ಅಭಿಪ್ರಾಯ / ಸಲಹೆಗಳು

 

1. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.130/2021 ಕಲಂ. 15(A),32(3) ಕೆ.ಇ  ಆಕ್ಟ್:-

     ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ.ವೆಂಕಟರವಣಪ್ಪ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:17/09/2021 ರಂದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಪುಟ್ಟಗುಂಡ್ಲಹಳ್ಳಿ ಗ್ರಾಮದ ವಾಸಿ ಮುದ್ದಲೋಳ ವೆಂಕಟರವಣ ಬಿನ್ ಮುದ್ದಲೋಳ ಈರಪ್ಪ ರವರು ಅವರ ಮನೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ ನಾನು ಠಾಣಾ ಸಿಬ್ಬಂದಿ ಹೆಚ್ ಸಿ-36 ವಿಜಯ್ ಕುಮಾರ್ ಮತ್ತು ಜೀಪ್ ಚಾಲಕ ಎಪಿಸಿ-65 ವೆಂಕಟೇಶ್ ರವರೊಂದಿಗೆ ಮಧ್ಯಾಹ್ನ 03-30 ಗಂಟೆಗೆ ಪುಟ್ಟಗುಂಡ್ಲಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಪಂಚಾಯ್ತಿದಾರರು ಮತ್ತು ಸಿಬ್ಬಂದಿಯೊಂದಿಗೆ ಪುಟ್ಟಗುಂಡ್ಲಹಳ್ಳಿ ಗ್ರಾಮದ ವಾಸಿ ಮುದ್ದಲೋಲ ವೆಂಕಟರವಣ ರವರ ಮನೆಯ ಬಳಿಗೆ ಹೋಗಿ ನೋಡಲಾಗಿ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಮತ್ತು ಮದ್ಯ ನೀಡುತ್ತಿದ್ದ ಒಬ್ಬ ಆಸಾಮಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ ಗಳು ಮತ್ತು ಮದ್ಯದ ಖಾಲಿ ಪ್ಯಾಕೇಟ್ ಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಬಿದ್ದಿರುವುದು ಕಂಡು ಬಂದಿರುತ್ತೆ. ಮನೆಯ ಬಳಿ ಮದ್ಯವನ್ನು ನೀಡುತ್ತಿದ್ದ ಆಸಾಮಿಯ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ ಮುದ್ದಲೋಲ ವೆಂಕಟರವಣ ಬಿನ್ ಮುದ್ದಲೋಲ ಈರಪ್ಪ 55 ವರ್ಷ ನಾಯಕ ಜನಾಂಗ ಜಿರಾಯ್ತಿ ವಾಸ ಪುಟ್ಟಗುಂಡ್ಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು ಸದರಿ ಆಸಾಮಿಯು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಮದ್ಯದ ಪ್ಯಾಕೇಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಪಂಚಾಯ್ತಿದಾರರ ಸಮಕ್ಷಮ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ 90 ಎಂ.ಎಲ್ ಸಾಮರ್ಥ್ಯದ 18 ಹೈವಾರ್ಡ್ಸ್ ವಿಸ್ಕಿಯ ಮದ್ಯದ ಟೆಟ್ರಾಪ್ಯಾಕೆಟ್ ಗಳಿದ್ದು ಅವುಗಳ ಒಟ್ಟು ಮೌಲ್ಯ 632.34 ರೂಗಳ 1 ಲೀಟರ್ 620 ಎಂ.ಎಲ್ ಮದ್ಯ ಆಗಿರುತ್ತೆ, 2 ಖಾಲಿಯ ಹೈವಾರ್ಡ್ಸ್ ವಿಸ್ಕಿಯ 90 ಎಂ.ಎಲ್ ಸಾಮರ್ಥ್ಯದ ಮದ್ಯದ ಟೆಟ್ರಾ ಪ್ಯಾಕೆಟ್ ಗಳು, 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಒಂದು ಲೀಟರ್ ಸಾಮರ್ಥ್ಯದ ಖಾಲಿ ವಾಟರ್ ಬಾಟೆಲ್  ಸ್ಥಳದಲ್ಲಿ ಇದ್ದು ಸದರಿಯವುಗಳನ್ನು ಪಂಚಾಯ್ತಿದಾರರ ಸಮಕ್ಷಮ ಸಂಜೆ 03-45 ಗಂಟೆಯಿಂದ ಸಂಜೆ 04-30 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಅಮಾನತ್ತುಪಡಿಸಿಕೊಂಡು ಸಂಜೆ 05-00 ಗಂಟೆಗೆ ಠಾಣೆಗೆ  ವಾಪಸ್ಸು ಬಂದು ಸ್ವತಃ ವರದಿಯ ಮೇರೆಗೆ ಆರೋಪಿಯ ವಿರುದ್ದ ಠಾಣೆಯ ಮೊ.ಸಂಖ್ಯೆ: 130/2021 ಕಲಂ:15(A) 32(3) KE ACT ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

2. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.88/2021 ಕಲಂ. 87 ಕೆ.ಪಿ  ಆಕ್ಟ್:-

     ದಿನಾಂಕ 17/09/2021 ರಂದು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೇ, ದಿನಾಂಕ: 16-09-2021 ರಂದು ಮದ್ಯಾನ್ಹ 2:30 ಗಂಟೆಗೆ  ಎ.ಎಸ್.ಐ ರವರಾದ ಡಿ.ಜಿ ನಾಗರಾಜ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ, ಮದ್ಯಾನ್ಹ 12:30 ಗಂಟೆ  ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು ಚೇಳೂರು ಠಾಣಾ ವ್ಯಾಪ್ತಿಯ ಪಾಳ್ಯಕೆರೆ ಗ್ರಾಮದ ಎ.ಕೆ ಕಾಲೋನಿಯ ಹುಣಸೆ ಮರದ ಕೆಳಗೆ ಯಾರೋ ಕೆಲವರು ಅಂದರ್ ಬಾಹರ್  ಇಸ್ಪಿಟ್ ಜೂಜಾಟವಾಡುತ್ತಿರುವುದಾಗಿ  ಬಂದ ಖಚಿತ ಮಾಹಿತಿಯ ಮೇರೆಗೆ  ನಾನು ಮತ್ತು ಠಾಣೆಯ ಸಿಬ್ಬಂದಿಯವರಾದ  ಸರ್ಕಾರಿ ಜೀಪ್ ಸಂಖ್ಯೆ ಕೆಎ 42 ಜಿ 61 ವಾಹನ ದ ಚಾಲಕ ಎಪಿಸಿ 87 ಮೋಹನ್ ಕುಮಾರ್ ಹಾಗೂ ಹೆಚ್ ಸಿ 129 ರವಣಪ್ಪ, ಹೆಚ್ ಸಿ 47 ಪ್ರಭಾಕರ್, ಪಿಸಿ 437 ಸತೀಶ ರವರುಗಳು ಠಾಣೆಯ ಬಳಿಗೆ ಪಂಚರನ್ನು ಬರಮಾಡಿಕೊಂಡು  ಸರ್ಕಾರಿ ಜೀಪ್ ಸಂಖ್ಯೆ  ಕೆಎ 42 ಜಿ 61 ವಾಹನದಲ್ಲಿ ಮದ್ಯಾನ್ಹ 01:00 ಗಂಟೆಗೆ ಪಾಳ್ಯಕೆರೆ ಗ್ರಾಮದ ಎ.ಕೆ ಕಾಲೋನಿಯ ಬಳಿ ಹೋಗಿ ಜೀಪ್ ಅನ್ನು ನಿಲ್ಲಿಸಿ ಗಿಡಗಳ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಅಂದರ್ 100 ಬಾಹರ್ 100 ಎಂದು ಕೂಗುತ್ತಾ  ಇಸ್ಪಿಟ್ ಜೂಜಾಟ ಆಡುತ್ತಿದ್ದವರನ್ನು ಪೊಲೀಸರು ಸುತ್ತುವರೆದು ಹಿಡಿದುಕೊಂಡು ವಶಕ್ಕೆ ಪಡೆದು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ನರಸಿಂಹಪ್ಪ ಬಿನ್ ಲೇಟ್ ಲೇಟ್ ಕೋನಪ್ಪ, 56 ವರ್ಷ, ಕೂಲಿ ಕೆಲಸ, ಆದಿ ದ್ರಾವಿಡ ಜನಾಂಗ, ವಾಸ ಪಾಳ್ಯಕೆರೆ ಗ್ರಾಮ,ಬಾಗೇಪಲ್ಲಿ ತಾಲ್ಲೂಕು 2) ನರೇಶ ಕೆ ಬಿನ್ ಕೃಷ್ಣಪ್ಪ, 23 ವರ್ಷ, ವ್ಯವಸಾಯ, ಆದಿ ದ್ರಾವಿಡ ಜನಾಂಗ, ವಾಸ ಪಾಳ್ಯಕೆರೆ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿದ್ದು ಸ್ಥಳದಿಂದ ಓಡಿ ಹೋದವರ ಹೆಸರು ಮತ್ತು ವಿಳಾಸ ತಿಳಿಯಲಾಗಿ. ಬಾಬು ಬಿನ್ ರಾಮಾಂಜಪ್ಪ, 40 ವರ್ಷ, ಆದಿ ದ್ರಾವಿಡ ಜನಾಂಗ, ವ್ಯವಸಾಯ, ಪಾಳ್ಯಕೆರೆ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, ಎಂದು ತಿಳಿದು ಬಂದಿದ್ದು ಮೇಲ್ಕಂಡ ಇಬ್ಬರ ಬಳಿಯಿದ್ದ 840/- ರೂ ನಗದು ಹಣವನ್ನು 52 ಇಸ್ಪಿಟ್ ಎಲೆಗಳನ್ನು, ಒಂದು ಹಳೆಯ ನ್ಯೂಸ್ ಪೇಪರ್ ಅನ್ನು ಪಂಚರ ಸಮಕ್ಷಮ  ಪಂಚನಾಮೆಯ ಮುಖಾಂತರ ಅಮಾನತುಪಡಿಸಿಕೊಂಡು ಮಾಲು ಮತ್ತು ಆರೋಪಿತರೊಂದಿಗೆ ಮದ್ಯಾನ್ಹ 2:30 ಗಂಟೆಗೆ ಠಾಣೆಗೆ ವಾಪಸ್ಸಾಗಿ ಮೇಲ್ಕಂಡವರ ವಿರುದ್ದ ಮುಂದಿನ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ NCR NO-94/2021 ರಂತೆ ದಾಖಲಿಸಿಕೊಂಡು ನಂತರ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.

 

3. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.179/2021 ಕಲಂ. ಮನುಷ್ಯ ಕಾಣೆ:-

     ಪಿರ್ಯಾದಿದಾರರಾದ ಶ್ರೀಮತಿ ಮೇಘನ ಕೋಂ ಟಿ.ಎಲ್ ಅಭಿಲಾಷ್, ಡೆಕ್ಕನ್ ಆಸ್ಪತ್ರೆ ಬಳಿ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಗಂಡನಾದ ಟಿ.ಎಲ್.ಅಭಿಲಾಷ್ ಬಿನ್ ಲೇಟ್ ಲಕ್ಷ್ಮಿನಾರಾಯಣರವರು ಈಗ್ಗೆ ಸುಮಾರು 6 ವರ್ಷಗಳಿಂದ ಚಿಕ್ಕಬಳ್ಳಾಪುರ ಉಪ-ವಿಭಾಗಾಧಿಕಾರಿಗಳ ಕಛೇರಿಯಲ್ಲಿ ದ್ವಿತೀಯದರ್ಜೆ ಸಹಾಯಕರಾಗಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 13/09/2021 ರಂದು ಬೆಳಿಗ್ಗೆ 07.00 ಗಂಟೆಗೆ ತನ್ನ ಗಂಡನಾದ ಟಿ.ಎಲ್. ಅಭಿಲಾಷ್ ರವರು ಕಛೇರಿಯ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೋಗಿದ್ದು, ಅದೇ ದಿನ ಬೆಳಿಗ್ಗೆ 09.00 ಗಂಟೆಗೆ ತನ್ನ ಗಂಡ ತನಗೆ ಪೋನ್ ಮಾಡಿ ತಮ್ಮ ಕಛೇರಿಯ ಸಿಬ್ಬಂದಿಯವರು ಮನೆಗೆ ಬರುತ್ತಾರೆ ಮನೆಯಲ್ಲಿರುವ ಪೈಲ್ ಗಳನ್ನು ಆತನಿಗೆ ಕೊಡುವಂತೆ ತಿಳಿಸಿರುತ್ತಾರೆ. ನಂತರ ಸಂಜೆಯಾದರೂನನ್ನಗಂಡಮನೆಗೆ ವಾಪಸ್ಸು ಬಂದಿರುವುದಿಲ್ಲ. ನಾನು ನನ್ನಗಂಡನ ಮೊಬೈಲ್ ನಂಬರ್ 7975516727, 8050568596 ಗೆ ಕರೆಮಾಡಲಾಗಿ ಸ್ವಿಚ್ ಆಫ್ ಬರುತ್ತಿರುತ್ತೆ. ತನ್ನ ಗಂಡ ಕೆಲಸ ಮಾಡುತ್ತಿದ್ದ ಕಛೇರಿಯ ಸಿಬ್ಬಂದಿಯವರು ಪೋನ್ ಮಾಡಿ ನಿಮ್ಮ ಗಂಡ ಸುಮಾರು ಒಂದು ವಾರದಿಂದ ಕೆಲಸಕ್ಕೆ ಬರುತ್ತಿರುವುದಿಲ್ಲ ಎಂದು ತಿಳಿಸಿರುತ್ತಾರೆ. ತಾನು ಕಾಣೆಯಾಗಿರುವ ತನ್ನ ಗಂಡನನ್ನು ಹುಡುಕಾಡಿಕೊಂಡಿದ್ದು ಇದುವರೆಗೆ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಈ ದಿನ ತಡವಾಗಿದೂರು ನೀಡುತ್ತಿದ್ದು, ಕಾಣೆಯಾಗಿರುವ ತನ್ನ ಗಂಡನನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

4. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.140/2021 ಕಲಂ. 379 ಐ.ಪಿ.ಸಿ:-

     ದಿನಾಂಕ: 17-09-2021 ರಂದು ಪಿರ್ಯಾದಿದಾರರಾದ ಶ್ರೀ  ಮಹೇಂದ್ರ ಕುಮಾರ್ ಬಿನ್ ವೆಂಕಟರಮಣಪ್ಪ, ಚೌಡರೆಡ್ಡಿ ಪಾಳ್ಯ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೇಂದರೆ, ತನ್ನ ಬಾಬತ್ತು ನೋಂದಣಿ ಸಂಖ್ಯೆ ಕೆ.ಎ-40-ಯು-9493 ಯ ಚಾಸೀಸ್ ನಂ; MD2A57AZ5EWK02892 ಮತ್ತು ಇಂಜನ್ ನಂ; PAZWEK77093 ವುಳ್ಳ ಡಿಸ್ಕವರಿ ಡಿ 105 ವಾಹನವನ್ನು ದಿನಾಂಕ: 14-09-2021 ರಂದು ಚಿಂತಾಮಣಿ ನಗರದ ಎನ್.ಆರ್ ಬಡಾವಣೆಯಲ್ಲಿರುವ ಎಸ್.ಬಿ.ಐ ಬ್ಯಾಂಕ್ ನಲ್ಲಿ ಕೆಲಸದ ನಿಮಿತ್ತ ಸದರಿ ದ್ವಿ ಚಕ್ರವಾಹನವನ್ನು ಬ್ಯಾಂಕ್ ಮುಂದೆ ನಿಲ್ಲಿಸಿ ಹೋಗಿ ಕೆಲಸ ನೋಡಿಕೊಂಡು ವಾಪಸ್ಸು ಬಂದು ನೋಡಿದರೆ ಸದರಿ ನನ್ನ ದ್ವಿ ಚಕ್ರವಾಹನವು ಇರುವುದಿಲ್ಲ. ಅಕ್ಕ-ಪಕ್ಕದಲ್ಲಿ ನೋಡಿದರೂ ಸಹ ದ್ವಿ ಚಕ್ರವಾಹನ ಸಿಕ್ಕಿರುವುದಿಲ್ಲ. ನಾನು ಇಲ್ಲದ ಸಮಯದಲ್ಲಿ ಬೇರೆ ಯಾರೋ ಅಪರಿಚಿತರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ದ್ವಿಚಕ್ರವಾಹನದ ಬೆಲೆ ಸುಮಾರು 30,000/- ರೂ ಬೆಲೆ ಬಾಳುವಂತಿದ್ದು, ಆದ್ದರಿಂದ ನನ್ನ ವಾಹನವನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

5. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.245/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:18/09/2021 ರಂದು ಬೇಳಿಗ್ಗೆ 09-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ 205 ಮೋಹನ್ ಕುಮಾರ್ ರವರು ತಂದು ಹಾಜರು ಪಡಿಸಿದ ಘನ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ: 13/09/2021 ರಂದು  ಸಂಜೆ 4-00 ಗಂಟೆಯಲ್ಲಿ  ಗೌರಿಬಿದನೂರು ತಾಲ್ಲೂಕು  ಹೊಸೂರು ಹೋಬಳಿ ಕಾಚಮಾಚೇನಹಳ್ಳಿ ಗ್ರಾಮದಲ್ಲಿ ಯಾರೋ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಪಿ.ಸಿ.312 ಸೋಮನಾತ್ ಮಾಲಗಾರ್ , ಡಬ್ಲ್ಯೂ.ಪಿ.ಸಿ-247 ಸೌಮ್ಯ,  ರವರೊಂದಿಗೆ   ಸರ್ಕಾರಿ ಜೀಪ್ ಸಂಖ್ಯೆ:   ಕೆ.ಎ-40, ಜಿ-538  ರಲ್ಲಿ  ಕಾಚಮಾಚೇನಹಳ್ಳಿ ಗ್ರಾಮದಲ್ಲಿ  ಹೋಗಿ , ಅಲ್ಲಿ  ಪಂಚಾಯ್ತಿದಾರರನ್ನು ಕರೆದುಕೊಂಡು  ಮಾಹಿತಿ ಇದ್ದ  ಸ್ಥಳಕ್ಕೆ  ಸಂಜೆ 4-30 ಗಂಟೆಗೆ ಹೋಗಿ   ಜೀಪ್ ಅನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ತನ್ನ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು , ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್  ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು  ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ.  ಮದ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ,  ತನ್ನ ಹೆಸರು   ಅಶ್ವತ್ಥಪ್ಪ ಬಿನ್ ಲೇಟ್ ನಂಜಪ್ಪ, 60 ವರ್ಷ, ವಕ್ಕಲಿಗರು, ಅಂಗಡಿ ವ್ಯಾಪಾರ, ಕಾಚಮಾಚೇನಹಳ್ಳಿ ಗ್ರಾಮ ಹೂಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ತನ್ನ ಬಳಿ ಇದ್ದ ಪ್ಲಾಸ್ಟಿಕ್ ಚೀಲವನ್ನು    ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್.ಸಾಮರ್ಥ್ಯದ HAY WARDS CHEERS  WHISKY ಯ 14  ಟೆಟ್ರಾ ಪಾಕೆಟ್ ಗಳು ಇದ್ದು,   ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 260 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 491.82/-  ರೂ.ಗಳಾಗಿರುತ್ತೆ. ಸದರಿ ವ್ಯಕ್ತಿ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು  ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ   ಸ್ಥಳದಲ್ಲಿ ಸಂಜೆ 4-45  ಗಂಟೆಯಿಂದ   ಸಂಜೆ  5-45  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ   ಕ್ರಮ ಜರುಗಿಸಿ  ಸ್ಥಳದಲ್ಲಿದ್ದ   90 ಎಂ.ಎಲ್.ಸಾಮರ್ಥ್ಯದ HAY WARDS CHEERS  WHISKY ಯ 14  ಟೆಟ್ರಾ ಪಾಕೆಟ್ ಗಳನ್ನು ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡು ಸಂಜೆ 6-15 ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು  ಈ ಮೆಮೋನೊಂದಿಗೆ  ಮಾಲನ್ನು ಹಾಗೂ ಆರೋಪಿಯನ್ನು ಹಾಜರುಪಡಿಸಿ ಆರೋಪಿಯ  ವಿರುದ್ಧ  15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ ದೂರಾಗಿರುತ್ತೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.246/2021 ಕಲಂ. 87 ಕೆ.ಪಿ ಆಕ್ಟ್:-

      ದಿನಾಂಕ:18/09/2021 ರಂದು ಬೇಳಿಗ್ಗೆ 09-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ 205 ಮೋಹನ್ ಕುಮಾರ್ ರವರು ತಂದು ಹಾಜರು ಪಡಿಸಿದ ಘನ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ:14/09/2021 ರಂದು ಸಂಜೆ 5-00 ಗಂಟೆಗೆ ಫಿರ್ಯಾದುದಾರರಾದ ಶ್ರೀ ಶಶಿಧರ್ ಎಸ್.ಡಿ. ಪೊಲೀಸ್ ವೃತ್ತ ನಿರೀಕ್ಷಕರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಮಶವೇನೆಂಧರೆ:  ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ತಿಳಿಯಪಡಿಸುವುದೇನೆಂದರೆ, ದಿನಾಂಕ : 14/09/2021 ರಂದು  ಮದ್ಯಾಹ್ನ ಸುಮಾರು 3.45 ಗಂಟೆಯಲ್ಲಿ  ಗೌರಿಬಿದನೂರು ತಾಲೂಕು ಭೀಮನಹಳ್ಳಿ ಗ್ರಾಮದ ಬಳಿ ಇರುವ ಕುಮದ್ವತಿ ನದಿಯಲ್ಲಿ ಯಾರೋ ಆಸಾಮಿಗಳು ಅಂದರ್ – ಬಾಹರ್ ಇಸ್ಪೀಟು ಜೂಜಾಟವಾಡುತ್ತಿರುವುದಾಗಿ ನನಗೆ ಬಂದ ಮಾಹಿತಿ ಮೇರೆಗೆ ಪಂಚಾಯಿತಿದಾರರನ್ನು ವೃತ್ತ ಕಚೇರಿಗೆ ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ ದಾಳಿ ಮಾಡಲು ಪಂಚರಾಗಿ ಸಹಕರಿಸಲು ಕೋರಿದ್ದರ ಮೇರೆಗೆ ಅವರು ಒಪ್ಪಿದ ನಂತರ ಸರ್ಕಾರಿ ಜೀಪಿನಲ್ಲಿ  ಗೌರಿಬಿದನೂರು  ವೃತ್ತ ಕಚೇರಿಯಿಂದ ಹೆಚ್ ಸಿ 20 ಶ್ರೀನಿವಾಸರೆಡ್ಡಿ,ಪಿ ಸಿ 179 ಶಿವಶೇಖರ್, ಪಿಸಿ -312 ಸೋಮನಾಥ್ ಮಾಲಗಾರ, ಪಿಸಿ- 532, ಚಿಕ್ಕಣ್ಣ, ಹೆಚ್ ಸಿ 187 ಅಶ್ವತ್ಥಪ್ಪ ಸಿಬ್ಬಂದಿಯವರೊಂದಿಗೆ ಇದೇ ದಿನ  ಸಂಜೆ  ಸುಮಾರು 4.00  ಗಂಟೆಯ ವೇಳೆಗೆ ಭೀಮನಹಳ್ಳಿಯ  ಗ್ರಾಮದ ಕುಮದ್ವತಿ ನದಿಯ ಬಳಿಗೆ ಹೋಗಿ ಸರ್ಕಾರಿ  ಜೀಪನ್ನು ಮರೆಯಲ್ಲಿ ನಿಲ್ಲಿಸಿ ಸ್ವಲ್ಪ ದೂರ ನಡೆದುಕೊಂಡು ಹೋಗಿ  ಮರಗಳ ಮರೆಯಲ್ಲಿ ನಿಂತು ನೊಡಿದಾಗ  3 ಜನರು  ಜನರ ಗುಂಪು ಸರ್ಕಾರಿ ಕಾಲುವೆಯಲ್ಲಿ ರೌಡಾಂಗಿ ಕುಳಿತುಕೊಂಡು ಅಂದರ್ಗೆ 200 ರೂ ಬಾಹರ್ ಗೆ 200 ರೂ ಅಂತ ಹೇಳಿ ಹಣವನ್ನು ಇಸ್ಪೀಟು ಜೂಜಾಟವಾಡುತ್ತಿದ್ದವರನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ನಾವುಗಳು ದಾಳಿ ಮಾಡಿ  ಅವರನ್ನು ಸುತ್ತುವರೆದು ಹಿಡಿದುಕೊಂಡು ಯಾರು ಓಡಿ ಹೋಗದಂತೆ ಎಚ್ಚರಿಗೆ ನೀಡಿ ಅವರುಗಳ ಹೆಸರು ವಿಳಾಸ  ಕೇಳಲಾಗಿ 1).ಅನಿಲ್ ಕುಮಾರ್ ಬಿನ್ ತಿಮ್ಮಪ್ಪ, 35 ವರ್ಷ, ಬಲಜಿಗರು, ಹೂವಿನ ವ್ಯಾಪಾರ, ರಮಾಪುರ ಗ್ರಾಮ, ಹೋಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕು, ಪೋನ್ 9591770946. .2) ರಾಜಣ್ಣ ಬಿನ್ ಅಶ್ವತ್ಥಪ್ಪ, 48 ವರ್ಷ, ಕುಂಬಾರರು, ಬಳಗೆರೆ  ಗ್ರಾಮ ಗೌರಿಬಿದನೂರು ತಾಲೂಕು ಪೋನ್ ನಂಬರ್ 7259970566  3) ಕಿರಣ್ ಬಿನ್ ಈಶ್ವರ್, 29 ವರ್ಷ, ಹಿಂದೂಸಾದರು ಇಡಗೂರು ಗ್ರಾಮ ಗೌರಿಬಿದನೂರು ತಾಲೂಕು.ಪೋನ್ ನಂಬರ್ 7338008344. ಅಂತ ತಿಳಿಸಿದ್ದು , ಜೂಜಾಟದ ಸ್ಥಳದಲ್ಲಿ ಒಂದು ಪ್ಲಾಸ್ಟಿಕ್ ಚೀಲವಿದ್ದು, ಅದರ ಮೇಲೆ ಇಸ್ಪೀಟು ಎಲೆಗಳು ಹಾಗು ನಗದು ಹಣವು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು  , ಸಂಗ್ರಹಿಸಿಕೊಂಡು ಎಣಿಸಲಾಗಿ 52 ಇಸ್ಪೀಟು ಎಲೆಗಳಾಗಿದ್ದು, ವಿವಧ ಮುಖ ಬೆಲೆಯ ನಗದು 5860/-  ಪಂಚರ ಸಮಕ್ಷಮ ಸಂಜೆ 4.00 ಗಂಟೆಯಿಂದ 4.30 ಗಂಟೆಯವರೆವಿಗು ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಇದೇ ದಿನ ಸಂಜೆ 5.00 ಗಂಟೆಗೆ ಮಾಲು ಮತ್ತು ಆರೋಪಿತರೊಂದಿಗೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ವಾಪಸ್ಸಾಗಿ ಮಾಲು ಮತ್ತು ಆರೋಪಿತರನ್ನು ಠಾಣಾಧಿಕಾರಿಗಳಿಗೆ ವಶಕ್ಕೆ ನೀಡಿ ಮುಂದಿನ ಕಾನೂನು ರಿತ್ಯಾ ಕ್ರಮ ಜರುಗಿಸಿ ವರದಿ ಮಾಡಲು ಸೂಚಿಸಿದ ದೂರಾಗಿರುತ್ತೆ.

 

7. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.108/2021 ಕಲಂ. 15(A),32(3) ಕೆ.ಇ ಆಕ್ಟ್:-

     18/09/2021 ರಂದು ಮದ್ಯಾಹ್ನ 12:00 ಗಂಟೆಗೆ ಡಿ,ಸಿ.ಬಿ/ಸಿಇಎನ್ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಹೆಚ್ ಸಿ-195 ರವರು ದಾಳಿಯಿಂದ ಠಾಣೆಗೆ ಆರೋಫಿ ಅಮಾನತ್ತು ಪಡಿಸಿದ್ದ ಮಾಲು ಹಾಗೂ ಪಂಚನಾಮೆಯೊಂದಿಗೆ ಹಾಜರಾಗಿ ನೀಡಿದ  ವರದಿಯ ಸಾರಾಂಶವೇನೆಂದರೆ  ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಮುರಳೀಧರ, ಸಿ.ಹೆಚ್.ಸಿ-195 ಆದ ನನಗೆ ಮತ್ತು ಮಧು, ಸಿಪಿಸಿ-527 ರವರುಗಳಿಗೆ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವರಾದ ಶ್ರೀ ಎನ್. ರಾಜಣ್ಣ ರವರು ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ನೇಮಕ ಮಾಡಿದ್ದು, ಅದರಂತೆ ನಾವುಗಳು ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆ, ಅಗಲಗುರ್ಕಿ ಕ್ರಾಸ್, ಜಡಲತಿಮ್ಮನಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಜಡಲತಿಮ್ಮನಹಳ್ಳಿ ಗ್ರಾಮದಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ, ಸುಲಾಲಪ್ಪನ ದಿನ್ನೆಯ ಅರಣ್ಯ ಪ್ರದೇಶದಲ್ಲಿ ಯಾರೋ ಕೆಲವರು ಆಸಾಮಿಗಳು ಅಕ್ರಮವಾಗಿ ಕುಳಿತುಕೊಂಡು ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಪಂಚರಿಗೆ ಮಾಹಿತಿ ತಿಳಿಸಿ ಮೇಲ್ಕಂಡ ಸ್ಥಳಕ್ಕೆ ಬೆಳಿಗ್ಗೆ 10-30 ಗಂಟೆಗೆ ಹೋಗಿ ದಾಳಿ ಮಾಡಿ ಸದರಿ ಸ್ಥಳದಲ್ಲಿ ದೊರೆತ ಸ್ವಾಮಿ ಬಿನ್ ಮಾರಪ್ಪ, 20 ವರ್ಷ, ಪ.ಜಾತಿ, ಕೂಲಿ ಕೆಲಸ, ವಾಸ ಕೊತ್ತನೂರು ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕುನನ್ನು ವಶಕ್ಕೆ ಪಡೆದು ಸದರಿ ಸ್ಥಳದಲ್ಲಿ ದೊರೆತ ಮದ್ಯ ತುಂಬಿರುವ 90 ಎಂ.ಎಲ್ 18 RAJA WHISKY TETRA POCKET, 1 ಖಾಲಿ ವಾಟರ್, ಬಾಟೆಲ್, 02 ಪ್ಲಾಸ್ಟಿಕ್ ಗ್ಲಾಸು, ಖಾಲಿಯಾಗಿರುವ 02  RAJA WHISKY 02 TETRA POCKET ಗಳನ್ನು ಅಮಾನತ್ತುಪಡಿಸಿಕೊಂಡು ಸದರಿ ಸ್ಥಳದಲ್ಲಿ ಪಂಚನಾಮೆ ಕ್ರಮವನ್ನು ಜರುಗಿಸಿ ಆರೋಪಿ, ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ವರದಿಯನ್ನು ನೀಡುತ್ತಿದ್ದು, ಮುಂದಿನ ಕ್ರಮಕ್ಕಾಗಿ ಸೂಚಿಸಿದ ಮೇರೆಗೆ ಈ ಪ್ರವವರದಿ.

 

8. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.116/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ.17/09/2021 ರಂದು ಮದ್ಯಾಹ್ನ 2.15 ಗಂಟೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಮೆಮೋ ಪಡೆದು ಆಸ್ಪತ್ರೆಗೆ ಓಗಿ ಗಾಯಾಳು ಜಯರಾಮ ರವರ ಹೇಳಿಕೆ ಪಡೆದು ಮದ್ಯಾಹ್ನ 3.15 ಗಂಟೆಗೆ ಠಾಣೆಗೆ ವಾಪಸ್ಸು ಬಂದು ದಾಖಲಿಸಿದ್ದರ ಹೇಳಿಕೆ ದೂರಿನ ಸಾರಾಂಶವೇನಂದರೆ, ದಿನಾಂಕ.16.09.2021 ರಂದು ಮದ್ಯಾಹ್ನ ಸುಮಾರು 12.00 ಗಂಟೆಯಲ್ಲಿ ತಾನು ಮಯೂರ ಸರ್ಕಲ್ ನಲ್ಲಿರುವ ಪ್ರಣಮ್ ವೈನ್ಸ್ ಅಂಗಡಿಯಿಂದ ನಮ್ಮ ಮನೆಗೆ ಬರಲು ತನ್ನ ಬಾಬತ್ತು KA.40.EA.6992 ವೆಸ್ಪಾ ದ್ವಿಚಕ್ರ ವಾಹನದಲ್ಲಿ ಅಶೋಕ ರಸ್ತೆಯಲ್ಲಿ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಉಲ್ಲೂರುಪೇಟೆ ರಸ್ತೆಯ ಇಡ್ಲಿ ಹೋಟೆಲ್ ಸಮೀಪ ಶಾಮಣ್ಣ ಬಾವಿ ಕಡೆಯಿಂದ ಉಲ್ಲೂರುಪೇಟೆ ಕಡೆಗೆ ಚಾಲನೆ ಮಾಡಿಕೊಂಡು ಬರುತ್ತಿದ್ದ  ಮಾರುತಿ ನಗರದ ವಾಸಿ ಶೇಖರಪ್ಪ ಎಂಬುವರು ಆತನ ಬಾಬತ್ತು  KA.40.ED.3459 ಹೊಂಡಾ ಆಕ್ಟೀವಾ ದ್ವಿಚಕ್ರ ವಾಹನವನ್ನು ರೋಡ್ ಕ್ರಾಸ್ ಮಾಡುವಾಗ ಅತಿವೇಗ ಮತ್ತು ಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ದ್ವಿಚಕ್ರ ವಾಹನಕ್ಕೆ ಅಫಘಾತ ಪಡಿಸಿದ ಪರಿಣಾಮ ತಾನು ತನಜ್ನ ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದು, ಬಲಮೊಣಕಾಲುಗೆ ಪೆಟ್ಟಾಗಿರುತ್ತೆ. ನಂತರ ರಸ್ತೆಯಲ್ಲಿ ಬರುವ ಸಾರ್ವಜನಿಕರು ತನ್ನ ನ್ನು ಉಪಚರಿಸಿ ಮನೆಗೆ ಕಳುಹಿಸಿದ್ದು, ತನಗೆ ಮೊಣಕಾಲು ನೋವು ಜಾಸ್ತಿ ಕಾಣಿಸಿಕೊಂಡಿದ್ದರಿಂದ ಈ ದಿನ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ತನ್ನ ಸ್ನೇಹಿತ ಅರುಣ್ ಕುಮಾರ್ ಬಿನ್ ಜಗದೀಶಪ್ಪ, ಚೀಮಂಗಲ ಗ್ರಾಮ ರವರೊಂದಿಗೆ ಬಂದು ಚಿಕಿತ್ಸೆಗೆ ದಾಖಲಾಗಿದ್ದು, ಆದ್ದರಿಂದ ತನಗೆ ಅಪಘಾತ ಪಡಿಸಿದ ಮೇಲ್ಕಂಡ KA.40.ED.3459 ಹೊಂಡಾ ಆಕ್ಟೀವಾ ದ್ವಿಚಕ್ರ ವಾಹನ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಲು ಕೊಟ್ಟ ಹೇಳಿಕೆ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 18-09-2021 05:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080