Feedback / Suggestions

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 98/2021 ಕಲಂ. 353 ಐ.ಪಿ.ಸಿ & 5,6 ESSENTIAL SERVICES MAINTENANCE ACT, 1981 , 66 INFORMATION TECHNOLOGY ACT 2008:-

     ದಿನಾಂಕ:17-04-2021 ರಂದು ಮದ್ಯಾಹ್ನ 3-30 ಗಂಟೆಗೆ ಪಿರ್ಯಾದಿದಾರಾದ ಶ್ರೀ ಜಿ.ರಾಮಯ್ಯ ಬಿನ್ ಗಂಗಯ್ಯ, 57 ವರ್ಷ, ಘಟಕ ವ್ಯವಸ್ಥಾಪಕರು, ಬಾಗೇಪಲ್ಲಿ ಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೇಂದರೆ ದಿನಾಂಕ: 16-04-2021 ರಂದು ಕ.ರಾ.ರ.ಸಾ.ಸಂಸ್ಥೆ, ಚಿಕ್ಕಬಳ್ಳಾಪುರ ವಿಭಾಗ, ಬಾಗೇಪಲ್ಲಿ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಸಿ.ಟಿ ನರಸಿಂಹಮೂರ್ತಿ, ಸಂಚಾರ ನಿಯಂತ್ರಕರು ರವರು ವಾಟ್ಸಾಪ್ ನಲ್ಲಿ ಆಡಿಯೋ ಮಾಡಿ, ಎಲ್ಲಾ ಸಾರಿಗೆ ಸಂಸ್ಥೆಯ ನೌಕರರು ಕರ್ತವ್ಯಕ್ಕೆ ಯಾವುದೇ ಕಾರಣಕ್ಕೂ ಹಾಜರಾಗ ಬಾರದೆಂದು ಹಾಗೂ ಯಾವುದೇ ಸಾರ್ವಜನಿಕರು ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಓಡಾಡಬಾರದೆಂದು ಧಮ್ಕಿ ಹಾಕುತ್ತ, ಎಲ್ಲಾ ಚಾಲನಾ ಸಿಬ್ಬಂದಿಗಳು ಕೆಲಸಕ್ಕೆ ಹಾಜರಾಗದಂತೆ, ಮುಷ್ಕರ ಹಾಗೂ ಧರಣಿಯಲ್ಲಿ ಭಾಗವಹಿಸುವಂತೆ, ಪ್ರಚೋದನೆ ನೀಡಿದ್ದು. ಮಾನ್ಯ ಘನ ಸರ್ಕಾರವು, ಉಲ್ಲೇಖ ಸಂಖ್ಯೆ TD118 TCO 2020(P), DATED: 01-02-2021ರ ಪತ್ರದಲ್ಲಿ ತಿಳಿಸಿರುವಂತೆ, ಕರ್ನಾಟಕ ರಾಜ್ಯದ ಸಾರ್ವಜನಿಕರು ಹಿತಾಸಕ್ತಿಯಿಂದ, ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಯಾವುದೇ ರೀತಿಯ ಮುಷ್ಕರ ಅಥವಾ ಧರಣಿಗಳನ್ನು ಕರ್ನಾಟಕ ಸಾರ್ವಜನಿಕ ಉಪಯುಕ್ತ ಸೇವೆ ಕಾಯ್ದೆ-2013 ಆಡಿಯಲ್ಲಿ ದಿನಾಂಕ:01-01-2021 ರಿಂದ 30-06-2021 ರವರಗೆ ನಿರ್ಭಂದಿಸಿರುತ್ತದೆ. ಸದರಿರವರು ದಿನಾಂಕ:07-04-2021 ರಿಂದ  09-04-2021 ಕರ್ತವ್ಯಕ್ಕೆ ಅನಧಿಕೃತ ಗೈರುಹಾಜರಿಯಾಗಿರುತ್ತಾರೆ. ಹಾಗೂ ಉಲ್ಲೇಖ ಸಂಖ್ಯೆ/ಕರಾಸಾ/ಕೇಕ/ಸಂ/ಸಿ/ಆ,ವರ್ಗ/135/21-22 ದಿನಾಂಕ:09-04-2021 ರ ಆದೇಶದಂತೆ ಬಾಗೇಪಲ್ಲಿ ಘಟಕದಿಂದ ಚಾಮರಾಜನಗರ ವಿಭಾಗಕ್ಕೆ ಆಡಳಿತಾತ್ಮಕ ಕಾರಣದ ಮೇಲೆ ವರ್ಗಾವಣೆಯಾಗಿರುತ್ತಾರೆ. ಶ್ರೀ.ಸಿ.ಟಿ.ನರಸಿಂಹಮೂರ್ತಿ ರವರು ಮೊಬೈಲ್ ನಲ್ಲಿ ಮಾನ್ಯ ಸಾರಿಗೆ ಸಚಿವರ ಕಾರ್ಯವೈಖರಿ ಕುರಿತು ಅವಹೇಳನಕಾರಿ ಆಡಿಯೋ ಕ್ಲಿಪ್ ಮಾಡಿ ಅಪ್ ಲೋಡ್ ಮಾಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಸಾರಿಗೆ ಸಿಬ್ಬಂದಿಗಳಿಗೆ ಕರ್ತವ್ಯಕ್ಕೆ ಹಾಜರಾಗದಂತೆ ವಾಟ್ಸಾಪ್ ಮೂಲಕ ಆಡಿಯೋ ಮಾಢಿ, ಮುಷ್ಕರ ಹಾಗೂ ಧರಣಿಗೆ ಪ್ರಚೋದನೆ ನೀಡಿದ ಬಾಗೇಪಲ್ಲಿ ಘಟಕದ ಶ್ರೀ ನರಸಿಂಹಮೂರ್ತಿ, ಸಂಚಾರ ನಿಯಂತ್ರಕರು ರವರ ಮೇಲೆ ಕಾನೂನು ಬಾಹಿರ ಮುಷ್ಕರಕ್ಕೆ ಪ್ರಚೋದನೆ ನೀಡುತ್ತಿರುವ ಕಾರಣ ESMA-2013 ಅಡಿಯಲ್ಲಿ ಹಾಗೂ ಸಂಬಂಧಪಟ್ಟ ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿದ ದೂರು.

 

2. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 99/2021 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ:17-04-2021 ರಂದು ಬೆಳಿಗ್ಗೆ 10-30 ಗಂಟೆಗೆ ಶ್ರೀ ರಾಜು ಸಿ.ಪಿ.ಐ ಬಾಗೇಪಲ್ಲಿ ವೃತ್ತ ಬಾಗೇಪಲ್ಲಿ ರವರು ಮಾಲು,ಆಸಾಮಿಗಳು, ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಸಾರಾಂಶವೇನೆಂದರೆ. ಈ ದಿನ ದಿನಾಂಕ:17-04-2021 ರಂದು ಬೆಳಗ್ಗೆ 9.00 ಗಂಟೆ  ಸಮಯದಲ್ಲಿ ನಾನು ಕಛೇರಿಯಲ್ಲಿದ್ದಾಗ ಬಾಗೇಪಲ್ಲಿ ಟೌನ್ ನ 10ನೇ ವಾರ್ಡ್ನ  ರಾಘವೇಂದ್ರ ಟಾಕೀಸ್ಗೆ ಹೋಗುವ ರಸ್ತೆಯ ಪಕ್ಕದಲ್ಲಿ ಯಾರೋ ಕೆಲವರು ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟಿನ ಜೂಜಾಟವಾಡುತ್ತಿರುವುದಾಗಿ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಸದರಿ ಜೂಜಾಟವಾಡುತ್ತಿದ್ದವರ ಮೇಲೆ ದಾಳಿ ನಡೆಸುವ ಸಲುವಾಗಿ ನಾನು ಹಾಗೂ ಸಿಬ್ಬಂದಿಗಳಾದ ಹೆಚ್.ಸಿ-156 ನಟರಾಜ್, ಪಿ.ಸಿ-01 ನರಸಿಂಹಪ್ಪ, ಪಿಸಿ 214 ಅಶೋಕ್, ಪಿಸಿ 276 ಸಾಗರ್ ರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-6399 ರಲ್ಲಿ ಕುಳಿತುಕೊಂಡು ಗೂಳೂರು ವೃತ್ತದ ಬಳಿಯಿದ್ದ ಪಂಚರನ್ನು ಬರಮಾಡಿಕೊಂಡು  ಪಂಚರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಬೆಳಗ್ಗೆ 9.15 ಗಂಟೆಗೆ ಗೂಳೂರು ಗ್ರಾಮದ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ರಾಘವೇಂದ್ರ ಟಾಕೀಸ್ಗೆ ಹೋಗುವ ರಸ್ತೆಯಲ್ಲಿ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಆಸಾಮಿಗಳು ಗುಂಪಾಗಿ ಕುಳಿತು ಅಂದರ್ 100 ಬಾಹರ್ 100 ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು, ಜೂಜಾಟವಾಡುತ್ತಿದ್ದ ಗುಂಪಿನ ಮೇಲೆ ಧಾಳಿ ಮಾಡಿ ಜೂಜಾಟವಾಡುತ್ತಿದ್ದ ಆಸಾಮಿಗಳಿಗೆ ಓಡಿಹೋಗದಂತೆ ಎಚ್ಚರಿಕೆ ನೀಡಿ ಸಮವಸ್ತ್ರದಲ್ಲಿದ್ದ ನಾನು ಮತ್ತು ಸಿಬ್ಬಂದಿಗಳು ಸುತ್ತುವರೆದು ಆಸಾಮಿಗಳನ್ನು ಹಿಡಿದುಕೊಂಡು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ 1] ಶಿವಶಂಕರ್ ಬಿನ್ ಲೇಟ್ ನರಸಿಂಹಪ್ಪ,  30 ವರ್ಷ, ವಾಲ್ಮೀಕಿ ಜನಾಂಗ, ಎಗ್ರೈಸ್ ಅಂಗಡಿಯಿಟ್ಟುಕೊಂಡು ವ್ಯಾಪಾರ, ವಾಸ 10ನೇ ವಾಡರ್್ ಏರ್ಟೆಲ್ ಟವರ್ ಬಳಿ, ಬಾಗೇಪಲ್ಲಿ ಪುರ, ಸ್ವಂತಸ್ಥಳ ಕಲ್ಲೂರಾಯನ ಕುಂಟೆ ಗ್ರಾಮ, ಪಾತಪಾಳ್ಯ ಹೋಬಳಿ, ಬಾಗೇಪಲ್ಲಿ ತಾಲ್ಲೂಕು, 2] ವಿಷ್ಣುವರ್ಧನ ಬಿನ್ ವೆಂಕಟನಾರಾಯಣ, 28 ವರ್ಷ, ನಾಯಕ ಜನಾಂಗ, ಹಣ್ಣಿನ ವ್ಯಾಪಾರ, ವಾಸ 8ನೇ ವಾರ್ಡ್, ಮಸೀದಿ ಹತ್ತಿರ, ಬಾಗೇಪಲ್ಲಿ ಪುರ 3] ಶಿವಕುಮಾರ್ ಬಿನ್ ಬೈಯ್ಯಪ್ಪ, 30 ವರ್ಷ, ವಕ್ಕಲಿಗರು, ಆಟೋಚಾಲಕ ವೃತ್ತಿ, ವಾಸ 3ನೇ ವಾರ್ಡ್, ಪಾತಬಾಗೇಪಲ್ಲಿ ರಸ್ತೆ, ಬಾಗೇಪಲ್ಲಿ ಪುರ. ಸ್ವಂತಸ್ಥಳ ಪಾತಬಾಗೇಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು .4] ಕೆ.ವಿ ಸೋಮು ಬಿನ್ ಲೇಟ್ ವೆಂಕಟರಾಮಪ್ಪ, 34 ವರ್ಷ, ಬಲಜಿಗರು, ಚಾಲಕ ವೃತ್ತಿ, ವಾಸ ಕೊತ್ತಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು 5] ವಿಷ್ಣುವರ್ಧನ ಬಿನ್ ಶಿವರಾಮಪ್ಪ, 35 ವರ್ಷ, ವಕ್ಕಲಿಗರು, ಚಾಲಕ ವೃತ್ತಿ, ವಾಸ 8ನೇ ವಾರ್ಡ್, ಬಿ.ಜಿ.ಎಸ್. ಶಾಲೆಯ ರಸ್ತೆ, ಬಾಗೇಪಲ್ಲಿ ಪುರ ಎಂದು ತಿಳಿಸಿದರು. ಸದರಿ ಆಸಾಮಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟವಾಡಲು ನಿಮ್ಮ ಬಳಿ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಇಲ್ಲವೆಂದು ತಿಳಿಸಿದರು.  ಸ್ಥಳದಲ್ಲಿ ಆಸಾಮಿಗಳು ಜೂಜಾಟವಾಡಲು ಬಳಸಿದ್ದ  ಒಟ್ಟು 52 ಇಸ್ಪೀಟ್ ಎಲೆಗಳು, ಪಣಕ್ಕಾಗಿ ಇಟ್ಟಿದ್ದ ಒಟ್ಟು 5,490/- ರೂ ಹಣವನ್ನು. ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು 5 ಜನ ಆರೋಪಿಗಳನ್ನು ವಶಕ್ಕೆ ಪಡೆದು ಆರೋಪಿಗಳ ಸಮೇತ ಬಾಗೇಪಲ್ಲಿ ಠಾಣೆಗೆ ಬೆಳಗ್ಗೆ 10.30 ಗಂಟೆಗೆ ಹಾಜರಾಗಿ ಮಾಲು ಮತ್ತು 5 ಜನ ಆರೋಪಿಗಳ ಸಮೇತ ಅಸಲು ಧಾಳಿ ಪಂಚನಾಮೆ ಮತ್ತು ವರಧಿಯನ್ನು ಠಾಣಾಧಿಕಾರಿಗಳಿಗೆ ನೀಡಿ ಮುಂದಿನ ಕಾನೂನು ಕ್ರಮ ಜರುಗಿಸಲು  ಸೂಚಿಸಿದ ಮೇರೆಗೆ ಠಾಣಾ ಎನ್ ಸಿ ಆರ್ ನಂ-98/2021 ರಂತೆ ಎನ್ ಸಿ ಆರ್ ನ್ನು ದಾಖಲಿಸಿಕೊಂಡಿರುತ್ತೆ.  ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ.  ದಿ: 17-04-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 155/2021 ಕಲಂ. 323,324,504,506,34 ಐ.ಪಿ.ಸಿ:-

          ದಿನಾಂಕ:17/04/2021 ರಂದು ಚಿಂತಾಮಣಿ ಸರ್ಕಾರಿ ಅಸ್ಪತ್ರೆಯಲ್ಲಿ ಗಾಯಾಳು ದೇವರಾಜು ಬಿನ್ ಕದಿರಪ್ಪ, 26 ವರ್ಷ, ನಾಯಕರು, ಕೂಲಿಕೆಲಸ, ಕೇತನಾಯಕನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಮದ್ಯಾಹ್ನ 12.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ದಿನಾಂಕ: 16/04/2021 ರಂದು ಸಂಜೆ ತನ್ನ ತಂದೆಯಾದ ಕದಿರಪ್ಪ ರವರು ತಮ್ಮ ತೋಟದ ಕಡೆ ಹೋಗುತ್ತಿದ್ದಾಗ ತಮ್ಮ ಗ್ರಾಮದ ವಾಸಿಗಳಾದ ಅರುಣ್ ಕುಮಾರ್ ಬಿನ್ ಕೃಷ್ಣಪ್ಪ, ಕೃಷ್ಣಪ್ಪ ಬಿನ್ ಪಿಳ್ಳಪ್ಪ ಮತ್ತು ಕದಿರಮ್ಮ ಕೋಂ ಕೃಷ್ಣಪ್ಪ ರವರು ನಮ್ಮ ಜಮೀನಿನಲ್ಲಿ ಹೋಗಬಾರದೆಂದು ತನ್ನ ತಂದೆಯ ಮೇಲೆ ಜಗಳ ಮಾಡಿರುತ್ತಾರೆ. ಈ ದಿನ ದಿನಾಂಕ: 17/04/2021 ರಂದು ಬೆಳಿಗ್ಗೆ 08.00 ಗಂಟೆ ಸಮಯದಲ್ಲಿ ತಾನು ತನ್ನ ಮನೆಯ ಬಳಿ ಇದ್ದಾಗ ಮೇಲ್ಕಂಡ ಅರುಣ್ ಕುಮಾರ್, ಕೃಷ್ಣಪ್ಪ ಮತ್ತು ಕದಿರಮ್ಮ ರವರು ಹೋಗುತ್ತಿದ್ದು ತಾನು ಅವರನ್ನು ನೋಡಿ ಏಕೆ ನನ್ನ ತಂದೆ ಮೇಲೆ ಗಲಾಟೆ ಮಾಡಿರುವುದು ಎಂದು ಕೇಳಿದ್ದಕ್ಕೆ ಅವರು ತನ್ನ ಮೇಲೆ ಜಗಳ ತೆಗೆದು ತನ್ನನ್ನು ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿರುತ್ತಾರೆ. ಆ ಪೈಕಿ ಅರುಣ್ ಕುಮಾರ್ ಕಲ್ಲಿನಿಂದ ತನ್ನ ಬಲಕಣ್ಣಿನ ಮೇಲೆ ಹೊಡೆದಿದ್ದರಿಂದ ತನ್ನ ಕಣ್ಣಿಗೆ ಊತದ ಗಾಯವಾಗಿರುತ್ತೆ. ಕೃಷ್ಣಪ್ಪ ಹಾಗೂ ಕದಿರಮ್ಮ ರವರು ತನ್ನನ್ನು ಕುರಿತು ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿನ್ನನ್ನು ಬಿಡುವುದಿಲ್ಲ ಎಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

4. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 59/2021 ಕಲಂ. 341,186,34 ಐ.ಪಿ.ಸಿ & 5 The Karnataka essential services maintenance act, 2013:-

          ದಿನಾಂಕ 17/04/2021 ರಂದು ಪಿರ್ಯಾದುದಾರರಾದ ಶ್ರೀ ಅಪ್ಪಿರೆಡ್ಡಿ ಘಟಕ  ವ್ಯವಸ್ಥಾಪಕರು, ಕೆ.ಎಸ್.ಆರ್.ಟಿ.ಸಿ, ಚಿಂತಾಮಣಿ ಘಟಕ ರವರು  ನಿಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ;07/04/2021 ರಿಂದ ಮುಂದುವರೆದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ) ರವರು ತಮ್ಮ ವಿವಿದ ಬೆಡಿಕೆಗಳ ಹಿಡೇರಿಕೆಗಾಗಿ ಒತ್ತಾಯಿಸಿ ಅನಿರ್ಧಿಷ್ಟ ಅವದಿಯ ಮುಷ್ಕರಕ್ಕೆ ಕರೆ ನೀಡಿದ್ದು. ನೌಕರರ ಕೂಟದ ಪದಾದಿಕಾರಿಗಳು/ ಸಕ್ರಿಯ ಕಾರ್ಯಕರ್ತರುಗಳು ಈ ಸಂಬಂದ ಹಲವು ಬಗೆಯ ಪ್ರತ್ರಿಭಟನೆಗಳನ್ನು ನಡೆಸುತ್ತಿದ್ದಾರೆ. ಘನ ಕರ್ನಾಟಕ ಸರ್ಕಾರವು ದಿನಾಂಕ;-09/04/2021 ರಂದು ಹೊರಡಿಸಿರುವ ತನ್ನ ಆದೇಶ ಸಂಖ್ಯೆ; ಕಾ/ ಇಲಾಖೆ/ 174/ ಐ ಡಿ ಎಮ್/2020-21 ರಲ್ಲಿ ಸದರಿ ಮುಷ್ಕರವನ್ನು ಕಾನೂನು ಬಾಹಿರವೆಂದು ತಿಳಿಸಿ ಈ ತಕ್ಷಣದಿಂದ ಜಾರಿಗೆ ಬರುವಂತೆ ನಿಷೆದಿಸಿಲಾಗಿದೆ ಯೆಂದು ಆದೇಶಿಸಲಾಗಿದೆ. ಇದಲ್ಲದೆ ಮಾನ್ಯ ಘನ ಕರ್ನಾಟಕ ಸರ್ಕಾರವು ಅದಿಸೂಚನಯ ಸಂಖ್ಯೆ ಕಾ ಇ 98ಎಲ್ ಡಬ್ಯ್ಲೂಎ 2020 ದಿನಾಂಕ;22/01/2021 ರಲ್ಲಿ ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ದಿನಾಂಕ01.01.2021 ರಿಂದ ಜಾರಿಗೆ ಬರುವಂತೆ ಮುಂದಿನ 6 ತಿಂಗಳ ಅವದಿಗೆ ಕೈಗಾರಿಕಾ ವಿವಾದಗಳ ಅದಿನಿಯಮ 1947(ಕೇಂದ್ರಾದಿನಿಯಮ 1947 ರ ಸಂಖ್ಯೆ 14) ಸೆಕ್ಷನ್ 02(ಖಂಡ-ಎನ್).ಉಪ ಖಂಡ(6)ರ ಮೇರೆಗೆ ಸಾರ್ವಜನಿಕ  ಉಪಯುಕ್ತ ಸೇವೆ ಎಂದು ಘೋಷಿಸಿರುತ್ತದೆ. ಆದರೆ ಈ ಕೆಳಗೆ ತಿಳಿಸಿರುವ ಕರ್ನಾಟಕ ರಾಜ್ಯ ಸಾರಿಗೆ ನೌಕರರ ಕೂಟ(ರಿ)ದ ಪದಾಧಿಕಾರಿಗಳು/ಸಕ್ರಿಯ ಕಾರ್ಯಕರ್ತರು/ಸದಸ್ಯರುಗಳು ಸರ್ಕಾರದ ಆದೇಶವನ್ನು ತಿರಸ್ಕರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುತ್ತಾರೆ. ಹಾಗೂ ಕರ್ತವ್ಯ ನಿರ್ವಹಿಸಲು ಘಟಕಕ್ಕೆ ಆಗಮಿಸುವ ನಿಷ್ಠಾವಂತ ನೌಕರರನ್ನು ತಡೆದು ಅವರು ಕರ್ತವ್ಯಕ್ಕೆ ಹಾಜರಾಗದಂತೆ ಪ್ರಚೋದನೆ ನೀಡುವುದು. ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕ ನಿರ್ವಾಹಕರನ್ನು ತಡೆದು ಅವರುಗಳಿಗೆ ಮುಷ್ಕರದ ಸಮಯದಲ್ಲಿ ಕೆಲಸಕ್ಕೆ ಹೋಗಬೇಡಿ ಎಂದು ಹೇಳಿ ಕರ್ತವ್ಯಕ್ಕೆ ಅಡ್ಡಿ ಪಡಿಸುವುದು, ಮತ್ತು ಸಾಮಾಜಿಕ ಜಾಲತಾಣಗಳಾದ ವಾಟ್ಸಪ್ ಪೇಸ್ ಬುಕ್ ಮೂಲಕ ಹಲವು ಬಗೆಯ ಸಂದೇಶಗಳನ್ನು ಕಳುಹಿಸಿ ನೌಕರರು, ಕರ್ತವ್ಯಕ್ಕೆ ಹಾಜರಾಗದಂತೆ ಪ್ರಚೋದನೆ ನೀಡುತ್ತಿರುತ್ತಾರೆ. ದಿನಾಂಕ 07/04/2021 ರಿಂದ ಮುಂದುವರೆದಂತೆ ಚಿಂತಾಮಣಿ ಘಟಕ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಮುಷ್ಕರ ನಡೆಸಿ. ಮುಷ್ಕರ ನಡೆಸುವಂತೆ ಇತರೆ ಸಿಬ್ಬಂದಿಗಳಿಗೆ ಪ್ರಚೋದನೆ ನೀಡಿ ಸಾರ್ವಜನಿಕರಿಗೆ ತೊಂದರೆ ನೀಡಿ ಸಂಸ್ಥೆ ಹಾಗೂ ಸರ್ಕಾರದ ಆದೇಶಗಳನ್ನು ಉಲ್ಲಂಘನೆ ಮಾಡಿರುವ ಈ ಕೆಳಕಂಡ ಸಿಬ್ಬಂದಿಗಳಾದ  ಮುನೇಶ್ ಚಾಲಕ ಬಿ. ನಂ1284 , ಮುತ್ತಪ್ಪ  ದೊಡ್ಡ ಮನಿ ಚಾಲಕ ಬಿ. ನಂ 224, ಗದಿಗಪ್ಪ  ಮಡಿವಾಳ್ ಚಾಲಕ ಬಿ. ನಂ 3141, ರಹಮತ್ತುಲ್ಲಾ ಚಾ/ನಿ ಬಿ. ನಂ 2887, ಬಾಬು ರಾಜೇಂದ್ರ ಪ್ರಸಾದ್ ನಿರ್ವಾಹಕ  ಬಿ. ನಂ 2419, ವೆಂಕಟೇಶ್ ಬಾಬು ಚಾ/ನಿ ಬಿ. ನಂ 6010   ರವರ ವಿರುದ್ದ  ಕಾನೂನು ಕ್ರಮ ಜರುಗಿಸುವಂತೆ  ಕೋರಿ ದೂರು.

 

5. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 87/2021 ಕಲಂ. 279,304(A) ಐ.ಪಿ.ಸಿ:-

          ದಿನಾಂಕ:17/04/2021 ರಂದು ಬೆಳಿಗ್ಗೆ 6-45 ಗಂಟೆಯಲ್ಲಿ  ಆಂದ್ರಪ್ರದೇಶದ, ಪೆನುಗೊಂಡ ತಾಲ್ಲೂಕು, ಪರಗಿ ಗ್ರಾಮದ ವಾಸಿಯಾದ ಶ್ರೀಮತಿ ದಿವ್ಯಾ ಕೋಂ ಆನಂದಕುಮಾರ್, 24 ವರ್ಷ, ನಾಯಕ ಜನಾಂಗ ಇವರು ಠಾಣೆಗೆ ಬಂದು ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ,  ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ನನ್ನ ತವರೂರು ಗೌರೀಬಿದನೂರು ತಾಲ್ಲೂಕು, ಗಂಗಸಂದ್ರ ಗ್ರಾಮವಾಗಿರುತ್ತೆ.   ನನಗೆ  ಈಗ್ಗೆ 6 ವರ್ಷಗಳ ಹಿಂದೆ ಆಂದ್ರಪ್ರದೇಶದ, ಪೆನುಗೊಂಡ ತಾಲ್ಲೂಕು,  ಪರಗಿ ಗ್ರಾಮದ ಆನಂದಕುಮಾರ್ ಬಿನ್ ಕೆ.ಕೃಷ್ಣಪ್ಪ ಎಂಬುವವರೊಂದಿಗೆ ಮಧುವೆಯಾಗಿದ್ದು, ನಮಗೆ ಮಕ್ಕಳಿ ಇರುವುದಿಲ್ಲ.   ನನ್ನ ಗಂಡ ಆನಂದಕುಮಾರ್ ರವರಿಗೆ ಈಗ ಸುಮಾರು 30 ವರ್ಷ ವಯಸ್ಸಾಗಿರುತ್ತೆ.  ನನ್ನ ಗಂಡ ಮನೆಗಳಿಗೆ ಟೈಲ್ಸ್ ಹಾಕುವ  ಕೆಲಸ ಮಾಡುತ್ತಿದ್ದರು.   ಪ್ರತೀ ದಿನ ಬೆಳಿಗ್ಗೆ 6-00 ಗಂಟೆಗೆ ಒಪ್ಪಂದ ಮಾಡಿಕೊಂಡಿರುವ ಮನೆಗಳಿಗೆ ಹೋಗಿ ಟೈಲ್ ಹಾಕಿ ರಾತ್ರಿ 9-00 ಗಂಟೆಗೆ ವಾಪಸ್ಸು ಬರುತ್ತಿದ್ದರು.   ಕಳೆದ ಒಂದು ವಾರದಿಂದ ದೊಡ್ಡಬಳ್ಳಾಪುರದಲ್ಲಿ ಕೆಲಸ ಮಾಡುತ್ತಿದ್ದರು.   ದಿನಾಂಕ;16/04/2021 ರಂದು ಬೆಳಿಗ್ಗೆ 6-00 ಗಂಟೆಗೆ  ನನ್ನ ಗಂಡ KA.05.HU.7997 PASSION PRO ದ್ವಿಚಕ್ರ ವಾಹನದಲ್ಲಿ ದೊಡ್ಡಬಳ್ಳಪುರಕ್ಕೆ  ಹೋಗಿದ್ದರು.   ದಿನಾಂಕ:16/04/2021 ರಂದು  ರಾತ್ರಿ  ನನ್ನ ಗಂಡನಿಗೆ ಗೌರೀಬಿದನೂರು ತಾಲ್ಲೂಕು, ಗೌರೀಬಿದನೂರು ಹಿಂದೂಪುರ ರಸ್ತೆ, ಕುಡುಮಲಕುಂಟೆ ಕ್ರಾಸ್ ಬಳಿ  ತನ್ನ ದ್ವಿಚಕ್ರ ವಾಹನದಿಂದ ಬಿದ್ದು, ಸ್ವತಃ ಗಾಯಗೊಂಡಿರುವುದಾಗಿ, ಇವರನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಯಿತು.  ಈ ದಿನ ದಿನಾಂಕ:17/04/2021 ರಂದು ಬೆಳಿಗ್ಗೆ 7-00 ಗಂಟೆಗೆ ಬಂದು ನೋಡಲಾಗಿ, ನನ್ನ ಗಂಡನಿಗೆ ತಲೆ ಮುಖಕ್ಕೆ ಬಲಕೈಗೆ ರಕ್ತಗಾಯಗಳಾಗಿ ಮೃತಪಟ್ಟಿದ್ದರು. ನಂತರ ನಾವು ಕುಡುಮಲಕುಂಟೆ ಕ್ರಾಸ್ ಬಳಿ ಹೋಗಿ ವಿಚಾರಿಸಲಾಗಿ, ಅಲ್ಲಿನ ಜನರು  ನನ್ನ ಗಂಡ  ದಿನಾಂಕ:16/04/2021 ರಂದು ಸಂಜೆ ಸುಮಾರು 8-00 ಗಂಟೆಯಲ್ಲಿ   ನನ್ನ  ಗಂಡ KA.05.HU.7997 PASSION PRO ದ್ವಿಚಕ್ರ ವಾಹನದಲ್ಲಿ ಗೌರೀಬಿದನೂರು ಕಡೆಯಿಂದ ಹಿಂದೂಪುರ ಕಡೆಗೆ ಬರುತ್ತಿದ್ದಾಗ  ಕುಡುಮಲಕುಂಟೆ ಕ್ರಾಸ್ ಬಳಿ ಶನಿಮಹಾತ್ಮ ದೇವಸ್ಥಾನದ ಸಮೀಪ ತನ್ನ ದ್ವಿಚಕ್ರವಾಹನವನ್ನು ವೇಗವಾಗಿ ಅಜಾಗರುಕತೆಯಿಂದ ಚಾಲನೆ ಮಾಡುತ್ತಿದ್ದರಿಂದ ಮುಂದೆ ಹೋಗುತ್ತಿದ್ದ ಬಂಡಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ, ಅಯತಪ್ಪಿ ದ್ವಿಚಕ್ರ ವಾಹನದಿಂದ ಕೆಳಕ್ಕೆ ಟಾರು ರಸ್ತೆಯ ಮೇಲೆ  ಬಿದ್ದು, ತೀವ್ರವಾಗಿ ಗಾಯಗೊಂಡಿದ್ದು, ಇವರನ್ನು 108 ಆಂಬುಲೆನ್ಸ್ ನಲ್ಲಿ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು,  ನಾವು ಬರುವಷ್ಟರಲ್ಲಿ ಗುಣ ಮುಖನಾಗದೇ ಮೃತಪಟ್ಟಿರುವುದಾಗಿ ತಿಳಿದು ಬಂದಿರುತ್ತೆ.ದಿನಾಂಕ:16/04/2021` ರಂದು  ನನ್ನ ಗಂಡ ಆನಂದಕುಮಾರ್  ಬಿನ್  ಲೇಟ್ ಕೆ.ಕೃಷ್ಣಪ್ಪ ರವರು  ಸಂಜೆ ಕೆಲಸ ಮುಗಿಸಿಕೊಂಡು, ಗೌರೀಬಿದನೂರು ಹಿಂದೂಪುರ ಮಾರ್ಗವಾಗಿ ಪರಗಿಗೆ ಬರಲು, ಗೌರೀಬಿದನೂರು ಹಿಂದೂಪುರ ರಸ್ತೆ, ಕುಡುಮಲಕುಂಟೆ ಕ್ರಾಸ್ ಬಳಿ, ತನ್ನ KA.05.HU.7997 PASSION PRO ದ್ವಿಚಕ್ರ ವಾಹನವನ್ನು ಅತಿವೇಗ ಹಾಗು ಅಜಾಗರೂಕತೆ ಯಿಂದ ಚಾಲನೆ ಮಾಡಿಕೊಂಡು ಬಂದು ಮುಂದೆ ಹೋಗುತ್ತಿದ್ದ ಬಂಡಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ, ಅಯತಪ್ಪಿ ದ್ವಿಚಕ್ರ ವಾಹನದಿಂದ ಕೆಳಕ್ಕೆ ಟಾರು ರಸ್ತೆಯ ಮೇಲೆ  ಬಿದ್ದು, ತೀವ್ರವಾಗಿ ಗಾಯಗೊಂಡು, ಮೃತಪಟ್ಟಿರುತ್ತಾರೆ.  ನನ್ನ ಗಂಡನ ಸಾವಿನ ಬಗ್ಗೆ ಸರಿಯಾದ ಕಾರಣವನ್ನು ತಿಳಿದುಕೊಂಡು ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿರುವುದಾಗಿ, ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಇದ್ದ ದೂರಿನ ಮೇರೆಗೆ ಠಾಣೆಯಲ್ಲಿ ಮೊ.ಸಂ.87/2021 ಕಲಂ: 279,304 (ಎ) ಐಪಿಸಿ ರೀತ್ಯಾ ಕೇಸು ದಾಖಲು ಮಾಡಿಕೊಂಡಿರುತ್ತೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 89/2021 ಕಲಂ. 32,34 ಕೆ.ಇ ಆಕ್ಟ್:-

          ದಿನಾಂಕ 17/04/2021 ರಂದು ರಾತ್ರಿ 19-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ. ಮೋಹನ್.ಎನ್. ಪಿ.ಎಸ್.ಐ , ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:17/04/2021 ರಂದು ಸಂಜೆ 16-00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ಉಪ ವಿಭಾಗದ DYSP ಶ್ರೀ ಕೆ. ರವಿಶಂಕರ್ ರವರು ಗೌರೀಬಿದನೂರು ನಗರದಲ್ಲಿನ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ದಲಿತ ಮುಖಂಡುರುಗಳ ಕುಂದುಕೊರತೆ ಸಭೆಗಾಗಿ ಅವರ ಕಛೇರಿಯ ಸಿಬ್ಬಂದಿಯಾದ ಹೆಚ್.ಸಿ-59 ಶ್ರೀನಿವಾಸ,  ಪಿ.ಸಿ- 286 ಗೌತಮ್, ಹಾಗೂ ಜೀಪ್ ಚಾಲಕ ಎಪಿಸಿ-119 ಅಶೋಕ ರವರೊಂದಿಗೆ ಇಲಾಖಾ ಜೀಪ್ ಸಂಖ್ಯೆ ಕೆಎ-40, ಜಿ-0855 ರಲ್ಲಿ ಗೌರೀಬಿದನೂರು ನಗರಕ್ಕೆ ಬಂದಿದ್ದು, ಸಂಜೆ 17-00 ಗಂಟೆಗೆ ಗೌರೀಬಿದನೂರು ಗ್ರಾಮಾಂತರ ಪಿ.ಎಸ್.ಐ ಮೋಹನ್ ಎನ್ ಆದ ನನಗೆ ಗೌರೀಬಿದನೂರು ಗ್ರಾಮಾಂತರ ಠಾಣಾ ಸರಹದ್ದಿನ ಕುಡುಮಲಕುಂಟೆ ಗ್ರಾಮದಲ್ಲಿ ಯಾರೋ ಆಸಾಮಿಯು ತನ್ನ ಪೆಟ್ಟಿಗೆ ಅಂಗಡಿಯ ಮುಂಭಾಗದಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯವನ್ನು ದಾಸ್ತಾನು ಮಾಡಿ ಮಾರಾಟ ಮಾಡುತ್ತಿರುವುದಾಗಿ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ನಾನು ಸದರಿ ಮಾಹಿತಿಯನ್ನು ಚಿಕ್ಕಬಳ್ಳಾಪುರ ಉಪ ವಿಭಾಗದ DYSP  ಶ್ರೀ ಕೆ. ರವಿಶಂಕರ್  ರವರಿಗೆ ತಿಳಿಸಿ  ನಾನು ಮತ್ತು ಚಿಕ್ಕಬಳ್ಳಾಪುರ ಉಪ ವಿಭಾಗದ DYSP ಶ್ರೀ ಕೆ. ರವಿಶಂಕರ್  ರವರು ಮತ್ತು ಅವರ ಕಛೇರಿಯ ಸಿಬ್ಬಂದಿಯಾದ ಹೆಚ್.ಸಿ-59 ಶ್ರೀನಿವಾಸ,  ಪಿ.ಸಿ- 286 ಗೌತಮ್, ಹಾಗೂ ಜೀಪ್ ಚಾಲಕ ಎಪಿಸಿ-119 ಅಶೋಕ ರವರು DYSP ಶ್ರೀ ಕೆ. ರವಿಶಂಕರ್ ರವರ ಇಲಾಖಾ ಜೀಪ್ ಸಂಖ್ಯೆ ಕೆಎ-40, ಜಿ-0855 ರಲ್ಲಿ ಕುಡುಮಲಕುಂಟೆ  ಗ್ರಾಮಕ್ಕೆ ಸಂಜೆ 17-30 ಗಂಟೆಗೆ ಹೋಗಿ ಗ್ರಾಮದಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರಿಗೆ ಮಾಹಿತಿ ತಿಳಿಸಿ ನಾನು DYSP ಶ್ರೀ ಕೆ. ರವಿಶಂಕರ್ ರವರು ಹಾಗೂ ಅವರ ಸಿಬ್ಬಂದಿ ಪಂಚಾಯ್ತಿದಾರರೊಂದಿಗೆ ಕುಡುಮಲಕುಂಟೆ ಗ್ರಾಮದ ಬಸ್ ನಿಲ್ದಾಣಕ್ಕೆ ಹೋಗಿ ಬಸ್ ನಿಲ್ದಾಣದಿಂದ ಕಾಲ್ನಡಿಗೆಯಲ್ಲಿ ನಡೆದುಕೊಂಡು ನಾಗರಾಜು ಎಂಬುವರ ಪೆಟ್ಟಿಗೆ ಅಂಗಡಿಯ ಬಳಿ ಹೋದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ಮತ್ತು ಸಿಬ್ಬಂದಿಯನ್ನು ನೋಡಿ ಯಾರೋ ಒಬ್ಬ ಆಸಾಮಿ  ಓಡಿ ಹೋಗಲು ಪ್ರಯತ್ನಿಸಿದಾಗ  ನಾವು ಮತ್ತು ಸಿಬ್ಬಂದಿಯವರು ಬೆನ್ನಟ್ಟಿ ಆಸಾಮಿಯನ್ನು ಹಿಡಿದುಕೊಂಡು ಆಸಾಮಿಯ ಹೆಸರು ವಿಳಾಸ ಕೇಳಲಾಗಿ ನಾಗರಾಜು ಬಿನ್ ಲೇಟ್ ನ್ಯಾತಪ್ಪ, 37 ವರ್ಷ, ಪ.ಜಾತಿ, ಕುಡುಮಲಕುಂಟೆ ಗ್ರಾಮ, ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದ್ದು ಆಸಾಮಿಗೆ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡಲು ಪರವಾನಗಿ ಬಗ್ಗೆ ಕೇಳಲಾಗಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದರಿಂದ ಆತನ ಅಂಗಡಿಯ ಮುಂಭಾಗದಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಪಂಚರ ಸಮಕ್ಷಮ ಪರಿಶೀಲಿಸಲಾಗಿ ಅದರಲ್ಲಿ 90 ML ಸಾಮರ್ಥ್ಯದ HAYWARDS CHEERS WHISKY ಯ ಒಟ್ಟು 35 ಟೆಟ್ರಾ ಪ್ಯಾಕೆಟ್ ಗಳು, ಇದ್ದು ಅವುಗಳ ಒಟ್ಟು ಬೆಲೆ 1,229/-ರೂಗಳಾಗಿರುತ್ತೆ, ಇದರ ಒಟ್ಟು ಪ್ರಮಾಣ 03 ಲೀಟರ್ 150 ಎಂ.ಎಲ್ ಆಗಿರುತ್ತೆ. 180 ML ಸಾಮರ್ಥ್ಯದ OLD TAVARIN  WHISKY ಯ ಒಟ್ಟು 23 ಟೆಟ್ರಾ ಪ್ಯಾಕೆಟ್ ಗಳು, ಇದ್ದು ಅವುಗಳ ಒಟ್ಟು ಬೆಲೆ 1995/- ರೂಗಳಾಗಿರುತ್ತೆ, ಇದರ ಒಟ್ಟು ಪ್ರಮಾಣ 04 ಲೀಟರ್ 140 ಎಂ.ಎಲ್ ಆಗಿರುತ್ತೆ. ಇವುಗಳ ಒಟ್ಟು ಬೆಲೆ 3,224/- ರೂಗಳು ಆಗಿದ್ದು, ಒಟ್ಟು 07 ಲೀಟರ್ 290 ML ಸಾಮರ್ಥ್ಯದ ಮದ್ಯವಾಗಿರುತ್ತದೆ. ಇವುಗಳ ಪೈಕಿ FSL  ಪರೀಕ್ಷೆಗಾಗಿ  90 ML ಸಾಮರ್ಥ್ಯದ HAYWARDS CHEERS WHISKY ಯ 01 ಟೆಟ್ರಾ ಪ್ಯಾಕೇಟ್ ಮತ್ತು 180 ML ಸಾಮರ್ಥ್ಯದ OLD TAVARIN  WHISKY ಯ 01 ಟೆಟ್ರಾ ಪ್ಯಾಕೇಟನ್ನು ಅಲಾಯಿದೆಯಾಗಿ ತೆಗೆದು K  ಎಂಬ ಅಕ್ಷರದಿಂದ ಅರಗು ಮಾಡಿ ಸೀಲು ಮಾಡಿರುತ್ತೆ. ಸದರಿ ಮಾಲುಗಳನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮಾಲಿನೊಂದಿಗೆ ಆರೋಪಿತನಾದ ನಾಗರಾಜುನನ್ನು ಮುಂದಿನ ಕ್ರಮಕ್ಕಾಗಿ ವಶಕ್ಕೆ ಪಡೆದಿರುತ್ತೆ.     ಮೇಲ್ಕಂಡ ಮಾಲು ಮತ್ತು ಆರೋಪಿಯನ್ನು ಠಾಣೆಗೆ 19-00 ಗಂಟೆಗೆ ಬಂದು  ನಿಮ್ಮ ವಶಕ್ಕೆ ನೀಡುತ್ತಿದ್ದು ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಕೇಸು ದಾಖಲಿಸಿರುತ್ತೆ.

 

7. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 70/2021 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ:18/04/2020 ರಂದು ಬೆಳಿಗ್ಗೆ 11-15 ಗಂಟೆಗೆ ನ್ಯಾಯಾಲಯದ ಪಿಸಿ-198 ನಾಗೇಶ ರವರು ಠಾಣಾ NCR NO-97/2021 ರಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಘನ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಠಾಣೆಗೆ ಹಾಜರಾಗಿ ನೀಡಿದ ಪ್ರತಿಯ ಸಾರಾಂಶವೇನೆಂದರೆ: ದಿನಾಂಕ:17-04-2021 ರಂದು ಸಂಜೆ 03-30 ಗಂಟೆಯಲ್ಲಿ  ಪಿರ್ಯಾಧಿದಾರರು ಠಾಣೆಯಲ್ಲಿದ್ದಾಗ ಕ್ರೈಂ ಸಿಬ್ಬಂದಿಯಾದ ಸಿ.ಹೆಚ್.ಸಿ-29 ಶ್ರೀನಿವಾಸ ರವರು ಕರೆ ಮಾಡಿ  ಗುಡಿಬಂಡೆ ತಾಲ್ಲೂಕು ಎಲ್ಲೋಡು ಗ್ರಾಮದ ಅಂಗನವಾಡಿ ಹಿಂದೆ ಹುಣಸೆ ಮರದ ಕೆಳಗೆ ಕೆಲವರು  ಅಂದರ್-ಬಾಹರ್ ಜೂಜಾಟವಾಡುತ್ತಿರುವುದಾಗಿ ಖಚಿತ ಮಾಹಿತಿ ತಿಳಿಸಿದ ಮೇರೆಗೆ ನಾನು ಠಾಣೆಯ ಸಿಬ್ಬಂದಿ ಸಿ,ಪಿ,ಸಿ 277 ಸಂತೋಷ್, ಸಿಪಿಸಿ-92 ರವಿ ಸಿ,ಪಿ,ಸಿ 414 ಸಂತೋಷ್, ಸಿ,ಪಿ,ಸಿ-408 ರಮೇಶ್, ಸಿ,ಪಿ,ಸಿ 430 ಪ್ರದೀಪ್ ರವರಿಗೆ ಮಾಹಿತಿ ತಿಳಿಸಿ ದಾಳಿ ಮಾಡಲು  ದ್ವಿ ಚಕ್ರ ವಾಹನಗಳಲ್ಲಿ ಎಲ್ಲೋಡು ಗ್ರಾಮಕ್ಕೆ ಸಂಜೆ 4-00 ಗಂಟೆಗೆ ಹೋಗಿ ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ಗುಡಿಬಂಡೆ ತಾಲ್ಲೂಕು ಎಲ್ಲೋಡು ಗ್ರಾಮದ ಸಕರ್ಾರಿ ಅಂಗನವಾಡಿ ಕೇಂದ್ರ ಹಿಂದೆ ಹುಣಸೆ ಮರದ ಕೆಳಗೆ ಯಾರೋ ಕೆಲವರು ಸೇರಿಕೊಂಡು ಅಂದರ್ -ಬಾಹರ್ ಇಸ್ಪೀಟ್ ಜೂಜಾಟ ವಾಡುತ್ತಿರುವವರ ಮೇಲೆ ದಾಳಿ ಮಾಡುವುದಕ್ಕಾಗಿ ಪಂಚರಾಗಿ ಸಹಕರಿಸಬೇಕೆಂದು ಕೋರಿದಾಗ ಪಂಚರು ಒಪ್ಪಿಕೊಂಡಿದ್ದು ನಂತರ ನಾವುಗಳು ಮತ್ತು ಪಂಚರು ದ್ವಿ ಚಕ್ರವಾಹನಗಳಲ್ಲಿ ಎಲ್ಲೋಡು ಗ್ರಾಮದ ಅಂಗನವಾಡಿ ಕೇಂದ್ರದ ಬಳಿ 4-15 ಗಂಟೆಗೆ ಹೋಗಿ  ಅಂದರ ಬಾಹರ್ ಜೂಟಾಟವಾಡುತ್ತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಾವು ಹೋಗಿದ್ದ ಮೇಲ್ಕಂಡ ವಾಹನಗಳನ್ನು ನಿಲ್ಲಿಸಿ ನಾವು ಮತ್ತು ಪಂಚರು ಮರೆಯಲ್ಲಿ ನಿಂತುಕೊಂಡು ನೋಡಲಾಗಿ 06 ಜನರು ಸುತ್ತುವರೆದು 200 ರೂಪಾಯಿ ಅಂದರ್ ಎಂತಲೂ 200 ರೂಪಾಯಿ ಬಾಹರ್ ಎಂತಲೂ ಹಣವನ್ನು ಪಣವನ್ನಾಗಿಟ್ಟು ಅಂದರ್ -ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವವರನ್ನು ಪಂಚರ ಸಮಕ್ಷಮ ಸುತ್ತುವರೆದು ದಾಳಿ ಮಾಡಿ ಹಿಡಿದುಕೊಂಡಿದ್ದು ಸದರಿಯವರ ಹೆಸರು ಮತ್ತು ವಿಳಾಸಗಳನ್ನು ಕೇಳಲಾಗಿ 1) ಚಿನ್ನ ಆದೆಪ್ಪ ಬಿನ್ ಆದಿನಾರಾಯಣಪ್ಪ 49 ವರ್ಷ ನಾಯಕರು  ಜಿರಾಯ್ತಿ ವಾಸ: ಎಲ್ಲೋಡು  ಗ್ರಾಮ ಗುಡಿಬಂಡೆ ತಾಲ್ಲೂಕು 2)ವೆಂಕಟಪ್ಪ ಬಿನ್ ಪೆದನ್ನ 45 ವರ್ಷ ಆದಿ ಕನರ್ಾಟಕ ಕೂಲಿ ಕೆಲಸ ವಾಸ:ಎಲ್ಲೋಡು  ಗ್ರಾಮ ಗುಡಿಬಂಡೆ ತಾಲ್ಲೂಕು 3)ಆದಿ ನಾರಾಯಣಪ್ಪ  ಬಿನ್ ಪಾಲ್ಯಂ ರಾಮಯ್ಯ 52 ವರ್ಷ ನಾಯಕರು ಜಿರಾಯ್ತಿ ವಾಸ ಎಲ್ಲೋಡು ಗ್ರಾಮ ಗುಡಿಬಂಡೆ ತಾಲ್ಲೂಕು 4) ನಾಗರಾಜ ಬಿನ್ ಅಂಜಿನಪ್ಪ 35 ವರ್ಷ ನಾಯಕರು ಜಿರಾಯ್ತಿ ಕೆಲಸ ವಾಸ:ಎಲ್ಲೋಡು ಗ್ರಾಮ ಗುಡಿಬಂಡೆ ತಾಲ್ಲೂಕು 5) ಶಿವಶಂಕರಪ್ಪ ಬಿನ್ ಆದಿನಾರಾಯಣಪ್ಪ 30 ವರ್ಷ ಆದಿ ಕರ್ನಾಟಕ ಜನಾಂಗ, ಜಿರಾಯ್ತಿ ಕೆಲಸ ವಾಸ:ಎಲ್ಲೋಡು ಗ್ರಾಮ ಗುಡಿಬಂಡೆ ತಾಲ್ಲೂಕು 6)ಶಿವಾರೆಡ್ಡಿ ಬಿನ್ ಲೇಟ್ ನಾರಾಯಣರೆಡ್ಡಿ 65 ವರ್ಷ ವಕ್ಕಲಿಗ ಜನಾಂಗ, ಜಿರಾಯ್ತಿ ವಾಸ:ಎಲ್ಲೋಡು ಗ್ರಾಮ ಗುಡಿಬಂಡೆ ತಾಲ್ಲೂಕು ಎಂದು ತಿಳಿಸಿದ್ದು ಸ್ಥಳದಲ್ಲಿ ಪಣವಾಗಿಟ್ಟಿದ್ದ 21500/- ರೂಪಾಯಿ ನಗದು ಹಣವನ್ನು ಮತ್ತು 52 ಇಸ್ಪೀಟ್ ಎಲೆಗಳನ್ನು ಸಂಜೆ: 4-30 ಗಂಟೆಯಿಂದ 5-15 ಗಂಟೆಯವರಿಗೆ ಪಂಚನಾಮೆಯನ್ನು ಜರುಗಿಸಿ ಪಂಚನಾಮೆ ಮೂಲಕ ಮಾಲುಗಳನ್ನು ಅಮಾನತ್ತುಪಡಿಸಿಕೊಂಡು ಪಂಚನಾಮೆ ಮತ್ತು ಮಾಲಿನೊಂದಿಗೆ ಆರೋಪಿಗಳನ್ನು ಹಾಜರುಪಡಿಸುತ್ತಿದ್ದು ಮೇಲ್ಕಂಡವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ವರದಿ ದೂರು.

 

8. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 71/2021 ಕಲಂ. 15(ಎ), 32(3) ಕೆ.ಇ  ಆಕ್ಟ್:-

     ದಿನಾಂಕ:18/04/2021 ರಂದು ನ್ಯಾಯಾಲಯದ ಪಿ,ಸಿ 198 ರವರು ಠಾಣಾ ಎನ್,ಸಿ,ಆರ್ 90/2021 ರಲ್ಲಿ ಕ್ರಿನಿಲ್ ಪ್ರಕರಣವನ್ನು ದಾಖಲಿಸಲು ಅನುಮತಿ ಪಡೆದುಕೊಂದು ಬಂದ ವರದಿಯ ಸಾರಾಂಶವೇನೆಂದರೆ ದಿನಾಂಕ:16/04/2021 ರಂದು ಬೆಳಿಗ್ಗೆ:11.00 ಗಂಟೆಯಲ್ಲಿ ಪಿರ್ಯಾದಿದಾರರು ಠಾಣೆಯಲ್ಲಿದ್ದಾಗ ಠಾಣಾ 17 ನೇ ಬೀಟ್ ಸಿಬ್ಬಂದಿ ಸಿ,ಹೆಚ್,ಸಿ-28 ದಕ್ಷಿಣಾ ಮೂರ್ತಿ ರವರು ತನಗೆ ಪೋನ್ ಮಾಡಿ ತಾನು ಮತ್ತು ಠಾಣಾ ಸಿಬ್ಬಂದಿ ಸಿ,ಪಿ,ಸಿ 102 ಆನಂದ ರವರು ಗುಡಿಬಂಡೆ ತಾಲೂಕು ಕೊಂಡಾವಲಹಳ್ಳಿ ಗ್ರಾಮದಲ್ಲಿ ಗಸ್ತುನಲ್ಲಿರುವಾಗ ಅಶ್ವತ್ಥಪ್ಪ ಬಿನ್ ಪಾಪಣ್ಣ ರವರ ಮನೆಯ ಮುಂಬಾಗ ಸಾರ್ವಜನಿಕ ಸ್ಥಳದಲ್ಲಿ ಅಶ್ವತ್ಥಪ್ಪ ರವರು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ತಾನು ಠಾಣಾ ಸಿಬ್ಬಂದಿಯಾದ ಸಿ.ಹೆಚ್.ಸಿ-73 ಹನುಮಂತರಾಯಪ್ಪ ರವರನ್ನು ಕರೆದುಕೊಂಡು ಸರ್ಕಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎ,ಹೆಚ್,ಸಿ-43 ವೆಂಕಟಾ ಚಲ ರವರೊಂದಿಗೆ ಕೊಂಡಾವಲಹಳ್ಳಿ ಗ್ರಾಮಕ್ಕೆ ಬೆಳಿಗ್ಗೆ 11-30 ಗಂಟೆ ಸಮಯಕ್ಕೆ ಹೋಗಿ ಗ್ರಾಮದಲ್ಲಿದ್ದ ಮಾಹಿತಿ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ. ಪಂಚರೊಂದಿಗೆ ಅಶ್ವತ್ಥಪ್ಪ ರವರ ಚಿಲ್ಲರೆ ಅಂಗಡಿಯ ಸ್ವಲ್ಪ ದೂರದ ಮರೆಯಲ್ಲಿ ಜೀಪ್ ನ್ನು ನಿಲ್ಲಿಸಿ ಅಶ್ವತ್ಥಪ್ಪ ರವರ ಚಿಲ್ಲರೆ ಅಂಗಡಿಯ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಬೆಳಿಗ್ಗೆ 11-45 ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯನ್ನು ವಶಕ್ಕೆ ಪಡೆದು ಆತನ ಹೆಸರು & ವಿಳಾಸ ತಿಳಿಯಲಾಗಿ ಅಶ್ವತ್ಥಪ್ಪ ಬಿನ್ ಪಾಪಣ್ಣ 60 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ ವಾಸ:ಕೊಂಡಾವಲಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು, ಎಂದು ತಿಳಿಸಿದ್ದು. ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 10 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 02 ಖಾಲಿ ಟೆಟ್ರಾ ಪಾಕೆಟ್ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 03 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 900 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*10=351 /- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಮದ್ಯಾಹ್ನ 12-00 ಗಂಟೆಯಿಂದ ಮದ್ಯಾಹ್ನ 12-45 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಮದ್ಯಾಹ್ನ 1-15 ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಮದ್ಯಾಹ್ನ 13-30 ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ ದೂರಾಗಿರುತ್ತೆ.

 

9. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 41/2021 ಕಲಂ. 15(ಎ), 32(3) ಕೆ.ಇ  ಆಕ್ಟ್:-

     ದಿನಾಂಕ;18-04-2021 ರಂದು ಮದ್ಯಾಹ್ನ 15-10 ಗಂಟೆಗೆ ಆ ಉ ನಿ ಸಾಹೇಬರು ದಾಳಿಯಿಂದ  ಠಾಣೆಗೆ  ಆರೋಪಿ, ಮಾಲು ಮತ್ತು ಪಂಚನಾಮೆಯೊಂದಿಗೆ ಹಾಜರಾಗಿ ನೀಡಿದ ಜ್ಞಾಪನದ ಸಾರಾಂಶವೇನೆಂದರೆ  ತಾನು ಇದೇ ದಿನ  ದಿನಾಂಕ:-18-04-2021 ರಂದು  ಮದ್ಯಾಹ್ನ 13-00 ಗಂಟೆ ಸಮಯದಲ್ಲಿ ನಾನು ಸರ್ಕಾರಿ ಜೀಪು ಸಂಖ್ಯೆ  KA-40-G-1555  ರ ವಾಹನದಲ್ಲಿ  ಚಾಲಕ  ಪಾರೂಖ್ ಮತ್ತು  ಸಿಬ್ಬಂದಿಯಾದ  ರಾಮಕೃಷ್ಣ  ಮತ್ತು ಪ್ರಕಾಶ   ರವರೊಂದಿಗೆ  ನಂದಿ ಕ್ರಾಸಿನ ಕಡೆ   ಹಗಲು ಗಸ್ತಿನಲ್ಲಿದ್ದಾಗ  ಸಾಹೇಬರಿಗೆ  ಬಂದ  ಖಚಿತವಾದ ಮಾಹಿತಿ ಎನೆಂದರೆ  ಬೈಪಾಸಿನಲ್ಲಿರುವ ಮಯೂರ ಡಾಬಾದ ಬಳಿ ಅದರ ಮಾಲೀಕ ಯಾವುದೇ  ಪರವಾನಗಿಯನ್ನು ಪಡೆಯದೇ ತನ್ನ  ಢಾಭಾದ ಮುಂದೆ  ಸಾರ್ವಜನಿಕರಿಗೆ ಮದ್ಯವನ್ನು  ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು ಮಾಹಿತಿಯಂತೆ ದಾಳಿ ನಡೆಸಲು  ಚದಲಪುರ  ಗೇಟಿನ ಬಳಿ ಇದ್ದಂತಹ ಪಂಚರನ್ನು ಬರಮಾಡಿಕೊಂಡು ಅವರುಗಳ ಸಮಕ್ಷಮದಲ್ಲಿ ಮದ್ಯಾಹ್ನ 13-30 ಗಂಟೆಗೆ  ಮಯೂರ ಢಾಭಾದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಜನರು ಓಡಿ ಕುಡಿಯುತ್ತಿದ್ದ ಲೋಟಗಳನ್ನು ಬಿಸಾಡಿ ಓಡಿ ಹೋಗಿದ್ದು  ಢಾಭಾಧ ಅದರ ಮಾಲೀಕನ   ಹೆಸರು ವಿಳಾಸವನ್ನು ಕೇಳಲಾಗಿ  ನಟರಾಜು  ಬಿನ್  ಲೇಟ್ ಕಾಂತಪ್ಪ  42 ವರ್ಷ  ಲಿಂಗಾಯಿತರು  ಢಾಭಾದ ಮಾಲೀಕ  ವಿಜಯಪುರ  ನಗರ  ಎಂತಾ ತಿಳಿಸಿದ್ದು  ಇವನ  ಢಾಭಾದ  ಮುಂದೆ  ಒಂದು ಕವರಿದ್ದು  ಅದನ್ನು ಪರಿಶೀಲಿಸಲಾಗಿ ಅದರಲ್ಲಿ 1) 90 ML ಸಾಮರ್ಥದ   HAYWARDS CHEERS WHISKY  ಯ  20  TETRA  POCKET ಗಳಿದ್ದು ಪ್ರತಿ  ಪಾಕೇಟಿನ ಬೆಲೆ /- 35-13 ರೂ.ಎಂದು ಮುದ್ರಿತ ವಾಗಿರುತ್ತದೆ.ಇದು ಒಟ್ಟು-1800 ML ಮದ್ಯವಿದ್ದು ಒಟ್ಟು ಬೆಲೆ 703/- ರೂ ಆಗುತ್ತದೆ. 2) 5 ಖಾಲಿ ಲೋಟಗಳು 3) 5 ಖಾಲಿ ಟೆಟ್ರಾ ಪ್ಯಾಕೇಟುಗಳು ಸಿಕ್ಕಿದ್ದು ಇವುಗಳನ್ನು ತನ್ನ ಢಾಭಾದ ಬಳಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಸ್ಥಳವಕಾಶ ಮಾಡಿಕೊಟ್ಟ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು  ಢಾಬಾದ  ಮಾಲೀಕ  ನಟರಾಜು ಬಿನ್ ಲೇಟ್ ಕಾಂತಪ್ಪ ರವರನ್ನು  ಕೇಳಿದಾಗ ತನ್ನ ಬಳಿ ಯಾವುದೇ ಪರವಾನಗಿ  ಇಲ್ಲವೆಂದು ಹೇಳಿದ್ದು ಸದರಿ  ಮಾಲನ್ನು ಪಂಚರ ಸಮಕ್ಷಮ ಮದ್ಯಾಹ್ನ 13-40 ಗಂಟೆಯಿಂದ 14-40 ಗಂಟೆಯವರೆವಿಗೆ ಢಾಭಾಧ  ಬಳಿ ಮಹಜರ್ ಕ್ರಮವನ್ನು ಜರುಗಿಸಿ ಮೇಲ್ಕಂಡ ಸ್ಥಳದಲ್ಲಿ ದೊರೆತ 20 ಟೆಟ್ರಾ ಪ್ಯಾಖೆಟುಗಳನ್ನು  ಲೋಟಗಳನ್ನು  ಢಾಭಾದ ಮಾಲೀಕ  ನಟರಾಜನನ್ನು  ವಶಕ್ಕೆ ಪಡೆದುಕೊಂಡು ಠಾಣೆಗೆ ವಾಪಸ್ಸು ಬಂದು ವರದಿಯನ್ನು ನೀಡುತ್ತಿದ್ದು ಆರೋಪಿಯ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಲು  ನೀಡಿದ ದೂರಿನ ಮೇರೆಗೆ ಈ ಪ್ರವವರದಿ.

Last Updated: 18-04-2021 05:24 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080