ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.193/2021 ಕಲಂ. 323,324,448,504,506,34 ಐ.ಪಿ.ಸಿ:-

     ದಿನಾಂಕ: 17/07/2021 ರಂದು ಬೆಳಿಗ್ಗೆ 10-00 ಗಂಟೆಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ಭೇಟಿ ಗಾಯಳು ಶ್ರೀಮತಿ ಲಕ್ಷ್ಮೀಬಾಯಿ ಕೋಂ ಶ್ರೀನಿವಾಸನಾಯ್ಕ, 30 ವರ್ಷ, ಲಂಬಾಣಿ ಜನಾಂಗ, ಕೂಲಿಕೆಲಸ, ವಾಸ: ಪಾಪನ್ನಕುಂಟತಾಂಡ ಗ್ರಾಮ ಬಾಗೇಪಲ್ಲಿ ತಾಲ್ಲೂಕು ರವರು ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ಸಾರಾಂಶವೇನೆಂದರೆ ನನಗೆ 1.ವೇಣುಗೋಪಾಲನಾಯ್ಕ. 2.ಮಂಜುಳಾಬಾಯಿ ಎಂಬ ಎರಡು ಮಕ್ಕಳಿದ್ದು ದಿನಾಂಕ: 16/07/2021 ರಂದು ಬೆಳಿಗ್ಗೆ ನನ್ನ ಗಂಡ ಕುರಿಗಳನ್ನು ಮೇಯಿಸಲು ಹೋಗಿರುತ್ತಾರೆ. ಸಂಜೆ 5-00 ಗಂಟೆ ಸಮಯದಲ್ಲಿ ನಾನು ಮತ್ತು ನನ್ನ ಮಗ ವೇಣುಗೋಪಾಲನಾಯ್ಕ ರವರು ಕುರಿಗಳ ದೊಡ್ಡಿಯಲ್ಲಿ ಕಸ ಗುಡಿಸುತ್ತಿದ್ದಾಗ ನಮ್ಮ ಗ್ರಾಮದ ನಮ್ಮ ಸಂಬಂಧಿಕರಾದ ಶ್ರೀಮತಿ ಸೋಮಲಮ್ಮ ಕೋಂ ನಾರಾಯಣನಾಯ್ಕ, ಮಂಜುನಾಯ್ಕ ಬಿನ್ ರಾಮೇನಾಯ್ಕ, ಲೋಕೇಶನಾಯ್ಕ ಬಿನ್ ರಾಮೇನಾಯ್ಕ, ರವರು ನಮ್ಮ ಮೇಲೆ ವಿನಾಃ ಕಾರಣ ಜಗಳ ತೆಗೆದು ಕುರಿಗಳ ದೊಡ್ಡಿಯಲ್ಲಿ ಅಕ್ರಮ ಪ್ರವೇಶ ಮಾಡಿ ಸೋಮಲಮ್ಮ ಮತ್ತು ಮಂಜುನಾಯ್ಕ ಏ ಲಂಜಾ, ಕಚ್ಚಿನಿ, ನಾ ಸೌತಿ, ಎಂಬುದಾಗಿ ಕೆಟ್ಟದಾಗಿ ಬೈದು ನಿನ್ನ ಸಾಯಿಸುತ್ತೇನೆ, ಎಂದು ಹೇಳಿ ಅಲ್ಲೇ ಬಿದ್ದಿದ್ದ ಕಲ್ಲಿನಿಂದ ಮಂಜುನಾಯ್ಕ ನನ್ನ ತಲೆಗೆ ಹೊಡೆದು ಮೂಗೇಟು ಮಾಡಿದ್ದು, ಲೋಕೇಶನಾಯ್ಕ ಕಲ್ಲಿನಿಂದ ಮೈಮೇಲೆ ಹೊಡೆದು ಮೂಗೇಟು ಉಂಟುಮಾಡಿರುತ್ತಾರೆ. ಸೋಮಲಮ್ಮ ದೊಣ್ಣೆಯಿಂದ ನನ್ನ ಮೈಕೈಗೆ ಮತ್ತು ತಲೆಗೆ ಹೊಡೆದಿದ್ದು, ಬಿಡಿಸಲು ಬಂದ ನನ್ನ ಮಗ ವೇಣುಗೋಪಾಲನಾಯ್ಕನಿಗೂ ಸಹ ಮಂಜುನಾಯ್ಕ, ಲೋಕೇಶನಾಯ್ಕ, ಸೋಮಲಮ್ಮ ಮೂರು ಜನರು  ಕೈಗಳಿಂದ ಹೊಡೆದು ನೋವುಂಟು ಮಾಡಿರುತ್ತಾರೆ. ನಂತರ ನಾನು ಮನೆಯಲ್ಲಿ ಮಲಗಿದ್ದೆನು, ನನ್ನ ಗಂಡ ಸಂಜೆ 7-00 ಗಂಟೆಗೆ ಕುರಿಗಳನ್ನು ಹೊಡೆದುಕೊಂಡು ಬಂದಿದ್ದು ನಾಣು ಜಗಳವಾದ ವಿಚಾರ ತಿಳಿಸುತ್ತಿದ್ದಾಗ ಸೋಮಲಮ್ಮ ನಾರಾಯಣನಾಯ್ಕ ಬಿನ್ ಲೇಟ್ ರಾಜೇನಾಯ್ಕ, ಮಂಜುನಾಯ್ಕ, ಲೋಕೇಶನಾಯ್ಕ ರವರು ಪುನಃ ನಮ್ಮ ಮನೆಯ ಬಳಿ ನಾಲ್ಕು ಜನರು ಬಂದು ನನ್ನ ಗಂಡನಿಗೆ ಅವಾಚ್ಯಶಬ್ದಗಳಿಂದ ಬೈದು ಕೈಗಳಿಂದ ಹೊಡೆದಿರುತ್ತಾರೆ, ಕಾಲುಗಳಿಂದ ಒದ್ದಿರುತ್ತಾರೆ. ನನ್ನ ಗಂಡ ಮತ್ತು ನನ್ನ ಮಗ ದ್ವಿಚಕ್ರ ವಾಹನದಲ್ಲಿ ನನ್ನನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ. ಆದ್ದರಿಂದ ನನಗೆ, ನನ್ನ ಗಂಡನಿಗೆ, ನನ್ನ ಮಗನಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಕೈಗಳಿಂದ, ಕಲ್ಲುಗಳಿಂದ, ದೊಣ್ಣೆಯಿಂದ ಹೊಡದು ಮೂಗೇಟು ಉಂಟುಮಾಡಿರುವ ಹಾಗೂ ಪ್ರಾಣ ಬೆದರಿಕೆ ಹಾಕಿರುವ ಶ್ರೀಮತಿ ಸೋಮಲಮ್ಮ, ಮಂಜುನಾಯ್ಕ, ಲೋಕೇಶನಾಯ್ಕ, ನಾರಾಯಣನಾಯ್ಕ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿದ ಹೇಳಿಕೆಯ ದೂರು.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.194/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:17/07/2021 ರಂದು  ಮದ್ಯಾಹ್ನ 4-00 ಗಂಟೆಗೆ ಶ್ರೀ ಗೋಪಾಲರೆಡ್ಡಿ ಪಿಎಸ್ಐ, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ, ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ   ಈ ದಿನ ದಿನಾಂಕ; 17-07-2021 ರಂದು ಮದ್ಯಾಹ್ನ 2-15 ಗಂಟೆ ಸಮಯದಲ್ಲಿ ನಾನು ಮತ್ತು ಅಪರಾಧ ದಳದ ಸಿಬ್ಬಂದಿಯಾದ ಸಿ ಹೆಚ್ ಸಿ-156 ನಟರಾಜ್ ಹಾಗೂ ಜೀಪ್ ಚಾಲಕ ಎ ಹೆಚ್ ಸಿ-14 ವೆಂಕಟೇಶ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-537 ವಾಹನದಲ್ಲಿ ಬಾಗೇಪಲ್ಲಿ ತಾಲ್ಲೂಕು, ಮಿಟ್ಟೇಮರಿ, ಚೊಕ್ಕಂಪಲ್ಲಿ, ಚಿನ್ನೋಬಯ್ಯಗಾರಿಪಲ್ಲಿ ಗ್ರಾಮಗಳ ಕಡೆ ಗಸ್ತು ಮಾಡುತ್ತಿದ್ದಾಗ, ಯಾರೋ ಅಸಾಮಿಯು ಬಾಗೇಪಲ್ಲಿ ತಾಲ್ಲೂಕು, ಮಿಟ್ಟೇಮರಿ ಹೋಬಳಿ, ಮಲ್ಲಿಗುರ್ಕಿ ಗ್ರಾಮದ ಬಳಿ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಅಪರಾಧ ದಳದ ಸಿಬ್ಬಂದಿಯಾದ ಸಿ ಹೆಚ್ ಸಿ-156 ನಟರಾಜ್ ರವರೊಂದಿಗೆ ಸರ್ಕಾರಿ ಜೀಪ್ ನಲ್ಲಿ ಹೊರಟು, ಮಲ್ಲಿಗುರ್ಕಿ ಗ್ರಾಮದ ಬಳಿ ಇದ್ದ ಪಂಚರನ್ನು ಕರೆದು ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಮದ್ಯಾಹ್ನ 2-45 ಗಂಟೆಗೆ ಮಲ್ಲಿಗುರ್ಕಿ ಗ್ರಾಮದ ಬಳಿ ಜೀಪ್ ನಲ್ಲಿ ಹೋಗುತ್ತಿದ್ದದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಚಿಲ್ಲರೇ ಅಂಗಡಿ ಮುಂಭಾಗದಲ್ಲಿದ್ದ ಅಸಾಮಿಯು ಓಡಿ ಹೋಗುತ್ತಿದ್ದವನ್ನು ಸಿಬ್ಬಂದಿಯಾದ ನಟರಾಜ್ ರವರು ಹಿಡಿದುಕೊಂಡಿದ್ದು, ಅಸಾಮಿಯ ಹೆಸರು ವಿಳಾಸವನ್ನು ತಿಳಿಯಲಾಗಿ ಮಂಜುನಾಥ್ ಬಿನ್ ಗೋಪಾಲಪ್ಪ, 45 ವರ್ಷ, ಬಲಜಿಗ ಜನಾಂಗ, ಚಿಲ್ಲರೇ ಅಂಗಡಿ ವ್ಯಾಪಾರ, ವಾಸ: ಮಲ್ಲಿಗುರ್ಕಿ ಗ್ರಾಮ, ಮಿಟ್ಟೇಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿದುಬಂದಿದ್ದು, ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 1) 90 ML ನ HAYWARDS CHEERS WHISKY  ಯ 12 ಮದ್ಯದ ಟೆಟ್ರಾ ಪಾಕೇಟ್ ಗಳು  ಗಳಿದ್ದು,  2) 90 ML ನ HAYWARDS CHEERS WHISKY ಯ 02 ಟೆಟ್ರಾ ಖಾಲಿ ಪಾಕೇಟ್ ಗಳು, 3) ಮದ್ಯ ಕುಡಿದಿರುವ ಖಾಲಿ 04 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ.  ಇವುಗಳು  ಒಟ್ಟು 1 ಲೀಟರ್ 80 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ – 421/-ರೂ ಗಳಾಗಿರುತ್ತೆ. ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ  ಮೂಲಕ ಅಮಾನತ್ತು ಪಡಿಸಿಕೊಂಡು ಅಸಲು ದಾಳಿ ಪಂಚನಾಮೆ, ಮಾಲ ಮತ್ತು ಆರೋಪಿಯೊಂದಿಗೆ ಮದ್ಯಾಹ್ನ 4-00 ಗಂಟೆ ಠಾಣೆಯಲ್ಲಿ   ನಿಮ್ಮ ವಶಕ್ಕೆ ನೀಡುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.195/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 17/07/2021 ರಂದು 4-45 ಗಂಟೆಗೆ ಬಾಗೇಪಲ್ಲಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ ನಾಗರಾಜು ಡಿ.ಆರ್ ರವರು ಮಾಲು, ಆರೋಪಿ, ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ಈ ದಿನ  ದಿನಾಂಕ; 17-07-2021 ರಂದು ಮದ್ಯಾಹ್ನ 3.15 ಗಂಟೆ ಸಮಯದಲ್ಲಿ ನಾನು ಮತ್ತು  ಸಿಬ್ಬಂದಿಯಾದ ಸಿ ಹೆಚ್ ಸಿ-156 ನಟರಾಜ್ ಹಾಗೂ ಜೀಪ್ ಚಾಲಕ ಎ ಹೆಚ್ ಸಿ-54 ನೂರ್ ಭಾಷ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-1444 ವಾಹನದಲ್ಲಿ ಬಾಗೇಪಲ್ಲಿ ತಾಲ್ಲೂಕು ದೇವರಗುಡಿಪಲ್ಲಿ ಮಲ್ಲಸಂದ್ರ  ಪೆನುಮಲೆ,  ಗ್ರಾಮಗಳ ಕಡೆ ಗಸ್ತು ಮಾಡುತ್ತಿದ್ದಾಗ ಬಾಗೇಪಲ್ಲಿ ತಾಲ್ಲೂಕು, ಆಚೇಪಲ್ಲಿ ಕ್ರಾಸ್ ಬಳಿ ಇರುವ ಧನುಷ್ ಹೋಟೆಲ್ ಮುಂಭಾಗ ಯಾರೋ ಅಸಾಮಿಯು ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಯಾದ ಸಿ ಹೆಚ್ ಸಿ-156 ನಟರಾಜ್ ರವರೊಂದಿಗೆ ಸರ್ಕಾರಿ ಜೀಪ್ ನಲ್ಲಿ ಹೊರಟು, ಆಚೇಪಲ್ಲಿ ಕ್ರಾಸ್ ಗೆ ಬಂದು ಆಚೇಪಲ್ಲಿ ಕ್ರಾಸ್ ನಲ್ಲಿದ್ದ ಪಂಚರನ್ನು ಕರೆದು ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಮದ್ಯಾಹ್ನ 3.30 ಗಂಟೆಗೆ ಆಚೇಪಲ್ಲಿ ಗ್ರಾಮಕ್ಕೆ ಹೋಗುವ ಹೋಗುವ ಟಾರ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಂತೆ  ಹೋಟೆಲ್ ಮುಂಭಾಗ ಮದ್ಯಪಾನ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿಹೋದರು. ಧನುಷ್ ಹೋಟೆಲ್ ಮುಂಭಾಗದಲ್ಲಿದ್ದ ಒಬ್ಬ  ಅಸಾಮಿಯು ಓಡಿ ಹೋಗುತ್ತಿದ್ದವನ್ನು ಸಿಬ್ಬಂದಿಯಾದ ನಟರಾಜ್ ಸಿಹೆಚ್ ಸಿ 156 ರವರು ಹಿಡಿದು  ಹೆಸರು ವಿಳಾಸ ಕೇಳಲಾಗಿ ಶ್ರೀನಿವಾಸ ಬಿನ್ ಲೇಟ್ ಯಾಮನ್ನ, 42 ವರ್ಷ, ದೊಂಬರ ಜನಾಂಗ, ಧನುಷ್ ಮಟನ್ ಹೋಟೆಲ್ ನಲ್ಲಿ ವ್ಯಾಪಾರ, ವಾಸ: ನೀರಗಂಟಿಪಲ್ಲಿ ಗ್ರಾಮ, ಕಸಬಾ  ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿರುತ್ತಾನೆ. ಸದರಿ ಆಸಾಮಿಗೆ  ನೀನು ಸಾರ್ವಜನಿಕರಿಗೆ ಮದ್ಯವನ್ನು ಸೇವನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು, ನಿನ್ನ ಬಳಿ ಯಾವುದಾದರೂ ಪರವಾನಗಿ ಇದೇಯೇ ?. ಎಂದು ಕೇಳಲಾಗಿ ಇಲ್ಲವೆಂದು ತಿಳಿಸಿದ್ದು, ಸದರಿ ಆಸಾಮಿಯನ್ನು ವಶಕ್ಕೆ ಪಡೆದು ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 1) 90 ML ನ HAYWARDS CHEERS WHISKY  ಯ 12 ಮದ್ಯದ ಟೆಟ್ರಾ ಪಾಕೇಟ್ ಗಳು  ಗಳಿದ್ದು,  2) 90 ML ನ HAYWARDS CHEERS WHISKY ಯ 02 ಟೆಟ್ರಾ ಖಾಲಿ ಪಾಕೇಟ್ ಗಳು, 3) ಮದ್ಯ ಕುಡಿದಿರುವ ಖಾಲಿ 04 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ.  ಇವುಗಳು  ಒಟ್ಟು 1 ಲೀಟರ್ 80 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ – 421/-ರೂ ಗಳಾಗಿರುತ್ತೆ. ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ  ಮೂಲಕ ಅಮಾನತ್ತು ಪಡಿಸಿಕೊಂಡು, ಆರೋಪಿ ಅಸಲು ದಾಳಿ ಪಂಚನಾಮೆ, ಮಾಲನ್ನು ಸಂಜೆ 4.45 ಗಂಟೆಗೆ ಠಾಣೆಯಲ್ಲಿ ನಿಮ್ಮ ವಶಕ್ಕೆ ನೀಡುತ್ತಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

4. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.196/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 17/07/2021 ರಂದು ಸಂಜೆ 5-50 ಗಂಟೆಗೆ ಶ್ರೀ ಗೋಪಾಲರೆಡ್ಡಿ ಪಿಎಸ್ಐ, ಬಾಗೇಪಲ್ಲಿ ಪೊಲೀಸ್ ಠಾಣೆ ಮಾಲು, ಆರೋಪಿ, ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ; 17-07-2021 ರಂದು ಸಂಜೆ ಸುಮಾರು 4:15 ಗಂಟೆ ಸಮಯದಲ್ಲಿ ನಾನು ಮತ್ತು  ಸಿ ಪಿ.ಸಿ 237 ವಿನಯ್ ಕುಮಾರ್ ಯಾದವ್  ಹಾಗೂ ಜೀಪ್ ಚಾಲಕ ಎ ಹೆಚ್ ಸಿ-14 ವೆಂಕಟೇಶ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-537 ವಾಹನದಲ್ಲಿ ಬಾಗೇಪಲ್ಲಿ ತಾಲ್ಲೂಕು, ದೇವರಗುಡಿಪಲ್ಲಿ, ಕಾರಕೂರು ಕಡೆಗೆ ಗಸ್ತು ಮಾಡುತ್ತಿದ್ದಾಗ,  ಯಾರೋ ಅಸಾಮಿಯು ಬಾಗೇಪಲ್ಲಿ ತಾಲ್ಲೂಕು, ಕಸಬಾ ಹೋಬಳಿ, ಐವಾರ್ಲಪಲ್ಲಿ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ವಿನಯಕ್ ಕುಮಾರ್ ಯಾದವ್ ಪಿ.ಸಿ 237 ರವರೊಂದಿಗೆ  ಸರ್ಕಾರಿ ಜೀಪ್ ನಲ್ಲಿ ಹೊರಟು, ಕಾರಕೂರು ಕ್ರಾಸ್ ನಲ್ಲಿದ್ದ  ಪಂಚರನ್ನು ಕರೆದು ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಸಂಜೆ 4:30  ಗಂಟೆಗೆ ಐವಾರ್ಲಪಲ್ಲಿ  ಗ್ರಾಮದ ಬಳಿ ಜೀಪ್ ನಲ್ಲಿ ಹೋಗುತ್ತಿದ್ದದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಚಿಲ್ಲರೇ ಅಂಗಡಿ ಮುಂಭಾಗದಲ್ಲಿದ್ದ ಅಸಾಮಿಯು ಓಡಿ ಹೋಗಿದ್ದು, ಸಿಬ್ಬಂದಿ ವಿನಯ್ ಕುಮಾರ್ ಯಾದವ್ ರವರು ಹಿಡಿದುಕೊಳ್ಳಲು ಪ್ರಯತ್ನಿಸಿದ್ದಾಗ್ಯೂ ಆಸಾಮಿಯು ಕೈಗೆ ಸಿಕ್ಕಿರುವುದಿಲ್ಲ.  ಅಸಾಮಿಯ ಹೆಸರು ವಿಳಾಸವನ್ನು ತಿಳಿಯಲಾಗಿ ಶ್ರೀನಿವಾಸ ಬಿನ್ ಲೇಟ್ ರಾಮಪ್ಪ, 50 ವರ್ಷ, ಬಲಜಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಐವಾರ್ಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿದುಬಂದಿದ್ದು, ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 1) 90 ML ನ HAYWARDS CHEERS WHISKY  ಯ 12 ಮದ್ಯದ ಟೆಟ್ರಾ ಪಾಕೇಟ್ ಗಳು  ಗಳಿದ್ದು,  2) 90 ML ನ HAYWARDS CHEERS WHISKY ಯ 02 ಟೆಟ್ರಾ ಖಾಲಿ ಪಾಕೇಟ್ ಗಳು, 3) ಮದ್ಯ ಕುಡಿದಿರುವ ಖಾಲಿ 04 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ.  ಇವುಗಳು  ಒಟ್ಟು 1 ಲೀಟರ್ 80 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ – 421/-ರೂ ಗಳಾಗಿರುತ್ತೆ. ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ  ಮೂಲಕ ಅಮಾನತ್ತು ಪಡಿಸಿಕೊಂಡು ಅಸಲು ದಾಳಿ ಪಂಚನಾಮೆ, ಮಾಲನ್ನು  5:50   ಗಂಟೆ ಠಾಣೆಯಲ್ಲಿ   ನಿಮ್ಮ ವಶಕ್ಕೆ ನೀಡುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

5. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.98/2021 ಕಲಂ. 87 ಕೆ.ಪಿ ಆಕ್ಟ್:-

     ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರಿ.ಆರ್.ನಾರಾಯಣಸ್ವಾಮಿ ಆದ ನಾನು  ನಿವೇದಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ:18/07/2021 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಕೊಂಡ್ಲಿಗಾನಹಳ್ಳಿ ಗ್ರಾಮದ ಕೆರೆಯ ಅಂಗಳದಲ್ಲಿ  ಯಾರೋ ಆಸಾಮಿಗಳು ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ ನಾನು ಠಾಣೆಯಲ್ಲಿದ್ದ ಸಿಬ್ಬಂದಿಯವರಾದ  ಹೆಚ್ ಸಿ -36 ಶ್ರೀ.ವಿಜಯ್ ಕುಮಾರ್, ಹೆಚ್.ಸಿ 139 ಶ್ರೀ.ಶ್ರೀನಾಥ ಎಂ.ಪಿ, ಸಿಪಿಸಿ – 262 ಅಂಬರೀಶ್, ಪಿ.ಸಿ 561 ರಮೇಶ್ ತಳವಾರ, ಪಿ.ಸಿ 388 ಗದ್ದೆಪ್ಪ ಶಿವಪುರ, ಪಿ.ಸಿ 396 ರಮೇಶ್ ಕಂಪ್ಲಿ ಹಾಗೂ ಜೀಪ್ ಚಾಲಕ ಎಪಿಸಿ 65 ವೆಂಕಟೇಶ್ ರವರೊಂದಿಗೆ ಸರ್ಕಾರಿ ಜೀಪ್ ಮತ್ತು ದ್ವಿಚಕ್ರ ವಾಹನಗಳಲ್ಲಿ ಕೊಂಡ್ಲಿಗಾನಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿಗೆ ನಾನು ಮತ್ತು ಸಿಬ್ಬಂದಿಯವರು ಕೊಂಡ್ಲಿಗಾನಹಳ್ಳಿ ಗ್ರಾಮದ ಕೆರೆಯ ಅಂಗಳಕ್ಕೆ ಬೆಳಿಗ್ಗೆ 10-45 ಗಂಟೆಗೆ ಹೋಗಿ ದೂರದಲ್ಲಿ ಜೀಪ್ ಮತ್ತು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಜಾಲಿ ಮರಗಳ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಕೆರೆಯ ಅಂಗಳದಲ್ಲಿ ಇರುವ ಜಾಲಿ ಮರದ ಕೆಳಗಡೆ ಗುಂಪಾಗಿ ವೃತ್ತಾಕಾರವಾಗಿ ಕುಳಿತು ಅಂದರ್ 100 ರೂ ಬಾಹರ್ 200 ರೂ ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ ಅಕ್ರಮ ಜೂಜಾಟವಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಸದರಿಯವರನ್ನು ನಾನು ಮತ್ತು ಸಿಬ್ಬಂದಿಯವರು ಸುತ್ತುವರೆದು ಎಲ್ಲಿಯೂ ಹೋಗದಂತೆ ಸೂಚಿಸಿದಾಗ  ಅಲ್ಲಿದ್ದ ಆಸಾಮಿಗಳು ಓಡಿ ಹೋಗಲು ಯತ್ನಿಸಿದ್ದು ಸದರಿಯವರುಗಳನ್ನು ನಾನು ಮತ್ತು ಸಿಬ್ಬಂದಿಯವರು ಹಿಡಿದುಕೊಂಡ ಅವರ ಹೆಸರು ಮತ್ತು ವಿಳಾಸ ಕೇಳಲಾಗಿ 1) ಶ್ರೀ.ರಮಣ ಬಿನ್ ಲೇಟ್ ಕೃಷ್ಣಪ್ಪ, 40ವರ್ಷ, ಗೊಲ್ಲರು, ಲಾರಿ ಡ್ರೈವರ್ ಕೆಲಸ, ಎಂ.ಗೊಲ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು 9483046877 2) ಶ್ರೀ.ಬಾಬಾಜಾನ್ ಬಿನ್ ಮೌಲಾ ಸಾಬಿ, 26ವರ್ಷ, ಮುಸ್ಲಿಂ ಜನಾಂಗ, ಕೂಲಿ ಕೆಲಸ, ಕೊಂಡ್ಲಿಗಾನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು 6364508110 3)ಶ್ರೀ.ವೆಂಕಟೇಶ್ ಬಿನ್ ಲೇಟ್ ಕಡಪಣ್ಣ, 37ವರ್ಷ, ವಾಟರ್ ಮೆನ್ ಕೆಲಸ, ಆದಿ ಕರ್ನಾಟಕ ಜನಾಂಗ, ಎಂ.ಗೊಲ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು 9448752070, 4) ಶ್ರೀ.ನವೀದ್ ಬಿನ್ ಸಮಿವುಲ್ಲಾ, 31ವರ್ಷ, ಲಾರಿ ಡ್ರೈವರ್ ಕೆಲಸ, ಕೊಂಡ್ಲಿಗಾನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, 8660865011, 5) ಶ್ರೀ.ನಾಗೇಶ್ ಬಿನ್ ನರಸಿಂಹ, 26ವರ್ಷ, ಕಾರ್ ಪೆಂಟರ್ ಕೆಲಸ, ಆದಿ ಕರ್ನಾಟಕ ಜನಾಂಗ, ಕೊಂಡ್ಲಿಗಾನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಪರಿಶೀಲಿಸಲಾಗಿ ಸ್ಥಳದಲ್ಲಿ ಒಂದು ಬಿಳಿ ಗೋಣಿಚೀಲವನ್ನು ನೆಲದಲ್ಲಿ ಹಾಸಿದ್ದು, ಸದರಿ ಗೋಣಿಚೀಲದ ಮೇಲೆ ಅಂದರ್ ಬಾಹರ್ ಜೂಜಾಟವಾಡಲು ಪಣವಾಗಿಟ್ಟಿದ್ದ ಹಣ, ಮತ್ತು ಇಸ್ಟೀಟು ಎಲೆಗಳು ಇದ್ದು, ಅವುಗಳನ್ನು  ಪರಿಶೀಲಿಸಲಾಗಿ ಒಟ್ಟು 52 ಇಸ್ಟೀಟ್ ಎಲೆಗಳಿದ್ದು, ನಗದು ಹಣ ಒಟ್ಟು 2150 ರೂಗಳಿದ್ದು ಇಸ್ಪೀಟ್ ಜೂಜಾಟ ಆಡುತ್ತಿದ್ದ 5 ಜನ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು, ಅವರು ಇಸ್ಪೀಟ್ ಜೂಜಾಟಕ್ಕೆ ಪಣವಾಗಿಟ್ಟಿದ್ದ, 2150/- ರೂಗಳ ನಗದು ಹಣವನ್ನು, ಒಂದು ಗೋಣಿಚೀಲ ಹಾಗೂ 52 ಇಸ್ಟೀಟ್ ಎಲೆಗಳನ್ನು ಮುಂದಿನ ಕ್ರಮಕ್ಕಾಗಿ ಬೆಳಿಗ್ಗೆ 11-00 ಗಂಟೆಯಿಂದ ಮಧ್ಯಾಹ್ನ 12-00 ಗಂಟೆಯವರೆಗೆ ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ ಅಮಾನತ್ತುಪಡಿಸಿಕೊಂಡು ಠಾಣೆಗೆ ಮಧ್ಯಾಹ್ನ 1-00 ಗಂಟೆಗೆ ಹಾಜರಾಗಿ ಸ್ವತಃ ಠಾಣೆಯ ಎನ್ ಸಿ ಆರ್ ನಂ: 126/2021 ರಂತೆ ದಾಖಲಿಸಿಕೊಂಡು ಆರೋಪಿಗಳ ಮತ್ತು ಮಾಲಿನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಘನ ನ್ಯಾಯಾಲಯದ ಅನುಮತಿಗಾಗಿ ಮನವಿಯನ್ನು ವಾಟ್ಸ್ ಹ್ಯಾಪ್ ಮುಖಾಂತರ ರವಾನಿಸಿಕೊಂಡು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಕೊಂಡು  ಮಧ್ಯಾಹ್ನ 2-30 ಗಂಟೆಗೆ ಅನುಮತಿಯನ್ನು ಪಡೆದು ಠಾಣೆಯ ಮೊ ಸಂಖ್ಯೆ: 98/2021 ಕಲಂ: 87 ಕೆ ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

6. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.109/2021 ಕಲಂ. 457,380 ಐ.ಪಿ.ಸಿ:-

     ದಿನಾಂಕ:17/07/2021 ರಂದು ಸಂಜೆ 5-00 ಗಂಟೆಯಲ್ಲಿ ಮಾನ್ಯ ತಹಸಿಲ್ದಾರರು ನೀಡಿರುವ ದೂರಿನ ಸಾರಾಂಶವೆನೆಂದರೆ ಚಿಕ್ಕಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿ ಮಾರಪ್ಪನಹಳ್ಳಿ ಗ್ರಾಮ ಶ್ರೀ ಹನುಮಂತ ದೇವಾಲಯದಲ್ಲಿ ಅರ್ಚಕರಾದ ಶ್ರೀ ಎಸ್, ಗೋಪಾಲಕೃಷ್ಣಭಟ್ಟಚಾರ್ ರವರು ದಿನಾಂಕ; 07-07-2021 ರಂದು ಪೂಜೆ ಕಾರ್ಯಕ್ಕಾಗಿ ದೇವಾಲಯಕ್ಕೆ ಬಂದಾಗ ಸದರಿ ದೇವಾಲಯದ ಮುಖ್ಯ ದ್ವಾರದ ಬೀಗ ಮುರಿದು ದೇವಾಲಯದ ಒಳಗೆ ನುಗ್ಗಿ ದೇವಾಲಯದಲ್ಲಿ ಇದ್ದ ಹುಂಡಿಯನ್ನು ಅಪಹರಿಸಿ ತೆಗೆದುಕೊಂಡು ಹೋಗಿ ಪಕ್ಕದ ಜಮೀನಿನಲ್ಲಿ ಹುಂಡಿಯನ್ನು ಹೊಡೆದು ಹುಂಡಿಯಲ್ಲಿ ಹಣವನ್ನು ತೆಗೆದುಕೊಂಡು ಹುಂಡಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾರೆ ಆದ್ದರಿಂದ ಈ ಬಗ್ಗೆ ಅಪರಾದಿಗಳನ್ನು ಪತ್ತೆ ಮಾಡಲು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

7. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.312/2021 ಕಲಂ. 279,337  ಐ.ಪಿ.ಸಿ:-

     ದಿನಾಂಕ: 18/07/2021 ರಂದು ಬೆಳಿಗ್ಗೆ 11.30 ಗಂಟೆಗೆ ಶ್ರೀಮತಿ ಸೌಜನ್ಯ ಕೋಂ ಜಿ.ವಿ.ಅಶೋಕರೆಡ್ಡಿ, 25 ವರ್ಷ, ವಕ್ಕಲಿಗರು, ಮನೆಕೆಲಸ, ಗುಟ್ಟಪಾಳ್ಯ ಗ್ರಾಮ, ಮುರುಗಮಲ್ಲ ಹೋಬಳಿ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಸ್ವಂತ ಗ್ರಾಮ ಚಿಂತಾಮಣಿ ತಾಲ್ಲೂಕು ಗುಟ್ಟಪಾಳ್ಯ ಗ್ರಾಮ ಆಗಿದ್ದು, ತನ್ನ ಗಂಡನಾದ ಅಶೋಕರೆಡ್ಡಿ ರವರು ನಿಟ್ಟೇ ಮೀನಾಕ್ಷಿ ತಾಂತ್ರಿಕ ವಿದ್ಯಾಲಯದಲ್ಲಿ ಸಹಾಯಕ ಉಪನ್ಯಾಸಕರಾಗಿ ಕರ್ತವ್ಯ ನಿರ್ವಸಿಸಿಕೊಂಡಿರುವುದರಿಂದ ತಾವು ಬೆಂಗಳೂರಿನ ಯಲಹಂಕದಲ್ಲಿ ವಾಸವಾಗಿದ್ದು ಆಗಾಗ್ಗೆ ಊರಿಗೆ ಬಂದು ಹೋಗುತ್ತಿರುತ್ತೇವೆ. ದಿನಾಂಕ: 17/07/2021 ರಂದು ತಾವು ತಮ್ಮ ಸ್ವಂತ ಊರಿಗೆ ಬರಲು ತಾನು, ತನ್ನ ಗಂಡನಾದ ಅಶೋಕರೆಡ್ಡಿ ಮತ್ತು ಮಕ್ಕಳು ಸಂಜೆ 7.00 ಗಂಟೆಗೆ ತಮ್ಮ ಬಾಬತ್ತು ಕೆಎ-53 ಸಿ-3676 ನೊಂದಣಿ ಸಂಖ್ಯೆಯ ಸ್ವಿಪ್ಟ್ ಡಿಸೈರ್ ಕಾರಿನಲ್ಲಿ ಯಲಹಂಕ ಬಿಟ್ಟು ರಾತ್ರಿ ಸುಮಾರು 9.30 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ಮಾರ್ಗವಾಗಿ ಚಿಂತಾಮಣಿ-ಶಿಢ್ಲಘಟ್ಟ ಮುಖ್ಯರಸ್ತೆಯ ತಿಮ್ಮಸಂದ್ರ ಗ್ರಾಮದ ಬಳಿ ತನ್ನ ಗಂಡ ಅಶೋಕರೆಡ್ಡಿ ಕಾರನ್ನು ಚಾಲನೆ ಮಾಡಿಕೊಂಡು ಬರುತ್ತಿದ್ದಾಗ, ಎದುರುಗಡೆಯಿಂದ ಅಂದರೆ ಚಿಂತಾಮಣಿ ಕಡೆಯಿಂದ ಬರುತ್ತಿದ್ದ ಕೆಎ-51 ಬಿ-8742 ನೊಂದಣಿ ಸಂಖ್ಯೆಯ ಬೊಲೋರೊ ಮಾಕ್ಸಿ ಟ್ರಕ್ ಗೂಡ್ಸ್ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆಸಿದ್ದರ ಪರಿಣಾಮ ಕಾರನ್ನು ಚಾಲನೆ ಮಾಡುತ್ತಿದ್ದ ತನ್ನ ಗಂಡನ ಬಲ ಕೈ ಮೇಲ್ಭಾಗದಲ್ಲಿ ಒಳಗಾಯವಾಗಿರುತ್ತೆ. ಕಾರಿನಲ್ಲಿ ಕುಳಿತಿದ್ದ ತನ್ನ ಬಲಕಾಲಿಗೆ ರಕ್ತಗಾಯವಾಗಿ ಕಣ್ಣಿನ ಕೆಳಭಾಗದಲ್ಲಿ ಮತ್ತು ಬಲಭುಜಕ್ಕೆ ತರಚಿದ ಗಾಯಗಳಾಗಿರುತ್ತೆ. ಕಾರಿನಲ್ಲಿದ್ದ ಮಕ್ಕಳಿಗೆ ಯಾವುದೇ ತರಹದ ಗಾಯಗಳಾಗಿರುವುದಿಲ್ಲ. ನಂತರ ತಿಮ್ಮಸಂದ್ರ ಗ್ರಾಮಸ್ಥರು ತಮ್ಮನ್ನು ಉಪಚರಿಸಿದ್ದು ಎರಡೂ ವಾಹನಗಳ ಮುಂಭಾಗದಲ್ಲಿ ಜಖಂ ಆಗಿರುತ್ತೆ. ಅಪಘಾತಪಡಿಸಿದ ವಾಹನದ ಚಾಲಕನಿಗೂ ಸಹ ಸಣ್ಣಪುಟ್ಟ ಗಾಯಗಳಾಗಿದ್ದು ಆತನ ಹೆಸರು ವಿಳಾಸ ತಿಳಿದಿರುವುದಿಲ್ಲ. ನಂತರ ತಾನು ಮತ್ತು ತನ್ನ ಗಂಡ 108 ಆಂಬುಲೆನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿರುತ್ತೇವೆ. ವೈದ್ಯರು ತನ್ನ ಗಂಡನಿಗೆ ಪ್ರಥಮ ಚಿಕಿತ್ಸೆ ಪಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ನಗರದಲ್ಲಿರುವ ಗೌರವ್ ಆರ್ಥೋಪೆಡಿಕ್ ಆಸ್ಪತ್ರೆಗೆ ಕಳುಹಿಸಿರುತ್ತಾರೆ. ತಾನು ಸದರಿ ಅಪಘಾತದ ವಿಚಾರವನ್ನು ತಮ್ಮ ಹಿರಿಯರಿಗೆ ತಿಳಿಸಿ ಈ ದಿನ ತಡವಾಗಿ ದೂರು ನೀಡುತ್ತಿದ್ದು ತಮಗೆ ಅಪಘಾತ ಪಡಿಸಿದ ಮೇಲ್ಕಂಡ ವಾಹನದ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ಕೋರಿರುವುದಾಗಿರುತ್ತೆ.

 

8. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.90/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:17/07/2021 ರಂದು ಸಂಜೆ 17-45 ಗಂಟೆಯ ಸಮಯದಲ್ಲಿ ಶಿಡ್ಲಘಟ್ಟ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಇದ್ದ ಸಭೆಯನ್ನು ಮುಗಿಸಿಕೊಂಡು ಕೆಎ40-ಜಿ-60 ಸರ್ಕಾರಿ ಜೀಫನಲ್ಲಿ  ಠಾಣೆಯ ಸಿಬ್ಬಂದಿಯಾದ ಸಿ.ಪಿ.ಸಿ 91 ಮಂಜುನಾಥ ಹಾಗೂ ಜೀಫ ಚಾಲಕರಾಗಿ ಎ.ಪಿ.ಸಿ 94 ಬೈರಪ್ಪ ರವರೊಂದಿಗೆ ಠಾಣೆಗೆ ವಾಪಸ್ಸು ಶಿಡ್ಲಘಟ್ಟ ದಿಂದ  ಸಂಜೆ 18-00 ಗಂಟೆಯಲ್ಲಿ ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯ ಅಜ್ಜಕದಿರೇನಹಳ್ಳಿ ಗ್ರಾಮದ ಬಳಿ ಬಂದಾಗ ನನಗೆ ಅದೇ ಗ್ರಾಮದಲ್ಲಿ ಯಾರೋ ಒಬ್ಬ ಆಸಾಮಿಯು ತನ್ನ ಮನೆಯ ಮುಂಭಾಗ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಫಾನ ಮಾಡಲು ಸ್ಥಳಾವಾಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಆದರಂತೆ ಅಜ್ಜ ಕದೀರೇನಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಸದರಿ ಆಸಾಮಿಯ ಮೇಲೆ ದಾಳಿ ಮಾಡಲು ಪಂಚರಾಗಿ ಬಂದು ಸಹಕರಿಸಬೇಕೆಂದು ಕೋರಿದ ಮೇರೆಗೆ ಪಂಚರು ಒಪ್ಪಿರುತ್ತಾರೆ. ನಂತರ ಪಂಚರೊಂದಿಗೆ ಬಸ್ ನಿಲ್ದಾಣದಿಂದ ಚಿಕ್ಕತೇಕಹಳ್ಳಿ ಗ್ರಾಮದ ಕಡೆಗೆ ಹೋಗುವ ರಸ್ತೆಯಲ್ಲಿ  ಸ್ವಲ್ಪ ದೂರ ನಡೆದುಕೊಂಡು  ಹೋಗಿ  ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯೆಕ್ತಿ ತನ್ನ ಮನೆಯ ಮುಂಭಾಗ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಮಧ್ಯಪಾನ ಮಾಡಲು ಸ್ಥಳಾವಾಕಾಶ ಮಾಡಿದ್ದು ಸದರಿಯವರ ಮೇಲೆ ದಾಳಿ ಮಾಡುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ಪೊಲಿಸರನ್ನು ನೋಡಿ ಮಧ್ಯಫಾನ ಮಾಡುತ್ತಿದ್ದ ಆಸಾಮಿಯು ಅಲ್ಲಿಂದ ಓಡಿ ಹೋಗಿರುತ್ತಾನೆ. ನಂತರ ಅಲ್ಲಿಯೇ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡಿದ್ದ ಆಸಾಮಿಯ ಹೆಸರು ಮತ್ತು ಪೂರ್ಣ ವಿಳಾಸವನ್ನು ಕೇಳಲಾಗಿ  ಕೃಷ್ಣಪ್ಪ ಬಿನ್ ಲೇಟ್ ಚನ್ನರಾಯಪ್ಪ, 45 ವರ್ಷ, ಗೊಲ್ಲರು, ಡ್ರೈವರ್ ಕೆಲಸ, ವಾಸ: ಅಜ್ಜಕದೀರೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು  ಎಂದು ತಿಳಿಸಿದ್ದು ಪಂಚರ ಸಮಕ್ಷಮ ಸದರಿ ಸ್ಥಳದಲ್ಲಿದ್ದ ಮಧ್ಯದ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 90 ಎಂ,ಎಲ್ ನ  HAYWARDS CHEERS WHISKY  ಯ 20 ಟೆಟ್ರಾ ಪ್ಯಾಕೇಟ್ ಗಳಿದ್ದು ಇವುಗಳ ಒಟ್ಟು ಮೌಲ್ಯ 1800 ಎಂ,ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಮೇಲೆ ಅದರ ಬೆಲೆ 35.13 ಎಂದು ನಮೂದು ಮಾಡಿದ್ದು ಇವುಗಳ ಒಟ್ಟು ಬೆಲೆ 702.6 ರೂ ಆಗಿರುತ್ತೆ. ಸದರಿ ಮಧ್ಯದ ಪ್ಯಾಕೇಟ್ ಗಳನ್ನು ಮತ್ತು  ಸ್ಥಳದಲ್ಲಿಯೇ ಬಿದಿದ್ದ  2 ಖಾಲಿ 90 ಎಂ,ಎಲ್ ನ  HAYWARDS CHEERS WHISKYಯ ಟೆಟ್ರಾ ಪ್ಯಾಕೇಟ್ ಗಳನ್ನು ಮತ್ತು ಮಧ್ಯಫಾನ ಮಾಡಿರುವ ನಿಶಾನೆಗಳಿರುವ 2 ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಮತ್ತು ಒಂದು ಲೀಟರ್  ಖಾಲಿ ವಾಟರ್ ಬಾಟೆಲ್ ನ್ನು ಸಂಜೆ 18-15 ಗಂಟೆಯಿಂದ 19-15 ಗಂಟೆಯ ವರೆಗೆ ವಿಧ್ಯುತ್ ದ್ವೀಪದ ಬೆಳಕಿನಲ್ಲಿ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಆಸಾಮಿಯನ್ನು ಕರೆದುಕೊಂಡು ಸಂಜೆ 19-45 ಗಂಟೆಗೆ ಠಾಣೆಗೆ ಹಾಜರಾಗಿ ಆಸಾಮಿಯ ವಿರುದ್ದ ಸ್ವತಃ ಮೊ.ಸಂಖ್ಯೆ:90/2021 ಕಲಂ:15(A), 32(3) ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 

9. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.99/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿ:17/07/2021 ರಂದು  ಮದ್ಯಾಹ್ನ 2-15  ಗಂಟೆಗೆ  ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿಯಾದ ಶ್ರೀ.ದೇವರಾಜು, ಸಿಪಿಸಿ-318, ಗೌರಿಬಿದನೂರು ನಗರ ಠಾಣೆ ರವರು ಠಾಣಾ ಎನ್.ಸಿ.ಆರ್.ನಂ.136/2021 ರಲ್ಲಿ  ಆರೋಪಿಯ ವಿರುದ್ದ ಕ್ರಿಮಿನಲ್  ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಲು ಕೋರಿ ಅನುಮತಿಯನ್ನು ನೀಡಲು ಕೋರಿ ಅಸಲು ಎನ್.ಸಿ.ಆರ್.136/2021 ಹಾಗೂ  ಪಿರ್ಯಾದಿದಾರರ  ಅಸಲು-ದೂರು ವರದಿಯೊಂದಿಗೆ  ಸಲ್ಲಿಸಿಕೊಂಡಿದ್ದ  ಮನವಿಯ ವಿಚಾರದಲ್ಲಿ  ಘನ ನ್ಯಾಯಾಲಯವು ಅನುಮತಿಯನ್ನು ನೀಡಿರುವ  ಆದೇಶದ  ನಕಲು ದಾಖಲೆಯನ್ನು ಹಾಜರ್ಪಡಿಸಿದ್ದನ್ನು ಸ್ವೀಕರಿಸಿದ್ದು,  ಎನ್.ಸಿ.ಆರ್.136/2021 ದೂರು ವರದಿಗೆ ಸಂಬಂಧಿಸಿದ  ವಿಚಾರವೇನೆಂದರೆ ದಿನಾಂಕ:29/06/2021 ರಂದು ಸಂಜೆ 6-15 ಗಂಟೆ ಸಮಯದಲ್ಲಿ ಠಾಣಾ ಸಿಬ್ಬಂದಿಯಾದ ಸಿ ಹೆಚ್ ಸಿ-214 ಲೋಕೇಶ್ ರವರು ಠಾಣೆಗೆ ಆರೋಪಿ, ಮಾಲಿನೊಂದಿಗೆ  ಹಾಜರಾಗಿ ದೂರನ್ನು ನೀಡಿದ್ದು ಸದರಿ ದೂರಿನಲ್ಲಿ ದಿ:29/06/2021 ರಂದು PSI ಸಾಹೇಬರು ಗೌರಿಬಿದನೂರು ನಗರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಗುಪ್ತ ಮಾಹಿತಿಯನ್ನು ಸಂಗ್ರಹಣೆ ಮಾಡಲು ಮತ್ತು ಕಾನೂನು ಕ್ರಮ ಕೈಗೊಳ್ಳಲು ತನಗೆ ನೇಮಿಸಿದ್ದು ಅದರಂತೆ ತಾನು ಸಂಜೆ 4-00 ಗಂಟೆಯಲ್ಲಿ ಗೌರಿಬಿದನೂರು ನಗರದಲ್ಲಿ ಗಸ್ತು ಮಾಡುತ್ತೀದ್ದಾಗ ಸಿಪಿಸಿ-542 ಗಿರೀಶ್ ರವರು ಪೋನ್ ಮಾಡಿ ಎಂ.ಸಿ.ಹೆಚ್ ಆಸ್ಪತ್ರೆಯ ಪಕ್ಕದಲ್ಲಿರುವ ಸಾರ್ವಜನಿಕ ರಸ್ತೆಯಲ್ಲಿ ಬಳಿ ಯಾರೋ ಒಬ್ಬ ಮಹಿಳೆ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು  ಸ್ಥಳವಾಕಾಶವನ್ನು ಮಾಡಿಕೊಟ್ಟಿದ್ದ ಅಲ್ಲಿ ಸಾರ್ವಜನಿಕರು ಮದ್ಯ ಸೇವನೆಯನ್ನು ಮಾಡುತ್ತೀರುವುದಾಗಿ ತಿಳಿಸಿದ್ದು  ಅದರಂತೆ ಸದರಿಯವರ ಮೇಲೆ ದಾಳಿ ಮಾಡಲು ಠಾಣಾ ಸಿಬ್ಬಂದಿಯಾದ ಮ.ಪಿ.ಸಿ-227 ಚಂದ್ರಕಲಾ ರವರನ್ನು ಕರದುಕೊಂಡು ತಾವು ಆನಂದಪುರದ ಬಳಿ   ಪಂಚರನ್ನು ಕರೆದು ಮಾಹಿತಿಯನ್ನು ಸದರಿ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿ ಕಾಲದಲ್ಲಿ ಹಾಜರಿರಲು ಒಪ್ಪಿಕೊಂಡಿರುತ್ತಾರೆ. ನಂತರ ತಾವುಗಳು ಸ್ವಲ್ಪ ದೂರ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ  ಎಮ್. ಸಿ. ಹೆಚ್ ಅಸ್ಪತ್ರೆಯ ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಮಹಿಳೆಯು ಸಾರ್ವಜನಿಕರಿಗೆ ಮದ್ಯವನ್ನು ಸರಬರಾಜು ಮಾಡುತ್ತಿದ್ದು ಅಲ್ಲಿ ಸಾರ್ವಜನಿಕರು ಮದ್ಯವನ್ನು ಸೇವನೆ ಮಾಡುತ್ತಿರುವುದು ಕಂಡು ಬಂದಿದ್ದು ಸದರಿಯವರ ಮೇಲೆ ದಾಳಿ ಮಾಡಲು ಹೋಗುವಷ್ಟರಲ್ಲಿ ಅಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಸಾರ್ವಜನಿಕರು ಸಮವಸ್ತ್ರದಲ್ಲಿದ್ದ ತಮ್ಮನ್ನು ನೋಡಿ ಓಡಿ ಹೋಗಿದ್ದು ಅಲ್ಲಿ ಮದ್ಯವನ್ನು ಸರಬರಾಜು ಮಾಡುತ್ತಿದ್ದ ಮಹಿಳೆಯನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಶ್ರಿಮತಿ ಪದ್ಮವತಿ ಕೊಂ ಹನುಮಂತಪ್ಪ, 39 ವರ್ಷ, ಎಸ್.ಸಿ ಜನಾಂಗ, ಹೂವಿನ ವ್ಯಾಪಾರ, ಆನಂದಪುರ, ಗೌರಿಬಿದನೂರು ನಗರ ಎಂದು ತಿಳಿಸಿದ್ದು  ಸ್ಥಳದಲ್ಲಿ ಮದ್ಯಪಾನ ಮಾಡಲು  ಯಾವುದಾದರು ಪರವಾನಿಗೆಯೇ ಇದ್ದರೇ ತೋರಿಸುವಂತೆ ಕೇಳಲಾಗಿ ತನ್ನ ಬಳಿ ಯಾವುದೂ ಇಲ್ಲವೆಂತ ತಿಳಿಸಿದ್ದು ನಂತರ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ 1) HAYWARDS CHEERS WHISKY 90 ML  ಮದ್ಯವಿರುವ 14 ಟೆಟ್ರಾ ಪ್ಯಾಕೇಟ್ ಗಳು ಮದ್ಯದ ಪ್ರಮಾಣವನ್ನು ಲೆಕ್ಕ ಮಾಡಲಾಗಿ 1 ಲೀ 260 ML ಇದರ ಮೌಲ್ಯವು 492-00/- ಆಗಿದ್ದು, 2) HAYWARDS CHEERS WHISKY 90 ML  ಖಾಲಿ 02 ಟೆಟ್ರಾ ಪಾಕೇಟ್ ಗಳು, 3) ಖಾಲಿ 02 ಪ್ಲಾಸ್ಟಿಕ್ ಗ್ಲಾಸ್ ಗಳು 4) ಒಂದು ಲೀಟರ್ ಸಾಮರ್ಥ್ಯದ ಒಂದು ಖಾಲಿ ವಾಟರ್ ಬಾಟೆಲ್ ಇದ್ದು ಇವುಗಳನ್ನು ಸಂಜೆ 4-30 ಗಂಟೆಯಿಂದ  ಸಂಜೆ 5-30 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಸಂಜೆ 5-45 ಗಂಟೆಗೆ ಠಾಣೆಗೆ ವಾಪಸ್ಸು ಬಂದು ವರದಿಯನ್ನು ಸಿದ್ದಪಡಿಸಿ ಮಾಲು ಮತ್ತು ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಸಂಜೆ 6-15 ಗಂಟೆ ಸಮಯದಲ್ಲಿ  ಆರೋಪಿ, ಮಾಲಿನೊಂದಿಗೆ ನೀಡಿದ ವರದಿಯನ್ನು ಪಡೆದುಕೊಂಡು ಠಾಣೆಯಲ್ಲಿ  ಎನ್. ಸಿ. ಆರ್.136/2021 ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡಿರುವುದಾಗಿರುತ್ತೆ. ನಂತರ ಠಾಣೆಯ  ಎನ್.ಸಿ.ಆರ್.ನಂ,136/2021 ರಲ್ಲಿ  ಆರೋಪಿಯ ವಿರುದ್ದ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಬೇಕಾಗಿರುವುದರಿಂದ  ಘನ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಳ್ಳಲು ಅನುಮತಿಯನ್ನು  ನೀಡಲು ಕೋರಿ ವರದಿಯನ್ನು ನಿವೇದಿಸಿಕೊಂಡಿದ್ದು, ಈ ಸಂಬಂಧ ಘನ  ನ್ಯಾಯಾಲಯವು  ಆರೋಪಿಯ ವಿರುದ್ದ  ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಲು ಅನುಮತಿಯನ್ನು ನೀಡಿದ್ದರ ಸಂಬಂಧ  ಅರೋಪಿಯ ವಿರುದ್ದ ಠಾಣೆಯಲ್ಲಿ  ಮೊ.ಸಂ.99/2021 ಕಲಂ 15(ಎ), 32(3) ಕೆ.ಇ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

10. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.158/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:18/07/2021 ರಂದು ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ಫಿರ್ಯಾದುದಾರರಾದ ಮಹಮ್ಮದ್ ಝೈನ್ ಖಾನ್ ಬಿನ್ ಅಸ್ಲಂಖಾನ್ ,20ರ್ಷ, ಮುಸ್ಲಿಂ ಜನಾಂಗ, ಕೆ.ಎ-01 ಎ.ಎಮ್-1618 ಸಂಖ್ಯೆಯ ಇಚರ್ ಕ್ಯಾಂಟರ್ ನಲ್ಲಿ ಕ್ಲೀನರ್ ಕೆಲಸ, ಕಂಬಿಪುರ ,ಕುಂಬಳಗೂಡು ,ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ: ಮೇಲ್ಕಂಡ ವಿಳಾಸದಲ್ಲಿ ತಾನು ವಾಸವಾಗಿರುತ್ತೇನೆ. ತಮ್ಮ ಮಾವ ಅಂದರೆ ತಾಯಿಯ ದೊಡ್ಡಣ್ಣನಾದ ಅಲೀಂ ಪಾಷ ಬಿನ್ ಮಹಮ್ಮದ್ ಗೌಸ್, 47 ವರ್ಷ, ಕಂಬಿಪುರ, ಕುಂಬಳಗೋಡು, ಬೆಂಗಳುರು ದಕ್ಷಿಣ-560060, ಮೊ:9880454065 ರವರ ಮನೆಯಲ್ಲಿಯೇ 2 ವಾರಗಳಿಂದ ವಾಸವಾಗಿರುತ್ತೇನೆ. ತಮ್ಮ ಮಾವನ ಬಾಬತ್ತು ಕೆ.ಎ-01 ಎ.ಎಮ್-1618 ನೊಂದಣಿ ಸಂಖ್ಯೆಯ ಇಚರ್ ಕ್ಯಾಂಟರ್ ವಾಹನವಿದ್ದು ಇವರೇ ಸ್ವತಃ ಚಾಲಕರಾಗಿರುತ್ತಾರೆ. ತಾನು 2 ವಾರಗಳಿಂದ ತಮ್ಮ ಮಾವನಾದ ಅಲೀಂ ಪಾಷ ರವರೊಂದಿಗೆ ಸದರಿ ಕ್ಯಾಂಟರ್ ವಾಹನದಲ್ಲಿ ಕ್ಲೀನರ್ ಕೆಲಸ ಮಾಡಿಕೊಂಡು ಬಾಡಿಗೆಗೆ ಹೋಗಿ ಬರುತ್ತಿದ್ದೆ. ದಿನಾಂಕ:16/07/2021 ರಂದು ತಾನು ಮತ್ತು ತಮ್ಮ ಮಾವ ಅಲೀಂ ಪಾಷ ರವರು ಹೈದರಾಬಾದ್ ಗೆ ಬಾಡಿಗೆಗಾಗಿ ಹೋಗಲು ಸಂಜೆ 4-30 ಗಂಟೆಗೆ ಬೆಂಗಳೂರಿನಲ್ಲಿ ಕ್ಯಾಂಟರ್ ವಾಹನದಲ್ಲಿ  ಮಾಲನ್ನು ಲೋಡ್ ಮಾಡಿಕೊಂಡು ರಾತ್ರಿ 11-00 ಗಂಟೆಯಲ್ಲಿ ಬೆಂಗಳೂರನ್ನು ಬಿಟ್ಟು  ಹೈದರಬಾದ್ ಗೆ ಹೋಗಲು ಎನ್.ಹೆಚ್-7 ರಸ್ತೆಯಲ್ಲಿ ಹೋಗುತ್ತಿದ್ದೇವು. ದಿನಾಂಕ:17/07/2021 ರಂದು ಬೆಳಗಿನ ಜಾವ 1-00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲುಕು ಅರೂರು ಕ್ರಾಸ್ ಬಳಿ ಎನ್.ಹೆಚ್-7 ರಸ್ತೆಯಲ್ಲಿ ಬರುತ್ತಿರುವಾಗ ಕ್ಯಾಂಟರ್ ವಾಹನವನ್ನು ಚಾಲನೆ ಮಾಡುತ್ತಿದ್ದ ತಮ್ಮ ಮಾವ ಅಲೀಂಪಾಷ ರವರು ತಾನು ಚಾಲನೆ ಮಾಡುತ್ತಿದ್ದ   ಕೆ.ಎ-01 ಎ.ಎಮ್-1618 ನೊಂದಣಿ ಸಂಖ್ಯೆಯ ಇಚರ್ ಕ್ಯಾಂಟರ್ ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ಮುಂದೆ ಹೋಗುತ್ತಿದ್ದ ಯಾವುದೋ ವಾಹನಕ್ಕೆ ಡಿಕ್ಕಿ ಹೊಡೆಸಿರುತ್ತಾರೆ. ಡಿಕ್ಕಿ ಹೊಡೆದ ಪರಿಣಾಮ ತಾವಿದ್ದ ಕ್ಯಾಂಟರ್ ಮುಂಭಾಗ ಪೂರ್ತ ಜಖಂಗೊಂಡಿರುತ್ತೆ. ವಾಹನದಲ್ಲಿದ್ದ ನನಗೆ ಸಣ್ಣ-ಪುಟ್ಟ ಮೂಗೇಟುಗಳಾಗಿರುತ್ತೆ. ತಾನು ಯಾವುದೇ ಆಸ್ಪತ್ರೆಯಲ್ಲಿ ತೋರಿಸಿಕೊಂಡಿರುವುದಿಲ್ಲ.  ವಾಹನ ಚಾಲನೆ ಮಾಡುತ್ತಿದ್ದ ತಮ್ಮ ಮಾವ ಅಲೀಂ ಪಾಷ ರವರಿಗೆ ಕ್ಯಾಂಟರ್ ನ ಸ್ಟೇರಿಂಗ್ ಹೊಟ್ಟೆಗೆ ಒತ್ತಿಕೊಂಡು ಮೂಗೇಟು ಗಳಾಗಿರುತ್ತೆ ಹಾಗೂ ಕ್ಯಾಂಟರ್ ನ ಮುಂಭಾಗದ ಗ್ಲಾಸ್ ಹೊಡೆದು ಅದರ ಚೂರುಗಳು ತಮ್ಮ ಮಾವನ ಕೈಗಳಿಗೆ ತಗುಲಿ ರಕ್ತಗಾಯವಾಗಿರುತ್ತೆ ಮತ್ತು ಎರಡು ಕಾಲುಗಳಿಗೆ ರಕ್ತಗಾಯವಾಗಿರುತ್ತೆ. ತಮ್ಮ ಮಾವ ಡಿಕ್ಕಿ ಹೊಡೆಸಿದ ಯಾವುದೋ ವಾಹನ ಸ್ಥಳದಲ್ಲಿ ನಿಲ್ಲಸದೆ ಹೊರಟುಹೋಗಿರುತ್ತೆ. ನಂತರ ಆಂಬುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನಂತರ ಅಲ್ಲಿನ ವೈಧ್ಯಾಧಿಕಾರಿಗಳ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸಿ.ಕೆ. ಜನರಲ್ ಆಸ್ಪತ್ರೆ ಗೆ ಕರೆದುಕೊಂಡು ಹೋಗಿ ನಂತರ ಅಲ್ಲಿನ ವೈಧ್ಯಾಧಿಕಾರಿಗಳ ಸೂಚನೆ ಮೇರೆಗೆ ಮಹಾಲಕ್ಷ್ಮಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನಂತರ ಅಲ್ಲಿನ ವೈಧ್ಯಾಧಿಕಾರಿಗಳ ಸೂಚನೆ ಮೇರೆಗೆ ಮಾರ್ಥಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನಂತರ ಅಲ್ಲಿನ ವೈಧ್ಯಾಧಿಕಾರಿಗಳ ಸೂಚನೆ ಮೇರೆಗೆ ಮಹಾವೀರ್ ಜೈನ್  ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲು ಮಾಡಿ ಈ ದಿನ ತಡವಾಗಿ ಬಂದು ಈ ಅಪಘಾತಕ್ಕೆ ತಮ್ಮ ಮಾವ ಅಲೀಂಪಾಷ ರವರ ಅತಿವೇಗ ಮತ್ತು ಅಜಾಗರುಕತೆಯ ಚಾಲನೆ ಆಗಿದ್ದು ಇವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಾಗಿರುತ್ತೆ.

ಇತ್ತೀಚಿನ ನವೀಕರಣ​ : 18-07-2021 04:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080