ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.139/2021 ಕಲಂ. ಮನುಷ್ಯ ಕಾಣೆ:-

          ದಿನಾಂಕ: 17/05/2021 ರಂದು ಬೆಳಿಗ್ಗೆ 10-30 ಗಂಟೆಗೆ  ಪಿರ್ಯಾದದಿದಾರರಾದ ಶ್ರೀ ಹಾಲೇಶ್ ಲಮಾಣಿ ಬಿನ್ ಶಂಕರಪ್ಪ, 33 ವರ್ಷ, ಲಂಬಾಣಿ ಜನಾಂಗ, ಅಬಕಾರಿ ಪೇದೆ,  ವಾಸ: 23 ನೇ ವಾರ್ಡ್, ಬಾಗೇಪಲ್ಲಿ ಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ನಾನು ಸುಮಾರು 2 ವರ್ಷಗಳಿಂದ ಬಾಗೇಪಲ್ಲಿ ಅಬಕಾರಿ ನಿರೀಕ್ಷಕರ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ನನ್ನ ತಂದೆ- ತಾಯಿಯರವರು ನನ್ನ ಜೊತೆ ವಾಸವಾಗಿದ್ದು.  ದಿನಾಂಕ: 12-05-2021 ರಂದು ಬೆಳಿಗ್ಗೆ 10-30 ಗಂಟೆಗೆ ನಮ್ಮ ಮನೆಯಲ್ಲಿ ಎಲ್ಲರೂ ತಿಂಡಿ ತಿಂದು ನಂತರ ನಾನು ಪ್ರತಿ ದಿನದಂತೆ ಕರ್ತವ್ಯಕ್ಕೆ ಹೋಗಿದ್ದು, ಮನೆಯಲ್ಲಿ ನಮ್ಮ ತಂದೆ ಮತ್ತು ತಾಯಿಯವರು ಇರುತ್ತಿದ್ದರು.. ನಂತರ ನಾನು ಮದ್ಯಾಹ್ನ 1-30 ಗಂಟೆಗೆ ಊಟಮಾಡಲು ಮನೆಗೆ ವಾಪಸ್ಸು ಬಂದಿದ್ದು ಮನೆಯಲ್ಲಿ ನಮ್ಮ ತಂದೆಯಾದ ಶಂಕರಪ್ಪ ಬಿನ್ ಟೋಪೆಪ್ಪ, 62 ವರ್ಷ, ಲಂಬಾಣಿ ಜನಾಂಗ, 23 ನೇ ವಾರ್ಡ್, ಬಾಗೇಪಲ್ಲಿ ಪುರ ರವರು ಇರಲಿಲ್ಲ ನಮ್ಮ ತಾಯಿಯನ್ನು ವಿಚಾರಿಸಲಾಗಿ ಎಲ್ಲೊ ಹೊರಗೆ ಇರುವುದಾಗಿ ತಿಳಿಸಿರುತ್ತಾರೆ. ನಾನು ಹೊರಗಡೆ  ಎಲ್ಲಾ ಕಡೆ ಹುಡುಕಾಡಲಾಗಿ ನಮ್ಮ ತಂದೆಯವರು ಕಾಣಿಸಿರುವುದಿಲ್ಲ. ಈಗ್ಗೆ 4 ವರ್ಷಗಳ ಹಿಂದೆ ನಮ್ಮ ತಂದೆಗೆ ಪಾರ್ಶ್ವವಾಯು ಬಂದಿದ್ದರಿಂದ ಅಂದಿನಿಂದ ನಮ್ಮ ತಂದೆಯವರು ಅಲ್ಪ ಸ್ವಲ್ಪ ಮಾನಸಿಕ ಅಸ್ವಸ್ಥರಾಗಿದ್ದರು, ಹೆಚ್ಚಾಗಿ ಓಡಾಡುತ್ತಿದ್ದರು. ಇದುವರೆವಿಗೂ ಅಕ್ಕ ಪಕ್ಕದ ಮನೆಗಳಲ್ಲಿ,ನಮ್ಮ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ.  ಕಾಣೆಯಾಗಿರುವ ನಮ್ಮ ತಂದೆಯವರನ್ನು  ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.44/2021 ಕಲಂ. 188,269,270 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ದಿನಾಂಕ:16-05-2021 ರಂದು ಮದ್ಯಾಹ್ನ 12-30 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ:16-05-2021 ರಂದು ಕೊವಿಡ್-19 ಹಿನ್ನೆಲೆಯಲ್ಲಿ ಚೇಳೂರು ಗ್ರಾಮದಲ್ಲಿ ಮುಖ್ಯ ರಸ್ತೆಯಲ್ಲಿ ಗಸ್ತು ಕರ್ತವ್ಯ  ನಿರ್ವಹಿಸಿಕೊಂಡು ಎಲ್ಲಾ ಅಂಗಡಿಯವರಿಗೆ ಮತ್ತು ಸಾರ್ವಜನಿಕರಿಗೆ ಕೋವಿಡ್-19 ಕರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಬೆಳಗ್ಗೆ 6-00 ಗಂಟೆಯಿಂದ 10-00 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಲು ಮತ್ತು ಸರ್ಕಾರ ಹೊರಡಿಸಿರುವ ಆದೇಶಗಳನ್ನು ಪಾಲಿಸಲು ಹಾಗೂ ಪ್ರತಿಯೊಬ್ಬರೂ ಮಾಸ್ಕ್ ಧರಿಸುವಂತೆ ಹಾಗೂ ಒಬ್ಬರಿಂದ ಒಬ್ಬರಿಗೆ ಸಾಮಾಜಿಕ ಅಂತರವನ್ನು ಕಾಪಾಡುವಂತೆ ಸೂಚಿಸುತ್ತಿರುವಾಗ ಮದ್ಯಾಹ್ನ ಸುಮಾರು 12-00 ಗಂಟೆ ಸಮಯದಲ್ಲಿ ಚೇಳೂರು ಗ್ರಾಮದಿಂದ ಅಂದ್ರಪ್ರದೇಶದ ಕಂದಕೂರುಗೆ ಹೋಗುವ ರಸ್ತೆಯಲ್ಲಿ  ಇರುವ ಬಾಲಾಜಿ ಪ್ರಾವಿಷನ್ ಸ್ಟೋರ್ ಅಂಗಡಿಯ ಬಳಿ ಜನರು ಗುಂಪಾಗಿ ಸೇರಿದ್ದರು. ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಸದರಿ ಅಂಗಡಿಯ ಮಾಲಿಕರು ಕೊವಿಡ್-19 ರೋಗ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೆ ನಿರ್ಲಕ್ಷತನದಿಂದ ಜನರನ್ನು ಗುಂಪಾಗಿ ಸೇರಿಸಿಕೊಂಡು ವ್ಯಾಪಾರ ಮಾಡುತ್ತಿದ್ದು, ಸದರಿ ಅಂಗಡಿಯ ಮಾಲಿಕರ ಹೆಸರು ವಿಳಾಸ ಕೇಳಲಾಗಿ ಎಸ್. ಮಲ್ಲಿಕಾರ್ಜುನ ಬಿನ್ ಲೇಟ್ ಟಿ.ಕೆ ಸತ್ಯನಾರಾಯಣಶೆಟ್ಟಿ, 55 ವರ್ಷ, ಆರ್ಯವೈಶ್ಯ ಜನಾಂಗ, ವ್ಯಾಪಾರ, ಚೇಳೂರು ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿರುತ್ತಾರೆ. ಸದರಿ ಅಂಗಡಿಯಲ್ಲಿ ಮಾಲಿಕನಾದ ಎಸ್. ಮಲ್ಲಿಕಾರ್ಜುನ ರವರು ಕೊವಿಡ್-19 ರೋಗ ತಡೆಗಟ್ಟುವ ಬಗ್ಗೆ ಯಾವುದೇ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೆ ಸಾರ್ವಜನಿಕರನ್ನು ಗುಂಪಾಗಿ ಸೇರಿಸಿಕೊಂಡು ವ್ಯಾಪಾರ ಮಾಡುತ್ತಾ ಕೋವಿಡ್-19 ಹಿನ್ನಲೆಯಲ್ಲಿ ಸರ್ಕಾರ ಹೊರಡಿಸಿರುವ ಆದೇಶಗಳನ್ನು ಪಾಲಿಸದೆ ಉಲ್ಲಂಘನೆ ಮಾಡಿ, ಪ್ರಾಣಕ್ಕೆ ಅಪಾಯಕಾರಿಯಾದ ಸಾಂಕ್ರಾಮಿಕ ರೋಗದ ಸೊಂಕುನ್ನು ಹರಡುವ ಸಂಭವ ಇರುವುದೆಂದು ತಿಳಿದಿದ್ದರೂ ಸಹ ಉದ್ದೇಶ ಪೂರ್ವಕವಾಗಿ ನಿರ್ಲಕ್ಷತನ ತೋರ್ಪಡಿಸಿರುವುದು ಕಂಡುಬಂದಿದ್ದು, ಸದರಿ ಅಂಗಡಿಯ ಮಾಲಿಕನಾದ ಎಸ್.ಮಲ್ಲಿಕಾರ್ಜುನ ಎಂಬುವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ. ಎಂಬುದಾಗಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ: 44/2021 ಕಲಂ: 269,270 188 ಐಪಿಸಿ ಮತ್ತು ಕಲಂ: 51(ಬಿ) ಡಿ.ಎಂ ಆಕ್ಟ್ -2005 ರೀತ್ಯ ಪ್ರಕರಣ ದಾಖಲಿಸಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.218/2021 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ: 16/05/2021 ರಂದು ಮದ್ಯಾಹ್ನ 1.45 ಗಂಟೆಗೆ ಠಾಣೆಗೆ ಶ್ರೀ.ನಾರಾಯಣಸ್ವಾಮಿ.ಕೆ, ಪಿ.ಎಸ್.ಐ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 16/05/2021 ರಂದು ಮದ್ಯಾಹ್ನ 12.30 ಗಂಟೆ ಸಮಯದಲ್ಲಿ ತಾನು  ಠಾಣಾ ಸಿಬ್ಬಂದಿಯವರಾದ ಸಿ.ಪಿ.ಸಿ-430 ನರಸಿಂಹಯ್ಯ ರವರೊಂದಿಗೆ ಠಾಣಾ ಜೀಪ್ ಸಂಖ್ಯೆ ಕೆಎ-40 ಜಿ-326 ರಲ್ಲಿ ಠಾಣಾ ವ್ಯಾಪ್ತಿಯ ಊಲವಾಡಿ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ರಾಜೇಶ್ ಬಿನ್ ನಾಗೇಶ ರವರು ಚಿಲ್ಲರೆ ಅಂಗಡಿ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಊಲವಾಡಿ ಗ್ರಾಮದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಚಿಲ್ಲರೆ ಅಂಗಡಿ ಮುಂದೆ  ನೋಡಲಾಗಿ  1)500 ಎಂಎಲ್ ನ ಕಿಂಗ್ ಪಿಶರ್ ಸ್ಟ್ರಾಂಗ್ ಪ್ರೀಮಿಯಂ ಬೀರ್ ಟಿನ್ ಗಳು – 04, 2)180 ಎಂಎಲ್ ನ ಬ್ಯಾಗ್ ಪೈಪರ್ ವಿಸ್ಕಿ ಟೆಟ್ರಾ ಪ್ಯಾಕೆಟ್ ಗಳು- 02, 3)180 ಎಂಎಲ್ ನ  ಮೆಕ್ ಡೋವೆಲ್ಸ್ ನಂ.1 ರಮ್ ಟೆಟ್ರಾ ಪ್ಯಾಕೆಟ್ ಗಳು – 02, 4)ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಹಾಗೂ 5)ಒಂದು ಲೀಟರ್ ಸಾಮರ್ಥ್ಯದ ಎರಡು ನೀರಿನ ಬಾಟಲಿಗಳಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ ಹಾಗೂ ನೀರಿನ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ರಾಜೇಶ್ ಬಿನ್ ನಾಗೇಶ್, 23 ವರ್ಷ, ಬಲಜಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಊಲವಾಡಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಮದ್ಯಾಹ್ನ 12.45 ರಿಂದ ಮದ್ಯಾಹ್ನ 1.30 ಗಂಟೆಯವರೆಗೆ ಪಂಚನಾಮೆಯ ಮೂಲಕ ಮೇಲ್ಕಂಡ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ರಾಜೇಶ್ ಬಿನ್ ನಾಗೇಶ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.219/2021 ಕಲಂ. 188,269,270 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ದಿನಾಂಕ: 16/05/2021 ರಂದು ಸಂಜೆ 6.45 ಗಂಟೆಗೆ ಠಾಣೆಯ ಶ್ರೀ ಸಂದೀಪ್ ಕುಮಾರ್, ಸಿ.ಹೆಚ್.ಸಿ-249 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 16/05/2021 ರಂದು ಸಂಜೆ  5.00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ಸಿ.ಪಿ.ಸಿ-464 ಅರುಣ್ ಕುಮಾರ್ ರವರು ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಮೈಲಾಪುರ ಗ್ರಾಮದ ನವೀನ್ ಬಿನ್ ಲೇಟ್ ವೆಂಕಟೇಶಪ್ಪ ರವರು ಅವರ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ನಾವು ಸಂಜೆ 5.30 ಗಂಟೆಗೆ ಮೈಲಾಪುರ ಗ್ರಾಮದ ನವೀನ್ ರವರ ಚಿಲ್ಲರೆ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ, ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ನವೀನ್ ಬಿನ್ ಲೇಟ್ ವೆಂಕಟೇಶಪ್ಪ, 28 ವರ್ಷ, ವಕ್ಕಲಿಗ ಜನಾಂಗ, ಚಿಲ್ಲರೆ ಅಂಗಡಿ ಮಾಲೀಕರು, ವಾಸ: ಮೈಲಾಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.220/2021 ಕಲಂ. 188,269,270 ಐ.ಪಿ.ಸಿ & 51(b) THE DISASTER MANAGEMENT ACT, 2005:-

          ದಿನಾಂಕ: 16/05/2021 ರಂದು ಸಂಜೆ 7.15 ಗಂಟೆಗೆ ಠಾಣೆಯ ಶ್ರೀ ನಾಗರಾಜ್, CHC-152 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 16/05/2021 ರಂದು ಸಂಜೆ 5.30 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಂಜೆ 6.00 ಗಂಟೆ ಸಮಯದಲ್ಲಿ ನಾಯಂದ್ರಹಳ್ಳಿ ಗ್ರಾಮದಲ್ಲಿ ಮಾಂಸದ ಅಂಗಡಿಯನ್ನು ಸುರೇಶ್ ರವರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ 3-4 ಜನರನ್ನು ಅಂಗಡಿಯಲ್ಲಿ ಅಕ್ಕಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಕಾನೂನು ಬಾಹಿರವಾಗಿ ಅಂಗಡಿ ತೆರೆದು ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದವರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಸುರೇಶ್ ಬಿನ್ ರಾಮರೆಡ್ಡಿ, 40 ವರ್ಷ, ವ್ಯಾಪಾರ, ನಾಯಿಂದ್ರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ  ಲಾಕ್ ಡೌನ್ ಆದೇಶ ಇದ್ದರೂ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

6. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.220/2021 ಕಲಂ. 506,341,504,323,324,34  ಐ.ಪಿ.ಸಿ :-

          ಪಿರ್ಯಾದಿದಾರರರಾದ ವೆಂಕಟೇಶ್ ಬಿನ್ ಪ್ರಸಾದ್, 29 ವರ್ಷ, ವಕ್ಕಲಿಗ, ಟೈಲ್ಸ್ ಕೆಲಸ, ಅಬ್ಬಗುಂಡು, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ನಾನು ದಿನಾಂಕ 17/05/2021 ರಂದು ಸಂಜೆ 4-30 ಗಂಟೆ ಸಮಯದಲ್ಲಿ ನಮ್ಮ ಮೇಸ್ತ್ರಿಯಾದ ಮಹೇಶ್ ರವರ ಬಳಿ ಕೂಲಿ ಹಣವನ್ನು ತೆಗೆದುಕೊಂಡು ಚಿಂತಾಮಣಿ ನಗರದ ಎನ್.ಎನ್.ಟಿ ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿ ಬರುತ್ತಿದ್ದಾಗ ಶಾಂತಿ ನಗರದ ವಾಸಿಗಳಾದ ಆನಂದ @ ಸೋನಿ ಹಾಗೂ ಮಾದೇಶ ರವರು ನನ್ನನ್ನು ಅಡ್ಡಗಟ್ಟಿ ನನ್ನ ಬಳಿ ಇರುವ ಹಣವನ್ನು ಕೊಡು ಎಂದು ಕೇಳಿದ್ದು ಅದಕ್ಕೆ ನಾನು ನಿಮಗೆ ಏಕೆ ಹಣವನ್ನು ಕೊಡಬೇಕು ಎಂದು ಹೇಳುವಷ್ಟರಲ್ಲಿ ಏ ಲೋಪರ್ ನನ್ನ ಮಗನೇ ನನಗೆ ಹಣ ಕೊಡು ಎಂದು ಅವಾಚ್ಯ ಶಬ್ದಗಳಿಂದ ಬೈದು ಆನಂದ ರವರು ನನ್ನನ್ನು ಕೈಗಳಿಂದ ಮೈ ಮೇಲೆ ಹೊಡೆದು ಕೆಳಕ್ಕೆ ತಳ್ಳಿರುತ್ತಾನೆ. ಮಾದೇಶರವರು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ನನ್ನ ಬೆನ್ನಿನ ಮೇಲೆ ಹೊಡೆದು ಮೂಗೇಟುಂಟು ಮಾಡಿರುತ್ತಾನೆ. ನಂತರ ಇಬ್ಬರು ಸೇರಿ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು  ಪ್ರಾಣ ಬೆದರಿಕೆ ಹಾಕಿರುತ್ತಾನೆ. ಅಷ್ಟರಲ್ಲಿ  ನಮ್ಮ ಮೇಸ್ತ್ರೀಯದ ಮಹೇಶ್ ಬಿನ್ ಚನ್ನರಾಯಪ್ಪ ಹಾಗೂ ನರಸಿಂಹಪ್ಪ ಬಿನ್ ವೆಂಕಟರಾಯಪ್ಪ ರವರು ಬಂದು ಜಗಳ ಬಿಡಿಸಿರುತ್ತಾರೆ. ಆದ್ದರಿಂದ ನನ್ನನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹಾಗೂ ದೊಣ್ಣೆಯಿಂದ ಹೊಡೆದು ಮೂಗೇಟುಂಟು ಮಾಡಿ ಪ್ರಾಣ ಬೆದರಿಕೆ ಹಾಕಿದ ಆನಂದ @ ಸೋನು ಹಾಗೂ ಮಾದೇಶ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

7. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.124/2021 ಕಲಂ.506,34,504,307,323,324 ಐ.ಪಿ.ಸಿ :-

          ದಿನಾಂಕ 16/05/2021 ರಂದು ಪಿರ್ಯಾಧಿದಾರರಾದ ಆದಿನಾರಾಯಣ ನಾಯ್ಕ್  ಬಿನ್ ಪೂರೇ ನಾಯ್ಕ್ ,ನಗರಗೆರೆ ಹೋಬಳಿ ನಡಿತಾಂಡ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ-  ನನ್ನ ಜಮೀನು ಇದ್ದು ಅದರ ಸರ್ವೆ ನಂ 180 ಆಗಿರುತ್ತೆ. ನಾನು ಬಾಗೆಪಲ್ಲಿಯಲ್ಲಿ ವಾಸವಾಗಿರುತ್ತೇನೆ.ಮಳೆ ಬಂದ ಕಾರಣ ನನ್ನ ಜಮೀನು ಉಳಿಮೆ ಮಾಡಲು ಬಂದಾಗ ನನಗೆ ಮತ್ತು ನನ್ನ ಹೆಂಡತಿಯನ್ನು ನನ್ನ ದೊಡ್ಡಪ್ಪನ ಮಗನಾದ ಎಸ್ ನಾಣೆ ನಾಯ್ಕ್ ಮತ್ತು ಆತನ ಹೆಂಡತಿ ಇಬ್ಬರು ಸೇರಿ ಕಣ್ಣಿಗೆ ಕಾರದ ಪುಡಿ ಹಾಕಿ ನಾಣೇನಾಯ್ಕ್ ಮಗನಾದ ರಾಜು ನಾಯ್ಕ್ ಮತ್ತು ಸೇವೆ ನಾಯ್ಕ್ನ ಮಗನಾದ ಮಲ್ಲಿಕಾರ್ಜುನ ನಾಯ್ಕ್ ಇವರುಗಳು ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ರಾಡಿನಿಂದ ಹೊಡೆದು ನನ್ನ ಎಡಕೈಯನ್ನು ಮುರಿದಿರುತ್ತಾರೆ. ಮತ್ತು ನನ್ನ ಹೆಂಡತಿಯ ಬಲಗೈಯನ್ನು ಮುರಿದಿರುತ್ತಾರೆ. ಇವರು ನಾಲ್ಕು ಜನ ಸೇರಿ ನನಗೆ ಕೆಳಗೆ ಬಿಳಿಸಿ ಕಾಲಿನಿಂದ ತುಳಿದು ಕೊಂಡು ಎದೆಯ ಮೇಲೆ ದೊಡ್ಡಕಲ್ಲಿನಿಂದ ಹೊಡೆದು ಹಲ್ಲೆ ಮಾಡಿರುತ್ತದೆ ಆದ ಕಾರಣ ನಾನು ನಿನ್ನೆ ಸರ್ಕಾರಿ ಆಸ್ವತ್ರೆಗೆ ಹೋಗಿ ಅಡ್ಮಿಟ್ ಆಗಿರುತ್ತೆನೆ.ಅದೇ ದಿನ ರಾತ್ರಿ ಸುಮಾರು ಸಮಯ ರಾತ್ರಿ 11-45 ಸಮಯದಲ್ಲಿ ಮನೆಯ ಮೇಲೆ ದಾಳಿ ಮಾಡಿ ಕಲ್ಲಿನಿಂದ ಕಿಟಕಿ ಬಾಗಿಲು ಹೊಡೆದಿರುತ್ತಾರೆ.ಮಾರಕಾಸ್ತ್ರದಿಂದ ಮಾರಣಾಂತಕ ಹಲ್ಲೆ ನಡೆಸಿ ನನಗೆ ಕೊಲೆ ಬೆದರಿಕೆ ಹಾಕಿರುತ್ತಾರೆ. ಅವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ದೂರು.

 

8. ನಂದಿಗಿರಿಧಾಮ ಪೊಲೀಸ್‌ ಠಾಣೆ ಮೊ.ಸಂ.50/2021 ಕಲಂ.457,380  ಐ.ಪಿ.ಸಿ :-

          ದಿನಾಂಕ 17-05-2021 ರಂದು  ಬೆಳಗ್ಗೆ 9-30 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ ಪಿರ್ಯಾದುದಾರರು ನಂದಿ ಕ್ರಾಸಿನ ವಿಜಯಪುರ ರಸ್ತೆಯಲ್ಲಿನ ಡಿ ಹೊಸೂರು ಮಂಜುನಾಥ ರವರ ಬಾಬತ್ತು ಅಂಗಡಿಯನ್ನು  ಈಗ್ಗೆ 3 ತಿಂಗಳ ಹಿಂದೆ  ತಿಂಗಳಿಗೆ 2500/- ರೂಪಾಯಿ ಬಾಡಿಗೆಗೆ ಮಾತನಾಡಿಕೊಂಡು ಅಂಗಡಿಯಲ್ಲಿ ಪ್ರಾವಿಜನ್ ಸ್ಟೋರ್ಸ್ ಅಂಗಡಿಯನ್ನಿಟ್ಟು ಸದರಿ ಅಂಗಡಿಯಲ್ಲಿ ದಿನಸಿ ಪದಾರ್ಥಗಳು ಅಡುಗೆ ಎಣ್ಣೆ ಹಾಗೂ ಇನ್ನೂ ಮುಂತಾದ ವಸ್ತುಗಳನ್ನಿಟ್ಟು ಮಾರಾಟ ಮಾಡಿಕೊಂಡಿರುತ್ತೇನೆ, ರಾಜ್ಯ ಸರ್ಕಾರವು ಕೋವಿಡ್ ನಿಯಂತ್ರಣಕ್ಕಾಗಿ ಕೆಲವು ಮಾರ್ಗ ಸೂಚಿಗಳನ್ನು  ಹೊರಡಿಸಿದ್ದು ಸರ್ಕಾರದ ಆಧೇಶದಂತೆ  ತಾನು ಬೆಳಗ್ಗೆ 6-00 ಗಂಟೆಗೆ ತೆರೆದು ಬೆಳಗ್ಗೆ 10-00 ಗಂಟೆಗೆ ಮುಚ್ಚಿಕೊಂಡು ಮನಗೆ ಹೋಗುತ್ತಿದ್ದೆನು, ಎಂದಿನಂತೆ ದಿನಾಂಕ;16-05-2021 ರಂದು ಬೆಳಗ್ಗೆ 6 ಗಂಟೆಗೆ ಅಂಗಡಿಯನ್ನು ತೆರೆದು 10-00 ಗಂಟೆಗೆ ಮುಚ್ಚಿಕೊಂಡು ಮನಗೆ ಹೋಗಿರುತ್ತೇನೆ, ಈ ದಿನ ದಿನಾಂಕ 17-05-2021 ರಂದು  ಬೆಳಗ್ಗೆ 6-00 ಗಂಟೆಗೆ ನನ್ನ ಮಗನಾದ ಪುನೀತ್ ಅಂಗಡಿಯನ್ನು ತೆರೆದು ನೋಡಲಾಗಿ ತಡರಾತ್ರಿ ಯಾರೋ ಕಳ್ಳರು ನಮ್ಮ ಅಂಗಡಿಯ ಹಿಂದೆ ಗೋಡೆಗೆ ಕನ್ನವನ್ನು ಕೊರೆದು ಅಂಗಡಿಯೊಳಗಿದ್ದಂತಹ ಎಣ್ಣೆ ಕ್ಯಾನುಗಳು ಮತ್ತು ಸಿಗರೇಟ್ ಪ್ಯಾಕುಗಳ ಬಂಡಲ್ಲುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನನ್ನ ಮಗ ನನಗೆ ಪೋನ್ ಮಾಡಿ ವಿಚಾರ ತಿಳಿಸಿದನು, ನಾನು ತಕ್ಷಣ ಮನೆಯಿಂದ  ಅಂಗಡಿಯ ಬಳಿ ಬಂದು ನೋಡಲಾಗಿ ವಿಚಾರ ನಿಜವಾಗಿತ್ತು, ತಡರಾತ್ರಿ ಯಾರೋ ಕಳ್ಳರು ನಮ್ಮ ಅಂಗಡಿಯ ಹಿಂದೆ ಗೋಡೆಯನ್ನು ಕೊರೆದು ಒಳನುಗ್ಗಿ ಅಂಗಡಿಯೊಳಗಿದ್ದಂತಹ 9 ಗೋಲ್ಡ್ ವಿನ್ನರ್ ಎಣ್ಣೆ ಕ್ಯಾನುಗಳನ್ನು ಮತ್ತು ಸನ್ ಪ್ಯೂರ್ 3 ಬಾಕ್ಸ್ ಪಾಕೇಟುಗಳು ಮತ್ತು ರುಚಿ ಗೋಲ್ಡ್ 1 ಬಾಕ್ಸ್ ಎಣ್ಣೆ ಸಿಗರೇಟ್ ಪ್ಯಾಕ್ಗಳನ್ನು  ಮತ್ತು ಕೊಬ್ಬರಿ ಎಣ್ಣೆಯ 1 ಬಾಕ್ಸ್ ನ್ನು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಇವುಗಳ ಮೌಲ್ಯ 15000/-ರುಪಾಯಿಗಳಾಗಬಹುದು, ನಮ್ಮ ಅಂಗಡಿಯ ಗೋಡೆಯನ್ನು ಕೊರೆದು ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೇ ಮಾಡಿ ಅವರ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.159/2021 ಕಲಂ. 143,447,341,323,504,506,149 ಐ.ಪಿ.ಸಿ :-

          ದಿನಾಂಕ:-16/05/2021 ರಂದು ಮದ್ಯಾಹ್ನ 1-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಡಿ.ಸಂಪತ್ ಕುಮಾರ್ ಬಿನ್ ಎನ್.ದೇವರಾಜ್, 41 ವರ್ಷ, ವಕ್ಕಲಿಗರು, ವ್ಯಾಪಾರ, ವಾಸ-ಚನ್ನರಾಯಪಟ್ಟಣ ರಸ್ತೆ, ವಿಜಯಪುರ ಟೌನ್, ದೇವನಹಳ್ಳಿ ತಾಲ್ಲೂಕು, ಬೆಂಗಳೂರು (ಗ್ರಾ) ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಇದೇ ಶಿಡ್ಲಘಟ್ಟ ತಾಲ್ಲೂಕು ಹಾರಡಿ ಗ್ರಾಮದ ಸರ್ವೇ ನಂಬರ್ 169 ಮತ್ತು 3 ರಲ್ಲಿ ಒಟ್ಟು 50 ಎಕರೆ ಜಮೀನನ್ನು 2009 ನೇ ಸಾಲಿನಲ್ಲಿ ಬೆಂಗಳೂರಿನ ವಾಸಿಗಳಾದ ಸೈಯದ್ ನೂರ್ ರಫೀ ಉಲ್ಲಾ ಹಾಗು ಸಾದ್ ಸಲ್ಮಾನ್ ರವರು ಖರೀದಿ ಮಾಡಿದ್ದು, ಅಂದಿನಿಂದಲೂ ತಾನು ಸದರಿ ಜಮೀನಿನಲ್ಲಿ ಕೂಲಿ ಆಳುಗಳೊಂದಿಗೆ ಕೆಲಸ ಮಾಡಿಸಿಕೊಂಡು ಜಮೀನಿನ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುತ್ತೇನೆ. ಈ ಜಮೀನಿಗೆ ಹಾರಡಿ ಗ್ರಾಮದ ವಾಸಿ ಮುನಿಕೃಷ್ಣ ರವರನ್ನು ಕಾವಲುಗಾರನಾಗಿ ನೇಮಿಸಿದ್ದು, ದಿನಾಂಕ 15/05/2021 ರಂದು ಬೆಳಿಗ್ಗೆ ಸುಮಾರು 10-45 ಗಂಟೆ ಸಮಯದಲ್ಲಿ ಹಾರಡಿ ಗ್ರಾಮದ ವಾಸಿಯಾದ ನಾರಾಯಣಪ್ಪ ರವರ ಮಕ್ಕಳಾದ ರಾಮಪ್ಪ ಮತ್ತು ನಾರಾಯಣಸ್ವಾಮಿ @ ಸುರೇಶ್, ರಾಮಪ್ಪ ರವರ ಮಕ್ಕಳಾದ ಸುರೇಶ್ ಮತ್ತು ಮೋಹನ್ ರವರು ಹಾಗು ನಾರಾಯಣಸ್ವಾಮಿ @ ಸುರೇಶ್ ರವರ ಮಕ್ಕಳಾದ ಮಂಜುನಾಥ & ನಾಗಭೂಷಣ್ ರವರು ಅಕ್ರಮವಾಗಿ ಗುಂಪು ಕಟ್ಟಿಕೊಂಡು ತಮ್ಮ ಜಮೀನಿನ ಹಿಂಭಾಗದ ಬೇಲಿಯನ್ನು  ಕೆಡವಿ ನೊಂದಣಿ ಸಂಖ್ಯೆ ಇಲ್ಲದ ಟ್ರಾಕ್ಟರ್ ನಲ್ಲಿ ತಮ್ಮ ಜಮೀನಿನೊಳಗೆ ಅತೀ ಕ್ರಮ ಪ್ರವೇಶ ಮಾಡಿ ಉಳುಮೆ ಮಾಡಲು ಮುಂದಾಗಿದ್ದಾಗ ಕೂಲಿ ಆಳುವಾದ ಮುನಿಕೃಷ್ಣಪ್ಪ ರವರು ಮೇಲ್ಕಂಡವರಿಗೆ ಜಮೀನಿನಲ್ಲಿ ಯಾಕೇ ಬಂದಿದ್ದೀರಾ ಎಂದು ಕೇಳಿದ್ದಕ್ಕೆ ಆತನನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಮೈ ಮೇಲೆ ಹೊಡೆದು, ಲೋಫರ್ ನನ್ನ ಮಗನೇ ನೀನು ಮತ್ತು ನಿನ್ನ ಯಜಮಾನರು ಈ ಜಮೀನನ್ನು ಖಾಲಿ ಮಾಡದಿದ್ದರೆ ನಿಮಗೆ ಒಂದು ಗತಿ ಕಾಣಿಸುತ್ತೇವೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ನಂತರ ಮುನಿಕೃಷ್ಣಪ್ಪ ರವರು ತನಗೆ ಪೋನ್ ಮಾಡಿ ವಿಷಯವನ್ನು ತಿಳಿಸಿರುತ್ತಾರೆ. ನಂತರ ತಾನು ಈ ಗಲಾಟೆಯ ವಿಷಯವನ್ನು ತಮ್ಮ ಜಮೀನಿನ ಮಾಲೀಕರಿಗೆ ತಿಳಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

 

10. ಶಿಡ್ಲಘಟ್ಟ ಪುರ ಪೊಲೀಸ್‌ ಠಾಣೆ ಮೊ.ಸಂ.53/2021 ಕಲಂ. 32(3),15(A) ಕೆ.ಇ ಆಕ್ಟ್:-

          ದಿನಾಂಕ:17/05/2021 ರಂದು ಮದ್ಯಾಹ್ನ 1-00 ಗಂಟೆಗೆ ಹೆಚ್.ಸಿ.97 ರವರು ಆರೋಪಿಗಳು ಮತ್ತು ಮಾಲನ್ನು ಠಾಣೆಗೆ ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ, ಠಾಣಾಧಿಕಾರಿಗಳ ಅದೇಶದಂತೆ ದಿನಾಂಕ.17.05.2021 ರಂದು ಬೆಳಿಗ್ಗೆ ಸುಮಾರು 11-00 ಗಂಟೆಯಲ್ಲಿ  ಹೆಚ್.ಸಿ.97, ಸುಬ್ರಮಣಿ ಆದ ನಾನು ಪಿ.ಸಿ.209 ಶಶಿಕುಮಾರ್ ರವರೊಂದಿಗೆ ಶಿಡ್ಲಘಟ್ಟ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ನಗರದ ರಹಮತ್ ನಗರದಲ್ಲಿ ಮಧು ಎಂಬುವರ ಮನೆಯ  ಮುಂಭಾಗದಲ್ಲಿ ಯಾರೋ ಸಾರ್ವಜನಿಕರು ಯಾವುದೇ ಪರವಾನಗಿ ಇಲ್ಲದೆ ಮದ್ಯಪಾನ ಸೇವನೆ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ನಾವು ಮೇಲ್ಕಂಡ ಸ್ಥಳಕ್ಕೆ ಬೆಳಿಗ್ಗೆ 11-30 ಗಂಟೆಯಲ್ಲಿ ಹೋಗಿ ನೋಡಿದಾಗ ಯಾರೋ ನಾಲ್ಕು ಜನರು ಮದ್ಯಪಾನ ಸೇವನೆ ಮಾಡುತ್ತಿದ್ದವರು ನಮ್ಮನ್ನು ಕಂಡು ಓಡಿ ಹೋಗಿದ್ದು, ಹಿಂಬಾಲಿಸಿ ಅವರನ್ನು ವಶಕ್ಕೆ ಪಡೆದು ಅವರ ಹೆಸರು ವಿಳಾಸ ಕೇಳಲಾಗಿ 1] ಚೋಟು ಬಿನ್ ಸಿರಾಜ್, ರಹಮತ್ ನಗರ, 2] ರಿಯಾಜ್ ಬಿನ್ ವಾಜೀದ್, ರಹಮತ್ ನಗರ 3] ಚಾಂದಪಾಷ ಬಿನ್ ಚಾಂದಪಾಷ,  ರಹಮತ್ ನಗರ 4] ಸಿರಾಜ್ ಬಿನ್ ಬೇಗ್ ಸಾಬ್,  ರಹಮತ್ ನಗರ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿರುತ್ತಾರೆ. ಇವರು ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡಿದ್ದು ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದು ಪರಿಶೀಲಿಸಲಾಗಿ ORIGINAL CHOICE 90 ML ನ 6 ಮದ್ಯದ ಪಾಕೆಟ್ ಗಳಿದ್ದು ಒಂದರ ಬೆಲೆ 35.13 ರೂಗಳಾಗಿದ್ದು, 6 ರ ಬೆಲೆ ಒಟ್ಟು 211-00 ರೂಗಳಾಗಿರುತ್ತೆ. ಇದೇ ಸ್ಥಳದಲ್ಲಿ ಮದ್ಯಪಾನ ಮಾಡಿದ ORIGINAL CHOICE 90 ML ನ 04 ಖಾಲಿ ಮದ್ಯದ ಪಾಕೇಟ್ಗಳಿರುತ್ತೆ. ಹಾಗೂ 04 ಪ್ಲಾಸ್ಟಿಕ್ ಗ್ಲಾಸ್ಗಳಿರುತ್ತೆ. ಇವುಗಳನ್ನು ಮುಂದಿನ ತನಿಖೆ ಬಗ್ಗೆ ಬೆಳಿಗ್ಗೆ 11-45 ರಿಂದ 12-15 ಗಂಟೆಯವರೆಗೆ ಮಹಜರ್ ಮಾಡಿ ಅಮಾನತ್ತು ಪಡಿಸಿಕೊಂಡಿರುತ್ತೆ. ಸಾರ್ವಜನಿಕರ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದ ಆಸಾಮಿಗಳನ್ನು ವಶಕ್ಕೆ ಪಡೆದು ಮಾಲು ಸಮೇತ ಠಾಣೆಗೆ ಕರೆದುಕೊಂಡು ಬಂದಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ  ಈ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 17-05-2021 05:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080