ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.159/2021 ಕಲಂ. 15(A),32(3) ಕೆ.ಇ ಆಕ್ಟ್ :-

          ದಿನಾಂಕ;16-06-2021 ರಂದು ಮದ್ಯಾಹ್ನ 3-15 ಗಂಟೆಗೆ ಶ್ರೀನಾರಾಯಣಸ್ವಾಮಿ ಎಎಸ್ಐ ರವರು ಆರೋಪಿತಳು, ಅಸಲು ಪಂಚನಾಮೆ, ಮತ್ತು ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶವೆನೇಂದರೆ  ದಿನಾಂಕ;16-06-2021 ರಂದು ಮದ್ಯಾಹ್ನ 1-00 ಗಂಟೆ ಸಮಯದಲ್ಲಿ ಕೋವಿಡ್-19 ಇರುವುದರಿಂದ ಠಾಣಾಧಿಕಾರಿಗಳು ನನಗೆ ಬಾಗೇಪಲ್ಲಿ ಪುರದಲ್ಲಿ ಗಸ್ತಿಗೆ ನೇಮಿಸಿದ್ದು, ಅದರಂತೆ ನಾನು ಬಾಗೇಪಲ್ಲಿ ಪುರದಲ್ಲಿ ಗಸ್ತಿನಲ್ಲಿದ್ದಾಗ ಯಾರೋ ಅಸಾಮಿಯು ಬಾಗೇಪಲ್ಲಿ ತಾಲ್ಲೂಕು ಮಿಟ್ಟೇಮರಿ ಹೋಬಳಿ, ದೊಂಬರಹಟ್ಟಿ ಗ್ರಾಮದ ಬಳಿ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಮ.ಹೆಚ್.ಸಿ-238 ಶ್ರೀಮತಿ ಪದ್ಮ ರವರೊಂದಿಗೆ ದ್ವಿಚಕ್ರ ವಾಹನದಲ್ಲಿ ಹೊರಟು, ಕಾನಗಮಾಕಲಪಲ್ಲಿ ಕ್ರಾಸ್ ಬಳಿ ಇದ್ದ ಪಂಚರನ್ನು ಕರೆದು ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಮದ್ಯಾಹ್ನ 1-30 ಗಂಟೆಗೆ ದೊಂಬರಹಟ್ಟಿ ಗ್ರಾಮದ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಚಿಲ್ಲರೇ ಅಂಗಡಿ ಮುಂಭಾಗದಲ್ಲಿದ್ದ ಅಸಾಮಿಯು ಓಡಿ ಹೋಗಲು ಪ್ರಯತ್ನಸುತ್ತಿದ್ದವಳನ್ನು ಮಹಿಳಾ ಪೊಲೀಸ್ ಸಿಬ್ಬಂಧಿಯಾದ ಮಹೆಚ್ ಸಿ-238 ರವರು ಹಿಡಿದುಕೊಂಡು ಪಂಚರ ಸಮಕ್ಷಮ ಹೆಸರು ವಿಳಾಸ ಕೇಳಲಾಗಿ ಲಕ್ಷ್ಮೀದೇವಮ್ಮ ಕೋಂ ಗಂಗರಾಜು, 36 ವರ್ಷ, ದೊಂಬರ ಜನಾಂಗ, ಚಿಲ್ಲರೇ ಅಂಗಡಿ ವ್ಯಾಪಾರ, ವಾಸ: ದೊಂಬರಹಟ್ಟಿ ಗ್ರಾಮ, ಕಾನಗಮಾಕಲಪಲ್ಲಿ ಪಂಚಾಯ್ತಿ,  ಮಿಟ್ಟೇಮರಿ ಹೋಬಳಿ, ಬಾಗೇಫಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 1) 90 ML ನ HAYWARDS CHEERS WHISKY  ಯ 12 ಮದ್ಯದ ಟೆಟ್ರಾ ಪಾಕೇಟ್ ಗಳು  ಗಳಿದ್ದು,  2) 90 ML ನ HAYWARDS CHEERS WHISKY ಯ 02 ಟೆಟ್ರಾ ಖಾಲಿ ಪಾಕೇಟ್ ಗಳು, 3) ಮದ್ಯ ಕುಡಿದಿರುವ ಖಾಲಿ 04 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ.  ಇವುಗಳು  ಒಟ್ಟು 1 ಲೀಟರ್ 80 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ – 421/-ರೂ ಗಳಾಗಿರುತ್ತೆ. ಸದರಿ ಆಸಾಮಿಯನ್ನು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ನಿಮ್ಮ ಬಳಿ ಪರವಾನಗಿ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಗೆ ಇಲ್ಲವೆಂದು ತಿಳಿಸಿದ್ದು, ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ  ಮೂಲಕ ಅಮಾನತ್ತು ಪಡಿಸಿಕೊಂಡು ಅಸಲು ದಾಳಿ ಪಂಚನಾಮೆ, ಮಾಲು ಮತ್ತು ಆರೋಪಿಯೊಂದಿಗೆ ಮದ್ಯಾಹ್ನ 3-15 ಗಂಟೆ ಠಾಣೆಗೆ ಹಾಜರಾಗಿ,  ನಿಮ್ಮ ವಶಕ್ಕೆ ನೀಡುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ್ದನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.160/2021 ಕಲಂ. 78 ಕೆ.ಪಿ ಆಕ್ಟ್ & 188 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ದಿನಾಂಕ: 16/06/2021 ರಂದು ನ್ಯಾಯಾಲಯದ ಪಿ.ಸಿ 235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದರ ಸಾರಾಂಶವೇನೆಂದರೆ   ದಿನಾಂಕ:12.06.2021 ರಂದು ರಾತ್ರಿ 9.15 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ಉಪ-ವಿಭಾಗ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ರಮೇಶ್ ಸಿಹೆಚ್ ಸಿ 205 ರವರು ಠಾಣೆಗೆ ಹಾಜರಾಗಿ 4 ಜನ ಆಸಾಮಿಗಳು , ಅಸಲು ದಾಳಿ ಪಂಚನಾಮೆ ಮಾಲುಗಳನ್ನು ಹಾಜರುಪಡಿಸಿ ನೀಡಿದ ವರಧಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ:12.06.2021 ರಂದು ಚಿಕ್ಕಬಳ್ಳಾಫುರ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಹೆಚ್ ಸಿ 205 ಆದ ನಾನು  ಮತ್ತು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಹೆಚ್ ಸಿ 59 ಶ್ರೀನಿವಾಸ ರವರುಗಳಿಗೆ ಮಾನ್ಯ ಡಿವೈಎಸ್.ಪಿ ಸಾಹೇಬರು ಬಾಗೇಪಲ್ಲಿ ತಾಲ್ಲೂಕಿನ ಕಡೆ ಅಕ್ರಮ ಚಟುವಟಿಕೆಳ ಕಡೆ ಮತ್ತು ಕೋವಿಡ್ ನಿಯಮಗಳ ಅನುಷ್ಠಾನದ ಬಗ್ಗೆ ಗಸ್ತಿಗಾಗಿ ನೇಮಿಸಿದ್ದು, ಅದರಂತೆ ನಾವುಗಳು ಬಾಗೇಪಲ್ಲಿ ನಗರದಲ್ಲಿ ಗಸ್ತು ಮಾಡಿಕೊಂಡು ಸಂಜೆ 5.30 ಗಂಟೆಗೆ ಎಂ.ಜಿ. ರಸ್ತೆಯ ಆಲದ ಮರದ ಕೆಳಗೆ ಗಸ್ತು ಮಾಡುತ್ತಿದ್ದಾಗ ಬಂದ ಮಾಹಿತಿ ಮೇರೆಗೆ ಅಲ್ಲಿಯೇ ಇದ್ದ ಪಂಚಾಯ್ತಿದಾರರನ್ನು ಬರಮಾಡಿಕೊಂಡು ನಗರದ ನೇತಾಜಿ ವೃತ್ತದ ಬಳಿ ಕೋವಿಡ್ -19 ಹಿನ್ನೆಲೆಯ ಸರ್ಕಾರದ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಿ ಸಾಮಾಜಿಕ ಆಂತರ ಕಾಯ್ದುಕೊಳ್ಳದೇ ಗುಂಪಾಗಿ ಸೇರಿಕೊಂಡು ಅಕ್ರಮ ಮಟ್ಕಾ ಜೂಜಾಟ ಆಡುತ್ತಿದ್ದ ನಾಲ್ಕು ಜನ  ಆಸಾಮಿಗಳನ್ನು (ಆರೋಪಿತರ ವಿವರಗಳನ್ನು ಅಸಲು ಮಹಜರ್ ನಲ್ಲಿ ನಮೂದಿಸಿರುತ್ತೆ) ವಶಕ್ಕೆ ಪಡೆದು ಸದರಿ ಆಸಾಮಿಗಳಿಂದ ಮಟ್ಕಾ ಜೂಜಾಟಕ್ಕೆ ಬಳಸಿದ್ದ 1)  6865/ ರೂ ನಗದು ಹಣ 2) ಒಂದು ಮಟ್ಕಾ ಚೀಟಿ 3) ಮೂರು ಸಣ್ಣ ಮಟ್ಕಾ ಚೀಟಿಗಳು, 4) ಒಂದು ಪೆನ್ನನ್ನು ಕೇಸಿನ ಮುಂದಿನ ಕ್ರಮಕ್ಕಾಗಿ ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ.  ಸದರಿ ಆರೋಪಿತರನ್ನು ಮತ್ತು ಮಟ್ಕಾ ಚೀಟಿಗಳನ್ನು (ಪಟ್ಟಿಯನ್ನು) ಆರೋಪಿ 1) ಅತಾವುಲ್ಲಾ ರವರಿಂದ ಕಮೀಷನ್ ಹಣ ಪಡೆಯುತ್ತಿದ್ದ ಬಾಗೇಪಲ್ಲಿ ನೇತಾಜಿ ವೃತ್ತದ ವಾಸಿ ರಮೇಶ @ ಬೇಲ್ದಾರ್ ರಮೇಶ ರವರಿಗೆ ಕೊಡುತ್ತಿರುವುದಾಗಿ ತಿಳಿಸಿದ್ದು, ಸದರಿ ಒಟ್ಟು ಐದು ಜನರ ಮೇಲೆ ಕಾನೂನು ಕ್ರಮ ಜರುಗಿಸಲು ತಮ್ಮಲ್ಲಿ ಕೋರಿದೆ. ಹಾಗೂ ಮೇಲ್ಕಂಡ ಮಾಲು ಮತ್ತು ನಾಲ್ಕು ಜನ ಆರೋಪಿತರನ್ನು ಮತ್ತು ಮಾಲುಗಳನ್ನು ಮುಂದಿನ ಕ್ರಮಕ್ಕಾಗಿ ನಿಮ್ಮ ವಶಕ್ಕೆ ನೀಡಿರುತ್ತೆ. ಇದರೊಂದಿಗೆ ಅಸಲು ಮಹಜರ್ ಲಗತ್ತಿರುತ್ತೆ ಎಂದು ನೀಡಿದ ವರಧಿಯಾಗಿರುತ್ತೆ, ಎಂಬುದಾಗಿ ನೀಡಿದ ದೂರನ್ನು ಪಡೆದು ಠಾಣಾ ಎನ್ ಸಿ ಆರ್ ನಂಬರ್ 158-2021 ರಂತೆ ದಾಖಲಿಸಿರುತ್ತೆ.  ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 16-06-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.123/2021 ಕಲಂ. 279,337,304(A) ಐ.ಪಿ.ಸಿ :-

          ಈ ದಿನ ಫಿರ್ಯಾದುದಾರರಾದ ಬಿ.ಕಾಶಪ್ಪ ಬಿನ್ ಬಿ.ನಾರಾಯಣ 39 ವರ್ಷ ಮಾದಿಗ ಜನಾಂಗ ಕೂಲಿ ಕೆಲಸ ವಾಸ ವಸಂತಪುರಂ. ಧರ್ಮವರಂ ಮಂಡಲ ಅನಂತಪುರ ಜಿಲ್ಲೆ ಆಂದ್ರಪ್ರದೇಶ ರಾಜ್ಯ. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ ವೇನೆಂದರೆ:  ತಾನು ಮತ್ತು ತನ್ನ ಹೆಂಡತಿಯಾದ ಬಿ.ಸರೋಜ ನನ್ನ ಮಕ್ಕಳಾದ ಕುಮಾರಿ ಚೈತ್ರ, ಉದಯ್ ಕಿರಣ್, ಶ್ರೀಕಾಂತ, ರವರೊಂದಿಗೆ ಕನರ್ಾಟಕ ರಾಜ್ಯದ ಬೆಂಗಳೂರಿನ ಇಂದಿರಾ ನಗರದ ಕೊಳಗೇರಿಯಲ್ಲಿ ವಾಸವಿದ್ದು ಬಿ.ಬಿ.ಎಂ.ಪಿ.ಯಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವುದಾಗಿ   ಹೀಗಿರುವಾಗ ದಿನಾಂಕ:16-06-2021 ರಂದು ತನ್ನ ಹೆಂಡತಿ ಬಿ.ಸರೋಜ ಮತ್ತು ತನ್ನ ಮಗಳು ಕುಮಾರಿ ಚೈತ್ರ ರವರನ್ನು  ತಮ್ಮ ಸ್ವಂತಃ ಸ್ಥಳಕ್ಕೆ ಕಳುಹಿಸಲು ನಾನು ಬೆಂಗಳೂರಿನ ಹೆಬ್ಬಾಳ ಬಳಿ ಕಾಯುತ್ತಿದ್ದಾಗ ರಾತ್ರಿ ಸುಮಾರು 10-45 ಗಂಟೆಯಲ್ಲಿ ತಮಗೆ ಪರಿಚಯಸ್ಥರಾದ ಓಬಿರೆಡ್ಡಿ ಪ್ಯಾದಿಂಡಿ ಗ್ರಾಮ ಚಿನ್ನಕೊತ್ತಪಲ್ಲಿ ಮಂಡಲ ಅನಂತಪುರ ಜಿಲ್ಲೆ ಆಂದ್ರಪ್ರದೇಶ ರಾಜ್ಯ ರವರು ಎ.ಪಿ-39 ಟಿ.ಬಿ-3242 ನೊಂದಣಿ ಸಂಖ್ಯೆಯ ಈಚರ್ ಕ್ಯಾಂಟರ್ ವಾಹನವನ್ನು ಚಾಲನೆ ಮಾಡಿಕೊಂಡು ಬಂದು ತಾನು ತಮ್ಮ ಊರಿಗೆ ಹೋಗುವುದಾಗಿ ತಿಳಿಸಿದ್ದು ನಂತರ ತಾನು ತನ್ನ ಹೆಂಡತಿ ಸರೋಜ ಮತ್ತು ತನ್ನ ಮಗಳು ಚೈತ್ರ ರವರನ್ನು ಮೇಲ್ಕಂಡ ಕ್ಯಾಂಟರ್ ಹತ್ತಿಸಿ ತಾನು ಮನೆಗೆ ಹೊರಟು ಹೋದೆನು ನಂತರ ಈ ದಿನ ದಿನಾಂಕ:17-06-2021 ರಂದು ಬೆಳಗಿನ ಜಾವ ಸುಮಾರು 2-30 ಗಂಟೆಯಲ್ಲಿ ತನ್ನ ಮಗಳು ಚೈತ್ರ ನನಗೆ ಪೋನ್ ಮಾಡಿ ತಿಳಿಸಿದ್ದನೆಂದರೆ ತಾವು ಎ.ಪಿ-39 ಟಿ.ಬಿ-3242 ನೊಂದಣಿ ಸಂಖ್ಯೆಯ ಈಚರ್ ಕ್ಯಾಂಟರ್ ವಾಹನದಲ್ಲಿ ತಮ್ಮ ಊರಿಗೆ ಬೆಂಗಳೂರಿನಿಂದ  ಹೈದರಬಾದ್ ಕಡೆ ಹೋಗುವ ಎನ್.ಹೆಚ್-44 ರಸ್ತೆಯಲ್ಲಿ ಹೋಗುತ್ತಿದ್ದಾಗ ಈ ದಿನ ದಿನಾಂಕ:17-06-2021 ರಂದು ಬೆಳಗಿನ ಜಾವ ಸುಮಾರು 12-30 ಗಂಟೆಯಲ್ಲಿ ತನ್ನ ತಾಯಿ ಸರೋಜ ಮೂತ್ರ ವಿಸರ್ಜನೆ ಮಾಡುವುದಾಗಿ ಹೇಳಿದ್ದರಿಂದ ಚಾಲಕ ಓಬಿರೆಡ್ಡಿ ರವರು  ಮೇಲ್ಕಂಡ ಕ್ಯಾಂಟರ್ ನ್ನು ಗುಡಿಬಂಡೆ ತಾಲ್ಲೂಕು ಯರ್ರಲೆಕ್ಕೇನಹಳ್ಳಿ ಕ್ರಾಸ್ ಮತ್ತು ಚೆಂಡೂರು ಕ್ರಾಸ್ ಮದ್ಯ ಬೆಂಗಳೂರು ಕಡೆಯಿಂದ ಹೈದರಬಾದ್ ಕಡೆ ಹೋಗುವ ಎನ್.ಹೆಚ್-44 ರಸ್ತೆಯಲ್ಲಿ ರಸ್ತೆಯ ಬದಿ ಎಡಗಡೆ ಪುಟಪಾತ್ ನಲ್ಲಿ ನಿಲ್ಲಿಸಿದ್ದು ತನ್ನ ತಾಯಿ ಸರೋಜ ಕ್ಯಾಂಟರ್ ನಿಂದ ಕೆಳಗೆ ಇಳಿದು ಕ್ಯಾಂಟರ್ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಅದೇ ಸಮಯಕ್ಕೆ ಅದೇ ರಸ್ತೆಯಲ್ಲಿ ಬೆಂಗಳೂರು ಕಡೆಯಿಂದ ಬಂದ ಟಿ.ಎನ್.-25 ಬಿ.ಎಂ-9475 ನೊಂದಣಿ ಸಂಖ್ಯೆಯ ಬಲ್ಕರ್ ವಾಹನವನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾವು ಇದ್ದ ಕ್ಯಾಂಟರ್ ಗೆ ಡಿಕ್ಕಿ ಹೊಡೆಯಿಸಿ ಅಪಘಾತ ಪಡಿಸಿದ ಪರಿಣಾಮ ನಾವಿದ್ದ ಕ್ಯಾಂಟರ್ ಜಖಂಗೊಂಡು ಕ್ಯಾಂಟರ್ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ  ತನ್ನ ತಾಯಿ ಸರೋಜ್ ರವರಿಗೆ ಕ್ಯಾಂಟರ್ ಜೋರಾಗಿ ತಗುಲಿದ್ದು  ಈ ಅಪಘಾತದಲ್ಲಿ ತನ್ನ ತಾಯಿ ಸರೋಜರವರಿಗೆ ಕಣ್ಣಿನ ಬಳಿ, ತಲೆಗೆ, ಮತ್ತು ಮೈ ಮೇಲೆ ಗಾಯಗಳಾಗಿ ಕಿವಿಗಳಲ್ಲಿ ರಕ್ತ ಬಂದು ಸ್ಥಳದಲ್ಲಿ ಮೃತಪಟ್ಟಿರವುದಾಗಿ ಈ ಅಪಘಾತದಲ್ಲಿ ಕ್ಯಾಂಟರ್ ಚಾಲಕ ಓಬಿರೆಡ್ಡಿ ರವರಿಗೆ ಕಾಲುಗಳಿಗೆ ರಕ್ತಗಾಯಗಳಾಗಿ ತನಗೆ ಮೂಗೇಟುಗಳಾಗಿರವುದಾಗಿ ಮತ್ತು ತನ್ನ ತಾಯಿ ಸರೋಜ ರವರ ಮೃತದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಸಾಗಿಸಿರವುದಾಗಿ ತಿಳಿಸಿದ್ದು ನಾನು ಕೂಡಲೇ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಬಂದು ನೋಡಲಾಗಿ ತನ್ನ ಹೆಂಡತಿ ಸರೋಜ ರವರ ಮೃತದೇಹವಿರುತ್ತೆ, ನಂತರ ತಾನು ಅಪಘಾತ ನಡೆದ ಸ್ಥಳಕ್ಕೆ ಹೋಗಿ ಸ್ಥಳವನ್ನು ನೋಡಿಕೊಂಡು ಬಂದು ದೂರನ್ನು ತಡವಾಗಿ ನೀಡಿರುವುದಾಗಿದೆ.

 

4. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.124/2021 ಕಲಂ. 279,304(A) ಐ.ಪಿ.ಸಿ :-

          ದಿ:17.06.2021 ರಂದು ಮದ್ಯಾಹ್ನ 11-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಕೃಷ್ಣಮ್ಮ ಕೋಂ ಆದಿನಾರಾಯಣಪ್ಪ, 65 ವರ್ಷ, ಪಾಳೀಗಾರ ಜನಾಂಗ, ಪಸುಪಲೋಡು ಗ್ರಾಮ, ಹಂಪಸಂದ್ರ ಪಂಚಾಯ್ತಿ, ಗುಡಿಬಂಡೆ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ,  ನನಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ ಇದ್ದು,  ಇವನ ಹೆಸರು ಶ್ರೀನಿವಾಸ ಬಿನ್ ಲೇಟ್ ಆದಿನಾರಾಯಣಪ್ಪ, 35 ವರ್ಷ, ರವರು ದಿ:16.06.2021 ರಂದು ತನ್ನ ಬಾಬತ್ತು ದ್ವಿಚಕ್ರ ವಾಹನ.ಕೆ.ಎ.40.ಯು 8514 ಸ್ಪ್ಲೆಂಡರ್ ನಲ್ಲಿ ಕೆಲಸದ ನಿಮಿತ್ತ ದಿ:16.06.2021 ರಂದು ಮದ್ಯಾಹ್ನ ಸುಮಾರು 2-30 ಗಂಟೆ ಸಮಯದಲ್ಲಿ ಮನೆ ಬಿಟ್ಟು ಗುಡಿಬಂಡೆಗೆ ಹೊಗುವ ಮಾರ್ಗ ಮದ್ಯೆ ಅಂದರೆ ಬೆಣ್ಣೆಪರ್ತಿ ಕ್ರಾಸ್ ಬಳಿ ಬರಲಾಗಿ ಆಕಸ್ಮಿಕವಾಗಿ  ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿದ್ದ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ನನ್ನ ಮಗನಿಗೆ ತಲೆಗೆ ತೀವ್ರ ಪೆಟ್ಟಾಗಿ ರಕ್ತ ಗಾಯವಾಗಿ, ಗುಡಿಬಂಡೆ ಆಸ್ಪತ್ರೆಗೆ ಸ್ಥಳೀಯವರು ಚಿಕಿತ್ಸೆಗಾಗಿ ಕರೆದುಕೊಂಡು ಬಂದಿದ್ದು, ನಮತರ ವೈದ್ಯರ ಆದೇಶದಂತೆ ಬೆಂಗಳೂರಿನಿ ನಿಮಾನ್ಸ್ ಆಸ್ಪತ್ರೆಗೆ 108 ವಾಹನದಲ್ಲಿ ಹೋಗಿ ದಾಖಲಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೆಡಿಕೇರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮಾಡಿಸಿದ್ದು ಚಿಕಿತ್ಸೆ ಪಲಕಾರಿಯಾಗದೆ ದಿ:17.06.2021 ರಂದು ಬೆಳಿಗ್ಗೆ 9-10 ಗಂಟೆ ಸಮಯದಲ್ಲಿ ನನ್ನ ಮಗ ಶ್ರೀನಿವಾಸ ಮೃತನಾಗಿರುತ್ತಾನೆಂದು ವಿಷಯ ತಿಳಿದು ಬಂದಿರುತ್ತೆ. ಆದ ಕಾರಣ ತಾವ ಸ್ಥಳ ಪರಿಶೀಲನೆ ಮಾಡಿ ಮುಂದಿನ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ ಎಂದು ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ.

 

5. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.61/2021 ಕಲಂ. 323,324,504,506,34 ಐ.ಪಿ.ಸಿ :-

          ದಿನಾಂಕ 16-06-2021 ರಂದು ಮಧ್ಯಾಹ್ನ 02.30 ಗಂಟೆಗೆ ಹೆಚ್.ಸಿ-200 ರವರು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ನಾರೆಮ್ಮ ಕೋಂ ಲೇಟ್ ಯಾಮನ್ನ, 70 ವರ್ಷ, ನಾಯಕರು, ಜಿರಾಯ್ತಿ, ವಾಸ ಬಂಡಕೋಟೆ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆ ಪಡೆದು ಠಾಣೆಗೆ ತಂದು ಹಾಜರುಪಡಿಸಿದ ಸಾರಾಂಶವೇನೆಂದರೆ, ಈಗ್ಗೆ ಸುಮಾರು 11 ವರ್ಷಗಳ ಹಿಂದೆ ತನ್ನ ಗಂಡ 3 ಜನ ಮಕ್ಕಳಿಗೆ ಜಮೀನು ಭಾಗ ಮಾಡಿಕೊಟ್ಟಿದ್ದು, ಅವರವರಿಗೆ ಸೇರಿದ ಜಮೀನು ಅವರು ಉಳುಮೆ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತಾರೆ. ದಿನಾಂಕ 15-06-2021 ರಂದು ಮಧ್ಯಾಹ್ನ ಸುಮಾರು 02.30 ಗಂಟೆ ಸಮಯದಲ್ಲಿ ತನ್ನ 2 ನೇ ಮಗ ವೆಂಕಟರವಣ ಮತ್ತು 3ನೇ ಮಗ ಸೀನಪ್ಪ ರವರು ಅವರಿಗೆ ಸೇರಿದ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ತನ್ನ 1ನೇ ಮಗ ನಾರಾಯಣಸ್ವಾಮಿ,  ಸೊಸೆ ಶೋಭಾ, ಮೊಮ್ಮಕ್ಕಳಾದ ನಂದೀಶ, ಹರೀಶ ರವರು ಉಳುಮೆ ಮಾಡುತ್ತಿದ್ದ ಟ್ರ್ಯಾಕ್ಟರ್ ಗೆ ಅಡ್ಡಹೋಗಿ ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಮೈಮೇಲೆ ಹೊಡೆದಾಗ ತಾನು ಕೆಳಕ್ಕೆ ಬಿದ್ದಿದ್ದು ಅಲ್ಲೆ ಇದ್ದ ತನ್ನ ಸೊಸೆ ಮಂಜುಳಾ ಏಕೆ ಹೊಡೆಯುತ್ತಿದ್ದೀರ  ಎಂತ ಕೇಳಿದ್ದಕ್ಕೆ ನಾರಾಯಣಸ್ವಾಮಿ, ನಂದೀಶ, ಹರೀಶ ರವರು ಕೈಗಳಿಂದ ತನ್ನ ಸೊಸೆಗೆ ಹೊಡೆದು ಕೆಟ್ಟ ಮಾತುಗಳಿಂದ ಬೈದು ಕಲ್ಲಿನಿಂದ ಬಲ ಭುಜಕ್ಕೆ ಹೊಡೆದು ಊತಗಾಯ ಮಾಡಿ ಈ ಮುಂಡೆಯನ್ನು ಇದೇ ದಿನ ಸಾಯಿಸಿ ಹೂಳಬೇಕು ಎಂತ ಕಾಲುಗಳಿಂದ ಒದ್ದು ಕೈಗಳಿಂದ ಬಟ್ಟೆಯನ್ನು ಎಳೆದು ಕೆಳಕ್ಕೆ ತಳ್ಳಿರುತ್ತಾರೆ. ಅಷ್ಟರಲ್ಲಿ ಈ ಮೂರು ಜನ ಸೀನಪ್ಪ ಮತ್ತು ವೆಂಕಟರವಣಪ್ಪ ರವರಿಗೆ ಕಲ್ಲು ಮತ್ತು ಕೋಲುಗಳಿಂದ ಮೈಮೇಲೆ ಹೊಡೆದು ಮೈನೋವುಂಟು ಮಾಡಿ ಈ ನನ್ನ ಮಕ್ಕಳನ್ನು ಇದೇ ದಿನ ಸಾಯಿಸಬೇಕು ಎಂತ ಬೆದರಿಕೆ ಹಾಕಿದರು. ನಂತರ ಗ್ರಾಮಸ್ಥರು ಜಗಳ ಬಿಡಿಸಿದ್ದು ನಂತರ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ದಾಖಲಿಸಿರುತ್ತಾರೆ. ಈ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು ಹೇಳಿಕೆಯ ಸಾರಾಂಶವಾಗಿರುತ್ತೆ.

 

6. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.62/2021 ಕಲಂ. 143,144,147,323,324,504,506,149 ಐ.ಪಿ.ಸಿ :-

          ದಿನಾಂಕ 16/06/2021 ರಂದು ಮದ್ಯಾಹ್ನ3.00 ಗಂಟೆಗೆ ಸಿ.ಹೆಚ್.ಸಿ-200 ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶೋಭಾ ಕೋಂ ನಾರಾಯಣಸ್ವಾಮಿ, 40 ವರ್ಷ, ನಾಯಕರು, ಜಿರಾಯ್ತಿ, ವಾಸ ಬಂಡಕೋಟೆ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ  ಹೇಳಿಕೆಯನ್ನು ಪಡೆದು ಠಾಣೆಗೆ ಹಾಜರು ಪಡಿಸಿದ ಸಾರಾಂಶವೇನೆಂದರೆ, ಈಗ್ಗೆ ಸುಮಾರು 11 ವರ್ಷಗಳ ಹಿಂದೆ ತಮ್ಮ ಮಾವನಾದ ಲೇಟ್ ಯಾಮನ್ನ ತನ್ನ ಗಂಡನಾದ ನಾರಾಯಣಸ್ವಾಮಿ  ತನ್ನ ಮೈದುನರಾದ ಸೀನಪ್ಪ ಮತ್ತು ವೆಂಕಟರವಣಪ್ಪ ರವರಿಗೆ ಜಮೀನುಗಳು ಭಾಗ ಮಾಡಿಕೊಟ್ಟಿದ್ದು ಅಂದಿನಿಂದ ಎಲ್ಲಾರೂ ಅವರಿಗೆ ಸೇರಿದ ಜಮೀನು ಉಳುಮೆ ಮಾಡಿಕೊಂಡು  ಫಸಲು ತೆಗೆದುಕೊಳ್ಳುತ್ತಿದ್ದೇವು. ದಿನಾಂಕ 15/06/2021 ರಂದು ಮದ್ಯಾಹ್ನ ಸುಮಾರು 2-00 ಗಂಟೆ ಸಮಯದಲ್ಲಿ ತಮಗೆ ಸೇರಿದ ಜಮೀನಿನಲ್ಲಿ ತನ್ನ ಮೈದುನರಾದ ಸೀನಪ್ಪ ಮತ್ತು ವೆಂಕಟರವಣಪ್ಪ ರವರು ಟ್ರ್ಯಾಕ್ಟರ್ ನಿಂದ ಉಳುಮೆ ಮಾಡುತ್ತಿದ್ದಾಗ ತಾನು ಅಡ್ಡಹೋಗಿ ಏಕೆ ತಮ್ಮ ಜಮೀನು ಉಳುಮೆ ಮಾಡುತ್ತಿದ್ದೀರಿ ಎಂತ ಕೇಳುತ್ತಿದ್ದಾಗ ಏಕಾಏಕಿ ಸೀನಪ್ಪ ಮತ್ತು ವೆಂಕಟರವಣಪ್ಪ ಕೆಟ್ಟಮಾತುಗಳಿಂದ ಬೈದು “ಹೋಗೆ ಸೂಳೇಮುಂಡೆ ನಮ್ಮ ಜಮೀನು ನಾವು ಉಳುಮೆ ಮಾಡುತ್ತಿದ್ದೇವೆ” ಎಂತ ಹೇಳಿ ಜಗಳ ತೆಗೆದಾಗ ಅಲ್ಲಿಯೇ ಇದ್ದ ಮಂಜಮ್ಮ ಮತ್ತು ವರಲಕ್ಷ್ಮಮ್ಮ ತನ್ನ ಜುಟ್ಟು ಹಿಡಿದು ಎಳೆದಾಡಿ ಕೆಳಕ್ಕೆ ತಳ್ಳಿ ಕೈಗಳಿಂದ ಹೊಡೆದು ಮೈ ನೋವುಂಟು ಮಾಡಿದರು. ಕೃಷ್ಣಪ್ಪ, ನಾರಾಯಣಸ್ವಾಮಿ, ಲೋಕೇಶ್, ಶಾಂತಮ್ಮ ಮತ್ತು ನಾರೆಮ್ಮ ಎಂಬುವವರು ಕೆಟ್ಟಮಾತುಗಳಿಂದ ಬೈದು ಕೈಗಳಿಂದ ಮೈಮೇಲೆ ಹೊಡೆದು ಮೈ ನೋವುಂಟುಮಾಡಿದರು. ಅಷ್ಟರಲ್ಲಿ ತನ್ನ ಮಕ್ಕಳಾದ  ನಂದೀಶ ಮತ್ತು ಹರೀಶ ಎಂಬುವವರು ಅಡ್ಡಬಂದು ಜಗಳ ಬಿಡಿಸಲು ಬಂದಾಗ ವೆಂಕಟರವಣಪ್ಪ ಮತ್ತು ನಾರಾಯಣಸ್ವಾಮಿ ಎಂಬುವರು ಕೋಲುಗಳಿಂದ ಇಬ್ಬರಿಗೂ ಮೈಮೇಲೆ ಹೊಡೆದು ಊತಗಾಯ ಮಾಡಿದ್ದು, ಲೋಕೇಶ ಎಂಬುವವನು ತನ್ನ ಬಲ ಸೊಂಟಕ್ಕೆ ಮತ್ತು ಎಡಕಾಲಿಗೆ ಕೂಲಿನಿಂದ ಹೊಡೆದು ಮೂಗೇಟುಗಳು ಮಾಡಿರುತ್ತಾನೆ. ನಾರೇಮ್ಮ ಕೆಟ್ಟಮಾತುಗಳಿಂದ ಬೈದು ತನ್ನ ಮಕ್ಕಳಾದ ನಂದೀಶ ಮತ್ತು ಹರೀಶ್ ಗೆ ಹೊಡೆದು ಸಾಯಿಸಿರಿ ಎಂತ ಹೇಳಿದಾಗ ಸೀನಪ್ಪ ಮಚ್ಚಿನಿಂದ ಹೊಡೆಯಲು ಬಂದಿದ್ದು ತಾನು ತಪ್ಪಿಸಿಕೊಂಡು ತನ್ನ ಗಂಡನಿಗೆ ಪೋನ್ ಮಾಡಿದ್ದು, ತನ್ನ ಗಂಡ ಬರೋಷ್ಠರಲ್ಲಿ ಎಲ್ಲರೂ ಹೊರಟು ಹೋದರು. ತನಗೆ ಮೈ ಕೈ ನೋವು ಜಾಸ್ತಿಯಾದ್ದರಿಂದ 108 ಅಂಬ್ಯೂಲೇನ್ಸ್ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ತನ್ನ ಗಂಡನೊಂದಿಗೆ ಬಂದು ಚಿಕಿತ್ಸೆಗೆ ದಾಖಲಾಗಿರುತ್ತೇನೆ. ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು ಹೇಳಿಕೆ ಸಾರಾಂಶವಾಗಿರುತ್ತೆ.

ಇತ್ತೀಚಿನ ನವೀಕರಣ​ : 17-06-2021 05:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080