ಅಭಿಪ್ರಾಯ / ಸಲಹೆಗಳು

 

1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.16/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 18/02/2021 ರಂದು ಬಟ್ಲಹಳ್ಳಿ ಪೊಲೀಸ್ ಠಾಣೆಯ ಸಹಾಯಕ  ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪ್ರಕಾಶ್ ಜೆ    ಆದ ನಾನು  ಬೆಳಿಗ್ಗೆ 9-00 ಗಂಟೆಯಲ್ಲಿ ಗ್ರಾಮ ಗಸ್ತು ನಲ್ಲಿ  ಇದ್ದಾಗ ನನಗೆ    ಪಲ್ಲಿಗಡ್ಡ ಗ್ರಾಮದ ವಾಸಿ  ಚಂದ್ರಪ್ಪ ಬಿನ್ ಸೀತಾರಾಮಪ್ಪ   ರವರು ಆತನ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ, ನಾನು,ಠಾಣೆಯ  ಸಿಬ್ಬಂದಿ ಹೆಚ್.ಸಿ – 36  ವಿಜಯ ಕುಮಾರ್   ರವರನ್ನು ಕೆರೆದುಕೊಂಡು   ಪಲ್ಲಿಗಡ್ಡ    ಗ್ರಾಮಕ್ಕೆ ಹೋಗಿ  ಪಂಚರನ್ನು ಕರೆದುಕೊಂಡು ಬೆಳಿಗ್ಗೆ 9-30 ಗಂಟೆಗೆ ಚಂದ್ರಪ್ಪ ರವರ ಅಂಗಡಿಯ  ಬಳಿಗೆ ಹೋಗಿ ನೋಡಲಾಗಿ ಅಂಗಡಿಯ   ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ಗಳು ಮತ್ತು ಮದ್ಯದ ಖಾಲಿ ಪ್ಯಾಕೇಟ್ಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು  ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ಅಂಗಡಿಯಲ್ಲಿದ್ದ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ  ಚಂದ್ರಪ್ಪ ಬಿನ್ ಸೀತಾರಾಮಪ್ಪ  38 ವರ್ಷ ಗೊಲ್ಲರು  ವ್ಯವಸಾಯ ವಾಸ: ಪಲ್ಲಿಗಡ್ಡ   ಗ್ರಾಮ, ಚಿಂತಾಮಣಿ ತಾಲ್ಲೂಕು. ಮೊ ನಂ:9980215907. ಎಂದು ತಿಳಿಸಿದ್ದು, ಈತನು  ಮದ್ಯದ ಪ್ಯಾಕೇಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಪರವಾನಗಿಯನ್ನು ಹೊಂದಿದ್ದಾನೇಯೇ ಎಂಬುದರ  ಬಗ್ಗೆ ವಿಚಾರಿಸಲಾಗಿ  ಯಾವುದೇ ಪರವಾನಗಿ ಹೊಂದಿರುವುದಿಲ್ಲವೆಂದು  ತಿಳಿಸಿರುತ್ತಾನೆ.  ನಂತರ ಪಂಚರ ಸಮಕ್ಷಮ ಬೆಳಿಗ್ಗೆ 10-00ಗಂಟೆಯಿಂದ ಮಧ್ಯಾಹ್ನ 11-00 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ  ಒಟ್ಟು 900 ಎಂ.ಎಲ್ ನ 314.6 ರೂಗಳ ಬೆಲೆ ಬಾಳುವ ಹೈವಾಡ್ಸ್ ವಿಸ್ಕಿ  90 ಎಂ.ಎಲ್ ನ 5ಟೆಟ್ರಾ ಪ್ಯಾಕೇಟ್ ಗಳು,( 1 ಪಾಕೆಟ್ ಬೆಲೆ 35.13 ರೂಗಳು) ಮತ್ತು ಬೆಂಗಳೂರು  ವಿಸ್ಕಿ  90 ಎಂ.ಎಲ್ ನ 5 ಟೆಟ್ರಾ ಪಾಕೇಟ್ ಗಳು,( 1 ಪಾಕೆಟ್ ಬೆಲೆ 27.98 ರೂಗಳು)  ಹಾಗೂ 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲ್ ನ್ನು ಅಮಾನತ್ತುಪಡಿಸಿಕೊಂಡು ಆಸಾಮಿಯನ್ನು ವಶಕ್ಕೆ ಪಡೆದುಕೋಂಡು ಠಾಣೆಗೆ  ಬೆಳಿಗ್ಗೆ 11-30 ಗಂಟೆಗೆ ವಾಪಸ್ಸು ಬಂದು ಠಾಣೆಯ ಮೊ,ಸಂಖ್ಯೆ:16/2020 ಕಲಂ:15(A) 32(3) KE ACT ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.27/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:17.02.2021 ರಂದೂ ರಾತ್ರಿ 20:30 ಗಂಟೆಗೆ ಡಿ,ಸಿ & ಸಿ,ಇ,ಎನ್ ಪೊಲೀಸ್ ಠಾಣೆಯ ಸಿ,ಹೆಚ್,ಸಿ 71 ರವರು ನೀಡಿದ ಮುದ್ರಿತ ದೂರಿನೊಂದಿಗೆ ಪಂಚನಾಮೆ ,ಮಾಲು ಮತ್ತು ಆರೊಪಿಯನ್ನು ಠಾಣೆಗೆ ತಂದು ಹಾಜರುಪಡಿಸಿದ ಸಾರಾಂಶವೆನೆಂದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿ,ಸಿ,ಬಿ-ಸಿಇಎನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವರಾದ ಶ್ರೀ ನ್ ರಾಜಣ್ಣ ರವರು ಸುಬ್ರಮಣಿ ಸಿ,ಹೆಚ್,ಸಿ 71 ಆದ ತನಗೆ ಮತ್ತು ಶ್ರೀನಿವಾಸ ಸಿಪಿಸಿ-535 ಮಧು, ಹೆಚ್,ಕೆ ಸಿಪಿಸಿ-527 ರವರುಗಳಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ಮಾಡುವಂತೆ ಕರ್ತವ್ಯಕ್ಕೆ ನೇಮಕ ಮಾಡಿ ಕಳುಹಿಸಿಕೊಟ್ಟಿದ್ದು ಆದರಂತೆ ತಾವುಗಳು ಅಣಕನೂರು ಅಡವಿಗೊಲ್ಲವಾರಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಸಂಜೆ ಸುಮಾರು 6-00 ಗಂಟೆಗೆ ಮರಳುಕುಂಟೆ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಕತ್ತರಿಗುಪ್ಪೆ ಗ್ರಾಮಕ್ಕೆ ಬಂದು ಪಂಚರನ್ನು ಬರ ಮಾಡಿಕೊಂಡು ಸದರಿ ವಿಚಾರವನ್ನು ತಿಳಿಸಿ ಇದೇ ಗ್ರಾಮದ ವಾಸಿಯಾದ ಮುನಿವೆಂಕಟಪ್ಪ ಬಿನ್ ಲೇಟ್ ವೆಂಕಟರಾಯಪ್ಪ,45 ವರ್ಷ,ಪ,ಜಾತಿ,ಕೂಲಿ ಕೆಲಸ,ವಾಸ ಕತ್ತರಿಗುಪ್ಪೆ,ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ರವರು ತನ್ನ ವಾಸದ ಮನೆಯ ಮುಂಬಾಗದ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು  ಸ್ಥಳಾವಕಾಶ ಮಾಡಿಕೊಟ್ಟಿದ್ದು ಈ ಸಂಬಂದ ದಾಳಿ ಮಾಡಿ ಸ್ಥಳದಲ್ಲಿದ್ದ 1) 02 ಖಾಲಿ 90 ಎಂ ಎಲ್ ಸಾಮರ್ಥ್ಯದ HAYWARDS CHEERS WHISKY TETRA PACKETS 2) ಒಂದು ಖಾಲಿ ಒಂದಿ ಲೀಟರಿನ ನೀರಿನ ಬಾಟಲು 3) ಎರಡು ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) 23 ಮದ್ಯ ತುಂಬಿದ 90  ಎಂ ಎಲ್ ಸಾಮರ್ಥ್ಯದ HAYWARDS CHEERS WHISKY TETRA PACKETS ಇವುಗಳು ಎರಡು ಲೀಟರ್ 70 ಎಂ ಎಲ್ ಇದ್ದು ಇದರ ಬೆಲೆ 807=00 ರ ರೂಪಾಯಿಗಳು ಇರುತ್ತೆ ಸದರಿ  ಆಸಾಮಿಯನ್ನು ತನ್ನ ಮನೆಯ ಮುಂಬಾಗದ ಸ್ಥಳದ್ಲಲಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ಕಾನೂನು ಬಾಹಿರವಾಗಿದ್ದು ಅದರಿಂದ ಪಂಚರ ಸಮಕ್ಷಮ ಮಾಲು ಮತ್ತು ಅಸಾಮಿಯನ್ನು ವಶಕ್ಕೆ ಪಡೆದು ಹಾಜರುಪಡಿಸಿದ್ದರ ಮೇರೆಗೆ ಈ ಪ್ರ,ವ,ವರದಿ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.73/2021  ಕಲಂ. 447,427,34 ಐ.ಪಿ.ಸಿ:-

     ದಿನಾಂಕ: 17/02/2021 ರಂದು ಬೆಳಿಗ್ಗೆ 11.00 ಗಂಟೆಗೆ ಶ್ರೀಮತಿ ಪ್ರಭಾವತಮ್ಮ ಕೋಂ ಭೂಪಣ್ಣ, 55 ವರ್ಷ, ಬಲಜಿಗರು, ಗೃಹಿಣಿ

ಮಾಳಪಲ್ಲಿ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಸ್ವಂತ ಊರು ಚಿಂತಾಮಣಿ ತಾಲ್ಲೂಕು ಕೈವಾರ ಗ್ರಾಮವಾಗಿರುತ್ತದೆ. ತಮ್ಮ ಯಜಮಾನರು ಸರ್ಕಾರಿ ನೌಕರಿಯಲ್ಲಿ ಇರುವುದರಿಂದ ಗ್ರಾಮವನ್ನು ಬಿಟ್ಟು ಈಗ್ಗೆ 16 ವರ್ಷಗಳಿಂದ ಚಿಂತಾಮಣಿಗೆ ಬಂದು ಮಾಳಪಲ್ಲಿಯಲ್ಲಿ ವಾಸವಾಗಿರುತ್ತೇವೆ. ತಮ್ಮ ಮಾವನಾದ ಭೂಪಣ್ಣನವರ ಲೇಟ್ ನಾರಾಯಣಪ್ಪರವರಿಗೆ ಇಬ್ಬರು ಹೆಂಡತಿಯರಿದ್ದು ಆ ಪೈಕಿ ತಮ್ಮ ಅತ್ತೆ ಲೇಟ್ ತುಳಸಮ್ಮ ರವರಿಗೆ ಇಬ್ಬರು ಗಂಡು ಮಕ್ಕಳಿರುತ್ತಾರೆ. ಆ ಪೈಕಿ ತಮ್ಮ ಯಜಮಾನರಾದ ಭೂಪಣ್ಣರವರು ಕಿರಿಯ ಮಗನಾಗಿರುತ್ತಾರೆ. 2005 ನೇ ಸಾಲಿನಲ್ಲಿ ಕೈವಾರ ಗ್ರಾಮದ ಚಿಕ್ಕ ನಾಗಪ್ಪರವರ ಬಾಬತ್ತು ಸರ್ವೇ ನಂ 41/2 ರಲ್ಲಿ 3 ಎಕರೆ 5 ಗುಂಟೆ ಜಮೀನನ್ನು ಖರೀದಿಸಿದ್ದೆವು. ಹಾಲಿ ತನ್ನ ಹೆಸರಿನಲ್ಲಿ ಪಹಣಿ ಬರುತ್ತಿರುತ್ತೆ. ಈ ಜಮೀನಿನಲ್ಲಿ ಮಳೆಯ ನೀರಿಗಾಗಿ ನೀಲಗಿರಿ, ಜಾಲಿ ಮರ ಹಾಗೂ ಹೊಂಗೆ ಮರಗಳನ್ನು ಬೆಳೆಸಿರುತ್ತೇವೆ.  ಈಗಿರುವಲ್ಲಿ ನಮ್ಮ ಭಾವನಾದ ಲೇಟ್ ರಾಮಮೂರ್ತಿ ರವರ ಹೆಂಡತಿಯಾದ ಸರೋಜಮ್ಮ ಮತ್ತು ಆಕೆಯ ಮಗನಾದ ನರಸಿಂಹಮೂರ್ತಿ ರವರವರಿಗೆ ತಮಗೆ ಸದರಿ ಜಮೀನಿನ ವಿಚಾರದಲ್ಲಿ ತಕರಾರುಗಳಿರುತ್ತೆ. ಹೀಗಿರುವಲ್ಲಿ ದಿನಾಂಕ: 22/01/2021 ರಂದು ಬೆಳಿಗ್ಗೆ 09.00 ಗಂಟೆಯಲ್ಲಿ ಮೇಲ್ಕಂಡವರು ತಮಗೆ ಗೊತ್ತಿಲ್ಲದಂತೆ ತಮ್ಮ ಜಮೀನಿನೊಳಗೆ ಅಕ್ರಮವಾಗಿ ಪ್ರವೇಶ ಮಾಡಿ, ಜಮೀನಿನಲ್ಲಿ ಬೆಳೆದಿದ್ದ ಎಲ್ಲಾ ಮರಗಳನ್ನು ಅಂದರೆ 20 ಜಾಲಿ ಮರ, ಎರಡು ಹೊಂಗೆ ಮರ ಮತ್ತು 35 ನೀಲಗಿರಿ ಮರಗಳನ್ನು ಕಟಾವು ಮಾಡಿ ತಮಗೆ ಸುಮಾರು ಎರಡು ಲಕ್ಷ ರೂ ನಷ್ಟ ಉಂಟುಮಾಡಿರುತ್ತಾರೆ. ಈ ಮೊದಲು ಸಹ 2012 ಸಾಲಿನಲ್ಲಿ ಇದೇ ರೀತಿ ಮೇಲ್ಕಂಡ ಜಮೀನಿನಲ್ಲಿ ಬೆಳೆದಿದ್ದ ಎಲ್ಲಾ ಮರಗಳನ್ನು ಕಟಾವು ಮಾಡಿದ್ದು ಹಿರಿಯರ ಸಮಕ್ಷಮ ಕೇಳಿದ್ದಕ್ಕೆ ಮುಂದೆ ಈ ರೀತಿ ಮಾಡುವುದಿಲ್ಲವೆಂದು ತಿಳಿಸಿದ್ದರು. ಆದರೂ ಸಹ ಪುನ: ಅದೇ ರೀತಿ ಮರಗಳನ್ನು ಕಟಾವು ಮಾಡಿ ತಮಗೆ ನಷ್ಟ ಮಾಡಿರುತ್ತಾರೆ. ಇದೂವರೆವಿಗೂ ಗ್ರಾಮದಲ್ಲಿ ಹಿರಿಯರು ಪಂಚಾಯ್ತಿ ಮಾಡುವುದಾಗಿ ಹೇಳಿದ್ದು, ಇದುವರೆಗೂ ಅವರು ನ್ಯಾಯಪಂಚಾಯ್ತಿಗೆ ಬಾರದ ಕಾರಣ ತಡವಾಗಿ ಈ ದಿನ ದಿನಾಂಕ: 17/02/2021 ದೂರು ನೀಡುತ್ತಿದ್ದು ಮೇಲ್ಕಂಡ ಭೂಪಣ್ಣರವರ ಸರೋಜಮ್ಮ ಕೊಂ ಲೇಟ್ ರಾಮಮೂರ್ತಿ ಮತ್ತು ನರಸಿಂಹಮೂರ್ತಿ ಬಿನ್ ಲೇಟ್ ರಾಮಮೂರ್ತಿ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಾಗಿರುತ್ತೆ.

 

4. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.32/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:17/02/2021 ರಂದು ಮದ್ಯಾಹ್ನ 3-00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ  ಸಾರಾಂಶವೇನೆಂದರೆ ತಾನು ಸುಮಾರು 02 ವರ್ಷದ ಹಿಂದೆ ಕೆ,ಎ-43 9476 ನೊಂದಣಿ ಸಂಖ್ಯೆಯ ಭಾರತ್ ಬೆಂಜ್ ಲಾರಿಯನ್ನು ಖರೀದಿಸಿದ್ದು ತನ್ನ ಬಾಬತ್ತು ಲಾರಿಗೆ ಚಾಲಕನಾಗಿ ಗಂಗಾಧರಪ್ಪ ಜಿ ಬಿನ್ ಗೋಪಾಲಪ್ಪ ನಲ್ಲಪ್ಪನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರನ್ನು ನೇಮಿಸಿ ಪೇರೇಸಂದ್ರ ಕಡೆಯ ಜಲ್ಲಿ ಕ್ರಷರ್ ಗಳಲ್ಲಿ ಎಮ್ ಸ್ಯಾಂಡ್ ಜಲ್ಲಿಯನ್ನು ಸಾಗಿಸಲು ಬಾಡಿಗೆಗೆ ಬಿಟ್ಟಿದ್ದು. ಈಗಿರುವಾಗ ದಿನಾಂಕ:15/02/2021 ರಂದು ಬೆಳಿಗ್ಗೆ 11-00 ಗಂಟೆಗೆ ಚಾಲಕ ಗಂಗಾಧರಪ್ಪ ರವರು ತನಗೆ ಕರೆ ಮಾಡಿ ತಿಳಿಸಿದ್ದೇನೆಂದರೆ ದಿನಾಂಕ:15/02/2021 ರಂದು ಬೆಳಿಗ್ಗೆ 6-00 ಗಂಟೆಯಲ್ಲಿ ಮನು ಕ್ರಷರ್ ನಲ್ಲಿ ಜಲ್ಲಿ ಲೋಡು ಮಾಡಿಕೊಂಡು ಶಿಡ್ಲಗಟ್ಟದಲ್ಲಿ ಅನಲೋಡ್ ಮಾಡಿ ಪುನಃ ಲೋಡು ಮಾಡಿಕೊಳ್ಳಲು ಪೆರೇಸಂದ್ರದ ಕ್ರಷರ್ ಗೆ ಬರಲು ಬೆಂಗಳೂರಿನಿಂದ ಹೈದಾರಾಬಾದ್ ಕಡೆ ಹೋಗುವ ಎನ್,ಎಚ್-44 ರಸ್ತೆಯಲ್ಲಿ ದಿನಾಂಕ:15/02/2021 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಅರೂರು ಕ್ರಾಸ್ ಬಳಿ ಹೋಗುತ್ತಿರುವಾಗ ಹೈದರಾಬಾದ್ ಕಡೆಯಿಂದ ಬೆಂಗಳೂರಿಗೆ ಹೋಗುವ ಎನ್,ಎಚ್-44 ರಸ್ತೆಯಲ್ಲಿ ಕೆ,ಎ-51 ಎಮ್,ಡಿ- 7584 ನೊಂದಣಿ ಸಂಖ್ಯೆಯ ಹೊಂಡಾ ಸಿ,ಟಿ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮುಂದಿನ ರಸ್ತೆಯ ಬಲಭಾಗದ ಡಿವೈಡರ್ ಗೆ ಹೊಡೆದು ಬೆಂಗಳೂರು ಕಡೆಯಿಂದ ಬರುತ್ತಿದ್ದ ತಮ್ಮ ಕೆ,ಎ-43-9476 ಸಂಖ್ಯೆಯ ಲಾರಿಯ ಬಲಭಾಗದ ಡೀಸಲ್ ಟ್ಯಾಂಕ್ ಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತಮ್ಮ ಲಾರಿಯ ಹಿಂದೆ ಬರುತ್ತಿದ್ದ ಕೆ,ಎ-01 ಎಮ್,ಎಚ್-3116 ನೊಂದಣೀ ಸಂಖ್ಯೆಯ ಮಹೇಂದ್ರ ಸ್ಕಾಪಿರ್ಯೋ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ತಮ್ಮ ಲಾರಿ ಮತ್ತು ಸ್ಕಾಪಿರ್ಯೋ ಕಾರು ಎರಡು ಜಖಂಗೊಂಡಿದ್ದು ಅಪಘಾತ ಪಡಿಸಿದ ಕೆ,ಎ-51 ಎಮ್,ಡಿ-7584 ನೊಂದಣಿ ಸಂಖ್ಯೆಯ ಹೊಂಡಾ ಸಿ,ಟಿ ಕಾರು ಪೂರ್ತಿಯಾಗಿ ಜಖಂಗೊಂಡಿದ್ದು ನಂತರ ತಾನು ಮತ್ತು ಸ್ಥಳದಲ್ಲಿದ್ದ ಸಾರ್ವಜನಿಕರು ಕೂಡಲೇ ಹೋಗಿ ಅಪಘಾತ ಪಡಿಸಿದ ಕಾರಿನಲ್ಲಿದ್ದವರನ್ನು ಉಪಪಚರಿಸಿ ಅವರ ಹೆಸರು ತಿಳಿಯಲಾಗಿ ಬಾಬು ರೆಡ್ಡಿ ಎಂದು ತಿಳಿದು ಬಂದಿದ್ದು ಸದರಿ ಬಾಬುರೆಡ್ಡಿ ರವರ ಬಲಕಾಲಿನ ತೊಡೆಯ ಬಳಿ ಎಡ ಕೈಗೆ ರಕ್ತಗಾಯವಾಗಿದ್ದು ಕಾರಿನಲ್ಲಿದ್ದ ನೀರಜಾ ಎಂಬುವವರಿಗೆ ಎಡ ಕೈ ಗೆ ಮೂಗಿಗೆ ಹಣೆಗೆ ಗಾಯವಾಗಿರುವುದಾಗಿ ಹರ್ಷಿಣಿ ಎಂಬುವವರಿಗೆ ಬೆನ್ನು ಮೂಳೆಗೆ ರಕ್ತಗಾಯವಾಗಿರುವುದಾಗಿ ಪೃಥ್ವಿನಾಥ್ ರೆಡ್ಡಿ ಎಂಬುವವರಿಗೆ ಎದೆಯ ಮೂಳೆಗೆ ಗಾಯವಾಗಿದ್ದು 108 ಅಂಬುಲೆನ್ಸ ನಲ್ಲಿ ಗಾಯಾಳುಗಳನ್ನು ಚಿಕ್ಕಬಳ್ಳಾಪುರದ ಜೀವನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತಾನೇ ಹೋಗಿ ದಾಖಲಿಸಿರುವುದಾಗಿ ತಿಳಿಸಿದರು. ನಂತರ ತಾನು ಕೆಲಸದ ನಿಮ್ಮಿತ್ತ ಮಂಗಳೂರಿಗೆ ಹೋಗಿದ್ದರಿಂದ ಈ ದಿನ ಅಪಘಾತ ನಡೆದ ಸ್ಥಳಕ್ಕೆ ಬಂದು ಸ್ಥಳವನ್ನು ನೋಡಿಕೊಂಡು ತಡವಾಗಿ ಠಾಣೆಗೆ ಹಾಜರಾಗಿ ಅಪಘಾತ ಪಡಿಸಿದ ಕೆ,ಎ-51 ಎಮ್,ಡಿ-7584 ನೊಂದಣಿ ಸಂಖ್ಯೆಯ ಹೊಂಡಾ ಸಿ,ಟಿ ಕಾರು ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

5. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.39/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ 17/02/2021 ರಂದು ರಾತ್ರಿ 8-45 ಗಂಟೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಗಾಯಾಳು ನಾಗರಾಜ್ ಬಿನ್ ರಾಮಯ್ಯ, 31 ವರ್ಷ, ಎ.ಕೆ ಜನಾಂಗ, ಪೈಂಟಿಂಗ್ ಕೆಲಸ, ವಾಸ-ಹನುಮಂತಪುರ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೇನೆಂದರೆ, ತಾನು ಪೈಂಟಿಂಗ್ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು, ತಾನು ಈಗ್ಗೆ ಒಂದು ತಿಂಗಳ ಹಿಂದೆ ತನ್ನ ಹೆಂಡತಿ ರಷ್ಮಿ ರವರ ಹೆಸರಿನಲ್ಲಿ ಆಕ್ಸೆಸ್-125 ದ್ವಿ ಚಕ್ರ ವಾಹನವನ್ನು ಖರೀದಿ ಮಾಡಿದ್ದು, ಈ ದಿನ ದಿನಾಂಕ 17/02/2021 ರಂದು ಮದ್ಯಾಹ್ನ ವಿಜಯಪುರದಲ್ಲಿ ಪೈಂಟಿಂಗ್ ನ ಕೆಲವು ಸಾಮಾಗ್ರಿಗಳನ್ನು ಖರೀದಿ ಮಾಡಿಕೊಂಡು ಬರಲು ತಾನು ಮತ್ತು ಸ್ನೇಹಿತನಾದ ಶಿವಪ್ಪ ಬಿನ್ ಗಂಗಪ್ಪ ರವರು ತಮ್ಮ ದ್ವಿ ಚಕ್ರ ವಾಹನದಲ್ಲಿ ವಿಜಯಪುರಕ್ಕೆ ಹೋಗಿ ಪೈಂಟಿಂಗ್ ನ ಸಾಮಗ್ರಿಗಳನ್ನು ಖರೀದಿ ಮಾಡಿಕೊಂಡು ವಾಪಸ್ಸು ತಮ್ಮ ಗ್ರಾಮಕ್ಕೆ ಬರಲು ಇದೇ ದಿನ ಸಂಜೆ ಸುಮಾರು 6-00 ಗಂಟೆ ಸಮಯದಲ್ಲಿ ಹಂಡಿಗನಾಳ ಗ್ರಾಮದ ಕೆರೆಯ ಕಟ್ಟೆಯ ಮೇಲೆ ತಾನು ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ತನ್ನ ಸ್ನೇಹಿತನಾದ ಶಿವಪ್ಪ ರವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಬರುತ್ತಿದ್ದಾಗ ಆ ಸಮಯದಲ್ಲಿ ತಮ್ಮ ಹಿಂಬದಿಯಿಂದ ಬಂದ ಕೆಎಲ್-04-ಡಬ್ಲ್ಯೂ-3874 ನೊಂದಣಿ ಸಂಖ್ಯೆಯ ಟಾಟಾ ಎಸಿಇ ವಾಹನವನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಂಬದಿಯಿಂದ ತಮ್ಮ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಪರಿಣಾಮ ತಾವು ದ್ವಿ ಚಕ್ರ ವಾಹನದ ಸಮೇತವಾಗಿ ಕೆಳಗೆ ಬಿದ್ದು ಹೋಗಿ ತನ್ನ ಗಂಡನ ಗಡ್ಡದ ಭಾಗದಲ್ಲಿ, ಬಲ ಮೊಣ ಕೈಗೆ, ಬಲ ಕಾಲಿನ ಪಾದಕ್ಕೆ ರಕ್ತಗಾಯವಾಗಿದ್ದು, ಶಿವಪ್ಪ ರವರ ಸೊಂಟ, ಬಲ ಕೈ ಮತ್ತು ಬಲ ಕಾಲಿಗೆ ತರಚಿದ ಗಾಯವಾಗಿದ್ದು, ಆ ಸಮಯದಲ್ಲಿ ಟಾಟಾ ಎಸಿಇ ವಾಹನದ ಚಾಲಕನು ತನ್ನ ವಾಹನದ ಸಮೇತವಾಗಿ ಪರಾರಿಯಾಗಿದ್ದು, ಆಗ ರಸ್ತೆಯಲ್ಲಿ ಬರುತ್ತಿದ್ದ ಸಾರ್ವಜನಿಕರು ತಮ್ಮನ್ನು ಉಪಚರಿಸಿ ಯಾವುದೋ ವಾಹನದಲ್ಲಿ ಚಿಕಿತ್ಸೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುತ್ತಾರೆ. ಆದ ಕಾರಣ ತಮಗೆ ಅಪಘಾತವನ್ನುಂಟು ಮಾಡಿದ ವಾಹನವನ್ನು ಪತ್ತೆ ಮಾಡಿ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ಹೇಳಿಕೆ.

 

6. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.17/2021 ಕಲಂ. 323,324,504,114,307,34  ಐ.ಪಿ.ಸಿ:-

     ದಿನಾಂಕ: 17/02/2021 ರಂದು ಮದ್ಯಾಹ್ನ 2-10 ಗಂಟೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೊಮೋವನ್ನು ಪಡೆದು ಸಿ.ಹೆಚ್.ಸಿ-16 ನಟರಾಜ್ ರವರ ಜೊತೆಯಲ್ಲಿ ನಾರಾಯಣಪ್ಪ ಎ.ಎಸ್.ಐ ರವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಾದ ನವಾಜ್ ಪಾಷ ಬಿನ್ ಖಲಿಂ ಪಾಷ, ಮೆಹಬೂಬ್ ನಗರ, ಶಿಡ್ಲಘಟ್ಟ ನಗರ ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ಶಿಡ್ಲಘಟ್ಟ ನಗರದ ನಿಸಾರ್ ಪಾಳ್ಯದ ವಾಸಿ ಶಾಹೀದ್ ರವರು ತಮ್ಮ ಅಂಗಡಿಯಲ್ಲಿ ಮಟನ್ ತೆಗೆದುಕೊಳ್ಳಲು ಆಗಾಗ ಬರುತ್ತಿದ್ದು ಆ ಸಮಯದಲ್ಲಿ ತನಗೆ ಶಾಹೀದ್ ಪರಿಚಯವಾಗಿದ್ದನು, ತಾನು ಆಗಾಗ ಶಾಹಿದ್ ರವರ ಮನೆಗೆ ಹೋಗುತ್ತಿದ್ದಾಗ ಅವರ ತಂಗಿ ರುಕ್ಸಾರ್ ತನಗೆ ಪರಿಚಯವಾಗಿ ತನೊಂದಿಗೆ ಮಾತನಾಡುತ್ತಿದ್ದಳು ಈ ವಿಚಾರ ರುಕ್ಸಾರ್ ರವರ ಗಂಡನಿಗೆ ಗೊತ್ತಾಗಿ ತನ್ನ ಬಳಿ ಬಂದು ತನ್ನ ಹೆಂಡತಿಯನ್ನು ಮಾತನಾಡಬೇಡ ಎಂದು ಹೇಳಿದ್ದು, ಈ ವಿಚಾರದಲ್ಲಿ ತಮ್ಮ ಹಿರಿಯರು ಸಹ ಬುದ್ದಿ ಹೇಳಿ ರುಕ್ಸಾರ್ ನೊಂದಿಗೆ ಮಾತನಾಡದಂತೆ ಬುದ್ದಿ ಹೇಳಿದ್ದರು, ಹೀಗಿರುವಲ್ಲಿ ದಿನಾಂಕ: 17/02/2021 ರಂದು ಮದ್ಯಾಹ್ನ ಸುಮಾರು 1-15 ಗಂಟೆಯಲ್ಲಿ ತಾನು ತಮ್ಮ ಮನೆಯ ಬಳಿ ಇದ್ದಾಗ ಶಾಹೀದ್ ಬಿನ್ ಲೇಟ್ ಮುಬಾರಕ್ ರವರು ಬಂದು ಏನೋ ಲೋಪರ್ ನನ್ನ ಮಗನೇ ನಮ್ಮ ಮನೆಗೆ ಬಂದು ತನ್ನ ತಂಗಿಯ ಜೊತೆ ಮಾತನಾಡುತ್ತೀಯಾ ಎಂದು ಬಾಯಿಗೆ ಬಂದಂತೆ ಬೈಯುತ್ತಿದ್ದನು. ಆಗ ಆಕೆಯೇ ನನ್ನೊಂದಿಗೆ ಮಾತನಾಡುತ್ತಿದ್ದು ಈ ಬಗ್ಗೆ ಹಿರಿಯರು ಬುದ್ದಿ ಹೇಳಿದ್ದಾರೆ ಇನ್ನು ಮುಂದೆ ಆಕೆಯೊಂದಿಗೆ ಮಾತನಾಡುವುದಿಲ್ಲ ಎಂದು ಕೇಳಿಕೊಂಡು ಸುಮ್ಮನಿರದೇ ಏಕಾಏಕಿ ಕಾಲಿನಿಂದ ಹೊಟ್ಟೆಗೆ ಒದ್ದನು, ಅಷ್ಟರಲ್ಲಿ ಸಂತೋಷ್ ನಗರದ ವಾಸಿ ಬಾಟಲ್ ಫಯಾಜ್ ರವರ ಮಗ ವಸೀಂ ರವರು ಯಾವುದೋ ಒಂದು ಆಯುಧವನ್ನು ತೆಗೆದುಕೊಂಡು ಬಂದು ಈ ನನ್ನ ಮಗನನ್ನು ಬಿಡಬೇಡ ಎಂದು ಪ್ರೇರೆಪಿಸಿದನು, ಆಗ ಶಾಹೀದ್ , ವಾಸೀಂ ರವರ ಕೈಯಲ್ಲಿದ್ದ ಆಯುಧವನ್ನು ಕಿತ್ತುಕೊಂಡು ತನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಬಲಭಾಗದ ಕತ್ತಿನ ಬಳಿ ಹೊಡೆದು ರಕ್ತಗಾಯಪಡಿಸಿದನು. ತಾನು ಕೇಳಗಡೆ ಬಿದ್ದು ಹೋದಾಗ ಅದೇ ಆಯುಧದಿಂದ ಎರಡೂ ಮೊಣಕಾಲುಗಳಿಗೆ ಹೊಡೆದು ರಕ್ತಗಾಯಪಡಿಸಿದನು. ವಾಸೀಂ ಕೈಗಳಿಂದ ಮೈಮೇಲೆ ಹೊಡೆದು ನೋವುಂಟು ಮಾಡಿದನು. ತಾನು ಕಿರುಚಾಡಿಕೊಂಡಾಗ ತನ್ನ ತಮ್ಮನಾದ ರೆಹಮಾನ್ ಪಾಷ ರವರು ಜಗಳ ಬಿಡಿಸಲು ಬಂದಾಗ ವಾಸಿಂ ಕೈಗಳಿಂದ ಮೈ ಮೇಲೆ ಹೊಡೆದು ಕೈಳಕ್ಕೆ ನೂಕಿ ನೋವನ್ನುಂಟು ಮಾಡಿದನು. ಅಷ್ಟರಲ್ಲಿ ಮೆಹಬೂಬ್ ನಗರದ ವಾಸಿಗಳಾದ ನಯ್ಯ @ ಲೊಡ್ಡ ಬಿನ್ ರಹಮತ್ ವುಲ್ಲಾ ಮತ್ತು ರೆಹಮಾನ್ ಬಿನ್ ಸೈಯದ್ ಬಾಬು ರವರು ಜಗಳ ಬಿಡಿಸಿದರು. ಗಾಯಗೊಂಡಿದ್ದ ತನ್ನನ್ನು ತಮ್ಮ ಚಿಕ್ಕಪ್ಪನಾದ ತಸ್ಲಿನ್ ಬಿನ್ ಲೇಟ್ ವಾಲೀಬಾಷ ರವರು ಚಿಕಿತ್ಸೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ. ತಾನು ಶಾಹೀದ್ ರವರ ತಂಗಿಯ ಜೊತೆಯಲ್ಲಿ ಮಾತನಾಡಿದ್ದಕ್ಕೆ ಶಾಹೀದ್ ಕೋಪಗೊಂಡು ತನ್ನ ಮೇಲೆ ಜಗಳ ಮಾಡಿ ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣದ ಹರಿತವಾದ ಆಯುಧದಿಂದ ಬಲ ಭಾಗದ ಕತ್ತಿನ ಬಳಿ ರಕ್ತಗಾಯಪಡಪಸಿದ್ದು, ಈ ಗಲಾಟೆಗೆ ವಾಸೀಂ ರವರು ಸಹಕರಿಸಿದ್ದು, ಇವರುಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ಹೇಳಿಕೆಯ ಮೇರೆಗೆ ಠಾಣಾ ಮೊ.ಸಂ: 17/2021 ಕಲಂ: 323,324,504,114,307 ರೆ/ವಿ 34 ಐಪಿಸಿ ರೀತ್ಯಾ ಮದ್ಯಾಹ್ನ 3-00 ಗಂಟೆಗೆ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 18-02-2021 06:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080