Feedback / Suggestions

 

1. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.68/2021 ಕಲಂ. 279,337,304A ಐ.ಪಿ.ಸಿ:-

  ದಿನಾಂಕ:17/07/2021 ರಂದು ಬೆಳಗ್ಗೆ 10:00 ಗಂಟೆಯಲ್ಲಿ ಪಿರ್ಯಾಧಿದಾರರಾದ ಜಿ ಮಂಜುನಾಥರೆಡ್ಡಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ತಂದೆ ತಾಯಿಗೆ ನಾವು ಮೂರು ಜನರು ಮಕ್ಕಳಿದ್ದು 2ನೇ ಮಂಜುನಾಥರೆಡ್ಡಿ ಆದ ನಾನು, 3ನೇ  ಸುಬ್ಬಿರೆಡ್ಡಿ(44 ವರ್ಷ) ಎಂಬ ಮಕ್ಕಳಿದ್ದು ಎಲ್ಲರಿಗೂ  ವಿವಾಹವಾಗಿರುತ್ತೆ ನನ್ನ ಅಣ್ಣ ರವಿಚಂದ್ರ ರೆಡ್ಡಿ ರವರು ಸುಮಾರು ವರ್ಷಗಳ ಹಿಂದೆ ಮೃತಪಟ್ಟಿರುತ್ತಾರೆ, ನನ್ನ ತಮ್ಮ ಸುಬ್ಬಿರೆಡ್ಡಿ ಕಾಫಿ ಪುಡಿ ವ್ಯಾಪಾರ ಮಾಡಿಕೊಂಡು ಜೀವನ ಮಾಡಿಕೊಂಡಿತ್ತಾನೆ.  ದಿನಾಂಕ:16/07/2021 ರಂದು ಕೆಲಸದ ನಿಮಿತ್ತ ನಮ್ಮ ಪರಿಚಯಸ್ಥರಾದ ರಾಘವೇಂದ್ರ ರವರ ಜೊತೆಯಲ್ಲಿ  ಚಾಕವೇಲು ಗ್ರಾಮಕ್ಕೆ ಹೋಗಿ ಬರುತ್ತೇನೆಂದು ಹೇಳಿ ಬಂದಿದ್ದು , ರಾತ್ರಿ 9:00 ಗಂಟೆ ಸಮಯದಲ್ಲಿ  ನನಗೆ ಫೋನ್ ಮಾಡಿ ಬಂದ ಕೆಲಸ ಮುಗಿದಿರುವುದಾಗಿ ಹಾಗೂ ನಾನು , ರಾಘವೇಂದ್ರ, ಬೆಸ್ತಲಪಲ್ಲಿ ಗ್ರಾಮದ ಸೋಮಶೇಖರ್ ಎಂಬುವರ  ಕಾರ್ ನಲ್ಲಿ ವಾಪಸ್ಸು ಮನೆಗೆ ಬರುತ್ತಿರುವುದಾಗಿ ತಿಳಿಸಿದನು. ನಂತರ ದಿನಾಂಕ:17/07/2021 ರಂದು ಬೆಳಗ್ಗೆ ಸುಮಾರು 4:30 ರ ಸಮಯದಲ್ಲಿ ನನ್ನ ನಾದಿನಿ ಗಾಯತ್ರಿ ರವರು ನನಗೆ ಫೋನ್ ಮಾಡಿ ನನ್ನ ತಮ್ಮ ಸುಬ್ಬಿರೆಡ್ಡಿ ರವರು ಬರುತ್ತಿದ್ದ ಕಾರ್ ಗೆ  ಮುಸಲಿಗಾನಪಲ್ಲಿ ಗ್ರಾಮದ ಬಳಿ ಅಪಘಾತವಾಗಿದ್ದು  ಬಾಗೇಪಲ್ಲಿ ಯ ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು  ಬಾಗೇಪಲ್ಲಿ ಯಿಂದ ಪ್ರಣವ್ ಎಂಬುವರು ನನಗೆ ಫೋನ್ ಮಾಡಿ ತಿಳಿಸಿರುತ್ತಾರೆಂದು ಹೇಳಿದ್ದು ನಾನು ಕೂಡಲೇ ಬಂದು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಬಳಿಗೆ ಬಂದು ನೋಡಲಾಗಿ ವಿಷಯ ನಿಜವಾಗಿರುತ್ತೆ. ನನ್ನ ತಮ್ಮನ ಜೊತೆಗೆ ವಾಪಸ್ಸು ಬರುತ್ತಿದ್ದ ರಾಘವೇಂದ್ರ, ಸೋಮಶೇಖರ್ ರವರ ಬಗ್ಗೆ ವಿಚಾರಿಸಲಾಗಿ ಅವರಿಗೂ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುತ್ತಾರೆ, ನಂತರ ರಾಘವೇಂದ್ರ ರವರನ್ನು ವಿಚಾರಿಸಲಾಗಿ ತಾವುಗಳು ದಿನಾಂಕ:16/07/2021 ರಂದು ರಾತ್ರಿ 10:00 ಗಂಟೆ ಸುಮಾರಿನಲ್ಲಿ ನಾನು, ಸುಬ್ಬಿರೆಡ್ಡಿ ಎಂಬುವರು, ಮತ್ತು ಬೆಸ್ತಲಪಲ್ಲಿ ಗ್ರಾಮದ  ಸೋಮಶೇಖರ್  ಎಂಬುವರು ವಾಪಸ್ಸು ಗೋರಂಟ್ಲ ಗ್ರಾಮಕ್ಕೆ ಹೋಗಲು ಟಿಎಸ್ 07 ಯು ಹೆಚ್ 0378 ನೋಂದಣಿ ಸಂಖ್ಯೆಯ ಇಕೋಸ್ ಸ್ಪೋರ್ಟ್ ಕಾರ್ ನಲ್ಲಿ ಚಾಲಕನಾಗಿ ಸೋಮಶೇಖರ್ ರವರು ಚಲಾಯಿಸಿಕೊಂಡು  ಬರುತ್ತಿದ್ದಾಗ ಮುಸಲಿಗಾನಪಲ್ಲಿ ಗ್ರಾಮದ ಬಳಿ ಸೋಮಶೇಖರ್ ರವರು ಅತೀವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದರ ಪರಿಣಾಮ ರಸ್ತೆಯ ಎಡಬದಿಗೆ ಕಾರ್ ನುಗ್ಗಿ ಪಲ್ಟಿ ಹೊಡಿಯಿತು ,  ಕಾರ್ ನಲ್ಲಿದ್ದ ಸುಬ್ಬಿರೆಡ್ಡಿ ರವರಿಗೆ ತಲೆಗೆ  ಗಾಯವಾಗಿರುತ್ತೆ, ಮತ್ತು ನಮಗೂ ಗಾಯಗಳಾಯಿತೆಂದು ನಂತರ ದಾರಿಯಲ್ಲಿ ಬರುತ್ತಿದ್ದ ಅಂಜಿ ಎಂಬುವರು ನಮ್ಮಗಳನ್ನು ನೋಡಿ ಯಾವುದೋ ಕಾರ್ ನಲ್ಲಿ ಚೇಳೂರು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಯನ್ನು  ಕೊಡಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಸಲುವಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಲುವಾಗಿ 108 ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಬಂದು ದಾಖಲಿಸಿದ್ದು ಸುಬ್ಬಿರೆಡ್ಡಿ ಆಸ್ಪತ್ರೆಗೆ ಬರುವಷ್ಟರಲ್ಲಿ ಮಾರ್ಗ ಮಧ್ಯೆ  ಮೃತಪಟ್ಟರೆಂದು ತಿಳಿಸಿದರು. ಅತೀವೇಗ ಮತ್ತು ಅಜಾಗರೂಕತೆಯಿಂದ ಟಿಎಸ್ 07 ಯು ಹೆಚ್ 0378 ನೋಂದಣಿ ಸಂಖ್ಯೆಯ ಇಕೋಸ್ ಸ್ಪೋರ್ಟ್ ಕಾರ್ ವಾಹನ ಚಾಲನೆ ಮಾಡಿ ಅಪಘಾತ ಪಡಿಸಿ ನನ್ನ ತಮ್ಮ ಸುಬ್ಬಿರೆಡ್ಡಿ ರವರ ಸಾವಿಗೆ ಕಾರಣವಾಗಿರುವ ಸೋಮಶೇಖರ್ ರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊಸಂ:68/2021 ಕಲಂ 279,337,304 (ಎ) ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತೆ.

 

2. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್‌ ಠಾಣೆ ಮೊ.ಸಂ.38/2021 ಕಲಂ. 279,337 ಐ.ಪಿ.ಸಿ:-

  ದಿನಾಂಕ:-16/07/2021 ರಂದು ಸಂಜೆ 7-30 ಗಂಟೆಗೆ ಶ್ರೀ.ಪಿರ್ಯಾಧಿರರಾದ ಅರವಿಂದ್ ಎ.ಆರ್ ಬಿನ್ ರಾಮಕೃಷ್ಣಪ್ಪ 33 ವರ್ಷ, ವಕ್ಕಲಿಗರು, ಬಿ.ಜಿ.ಎಸ್ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ, ಅಣಕನೂರು ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:-16/07/2021 ರಂದು ತನ್ನ ಬಾಬತ್ತು ಹೊಸ ಸ್ವೀಫ್ಟ್ ಕಾರು ಟಿ.ಆರ್.ನಂ-T0701KA4506AJ ರಲ್ಲಿ ಮನೆಯಿಂದ ಕಾಲೇಜಿಗೆ ಹೋಗಲು ಬೆಳಿಗ್ಗೆ ಸುಮಾರು 11-30 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ - ಬೆಂಗಳೂರು ಎನ್.ಹೆಚ್-44 ಬಿ.ಬಿ ರಸ್ತೆಯ ಎಂ.ವಿ ವೃತ್ತದ ಬಳಿ ತನ್ನ ವಾಹನವನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಅದೇ ಸಮಯಕ್ಕೆ ಭುವನೇಶ್ವರಿ ವೃತ್ತದ ಕಡೆಯಿಂದ 4 ಜನರನ್ನು ಕುಳ್ಳರಿಸಿಕೊಂಡು ಬಂದ ದ್ವಿಚಕ್ರವಾಹನ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ತನ್ನ ಕಾರಿನ ಮುಂಭಾಗ ಜಕಂಗೊಂಡು ಸದರಿ ದ್ವಿಚಕ್ರವಾಹನದ ನೊಂದಣಿ ಸಂಖ್ಯೆಯನ್ನು ನೋಡಲಾಗಿ KA-40-U-1389 ರ ಯೂನಿಕಾರ್ನ್ ದ್ವಿಚಕ್ರವಾಹನವಾಗಿದ್ದು ಹಾಗೂ ದ್ವಿಚಕ್ರವಾಹನದಲ್ಲಿದ್ದವರನ್ನು ನೋಡಲಾಗಿ 4 ಜನರಿಗೂ ಸಣ್ಣ-ಪುಟ್ಟ ತರಚಿದ ಗಾಯಗಳಾಗಿದ್ದು, ಸದರಿ ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ಸವಾರನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಮಂಜುನಾಥ 34 ವರ್ಷ, ಚಿಕ್ಕಬಳ್ಳಾಪುರ ಹಾಗೂ ಅವರ ಹೆಂಡತಿ ಮಾನಸ 27 ವರ್ಷ, ಹಾಗೂ ಅವರ ನಾದಿನಿ ಮೇಘ 22 ವರ್ಷ, ಹಾಗೂ ಅವರ ಮಗಳಾದ ಗಾರ್ಗಿ 3 ವರ್ಷ ಚಿಕ್ಕಬಳ್ಳಾಪುರ ಟೌನ್ ಎಂತ ತಿಳಿಸಿದ್ದು, ಸದರಿ ಗಾಯಾಳುಗಳನ್ನು ಉಪಚರಿಸಿ ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಆಟೋದಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜೀವನ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಸದರಿ ಅಪಘಾತಕ್ಕೆ ಕಾರಣನಾದ KA-40-U-1389 ರ ಯೂನಿಕಾರ್ನ್ ದ್ವಿಚಕ್ರವಾಹನ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.89/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:16/07/2021 ರಂದು ಸಂಜೆ 18-30 ಗಂಟೆಗೆ ಠಾಣೆಯ ಸಿಬ್ಬಂದಿಯಾದ ಸಿ.ಹೆಚ್.ಸಿ 32 ರವರು ಮಾಲು, ಪಂಚನಾಮೆ, ಆಸಾಮಿಯೊಂದಿಗೆ  ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೇಂದರೆ, ದಿನಾಂಕ:16/07/2021 ರಂದು ಬೆಳಗ್ಗೆ  ಹಾಜರಾತಿಯಲ್ಲಿ ಸಿ,ಹೆಚ್,ಸಿ 32 ಮಂಜುನಾಥ ಆದ ತನಗೆ  ದಿಬ್ಬೂರಹಳ್ಳಿ ಸರ್ಕಲ್ ಸಂಚಾರಿ ಕರ್ತವ್ಯಕ್ಕೆ ನೇಮಿಸಿದ್ದು ಆದರಂತೆ ತಾನು ಸಂಜೆ 17-00 ಗಂಟೆಯ ಸಮಯದಲ್ಲಿ ದಿಬ್ಬೂರಹಳ್ಳಿ  ಸರ್ಕಲ್ ನಲ್ಲಿ ಕರ್ತವ್ಯ ಮಾಡುತ್ತಿದ್ದಾಗ  ಯಾರೋ ಒಬ್ಬ  ದಿಬ್ಬೂರಹಳ್ಳಿ ಗ್ರಾಮದ ಸಂತೆ ಮೈದಾನದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟು ಆಗುವ ರೀತಿಯಲ್ಲಿ ಅಕ್ರಮವಾಗಿ  ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು  ಮಧ್ಯಫಾನ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಸದರಿ ವಿಚಾರವನ್ನು ಪಿ.ಎಸ್.ಐ ರವರ ಗಮನಕ್ಕೆ ತಂದು ಸದರಿ ಆಸಾಮಿಯ ಮೇಲೆ ದಾಳಿ ಮಾಡಲು ಪಿ.ಎಸ್.ಐ ರವರಿಂದ ಮೌಖಿಕ ಆದೇಶವನ್ನು ಪಡೆದುಕೊಂಡು ನಂತರ ದಿಬ್ಬೂರಹಳ್ಳಿ ಸರ್ಕಲ್ ನಲ್ಲಿ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ ದಾಳಿ ಮಾಡಲು ಪಂಚರಾಗಿ ಸಹಕರಿಸಲು ಕೋರಿದರ ಮೇರೆಗೆ  ಅವರು ಒಪ್ಪಿಕೊಂಡಿರುತ್ತಾರೆ.  ನಂತರ ನಾನು ಪಂಚರೊಂದಿಗೆ ನಡೆದುಕೊಂಡು ತಲಕಾಯಲಬೆಟ್ಟ ರಸ್ತೆಯಲ್ಲಿ ಹೋಗಿ ಸಂತೆ ಮೈದಾನ ಬಳಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಆಸಾಮಿಯು ಸಂತೆ ಮೈದಾನದ ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಪ್ಲಾಸ್ಟಿಕ್ ಪೇಪರ್ ನಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ನ್ನು ಇಟ್ಟಿಕೊಂಡು ಒಂದು ಮಧ್ಯದ ಪ್ಯಾಕೇಟ್ ನ್ನು ಮತ್ತು ಪ್ಲಾಸ್ಟಿಕ್ ಗ್ಲಾಸ್ ನ್ನು ತನ್ನ ಮುಂದೆ ಇಟ್ಟಿಕೊಂಡು ಮಧ್ಯಪಾನ ಮಾಡುತ್ತಿದ್ದವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಸದರಿ ಆಸಾಮಿಯನ್ನು ಹಿಡಿದುಕೊಂಡು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಮಧ್ಯಸೇವನೆ ಮಾಡುತ್ತಾ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಳ್ಳಲು ಮತ್ತು ಮಧ್ಯಪಾನ ಮಾಡಲು ನಿಮ್ಮ ಬಳಿ ಯಾವುದಾದರೂ ಪರವಾನಿಗೆ ಇದಿಯೇ ಎಂದು ಕೇಳಲಾಗಿ ಸದರಿ ಆಸಾಮಿಯು ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲಾವೆಂದು ತಾನು ಮಧ್ಯಪಾನ ಮಾಡುತ್ತಾ ತಾನು ಊರಿಗೆ ಹೋಗಲು ವಾಹನದಲ್ಲಿ ಬರುವ ತನ್ನ ಸ್ನೇಹಿತರಿಗಾಗಿ ಕಾಯುತ್ತಿರುವುದಾಗಿ ಹೇಳಿದ್ದು ಸದರಿ ಆಸಾಮಿಯ ಹೆಸರು ಮತ್ತು ಪೂರ್ಣ ವಿಳಾಸವನ್ನು ಕೇಳಲಾಗಿ ಸದರಿ ಆಸಾಮಿಯ ಹೆಸರು ಇರ್ಷಾದ್ ಬಿನ್ ನಜೀಂ ಪಾಷ, 30 ವರ್ಷ, ಮುಸ್ಲಿಂ ಜನಾಂಗ, ಮಹೇಂದ್ರ ಬೊಲೆರೋ ವಾಹನದ ಡ್ರೈವರ್ ,ಸ್ವಂತ ಸ್ಥಳ : ಜೂಲಪಾಳ್ಯ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, ಹಾಲಿ ವಾಸ: ಚಿಂತಾಮಣಿ ನಗರದ ಬುಕ್ಕನಹಳ್ಳಿ ರಸ್ತೆಯಲ್ಲಿರುವ ಚಾಕಿ ಸೆಂಟರ್ ನಾರಾಯಣಸ್ವಾಮಿ ರವರ ಬಾಡಿಗೆ ಮನೆಯಲ್ಲಿ ವಾಸ, ಪೋನ್ ನಂಬರ್:9972641270 ಎಂದು ತಿಳಿಸಿದ್ದು ನಂತರ  ಸದರಿ ಸ್ಥಳದಲ್ಲಿದ್ದ ಮಧ್ಯದ ಪ್ಯಾಕೇಟ್ ಗಳನ್ನು ಪಂಚರ ಸಮಕ್ಷಮ ಪರಿಶೀಲಿಸಲಾಗಿ 90 ಎಂ,ಎಲ್ ನ original choice deluxe whisky ಯ 15 ಟೆಟ್ರಾ ಪ್ಯಾಕೇಟ್ ಗಳಿದ್ದು ಇವುಗಳ ಒಟ್ಟು ಮೌಲ್ಯ 1350 ಎಂ,ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಮೇಲೆ ಅದರ ಬೆಲೆ 35.13 ಎಂದು ನಮೂದು ಮಾಡಿದ್ದು ಇವುಗಳ ಒಟ್ಟು ಬೆಲೆ 526.95 ರೂ ಆಗಿರುತ್ತೆ. ಸದರಿ ಮಧ್ಯದ ಪ್ಯಾಕೇಟ್ ಗಳನ್ನು ಮತ್ತು  ಸ್ಥಳದಲ್ಲಿಯೇ ಬಿದಿದ್ದ  1 ಖಾಲಿ 90 ಎಂ ಲ್ ನ original choice deluxe whisky ಯ  ಟೆಟ್ರಾ ಪ್ಯಾಕೇಟ್ ನ್ನು ಮತ್ತು ಮಧ್ಯಫಾನ ಮಾಡಿರುವ ನಿಶಾನೆಗಳಿರುವ 1 ಪ್ಲಾಸ್ಟಿಕ್ ಗ್ಲಾಸ್ ನ್ನು ಮತ್ತು ಒಂದು ಖಾಲಿ ವಾಟರ್ ಬಾಟೆಲ್ ನ್ನು ಸಂಜೆ 17-15 ಗಂಟೆಯಿಂದ ಸಂಜೆ 18-15 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಪಂಚನಾಮೆ , ಆಸಾಮಿಯೊಂದಿಗೆ ಠಾಣೆಗೆ ಹಾಜರಾಗಿ ಆಸಾಮಿಯ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರಿ ಠಾಣಾಧಿಕಾರಿಗಳಿಗೆ  ವರದಿಯನ್ನು ಪಡೆದು ಠಾಣಾ ಮೊ.ಸಂಖ್ಯೆ:89/2021 ಕಲಂ:15(ಎ),32(3) ಕೆ.ಇ ಆಕ್ಟ್  ರೀತ್ಯಾ ಪ್ರಕಣ ದಾಖಲಿಸಿರುತ್ತೆ.

 

4. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.98/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿ:17/07/2021 ರಂದು  ಬೆಳಗ್ಗೆ 10-30 ಗಂಟೆಗೆ  ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿಯಾದ ಶ್ರೀ.ದೇವರಾಜು, ಸಿಪಿಸಿ-318, ಗೌರಿಬಿದನೂರು ನಗರ ಠಾಣೆ ರವರು ಠಾಣಾ ಎನ್.ಸಿ.ಆರ್.ನಂ.138/2021 ರಲ್ಲಿ  ಆರೋಪಿಯ ವಿರುದ್ದ ಕ್ರಿಮಿನಲ್  ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಲು ಕೋರಿ ಅನುಮತಿಯನ್ನು ನೀಡಲು ಕೋರಿ ಅಸಲು ಎನ್.ಸಿ.ಆರ್.138/2021 ಹಾಗೂ  ಪಿರ್ಯಾದಿದಾರರ  ಅಸಲು-ದೂರು ವರದಿಯೊಂದಿಗೆ  ಸಲ್ಲಿಸಿಕೊಂಡಿದ್ದ  ಮನವಿಯ ವಿಚಾರದಲ್ಲಿ  ಘನ ನ್ಯಾಯಾಲಯವು ಅನುಮತಿಯನ್ನು ನೀಡಿರುವ  ಆದೇಶದ  ನಕಲು ದಾಖಲೆಯನ್ನು ಹಾಜರ್ಪಡಿಸಿದ್ದನ್ನು ಸ್ವೀಕರಿಸಿದ್ದು,  ಎನ್.ಸಿ.ಆರ್.138/2021 ದೂರು ವರದಿಯಲ್ಲಿನ ಸಾರಾಂಶವೇನೆಂದರೆ ದಿ:30/06/2021 ರಂದು  ಶ್ರಿ ಲೋಕೇಶ್ ಸಿ ಹೆಚ್ ಸಿ-214 ಗೌರಿಬಿದನೂರು ನಗರ ಪೊಲೀಸ್ ಠಾಣೆ  ರವರು  ಠಾಣೆಗೆ ಹಾಜರಾಗಿ ನಾನು ಗೌರಿಬಿದನೂರು ನಗರ ಠಾಣೆಯಲ್ಲಿ ಗುಪ್ತ ಮಾಹಿತಿ ಸಿಬ್ಬಂದಿಯಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದು  ನಾನು ನೀಡುತ್ತೀರುವ ದೂರು ಏನೆಂದರೆ ಈ ದಿನ ದಿ:30/06/2021 ರಂದು PSI ಸಾಹೇಬರು ನನಗೆ  ಗೌರಿಬಿದನೂರು ನಗರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಗುಪ್ತ ಮಾಹಿತಿಯನ್ನು ಸಂಗ್ರಹಣೆ ಮಾಡಲು ಮತ್ತು ಕಾನೂನು ಕ್ರಮ ಕೈಗೊಳ್ಳಲು ನನಗೆ ನೇಮಿಸಿದ್ದು ಅದರಂತೆ ನಾನು ಈ ದಿನ ದಿ:30/06/2021 ರಂದು  ಮದ್ಯಾಹ್ನ 12-30 ಗಂಟೆಯಲ್ಲಿ ಗೌರಿಬಿದನೂರು ನಗರದಲ್ಲಿ ಗಸ್ತು ಮಾಡುತ್ತೀದ್ದಾಗ ನಮ್ಮ ಠಾಣೆಯ ಮಪಿಸಿ-227.ಚಂದ್ರಕಲಾ ರವರು ನನಗೆ ಪೋನ್ ಮಾಡಿ ಗೌರಿಬಿದನೂರು ನಗರದ, ಸುಮಂಗಲಿ ಕಲ್ಯಾಣ ಮಂಟಪದ ಮುಂದಿನ ಸಾರ್ವಜನಿಕ ರಸ್ತೆಯ ಬಳಿ ಯಾರೋ ಒಬ್ಬ ಮಹಿಳೆ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು  ಸ್ಥಳವಾಕಾಶವನ್ನು ಮಾಡಿಕೊಟ್ಟಿದ್ದು ಅಲ್ಲಿ ಸಾರ್ವಜನಿಕರು ಮದ್ಯ ಸೇವನೆಯನ್ನು ಮಾಡುತ್ತೀರುವುದಾಗಿ ತಿಳಿಸಿದ್ದು  ಅದರಂತೆ ಸದರಿಯವರ ಮೇಲೆ ದಾಳಿ ಮಾಡಲು  ಠಾಣೆಗೆ ಪಂಚರನ್ನು ಕರೆದು ಸದರಿ ಮಾಹಿತಿಯನ್ನು ತಿಳಿಸಿದ್ದು ಪಂಚರು ದಾಳಿ ಕಾಲದಲ್ಲಿ ಹಾಜರಿರಲು ಒಪ್ಪಿಕೊಂಡಿರುತ್ತಾರೆ. ನಂತರ ಠಾಣೆಯಿಂದ ಪಂಚಾಯ್ತಿದಾರರನ್ನು ಹಾಗೂ ಠಾಣಾ ಸಿಬ್ಬಂದಿಯಾದ ಮ.ಪಿ.ಸಿ-227 ಚಂದ್ರಕಲಾ ರವರನ್ನು ಸಹಾ ಕರದುಕೊಂಡು ಸುಮಂಗಲಿ ಕಲ್ಯಾಣ ಮಂಟಪದ ಬಳಿಗೆ  ನಾವುಗಳು ಹೋಗಿ ನಂತರ ಸ್ವಲ್ಪ ದೂರ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ  ಸುಮಂಗಲಿ ಕಲ್ಯಾಣ ಮಂಟಪದ ಮುಂದಿನ ಸಾರ್ವಜನಿಕ ರಸ್ತೆಯ ಬಳಿ ಯಾರೋ ಒಬ್ಬ ಮಹಿಳೆಯು ಸಾರ್ವಜನಿಕರಿಗೆ ಮದ್ಯವನ್ನು ಸರಬರಾಜು ಮಾಡುತ್ತಿದ್ದು ಅಲ್ಲಿ ಸಾರ್ವಜನಿಕರು ಮದ್ಯವನ್ನು ಸೇವನೆ ಮಾಡುತ್ತೀರುವುದು ಕಂಡು ಬಂದಿದ್ದು ಸದರಿಯವರ ಮೇಲೆ ದಾಳಿ ಮಾಡಲು ಹೋಗುವಷ್ಟರಲ್ಲಿ ಅಲ್ಲಿ ಮದ್ಯ ಸೇವನೆ ಮಾಡುತ್ತೀದ್ದ ಸಾರ್ವಜನಿಕರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು ಅಲ್ಲಿ ಮದ್ಯವನ್ನು ಸರಬರಾಜು ಮಾಡುತ್ತೀದ್ದ ಮಹಿಳೆಯನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಗಂಗರತ್ನಮ್ಮ ಕೋಂ ಹನುಮಂತರಾಯಪ್ಪ, ಸುಮಾರು 46 ವರ್ಷ, ಭಜಂತ್ರಿ  ಜನಾಂಗ, ಹಪ್ಪಳದ ವ್ಯಾಪಾರ, ವಾಸ ಗಂಗಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು  ಸ್ಥಳದಲ್ಲಿ ಮದ್ಯಪಾನ ಮಾಡಲು  ಯಾವುದಾದರು ಪರವಾನಿಗೆಯೇ ಇದ್ದರೇ ತೋರಿಸುವಂತೆ ಕೇಳಲಾಗಿ ತನ್ನ ಬಳಿ ಯಾವುದೂ ಇಲ್ಲವೆಂತ ತಿಳಿಸಿದ್ದು ನಂತರ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ 1) HAYWARDS CHEERS WHISKY 90 ML  ಮದ್ಯವಿರುವ 16 ಟೆಟ್ರಾ ಪ್ಯಾಕೇಟ್ ಗಳಿದ್ದು, ಒಂದು ಮಧ್ಯದ ಪ್ಯಾಕೆಟ್ ಬೆಲೆ 35.13/ ರೂಗಲಾಗಿದ್ದು, ಮದ್ಯದ ಪ್ರಮಾಣವನ್ನು ಲೆಕ್ಕ ಮಾಡಲಾಗಿ 01 ಲೀಟರ್ 440 ML  ಆಗಿದ್ದು ಇದರ  ಒಟ್ಟು ಮೌಲ್ಯವು 562.08-00/-ಆಗಿದ್ದು, 2) HAYWARDS CHEERS WHISKY 90 ML  ಖಾಲಿ 03 ಟೆಟ್ರಾ ಪಾಕೇಟ್ ಗಳು, 3) ಖಾಲಿ 03 ಪ್ಲಾಸ್ಟಿಕ್ ಗ್ಲಾಸ್ ಗಳು 4) 02  ಲೀಟರ್ ಸಾಮರ್ಥ್ಯದ ಒಂದು ಖಾಲಿ ವಾಟರ್ ಬಾಟೆಲ್ ಇದ್ದು ಇವುಗಳನ್ನು ಮದ್ಯಾಹ್ನ 12-45  ಗಂಟೆಯಿಂದ ಮದ್ಯಾಹ್ನ 1-45 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ನಂತರ ಮದ್ಯಾಹ್ನ 1-50 ಗಂಟೆಗೆ ಠಾಣೆಗೆ ವಾಪಸ್ಸು ಬಂದು ವರದಿಯನ್ನು ಸಿದ್ದಪಡಿಸಿ ಮೇಲ್ಕಂಡ ಮಾಲುಗಳು  ಮತ್ತು ಆರೋಪಿಯನ್ನು ಅಸಲು ದಾಳಿ ಪಂಚನಾಮೆಯನ್ನು  ಮದ್ಯಾಹ್ನ 2-15 ಗಂಟೆಗೆ   ನಿಮ್ಮ ವಶಕ್ಕೆ ನೀಡುತ್ತಿದ್ದು  ಮೇಲ್ಕಂಡ   ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರುತ್ತಾ ಈ  ವರದಿಯನ್ನು  ನೀಡುತ್ತಿರುವುದಾಗಿ ನೀಡಿದ  ದೂರು-ವರದಿಯನ್ನು ಪಡೆದುಕೊಂಡು  ಠಾಣೆಯಲ್ಲಿ ಎನ್ ಸಿ ಆರ್:138/2021 ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡಿರುವುದಾಗಿರುತ್ತೆ. ನಂತರ ಠಾಣೆಯ  ಎನ್.ಸಿ.ಆರ್.ನಂ,138/2021 ರಲ್ಲಿ  ಆರೋಪಿಯ ವಿರುದ್ದ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಬೇಕಾಗಿರುವುದರಿಂದ  ಘನ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಳ್ಳಲು ಅನುಮತಿಯನ್ನು  ನೀಡಲು ಕೋರಿ ವರದಿಯನ್ನು ನಿವೇದಿಸಿಕೊಂಡಿದ್ದು, ಈ ಸಂಬಂಧ ಘನ  ನ್ಯಾಯಾಲಯವು  ಆರೋಪಿಯ ವಿರುದ್ದ ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಲು ಅನುಮತಿಯನ್ನು ನೀಡಿದ್ದರ ಸಂಬಂಧ  ಅರೋಪಿಯ ವಿರುದ್ದ ಠಾಣೆಯಲ್ಲಿ  ಮೊ.ಸಂ.98/2021 ಕಲಂ 15(ಎ), 32(3) ಕೆ.ಇ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

5. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.75/2021 ಕಲಂ. 506,34,504,323,324 ಐ.ಪಿ.ಸಿ:-

  ದಿನಾಂಕ:16/07/2021 ರಂದು ಸಂಜೆ 7:15 ಗಂಟೆಗೆ ಪಿರ್ಯಾದಿ ಶ್ರೀಮತಿ ಲಕ್ಷ್ಮಿದೇವಮ್ಮ ಕೋಂ ಲೇಟ್ ಟಿ.ಎಂ ಸಂಪಂಗಿರಾಮಯ್ಯ, 70 ವರ್ಷ, ತೋಗಟವೀರ ಜನಾಂಗ, ಜಿರಾಯ್ತಿ, ವಾಸ: ತಿರ್ನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ಪಿತ್ರಾರ್ಜಿತ ಹಾಗೂ ತಮ್ಮ ಮಾವನವರಾದ ದೊಡ್ಡ ಮುನಿರಾಮಯ್ಯ ರವರ ಸ್ವತ್ತು ಆದ ತಿರ್ನಹಳ್ಳಿ ಗ್ರಾಮದ ಸರ್ವೆ ನಂಬರ್:129/2 ರಲ್ಲಿ ತಾವು ಸೇವಂತಿಗೆ ಹೂ ಬೆಳೆ ಇಟ್ಟಿದ್ದು ದಿನಾಂಕ:11/07/2021 ರಂದು ಬಾನುವಾರ ಬೆಳಿಗ್ಗೆ ಸುಮಾರು 7:45 ರ ಸಮಯದಲ್ಲಿ ತಾನು ಮತ್ತು ತನ್ನ ಸೊಸೆಯಾದ ಶ್ರೀಮತಿ ಚಂದ್ರಕಲಾ ಆದ ತಾವು ಕಳೆ ತೆಗೆಯುತ್ತಿದ್ದಾಗ ಆ ಸಮಯದಲ್ಲಿ ಮಂಚನಬೆಲೆ ವಾಸಿ, ಹಾಲಿ ವಾಸ: ಪ್ರಶಾಂತ ನಗರ, ಚಿಕ್ಕಬಳ್ಳಾಪುರ ನಗರ ರವರು ಗೋಪಾಲಕೃಷ್ಣ (ವಕೀಲರು) ಮತ್ತು ಶ್ರೀಧರ್ ರವರು ತನ್ನ ಮೇಲೆ ಮತ್ತು ಸೊಸೆ ಚಂದ್ರಕಲ ರವರ ಮೇಲೆ ಏಕಾಏಕಿ ಗಲಾಟೆ ಮಾಡಿ ಆವಾಚ್ಯ ಶಬ್ದಗಳಿಂದ ಬೈದು ಗೋಪಾಲಕೃಷ್ಣ ಎಂಬುವರು ತನಗೆ ಮತ್ತು ಸೊಸೆಗೆ ದೊಣ್ಣೆದಿಂದ ಹೊಡೆದಿದ್ದಾರೆ. ಶ್ರೀಧರ್ ಎಂಬುವರು ಕೈಗಳಿಂದ ತಮ್ಮನ್ನು ಹೊಡೆದಿರುತ್ತಾನೆ. ತಮ್ಮನ್ನು ಕುರಿತು ನೀವು ಏನಾದರು ಚಿಕ್ಕಬಳ್ಳಾಪುರಕ್ಕೆ ಬಂದರೆ ನಿಮ್ಮನ್ನು ಸಾಯಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ತಮ್ಮ ಗ್ರಾಮದ ಜೈ ಕುಮಾರ ಬಿನ್ ಕೃಷ್ಣಪ್ಪ ಹಾಗೂ ಇನ್ನು ಇತರರು ಗಲಾಟೆ ನೋಡಿರುತ್ತಾರೆ. ತಮಗೆ ಹೊಡೆದು ಗಲಾಟೆ ಮಾಡಿ ಬೆದರಿಕೆ ಹಾಕಿರುವವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆ ತಾವು ಗ್ರಾಮಸ್ಥರು ನ್ಯಾಯ ಪಂಚಾಯ್ತಿ ಮಾಡೊಣವೆಂದು ಹೇಳಿದ್ದಕ್ಕೆ ಸುಮ್ಮನಿದ್ದು ಆದರೆ ಇದುವರೆಗೂ ಇದರ ಬಗ್ಗೆ ಯಾವುದೇ ನ್ಯಾಯ ಪಂಚಾಯ್ತಿ ಮಾಡದೇ ಇದ್ದುದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ಮೇಲ್ಕಂಡ ಇಬ್ಬರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 

6. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.67/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:16-07-2021 ರಂದು ಮದ್ಯಾಹ್ನ 3-30 ಗಂಟೆಗೆ ಠಾಣೆಯ ಪಿ.ಎಸ್.ಐ ಶ್ರೀ ಎನ್ ರತ್ನಯ್ಯರವರು ಮಾಲು, ಆರೋಪಿ ಹಾಗೂ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:16-07-2021 ರಂದು ಬೆಳಿಗ್ಗೆ ನಾನು ಹಾಗೂ ಸಿಬ್ಬಂದಿಯವರಾದ ಸಿ ಹೆಚ್ ಸಿ -180 ಚೌಡಪ್ಪ, ಸಿಪಿಸಿ-119 ಗಿರೀಶ್ ಹಾಗೂ ಚಾಲಕ ಎ.ಹೆಚ್.ಸಿ-21 ಸತ್ಯಾನಾಯ್ಕರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-59 ರಲ್ಲಿ ವಂಟ್ರಿಪಲ್ಲಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ನಲ್ಲುಗುಟ್ಲಪಲ್ಲಿ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಕೆರೆಯ ಸಮೀಪ ಮೋರಿಯ ಬಳಿ ಚೌಡರೆಡ್ಡಿ ಬಿನ್ ಲೇಟ್ ಸುಬ್ಬಣ್ಣ ಎಂಬುವವರು ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ನನಗೆ ಖಚಿತ ಮಾಹಿತಿ ಬಂದಿದ್ದು, ದಾಳಿ ಮಾಡುವ ಸಲುವಾಗಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಮೇಲ್ಕಂಡ ಸಿಬ್ಬಂದಿ ಹಾಗೂ ಪಂಚಾಯ್ತಿದಾರರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮೇಲ್ಕಂಡ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ನಂತರ ನಾವುಗಳು ಅಲ್ಲಿಗೆ ಹೋಗಿ ಜೀಪನ್ನು ನಿಲ್ಲಿಸುತ್ತಿದ್ದಂತೆ ಜೀಪನ್ನು ಕಂಡು ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಆಸಾಮಿಗಳು ಅಲ್ಲಿಂದ ಓಡಿ ಹೋಗಿದ್ದು, ಸ್ಥಳದಲ್ಲಿದ್ದ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಿ ತಿಳಿಯಲಾಗಿ ಚೌಡರೆಡ್ಡಿ ಬಿನ್ ಸುಬ್ಬಣ್ಣ, 38ವರ್ಷ, ವಕ್ಕಲಿಗರು, ವ್ಯಾಪಾರ, ವೆಂಕಟೇಶಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 180 ಎಂ.ಎಲ್.ನ ಓಲ್ಡ್ ಟಾವೆರ್ನ್ ವಿಸ್ಕಿಯ 10 ಟೆಟ್ರಾ ಪ್ಯಾಕೇಟ್ಗಳು ಇದ್ದು, (1 ಲೀಟರ್ 800 ಎಂ.ಎಲ್, ಅದರ ಬೆಲೆ 867.5/-ರೂಗಳು), ಒಂದು ಲೀಟರ್ನ ಒಂದು ಖಾಲಿ ಪ್ಲಾಸ್ಟಿಕ್ ವಾಟರ್ ಬಾಟಲ್, 1 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಮತ್ತು 180 ಎಂ.ಎಲ್.ನ ಓಲ್ಡ್ ಟಾವೆರ್ನ್ ವಿಸ್ಕಿಯ ಒಂದು ಖಾಲಿ ಟೆಟ್ರಾ ಪ್ಯಾಕೆಟ್ ಇದ್ದು, ಆರೋಪಿಯನ್ನು ವಶಕ್ಕೆ ಪಡೆದು ಮೇಲ್ಕಂಡ ಮಾಲುಗಳನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ಬೆಳಿಗ್ಗೆ 14-00 ಗಂಟೆಯಿಂದ 14-45 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡು ಅಸಲು ಪಂಚನಾಮೆ, ಆರೋಪಿ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸೂಕ್ತ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

7. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.232/2021 ಕಲಂ. 379 ಐ.ಪಿ.ಸಿ:-

  ದಿನಾಂಕ: 16/07/2021 ರಂದು ಸಂಜೆ 4-30 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀ ಮಂಜುನಾಥ.ಜಿ ಬಿನ್ ಗೋವಿಂದಪ್ಪ, ವಿಜಯಪುರ, ದೇವನಹಳ್ಳಿ ತಾಲ್ಲೂಕು ರವರು ಠಾಣೆಯಲ್ಲಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತಾನು ಶಿಡ್ಲಘಟ್ಟ ತಾಲ್ಲೂಕು ದೇವೇನಹಳ್ಳಿ ಗ್ರಾಮದ ಸರ್ವೆ ನಂ 20/3 (ಹಳೇ ಸರ್ವೆ ನಂ 20) ರಲ್ಲಿನ ಜಮೀನಿನ ಪೈಕಿ 1 ಎಕರೆ 38 ಗುಂಟೆ ಜಮೀನನ್ನು ದೇವೇನಹಳ್ಳಿ ಗ್ರಾಮದ ವಾಸಿ ನಾರಾಯಣಮ್ಮ ಕೋಂ ಲೇಟ್ ಸಿ.ರಾಮಯ್ಯ ಹಾಗೂ ಸರಸ್ವತಮ್ಮ ಕೋಂ ಲೇಟ್ ಡಿ.ಆರ್ ನಾರಾಯಣಸ್ವಾಮಿ ರವರಿಂದ 16/03/2021 ರಲ್ಲಿ ಭೋಗ್ಯಕ್ಕೆ ಪಡೆದು ಸದರಿ ಜಮೀನಿನಲ್ಲಿ ಆರ್.ಎಮ್.ಸಿ ಪ್ಲಾಂಟ್ ಮತ್ತು ಸಿಮೆಂಟ್ ಇಟ್ಟಿಗೆ ಫ್ಯಾಕ್ಟರಿಯನ್ನು ಸ್ಥಾಪನೆ ಮಾಡಿಕೊಂಡಿರುತ್ತೇನೆ. ಈ ಫ್ಯಾಕ್ಟರಿಯ ಸುತ್ತಲೂ ಸಿಮೆಂಟ್ ಇಟ್ಟಿಗೆಗಳ ಕಾಂಪೌಂಡ್ ಇರುತ್ತದೆ. ಸದರಿ ಭೋಗ್ಯದ ಅವಧಿಯು ದಿನಾಂಕ: 31/08/2021 ಕ್ಕೆ ಮುಕ್ತಾಯವಾಗಲಿದ್ದು, ಸದರಿ ಫ್ಯಾಕ್ಟರಿಯಲ್ಲಿನ ವಸ್ತುಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುತ್ತಿರುತ್ತೇನೆ. ಸದರಿ ಫ್ಯಾಕ್ಟರಿ ಬಳಿ ಏನು ಕೆಲಸ ಮಾಡುತ್ತಿರುವುದಿಲ್ಲ    ಹೀಗಿರುವಾಗ ದಿನಾಂಕ: 14/07/2021 ರಂದು ಸಂಜೆ ಸುಮಾರು 7-00 ಗಂಟೆಯವರೆಗೆ ತಾನು ಫ್ಯಾಕ್ಟರಿಯ ಬಳಿ ಇದ್ದು, ನಂತರ ನಾನು ಮನೆಗೆ ಹೋಗಿ, ಈ ದಿನ ದಿನಾಂಕ: 16/07/2021 ರಂದು ಬೆಳಿಗ್ಗೆ ಸುಮಾರು 7-00 ಗಂಟೆಯಲ್ಲಿ ತಾನು ಫ್ಯಾಕ್ಟರಿಯ ಬಳಿ ಹೋಗಿ ನೋಡಲಾಗಿ, ತಮ್ಮ ಫ್ಯಾಕ್ಟರಿಯಲ್ಲಿದ್ದ ಸಿಮೆಂಟ್ ಬ್ಲೋವರ್ ಮತ್ತು ಅಲ್ಲಿದ್ದ 3 ಸಿ.ಸಿ ಕ್ಯಾಮೆರಾ, ಡಿ.ವಿ.ಆರ್ ಮತ್ತು ಒಂದು ಪ್ರಿಂಟರ್ ಕಳುವಾಗಿರುವುದು ಕಂಡುಬಂದಿರುತ್ತದೆ. ಮೇಲ್ಕಂಡ ಕಳುವಾಗಿರುವ ಸಿಮೆಂಟ್ ಬ್ಲೋವರ್ ಸುಮಾರು 60,000-00 ರೂ ಹಾಗೂ ಸಿ.ಸಿ ಕ್ಯಾಮರಾ 2000-00 ರೂ, ಡಿವಿಆರ್ 4000 ರೂ ಮತ್ತು ಪ್ರಿಂಟರ್ 4000 ರೂ ಬೆಲೆ ಬಾಳುವುದ್ದಾಗಿರುತ್ತದೆ. ಆದ ಕಾರಣ ಮೇಲ್ಕಂಡ ತಮ್ಮ ಫ್ಯಾಕ್ಟರಿಯಲ್ಲಿ ಕಳುವಾಗಿರುವ ಮಾಲನ್ನು ಮತ್ತು ಅದನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿರುವ ದೂರು.

 

8. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.233/2021 ಕಲಂ. 143,147,427,448,504,506,149 ಐ.ಪಿ.ಸಿ:-

  ದಿನಾಂಕ: 16-07-2021 ರಂದು ಸಂಜೆ 6.30 ಗಂಟೆಯಲ್ಲಿ ಫಿರ್ಯಾದಿದಾರರಾದ ಶ್ರೀ ರಾಜಣ್ಣ @ ರಾಜು ಬಿನ್ ಲೇಟ್ ಕೃಷ್ಣಪ್ಪ, 43 ವರ್ಷ, ದೇವಾಂಗ ಜನಾಂಗ, ಮಗ್ಗದ ಕೆಲಸ, ವಾಸ: ಮೇಲೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಶ್ರೀ ಸಂದೀಪ್ ಬಿನ್ ರಾಜಣ್ಣ ರವರ ಮುಖಾಂತರ ಸಲ್ಲಿಸಿಕೊಂಡಿದ್ದ ದೂರಿನ ಸಾರಾಂಶವೇನೆಂದರೆ ತಾನು ಈಗ್ಗೆ ಸುಮಾರು 6 ತಿಂಗಳುಗಳ ಹಿಂದೆ ಮೇಲೂರು ಗ್ರಾಮಕ್ಕೆ ಬಂದು ಇಲ್ಲಿಯೇ ಮಗ್ಗದ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ತನ್ನ ತಂಗಿಯಾದ ಲಲಿತ @ ಲತಾ ರವರು ಮೇಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿರುವ ನಾರಾಯಣಸ್ವಾಮಿ ರವರ ಮನೆಯನ್ನು ಪಡೆದುಕೊಂಡು ವಾಸವಾಗಿದ್ದರು. ಹೀಗಿದ್ದು ತನ್ನ ತಂಗಿಗೆ ಮತ್ತು ನಾರಾಯಣಸ್ವಾಮಿ ರವರ ಕುಟುಂಬದವರಿಗೆ ಸದರಿ ಮನೆಯ ವಿಚಾರದಲ್ಲಿ ವಿವಾದಗಳಿದ್ದು ಈ ಹಿನ್ನೆಲೆಯಲ್ಲಿ ತನ್ನ ತಂಗಿ ಲಲಿತ ರವರಿಗೆ ಮತ್ತು ನಾರಾಯಣಸ್ವಾಮಿ ರವರ ಕುಟುಂಬದವರಿಗೆ ಗಲಾಟೆಗಳಾಗಿದ್ದು ಕೇಸುಗಳು ದಾಖಲಾಗಿದ್ದು, ಸದರಿ ಕೇಸುಗಳಲ್ಲಿ ತನ್ನ ತಂಗಿ ಲಲಿತ ರವರನ್ನು ಶಿಡ್ಲಘಟ್ಟ ಪೊಲೀಸರು ಅರೆಸ್ಟ್ ಮಾಡಿದ್ದು, ಹಾಲಿ ತನ್ನ ತಂಗಿ ಲಲಿತ ರವರು ಚಿಂತಾಮಣಿ ಸಬ್ ಜೈಲ್ ನಲ್ಲಿ ಇರುತ್ತಾಳೆ. ಹೀಗಿದ್ದು ದಿನಾಂಕ: 12-07-2021 ರಂದು ಬೆಳಿಗ್ಗೆ ಸುಮಾರು 9.00 ಗಂಟೆಯಲ್ಲಿ ತಾನು ಚಿಂತಾಮಣಿಗೆ ತನ್ನ ತಂಗಿಯನ್ನು ನೋಡಿಕೊಂಡು ಬರುವ ಸಲುವಾಗಿ ಹೋಗಿದ್ದು, ಪುನಃ ಸಂಜೆ 5.00 ಗಂಟೆಗೆ ತಾನು ವಾಪಸ್ಸು ಮೇಲೂರು ಗ್ರಾಮಕ್ಕೆ ಬಂದು ನೋಡುವಷ್ಟರಲ್ಲಿ ತನ್ನ ತಂಗಿ ಲಲಿತ ರವರು ವಾಸವಾಗಿದ್ದ ಮನೆಯನ್ನು ನಾರಾಯಣಸ್ವಾಮಿ, ಪ್ರತಾಪ್ ಮತ್ತು ನಾರಾಯಣಸ್ವಾಮಿ ರವರ ಅಳಿಯನಾದ ದೇವರಾಜ ಹಾಗೂ ಇತರರು ತನ್ನ ತಂಗಿ ವಾಸವಾಗಿದ್ದ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ಸದರಿ ಮನೆಯನ್ನು ಯಾವುದೋ ವಾಹನದಲ್ಲಿ ತಳ್ಳಿಹಾಕಿದ್ದು, ಈ ವಿಚಾರವನ್ನು ತಾನು ನಾರಾಯಣಸ್ವಾಮಿ ರವರನ್ನು ಕೇಳಿದ್ದಕ್ಕೆ ನಾರಾಯಣಸ್ವಾಮಿ, ಆತನ ಮಕ್ಕಳಾದ ಸೌಮ್ಯ ಕೋಂ ದೇವರಾಜ, ಆತನ ಅಳಿಯನಾದ ದೇವರಾಜ, ಆತನ ಮಗಳಾದ ಪುಷ್ಪ ಕೋಂ ಲೇಟ್ ಚಂದ್ರಕುಮಾರ್ ಹಾಗೂ ಮೇಲೂರು ಗ್ರಾಮದ ಶೋಭಮ್ಮ ರವರು ಅಕ್ರಮ ಗುಂಪುಟ್ಟಿಕೊಂಡು ತನ್ನ ಮೇಲೆ ಗಲಾಟೆ ಮಾಡಿ ತಮ್ಮ ಜಾಗದಲ್ಲಿದ್ದ ನಮ್ಮ ಮನೆಯನ್ನು ನಾವು ಏನು ಬೇಕಾದರೂ ಮಾಡಿಕೊಳ್ಳುತ್ತೇವೆ ಕೇಳುವುದಕ್ಕೆ ನೀನು ಯಾರೋ ಲೋಪರ್ ನನ್ನ ಮಗನೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಇನ್ನು ಮುಂದೆ ಏನಾದರೂ ನಮ್ಮ ವಿಚಾರಕ್ಕೆ ಬಂದರೆ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿದ್ದು, ತನ್ನ ತಂಗಿ ವಾಸವಾಗಿದ್ದ ಮನೆಯನ್ನು ತಳ್ಳಿ ಹಾಕಿದ್ದು ಸದರಿ ವಿಚಾರವನ್ನು ಕೇಳಿದ್ದಕ್ಕೆ ತನ್ನ ಮೇಲೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿದ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ. 233/2021 ಕಲಂ 143, 147, 447, 448, 504, 506 ರ/ಜೊ 149 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.234/2021 ಕಲಂ. 379 ಐ.ಪಿ.ಸಿ:-

  ದಿನಾಂಕ:17.07.2021 ರಂದು ಬೆಳಿಗ್ಗೆ 11.30 ಗಂಟೆಗೆ ಪಿರ್ಯಾದಿದಾರರಾದ ನವೀನ್ ಬಿನ್ ರಮೇಶ, 28 ವರ್ಷ, ವಕ್ಕಲಿಗರು, ಸೆಕ್ಯೂರಿಟಿ ಸೂಪರ್ ವೈಸರ್ ಕೆಲಸ, ದಿನ್ನೂರು ಗ್ರಾಮ ದೇವನಹಳ್ಳಿ ತಾಲ್ಲೂಕು  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತಾನು ಸುಮಾರು 4 ವರ್ಷಗಳಿಂದ ಇಂಡಸ್ ಟವರ್ ಕಂಪನಿಯಲ್ಲಿ ಸೆಕ್ಯೂರಿಟಿ ಸೂಪರ್ ವೈಸರ್ ಆಗಿ ಕೆಲಸ ಮಾಡುತಿದ್ದು ತಮ್ಮ ಕಂಪನಿಯ ಕೇಂದ್ರ ಕಛೇರಿ ಬೆಂಗಳೂರಿನ ಕೋರಮಂಗಲದಲ್ಲಿದ್ದು ತನಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪಿಯಲ್ಲಿರುವ ಟವರ್ ಗಳ ಉಸ್ತುವಾರಿಯನ್ನು ನೀಡಿದ್ದು ಶಿಡ್ಲಟ್ಟ ತಾಲ್ಲುಕು ಪಲ್ಲಿಚೆರ್ಲು ಗ್ರಾಮದ ವಾಸಿ ಪಿ ಎಂ ಈರಪ್ಪ ಬಿನ್ ಲೇಟ್ ಮುನಿವೆಂಕಟಪ್ಪ ರವರ ಬಾಬತ್ತು ಪಲ್ಲಿಚೆರ್ಲು ಗ್ರಾಮದ ಸರ್ವೆ ನಂ 17 ರಲ್ಲಿನ 30*40 ಅಡಿ ನಿವೇಶನವನ್ನು ಬಾಡಿಗೆಗೆ ಪಡೆದುಕೊಂಡು ಸದರಿ ಜಾಗದಲ್ಲಿ ಇಂಡಸ್ ಟವರ್ ಅನ್ನು ನಿರ್ಮಿಸಿ ಇದರ ಉಸ್ತುವಾರಿಯನ್ನು ನಾನು ಮತ್ತು ಟವರ್ ಟೆಕ್ನಿಷೀಯನ್ ಗಳು ನೋಡಿಕೊಳ್ಳುತ್ತಿರುತ್ತೇವೆ. ನಾನು ಶಿಡ್ಲಘಟ್ಟ ತಾಲ್ಲೂಕು ಪಲ್ಲಿಚೆರ್ಲು ಗ್ರಾಮದಲ್ಲಿರುವ ಟವರ್ ಬಳಿ ದಿನಾಂಕ:15.07.2021 ರಂದು ಟವರ್ ಬಳಿ ಬಂದು ಉಸ್ತುವಾರಿಯನ್ನು ನೋಡಿಕೊಂಡು ಸಂಜೆ 6.00 ಗಂಟೆಗೆ ನಾನು ಮನೆಗೆ ಹೊರಟು ಹೋಗಿರುತ್ತೇನೆ. ನಂತರ ದಿನಾಂಕ:16.07.2021 ರಂದು ಬೆಳಿಗ್ಗೆ 6.30 ಗಂಟೆ ಸಮಯದಲ್ಲಿ ಪಲ್ಲಿಚೆರ್ಲು ಗ್ರಾಮದ ಬಳಿ ಇರುವ ಟವರ್ ಉಸ್ತುವಾರಿ ಟೆಕ್ನಿಷೀಯನ್ ಮಧು ರವರ ನನಗೆ ಪೋನ್ ಮಾಡಿ ರಾತ್ರಿ 3.00 ಗಂಟೆ ಸಮಯದಲ್ಲಿ ಟವರ್ ಆಫ್ ಆಗಿದ್ದು ಅದರ ಬಗ್ಗೆ ಅಲರಮ್ ಬಂದಿದ್ದು ನಾನು ಟವರ್ ಬಳಿ ಹೋಗಿ ನೋಡಲಾಗಿ ಇಂಡಸ್ ಟವರ್ ನಲ್ಲಿ ಅಳವಡಿಸಿದ್ದ ಟವರ್ ಐಡಿ 1281373 RRH ಪವರ್ ಕೇಬಲ್ ಅನ್ನು ಯಾರೋ ಕಳ್ಳರು ರಾತ್ರಿ ಕಳುವು ಮಾಡಿಕೊಂಡು ಹೋಗಿರುವುದಾಗಿ ನನಗೆ ತಿಳಿಸಿದ್ದು ನಂತರ ನಾನು ಸದರಿ ಟವರ್ ಸ್ಥಳಕ್ಕೆ ಹೋಗಿ ನೋಡಲಾಗಿ ದಿನಾಂಕ:15.07.2021 ರಂದು ರಾತ್ರಿ ಯಾರೋ ಕಳ್ಳರು ಟವರ್ ನಲ್ಲಿ ಅಳವಡಿಸಿದ್ದ  ಸುಮಾರು 45000 ರೂ ಮೌಲ್ಯದ ಕೇಬಲ್ ಅನ್ನು ಕಳ್ಳತನವಾಗಿರುವುದು ನಿಜವಾಗಿದ್ದು ಸದರಿ ವಿಷಯವನ್ನು ನಾನು ನಮ್ಮ ಕಂಪನಿಯ ಮೇಲಾಧಿಕಾರಿಗಳಿಗೆ ತಿಳಿಸಿ ನಾನು ಈ ದಿನ ತಡವಾಗಿ ಬಂದು ದೂರು ನೀಡುತಿದ್ದು ಕಳುವಾಗಿರುವ ಪವರ್ ಕೇಬಲ್ ಮತ್ತು ಕಳವು ಮಾಡಿರುವ ಅಸಾಮಿಗಳನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮಕೈಗೊಳ್ಳಬೇಕಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

10. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.82/2021 ಕಲಂ. 379 ಐ.ಪಿ.ಸಿ:-

  ದಿನಾಂಕ:17-07-2021 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿ ರಾಘವೇಂದ್ರ ಆರ್. ಎಸ್. ಬಿನ್ ರಾಮಕೃಷ್ಣಪ್ಪ, 30 ವರ್ಷ, ವಿಶ್ವನಾಥಪುರ, ದೇವನಹಳ್ಳಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,ನಾನು ಶಿಡ್ಲಘಟಡ್ಟ ಎಸ್.ಬಿ.ಐ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿದಿನ ತಮ್ಮ ಊರಿನಿಂದ ತನ್ನ ದ್ವಿಚಕ್ರ ವಾಹನ ಸಂಖ್ಯೆ: KA 09 HA 7122 ಹಿರೋ ಹೊಂಡಾ ಪ್ಯಾಷನ್ ಪ್ರೋ ವಾಹನದಲ್ಲಿ ಬಂದು ಹೋಗುತ್ತಿದ್ದು, ದಿನಾಂಕ: 24/06/2021 ರಂದು ಬೆಳಿಗ್ಗೆ ಸುಮಾರು 10-00 ಗಂಟೆ ಸಮಯದಲ್ಲಿ ಕೆಲಸ ಕ್ಕೆ ಬಂದು ತನ್ನ ದ್ವಿ ಚಕ್ರ ವಾಹನವನ್ನು ಬ್ಯಾಂಕಿನ ಮುಂದೆ ನಿಲ್ಲಿಸಿದ್ದು, ಸಂಜೆ 5-00 ಗಂಟೆಗೆ ಕೆಲಸ ಮುಗಿಸಿಕೊಂಡು ಹೊರಗೆ ಬಂದು ನೋಡಲಾಗಿ ತನ್ನ ದ್ಚಿ ಚಕ್ರ ವಾಹನ ಬೆಲೆ ಸುಮಾರು 20,000/- ಬೆಲೆಯ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂದಿನಿಂದ ತನ್ನ ದ್ವಿ ಚಕ್ರವಾಹನವನ್ನು ಎಲ್ಲಾ  ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ, ಅದ್ದರಿಂದ ಪತ್ತೆ ಮಾಡಿಕೊಡಬೇಕಾಗಿ ಕೋರಿ ಈ ದಿನ ತಡವಾಗಿ ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

Last Updated: 17-07-2021 06:51 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080