ಅಭಿಪ್ರಾಯ / ಸಲಹೆಗಳು

 

1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.83/2021 ಕಲಂ. 32,34  ಕೆ.ಇ ಆಕ್ಟ್ :-

          ದಿನಾಂಕ 17/06/2021 ರಂದು ಮದ್ಯಾಹ್ನ 1:00 ಗಂಟೆಯಲ್ಲಿ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ದಿನಾಂಕ 17/06/2021 ರಂಧು ಬೆಳಿಗ್ಗೆ 11:30 ಗಂಟೆಯಲ್ಲಿ ಗೌರಿಬಿದನೂರು ನಗರದ ಎನ್ ಆರ್ ವೃತ್ತದ ಬಳಿ ಸಿಬ್ಬಂದಿಯವರಾದ ಪಿ.ಸಿ 17 ಲಕ್ಷ್ಮೀನಾರಾಯಣ, ಪಿ.ಸಿ 282 ರಮೇಶ್ ಹಾಗೂ ಮ.ಪಿ.ಸಿ 380 ಶೀಲಾ ರವರೊಂದಿಗೆ ಸರ್ಕಾರಿ ಜೀಪಿನಲ್ಲಿ ಗಸ್ತು ಮಾಡುತ್ತಿರುವಾಗ ಯಾರೋ ಇಬ್ಬರೂ ಹೆಂಗಸರು 2 ಬ್ಯಾಗ್ ಗಳನ್ನು ತೆಗೆದುಕೊಂಡು ಹಿಂದೂಪುರದ ಕಡೆ ನಡೆದುಕೊಂಡು ಹೋಗುತ್ತಿದ್ದರು. ತನಗೆ ಅನುಮಾನ ಬಂದು ಇಬ್ಬರೂ ಹೆಂಗಸರನ್ನು ಸಿಬ್ಬಂದಿಯವರಾದ ಮ.ಪಿ.ಸಿ ಶೀಲಾ ರವರ ಸಹಾಯದಿಂದ ನಿಲ್ಲಿಸಿ ಮಾತನಾಡಿಸಿದಾಗ ಇಬ್ಬರು ತಮ್ಮ ಹೆಸರನ್ನು ಹೇಳಲು ತಡವರಿಸಿರುತ್ತಾರೆ. ನಂತರ ಬ್ಯಾಗ್ ನಲ್ಲಿ ಎನೋ ಸಾಗಿಸುತ್ತಿರುವುದಾಗಿ ಅನುಮಾನ ಬಂದು ಎನ್.ಆರ್ ವೃತ್ತದ ಆಟೋ ನಿಲ್ದಾಣದ ಬಳಿ ಇದ್ದ ಪಂಚಸಾಕ್ಷಿದಾರರನ್ನು ಬರಮಾಡಿಕೊಂಡು ಹೆಂಗಸರ ಬಳಿ ಇದ್ದ ಬ್ಯಾಗ್ ಗಳನ್ನು ಪರಿಶೀಲನೆ ಮಾಡಲಾಗಿ ಬ್ಯಾಗ್ ಗಳಲ್ಲಿ Haywards Cheers Whisky ಕಂಪನಿಯ 90 ಎಂ.ಎಲ್ ನ 100 ಟೆಟ್ರಾ ಪಾಕೆಟ್ ಗಳು ಇದ್ದವು. ಪ್ರತಿಯೊಂದು ಟೆಟ್ರಾ ಪಾಕೆಟ್ ಗಳ ಮೇಲೆ 35.11 ರೂಪಾಯಿ ಬೆಲೆ ಇದ್ದು ಒಟ್ಟು 3511 ರೂಪಾಯಿಗಳಾಗಿರುತ್ತೆ. ಒಟ್ಟು ಮದ್ಯದ ಪ್ರಮಾಣ 9 ಲೀಟರ್ ಆಗಿರುತ್ತೆ. ಆ ಹೆಂಗಸರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಈಶ್ವರಮ್ಮ ಕೋಂ ಬಾಬು, 50 ವರ್ಷ, ಪರಿಶಿಷ್ಟ ಜಾತಿ, ವೀರಾಂಡಹಳ್ಳಿ, ಗೌರಿಬಿದನೂರು ನಗರ ಹಾಗೂ 2) ಸುಖನ್ಯ ಕೋಂ ಸುಬ್ರಮಣಿ, 35 ವರ್ಷ, ಪರಿಶಿಷ್ಟ ಜಾತಿ, ವೀರಾಂಡಹಳ್ಳಿ, ಗೌರಿಬಿದನೂರು ನಗರ ಎಂದು ತಿಳಿಸಿದ್ದು ಮದ್ಯವನ್ನು ಮಾರಾಟ ಮಾಡಲು ಅಥವಾ ಸಾಗಿಸಲು ಪರವಾನಗಿ ಇದೆಯೇ ಎಂದು ಕೇಳಲಾಗಿ ಅವರು ಯಾವುದೇ ಪರವಾನಗಿ ಇರುವುದಿಲ್ಲವೆಂದು ತಿಳಿಸಿದ್ದು ಈ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಯಾವ ಬಾರ್ ನಲ್ಲಿ ಖರೀದಿಸಿದ್ದು ಎಂದು ಕೇಳಲಾಗಿ ಗೌರಿಬಿದನೂರು ನಗರದ B-H ರಸ್ತೆಯ ಎನ್.ಆರ್ ವೃತ್ತದಿಂದ ಬೆಂಗಳೂರು ವೃತ್ತದ ರಸ್ತೆಯಲ್ಲಿರುವ ಲಕ್ಷ್ಮೀಬಾರ್ ನಲ್ಲಿ ಎಂದು ತಿಳಿಸಿರುತ್ತಾರೆ. ನಂತರ ಪಂಚರ ಸಮಕ್ಷಮದಲ್ಲಿ ಬ್ಯಾಗ್ ಗಳಲ್ಲಿ ಇದ್ದ Haywards Cheers Whisky ಕಂಪನಿಯ 90 ಎಂ.ಎಲ್ ನ 6 ಟೆಟ್ರಾ ಪಾಕೆಟ್ ಗಳನ್ನು ವಿಧಿವಿಜ್ಞಾನ ಪರೀಕ್ಷೆಯ ಸಲುವಾಗಿ ಪ್ರತ್ಯೇಕ ಬಿಳಿ ಚೀಲದಲ್ಲಿ ಹಾಕಿ ಮೂತಿಯನ್ನು ದಾರದಿಂದ ಕಟ್ಟಿ “MK” ಎಂಬ ಇಂಗ್ಲೀಷ್ ಅಕ್ಷರದಿಂದ ಮೊಹರು ಮಾಡಿ ಉಳಿದ 94 Haywards Cheers Whisky ಕಂಪನಿಯ 90 ಎಂ.ಎಲ್ ನ ಟೆಟ್ರಾ ಪಾಕೆಟ್ ಗಳನ್ನು ಬ್ಯಾಗ್ ಗಳೊಂದಿಗೆ ಮತ್ತೊಂದು ಬಿಳಿ ಚೀಲದಲ್ಲಿ ಹಾಕಿ ಮೂತಿಯನ್ನು ದಾರದಿಂದ ಕಟ್ಟಿ “MK” ಎಂಬ ಇಂಗ್ಲೀಷ್ ಅಕ್ಷರದಿಂದ ಮೊಹರು ಮಾಡಿರುತ್ತೇನೆ. ನಂತರ 2 ಚೀಟಿಗಳ ಮೇಲೆ ಪಂಚರ ಸಹಿಗಳನ್ನು ಪಡೆದು ನಂತರ ಪಿ.ಎಸ್.ಐ ರವರು ಸಹಿಯನ್ನು ಮಾಡಿ ಚೀಟಿಗಳನ್ನು ಮೊಹರು ಮಾಡಿದ ಚೀಲಗಳ ಮೇಲೆ ಅಂಟಿಸಿರುತ್ತಾರೆ. ನಂತರ ಆರೋಪಿಗಳನ್ನು ಸಿಬ್ಬಂದಿಯವರಾದ ಮ.ಪಿ.ಸಿ 380 ಶೀಲಾ ರವರ ಸಹಾಯದಿಂದ ವಶಕ್ಕೆ ಪಡೆದುಕೊಂಡು ಠಾಣೆಗೆ ಹಾಜರಾಗಿ ನೀಡಿದ ವರದಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆನೆ.

 

2. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.125/2021 ಕಲಂ. 143,147,148,323,324,506,149 ಐ.ಪಿ.ಸಿ:-

          ದಿನಾಂಕ: 18/06/2021 ರಂದು ಫಿರ್ಯಾದುದಾರರಾದ ಪಿಳ್ಳ ಆದೆಪ್ಪ  ಬಿನ್  ಲೇಟ್ ಲಕ್ಷ್ಮಯ್ಯ , 70 ವರ್ಷ, ಬೋವಿ ಜನಾಂಗ, ವ್ಯವಸಾಯ, ದರಬೂರು ಗ್ರಾಮ ಮಂಡಿಕಲ್ ಹೋಬಳಿ ಚಿಕ್ಕಬಳ್ಳಾಪುರ ತಾಲ್ಲುಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ: ದಿನಾಂಕ:17/06/2021 ರಂದು ತನ್ನ ಬಾಬತ್ತು ದರಬೂರು ಗ್ರಾಮದ ಸರ್ವೆ ನಂ:17/2 ರಲ್ಲಿ 1 ಎಕರೆ 2 ಗುಂಟೆ ಜಮೀನಿನಲ್ಲಿ ಜೋಳದ ಬೆಳೆ ಇಡುತ್ತಿದ್ದಾಗ ಸದರಿ ಗ್ರಾಮದ ವಾಸಿಗಳಾದ ರಾಮಲಕ್ಷ್ಮಯ್ಯ ಬಿನ್ ಲೇಟ್ ಪಿಳ್ಳವೆಂಕಟರಾಮಪ್ಪ, ಇಂದಿರಮ್ಮ ಕೋಂ ರಾಮಲಕ್ಷ್ಮಯ್ಯ,  ದಿವಾಕರ ಬಿನ್ ರಾಮಲಕ್ಷ್ಮಯ್ಯ, ಕೀರ್ತನ್ ಬಿನ್ ರಾಮಲಕ್ಷ್ಮಯ್ಯ, ರವರುಗಳು ವಿನಾಕಾರಣ ಏಕಾಏಕಿ ಗುಂಪು ಕಟ್ಟಿಕೊಂಡು ಸೈಜು ಕಟ್ಟಿಗೆ, ಸನ್ನಿಕೆ ಗರಾಡು ಗಳಿಂದ ಮಾರಣಾಂತಿಕ ಹಲ್ಲೆ ಮಾಡಿ ತನ್ನನ್ನು ಹಾಗೂ ತನ್ನ ಮಗಳನ್ನು ಲಕ್ಷ್ಮಿದೇವಿ ಸಾಯಿಸಬೇಕೆಂದು ಇವರಿಗೆ ಸಹಕಾರವಾಗಿ ಗೋವಿಂದಪ್ಪ ಬಿನ್ ಗೋವಿಯಪ್ಪ ರವರು 5 ಜನರು ಸೇರಿಕೊಂಡು ಮೊದಲು ರಾಮಲಕ್ಷ್ಮಯ್ಯ ರವರು ಸನ್ನಿಕೆಯಿಂದ ಬಲಗಾಲು ಮತ್ತು ಬಲಕೈಗೆ ರಕ್ತ ಗಾಯವಾಗುವಂತೆ ಹೊಡೆದಿರುತ್ತಾರೆ. ಸೈಜು ಕಟ್ಟಿಗೆಯಿಂದ ಡಬಾಗದ ತೊಡೆಗೆ ಹೊಡೆದು ತಳ್ಳಿ ಹಾಕಿರುತ್ತಾರೆ. ನಂತರ ಅಲ್ಲಿಯೇ ಇದ್ದ ತನ್ನ ಮಗಳು ಲಕ್ಷ್ಮಿದೇವಿ ಕಿರುಚಿಕೊಂಡಾಅಗ ಕೀರ್ತನ್ ಮತ್ತು ದಿವಾಕರ್ ಸೇರಿ ಸೈಜು ಕಟ್ಟಿಗೆಯಿಂದ ತನ್ನ ಮಗಳಿಗೆ ಬಲವಾಗಿ ಹೊಡೆದಿರುತ್ತಾರೆ. ನಂತರ ತಾನು ಮತ್ತು ತನ್ನ ಮಗಳು ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಬಂದು ಈ ದಿನ ತಡವಾಗಿ ಠಾಣೆಗೆ ಬಂದು ತಮ್ಮ ಮೇಲೆ ಗಲಾಟೆ ಮಾಡಿ ದೌರ್ಜನ್ಯ ಮಢುತ್ತಿರುವ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಾಗಿರುತ್ತೆ.

 

3. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.202/2021 ಕಲಂ. 143,323,447,427,504,506,149 ಐ.ಪಿ.ಸಿ:-

          ದಿನಾಂಕ 17/06/2021 ರಂದು ಸಂಜೆ 7-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಸಿ.ಎಸ್ ಶ್ರೀರಾಮರೆಡ್ಡಿ ಬಿನ್ ಲೇಟ್ ಸೊಣ್ಣಪ್ಪ, 66 ವರ್ಷ, ವಾಸ-ಚೌಡಸಂದ್ರ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಶಿಡ್ಲಘಟ್ಟ ತಾಲ್ಲೂಕು ಕೊಕ್ಕರಮಾಲಕಹಳ್ಳಿ ಗ್ರಾಮದ ಸರ್ವೇ ನಂಬರ್ 20/1 ರಲ್ಲಿ ಪೂರ್ವ-ಪಶ್ಚಿಮ 480 ಅಡಿಗಳು, ಉತ್ತರ-ದಕ್ಷಿಣ 9 ಅಡಿಗಳ ಜಮೀನನ್ನು ತಾನು ದಿನಾಂಕ 15/12/1975 ರಂದು ಚೌಡಸಂದ್ರ ಗ್ರಾಮದ ಜಿ.ಕೆಂಪಣ್ಣ ಬಿನ್ ಗುಡಿಯಪ್ಪ ರವರಿಂದ ಪರಿಶುದ್ದ ಕ್ರಯ ಪತ್ರದ ಮೂಲಕ ಕ್ರಯಕ್ಕೆ ಪಡೆದುಕೊಂಡಿದ್ದು, ಸದರಿ ಕ್ರಯ ಪತ್ರದ ಮೇರೆಗೆ ತನ್ನ ಹೆಸರಿಗೆ ಖಾತೆಯಾಗಿದ್ದು, ಸದರಿ ಜಮೀನಿನಲ್ಲಿ ತಾನು ಕೊಳವೆ ಬಾವಿಯನ್ನು ಕೊರೆಯಿಸಿ ಜಮೀನನ್ನು ಖರೀದಿ ಮಾಡಿದ ದಿನದಿಂದಲೂ ಉಪಯೋಗಿಸಿಕೊಂಡು ಬರುತ್ತಿದ್ದು, ದಿನಾಂಕ 17/06/2021 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ಸಿ.ಕೆ ಮಾರೇಗೌಡ ಬಿನ್ ಕೆಂಪಣ್ಣ, ಸಿ.ಎನ್ ಅಶ್ವಥಪ್ಪ ಬಿನ್ ಜಿ.ನಾರಾಯಣಪ್ಪ, ಪ್ರವೀಣ್ ಕುಮಾರ್ (ಪ್ರವೀಣ್) ಬಿನ್ ಅಶ್ವಥಪ್ಪ, ಸಿ.ಎನ್ ಮಂಜುನಾಥ ಬಿನ್ ಸಿ.ಎನ್ ಕೃಷ್ಣಪ್ಪ, ಸಿ.ಕೆ ರಾಜಣ್ಣ ಬಿನ್ ಜಿ.ಕೆಂಪಣ್ಣ ರವರುಗಳು ಏಕಾಏಕಿ ಅಕ್ರಮವಾಗಿ ಗುಂಪು ಕಟ್ಟಿಕೊಂಡು ಬಂದು ತನ್ನ ಮೇಲ್ಕಂಡ ಜಮೀನೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ಜೆಸಿಬಿ (ಕೆಎ-40-ಎನ್-0489) ಯಿಂದ ರಸ್ತೆಯನ್ನು ಮತ್ತು ಮೇಲ್ಕಂಡ ತನ್ನ ಜಮೀನಿನಲ್ಲಿ ಗುಂಡಿ ತೋಡಿ ಸದರಿ ಜಮೀನಿನಲ್ಲಿ ತಾನು ಕೊಳವೆ ಬಾವಿಗೆ ಅಳವಡಿಸಿದ್ದ ನೀರಿನ ಪೈಪುಗಳನ್ನು ಹೊಡೆದು ಹಾಕುತ್ತಿದ್ದು, ತಾನು ಹೋಗಿ ಏಕಪ್ಪ ನನ್ನ ಜಮೀನನ್ನು ಈ ರೀತಿ ಮಾಡುತ್ತೀದ್ದೀರಾ ಎಂದು ಕೇಳಿದ್ದಕ್ಕೆ ತನ್ನ ಮೇಲೆ ಏ ಬೋಳಿ ನನ್ನ ಮಗನೇ ಈ ಜಮೀನು ನಮ್ಮದು ಎಂದು ಸದರಿಯವರು ತನ್ನ ತಲೆಯ ಕೂದಲನ್ನು ಹಿಡಿದು ಎಳೆದು ನೆಲಕ್ಕೆ ದಬ್ಬಿ ಕಾಲುಗಳಿಂದ ಒದ್ದು, ತನಗೆ ಮೂಗೇಟುಗಳನ್ನು ಉಂಟು ಮಾಡಿದ್ದು ಅಷ್ಟರಲ್ಲಿ ತಮ್ಮ ಊರಿನ ಸಾರ್ವಜನಿಕರು ಬಂದು ಜಗಳವನ್ನು ಬಿಡಿಸಿದ್ದು, ಸದರಿಯವರು ಹೊರಟು ಹೋಗಿದ್ದು, ತದ ನಂತರ ಸಂಜೆ 4-00 ಗಂಟೆ ಸಮಯಕ್ಕೆ ತಾನು ಮನೆಯಲ್ಲಿ ಇರುವಾಗ ಮೇಲ್ಕಂಡವರು ಮತ್ತೆ ತನ್ನ ಮೇಲ್ಕಂಡ ಜಮೀನೊಳಗೆ ಅಕ್ರಮವಾಗಿ ಮೇಲ್ಕಂಡ ಜೆಸಿಬಿ ಯಿಂದ ತನ್ನ ಜಮೀನೊಳಗೆ ಅಕ್ರಮ ಪ್ರವೇಶ ಮಾಡಿ ತನ್ನ ಜಮೀನಿನಲ್ಲಿ ಜೆಸಿಬಿ ಯಿಂದ ಗುಂಡಿಗಳನ್ನು ತೋಡಿ ರಸ್ತೆಯನ್ನು ಅಗೆದು ಹಾಕಿದ್ದು, ಜಮೀನಿನಲ್ಲಿ ಅಳವಡಿಸಿದ್ದ ನೀರಿನ ಪೈಪುಗಳನ್ನು ಹೊಡೆದು ಹಾಕಿದ್ದು, ತಾನು ಹೋಗಿ ಕೇಳಿದ್ದಕ್ಕೆ ಸದರಿಯವರು ತನ್ನನ್ನು ಅವಾಚ್ಯ ಶಬ್ದಗಳಿಂದ ಬೈದು ಏ ಬೋಳಿ ನನ್ನ ಮಗನೇ ಈ ಜಮೀನೊಳಗೆ ಬರಬೇಡ ಈ ಜಮೀನು ನಮ್ಮದು ಈ ಜಮೀನೊಳಗೆ ಬಂದರೆ ಇಲ್ಲೆ ಪ್ರಾಣ ತೆಗೆದು ಹೂತಿ ಹಾಕುತ್ತೇವೆಂದು ಪ್ರಾಣ ಬೆದರಿಕೆ ಹಾಕಿ ಮೇಲ್ಕಂಡ ಅಶ್ವಥಪ್ಪ ರವರು ತನ್ನ ಕತ್ತಿನ ಪಟ್ಟಿಯನ್ನು ಹಿಡಿದು ನೆಲಕ್ಕೆ ದಬ್ಬಿ ಉಳಿದವರು ಕಾಲುಗಳಿಂದ ತನ್ನ ಬೆನ್ನಿನ ಮೇಲೆ ಒದ್ದು, ಮೂಗೇಟು ಉಂಟು ಮಾಡಿ ತನ್ನ ಮೇಲೆ ಹಲ್ಲೆ ಮಾಡಿರುತ್ತಾರೆ. ಅಷ್ಟರಲ್ಲಿ ತನ್ನ ತಮ್ಮನಾದ ಚಂದ್ರೇಗೌಡ ಮತ್ತು ಆತನ ಕಾರ್ ಡ್ರೈವರ್ ದಿವಾಕರ್ ರವರು ಬಂದು ಜಗಳ ಬಿಡಿಸಿರುತ್ತಾರೆ. ಸದರಿಯವರು ತನ್ನ ಜಮೀನೊಳಗೆ ಅಕ್ರಮ ಪ್ರವೇಶ ಮಾಡಿ ಪೈಪುಗಳನ್ನು ಕಿತ್ತುಹಾಕಿ ತನಗೆ ಸುಮಾರು 70.000-00 ರೂಗಳ ನಷ್ಟವನ್ನುಂಟು ಮಾಡಿದ್ದು, ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

 

4. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.66/2021 ಕಲಂ. 379 ಐ.ಪಿ.ಸಿ & 41(D),102 ಸಿ.ಆರ್.ಪಿ.ಸಿ:-

          ಶಿಡ್ಲಘಟ್ಟ ಘನ ಹಿರಿಯ ಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ, ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ. ಪದ್ಮಾವತಮ್ಮ ಪಿ.ಎಸ್.ಐ (ಅಪರಾದ ವಿಭಾಗ) ಆದ ನಾನು ದಿನಾಂಕ:-18.06.2021 ರಂದು ಬೆಳಿಗ್ಗೆ 06.00 ಗಂಟೆಯಲ್ಲಿ ನಾನು ಠಾಣೆಗೆ ಒದಗಿಸಿರುವ  ಸರ್ಕಾರಿ ಜೀಪ್ ಸಂಖ್ಯೆ ಕೆಎ.40.ಜಿ.141 ರಲ್ಲಿ ಅಪರಾದ ಸಿಬ್ಬಂದಿಯವರಾದ ಪಿ.ಸಿ.209 ಶಶಿಕುಮಾರ್ ಮತ್ತು ಜೀಪ್ ಚಾಲಕ ಅಂಬರೀಶ್, ಎಹೆಚ್ಸಿ-54 ರವರೊಂದಿಗೆ ಕೋವಿಡ್-19 ಲಾಕ್ ಡೌನ್ ಪ್ರಯುಕ್ತ ನಗರ ಗಸ್ತಿಗಾಗಿ ಠಾಣೆಯಿಂದ ಹೊರಟು ಶಿಡ್ಲಘಟ್ಟ ನಗರದ ಟಿ.ಬಿ ರಸ್ತೆ, ಅಶೋಕ ರಸ್ತೆ, ರಾಜೀವ್ ಗಾಂಧಿ ಲೇಔಟ್ ಕಡೆಗಳಲ್ಲಿ ಗಸ್ತು ಮಾಡಿಕೊಂಡು ರಾಜೀವ್ ಗಾಂಧಿ ಲೇಔಟ್ ಕಡೆಯಿಂದ ಅಮೀರ್ ಬಾಬಾ ದರ್ಗಾ ಕಡೆ ಹೋಗುತ್ತಿದ್ದಾಗ ಬೆಳಿಗ್ಗೆ ಸುಮಾರು 7.30 ಗಂಟೆಯಲ್ಲಿ ದಿಬ್ಬೂರಹಳ್ಳಿ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಯಾರೋ ಒಬ್ಬ ಆಸಾಮಿ ಕೆ.ಎ.53.ಆರ್.1790 ಪಲ್ಸರ್ ದ್ವಿಚಕ್ರವಾಹನದಲ್ಲಿ ಹಳೆಯ ಅಲ್ಯೂಮಿನಿಯಂ ವೈರ್ ನ್ನು ತೆಗೆದುಕೊಂದು ಅಮೀರ್ ಬಾಬಾ ದರ್ಗಾ ಕಡೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದು, ಸದರಿ ಆಸಾಮಿಯನ್ನು ತಡೆದು ನಿಲ್ಲಿಸಿ ವಾಹನದ ದಾಖಲೆಗಳನ್ನು ಮತ್ತು ಅಲ್ಯೂಮಿನಿಯಂ ವೈರ್ ಬಗ್ಗೆ ಕೇಳಲಾಗಿ ತನ್ನ ಬಳಿ ವಾಹನಕ್ಕೆ ಸಂಬಂದಿಸಿದ ಯಾವುದೇ ದಾಖಲೆಗಳಿಲ್ಲವೆಂದು ಹಾಗೂ ಅಲ್ಯೂಮಿನಿಯಂ ವೈರ್  ನಮ್ಮ ತೋಟದಿಂದ ತೆಗೆದುಕೊಂಡು ಬರುತ್ತಿರುವುದಾಗಿ ತಿಳಿಸಿರುತ್ತಾನೆ. ನಂತರ ಆತನ ಹೆಸರು ವಿಳಾಸ ಕೇಳಲಾಗಿ ರವಿಕುಮಾರ್.ಸಿ ಬಿನ್ ಚನ್ನರಾಯಪ್ಪ, 32 ವರ್ಷ, ಗೊಲ್ಲರು, ಕೂಲಿಕೆಲಸ, ವಾಸ-ಅಜ್ಜಕದಿರೇನಹಳ್ಳಿ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿರುತ್ತಾನೆ. ನಂತರ ಸದರಿ ವಾಹನ ಮತ್ತು ಅಲ್ಯೂಮಿನಿಯಂ ವೈರ್ ಯಾರದು ಎಲ್ಲಿಂದ ತಂದಿರುವುದೆಂತ ವಿಚಾರ ಮಾಡಲಾಗಿ ಸದರಿ ದ್ವಿಚಕ್ರ ವಾಹನವನ್ನು ತನ್ನ ಸ್ನೇಹಿತರಾದ ಬಚ್ಚಹಳ್ಳಿ ಮುರಳಿ ರವರಿಂದ ಕೆಲಸದ ಪ್ರಯುಕ್ತ ಪಡೆದುಕೊಂಡು ಬರುತ್ತಿರುತ್ತೇನೆಂದು ಹಾಗೂ ಸದರಿ ಅಲ್ಯೂಮಿನಿಯಂ ವೈರ್ ನ್ನು  ಅಶೋಕ ರಸ್ತೆಯಲ್ಲಿನ ಕೆ.ಇ.ಬಿ ಕಾಂಟ್ರಕ್ಟರ್ ನಾಗರಾಜು ರವರ ಗೋಡನ್ ಹೊರಗಡೆ ಹಾಕಿದ್ದು ಕಳುವು ಮಾಡಿಕೊಂಡು ಬಂದಿರುವುದಾಗಿ ಮತ್ತೊಂದು ಬಾರಿ ತನ್ನ ತೋಟದಿಂದ ತೆಗೆದುಕೊಂಡು ಬಂದಿರುವುದಾಗಿ ತಿಳಿಸಿದ್ದು, ಸಮಂಜಸ ಉತ್ತರ ನೀಡಿರುವುದಿಲ್ಲ. ಸದರಿ ಅಲ್ಯುಮಿನಿಯಂ ವೈರ್ ಮತ್ತು ದ್ವಿಚಕ್ರ ವಾಹನ ಮತ್ತು ಅಲ್ಯೂಮಿನಿಯಂ ವೈರ್ ನ್ನು  ಇವನು ಎಲ್ಲಿಯೋ ಕಳ್ಳತನ ಮಾಡಿಕೊಂಡು ಬಂದು ಯಾವುದೇ ದಾಖಲೆಗಳು ಇಲ್ಲದೆ ವಾಹನ ಚಾಲನೆ ಮಾಡುತ್ತಿರುವುದಾಗಿ ಅನುಮಾನ ಕಂಡು ಬಂದಿದ್ದರಿಂದ ಸದರಿ ಆಸಾಮಿಯನ್ನು ದ್ವಿಚಕ್ರ ವಾಹನ ಮತ್ತು ಅಲ್ಯೂಮಿನಿಯಂ ವೈರ್ ಸಮೇತ ವಶಕ್ಕೆ ಪಡೆದು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಮಹಜರ್ ಮಾಡಿ ಅಮಾನತ್ತು ಪಡಿಸಿಕೊಂಡಿರುತ್ತೆ. ಆರೋಪಿ ವಶದಲ್ಲಿರುವ ಕೆ.ಎ.53.ಆರ್.1790 ರಿಜಿಸ್ವರ್ ನಂಬರಿನ ಪಲ್ಸರ್ ದ್ವಿಚಕ್ರ ವಾಹನ ಆಗಿದ್ದು, ಇದರ ಬೆಲೆ ಸುಮಾರು 20,000/-ರೂ ಬೆಲೆ ಬಾಳುವುದಾಗಿರುತ್ತೆ.  ಹಳೆಯ ಅಲ್ಯೂಮಿನಿಯಂ ವೈರ್ ಸುಮಾರು 10 ಕೆ.ಜಿ ತೂಕ ಇರುತ್ತೆ. ಸದರಿ ದ್ವಿಚಕ್ರ ವಾಹನ, ಅಲ್ಯೂಮಿನಿಯಂ ವೈರ್ ಮತ್ತು ಆರೋಪಿಯೊಂದಿಗೆ ಬೆಳಿಗ್ಗೆ 8.30 ಗಂಟೆಗೆ ಠಾಣೆಗೆ ಕರೆತಂದು ಮುಂದಿನ ಕ್ರಮದ ಬಗ್ಗೆ ಠಾಣಾ ಮೊ.ಸಂ.66/2021 ಕಲಂ.41 ಕ್ಲಾಸ್ (ಡಿ) 102 ಸಿ.ಆರ್.ಪಿ.ಸಿ ಮತ್ತು 379 ಐಪಿಸಿ ರೀತ್ಯಾ ಸ್ವತಃ ಪ್ರಕರಣ ದಾಖಲಿಸಿರುತ್ತೇನೆ.

ಇತ್ತೀಚಿನ ನವೀಕರಣ​ : 18-06-2021 05:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080