ಅಭಿಪ್ರಾಯ / ಸಲಹೆಗಳು

 

1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.10/2021 ಕಲಂ. 279 ಐ.ಪಿ.ಸಿ & 184,190(3) ಐ.ಎಂ.ವಿ ಆಕ್ಟ್:-

     ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಓಂಪ್ರಕಾಶ್ ಗೌಡ ಬಿ ಆದ ದಿನಾಂಕ:-15/02/2021 ರಂದು ರಾತ್ರಿ 11-00 ಗಂಟೆಯಿಂದ ನಮ್ಮ ಠಾಣೆಗೆ ನೀಡಿರುವ ಕೆಎ-03-ಜಿ-925 ರ ಜೀಪಿನಲ್ಲಿ ಜೀಪಿನ ಚಾಲಕರಾದ ಶ್ರೀನಿವಾಸ.ಎಂ ಎ.ಪಿ.ಸಿ-178 ರವರೊಂದಿಗೆ ಚಿಕ್ಕಬಳ್ಳಾಪುರ ನಗರದಲ್ಲಿ ರಾತ್ರಿ ಗಸ್ತು ಕರ್ತವ್ಯವನ್ನು ನಿರ್ವಹಿಸಿ ಅಲ್ಲಿಂದ ದಿನಾಂಕ:-16/02/2021 ರಂದು ಬೆಳಗಿನ ಜಾವ ಸುಮಾರು 04-00 ಗಂಟೆಯ ಸಮಯದಲ್ಲಿ ನಮ್ಮ ಠಾಣಾ ಸರಹದ್ದಾದ ಚಿಕ್ಕಬಳ್ಳಾಪುರ ನಗರದ ವಾಪಸಂದ್ರದ ಬ್ರಿಡ್ಜ್ ಬಳಿ ರಾತ್ರಿ ಗಸ್ತು ಕರ್ತವ್ಯವನ್ನು ನಿರ್ವಹಿಸುತ್ತಿದ್ದಾಗ ಅದೇ ಸಮಯಕ್ಕೆ ಬಾಗೇಪಲ್ಲಿ ಕಡೆಯಿಂದ ಬಂದ ಯಾವುದೋ ಲಾರಿ ಚಾಲಕ ವಾಹವನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಅತಿವೇಗ ಮತ್ತು ಅಜಾಗರೂಕತೆಯಿಂದ ಸಾರ್ವಜನಿಕರ ಪ್ರಾಣಕ್ಕೆ ಹಾನಿ ಉಂಟಾಗುವ ರೀತಿಯಲ್ಲಿ ಚಾಲನೆ ಮಾಡಿಕೊಂಡು ಬರುತ್ತಿದ್ದು ಸದರಿ ಲಾರಿಯನ್ನು ನೋಡಿದಾಗ ಯಾವುದೇ ಮುನ್ನಚರಿಕೆ ಕ್ರಮಗಳಿಲ್ಲದೇ ಅತೀ ಎತ್ತರವಾಗಿ ಸೈಜು ಕಲ್ಲುಗಳನ್ನು ಲೋಡ್ ಮಾಡಿಕೊಂಡಿರುವಂತೆ ಕಂಡು ಬಂದಿದ್ದು ಸದರಿ ವಾಹನವನ್ನು ಚಿಕ್ಕಬಳ್ಳಾಪುರ ತಾಲ್ಲೂಕಿನ ಬಾಗೇಪಲ್ಲಿ - ಬೆಂಗಳೂರು ಎನ್.ಎಚ್-44 ಹೈವೇ ರಸ್ತೆಯ ಅಗಲಗುರ್ಕಿ ಬ್ರಿಡ್ಜ್ ಬಳಿ ತಡೆದು ನಿಲ್ಲಿಸಿ ವಾಹನದ ನೊಂದಣಿ ಸಂಖ್ಯೆಯನ್ನು ನೋಡಲಾಗಿ KA-50-A-0518  ರ 10 ಚಕ್ರಗಳ ಟಾಟಾ ಕಂಪನಿಯ ಲಾರಿ ವಾಹನವಾಗಿದ್ದು, ಸದರಿ ಲಾರಿಯಲ್ಲಿ ಅತೀ ಎತ್ತರವಾಗಿ ಸೈಜುಕಲ್ಲುಗಳನ್ನು ಲೋಡ್ ಮಾಡಿಕೊಂಡು ಯಾವುದೇ ಮುನ್ನಚರಿಕೆ ಕ್ರಮಗಳನ್ನು ಅನುಸರಿಸದೇ ಹೆಚ್ಚಾಗಿ ವಾಹನಗಳು ಓಡಾಡುವ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಸಾರ್ವಜನಿಕರ ಪ್ರಾಣಕ್ಕೆ ಹಾನಿ ಉಂಟಾಗುವ ರೀತಿಯಲ್ಲಿ ಚಾಲನೆ ಮಾಡಿಕೊಂಡು ಬಂದ ಲಾರಿ ಚಾಲಕನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಸುರೇಶ್ ಬಿನ್ ನಾರಾಯಣಪ್ಪ 26 ವರ್ಷ, ವಕ್ಕಲಿಗರು, ಹಿರಿಸಾವೆ ಗ್ರಾಮ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ ಎಂತ ತಿಳಿಸಿದ್ದು ಸದರಿ ಲಾರಿ ಚಾಲಕನನ್ನು ಚಾಲನಾ ಪರವಾನಿಗೆ ಪತ್ರ ಹಾಗೂ ವಾಹನದ ದಾಖಲೆಗಳನ್ನು ಕೇಳಲಾಗಿ ಯಾವುದೇ ದಾಖಲಾತಿಗಳನ್ನು ತೋರಿಸಿರುವುದಿಲ್ಲ. ಭಾರಿ ಗಾತ್ರದ ವಾಹನವಾಗಿದ್ದರಿಂದ ಸದರಿ ಲಾರಿಯನ್ನು ನಮ್ಮ ಜೀಪಿನ ಚಾಲಕರವರೊಂದಿಗೆ ನಂದಿಗಿರಿಧಾಮ ಪೊಲೀಸ್ ಠಾಣೆಯ ಬಳಿ ಬೆಳಗಿನ ಜಾವ ಸುಮಾರು 5-30 ಗಂಟೆಗೆ ತಂದು ನಿಲ್ಲಿಸಿ ಮೇಲ್ಕಂಡ ರೀತ್ಯಾ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದ KA-50-A-0518  ರ ಲಾರಿ ಚಾಲನ ಮೇಲೆ ಈ ದಿನ ದಿನಾಂಕ:-16/02/2021 ರಂದು ಬೆಳಿಗ್ಗೆ 10-00 ಗಂಟೆಗೆ ಠಾಣೆಗೆ ಹಾಜರಾಗಿ ಮೊ.ಸಂ-10/2021 ಕಲಂ-279 ಐಪಿಸಿ ರೆ.ವಿ 184, 190(3) ಐಎಂವಿ ಆಕ್ಟ್ ರೀತ್ಯಾ ಸ್ವತಃ ಪ್ರಕರಣವನ್ನು ದಾಖಲಿಸಿರುತ್ತೇನೆ.

 

2. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.72/2021 ಕಲಂ. 379 ಐ.ಪಿ.ಸಿ :-

     ದಿನಾಂಕ: 16/02/2021 ರಂದು ಮದ್ಯಾಹ್ನ 2.30 ಗಂಟೆಗೆ ನಾರಾಯಣಸ್ವಾಮಿ ಬಿನ್ ಲೇಟ್ ಮುನಿಯಪ್ಪ, 40 ವರ್ಷ, ನಾಯಕರು, ಜಿರಾಯ್ತಿ, ನಾಯನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ಕಪ್ಪು ಮತ್ತು ಬಿಳಿ ಬಣ್ಣದ ಒಂದು ಸೀಮೆ ಹಸು ಇದ್ದು, ಸದರಿ ಹಸು ಹಾಲು ನೀಡುತ್ತಿರುತ್ತೆ. ಆ ಹಸುವನ್ನು ತಾವು ತಮ್ಮ ಮನೆಯ ಪಕ್ಕದಲ್ಲಿರುವ ಚಪ್ಪರದ ಕೆಳಗೆ ಹಾಕಿಕೊಳ್ಳುತಿದ್ದೆವು. ಎಂದಿನಂತೆ ದಿನಾಂಕ: 13/02/2021 ರಂದು ರಾತ್ರಿ ಸುಮಾರು 10.00 ಗಂಟೆ ಸಮಯದಲ್ಲಿ ಮೇಲ್ಕಂಡ ತಮ್ಮ ಬಾಬ್ತು ಸೀಮೆ ಹಸುವನ್ನು ತಮ್ಮ ಮನೆಯ ಪಕ್ಕದಲ್ಲಿರುವ ಚಪ್ಪರದ ಕೆಳಗೆ ಕಟ್ಟಿ ಹಾಕಿರುತ್ತೇನೆ. ಮಾರನೇ ದಿನ ದಿನಾಂಕ: 14/02/2021 ರಂದು ಬೆಳಿಗ್ಗೆ 06.00 ಗಂಟೆಗೆ ಬಂದು ನೋಡಲಾಗಿ ತಮ್ಮ ಸೀಮೆ ಹಸು ಸ್ಥಳದಲ್ಲಿ ಇಲ್ಲದೆ ಕಳ್ಳತನ ಆಗಿರುತ್ತೆ. ತಾವು ಕಳುವಾಗಿರುವ ತಮ್ಮ ಸೀಮೆ ಹಸುವನ್ನು ತಮ್ಮ ಗ್ರಾಮದ ಸುತ್ತಲೂ ಮತ್ತು ಅಕ್ಕ-ಪಕ್ಕದ ಹಳ್ಳಿಗಳಲ್ಲಿ ಹುಡುಕಾಡಲಾಗಿ ಸೀಮೆ ಹಸು ಪತ್ತೆ ಆಗಿರುವುದಿಲ್ಲ. ದಿನಾಂಕ: 13/02/2021 ರಂದು ರಾತ್ರಿ 10.00 ಗಂಟೆಯಿಂದ ದಿನಾಂಕ 14/02/2021 ರಂದು ಬೆಳಿಗ್ಗೆ 06.00 ಗಂಟೆ ಮದ್ಯೆ ಹಸು ಕಳ್ಳತನ ಆಗಿರುತ್ತೆ. ಕಳುವಾಗಿರುವ ಸೀಮೆ ಹಸು ಸುಮಾರು 1,00,000/- (ಒಂದು ಲಕ್ಷ) ರೂ ಬೆಲೆ ಬಾಳುತ್ತೆ. ತನ್ನ ಸೀಮೆ ಹಸುವನ್ನು ಹುಡುಕಾಡಿಕೊಂಡಿದ್ದರಿಂದ ಈ ದಿನ ತಡವಾಗಿ ದೂರು ನೀಡುತ್ತಿದ್ದು ತನ್ನ ಸೀಮೆ ಹಸುವನ್ನು ಪತ್ತೆ ಮಾಡಿ ಕಳ್ಳತನ ಮಾಡಿರುವವರ ವಿರುಧ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿರುವುದಾಗಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.73/2021 ಕಲಂ. 447,427,34  ಐ.ಪಿ.ಸಿ :-

     ದಿನಾಂಕ: 17/02/2021 ರಂದು ಬೆಳಿಗ್ಗೆ 11.00 ಗಂಟೆಗೆ ಶ್ರೀಮತಿ ಪ್ರಭಾವತಮ್ಮ ಕೋಂ ಭೂಪಣ್ಣ, 55 ವರ್ಷ, ಬಲಜಿಗರು, ಗೃಹಿಣಿ ಮಾಳಪಲ್ಲಿ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಸ್ವಂತ ಊರು ಚಿಂತಾಮಣಿ ತಾಲ್ಲೂಕು ಕೈವಾರ ಗ್ರಾಮವಾಗಿರುತ್ತದೆ. ತಮ್ಮ ಯಜಮಾನರು ಸರ್ಕಾರಿ ನೌಕರಿಯಲ್ಲಿ ಇರುವುದರಿಂದ ಗ್ರಾಮವನ್ನು ಬಿಟ್ಟು ಈಗ್ಗೆ 16 ವರ್ಷಗಳಿಂದ ಚಿಂತಾಮಣಿಗೆ ಬಂದು ಮಾಳಪಲ್ಲಿಯಲ್ಲಿ ವಾಸವಾಗಿರುತ್ತೇವೆ. ತಮ್ಮ ಮಾವನಾದ ಭೂಪಣ್ಣನವರ ಲೇಟ್ ನಾರಾಯಣಪ್ಪರವರಿಗೆ ಇಬ್ಬರು ಹೆಂಡತಿಯರಿದ್ದು ಆ ಪೈಕಿ ತಮ್ಮ ಅತ್ತೆ ಲೇಟ್ ತುಳಸಮ್ಮ ರವರಿಗೆ ಇಬ್ಬರು ಗಂಡು ಮಕ್ಕಳಿರುತ್ತಾರೆ. ಆ ಪೈಕಿ ತಮ್ಮ ಯಜಮಾನರಾದ ಭೂಪಣ್ಣರವರು ಕಿರಿಯ ಮಗನಾಗಿರುತ್ತಾರೆ. 2005 ನೇ ಸಾಲಿನಲ್ಲಿ ಕೈವಾರ ಗ್ರಾಮದ ಚಿಕ್ಕ ನಾಗಪ್ಪರವರ ಬಾಬತ್ತು ಸರ್ವೇ ನಂ 41/2 ರಲ್ಲಿ 3 ಎಕರೆ 5 ಗುಂಟೆ ಜಮೀನನ್ನು ಖರೀದಿಸಿದ್ದೆವು. ಹಾಲಿ ತನ್ನ ಹೆಸರಿನಲ್ಲಿ ಪಹಣಿ ಬರುತ್ತಿರುತ್ತೆ. ಈ ಜಮೀನಿನಲ್ಲಿ ಮಳೆಯ ನೀರಿಗಾಗಿ ನೀಲಗಿರಿ, ಜಾಲಿ ಮರ ಹಾಗೂ ಹೊಂಗೆ ಮರಗಳನ್ನು ಬೆಳೆಸಿರುತ್ತೇವೆ.  ಈಗಿರುವಲ್ಲಿ ನಮ್ಮ ಭಾವನಾದ ಲೇಟ್ ರಾಮಮೂರ್ತಿ ರವರ ಹೆಂಡತಿಯಾದ ಸರೋಜಮ್ಮ ಮತ್ತು ಆಕೆಯ ಮಗನಾದ ನರಸಿಂಹಮೂರ್ತಿ ರವರವರಿಗೆ ತಮಗೆ ಸದರಿ ಜಮೀನಿನ ವಿಚಾರದಲ್ಲಿ ತಕರಾರುಗಳಿರುತ್ತೆ. ಹೀಗಿರುವಲ್ಲಿ ದಿನಾಂಕ: 22/01/2021 ರಂದು ಬೆಳಿಗ್ಗೆ 09.00 ಗಂಟೆಯಲ್ಲಿ ಮೇಲ್ಕಂಡವರು ತಮಗೆ ಗೊತ್ತಿಲ್ಲದಂತೆ ತಮ್ಮ ಜಮೀನಿನೊಳಗೆ ಅಕ್ರಮವಾಗಿ ಪ್ರವೇಶ ಮಾಡಿ, ಜಮೀನಿನಲ್ಲಿ ಬೆಳೆದಿದ್ದ ಎಲ್ಲಾ ಮರಗಳನ್ನು ಅಂದರೆ 20 ಜಾಲಿ ಮರ, ಎರಡು ಹೊಂಗೆ ಮರ ಮತ್ತು 35 ನೀಲಗಿರಿ ಮರಗಳನ್ನು ಕಟಾವು ಮಾಡಿ ತಮಗೆ ಸುಮಾರು ಎರಡು ಲಕ್ಷ ರೂ ನಷ್ಟ ಉಂಟುಮಾಡಿರುತ್ತಾರೆ. ಈ ಮೊದಲು ಸಹ 2012 ಸಾಲಿನಲ್ಲಿ ಇದೇ ರೀತಿ ಮೇಲ್ಕಂಡ ಜಮೀನಿನಲ್ಲಿ ಬೆಳೆದಿದ್ದ ಎಲ್ಲಾ ಮರಗಳನ್ನು ಕಟಾವು ಮಾಡಿದ್ದು ಹಿರಿಯರ ಸಮಕ್ಷಮ ಕೇಳಿದ್ದಕ್ಕೆ ಮುಂದೆ ಈ ರೀತಿ ಮಾಡುವುದಿಲ್ಲವೆಂದು ತಿಳಿಸಿದ್ದರು. ಆದರೂ ಸಹ ಪುನ: ಅದೇ ರೀತಿ ಮರಗಳನ್ನು ಕಟಾವು ಮಾಡಿ ತಮಗೆ ನಷ್ಟ ಮಾಡಿರುತ್ತಾರೆ. ಇದೂವರೆವಿಗೂ ಗ್ರಾಮದಲ್ಲಿ ಹಿರಿಯರು ಪಂಚಾಯ್ತಿ ಮಾಡುವುದಾಗಿ ಹೇಳಿದ್ದು, ಇದುವರೆಗೂ ಅವರು ನ್ಯಾಯಪಂಚಾಯ್ತಿಗೆ ಬಾರದ ಕಾರಣ ತಡವಾಗಿ ಈ ದಿನ ದಿನಾಂಕ: 17/02/2021 ದೂರು ನೀಡುತ್ತಿದ್ದು ಮೇಲ್ಕಂಡ ಭೂಪಣ್ಣರವರ ಸರೋಜಮ್ಮ ಕೊಂ ಲೇಟ್ ರಾಮಮೂರ್ತಿ ಮತ್ತು ನರಸಿಂಹಮೂರ್ತಿ ಬಿನ್ ಲೇಟ್ ರಾಮಮೂರ್ತಿ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಾಗಿರುತ್ತೆ.

 

4. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.20/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:16/02/2021 ರಂದು ನಾರಾಯಣಪ್ಪ.ಎಂ,  ಪಿ.ಎಸ್.ಐ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶವೇನೆಂದರೆ, ದಿನಾಂಕ 16/02/2021 ರಂದು ಮದ್ಯಾಹ್ನ 2.00 ಗಂಟೆಯಲ್ಲಿ ಠಾಣಾ ಜೀಪ್ ಸಂಖ್ಯೆ ಕೆ.ಎ-40 ಜಿ-60 ರ ವಾಹನದಲ್ಲಿ ತಾನು ಠಾಣಾ ಸಿಬ್ಬಂದಿಯಾದ  ಹೆಚ್.ಸಿ-43, ನಾರಾಯಣಪ್ಪ ಮತ್ತು ಪಿ.ಸಿ -200 ಶ್ರೀ ಚಂದ್ರಶೇಖರ ರವರ ಜೊತೆಯಲ್ಲಿ ಠಾಣೆಯ ಸರಹದ್ದಿನಲ್ಲಿ ಗಸ್ತಿಗೆ ಹೋಗಿದ್ದು, ಠಾಣಾ ಸರಹದ್ದಿನ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಯಲಗಲಹಳ್ಳಿ, ಚಿಕ್ಕ ದಿಬ್ಬೂರಹಳ್ಳಿ, ದಿಬ್ಬೂರಹಳ್ಳಿ, ಕುದಪಕುಂಟೆ ಗ್ರಾಮಗಳಿಗೆ ಬೇಟಿ ಮಾಡಿ, ಕುದಪಕುಂಟ ಗ್ರಾಮಕ್ಕೆ ಬೇಟಿ ಮಾಡಲಾಗಿ ಸಂಜೆ ಸುಮಾರು 4.00 ಗಂಟೆಯಲ್ಲಿ ಕುದಪಕುಂಟೆ ಗ್ರಾಮದ ಸಮೀಪ ಯಾರೋ ಒಬ್ಬ ಆಸಾಮಿ ಪ್ಲಾಸ್ಟಿಕ್ ಚೀಲದಲ್ಲಿ ಏನೋ ಪ್ಲಾಸ್ಟಿಕ್ ಚೀಲದಲ್ಲಿ ಎತ್ತಿಕೊಂಡು ಹೋಗುತ್ತಿದ್ದು, ಸಮವಸ್ತ್ರದಲ್ಲಿದ್ದ ತಮ್ಮನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದ್ದು, ತಾವು ಆತನನ್ನು ಹಿಂಬಾಳಿಸಿ ಹಿಡಿದುಕೊಂಡು ಆತನ ಕೈಯಲ್ಲಿದ್ದ ಚೀಲದಲ್ಲಿ ಪರಿಶೀಲಿಸಲಾಗಿ ಸದರಿ ಚೀಲದಲ್ಲಿ 16 ರಿಜಿನಲ್ ಚಾಯ್ಸ್ ವಿಸ್ಕಿ ಯ 90 ಎಂ.ಎಲ್ ನ ಮಧ್ಯದ ಟೆಟ್ರಾ ಪಾಕೆಟ್ಟುಗಳಿದ್ದು, ಒಂದು ಒರಿಜಿನಲ್ ಚಾಯ್ಸ್  ಟೆಟ್ರಾ ಪಾಕೆಟ್ ಬೆಲೆ 35.13/-ರೂಗಳಾಗಿದ್ದು, ಒಟ್ಟು ಪಾಕೆಟ್ ಗಳ ಬೆಲೆ 562.08/- ರೂಗಳಾಗಿರುತ್ತೆ. ಒಟ್ಟು ಮಧ್ಯದ ಸಾಮರ್ಥ್ಯ 1 ಲೀಟರ್ 440 ಎಂಎಲ್ ಇರುತ್ತೆ. ಸದರಿ ಆಸಾಮಿಯನ್ನು ಮಧ್ಯದ ಪಾಕೆಟ್ ಗಳನ್ನು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಯಾವುದಾದರೂ ಪರವಾನಿಗೆ ಇದಿಯೇ ಎಂಬ ಬಗ್ಗೆ ಕೇಳಲಾಗಿ, ಆತ ಯಾವುದೇ ಪರವಾನಿಗೆ ತನ್ನ ಬಳಿ ಇಲ್ಲವೆಂದು ತಿಳಿಸಿದರು. ನಂತರ ಸದರಿ ಆಸಾಮಿಯ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ  ಸುನಿಲ್ ಕುಮಾರ್ ಬಿನ್ ಈಶ್ವರರೆಡ್ಡಿ, 24 ವರ್ಷ, ವಕ್ಕಲಿಗರು, ಜಿರಾಯ್ತಿ, ಕದಿರೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, ಪೋನ್ ನಂ 9900661393 ಎಂದು ತಿಳಿಸಲಾಗಿ, ಸದರಿ ಆಸಾಮಿಯನ್ನು ಮತ್ತು ಮೇಲ್ಕಂಡ ಮಾಲನ್ನು ಸಂಜೆ 4.15 ಗಂಟೆಯಿಂದ 5.00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡಿದ್ದು, ಮೇಲ್ಕಂಡ ಆರೋಪಿ, ಮಾಲು ಮತ್ತು ಪಂಚನಾಮೆಯನ್ನು ತಮ್ಮ ವಶಕ್ಕೆ ನೀಡುತ್ತಿದ್ದು ಈ ಬಗ್ಗೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿರುತ್ತೆ.

 

5. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.21/2021 ಕಲಂ. 277,420 ಐ.ಪಿ.ಸಿ:-

     ದಿನಾಂಕ:16-02-2021 ರಂದು ಸಂಜೆ 06-30 ಗಂಟೆಗೆ ಠಾಣಾ ಎ.ಎಸ್.ಐ ಯರ್ರಪ್ಪ ರವರು ಗಂಜಿಗುಂಟೆ ಗ್ರಾಮ ಪಂಚಾಯ್ತಿ ಪಿ.ಡಿ.ಓ ರವರಿಂದ ಟಪಾಲು ಮೂಲಕ ಪಡೆದ ದೂರಿನ ಸಾರಾಂಶವೇನೆಂದರೆ, ದಿನಾಂಕ:11-02-2021 ರಂದು ಸಹಾಯಕ ನಿರ್ದೇಶಕರು ಮೀನುಗಾರಿಕೆ ಇಲಾಖೆ ಹಾಗೂ ಪಿ.ಡಿ.ಓ ಮತ್ತು ಸಿಬ್ಬಂದಿಯವರು ಗಂಜಿಗುಂಟೆ ಗ್ರಾಮ ಪಂಚಾಯ್ತಿ ಪರಿಮಿತಿಯ ನಾಗಪ್ಪಗುಂಟೆ ಕೆರೆಯಲ್ಲಿ ಕ್ಯಾಟ್ ಫೀಶ್ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಸದರಿ ಸ್ಥಳಕ್ಕೆ ಹೋಗಿ ಪರಿಶೀಲಿಸಿಲಾಗಿ ದಿನಾಂಕ:30-07-2018 ರಲ್ಲಿ ಇದೇ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೇವಗುಟ್ಟಹಳ್ಳಿ ಗ್ರಾಮದ ಶ್ರೀ ಮಾರಪ್ಪರೆಡ್ಡಿ ಬಿನ್ ಪಾಪಿರೆಡ್ಡಿ ರವರಿಗೆ 3 ವರ್ಷಗಳವರೆಗೆ ಅಂದರೆ  ದಿನಾಂಕ:31-07-2021 ರಂದು ವರೆಗೆ ಷರತ್ತುಗಳಿಗೆ ಒಳಪಟ್ಟು ಮೀನು ಸಾಗಾಣಿಕೆ ಮಾಡಲು ರೂ 63,000 /- ರೂಗಳಿಗೆ ಹರಾಜಾಗಿದ್ದು, ಸದರಿಯವರು ಚಿಂತಾಮಣಿ ತಾಲ್ಲೂಕು, ಚಿನ್ನಸಂದ್ರ ಗ್ರಾಮದ ರಿಜ್ವಾನ್ ರವರಿಗೆ ಮರು ಗುತ್ತಿಗೆ ಆದಾರದ ಮೇಲೆ ಮೀನು ಸಾಕಲು ನೀಡಲಾಗಿದೆ ಎಂದು ತಿಳಿದು ಬಂದಿದ್ದು,  ಸದರಿ ಕೆರೆಯಲ್ಲಿ ಪರೀಶಿಲಾಗಿ ನಿಯಮಗಳಿಗೆ ವಿರುದ್ದವಾಗಿ ನೀಷೇಧಿತ ಮೀನು ಪ್ರಭೇದವಾದ ಆಫ್ರೀಕನ್ ಕ್ಯಾಟ್ ಫೀಶ್(ಮಾರ್ವೆ) ಮೀನುಗಳನ್ನು ಇರುವುದನ್ನು ಸಹಾಯಕ ನಿರ್ಧೇಶಕ (ಪ್ರಭಾರ)  ಶಿಡ್ಲಘಟ್ಟ ತಾಲ್ಲೂಕು ರವರು ದೃಢಪಡಿಸಿದ್ದು, ಸದರಿ ಸ್ಥಳದಲ್ಲಿ ಮೀನುಗಳಿಗೆ ಕೋಳಿ ತ್ಯಾಜ್ಯಗಳನ್ನು ಹಾಕಿರುವ ನೀಶಾನೆಗಳು ಕಂಡು ಬಂದಿದ್ದು, ಮೋಲ್ಟೋಟಕ್ಕೆ ಕೆರೆಯಲ್ಲಿ ನಿಷೇಧಿತ ಮೀನು ಪ್ರಭೇದವಾದ ( ಆಫ್ರೀಕನ್ ಕ್ಯಾಟ್ ಪಿಶ್) ಮಾರ್ವೆ ಮೀನುಗಳು ಕಂಡು ಬಂದಿರುವುದರಿಂದ ಹಾಗೂ ಕೆರೆಯ ಮೀನು ಸಾಗಾಣಿಕ ಹರಾಜು ಪಡೆದ ಮಾರಪ್ಪ ಭೀಣ್ ಪಾಪರೆಡ್ಡಿ ರವರು ಗ್ರಾಮ ಪಂಚಾಯ್ತಿ ಷರತ್ತುಗಳನ್ನು ಉಲ್ಲಂಘಿಸಿ ಸರ್ಕಾರಕ್ಕೆ ವಂಚಿಸಿರೂದಲ್ಲದೆ ಕೋಳಿ ತ್ಯಾಜ್ಯವನ್ನು ಕೆರೆಗೆ ಹಾಕಿ ಹಾಗೂ ಕೆರೆಯ ನೀರು ಹಾಗೂ ಕೆರೆಯ ನೈರ್ಮಾಲ್ಯವನ್ನು ಹಾಳು ಮಾಡಿ ಸದರಿ ನೀರನ್ನು ಜನ ಮತ್ತು ಜಾನುವಾರುಗಳು ಕುಡಿಯು ವಂತಾಗಿದ್ದು, ಒಂದು ವೇಳೆ ಈ ನೀರು ಕುಡಿದಲ್ಲಿ ರೋಗ ರುಜುಗಳು ಬರಹುದಾಗಿದ್ದು, ಈ ಸಂಬಂಧ ಮೇಲ್ಕಂಡ  ಮಾರಪ್ಪರೆಡ್ಡಿ ಬಿನ್ ಪಾಪಿರೆಡ್ಡಿ ಹಾಗೂ ರೀಜ್ವಾನ್ ರವರ ಮೇನೆ ಸೂಕ್ತ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.42/2021 ಕಲಂ. 279,337  ಐ.ಪಿ.ಸಿ:-

     ದಿನಾಂಕ 16/02/2021 ರಂದು ರಾತ್ರಿ 8-00 ಗಂಟೆಗೆ ಪಿರ್ಯಾಧಿದಾರರಾದ ಶಿವಶೇಖರ್ ಪಿಸಿ 179 ,ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ-  ನನಗೆ ವಿಧುರಾಶ್ವತ್ಥ  ಹೊರ ಠಾಣೆಯ ಕರ್ತವ್ಯಕ್ಕೆ ನೇಮಿಸಿದ್ದು, ಅದರಂತೆ ನಾನು ಈ ದಿನ ದಿನಾಂಕ; 16/02/2021 ರಂದು ಸಂಜೆ ವಿಧುರಾಶ್ವತ್ಥ ಕ್ರಾಸ್ ನಲ್ಲಿ ಸಂಚಾರ ನಿಯಂತ್ರಣ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಸಂಜೆ ಸುಮಾರು 6-30 ಗಂಟೆ ಸುಮಾರು ವಿಧುರಾಶ್ವತ್ಥ ಕ್ರಾಸ್ ನಿಂದ ಗೌಡಸಂದ್ರ  ಗ್ರಾಮದ ಕಡೆ ಹೋಗುವ ರಸ್ತೆಯಲ್ಲಿ  ಬಸ್ ಹಾಗು ದ್ವಿಚಕ್ರ ವಾಹನಕ್ಕೆ ಅಪಘಾತವಾಗಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಕೂಡಲೇ ಸ್ಥಳಕ್ಕೆ ಹೋಗಲಾಗಿ,  ಗೌಡಸಂದ್ರ ರಸ್ತೆಯಲ್ಲಿ ಯರ್ರಹಳ್ಳಿ ಅಶ್ವತ್ಥನಾರಾಯಣಪ್ಪ ರವರ ಮನೆಯಿಂದ ಸ್ವಲ್ಪ ಮುಂದೆ  ಬಸ್ ಹಾಗು ದ್ವಿಚಕ್ರ ವಾಹನ ನಡುವೆ  ಅಪಘಾತವಾಗಿ ಒಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದು, ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ.  ಅಲ್ಲಿ ನೆರೆದಿದ್ದ ಜನರನ್ನು ವಿಚಾರಿಸಿದಾಗ  ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿಯು ವಿಧುರಾಶ್ವತ್ಥ ಕ್ರಾಸ್ ಕಡೆಯಿಂದ ಗೌಡಸಂದ್ರ ಕಡೆಗೆ ಹೋಗಲು AP-02.CC.4013 ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ,  ಎದುರಾಗಿ ಗೌಡಸಂದ್ರ ಕಡೆಯಿಂದ ಬಂದ KA.51.D.6471 ಬಸ್ಸಿನ ಚಾಲಕ ಬಸ್ಸನ್ನು ಅತಿವೇಗ ಹಾಗು ಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು AP-02.CC.4013 ದ್ವಿಚಕ್ರ ವಾಹನದ ಸವಾರನಿಗೆ ಡಿಕ್ಕಿ ಹೊಡೆಸಿದ ಪರಿಣಾಮ,  ದ್ವಿಚಕ್ರ ವಾಹನ ಸವಾರನ ಮುಖಕ್ಕೆ,ತುಟಿಗೆ, ಕುತ್ತಿಗೆ ಭಾಗಕ್ಕೆ ಎದೆಗೆ ರಕ್ತಗಾಯಗಳಾಗಿದ್ದು, ಗಾಯಾಳುವು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಗಾಯಾಳುವನ್ನು ನೋಡಲಾಗಿ, ಸುಮಾರು 25 ರಿಂದ 28 ವರ್ಷ ವಯಸ್ಸಿನವನಾಗಿರುತ್ತಾನೆ.  ದೃಡವಾದ ಮೈಕಟ್ಟು, ಸುಮಾರು 5.6 ಎತ್ತರ ಇರುತ್ತಾನೆ.  ಬಿಳೀ ಶರ್ಟ್, ಬಿಳೀ ಚೌಕಳೀ ಗೆರೆಗಳು ಇರುವ ಕಪ್ಪು ಪ್ಯಾಂಟ್,   ನೀಲಿ ನಿಕ್ಕರ್ ಧರಿಸಿರುತ್ತಾನೆ. ಗಾಯಾಳುವಿನ ಹೆಸರು ವಿಳಾಸ  ತಿಳಿದು ಬಂದಿರುವುದಿಲ್ಲ. ಕೂಡಲೇ ಗಾಯಾಳುವನ್ನು ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೇನೆ.   ಅಪಘಾತ ಮಾಡಿರುವ ಚಾಲಕನ ಹೆಸರು ವಿಳಾಸ ಸಹ ತಿಳಿದು ಬಂದಿರುವುದಿಲ್ಲ. ಆದುದರಿಂದ  AP-03.CC.4013 ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆಸಿ ಅಪಘಾತಕ್ಕೆ ಕಾರಣನಾದ KA.51.D.6471 ಬಸ್ಸಿನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ.

 

7. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.31/2021 ಕಲಂ. 160  ಐ.ಪಿ.ಸಿ:-

     ದಿನಾಂಕ 16/02/2021 ರಂದು ಸಂಜೆ 6-05 ಗಂಟೆಗೆ ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ತನಗೆ ಈ ದಿನ ದಿನಾಂಕ 16/02/2021 ರಂದು ಠಾಣಾಧಿಕಾರಿಗಳು ಗುಡಿಬಂಡೆ ಪುರದ  ಹಗಲು ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ತಾನು ಈ ದಿನ ದಿನಾಂಕ 16/02/2021 ರಂದು ಸಂಜೆ ಸುಮಾರು 5-00 ಗಂಟೆಯ ಸಮಯದಲ್ಲಿ ಗುಡಿಬಂಡೆ ಪುರದ ರೂರಲ್ ಗುಡಿಬಂಡೆಯಲ್ಲಿ ಗಸ್ತು ಮಾಡುತ್ತಿದ್ದಾಗ ಅಲ್ಲಿಯೇ ಎಲ್ಲೋಡು ಗ್ರಾಮವಾಸಿ ರಾಮಕೃಷ್ಣಪ್ಪ ರವರ ಮನೆಯ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ  ಆರೋಪಿತರು ಒಬ್ಬರಿಗೊಬ್ಬರು ಕೆಟ್ಟ ಮಾತುಗಳಿಂದ ಜೋರಾಗಿ ಬೈದಾಡಿಕೊಳ್ಳುತ್ತ ಕೈಗಳಿಂದ ಮತ್ತು ಪಾತ್ರೆಯಿಂದ ಹೊಡೆದಾಡುಕೊಳ್ಳುತ್ತಾ ಸಾರ್ವಜನಿಕರಿಗೆ ಭಯ-ಭೀತಿ ಉಂಟು ಮಾಡುತ್ತಿದ್ದರು ಆಗ ತಾನು ಅಲ್ಲಿಗೆ ಹೋಗಿ ಅಲ್ಲಿದ್ದವರನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ 1) ಚಂದ್ರ ಬಿನ್ ಆನಂದಪ್ಪ, ರೂರಲ್ ಗುಡಿಬಂಡೆ ಟೌನ್, 2) ಗಂಗಾದೇವಿ ಕೊಂ ರಾಮಕೃಷ್ಣರೆಡ್ಡಿ ರೂರಲ್ ಗುಡಿಬಂಡೆ,  3) ಮಮತಾ ಕೊಂ ಆನಂದಪ್ಪ ರೂರಲ್ ಗುಡಿಬಂಡೆ, 4) ರಾಮಕೃಷ್ಣರೆಡ್ಡಿ ಬಿನ್ ಲೇಟ್ ನಂಜರೆಡ್ಡಿ ಯಲ್ಲೋಡು ಗ್ರಾಮ ಗುಡಿಬಂಡೆ ತಾಲ್ಲೂಕು, 5) ಸುಜಾತ ಕೊಂ ರಾಮಕೃಷ್ಣರೆಡ್ಡಿ  ಯಲ್ಲೋಡು ಗ್ರಾಮ ಗುಡಿಬಂಡೆ ತಾಲ್ಲೂಕು ಎಂತ ತಿಳಿಸಿದ್ದು, ವಿಚಾರಣೆ ಮಾಡಲಾಗಿ ಗುಡಿಬಂಡೆ ಪುರದ ರೂರಲ್ ಗುಡಿಬಂಡೆಯ ಹೌಸ್ ಲೀಸ್ಟ್ ನಂ 76 ರ ಮನೆಯ ವಿಚಾರದಲ್ಲಿ ತಕರಾರುಗಳಿದ್ದು, ಈ ಸಂಬಂಧವಾಗಿ ಘನ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಇದರ ಸಂಬಂಧವಾಗಿ ಗಲಾಟೆ ಮಾಡಿಕೊಂಡು  ಹೊಡೆದಾಡಿಕೊಂಡೆವು ಎಂದು ತಿಳಿಸಿದರು. ಆಗ ಆರೋಪಿತರನ್ನು ಚಿಕಿತ್ಸೆಗಾಗಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ಹೋಗಲು ತಿಳಿಸಿದೆನು. ಮೇಲ್ಕಂಡ ಆರೋಪಿಗಳು ಸಾರ್ವಜನಿಕ ಸ್ಥಳದಲ್ಲಿ ಒಬ್ಬರಿಗೊಬ್ಬರು ಹೊಡೆದಾಡುಕೊಳ್ಳುತ್ತಾ ಸಾರ್ವಜನಿಕರಿಗೆ ಭಯ-ಭೀತಿ ಉಂಟು ಮಾಡುತ್ತಿದ್ದು, ಸದರಿಯವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

8. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.36/2021 ಕಲಂ. 302,34  ಐ.ಪಿ.ಸಿ:-

     ದಿನಾಂಕ:16/02/2021 ರಂದು ರಾತ್ರಿ 8-00 ಗಂಟೆಗೆ ಮಾಹಿತಿ ಬಂದ ಮೇರೆಗೆ ರಾತ್ರಿ 8-30 ಗಂಟೆಗೆ ಚನ್ನಭೈರೇನಹಳ್ಳಿ ಗ್ರಾಮಕ್ಕೆ ತೆರಳಿ ಪಿರ್ಯಾದಿದಾರರಾದ ಶ್ರೀಮತಿ ಲಕ್ಷ್ಮೀನರಸಮ್ಮ ಕೊಂ ಮುನೇಗೌಡ ರವರಿಂದ ದೂರನ್ನು ಪಡೆದು ರಾತ್ರಿ 8-45 ಗಂಟೆಗೆ ಠಾಣೆಗೆ ವಾಪಾಸ್ ಬಂದು ದಾಖಲಿಸಿದ ಪ್ರಕರಣದ ಸಾರಾಂಶವೇನೆಂದರೆ ನಾನು ನನ್ನ ಗಂಡನಾದ ಮುನೇಗೌಡ ರವರು ಜಿರಾಯ್ತಿ ಕೆಲಸ ಮಾಡಿಕೊಂಡಿದ್ದು, ನಮಗೆ ಇಬ್ಬರು ಮಕ್ಕಳಿದ್ದು, 1ನೇ ಮಂಜುನಾಥ 23 ವರ್ಷ, 2ನೇ ನನ್ನ ಮಗಳಾದ ಕುಮಾರಿ ಮೇಘನ 20 ವರ್ಷ ಈಕೆ ಗೌರಿಬಿದನೂರಿನಲ್ಲಿ 3ನೇ ವರ್ಷದ ಬಿಕಾಂ ನಲ್ಲಿ ವ್ಯಾಸಂಗ ಮಾಡುತ್ತಿರುತ್ತಾಳೆ. ನನ್ನ ಮಗ ಮಂಜುನಾಥನು ನಮ್ಮೊಂದಿಗೆ ವ್ಯವಸಾಯ ಕೆಲಸ ಮಾಡಿಕೊಂಡಿದ್ದನು ನಮ್ಮೂರಿನಲ್ಲಿಯೇ ನಮ್ಮ ಮಾವನಾದ ರಂಗಪ್ಪ ನಮ್ಮ ಅತ್ತೆಯಾದ ಪಿಳ್ಳಕ್ಕರವರು ಬೇರೆ ಮನೆಯಲ್ಲಿ ವಾಸವಾಗಿ ಜಿರಾಯ್ತಿ ಕೆಲಸ ಮಾಡಿಕೊಂಡಿರುತ್ತಾರೆ. ಈಗ್ಗೆ ಸುಮಾರು 4 ವರ್ಷಗಳಿಂದ ನನ್ನ ಮಗನಾದ ಮಂಜುನಾಥನು ಪ್ರತಿ ದಿನ ಮಧ್ಯಪಾನ ಮಾಡಿಕೊಂಡು ಬಂದು ನನ್ನ ಮೇಲೆ ಹಾಗೂ ನನ್ನ ಗಂಡನ ಮೇಲೆ ಜಗಳ ಮಾಡುತ್ತಿದ್ದನು ನಾವುಗಳು ಎಷ್ಟೇ ಬುದ್ದಿವಾದ ಹೇಳಿದರೂ ಕೇಳದೆ ನಮ್ಮ ಮೇಲೆ ಜಗಳ ಮಾಡುತ್ತಿದ್ದನು ನಮ್ಮೂರಿನ ಜನರು ಸಹ ಬುದ್ದಿ ಮಾತು ಹೇಳಿದರೂ ಕೇಳುತ್ತಿರಲಿಲ್ಲ. ದಿನಾಂಕ:16/02/2021 ರಂದು ಸಂಜೆ ಸುಮಾರು 6-30 ಗಂಟೆಯಲ್ಲಿ ನನ್ನ ಮಗನು ಮಧ್ಯಪಾನ ಮಾಡಿಕೊಂಡು ಬಂದು ನನ್ನ ಮೇಲೆ ಮತ್ತು ನನ್ನ ಗಂಡನ ಮೇಲೆ ಜಗಳ ಮಾಡಿದನು ನಾನು ನನ್ನ ಮಗನಿಗೆ ಗಲಾಟೆ ಮಾಡಬೇಡ ಎಂದು ಬುದ್ದಿವಾದ ಹೇಳಿದ್ದಕ್ಕೆ ತಾನು ತಾತನ ಮನೆ ಹತ್ತಿರ ಹೋಗುತ್ತೇನೆಂದು ಹೇಳಿ ನಮ್ಮ ಮನೆಯಿಂದ ಹೊರಟು ಹೋದನು ಇದೇ ದಿನ ರಾತ್ರಿ ಸುಮಾರು 7-00 ಗಂಟೆಗೆ ನಾನು ನನ್ನ ಮತ್ತು ಗಂಡನಾದ ಮುನೇಗೌಡ ರವರು ನಮ್ಮ ಮಾವನಾದ ರಂಗಪ್ಪ ರವರ ಮನೆ ಬಳಿ ಹೋದಾಗ ನನ್ನ ಮಗ ಮಂಜುನಾಥನು ಮನೆ ಬಳಿ ಇದ್ದನು ಆಗ ನಮ್ಮ ಮಾವ ನಮ್ಮನ್ನು ನೋಡಿದ ಕೂಡಲೇ ನನ್ನ ಮಗ ಮಂಜುನಾಥನನ್ನು ಕುರಿತು ನಿಮ್ಮ ಅಪ್ಪ ನಿನ್ನನ್ನು ಹುಡುಕಿಕೊಂಡು ಇಲ್ಲಿಗೇ ಬಂದಿದ್ದಾನೆ ಅವನಿಗೊಂದು ಗತಿ ಕಾಣಿಸು ಎಂದು ಹೇಳಿದಾಗ ಕೂಡಲೇ ನನ್ನ ಮಗ ಮಂಜುನಾಥನು ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ಬಂದು ನನ್ನ ಗಂಡ ಮುನೇಗೌಡನಿಗೆ ಬೆನ್ನಿನ ಹಿಂಭಾಗಕ್ಕೆ ಬಲವಾಗಿ ತಿವಿದು ಆತನ ಕಾಲಿನಿಂದ ನನ್ನ ಗಂಡನ ಕಾಲಿಗೆ ಜೋರಾಗಿ ಒದ್ದನು ನನ್ನ ಗಂಡ ಮನೆಯ ಮುಂದೆ ಇದ್ದ ವರಾಂಡದಲ್ಲಿ ಬಿದ್ದು ಹೋದನು ನಾನು ನನ್ನ ಗಂಡನನ್ನು ಉಪಚರಿಸಲು ಹೋದಾಗ ನನ್ನ ಮಗ ಮಂಜುನಾಥ ನನಗೆ ಕಾಲಿನಿಂದ ಹೊಟ್ಟೆಗೆ ಒದ್ದು, ವರಾಂಡದಲ್ಲಿದ್ದ ಸೌದೆಯ ಮೇಲೆ ನನ್ನನ್ನು ತಳ್ಳಿದನು ಆಗ ಅಲ್ಲೆ ಇದ್ದ ನನ್ನ ಅತ್ತೆ ಪಿಳ್ಳಕ್ಕ ರವರು ಬಂದು ನನ್ನ ಗಂಡನಿಗೆ ಉಪಚರಿಸಿದರು ಪಕ್ಕದ ಮನೆ ವಾಸಿಗಳಾದ ವೆಂಕಟೇಶಪ್ಪ, ನರಸೇಗೌಡ ರವರುಗಳು ಸಹ ಜಗಳ ಬಿಡಿಸಲು ಬಂದಾಗ ನಿವೇನಾದರೂ ಅಡ್ಡ ಬಂದರೆ ನಿಮಗೊಂದು ಗತಿ ಕಾಣಿಸುತ್ತೇನೆಂದು ಬೆದರಿಕೆ ಹಾಕಿದನು ದಾರಿಯಲ್ಲಿ ನಿಂತಿದ್ದ ಬೇಲ್ದಾರ್ ನರೇಂದ್ರಬಾಬು ರವರು ನಮ್ಮ ಮಗನಿಗೆ ಬುದ್ದಿ ಮಾತು ಹೇಳಿದರು, ಆಗ ಅವರಿಗೆ ನನ್ನ ಮಗನು ನೀನು ಇಲ್ಲಿಂದ ಸುಮ್ಮನೆ ಹೊರಟು ಹೋಗು ನಮ್ಮ ತಂದೆಗೆ ಆದ ಗತಿ ನಿನಗೂ ಆಗುತ್ತೆ ಎಂದು ಬೆದರಿಸಿ ಅಲ್ಲಿಂದ ನನ್ನ ಮಗ ಹೊರಟು ಹೋದನು ನಾನು ನನ್ನ ಗಂಡನನ್ನು ನೋಡಿದಾಗ ಕೊಲೆಯಾಗಿ ಮೃತಪಟ್ಟಿದ್ದನು. ನನ್ನ ಗಂಡನಾದ ಮುನೇಗೌಡರವರನ್ನು ಕೊಲೆ ಮಾಡಿದ ನನ್ನ ಮಗ ಮಂಜುನಾಥ ಹಾಗೂ ಕುಮ್ಮಕ್ಕು ನೀಡಿದ ನಮ್ಮ ಮಾವನಾದ ರಂಗಪ್ಪ ರವರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 

9. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.37/2021 ಕಲಂ. 279,338 ಐ.ಪಿ.ಸಿ:-

     ದಿನಾಂಕ:17/02/2021 ರಂದು ಪಿರ್ಯಾದಿದಾರರಾದ ಹನುಮಯ್ಯ ಬಿನ್ ಲೇಟ್ ನರಸಿಂಹಪ್ಪ, 65 ವರ್ಷ, ಪ.ಜಾತಿ, ಕೂಲಿ ಕೆಲಸ, ಕಡಬೂರು ಗ್ರಾಮ, ಡಿಪಾಳ್ಯ ಹೋಬಳಿ, ಗೌರೀಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 17-02-2021 ರಂದು ತನ್ನ  ಮಗನಾದ ಗಂಗಾಧರಪ್ಪ, 38 ವರ್ಷ ರವರು ಸೀಮೆ ಹಸುಗಳ ಹಾಲನ್ನು ಕರೆದುಕೊಂಡು ಡೈರಿಗೆ ಹಾಕಲು ತನ್ನ ಎಪಿ-02-ಪಿ-9990 ರ ಹೀರೊ ಹೋಂಡಾ ಸಿಡಿ-100 ದ್ವಿಚಕ್ರ ವಾಹನದಲ್ಲಿ ಕಡಬೂರು ಹಾಲಿನ ಡೈರಿಗೆ ಬರುತ್ತಿರುವಾಗ  ಅಂಬೇಡ್ಕರ್ ಕಾಲೋನಿಯ ಬಸ್ ನಿಲ್ದಾಣದ ಬಳಿ ಬೆಳಗ್ಗೆ 06.40 ಗಂಟೆ ಸಮಯದಲ್ಲಿ ನಾಮಗೊಂಡ್ಲು ಕಡೆಯಿಂದ ಬಂದ ರೋಟರ್ ಅಳವಡಿಸಿರುವ ಹೊಸ ಟ್ರ್ಯಾಕ್ಟರ್ ವಾಹನದ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು   ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಗಂಗಾಧರಪ್ಪ ರವರಿಗೆ ಅಪಘಾತಪಡಿಸಿರುವ ಬಗ್ಗೆ  ವಿಷಯವನ್ನು  ತನ್ನ ಗ್ರಾಮದ ಮಂಜುನಾಥ ಬಿನ್ ಅಶ್ವತ್ಥಪ್ಪ ರವರು ತಿಳಿಸಿದ್ದರ ಮೇರೆಗೆ  ಅಪಘಾತಸ್ಥಳಕ್ಕೆ  ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು    ಅಪಘಾತದಿಂದ ತನ್ನ ಮಗನ ಬಲಗಾಲಿನ ಮೊಣಕಾಲಿನ ಮೇಲ್ಬಾಗ ಮತ್ತು ಕೆಳಭಾಗ ಬಾರಿಗಾಯವಾಗಿದ್ದು ಅಲ್ಲಿನ ಸ್ಥಳಿಯರಿಂದ ಉಪಚರಿಸಿ ಅಲ್ಲಿಗೆ ಬಂದ 108 ಆಂಬುಲೆನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ನಂತರ ವೈದ್ಯರ ಸಲಹೆಯಮೇರೆಗೆ  ಬೆಂಗಳೂರಿನ ಪ್ರೊ.ಲೈಫ್ ಆಸ್ಪತ್ರೆಗೆ ದಾಖಲಿಸಿದ್ದು    ಅಪಘಾತ ಪಡಿಸಿದ ಹೊಸ ಟ್ರ್ಯಾಕ್ಟರ್ ಚಾಲಕ ಮೇಲೆ   ಕಾನೂನು ರೀತಿ ಕ್ರಮ ಜರುಗಿಸಿಬೇಕಾಗಿ ಕೋರಿ ನೀಡಿದ ಪ್ರ.ವ.ವರದಿ.   

ಇತ್ತೀಚಿನ ನವೀಕರಣ​ : 17-02-2021 06:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080