಂಬ್ಯೂಲೇನ್ಸ್ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು, ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು ಹೇಳಿಕೆಯ ಸಾರಾಂಶವಾಗಿರುತ್ತೆ.

 

7. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.40/2021 ಕಲಂ. 323,324,504,506,34 ಐ.ಪಿ.ಸಿ :-

     ದಿನಾಂಕ 18/02/2021 ರಂದು ಬೆಳಿಗ್ಗೆ 11-00 ಗಂಟೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಗಾಯಾಳು ನರಸಿಂಹಮೂರ್ತಿ ಬಿನ್ ರಾಜಪ್ಪ, 24 ವರ್ಷ, ಪ ಜಾತಿ, ವ್ಯಾಪಾರ, ವಾಸ-ಗಂಬೀರನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೇನೆಂದರೆ, ತನ್ನ ಚಿಕ್ಕಮ್ಮ ಭಾರತಿ ರವರ ಮಗನಾದ ನಂದೀಶ್ ರವರು 10 ನೇ ತರಗತಿಯಲ್ಲಿ ವ್ಯಾಸಂಗ ಮಾಡಿಕೊಂಡಿದ್ದು, ಇತ್ತೀಚೆಗೆ ನಂದೀಶ್ ರವರು ಶಾಲೆಗೆ ಸರಿಯಾಗಿ ಹೊಗದೇ ಶಾಲೆಗೆ ಚಕ್ಕರ್ ಹಾಕಿ ತಮ್ಮ ಸಂಬಂಧಿಕರಾದ ರಾಜೇಂದ್ರ ಬಿನ್ ಮುನಿರಾಜಪ್ಪ, ಅರ್ಜುನ್ ಬಿನ್ ಮುನಿರಾಜಪ್ಪ ರವರ ಜೊತೆ ಊರಿನಲ್ಲಿ ಓಡಾಡಿಕೊಂಡಿರುತ್ತಾನೆ. ದಿನಾಂಕ 17/02/2021 ರಂದು ಸಂಜೆ ತಾನು ತನ್ನ ಚಿಕ್ಕಮ್ಮಳ ಮಗನಾದ ನಂದೀಶ್ ರವರಿಗೆ ನೀನು ಇನ್ನು ಮುಂದೆ ಅವರ ಜೊತೆ ಸೇರಿದರೆ ದೊಡ್ಡವರಿಗೆ ಹೇಳಿ ನಿನಗೂ ಮತ್ತು ಅವರಿಗೂ ಹೊಡೆಸುತ್ತೇನೆಂದು ಬೆದರಿಸಿದ್ದು, ನಂದೀಶ್ ರವರು ಈ ವಿಷಯವನ್ನು ರಾಜೇಂದ್ರ ಮತ್ತು ಅರ್ಜುನ್ ರವರಿಗೆ ತಿಳಿಸಿದ್ದು, ಅದೇ ದಿನ ರಾತ್ರಿ ಸುಮಾರು 9-00 ಗಂಟೆ ಸಮಯದಲ್ಲಿ ಮೇಲ್ಕಂಡ ರಾಜೇಂದ್ರ ಮತ್ತು ಅರ್ಜುನ್ ರವರು ತಮ್ಮ ಮನೆಯ ಬಳಿ ಬಂದು ತನ್ನನ್ನು ಕುರಿತು ಬಾರೋ ಲೋಫರ್ ನನ್ನ ಮಗನೇ, ನೀನು ಯಾರಿಗೆ ಹೇಳಿ ನಮಗೆ ಹೊಡೆಸುತ್ತೀಯಾ ಎಂದು ಕೆಟ್ಟ ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಮೈ ಮೇಲೆ ಹೊಡೆದು ಆ ಪೈಕಿ ರಾಜೇಂದ್ರ ರವರು ಮನೆಯ ಬಳಿ ಬಿದ್ದಿದ್ದ ಸಿಮೇಂಟ್ ಶೀಟ್ ಪೀಸ್ ಅನ್ನು ಎತ್ತಿಕೊಂಡು ತನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿ ಮತ್ತೆ ಅದರಿಂದ ತನಗೆ ಹೊಡೆಯಲು ಬಂದಾಗ ತಾನು ತಪ್ಪಿಸಿಕೊಂಡಾಗ ಜಗಳ ಬಿಡಿಸಲು ಅಡ್ಡ ಬಂದ ತನ್ನ ಚಿಕ್ಕಮ್ಮ ಭಾರತಿ ರವರ ತಲೆಗೆ ತಗುಲಿ ರಕ್ತಗಾಯವಾಗಿರುತ್ತದೆ. ಆ ಸಮಯದಲ್ಲಿ ತನ್ನ ಅಕ್ಕ ಯಶೋಧ, ತನ್ನ ಮನೆಯವರು ಹಾಗು ತನ್ನ ಅಕ್ಕ ಪಕ್ಕದ ಮನೆಯವರು ಅಡ್ಡ ಬಂದು ಜಗಳವನ್ನು ಬಿಡಿಸಿದಾಗ ಮೇಲ್ಕಂಡವರು ತನ್ನನ್ನು ಕುರಿತು ಇನ್ನೋಂದು ಸಲ ನಮ್ಮ ತಂಟೆಗೆ ಬಂದರೆ ನಿನಗೆ ಒಂದು ಗತಿ ಕಾಣಿಸುತ್ತೇನೆಂದು ಪ್ರಾಣ ಬೆದರಿಕೆಯನ್ನು ಹಾಕಿ ಅಲ್ಲಿಂದ ಹೊರಟು ಹೋಗಿರುತ್ತಾರೆ. ನಂತರ ತಾನು ಮತ್ತು ತನ್ನ ಚಿಕ್ಕಮ್ಮ ಯಾವುದೇ ಆಟೋದಲ್ಲಿ ಬಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ಹೇಳಿಕೆ.

 

8. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.41/2021 ಕಲಂ. 435 ಐ.ಪಿ.ಸಿ :-

     ದಿನಾಂಕ 18/02/2021 ರಂದು ಸಂಜೆ 5-30 ಗಂಟೆಗೆ ಪಿರ್ಯಾದಿದಾರರಾದ ಮಧು ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು, ಹೊಸಪೇಟೆ ಗ್ರಾಮ ಪಂಚಾಯ್ತಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಶಿಡ್ಲಘಟ್ಟ ತಾಲ್ಲೂಕು ಹೊಸಪೇಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಿರೇಬಲ್ಲ ಗ್ರಾಮದ ಸರ್ವೇ ನಂಬರ್ 71 ರ ಸರ್ಕಾರಿ ಜಮೀನಿನಲ್ಲಿ 10 ಎಕರೆ ಪ್ರದೇಶ ಹೊಸಪೇಟೆ ಗ್ರಾಮ ಪಂಚಾಯ್ತಿ ವಶದಲ್ಲಿ ಇರುತ್ತದೆ. ಸದರಿ ಜಮೀನಿನಲ್ಲಿ ಸುಮಾರು 30 ವರ್ಷಗಳಿಂದ ನೀಲಗಿರಿ ತೈಲದ ಸೊಪ್ಪನ್ನು ಬೆಳೆದು ಬಹಿರಂಗ ಹರಾಜು ಮೂಲಕ ವಿಲೇ ಮಾಡುತ್ತಾ ಬಂದಿರುತ್ತದೆ. ಹಾಲಿ ಸೊಪ್ಪು ಕಟಾವಿಗೆ ಬಂದಿದ್ದು ಅರಣ್ಯ ಇಲಾಖೆಯಿಂದ ತಗ್ಗು ಬೆಲೆಯನ್ನು ಗುರ್ತಿಸಿಕೊಂಡು ದಿನಾಂಕ 17/02/2021 ರಂದು ಬಹಿರಂಗ ಹರಾಜು ನಿಗದಿ ಪಡಿಸಲಾಗಿದ್ದು, ದಿನಾಂಕ 16/02/2021 ರಂದು ರಾತ್ರಿ ಸಮಯದಲ್ಲಿ ಯಾರೋ ಕಿಡಿಗೇಡಿಗಳು ನೀಲಗಿರಿ ಸೊಪ್ಪಿಗೆ ಬೆಂಕಿ ಹಚ್ಚದ ಪರಿಣಾಮ ಸುಮಾರು ಒಂದು ಎಕರೆ ಪ್ರದೇಶದ 25 ಸಾವಿರ ರೂ ಮೌಲ್ಯದ ಸೊಪ್ಪು ಮತ್ತು ಕಡ್ಡಿಗಳು ಸುಟ್ಟು ಹೋಗಿರುತ್ತದೆ. ಸದರಿ ವಿಷಯದ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.42/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:-18.02.2021 ರಂದು ಸಂಜೆ 6.00 ಗಂಟೆಗೆ ಪಿಸಿ-543 ಸುದಾಕರ್ ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ವರದಿಯ ಸಾರಾಂಶವೇನೆಂದರೆ, ದಿನಾಂಕ 18.02.2021 ರಂದು ಪಿಸಿ 543 ಸುಧಾಕರ್ ಆದ ನನ್ನನ್ನು ಗುಪ್ತ ಮಾಹಿತಿ ಸಂಗ್ರ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ನಾನು ಠಾಣಾ ಸರಹದ್ದಿನ ಗ್ರಾಮಗಳಾದ ವರದನಾಯಕನಹಳ್ಳಿ ಹರಳಹಳ್ಳಿ, ಚೀಮನಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಸಂಜೆ 4.30 ಗಂಟೆ ಸಮಯದಲ್ಲಿ ಹನುಮಂತಪುರ ಗ್ರಾಮದಲ್ಲಿ ಮಾಹಿತಿ ಸಂಗ್ರಹದಲ್ಲಿದ್ದಾಗ ಗ್ರಾಮದ ಬಾತ್ಮೀದಾರರಿಂದ ಹನುಮಂತಪುರ ಗ್ರಾಮದ ವಾಸಿಯಾದ ವೆಂಕಟೇಶಪ್ಪ ಬಿನ್ ಲೇಟ್ ಕೆಂಪಣ್ಣ ರವರು ಅವರ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪಾಕೇಟುಗಳನ್ನಿಟ್ಟುಕೊಂಡು ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ನಾನು ವೆಂಕಟೇಶಪ್ಪ ಬಿನ್ ಲೇಟ್ ಕೆಂಪಣ್ಣ ರವರ ಚಿಲ್ಲರೆ ಅಂಗಡಿಯ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಚಿಲ್ಲರೆ ಅಂಗಡಿಯ ಮುಂಭಾಗ ಯಾರೋ ಮೂರು ಜನ ಆಸಾಮಿಗಳು ಮದ್ಯವನ್ನು ಸೇವನೆ ಮಾಡುತ್ತಾ ಕುಳಿತಿದ್ದು ಒಬ್ಬ ಅಸಾಮಿ ತನ್ನ ಬಳಿ ಇದ್ದ ಒಂದು ಕಪ್ಪು ಬಣ್ಣದ ಕವರ್ ನಲ್ಲಿ ಮದ್ಯದ ಟೆಟ್ರಾ ಪಾಕೇಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯದ ಪಾಕೇಟ್ ಗಳನ್ನು ಮಾರಾಟ ಮಾಡುತ್ತಾ ಕುಡಿಯಲು ಅನುವು ಮಾಡಿಕೊಟ್ಟಿರುವುದು ಖಚಿತವಾದ ಮೇಲೆ ದಾಳಿ ಮಾಡಲಾಗಿ ಮಧ್ಯವನ್ನು ಕುಡಿಯುತ್ತಿದ್ದ ಸಾರ್ವಜನಿಕರು ಸಮವಸ್ತ್ರದಲ್ಲಿದ್ದ ನನ್ನನ್ನು ಕಂಡು ಓಡಿ ಹೋಗಿದ್ದು, ಮದ್ಯವನ್ನು ಹಿಡಿದುಕೊಂಡು ಕುಳಿತಿದ್ದ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಆವರ ಹೆಸರು ವಿಳಾಸ ಕೇಳಲಾಗಿ ವೆಂಕಟೇಶಪ್ಪ ಬಿನ್ ಲೇಟ್ ಕೆಂಪಣ್ಣ, 70 ವರ್ಷ, ವಕ್ಕಲಿಗರು, ಅಂಗಡಿ ವ್ಯಾಪಾರ, ಹನುಮಂತಪುರ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಸದರಿ ಆಸಾಮಿ ಬಳಿ ಇದ್ದ ಕವರ್ ನಲ್ಲಿ ಪರಿಶೀಲಿಸಲಾಗಿ ಅದರಲ್ಲಿ RAJA WHISKY ಯ 7 ಟೆಟ್ರಾ ಪಾಕೇಟ್ ಗಳಿದ್ದು ಪ್ರತಿ ಟೆಟ್ರಾ ಪಾಕೇಟ್ ನ ಬೆಲೆ 35.13 ರೂ ಎಂದು ಇದ್ದು ಇವುಗಳ ಒಟ್ಟು ಬೆಲೆ 245.91 ರೂ.ಗಳಾಗಿರುತ್ತೆ, ಸ್ಥಳದಲ್ಲಿ 4 ಪ್ಲಾಸ್ಟಿಕ್ ಗ್ಲಾಸುಗಳು, 3 ಖಾಲಿ ನೀರಿನ ಪಾಕೇಟುಗಳು ಹಾಗು 90 ಎಂ.ಎಲ್ ನ RAJA WHISKY 4 ಖಾಲಿ ಟೆಟ್ರಾ ಪಾಕೇಟ್ ಗಳಿದ್ದು, ಮೇಲ್ಕಂಡ ಆಸಾಮಿ ವೆಂಕಟೇಶಪ್ಪ ಬಿನ್ ಲೇಟ್ ಕೆಂಪಣ್ಣ ರವರು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಾ ಹಾಗೂ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಮಾಲು ಮತ್ತು ಅರೋಪಿಯನ್ನು ವಶಕ್ಕೆ ಪಡೆದುಕೊಂಡು ಬಂದು ಹಾಜರುಪಡಿಸಿದ್ದು ಮುಂದಿನ ಕ್ರಮ ಕೈಗೊಳಬೇಕಾಗಿ ನೀಡಿದ ವರದಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 19-02-2021 05:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080