ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.241/2021 ಕಲಂ. 379 ಐ.ಪಿ.ಸಿ :-

     ದಿನಾಂಕ:17/08/2021 ರಂದು ಸಂಜೆ 6-00 ಗಂಟೆಯ ಸಮಯದಲ್ಲಿ ಪಿರ್ಯಧಿದಾರರಾದ ಮದು ಸಿ.ಎ ಬಿನ್ ಅಶ್ವತ್ಥಪ್ಪ, 24 ವರ್ಷ, ಬೋವಿ ಜನಾಂಗ, ಚಿಕ್ಕತಿಮ್ಮನಹಳ್ಳಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿ ಸಾರಾಂಶವೇನೆಂದರೆ ನಮ್ಮ ಗ್ರಾಮವಾದ  ಚಿಕ್ಕತಿಮ್ಮನಹಳ್ಳಿ ಯಿಂದ ಬಾಗೇಪಲ್ಲಿಗೆ  ಪ್ರತಿ ದಿನ ವಿದ್ಯಾಬ್ಯಾಸಕ್ಕಾಗಿ ದ್ವಿಚಕ್ರವಾಹನದಲ್ಲಿ ಬಂದು ಬಾಗೇಪಲ್ಲಿ  ಬಸ್  ನಿಲ್ದಾಣದ  ಹೋಟೆಲ್ ಪಕ್ಕ  ನನ್ನ ಬಾಬತ್ತು KA-40-W-4095 ನೊಂದಣಿ ಸಂಖ್ಯೆಯ  ಪ್ಯಾಶನ್ ಪ್ರೊ ದ್ವಿಚಕ್ರ ವಾಹನವನ್ನು ನಿಲ್ಲಿಸಿ ನಾನು ಚಿಕ್ಕಬಳ್ಳಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೋಗುತ್ತಿದ್ದೆ,  ದಿನಾಂಕ:17/08/2021 ರಂದು ಬೆಳಿಗ್ಗೆ 10-30 ಗಂಟೆಯ ಸಮಯದಲ್ಲಿ ಬಾಗೇಪಲ್ಲಿ ಬಸ್ಸು ನಿಲ್ದಾಣದ ಹೋಟೆಲ್ ಪಕ್ಕದಲ್ಲಿ ಪ್ರತಿ ದಿನ ದಂತೆ ನನ್ನ ದ್ವಿಚಕ್ರ ವಾಹನವನ್ನು  ನಿಲ್ಲಿಸಿ ನಾನು ಚಿಕ್ಕಬಳ್ಳಾಪುರ ಕಾಲೇಜಿಗೆ ಹೋಗಿ ನಂತರ 4-30 ಗಂಟೆಗೆ ವಾಪಸ್ಸು ಬಂದು ಬಸ್ ನಿಲ್ದಾಣದಲ್ಲಿ ನೋಡಿದಾಗ ನನ್ನ ದ್ವಿಚಕ್ರ ವಾಹನವು ಕಳವು ಆಗಿರುತ್ತದೆ ಆದ್ದರಿಂದ ಕಳವು ಆಗಿರುವ  ನನ್ನ  ದ್ವಿಚಕ್ರ ವಾಹನವದ ಬೆಲೆ 20,000 ಸಾವಿರ ಬೆಲೆಬಾಳುವುದಾಗಿರುತ್ತೆ, ಕಳ್ಳತನ ಮಾಡಿಕೊಂಡು ಹೋಗಿರುವ  ಕಳ್ಳರನ್ನು  ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಬೇಕಾಗಿ ಕೋರಿ  ನೀಡಿದ ದೂರು.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.128/2021 ಕಲಂ. 337 ಐ.ಪಿ.ಸಿ :-

      ದಿನಾಂಕ: 17/08/2021 ರಂದು  ಬೆಳಗ್ಗೆ 11-50 ಗಂಟೆಯ ಸಮಯಕ್ಕೆ ಪಿರ್ಯಾದಿ ಹೆಚ್.ಎ. ಮುನೇಂದ್ರ ಬಿನ್ ಆಂಜಿನಪ್ಪ 20ವರ್ಷ ಆದಿ ದ್ರಾವಿಡ  ಜನಾಂಗ ಕೂಲಿ ಕೆಲಸ ವಾಸ:ಹೊಸಪೇಟೆ ಗ್ರಾಮ. ಜಂಗಮಕೋಟೆ ಹೋಬಳಿ  ಶಿಡ್ಲಘಟ್ಟ  ತಾಲ್ಲೂಕು. ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತನ್ನ ತಂದೆ  ತಾಯಿಯವರಿಗೆ 1ನೇ ಹೆಚ್.ಎ. ಮುನೇಂದ್ರ  2ನೇ ವಂದನ. 3ನೇ ಸ್ವಾತಿ  ಎಂಬ ಮೂರು  ಜನ ಮಕ್ಕಳಿರುತ್ತೇವೆ. ತನ್ನ ತಂದೆ ಆಂಜಿನಪ್ಪ ರವರು ಕೂಲಿ  ಕೆಲಸ ಮಾಡಿಕೊಂಡು ತಮ್ಮನ್ನು ಪೋಷಣೆ ಮಾಡುತ್ತಿರುತ್ತಾರೆ. ದಿನಾಂಕ:15/08/2021 ರಂದು ಬೆಳಗ್ಗೆ ತಮ್ಮ ಗ್ರಾಮದ ಪ್ರಕಾಶ್ ಬಿನ್ ಆಂಜಿನಪ್ಪ ಎಂಬುವವರಿಗೆ ತರಕಾರಿಯನ್ನು ಲಾರಿಯಲ್ಲಿ ಲೋಡು ಮಾಡುವ  ಕೂಲಿ ಕೆಲಸಕ್ಕೆ ನನ್ನ ತಂದೆ ಆಂಜಿನಪ್ಪ ನಮ್ಮ  ಗ್ರಾಮದ  ಮಂಜೇಶ ಬಿನ್ ನಂಜಪ್ಪ, ಕೆಂಪಣ್ಣ  ಬಿನ್ ದೇಕಪ್ಪ. ಅಭಿಶೇಕ್  ಬಿನ್  ಮುನಿರಾಜು ಮತ್ತು ಇತರರೊಂದಿಗೆ ನಮ್ಮ ಗ್ರಾಮದಿಂದ  AP-03-TE-1215  ನಂಬರಿನ ಲಾರಿಯಲ್ಲಿ ಗಿಡ್ನಹಳ್ಳಿ  ಗ್ರಾಮದ  ಮೂರ್ತಿ ರವರ ಜಮೀನಿಗೆ ಕರೆದುಕೊಂಡು ಹೋಗಿದ್ದರು. ಅದೇ ದಿನ  ಬೆಳಗ್ಗೆ ಸುಮಾರು 11-30  ಗಂಟೆಯಲ್ಲಿ ತನ್ನ ತಂದೆಯವರ  ಜೊತೆಯಲ್ಲಿ ತರಕಾರಿ ಲೋಡು ಮಾಡಲು ಹೋಗಿದ್ದ ಮಂಜೇಶ್ ಬಿನ್ ನಂಜಪ್ಪ 29ವರ್ಷ ವಕ್ಕಲಿಗರು ರವರು ತನಗೆ ಪೋನು ಮಾಡಿ ಗಿಡ್ನಹಳ್ಳಿ ಗ್ರಾಮದ ಸಮೀಪ ನಿನ್ನ ತಂದೆ ಆಂಜಿನಪ್ಪರವರು ಲಾರಿಯ ಕ್ಯಾಬಿನ್ ಮೇಲೆ ಹತ್ತಿ ತರಕಾರಿ ಮೂಟೆಗಳನ್ನು ಕಟ್ಟುವ  ಹಗ್ಗವನ್ನು ಗಂಟು ಹಾಕುತ್ತಿದ್ದಾಗ ಲಾರಿ ಚಾಲಕನು ಅಜಾಗರೂಕತೆಯಿಂದ ಲಾರಿಯನ್ನು ಮುಂದಕ್ಕೆ  ಚಲಿಸಿದಾಗ ಮೇಲ್ಭಾಗದಲ್ಲಿ ಹಾದು ಹೋಗಿದ್ದ ವಿದ್ಯುತ್ ಲೈನ್ ತನ್ನ ತಂದೆಯವರಿಗೆ ಮೈ ಮೇಲಿನ  ಬಟ್ಟೆಗಳಿಗೆ  ತಾಕಿ  ಬೆಂಕಿ  ಹತ್ತಿಕೊಂಡು ಸುಟ್ಟಗಾಯಗಳಾಗಿರುತ್ತೆಂತ  ಚಿಕ್ಕಬಳ್ಳಾಪುರ  ಸರ್ಕಾರಿ  ಜಿಲ್ಲಾ  ಆಸ್ಪತ್ರೆಗೆ  ಕರೆದುಕೊಂಡು ಹೋಗುತ್ತಿರುವುದಾಗಿ  ಒಂದು ಜೊತೆ ಬಟ್ಟೆಗಳನ್ನು ತೆಗೆದುಕೊಂಡು ಬರುವಂತೆ ತಿಳಿಸಿದನು. ತಕ್ಷಣವೇ ತಾನು ಚಿಕ್ಕಬಳ್ಳಾಪುರ  ಸರ್ಕಾರಿ ಆಸ್ಪತ್ರೆಗೆ ಬಂದು  ನೋಡಲಾಗಿ  ನನ್ನ ತಂದೆಯವರಿಗೆ  ಕತ್ತಿನಿಂದ  ತೊಡೆಯವರೆವಿಗೂ ಸುಟ್ಟಗಾಯ ಗಳಾಗಿತ್ತು. ಚಿಕ್ಕಬಳ್ಳಾಪುರ  ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳು  ಪ್ರಥಮ ಚಿಕಿತ್ಸೆ ನೀಡಿ  ಹೆಚ್ಚಿನ ಚಿಕಿತ್ಸೆಯ ಬಗ್ಗೆ ಬೆಂಗಳೂರಿಗೆ ಕಳುಹಿಸಿದರು. ಅದರಂತೆ ನಾವು  ಗಾಯಗಳಾಗಿದ್ದ ತನ್ನ ತಂದೆಯವರನ್ನು ಆಂಬುಲೆನ್ಸ ನಲ್ಲಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದು ಹಾಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುತ್ತಾರೆ.  ಮೇಲ್ಕಂಡ AP-03-TE-1215  ನಂಬರಿನ ಲಾರಿಯ ಚಾಲಕನು ಮತ್ತು ತರಕಾರಿ ಲೋಡು ಮಾಲು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗಿದ್ದ ಪ್ರಕಾಶ್ ರವರು ಯಾವುದೇ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳದೇ ತನ್ನ ತಂದೆಯವರನ್ನು ಲಾರಿಯ ಮೇಲೆ ಹತ್ತಿಸಿ ಹಗ್ಗವನ್ನು ಕಟ್ಟಿಸಿ ಈ ಘಟನೆಗೆ ಕಾರಣನಾಗಿರುತ್ತಾರೆ. ಮೇಲ್ಕಂಡವರ ವಿರುದ್ದ  ಕಾನೂನು ರೀತಿಯ ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.129/2021 ಕಲಂ. 87 ಕೆ.ಪಿ ಆಕ್ಟ್ :-

      ದಿನಾಂಕ:17-08-2021 ರಂದು ಶ್ರೀ.ಬಿ.ಪಿ.ಮಂಜು ಪಿ.ಎಸ್.ಐ.ಗ್ರಾಮಾಂತರ ಪೊಲೀಸ್ ಠಾಣೆ ರವರು ನೀಡಿದ ಜ್ಞಾಪನದ  ಸಾರಾಂಶವೇನೆಂದರೆ. ತಾನು ಮದ್ಯಾಹ್ನ 2-00 ಗಂಟೆಯ ಸಮಯದಲ್ಲಿ ಠಾಣೆಯಲ್ಲಿದ್ದಾಗ ಠಾಣಾ ಸರಹದ್ದಿನ ಮುಷ್ಟೂರು ಗ್ರಾಮದ ಶ್ರೀ.ಗುರುಮೂರ್ತಿಸ್ವಾಮಿ ದೇವಸ್ಥಾನದ ಬಳಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಅಕ್ರಮ ಅಂದರ್-ಬಾಹರ್ ಇಸ್ವೀಟು ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು ಪಂಚರು ಮತ್ತು ಸಿಬ್ಬಂದಿಗಳಾದ ಶ್ರೀ.ಟಿ.ಎನ್.ರಮಣಾರೆಡ್ಡಿ.ಹೆಚ್.ಸಿ-141, ಶ್ರೀ.ಗಿರೀಶ್ ಹೆಚ್.ಸಿ-208, ಶ್ರೀ. ಶ್ರೀನಿವಾಸ ಸಿ.ಪಿ.ಸಿ-359, ಶ್ರೀ.ನರಸಿಂಹಮೂರ್ತಿ ಪಿಸಿ 264. ಶ್ರೀ.ನವೀನ್ ಬಾಬು ಪಿಸಿ 231. ಶ್ರೀ.ಮುರಳಿ ಪಿಸಿ 138 ರವರುಗಳೊಂದಿಗೆ ಇಲಾಖಾ ಜೀಪ್ ನಂ:ಕೆ.ಎ-40-ಜಿ-0567 ಬೊಲೇರೋ ಜೀಪ್ ನಲ್ಲಿ ಹೋಗಿ ಮುಷ್ಟೂರು ಗ್ರಾಮದ ಚೆರ್ಚ್  ಬಳಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಅಲ್ಲಿಂದ ಪಶ್ಚಿಮದ ಕಡೆ ಇರುವ ಶ್ರೀ ಗುರುಮೂರ್ತಿಸ್ವಾಮಿ ದೇವಸ್ಥಾನದ ಕಡೆಗೆ ನಡೆದುಕೊಂಡು ಹೋಗಿ ನೋಡಲಾಗಿ ದೇವಸ್ಥಾನದ ಉತ್ತರದ ಕಡೆ  ಕೆಲವರು  ವೃತ್ತಕಾರವಾಗಿ ಕುಳಿತುಕೊಂಡು ಹಣವನ್ನು ಫಣವಾಗಿಟ್ಟುಕೊಂಡು  ಅಂದರ್ 500 ರೂಪಾಯಿ ಮತ್ತು ಬಾಹರ್ 500 ರೂಪಾಯಿ ಎಂದು ಕೂಗುತ್ತಾ ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟು ಜೂಜಾಟ ಆಡುತ್ತಿದ್ದವರ ಮೇಲೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ದಾಳಿ ಮಾಡಿ ಜೂಜಾಟ ಆಡುತ್ತಿದ್ದ ಐದು ಜನ ಆಸಾಮಿಗಳನ್ನು ವಶಕ್ಕೆ ಪಡೆದಿದ್ದು ಇಬ್ಬರು ಆಸಾಮಿಗಳು ಸ್ಥಳದಿಂದ ಡಿ ಹೋಗಿರುತ್ತಾರೆ.  ವಶಕ್ಕೆ ಪಡೆದುಕೊಂಡಿದ್ದ ಆಸಾಮಿಗಳ ಹೆಸರು  ವಿಳಾಸ ಕೇಳಲಾಗಿ (1)  ಅರುಣ ಬಿನ್ ಮುನಿರಾಜು  27ವರ್ಷ ಪರಿಶಿಷ್ಟ ಜಾತಿ ಕೂಲಿ ಕೆಲಸ ವಾಸ: ಮುಷ್ಟೂರು ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು (2)  ಕೃಷ್ಣಪ್ಪ ಬಿನ್ ಕದಿರಪ್ಪ 28ವರ್ಷ ಪರಿಶಿಷ್ಟ ಜಾತಿ ಕೂಲಿ ಕೆಲಸ ವಾಸ: ಮುಷ್ಟೂರು ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು (3) ಅಶೋಕ ಬಿನ್ ನರಸಿಂಹಪ್ಪ 18ವರ್ಷ ಪರಿಶಿಷ್ಟ ಜಾತಿ ಕೂಲಿ ಕೆಲಸ ವಾಸ: ಮುಷ್ಟೂರು ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು (4)  ನರಸಿಂಹ ಬಿನ್ ನಾರಾಯಣಸ್ವಾಮಿ 25ವರ್ಷ ಪರಿಶಿಷ್ಟ ಜಾತಿ ಕೂಲಿ ಕೆಲಸ ವಾಸ: ಮುಷ್ಟೂರು ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು. (5)  ನವೀನ್ ಬಿನ್ ನಾರಾಯಣಸ್ವಾಮಿ 18ವರ್ಷ ಪರಿಶಿಷ್ಟ ಜಾತಿ ಕೂಲಿ ಕೆಲಸ ವಾಸ: ಮುಷ್ಟೂರು ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದರು. ಓಡಿ ಹೋದವರ ಬಗ್ಗೆ  ವಿಚಾರ ಮಾಡಲಾಗಿ (6) ವೆಂಕಟೇಶ ಬಿನ್ ನರಸಿಂಹಪ್ಪ 25ವರ್ಷ ಪರಿಶಿಷ್ಟಜಾತಿ ಕೂಲಿ ಕೆಲಸ ವಾಸ: ಮುಷ್ಟೂರು ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು. (7)  ನರಸಿಂಹಮೂರ್ತಿ ಬಿನ್  ನರಸಿಂಹಪ್ಪ 18ವರ್ಷ ಪರಿಶಿಷ್ಟಜಾತಿ ಕೂಲಿ ಕೆಲಸ ವಾಸ: ಮುಷ್ಟೂರು ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದರು. ಜೂಜಾಟದಲ್ಲಿ ಪಣಕ್ಕೆ ಇಟ್ಟಿದ್ದ 1050/- ರೂಪಾಯಿಗಳು ನಗದು ಹಣವನ್ನು, ಜೂಜಾಟಕ್ಕೆ ಬಳಸಿದ್ದ 52 ಇಸ್ಪೀಟು ಎಲೆಗಳು ಒಂದು ಪ್ಲಾಸ್ಟಿಕ್ ಗೋಣಿ ಚೀಲವನ್ನು ಪಂಚನಾಮೆಯ ಮುಖಾಂತರ ಅಮಾನತ್ತು ಪಡಿಸಿಕೊಂಡಿರುತ್ತೆ. ವಶಕ್ಕೆ ಪಡೆದಿರುವ ಆರೋಪಿತರನ್ನು ಪಣಕ್ಕಿಟ್ಟಿದ್ದ ನಗದು ಹಣ 1050/- ರೂಪಾಯಿಗಳನ್ನು, ಜೂಜಾಟಕ್ಕೆ ಬಳಸಿದ್ದ 52 ಇಸ್ಪೀಟು ಎಲೆಗಳನ್ನು, ಒಂದು ಗೋಣಿ ಚೀಲವನ್ನು ಪಂಚನಾಮೆ ಯೊಂದಿಗೆ ತಮ್ಮ ವಶಕ್ಕೆ ನೀಡುತ್ತಿದ್ದು ಮೇಲ್ಕಂಡ ಆಸಾಮಿಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣಾ NCR No.203/2021 ರಂತೆ ಅಸಂಜ್ಞೆಯ ಪ್ರಕರಣವನ್ನು  ದಾಖಲಿಸಿಕೊಂಡಿರುತ್ತೆ.  ಈ ಪ್ರಕರಣವು ಅಸಂಜ್ಞೆಯ ಪ್ರಕರಣವಾದ್ದರಿಂದ , ಸಂಜ್ಞೆಯ ಪ್ರಕರಣವೆಂದು ಪರಿಗಣಿಸಿ ತನಿಖೆಯನ್ನು  ಕೈಗೊಳ್ಳಲು  ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತೆ.  ಆದ್ದರಿಂದ   ಈ ಪ್ರ.ವ.ವರದಿ.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.130/2021 ಕಲಂ. 15(A),32(3) ಕೆ.ಇ ಆಕ್ಟ್ :-

    ದಿನಾಂಕ:17.08.2021 ರಂದು ಸಂಜೆ 17-05 ಗಂಟೆಗೆ ಶ್ರೀ.ಬಿ.ಪಿ.ಮಂಜು ಪಿ.ಎಸ್.ಐ. (ಕಾಸು) ಸಾಹೇಬರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:17.08.2021 ರಂದು ಸಂಜೆ 5-00 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಚಿಕ್ಕಪೈಯಲಗುರ್ಕಿ ಗ್ರಾಮದ ವಾಸಿ ಮಂಜುನಾಥ ಬಿನ್ ಲೇಟ್ ವೆಂಕಟರಾಯಪ್ಪ, 35 ವರ್ಷ, ಆದಿ ಕರ್ನಾಟಕ ಜನಾಂಗ, ವ್ಯಾಪಾರ ವೃತ್ತಿ ವಾಸ:ಚಿಕ್ಕಪೈಯಲಗುರ್ಕಿ ರವರು ತಮ್ಮ ಮನೆಯ ಬಳಿ ಸಾರ್ವಜನಿಕರಿಗೆ ಯಾವುದೇ ಪರವಾನಗಿ ಇಲ್ಲದೇ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿರುತ್ತದೆಂದು ಈ ಬಗ್ಗೆ  ಮೇಲ್ಕಂಡ ಆಸಾಮಿಯ ವಿರುದ್ದ ಕಲಂ 15(ಎ) , 32(3) ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

 

5. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.131/2021 ಕಲಂ. 15(A),32(3) ಕೆ.ಇ ಆಕ್ಟ್ :-

    ದಿನಾಂಕ:18.08.2021 ರಂದು ಬೆಳಿಗ್ಗೆ 11-10 ಗಂಟೆಗೆ ಶ್ರೀ.ಬಿ.ಪಿ.ಮಂಜು ಪಿ.ಎಸ್.ಐ. (ಕಾಸು) ಸಾಹೇಬರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:18.08.2021 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಅಣಕನೂರು ಗ್ರಾಮದ ವಾಸಿ  ಗಂಗಿರೆಡ್ಡಿ ಬಿನ್ ಲೇಟ್ ಸುಬ್ಬಣ್ಣ, 58 ವರ್ಷ, ನಾಯಕರು ಚಿಲ್ಲರೆ ಅಂಗಡಿ ವ್ಯಾಪಾರ, ರವರು ತಮ್ಮ ಚಿಲ್ಲರೆ ಅಂಗಡಿ ಬಳಿ ಸಾರ್ವಜನಿಕರಿಗೆ ಯಾವುದೇ ಪರವಾನಗಿ ಇಲ್ಲದೇ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿರುತ್ತದೆಂದು ಈ ಬಗ್ಗೆ  ಮೇಲ್ಕಂಡ ಆಸಾಮಿಯ ವಿರುದ್ದ ಕಲಂ 15(ಎ) , 32(3) ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

 

6. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.150/2021 ಕಲಂ. 341,323,504,506 ಐ.ಪಿ.ಸಿ:-

    ದಿನಾಂಕ: 18/08/20221 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಿನ ಹೇಳಿಕೆ ಪಡೆದು ಠಾಣೆಗೆ 11:45 ಗಂಟೆಗೆ ವಾಪ್ಸಸಾಗಿ ಸಾರಾಂಶವೇನೆಂದರೆ  ನನಗೆ ಈಗ್ಗೆ 16 ವರ್ಷಗಳ ಹಿಂದೆ ಆಲಪಲ್ಲಿ ಗ್ರಾಮದ ಮುನಿವೆಂಕಟಪ್ಪ ರವರ ಮಗನಾದ ಅಶೋಕರೆಡ್ಡಿ ಎಂಬುವವರಿಗೆ ನನ್ನ ತಂದೆ – ತಾಯಿ ಕೊಟ್ಟು ಮದುವೆ ಮಾಡಿರುತ್ತಾರೆ. ನನ್ನ ಗಂಡನಿಗೆ ಮೊದಲನೆ ಮದುವೆಯಾಗಿದ್ದು ಮಕ್ಕಳಿಲ್ಲದ ಕಾರಣ ನನ್ನನ್ನು 2 ನೇ ಮದುವೆ ಮಾಡಿಕೊಂಡಿರುತ್ತಾರೆ. ನನಗೆ ಒಂದು ಗಂಡು ಮತ್ತು ಹೆಣ್ಣು  ಮಗು ಇರುತ್ತದೆ. ನನ್ನ ಗಂಡ ಅಶೋಕರೆಡ್ಡಿ ರವರು ಇದೇ ಚಿಂತಾಮಣಿ ನಗರದ ಶಾಂತಿನಗರದಲ್ಲಿ ನಮ್ಮ ತಂದೆ ಕಟ್ಟಿಕೊಟ್ಟಿದ್ದ ಮನೆಯಲ್ಲಿ ವಾಸವಿರುತ್ತೇವೆ. ನನ್ನ ಗಂಡ ಮದುವೆಯಾದಗಿನಿಂದ ಚೆನ್ನಾಗಿ ನೋಡಿಕೊಂಡು ತದನಂತರ ನನ್ನ ಗಂಡ ಕುಡಿದುಕೊಂಡು ಬಂದು ಸಂಸಾರಕ್ಕೆ ಏನೂ ತರದೆ ಮಕ್ಕಳನ್ನು ಸಹ ಸರಿಯಾಗಿ ನೋಡಿಕೊಳ್ಳದೆ ಇದ್ದು ಈ ಬಗ್ಗೆ ನಾನು ಕೇಳಿದಾಗ ಕಿವಿಗೆ ಸಹ ಹಾಕಿಕೊಳ್ಳದೆ ಹೊರಟು ಹೋಗುತ್ತಿದ್ದರು, ನಾನು ಚಿಂತಾಮಣಿ ಎಲ್ ಐ ಸಿ ಕಛೇರಿಯಲ್ಲಿ ಕೆಲಸ ಮಾಡಿಕೊಂಡು ಮಕ್ಕಳನ್ನು ನಾನೇ ಪೋಷಣೆ ಮಾಡುತ್ತಿದ್ದೆನು. ನನ್ನ ಗಂಡ ಪ್ರತಿದಿನ ಕುಡಿದು ಮನೆಗೆ ಬಂದು ಗಲಾಟೆ ಮಾಡುವುದು ಕೆಟ್ಟ ಮಾತುಗಳಿಂದ ನೀನು ಸರಿಯಿಲ್ಲ ಮನೆಯಿಂದ ಹೊರಟು ಹೋಗು ಎಂದು ಬೈಯುತ್ತಿದ್ದು ಈ ಬಗ್ಗೆ ನಮ್ಮ ಹಿರಿಯರು ಪಂಚಾಯ್ತಿ ಮಾಡಿದರೂ ಸರಿ ಹೋಗಿರುವುದಿಲ್ಲ ನಂತರ ನಾನು ಠಾಣೆಯಲ್ಲಿ ಹಲವು ಬಾರಿ ದೂರು ನೀಡಿ ಎನ್ ಸಿ ಆರ್ ದಾಖಲಿಸಿ ಬಂದೋಬಸ್ತ್ ಪಡಿಸಿದರೂ ಸರಿ ಹೋಗಿರುವುದಿಲ್ಲ, ಹೀಗಿರುವಾಗ ದಿ: 18/08/2021 ರಂದು ಬೆಳಿಗ್ಗೆ 8:00 ಗಂಟೆಗೆ ನಾನು ಮನೆಯಿಂದ ಎಲ್ ಐ ಸಿ ಕಛೇರಿಗೆ ಕೆಲಸಕ್ಕೆ ಹೋಗಿರುವಾಗ ನನ್ನ ಗಂಡ ಅಶೋಕರೆಡ್ಡಿ ರವರು ಇಲ್ಲಿಗೆ ಬಂದು ಕಸಗುಡಿಸುತ್ತಿದ್ದ ನನ್ನನ್ನು ಅಡ್ಡಗಟ್ಟಿ ಏ ಪೋಲರ್ ಮುಂಡೆ, ಬೇವರಿಸಿ ಮುಂಡೆ ನಿನಗೆ ಕೊಬ್ಬು ಜಾಸ್ತಿಯಾಗಿ ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದೀಯಾ ಎಂದು ಕೆಟ್ಟ ಮಾತುಗಳಿಂದ ಬೈದು ಕೈಗಳಿಂದ ಕೂದಲುನ್ನು ಹಿಡಿದುಕೊಂಡು ಎಳೆದಾಡಿ ಕತ್ತಿನ ಮೇಲೆ ಮೈ ಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿ ಕಾಲುಗಳಿಂದ ಒದ್ದು ನಿನ್ನನ್ನು ಪ್ರಾಣಸಹಿತ ಉಳಿಸುವುದಿಲ್ಲ ಎಂದು ಪ್ರಾಣಬೆದರಿಕೆ ಹಾಕುತ್ತಿದ್ದಾಗ ಅಲ್ಲಿಯೇ ಇದ್ದ ಮಾಳಪಲ್ಲಿ ರಮೇಶ್ ರವರು ಬಂದು ನನ್ನ ಗಂಡನಿಂದ ಬಿಡಿಸಿ ಉಪಚರಿಸಿ ಯಾವುದೋ ಒಂದು ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದು ದಾಖಲಿಸಿದ್ದು. ಆದ್ದರಿಂದ  ನನ್ನ ಮೇಲೆ ಗಲಾಟೆ ಮಾಡಿ ಕೆಟ್ಟ ಮಾತುಗಳಿಂದ ಬೈದು ಅಡ್ಡಗಟ್ಟಿ ಹಲ್ಲೆ ಮಾಡಿದ ಸದರಿ  ಅಶೋಕರೆಡ್ಡಿ ರವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

7. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.194/2021 ಕಲಂ. 324,504 ಐ.ಪಿ.ಸಿ & 3(1)(r)(s) Scheduled Castes and Scheduled Tribes (Prevention of Atrocities) Amendment Ordinance 2014:-

       ದಿನಾಂಕ 17/08/2021 ರಂದು ಸಂಜೆ 5-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಸುಜಾತ ಕೋಂ ಅಮರನಾರಾಯಣ, 26 ವರ್ಷ, ನಾಯಕರು , ಟೈಲರ್ ಕೆಲಸ,ಹುದಗೂರು ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ-ನನ್ನ ಗಂಡ ಅಮರನಾರಾಯಣ ಬಿನ್ ಅಶ್ವತ್ಥಪ್ಪ,36 ವರ್ಷ,ರವರು ಆಟೋ ಓಡಿಸಿಕೊಂಡಿರುತ್ತಾರೆ. ದಿನಾಂಕ 13/08/2021 ರಂದು ರಾತ್ರಿ 9-00 ಗಂಟೆಯಲ್ಲಿ ನಾನು ಮನೆಯಲ್ಲಿದ್ದಾಗ ನಮ್ಮ ಪಕ್ಕದ ಮನೆಯ ವಾಸಿ ನ್ಯಾಮು ಎಂಬುವರು ಬಂದು ನಿನ್ನ ಗಂಡ  ಅಮರನಾರಾಯಣನಿಗೆ ಬಸ್ ಸ್ಟಾಂಡ್ ನಲ್ಲಿ ಕಲಂದರ್ ಹೊಡೆಯುತ್ತಿದ್ದಾರೆಂದು ನನಗೆ ಹೇಳಿದರು. ನಾನು ಅಲ್ಲಿಗೆ ಹೋಗಿ ನೋಡಲಾಗಿ ನನ್ನ ಗಂಡನು ಕೆಳಗೆ ಬಿದ್ದಿದ್ದು ಬಲಗಡೆ ಎದೆಯ ಕೆಳಗೆ ಕೊಯ್ದಿರುವ ಗಾಯವಾಗಿದ್ದು ರಕ್ತ ಬರುತ್ತಿರುತ್ತೆ. ಬಲಗಡೆ ಕತ್ತಿನ ಹತ್ತಿರ ರಕ್ತ ಗಾಯವಾಗಿರುತ್ತೆ. ವಿಚಾರ ತಿಳಿಯಲಾಗಿ ದಿನಾಂಕ 13/08/2021 ರಂದು 8-30 ಗಂಟೆಯಲ್ಲಿ ನನ್ನ ಗಂಡ ಹುದಗೂರು ಬಸ್ ನಿದ್ದಾಣದ ಹತ್ತಿರ ಬೇಕರಿ ಹತ್ತಿರ ರಸ್ತೆಯಲ್ಲಿ ಹೋಗುತ್ತಿದ್ದಾಗ ಕಲಂದರ್ ಬಿನ್ ಬಾಷ ಎಂಬುವನು ಬೈಕ್ ನಲ್ಲಿ ಬರುತ್ತಿದ್ದು ನನ್ನ ಗಂಡನ  ಮೇಲೆ ತಗುಲುವಂತೆ ಓಡಿಸಿಕೊಂಡು ಬಂದಿದ್ದರಿಂದ ಅಮರನಾರಾಯಣ ಯಾಕಪ್ಪ ನೋಡಿಕೊಂಡು ಗಾಡಿ ಓಡಿಸು  ಎಂದಗಾ ಕಲಂದರ್ ನನ್ನ ಗಂಡನನಿಗೆ ಲೋಫರ್ ನನ್ನ ಮಗನೆ, ನಾಯಕ ನನ್ನ ಮಗನೇ ನನಗೆ ಬುದ್ದಿ ಹೇಳುತ್ತೀಯಾ ಎಂದು ಬೈದು , ಅಲ್ಲಿಯೇ ಕೆಳಗೆ ಬಿದ್ದಿದ್ದ ಬಿಯರ್ ಬಾಟಲ್ ನಿಂದ  ಬಲಗಡೆ ಎದೆಯ ಕೆಳಗೆ ಮತ್ತು  ಬಲಗಡೆ ಕತ್ತಿನ ಹತ್ತಿರ ತಿವಿದು ರಕ್ತಗಾಯವನ್ನು ಮಾಡಿದನು ಎಂದು ತಿಳಿಸಿದರು ಗಲಾಟೆಯನ್ನು ನಮ್ಮ ಗ್ರಾಮದ ವಾಸಿ ಅನಿಲ್ ಬಿನ್ ಹನುಮಯ್ಯ ರವರು ನೋಡಿ ಬಿಡಿಸಿದ್ದು ನನ್ನ ಗಂಡನನ್ನು ಅಂಬುಲೆನ್ಸ್  ನಲ್ಲಿ ಗೌರಿಬಿದನೂರು ಸರ್ಕಾರಿ ಆಸ್ವತ್ರೆಗೆ ಸೇರಿಸಿದ್ದರಿಂದ  ಈ ದಿನ ತಡವಾಗಿ ಬಂದು ದೂರು ಕೊಟ್ಟಿದ್ದು , ನನ್ನ ಗಂಡನ ಮೇಲೆ ಬಿಯರ್ ಬಾಟೆಲ್ ನಿಂದ ಹೊಡೆದು ರಕ್ತಗಾಯವನ್ನು ಮಾಡಿ ಕೆಟ್ಟ ಮಾತುಗಳಿಂದ ಬೈದಿರುವ ಕಲಂದರ್ ಬಿನ್ ಬಾಷ ಎಂಬುವನ ಮೇಲೆ ಕಾನೂನು ಕ್ರಮ ಕೈಗೊಳ್ಳಲು  ನೀಡಿದ ಲಿಖಿತ ದೂರಾಗಿರುತ್ತೆ.

 

8. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.195/2021 ಕಲಂ. 279,304(A) ಐ.ಪಿ.ಸಿ :-

      ದಿನಾಂಕ 18/08/2021 ರಂದು ಬೆಳಿಗ್ಗೆ 8-45 ಗಂಟೆಗೆ ಪಿರ್ಯಾಧಿದಾರರಾದ ಮಂಜುಳ ಕೋಂ ರಾಮಣ್ಣ, 35 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ , ತೂಮಕುಂಟೆ ಗ್ರಾಮ, ಹಿಂದೂಪುರ ತಾಲ್ಲೂಕು, ಅನಂತಪುರಪುರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನಿಡಿದ ದೂರಿ ಸಾರಾಂಶವೇನೆಂದರೆ- ನನಗೆ ಈಗ್ಗೆ 18 ರ್ಷಗಳ ಹಿಂದೆ ಬಾಗೇಪಲ್ಲಿ ತಾಲ್ಲೂಕು ಪಾತಪಾಳ್ಯ ಹೋಬಳಿ ತುಂಗೇಟಿ ದಿನ್ನೆ ಗ್ರಾಮ ರಾಮಣ್ಣ , 36 ವರ್ಷ, ರವರನ್ನು ವಿವಾಹ ವಾಗಿರುತ್ತೇನೆ. ನಾವಿಬ್ಬರು ಸುಮಾರು 8 ವರ್ಷಗಳಿಂದ ತೂಮಕುಂಟೆ ಗ್ರಾಮದಲ್ಲಿ ವಾಸವಾಗಿರುತ್ತೇವೆ. ನಮಗೆ 12 ವರ್ಷದ ಮಗ ಇರುತ್ತಾನೆ. ದಿನಾಂಕ:17/08/2021 ರಂದು ಮಧ್ಯಾಹ್ನ ಸುಮಾರು 12-30 ಗಂಟೆ ಸಮಯದಲ್ಲಿ  ನನ್ನ ಗಂಡ ಚೌಳೂರು ಗೇಟ್ ನಲ್ಲಿ ಕೆಲಸವಿದ್ದು ಹೋಗಿಬರುವುದಾಗಿ ಹೇಳಿ ವೆಂಕಟೇಶ್ ಬಿನ್ ಹನುಮಂತಪ್ಪ ,ತೂಮಕೆಂಟೆ ಗ್ರಾಮ ರವರ ಬಾಬತ್ತು AP-02 BB-5068 ರವರ ಬಾಬತ್ತು ಹೀರೋ ಕಂಪನಿಯ ಪ್ಯಾಷನ್ ಪ್ರೋ ದ್ವಿ ಚಕ್ರ ವಾಹನದಲ್ಲಿ ಹೋಗಿರುತ್ತಾರೆ.ನಂತರ ಮದ್ಯಾಹ್ನ 1-30 ಗಂಟೆ ಸಮಯದಲ್ಲಿ ತೂಮುಕುಂಟೆ ಗ್ರಾಮದ ಮಂಜು ಬಿನ್ ವೆಂಕಟಪ್ಪ ರವರು ನಮ್ಮಮನೆಯ ಬಳಿ ಬಂದು ನಿನ್ನ ಗಂಡನಿಗೆ ಚೌಳೂರು ಗೇಟ್ ಬಳಿ ಅಪಘಾತ ವಾಗಿರುತ್ತೆ ಎಂದು ಹೇಳಿ ನನ್ನನ್ನು ಕರೆದುಕೊಂಡು ಬಂದಿದ್ದು ಅಷ್ಠರಲ್ಲಿ ನನ್ನ ಗಂಡನನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲು ಮಾಡಿರುತ್ತಾರೆ. ನಾನು ಆಸ್ಪತ್ರೆಯ ಬಳಿ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ಅಲ್ಲಿಯೇ ಇದ್ದ ಮಂಜು ರವರ ಬಳಿ ವಿಚಾರ ಮಾಡಲಾಗಿ ದಿನಾಂಕ:17/08/2021 ರಂದು ಮದ್ಯಾಹ್ನ ಸುಮಾರು 1-00 ಗಂಟೆ ಸಮಯದಲ್ಲಿ ನನ್ನ ಗಂಡ AP-02 BB-5068 ದ್ವಿಚಕ್ರ ವಾಹನದಲ್ಲಿ ಚೌಳೂರು ಗೇಟ್ ಬಳಿ ಹೋಗುತ್ತಿರುವಾಗ ಗೌರಿಬಿದನೂರು ಕಡೆಯಿಂದ ಬಂದ TN-28 AL-9843 ನೊಂದಣಿ ಸಂಖ್ಯೆಯ ಅಶೋಕ್ ಲೈಲ್ಯಾಂಡ್ ಸೀಮೆಂಟ್ ಬಲ್ಕರ್ ಲಾರಿಯ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಗಂಡ ಹೋಗುತ್ತಿದ್ದ AP-02 BB-5068 ಹೀರೋ ಪ್ಯಾಷನ್ ಪ್ರೋ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ್ದು ನನ್ನ ಗಂಡ ಚಾಲನೆ ಮಾಡುತ್ತಿದ್ದ ದ್ವಿ ಚಕ್ರ ವಾಹನದಿಂದ  ಕೆಳಗೆ ಬಿದ್ದು ನನ್ನ ಗಂಡನಿಗೆ ತಲೆಯ ಹಿಂಭಾಗಕ್ಕೆ ರಕ್ತಗಾಯ ವಾಗಿರುತ್ತೆ. ಎಡ ಕಾಲಿಗೆ ತರಚಿದ ಗಾಯ ವಾಗಿರುತ್ತೆ. ನಂತರ ನನ್ನ ಗಂಡನನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯ ವೈಧ್ಯಾಧಿಕಾರಿಗಳ ಸೂಚನೆ ಮೇರೆಗೆ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್  ವಾಹನದಲ್ಲಿ ಕರೆದುಕೊಂಡು ಮದ್ಯಾಹ್ನ ಸುಮಾರು 3-45 ಗಂಟೆಗೆ ಹೋಗಿರುತ್ತೇವೆ. ಅಲ್ಲಿನ ವೈಧ್ಯಾಧಿಕಾರಿಗಳು ನನ್ನ ಗಂಡನನ್ನು ಪರಿಕ್ಷೆಮಾಡಿ ನನ್ನ ಗಂಡ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ನನ್ನ ಗಂಡನ ಮೃತದೇಹವನ್ನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತೆ. ನನ್ನ ಗಂಡನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದರಿಂದ ಈ ದಿನ ಠಾಣೆಗೆ ತಡವಾಗಿ ಹಾಜರಾಗಿ ಮುಂದಿನ ಕ್ರಮ ಜರುಗಿಸಲು ಹಾಗೂ ನನ್ನ ಗಂಡನಿಗೆ ಅಪಘಾತ ಪಡಿಸಿ ನನ್ನ ಗಂಡನ ಸಾವಿಗೆ ಕಾರಣನಾದ TN-28 AL-9843 ನೊಂದಣಿ ಸಂಖ್ಯೆಯ ಲಾರಿಯ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ.ನಾನು ತೆಲುಗಿನಲ್ಲಿ ಹೇಳಿದ್ದನ್ನು ಕನ್ನಡಭಾಷೆಗೆ ತರ್ಜುಮೆ ಮಾಡಿ ಬರೆಯಿಸಿದ್ದು ಓದಿಸಿ ಕೇಳಲಾಗಿ ಸರಿಯಿರುತ್ತೆ.

 

9. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.115/2021 ಕಲಂ. 15(A),32(3) ಕೆ.ಇ ಆಕ್ಟ್:-

      ದಿನಾಂಕ;18/08/2021 ರಂದು ಬೆಳಿಗ್ಗೆ 10-00 ಗಂಟೆಗೆ ಠಾಣಾ ನ್ಯಾಯಾಲಯದ ಪಿಸಿ -318  ದೇವರಾಜು ರವರು ಠಾಣಾ ಎನ್ ಸಿ ಆರ್;ಸಂಖ್ಯೆ 171/2021 ರಲ್ಲಿಕ್ರಿಮಿನಲ್ ಪ್ರಕರಣ ದಾಖಲಿಸಲು ಘನ ನ್ಯಾಯಾಲಯದ  ಅನುಮತಿಯನ್ನು  ಪಡೆದು ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ , ದಿನಾಂಕ:10/08/2021 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ತಾನು ಗೌರಿಬಿದನೂರು ನಗರದಲ್ಲಿ ಗಸ್ತಿನಲ್ಲಿ ಇದ್ದಾಗ ಸಾರ್ವಜನಿಕರು ಪೋನ್ ಮಾಡಿ ಗೌರಿಬಿದನೂರು ನಗರದ ಬಿ.ಹೆಚ್.ರಸ್ತೆಯ ಶನಿಮಹಾತ್ಮ  ದೇವಾಲಯದ ಬಳಿ  ಯಾರೋ ಆಸಾಮಿ ಸಾರ್ವಜನಿಕರಿಗೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿದರು, ಕೂಡಲೇ ತಾನು ಪಿ.ಎಸ್.ಐ ಸಾಹೇಬರಿಗೆ ಮಾಹಿತಿಯನ್ನು ತಿಳಿಸಿದ್ದು, ನಂತರ ಪಂಚಾಯ್ತಿದಾರರನ್ನು ಕರೆಯಿಸಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ನಮ್ಮ ಠಾಣಾ ಸಿಬ್ಬಂದಿಯವರಾದ ಪಿ.ಸಿ -34 ಮಂಜುನಾಥ್ ರವರನ್ನು ಕರೆದುಕೊಂಡು ಮಾಹಿತಿಯಂತೆ ಬಿ.ಹೆಚ್.ರಸ್ತೆಯ ಶನಿಮಹಾತ್ಮ  ದೇವಾಲಯದ ಬಳಿ ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಯಾರೋ ಆಸಾಮಿಗಳು ಸಾರ್ವಜನಿಕ ಸ್ಥಳದಲ್ಲಿ  ಮದ್ಯ ಸೇವನೆ ಮಾಡುತ್ತಿರುವುದು ಖಚಿತ ಪಡಿಸಿಕೊಂಡು ಪಂಚರೊಂದಿಗೆ ಮದ್ಯ ಸೇವನೆ ಮಾಡುತ್ತಿದ್ದವರ ಮೇಲೆ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿ ಇದ್ದ ತಮ್ಮನ್ನು ಕಂಡು ಮದ್ಯ ಸೇವನೆ ಮಾಡುತ್ತಿದ್ದ ಆಸಾಮಿಗಳು ಓಡಿ ಹೋದರು ಮಾಹಿತಿಯಂತೆ ಮದ್ಯ ಸರಬರಾಜು ಮಾಡುತ್ತಿದ್ದ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ಮಹಮದ್ ಮಸೂದ್ ಬಿನ್ ಶೇಖ್ ರಫೀಕ್ .18 ವರ್ಷ,ಮುಸ್ಲಿಂ ಜನಾಂಗ , ವಾಸ:` ವಾಲ್ಮಿಕಿ ಚೆಕ್ ಪೊಸ್ಟ್,ಹತ್ತಿರ ಹಿಂದೂಪುರ.ಟೌನ್, ಮೊಬೈಲ್ ನಂ:8074355687, ಎಂದು ತಿಳಿಸಿದನು. ಆಸಾಮಿಗೆ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಯಾವುದದಾರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ರೀತಿಯ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮ ಸ್ಥಳವನ್ನು ಪರಿಶೀಲಿಸಲಾಗಿ 1) 90 ಎಮ್ ಎಲ್ ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿ ಕಂಪನಿಯ 16 ಟೆಟ್ರಾ ಪಾಕೆಟ್ ಗಳು 2)  90 ಎಮ್ ಎಲ್ ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿ ಕಂಪನಿಯ 04 ಖಾಲಿ ಟೆಟ್ರಾ ಪಾಕೆಟ್ ಗಳು 3) 03 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು 4)ಎರಡು ಲೀಟರ್ ಸಾಮರ್ಥ್ಯದ ಒಂದು ಖಾಲಿ ಪ್ಲಾಸ್ಟಿಕ್  ವಾಟರ್ ಬಾಟಲ್ ಇರುತ್ತೆ. ಮದ್ಯವಿರುವ ಪಾಕೆಟ್ಗಗಳ ಮೇಲೆ ಇರುವ ಬೆಲೆಯನ್ನು ನೋಡಲಾಗಿ 35.13 ರೂಪಾಯಿಗಳೆಂತ ಇರುತ್ತೆ ಇದರ ಒಟ್ಟು ಬೆಲೆ 562 ರೂ ಗಳಾಗಿರುತ್ತೆ. ಆಸಾಮಿ ಮತ್ತು ಮಾಲುಗಳನ್ನುಬೆಳಿಗ್ಗೆ 10-15 ಗಂಟೆಯಿಂದ 11-00 ಗಂಟೆಯವರೆಗೆ  ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿ ಠಾಣಾಧಿಕಾರಿಗಳಿಗೆ ನೀಡಿದ ವರಧಿಯನ್ನು ಪಡೆದು ಎನ್,ಸಿ,ಆರ್ ದಾಖಲಿಸಿ ಈ ದಿನ ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣದ ದಾಖಲಿಸಿರುತ್ತೆ .

 

10. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.140/2021 ಕಲಂ. 143,147,148,323,324,504,506,149 ಐ.ಪಿ.ಸಿ:-

      ದಿನಾಂಕ: 17/08/2021 ರಂದು ಮದ್ಯಾಹ್ನ 3-00 ಗಂಟೆಗೆ ಹೆಚ್.ಸಿ-137 ರವರು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಗಂಗರಾಜು ಬಿನ್ ಲೇಟ್ ಗಂಗಪ್ಪ, ಆರ್ಕುಂದ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ ನಮ್ಮ ಕುಟುಂಬವು ಈಗ್ಗೆ ಸುಮಾರು 15 ವರ್ಷಗಳಿಂದ ಉಚಲಗೊಲ್ಲಹಳ್ಳಿ ಗ್ರಾಮದ ಸರ್ವೆ ನಂ ನಲ್ಲಿ 3 ಎಕರೆ ಜಮೀನು ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಸದರಿ ಜಮೀನಿನಲ್ಲಿ ನಾವು ರಾಗಿಬೆಳೆ ನಾಟಿ ಮಾಡಿರುತ್ತೇವೆ. ದಿನಾಂಕ: 16/08/2021 ರಂದು ಸಂಜೆ 4-30 ಗಂಟೆ ಸಮಯದಲ್ಲಿ ನಮ್ಮ ಜಮೀನಿನಲ್ಲಿ ನಮ್ಮ ಗ್ರಾಮದ ತಿಮ್ಮಪ್ಪ ಮತ್ತು ನಾರಾಯಣಮ್ಮರವರು ಹಸುಗಳನ್ನು ಬಿಟ್ಟು ರಾಗಿ ಬೆಳೆಯನ್ನು ಮೇಯಿಸಿ ಹಾಳು ಮಾಡಿದ್ದು, ಇದನ್ನು ನೋಡಿದ ನಾನು ಮೇಲ್ಕಂಡವರನ್ನು ಕುರಿತು “ ಯಾಕೆ ರಾಗಿ ಹೊಲದಲ್ಲಿ ಹಸುಗಳನ್ನು ಬಿಟ್ಟು ಮೇಯಿಸಿದ್ದು, ಎಂತ ಕೇಳಿದ್ದಕ್ಕೆ ನನ್ನನ್ನು ಅವಾಚ್ಯ ಶಬ್ದಗಳಿಂದ ಬೈಯ್ದಿದ್ದು, ನಾನು ಸಮ್ಮನಾಗಿ ಮನೆಗೆ ಬಂದಿದ್ದು, ಸಂಜೆ 7-00 ಗಂಟೆ ಸಮಯದಲ್ಲಿ ತಿಮ್ಮಪ್ಪ, ನಾರಾಯಣಮ್ಮ, ವೆಂಕಟೇಶ, ಕುಮಾರ, ಅಂಬಿಕಾ, ವೆಂಕಟಾಚಲ, ಲಕ್ಷ್ಮೀ, ವಿನಯ, ರವರುಗಳು ಅಕ್ರಮಗುಂಪುಕಟ್ಟಿಕೊಂಡು ಕೈಗಳಲ್ಲಿ ಕಲ್ಲು ಮತ್ತು ದೊಣ್ಣೆ ಹಿಡಿದುಕೊಂಡು ನಮ್ಮ ಮನೆಯ ಬಳಿ ಬಂದು ಕುಮಾರ ಎಂಬುವವನು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ನನ್ನ ಎದೆಗೆ ಹೊಡೆದಿದ್ದು, ವೆಂಕಟೇಶ ಮತ್ತು ವೆಂಕಟಾಚಲರವರು ದೊಣ್ಣೆಯಿಂದ ತಲೆಗೆ ಮತ್ತು ಕೈಗಳಿಂದ ಮೈಮೇಲೆ ಹೊಡೆದಿದ್ದು, ಜಗಳ ಬಿಡಿಸಲು ಅಡ್ಡ ಬಂದನನ್ನ ಮಗಳಾದ ಗೋಪಿಕಾಳಿಗೆ ಲಕ್ಷ್ಮೀರವರು ಕುಮಾರನ ಕೈಯಿಂದ ದೊಣ್ಣೆಯನ್ನು ಕಿತ್ತುಕೊಂಡು ಆಕೆಯ ತಲೆಗೆ ಹೊಡೆದು ರಕ್ತಗಾಯಪಡಿಸಿದ್ದು, ಉಳಿದವರು ಎಲ್ಲರೂ ಸೇರಿಕೊಂಡು ಇವರನ್ನು ಪ್ರಾಣ ಸಹಿತ ಬಿಡಬಾರದೆಂದು ಕೂಗಾಡಿಕೊಂಡು ಲೋಫರ್ ನನ್ನ ಮಕ್ಕಳಾ ಸೂಳೆ ಮಕ್ಕಳಾ ಎಂದು ಅವಾಚ್ಯ ಶಬ್ದಗಳಿಂದ ಬೈಯ್ದುಕೊಂಡು ಕೈಗಳಿಂದ ಮತ್ತು ಕಾಲುಗಳಿಂದ ನನಗೆ, ನನ್ನ ಮಗಳಿಗೆ ಮತ್ತು ಹೆಂಡತಿಗೆ ಮೈಮೇಲೆ ಹೊಡೆದು ತುಳಿದಿರುತ್ತಾರೆ. ಆಗ ನಮ್ಮ ಗ್ರಾಮದ ಪ್ರಭಾಕರ ಮತ್ತು ಸಿದ್ದಮ್ಮರವರುಗಳು ಬಂದು ಆರೋಪಿತರಿಂದ ನಮ್ಮನ್ನು ಬಿಡಿಸಿ, ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ನಮ್ಮನ್ನು ವಿನಾಕಾರಣ ಹೊಡೆದು ಗಾಯಪಡಿಸಿದ ಮೇಲ್ಕಂಡ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಇದ್ದ ಹೇಳಿಕೆ ದೂರಿನನ್ವಯ ಪ್ರ.ವ.ವರದಿ.

 

11. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.90/2021 ಕಲಂ. 87 ಕೆ.ಪಿ ಆಕ್ಟ್:-

      ದಿನಾಂಕ:17/08/2021 ರಂದು ನಾನು ಠಾಣೆಯಲ್ಲಿರುವಾಗ ಸಂಜೆ 7:25 ಗಂಟೆ ಸಮಯದಲ್ಲಿ ಠಾಣಾ ವ್ಯಾಪ್ತಿಯ ಮಾವಳ್ಳಿ ಗ್ರಾಮದ ಮುನೇಶ್ವರ ದೇವಾಲಯಕ್ಕೆ ಹೋಗುವ ಮಣ್ಣಿನ ರಸ್ತೆಯ ಮದ್ಯದಲ್ಲಿ ಅಕ್ರಮವಾಗಿ ಕೆಲವರು ಹಣವನ್ನು ಪಣಕಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವವರ ಬಗ್ಗೆ ಮಾಹಿತಿ ಬಂದ ಮೇರೆಗೆ ಠಾಣಾ ಎನ್,ಸಿ.ಆರ್ ನಂ:95/2021 ರಲ್ಲಿ ನಮೂದು ಮಾಡಿದ್ದು ನಂತರ ಪ್ರಥಮ ಪರ್ತಮಾನ ವರದಿಯನ್ನು ತಯಾರಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ತನಿಖೆ ಕೈಗೊಳ್ಳಲು ಅನುಮತಿ ನೀಡುವಂತೆ ಘನ ನ್ಯಾಯಾಲಯದಲ್ಲಿ ಕೋರಿ ಅನುಮತಿ ಪಡೆದುಕೊಂಡಿದ್ದು ಅಂದರ್-ಬಾಹರ್ ಇಸ್ಪೀಟ್ ಜೂಜಾಟದ ಮೇಲೆ ದಾಳಿ ಮಾಡಿ ಮುಂದಿನ ಕ್ರಮ ಜರುಗಿಸಲು ಈ ಪ್ರ.ವ.ವರದಿ.

 

12. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.271/2021 ಕಲಂ. 143,147,148,323,324,504,506,149 ಐ.ಪಿ.ಸಿ :-

     ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀಮತಿ ಸುಜಾತಮ್ಮ ಕೋಂ ನಾರಾಯಣಸ್ವಾಮಿ, 35 ವರ್ಷ, ಆದಿ ಕರ್ನಾಟಕ, ಕೂಲಿ ಕೆಲಸ, ಯಣ್ಣಂಗೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು. ರವರ ಹೇಳಿಕೆ ದೂರನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ, ತನ್ನ ಗಂಡ ನಾರಾಯಣಸ್ವಾಮಿ ರವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಒಂದು ತಿಂಗಳಿನಿಂದ ಚಿಕ್ಕಬಳ್ಳಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆಪಡಿಸಿಕೊಂಡು ತಮ್ಮ ಅಕ್ಕನ ಗ್ರಾಮವಾದ ದೇವನಹಳ್ಳಿ ತಾಲ್ಲೂಕು ಸಾವಕನಹಳ್ಳಿ ಗ್ರಾಮದಲ್ಲಿ ಒಂದು ತಿಂಗಳಿನಿಂದ ಅಲ್ಲಿಯೇ ಇದ್ದು, ತಮ್ಮ ಮನೆಯಲ್ಲಿ ತಾವುಗಳು ಯಾರೂ ಇರುವುದಿಲ್ಲ. ದಿನಾಂಕ: 16/08/2021 ರಂದು ಸಂಜೆ 4-00 ಗಂಟೆಯಲ್ಲಿ ತಾವು ಊರಿನಿಂದ ತಮ್ಮ ಮನೆಯ ಬಳಿ ಬಂದು ನೋಡಿದಾಗ, ತಮ್ಮ ಮನೆಯ ಮುಂಭಾಗದ ಬಾಗಿಲಿಗೆ ಮರಗಳನ್ನು ಅಡ್ಡಹಾಕಿ ಕಲ್ಲು ಮಣ್ಣು ಹಾಕಿ ಅಡ್ಡ ಹಾಕಿರುತ್ತಾರೆ. ತಾನು, ಯಾರು ತಮ್ಮ ಮನೆಯ ಬಾಗಿಲಿಗೆ ಮರಗಳನ್ನು ಹಾಕಿರುತ್ತಾರೆ ಎಂದು ಮನೆಯ ಮುಂದೆ ಬೈಯ್ದುಕೊಳ್ಳುತ್ತಿದ್ದಾಗ, ತಮ್ಮ ಪಕ್ಕದ ಮನೆಯ ವಾಸಿಗಳಾದ ಮುನಿರಾಜಪ್ಪ ಬಿನ್ ಚಿಕ್ಕನಾರಾಯಣಪ್ಪ, ಮುನಿಗಂಗಪ್ಪ ಬಿನ್ ಮುನಿಮಲ್ಲಪ್ಪ, ಚಿಕ್ಕಗಂಗಪ್ಪ ಬಿನ್ ಮುನಿಮಲ್ಲಪ್ಪ, ಗಂಗರತ್ಮಮ್ಮ, ಲಕ್ಷ್ಮಮ್ಮ, ಮಣಿಕಂಠ ಬಿನ್ ಮುನಿಗಂಗಪ್ಪ, ರವಿ ಬಿನ್ ಚಿಕ್ಕಗಂಗಪ್ಪ ರವರುಗಳು ಅಕ್ರಮ ಗುಂಪು ಕಟ್ಟಿಕೊಂಡು ತಮ್ಮ ಮನೆಯ ಬಳಿ ಬಂದು ಏನೇ ಲೋಫರ್ ಮುಂಡೆ, ಸೂಳೇ ಮುಂಡೆ, ಯಾರನ್ನು ನೀನು ಬೈಯುತ್ತಿರುವುದು ಎಂದು ಅವಾಚ್ಯ ಶಬ್ದಗಳಿಂದ ಬೈದು ಗಂಗರತ್ನಮ್ಮ ರವರು ಅಲ್ಲಿಯೇ ಇದ್ದ ಒಂದು ಕೋಲನ್ನು ಎತ್ತಿಕೊಂಡು ಮೈ ಮೇಲೆ ಹೊಡೆದು ನೋವುಂಟು ಮಾಡಿದಾಗ, ಲಕ್ಷ್ಮಮ್ಮ ರವರು ಕೈಗಳಿಂದ ತನ್ನ ಮೈಮೇಲೆ ಹೊಡೆದು ನೋವುಂಟು ಮಾಡಿದಾಗ, ಲಕ್ಷ್ಮಮ್ಮ ರವರು ಕೈಗಳಿಂದ ತನ್ನ ಮೈ ಮೇಲೆ ಹೊಡೆದು ನೋವುಂಟು ಮಾಡಿ ಜಗಳ ಮಾಡುತ್ತಿದ್ದಾಗ, ಅಲ್ಲಿಗೆ ಬಂದ ತಮ್ಮ ಗ್ರಾಮದ ವಾಸಿಗಳಾದ ಮಧನ್ ಬಿನ್ ತಿರುಮಲೇಶ, ಮುನಿಆಂಜಿನಪ್ಪ ಬಿನ್ ನರಸಿಂಹಪ್ಪ ರವರು ಅಡ್ಡ ಬಂದು ಜಗಳ ಬಿಡಿಸಿದಾಗ, ಮೇಲ್ಕಂಡವರೆಲ್ಲರೂ ಇನ್ನೊಂದು ಸಲ ತಮ್ಮ ತಂಟೆಗೆ ಬಂದರೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂದು ಪ್ರಾಣಬೆದರಿಕೆ ಹಾಕಿರುತ್ತಾರೆ. ನಂತರ ತನಗೆ ಮೈಯಲ್ಲಿ ನೋವು ಜಾಸ್ತಿ ಆದ ಕಾರಣ ಯಾವುದೋ ವಾಹನದಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿರುತ್ತೇನೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಕೋರಿದ್ದರ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

 

13.ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.272/2021 ಕಲಂ. 323,324,504,506,34 ಐ.ಪಿ.ಸಿ :-

      ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀಮತಿ ಗಂಗರತ್ನಮ್ಮ ಕೋಂ ಲೇಟ್ ನರಸಿಂಹಮೂರ್ತಿ, 38 ವರ್ಷ, ಆದಿ ಕರ್ನಾಟಕ, ಕೂಲಿ ಕೆಲಸ, ಯಣ್ಣಂಗೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆ ದೂರನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ, ತಮ್ಮ ಮನೆಯ ಮುಂಭಾಗದಲ್ಲಿ ವಾಸವಿರುವ ಸುಜಾತಮ್ಮ ಕೋಂ ನಾರಾಯಣಸ್ವಾಮಿ ರವರು ತಮ್ಮ ಮನೆಯ ಮುಂದೆ ರಸ್ತೆಯಲ್ಲಿ ಕಟ್ಟಿಗೆಗಳನ್ನು ಹಾಕಿಕೊಂಡಿದ್ದು, ತಮಗೆ ಓಡಾಡಲು ತೊಂದರೆಯಾಗುತ್ತಿತ್ತು. ದಿನಾಂಕ: 16/08/2021  ರಂದು ಸಂಜೆ ಸುಮಾರು 6-00 ಗಂಟೆಯಲ್ಲಿ ಸುಜಾತಮ್ಮ ರವರ ಮನೆಯ ಮುಂದೆ ಸುಜಾತಮ್ಮ, ಅವರ ಮಕ್ಕಳಾದ ಮಹೇಶ, ಶಶಿಕಲಾ ರವರು ಇದ್ದು, ತಾನು ಕಟ್ಟಿಗೆಗಳನ್ನು ರಸ್ತೆಯಿಂದ ತೆಗೆಯಿರಿ, ತಮಗೆ ಓಡಾಡಲು ತೊಂದರೆಯಾಗುತ್ತಿದೆ ಎಂದು ಕೇಳಿದಾಗ, ಸುಜಾತಮ್ಮ, ಮಹೇಶ ಹಾಗೂ ಶಶಿಕಲಾ ರವರು  " ಹೋಗೇ ಲೋಫರ್ ಮುಂಡೆ, ಬೇವರ್ಸಿ ಮುಂಡೆ, ನಾವು ಇಲ್ಲೇ ಹಾಕುವುದು, ನೀನು ಯಾರು ಕೇಳುವುದಕ್ಕೆ" ಎಂದು ಕೆಟ್ಟ ಕೆಟ್ಟದಾಗಿ ಬೈದು ಜಗಳ ಮಾಡಿ, ಸುಜಾತಮ್ಮ ಅಲ್ಲಿಯೇ ಇದ್ದ ಒಂದು ಕಟ್ಟಿಗೆಯಿಂದ ತನ್ನ ತಲೆಗೆ ಹೊಡೆದು ಗಾಯವನ್ನು ಉಂಟು ಮಾಡಿದಾಗ, ಶಶಿಕಲಾ ರವರು ಕೈಗಳಿಂದ ತನ್ನ ಎದೆಗೆ ಹೊಡೆದಿರುತ್ತಾರೆ, ಜಗಳ ಬಿಡಿಸಲು ಅಡ್ಡ ಬಂದ ಮುನಿರತ್ನಮ್ಮ ಕೋಂ ಮುನಿರಾಜು, ದಾಸಮ್ಮ ಕೋಂ ನರಸಿಂಹಪ್ಪ ರವರುಗಳಿಗೆ ಶಶಿಕಲಾ ಸುಜಾತಮ್ಮ ಕೈಯಲ್ಲಿದ್ದ ಕಟ್ಟಿಗೆಯನ್ನು ಕಿತ್ತುಕೊಂಡು ಕಟ್ಟಿಗೆಯಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ. ಸುಜಾತಮ್ಮ ಮುನಿರತ್ನಮ್ಮನಿಗೆ ಕೈಗಳಿಂದ ಮೈ ಮೇಲೆ ಹೊಡೆಯುತ್ತಿದ್ದಾಗ ತಮ್ಮ ಗ್ರಾಮದ ವಾಸಿಗಳಾದ ನಾರಾಯಣಮ್ಮ ಕೋಂ ಮುನಿಗಂಗಪ್ಪ, ಸರಸ್ವತಮ್ಮ ಕೋಂ ಚಿಕ್ಕಗಂಗಪ್ಪ ರವರು ಅಡ್ಡ ಬಂದು ಜಗಳ ಬಿಡಿಸಿದಾಗ ಸುಜಾತಮ್ಮ, ಮಹೇಶ್ ಮತ್ತು ಶಶಿಕಲಾ ರವರು " ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಸಾಯಿಸದೇ ಬಿಡುವುದಿಲ್ಲ" ಎಂದು ಪ್ರಾಣಬೆದರಿಕೆ ಹಾಕಿ ಹೊರಟು ಹೋಗಿರುತ್ತಾರೆ. ನಂತರ ನಮಗೆ ಮೈ ಕೈ ನೋವು ಆಗಿದ್ದರಿಂದ ಯಾವುದೋ ವಾಹನದಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾಗಿರುತ್ತೇವೆ. ತಮ್ಮ ಮೇಲೆ ದೌರ್ಜನ್ಯವೆಸಗಿದ ಮೇಲ್ಕಂಡವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

 

14. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.273/2021 ಕಲಂ. 279,304(A) ಐ.ಪಿ.ಸಿ & 187 INDIAN MOTOR VEHICLES ACT, 1988:-

    ದಿನಾಂಕ: 18/08/2021 ರಂದು ಬೆಳಿಗ್ಗೆ 9-15 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀ ಕೆಂಪೇಗೌಡ ಬಿನ್ ಕೃಷ್ಣಪ್ಪ, 32 ವರ್ಷ, ವಕ್ಕಲಿಗರು, ಜಿರಾಯ್ತಿ, ಯಣ್ಣಂಗೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು. ರವರು ಠಾಣೆಯಲ್ಲಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಯಣ್ಣಂಗೂರು ಗ್ರಾಮದ ಖಾಯಂ ವಾಸಿಯಾಗಿರುತ್ತೇನೆ. ತಾನು ಶಿಡ್ಲಘಟ್ಟ-ಜಂಗಮಕೋಟೆ ರಸ್ತೆಯ ಪಕ್ಕದಲ್ಲಿ ಜಮೀನು ಹೊಂದಿದ್ದು, ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ: 17/08/2021 ರಂದು ರಾತ್ರಿ ಸುಮಾರು 8-00 ಗಂಟೆಯಲ್ಲಿ ತಮ್ಮ ತೋಟದ ಕಡೆಗೆ ಹೋಗುತ್ತಿದ್ದಾಗ, ತಮ್ಮ ತೋಟದ ಬಳಿ ಶಿಡ್ಲಘಟ್ಟ-ಜಂಗಮಕೋಟೆ ಕ್ರಾಸ್ ಮುಖ್ಯ ರಸ್ತೆಯಲ್ಲಿ ಸುಮಾರು 60 ವರ್ಷ ವಯಸ್ಸುಳ್ಳ ಅಪರಿಚಿತ ಗಂಡಸು ರಸ್ತೆ ಬದಿಯಲ್ಲಿ ರಕ್ತಗಾಯಗಳಿಂದ ನರಳಾಡುತ್ತಿದ್ದನು. ವಿಚಾರ ತಿಳಿಯಲಾಗಿ, ಇದೇ ದಿನ ರಾತ್ರಿ ಸುಮಾರು 7-45 ರಿಂದ 8-00 ಗಂಟೆಯ ಮಧ್ಯೆ ಮೇಲ್ಕಂಡ ಅಪರಿಚಿತ ವ್ಯಕ್ತಿಯು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಯಾವುದೋ ವಾಹನವನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಅಪರಿಚಿತ ವ್ಯಕ್ತಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿ, ಸ್ಥಳದಲ್ಲಿ ನಿಲ್ಲಿಸದೇ ವಾಹನ ಸಮೇತ ಪರಾರಿಯಾದ ಪರಿಣಾಮ ಅಪರಿಚಿತ ವ್ಯಕ್ತಿಯ ತಲೆ ಹಾಗೂ ಇತರೆ ಕಡೆಗಳಲ್ಲಿ ಗಾಯಗಳಾಗಿರುತ್ತವೆ. ಗಾಯಾಳುವನ್ನು ಆಂಬ್ಯುಲೆನ್ಸ್ ನಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟಿದ್ದು, ಅಪರಿಚಿತ ವ್ಯಕ್ತಿಯು ಚಿಕಿತ್ಸೆ ಫಲಕಾರಿಯಾಗದೇ  ದಿ: 18/08/2021 ರಂದು ಬೆಳಗಿನ ಜಾವ 4-40 ಗಂಟೆಯಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮೃತನ ಶವವು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರುತ್ತೆ. ತಾವುಗಳು ಶವಾಗಾರಕ್ಕೆ ಬೇಟಿ ನೀಡಿ, ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 18-08-2021 05:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080