ಅಭಿಪ್ರಾಯ / ಸಲಹೆಗಳು

 

1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 115/2021 ಕಲಂ. 143,147,148,323,324,504,506,149 ಐ.ಪಿ.ಸಿ:-

          ದಿನಾಂಕ:17/03/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಬಿ.ಎನ್.ಶಿವಣ್ಣ ಬಿನ್ ಲೇಟ್ ಚಿಕ್ಕನಾರಾಯಣಪ್ಪ, 53 ವರ್ಷ, ವಕ್ಕಲಿಗರು, ಜಿರಾಯ್ತಿ, ಬನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಮದ್ಯಾಹ್ನ 1.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಾನು ತಮ್ಮ ಮನೆಯ ಪಕ್ಕದಲ್ಲಿರುವ ಸರ್ಕಾರಿ ಖಾಲಿ ಜಾಗದಲ್ಲಿ ಸುಮಾರು ವರ್ಷಗಳಿಂದ ವ್ಯವಸಾಯಕ್ಕೆ ಸಂಬಂಧಪಟ್ಟಂತೆ ಹಸುಗಳ ಶೆಡ್, ಕುರಿಗಳ ಶೆಡ್, ಕಸದ ತಿಪ್ಪೆ, ಗೋಬರ್ ಗ್ಯಾಸ್ ಇವುಗಳನ್ನು ಹಾಕಿಕೊಂಡು ಹಾಕಿಕೊಂಡಿರುತ್ತೇವೆ. ಈ ಜಾಗದ ವಿಚಾರದಲ್ಲಿ ತಮಗೂ ಹಾಗೂ ತಮ್ಮ ಗ್ರಾಮದ, ತಮ್ಮ ಜನಾಂಗದ ತಮ್ಮ ಪಕ್ಕದ ಮನೆಯ ವಾಸಿ ಅರುಣ್ ಬಿನ್ ನಾರಾಯಣಸ್ವಾಮಿ ಮತ್ತು ಆಟೋ ನಾಗರಾಜ್ ರವರಿಗೆ ತಕರಾರುಗಳಿದ್ದು, ಈ ವಿಚಾರವಾಗಿ ಆಟೋ ನಾಗರಾಜ್ ಮತ್ತು ಅರುಣ್ ರವರು ತನ್ನ ಮೇಲೆ ಆಗಾಗ ವಿನಾ ಕಾರಣ ಜಗಳವನ್ನು ಮಾಡುತ್ತಿರುತ್ತಾರೆ. ಹೀಗಿರುವಾಗ ದಿನಾಂಕ: 16/03/2021 ರಂದು ರಾತ್ರಿ 8.30 ಗಂಟೆ ಸಮಯದಲ್ಲಿ ಮೇಲ್ಕಂಡ ಹಸುಗಳ ಶೆಡ್ ಬಳಿ ಇದ್ದಾಗ ಮೇಲ್ಕಂಡ ಅರುಣ್ ಬಿನ್ ನಾರಾಯಣಸ್ವಾಮಿ ಮತ್ತು ಅವರ ಕಡೆಯವರಾದ ದೇವರಾಜ್, ಆನಂದ ಬಿನ್ ಲೇಟ್ ವೆಂಕಟೇಶಪ್ಪ, ಆಟೋ ನಾಗರಾಜ್ ಹಾಗೂ ಆಟೋ ನಾಗರಾಜ್ ರವರ ಇಬ್ಬರು ಮಕ್ಕಳು ಅಕ್ರಮ ಗುಂಪುಕಟ್ಟಿಕೊಂಡು ತನ್ನ ಬಳಿ ಬಂದು ತನ್ನನ್ನು ಕುರಿತು ಲೇ ಬೋಳಿ ನನ್ನ ಮಗನೇ, ನಿಮ್ಮಮ್ಮನ್ನೇ ಕೇಯಾ, ನಿನಗೆ ಎಷ್ಟು ಸಲ ಹೇಳಬೇಕು ಈ ಜಾಗದಲ್ಲಿ ಹಸುಗಳನ್ನು, ಕುರಿಗಳನ್ನು, ಗೊಬ್ಬರವನ್ನು ಹಾಕಬೇಡವೆಂದು ಅಂತ ಹೇಳಿ, ಈ ಜಾಗ ನಮ್ಮದು ಎಂದು ಆಟೋ ನಾಗರಾಜ್ ರವರು ತನಗೆ ಅವಾಚ್ಯವಾಗಿ ಬೈದಿದ್ದು, ತಾನು ಮೇಲ್ಕಂಡವರನ್ನು ಏಕೆ ಈ ರೀತಿಯಾಗಿ ಬೈಯ್ಯುತ್ತಿದ್ದೀರಾ, ಇದು ಸರ್ಕಾರಿ ಜಾಗ ಎಂದು ಹೇಳಿದ್ದಕ್ಕೆ, ಅರುಣ್ ರವರು ಕೈಯಿಂದ ತನ್ನ ಮುಖಕ್ಕೆ, ಮೂತಿಗೆ ಹೊಡೆದು ನೋವನ್ನುಂಟು ಮಾಡಿದ್ದು, ನಂತರ ಆನಂದ ರವರು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ತನ್ನ ಮೈ ಕೈ ಮೇಲೆ ಹೊಡೆದು ನೋವನ್ನುಂಟು ಮಾಡಿರುತ್ತಾನೆ. ಉಳಿದ ದೇವರಾಜ್, ಆಟೋ ನಾಗರಾಜ್ ಮತ್ತು ಆಟೋ ನಾಗರಾಜ್ ರವರ ಇಬ್ಬರು ಮಕ್ಕಳು ಕೈಗಳಿಂದ ತನ್ನ ಮೈ ಮೇಲೆ ಹೊಡೆದು, ಕಾಲುಗಳಿಂದ ಒದ್ದು ನೋವನ್ನುಂಟು ಮಾಡಿರುತ್ತಾರೆ ಹಾಗೂ ಅರುಣ್ ರವರು ತನ್ನನ್ನು ಕುರಿತು ಇನ್ನೊಂದು ಸಲ ಈ ಜಾಗದಲ್ಲಿ ಹಸು, ಕುರಿ, ಗೊಬ್ಬರ ಹಾಕಿದರೆ ನಿನ್ನನ್ನು ಮುಗಿಸಿ ಬಿಡುತ್ತೇವೆಂದು ಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳೀಕೆಯ ದೂರಾಗಿರುತ್ತೆ.

 

2. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ. 15/2021 ಕಲಂ. 454,457,380 ಐ.ಪಿ.ಸಿ:-

          ದಿನಾಂಕ:16-03-2021 ರಂದು ಮಧ್ಯಾಹ್ನ 2-30 ಗಂಟೆಗೆ ಪಿರ್ಯಾದಿದಾರರಾದ ಡಾ||ರಾಘವೇಶ್ ಬಿನ್ ಸೋಮಶೇಖರರೆಡ್ಡಿ, 47 ವರ್ಷ, ಒಕ್ಕಲಿಗರು, ಸಿಪ್ಲ ಫಾರ್ಮಸುಟಿಕಲ್ಸ್ ಕಂಪನಿಯಲ್ಲಿ ಫ್ಯಾಕ್ಟರ್ ಮೆಡಿಕಲ್ ಆಫೀಸರ್, ಹಾಲಿ ವಾಸ: ನಂ.275, 1ನೇ ಫ್ಲೋರ್, 6ನೇ ಕ್ರಾಸ್, ಗಾರ್ಡನ್ ವಿಲ್ಲಾಸ್, ಮಾರುತಿನಗರ, ನಾಗರಬಾವಿ ಮೈನ್ರೋಡ್, ಬೆಂಗಳೂರು-560072, ಸ್ವಂತ ವಿಳಾಸ : ಆಗಟಿಮಡಕ ಗ್ರಾಮ,  ಬಾಗೇಪಲ್ಲಿ ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಸಿಪ್ಲ ಫಾರ್ಮಸುಟಿಕಲ್ಸ್ ಕಂಪನಿಯಲ್ಲಿ ಫ್ಯಾಕ್ಟರ್ ಮೆಡಿಕಲ್ ಆಫೀಸರ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ. ತನ್ನ ಹೆಸರಿನಲ್ಲಿ ತಮ್ಮ ಸ್ವಂತ ಊರಾದ ಆಗಟಿಮಡಕ ಗ್ರಾಮದಲ್ಲಿ ಸ.ನಂ.111 ರಲ್ಲಿ 10 ಎಕರೆ ಜಮೀನು ಇರುತ್ತದೆ. ಸದರಿ ಜಮೀನಿನಲ್ಲಿ ಬಾವಿ ಇದ್ದು, ಸದರಿ ಬಾವಿಯ ಪಕ್ಕದಲ್ಲಿ ಪಂಪ್ ಸೆಟ್ ರೂಮ್ ಇದ್ದು, ಬಾವಿಯಿಂದ ನೀರು ಬೆಳೆಗೆ ಹರಿಸಲು ಸುಮಾರು 20 ವರ್ಷಗಳ ಹಿಂದೆ 10 ಹೆಚ್.ಪಿ ಎಲೆಕ್ಟ್ರಿಟ್ ಮೋಟಾರ್ ಮತ್ತು ಸ್ಟಾರ್ಟರ್ ಬೋರ್ಡ್ ಅಳವಡಿಸಿ ನೀರನ್ನು ಉಪಯೋಗಿಸುತ್ತಿರುತ್ತೇವೆ. ಪ್ರತಿ ತಿಂಗಳು ತಾನು ತಮ್ಮ ಜಮೀನು ಬಳಿಗೆ ಬಂದು ನೋಡಿಕೊಂಡು ಹೋಗುತ್ತಿದ್ದೆನು. ಜನವರಿ ಮಾಹೆಯಲ್ಲಿ  ಬಂದು ತಮ್ಮ ಜಮೀನು ಬಳಿ ನೋಡಿಕೊಂಡು ಹೋಗಿರುತ್ತೇನೆ. ಹೀಗಿರುವಾಗ ಈಗ್ಗೆ ಒಂದು ವಾರದ ಹಿಂದೆ ತಮ್ಮ ಗ್ರಾಮದ ಬಾಬು ಬಿನ್ ಲೇಟ್ ಚಿಂತಮಾನು ವೆಂಕಟರಾಯಪ್ಪರವರು ತನಗೆ ಫೋನ್ ಮಾಡಿ ಪಂಪ್ಸೆಟ್ ರೂಮ್ ಗೋಡೆಗೆ ಯಾರೋ ಗಾಡಾರಿಯಲ್ಲಿ ಹೊಡೆದು ಹಾಕಿರುವುದಾಗಿ ವಿಚಾರ ತಿಳಿಸಿದ್ದು, ತಾನು ಬಂದು ಪಂಪ್ ಸೆಟ್ ರೂಮ್ ನೊಳಗೆ ಹೋಗಿ ನೋಡಿದಾಗ ಸುಮಾರು 70 ಕಿಲೋ ತೂಕದ 10 ಹೆಚ್.ಪಿ ಎಲೆಕ್ಟ್ರಿಟ್ ಮೋಟಾರ್ ಮತ್ತು ಸ್ಟಾರ್ಟರ್ ಬೋರ್ಡ್ ಇರಲಿಲ್ಲ. ಅವುಗಳ ಬೆಲೆ ಅಂದಾಜು 24,000/- ರೂಗಳು ಆಗುತ್ತದೆ. ತಮ್ಮ ಮೋಟಾರ್ ಮತ್ತು ಸ್ಟಾಟರ್ ಬಾಗೇಪಲ್ಲಿಯಲ್ಲಿರುವ ತಮ್ಮ ಗ್ರಾಮದ ಚಲಪತಿರವರ ಅಂಗಡಿ ಬಳಿ ಇರುವುದಾಗಿ ವಿಚಾರ ತಿಳಿದು ತಾನು ಹೋಗಿ ನೋಡಲಾಗಿ ತಮ್ಮ ಮೋಟಾರ್ ಮತ್ತು ಸ್ಟಾರ್ಟರ್ ಇರಲಿಲ್ಲ. ತಮ್ಮ ಪಂಪ್ ಸೆಟ್ ರೂಮ್ ನಲ್ಲಿ ಇಟ್ಟಿದ್ದ ಎಲೆಕ್ಟ್ರಿಟ್ ಮೋಟರ್ ಮತ್ತು ಸ್ಟಾರ್ಟರ್ ಬೋರ್ಡ್  ದಿನಾಂಕ:01-03-2021 ರಿಂದ ದಿನಾಂಕ:07-03-2021 ರವರೆಗೆ ಯಾವುದೋ ಸಮಯದಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಖಚಿತಪಡಿಸಿಕೊಂಡು ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ಮೇಲ್ಕಂಡ ಮಾಲುಗಳನ್ನು ಪತ್ತೆ ಮಾಡಿ ಕಳ್ಳತನ ಮಾಡಿರುವವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

3. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 68/2021 ಕಲಂ. 279,337 ಐ.ಪಿ.ಸಿ:-

          ದಿನಾಂಕ:-16/03/2021 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ನಾಗರಾಜ್ ಜೆ.ಪಿ ಬಿನ್ ಲೇಟ್ ಪಾಪಯ್ಯ, 48 ವರ್ಷ, ಬೆಸ್ತರು, ವ್ಯಾಪಾರ, ವಾಸ-ಜಂಗಮಕೋಟೆ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ತಂದೆಗೆ ಇಬ್ಬರು ಗಂಡು ಮಕ್ಕಳು ಹಾಗು 4 ಜನ ಹೆಣ್ಣು ಮಕ್ಕಳಿದ್ದು, ತನ್ನ ತಮ್ಮನಾದ ಶ್ರೀನಿವಾಸ್ ರವರಿಗೆ ಬಿಟ್ಟು ಉಳಿದವರಿಗೆ ಮದುವೆಯಾಗಿರುತ್ತದೆ. ತನ್ನ ತಮ್ಮನಾದ ಶ್ರೀನಿವಾಸ್ (35 ವರ್ಷ) ರವರು ತಮ್ಮ ಗ್ರಾಮದಲ್ಲಿ ಚಿಲ್ಲರೆ ಅಂಗಡಿಯನ್ನಿಟ್ಟಿಕೊಂಡಿದ್ದು, ತನ್ನ ತಮ್ಮನಾದ ಶ್ರೀನಿವಾಸ್ ರವರು ತನ್ನ ಅಂಗಡಿಗೆ ತೆಂಗಿನಕಾಯಿಗಳು ಅವಶ್ಯಕತೆ ಇದ್ದ ಕಾರಣ ಈ ದಿನ ದಿನಾಂಕ 16/03/2021 ರಂದು ಬೆಳಿಗ್ಗೆ ತನ್ನ ಬಾಬತ್ತು ಕೆಎ-50-ವಿ-9306 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನದಲ್ಲಿ ವಿಜಯಪುರಕ್ಕೆ ಹೋಗಿ ತೆಂಗಿನ ಕಾಯಿಗಳನ್ನು ಖರೀದಿ ಮಾಡಿಕೊಂಡು ವಾಪಸ್ಸು ತಮ್ಮ ಗ್ರಾಮಕ್ಕೆ ಬರಲು ಇದೇ ದಿನ ಬೆಳಿಗ್ಗೆ ಸುಮಾರು 8-15 ಗಂಟೆ ಸಮಯದಲ್ಲಿ ಘಟ್ಟಮಾರನಹಳ್ಳಿ ಗ್ರಾಮದ ಬಳಿ ಇರುವ ಆಂಜನೇಯ ಸ್ವಾಮಿ ದೇವಾಲಯದ ಬಳಿ ಕೋಲಾರ-ಚಿಕ್ಕಬಳ್ಳಾಪುರ ಮುಖ್ಯ ರಸ್ತೆಯಲ್ಲಿ ತನ್ನ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ತಮ್ಮ ಗ್ರಾಮದ ಕಡೆಗೆ ಬರುತ್ತಿದ್ದಾಗ ಆ ಸಮಯದಲ್ಲಿ ಜಂಗಮಕೋಟೆ ಕಡೆಯಿಂದ ವಿಜಯಪುರದ ಕಡೆಗೆ ಹೋದ ಎಪಿ-02-ಟಿಬಿ-7965 ನೊಂದಣಿ ಸಂಖ್ಯೆಯ ಈಚರ್ ವಾಹನವನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ತನ್ನ ಮುಂಬದಿಯಲ್ಲಿ ಹೋಗುತ್ತಿದ್ದ ಯಾವುದೋ ವಾಹನವನ್ನು ಓವರ್ ಟೆಕ್ ಮಾಡಿಕೊಂಡು ಹೋಗಿ ರಸ್ತೆಯ ಎಡಬದಿಯಲ್ಲಿ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಬರುತ್ತಿದ್ದ ತನ್ನ ತಮ್ಮನ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಪರಿಣಾಮ ತನ್ನ ತಮ್ಮ ದ್ವಿ ಚಕ್ರ ವಾಹನದ ಸಮೇತವಾಗಿ ಕೆಳಗೆ ಬಿದ್ದು ಹೋಗಿ ತನ್ನ ತಮ್ಮನ ತಲೆಗೆ, ಬಲ ಕಾಲಿನ ತೊಡೆಯ ಭಾಗದಲ್ಲಿ, ಕತ್ತಿನ ಬಳಿ ರಕ್ತಗಾಯಗಳಾಗಿದ್ದು, ಕೈ-ಕಾಲುಗಳಿಗೆ ತರಚಿದ ಗಾಯಗಳಾಗಿರುತ್ತದೆ. ಆಗ ರಸ್ತೆಯಲ್ಲಿ ಬರುತ್ತಿದ್ದ ಹೊಸಪೇಟೆ ಗ್ರಾಮದ ವಾಸಿ ತಮಗೆ ಪರಿಚಯ ಇರುವ ಲೋಕೇಶ್ ರವರು ಹಾಗು ಇತರೆ ಸಾರ್ವಜನಿಕರು ತನ್ನ ತಮ್ಮನನ್ನು ಉಪಚರಿಸಿ, ಯಾವುದೋ ಆಟೋದಲ್ಲಿ ಕರೆದುಕೊಂಡು ಬಂದು ಜಂಗಮಕೋಟೆ ಗ್ರಾಮದ ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ, ಲೋಕೇಶ್ ರವರು ತನ್ನ ಅಂಗಡಿಯ ಬಳಿ ಬಂದು ಈ ವಿಷಯವನ್ನು ತಿಳಿಸಿದ್ದು, ಕೂಡಲೇ ತಾನು ಆಸ್ಪತ್ರೆಯ ಬಳಿ ಹೋಗಿ ನೋಡಲಾಗಿ ವಿಷಯ ನಿಜವಾಗಿರುತ್ತದೆ. ನಂತರ ತಾನು ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ತನ್ನ ತಮ್ಮ ಶ್ರೀನಿವಾಸ್ ರವರನ್ನು ಇನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಪ್ರೋ ಲೈಫ್ ಖಾಸಗೀ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲು ಮಾಡಿರುತ್ತೇನೆ. ತನ್ನ ತಮ್ಮ ಶ್ರೀನಿವಾಸ್ ರವರು ಇನ್ನು ಒಳರೋಗಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುತ್ತಾನೆ. ಆದ ಕಾರಣ ತನ್ನ ತಮ್ಮನಿಗೆ ಅಪಘಾತವನ್ನುಂಟು ಮಾಡಿದ ಮೇಲ್ಕಂಡ ಎಪಿ-02-ಟಿಬಿ-7965 ನೊಂದಣಿ ಸಂಖ್ಯೆಯ ಈಚರ್ ವಾಹನದ ಚಾಲಕನ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

ಇತ್ತೀಚಿನ ನವೀಕರಣ​ : 17-03-2021 06:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080