ಅಭಿಪ್ರಾಯ / ಸಲಹೆಗಳು

 

1. ಡಿ.ಸಿ.ಬಿ/ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ. 19/2021 ಕಲಂ. 419,420 ಐ.ಪಿ.ಸಿ & 66(D),66(C) (INFORMATION TECHNOLOGY ACT 2008:-

     ದಿನಾಂಕ:18/3/2021 ರಂದು ಪಿರ್ಯಾಧಿ ಶ್ರೀ ನರಸಿಂಹರೆಡ್ಡಿ ಎನ್ ಬಿನ್ ನಾರಾಯಣಸ್ವಾಮಿ,38 ವರ್ಷ, ಒಕ್ಕಲಿಗರು. ಜಿರಾಯ್ತಿ ಕೆಲಸ, ವಾಸ ಅಕ್ಕಿಮಂಗಲ ಗ್ರಾಮ, ಚಿಂತಾಮಣಿ ತಾಲ್ಲೂಕು, ಮೊ ಸಂಖ್ಯೆ:9945968338 ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು ಹೆಚ್ ಕ್ರಾಸ್ ಎಸ್ ಬಿ ಐ ಬ್ಯಾಂಕ್ ಶಾಖೆಯಲ್ಲಿ ಉಳಿತಾಯ ಖಾತೆ ನಂ:64117285422 ರಂತೆ ಖಾತೆಯನ್ನು ಹೊಂದಿದ್ದು, ಸದರಿ ಖಾತೆಗೆ ಎಟಿಎಂ ಕಾರ್ಡ:5446 7000 3337 8304 ರಂತೆ ಕಾರ್ಡನ್ನು ಸಹ ಹೊಂದಿರುತ್ತೇನೆ.ಈಗಿರುವಲ್ಲಿ  ದಿನಾಕ:15/3/2021 ರಂದು ಮದ್ಯಾನಃ ಸುಮಾರು 02-30 ಗಂಟೆಯ ಸಮಯದಲ್ಲಿ ನಾನು ಮನೆಯಲ್ಲಿ ಇದ್ದಾಗ ಮೊ ಸಂಖ್ಯೆ:7407976287 ರಿಂದ ನನಗೆ ಕರೆ ಬಂದಿದ್ದು, ಸ್ವೀಕರಿಸಲಾಗಿ ನಾನು ಎಸ್ ಬಿ ಐ ಬ್ಯಾಂಕ್ ಮ್ಯಾನೇಜರ್ ಅಂತ ಒಬ್ಬ ಮಹಿಳೆ ಮಾತಾಡಿ  ಪರಿಚಯ ಮಾಡಿಕೊಂಡು ನಿಮ್ಮ ಖಾತೆಗೆ ಫಾನ್ ಕಾರ್ಡ ಲಿಂಕ್ ಆಗಿಲ್ಲ, ಅದ ಕಾರಣ ನಿಮ್ಮ ಖಾತೆಯಿಂದ 1,27,000/- ರೂಗಳು ಕಟಾವು ಆಗಿರುತ್ತದೆಂತ ತಿಳಿಸಿದ. ಹಾಗೂ ನಿಮ್ಮ ಮೊಬೈಲ್ ಗೆ ಒಂದು ಓಟಿಪಿ ಸಂಖ್ಯೆಯನ್ನು ಕಳುಹಿಸುತ್ತೇನೆ. ಅದನ್ನು ಹೇಳು ನಿಮ್ಮ ಹಣ ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆಂತ ತಿಳಿಸಿದಳು. ನಾನು ನಿಜ ಇರಬಹುದೆಂತ ನಂಬಿ ನಾನು ನನ್ನ ಮೊಬೈಲ್ ಗೆ  ಬಂದಿದ್ದ OTP NUMBER ನ್ನು ತಿಳಿಸಿದೆ. OTP NUMBER ಪೈಲೂರ್ ಆಗಿದೆ ಪುನಃ ಹೇಳಿ ಅಂತ ನನ್ನಿಂದ ಒಟ್ಟು 5 ಭಾರಿ OTP NUMBER ಗಳನ್ನು ಪಡೆದು ನನ್ನ ಖಾತೆಯಿಂದ ಒಟ್ಟು 1,27,800/- ರೂಗಳನ್ನು ವಂಚಿಸಿರುವ  ಆರೋಪಿಗಳನ್ನು ಪತ್ತೆ ಮಾಡಿ  ಕಾನೂನು ಕ್ರಮ ಜರಗಿಸಿ, ನಮ್ಮ ಹಣವನ್ನು ನಮಗೆ ವಾಪಸ್ಸು ಕೊಡಿಸಲು ಕೋರಿ ನೀಡಿದ ದೂರು.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 39/2021 ಕಲಂ. 9(B),5 (EXPLOSIVES ACT, 1884:-

     ದಿನಾಂಕ: 180/03/2021 ರಂದು  ಬೆಳಗ್ಗೆ 08-00  ಗಂಟೆಯಲ್ಲಿ  ಪಿರ್ಯಾದಿದಾರರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 18/03/2021 ರಂದು  ಠಾಣಾಧಿಕಾರಿಗಳು ತನಗೆ ಅಪರಾಧ ಪತ್ತೆದಳ  ಕರ್ತವ್ಯಕ್ಕೆ ನೇಮಕ ಮಾಡಿದ್ದು ನೇಮಕದಂತೆ ತಾನು ಅಪರಾಧ ಕೃತ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಇನಮಿಂಚೇನಹಳ್ಳಿ. ಕಾಚೂರು. ಗ್ರಾಮಗಳ ಕಡೆ ಗಸ್ತು ಮಾಡುತ್ತಿದ್ದಾಗ ನನಗೆ ದಿನಾಂಕ: 17/03/2021 ರಂದು  ರಾತ್ರಿ ಸಮಯದಲ್ಲಿ ಯಾರೋ  ಆಸಾಮಿಗಳು ಸ್ಫೋಟಕ ವಸ್ತುಗಳನ್ನು ತಂದು ಜಡೇನಹಳ್ಳಿ  ಗ್ರಾಮದ ಸಮೀಪ ಬಿಸಾಡಿ ಹೋಗಿದ್ದಾರೆಂದು  ಸಾರ್ವಜನಿಕರಿಂದ ಮಾಹಿತಿ  ದೊರೆತಿದ್ದು  ಮಾಹಿತಿಯಂತೆ ಸ್ಥಳಕ್ಕೆ  ಹೋಗಿ  ನೋಡಲಾಗಿ ಜಡೇನಹಳ್ಳಿ ಗ್ರಾಮದಿಂದ  ಕಾಚೂರು  ಗ್ರಾಮಕ್ಕೆ  ಹೋಗುವ ರಸ್ತೆಯ ತಿರುವಿನ ಬಳಿ ಕಾಲುವೆಯಲ್ಲಿ ಐದು ಹರಿದುಹೋಗಿರುವ ರಟ್ಟಿನ ಪೆಟ್ಟಿಗೆಗಳನ್ನು ಬಿಸಾಡಿ ಹೋಗಿದ್ದು ಆ ರಟ್ಟಿನ ಪೆಟ್ಟಿಗೆಗಳಲ್ಲಿ ಅಪಾಯಕಾರಿಯಾದಂತಹ ಸ್ಪೋಟಕ ವಸ್ತುಗಳ ತರಹೆಯ ವಸ್ತುಗಳು ಇರುವುದು ಕಂಡು ಬಂದಿರುತ್ತದೆ. ಯಾರೋ ದುಷ್ಕರ್ಮಿಗಳು ಅಕ್ರಮವಾಗಿ ಸಂಗ್ರಹಿಸಿಟ್ಟಿಕೊಂಡಿದ್ದ ಸ್ಪೋಟಕ ವಸ್ತುಗಳನ್ನು ಅವರ ಮೇಲೆ ಪ್ರಕರಣ ದಾಖಲಾಗುತ್ತೆಂಬ ಭಯದಿಂದ, ಅಥವಾ ಸ್ಪೋಟಕಗಳನ್ನು ಮರೆಮಾಚುವ ಉದ್ದೇಶದಿಂದ ಎಲ್ಲಿಂದಲೋ ತಂದು ನಾಶ ಪಡಿಸುವ ಉದ್ದೇಶದಿಂದ ರಸ್ತೆಯ ಬದಿಯ ಕಾಲುವೆಯಲ್ಲಿ ಬಿಸಾಡಿ ಹೋಗಿರುತ್ತಾರೆ.    ಆಸಾಮಿಗಳನ್ನು  ಪತ್ತೆ ಮಾಡಿ  ಕಾನೂನು  ಕ್ರಮ  ಜರುಗಿಸಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ  ಈ ಪ್ರ.ವ.ವರದಿ.

 

3. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 39/2021 ಕಲಂ. 143,147,447,427,149 ಐ.ಪಿ.ಸಿ:-

     ದಿನಾಂಕ: 16-03-2021 ರಂದು  ಈ ಕೇಸಿನ ಪಿರ್ಯಾಧಿ  ಡಾ|| ಶಿವಜ್ಯೋತಿ  ಆಡಳಿತಾಧಿಕಾರಿಗಳು ಶ್ರೀ ನಿಡುಮಾಮಿಡಿ ಜಗದ್ಗುರು ಶಾಖಾ ಮಠ ಚಿಕ್ಕಬಳ್ಳಾಪುರ  ರವರು ಠಾಣೆಗೆ ಹಾಜರಾಗಿ ಕೊಟ್ಟ  ದೂರಿನ ಸಾರಾಂಶವೇನೆಂದರೆ,  ಚಿಕ್ಕಬಳ್ಳಾಪುರ ನಗರದ ವಾಪಸಂದ್ರದಲ್ಲಿನ ಸ.ನಂ 174/2 ರ ಜಮೀನು ನಿಡುಮಾಮಿಡಿ ಮಠಕ್ಕೆ ಸೇರಿದ್ದಾಗಿದ್ದು  ಮೂಲತ:  ಜಮೀನು ಕೋಂಡ್ಲಿ ಮಠಕ್ಕೆ ಸೇರಿದ್ದಾಗಿದ್ದ್ರು  ಈ ಮಠವು  1920 ರ ಸುಮಾರಿಗೆ ನಿಷ್ಕ್ರೀಯವಾಗಿದ್ದು ಇದೇ ವಾಪಸಂದ್ರದಲ್ಲಿನ ನಿಡುಮಾಮಿಡಿ ಮಠದ ಸ್ವಾಮಿಗಳು  ಕೊಂಡ್ಲಿ ಮಠ ಮತ್ತು ಅದರ ಇನಾಮ್ ಜಮೀನುಗಳ ಸ್ವಾಧೀನನುಭವದಲ್ಲಿದ್ದರು. 1949 ರಲ್ಲಿ ಮೈಸೂರು ಮಹಾರಾಜರ ಸರ್ಕಾರವು ನಿಷ್ಕ್ರೀಯವಾಗಿದ್ದ  ಕೊಂಡ್ಲಿ ಮಠದ ಇನಾಂ ಜಮೀನುಗಳನ್ನು ವಾಪಸಂದ್ರದಲ್ಲಿರುವ  ನಿಡುಮಾಮಿಡಿ ಮಠಕ್ಕೆ ವರ್ಗಾವಣೆ ಮಾಡಲಾಗಿತ್ತು .   ಈ ಜಾಗದಲ್ಲಿ 0-9 ಗುಂಟೆ ‘’ಬ’’ ಖರಾಬ್  ಜಮೀನಿದ್ದು ಇದರಲ್ಲಿ 0-5 ಗುಂಟೆ ಜಮೀನನ್ನು ಅಕ್ರಮವಾಗಿ  ಒತ್ತುವರಿ ಮಾಡಿಕೊಂಡು ಕೆಇಬಿ ಇಲಾಖೆಯ ಕಾಂಪೌಂಡ್ ಹಾಕಿಕೊಂಡಿರುತ್ತಾರೆ.  ಈ ಜಮೀನು 0-4 ಗುಂಟೆಯಲ್ಲಿ  17 ನೇ ಶತಮಾನದಲ್ಲಿ ಸ್ಥಾಪನೆಯಾಗಿದ್ದ ಕೊಂಡ್ಲಿಮಠದ ಕಟ್ಟಡಗಳಿದ್ದವು,  ಈ ಮಠವು ಶಿಥಿಲಾವಸ್ಥೆಯಲ್ಲಿ ದ್ದುದರಿಂದ ಪುನರ್ ನಿರ್ಮಾಣ ಮಾಡಲೆಂದು ಕೆಲವು ವರ್ಷಗಳ ಹಿಂದೆ ಮಠವನ್ನು  ತೆರವುಗೊಳಿಸಿ ಮೂವರು ಗುರುಗಳ  ಗದ್ದುಗೆಗಳನ್ನು  ಮಾತ್ರ ಉಳಿಸಿಕೊಂಡಿದ್ದು ಅವುಗಳನ್ನು ಇತ್ತೀಚೆಗೆ  ಮಠವನ್ನು ಶುಚಿಗೊಳಿಸಲಾಗಿತ್ತು.  ದಿನಾಂಕ: 15-03-2021 ರಂದು ಮದ್ಯಾಹ್ನ 1-00 ಗಂಟೆಗೆ  ನಗರದ ಸಭೆಯ ಆಯುಕ್ತರಾದ ಡಿ. ಲೋಹಿತ್ ರವರು ಹಾಗೂ  ನಗರಸಭೆಯ ಕಂದಾಯ ಅಧಿಕಾರಿಯಾದ  ರಮೇಶ್ ಬಾಬು, ಬಿಲ್ ಕಲೆಕ್ಟರ್ ಗಳಾದ  ಗಿರೀಶ್, ಕೊಂಡಪ್ಪ, ಚಾಂದ್ ಪಾಷಾ ಇವರೊಂದಿಗೆ ಸರ್ವೆ ನಂ174/2 ರಲ್ಲಿನ ಜಮೀನಿನಲ್ಲಿ  ಅಕ್ರಮವಾಗಿ ಪ್ರವೇಶ ಮಾಡಿ  ಜಮೀನಿನಲ್ಲಿ ಇದ್ದ ದು ಗದ್ದಗೆ ಮಂಟಪ ಹಾಗೂ  ಮೂವರು ಗುರುಗಳ ಗದ್ದುಗೆಗಳನ್ನು ಮತ್ತು ದ್ವಾರವನ್ನು ಜೆಸಿಬಿಯಿಂದ  ನೆಲಸಮಗೊಳಿಸಿರುತ್ತಾರೆ.  ಅರೋಪಿಗಳು 17 ನೇ ಶತಮಾನದ  ಪ್ರಾಚೀನ ಶಿಲ್ಪಗಳನ್ನು ಒಡೆದು ಹಾಕಿರುತ್ತಾರೆ. ಇದರಿಂದ ಪರಂಪರಾಗತ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿರುತ್ತದೆ. ಅಲ್ಲದೆ ಲಕ್ಷಾಂತರ ರೂ ಹಾನಿಮಾಡಿರುತ್ತಾರೆಂದು ಕೊಟ್ಟ ದೂರನ್ನು ಪಡೆದುಕೊಂಡು ದಿನಾಂಕ: 16-03-2021 ರಂದು  ಠಾಣಾ ಎನ್ ಸಿ ಅರ್ 72/2021 ರಂತೆ ದಾಖಲಿಸಿಕೊಂಡಿದ್ದು  ನಂತರ  ಮುಂದಿನ ತನಿಖೆಯ ಸಲುವಾಗಿ  ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು  ಕೈಗೊಂಡಿರುತ್ತೆ. ಇದರೊಂದಿಗೆ  ನೀಡಿದ್ದ ದಾಖಲೆಗಳನ್ನು ತನಿಖೆಯ ಸಲುವಾಗಿ ಕಡತದಲ್ಲಿ ಅಳವಡಿಸಿಕೊಂಡಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 116/2021 ಕಲಂ. 323,324,504,506,34 ಐ.ಪಿ.ಸಿ:-

     ದಿನಾಂಕ:17/03/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀಮತಿ ಮಂಜಮ್ಮ ಕೋಂ ಆಟೋ ನಾಗರಾಜ್, 35 ವರ್ಷ, ವಕ್ಕಲಿಗರು, ಮನೆಕೆಲಸ, ಬನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಸಂಜೆ 7.45 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮ್ಮ ಮನೆಯ ಮುಂದೆ ಸರ್ಕಾರಿ ಖರಾಬು ಜಮೀನಿದ್ದು, ಅದರಾಚೆ ರಸ್ತೆ ಇರುತ್ತೆ. ತಮ್ಮ ಗ್ರಾಮದ ತಮ್ಮ ಪಕ್ಕದ ಮನೆಯ ವಾಸಿಯಾದ ಬಿ.ಎಂ.ಶಿವಣ್ಣ ಬಿನ್ ಚಿಕ್ಕನಾರಾಯಣಪ್ಪ ರವರು ಸದರಿ ಸರ್ಕಾರಿ  ಖರಾಬು ಜಾಗದಲ್ಲಿ ಧನಕರು ಮತ್ತು ಕುರಿಗಳ ಶೆಡ್ ಹಾಕಿಕೊಂಡಿರುತ್ತಾರೆ. ಈಗ್ಗೆ ಸುಮಾರು 2 ತಿಂಗಳ ಹಿಂದೆ ತಾವು ಕೈವಾರ ಗ್ರಾಮ ಪಂಚಾಯ್ತಿಗೆ ಬಿ.ಎಂ.ಶಿವಣ್ಣ ರವರ ಶೆಡ್ ಅನ್ನು ತೆರವು ಮಾಡುವಂತೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೇನೆ. ಆದರೆ ಇದುವರೆಗೂ ಶಿವಣ್ಣ ರವರು ಶೆಡ್ ನ್ನು ತೆರವು ಮಾಡಿರುವುದಿಲ್ಲ. ಹೀಗಿರುವಾಗ  ಈ ದಿನ ದಿನಾಂಕ: 17/03/2021 ರಂದು ಬೆಳಿಗ್ಗೆ ಮೇಲ್ಕಂಡ ಸರ್ಕಾರಿ ಖರಾಬು ಜಾಗದಲ್ಲಿ ಮಣ್ಣನ್ನು ಹೊಡೆದು ಸದರಿ ಜಾಗವನ್ನು ಸಮತಟ್ಟು ಮಾಡಲು ಈ ದಿನ ಸಂಜೆ 6.00 ಗಂಟೆ ಸಮಯದಲ್ಲಿ ಮಣ್ಣನ್ನು ಸಮತಟ್ಟು ಮಾಡುತ್ತಿದ್ದಾಗ ತಮ್ಮ ಗ್ರಾಮದ ಶಿವಣ್ಣ, ನಾಗೇಶ್ ಬಿನ್ ಚಿಕ್ಕ ನಾರಾಯಣಪ್ಪ, ಭಾಗ್ಯಮ್ಮ ಕೋಂ ನಾಗೇಶ್, ಲಕ್ಷ್ಮಿ ಬಿನ್ ಶಿವಣ್ಣ ಎಂಬುವವರು ಬಂದು ತನ್ನ ಮೇಲೆ ಜಗಳ ತೆಗೆದು ಆ ಪೈಕಿ ನಾಗೇಶ್ ಎಂಬುವವನು ತನ್ನನ್ನು ಕುರಿತು ಏನೋ ಬೇವರ್ಸಿ ಮುಂಡೆ ಈ ಜಾಗ ನಿಮ್ಮದಾ, ಇಲ್ಲಿ ಏನಕ್ಕೆ ಮಣ್ಣು ಹೊಡೆದಿರುವುದು ಎಂದು ಅವಾಚ್ಯಶಬ್ದಗಳಿಂದ ಬೈದು ದೊಣ್ಣೆಯಿಂದ ತನ್ನ ಎಡಕೈ ಮೇಲೆ ಹೊಡೆದು ಗಾಯಪಡಿಸಿರುತ್ತಾನೆ. ಭಾಗ್ಯಮ್ಮ ಎಂಬುವವರು ತನ್ನ ತಲೆ ಕೂದಲು ಹಿಡಿದು ಎಳೆದಾಡಿ, ಕೈಗಳಿಂದ ತನ್ನ ಮೈ ಕೈ ಮೇಲೆ ಹೊಡೆದು ನೋವನ್ನುಂಟು ಮಾಡಿರುತ್ತಾಳೆ. ಶಿವಣ್ಣ ಮತ್ತು ಲಕ್ಷ್ಮಿ ರವರು ಇನ್ನೊಂದು ಸಲ  ಜಾಗದ ತಂಟೆಗೆ ಬಂದರೆ ನಿನ್ನನ್ನು ಸಾಯಿಸಿ ಇಲ್ಲಿಯೇ ಊತು ಬಿಡುತ್ತೇನೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

5. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 41/2021 ಕಲಂ. 15(A),32(3) KARNATAKA EXCISE ACT, 1965:-

     ದಿನಾಂಕ:18/03/2021 ರಂದು ಮದ್ಯಾಹ್ನ 1-30 ಗಂಟೆಯಲ್ಲಿ  ನ್ಯಾಯಾಲಯದ ಪಿಸಿ-89 ಮಂಜುನಾಥ ರವರು ಠಾಣಾ NCR:54/2021 ರಲ್ಲಿ ಕ್ರಿಮೀನಲ್ ಪ್ರಕರಣ ದಾಖಲಿಸಲು   ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು  ಹಾಜರುಪಡಿಸಿದ ದೂರಿನ ಸಾರಾಂಶವೇನೆಂದರೆ:  ದಿನಾಂಕ:14/03/2021 ರಂದು ಎ,ಎಸ್,ಐ ಗಂಗಾಧರಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:14/03/2021 ರಂದು ಬೆಳಿಗ್ಗೆ:11.30 ಗಂಟೆಯಲ್ಲಿ ತಾನು ಠಾಣೆಯಲ್ಲಿದ್ದಾಗ ಠಾಣಾ 22 ನೇ ಬೀಟ್ ಸಿಬ್ಬಂದಿ ಸಿ,ಪಿ,ಸಿ-92 ರವಿ ರವರು ನನಗೆ ಪೋನ್ ಮಾಡಿ ಗುಡಿಬಂಡೆ ತಾಲೂಕು ಜಂಬಿಗೆಮರದಹಳ್ಳಿ ಗ್ರಾಮದಲ್ಲಿ ಗಸ್ತುನಲ್ಲಿರುವಾಗ ಗಂಗರಾಜು ಬಿನ್ ಲೇಟ್ ಕೃಷ್ಣಪ್ಪ ರವರ ಚಿಲ್ಲರೆ ಅಂಗಡಿಯ ಮುಂಬಾಗ ಸಾರ್ವಜನಿಕ ಸ್ಥಳವಾದಲ್ಲಿ ಗಂಗರಾಜು ರವರು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು ಠಾಣಾ ಸಿಬ್ಬಂದಿಯಾದ ಸಿ.ಪಿ.ಸಿ-84 ಮುನಿರಾಜು ಸಿ,ಪಿಸಿ 86 ಅಬ್ದುಲ್ ಘನಿ ಮಕಾನದಾರ ರವರನ್ನು ಕರೆದುಕೊಂಡು ಸರ್ಕಾರಿ ಜೀಪು ಸಂಖ್ಯೆ-ಕೆ,ಎ-40 ಜಿ-58 ರಲ್ಲಿ ಚಾಲಕ ಎ,ಪಿ,ಸಿ-05 ಮಧುಕುಮಾರ್ ರವರೊಂದಿಗೆ ಜಂಬಿಗೆಮರದಹಳ್ಳಿ ಕ್ರಾಸ್ ಬಳಿ ಮದ್ಯಾಹ್ನ 12-15 ಗಂಟೆ ಸಮಯಕ್ಕೆ ಹೋಗಿ  ಗ್ರಾಮದಲ್ಲಿದ್ದ ಮಾಹಿತಿ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ದಾಳಿಗೆ ಒಪ್ಪಿಕೊಂಡಿರುತ್ತಾರೆ. ಪಂಚರೊಂದಿಗೆ ಗಂಗರಾಜು ರವರ ಚಿಲ್ಲರೆ ಅಂಗಡಿಯ ಸ್ವಲ್ಪ ದೂರದ ಮರೆಯಲ್ಲಿ ಜೀಪ್ ನ್ನು ನಿಲ್ಲಿಸಿ ಗಂಗರಾಜು ರವರ ಚಿಲ್ಲರೆ ಅಂಗಡಿಯ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಮದ್ಯಾಹ್ನ: 12-30 ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೆಜಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯು ಸ್ಥಳದಲ್ಲಿಂದ ಓಡಿ ಹೋಗಿದ್ದು ಸರಬರಾಜು ಮಾಡುತ್ತಿದ್ದ ಆಸಾಮಿಯ ಆತನ ಹೆಸರು & ವಿಳಾಸ ತಿಳಿಯಲಾಗಿ ಗಂಗರಾಜು ಬಿನ್ ಲೇಟ್ ಕೃಷ್ಣಪ್ಪ, 35 ವರ್ಷ, ಬಲಜಿಗ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರಿ ವಾಸ:ಜಂಬಿಗೆಮರದಹಳ್ಳಿ  ಗ್ರಾಮ, ಗುಡಿಬಂಡೆ ತಾಲ್ಲೂಕು, ಎಂದು ತಿಳಿದಿದ್ದು. ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 11 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 02 ಖಾಲಿ ಟೆಟ್ರಾ ಪಾಕೆಟ್ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 02 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 990 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*11=386.43/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಮದ್ಯಾಹ್ನ 12-45 ಗಂಟೆಯಿಂದ ಮದ್ಯಾಹ್ನ :01-30 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಮದ್ಯಾಹ್ನ; 2-00 ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಮದ್ಯಾಹ್ನ: 02-15 ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ.

 

6. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 42/2021 ಕಲಂ. 15(A),32(3) KARNATAKA EXCISE ACT, 1965:-

     ದಿನಾಂಕ :18/03/2021 ರಂದು  ಮದ್ಯಾಹ್ನ 2-15 ಗಂಟೆಯಲ್ಲಿ ನ್ಯಾಯಾಲಯದ ಪಿಸಿ-89 ಮಂಜುನಾಥ ರವರ ಠಾಣಾ NCR NO-55/2021ರಲ್ಲಿ ಕ್ರಿಮೀನಲ್ ಪ್ರಕರಣ ದಾಖಲಿಸಲು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು  ಹಾಜರುಪಡಿಸಿದ ದೂರಿನ ಸಾರಾಂಶವೇನೆಂದರೆ: ದಿನಾಂಕ:14/03/2021 ರಂದು ಎ,ಎಸ್,ಐ ಗಂಗಾಧರಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:14/03/2021 ರಂದು ಮದ್ಯಾಹ್ನ:3.00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಠಾಣಾ 19 ನೇ ಬೀಟ್ ಸಿಬ್ಬಂದಿ ಸಿ,ಪಿ,ಸಿ-84 ಮುನಿರಾಜು ರವರು ನನಗೆ ಪೋನ್ ಮಾಡಿ ಗುಡಿಬಂಡೆ ತಾಲೂಕು ಯರ್ರಲಕ್ಕೇನಹಳ್ಳಿ ಗ್ರಾಮದಲ್ಲಿ ಗಸ್ತುನಲ್ಲಿರುವಾಗ ನರಸಿಂಹಮೂರ್ತಿ ಬಿನ್ ನರಸಿಂಹಪ್ಪ ರವರ ಚಿಲ್ಲರೆ ಅಂಗಡಿಯ ಮುಂಬಾಗ ಸಾರ್ವಜನಿಕ ಸ್ಥಳದಲ್ಲಿ ನರಸಿಂಹಮೂರ್ತಿ ರವರು ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು ಠಾಣಾ ಸಿಬ್ಬಂದಿಯಾದ ಸಿ.ಪಿ.ಸಿ-85 ಸುನೀಲ್ ಕುಮಾರ್ ಸಿ,ಪಿಸಿ 86 ಅಬ್ದುಲ್ ಘನಿ ಮಕಾನದಾರ ರವರನ್ನು ಕರೆದುಕೊಂಡು ಸರ್ಕಾರಿ ಜೀಪು ಸಂಖ್ಯೆ-ಕೆ,ಎ-40 ಜಿ-58 ರಲ್ಲಿ ಚಾಲಕ ಎ,ಪಿ,ಸಿ-05 ಮಧುಕುಮಾರ್ ರವರೊಂದಿಗೆ ಯರ್ರಲಕ್ಕೇನಹಳ್ಳಿ ಗ್ರಾಮಕ್ಕೆ ಮದ್ಯಾಹ್ನ 03-30 ಗಂಟೆ ಸಮಯಕ್ಕೆ ಹೋಗಿ  ಗ್ರಾಮದಲ್ಲಿದ್ದ ಮಾಹಿತಿ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ. ಪಂಚರೊಂದಿಗೆ ನರಸಿಂಹಮೂರ್ತಿ ರವರ ಚಿಲ್ಲರೆ ಅಂಗಡಿಯ ಸ್ವಲ್ಪ ದೂರದ ಮರೆಯಲ್ಲಿ ಜೀಪ್ ನ್ನು ನಿಲ್ಲಿಸಿ ನರಸಿಂಹಮೂರ್ತಿ ರವರ ಚಿಲ್ಲರೆ ಅಂಗಡಿಯ ಮುಂದೆ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಮದ್ಯಾಹ್ನ: 03-45 ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯು ಸ್ಥಳದಲ್ಲಿಂದ ಓಡಿ ಹೋಗಿದ್ದು ಸರಬರಾಜು ಮಾಡುತ್ತಿದ್ದ ಆಸಾಮಿಯ ಆತನ ಹೆಸರು & ವಿಳಾಸ ತಿಳಿಯಲಾಗಿ ನರಸಿಂಹಮೂತರ್ಿ ಬಿನ್ ನರಸಿಂಹಪ್ಪ 47 ವರ್ಷ, ಪಟ್ರಾ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರಿ ವಾಸ:ಯರ್ರಲಕ್ಕೇನಹಳ್ಳಿ  ಗ್ರಾಮ, ಗುಡಿಬಂಡೆ ತಾಲ್ಲೂಕು, ಎಂದು ತಿಳಿದಿದ್ದು. ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ. ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 10 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 03 ಖಾಲಿ ಟೆಟ್ರಾ ಪಾಕೆಟ್ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 03 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 900 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*10=351 /- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಸಂಜೆ 04-00 ಗಂಟೆಯಿಂದ ಸಂಜೆ :04-45 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ;5-15 ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ:05-30 ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ.

 

7. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 69/2021 ಕಲಂ. 15(A),32(3) KARNATAKA EXCISE ACT, 1965:-

     ದಿನಾಂಕ: 17-03-2021 ರಂದು ರಾತ್ರಿ 8.15 ಗಂಟೆಯಲ್ಲಿ ಸಿಪಿಸಿ-543 ಸುಧಾಕರ ರವರು ಹಾಜರುಪಡಿಸಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 17-03-2021 ರಂದು ಠಾಣಾಧಿಕಾರಿಗಳು ತನಗೆ ಗುಪ್ತ ಮಾಹಿತಿ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು ವೀರಾಪುರ, ತಲದುಮ್ಮನಹಳ್ಳಿ, ದೇವರಮಳ್ಳೂರು, ಕದಿರಿನಾಯಕನಹಳ್ಳಿ, ವೈ.ಹುಣಸೇನಹಳ್ಳಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 7.30 ಗಂಟೆ ಸಮಯದಲ್ಲಿ ವೈ.ಹುಣಸೇನಹಳ್ಳಿ ಗ್ರಾಮದ ಕಡೆ ಹೋಗುತ್ತಿದ್ದಾಗ ಬಾತ್ಮಿದಾರರಿಂದ ವೈ.ಹುಣಸೇನಹಳ್ಳಿ ಸ್ಟೇಷನ್ ಕೆನರಾ ಬ್ಯಾಂಕ್ ಮುಂಭಾಗದ ಸರ್ಕಾರಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಅಸಾಮಿ ಅಕ್ರಮವಾಗಿ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಕೆನರಾ ಬ್ಯಾಂಕ್ ಸಮೀಪ ಹೋದಾಗ ಒಬ್ಬ ಅಸಾಮಿ ಸಾರ್ವಜನಿಕ ಸ್ಥಳವಾದ ರಸ್ತೆಯಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡಿದ್ದು ಸಾರ್ವಜನಿಕರು ಕುಡಿಯುತ್ತಿದ್ದರು, ಸಮವಸ್ತ್ರದಲ್ಲಿದ್ದ ತನ್ನನ್ನು ನೋಡಿ ಸದರಿ ಆಸಾಮಿ ತನ್ನ ಕೈಯಲ್ಲಿದ್ದ ಒಂದು ಪ್ಲಾಸ್ಟಿಕ್ ಚೀಲವನ್ನು ಎತ್ತಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದು ಆಗ ತಾನು ಆತನನ್ನು ಹಿಂಬಾಲಿಸಿಕೊಂಡು ಹೋಗಿ ಆತನನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ ಮೋಹನ್ ವಿ ಬಿನ್ ವೆಂಕಟರೆಡ್ಡಿ, 26 ವರ್ಷ, ವಕ್ಕಲಿಗರು, ಕೂಲಿ ಕೆಲಸ, ವಾಸ: ದೇವರಮಳ್ಳೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂಬುದಾಗಿ ತಿಳಿಸಿದ್ದು, ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ 90 ಎಂ.ಎಲ್. ನ 10 HAYWARDS CHEERS WHISKY ಟೆಟ್ರಾ ಪ್ಯಾಕೆಟ್ ಗಳಿದ್ದು, ಸ್ಥಳದಲ್ಲಿ ಎರಡು ಖಾಲಿ ಪ್ಲಾಸ್ಟಿಕ್ ಲೋಟಗಳು ಗಳು ಮತ್ತು ಸ್ಥಳದಲ್ಲಿ ಬಿದ್ದಿದ್ದ ಖಾಲಿ ವಾಟರ್ ಪಾಕೇಟ್ ಗಳನ್ನು ಎತ್ತಿಕೊಂಡು ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮದ್ಯದ ಟೆಟ್ರಾ ಪ್ಯಾಕೇಟ್ ಗಳಿದ್ದ ಚೀಲವನ್ನು ಹಾಜರುಪಡಿಸಿ ಯಾವುದೇ ಪರವಾನಿಗೆಯಿಲ್ಲದೆ ಮದ್ಯದ ಟೆಟ್ರಾಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ ಮೋಹನ್ ಬಿನ್ ವೆಂಕಟರೆಡ್ಡಿ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ.ಸಂ. 69/2021 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 18-03-2021 05:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080