ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.240/2021 ಕಲಂ. 32,34 ಕೆ.ಇ ಆಕ್ಟ್ :-

     ದಿನಾಂಕ: 16/08/2021 ರಂದು ರಾತ್ರಿ 7-00 ಗಂಟೆಗೆ ಶ್ರೀ ನಾಗರಾಜ ಡಿ.ಆರ್ ಪೊಲೀಸ್ ನಿರೀಕ್ಷಕರು. ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ಈ ದಿನ ದಿನಾಂಕ; 16.08.2021 ರಂದು ಗ್ರಾಮಗಸ್ತು ಕರ್ತವ್ಯ ಮುಗಿಸಿಕೊಂಡು ಸಂಜೆ 4-00 ಗಂಟೆ ಸಮಯದಲ್ಲಿ ಗೂಳೂರು ಹೊರಠಾಣೆಯಲ್ಲಿದ್ದಾಗ ಯಾರೋ ಆಸಾಮಿಯು ಬಾಗೇಪಲ್ಲಿ ತಾಲ್ಲೂಕು ಜೀಕೆವಾಂಡ್ಲಪಲ್ಲಿ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ತನ್ನ ಚಿಲ್ಲರೆ ಅಂಗಡಿಯಲ್ಲಿ ಮದ್ಯವನ್ನು ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ  ಸಿ.ಹೆಚ್.ಸಿ-203 ಸತೀಶ್, ಪಿಸಿ-130 ಬಾಬಾವಲಿ ಹಾಗೂ ಜೀಪ್ ಚಾಲಕ ಎ.ಹೆಚ್.ಸಿ-57 ನೂರ್ ಭಾಷಾ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ; ಕೆಎ-40-ಜಿ-1444 ವಾಹನದಲ್ಲಿ ಹೊರಟು ಜೀಕೆವಾಂಡ್ಲಪಲ್ಲಿ ಗ್ರಾಮದ ಹೊರಭಾಗದಲ್ಲಿ ಜೀಪನ್ನು ನಿಲ್ಲಿಸಿ, ಪಂಚರನ್ನು  ಬರಮಾಡಿಕೊಂಡು  ಮೇಲ್ಕಂಡ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ನಡೆದುಕೊಂಡು ಹೋಗಿ ಸಂಜೆ 4.40 ಗಂಟೆಗೆ ನೋಡಲಾಗಿ ಆಸಾಮಿಯು ತನ್ನ ಬಾಬತ್ತು ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಯಾವುದೇ ಪರವಾನಗೆ ಇಲ್ಲದೆ ಮದ್ಯವನ್ನು ಇಟ್ಟು ಮಾರಾಟ ಮಾಡುತ್ತಿದ್ದು, ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಮದ್ಯಮಾರಾಟ ಮಾಡುತ್ತಿದ್ದ ಆಸಾಮಿ ಮತ್ತು ಮದ್ಯವನ್ನು ಕುಡಿಯುತ್ತಿದ್ದವರು ನೋಡಿ ಓಡಿಹೋಗಿರುತ್ತಾರೆ. ನಂತರ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಸದರಿ ಅಂಗಡಿಯ ಮಾಲೀಕನ ಬಗ್ಗೆ ವಿಚಾರ ಮಾಡಿ ಹೆಸರು ವಿಳಾಸ ತಿಳಿಯಲಾಗಿ ಮಧುಕುಮಾರ್ ಬಿನ್ ಲೇಟ್ ಚಿನ್ನರಾಮಪ್ಪ, 38 ವರ್ಷ,  ಚಿಲ್ಲರೆ  ಅಂಗಡಿ ವ್ಯಾಪಾರ, ವಾಸ ಜೀಕೆವಾಂಡ್ಲಪಲ್ಲಿ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂಬುದಾಗಿ ತಿಳಿಯಿತು, ಪಂಚರ ಸಮಕ್ಷಮದಲ್ಲಿ ಸ್ಥಳದಲ್ಲಿ ಪರಿಶೀಲಿಸಲಾಗಿ ಒಂದು  ಬ್ಯಾಗ್ ಇದ್ದು, ತೆಗೆದು ನೋಡಲಾಗಿ 1) 180 ML ಸಾಮರ್ಥ್ಯದ  Radico 8 PM ನ  20 ಟೆಟ್ರಾ ಪಾಕೇಟ್ ಗಳಿದ್ದು, ಇವುಗಳಲ್ಲಿ 3 ಲೀಟರ್ 600 ಎಂ.ಎಲ್ ಮದ್ಯವಿದ್ದು,  ಇದರ ಬೆಲೆ 1735/- ರೂಗಳಾಗಿರುತ್ತೆ,  2) 180 ML ಸಾಮಥ್ಯದ  BAGPIPER DELEXE WHISKY  ಯ  17 ಟೆಟ್ರಾ ಪಾಕೇಟ್ ಗಳಿದ್ದು, ಇದು 3 ಲೀಟರ್ 060 ML ಮದ್ಯವಿದ್ದು ಇದರ ಬೆಲೆ 1805 /- ರೂಗಳಾಗಿರುತ್ತದೆ.  3) 180 ML ಸಾಮರ್ಥ್ಯದ OLD ADMIRAL VSOP BRANDY ಯ  13 ಟೆಟ್ರಾ ಪಾಕೇಟ್ ಗಳಿದ್ದು, ಇದರಲ್ಲಿ 2 ಲೀಟರ್ 340 ಎಂ.ಎಲ್ ಮದ್ಯವಿದ್ದು ಇದರ ಬೆಲೆ 1127/- ರೂಗಳಾಗಿರುತ್ತದೆ.  4) 90 ML ಸಾಮರ್ಥ್ಯದ HAYWARDS CHEERS WHISKY ಯ  16 ಟೆಟ್ರಾ ಪಾಕೇಟ್ ಗಳಿದ್ದು, ಇದರಲ್ಲಿ  1 ಲೀಟರ್ 440 ಎಂ.ಎಲ್ ಮದ್ಯವಿದ್ದು, ಇದರ ಬೆಲೆ 562/- ರೂಗಳಾಗಿರುತ್ತದೆ. ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ,. ಮಧುಕುಮಾರ್ ಬಿನ್ ಲೇಟ್ ಚಿನ್ನರಾಮಪ್ಪ, 38 ವರ್ಷ,  ಚಿಲ್ಲರೆ  ಅಂಗಡಿ ವ್ಯಾಪಾರ, ವಾಸ ಜೀಕೆವಾಂಡ್ಲಪಲ್ಲಿ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರು ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯವನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿರುತ್ತದೆ. ನಂತರ ಅಸಲು ದಾಳಿ ಪಂಚನಾಮೆ ಮತ್ತು ಮಾಲಿನೊಂದಿಗೆ ಸಂಜೆ 7.00 ಗಂಟೆಗೆ ಠಾಣೆಗೆ ಹಾಜರಾಗಿ ಮೇಲ್ಕಂಡ ಆಸಾಮಿಯ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.125/2021 ಕಲಂ. 87 ಕೆ.ಪಿ ಆಕ್ಟ್ :-

     ದಿನಾಂಕ:16-08-2021 ರಂದು ಸಂಜೆ 4-00 ಗಂಟೆಯಲ್ಲಿ ಶ್ರೀ ಎಂ.ಎಂ.ಪ್ರಶಾಂತ್, ಸಿ.ಪಿ.ಐ, ಚಿಕ್ಕಬಳ್ಳಾಪುರ ವೃತ್ತ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:16-08-2021 ರಂದು ಮದ್ಯಾಹ್ನ 2-00 ಗಂಟೆಯ ಸಮಯದಲ್ಲಿ ತಾನು ಕಛೇರಿಯಲ್ಲಿರುವಾಗ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಸರಹದ್ದು ಚಿಕ್ಕಬಳ್ಳಾಪುರ ತಾಲ್ಲೂಕು ಮೈಲಪ್ಪನಹಳ್ಳಿ ಗ್ರಾಮದ ಬಳಿ ಇರುವ ಖಾಸಗೀಯವರ ಹೊಸದಾದ ಲೇಔಟ್ ನಲ್ಲಿರುವ ನೀರಿನ ಓವರ್ ಟ್ಯಾಂಕ್ ಕೆಳಗೆ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಅಕ್ರಮ ಅಂದರ್ - ಬಾಹರ್ ಜೂಜಾಟ ಆಡುತ್ತಿರುವುದಾಗಿ ಭಾತ್ಮಿದಾರರಿಂದ ಬಂದ ಖಚಿತ ಮಾಹಿತಿಯಂತೆ ತಾನು ಪಂಚರು ಮತ್ತು ಸಿಬ್ಬಂದಿಗಳಾದ ಶ್ರೀ.ರವಿಕುಮಾರ್, ಸಿ.ಹೆಚ್.ಸಿ-114, ಶ್ರೀ, ನಾಗೇಶ್ ಸಿಹೆಚ್.ಸಿ-229, ಶ್ರೀ.ವಿಜಯ್ ಕುಮಾರ್, ಸಿ.ಪಿ.ಸಿ-245, ಶ್ರೀ ಗೌತಮ್ ಸಿಪಿಸಿ-286, ರವರುಗಳೊಂದಿಗೆ ಇಲಾಖಾ ಜೀಪ್ ನಂ:ಕೆ.ಎ-40-ಜಿ-6633 ಬೊಲೇರೋ ಜೀಪ್ ನಲ್ಲಿ ಹೋಗಿ ಮೈಲಪ್ಪನಹಳ್ಳಿ ಗ್ರಾಮದ ಬಳಿ ಇರುವ ಹೊಸದಾದ ಖಾಸಗೀಯವರ ಲೇಔಟ್ ನಲ್ಲಿರುವ ನೀರಿನ ಓವರ್ ಹೆಡ್ ಟ್ಯಾಂಕ್ ಕೆಳಗೆ ಹಣವನ್ನು ಪಣವಾಗಿಟ್ಟು ವೃತ್ತಕಾರವಾಗಿ ಕುಳಿತು 500 ರೂಪಾಯಿ ಅಂದರ್ ಮತ್ತು 500 ರುಪಾಯಿ ಬಾಹರ್ ಎಂದು ಕೂಗುತ್ತಾ ಅಕ್ರಮವಾಗಿ ಅಂದರ್ - ಬಾಹರ್ ಇಸ್ಪೀಟು ಜೂಜಾಟ ಆಡುತ್ತಿದ್ದವರ ಮೇಲೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ದಾಳಿ ಮಾಡಿ ಜೂಜಾಟ ಆಡುತ್ತಿದ್ದ ನಾಲ್ಕು ಆಸಾಮಿಗಳನ್ನು ವಶಕ್ಕೆ ಪಡೆದು ಜೂಜಾಟದಲ್ಲಿ ಪಣಕ್ಕೆ ಇಟ್ಟಿದ್ದ 4050/- ರುಪಾಯಿಗಳು ನಗದು ಹಣವನ್ನು, ಜೂಜಾಟಕ್ಕೆ ಬಳಸಿದ್ದ 52 ಇಸ್ಪೀಟು ಎಲೆಗಳು ಒಂದು ಪ್ಲಾಸ್ಟಿಕ್ ಗೋಣಿಚೀಲವನ್ನು ಅಮಾನತ್ತು ಪಡಿಸಿಕೊಂಡಿರುತ್ತೆ. ಜೂಜಾಟದಲ್ಲಿ ವಶಕ್ಕೆ ಪಡೆದ ಆಸಾಮಿಗಳಾದ 1)ಮುನಿಕೃಷ್ಣ ಬಿನ್ ಹೇಮಣ್ಣ 36 ವರ್ಷ, ಪ ಜಾತಿ, ಗಾರೆ ಕೆಲಸ, ವಾಸ: ಮೈಲಪ್ಪನಹಳ್ಳಿ ಗ್ರಾಮ, 2)ಗೋಪಾಲಕೃಷ್ಣ ಬಿನ್ ಚಿಕ್ಕಚೆನ್ನಪ್ಪ, 31 ವರ್ಷ, ಪ. ಜಾತಿ, ಗಾರೆ ಕೆಲಸ, ವಾಸ: ಮೈಲಪ್ಪನಹಳ್ಳಿ ಗ್ರಾಮ, 3)ಗಿರಿಬಾಬು ಬಿನ್ ಚಿಕ್ಕಬಿಡ್ಡಪ್ಪ, 36 ವರ್ಷ, ಪ. ಜಾತಿ, ಗಾರೆ ಕೆಲಸ, ವಾಸ: ಮೈಲಪ್ಪನಹಳ್ಳಿ ಗ್ರಾಮ, 4)ಮಾರಪ್ಪ ಬಿನ್ ಮುನಿಯಪ್ಪ, 32 ವರ್ಷ, ಪ.ಜಾತಿ, ಗಾರೆ ಕೆಲಸ, ವಾಸ: ಮೈಲಪ್ಪನಹಳ್ಳಿ ಗ್ರಾಮ, ರವರನ್ನು ವಶಕ್ಕೆ ತೆಗೆದುಕೊಂಡು ನಗದು ಹಣ 4050/- ರೂಪಾಯಿಗಳನ್ನು, ಜೂಜಾಟಕ್ಕೆ ಬಳಸಿದ್ದ 52 ಇಸ್ಪೀಟು ಎಲೆಗಳನ್ನು, ಒಂದು ಪ್ಲಾಸ್ಟಿಕ್ ಬ್ಯಾಗ್ ಅನ್ನು ಪಂಚನಾಮೆಯೊಂದಿಗೆ ತಮ್ಮ ವಶಕ್ಕೆ ನೀಡುತ್ತಿದ್ದು ಮೇಲ್ಕಂಡ ಆಸಾಮಿಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ ನಂ.200/2021 ರಂತೆ ನೋಂದಾಯಿಸಿಕೊಂಡು ಈ ಪ್ರಕರಣವು ಸಂಜ್ಞೆಯ ಪ್ರಕರಣವೆಂದು ಪರಿಗಣಿಸಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮಾಡಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ. ಆದ್ದರಿಂದ  ಈ ಪ್ರ.ವ.ವರದಿ.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.126/2021 ಕಲಂ. 78(3) ಕೆ.ಪಿ ಆಕ್ಟ್ :-

     ದಿನಾಂಕ:16.08.2021 ರಂದು  ಶ್ರೀಮತಿ ಸರಸ್ವತಮ್ಮ  ಪಿ.ಎಸ್.ಐ. ಡಿಸಿಬಿ ಪೊಲೀಸ್ ಠಾಣೆ  ಚಿಕ್ಕಬಳ್ಳಾಪುರ ರವರು  ನೀಡಿದ ವರದಿಯ  ಸಾರಾಂಶವೆನೆಂದರೆ ಈ ದಿನ ತಾನು ಮತ್ತು ಸಿಬ್ಬಂದಿಯವರಾದ ಜಯಣ್ಣ ಪಿ.ಸಿ 152 ಹಾಗೂ ಜೀಪ್ ಚಾಲಕರಾದ ಮಧು ಪಿ,ಸಿ 527 ರವರೊಂದಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ಮೂಷ್ಠೂರು, ಗೇರಹಳ್ಳಿ, ಕವರನಹಳ್ಳಿ, ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಮದ್ಯಾಹ್ನ ಸುಮಾರು 2-00 ಗಂಟೆಗೆ ವಡ್ಡರೆಪಾಳ್ಯ ಗ್ರಾಮಕ್ಕೆ ಹೋದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಪಂಚರನ್ನು ಬರ ಮಾಡಿಕೊಂಡು ಮದ್ಯಾಹ್ನ 2-30 ಗಂಟೆಗೆ ಕುರ್ಲಹಳ್ಳಿ ಗ್ರಾಮಕ್ಕೆ ಹೋಗಿ ನೋಡಲಾಗಿ ಯಾರೋ ಒಬ್ಬ ಆಸಾಮಿ ಕುರ್ಲಹಳ್ಳಿ ಗ್ರಾಮದ ವಾಸಿಯಾದ  ಮುನಿಶಾಮಿ ರವರ ಜಮೀನಿನಲ್ಲಿರುವ ಚಿಲ್ಲರೆ ಅಂಗಡಿ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ನಿಂತುಕೊಂಡು ಸಾರ್ವಜನಿಕರನ್ನು ಕುರಿತು ಬನ್ನಿ ಬನ್ನಿ ಮಟ್ಕಾ ಚೀಟಿಗಳನ್ನು ಬರೆಯಿಸಿಕೊಳ್ಳಿ 1 ರೂ ಗೆ 70/- ರೂಗಳನ್ನು ಕೊಡುತ್ತೇನೆಂದು ಜೋರಾಗಿ ಕೂಗುತ್ತಿದ್ದವನನ್ನು ಪಂಚರ ಸಮಕ್ಷಮ ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ನರಸಿಂಹಪ್ಪ ಕೆ.ಎಲ್ ಬಿನ್ ಲಕ್ಷ್ಮಯ್ಯ 35 ವರ್ಷ.ನಾಯಕರು. ಅಂಗಡಿ ವ್ಯಾಪಾರ ವಾಸ:ಕುರ್ಲಹಳ್ಳಿ ಗ್ರಾಮ ಎಂತ ತಿಳಿಸಿದನು ನಂತರ ಸದರಿ ಅಸಾಮಿಯನ್ನು ಪರಿಶೀಲನೆ ಮಾಡಲಾಗಿ 1] ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದಿರುವ ದು ಮಟ್ಕಾ ಚೀಟಿ 2] ಒಂದು ಬಾಲ್ ಪಾಯಿಂಟ್ ಪೆನ್ 3] 960/- ರೂ ನಗದು ಹಣವಿದ್ದು ಹಣದ ನಗ್ಗೆ ಕೇಳಲಾಗಿ ಸಾರ್ವಜನಿಕರಿಗೆ ಮಟ್ಕಾ ಚೀಟಿ ಬರೆದುಕೊಟ್ಟಿದ್ದರಿಂದ ಬಂದಿರುವ ಹಣವೆಂದು ತಿಳಿಸಿರುತ್ತಾನೆ ಮಟ್ಕಾ ಚೀಟಿಯ ಬಗ್ಗೆ ಕೇಳಲಾಗಿ ತಾನೇ ಬರೆದುಕೊಂಡು ಮಟ್ಕಾ ಚೀಟಿಯನ್ನು ಇಟ್ಟುಕೊಳ್ಳುತ್ತೇನೆ ಯಾರಿಗೂ ಕೊಡುವುದಿಲ್ಲವೆಂದು ತಿಳಿಸಿರುತ್ತಾನೆ ನಂತರ ಸದರಿ ಸ್ಥಳದಲ್ಲಿ ಪಂಚನಾಮೆ ಕ್ರಮವನ್ನು ಜರುಗಿಸಿ ಆರೋಪಿ ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ವರದಿಯನ್ನು ನೀಡಿ ಈ  ಬಗ್ಗೆ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ  ವರದಿಯನ್ನು  ಪಡೆದುಕೊಂಡು  ಠಾಣಾ ಎನ್,ಸಿ ,ಆರ್ 201/2021 ರೀತ್ಯಾ ದಾಖಲಿಸಿಕೊಂಡು ಸಂಜ್ಞೆಯ ಪ್ರಕರಣ  ದಾಖಲಿಸಿ  ತನಿಖೆಯನ್ನು  ಕೈಗೊಳ್ಳಲು  ಘನ ನ್ಯಾಯಾಲಯದಿಂದ ಅನುಮತಿಯನ್ನು  ಪಡೆದುಕೊಂಡು ಠಾಣಾ ಮೊ.ಸಂ. 126/2021 ಕಲಂ: 78 (3)  ಕೆ.ಪಿ. ಆಕ್ಟ್ ರೀತ್ಯಾ ಕೇಸನ್ನು ದಾಖಲಿಸಿಕೊಂಡಿರುತ್ತೆ. ಆದುದರಿಂದ  ಪ್ರ.ವ.ವರದಿ.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.127/2021 ಕಲಂ. 15(A),32(3) ಕೆ.ಇ ಆಕ್ಟ್ :-

     ದಿನಾಂಕ:17-08-2021 ರಂದು ಬೆಳಗ್ಗೆ 11-30 ಗಂಟೆಗೆ ಶ್ರೀ ಬಿ.ಪಿ.ಮಂಜು ಪಿ.ಎಸ್.ಐ ರವರಿಗೆ ಠಾಣೆಯಲ್ಲಿದ್ದಾಗ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿಗೆ ಸೇರಿದ ಮರಸನಹಳ್ಳಿ ಗ್ರಾಮದ ವಾಸಿ ವೆಂಕಟರವಣ ಬಿನ್ ಲೇಟ್ ಚಿಕ್ಕಪ್ಪಯ್ಯ 41 ವರ್ಷ, ದೊಂಬರು ಜನಾಂಗ, ಚಾಲಕ ರವರು ತನ್ನ ಮನೆಯ ಬಳಿ ಯಾವುದೇ ಪರವಾನಿಗೆ ಇಲ್ಲದೇ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಮಾಹಿತಿಯ ಮೇರೆಗೆ ಆಸಾಮಿಯ ವಿರುದ್ದ ಕಲಂ:15(ಎ) , 32(3) ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರ.ವ.ವರದಿ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.362/2021 ಕಲಂ. 454,457,380 ಐ.ಪಿ.ಸಿ :-

     ದಿನಾಂಕ: 16/08/2021 ರಂದು ಸಂಜೆ 6.00 ಗಂಟೆಗೆ ಅಂಕಿರೆಡ್ಡಿ ಪ್ರಕಾಶ್ ಬಿನ್ ವೆಂಕಟರವಣಪ್ಪ.ಎ.ಆರ್, 44 ವರ್ಷ, ವಕ್ಕಲಿಗರು, ಪ್ರಭಾರಿ ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ, ದೊಡ್ಡಗಂಜೂರು ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಈಗ್ಗೆ ಸುಮಾರು 08 ವರ್ಷಗಳಿಂದ ಇದೇ ಚಿಂತಾಮಣಿ ತಾಲ್ಲೂಕು, ದೊಡ್ಡಗಂಜೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಹಾಗೂ ಈಗ್ಗೆ ಸುಮಾರು ಎರಡು ವರ್ಷಗಳಿಂದ ಪ್ರಭಾರಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ಹೀಗಿರುವಾಗ ನಿನ್ನೆ ದಿನ ದಿನಾಂಕ: 15/08/2021 ರಂದು ಬೆಳಿಗ್ಗೆ 07.30 ಗಂಟೆಗೆ ಶಾಲೆಗೆ ಹಾಜರಾಗಿ ಸ್ವಾತಂತ್ರ್ಯ ದಿನಾಚಣೆಯ ಪ್ರಯುಕ್ತ ತಾನು ಹಾಗೂ ಶಾಲೆಯ ಸಹಶಿಕ್ಷಕರು ದ್ವಜಾರೋಹಣ ಮಾಡಿಕೊಂಡು ಬೆಳಿಗ್ಗೆ 10.30 ಗಂಟೆಗೆ ಶಾಲೆಗೆ ಬೀಗ ಹಾಕಿಕೊಂಡು ಮನೆಗೆ ಹೋಗಿರುತ್ತೇವೆ. ನಂತರ ಈ ದಿನ ದಿನಾಂಕ: 16/08/2021 ರಂದು ಬೆಳಿಗ್ಗೆ 10.20 ಗಂಟೆಗೆ ತಾನು ಶಾಲೆಗೆ ಕರ್ತವ್ಯಕ್ಕೆ ಹಾಜರಾದಾಗ ಶಾಲೆಯ ಶಿಕ್ಷಕ ಸಿಬ್ಬಂದಿಯ ಕೊಠಡಿಯ ಬಾಗಿಲನ ಬೀಗವನ್ನು ಯಾರೋ ಯಾವುದೊ ಆಯುಧದಿಂದ ಹೊಡೆದು ಹಾಕಿರುವಂತೆ ಕಂಡು ಬಂದಿದ್ದು, ನಂತರ ತಾನು ಹಾಗೂ ಶಾಲೆಯ ಸಹ ಶಿಕ್ಷಕರು ಶಾಲೆಯ ಇತರೇ ಕೊಠಡಿಗಳನ್ನು ಪರಿಶೀಲಿಸಲಾಗಿ ಶಾಲಾ ಕಛೇರಿ ಕೊಠಡಿ, ಕಂಪ್ಯೂಟರ್ ಕೊಠಡಿ, ಅಡುಗೆ ದಾಸ್ತಾನು ಕೊಠಡಿ, ಗ್ರಂಥಾಲಯ ಕೊಠಡಿ, ಕ್ರೀಡಾ ದಸ್ತಾನು ಕೊಠಡಿ, ವಿಜ್ಞಾನ ಪ್ರಯೋಗಾಲಯ ಕೊಠಡಿ ಹಾಗೂ ವಸತಿ ನಿಲಯದ ಹಿಂಭಾಗದ ಬಾಗಿಲು, ವಸತಿ ನಿಲಯದ ಕಛೇರಿ ಬಾಗಿಲು, ವಸತಿ ನಿಲಯದ ಡೈನಿಂಗ್ ಕೊಠಡಿಯ ಬಾಗಲಿನ ಬೀಗಗಳನ್ನು ಹೊಡೆದು ಹಾಕಿ ಆ ಪೈಕಿ ಕಂಪ್ಯೂಟರ್ ಕೊಠಡಿಯಲ್ಲಿದ್ದ ಒಂದು SAHARA ಕಂಪನಿಯ ಯು.ಪಿ.ಎಸ್ ಹಾಗೂ SAHARA ಕಂಪನಿಯ ಎರಡು ಬ್ಯಾಟರಿಗಳು, ವಸತಿ ನಿಲಯದ ಕೊಠಡಿಯಲ್ಲಿದ್ದ ಒಂದು TEZ SMART SINE+ ಯು.ಪಿ.ಎಸ್ ಹಾಗೂ TEZ ಕಂಪನಿಯ ಒಂದು ಬ್ಯಾಟರಿ, ವಿಜ್ಞಾನ ಪ್ರಯೋಗಾಲಯ ಕೊಠಡಿಯಲ್ಲಿದ್ದ ಒಂದು ಸೋಲಾರ್ ಯು.ಪಿ.ಎಸ್ ಹಾಗೂ EXIDE ಕಂಪನಿಯ ಒಂದು ಸೋಲಾರ್ ಬ್ಯಾಟರಿಯನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಕೃತ್ಯವು ದಿನಾಂಕ: 15/08/2021 ರಂದು ಬೆಳಿಗ್ಗೆ 10.30 ಗಂಟೆಯಿಂದ ಈ ದಿನ ದಿನಾಂಕ: 16/08/2021 ರಂದು ಬೆಳಿಗ್ಗೆ 10.20 ಗಂಟೆಯ ನಡುವೆ ನಡೆದಿರುತ್ತೆ. ತಮ್ಮ ಶಾಲೆಯಲ್ಲಿ ಕಳ್ಳತನವಾಗಿರುವ ಮೂರು ಯು.ಪಿ.ಎಸ್ ಹಾಗೂ ನಾಲ್ಕು ಬ್ಯಾಟರಿಗಳ ಪ್ರಸ್ತುತ ಈಗಿನ ಒಟ್ಟು ಅಂದಾಜು ಮೌಲ್ಯ 30.000/- ಗಳಾಗಿರುತ್ತೆ. ಮೇಲ್ಕಂಡಂತೆ ತಮ್ಮ ಶಾಲೆಯಲ್ಲಿ ಕಳ್ಳತನ ಮಾಡಿರುವ ಕಳ್ಳರನ್ನು ಹಾಗೂ ಕಳುವಾಗಿರುವ ಮಾಲನ್ನು ಪತ್ತೆ ಮಾಡಿ ಕಳವು ಮಾಡಿರುವ ಆಸಾಮಿಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.363/2021 ಕಲಂ. 279,337 ಐ.ಪಿ.ಸಿ :-

     ದಿನಾಂಕ: 17/08/2021 ರಂದು ಬೆಳಿಗ್ಗೆ 10.30 ಗಂಟೆಗೆ ಶ್ರೀಮತಿ ರವಣಮ್ಮ ಕೊಂ ನಾರಾಯಣಸ್ವಾಮಿ, 45 ವರ್ಷ, ಕುರುಬರು, ಗೃಹಿಣಿ, ವಾಸ: ಚೌಡರೆಡ್ಡಿಪಾಳ್ಯ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮಗೆ ಇಬ್ಬರು ಮಕ್ಕಳಿದ್ದು, 1ನೇ ಮಗಳು ರಜಿತಾ, 2ನೇ ಮಗ ಅನಿಲ್ ಕುಮಾರ್, 26 ವರ್ಷ ರವರಾಗಿರುತ್ತಾರೆ. ರಜಿತಾಳಿಗೆ ಮದುವೆಯಾಗಿರುತ್ತೆ. ಮಗನಿಗೆ ಈಗ್ಗೆ ಸುಮಾರು 2 ವರ್ಷಗಳ ಹಿಂದೆ ಅಂಬಿಕಾ, 24 ವರ್ಷ ಎಂಬಾಕೆಯೊಂದಿಗೆ ಮದುವೆಯಾಗಿರುತ್ತೆ. ಅನಿಲ್ ಕುಮಾರ್ ರವರು ಕೋಲಾರ ರಸ್ತೆ ಬಳಿ ಇರುವ ಅನುಗ್ರಹ ಇಂಡಸ್ಟ್ರಿಯದಲ್ಲಿ ಕೆಲಸ ಮಾಡುತ್ತಿರುತ್ತಾನೆ. ಸೊಸೆ ಅಂಬಿಕಾ ಪಿಲ್ಲಗುಂಪೆ ಪ್ಯಾಕ್ಟರಿಗೆ ಕೆಲಸಕ್ಕೆ ಹೋಗುತ್ತಿರುತ್ತಾಳೆ. ಮಗ ಮತ್ತು ಸೊಸೆ ಬೆಳಿಗ್ಗೆ 07.30 ಗಂಟೆಗೆ ದ್ವಿಚಕ್ರ ವಾಹನ ಸಂಖ್ಯೆ ಕೆಎ-67-ಇ-8361 ದ್ವಿಚಕ್ರ ವಾಹನದಲ್ಲಿ ಹೋಗಿ ಸೊಸೆ ಅಂಬಿಕಾಳನ್ನು ಕುರುಟಹಳ್ಳಿ ಕ್ರಾಸ್ ನಲ್ಲಿ ಪ್ಯಾಕ್ಟರಿ ಬಸ್ ಗೆ ಬಿಟ್ಟು ನಂತರ ಮಗ ಅನಿಲ್ ಕುಮಾರ್ ಅನುಗ್ರಹ ಇಂಡಸ್ಟ್ರಿಯದಲ್ಲಿ ಕೆಲಸಕ್ಕೆ ಹೋಗಿ ಪುನ: ಸಂಜೆ ಸುಮಾರು 7.20 ಗಂಟೆಗೆ ಸೊಸೆಯನ್ನು ಕರೆದುಕೊಂಡು ಮನೆಗೆ ಬರುತ್ತಿದ್ದನು.  ಈಗಿರುವಲ್ಲಿ ದಿನಾಂಕ: 16/08/2021 ರಂದು ಬೆಳಿಗ್ಗೆ 07.30 ಗಂಟೆಗೆ ಮಗ ಮತ್ತು ಸೊಸೆ ಕೆಎ-67 ಇ-8361 ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ಹೋದರು. ರಾತ್ರಿ ಸುಮಾರು 8.00 ಗಂಟೆಯ ಸಮಯದಲ್ಲಿ ತನಗೆ ಯಾರೋ ಪೋನ್ ಮಾಡಿ ನಿಮ್ಮ ಮಗ ಮತ್ತು ಸೊಸೆಗೆ ಅಪಘಾತವಾಗಿ ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿ ತಿಳಿಸಿದರು. ತಾನು ಬಂದು ನೋಡಲಾಗಿ ವಿಷಯ ನಿಜವಾಗಿದ್ದು ತನ್ನ ಮಗನಾದ ಅನಿಲ್ ಕುಮಾರ್ ರವರ ಬಲಕಾಲು, ಬಲಭುಜ, ಬಲಕೈ, ಹಣೆಗೆ ರಕ್ತಗಾಯ ಹಾಗೂ ಮೈಮೇಲೆ ತರಚಿದ ಗಾಯ ಹಾಗೂ ಸೊಸೆ ಅಂಬಿಕಾಳ ಬಲಕೈ, ಬಲಕಾಲಿಗೆ ರಕ್ತಗಾಯ ಮತ್ತು ಮೈಮೇಲೆ ತರಚಿದ ಗಾಯಗಳಾಗಿದ್ದವು. ಪರೀಕ್ಷಿಸಿದ ವೈದ್ಯರು ಪ್ರಥಮ ಚಿಕಿತ್ಸೆ ಪಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಲಿ ತನ್ನ ಮಗ ಮತ್ತು ಸೊಸೆ ನ್ಯೂ ಜನಪ್ರಿಯಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೆಂಗಳೂರಿಗೆ ಕಳುಹಿಸಿಕೊಟ್ಟರುತ್ತಾರೆ. ಅಪಘಾತದ ಬಗ್ಗೆ ವಿಚಾರಿಸಲಾಗಿ ತನ್ನ ಮಗ ಮತ್ತು ಸೊಸೆ ಕೆಎ-67 ಇ-8361 ದ್ವಿಚಕ್ರ ವಾಹನದಲ್ಲಿ ಕುರುಟಹಳ್ಳಿ ಕ್ರಾಸ್ ನಿಂದ ತನ್ನ ಸೊಸೆಯನ್ನು ಕರೆದುಕೊಂಡು ಮನೆಗೆ ಬರಲು ಕೋಲಾರ ರಸ್ತೆಯ ರಾಂಪುರ ಗ್ರಾಮದ ಬಳಿ ಇರುವ ಕೆ.ಪಿ.ಟಿ.ಸಿ.ಎಲ್ 220 ವಿದ್ಯುತ್ ಘಟಕದ ಮುಂದೆ ರಾತ್ರಿ ಸುಮಾರು 7.35 ಗಂಟೆಗೆ ರಸ್ತೆಯಲ್ಲಿ ಬರುತ್ತಿದ್ದಾಗ ಚಿಂತಾಮಣಿ ಕಡೆಯಿಂದ ಕೆಎ-51 ಎಬಿ-3296 ಟಿಪ್ಪರ್ ಲಾರಿಯನ್ನು ಅದರ ಚಾಲಕ ಆತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಎಡಭಾಗದಿಂದ ಏಕಾಏಕಿ ಬಲ ರಸ್ತೆಯ ಕಡೆ ಚಾಲನೆ ಮಾಡಿ ತನ್ನ ಮಗ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿ ಗಾಯಪಡಿಸಿರುವುದಾಗಿ ಹಾಗೂ ಅಲ್ಲಿಯೇ ಇದ್ದ ಸಾರ್ವಜನಿಕರಾದ ಶ್ರೀರಾಮರೆಡ್ಡಿ ಬಿನ್ ವೆಂಕಟಪ್ಪ ಮತ್ತು ಇತರರು 108 ಅಂಬುಲೆನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ದಾಖಲಿಸಿರುವುದಾಗಿ ತಿಳಿಯಿತು. ಗಾಯಾಳುಗಳಿಗೆ ಚಿಕಿತ್ಸೆ ಪಡಿಸುತ್ತಿದ್ದರಿಂದ ಈ ದಿನ ದಿನಾಂಕ:17/08/2021 ರಂದು ತಡವಾಗಿ ಬಂದು ದೂರು ನೀಡುತ್ತಿದ್ದು ತನ್ನ ಮಗ ಮತ್ತು ಸೊಸೆ ಬರುತ್ತಿದ್ದ ಕೆಎ-67 ಇ-8361 ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿರುವ ಕೆಎ-51 ಎಬಿ-3296 ಅಶೋಕ್ ಲೇಲ್ಯಾಂಡ್ ಟಿಪ್ಪರ್ ವಾಹನ ಮತ್ತು ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

7. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.363/2021 ಕಲಂ. 419,420,423  ಐ.ಪಿ.ಸಿ :-

     ದಿನಾಂಕ: 16/08/2021 ರಂದು ಸಂಜೆ 18;00 ಗಂಟೆಗೆ ಪಿರ್ಯದಿದಾರರಾದ ಲೊಕೇಶ್ ಆರ್ ಬಿನ್ ರಾಮಕೃಷ್ಣ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಚಿಂತಾಮಣಿ ತಾಲ್ಲೂಕು ನಾಯನಹಳ್ಳಿ ಗ್ರಾಮದ ಸರ್ವೆ ನಂ 46/1 ರಲ್ಲಿ ಖುಷ್ಕಿ 1-20  ಗುಂಟೆ ಜಮೀನಿನ ಪೈಕಿ 0-26 ಗುಂಟೆ ಜಮೀನುನ್ನು ಸದರಿ ಗ್ರಾಮದ ವಾಸಿಗಳಾದ ಸುಮಾರು 49 ವರ್ಷದ ವೆಂಕಟಲಕ್ಷ್ಮಮ್ಮ ಬಿನ್ ಲೇಟ್ ಶಂಬಪ್ಪ ಮತ್ತು ಕತ್ತರಿಗುಪ್ಪೆ ಗ್ರಾಮದಲ್ಲಿ ವಾಸವಾಗಿರುವ 51 ವರ್ಷದ ಟಿ. ಆಂಜಪ್ಪ  ಬಿನ್ ಲೇಟ್ ತಿಮ್ಮಯ್ಯ ಮತ್ತು ಬಂಗಾರಪೇಟೆ ತಾಲ್ಲೂಕು ಬೇತಮಂಗಲ ಗ್ರಾಮದಲ್ಲಿ ವಾಸವಾಗಿರುವ ಸುಮಾರು 26 ವರ್ಷ  ವಯಸ್ಸಿನ ವೀಣಾ ಎನ್ .ಎ ಕೋಂ ಎಂ. ಕೃಷ್ಣಕುಮಾರ್ ರವರುಗಳು ದಿ: 07/11/2020 ರಲ್ಲೂ ಚಿಂತಾಮಣಿ ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ 1 ನೇ ಪುಸ್ತಕದ ಸಿ .ಡಿ ನಂ 607 ಎಸ್ .ಆರ್ ನಂ 3376/2020-21 ನೇ ಕ್ರಯದ ಕರಾರು ಪತ್ರದಂತೆ ನಾಯನಹಳ್ಳಿ ಗ್ರಾಮದ ವಾಸಿಗಳಾದ ಹರಿಪ್ರಸಾದ್ ಎನ್ ಎನ್ ಬಿನ್ ಎಸ್ .ವಿ ನಾರಾಯಣಸ್ವಾಮಿ ( ನವಕೋಟಿ ನಾರಾಯಣಸ್ವಾಮಿ) ಮತ್ತು ನಾಗೇಶ್ ಬಿನ್ ಶ್ರೀನಿವಾಸರೆಡ್ಡಿ ಎನ್ .ಎ  ಮತ್ತು ಅಂಬರೀಶ್ ಎನ್ .ಜಿ  ಬಿನ್ ಗಂಗಿರೆಡ್ಡಿ ಮತ್ತು ಚಿಂತಾಮಣಿ ನಗರದ ವಾರ್ಡ್ ನಂ 9 ಮುನಿಸಿಪಾಲ್ ಆಫೀಸ್ ಹಿಂಭಾಗ ಮಿಲ್ಕ್ ಡೈರಿ ರಸ್ತೆಯಲ್ಲಿ ವಾಸವಾಗಿರುವ ಜಿ.ಕೆ ಶ್ರವಣ್  ಬಿನ್ ಜಿ.ಎಸ್ ಕೃಷ್ಣಮೂರ್ತಿ ಇವರುಗಳಿಗೆ ಮೇಲ್ಕಂಡ ವೆಂಕಟಲಕ್ಷ್ಮಮ್ಮ ಮತ್ತು ಆಂಜಪ್ಪ  ಇವರು ಸತಿ ಪತಿಯಾಗಿದ್ದು ಇವರಿಗೆ ಇಬ್ಬರು ಮಕ್ಕಳಿರುತ್ತಾರೆ 1 ನೇ ಮಗಳಾದ ಲೇಟ್ ಜ್ಯೋತಿ ಮತ್ತು 2 ನೇ ಮಗಳಾದ ವೀಣಾ ಎಂಬ ಮಕ್ಕಳಿರುತ್ತಾರೆ. 1 ನೇ ಮಗಳನ್ನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುವ ಲೊಕೇಶ್ ಆರ್ ಆದ ನನಗೆ ಮದುವೆ ಯಾಗಿರುತ್ತದೆ, ಆದರೆ ನನ್ನ ಹೆಂಡತಿ ಮರಣ ಹೊಂದಿರುತ್ತಾರೆ, ನಮಗೆ ಒಂದು ಗಂಡು ಮಗು ಸಹ  ಇರುತ್ತದೆ. 19/07/2013 ರಲ್ಲಿ ಸದರಿ ಮೇಲ್ಕಂಡ ಸ್ವತ್ತುನ್ನು ಕ್ರಯದ ಕರಾರು ಮಾಡಿದಾಗ ವೆಂಕಟಲಕ್ಷ್ಮಮ್ಮ ರವರ  ಇಬ್ಬರ ಮಕ್ಕಳನ್ನೂ ಸಹ ತೋರಿಸಿರುತ್ತಾರೆ. ಆದರೆ ದಿ: 07/11/2020 ರಲ್ಲಿ ಮಾಡಿರುವ ಮೇಲ್ಕಂಡ ಕ್ರಯದ ಕರಾರು ಪತ್ರದಲ್ಲಿ ವೀಣಾ ಎನ್ .ಎ ಕೋಂ ಕೃಷ್ಣಕುಮಾರ್ ರವರುಗಳು ನನ್ನ ಮಗನಾದ ಸುಮಾರು 8 ವರ್ಷ ವಯಸ್ಸುಳ ಸೋನು  ತೇಜಸ್ ರವರನ್ನು ಅವರ ಮಗ ಎಂದು ತೋರಿಸಿ ಅಧಿಕಾರಿಗಳಿಗೆ ಸುಳ್ಳು ದಾಖಲೆಗಳನ್ನು ನೀಡಿ ಕ್ರಯದ ಕರಾರು ಮಾಡಿದ್ದಾರೆ ಈ ಮೇಲ್ಕಂಡ ರೀತ್ಯಾ ವಂಚನೆ ಮಾಡಿರುವ ಎಲ್ಲಾ ಅಸಾಮಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

8. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.193/2021 ಕಲಂ. 279,337 ಐ.ಪಿ.ಸಿ :-

     ದಿನಾಂಕ:16/08/2021 ರಂದು ಸಂಜೆ 6-15 ಗಂಟೆಗೆ ಫಿರ್ಯಾದುದಾರರಾದ ಶಿವಮ್ಮ ಕೊಂ ನರಸಿಂಹಮೂರ್ತಿ, 40 ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ಚರ್ಲೋಪಲ್ಲಿ ಗ್ರಾಮ, ಬೂಪಸಂದ್ರ ಮಂಡಲಂ, ಹಿಂದೂಪುರ ತಾಲ್ಲೂಕು.ಅನಂತಪುರ ಜಿಲ್ಲೆ.  ಆಂಧ್ರ ಪ್ರದೇಶ. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ:ತಾನು ಮೇಲ್ಕಂಡ ವಿಳಾಸದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನನಗೆ ಸುಮಾರು 20 ವರ್ಷಗಳ ಹಿಂದೆ ನರಸಿಂಹಮೂರ್ತಿ ಬಿನ್ ವಡ್ಡಿಚಿನ್ನಪ್ಪ, 57 ವರ್ಷ, ಬೋವಿ ಜನಾಂಗ, ಗಾರೆಕೆಲಸ, ಗುಂಡಗಲ್ಲು ಗ್ರಾಮ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ ರವರೊಂದಿಗೆ ವಿವಾಹ ವಾಗಿರುತ್ತೆ. ತಮಗೆ ಇಬ್ಬರು ಮಕ್ಕಳಿರುತ್ತಾರೆ. ಸುಮಾರು 5 ವರ್ಷಗಳಿಂದ ತನಗೆ ಮತ್ತು ತನ್ನ ಗಂಡನಿಗೆ ಸಂಸಾರದಲ್ಲಿ ವೈಮನಸ್ಸಾಗಿ, ತಾನು ತಮ್ಮ ತವರು ಮನೆಯಲ್ಲಿ ವಾಸವಿರುತ್ತೇನೆ. ನನ್ನ ಗಂಡ ನಮ್ಮ ತವರು ಮನೆಗೆ  ಆಗಾಗ್ಗ ಬಂದು ಹೋಗುತ್ತಿದ್ದ. ಈಗ್ಗೆ ಒಂದು ವಾರದ ಹಿಂದೆ ನಮ್ಮ ಮನೆಗೆ ಬಂದು ನಗರಗೆರೆ ವಾಟದಹೊಸಹಳ್ಳಿ ಕಡೆ ಕೆಲಸಕ್ಕೆ ಹೋಗುತ್ತಿದ್ದ, ಈ ದಿನ ದಿನಾಂಕ:16/08/2021 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ವಾಟದಹೊಸಹಳ್ಳಿ ಗ್ರಾಮದಲ್ಲಿ  ಕೆಲಸಕ್ಕೆ ಹೋಗುವುದಾಗಿ ಹೇಳಿ ತನ್ನ ಬಾಬತ್ತು ಕೆಎ-06 ಇಯು-0269 ಟಿ.ವಿ.ಸ್ ಹೆವಿ ಡ್ಯೂಟಿ ದ್ವಿ-ಚಕ್ರ ವಾಹನದಲ್ಲಿ ಹೋದರು. ನಂತರ  ಮಧ್ಯಾಹ್ನ ಸುಮಾರು 3-30 ಗಂಟೆ ಸಮಯದಲ್ಲಿ ತನ್ನ ಗಂಡನ ಮೊಬೈಲ್ ನಿಂದ ಯಾರೋ ಸಾರ್ವಜನಿಕರು ತನಗೆ ದೂರವಾಣಿ ಕರೆಯನ್ನು ಮಾಡಿ ಸದರಿ ಮೊಬೈಲ್ ಬಳಕೆ ಮಾಡುತ್ತಿರುವ ವ್ಯಕ್ತಿಗೆ ನಗರಗೆರೆ-ವಾಟದಹೊಸಹಳ್ಳಿ ರಸ್ತೆ ಯಲ್ಲಿ ತ್ಯಾಜ್ಯ ವಿಲೇವಾರಿ ಘಟಕದ ಸಮೀಪ ಅಪಘಾತವಾಗಿರುವುದಾಗಿ ತಿಳಿಸಿ ಗಾಯಾಳುವನ್ನು 108 ಆಂಬುಲೆನ್ಸ್ ವಾಹನದಲ್ಲಿ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಕಳುಹಿಸಿಕೊಡುತ್ತಿರುವುದಾಗಿ ತಿಳಿಸಿದರು. ಕೂಡಲೇ ತಾನು ಗೌರಿಬಿದನೂರಿನ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿರುತ್ತೆ.  ತನ್ನ ಗಂಡನ ಎಡ ಕೆನ್ನಯ ಬಳಿ ರಕ್ತಗಾಯ ವಾಗಿರುತ್ತೆ. ಮೂಗು ಮತ್ತು ಬಾಯಿಯಲ್ಲಿ ರಕ್ತ ಬಂದಿರುತ್ತೆ. ಕಾಲಿಗೆ ಮತ್ತು ಕೈಗಳಿಗೆ ತರಚಿದ ಗಾಯಗಳಾಗಿರುತ್ತೆ. ನಂತರ ವಿಚಾರ ಮಾಡಲಾಗಿ ತನ್ನ ಗಂಡ ಈ ದಿನ ಮದ್ಯಾಹ್ನ ಸುಮಾರು 3-00 ಗಂಟೆ ಸಮಯದಲ್ಲಿ ನಗರಗೆರೆ-ವಾಟದಹೊಸಹಳ್ಳಿ ರಸ್ತೆ ಯಲ್ಲಿ ತ್ಯಾಜ್ಯ ವಿಲೇವಾರಿ ಘಟಕದ ಬಳಿ ತನ್ನ ಬಾಬತ್ತು ಕೆಎ-06 ಇಯು-0269 ಟಿ.ವಿ.ಸ್ ಹೆವಿ ಡ್ಯೂಟಿ ದ್ವಿ-ಚಕ್ರ ವಾಹನದಲ್ಲಿ  ನಮ್ಮ ಗ್ರಾಮಕ್ಕೆ ವಾಪಸ್ಸು ಬರುತ್ತಿದ್ದಾಗ ಎದುರಗಡೆಯಿಂದ ಅಂದರೆ ನಗರಗೆರೆ ಕಡೆಯಿಂದ ಕೆಎ-40 ಇಬಿ-6764 ಹೊಂಡಾ ಡಿಯೋ ದ್ವಿ-ಚಕ್ರ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಗಂಡ ಚಾಲನೆ ಮಾಡಿಕೊಂಡು ಬರುತ್ತಿದ್ದ  ದ್ವಿ-ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿ ಗಾಯಗಳುಂಟು ಮಾಡಿದ  ಕೆಎ-40 ಇಬಿ-6764 ಹೊಂಡಾ ಡಿಯೋ ದ್ವಿ-ಚಕ್ರ ವಾಹನದ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಾಗಿರುತ್ತೆ.

 

9. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.114/2021 ಕಲಂ. ಮನುಷ್ಯ ಕಾಣೆ :-

     ದಿನಾಂಕ 16/08/2021 ರಂದು ಸಂಜೆ 17-00 ಗಂಟೆಗೆ ಪಿರ್ಯಾದಿದಾರರಾದ ಮಹಮದ್ ಮಕ್ಕೀಮ್ ಬಿನ್ ಲೇಟ್ ಇಸ್ಮಾಯಿಲ್ ಸುಮಂಗಲಿ ಬಡಾವಣೆ, ಗೌರಿಬಿದನೂರು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತ ನಗೆ ಮೂರು ಜನ ಮಕ್ಕಳಿದ್ದು, 2ನೇ ಮಗ ರಹಮತ್ ಉಲ್ಲಾರವರಾಗಿರುತ್ತಾರೆ.  ರಹಮತ್ ಉಲ್ಲಾರವರಿಗೆ ಒಂದೂವರೆ ವರ್ಷ ಗಳಿಂದೆ ಹಿಂದೂಪುರ ಮುಶ್ರಾ ರವರ ಜೊತೆ ಮದುವೆ ಮಾಡಿದ್ದು, ಇವರಿಗೆ 5 ತಿಂಗಳ ಹೆಣ್ಣು ಮಗು ಇರುತ್ತೆ.  ತನ್ನ ಮಗನ ಸಂಸಾರದ ವಿಚಾರದಲ್ಲಿ ಗಲಾಟೆಗಳಾಗಿದ್ದು, ಅವರ ಹೆಂಡತಿ ಮನೆಯವರು ದಿನಾಂಕ: 12/08/2021 ರಂದು ಬಂದು ತನ್ನ ಮಗನ ಮೇಲೆ ಗಲಾಟೆ ಮಾಡಿ ಹೋಗಿರುತ್ತಾರೆ.  ದಿನಾಂಕ:13/08/2021 ರಂದು ತನ್ನ ಮಗ ಮದ್ಯಾಹ್ನ 2-45 ಗಂಟೆಗೆ ಮನೆಯಿಂದ ಅಂಗಡಿಗೆ ಹೋಗುವುದಾಗಿ ತಿಳಿಸಿ ಹೋಗಿದ್ದು, ಇದುವರೆವಿಗೂ ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾನೆ.  ನನ್ನ ಮಗ ರಹಮತ್ ಉಲ್ಲಾರವರಿಗೆ ಪೋ.ನಂ. 7259996651 ಗೆ ಕರೆ ಮಾಡಿದರೆ ಸ್ವಿಚ್ಚ್ ಆಫ್ ಆಗಿದೆ. ಎಲ್ಲಾ ಕಡೆ ಹುಡುಕಾಡಲಾಗಿ ಎಲ್ಲೂ ಪತ್ತೆಯಾಗದ ಕಾರಣ ಈ ದಿನ ತಡವಾಗಿ ನೀಡಿದ ದೂರನ್ನು ಪ್ರಕರಣವನ್ನು ದಾಖಲು ಮಾಡಿರುತ್ತೇನೆ.

 

10. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.188/2021 ಕಲಂ. 87 ಕೆ.ಪಿ ಆಕ್ಟ್ :-

     ದಿನಾಂಕ:16/08/2021 ರಂದು ರಾತ್ರಿ 8-15 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸರಸ್ವತಮ್ಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:16.08.2021 ರಂದು ತಾನು ಮತ್ತು ಸಿಬ್ಬಂದಿಯವರು ಕೆ.ಎ-40-ಜಿ-58 ಜೀಪ್ ನಲ್ಲಿ ಗುಡಿಬಂಡೆ ತಾಲ್ಲೂಕಿನ ಕಾನೂನುಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ದೊಡ್ಡಪೈಯಲಗುರ್ಕಿ, ಶೆಟ್ಟಿಗೆರೆ ಗ್ರಾಮಗಳ ಕಡೆ ಗಸ್ತುಮಾಡಿಕೊಂಡು ಸಂಜೆ 5.00 ಗಂಟೆಗೆ ಬಂಡಹಳ್ಳಿ ಗ್ರಾಮಕ್ಕೆ ಬಂದಾಗ ಬಾತ್ಮೀದಾರರಿಂದ ಬಂಡಹಳ್ಳಿ ಗ್ರಾಮದ ಸರ್ಕಾರಿ ಅರಣ್ಯ ಪ್ರದೇಶದಲ್ಲಿ ಯಾರೋ ಕೆಲವರು ಆಸಾಮಿಗಳು ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟು ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಅದರಂತೆ ಪಂಚರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಸಂಜೆ 5.30 ಗಂಟೆಗೆ ಹೋಗಿ ಇಸ್ಪೀಟು ಜೂಜಾಟವಾಡುತ್ತಿದ್ದ 03 ಜನ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತೆ. ಸ್ಥಳದಿಂದ 02 ಜನ ಆಸಾಮಿಗಳು ಪರಾರಿಯಾಗಿರುತ್ತಾರೆ. ಪಂಚರ ಸಮಕ್ಷಮ ಪಂಚನಾಮೆ ಮೂಲಕ ಸ್ಥಳದಲ್ಲಿ ದೊರೆತ 5860/-ರೂ ನಗದು ಹಣ, 52 ಇಸ್ಪೀಟು ಎಲೆಗಳು, ಒಂದು ಪ್ಲಾಸ್ಟಿಕ್ ಚೀಲವನ್ನು ಅಮಾನತ್ತುಪಡಿಸಿಕೊಂಡಿರುತ್ತೆ. ಆರೋಪಿಗಳು, ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ವರದಿಯನ್ನು ನೀಡುತ್ತಿದ್ದು, ಈ ಬಗ್ಗೆ ಮುಂದಿನ ಕಾನೂನು ರೀತ್ಯಾ ಕ್ರಮಜರುಗಿಸಲು ಕೋರಿದರ ಮೇರೆಗೆ ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪ್ರಕರಣ  ದಾಖಲಿಸಿರುತ್ತೆ.

 

11. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.139/2021 ಕಲಂ. 15(A),32(3) ಕೆ.ಇ ಆಕ್ಟ್ :-

     ಘನ ನ್ಯಾಯಾಲಯದಲ್ಲಿ  ಲಕ್ಷ್ಮಿನಾರಾಯಣ ಪಿ.ಎಸ್.ಐ ಮಂಚೇನಹಳ್ಳಿ ಪೊಲೀಸ್ ಠಾಣೆ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ  ದಿನಾಂಕ 16/08/2021 ರಂದು ಮದ್ಯಾಹ್ನ 3-00 ಗಂಟೆಯ ಸಮಯದಲ್ಲಿ  ನಾನು ಮತ್ತು ಠಾಣಾ ಪಿ.ಸಿ.105 ನವೀನ್  ಹಾಗೂ  ಜೀಪ್ ಚಾಲಕನಾದ ಎ.ಪಿ.ಸಿ.120 ನಟೇಶ್ ರವರು ಠಾಣಾ ಜೀಪ್ ಸಂಖ್ಯೆ ಕೆ.ಎ-40 ಜಿ-395 ರಲ್ಲಿ ತೊಂಡೇಬಾವಿ, ಬೇವಿನಹಳ್ಳಿ ಮುಂತಾದ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಅಲ್ಲೀಪುರ ಗ್ರಾಮದಲ್ಲಿ ಇರುವಾಗ ನನಗೆ ಬಂದ ಮಾಹಿತಿ ಏನೇಂದರೆ ಮೈಲಗಾನಹಳ್ಳಿ ಗ್ರಾಮದ ಸುಬ್ಬಾರಾವ್ ಬಿನ್ ಜೆಟೋಜಿರಾವ್ ಎಂಬುವರು  ಅವರ ಮನೆಯ ಮುಂಭಾಗದಲ್ಲಿ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರವಾನಿಗೆಯನ್ನು ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮತ್ತು ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು ನಾವು ಪಂಚಾಯ್ತಿದಾರರೊಂದಿಗೆ ಮದ್ಯಾಹ್ನ 3-15  ಗಂಟೆಯ ಸಮಯಕ್ಕೆ ಮೈಲಗಾನಹಳ್ಳಿ ಗ್ರಾಮದ ಸುಬ್ಬಾರಾವ್ ಬಿನ್ ಜೊಟ್ಟೋಜಿರಾವ್ ರವರ ಮನೆಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ಸುಬ್ಬಾರಾವ್ ಬಿನ್ ಜೆಟ್ಟೋಜಿರಾವ್ 56 ವರ್ಷ, ಮರಾಠಿ ಜನಾಂಗ, ಕೂಲಿ ಕೆಲಸ, ವಾಸ ಮೈಲಗಾನಹಳ್ಳಿ ಗ್ರಾಮ ತೊಂಡೇಬಾವಿ ಹೋಬಳಿ ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 15 ಮಧ್ಯ ತುಂಬಿರುವ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಮತ್ತು ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ  ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ 04 ಖಾಲಿ ಬಿದ್ದಿದ್ದ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು,  4 ಪ್ಲಾಸ್ಟಿಕ್  ಲೋಟಗಳನ್ನು ಮತ್ತು  ಒಂದು ಪ್ಲಾಸ್ಟಿಕ್ ಬ್ಯಾಗನ್ನು  ಮದ್ಯಾಹ್ನ 3-30 ಗಂಟೆಯಿಂದ 4-30 ಗಂಟೆಯವರೆಗೆ ಪಂಚನಾಮೆಯ ಮೂಲಕ  ಅವುಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 540/-ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ಸುಬ್ಬಾರಾವ್ ಬಿನ್ ಜೆಟ್ಟೋಜಿರಾವ್ ರವರನ್ನು ವಶಕ್ಕೆ ಪಡೆದುಕೊಂಡು ಸಂಜೆ 5-15 ಗಂಟೆಗೆ ಠಾಣೆಗೆ ವಾಪಾಸ್ ಬಂದು ಠಾಣಾ ಮೊ.ಸಂ.139/2021 ಕಲಂ 15(ಎ), 32(3) ಕೆ.ಇ.ಆಕ್ಟ್ ರೀತ್ಯ ಸ್ವತಃ ಪ್ರಕರಣ ದಾಖಲಿಸಿರುತ್ತದೆ.

 

12. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.88/2021 ಕಲಂ. 87 ಕೆ.ಪಿ ಆಕ್ಟ್ :-

     ದಿನಾಂಕ:16/08/2021 ರಂದು ನಾನು ಠಾಣೆಯಲ್ಲಿರುವಾಗ ಸಂಜೆ 5:35 ಗಂಟೆ ಸಮಯದಲ್ಲಿ ಠಾಣಾ ವ್ಯಾಪ್ತಿಯ ಕಣಿತಹಳ್ಳಿ ಗ್ರಾಮದ ಸರ್ಕಾರಿ ಕೆರೆಯ ಮದ್ಯ ಭಾಗದ ಮುಳ್ಳು ಗಿಡಗಳ ಪೊದೆಗಳ ಮದ್ಯದಲ್ಲಿ ಅಕ್ರಮವಾಗಿ ಕೆಲವರು ಹಣವನ್ನು ಪಣಕಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವವರ ಬಗ್ಗೆ ಮಾಹಿತಿ ಬಂದ ಮೇರೆಗೆ ಠಾಣಾ ಎನ್,ಸಿ.ಆರ್ ನಂ:94/2021 ರಲ್ಲಿ ನಮೂದು ಮಾಡಿದ್ದು ನಂತರ ಪ್ರಥಮ ಪರ್ತಮಾನ ವರದಿಯನ್ನು ತಯಾರಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ತನಿಖೆ ಕೈಗೊಳ್ಳಲು ಅನುಮತಿ ನೀಡುವಂತೆ ಘನ ನ್ಯಾಯಾಲಯದಲ್ಲಿ ಕೋರಿ ಅನುಮತಿ ಪಡೆದುಕೊಂಡಿದ್ದು ಅಂದರ್-ಬಾಹರ್ ಇಸ್ಪೀಟ್ ಜೂಜಾಟದ ಮೇಲೆ ದಾಳಿ ಮಾಡಿ ಮುಂದಿನ ಕ್ರಮ ಜರುಗಿಸಲು ಈ ಪ್ರ.ವ.ವರದಿ.

 

13. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.89/2021 ಕಲಂ. 427,506,34,324 ಐ.ಪಿ.ಸಿ:-

     ದಿನಾಂಕ: 16-08-2021 ರಂದು ಸಂಜೆ 9-00 ಗಂಟೆಗೆ ಗಾಯಾಳು ರವಿಕುಮಾರ್ ರವರ ದೂರನ್ನು ಗಾಯಾಳು ಭಾಮೈದಾ ಚಂದ್ರಶೇಖರ್ ರವರು  ಠಾಣೆಗೆ ಹಾಜರು ಪಡಿಸಿದ ದೂರಿನ ಸಾರಾಂಶವೇನಂದರೆ, ಗಾಯಾಳು ತೋಟದ ಕಡೆ ಬೈಕನಲ್ಲಿ ಬೆಳಿಗ್ಗೆ 10-30 ಗಂಟೆಗೆ ಹೋಗುತ್ತಿದ್ದಾಗ ತಮ್ಮ ಜಮೀನಿನ ಹತ್ತಿರ ತನ್ನ ಬೈಕನ್ನು ಕೇಡವಿ ತನ್ನ ಮೇಲೆ ಮಾರಕಸ್ತ್ರಗಳು, ದೊಣ್ಣೆಯಿಂದ 4 ಜನರು 1)ಕೆ.ಎಂ ದೇವರಾಜ ಬಿನ್ ಮುನಿರಾಮಯ್ಯ, 2)ಚಿಕ್ಕಗೌಡ ಬಿನ್ ಮುನಿರಾಮಯ್ಯ, 3) ಅಭಿಲಾಷ್ ಬಿನ್ ದೇವರಾಜ್ 4)ರವಿಕುಮಾರ್ ಬಿನ್ ಮುನಿರಾಮಯ್ಯ ರವರುಗಳು ತನ್ನ ಬಡಿದು ತನ್ನನ್ನು ಸಾಯಿಸಿ ಬೀಡುತ್ತೇವೆ , ನೀನು ಇನ್ನೂ ಜಮೀನಿನ ಕಡೆ ಬರದಂತೆ ಮಾಡುತ್ತೇವೆ, ಎಂದು ಪ್ರಾಣ ಬೆದರಿಕೆ ಹಾಕಿದ್ದಾರೆ, ತಾನು ಅಲ್ಲಿಂದ ತಪ್ಪಸಿ ಚಿಕ್ಕಬಳ್ಳಾಪುರ ಜಿಲ್ಲೆ ಸರ್ಕಾರಿ ಆಸ್ಪತ್ರೆಯ ಅವರ ಬಡಿದ ಪೆಟ್ಟುಗಳಿಗೆ ತಡಯಲಾರದೆ ಅಡ್ಮೀಟ್ ಆಗಿರುತ್ತೇನೆ. ಆದ್ದರಿಂದ ತನಗೆ ಪ್ರಾಣ ರಕ್ಷಣೆ ಕೋಡಬೇಕೆಂದು ಕೋರಿದ್ದರ ಮೇರೆಗೆ ಈ ಪ್ರವರದಿ.

ಇತ್ತೀಚಿನ ನವೀಕರಣ​ : 17-08-2021 07:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080