Feedback / Suggestions

1. ಚೇಳೂರು ಪೊಲೀಸ್ ಠಾಣೆ ಮೊ.ಸಂ. 26/2021 ಕಲಂ. 87 ಕೆ.ಪಿ ಆಕ್ಟ್ :-

     ದಿನಾಂಕ:17/04/2021 ರಂದು ಬೆಳಗ್ಗೆ 11:30 ಗಂಟೆಗೆ ನ್ಯಾಯಾಲಯ ಪೇದೆಯಾದ  ಹೆಚ್ ಸಿ 20 ಮಲ್ಲಿಕಾರ್ಜುನ ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದ ಆದೇಶಪ್ರತಿಯ ಸಾರಾಂಶವೇನೆಂದರೆ ದಿನಾಂಕ:16-04-2021 ರಂದು ರಾತ್ರಿ 20.00 ಗಂಟೆ ಸಮಯದಲ್ಲಿ ಶ್ರೀ.ರವಿಶಂಕರ್ ಮಾನ್ಯ ಪೊಲೀಸ್ ಉಪಾಧೀಕ್ಷಕರು ಚಿಕ್ಕಬಳ್ಳಾಪುರ ಉಪವಿಭಾಗ ರವರು ಮಾಲುಗಳು, ಪಂಚನಾಮೆ, ಮತ್ತು ಅರೋಪಿತರೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಮದರೆ ಈ ದಿನ ದಿನಾಂಕ:16-04-2021 ರಂದು ಚಿಕ್ಕಬಳ್ಳಾಪುರ ಉಪ ವಿಭಾಗದ ಡಿ.ವೈ.ಎಸ್.ಪಿ ಕೆ. ರವಿಶಂಕರ್ ಆದ ನಾನು ನಮ್ಮ ಸಿಬ್ಬಂದಿಯೊಂದಿಗೆ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳ ಮಾಹಿತಿ ಸಂಗ್ರಹಣೆ ಹಾಗೂ ಪಾತಪಾಳ್ಯ ಪೊಳಿಸ್ ಠಾಣಾ ವ್ಯಾಪ್ತಿಯ ಬಿಳ್ಳೂರು ಗ್ರಾಮದಲ್ಲಿ ಹಮ್ಮಿಕೊಂಡಿರುವ ಜನಸಂಪರ್ಕ ಸಭೆಗೆ ಹಾಜರಾಗಿ ನಂತರ ಪೊಲನಾಯಕನಹಳ್ಳಿ ಗ್ರಾಮದ ಮೂಲಕ ಗಸ್ತು ಮಾಡಿಕೊಂಡು ಪಾಳ್ಯಕೆರೆ ಗ್ರಾಮಕ್ಕೆ ಸಂಜೆ 4.00 ಗಂಟೆ ಸಮಯದಲ್ಲಿ ಭಾತ್ಮಿಧಾರರಿಂದ ಬಂದ ಮಾಹಿತಿ ಮೇರೆಗೆ ಪಾಳ್ಯಕೆರೆ ಬಸ್ಸು ನಿಲ್ದಾಣದಲ್ಲಿ ಇದ್ದ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರಿಗೆ ರಾಮೋಜಿಪಲ್ಲಿ ಗ್ರಾಮದ ಪಕ್ಕದಲ್ಲಿ ಇರುವ ಸರ್ಕಾರಿ ಗುಡ್ಡದ ಸಮೀಪ ಹುಣಸೆ ಮರದ ಕೆಳಗೆ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವ  ಬಗ್ಗೆ ಮಾಹಿತಿ ತಿಳಿಸಿ ಜೂಜಾಟದ ದಾಳಿ ಸಮಯದಲ್ಲಿ ಪಂಚಾಯ್ತಿದಾರರಾಗಿ ಬರಲು ಕೋರಿ ಅವರು ಅದಕ್ಕೆ ಒಪ್ಪಿಕೊಂಡು ನಂತರ ನಾವು ಮತ್ತು ಪಂಚಾಯ್ತಿದಾರರು ಸರ್ಕಾರಿ ಜೀಪ್ನಲ್ಲಿ ಕೆಲವರು ಮತ್ತು  ಖಾಸಗಿ 407 ಟೆಂಪೋದಲ್ಲಿ ಕೆಲವರು ಬಂದ ಭಾತ್ಮೀಯಂತೆ ರಾಮೋಜಿಪಲ್ಲಿ ಗ್ರಾಮದ ಪಶ್ಚಿಮಕ್ಕೆ ಸುಮಾರು 1 ಕೀ.ಮೀ ದೂರದಲ್ಲಿ ಇರುವ ದಾಸನ್ನಗಾರಿ ಈರಪ್ಪ ರವರ ಜಮೀನನ ಪಕ್ಕದಲ್ಲಿ ಸರ್ಕಾರಿ ಗುಡ್ಡದ ಬದಿಯಲ್ಲಿ ಇರುವ ಹುಣಸೆ ಮರದಿಂದ ಸ್ವಲ್ಪ ದೂರದಲ್ಲಿ ಗುಡ್ಡದ ಮೊರೆಯಲ್ಲಿ ವಾಹನಗಳನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗಿ ಹುಣಸೆ ಮರದ ಕೆಳಗೆ ಅಂದರ್ ಬಾಹರ್ ಇಸ್ಪಿಟ್ ಜೂಜಾಟ ಆಡುತ್ತಿದ್ದ ಅಸಾಮಿಗಳನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ರಾಕೇಶ್ ಬಿನ್ ಕೃಷ್ಣಾರೆಡ್ಡಿ, 30 ವರ್ಷ, ವಕ್ಕಲಿಗರು, ವಾಸ: ಬಾಪನಪಲ್ಲಿ ರೋಡ್, ಪುಲಿವೆಂದಲ ಗ್ರಾಮ, ಕಡಪಜಿಲ್ಲೆ ಪೋನ್ ನಂ 7702936048, 2) ಕಿರಣ್ ಕುಮಾರ್ ಬಿನ್ ಪ್ರಭಾಕರ್, 40 ವರ್ಷ, ಈಡಿಗರು, ಫೈನಾನ್ಸ್ನಲ್ಲಿ ಕೆಲಸ, ಬೈಪಾಸ್ ರಸ್ತೆ, ಪಾಲರೆಡ್ಡಿ ನಗರ, ಪುಲಿವೆಂದುಲು, ಕಡಪ ಜಿಲ್ಲೆ, ಪೋನ್ ನಂ 9885540286 3) ವಿ.ರಘುನಾಥರೆಡ್ಡಿ ಬಿನ್. ವಿ.ಕೃಷ್ಣಾರೆಡ್ಡಿ, 42 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಬೈಪಾಸ್ ರಸ್ತೆ, ಪಾಲರೆಡ್ಡಿ ನಗರ, ಪುಲಿವೆಂದುಲ, ಕಡಪ ಜಿಲ್ಲೆ. ಪೋನ್ ನಂ 9885692790 4) ರಸೂಲ್ ಬಿನ್ ಲೇಟ್ ಪಟ್ನಂ ಬಾಷು, 50 ವರ್ಷ, ಮುಸ್ಲೀಂ ಜನಾಂಗ, ಹಣ್ಣುಗಳ ವ್ಯಾಪಾರ, ಮುಲಕಲಚೆರುವು, ತಂಬಳ್ಳಪಲ್ಲಿ ತಾಲ್ಲೂಕು, ಚಿತ್ತೂರು ಜಿಲ್ಲೆ. 5) ರಮಣ ಬಿನ್ ಲೇಟ್ ಬಾಲಪ್ಪ, ಬಿ.ಕೋತ್ತಕೋಟ ತಂಬಳ್ಳಪಲ್ಲಿ ತಾಲ್ಲೂಕು, ಚಿತ್ತೂರು ಜಿಲ್ಲೆ, ಪೋನ್ ನಂ 9000853940 6) ಭಾಸ್ಕರರೆಡ್ಡಿ ಬಿನ್ ನಾಗರಾಜರೆಡ್ಡಿ, 34 ವರ್ಷ, ವಕ್ಕಲಿಗರು, ಜಿರಾಯ್ತಿ, ಅಂಗಳ್ಳ ಗ್ರಾಮ, ಕುರುಬಲಕೋಟ ಮಂಡಲಂ, ಮದನಪಲ್ಲಿ ತಾಲ್ಲೂಕು, ಚಿತ್ತೂರು ಜಿಲ್ಲೆ, ಪೋನ್ ನಂ 9989655856, 7) ಕೆ.ಜಯರಾಮರೆಡ್ಡಿ ಬಿನ್ ಲೇಟ್ ರಾಮರೆಡ್ಡಿ, 52 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಪೋಟ್ಲದುತರ್ಿ ಗ್ರಾಮ, ಯರ್ರಗುಂಟ್ಲ ಮಂಡಲಂ, ಕಮಲಾಪುರ ತಾಲ್ಲೂಕು, ಕಡಪ ಜಿಲ್ಲೆ, 8) ಬಯಣ್ಣ ಬಿನ್ ಲೇಟ್ ಬಯಪ್ಪ, 50 ವರ್ಷ, ವಕ್ಕಲಿಗರು, ಜಿರಾಯ್ತಿ, ಧರ್ಮವಾರಪಲ್ಲಿ ಗ್ರಾಮ, ಚಿಲಕಲನೇಪರ್ು ಪಂಚಾಯ್ತಿ, ಚಿಂತಾಮಣಿ ತಾಲ್ಲೂಕು, 9) ಶ್ರೀಕಾಂತ್ ಬಿನ್ ನರಸಿಂಹುಲು, 20 ವರ್ಷ, ಅದಿ ಕನರ್ಾಟಕ, ಜಿರಾಯ್ತಿ, ವಾಸ: ಸದುಂ ಗ್ರಾಮ, ಪಿ.ಟಿ.ಎಂ. ಮಂಡಲಂ, ತಂಬಳ್ಳಪಲ್ಲಿ ತಾಲ್ಲೂಕು, ಚಿತ್ತೂರು ಜಿಲ್ಲೆ, ಪೋನ್ ನಂ 7093133761, 10) ರಾಮಾಂಜಿ ಬಿನ್ ಯಾಮನ್ನ, 35 ವರ್ಷ, ಆದಿ ಕನರ್ಾಟಕ, ಚೇಳೂರು ಗ್ರಾಮ, ಬಾಗೇಪಲ್ಲಿ ತಾಲ್ಲೂಕು. ಪೋನ್ 9902049246. ಎಂತ ತಿಳಿಸಿರುತ್ತಾರೆ. ಸದರಿ ಜೂಜಾಟದ ಸ್ಥಳದಲ್ಲಿ ಪರಿಶೀಲಿಸಲಾಗಿ ಹುಣಸೇಮರದ ಕೆಳಗೆ ಒಂದು ಪ್ಲಾಸ್ಟಿಕ್ ಟಾಪರ್ಾಲ್ ಹಾಸಿದ್ದು ಅದರ ಮೇಲೆ ಇಸ್ಪೀಟು ಎಲೆಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುತ್ತೆ ಅವುಗಳನ್ನು ಏಣಿಸಲಾಗಿ 52 ಇಸ್ಪೀಟು ಎಲೆಗಳು ಬಿದ್ದಿರುತ್ತೆ. ಪಣಕ್ಕೆ ಹಾಕಿದ್ದ ಹಣವನ್ನು ಏಣಿಸಲಾಗಿ ಒಟ್ಟು 10,1500/-(ಒಂದು ಲಕ್ಷ ಸಾವಿರದ ಐನೂರು) ಗಳಿರುತ್ತೆ. ಹಾಗೂ ಇವರು ಆಂಧ್ರದ ಮೂಲದವರಾಗಿದ್ದು ಇಸ್ಪೀಟು ಜೂಜಾಟಕ್ಕೆ ಬರಲು ಮೊಬೈಲ್ಗಳಲ್ಲಿ ಮಾತನಾಡಿ ಕೃತ್ಯಕ್ಕೆ ಉಪಯೋಗಿಸಿದ್ದ ಮೊಬೈಲ್ ಪ್ಲಾಸ್ಟಿಕ್ ಟಾಪರ್ಾಲ್ನ  ಮೇಲೆ ಇದ್ದ ಮೊಬೈಲ್ಗಳನ್ನು ಪರಿಶೀಲಿಸಲಾಗಿ 1) ಕೆ9 ಕಾರ್ಬನ್ ಕಂಪನಿಯ ಕಿಪ್ಯಾಡ್ ಮೊಬೈಲ್ ಇದು ಬಯಣ್ಣ ರವರು ತನ್ನದೆಂದು ತಿಳಿಸಿರುತ್ತಾನೆ.  2) ನೊಕಿಯೋ ಕಂಪನಿಯ ಕಿಪ್ಯಾಡ್ ಮೊಬೈಲ್ ಇದು ರಘುನಾಥರೆಡ್ಡಿ ರವರು ತನ್ನದೆಂತ ತಿಳಿಸಿರುತ್ತಾನೆ. 3) ಒಪ್ಪೋ ಕಂಪನಿಯ ಎ3ಎಸ್ ಅಂಡ್ರಾಯಿಡ್ ಮೊಬೈಲ್ ಇದು ಶ್ರೀಕಾಂತ್ ರವರು ತನ್ನದೆಂದು ತಿಳಿಸಿರುತ್ತಾನೆ. 4) ಕೆ9 ಕಾರ್ಬನ್ ಕಂಪನಿಯ ಕಿಪ್ಯಾಡ್ ಮೊಬೈಲ್ ಇದು ರಾಮಾಂಜಿ ರವರು ತನ್ನದೆಂದು ತಿಳಿಸಿರುತ್ತಾನೆ. 5) ವಿವೋ ಕಂಪನಿಯ ವಿ20 ಅಂಡ್ರಾಯಿಡ್ ಮೊಬೈಲ್ ಇದು ರಸೂಲ್ ರವರು ತನ್ನದೆಂದು ತಿಳಿಸಿರುತ್ತಾನೆ. 6) ಸ್ಯಾಮಸಂಗ್ ಕಂಪನಿಯ ಕಿಪ್ಯಾಡ್ ಮೊಬೈಲ್ ಇದು ಜಯರಾಮರೆಡ್ಡಿ ತನ್ನದೆಂದು ತಿಳಿಸಿರುತ್ತಾನೆ. 7) ಆಪಲ್ ಕಂಪನಿಯ ಐಫೋನ್-11 ಮೊಬೈಲ್ ಇದು ರಾಕೇಶ್ ತನ್ನದೆಂದು ತಿಳಿಸಿರುತ್ತಾನೆ. 8) ಸ್ಯಾಮಸಂಗ್ ಕಿಪ್ಯಾಡ್ ಮೊಬೈಲ್ ಇದು ಭಾಸ್ಕರ್ ರೆಡ್ಡಿ ತನ್ನದೆಂದು ತಿಳಿಸಿರುತ್ತಾನೆ. 9) ಸ್ಯಾಮಸಂಗ್ ಕಂಪನಿಯ ಗ್ಯಾಲಕ್ಸಿ ನೋಟ್-10 ಮೊಬೈಲ್ ಪೋನ್ ಕಿರಣ್ ತನ್ನದೆಂದು ತಿಳಿಸಿರುತ್ತಾನೆ. 10) ವಿವೋ ಕಂಪನಿಯ 1921 ಅಂಡ್ರಾಯಿಡ್ ಮೊಬೈಲ್ ಇದು ರಮಣ ತನ್ನದೆಂದು ತಿಳಿಸಿರುತ್ತಾನೆ.    ಸದರಿ ಜೂಜಾಟದಲ್ಲಿ ಸಿಕ್ಕಿಬಿದ್ದ ಮೇಲ್ಕಂಡ ಆಸಾಮಿಗಳನ್ನು ಓಡಿ ಹೋದವರು ಮತ್ತು ಜೂಜಾಟವಾಡಿಸುತ್ತಿದ್ದ ಆಯೋಜಕರ ಬಗ್ಗೆ ಕೇಳಲಾಗಿ 11) ಮಂಜು ಬಿನ್ ಗಂಗಣ್ಣ,  32 ವರ್ಷ, ಪಟ್ರ ಜನಾಂಗ ಬಸ್ ಚಾಲಕ, ಬಿ.ಕೊತ್ತಕೋಟ, ತಂಬಳ್ಳಪಲ್ಲಿ ತಾಲ್ಲೂಕು, ಚಿತ್ತೂರು ಜಿಲ್ಲೆ, ಪೋನ್ ನಂ 8978714976 12) ಆಮೀರ್ 40 ವರ್ಷ, ಮುಸ್ಲೀಂ ಜನಾಂಗ, ಜಿರಾಯ್ತಿ, ವಾಸ ಬೆಸ್ಕಾಂ ಕಛೇರಿಯ ಹಿಂಭಾಗ,  ಚೇಳೂರು ಬಾಗೇಪಲ್ಲಿ ತಾಲ್ಲೂಕು, ಪೋನ್ ನಂ 9901032864 13) ಸಂಗಪ್ಪ ಸುಮಾರು 52 ವರ್ಷ, ವ್ಯಾಪಾರ, ವಾಸ ಸದುಂ ಗ್ರಾಮ, ಪಿ.ಟಿ.ಎಂ. ಮಂಡಲಂ, ತಂಬಳ್ಳಪಲ್ಲಿ ತಾಲ್ಲೂಕು, ಚಿತ್ತೂರು ಜಿಲ್ಲೆ ಮೊಬೈಲ್ ನಂ 9606624076 ಎಂತ ತಿಳಿಸಿದ್ದು ಸಂಗಪ್ಪ ರವರು ಸದರಿ ಜೂಜಾಟವನ್ನು ಆಡಲು ನಮ್ಮಗಳನ್ನು ಬರಮಾಡಿಕೊಂಡು ಆಯೋಜಕರಾಗಿರುತ್ತಾರೆಂತ ತಿಳಿಸಿರುತ್ತಾರೆ. ಸದರಿ ಜೂಜಾಟದ ಸ್ಥಳದಲ್ಲಿ ವಶಕ್ಕೆ ಪಡೆದುಕೊಂಡ ಮೇಲ್ಕಂಡ 10 ಜನ ಆರೋಪಿತರನ್ನು ಮತ್ತು ಜೂಜಾಟ ಸ್ಥಳದಲ್ಲಿ ಕೃತ್ಯಕ್ಕೆ ಉಪಯೋಗಿಸಿದ್ದ 10 ವಿವಿಧ ಕಂಪನಿಯ ಮೊಬೈಲ್ ಗಳನ್ನು ಜೂಜಾಟದಲ್ಲಿ ಪಣಕ್ಕೆ ಹಾಕಿದ್ದ ಒಟ್ಟು 1,01,500/- (ಒಂದು ಲಕ್ಷ ಸಾವಿರದ ಐನೂರು) ನಗದು ಹಣ, ಒಂದು  ಪ್ಲಾಸ್ಟಿಕ್ ಟಾಪರ್ಾಲ್ ನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿದ್ದು ಸದರಿ ಆರೋಪಿತರನ್ನು ಮತ್ತು ಮಾಲುಗಳನ್ನು, ಪಂಚನಾಮೆಯನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿ ನೀಡಿದ್ದರ ವರದಿಯ ಮೇರೆಗೆ ಠಾಣಾ ಎನ್.ಸಿ.ಆರ್ ನಂಬರ್:33/2021 ರೀತ್ಯ ಪ್ರಕರಣ ದಾಖಲಿಸಿಕೊಂಡು ಘನ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿಯನ್ನು ಪಡೆದು ಠಾಣಾ ಮೊಸಂ:26/2021 ಕಲಂ 87 ಕೆಪಿ ಆಕ್ಟ್ ರೀತ್ಯ ಪ್ರಕರಣ ದಾಖಲಸಿರುತ್ತೆ.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 63/2021 ಕಲಂ. 279 ಐ.ಪಿ.ಸಿ :-

     ದಿನಾಂಕ: 17/04/2021 ರಂದು ಬೆಳೀಗ್ಗೆ 11-15 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಎನ್. ನಾಗರಾಜ್ ಬಿನ್ ನಾರಾಯಣಪ್ಪ, 32 ವರ್ಷ, ವಕ್ಕಲಿಗರು, ಚಾಲಕ ವೃತ್ತಿ, ಮೆಣಸಿಗನಹಳ್ಳಿ ಗ್ರಾಮ, ಆನೇಕಲ್ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ಅಣ್ಣ ಪ್ರಭಾಕರನ್ ರವರು ಈಗ್ಗೆ 3 ವರ್ಷಗಳ ಹಿಂದೆ ಬಾಡಿಗೆಗೆ ಬಿಡಲು KA-41, A-5045 ಟೆಂಪೋ ಟ್ರಾವಲರ್ ವಾಹನವನ್ನು ಕೊಂಡುಕೊಂಡಿದ್ದರು. ಆ ವಾಹನದ ಮೇಲ್ವಿಚಾರಣೆಯನ್ನು ನಾನೇ ನೋಡಿಕೊಳ್ಳುತ್ತಿರುತ್ತೇನೆ. ನಮ್ಮ ವಾಹನಕ್ಕೆ ಮದನ್ ಕುಮಾರ್ ಬಿನ್ ನಾಗರಾಜು, 26 ವರ್ಷ, ತೊಗಟ ಜನಾಂಗ, ಮನೆ ನಂ-78, ವಾರ್ಡ್ ನಂ-20, ಬಹದ್ದೂರು ಪುರ, ಆನೇಕಲ್ ತಾಲ್ಲೂಕು ರವರನ್ನು ಚಾಲಕನನ್ನಾಗಿ ನೇಮಿಸಿಕೊಂಡಿದ್ದೆನು. ನನಗೆ ಪರಿಚಯವಿರುವ ಚೇತನ್ ಬಿನ್ ರವಿ, ಕನಮನಪಲ್ಲಿ ಗ್ರಾಮ, ಡೆಂಕಣಿಕೋಟೆ ತಾಲ್ಲೂಕು ಮತ್ತು ಕೃಷ್ಣ ಬಿನ್ ಸುಬ್ಬಣ್ಣ, ಕರ್ಪೂರ ಗ್ರಾಮ, ಆನೇಕಲ್ ತಾಲ್ಲೂಕುರವರು ತಮ್ಮ ಕುಟುಂಬದೊಂದಿಗೆ ಆಂದ್ರಪ್ರದೇಶದ ನಂದಾವರಂನಲ್ಲಿರುವ ಚೌಡೇಶ್ವರಿ ದೇವಸ್ಥಾನಕ್ಕೆ ಹೋಗಲು ಬಾಡಿಗೆಗೆ ಮಾತನಾಡಿದ್ದರು. ಅದರಂತೆ ದಿನಾಂಕ:16/04/2021 ರಂದು ರಾತ್ರಿ ಸುಮಾರು 8-00 ಗಂಟೆಗೆ ಚೇತನ್ ಮತ್ತು ಕೃಷ್ಣ ರವರ ಕುಟುಂಬದವರನ್ನು ನಮ್ಮ ಟೆಂಪೋ ಟ್ರಾವಲರ್ ನಲ್ಲಿ ಕಳುಹಿಸಿಕೊಟ್ಟಿದ್ದೆನು. ನಂತರ ನಮ್ಮ ವಾಹನದ ಚಾಲಕ ಮದನ್ ರವರು ಆನೇಕಲ್ ಬಿಟ್ಟು ದೇವನಹಳ್ಳಿ, ಚಿಕ್ಕಬಳ್ಳಾಪುರ ಮಾರ್ಗವಾಗಿ ಎನ್.ಹೆಚ್-44 ರಸ್ತೆಯಲ್ಲಿ ಹೋಗುತ್ತಿದ್ದಾಗ ರಾತ್ರಿ ಸುಮಾರು 11-45 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ದೊಡ್ಡಪೈಲಗುರ್ಕಿ ಗ್ರಾಮದ ಬಳಿ ಟೆಂಪೋ ಟ್ರಾವಲರ್ ನ್ನು ಚಾಲಕ ಮದನ್ ರವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ಮದ್ಯದ ಡಿವೈಡರ್ ಗೆ ಡಿಕ್ಕಿ ಹೊಡೆಸಿದ ಪರಿಣಾಮ ಟೆಂಪೋ ಟ್ರಾವಲರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಉರುಳಿ ಬಿದ್ದಿದ್ದು, ವಾಹನದ ಬಲಭಾಗ ಜಖಂಗೊಂಡಿದ್ದು, ಟೆಂಪೋ ದಲ್ಲಿದ್ದವರಿಗೆ ಯಾರಿಗೂ ಯಾವುದೇ ಗಾಯಗಳಾಗಿರುವುದಿಲ್ಲ ವೆಂದು ವಿಚಾರ ತಿಳಿದು ನಾನು ನಮ್ಮ ಗ್ರಾಮದಿಂದ ಅಪಘಾತ ಸ್ಥಳಕ್ಕೆ ಬಂದಿದ್ದು, ಅಪಘಾತ ನಡೆದಿರುವುದು ನಿಜವಾಗಿರುತ್ತೆ. ನಮ್ಮ ಅಣ್ಣನ ಬಾಬತ್ತು KA-41, A-5045 ಟೆಂಪೋ ಟ್ರಾವಲರ್ ವಾಹನವನ್ನು ಅಪಘಾತದಿಂದ ಜಖಂಮಾಡಿರುವ ಚಾಲಕ ಮದನ್ ಕುಮಾರ್ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನನ್ವಯ ಪ್ರ.ವ.ವರದಿ.

 

3. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 25/2021 ಕಲಂ. 279,336 ಐ.ಪಿ.ಸಿ & 177,181,184,196 ಐ.ಎಂ.ವಿ ಆಕ್ಟ್ & 230(A) KARNATAKA MOTOR VEHICLE RULE :-

     ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ವೇಣುಗೋಪಾಲ ಎಂ ಎ.ಎಸ್.ಐ ಸಂಚಾರಿ ಪೊಲೀಸ್ ಠಾಣೆ ಆದ ನಾನು ದಿನಾಂಕ:16/04/2021 ರಂದು ಸಂಜೆ 7-00 ಗಂಟೆಯಲ್ಲಿ ಸಮಯದಲ್ಲಿ ನಗರದ ವಕ್ಕಲಿಗರ ಕಲ್ಯಾಣ ಮಂಟಪದ ಮುಂಭಾಗದ ರಸ್ತೆಯ ಬಳಿ ನಾನು ಮತ್ತು ಸಿಪಿಸಿ-22 ಶ್ರೀನಿವಾಸ ರವರೊಂದಿಗೆ ವಾಹನಗಳ ತಪಾಸಣೆ ಕಾರ್ಯ ಮಾಡುತ್ತಿರುವಾಗ ಅದೇ ಸಮಯಕ್ಕೆ ಜೂನಿಯರ್ ಕಾಲೇಜು ಕಡೆಯಿಂದ  ಬಂದ ದ್ವಿಚಕ್ರವಾಹನ ಸವಾರ ಹೆಲ್ಮೆಟ್ ಧರಿಸದೇ, ನೊಂದಣಿ ಸಂಖ್ಯೆ ಇಲ್ಲದ,  ದ್ವಿಚಕ್ರವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಸಾರ್ವಜನಿಕರ ಪ್ರಾಣಕ್ಕೆ ಹಾನಿ ಉಂಟಾಗುವ ರೀತಿಯಲ್ಲಿ ಬರುತ್ತಿದ್ದ ದ್ವಿಚಕ್ರವಾಹನವನ್ನು ತಡೆದು ಪರಿಶೀಲಿಸಲಾಗಿ ಕೇಳಲಾಗಿ ಸದರಿ ವಾಹನದ ನೊಂದಣಿ ಸಂಖ್ಯೆ, ಕೆಎ-40-ಎಚ್-1857 ಸುಜುಕಿ ಫಿಯಾರೋ ದ್ವಿಚಕ್ರವಾಹನ ಎಂದು ತಿಳಿಸಿರುತ್ತಾನೆ, ದ್ವಿಚಕ್ರವಾಹನದ ಸವಾರನ ಹೆಸರು ಮತ್ತು ವಿಳಾಸ ಕೇಳಲಾಗಿ ಅಭಿಷೇಕ್ ಎನ್   ಬಿನ್ ನಾರಾಯಣಸ್ವಾಮಿ ,20 ವರ್ಷ, ನಾಯಕ ಜನಾಂಗ, ಡ್ರೈವರ್, ವಾರ್ಡ್ ನಂ-21, ಎಚ್ ಎಸ್ ಗಾರ್ಡನ್, ಮಾರುತಿ ಬಡಾವಣೆ ಹತ್ತಿರ, ಚಿಕ್ಕಬಳ್ಳಾಪುರ ಟೌನ್ ಎಂದು ತಿಳಿಸಿದ್ದು, ಸದರಿ ದ್ವಿಚ್ರವಾಹನ ಸವಾರನಿಗೆ ಚಾಲನಾ ಪರವಾನಿಗೆ ಮತ್ತು ವಾಹನದ ದಾಖಲೆಗಳನ್ನು ಕೇಳಲಾಗಿ ನನ್ನ ಬಳಿ ಯಾವುದೇ ದಾಖಲಾತಿಗಳು ಇರುವುದಿಲ್ಲ ಎಂದು ತಿಳಿಸಿದ್ದು, ಸದರಿ ಮೇಲ್ಕಂಡ ಕೆಎ-40-ಎಚ್-1857 ರ ಸುಜುಕಿ ಫಿಯಾರೋ ದ್ವಿಚಕ್ರವಾಹನವನ್ನು ಸಂಜೆ 7-30 ಗಂಟೆಗೆ ಸಿಪಿಸಿ-22 ಶ್ರೀನಿವಾಸ ರವರೊಂದಿಗೆ ಠಾಣೆಗೆ ತೆಗೆದುಕೊಂಡು ಬಂದು ಮೇಲ್ಕಂಡಂತೆ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ ದ್ವಿ ಚಕ್ರವಾಹನ ಸವಾರನ ಮೇಲೆ ಠಾಣಾ ಮೊ.ಸಂ: 25/2021 ಕಲಂ: 279, 336 ಐಪಿಸಿ ರೆ/ವಿ 181, 177,184, 196 ಐ.ಎಂ.ವಿ ಆಕ್ಟ್ ರೆ/ವಿ 230 ಕೆ.ಎಂ.ವಿ ರೂಲ್ ರೀತ್ಯಾ ಸ್ವತಃ ಪ್ರಕರಣ ದಾಖಲಿಸಿರುತ್ತೆ.

 

4. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 87/2021 ಕಲಂ. 279,304(A) ಐ.ಪಿ.ಸಿ:-

     ದಿನಾಂಕ:17/04/2021 ರಂದು ಬೆಳಿಗ್ಗೆ 6-45 ಗಂಟೆಯಲ್ಲಿ  ಆಂದ್ರಪ್ರದೇಶದ, ಪೆನುಗೊಂಡ ತಾಲ್ಲೂಕು, ಪರಗಿ ಗ್ರಾಮದ ವಾಸಿಯಾದ ಶ್ರೀಮತಿ ದಿವ್ಯಾ ಕೋಂ ಆನಂದಕುಮಾರ್, 24 ವರ್ಷ, ನಾಯಕ ಜನಾಂಗ ಇವರು ಠಾಣೆಗೆ ಬಂದು ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ,  ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ನನ್ನ ತವರೂರು ಗೌರೀಬಿದನೂರು ತಾಲ್ಲೂಕು, ಗಂಗಸಂದ್ರ ಗ್ರಾಮವಾಗಿರುತ್ತೆ.   ನನಗೆ  ಈಗ್ಗೆ 6 ವರ್ಷಗಳ ಹಿಂದೆ ಆಂದ್ರಪ್ರದೇಶದ, ಪೆನುಗೊಂಡ ತಾಲ್ಲೂಕು,  ಪರಗಿ ಗ್ರಾಮದ ಆನಂದಕುಮಾರ್ ಬಿನ್ ಕೆ.ಕೃಷ್ಣಪ್ಪ ಎಂಬುವವರೊಂದಿಗೆ ಮಧುವೆಯಾಗಿದ್ದು, ನಮಗೆ ಮಕ್ಕಳಿ ಇರುವುದಿಲ್ಲ.   ನನ್ನ ಗಂಡ ಆನಂದಕುಮಾರ್ ರವರಿಗೆ ಈಗ ಸುಮಾರು 30 ವರ್ಷ ವಯಸ್ಸಾಗಿರುತ್ತೆ.  ನನ್ನ ಗಂಡ ಮನೆಗಳಿಗೆ ಟೈಲ್ಸ್ ಹಾಕುವ  ಕೆಲಸ ಮಾಡುತ್ತಿದ್ದರು.   ಪ್ರತೀ ದಿನ ಬೆಳಿಗ್ಗೆ 6-00 ಗಂಟೆಗೆ ಒಪ್ಪಂದ ಮಾಡಿಕೊಂಡಿರುವ ಮನೆಗಳಿಗೆ ಹೋಗಿ ಟೈಲ್ ಹಾಕಿ ರಾತ್ರಿ 9-00 ಗಂಟೆಗೆ ವಾಪಸ್ಸು ಬರುತ್ತಿದ್ದರು.   ಕಳೆದ ಒಂದು ವಾರದಿಂದ ದೊಡ್ಡಬಳ್ಳಾಪುರದಲ್ಲಿ ಕೆಲಸ ಮಾಡುತ್ತಿದ್ದರು.   ದಿನಾಂಕ;16/04/2021 ರಂದು ಬೆಳಿಗ್ಗೆ 6-00 ಗಂಟೆಗೆ  ನನ್ನ ಗಂಡ KA.05.HU.7997 PASSION PRO ದ್ವಿಚಕ್ರ ವಾಹನದಲ್ಲಿ ದೊಡ್ಡಬಳ್ಳಪುರಕ್ಕೆ  ಹೋಗಿದ್ದರು.   ದಿನಾಂಕ:16/04/2021 ರಂದು  ರಾತ್ರಿ  ನನ್ನ ಗಂಡನಿಗೆ ಗೌರೀಬಿದನೂರು ತಾಲ್ಲೂಕು, ಗೌರೀಬಿದನೂರು ಹಿಂದೂಪುರ ರಸ್ತೆ, ಕುಡುಮಲಕುಂಟೆ ಕ್ರಾಸ್ ಬಳಿ  ತನ್ನ ದ್ವಿಚಕ್ರ ವಾಹನದಿಂದ ಬಿದ್ದು, ಸ್ವತಃ ಗಾಯಗೊಂಡಿರುವುದಾಗಿ, ಇವರನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಯಿತು.  ಈ ದಿನ ದಿನಾಂಕ:17/04/2021 ರಂದು ಬೆಳಿಗ್ಗೆ 7-00 ಗಂಟೆಗೆ ಬಂದು ನೋಡಲಾಗಿ, ನನ್ನ ಗಂಡನಿಗೆ ತಲೆ ಮುಖಕ್ಕೆ ಬಲಕೈಗೆ ರಕ್ತಗಾಯಗಳಾಗಿ ಮೃತಪಟ್ಟಿದ್ದರು. ನಂತರ ನಾವು ಕುಡುಮಲಕುಂಟೆ ಕ್ರಾಸ್ ಬಳಿ ಹೋಗಿ ವಿಚಾರಿಸಲಾಗಿ, ಅಲ್ಲಿನ ಜನರು  ನನ್ನ ಗಂಡ  ದಿನಾಂಕ:16/04/2021 ರಂದು ಸಂಜೆ ಸುಮಾರು 8-00 ಗಂಟೆಯಲ್ಲಿ   ನನ್ನ  ಗಂಡ KA.05.HU.7997 PASSION PRO ದ್ವಿಚಕ್ರ ವಾಹನದಲ್ಲಿ ಗೌರೀಬಿದನೂರು ಕಡೆಯಿಂದ ಹಿಂದೂಪುರ ಕಡೆಗೆ ಬರುತ್ತಿದ್ದಾಗ  ಕುಡುಮಲಕುಂಟೆ ಕ್ರಾಸ್ ಬಳಿ ಶನಿಮಹಾತ್ಮ ದೇವಸ್ಥಾನದ ಸಮೀಪ ತನ್ನ ದ್ವಿಚಕ್ರವಾಹನವನ್ನು ವೇಗವಾಗಿ ಅಜಾಗರುಕತೆಯಿಂದ ಚಾಲನೆ ಮಾಡುತ್ತಿದ್ದರಿಂದ ಮುಂದೆ ಹೋಗುತ್ತಿದ್ದ ಬಂಡಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ, ಅಯತಪ್ಪಿ ದ್ವಿಚಕ್ರ ವಾಹನದಿಂದ ಕೆಳಕ್ಕೆ ಟಾರು ರಸ್ತೆಯ ಮೇಲೆ  ಬಿದ್ದು, ತೀವ್ರವಾಗಿ ಗಾಯಗೊಂಡಿದ್ದು, ಇವರನ್ನು 108 ಆಂಬುಲೆನ್ಸ್ ನಲ್ಲಿ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು,  ನಾವು ಬರುವಷ್ಟರಲ್ಲಿ ಗುಣ ಮುಖನಾಗದೇ ಮೃತಪಟ್ಟಿರುವುದಾಗಿ ತಿಳಿದು ಬಂದಿರುತ್ತೆ.ದಿನಾಂಕ:16/04/2021` ರಂದು  ನನ್ನ ಗಂಡ ಆನಂದಕುಮಾರ್  ಬಿನ್  ಲೇಟ್ ಕೆ.ಕೃಷ್ಣಪ್ಪ ರವರು  ಸಂಜೆ ಕೆಲಸ ಮುಗಿಸಿಕೊಂಡು, ಗೌರೀಬಿದನೂರು ಹಿಂದೂಪುರ ಮಾರ್ಗವಾಗಿ ಪರಗಿಗೆ ಬರಲು, ಗೌರೀಬಿದನೂರು ಹಿಂದೂಪುರ ರಸ್ತೆ, ಕುಡುಮಲಕುಂಟೆ ಕ್ರಾಸ್ ಬಳಿ, ತನ್ನ KA.05.HU.7997 PASSION PRO ದ್ವಿಚಕ್ರ ವಾಹನವನ್ನು ಅತಿವೇಗ ಹಾಗು ಅಜಾಗರೂಕತೆ ಯಿಂದ ಚಾಲನೆ ಮಾಡಿಕೊಂಡು ಬಂದು ಮುಂದೆ ಹೋಗುತ್ತಿದ್ದ ಬಂಡಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ, ಅಯತಪ್ಪಿ ದ್ವಿಚಕ್ರ ವಾಹನದಿಂದ ಕೆಳಕ್ಕೆ ಟಾರು ರಸ್ತೆಯ ಮೇಲೆ  ಬಿದ್ದು, ತೀವ್ರವಾಗಿ ಗಾಯಗೊಂಡು, ಮೃತಪಟ್ಟಿರುತ್ತಾರೆ.  ನನ್ನ ಗಂಡನ ಸಾವಿನ ಬಗ್ಗೆ ಸರಿಯಾದ ಕಾರಣವನ್ನು ತಿಳಿದುಕೊಂಡು ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿರುವುದಾಗಿ, ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ಇದ್ದ ದೂರಿನ ಮೇರೆಗೆ ಠಾಣೆಯಲ್ಲಿ ಮೊ.ಸಂ.87/2021 ಕಲಂ: 279,304 (ಎ) ಐಪಿಸಿ ರೀತ್ಯಾ ಕೇಸು ದಾಖಲು ಮಾಡಿಕೊಂಡಿರುತ್ತೆ.

 

5. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 69/2021 ಕಲಂ. 279,304(A) ಐ.ಪಿ.ಸಿ:-

     ದಿನಾಂಕ:17/04/2021 ರಂದು ಬೆಳಿಗ್ಗೆ 9-45 ಗಂಟೆಯಲ್ಲಿ ಪಿರ್ಯಾಧಿ ನರಸಿಂಹಪ್ಪ ಬಿನ್ ಲೇಟ್ ಗಂಗಪ್ಪ 38 ವರ್ಷ, ಆದಿ ದ್ರಾವಿಡ ಜನಾಂಗ, ಲಾರಿ ಚಾಲಕ ವಾಸ:ಮಂಡಿಕಲ್ಲು ಗ್ರಾಮ (ಮಣಿಪುರ) ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ತಂದೆ ತಾಯಿರವರಿಗೆ 1 ನೇ ತಾನು 2 ನೇ ಆನಂದ, 3 ನೇ ಮುರಳಿ ಎಂಬ ಮಕ್ಕಳಿದ್ದು. ದಿನಾಂಕ: 16/04/2021 ರಂದು ತಾನು ಲಾರಿಗೆ ಚಾಲಕನಾಗಿ ಕೆಲಸಕ್ಕೆ ಹೋಗಿ ಮೈಸೂರಿನಲ್ಲಿದ್ದಾಗ ರಾತ್ರಿ 8-10 ಗಂಟೆ ಸಮಯದಲ್ಲಿ ತಮ್ಮ ಚಿಕ್ಕಪ್ಪನ ಮಗನಾದ ಶ್ರೀನಿವಾಸ ಬಿನ್ ಲೇಟ್ ನರಸಿಂಹಪ್ಪ 35 ವರ್ಷ ರವರು ತನಗೆ ಕರೆ ಮಾಡಿ ತಿಳಿಸಿದ್ದೇನೆಂದರೆ ತಮ್ಮ ತಾಯಿ ನಾರಾಯಣಮ್ಮ ರವರು ಮಂಡಿಕಲ್ಲು ನ ಸಂತೆಗೆ ಹೋಗಿ ತರಕಾರಿ ತೆಗೆದುಕೊಂಡು ಮನೆಗೆ ಬರಲು ದಿನಾಂಕ:16/04/2021 ರಂದು ಸಂಜೆ ಸುಮಾರು 7-30 ಗಂಟೆಯಲ್ಲಿ ಮಂಡಿಕಲ್ಲುನಿಂದ  ಪೆರೇಸಂದ್ರ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ನಾಡ ಕಛೇರಿಯ ಬಳಿ ನಡೆದುಕೊಂಡು ಬರುತ್ತಿರುವಾಗ ಹಿಂದೆಯಿಂದ ಮಂಡಿಕಲ್ಲು ಕಡೆಯಿಂದ ಕೆ,ಎ 40 ಎಕ್ಸ-4091 ನೊಂದಣಿ ಸಂಖ್ಯೆಯ ದ್ವಿ ಚಕ್ರವಾಹನದ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮುಂದೆ ಹೋಗುತ್ತಿದ್ದ ತಮ್ಮ ತಾಯಿ ನಾರಾಯಣಮ್ಮ ರವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ತಮ್ಮ ತಾಯಿ ರಸ್ತೆಯಲ್ಲಿ ಬಿದ್ದು ತಲೆಗೆ ರಕ್ತಗಾಯವಾಗಿ ಮೂಗಿನಲ್ಲಿ ಮತ್ತು ಕಿವಿಯಲ್ಲಿ ರಕ್ತ ಬಂದಿದ್ದು ತಮ್ಮ ತಾಯಿಯನ್ನು ಚಿಕಿತ್ಸೆಗಾಗಿ 108 ಅಂಬುಲೆನ್ಸ ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ರಾತ್ರಿ 8-00 ಗಂಟೆಯಲ್ಲಿ ಮಾರ್ಗಮದ್ಯೆ ತೀರಿಕೊಂಡಿದ್ದು ಮೃತ ದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದರು ಅದರಂತೆ ತಾನು ಈ ದಿನ ಬೆಳಿಗ್ಗೆ  07-30 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಬಂದು ನೋಡಲಾಗಿ ತಮ್ಮ ತಾಯಿಗೆ ಅಪಘಾತವಾಗಿರುವ ವಿಚಾರ ನಿಜವಾಗಿದ್ದು ತಮ್ಮ ತಾಯಿ ನಾರಾಯಣಮ್ಮ ರವರು ಅಪಘಾತದಲ್ಲಿ ಆದ ಗಾಯಗಳ ದೆಸೆಯಿಂದ ಮೃತಪಟ್ಟಿದ್ದು ತಮ್ಮ ತಾಯಿ ನಾರಾಯಣಮ್ಮ ರವರಿಗೆ ಅಪಘಾತ ಪಡಿಸಿದ ಕೆ,ಎ 40 ಎಕ್ಸ-4091 ನೊಂದಣಿ ಸಂಖ್ಯೆಯ ದ್ವಿ ಚಕ್ರವಾಹನದ ಸವಾರನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರುತ್ತೇನೆ.

 

6. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 72/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:17/04/2021 ರಂದು ಠಾಣಾ ಹೆಚ್.ಸಿ.219 ಶ್ರೀನಿವಾಸಮೂರ್ತಿ ರವರು ಮಾಲು ಆರೋಪಿ ಮತ್ತು ಮಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 17/04/2021 ರಂದು  ಬೆಳಿಗ್ಗೆ 09-00 ಗಂಟೆಯ ಸಮಯದಲ್ಲಿ ನಾನು ಪಿ.ಸಿ-537 ಆನಂದ್ ಕುಮಾರ್ ರವರು ಮಿಣಕನಗುರ್ಕಿ ಗ್ರಾಮದ ಕಡೆ ಗಸ್ತು ಮಾಡುತ್ತಿದ್ದಾಗ,ನನಗೆ ಬಂದ ಮಾಹಿತಿ ಏನೇಂದರೆ  ಪಿಡಿಚಲಹಳ್ಳಿಗ್ರಾಮದ ಬಾಲಕೃಷ್ಣ ಬಿನ್ ಉಗ್ರನರಸಿಂಹಪ್ಪ, ಎಂಬುವರು ಪಿಡಿಚಲಹಳ್ಳಿ ಗ್ರಾಮದ ಅವರ ಚಿಲ್ಲರೆ ಅಂಗಡಿಯ ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮತ್ತು ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಜೊತೆಯಲ್ಲಿದ್ದ ಪಿ.ಸಿ. 537 ಆನಂದ್ ಕುಮಾರ್ ರವರು ಹಾಗೂ ಪಂಚರೊಂದಿಗೆ  ಬೆಳಿಗ್ಗೆ 09-30 ಗಂಟೆಯ ಸಮಯಕ್ಕೆ ಪಿಡಿಚಲಹಳ್ಳಿ ಗ್ರಾಮದ ಬಾಲಕೃಷ್ಣ ಬಿನ್ ಉಗ್ರನರಸಿಂಹಪ್ಪ ರವರ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ಬಾಲಕೃಷ್ಣ ಬಿನ್ ಉಗ್ರನರಸಿಂಹಪ್ಪ, 42 ವರ್ಷ, ಗೊಲ್ಲರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಪಿಡಿಚಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 15 ಮಧ್ಯ ತುಂಬಿರುವ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಮತ್ತು ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ  ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ ಖಾಲಿ ಬಿದ್ದಿದ್ದ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ 03 ಟೆಟ್ರಾ ಪ್ಯಾಕೆಟ್ ಗಳು 4 ಪ್ಲಾಸ್ಟಿಕ್  ಲೋಟಗಳನ್ನು ಮತ್ತು ಒಂದು ಪ್ಲಾಸ್ಟಿಕ್ ಚೀಲವನ್ನು  ಪಂಚನಾಮೆಯ ಮೂಲಕ  ಬೆಳಿಗ್ಗೆ 10-00 ಗಂಟೆಯಿಂದ 11-00 ಗಂಟೆಯ ಸಮಯದವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 540/-ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ಬಾಲಕೃಷ್ಣ ಬಿನ್ ಉಗ್ರನರಸಿಂಹಪ್ಪರವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಇವನ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ಕೊಟ್ಟ ದೂರು.

 

7.  ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 73/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:17/04/2021 ರಂದು ಹೆಚ್.ಸಿ.219 ರವರು ಮಾಲು, ಆರೋಪಿ ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 17/04/2021 ರಂದು  ಬೆಳಿಗ್ಗೆ 11-30 ಗಂಟೆಯ ಸಮಯದಲ್ಲಿ ನಾನು ಪಿ.ಸಿ-537 ಆನಂದ್ ಕುಮಾರ್ ರವರು ಜರಬಂಡನಹಳ್ಳಿ ಗ್ರಾಮದ ಕಡೆ ಗಸ್ತು ಮಾಡುತ್ತಿದ್ದಾಗ, ನನಗೆ ಬಂದ ಮಾಹಿತಿ ಏನೇಂದರೆ  ಪಿಡಿಚಲಹಳ್ಳಿಗ್ರಾಮದ ಸುರೇಶ ಬಿನ್ ಚಿಕ್ಕಪ್ಪಯ್ಯ ಎಂಬುವರು ಪಿಡಿಚಲಹಳ್ಳಿ ಗ್ರಾಮದ ಅವರ ಚಿಲ್ಲರೆ ಅಂಗಡಿಯ ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮತ್ತು ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಜೊತೆಯಲ್ಲಿದ್ದ ಪಿ.ಸಿ. 537 ಆನಂದ್ ಕುಮಾರ್ ರವರು ಹಾಗೂ ಪಂಚರೊಂದಿಗೆ  ಬೆಳಿಗ್ಗೆ 11-45 ಗಂಟೆಯ ಸಮಯಕ್ಕೆ ಸುರೇಶ ಬಿನ್ ಚಿಕ್ಕಪ್ಪಯ್ಯರವರ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಹಾಗೂ ಮಧ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟ ಮಧ್ಯ ಮಾರಾಟ ಮಾಡುತ್ತಿದ್ದವನು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಧ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟು ಮಧ್ಯ ಮಾರಾಟ ಮಾಡುತ್ತಿದ್ದವನ ಹೆಸರು ಮತ್ತು ವಿಳಾಸ ಕೇಳಲಾಗಿ ಸುರೇಶ ಬಿನ್ ಚಿಕ್ಕಪ್ಪಯ್ಯ, 35 ವರ್ಷ, ಆದಿಕರ್ನಾಟಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಪಿಡಿಚಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 18 ಮಧ್ಯ ತುಂಬಿರುವ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು ಇರುತ್ತದೆ ಹಾಗೂ ಸ್ಥಳದಲ್ಲಿ ಸುತ್ತಲೂ ಖಾಲಿ ಬಿದ್ದಿದ್ದ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ 02 ಟೆಟ್ರಾ ಪ್ಯಾಕೆಟ್ ಗಳು 2 ಪ್ಲಾಸ್ಟಿಕ್  ಲೋಟಗಳನ್ನು ಮತ್ತು ಒಂದು ಪ್ಲಾಸ್ಟಿಕ್ ಚೀಲವನ್ನು  ಪಂಚನಾಮೆಯ ಮೂಲಕ  ಮದ್ಯಾಹ್ನ 12-00 ಗಂಟೆಯಿಂದ 12-45 ಗಂಟೆಯವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 576/-ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಸ್ಥಳದಿಂದ ಓಡಿಹೋದ ಸುರೇಶ ಬಿನ್ ಚಿಕ್ಕಪ್ಪಯ್ಯ ರವರ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ಕೊಟ್ಟ ದೂರು.

 

8. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 74/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:17/04/2021 ರಂದು ಹೆಚ್.ಸಿ.219 ರವರು ಮಾಲು ಆರೋಪಿ ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 17/04/2021 ರಂದು  ಮದ್ಯಾಹ್ನ 1-30 ಗಂಟೆಯ ಸಮಯದಲ್ಲಿ ನಾನು ಪಿ.ಸಿ.28 ಅಶ್ವತ್ಥನಾಯ್ಕ ರವರು ನಾಮಗೊಂಡ್ಲು ಗ್ರಾಮದ ಕಡೆ ಗಸ್ತು ಮಾಡುತ್ತಿದ್ದಾಗ,ನನಗೆ ಬಂದ ಮಾಹಿತಿ ಏನೇಂದರೆ  ಬಿ.ಬೊಮ್ಮಸಂದ್ರ ಗ್ರಾಮದ ನಾರಾಯಣಸ್ವಾಮಿ ಬಿನ್ ನರಸಿಂಹಮೂರ್ತಿ ಎಂಬುವರು ಬಿ.ಬೊಮ್ಮಸಂದ್ರ ಗ್ರಾಮದ ಅವರ ಚಿಲ್ಲರೆ ಅಂಗಡಿಯ ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮತ್ತು ಮದ್ಯ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಜೊತೆಯಲ್ಲಿದ್ದ ಪಿ.ಸಿ. 28. ಅಶ್ವತ್ಥನಾಯ್ಕರವರು ಹಾಗೂ ಪಂಚರೊಂದಿಗೆ ಮದ್ಯಾಹ್ನ 1-45 ಗಂಟೆಯ ಸಮಯಕ್ಕೆ ಬಿ.ಬೊಮ್ಮಸಂದ್ರ ಗ್ರಾಮದ ನಾರಾಯಣಸ್ವಾಮಿ ಬಿನ್ ನರಸಿಂಹಮೂರ್ತಿ ರವರ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ನಾರಾಯಣಸ್ವಾಮಿ ಬಿನ್ ನರಸಿಂಹಮೂರ್ತಿ, 30 ವರ್ಷ, ಆದಿ ಕರ್ನಾಟಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ ವಾಸ ಬಿ.ಬೊಮ್ಮಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 12 ಮಧ್ಯ ತುಂಬಿರುವ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಮತ್ತು ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ  ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ ಖಾಲಿ ಬಿದ್ದಿದ್ದ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ 02 ಟೆಟ್ರಾ ಪ್ಯಾಕೆಟ್ ಗಳು 2 ಪ್ಲಾಸ್ಟಿಕ್  ಲೋಟಗಳನ್ನು ಮತ್ತು ಒಂದು ಪ್ಲಾಸ್ಟಿಕ್ ಚೀಲವನ್ನು  ಪಂಚನಾಮೆಯ ಮೂಲಕ  ಮದ್ಯಾಹ್ನ 2-00 ಗಂಟೆಯಿಂದ 2-45 ಗಂಟೆಯವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 432/-ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ನಾರಾಯಣಸ್ವಾಮಿ ಬಿನ್ ನರಸಿಂಹಮೂರ್ತಿ ರವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಇವನ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ಕೊಟ್ಟ ದೂರು.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 107/2021 ಕಲಂ. 143,147,148,323,324,504,506,149 ಐ.ಪಿ.ಸಿ:-

     ದಿನಾಂಕ:16.04.2021 ರಂದು ರಾತ್ರಿ 8.30 ಗಂಟೆಗೆ ಪಿರ್ಯಾದಿದಾರರಾದ ಕೆ.ಎಂ ಮುನೇಗೌಡ ಬಿನ್ ಲೇಟ್ ಚನ್ನಪ್ಪ, 55 ವರ್ಷ, ವಕ್ಕಲಿಗರು, ಜಿರಾಯ್ತಿ, ಕಾಚಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತನ್ನ ಹೆಸರಿನಲ್ಲಿ ಕಾಚಹಳ್ಳಿ ಗ್ರಾಮದ ಹೆಚ್.ಎಲ್ ನಂ 122 ರಲ್ಲಿ 19 1/2*60 ಅಡಿಗಳ ನಿವೇಶನ ಇದ್ದು ಸದರಿ ನಿವೇಶನದ ವಿಚಾರದಲ್ಲಿ ತಮಗೂ ಮತ್ತು ತಮ್ಮ ಗ್ರಾಮದ ವಾಸಿಯಾದ ಮುನಿರಾಜು ರವರಿಗೆ ಹಿಂದಿನಿಂದಲೂ ನಿವೇಶನದ ವಿಚಾರದಲ್ಲಿ ತಕರಾರು ಇದ್ದು ಈ ವಿಚಾರದ ಬಗ್ಗೆ ಶಿಡ್ಲಘಟ್ಟ ಸಿಜೆ&ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಓಎಸ್ ನಂ 192/2020 ಹಾಗೂ ಎಂ.ಎ 22/2020 ರಂತೆ ತಾವುಗಳು ದಾವೆಯನ್ನು ಹೂಡಿದ್ದು ಘನ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿರುತ್ತೆ. ಹೀಗಿರುವಲ್ಲಿ ದಿನಾಂಕ:16.04.2021 ರಂದು ಬೆಳಿಗ್ಗೆ 8.15 ಗಂಟೆ ಸಮಯದಲ್ಲಿ ತಾನು ತಮ್ಮ ನಿವೇಶನದಲ್ಲಿ ಧನ ಕರುಗಳನ್ನು ಕಟ್ಟಿ ಹಾಕುತಿದ್ದಾಗ ತಾನು ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿರುವ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಗ್ರಾಮದ ವಾಸಿಗಳಾದ ಮುನಿರಾಜು ಬಿನ್ ಪಿ ನಾರಾಯಣಪ್ಪ, ಚೇತನ್ ಬಿನ್ ಮುನಿರಾಜು, ಸಂಪಂಗಿಮ್ಮ ಕೋಂ ಮುನಿರಾಜು, ವೆಂಕಟಮೂರ್ತಿ ಬಿನ್ ನಾರಾಯಣಪ್ಪ, ದೇವರಾಜು ಬಿನ್ ಮುನಿವೆಂಕಟಪ್ಪ ರವರುಗಳು ಅಕ್ರಮವಾಗಿ ಗುಂಪುಕಟ್ಟಿಕೊಂಡು ಕೈಯಲ್ಲಿ ದೊಣ್ಣೆಯನ್ನು ಇಡಿದುಕೊಂಡು ತಮ್ಮ ನಿವೇಶನದ ಬಳಿ ಬಂದು ಮೇಲ್ಕಂಡವರು ಎನೋ ಲೋಪರ್ ನನ್ನ ಮಗನೇ ನಮ್ಮಗಳ ವಿರುದ್ದ ನ್ಯಾಯಾಲಯದಲ್ಲಿ ದಾವೆ ಹೂಡತೀಯ ಎಂದು ಅವಾಚ್ಯ ಶಬ್ದಗಳಿಂದ ಬೈದು ಮುನಿರಾಜು ರವರು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ತನ್ನ ಬೆನ್ನಿಗೆ ಹೊಡೆದು ನೊವುಂಟು ಮಾಡಿದಾಗ, ದೇವರಾಜು ರವರು ತನ್ನ ಕುತ್ತಿಗೆಯನ್ನು ಹಿಡಿದು ಕೊಂಡು ಕೈಯಿಂದ ಹೊಡೆದು ನೊವುಂಟು ಮಾಡಿ ಜಗಳ ಮಾಡುತಿದ್ದಾಗ ಜಗಳ ಬಿಡಿಸಲು ತನ್ನ ಮಕ್ಕಳಾದ ಚೇತನ್ ಮತ್ತು ಶ್ರೀನಾಥ ರವರುಗಳು ಅಡ್ಡ ಬಂದಿದ್ದು ಅಡ್ಡ ಬಂದ ತನ್ನ ಮಗ ಚೇತನ್ ರವರಿಗೆ ಚೇತನ್ ಬಿನ್ ಮುನಿರಾಜು ರವರು ಅಲ್ಲಿಯೇ ಇದ್ದ ಒಂದು ಕಲ್ಲನ್ನು ತೆಗೆದುಕೊಂಡು ಚೇತನ್ ರವರ ಎಡಕಣ್ಣಿನ ಮೇಲ್ ಭಾಗದಲ್ಲಿ ಹೊಡೆದು ಗಾಯವನ್ನುಂಟು ಮಾಡಿದ್ದು, ತನ್ನ ಮೊತ್ತೊಬ್ಬ ಮಗನಾದ ಶ್ರೀನಾಥ ರವರನ್ನು ಸಂಪಂಗಿಮ್ಮ ಮತ್ತು ವೆಂಕಟಮೂರ್ತಿ ರವರುಗಳು ಕೈಗಳಿಂದ ಮೈ ಮೇಲೆ ಹೊಡೆದು ಕಾಲುಗಳಿಂದ ಹೊದ್ದು ನೋವುಂಟು ಮಾಡಿ ಜಗಳ ಮಾಡುತಿದ್ದಾಗ ಅಲ್ಲಿಗೆ ಬಂದ ತಮ್ಮ ಗ್ರಾಮದ ವಾಸಿಗಳಾದ ರಾಮಕೃಷ್ಣ ಬಿನ್ ಪಾಪಯ್ಯ, ಮಂಜುನಾಥ ಬಿನ್ ಮುನಿಯಪ್ಪ, ಮುನಿರಾಜು ಬಿನ್ ನಾರಾಯಣಸ್ವಾಮಿ ಹಾಗೂ ಇತರರು ಬಂದು ಜಗಳ ಬಿಡಿಸಿದ್ದು ನಂತರ ಮೇಲ್ಕಂಡವರುಗಳೆಲ್ಲರೂ ಮತ್ತೆ ತಮ್ಮ ತಂಟೆಗೆ ಬಂದರೆ ನಿಮ್ಮಗಳನ್ನು ಜೀವಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ನಂತರ ನಾವುಗಳು ಯಾವುದೋ ವಾಹನದಲ್ಲಿ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸಕರ್ಾರಿ ಅಸ್ಪತ್ರೆಗೆ ಬಂದು ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಸಿಕೊಂಡು ಬಂದು ದೂರು ನೀಡುತಿದ್ದು ಮೇಲ್ಕಂಡವರುಗಳ ಮೇಲೆ ಕಾನೂನು ರೀತಿಯ ಕ್ರಮಕೈಗೊಳ್ಳಲು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

10. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 108/2021 ಕಲಂ. 323,324,504,506,34 ಐ.ಪಿ.ಸಿ:-

     ದಿನಾಂಕ:-16/04/2021 ರಂದು ರಾತ್ರಿ 9-15 ಗಂಟೆಗೆ ಪಿರ್ಯಾದಿದಾರರಾದ ಕೆ.ಎನ್ ಮುನಿರಾಜಣ್ಣ ಬಿನ್ ಲೇಟ್ ಪಿ.ನಾರಾಯಣಪ್ಪ, 57 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ಕಾಚಹಳ್ಳಿ ಗ್ರಾಮ, ಜಂಗಮಕೋಟೆ ಹೋಬಳಿ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಇದೇ ಶಿಡ್ಲಘಟ್ಟ ತಾಲ್ಲೂಕು  ಜಂಗಮಕೋಟೆ ಹೋಬಳಿ ಕಾಚಹಳ್ಳಿ ಗ್ರಾಮದ ಗ್ರಾಮ ಠಾಣಾ ನಂಬರ್ 66 ರಲ್ಲಿ ಪೂರ್ವ-ಪಶ್ಚಿಮ 40 ಅಡಿ, ಉತ್ತರ-ದಕ್ಷಿಣ 46 ಅಡಿಗಳ ನಿವೇಶನ ಇದ್ದು, ಈ ನಿವೇಶನದ ಪಕ್ಕ ರಸ್ತೆ ಇದ್ದು, ಈ ರಸ್ತೆಯ ಪಕ್ಕದಲ್ಲಿ ಪೂರ್ವದ ದಿಕ್ಕಿಗೆ ಗ್ರಾಮಠಾಣಾ ನಂಬರ್ 66 ಕ್ಕೆ ಸಂಬಂಧಿಸಿದಂತೆ ಮತ್ತೋಂದು ಪೂರ್ವ-ಪಶ್ಚಿಮ 14 ಅಡಿ, ಉತ್ತರ-ದಕ್ಷಿಣ 24 ಅಡಿಗಳ ನಿವೇಶನವು ನನ್ನ ತಂದೆಯವರಾದ ಲೇಟ್ ನಾರಾಯಣಪ್ಪ ರವರ ಹೆಸರಿನಲ್ಲಿದ್ದು ಸದರಿ ನಿವೇಶನದಲ್ಲಿ ತಾವು ತನ್ನ ತಾತನ ಕಾಲದಿಂದಲೂ ಸ್ವಾಧೀನ ಅನುಭೋಗದಲ್ಲಿದ್ದು ಮೇಲ್ಕಂಡ ಪೂರ್ವ-ಪಶ್ಚಿಮ 14 ಅಡಿ, ಉತ್ತರ-ದಕ್ಷಿಣ 24 ಅಡಿಗಳ ನಿವೇಶನದಲ್ಲಿ ತಾನು ಈಗ್ಗೆ ಸುಮಾರು 35 ವರ್ಷಗಳ ಹಿಂದೆ ಧನಗಳ ಶೆಡ್ ಅನ್ನು ನಿರ್ಮಾಣ ಮಾಡಿರುತ್ತೇನೆ. ಹೀಗಿರುವಾಗ ತಮ್ಮ ಹಸುಗಳ ಶೆಡ್ ಪಕ್ಕದಲ್ಲಿ ತಮ್ಮ ಗ್ರಾಮದ ವಾಸಿ ಮುನೇಗೌಡ ರವರಿಗೆ ಸಂಬಂಧಿಸಿದ 76 ಕ್ಕೆ ಸಂಬಂಧಿಸಿದ ಜಾಗ ಇದ್ದು, ಮುನೇಗೌಡ ಹಾಗು ಈತನ ಮನೆಯವರು ತಾನು ಅನುಭೋಗದಲ್ಲಿರುವ ಹಸುಗಳ ಶೆಡ್ ತನ್ನ ಬಾಬತ್ತು ಗ್ರಾಮಠಾಣಾ ಸಂಖ್ಯೆ 122 ಕ್ಕೆ ಸಂಬಂಧಿಸಿರುವುದಾಗಿ ಈಗ್ಗೆ ಹಲವಾರು ಬಾರಿ ತಮ್ಮ ಮೇಲೆ ಗಲಾಟೆಯನ್ನು ಮಾಡಿ, ಮುನೇಗೌಡ ರವರು ಘನ ನ್ಯಾಯಾಲಯದಲ್ಲಿ ಓಎಸ್ ನಂಬರ್ 192/2020 ಮತ್ತು ಎಂಎ ನಂಬರ್-22/2020 ರಂತೆ ಸಿವಿಲ್ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದು, ಸದರಿ ದಾವೆಗಳು ಇನ್ನು ಘನ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿ ಇರುತ್ತದೆ. ಹೀಗಿರುವಾಗ ಈ ದಿನ ದಿನಾಂಕ 16/04/2021 ರಂದು ಬೆಳಿಗ್ಗೆ ಸುಮಾರು 8-30 ಗಂಟೆ ಸಮಯದಲ್ಲಿ ತಾನು ತಮ್ಮ ಹಸುಗಳ ಶೆಡ್ ನಲ್ಲಿ ಹಸುಗಳನ್ನು ಕಟ್ಟಿಹಾಕಿದ್ದು, ಆದ ಮೇಲ್ಕಂಡ ಮುನೇಗೌಡ ಬಿನ್ ಚನ್ನಪ್ಪ, ಈತನ ಮಕ್ಕಳಾದ ಚೇತನ್, ಶ್ರೀನಾಥ ಹಾಗು ಮುನೇಗೌಡ ರವರ ಹೆಂಡತಿ ಮಂಜುಳಮ್ಮ ರವರು ಏಕಾಏಕಿ ಹಸುಗಳನ್ನು ಕಟ್ಟಿಹಾಕಿದ ಸ್ಥಳಕ್ಕೆ ಬಂದು ಹಸುಗಳನ್ನು ಬಿಚ್ಚಲು ಪ್ರಯತ್ನ ಪಟ್ಟಾಗ ತಾನು ಸದರಿಯವರಿಗೆ ಯಾಕೇ ನಮ್ಮ ಹಸುಗಳನ್ನು ಬಿಚ್ಚುತ್ತಿದ್ದೀರಾ ಎಂದು ಕೇಳಿದ್ದಕ್ಕೆ ಮುನೇಗೌಡ ರವರು ತಮ್ಮ ಹಸುಗಳ ಶೆಡ್ ತಮ್ಮ ಗ್ರಾಮಠಾಣಾ ಸಂಖ್ಯೆ 122 ಕ್ಕೆ ಸಂಬಂಧಿಸಿದ್ದಾಗಿದ್ದು ಎಂದು ಹೇಳಿದ್ದು, ಆಗ ತಾನು ನಿಮ್ಮ ಗ್ರಾಮಠಾಣಾ ಸಂಖ್ಯೆ 122 ಎಲ್ಲಿಯೋ ಬರುತ್ತದೆ, ಇದಕ್ಕೂ ಅದಕ್ಕೂ ಸಂಬಂಧ ಇಲ್ಲ ಎಂದು ಹೇಳಿದಾಗ ಮೇಲ್ಕಂಡವರು ತನ್ನ ಮೇಲೆ ಜಗಳ ತೆಗೆದು ಬಾಯಿಗೆ ಬಂದ ಹಾಗೇ ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿ ಗಲಾಟೆಯನ್ನು ಮಾಡುತ್ತಿದ್ದಾಗ ತನ್ನ ಮಗನಾದ ಚೇತನ್ ಬಾಬು ರವರು ಜಗಳವನ್ನು ಬಿಡಿಸಲು ಅಡ್ಡ ಬಂದಾಗ ಆತನಿಗೂ ಸಹ ಮೇಲ್ಕಂಡವರು ಕೈಗಳಿಂದ ಮೈ ಮೇಲೆ ಹೊಡೆದು ಆ ಪೈಕಿ ಮುನೇಗೌಡ ರವರು ಅಲ್ಲಿಯೇ ಬಿದ್ದಿದ್ದ ದೊಣ್ಣೆಯನ್ನು ತೆಗೆದುಕೊಂಡು ತನ್ನ ಮಗನ ಎರಡೂ ಕಾಲುಗಳಿಗೂ ಹೊಡೆದು ರಕ್ತಗಾಯವನ್ನುಂಟು ಮಾಡಿ, ತನಗೂ ಮತ್ತು ತನ್ನ ಮಗನಿಗೂ ಕುರಿತು ನೀವು ಈ ಹಸುಗಳ ಶೆಡ್ ಅನ್ನು ಖಾಲಿ ಮಾಡದಿದ್ದರೆ ನಿಮ್ಮನ್ನು ಸಾಯಿಸಿ ಬಿಡುತ್ತೇವೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಆಗ ತನ್ನ ತಮ್ಮ ವೆಂಕಟಮೂತರ್ಿ, ತಮ್ಮ ಗ್ರಾಮದ ವಾಸಿಗಳಾದ ದೇವರಾಜ ಬಿನ್ ಮುನಿವೆಂಕಟಪ್ಪ ಹಾಗು ಇತರರು ಅಡ್ಡ ಬಂದು ಮುನೇಗೌಡ ರವರ ಕೈಯಲ್ಲಿದ್ದ ದೊಣ್ಣೆಯನ್ನು ಕಿತ್ತುಕೊಂಡು ಜಗಳವನ್ನು ಬಿಡಿಸಿರುತ್ತಾರೆ. ನಂತರ ತಾನು ತನ್ನ ಮಗನ ಕಾಲುಗಳಿಗೆ ರಕ್ತಗಾಯವಾಗಿದ್ದರಿಂದ ಆತನನ್ನು ಕರೆದುಕೊಂಡು ಬಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಸಿರುತ್ತೇನೆ. ಆದ ಕಾರಣ ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.   

Last Updated: 17-04-2021 07:03 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080