Feedback / Suggestions

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.296/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:15/09/2021 ರಂದು ಸಂಜೆ 18-30 ಗಂಟೆಗೆ ಪಿಎಸ್ಐ ಸಾಹೇಬರು ಅಸಲು ಪಂಚನಾಮೆ, ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶವೆನೆಂದರೆ ದಿನಾಂಕ: 15.09.2021 ರಂದು ಸಂಜೆ 4.30 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ  ಬಾಗೇಪಲ್ಲಿ ತಾಲ್ಲೂಕು, ಕಸಬಾ ಹೋಬಳಿ, ಎಂ ಚರ್ಲೋಪಲ್ಲಿ- ಮೊಟಕಪಲ್ಲಿ  ಗ್ರಾಮಗಳ ಮದ್ಯದ ಕೆರೆಯ ಪಕ್ಕದಲ್ಲಿದ  ಗುಡ್ಡದ ಖಾಲಿ ಜಾಗದಲ್ಲಿ ಅಕ್ರಮವಾಗಿ ಕೋಳಿ ಪಂದ್ಯ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಯವರಾದ ನರಸಿಂಹಮೂರ್ತಿ ಸಿಹೆಚ್ ಸಿ 157, ಖಲಂಧರ್ ಸಿಹೆಚ್ ಸಿ 158, ಬಾಬಾವಲಿ ಸಿಪಿಸಿ-130, ಶಬ್ಬೀರ್ ಊರನಮನಿ ಸಿಪಿಸಿ 278, ಆದಿನಾರಾಯಣ ಸಿಪಿಸಿ 124, ಮೋಹನ್ ಕುಮಾರ್ ಸಿಪಿಸಿ 387  ಹಾಗೂ ಜೀಫ್ ಚಾಲಕ ಎ.ಹೆಚ್.ಸಿ-14  ವೆಂಕಟೇಶ್ ರವರೊಂದಿಗೆ ಕೆಎ-40-ಜಿ-537 ಸರ್ಕಾರಿ ಜೀಪ್ ನಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಠಾಣೆಯಿಂದ ಹೊರಟು ಗೂಳೂರು ವೃತ್ತದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಮೇಲ್ಕಂಡ ದಾಳಿ ಮಾಹಿತಿಯನ್ನು ತಳಿಸಿ, ದಾಳಿ ಮಾಡಲು ಪಂಚಾಯ್ತಿದಾರರಾಗಿ ಬಂದು ಸಹಕರಿಸಲು ಕೋರಿದ್ದು ಅದಕ್ಕೆ ಅವರುಗಳು ಒಪ್ಪಿಕೊಂಡಿದ್ದು ನಾವುಗಳು ಪಂಚರು ಮೇಲ್ಕಂಡ ಸ್ಥಳಕ್ಕೆ ಸಂಜೆ 4.50 ಗಂಟೆ ಸಮಯಕ್ಕೆ ಮೋಟಕಪಲ್ಲಿ ಗ್ರಾಮದ ನೀಲಿಗಿರಿ ತೋಪಿನ ಬಳಿ ಮರೆಯಲ್ಲಿ ಜೀಪ್ ಮತ್ತು ದ್ವಿಚಕ್ರವಾಹನಗಳನ್ನು ನಿಲ್ಲಿಸಿ ಎಲ್ಲರೂ ಕೆರೆಯಲ್ಲಿ ನಡೆದುಕೊಂಡು ಹೋಗಿ  ಕೋಳಿ ಪಂದ್ಯ ಜೂಜಾಟವಾಡುತ್ತಿದ್ದ ಸ್ಥಳದಿಂದ 100 ಮೀಟರ್ ದೂರದ  ಮರೆಯಲ್ಲಿ ನಿಂತು ನೋಡಲಾಗಿ ಆಸಾಮಿಗಳು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಹಣವನ್ನು ಪಣವಾಗಿ ಇಟ್ಟು ಕೋಳಿ ಪಂದ್ಯ ಜೂಜಾಟವಾಡುತ್ತಿದ್ದನ್ನು ಖಚಿತಪಡಿಸಿಕೊಂಡು ಜೂಜಾಟವಾಡುತ್ತಿದ್ದವರ ಮೇಲೆ ದಾಳಿ ಮಾಡಿ ಆಸಾಮಿಗಳು ಸುತ್ತುವರೆದು  ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದವನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ 1) ವೆಂಕಟೇಶ್ ಬಿನ್ ಶ್ರೀನಿವಾಸ,  20 ವರ್ಷ, ನಾಯಕರು, ಜಿರಾಯ್ತಿ, ವಾಸ ಗೂಳೂರು ಗ್ರಾಮ ಮತ್ತು ಹೋಬಳಿ,  ಬಾಗೇಪಲ್ಲಿ ತಾಲ್ಲೂಕು 2) ರಮೇಶ್ ಬಿನ್ ನರಸಿಂಹಪ್ಪ, 35 ವರ್ಷ, ಆದಿದ್ರಾವಿಡ ಜನಾಂಗ, ಕೂಲಿ ಕೆಲಸ, ವಾಸ 1ನೇ ವಾರ್ಡ್, ವಾಲ್ಮೀಕಿ ನಗರ,  ಬಾಗೇಪಲ್ಲಿ ಪುರ  3) ಆದಿನಾರಾಯಣಪ್ಪ ಬಿನ್ ಲೇಟ್ ನರಸಿಂಹಪ್ಪ, 48 ವರ್ಷ, ಆದಿದ್ರಾವಿಡ ಜನಾಂಗ, ಕೂಲಿ ಕೆಲಸ, ವಾಸ  1ನೇ ವಾರ್ಡ್, ವಾಲ್ಮೀಕಿ ನಗರ,  ಬಾಗೇಪಲ್ಲಿ ಪುರ ಎಂದು ತಿಳಿಸಿರುತ್ತಾರೆ. ಸ್ಥಳದಲ್ಲಿ ಕೋಳಿ ಪಂದ್ಯ ಜೂಜಾಟವಾಡುತ್ತಿದ್ದ ಮೂರು ಆಸಾಮಿಗಳನ್ನು ವಶಕ್ಕೆ ಪಡೆದು ಆಸಾಮಿಗಳು ಜೂಜಾಟಕ್ಕೆ ತಂದಿದ್ದ  2 ಜೀವಂತ  ಕೋಳಿ ಹುಂಜಗಳನ್ನು ಮತ್ತು ಕೋಳಿ ಪಂದ್ಯ ಜೂಜಾಟವಾಡಲು ಪಣಕ್ಕಾಗಿ ಇಟ್ಟಿದ್ದ 1180-00 ರೂ ನಗದು ಹಣವನ್ನು ಪಂಚಾಯ್ತಿದಾರರ ಸಮಕ್ಷಮ ಸಂಜೆ 5.10 ಗಂಟೆಯಿಂದ 6.10 ಗಂಟೆಯವರೆಗೆ ಮಹಜರ್ ಮೂಲಕ ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡು, ಮೂರು ಜನ ಆರೋಪಿಗಳನ್ನು ವಶಕ್ಕೆ ಪಡೆದು ಮಾಲು ಮತ್ತು ಆರೋಪಿಗಳೊಂದಿಗೆ ಸಂಜೆ 6.30 ಗಂಟೆಗೆ ಠಾಣೆಗೆ ವಾಪಸ್ ಬಂದು ಮುಂದಿನ ಕ್ರಮ ಜರುಗಿಸಲು ಸೂಚಿಸಿ ನೀಡಿದ ವರಧಿಯನ್ನು ಪಡೆದು ಠಾಣಾ ಎನ್ ಸಿ ಆರ್ ನಂ-266/2021 ರಂತೆ ದಾಖಲಿಸಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ:16-09-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.297/2021 ಕಲಂ. 307 ಐ.ಪಿ.ಸಿ:-

     ದಿನಾಂಕ: 16/09/2021 ರಂದು ರಾತ್ರಿ 10-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಶಂಕರ ಬಿನ್ ನರಸಿಂಹಪ್ಪ, 30 ವರ್ಷ, ನಾಯಕ ಜನಾಂಗ, ಕೊಲಿಕೆಲಸ, ವಾಸ ಜಿಲಾಜಿರ್ಲಾ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ 16/09/2021 ರಂದು ಬೆಳಿಗ್ಗೆ ನಾನು ಕೂಲಿಕೆಲಸಕ್ಕಾಗಿ ಹೋಗಿದ್ದು ಸಂಜೆ 6-30 ಗಂಟೆಗೆ  ನಮ್ಮ ಗ್ರಾಮಕ್ಕೆ ಬಂದು ನನ್ನ ಕುರಿಯೊಂದು ಕಾಣೆಯಾಗಿದೆಯೆಂದು ಹುಡುಕಿಕೊಂಡು ನಲ್ಲಪ್ಪರೆಡ್ಡಿಪಲ್ಲಿ ಕಡೆಗೆ ಹೋಗಿದ್ದು , ರಾತ್ರಿ ಸುಮಾರು 8-10 ಗಂಟೆಯಲ್ಲಿ ನಮ್ಮ ಅತ್ತಿಗೆಯಾದ ಪ್ರಬಾವತಿರವರು ನನಗೆ ಪೋನ್ ಮಾಡಿ ನಿಮ್ಮ ಅಣ್ಣನಾದ ಅಂಜಿನಪ್ಪ ರವರಿಗೆ ನಮ್ಮ ಗ್ರಾಮದ ನಾಗರಾಜು ರವರು ಮಚ್ಚಿನಿಂದ  ತಲೆಗೆ ಹೊಡೆದು ರಕ್ತಗಾಯ ಮಾಡಿರುವುದಾಗಿ ತಿಳಿಸಿರುತ್ತಾರೆ. ನಾನು ತಕ್ಷಣ  ನಮ್ಮ ಗ್ರಾಮಕ್ಕೆ ಹೋಗಿ ನೋಡಲಾಗಿ ನನ್ನ ಅಣ್ಣನಾದ ಅಂಜಿನಪ್ಪ ರವರ ತಲೆಯ ಎಡಭಾಗಕ್ಕೆ ರಕ್ತ ಗಾಯವಾಗಿ  ರಕ್ತ ಸೋರುತ್ತಿದ್ದು ಅಂಜಿನಪ್ಪನಿಗೆ ಯಾವುದೋ ಆಟೋವಿನಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ದು ವೈದ್ಯರ ಸಲಹೆ ಮೇರೆಗೆ ಚಿಕ್ಕಬಳ್ಳಾಪುರಕ್ಕೆ ಕಳುಹಿಸಿಕೊಟ್ಟಿದ್ದು, ನಂತರ ಬೆಂಗಳೂರಿಗೆ ಕರೆದುಕೊಂಡು ಹೋಗಿರುತ್ತಾರೆ. ನಂತರ ವಿಚಾರ ಮಾಡಿ ತಿಳಿಯಲಾಗಿ ನನ್ನ ಚಿಕ್ಕಪ್ಪನ ಮಗನಾದ ಅಂಜಿನಪ್ಪ ಮತ್ತು ನಮ್ಮ ಗ್ರಾಮದ ನಮ್ಮ ಜನಾಂಗದ ನಾಗರಾಜು ಬಿನ್ ಆವುಲ ನರಸಿಂಹಪ್ಪನ ಹೆಂಡತಿಯಾದ  ಕೃಷ್ಣಮ್ಮಳ ನಡುವೆ ಸುಮಾರು ವರ್ಷಗಳಿಂದ ಅನೈತಿಕ ಸಂಬಂಧವಿದ್ದು ಈ ವಿಚಾರವಾಗಿ ಆಗಾಗ ಗಲಾಟೆಗಳಾಗುತ್ತಿದ್ದವು. ಈ ದಿನ ದಿನಾಂಕ-16/09/2021 ರಂದು ರಾತ್ರಿ  ಸುಮಾರು 8-00 ಗಂಟೆಯಲ್ಲಿ ನನ್ನ ಅಣ್ಣ ಅಂಜಿನಪ್ಪ ರವರು ನಮ್ಮ ಗ್ರಾಮದ ಮುಖ್ಯ ರಸ್ತೆಯಲ್ಲಿ  ನಡೆದುಕೊಂಡು ಹೋಗುತ್ತಿದ್ದಾಗ ನಾಗರಾಜು ಬಿನ್ ಆವುಲನರಸಿಂಹಪ್ಪ ರವರು  ಅಂಜಿನಪ್ಪ ತನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರಿಂದ,  ಅಂಜಿನಪ್ಪನನ್ನು ಕೊಲೆ ಮಾಡುವ ಉದ್ದೇಶದಿಂದ ಮಚ್ಚನ್ನು ತೆಗೆದುಕೊಂಡು ಬಂದು ಅಂಜಿನಪ್ಪ ಮೇಲೆ ಹಲ್ಲೆ ನಡೆಸಿ ಅಂಜಿನಪ್ಪನ ತಲೆಯ ಎಡ ಬಾಗಕ್ಕೆ  ಮಚ್ಚಿನಿಂದ  ಬಲವಾಗಿ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ್ದು, ರಕ್ತ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ನನ್ನ ಅಣ್ಣನಾದ ಅಂಜಿನಪ್ಪ ರವರನ್ನು ಹತ್ತಿರದಲ್ಲಿದ್ದ ನಮ್ಮ ಅಣ್ಣಂದಿರಾದ ಈಶ್ವರಪ್ಪ ಬಿನ್ ನರಸಿಂಹಪ್ಪ ಮತ್ತು ಶಿವಪ್ಪ ಬಿನ್ ನರಸಿಂಹಪ್ಪ ರವರು ಸ್ಥಳಕ್ಕೆ ಹೋದಾಗ, ನಾಗರಾಜನು  ಸ್ಥಳದಿಂದ ಓಡಿ ಹೋಗಿರುತ್ತಾನೆ. ನಂತರ ಗಾಯವಾಗಿ ನರಳಾಡುತ್ತಿದ್ದ ಅಂಜಿನಪ್ಪನನ್ನು ನಾನು, ನಮ್ಮ ಅತ್ತಿಗೆ ಅಂಜಿನಮ್ಮ, ನಮ್ಮ ಗ್ರಾಮದ ಆದಿನಾರಾಯಣಪ್ಪ ರವರು ಯಾವುದೋ ಆಟೋದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೇವೆ. ಆದ್ದರಿಂದ ನನ್ನ ಅಣ್ಣನಾದ ಅಂಜಿನಪ್ಪ ರವರನ್ನು  ಮಚ್ಚಿನಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿರುವ ನಾಗರಾಜು ಬಿನ್ ಆವುಲ ನರಸಿಂಹಪ್ಪ,  ಸುಮಾರು 45 ವರ್ಷ, ನಾಯಕ ಜನಾಂಗ, ಜಿಲಾಜಿರ್ಲಾ ಗ್ರಾಮ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.129/2021 ಕಲಂ. 15(A),32(3) ಕೆ.ಇ ಆಕ್ಟ್:-

     ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ.ವೆಂಕಟರವಣಪ್ಪ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:17/09/2021 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಲಕ್ಕೇಪಲ್ಲಿ ಗ್ರಾಮದ ವಾಸಿ ವೆಂಕಟಲಕ್ಷ್ಮೀ ರವರು ಅವರ ಚಿಲ್ಲರೆ ಅಂಗಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ ನಾನು ಠಾಣಾ ಸಿಬ್ಬಂದಿ ಹೆಚ್ ಸಿ-36 ವಿಜಯ್ ಕುಮಾರ್ ಮತ್ತು ಜೀಪ್ ಚಾಲಕ ಎಪಿಸಿ-65 ವೆಂಕಟೇಶ್ ರವರೊಂದಿಗೆ ಬೆಳಿಗ್ಗೆ 11-00 ಗಂಟೆಗೆ ಲಕ್ಕೇಪಲ್ಲಿ ಗ್ರಾಮಕ್ಕೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಪಂಚಾಯ್ತಿದಾರರು ಮತ್ತು ಸಿಬ್ಬಂದಿಯೊಂದಿಗೆ ಲಕ್ಕೇಪಲ್ಲಿ ಗ್ರಾಮದ ವಾಸಿ ವೆಂಕಟಲಕ್ಷ್ಮೀ ಕೋಂ ರಾಮಪ್ಪ ರವರ ಚಿಲ್ಲರೆ ಅಂಗಡಿಯ ಬಳಿಗೆ ಹೋಗಿ ನೋಡಲಾಗಿ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಮತ್ತು ಮದ್ಯ ನೀಡುತ್ತಿದ್ದ ಒಬ್ಬ ಮಹಿಳೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ ಗಳು ಮತ್ತು ಮದ್ಯದ ಖಾಲಿ ಪ್ಯಾಕೇಟ್ ಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು ಬಿದ್ದಿರುವುದು ಕಂಡು ಬಂದಿರುತ್ತೆ. ಚಿಲ್ಲರೆ ಅಂಗಡಿಯ ಬಳಿ ಮದ್ಯವನ್ನು ನೀಡುತ್ತಿದ್ದ ಮಹಿಳೆಯ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ ಶ್ರೀಮತಿ ವೆಂಕಟಲಕ್ಷ್ಮೀ ಕೋಂ ರಾಮಪ್ಪ 60 ವರ್ಷ ನಾಯಕ ಜನಾಂಗ ಚಿಲ್ಲರೆ ಅಂಗಡಿ ವ್ಯಾಪಾರ ವಾಸ ಲಕ್ಕೇಪಲ್ಲಿ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿದ್ದು ಸದರಿ ಆಸಾಮಿಯು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಮದ್ಯದ ಪ್ಯಾಕೇಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಪಂಚಾಯ್ತಿದಾರರ ಸಮಕ್ಷಮ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ 90 ಎಂ.ಎಲ್ ಸಾಮರ್ಥ್ಯದ 15 ಹೈವಾರ್ಡ್ಸ್ ವಿಸ್ಕಿಯ ಮದ್ಯದ ಟೆಟ್ರಾಪ್ಯಾಕೆಟ್ ಗಳಿದ್ದು ಅವುಗಳ ಒಟ್ಟು ಮೌಲ್ಯ 526.95 ರೂಗಳ 1 ಲೀಟರ್ 350 ಎಂ.ಎಲ್ ಮದ್ಯ ಆಗಿರುತ್ತೆ, 2 ಖಾಲಿಯ ಹೈವಾರ್ಡ್ಸ್ ವಿಸ್ಕಿಯ 90 ಎಂ.ಎಲ್ ಸಾಮರ್ಥ್ಯದ ಮದ್ಯದ ಟೆಟ್ರಾ ಪ್ಯಾಕೆಟ್ ಗಳು, 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಒಂದು ಲೀಟರ್ ಸಾಮರ್ಥ್ಯದ ಖಾಲಿ ವಾಟರ್ ಬಾಟೆಲ್  ಸ್ಥಳದಲ್ಲಿ ಇದ್ದು ಸದರಿಯವುಗಳನ್ನು ಪಂಚಾಯ್ತಿದಾರರ ಸಮಕ್ಷಮ ಬೆಳಿಗ್ಗೆ 11-15 ಗಂಟೆಯಿಂದ ಮಧ್ಯಾಹ್ನ 12-00 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಅಮಾನತ್ತುಪಡಿಸಿಕೊಂಡು ಮಧ್ಯಾಹ್ನ 12-30 ಗಂಟೆಗೆ ಠಾಣೆಗೆ  ವಾಪಸ್ಸು ಬಂದು ಆರೋಪಿಯ ವಿರುದ್ದ ಸ್ವತಃ ವರದಿಯ ಮೇರೆಗೆ ಠಾಣೆಯ ಮೊ.ಸಂಖ್ಯೆ: 129/2021 ಕಲಂ:15(A) 32(3) KE ACT ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.157/2021 ಕಲಂ. 143,120B,506,420,447,149 ಐ.ಪಿ.ಸಿ:-

     ದಿನಾಂಕ:16/09/2021 ರಂದು ಸಂಜೆ 5-00 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿ  ಶ್ರೀ. ರಮೇಶ ಹೆಚ್.ಸಿ. 237ರವರು  ಚಿಕ್ಕಬಳ್ಳಾಪುರ  ಘನ ಪ್ರಧಾನ ಸಿವಿಲ್ ಜೆಡ್ಜ್ ಮತ್ತು ಜೆ.ಎಂ.ಎಪ್.ಸಿ ನ್ಯಾಯಾಲಯದಿಂದ  ಸಾದರಾದ  ಪಿಸಿಆರ್ ನಂಬರ್: 424/2021 ರ  ಸಾರಾಂಶವೇನೆಂದರೆ,  ಪಿರ್ಯಾದಿ  ಶ್ರೀ.ವೈ ಶಿವಕುಮಾರ್ ಬಿನ್ ಲೇಟ್ ಯಲ್ಲಪ್ಪ 34ವರ್ಷ ಗಿಡ್ನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ  ತಾಲ್ಲೂಕು ರವರ ತಂದೆಯಾದ ಯಲ್ಲಪ್ಪ ಬಿನ್ ಲೇಟ್ ಗುಂಡಪ್ಪ ರವರು ಹೊಸಹುಡ್ಯ  ಗ್ರಾಮದ ಸರ್ವೆ  ನಂಬರ್: 517/3 ರಲ್ಲಿ 01 ಎಕರೆ 13 ಗುಂಟೆ, ಸರ್ವೆ ನಂಬರ್: 518/1 ರಲ್ಲಿ  02 ಎಕರೆ 34 ಗುಂಟೆ , ಸರ್ವೆ ನಂಬರ್: 518/2 ರಲ್ಲಿ  01 ಎಕರೆ 24 ಗುಂಟೆ , ಸರ್ವೆ ನಂಬರ್: 518/3 ರಲ್ಲಿ  01 ಎಕರೆ 32 ಗುಂಟೆ. ಸರ್ವೆ ನಂಬರ್: 514/1 ರಲ್ಲಿ  34 ಗುಂಟೆ, ಸರ್ವೆ ನಂಬರ್: 484/3 ರಲ್ಲಿ  23 ಗುಂಟೆ, ಸರ್ವೆ ನಂಬರ್: 484/4 ರಲ್ಲಿ  22 ಗುಂಟೆ,  ಜಮೀನನ್ನು  ಕ್ರಯ ಪತ್ರದ ಸಂಖ್ಯೆ: 781/1995-96 , 784/1995-96 ದಿನಾಂಕ: 04/07/1995 ರಂದು  ಖರೀದಿ ಮಾಡಿಕೊಂಡು ಸ್ವಾದೀನಾನುಭದಲ್ಲಿದ್ದು ಸದರಿ ಜಮೀನಿನಲ್ಲಿ  ಬೆಳೆ ಬೆಳೆದುಕೊಂಡು  ಚಿಕ್ಕಬಳ್ಳಾಪುರ ಪ್ರಗತಿ ಕೃಷ್ಣ ಗ್ರಾಮೀಣ  ಬ್ಯಾಂಕ್ ನಲ್ಲಿ ಹೌಸಿಂಗ್ ಲೋನ್  ಪಡೆದುಕೊಂಡಿದ್ದು ಎಲ್ಲಾ ಮೂಲ ಕ್ರಯ ಪತ್ರಗಳು  ಬ್ಯಾಂಕಿನಲ್ಲಿರುತ್ತೆವೆ. ಕ್ರಯ ಪತ್ರದ  ನಂತರ  ರೆವಿನ್ಯೂ  ದಾಖಲೆಗಳಲ್ಲಿ   ಖಾತೆ   ಮೂಟೇಷನ್  ಪಿರ್ಯಾದಿಯ ತಂದೆ ಯಲ್ಲಪ್ಪ ರವರ ಹೆಸರಿನಲ್ಲಿ ವರ್ಗಾವಣೆಯಾಗಿರುತ್ತದೆ. ಪಿರ್ಯಾದಿಯ ತಂದೆಗೆ  03 ಜನ ಮಕ್ಕಳಿದ್ದು  02 ಹೆಣ್ಣು ಮಕ್ಕಳು ಮತ್ತು ಪಿರ್ಯಾದಿ ಶಿವ ಕುಮಾರ್ ರವರು ಒಬ್ಬನೇ ಮಗನಾಗಿರುತ್ತಾನೆ.  ದಿನಾಂಕ: 09/05/2003 ರಂದು  ಪಿರ್ಯಾದಿಯ ತಂದೆ  ನೊಂದಣಿ ಇಲ್ಲದ  ಮರಣ ಶಾಸನವನ್ನು  ಪಿರ್ಯಾದಿಯ ಹೆಸರಿಗೆ ಮಾಡಿದ್ದು, ದಿನಾಂಕ:06/09/2018 ರಂದು ಪಿರ್ಯಾದಿಯ ತಂದೆ ಮೃತಪಟ್ಟಿರುತ್ತಾನೆ. ಅಂದಿನಿಂದ  ಪಿರ್ಯಾದಿಯು ಸದರಿ ಜಮೀನಿನಲ್ಲಿ ಸ್ವಾದೀನಾನುಭವದಲ್ಲಿರುತ್ತಾನೆ. ಪಿರ್ಯಾದಿಯು ತನ್ನ ತಂದೆಯ ಮರಣದ ನಂತರ  ವಿಲ್ ನಂತೆ ತನ್ನ ಹೆಸರಿಗೆ ದಾಖಲೆಗಳನ್ನು  ಬದಲಾಯಿಸಿಕೊಳ್ಳಲು ರೆವಿನ್ಯೂ ಇಲಾಖೆಗೆ ಹೋದಾಗ  ನ್ಯಾಯಾಲಯ ದಿಂದ  ಪ್ರೋಬೇಟ್ ಪ್ರಮಾಣ  ಪತ್ರ ತರಲು ಸೂಚಿಸಿರುತ್ತಾರೆ. ಅದರಂತೆ  ಪಿರ್ಯಾದಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲದಿಂದ ಪಡೆದಿರುತ್ತಾರೆ,.  ನಂತರ  ಪಿರ್ಯಾದಿಯು ರೆವಿನ್ಯೂ  ಇಲಾಖೆಯಲ್ಲಿ  ದಾಖಲೆಗಳನ್ನು  ವರ್ಗಾವಣೆ ಮಾಡಿಕೊಡಲು ಕೋರಿದಾಗ ಆರೋಪಿ 01 ರಿಂದ 09 ರವರಿಗೆ ಯಲ್ಲಪ್ಪ ರವರಿಗೆ ಕ್ರಯ ಮಾಡಿಕೊಟ್ಟಿರುತ್ತಾರೆಂದು ಹಾಗೂ ಆ ಸಮಯದಲ್ಲಿ  ಆರೋಪಿ 02 ರಿಂದ 09 ರವರುಗಳು  ಅಪ್ರಾಪ್ತರಾಗಿರು ತ್ತಾರೆಂದು ಅವರ ಪರವಾಗಿ ಆರೋಫಿ 01 ರವರು ಕ್ರಯ ಮಾಡಿಕೊಟ್ಟಿರುತ್ತಾರೆ. ಆರೋಪಿಗಳು  ಈ ಜಮೀನನ್ನು ಕಬಳಿಸುವ ಉದ್ದೇಶದಿಂದ ಪಿರ್ಯಾದಿದಾರರ  ವಿರುದ್ದ ನ್ಯಾಯಾಲಯದಲ್ಲಿ  ಸಿವಿಲ್ ಪ್ರಕರಣ ಸಂಖ್ಯೆ:   O S No. 156/2015 ರಂತೆ  ದೂರು  ದಾಖಲು ಮಾಡಿರುತ್ತಾರೆ.  ಆರೋಪಿ 01 ರಿಂದ 03 ರವರುಗಳು  ಆರೋಫಿ 10 ರವರಿಗೆ  ನಕಲಿ  ದಾಖಲೆಗಳನ್ನು ಸೃಷ್ಟಿಸಿ  ಸರ್ವೆ ನಂಬರ್: 484/3 ರಲ್ಲಿನ 03 ಗುಂಟೆ  ಜಮೀನನ್ನು ದಿನಾಂಕ: 01/05/2005 ರಂದು  ಆರೋಪಿ 10 ರವರಿಗೆ  ಕ್ರಯ ಮಾಡಿಕೊಟ್ಟಿರುತ್ತಾರೆ.  ದಿನಾಕ: 07/02/2020 ರಂದು ಆರೋಪಿ 01 ರಿಂದ 02 ರವರು  ಜಮೀನಿನ ಬಳಿ ಅಪರಿಚಿತರನ್ನು  ಕರೆದುಕೊಂಡು ಬಂದು ಉದ್ದೇಶಪೂರ್ವಕವಾಗಿ ಗಲಾಟೆ ಮಾಡಿ ಆರೋಪಿ 10 ರವರು ತಾನು ಈ ಜಮೀನನ್ನು  ಕ್ರಯ ಮಾಡಿಕೊಂಡಿರುವುದಾಗಿ ಗಲಾಟೆ ಮಾಡಿರುತ್ತಾರೆ. ಪಿರ್ಯಾದಿದಾರರು ಈ ಜಮೀನಿನಲ್ಲಿ ತರಕಾರಿ ಮತ್ತು ಇತರೆ  ಬೆಳೆಗಳನ್ನು  ಬೆಳೆದು ದೊಡ್ಡಮ್ಮ ದೇವಾಲಯವನ್ನು ನಿರ್ಮಾಣ ಮಾಡಿರುತ್ತಾರೆ.   ಹೀಗಿದ್ದು ದಿನಾಂಕ: 18/01/2021 ರಂದು ಪಿರ್ಯಾದಿಯು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿರುತ್ತಾರೆ. ಈ ಬಗ್ಗೆ ಪೊಲೀಸರು ತನಗೆ ಸ್ವೀಕೃತಿಯನ್ನು ನೀಡಿದ್ದು ಆರೋಪಿ 01 ರಿಂದ 10 ರವರೊಂದಿಗೆ  ಶಾಮೀಲಾಗಿ ಪಿರ್ಯಾದಿದಾರರ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಪ್ರಾಣ ಬೆದರಿಕೆ  ಹಾಕಿ  ಮಾನಸಿಕವಾಗಿ, ದೈಹಿಕವಾಗಿ  ಹಿಂಸೆ ನೀಡಿ  ತೊಂದರೆ ಕೊಟ್ಟು ಮೋಸ ಮಾಡಿರುತ್ತಾರೆಂದು ಆರೋಫಿಗಳ  ವಿರುದ್ದ ಕಲಂ; 420. 143. 147. 447. 506. ರೆ/ವಿ 149 ಮತ್ತು 120(ಬಿ) ಐಪಿಸಿ ರೀತ್ಯಾ ಪ್ರಕರಂಣ ದಾಖಲಿಸಿಕೊಂಡು ಕಲಂ; 156(ಸಿ) ಸಿ.ಆರ್.ಪಿ.ಸಿ ಅಡಿಯಲ್ಲಿ  ವಿಚಾರಣೆ ಕೈಗೊಂಡು  ಅಂತಿಮ ವರದಿಯನ್ನು ಸಲ್ಲಿಸಲು  ಆದೇಶಿಸಿದ್ದರ  ಮೇರೆಗೆ ಈ  ಪ್ರ.ವ.ವರದಿ.

 

5. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.158/2021 ಕಲಂ. 323,324,504,506,34 ಐ.ಪಿ.ಸಿ:-

     ದಿನಾಂಕ-16/09/2021 ರಂದು ಸಂಜೆ 5-00 ಗಂಟೆಯಲ್ಲಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ನ್ಯಾಯಾಲಯ ಸಿಬ್ಬಂದಿಯಾದ ಹೆಚ್,ಸಿ 237 ರಮೇಶ್ ರವರು  ಘನ ಚಿಕ್ಕಬಳ್ಳಾಪುರ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆ,ಎಮ್,ಎಫ್,ಸಿ ನ್ಯಾಯಾಲಯದಿಂದ ಸಾದರಪಡಿಸಿದ ಪಿ,ಸಿ,ಆರ್ ಸಂಖ್ಯೆ-451/2021 ರ ಸಾರಾಂಶವೆನೆಂದರೆ ಪಿರ್ಯಾದಿ  ಶ್ರೀ ಹನುಮಪ್ಪ ಬಿನ್ ಕೆಂಪಣ್ಣ 60 ವರ್ಷ ಸೂಲಕುಂಟೆ ಗ್ರಾಮ ರವರು ಚಿಕ್ಕಬಳ್ಳಾಪುರ ತಾಲ್ಲೂಕು ಸೂಲಕುಂಟೆ ಗ್ರಾಮದಲ್ಲಿ ವಾಸವಾಗಿದ್ದು ಪಿರ್ಯಾದಿದಾರರಿಗೂ ಮತ್ತು ಕುಟುಂಬದವರಿಗೆ ವಿವಾದಗಳಿದ್ದು ನ್ಯಾಯಾಲಯದಲ್ಲಿ ಆರೋಪಿಗಳಾದ ಗಂಗಾಧರ ಮತ್ತು ಇತರರ ವಿರುದ್ದ ಪಿತ್ರಾರ್ಜಿತ ಆಸ್ತಿಗಳಿಗೆ ದಾವೆ ಹೂಡಿರುತ್ತಾರೆ. ಪಿರ್ಯಾದಿ ಮತ್ತು  ಇತರರು ಸುತ್ತ-ಮುತ್ತ ಗ್ರಾಮದವರು ಸುಮಾರು 20 ವರ್ಷಗಳ ಹಿಂದೆ ಮುನೇಶ್ವರ ಸ್ವಾಮಿ ದೇವಸ್ಥಾನದ ಪೂಜೆ ಕಾರ್ಯಗಳನ್ನು ನಡೆಸುತ್ತಾ  ಪ್ರತಿ ಗುರುವಾರ ಮತ್ತು ಶುಕ್ರವಾರ ಪೂಜೆ ಮಾಡುತ್ತಿರುತ್ತಾರೆ. ಹೀಗಿರುವಲ್ಲಿ ಪಿರ್ಯಾದಿ ಮತ್ತು ಆತನ ಹೆಂಡತಿ ವೆಂಕಟಮ್ಮ ರವರು ಆರೋಪಿಗಳ ವಿರುದ್ದ  ಮುನೇಶ್ವರ ದೇವಸ್ಥಾನಕ್ಕೆ ಪೂಜಾ ಕಾರ್ಯಗಳಿಗೆ ತೊಂದರೆ ಮಾಡದಂತೆ ಶಾಶ್ವತ ತಡೆಯಾಜ್ಷೆಯನ್ನು ನ್ಯಾಯಾಲಯದಿಂದ ಆದೇಶವನ್ನು ಪಡೆದಿರುತ್ತಾರೆ. ದಿನಾಂಕ-21/08/2021 ಬೆಳಿಗ್ಗೆ 08:30 ಗಂಟೆ ಸಮಯದಲ್ಲಿ ದೇವಾಲಯದ ಬಳಿ ಆರೋಪಿಗಳಾದ ಸೂಲಕುಂಟೆ ಗ್ರಾಮದ ವಾಸಿಗಳಾದ 1. ಗಂಗಾಧರ 2.ಶ್ರೀಮತಿ ರಾಧಮ್ಮ 3.ಚಂದ್ರಪ್ಪ 4.ಶ್ರೀಮತಿ ಹನುಮಕ್ಕ ರವರುಗಳು ಅಕ್ರಮವಾಗಿ ಗುಂಪು ಕಟ್ಟಿಕೊಂಡು ದೇವಸ್ಥಾನಕ್ಕೆ ಬಂದು ಗಲಾಟೆ ಮಾಡಿರುತ್ತಾರೆ ಮತ್ತು ಆರೋಪಿ-1 ಮತ್ತು ಆರೋಪಿ-2 ರವರುಗಳು ದೊಣ್ಣೆಗಳಿಂದ ಹೊಡೆದಿರುತ್ತಾರೆ ನಂತರ ಪಿರ್ಯಾದಿದಾರರು ವೈದ್ಯರ ಬಳಿ ಚಿಕಿತ್ಸೆ ಪಡೆದಿರುಕೊಂಡಿರುತ್ತಾರೆ ಆಗ ಸ್ಥಳಿಯ ಪೊಲೀಸ್ ಠಾಣೆಗೆ ಬೇಟಿ ನೀಡಿದ್ದು ಯಾವುದೇ ಪ್ರಕರಣ ದಾಖಲಿಸದ ಕಾರಣ ನ್ಯಾಯಾಲಯದಲ್ಲಿ ದೂರು ನೀಡುತ್ತಿರುವುದಾಗಿ ಆರೋಪಿಗಳ ವಿರುದ್ದ ಕಲಂ:323.324.504.506 ರೆ/ವಿ 34 ಐ,ಪಿ,ಸಿ, ರಂತೆ ದಾಖಲಿಸಿಕೊಳ್ಳುವಂತೆ ಘನ ನ್ಯಾಯಾಲಯದಲ್ಲಿ ದೂರು ನೀಡಿದ್ದು ಈ ಬಗ್ಗೆ ಘನ ನ್ಯಾಯಾಲಯವು ಕಲಂ 156(3) ಸಿ,ಆರ್,ಪಿ,ಸಿ ಆಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ಅಂತಿಮ ವರದಿಯನ್ನು ಘನ ನ್ಯಾಯಾಲಯಕ್ಕೆ ನೀಡುವಂತೆ ಸೂಚಿಸಿದ್ದರ ಮೇರೆಗೆ ಈ ಪ್ರ ವ,ವರದಿ.

 

6. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.69/2021 ಕಲಂ. 379 ಐ.ಪಿ.ಸಿ & 41(1)(d),102 ಸಿ.ಆರ್.ಪಿ.ಸಿ:-

     ದಿನಾಂಕ:-17/09/2021 ರಂದು ಬೆಳಿಗ್ಗೆ 11-30 ಗಂಟೆಗೆ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಹೆಚ್ ಸಿ 118 ಪೆಂಚಲಪ್ಪ ರವರು ಠಾಣೆಗೆ ಆರೋಪಿ ಮತ್ತು ದ್ವಿಚಕ್ರವಾಹನದೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶವೇನೆಂದರೆ ದಿನಾಂಕ 17-09-2021 ರಂದು ಠಾಣಾಧಿಕಾರಿಗಳು ಬೆಳಗಿನ ಹಾಜರಾತಿಯಲ್ಲಿ  ತನಗೆ ಮತ್ತು ಸಿ.ಪಿ.ಸಿ:127 ಕೃಷ್ಣಪ್ಪ  ರವರಿಗೆ ಅಪರಾದ ಪತ್ತೆ  ಕರ್ತವ್ಯಕ್ಕೆ ನೇಮಿಸಿದ್ದು, ಅದರಂತೆ ಠಾಣೆಯ ಮೊ.ಸಂ:67/2021 ಕಲಂ:379 ಐ.ಪಿ.ಸಿ ಕಳವು ಪ್ರಕರಣದ ಆರೋಪಿ ಮತ್ತು ದ್ವಿ ಚಕ್ರ ವಾಹನವನ್ನು ಪತ್ತೆಯ ಮಾಡುವ ಸಲುವಾಗಿ ವಿಶೇಷ ಗಸ್ತಿಗೆ ನೇಮಕ ಮಾಡಿದ್ದು ಅದರಂತೆ ತಾವು ಚಿಕ್ಕಬಳ್ಳಾಪುರ ನಗರದ ವಾಪಸಂದ್ರ. ಇಂದ್ರ ನಗರ. ಅಂಬೇಡ್ಕರ ನಗರ ಎಂ.ಜಿ ರಸ್ತೆ. ಬಾಪೂಜಿ ನಗರ, ಕೋಟೆ, ಬಜಾರ್ ರಸ್ತೆ, ಬಿ ಬಿ ರಸ್ತೆ. ದಿನ್ನೇಹೂಸಹಳ್ಳಿ ರಸ್ತೆಯ ಕಡೆ ಗಸ್ತು ಮಾಡಿಕೊಂಡು ಬೆಳಗ್ಗೆ 11-00 ಗಂಟೆಯ ಸಮಯದಲ್ಲಿ ದಿನ್ನೇಹೂಸಹಳ್ಳಿ ರಸ್ತೆಯ ಪ್ರಶಾಂತ ನಗರದ ಬಾಲಕಿಯರ ಹಾಸ್ಟೆಲ್ ಕಡೆ ಗಸ್ತು ಮಾಡುತ್ತಿದ್ದಾಗ ಬಾಲಕಿಯರ ಹಾಸ್ಟೆಲ್ ಮುಂಬಾಗದ ರಸ್ತೆಯಿಂದ ದಿನ್ನೇಹೂಸ ಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಒಬ್ಬ ಅಸಾಮಿ ದ್ವಿ ಚಕ್ರ ವಾಹನವನ್ನು ತಳ್ಳಿಕೊಂಡು ಹೋಗುತ್ತಿದ್ದ್ದು ಸದರಿ ಆಸಾಮಿಯು ಸಮವಸ್ತ್ರದಲ್ಲಿ ಇದ್ದ ತಮ್ಮನ್ನು ನೋಡಿ ದ್ವಿ ಚಕ್ರ ವಾಹನವನ್ನು ಬಿಟ್ಟು ಓಡಿಹೋಗಲು ಪ್ರಯತ್ನಿಸಿದವನ್ನು ಹಿಡಿದುಕೊಂಡು ಆತನ ಹೆಸರು ಮತ್ತು ವಿಳಾಸವನ್ನು ಹಾಗೂ ಅತನ ಬಳಿ ದ್ವಿ ಚಕ್ರ ವಾಹನವನ್ನು ತಳ್ಳಿಕೊಂಡು ಹೋಗುವ ಬಗ್ಗೆ ಕೇಳಲಾಗಿ ಅತನು ತೊದಲುತ್ತಾ ದ್ವಿ ಚಕ್ರ ವಾಹನವನ್ನು ಈ ಹಿಂದೆ ಕಳ್ಳತನ ಮಾಡಿಕೊಂಡು ಬಂದಿದ್ದು ವಾಹನದಲ್ಲಿ ಪೆಟ್ರೋಲ್ ಮುಗಿದಿರುವುದಾಗಿ ಅದುದರಿಂದ ದಿನ್ನೇಹೂಸ ಹಳ್ಳಿ ಗ್ರಾಮಕ್ಕೆ ನೂಕಿಕೊಂಡು ಹೋಗುತ್ತಿರುವುದಾಗಿ ತನ್ನ ಹೆಸರು ಮೂರ್ತಿ ಬಿನ್ ವೆಂಕಟೇಶಪ್ಪ 20 ವರ್ಷ, ನಾಯಕ ಜನಾಂಗ, ಕೂಲಿಕೆಲಸ, ಹನಮಂತಪುರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಹಾಲಿ ವಾಸ ಚಿಮಕಲಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು ಎಂತ ತಿಳಿಸಿ ದ್ವಿಚಕ್ರ ವಾಹನದ ಬಗ್ಗೆ ಕೇಳಲಾಗಿ ಸಮಂಜಸವಾದ ಉತ್ತರವನ್ನು ಕೊಟ್ಟಿರುವುದಿಲ್ಲ. ಸದರಿ ಆಸಾಮಿಯು ದ್ವಿ ಚಕ್ರ ವಾಹನವನ್ನು ಚಿಕ್ಕಬಳ್ಳಾಪುರ ನಗರದಲ್ಲಿ ಕಳವು ಮಾಡಿಕೊಂಡು ಬಂದಿರಬಹುದೆಂದು ಅನುಮಾನವಿರುತ್ತೆ ಅದ್ದರಿಂದ ಅಸಾಮಿಯನ್ನು ಮತ್ತು ಅತನ ಬಳಿಯಿದ್ದ ಕೆಎ-40-ಎಸ್-6012 ಹೀರೊ ಪ್ಯಾಷನ್ ಪ್ರೋ ದ್ವಿ ಚಕ್ರ ವಾಹನವನ್ನು ತಂದು ಹಾಜರು ಪಡಿಸಿ ಮುಂದಿನ ಕ್ರಮ ಜರುಗಿಸಲು ನೀಡಿದ ವರದಿಯ ದೂರಿನ ಮೇರೆಗೆ  ಈ ಪ್ರ.ವ.ವರದಿ.

 

7. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್‌ ಠಾಣೆ ಮೊ.ಸಂ.49/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ;-17-09-2021ರಂದು15-00 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರ್ ಮುದ್ರಿತ ದೂರಿನ ಸಾರಾಂಶವೇನೆಂದರೆ ತಾನು ಮತ್ತು ನಮ್ಮೂರಿನ ರಮೇಶಬಾಬು ಬಿನ್ ರಾಮಚಂದ್ರಪ್ಪ 24 ವರ್ಷ ವಕ್ಕಲಿಗರು ರವರು  ಬೀಟ್ ರೋಟ್ ವ್ಯಾಪಾರ  ಮಾಡುತ್ತಿದ್ದು ತಾನು ಮತ್ತು ರಮೇಶ  ಬಾಗೇಪಲ್ಲಿ ಚೇಳೂರು ಆಂದ್ರಪ್ರದೇಶದ ಕಡೆ  ಬೀಟ್ ರೋಟನ್ನು ರೈತರಿಂದ ತೆಗದುಕೊಂಡು ಬೆಂಗಳೂರಿಗೆ ಕಳುಹಿಸಿ ಕೊಡುತ್ತಿರುತ್ತೇವೆ, ಅದರಂತೆ ದಿನಾಂಕ;-16-09-2021 ರಂದು ರಮೇಶನ ಬಾಬತ್ತು ದ್ವಿಚಕ್ರ ವಾಹನ ಸಂಖ್ಯೆ KA-67-E-6490 ನೊಂದಣಿಯ ದ್ವಿಚಕ್ರ ವಾಹನದಲ್ಲಿ ನಾನು ಹಿಂಬದಿಯಲ್ಲಿ ಕುಳಿತುಕೊಂಡು ಬಾಗೇಪಲ್ಲಿಕಡೆ ಬೀಟ್ ರೋಟ್ ತೋಟಗಳನ್ನು ನೋಡಿಕೊಂಡು ಚಿಕ್ಕಬಳ್ಳಾಪುರ ತಾಲ್ಲೂಕಿನ ಕೊಳವನ ಹಳ್ಳಿ ಕಡೆ ತೋಟಗಳನ್ನು ನೋಡಲು ಸಂಜೆ 5-00 ಗಂಟೆಯ ಸಮಯದಲ್ಲಿ ಎನ್,ಎಚ್-7 ರಸ್ತೆಯಲ್ಲಿನ ಅಗಲಗುರ್ಕಿ ಪ್ಲೈ ಓವರ್ ಬಳಿ ಅರಣ್ಯ ಇಲಾಖೆಯ ನೆಡು ತೋಪಿನ ಬಳಿ ಹೋಗುತ್ತಿದ್ದಾಗ ನಮ್ಮ ಮುಂದೆ ಲಾರಿ ಸಂಖ್ಯೆ KA-43-0242 ನೊಂದಣಿಯ ಲಾರಿ ಹೋಗುತ್ತಿದ್ದು ಅದರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದು ರಸ್ತೆಯ ಎಡಬದಿಯಲ್ಲಿ  ಸಡನ್ನಾಗಿ  ಯಾವುದೇ ಸೂಚನೆಯನ್ನು ನೀಡದೆ ನಿಲ್ಲಿಸಿದ್ದರಿಂದ  ಚಾಲನೆಯಲ್ಲಿದ್ದ ರಮೇಶನ ಬಾಬತ್ತು ದ್ವಿಚಕ್ರ ವಾಹನವು ಲಾರಿಯ ಹಿಂಬದಿಯ ಮದ್ಯ ಬಾಗಕ್ಕೆ ತಗುಲಿದ ಪರಿಣಾಮ  ದ್ವಿಚಕ್ರ ವಾಹನ ಮುಂಭಾಗ ಜಖಂಗೊಂಡು ಸವಾರ ರಮೇಶಬಾಬುಗೆ ತಲೆಯ ಹಣೆಗೆ, ಮುಖಕ್ಕೆ ರಕ್ತಗಾಯವಾಗಿದ್ದು ಕಾಲುಗಳಿಗೆ  ರಕ್ತ ಗಾಯಗಳಾ ಗಿದ್ದವು, ನನಗೆ ಎಡಭುಜಕ್ಕೆ  ಮತ್ತು ಬಲಕಾಲಿಗೆ ಗಾಯವಾಯಿತು, ಅಷ್ಟರಲ್ಲಿ ಸ್ಥಳಕ್ಕೆ ಬಂದ 112 ಪೊಲೀಸಿನವರು ರಸ್ತೆಯಲ್ಲಿ ಬಂದ ಕಾರಿನಲ್ಲಿ ನಮ್ಮಿಬ್ಬರನ್ನು ಕುಳ್ಳರಿಸಿ ಕೊಂಡು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದರು, ಅಲ್ಲಿ ರಮೇಶನಿಗೆ ಚಿಕಿತ್ಸೆ ಯನ್ನು ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ರಮೇಶನನ್ನು ನಿಮ್ಹಾನ್ಸ್ ಆಸ್ಪತ್ರಗೆ ಕರೆದು ಕೊಂಡು ಹೋಗುವಂತೆ ಕಳುಹಿಸಿದ್ದು ನಾನು ಹೋರರೋಗಿಯಾಗಿ ಚಿಕಿತ್ಸೆಯನ್ನು ಪಡೆದು ಕೊಂಡೆನು, ನಾನೂ ಸಹಃ ಅವನ ಜೊತೆಯಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ಯಲಹಂಕದ ಅಪೂರ್ವ ಆಸ್ಪತ್ರಗೆ ಸೇರಿಸಿದೆನು, ಅಲ್ಲಿ ರಮೇಶನು ಚಿಕಿತ್ಸೆಯನ್ನು ಪಡೆದು ಕೊಳ್ಳುತ್ತಿರುತ್ತಾನೆ, ನಾನು ಸಹಃ ಅಲ್ಲಿಯೇ ಇದ್ದು ಈ ದಿನ ತಡವಾಗಿ ಬಂದು  ದೂರನ್ನು ನೀಡುತ್ತಿದ್ದು ನಮಗೆ ಅಪಘಾತವಾಗಲು ಕಾರಣಕರ್ತನಾದ KA-43-0242 ನೊಂದ ಣಿಯ ಲಾರಿಯ ಚಾಲಕನ ಅಜಾಗರೂಕತೆಯೇ ಕಾರಣವಾಗಿದ್ದು ಲಾರಿಯನ್ನು ಸ್ಥಳದಲ್ಲಿ ನಿಲ್ಲಿಸದೆ ಹೊರಟು ಹೋಗಿರುವ ವಾಹನವನ್ನು ಮತ್ತು ಅದರ ಚಾಲಕನನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ.

 

8. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.412/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 17/09/2021 ರಂದು ಮದ್ಯಾಹ್ನ 2.15 ಗಂಟೆಗೆ ಠಾಣೆಯ ಸಿ.ಹೆಚ್.ಸಿ-165 ಚಂದ್ರಪ್ಪ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 17/09/2021 ರಂದು ಪಿ.ಎಸ್.ಐ ಕೆ.ನಾರಾಯಣಸ್ವಾಮಿ ರವರು ತನಗೆ ಮತ್ತು ಸಿ.ಪಿ.ಸಿ-504 ಸತೀಶ್, ಸಿ.ಪಿ.ಸಿ-544 ವೆಂಕಟರವಣ, ಸಿ.ಪಿ.ಸಿ-24 ನರೇಶ ರವರನ್ನು ಗ್ರಾಮಗಳ ಗಸ್ತಿಗಾಗಿ ನೇಮಕ ಮಾಡಿದ್ದು, ಅದರಂತೆ ತಾವು ಕಾಚಹಳ್ಳಿ, ಗಡದಾಸನಹಳ್ಳಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಮದ್ಯಾಹ್ನ 12.00 ಗಂಟೆಗೆ ಸೀಕಲ್ಲು ಗ್ರಾಮಕ್ಕೆ ಹೋಗಲಾಗಿ ಸದರಿ ಗ್ರಾಮದ ವಾಸಿಯಾದ ನಾರಾಯಣಸ್ವಾಮಿ ಬಿನ್ ಲೇಟ್ ದೊಡ್ಡರಾಮಪ್ಪ ರವರು ತನ್ನ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಮೇರೆಗೆ, ಸದರಿ ನಾರಾಯಣಸ್ವಾಮಿ ರವರ ಚಿಲ್ಲರೆ ಅಂಗಡಿಯ ಬಳಿ ದಾಳಿ ಮಾಡುವ ಸಲುವಾಗಿ ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ನಾರಾಯಣಸ್ವಾಮಿ ರವರ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಅಂಗಡಿಯ ಮುಂಭಾಗದಲ್ಲಿ ಕುಳಿತಿದ್ದ ವ್ಯಕ್ತಿಗಳು ಹಾಗೂ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ಅಸಾಮಿಯು ಓಡಿ ಹೋಗಿದ್ದು, ಸ್ಥಳದಲ್ಲಿ ನೋಡಲಾಗಿ 1) 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 10 ಟೆಟ್ರಾ ಪಾಕೆಟ್ ಗಳು, ( ಒಟ್ಟು ಬೆಲೆ 351.3 ರೂ ಮೌಲ್ಯದ 900 ಎಂ.ಎಲ್ ಮದ್ಯ),  2) ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು, 3) ಒಂದು ಲೀಟರ್ ನ ಎರಡು ಓಪನ್ ಆಗಿರುವ ನೀರಿನ ಬಾಟಲ್ ಗಳು, 4) ಓಪನ್ ಆಗಿದ್ದ 90 ಎಂ ಎಲ್ ನ ಹೇವಾರ್ಡ್ಸ್ ಕಂಪನಿಯ ಚೀರ್ಸ್ ವಿಸ್ಕಿ 2 ಟೆಟ್ರಾ ಪಾಕೇಟ್ ಗಳು ಇದ್ದವು. ಅಲ್ಲಿದ್ದ ಸಾರ್ವಜನಿಕರನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ವ್ಯಕ್ತಿಯ ಹೆಸರು ವಿಳಾಸ ಕೇಳಲಾಗಿ ನಾರಾಯಣಸ್ವಾಮಿ ಬಿನ್ ಲೇಟ್ ದೊಡ್ಡರಾಮಪ್ಪ, 60 ವರ್ಷ, ಗಾಣಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಸೀಕಲ್ಲು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಮದ್ಯಾಹ್ನ 12.30 ರಿಂದ 13.30 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ಎಲ್ಲಾ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲುಗಳು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ತನ್ನ ಚಿಲ್ಲರೆ ಅಂಗಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ನಾರಾಯಣಸ್ವಾಮಿ ಬಿನ್ ಲೇಟ್ ದೊಡ್ಡರಾಮಪ್ಪ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

9. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.178/2021 ಕಲಂ. ಮನುಷ್ಯ ಕಾಣೆ:-

     ದಿನಾಂಕ:17/09/2021 ರಂದು ಪಿರ್ಯಾದಿದಾರರಾದ ಸತೀಶ್ ಕುಮಾರ್ ವಿ ಬಿನ್ ವೆಂಕಟಾಚಲಪತಿ, ಆನೂರು ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ತಂದೆಯಾದ ವೆಂಕಟಾಚಲಪತಿ ರವರು ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಹೀಗಿರುವಾಗ ದಿನಾಂಕ 13/09/2021 ರಂದು ಬೆಳಿಗ್ಗೆ 10-00 ತನ್ನ ಸ್ವಂತ ಕೆಲಸದ ನಿಮಿತ್ತ ಚಿಂತಾಮಣಿ ನಗರಕ್ಕೆ ಹೋಗಿ ಬರುವುದಾಗಿ ಹೇಳಿ ಬಂದಿದ್ದು ನಂತರ ರಾತ್ರಿಯಾದರೂ ಮನೆಗೆ ವಾಪಸ್ಸು ಬಂದಿರುವುದಿಲ್ಲ. ತಮಗೆ ಗಾಬರಿಯಾಗಿ  ತಮ್ಮ ತಂದೆಯವರನ್ನು ಚಿಂತಾಮಣಿ ನಗರದಲ್ಲಿ ಹುಡುಕಾಡುತ್ತಿದ್ದಾಗ ತಮ್ಮ ತಂದೆಯವರ ದ್ವಿ-ಚಕ್ರ ವಾಹನ ಕೆ.ಎಂ.ಡಿ ಕಲ್ಯಾಣ ಮಂಟಪದ ಮುಂಭಾಗದಲ್ಲಿ ನಿಲ್ಲಿಸಿರುತ್ತೆ. ಇದುವರೆಗೂ ತಾವು ತಮ್ಮ ತಂದೆಯವರನ್ನು ಹುಡುಕಾಡಿದರೂ ಸಹ ಪತ್ತೆಯಾಗದೇ ಇದ್ದು ಈ ದಿನ ದಿನಾಂಕ 17/09/2021 ರಂದು ತಡವಾಗಿ ದೂರು ನೀಡುತ್ತಿರುತ್ತೆ. ಆದ್ದರಿಂದ ಕಾಣೆಯಾದ ತಮ್ಮ ತಂದೆಯವರನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

10. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.243/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:07/09/2021 ರಂದು ಸಂಜೆ 6-30 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 07/09/2021 ರಂದು  ಮದ್ಯಾಹ್ನ 3-00  ಗಂಟೆಯಲ್ಲಿ  ಗೌರಿಬಿದನೂರು ತಾಲ್ಲೂಕು  ನಗರಗೆರೆ ಹೋಬಳಿ ಚಿಕ್ಕಮಲ್ಲೇನಹಳ್ಳಿ  ಗ್ರಾಮದಲ್ಲಿ ಯಾರೋ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು  ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಪಿ.ಸಿ-460 ಷೇಕ್ ಸನಾವುಲ್ಲಾ, ಪಿ.ಸಿ-33 ಕೃಷ್ಣಪ್ಪ ಹಾಗೂ ಮ.ಪಿ.ಸಿ-246 ಸೌಮ್ಯ ರವರೊಂದಿಗೆ   ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-140  ರಲ್ಲಿ  ಚಿಕ್ಕಮಲ್ಲೇನಹಳ್ಳಿ ಗ್ರಾಮದಲ್ಲಿ  ಹೋಗಿ , ಅಲ್ಲಿ  ಪಂಚಾಯ್ತಿದಾರರನ್ನು ಕರೆದುಕೊಂಡು  ಮಾಹಿತಿ ಇದ್ದ  ಸ್ಥಳಕ್ಕೆ  ಸಂಜೆ 4-00   ಗಂಟೆಗೆ   ನಡೆದುಕೊಂಡು  ಹೋಗಿ   ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಮಹಿಳೆ  ತನ್ನ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್  ‍ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು  ಮಧ್ಯಪಾನ ಮಾಡುತ್ತಿದ್ದವರು  ಓಡಿಹೋಗಿರುತ್ತಾರೆ.  ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ  ಮಹಿಳೆಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ,  ತನ್ನ ಹೆಸರು   ಗೋಪಿ ಬಾಯಿ ಬಿನ್ ನಾರಾಯಣ ನಾಯಕ್ ,28 ವರ್ಷ, ಲಂಬಾಣಿ ಜನಾಂಗ, ಚಿಕ್ಕಮಲ್ಲೇನಹಳ್ಳಿ  ಗ್ರಾಮ,  ನಗೆರೆಗೆರೆ ಹೋಬಳಿ,  ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು    ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್.ಸಾಮರ್ಥ್ಯದ HAY WARDS CHEERS  WHISKY ಯ 20   ಟೆಟ್ರಾ ಪಾಕೆಟ್ ಗಳು ಇದ್ದು,   ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 800 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 702.6/- ರೂ.ಗಳಾಗಿರುತ್ತೆ.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ಮಹಿಳೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು  ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ   ಸ್ಥಳದಲ್ಲಿ ಸಂಜೆ 4-30 ಗಂಟೆಯಿಂದ   ಸಂಜೆ 5-30   ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ   ಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ   90 ಎಂ.ಎಲ್ ಸಾಮರ್ಥ್ಯದ HAYWARDS CHEERS  WHISKY ಯ 20  ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ  04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಸಂಜೆ 6-30 ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು,   ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ ದೂರಾಗಿರುತ್ತೆ. ದಿನಾಂಕ: 17/09/2021 ರಂದು ಬೆಳಿಗ್ಗೆ 9-30 ಗಂಟೆಗೆ ನ್ಯಾಯಾಲಯದ ಸುಬ್ಬಂದಿ ಪಿ.ಸಿ 582 ರವರು ಠಾಣೆಯಲ್ಲಿ ಹಾಜರು ಪಡಿಸಿದ ಘನ ನ್ಯಾಯಾಲಯದ ಅನುಮತಿ ಪತ್ರದ ಮೇರೆಗೆ ಠಾಣಾ ಮೊ.ಸಂ 243/2021 ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲುಮಾಡಿಕೊಂಡಿರುತ್ತೆವೆ.

 

11. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.244/2021 ಕಲಂ. 324,504,34 ಐ.ಪಿ.ಸಿ:-

     ದಿನಾಂಕ:17/09/2021 ಮದ್ಯಾಹ್ನ 2-30 ಗಂಟೆಗೆ ಫಿರ್ಯಾದುದಾರರಾದ ಕಂಬಾಲಪ್ಪ ಬಿನ್ ಲೇಟ್ ನರಸಿಂಹಪ್ಪ, 74 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ,ತೋಕಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂಧರೆ: ದಿನಾಂಕ:10/08/2021 ರಂದು ಸಂಜೆ 6-00 ಗಂಟೆ ಸಮಯದಲ್ಲಿ ತಾನು ತಮ್ಮ ಗ್ರಾಮದ ಗಂಗಮ್ಮ ಗುಡಿಯ ಬಳಿ ಕುಳಿತುಕೊಂಡಿದ್ದಾಗ ತಮ್ಮ ಗ್ರಾಮದ ನರಸಿಂಹಪ್ಪ ಬಿನ್ ಲೇಟ್ ಗಂಗಪ್ಪ,45 ವರ್ಷ, ಆದಿ ಕರ್ನಾಟಕ ಜನಾಂಗ, ರವರು ಕುಡಿದು ಇವರ ಮನೆಯ ಬಳಿ ಬೈದುಕೊಂಡು ತಿರುಗಾಡುತ್ತಿದ್ದು ಅಲ್ಲಿಯೇ ಕುಳಿತಿದ್ದ ತಾನು ಯಾಕೋ ನರಸಿಂಹಪ್ಪ ಗಲಾಟೆ ಮಾಡಿಕೊಳ್ಳುತ್ತಿದ್ದಿಯಾ ಮನೆಗೆ ಹೋಗು ಎಂದು ಬುದ್ದಿವಾದ ಹೇಳಿದೆ. ಅಷ್ಠರಲ್ಲಿಯೇ ಅಲ್ಲಿಯೇ ಇದ್ದ ಇವನ ತಮ್ಮನಾದ ರಾಮಾಂಜಿ ಬಿನ್ ಲೇಟ್ ಗಂಗಪ್ಪ, 40 ವರ್ಷ, ಆದಿಕರ್ನಾಟಕ ಜನಾಂಗ, ರವರು ತನಗೆ ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ತನ್ನ ಬಲಕೈಗೆ ಹೊಡೆದನು. ನಂತರ ನರಸಿಂಹಪ್ಪ ರವರು ಮತ್ತೊಂದು ಕಟ್ಟಿಗೆಯನ್ನು ತೆಗೆದುಕೊಂಡು ತನ್ನ ಮೈಮೇಲೆ ಹೊಡೆದು ಮೂಗೇಟು ಉಂಟು ಮಾಡಿರುತ್ತಾರೆ. ನಂತರ ತಾನು ದಿನಾಂಕ:11/08/2021 ರಂದು ನಮ್ಮ ಗ್ರಾಮದ ಗಂಗಪ್ಪ ಎಂಬುವರು ತನ್ನನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲು ಮಾಡಿದರು. ದಿನಾಂಕ:18/08/2021 ರಂದು ತಾನು ಗೌರಿಬಿದನೂರು ಆಸ್ಪತ್ರೆಯಿಂದ ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗಿ ದಾಖಲಾಗಿರುತ್ತೇನೆ. ನಂತರ ತಮ್ಮ ಗ್ರಾಮದ ಹಿರಿಯರು ತಮಗೆ ಮಾತನಾಡಿ ರಾಜಿ ಪಂಚಾಯ್ತಿ ಮಾಡುವುದಾಗಿ ಹೇಳಿ ಈ ವರೆಗೂ ಯಾವುದೇ ರೀತಿ ರಾಜಿ ಮಾಡಿರುವುದಿಲ್ಲ. ಆದುದರಿಂದ ಈ ದಿನ ಠಾಣೆಗೆ ತಡವಾಗಿ ಬಂದು ತನ್ನ ಮೇಲೆ ಹಲ್ಲೆ ಮಾಡಿ ನನಗೆ ಈ ರೀತಿ ಗಾಯ ಪಡಿಸಿದ ನರಸಿಂಹಪ್ಪ ಮತ್ತು ರಾಮಾಂಜಿ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಾಗಿರುತ್ತೆ.

 

12. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.224/2021 ಕಲಂ. 279,337 ಐ.ಪಿ.ಸಿ:-

     ದಿ:16.09.2021 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಶ್ರೀ ವೆಂಕಟರೆಡ್ಡಿ ಬಿನ್ ಯರ್ರಪ್ಪ ಪಟ್ಲವಾರಿ ಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ಠಾಣಾ ವ್ಯಾಪ್ತಿಗೆ ಬರುವ ಮಿಂಚಿನಹಳ್ಳಿ ಮತ್ತು ಭೋಗೇನಹಳ್ಳಿ ಗ್ರಾಮಗಳ ಮದ್ಯೆ ದಿ:14.09.2021 ರಂದು ರಾತ್ರಿ 11-00 ರ ಸುಮಾರಿಗೆ ದೂರುದಾರನಾದ ನನ್ನ ಮಗ ದ್ವಿಚಕ್ರ ವಾಹನದಲ್ಲಿ ಗಾಡಿ ಸಂಖ್ಯೆ ಕೆ.ಎ.40.ಇ.ಎಪ್. 5332 ರಲ್ಲಿ ಮಿಂಚಿನಹಳ್ಳಿ ಕ್ರಾಸ್ ನಿಂದ ದೊಡ್ಡಕುರುಬರಹಳ್ಳಿ ಗ್ರಾಮಕ್ಕೆ ಬರುತ್ತಿರಲಾಗಿ, ಇದೇ ಮಾರ್ಗ ಮದ್ಯೆ ಹೊಲಗಳಲ್ಲಿ ರೋಟರಿ ಹಾಕಿ ಟ್ರಾಕ್ಟರ್ ನ ಚಾಲಕ ಏಕಾಏಕಿ ದಾರಿಯಲ್ಲಿ ಏನು ಬರುತ್ತಿದೆ ಎಂದು ನೋಡದೆ ಟ್ರಾಕ್ಟರ್ ತಿರುಗಿಸಲಾಗಿ ಸಿಂಗಲ್ ಲೈಟ್ ಹಾಕಿಕೊಂಡು ಬಂದ ಈ ಟ್ರಾಕ್ಟರ್ ಮುಂದೆ ಹೋಗುತ್ತಿದ್ದ ನನ್ನ ಮಗನಾದ ರಾಜ್ ಕುಮಾರ್ ಬಿನ್ ವೆಂಕಟರೆಡ್ಡಿ, 28 ವರ್ಷ, ವಯಸ್ಸು ರವರಿಗೆ ಹಿಂಬದಿಯಿಂದ ಈ ಟ್ರಾಕ್ಟರ್ ನಿಂದ ದ್ವಿಚಕ್ರ ವಾಹನಕ್ಕೆ ಗುದ್ದಿರುತ್ತಾನೆ. ಪರಿಣಾಮ ದ್ವಿಚಕ್ರ ವಾಹನ ನುಜ್ಜುಗುಜ್ಜಾಗಿ ಹಾಳಾಗಿರುತ್ತದೆ. ಹಾಗೂ ನನ್ನ ಮಗನ ಬಲಗಾಲು ಮುಗಿದು ರಕ್ತ ಸ್ರಾವವಾಗಿ ಮೂಳೆ ಮಾಂಸಖಂಡ ಹೊರಬಂದಿರುತ್ತೆ. ಆಗ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿರುತ್ತದೆ. ಹಾಗೂ ಈಗಲೂ ಸಹ ಇನ್ನು ಚಿಕಿತ್ಸೆ ಮುಂದುವರೆಸುತ್ತಿದ್ದೇವೆ. ಟ್ರಾಕ್ಟರ್ ಸಂಖ್ಯೆ ಕೆ.ಎ.40. ಟಿ.ಎ. 6242 ಇದಾಗಿದ್ದು ಆದರೆ ಅದರ ಚಾಲಕನಾಗಲಿ ಮಾಲಿಕರಾಗಲಿ ದೂರದಾರನಾದ ನನ್ನ ಮಗನಿಗೆ ಏನಾಗಿದೆ ಹೇಗಿದ್ದಾರೆ ಎಂದು ಸಹ ವಿಚಾರಿಸಿರುವುದಿಲ್ಲ. ಆದ ಕಾರಣ ರಾತ್ರಿ ವೇಳೆ ಸಿಂಗಲ್ ಲೈಟ್ ಹಾಕಿಕೊಂಡು ಬಂದು ದ್ಚಿಚಕ್ರ ವಾಹನವನ್ನು ಹಿಂಬದಿಯಿಂದ ಗುದ್ದಿ ನನ್ನ ಮಗನ ಪ್ರಾಣಕ್ಕೂ ಕಂಟಕ ತಂದಿರುವ ಈ ಚಾಲಕನಾದ ಗಂಗರಾಜ ಮೊಬೈಲ್ ನಂ: 9902583400 ಬಿನ್ ನಾಗರಾಜ ಮೊಬೈಲ್ ನಂ: 997292184 ರವರನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿ ಇವರ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಂಡ ದೂರದಾರನಾದ ನನಗೆ ನ್ಯಾಯ ಒದಗಿಸಿ ಕೊಡಲು ಈ ಮೂಲಕ ತಮ್ಮಲ್ಲಿ ಸವಿನಯ ಮನವಿ, ಆಸ್ಪತ್ರೆಯಲ್ಲಿ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದ ಕಾರಣ ತಡವಾಗಿ ಬಂದು ದೂರನ್ನು ಕೊಟ್ಟಿರುತ್ತೇವೆ, ಎಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

 

13. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.225/2021 ಕಲಂ. 379 ಐ.ಪಿ.ಸಿ:-

     ದಿನಾಂಕ 17/09/2021 ರಂದು ಸಂಜೆ 5-00 ಗಂಟೆಗೆ ಪಿರ್ಯಾಧಿ ನರಸಿಂಹಮೂರ್ತಿ ಬಿನ್ ನರಸಿಂಹಪ್ಪ, 36 ವರ್ಷ, ನಾಯಕರು. 6 ನೇ ವಾರ್ಡ್, ಗುಡಿಬಂಡೆ ಟೌನ್ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿ:16.09.2021 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ನನ್ನ ಬಾಬತ್ತು KA 40 Y. 8084 ನೊಂದಣಿ ಸಂಖ್ಯೆಯ ಸ್ಪ್ಲಂಡರ್ ಪ್ಲಸ್ ದ್ವಿಚಕ್ರ ವಾಹನವನ್ನು ಮನೆಯ ಮುಂಬಾಗ ನಿಲ್ಲಿಸಿರುತ್ತೇನೆ. ಮರುದಿನ ಬೆಳಿಗ್ಗೆ 6-45 ಗಂಟೆ ಸಮಯದಲ್ಲಿ ನೋಡಿದಾಗ ಯಾರೋ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ದ್ವಿಚಕ್ರ ವಾಹನದ ಈಗಿನ ಬೆಲೆ ಸುಮಾರು 45.000/- ರೂಗಳಾಗಿರುತ್ತೆ. ಸದರಿ ದ್ವಿಚಕ್ರ ವಾಹನವನ್ನು ಪತ್ತೆ ಮಾಡಿಕೊಡಲು ಕೋರಿರುತ್ತೇನೆ ಎಂದು  ನೀಡಿದ ದೂರಿ ಮೇರೆಗೆ ಪ್ರ.ವ.ವರದಿ.

 

14. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.95/2021 ಕಲಂ. 304A,279,337 ಐ.ಪಿ.ಸಿ:-

     ದಿನಾಂಕ 17/09/2021 ರಂದು ಬೆಳಿಗ್ಗೆ 09.00 ಗಂಟೆಗೆ ಪಿರ್ಯಾಧಿದಾರರಾದ ಅಂಬರೀಶ ಜಿ.ಎಸ್ ಬಿನ್ ಸುಬ್ಬರಾಯಪ್ಪ,31 ವರ್ಷ, ಬೋವಿ ಜನಾಂಗ, ಜಿರಾಯ್ತಿ, ವಾಸ ದಿಗವಗೋಳ್ಳಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ತಂದೆ ತಾಯಿಗೆ ತಾನು ಮತ್ತುಇಬ್ಬರು ಹೆಣ್ಣು ಮಕ್ಕಳಿದ್ದು, ಆ ಪೈಕಿ ತಾನು ಕೊನೆಯ ಮಗನಾಗಿರುತ್ತೇನೆ. ತಮ್ಮ ತಂದೆ-ತಾಯಿ,ತಾನು ಒಟ್ಟು ಕುಟುಂಬದಲ್ಲಿರುತ್ತೇವೆ. ದಿನಾಂಕ 16/09/2021 ರಂದು  ಕೈವಾರದ ಬಳಿಯಿರುವ ನಾಗದೇನಹಳ್ಳಿ ಗ್ರಾಮದಲ್ಲಿ ತಮ್ಮ ಸಂಬಂದಿಕರು ತೀರಿಕೊಂಡಿದ್ದು, ತಮ್ಮ ತಂದೆ ತಾಯಿ ಮಣ್ಣಿಗಾಗಿ ತಮ್ಮ ಬಾಬ್ತು ಕೆಎ-07-ಎಲ್-1472 SUPER XL ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಹೋಗಿ ಸಂಜೆ ಮಣ್ಣು ಮುಗಿಸಿಕೊಂಡು ಚಿಂತಾಮಣಿ ಕಡೆಯಿಂದ ತಮ್ಮ ಗ್ರಾಮಕ್ಕೆ ವಾಪಸ್ಸು ಬರಲು ಕನಿಶೆಟ್ಟಿಹಳ್ಳಿ ದರ್ಗಾದ ಬಳಿ ಬರುತ್ತಿದ್ದಾಗ ರಸ್ತೆಯ ತಿರುವಿನ ಬಳಿ ಎದರುಗಡೆಯಿಂದ ಬಂದ ಟ್ರ್ಯಾಕ್ಟರ್ M SAND ಲೋಡ್ ಗಾಡಿಯ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ತಂದೆ ಚಾಲನೆ ಮಾಡುತ್ತಿದ್ದ ದ್ವಿಚಕ್ರವಾಹನಕ್ಕೆ ಎದುರುಗಡೆಯಿಂದ ಡಿಕ್ಕಿಹೊಡೆಸಿದ ಪರಿಣಾಮ ಸ್ಥಳದಲ್ಲಿಯೇ ತಮ್ಮ ತಂದೆ-ತಾಯಿ ಬಿದ್ದು ಹೋಗಿ ರಕ್ತಗಾಯಗಳಾಗಿದ್ದು, ಆಗ ಸಮಯ ರಾತ್ರಿ 7.30 ಗಂಟೆ ಆಗಿರುತ್ತದೆ. ಅಷ್ಟರಲ್ಲಿ ತಮ್ಮ ತಂದೆ-ತಾಯಿಯನ್ನು ಯಾರೋ ಉಪಚರಿಸಿ 108 ಆಂಬ್ಯಲೆನ್ಸ್ ನಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ತಾನು ಆಸ್ಪತ್ರೆಗೆ ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 16/09/2021 ರಂದು ರಾತ್ರಿ ವೇಳೆ 11.00 ಗಂಟೆಯಲ್ಲಿತಮ್ಮ ತಂದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ತಮ್ಮ ತಾಯಿಯ ಕೈಗೆ ಮತ್ತು ಸೊಂಟಕ್ಕೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿರುತ್ತಾರೆ. ತಮ್ಮ ತಂದೆ ಚಾಲನೆ ಮಾಡುತ್ತಿದ್ದ ದ್ವಿಚಕ್ರವಾಹನ ಪೂರ್ತಿ ಜಖಂಗೊಂಡಿರುತ್ತದೆ. ತಮ್ಮ ತಂದೆ ಚಾಲನೆ ಮಾಡುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿದ ಟ್ರ್ಯಾಕ್ಟರ್ ಇಂಜಿನ್ ಸಂಖ್ಯೆ ಕೆಎ-67-ಟಿ-0788 ಆಗಿದ್ದು ಟ್ರ್ಯಾಲಿ ಸಂಖ್ಯೆ ಕೆಎ-67-ಟಿ-0789 ಆಗಿರುತ್ತದೆ.ಈ ಟ್ರ್ಯಾಕ್ಟರ್ MASSY FERGUSION-5245-DI ಮಾಡೆಲ್ ಆಗಿರುತ್ತದೆ. ಆದ್ದರಿಂದ ತಮ್ಮ ತಂದೆಯವರ ಗಾಡಿಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿ ಹೊಡೆದಿರುವ  ಟ್ರ್ಯಾಕ್ಟರ್ ಟ್ರ್ಯಾಲಿ  ಮತ್ತು ಚಾಲಕನ ವಿರುದ್ದ  ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.

 

15. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.115/2021 ಕಲಂ. 279 ಐ.ಪಿ.ಸಿ:-

     ದಿನಾಂಕ.16.09.2021 ರಂದು ಮದ್ಯಾಹ್ನ 1.30 ಗಂಟೆಗೆ ಪಿರ್ಯಾದಿ ಸುಬ್ರಮಣಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ನಾನು ಶಿಡ್ಲಘಟ್ಟ ಮಯೂರ ಸರ್ಕಲ್ನ ಚಿಂತಾಮಣಿ ರಸ್ತೆಯಲ್ಲಿ ಎಸ್.ವಿ.ಟಿ.ಟೆಕ್ನಿಷಿಯನ್ ದ್ವಿಚಕ್ರ ವಾಹನಗಳ ಮೆಕಾನಿಕ್ ಅಂಗಡಿ ಇಟ್ಟುಕೊಂಡು ಕೆಲಸ ಮಾಡಿಕೊಂಡಿದ್ದು, ಪ್ರತಿ ದಿನ ನಮ್ಮೂರಿನಿಂದ ಬಂದು ಹೋಗುತ್ತಿರುತ್ತೇನೆ. ದಿನಾಂಕ.16.09.2021 ರಂದು ಬೆಳಿಗ್ಗೆ 9.00 ಗಂಟೆಗೆ ನಮ್ಮೂರಿನಿಂದ ನನ್ನ ಬಾಬತ್ತು KA.05.MC.7719 ಮಾರುತಿ ಅಲ್ಟೋ ಕಾರಿನಲ್ಲಿ ನಮ್ಮ ಮೆಕಾನಿಕ್ ಅಂಗಡಿ ಬಳಿ ಬಂದು ಕಾರನ್ನು ನಮ್ಮ ಅಂಗಡಿ ಮುಂದೆ ಇರುವ ಕೃಷ್ಣಪ್ಪ ರವರ ನರ್ಸರಿ ಸಮೀಪ ರಸ್ತೆ ಎಡ ಬದಿ ಪುಟ್ ಪಾತ್ನಲ್ಲಿ ಪಾರ್ಕಿಂಗ್ ಮಾಡಿ ನಮ್ಮ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದೆ, ಬೆಳಿಗ್ಗೆ ಸುಮಾರು 11.00 ಗಂಟೆಯಲ್ಲಿ ಚಿಂತಾಮಣಿ ಕಡೆಯಿಂದ ಶಿಡ್ಲಘಟ್ಟ ಕಡೆಗೆ ಬರುತ್ತಿದ್ದ KA.04.ML.3459 ಟಯೋಟ ಇನೋವಾ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ಬದಿ ನಿಲ್ಲಿಸಿರುವ ಮಾರುತಿ ಅಲ್ಟೋ ಕಾರಿಗೆ ಮುಂಭಾಗದ ಬಲಭಾಗ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿರುತ್ತೆ. ಇನೋವ ಕಾರಿನಲ್ಲಿದ್ದ ಚಾಲಕ ಮತ್ತು ಅದರಲ್ಲಿದ್ದ ಜನರಿಗೆ ಯಾವುದೇ ರೀತಿಯ ಗಾಯಗಳು ಉಂಟಾಗಿರುವುದಿಲ್ಲ. ಅಪಘಾತವುಂಟು ಮಾಡಿದ ಇನೋವ ಕಾರಿನ ಚಾಲಕನ ಹೆಸರು ವಿಳಾಸ ಕೇಳಿದಾಗ ಎ.ನವೀನ್ ಕುಮಾರ್ ಬಿನ್ ಅನಂತಪ್ಪ, ಹೊಸೂರು ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿರುತ್ತಾರೆ. ರಸ್ತೆ ಬದಿ ನಿಲ್ಲಿಸಿರುವ ನನ್ನ ಕಾರಿನ ಮುಂಭಾಗ ಪೂರ್ತಿ ಜಖಂಗೊಂಡಿರುತ್ತೆ. ಈ ಅಪಘಾತಕ್ಕೆ ಇನೋವ ಕಾರಿನ ಚಾಲಕನ ಅತಿವೇಗ ಮತ್ತು ಅಜಾಗರೂಕತೆ ಚಾಲನೆ ಕಾರಣವಾಗಿರುತ್ತೆ. ಆದ್ದರಿಂದ ನಮ್ಮ ಕಾರಿಗೆ ಅಪಘಾತ ಪಡಿಸಿದ ಇನೋವ ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ  ಠಾಣಾ ಮೊ.ಸಂ:115/2021 ಕಲಂ.279 ಐಪಿಸಿ ರೀತ್ಯಾ ಪ್ರಕರಣದ ದಾಖಲಿಸಿರುತ್ತೆ.

Last Updated: 17-09-2021 06:31 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080