ಅಭಿಪ್ರಾಯ / ಸಲಹೆಗಳು

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.295/2021 ಕಲಂ. 323,324,504,34 ಐ.ಪಿ.ಸಿ:-

     ದಿನಾಂಕ: 15.09.2021 ರಂದು ಮದ್ಯಾಹ್ನ 1.45 ಗಂಟೆಗೆ ಪಿರ್ಯಾದಿದಾರರಾದ  ಇಮ್ರಾನ್ @ ಪಾತಿ ಬಿನ್ ಸಾಬುಸಾಬ್, 30 ವರ್ಷ, ಮುಸ್ಲಿಂ ಜನಾಂಗ, ಕೊಲಿಕೆಲಸ, ವಾಸ ಜಾಮೀಯಾ ಮಸೀದಿ ಬಳಿ, ಪಾತಪಾಳ್ಯ ಗ್ರಾಮ ಮತ್ತು  ಹೋಬಳಿ, ಬಾಗೇಪಲ್ಲಿ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ 13/09/2021 ರಂದು ರಾತ್ರಿ ಸುಮಾರು 10-00 ಗಂಟೆಯಲ್ಲಿ ನಾನು ಬಾಗೇಪಲ್ಲಿ ಟೌನ್ ನಲ್ಲಿರುವ ಎ.ಪಿ.ಎಂ.ಸಿ ಮಾರುಕಟ್ಟೆ ಬಳಿ ಹೋಗಿರುತ್ತೇನೆ. ಆಗ ಅಲ್ಲಿದ್ದವರು ಹಿಂದಿನ ದಿನ ರಾತ್ರಿ ಯಾರೋ ಮಾರ್ಕೇಟ್ ನಲ್ಲಿ ಮೊಬೈಲ್  ಕಳ್ಳತನ ಮಾಡಿರುವುದಾಗಿ ನನ್ನನ್ನು ಹಿಡಿದುಕೊಂಡಿದ್ದು ಅವರಲ್ಲಿ ತರಕಾರಿ ಮಾರ್ಕೇಟ್ ನಲ್ಲಿ ಕೆಲಸ ಮಾಡುವ  ಕಾರ್ತೀಕ್ ಬಿನ್ ನರಸಿಂಹಮೂರ್ತಿ, ಹುಸೇನ್ ಬಾಷಾ ಬಿನ್ ಬಾಷಾ, ಹೊಸಹುಡ್ಯ ಗ್ರಾಮದ ರಾಕೇಶ ಬಿನ್ ರಮೇಶ್ ಮತ್ತು ಸತೀಶ ಬಿನ್ ಗಂಗಾಧರಪ್ಪ  ಎಂಬುವವರು ನನಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ  ಹೊಡೆದು, ಹಿಡಿದುಕೊಂಡು ಕಂಬಕ್ಕೆ ಕಟ್ಟಿ ಹಾಕಿ ಪೊಬೈಲ್ ನೀಡುವಂತೆ  ರಾಕೇಶ್ ಮತ್ತು ಸತೀಶ ರವರು ತರಕಾರಿ ಹಾಕುವ ಕ್ರೇಟ್ ನಿಂದ ನನ್ನ ಮೈ ಕೈಗೆ ಹೊಡೆದು ರಕ್ತ ಗಾಯವನ್ನು ಉಂಟು ಮಾಡಿರುತ್ತಾರೆ. ನಂತರ ಸ್ಥಳೀಯರು ಬಂದು ನನ್ನನ್ನು ಅವರಿಂದ ಬಿಡಿಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ನಾನು ಆಸ್ಪತೆಯಲ್ಲಿ ಚಿಕಿತ್ಸೆ ಪಡೆದುಕೊಂಡು ನಮ್ಮ ಗ್ರಾಮಕ್ಕೆ ಹೋಗಿದ್ದು ಈ ದಿನ ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತಿದ್ದು ನನಗೆ ಅವಾಚ್ಯ ಶಬ್ದಗಳಿಂದ ಬೈದು, ಕಂಬಕ್ಕೆ ಕಟ್ಟಿಹಾಕಿ ಹೊಡೆದು ರಕ್ತಗಾಯ ಪಡಿಸಿರುವ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಕೋರುತ್ತೇನೆಂದು ನೀಡಿದ ದೂರಾಗಿರುತ್ತೆ.

 

2. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.128/2021 ಕಲಂ. 87 ಕೆ.ಪಿ ಆಕ್ಟ್:-

     ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರಿ.ಆರ್.ನಾರಾಯಣಸ್ವಾಮಿ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ:14/09/2021 ರಂದು ಸಂಜೆ 04-00 ಗಂಟೆ ಸಮಯದಲ್ಲಿ ನಾನು ಜೀಪ್ ಚಾಲಕ ಎಪಿಸಿ 65 ವೆಂಕಟೇಶ್ ರವರೊಂದಿಗೆ ಠಾಣಾ ವ್ಯಾಪ್ತಿಯ ಗ್ರಾಮಗಳ ಬೇಟಿ ಕರ್ತವ್ಯದಲ್ಲಿ ನಾಗರಾಜಹೊಸಹಳ್ಳಿ ಗ್ರಾಮದಲ್ಲಿ ಇದ್ದಾಗ ನನಗೆ ಠಾಣಾ ವ್ಯಾಪ್ತಿಯ ಬೈರಾಬಂಡ ಗ್ರಾಮದ ಕೆರೆಯಲ್ಲಿನ ಹೊಂಗೇ ಮರಗಳ ಕೆಳಗೆ ಯಾರೋ ಆಸಾಮಿಗಳು ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ ನಾನು ಠಾಣೆಗೆ ಪೋನ್ ಮಾಡಿ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ 36 ಶ್ರೀ.ವಿಜಯ್ ಕುಮಾರ್ ಬಿ, ಹೆಚ್.ಸಿ 139 ಶ್ರೀ.ಶ್ರೀನಾಥ ಎಂ.ಪಿ, ಪಿಸಿ 262 ಶ್ರೀ.ಅಂಬರೀಶ್,ಪಿ.ಸಿ 110 ಸುರೇಶ್, ಪಿ.ಸಿ 291 ಗಂಗಾಧರ ರವರುಗಳನ್ನು ನಾಗರಾಜಹೊಸಹಳ್ಳಿ ಗ್ರಾಮದ ಬಳಿಗೆ ಬರಮಾಡಿಕೊಂಡು ಅಲ್ಲಿಯೇ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರು ಹಾಗೂ ಸಿಬ್ಬಂದಿಯೊಂದಿಗೆ ನಾವುಗಳು ಸರ್ಕಾರಿ ಜೀಪ್ ಮತ್ತು ದ್ವಿಚಕ್ರ ವಾಹನಗಳಲ್ಲಿ ಸಂಜೆ 04-15 ಗಂಟೆಗೆ  ಬೈರಾಬಂಡ ಗ್ರಾಮದ ಕೆರೆಯ ಬಳಿಗೆ ಹೋಗಿ ದ್ವಿಚಕ್ರ ವಾಹನಗಳು ಮತ್ತು ಸರ್ಕಾರಿ ಜೀಪ್ ನ್ನು ಮರೆಯಲ್ಲಿ ನಿಲ್ಲಿಸಿ ನಾವುಗಳು ಸ್ವಲ್ಪ ದೂರ ಮುಂದೆ ಕಾಲು ನಡಿಗೆಯಲ್ಲಿ ನಡೆದುಕೊಂಡು ಹೋಗಿ ಮರಗಳ ಮರೆಯಲ್ಲಿ ನಿಂತು ನೋಡಲಾಗಿ ಕೆರೆಯಲ್ಲಿನ ಜಾಲಿ ಮರದ ಕೆಳಗೆ ಯಾರೋ ಆಸಾಮಿಗಳು ವೃತ್ತಾಕಾರದಲ್ಲಿ ಗುಂಪಾಗಿ ಕುಳಿತುಕೊಂಡು ಅಂದರ್ 100 ರೂ ಬಾಹರ್ 100 ರೂ ಎಂದು ಕೂಗುಗಳನ್ನು ಇಡುತ್ತಾ ಇಸ್ಪೀಟ್ ಜೂಜಾಟವನ್ನು ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಪಂಚಾಯ್ತಿದಾರರೊಂದಿಗೆ ನಾನು ಮತ್ತು ಸಿಬ್ಬಂದಿಯವರು ಸದರಿ ಗುಂಪನ್ನು ಸುತ್ತುವರೆದು ಇಸ್ಪೀಟ್ ಜೂಜಾಟವಾಡುತ್ತಿದ್ದವರನ್ನು ಓಡಿ ಹೋಗದಂತೆ ಸೂಚಿಸಿದರೂ ಸಹ ಸದರಿಯವರು ಓಡಿ ಹೋಗಲು ಯತ್ನಿಸಿದ್ದು ಅವರುಗಳ ಪೈಕಿ ಸಿಬ್ಬಂದಿಯ ಸಹಾಯದಿಂದ 6 ಜನ ಆಸಾಮಿಗಳನ್ನು ಹಿಡಿದುಕೊಂಡಿದ್ದು ಒಬ್ಬ ವ್ಯಕ್ತಿ ನಮ್ಮಿಂದ ತಪ್ಪಿಸಿಕೊಂಡು ಓಡಿ ಹೋಗಿರುತ್ತಾನೆ ನಾವು ಹಿಡಿಸುಕೊಂಡ ಆಸಾಮಿಗಳ ಹೆಸರು ಮತ್ತು ವಿಳಾಸಗಳನ್ನು ಪಂಚಾಯ್ತಿದಾರರ ಸಮಕ್ಷಮ ವಿಚಾರಿಸಲಾಗಿ 1) ಶಿವಕುಮಾರ್ ಬಿನ್ ಕೋನಪ್ಪ 38 ವರ್ಷ,ಗೊಲ್ಲ ಜನಾಂಗ,ಚಾಲಕ ಕೆಲಸ,ವಾಸ ಬೈರಾಬಂಡ ಗ್ರಾಮ ಚಿಂತಾಮಣಿ ತಾಲ್ಲೂಕು ಮೊ.ನಂ-9880153988 ,2) ವೆಂಕಟರವಣಪ್ಪ ಬಿನ್ ಲೇಟ್ ಬೈಯಪ್ಪ 38 ವರ್ಷ,ವಕ್ಕಲಿಗರು,ಕೂಲಿಕೆಲಸ,ವಾಸ ಬೈರಾಬಂಡ ಗ್ರಾಮ ಚಿಂತಾಮಣಿ ತಾಲ್ಲೂಕು,3) ಕಲ್ಯಾಣ್ ಬಿನ್ ಗಂಗುಲಪ್ಪ 23 ವರ್ಷ,ಆದಿಕರ್ನಾಟಕ ಜನಾಂಗ,ಕೂಲಿಕೆಲಸ,ವಾಸ ಬೈರಾಬಂಡ ಗ್ರಾಮ ಚಿಂತಾಮಣಿ ತಾಲ್ಲೂಕು ಮೊ.ನಂ-8971575972, 4) ಶಿವಣ್ಣ ಬಿನ್ ಲೇಟ್ ಗಂಗುಲಪ್ಪ 39 ವರ್ಷ,ಆದಿಕರ್ನಾಟಕ ಜನಾಂಗ,ಬಂಡೆ ಕೆಲಸ,ವಾಸ ಬೈರಾಬಂಡ ಗ್ರಾಮ ಚಿಂತಾಮಣಿ ತಾಲ್ಲೂಕು, 5) ವಿಜಯ್ ಕುಮಾರ್ ಬಿನ್ ಕೋನಪ್ಪ 25 ವರ್ಷ,ಭೋವಿ ಜನಾಂಗ,ಬಂಡೆ ಕೆಲಸ,ವಾಸ ಬೈರಾಬಂಡ ಗ್ರಾಮ ಚಿಂತಾಮಣಿ ತಾಲ್ಲೂಕು ಮೊ.ನಂ-9663590899, 6) ವೆಂಕಟರವಣಪ್ಪ ಬಿನ್ ಲೇಟ್ ಪೆದ್ದಕಿಟ್ಟಣ್ಣ 35 ವರ್ಷ,ಕೂಲಿಕೆಲಸ,ವಾಸ ಬೈರಾಬಂಡ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು ನಂತ ಸ್ಥಳದಿಂದ ಓಡಿ ಹೋದ ಆಸಾಮಿಯ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ 7) ಅಭಿಲಾಷ ಬಿನ್ ಅಪ್ಪಿರೆಡ್ಡಿ 23 ವರ್ಷ, ವಕ್ಕಲಿಗರು,ಕೂಲಿಕೆಲಸ,ವಾಸ ಬೈರಾಬಂಡ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ.  ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಪರಿಶೀಲಿಸಲಾಗಿ ಸ್ಥಳದಲ್ಲಿ ಒಂದು ಬಿಳಿ ಗೋಣಿಚೀಲವನ್ನು ನೆಲದಲ್ಲಿ ಹಾಸಿದ್ದು, ಸದರಿ ಗೋಣಿಚೀಲದ ಮೇಲೆ ಅಂದರ್ ಬಾಹರ್ ಜೂಜಾಟವಾಡಲು ಪಣವಾಗಿಟ್ಟಿದ್ದ ಹಣ, ಮತ್ತು ಇಸ್ಟೀಟು ಎಲೆಗಳು ಇದ್ದು, ಅವುಗಳನ್ನು  ಪರಿಶೀಲಿಸಲಾಗಿ ಒಟ್ಟು 52 ಇಸ್ಟೀಟ್ ಎಲೆಗಳಿದ್ದು, ನಗದು ಹಣ ಒಟ್ಟು 2530/- ರೂಗಳಿರುತ್ತೆ ಸ್ಥಳದಲ್ಲಿ ಇದ್ದ 6 ಜನ ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು, ಅವರು ಇಸ್ಪೀಟ್ ಜೂಜಾಟಕ್ಕೆ ಪಣವಾಗಿಟ್ಟಿದ್ದ, 2530/- ರೂಗಳ ನಗದು ಹಣವನ್ನು, ಒಂದು ಗೋಣಿಚೀಲ ಹಾಗೂ 52 ಇಸ್ಟೀಟ್ ಎಲೆಗಳನ್ನು ಮುಂದಿನ ಕ್ರಮಕ್ಕಾಗಿ ಸಂಜೆ 04-30 ಗಂಟೆಯಿಂದ ಸಂಜೆ 05-30 ಗಂಟೆಯವರೆಗೆ ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ ಅಮಾನತ್ತುಪಡಿಸಿಕೊಂಡು ಠಾಣೆಗೆ ಸಂಜೆ 06-00 ಗಂಟೆಗೆ ಹಾಜರಾಗಿ ಸ್ವತಃ ಠಾಣೆಯ ಎನ್ ಸಿ ಆರ್ ನಂ: 184/2021 ರಂತೆ ದಾಖಲಿಸಿಕೊಂಡಿರುತ್ತೆ. ಈ ಪ್ರಕರಣದ ಆರೋಪಿಗಳು ಮತ್ತು ಮಾಲಿನ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಅನುಮತಿಯನ್ನು ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿ ಪಿಸಿ 388 ಗದ್ದೆಪ್ಪ ಶಿವಪುರ ರವರ ಮೂಲಕ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡು ಮಧ್ಯಾಹ್ನ 03-30 ಗಂಟೆಗೆ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.409/2021 ಕಲಂ. 323,324,504,506,34 ಐ.ಪಿ.ಸಿ:-

     ದಿನಾಂಕ: 15/09/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ವೆಂಕಟಕೃಷ್ಣಪ್ಪ ಬಿನ್ ವೆಂಕಟಸ್ವಾಮಿ, 65 ವರ್ಷ, ಜಿರಾಯ್ತಿ, ನಾಯಕ ಜನಾಂಗ, ಮಲ್ಲಿಕಾಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಸಂಜೆ 4.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡು ಗಾಯಾಳುವಿನ ಹೇಳಿಕೆ ದೂರಿನ ಸಾರಾಂಶವೇನೆಂದರೆ, ತಮಗೆ ತಮ್ಮ ಗ್ರಾಮದಲ್ಲಿ ಸರ್ವೇ ನಂಬರ್ 42/2 ರಲ್ಲಿ ಜಮೀನಿದ್ದು, ಸದರಿ ಜಮೀನಿನ ಬದಿಯಲ್ಲಿ ತಾವು ಓಡಾಡಲು ಒಂದು ದಾರಿಯನ್ನು ಬಿಟ್ಟುಕೊಂಡಿರುತ್ತೇವೆ. ಹೀಗಿರುವಾಗ ಮೇಲ್ಕಂಡ ತಮ್ಮ ಜಮೀನಿನಲ್ಲಿ ತಮ್ಮ ಗ್ರಾಮದ, ತಮ್ಮ ಜನಾಂಗದ ಅಚ್ಚಪ್ಪ ಮತ್ತು ಅವರ ಕಡೆಯವರು ಓಡಾಡುತ್ತಿದ್ದು, ಈ ಬಗ್ಗೆ ಹಲವಾರು ಬಾರಿ ತಮ್ಮ ಮದ್ಯೆ ಬಾಯಿ ಮಾತಿನಲ್ಲಿ ಜಗಳವಾಗಿರುತ್ತೆ. ಹೀಗಿರುವಾಗ ಈ ದಿನ ದಿನಾಂಕ: 15/09/2021 ರಂದು ಬೆಳಿಗ್ಗೆ 07.00 ಗಂಟೆ ಸಮಯದಲ್ಲಿ ಮೇಲ್ಕಂಡ ಅಚ್ಚಪ್ಪ ಬಿನ್ ಮುನಿವೆಂಕಟರಾಯಪ್ಪ, 40 ವರ್ಷ, ಜಿರಾಯ್ತಿ ಮತ್ತು ಅವರ ಕಡೆಯವರಾದ ರಾಮಕೃಷ್ಣ ಬಿನ್ ಮುನಿವೆಂಕಟರಾಯಪ್ಪ, 35 ವರ್ಷ, ಜಿರಾಯ್ತಿ, ವೆಂಕಟರಾಯಪ್ಪ ಬಿನ್ ಮುನಿವೆಂಕಟರಾಯಪ್ಪ, 50 ವರ್ಷ, ಜಿರಾಯ್ತಿ ಮತ್ತು ಪ್ರದೀಪ್ ಬಿನ್ ಅಚ್ಚಪ್ಪ ರವರು ಮೇಲ್ಕಂಡ ತಮ್ಮ ಜಮೀನಿನಲ್ಲಿದ್ದ ಕಲ್ಲುಗಳನ್ನು ಕೀಳುತ್ತಿದ್ದು, ಆಗ ತಾನು ಮತ್ತು ತನ್ನ ಮಗ ಸುರೇಶ್, 33 ವರ್ಷ, ಜಿರಾಯ್ತಿ ರವರು ಅಲ್ಲಿಗೇ ಹೋಗಿ ಏಕೆ ನಮ್ಮ ಜಮೀನಿನಲ್ಲಿರುವ ಕಲ್ಲುಗಳನ್ನು ಕೀಳುತ್ತಿದ್ದೀರಾ ಎಂದು ಕೇಳಿದ್ದು, ಆಗ ರಾಮಕೃಷ್ಣ ರವರು ತನ್ನ ಮೇಲೆ ಗಲಾಟೆ ಮಾಡಿ, ಬೋಳಿ ನನ್ನ ಮಗನೇ ಇದು ದಾರಿ, ನಾನೇದರೂ ಮಾಡಿಕೊಳ್ಳುತ್ತೇನೆ ನಿನಗ್ಯಾಕೆ ಎಂದು ಅವಾಚ್ಯಶಬ್ದಗಳಿಂದ ಬೈದು, ಕೈಗಳಿಂದ ಮೈ ಮೇಲೆ ಹೊಡೆದು ಅಲ್ಲಿಯೇ ಬಿದ್ದಿದ್ದ ನೀಲಗಿರಿ ದೊಣ್ಣೆಯಿಂದ ತನ್ನ ಎಡಗೈ ಮತ್ತು ಮುಖದ ಮೇಲೆ ಹೊಡೆದು ರಕ್ತಗಾಯಪಡಿಸಿದನು. ಜಗಳ ಬಿಡಿಸಲು ಬಂದ ತನ್ನ ಮಗ ಸುರೇಶ್ ರವರಿಗೆ ಅಚ್ಚಪ್ಪ ರವರು ಅದೇ ದೊಣ್ಣೆಯಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿದನು. ಉಳಿದವರು ತಮ್ಮಿಬ್ಬರನ್ನು ಕೆಳಗೆ ತಳ್ಳಿ ಕಾಲುಗಳಿಂದ ಒದ್ದು, ಇನ್ನೊಂದು ಬಾರಿ ಈ ದಾರಿಯ ತಂಟೆಗೆ ಬಂದರೆ ನಿಮ್ಮನ್ನು ಪ್ರಾಣಸಹಿತ ಬಿಡುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿದರು. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳೀಕೆಯ ದೂರಾಗಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.410/2021 ಕಲಂ. 279,337,427,304(A) ಐ.ಪಿ.ಸಿ & 134(A&B) INDIAN MOTOR VEHICLES ACT:-

     ದಿನಾಂಕ: 16/09/2021 ರಂದು ಮದ್ಯಾಹ್ನ 12.00 ಗಂಟೆಗೆ ಶ್ರೀಮತಿ ಮುನಿಲಕ್ಷ್ಮಮ್ಮ ಕೋಂ ನಾರಾಯಣಸ್ವಾಮಿ, 45 ವರ್ಷ, ಆದಿ ದ್ರಾವಿಡ ಜನಾಂಗ, ಕೂಲಿ ಕೆಲಸ, ವಾಸ: ಬೊಮ್ಮೆಕಲ್ಲು ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಗಂಡ ನಾರಾಯಣಸ್ವಾಮಿ ಬಿನ್ ಲೇಟ್ ಮುನಿದಾಸಪ್ಪ, 48 ವರ್ಷ ರವರು ಕೂಲಿ ಕೆಲಸ ಮಾಡಿಕೊಂಡಿದ್ದರು. ದಿನಾಂಕ: 15/09/2021 ರಂದು ಬೆಳಿಗ್ಗೆ ಸುಮಾರು 07.00 ಗಂಟೆ ಸಮಯಕ್ಕೆ ಎಂದಿನಂತೆ ಕೂಲಿ ಕೆಲಸಕ್ಕೆ ಮನೆ ಬಿಟ್ಟು ಹೋದರು. ರಾತ್ರಿ ಎಷ್ಟು ಹೊತ್ತಾದರೂ ಮನೆಗೆ ಬರಲಿಲ್ಲ. ನಂತರ ತಾನು ತನ್ನ ಮೈದ ಶ್ರೀನಿವಾಸ್ ಹಾಗೂ ತಮ್ಮ ಮನೆಯವರು ತನ್ನ ಗಂಡನಿಗಾಗಿ ಎಲ್ಲಾ ಕಡೆ ಹುಡುಕಾಡಿದರೂ ಎಲ್ಲಿಯೂ ಪತ್ತೆಯಾಗಲಿಲ್ಲ. ಈ ದಿನ ದಿನಾಂಕ: 16/09/2021 ರಂದು ಬೆಳಿಗ್ಗೆ ತನ್ನ ಮೈದ ಶ್ರೀನಿವಾಸ ರವರು ದಿನಾಂಕ: 15/09/2021 ರಂದು ರಾತ್ರಿ ಕಡಪ-ಬೆಂಗಳೂರು ರಸ್ತೆಯ  ಟಿ.ಹೊಸಹಳ್ಳಿ ಗ್ರಾಮದ ಗೇಟ್ ಬಳಿ ಟ್ರಾಕ್ಟರ್ ಹಾಗೂ ಹಾಲಿನ ಟ್ಯಾಂಕರ್ ಮದ್ಯೆ ಅಪಘಾತವಾಗಿದ್ದು ಟ್ರಾಕ್ಟರ್ ನಲ್ಲಿ ಇದ್ದ ಒಬ್ಬ ಅಸಾಮಿ ಮೃತಪಟ್ಟಿರುವುದಾಗಿ ತಿಳಿದು ಬಂದಿದ್ದು ನಾನು ಹಾಗೂ ತನ್ನ ತಮ್ಮ ಮುನಿರಾಜು ರವರುಗಳು  ಚಿಂತಾಮಣಿ ಅಸ್ಪತ್ರೆಗೆ ಹೋಗಿ ನೋಡಿಕೊಂಡು ಬಂದಿದ್ದು ಮೃತಪಟ್ಟಿರುವ ಅಸಾಮಿ ನನ್ನ ಅಣ್ಣ ನಾರಾಯಣಸ್ವಾಮಿ ರವರಾಗಿರುವುದಾಗಿ ವಿಷಯ ತಿಳಿಸಿದ ಕೂಡಲೇ ತಾನು ಹಾಗೂ ಇತರರು ಚಿಂತಾಮಣಿ ಸರ್ಕಾರಿ ಅಸ್ಪತ್ರೆಯ ಶವಗಾರಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು ತನ್ನ ಗಂಡನ ತಲೆಗೆ ಮೈ-ಕೈ ಮೇಲೆಲ್ಲ ತೀವ್ರವಾದ ಗಾಯಗಳಾಗಿ ತಲೆ ಜಜ್ಜಿ ಹೋಗಿ ತನ್ನ ಗಂಡ ಮೃತಪಟ್ಟಿದ್ದರು. ಅಲ್ಲಿದ್ದ ಟಿ.ಹೊಸಹಳ್ಳಿ ಗ್ರಾಮದ ನ್ಯಾನಪ್ಪನ ಮಗ ಜಯಣ್ಣ ಹಾಗೂ ಇತರರನ್ನು ವಿಚಾರ ಮಾಡಲಾಗಿ, ನೆನ್ನೆ ದಿನ ದಿನಾಂಕ: 15/09,2021 ರಂದು ರಾತ್ರಿ ಸುಮಾರು 8.00 ಗಂಟೆ ಸಮಯದಲ್ಲಿ ಬೆಂಗಳೂರು ಕಡಪ ರಸ್ತೆಯ ಬೆಂಗಳೂರು ರಸ್ತೆ ಕಡೆಯಿಂದ ಟ್ರಾಕ್ಟರ್ ನಂಬರ್ ಕೆಎ-44 ಟಿ-1113 ಮತ್ತು ಟ್ರೈಲರ್ ನಂಬರ್ ಕೆಎ-40 ಟಿ-7254 ಅನ್ನು ಅದರ ಚಾಲಕ ರಸ್ತೆಯ ಎಢ ಬದಿಯಲ್ಲಿ ಚಾಲನೆ ಮಾಡಿಕೊಂಡು ಟಿ.ಹೊಸಹಳ್ಳಿ ಗೇಟ್ ಬಳಿ ಬರುತ್ತಿದ್ದಾಗ ಅದೇ ಬೆಂಗಳೂರು ರಸ್ತೆ ಕಡೆಯಿಂದ ನೊಂದಣಿ ಸಂಖ್ಯೆ ಕೆಎ-01 ಎಎಲ್-8683 ಹಾಲಿನ ಟ್ಯಾಂಕರ್ ಅನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಭಸವಾಗಿ ಮೇಲ್ಕಂಡ ಟ್ರಾಕ್ಟರ್ ನ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿದ್ದು, ಇದರ ಪರಿಣಾಮ ಟ್ರಾಕ್ಟರ್ ನ ಡ್ರೈವರ್ ಮತ್ತು ಡ್ರೈವರ್ ಪಕ್ಕದಲ್ಲಿ ಕುಳಿತಿದ್ದ ಅಸಾಮಿ ಕೆಳಕ್ಕೆ ಬಿದ್ದು ಹೋಗಿದ್ದು, ಕೆಳಕ್ಕೆ ಬಿದ್ದು ಹೋಗಿದ್ದ ಡ್ರೈವರ್ ಪಕ್ಕದಲ್ಲಿ ಕುಳಿತಿದ್ದ ಅಸಾಮಿಯ ಮೇಲೆ ಟ್ರಾಕ್ಟರ್ನ ಚಕ್ರ ಹರಿದು ಅತನ ತಲೆ ಜಜ್ಜಿ ಹೊಗಿದ್ದು ಮೈ-ಕೈ ಮೇಲೆ ತೀವ್ರವಾದ ಗಾಯಗಳಾಗಿ, ಸ್ಥಳದಲ್ಲಿಯೇ ಮೃತಪಟ್ಟನೆಂತಲೂ. ಟ್ರ್ಯಾಕ್ಟರ್ ಚಾಲಕ ಕೈವಾರ ಗ್ರಾಮದ ವಾಸಿ ಸುಬ್ಬಣ್ಣ ಬಿನ್ ಲೇಟ್ ರಾಮಚಂದ್ರಪ್ಪ ರವರಿಗೂ ಗಾಯಗಳಾಗಿರುವುದಾಗಿಯೂ, ಅಪಘಾತ ಸಮಯದಲ್ಲಿ  ಟ್ಯಾಂಕರ್ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ  ಟ್ರಾಕ್ಟರ್ ರಸ್ತೆ ಬದಿಯಲ್ಲಿದ್ದ ತಮ್ಮ ಗ್ರಾಮದ ಮುರಳಿ ಎಂಬುವರ ಶೇವಿಂಗ್ ಷಾಪ್ ಕಡೆ ನುಗ್ಗಿ ಶೇವಿಂಗ್ ಷಾಪ್ ನ ಮುಂಭಾಗದ ಶೇಟರ್ ಒಳಭಾಗದ ಗ್ಲಾಸ್ ಮುಂತಾದ ಕಡೆ ತೀವ್ರವಾಗಿ ಜಖಂಗೊಂಡಿರುತ್ತೆ ಎಂಬುದಾಗಿಯೂ ಮೃತಪಟ್ಟಿದ್ದ ಅಸಾಮಿಯನ್ನು ಯಾವುದೂ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಅಸ್ಪತ್ರೆಗೆ ತಾನು ಹಾಗೂ ಸ್ಥಳದಲ್ಲಿ ಇದ್ದ ಇತರರು ಸಾಗಿಸಿದ್ದಾಗಿ ವಿಷಯ ತಿಳಿಸಿದರು. ಮೇಲ್ಕಂಡಂತೆ ಅಪಘಾತ ಮಾಡಿ ಸ್ಥಳದಲ್ಲಿ ವಾಹನವನ್ನು ಬಿಟ್ಟು, ಪೊಲೀಸರಿಗೂ ತಿಳಿಸದೆ, ಗಾಯಾಳುಗಳ ಚಿಕಿತ್ಸೆಗೆ ಸಹಕರಿಸದೆ, ಸ್ಥಳದಿಂದ ಪರಾರಿಯಾಗಿರುವ ನೊಂದಣಿ ಸಂಖ್ಯೆ ಕೆ.ಎ-01 ಎ.ಎಲ್-8683 ಹಾಲಿನ ಟ್ಯಾಂಕರ್ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ. ಅಪಘಾತದ ವಿಷಯ ಈ ದಿನ ತಮಗೆ ತಿಳಿದು ಬಂದಿದ್ದು, ಮೃತನ ಹೆಣವನ್ನು ಗುರುತಿಸಿದ ನಂತರ ತಡವಾಗಿ ದೂರನ್ನು ನೀಡಿರುತ್ತಾರೆ.

 

5. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.176/2021 ಕಲಂ. 392 ಐ.ಪಿ.ಸಿ :-

     ಪಿರ್ಯಾದಿದಾರರಾದ ವರಲಕ್ಷ್ಮೀ ಕೋಂ ನಾಗರಾಜ್, 45 ವರ್ಷ, ಎಸ್.ಎಫ್.ಎಸ್ ಶಾಲೆಯಲ್ಲಿ ಕೆಲಸ, ವೆಂಕಟಗಿರಿಕೋಟೆ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ತಾನು ಚಿಂತಾಮಣಿ ನಗರದ ಎಸ್.ಎಫ್.ಎಸ್ ಶಾಲೆಯಲ್ಲಿ  ಕ್ಲಕ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ. ಹೀಗಿರುವಾಗ ದಿನಾಂಕ 15/09/2021 ರಂದು ಬೆಳಿಗ್ಗೆ 11-00 ಸಮಯದಲ್ಲಿ ಚಿಂತಾಮಣಿ ನಗರದ ಪ್ರಭಾಕರ್ ಬಡಾವಣೆಯಲ್ಲಿ ತಮ್ಮ ಸಂಬಂಧಿಕರ ನಾಮಕರಣ ಕಾರ್ಯಕ್ರಮವಿದ್ದುದ್ದರಿಂದ ತಾನು ಸದರಿ ಕಾರ್ಯಕ್ರಮಕ್ಕೆ ಹೋಗಿ ಮಧ್ಯಾಹ್ನ ಸುಮಾರು 3-30 ಗಂಟೆ ಸಮಯದಲ್ಲಿ ಮನೆಗೆ ವಾಪಸ್ಸು ಬರಲು ನನ್ನ ಬಾಬತ್ತು ದ್ವಿ-ಚಕ್ರ ವಾಹನದಲ್ಲಿ ಬಾಗೇಪಲ್ಲಿ ಸರ್ಕಲ್ ಕಡೆ ಹೋಗುವ ರಸ್ತೆಯಲ್ಲಿರುವ ಗ್ಯಾರೇಜ್ ಮುಂಭಾಗದಲ್ಲಿ ಹೋಗುತ್ತಿದ್ದಾಗ ಹಿಂದುಗಡೆಯಿಂದ ಯಾರೋ ಇಬ್ಬರು ಅಸಾಮಿಗಳು ನೋಂದಣಿ ಸಂಖ್ಯೆ ಇಲ್ಲದ ದ್ವಿ-ಚಕ್ರ ವಾಹನದಲ್ಲಿ ಬಂದು ನನ್ನ ಕುತ್ತಿಗೆಯಲ್ಲಿದ್ದ ಸುಮಾರು 2,50000/- ರೂ ಬೆಲೆ ಬಾಳುವ 64 ಗ್ರಾಂ ಬಂಗಾರದ ಕರಿ ಮಣಿ ಸರವನ್ನು ಕಿತ್ತುಕೊಂಡಿದ್ದು ನಾನು ಕಿರುಚಿಕೊಳ್ಳುವಷ್ಟರಲ್ಲಿ ಸದರಿ ಅಸಾಮಿಗಳು ಅಲ್ಲಿಂದ ಪರಾರಿಯಾಗಿರುತ್ತಾರೆ. ಆದ್ದರಿಂದ ತನ್ನ ಬಂಗಾರದ ವಡವೆಗಳನ್ನು ಕಿತ್ತುಕೊಂಡು ಪರಾರಿಯಾಗಿರುವವರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

6. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.177/2021 ಕಲಂ. 392 ಐ.ಪಿ.ಸಿ :-

     ಪಿರ್ಯಾದಿದಾರರಾದ ಶ್ರೀಮತಿ ಸರಸ್ವತಮ್ಮ ಕೋಂ ನಾರಾಯಣರೆಡ್ಡಿ, 58 ವರ್ಷ, ವಕ್ಕಲಿಗ, ವ್ಯವಸಾಯ, ಸಾಕಪಲ್ಲಿ ಗ್ರಾಮ, ನೆಲವಂಕಿ ಹೋಬಳಿ, ಶ್ರೀನಿವಾಸಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ   ತಾನು ನಮ್ಮ ಸ್ವಂತ ಊರಾದ ಸಾಕಪಲ್ಲಿ ಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡು  ಜೀವನ ಮಾಡಿಕೊಂಡಿರುತ್ತೇನೆ. ಸುಮಾರು ಒಂದು ತಿಂಗಳ ಹಿಂದೆ ಚಿಂತಾಮಣಿ ನಗರ ಆಶ್ವಿನಿ ಬಡಾವಣೆಯಲ್ಲಿರುವ ನಮ್ಮ ಅಳಿಯನಾದ ಚೇತನ್ ರವರ ಮನೆಗೆ ಬಂದಿರುತ್ತೇನೆ. ಹೀಗಿರುವಾಗ ದಿನಾಂಕ 15/09/2021 ರಂದು ಸುಮಾರು ಸಂಜೆ 4.00 ಗಂಟೆಯಲ್ಲಿ ಅಶ್ವನಿ ಬಡಾವಣೆಯಲ್ಲಿರುವ ತಮ್ಮ ಅಳಿಯ ಮನೆಯ ಪಕ್ಕದಲ್ಲಿದ್ದ ತನ್ನ ತಂಗಿ ಮನೆಗೆ ಹೋಗುತ್ತಿರುವಾಗ  ಹಿಂದುಗಡೆಯಿಂದ ಯಾರೋ ಇಬ್ಬರು ಅಸಾಮಿಗಳು ನೋಂದಣಿ ಸಂಖ್ಯೆ ಇಲ್ಲದ ದ್ವಿ-ಚಕ್ರ ವಾಹನದಲ್ಲಿ ಬಂದು ನನ್ನ ಕುತ್ತಿಗೆಯಲ್ಲಿದ್ದ ಸುಮಾರು 240,000/- ರೂ ಬೆಲೆ ಬಾಳುವ 60 ಗ್ರಾಂ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡಿದ್ದು ತಾನು ಕಿರುಚಿಕೊಳ್ಳುವಷ್ಟರಲ್ಲಿ ಸದರಿ ಅಸಾಮಿಗಳು ಅಲ್ಲಿಂದ ಪರಾರಿಯಾಗಿರುತ್ತಾರೆ. ಆದ್ದರಿಂದ ತನ್ನ ಬಂಗಾರದ ವಡವೆಗಳನ್ನು ಕಿತ್ತುಕೊಂಡು ಪರಾರಿಯಾಗಿರುವವರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

7. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.239/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 15/09/2021 ರಂದು ಬೇಳಿಗ್ಗೆ 10-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ-582 ರವರು ತಂದು ಹಾಜರು ಪಡಿಸಿದ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ: 31/08/2021 ರಂದು  ಸಂಜೆ 6-00 ಗಂಟೆಯಲ್ಲಿ  ವೃತ್ತ ಕಛೇರಿಯಲ್ಲಿದ್ದಾಗ ಎಂ ಗೊಲ್ಲಹಳ್ಳಿ ಗ್ರಾಮದ ಬಳಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು  ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ ಪಿಸಿ-310 ಮೈಲಾರಪ್ಪ ರವರೊಂದಿಗೆ  ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-1234ರಲ್ಲಿ  ಎಂ ಗೊಲ್ಲಹಳ್ಳಿ ಗ್ರಾಮ ಬಳಿ ಸಂಜೆ 6-30 ಗಂಟೆಗೆ  ಹೋಗಿ ಅಲ್ಲಿ,  ಪಂಚಾಯ್ತಿದಾರರನ್ನು ಕರೆದುಕೊಂಡು  ಮಾಹಿತಿ ಇದ್ದ  ಸ್ಥಳಕ್ಕೆ  ನಡೆದುಕೊಂಡು  ಹೋಗಿ   ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ  ಸಾರ್ವಜನಿಕ ರಸ್ತೆಯಲ್ಲಿ ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ. ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ  ವ್ಯಕ್ತಿಯು ಸಹ ಓಡಿ ಹೋಗಿರುತ್ತಾರೆ ಓಡಿಹೋದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ,  ತನ್ನ ಹೆಸರು    ಸಂಜಿವಮ್ಮ ಕೋಂ ಲೇಟ್ ನಾರಾಯಣಪ್ಪ, 60 ವರ್ಷ, ಒಕ್ಕಲಿಗರು, ಎಂ ಗೊಲ್ಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ, ಅದರಲ್ಲಿ 180 ಎಂ.ಎಲ್.ಸಾಮರ್ಥ್ಯದ 8 ಪಿ ಎಂ 3 ಟೆಟ್ರಾ ಪಾಕೆಟ್ ಗಳು ಇದ್ದು, ಮತ್ತು OLD TAVERN WHISKY 3 ಟೆಟ್ರಾ ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 80 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 520.5 /- ರೂ.ಗಳಾಗಿರುತ್ತೆ.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು  ಯಾವುದೇ ಪರವಾನಗಿ  ಇದೆಯೇ ಎಂದು ಕೇಳಿದಾಗ ಯಾವುದೇ ಪರವಾನಗಿ ಇಲ್ಲವೆಂದು ತಿಳಿದು ಬಂದಿರುತ್ತದೆ. ಆದ್ದರಿಂದ  ಸ್ಥಳದಲ್ಲಿ ಸಂಜೆ 6-30 ಗಂಟೆಯಿಂದ 7-30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ  ಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ  180 ಎಂ.ಎಲ್.ಸಾಮರ್ಥ್ಯದ 8 ಪಿ ಎಂ 3 ಟೆಟ್ರಾ ಪಾಕೆಟ್ ಗಳು ಇದ್ದು, ಮತ್ತು OLD TAVERN WHISKY 3 ಟೆಟ್ರಾ, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ  04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಸಂಜೆ 8-00 ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು, ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ ದೂರಾಗಿರುತ್ತೆ.

 

8. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.241/2021 ಕಲಂ. 279,337,304(A) ಐ.ಪಿ.ಸಿ:-

     ದಿನಾಂಕ:16-09-2021 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿದಾರರಾದ ಲಕ್ಷ್ಮೀದೇವಮ್ಮ ಕೋಂ ಲೇಟ್ ಮೂರ್ತಿ, 41 ವರ್ಷ, ಪ.ಜಾತಿ, ಕೂಲಿ ಕೆಲಸ ವಾಸ ಹಿರೇಬಿದನೂರು ಗ್ರಾಮ, ಗೌರಿಬಿದನೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:16/09/2021 ರಂದು ಬೆಳಿಗ್ಗೆ ಸುಮಾರು 10-30 ಗಂಟೆಯಲ್ಲಿ ನಮ್ಮ ಗ್ರಾಮದಲ್ಲಿ ಇದ್ದಾಗ ತನ್ನ ಅಳಿಯನಾದ ನರಸಿಂಹಮೂರ್ತಿ ವಿ.ಕೆ ಬಿನ್ ಲೇಟ್ ಕದಿರಪ್ಪ, ರವರು ತನ್ನ ಮೊಬೈಲ್ ಗೆ ಕರೆ ಮಾಡಿ ಗೌರಿಬಿದನೂರು ತಾಲ್ಲೂಕು ಬಿ.ಹೆಚ್. ರಸ್ತೆ ಬಂಬೂ ಡಾಬ ಸಮೀಪ ಆಟೋ ಹಾಗೂ ಕಾರಿನ ನಡುವೆ ಅಪಘಾತವಾಗಿ ನಮ್ಮ ತಾಯಿ ನರಸಮ್ಮ ಹಾಗೂ ಇತರರು ಗಾಯಗೊಂಡಿರುವುದಾಗಿ ಅವರನ್ನು (ಗಾಯಾಳುಗಳನ್ನು) ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿರುವುದಾಗಿ ಕೂಡಲೆ ಆಸ್ಪತ್ರೆ ಬಳಿಗೆ ಬರುವಂತೆ ತಿಳಿಸಿದರು, ತಾನು ಕೂಡಲೆ ಗೌರೀಬಿದನೂರು ನಗರದ ಆಸ್ಪತ್ರೆ ಬಳಿಗೆ ಬಂದು ನೋಡಲಾಗಿ ನಮ್ಮ ತಾಯಿ ನರಸಮ್ಮ ಕೋಂ ತಿಪ್ಪಯ್ಯ ಸುಮಾರು 60 ವರ್ಷ, ಪರಿಶಿಷ್ಟ ಜಾತಿ, ವೇದಲವೇಣಿ ಗ್ರಾಮ, ಇವರಿಗೆ ಎಡಕೈ ತೋಳು ಮುರಿದು, ತಲೆಯ ಎಡಭಾಗ ತೀವ್ರವಾದ ರಕ್ತಗಾಯವಾಗಿತ್ತು ವಿಚಾರಿಸಲಾಗಿ,  ಈ ದಿನ ದಿನಾಂಕ:16/09/2021 ರಂದು ಬೆಳಿಗ್ಗೆ ಸುಮಾರು 10-00 ಗಂಟೆಯಲ್ಲಿ ಗೌರಿಬಿದನೂರಿಗೆ ಬರಲು ನಮ್ಮ ಗ್ರಾಮದ ಧರ್ಮಯ್ಯ ಬಿನ್ ಲೇಟ್ ದುರ್ಗಪ್ಪ, 51 ವರ್ಷ, ಪರಿಶಿಷ್ಟ ಜಾತಿ ವೇದಲವೇಣಿ ಗ್ರಾಮ, ರವರ ಬಾಬತ್ತು ಕೆ.ಎ-40, 2994 ಆಟೋ ವಾಹನದಲ್ಲಿ ನಾನು ನಮ್ಮ ಗ್ರಾಮದ ಗಂಗಮ್ಮ ಹತ್ತಿಕೊಂಡು ಸ್ವಲ್ಪ ಮುಂದೆ ಬಂದು ಟೈಗರ್ ಗ್ರಾನೆಟ್ ಪ್ಯಾಕ್ಟರಿ ಬಳಿ ಬಂದಾಗ ಅಲ್ಲಿ ಕೆಲಸ ಮಾಡುವ 04 ಜನ ಕಾರ್ಮಿಕರು ಹತ್ತಿಕೊಂಡರು, ಅಲ್ಲಿಂದ ಗೌರಿಬಿದನೂರು ಬೆಂಗಳೂರು ಮುಖ್ಯ ರಸ್ತೆ (ಎಸ್.ಹೆಚ್-9)  ಬಂಬೂಡಾಬ ಮುಂದೆ ಸುಮಾರು 10-15 ಗಂಟೆಗೆ ಬಂದು ರಸ್ತೆ ಎಡ ಬದಿಗೆ ಧರ್ಮಯ್ಯ ತನ್ನ ಆಟೋವನ್ನು ನಿಲ್ಲಿಸುತ್ತಿದ್ದಂತೆ ಬೆಂಗಳೂರು ಕಡೆಯಿಂದ ಗೌರಿಬಿದನೂರು ಕಡೆಗೆ ಹೋಗಲು ಬಂದಂತಹ ಕೆ.ಎ-50, ಎ-5023 ಕಾರಿನ ಚಾಲಕ ತನ್ನ ಕಾರನ್ನು ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ಎಡಬದಿಯಲ್ಲಿ ನಿಂತಿದ್ದ ಕೆ.ಎ-40, 2994 ಆಟೋಗೆ ಡಿಕ್ಕಿ ಹೊಡೆಸಿದ ಪರಿಣಾಮ ಆಟೋದಲ್ಲಿ ಪ್ರಯಾಣಿಸಿದ ನಮ್ಮ ತಾಯಿಗೆ ಹಾಗೂ ಆಟೋದಲ್ಲಿದ್ದ ಗಂಗಮ್ಮ, ಆಟೋ ಚಾಲಕ ಧರ್ಮಯ್ಯ, ಗ್ರಾನೈಟ್ ಪ್ಯಾಕ್ಟರಿಯ ಕಾರ್ಮಿಕರಾದ ದೋನಿ, ನಿರೇನ್, ಉತ್ತಮ್ ಬರ್ಮನ್ , ದಿನೇರ್ ಸಿಂಗ್ ಎಂಬುವರಿಗೂ ತೀವ್ರವಾದ ಗಾಯಗಳಾಗಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂತೋಷ, ಅಭಿಶೇಕ್, ಗೌರವ್, ಕವಿತ ಹಾಗೂ ಸುಜಾತ ಎಂಬುವರಿಗೂ ಹಾಗೂ ಇತರರಿಗೂ ಗಾಯಗಳಾಗಿದ್ದು ಇವರೆಲ್ಲರನ್ನೂ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರುವಷ್ಟರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ದಿರೇನ್ ಸಿಂಗ್ ಬಿನ್ ಕರುಣಾ ಸಿಂಗ್, ಸುಮಾರು 50 ವರ್ಷ, ಪಾಲಿಮರಿ ಗ್ರಾಮ, ದುಬಾರಿ ಜಿಲ್ಲೆ, ಅಸ್ಸಾಂ, ರಾಜ್ಯ ಎಂಬುವರು ಮೃತಪಟ್ಟಿರುವುದಾಗಿ ತಿಳಿಯಿತು, ಈ ಅಪಘಾತಕ್ಕೆ ಕಾರಣವಾದ ಕೆ.ಎ-50, ಎ-5023 ಕಾರಿನ ಚಾಲಕನ ಹೆಸರು ವಿಳಾಸ ತಿಳಿಯಬೇಕಾಗಿದ್ದು ಈತನ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ತಮ್ಮಲ್ಲಿ ಕೋರುತ್ತೇನೆ.

 

9. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.242/2021 ಕಲಂ. 78(I),78(III) ಕೆ.ಪಿ ಆಕ್ಟ್:-

     ದಿನಾಂಕ: 16/09/2021 ರಂದು 12-30 ಗಂಟೆಗೆ ಘನ ನ್ಯಾಯಾಲಯದ ಸಿಬ್ಬಂದಿ ಪಿ ಸಿ 582 ರವರು ತಂದು ಹಾಜರು ಪಡಿಸಿದ ಘನ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ, ಪೊಲೀಸ್ ಉಪನಿರೀಕ್ಷಕರಾದ ಶ್ರೀ ವಿಜಯ್ ಕುಮಾರ್ ಆದ ನಾನು ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ಸೂಚಿಸುವುದೇನೆಂದರೆ, ಈ ದಿನ ದಿನಾಂಕ 05/09/2021 ರಂದು ಮದ್ಯಾಹ್ನ 2-00 ಗಂಟೆಯಲ್ಲಿ ನಾನು ನಗರಗೆರೆ ಗ್ರಾಮದಲ್ಲಿದ್ದಾಗ, ಗೌರೀಬಿದನೂರು ತಾಲ್ಲೂಕು, ಮಲ್ಲೇನಹಳ್ಳಿ ಕ್ರಾಸ್  ರಸ್ತೆಯಲ್ಲಿ ಯಾರೋ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಹಾಗು ಪೊಲೀಸ್ ಸಿಬ್ಬಂದಿಯವರಾದ ಪಿಸಿ 460 ಷೇಕ್ ಸನಾವುಲ್ಲಾ ,ಪಿಸಿ 33 ಕೃಷ್ಣಪ್ಪ  ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ ನಂ. ಕೆ.ಎ.40-ಜಿ.538 ರಲ್ಲಿ ಗ್ರಾಮಕ್ಕೆ ಮದ್ಯಾಹ್ನ 2-30  ಗಂಟೆಗೆ ಹೋಗಿ, ಅಲ್ಲಿ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ,  ಮರೆಯಲ್ಲಿ ನಿಂತು ನೋಡಲಾಗಿ,ಯೋರೋ ಒಬ್ಬ ಆಸಾಮಿ ಮಲ್ಲೇನಹಳ್ಳಿ ಕ್ರಾಸ್ ರಸ್ತೆಯಲ್ಲಿ  ಓಡಾಡುವ ಸಾರ್ವಜನಿಕರಿಗೆ  ಒಂದು ರೂಪಾಯಿಗೆ  ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ನಾನು ಮತ್ತು ಪೊಲೀಸ್ ಸಿಬ್ಬಂದಿಯವರು  ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ, ಆತ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು, ಆತನ  ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು ಆಂಜಿನಪ್ಪ ಬಿನ್ ಲೇಟ್ ಆದೆಪ್ಪ,61 ವರ್ಷ,ಉಪ್ಪಾರ ಜನಾಂಗ,ಜಿರಾಯ್ತಿ, ಮೈದಗೊಳಂ ಗ್ರಾಮ, ಹಿಂದುಪುರ ತಾಲ್ಲೂಕು  ಎಂದು ತಿಳಿಸಿದ್ದು,  ಆತನ ಬಳಿ ಪರಿಶೀಲಿಸಲಾಗಿ  ನಗದು ಹಣ 2,380/-  ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿ . ಆಂಜಿನಪ್ಪ ಬಿನ್ ಲೇಟ್ ಆದೆಪ್ಪ,ಹಾಗು ಈತನ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್  ಮತ್ತು 2,380/- ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ಮದ್ಯಾಹ್ನ 2-30 ಗಂಟೆಯಿಂದ 3-30 ಗಂಟೆಯವರೆಗೆ  ಪಂಚನಾಮೆ ಕ್ರಮ ಜರುಗಿಸಿ ಕಾನೂನು ಕ್ರಮ ಜರುಗಿಸಲು ಸೂಚಿಸಿರುತ್ತೆ.

 

10. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.144/2021 ಕಲಂ. 32,34,36(B) ಕೆ.ಇ ಆಕ್ಟ್:-

     ದಿನಾಂಕ 15/09/2021 ರಂದು ಸಂಜೆ 6:30 ಗಂಟೆಯಲ್ಲಿ ಚಿಕ್ಕಬಳ್ಳಾಪುರ ಜಿ್ಲ್ಲೆ, ಡಿ.ಸಿ.ಬಿ. ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರಾದ ಶ್ರೀಮತಿ ಸರಸ್ವತಮ್ಮ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ :15-09-2021 ರಂದು ತಾನು ಮತ್ತು ತಮ್ಮ ಠಾಣೆಯ ಸಿಬ್ಬಂದಿಯಾದ ಎಚ್.ಸಿ.80-ಕೃಷ್ಣಪ್ಪ, ಪಿ.ಸಿ.152 ಜಯಣ್ಣ ಹಾಗು ಜೀಪ್ ಚಾಲಕರಾದ ಎ.ಹೆಚ್.ಸಿ-13 ಸುಶೀಲ್ ಕುಮಾರ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ-ಕೆ.ಎ.40-ಜಿ-58 ರಲ್ಲಿ ಗೌರಿಬಿದನೂರು ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಗಸ್ತಿನಲ್ಲಿದ್ದಾಗ ಮದ್ಯಾಹ್ನ 3-15 ಗಂಟೆಗೆ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಗೌರಿಬಿದನೂರು ನಗರದ ಹಿಂದೂಪುರ–ಬೆಂಗಳೂರು ರಸ್ತೆಯ ಜೋಡಿದಾರ್ ಗಲ್ಲಿಯಲ್ಲಿ ಯಾರೋ ಒಬ್ಬ ಆಸಾಮಿ ಒಂದು ಬಳಿ ಬಣ್ಣದ ಚೀಲದಲ್ಲಿ ಅಕ್ರಮವಾಗಿ ಮದ್ಯೆವನ್ನ ಸಾಗಾಣಿಕೆ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಸದರಿ ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ವೆಂಕಟೇಗೌಡ ಬಿನ್ ಲೇಟ್ ಗೋವಿಂದಪ್ಪ, 65 ವರ್ಷ, ಸಾದರ ಜನಾಂಗ, ಬೂಮೇನಹಳ್ಳಿ, ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ ಎಂತ ತಿಳಿಸಿದ್ದು ನಂತರ ಚೀಲವನ್ನು ಪರಿಶೀಲಿಸಲಾಗಿ ಚೀಲದಲ್ಲಿ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿ ಕಂಪನಿಯ 90 ಎಮ್ ಎಲ್ ನ 192 ಟೆಟ್ರಾ ಪಾಕೆಟ್ ಗಳು ಇದ್ದು ಇದರ ದ್ರವ್ಯ ಪ್ರಮಾಣ 17 ಲೀಟರ್ 280 ಎಮ್.ಎಲ್ ಇದ್ದು ಇದರ ಒಟ್ಟು ಬೆಲೆ 6744/ ರೂ ಗಳಾಗಿರುತ್ತೆ  ಸದರಿ ಮಧ್ಯವನ್ನು ರಾಘವೇಂದ್ರ ವೈನ್ಸ್ ನಲ್ಲಿ ಖರೀದಿ ಮಾಡಿರುತ್ತಾನೆಂದು ತಿಳಿಸಿರುತ್ತಾನೆ. ಸದರಿ ಮಧ್ಯವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿರುತ್ತೆ. ಸ್ಥಳದಲ್ಲಿ ಸಿಕ್ಕಿಬಿದ್ದ ಆರೋಪಿ, ಮಾಲನ್ನು ಅಸಲು ಪಂಚನಾಮೆಯೊಂದಿಗೆ ಆರೋಪಿ ಮತ್ತು ರಾಘವೇಂದ್ರ ವೈನ್ಸ್ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ವರದಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.

 

11. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.145/2021 ಕಲಂ. 379 ಐ.ಪಿ.ಸಿ:-

     ದಿನಾಂಕ;16/09/2021 ರಂದು ಬೆಳಿಗ್ಗೆ 11-25 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಝರಾಗಿ ನೀಡಿದ ದೂರಿನ ಸಾರಾಂಶವೇನೆಂಧರೆ .ತಾನು ಗೌರಿಬಿದನೂರು ಅಭಿಲಾಷ್ ಲೇಔಟ್ ನಲ್ಲಿ ವಾಸವಾಗಿರುತ್ತೇನೆ ನೆನ್ನೆ ರಾತ್ರಿ ದಿನಾಂಕ;15-09-2021 ರ  ರಾತ್ರಿ ಮನೆ ಹತ್ತಿರ ಕಾಂಪೌಂಡ್ ನಲ್ಲಿ ಇದ್ದ ದ್ವಿಚಕ್ರ ವಾಹನ ಹೋಂಡಾ ಶೈನ್  KA 41-W 1742 ಬೈಕ್ ಕಳ್ಳತನವಾಗಿದೆ ನಾವು ಎಲ್ಲಾ ಕಡೆ ಪತ್ತೆ ಮಾಡಲಾಗಿ ಆದೂ ಸಹ ಪತ್ತೆ ಆಗಿರುವುದಿಲ್ಲಾ ಆದುದರಿಂದ ತಾವುಗಳು ದಯಮಾಡಿ ತಮ್ಮ ದ್ವಿಚಕ್ರ ವಾಹನ ವನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

12. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.166/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:16/09/2021 ರಂದು ಘನ ನ್ಯಾಯಾಲಯದ ಹೆಚ್.ಸಿ.137 ಮಂಜುನಾಥ ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದ ಸಾರಾಂಶವೇನೆಂದರೆ ಈ ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ:08/09/2021 ರಂದು ಪಿ.ಎಸ್.ಐ ರವರು ಮಾಲು ಆರೋಪಿತರು ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ನಾನು ಈ ದಿನ ದಿನಾಂಕ:08/09/2021 ರಂದು ಮದ್ಯಾಹ್ನ 1-00 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಮಂಚೇನಹಳ್ಳಿ ಹೋಬಳಿ ಪುರ ಗ್ರಾಮದ ಬಳಿ ಇರುವ ಸಕರ್ಾರಿ ಹಳ್ಳದ ಬೇವಿನ ಮರದ ಕೆಳಗೆ  ಯಾರೋ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಮಂಚೇನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಪಿಸಿ-483 ರಮೇಶ್ ಬಾಬು, ಪಿಸಿ.283 ಅರವಿಂದ, ಪಿ.ಸಿ.336 ಉಮೇಶ್.ಬಿ.ಶಿರಶ್ಯಾಡ್, ಪಿಸಿ.311 ಗೂಳಪ್ಪ, ಪಿ.ಸಿ.111 ಲೋಕೇಶ್ ಮತ್ತು ಜೀಪ್ ಚಾಲಕ ಎಪಿಸಿ 120  ನಟೇಶ್ ರವರು ಮತ್ತು ಪಂಚರೊಂದಿಗೆ ಸಕರ್ಾರಿ ಜೀಪ್ ಸಂಖ್ಯೆ ಕೆಎ-40, ಜಿ-395 ರಲ್ಲಿ ಮದ್ಯಾಹ್ನ 1-30 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಪಂಚರು ಮತ್ತು ನಾವು ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಂದರ್ 200 ಬಾಹರ್ 200 ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿಯವರನ್ನು ನಾವು ಸುತ್ತುವರೆದು ಜೂಜಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿ ಅವರನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ಸುರೇಶ ಬಿನ್ ಹನುಮಯ್ಯ, 35 ವರ್ಷ, ಬೋವಿ ಜನಾಮಗ, ಕೂಲಿ ಕೆಲಸ, ಪಿ.ನಾಗೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು 2) ಸತ್ಯನಾರಾಯಣ ಬಿನ್ ಲೇಟ್ ನರಸೀಯಪ್ಪ, 53 ವರ್ಷ, ಮಡಿವಾಳ ಜನಾಂಗ, ಜಿರಾಯ್ತಿ, ವಾಸ ಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು 3) ರಾಮಚಂದ್ರಪ್ಪ ಬಿನ್ ಲೇಟ್ ಗಿಡ್ಡರಾಮಯ್ಯ, 49 ವರ್ಷ, ನಾಯಕರು, ಜಿರಾಯ್ತಿ, ಅಕರ್ುಂದ ಗ್ರಾಮ, ಗೌರಿಬಿದನೂರು ತಾಲ್ಲೂಕು 4) ರಾಜಶೇಖರ ಬಿನ್ ಕೃಷ್ಣಪ್ಪ, 52 ವರ್ಷ, ಸಾದರು ಜನಾಂಗ, ಜಿರಾಯ್ತಿ, ಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು. 5) ಮೆಹಬೂಬ್ ಸಾಬ್ ಬಿನ್ ಲೇಟ್ ಅಬ್ದುಲ್ ಸತ್ತಾರ್, 60 ವರ್ಷ, ವ್ಯಾಪಾರ, ವಾಸ ಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು, 6) ಕೆ.ಸಿ.ಜಗನ್ನಾಥ ಬಿನ್ ಲೇಟ್ ಕೆ.ಹೆಚ್.ಲಕ್ಷ್ಮಯ್ಯ, 65 ವರ್ಷ, ಬಲಜಿಗರು, ಜಿರಾಯ್ತಿ, ಸರಸ್ವತಿಪುರಂ ಮಂಚೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು. 7) ರವಿ ಕುಮಾರ್ ಬಿನ್ ಕೃಷ್ಣಪ್ಪ, 52 ವರ್ಷ, ಸಾದರು ಜನಾಂಗ, ಜಿರಾಯ್ತಿ, ವಾಸ ಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಸದರಿಯವರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದರು. ಪಂಚನಾಮೆಯ ಮೂಲಕ ಸ್ಥಳದಲ್ಲಿ ದೊರೆತ ನಗದು ಹಣ ರೂ. 7600/- (ಏಳು ಸಾವಿರದ ಆರು ನೂರು ರೂಪಾಯಿಗಳು ಮಾತ್ರ.)  ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಚೀಲವನ್ನು ಮದ್ಯಾಹ್ನ 1-45 ಗಂಟೆಯಿಂದ ಮದ್ಯಾಹ್ನ 2-45 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಮಾಲನ್ನು ವಶಪಡಿಸಿಕೊಂಡು ಮಾಲು, ಮಹಜರ್ & ಆರೋಪಿತರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸಲು ಸೂಚಿಸಿ ನೀಡಿದ ವರದಿಯನ್ನು ಪಡೆದು ಠಾಣಾ ಎನ್.ಸಿ.ಆರ್ ನಂಬರ್ 271/2021 ರಂತೆ ದಾಖಲಿಸಿಕೊಂಡು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಮೇಲ್ಕಂಡ ಕಲಂ ರೀತ್ಯ ಪ್ರಕರಣ ದಾಖಲಿಸಿರುತ್ತದೆ.

 

13. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.167/2021 ಕಲಂ. 78(1)(A)(iv)(vi) ಕೆ.ಪಿ ಆಕ್ಟ್:-

     ದಿನಾಂಕ:16/09/2021 ರಂದು ಠಾಣಾ ಹೆಚ್.ಸಿ.137 ಮಂಜುನಾಥ ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದರ ಸಾರಾಂಶವೇನೆಂದರೆ ದಿನಾಂಕ:08/09/2021 ರಂದು ಠಾಣಾ ಹೆಚ್.ಸಿ.155 ರವರು ಮಾಲು ಆರೋಪಿ ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಮತ್ತು ಪಿ.ಸಿ.336 ಉಮೇಶ್.ಬಿ ಶಿರಶ್ಯಾಡ್ ರವರು ತೊಂಡೇಬಾವಿ ಕಡೆಗಳಲ್ಲಿ ಗಸ್ತು ಮಾಡುತ್ತಿದ್ದಾಗ ನನಗೆ ಅಲ್ಲೀಪುರ ಗ್ರಾಮದ ಜಾಬೇರ್ ಅಲಿ ಬಿನ್ ಲೇಟ್ ಹಸನ್ ಅಲಿ ರವರು ಅವರ ಮನೆಯ ಮುಂಭಾಗ  ಸಾರ್ವಜನಿಕವಾಗಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ 70/-ರೂಪಾಯಿಗಳು ಕೊಡುತ್ತಿರುವುದಾಗಿ ಆಮೀಷ ತೋರಿಸಿ ಮಟ್ಕ ಚೀಟಿ ಬರೆದು ಕೊಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾವು  ಪಂಚರೊಂದಿಗೆ ದ್ವಿಚಕ್ರ ವಾಹನಗಳಲ್ಲಿ ಹೋಗಿ ವಾಹನವನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಸೂಕ್ಷ್ಮವಾಗಿ ಗಮನಿಸಲಾಗಿ ಯಾರೋ ಒಬ್ಬ ಅಸಾಮಿ ಸಾರ್ವಜನಿಕವಾಗಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ 70/-ರೂಪಾಯಿಗಳು ಕೊಡುತ್ತಿರುವುದಾಗಿ ಆಮೀಷ ತೋರಿಸುತ್ತಾ ಮಟ್ಕ ಚೀಟಿ ಬರೆದುಕೊಡುತ್ತಿದ್ದನು, ಮಟ್ಕಾ ಜೂಜಾಟ ವಾಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ನಾವು ಪಂಚರೊಂದಿಗೆ ಸದರಿ ಅಸಾಮಿಯ ಮೇಲೆ ದಾಳಿ ಮಾಡಿ ಸದರಿ ಆಸಾಮಿಯನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ಜಾಬೇರ್ ಅಲಿ ಬಿನ್ ಲೇಟ್ ಹಸನ್ ಅಲಿ, 55 ವರ್ಷ, ಕೂಲಿ ಕೆಲಸ, ವಾಸ ಅಲ್ಲೀಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಈತನನ್ನು ವಿಚಾರಣೆ ಮಾಡಲಾಗಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ ನಂಬರ್ ಹೊಡೆದರೆ 70 ರೂಪಾಯಿಗಳು ಕೊಡುತ್ತಿರುವುದಾಗಿ ಆಮೀಷ ತೋರಿಸಿ ಮಟ್ಕಾ ಚೀಟಿ ಬರೆದುಕೊಟ್ಟು ಹಣವನ್ನು ಪಡೆದುಕೊಳ್ಳುತ್ತಿದ್ದುದ್ದಾಗಿ ತಿಳಿಸಿದ್ದು,  ನಂತರ ಸದರಿ ಸ್ಥಳದಲ್ಲಿ ಪಂಚನಾಮೆಯ ಮೂಲಕ  ತನ್ನ ಬಳಿ ದೊರೆತ ಮಟ್ಕಾ ಚೀಟಿ ಬರೆದುಕೊಟ್ಟು ಬಂದಂತಹ ನಗದು ಹಣ ರೂ. 870/-(ಎಂಟುನೂರ  ಎಪ್ಪತ್ತು ರೂಪಾಯಿಗಳು ಮಾತ್ರ.) ನೀಲಿ ಬಣ್ಣದ ಒಂದು ಬಾಲ್ ಪೆನ್ನನ್ನು ಮದ್ಯಾಹ್ನ  3-00 ಗಂಟೆಯಿಂದ ಸಂಜೆ 4-00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆ   ಕ್ರಮ ಜರುಗಿಸಿ ಮಾಲನ್ನು ಮತ್ತು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು ಸದರಿಯವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರನ್ನು ಪಡೆದು ಎನ್.ಸಿ.ಆರ್ 271/2021 ರಂತೆ ದಾಖಲಿಸಿಕೊಂಡು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಮೇಲ್ಕಂಡ ಕಲಂ ರೀತ್ಯ ಪ್ರಕರಣ ದಾಖಲಿಸಿರುತ್ತದೆ.

 

14. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.168/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:16/09/2021 ರಂದು ಘನ ನ್ಯಾಯಾಲಯದ ಹೆಚ್.ಸಿ.137 ಮಂಜುನಾಥ ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದ ಸಾರಾಂಶವೇನೆಂದರೆ ಲಕ್ಷ್ಮಿನಾರಾಯಣ ಪಿ.ಎಸ್.ಐ ಮಂಚೇನಹಳ್ಳಿ ಪೊಲೀಸ್ ಠಾಣೆ ರವರು ದಿನಾಂಕ:11/09/2021 ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಮಂಚೇನಹಳ್ಳಿ ಹೋಬಳಿ ಮಿಣಕನಗುರ್ಕಿ ಗ್ರಾಮದ ಬಳಿ ಇರುವ ಸರ್ಕಾರಿ ಹಳ್ಳದ ಬಳಿ ಯಾರೋ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಮಂಚೇನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಪಿ.ಸಿ-311 ಗೂಳಪ್ಪ ನಿಂಗನೂರ್, ಪಿ.ಸಿ-283 ಅರವಿಂದ, ಪಿಸಿ-336 ಉಮೇಶ್.ಬಿ.ಶಿರಶ್ಯಾಡ್, ಪಿ.ಸಿ-483 ರಮೇಶ್, ಮತ್ತು ಜೀಪ್ ಚಾಲಕ ಎಪಿಸಿ-120 ನಟೇಶ್ ರವರು ಮತ್ತು ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40, ಜಿ-395 ರಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಮದ್ಯಾಹ್ನ 3-30 ಗಂಟೆಗೆ ಮೇಲ್ಕಂಡ ಸ್ಥಳದಿಂದ ಸ್ವಲ್ಪ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಕಾಲು ನಡುಗೆಯಲ್ಲಿ ಹೋಗಿ ಪಂಚರು ಮತ್ತು ನಾವು ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಂದರ್ ಗೆ 100/- ಬಾಹರ್ 100/- ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿಯವರನ್ನು ನಾವು ಸುತ್ತುವರೆದು ಜೂಜಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆ ನೀಡಿದರೂ ಸಹಾ ಕೆಲವರು ಸ್ಥಳದಿಂದ ಓಡಿಹೋಗಿದ್ದು ಸ್ಥಳದಲ್ಲಿದ್ದವರನ್ನು  ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ಬಾಲರಾಜು ಬಿನ್ ಲಕ್ಷ್ಮಪ್ಪ, 32 ವರ್ಷ, ನಾಯಕರು, ಚಾಲಕ ವೃತ್ತಿ, ವಾಸ ಮಿಣಕನಗುರ್ಕಿ ಗ್ರಾಮ, ಮಂಚೇನಹಳ್ಳಿ ಹೋಬಳಿ ಗೌರಿಬಿದನೂರು ತಾಲ್ಲೂಕು 2) ಅವಿನಾಷ್ ಬಿನ್ ಅಂಜಿನಪ್ಪ, 24 ವರ್ಷ, ನಾಯಕರು, ಗಾರ್ಮೆಂಟ್ಸ್ ನಲ್ಲಿ ಕೆಲಸ, ವಾಸ ಮಾರಸಂದ್ರ ಗ್ರಾಮ, ದೊಡ್ಡಬಳ್ಳಾಪುರ ತಾಲ್ಲೂಕು, 3) ನರಸಿಂಹಮೂರ್ತಿ ಬಿನ್ ನರಸಿಂಹಪ್ಪ, 30 ವರ್ಷ, ನಾಯಕರು, ಕೂಲಿ ಕೆಲಸ, ವಾಸ ಮಿಣಕನಗುರ್ಕಿ ಗ್ರಾಮ, ಮಂಚೇನಹಳ್ಳಿ ಹೋಬಳಿ. ಗೌರಿಬಿದನೂರು ತಾಲ್ಲೂಕು, ಎಂದು ತಿಳಿಸಿದ್ದು ಸದರಿಯವರಿಗೆ ಜೂಜಾಟವಾಡುತ್ತಿದ್ದು ಓಡಿಹೋದವರ ಹೆಸರು ವಿಳಾಸ ಕೇಳಲಾಗಿ 4) ರವಿ ಬಿನ್ ರಾಮಚಂದ್ರಪ್ಪ, 28 ವರ್ಷ, ಬಲಜಿಗರು, ಚಾಲಕ ವೃತ್ತಿ, ಎಂ.ಹೊಸಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು 5) ಹರೀಶ ಬಿನ್ ಹೇಮರಾಜು, 27 ವರ್ಷ, ನಾಯಕ ಜನಾಂಗ, ಚಾಲಕ ವೃತ್ತಿ, ಮಿಣಕನಗುರ್ಕಿ ಗ್ರಾಮ, ಗೌರಿಬಿದನೂರು ತಾಲ್ಲೂಕು 6) ಲಕ್ಷ್ಮೀಪತಿ ಬಿನ್ ನಾಗರಾಜಪ್ಪ, 26 ವರ್ಷ, ನಾಯಕ ಜನಾಂಗ, ಗಾರೆ ಕೆಲಸ, ವಾಸ ಮಿಣಕನಗುರ್ಕಿ  ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು ಸದರಿ ಎಲ್ಲರನ್ನೂ  ಸಹಾ   ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಸೇರಿಕೊಂಡು ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದ್ದು, ಸ್ಥಳದಲ್ಲಿ ದೊರೆತ 2800/- (ಎರಡು ಸಾವಿರದ ಎಂಟು ನೂರು ರೂಪಾಯಿಗಳು ಮಾತ್ರ.) ರೂ ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಪೇಪರ್ ಅನ್ನು ಸಂಜೆ 3-45 ಗಂಟೆಯಿಂದ 4-45 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಮಾಲನ್ನು ವಶಪಡಿಸಿಕೊಂಡು ಮಾಲು, ಮಹಜರ್ & ಆರೋಪಿತರೊಂದಿಗೆ ಸಂಜೆ 5-15 ಗಂಟೆಗೆ ಠಾಣೆಗೆ ವಾಪಾಸ್ ಬಂದು ಆರೋಪಿತರ ಮೇಲೆ ಮುಂದಿನ ಕ್ರಮ ಜರುಗಿಸಲು ಸ್ವತಃ ಠಾಣಾ ಎನ್.ಸಿ.ಆರ್ ನಂಬರ್ 274/2021 ರಂತೆ ದಾಖಲಿಸಿದ್ದು ಘನ ನ್ಯಾಯಾಲಯದ ಅನುಮತಿ ಪಡೆದು ಮೇಲ್ಕಂಡ ಕಲಂ ರೀತ್ಯಾ ಪ್ರಕರಣ ದಾಖಲಿಸಿರುತ್ತದೆ.

 

15. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.169/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:16/09/2021 ರಂದು ಘನ ನ್ಯಾಯಾಲಯದ ಹೆಚ್.ಸಿ.137 ಮಂಜುನಾಥ ರವರು ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಹಾಜರುಪಡಿಸಿದರ ಸಾರಾಂಶವೇನೆಂದರೆ ಘನ ನ್ಯಾಯಾಲಯದಲ್ಲಿ ಲಕ್ಷ್ಮಿನಾರಾಯಣ ಪಿ.ಎಸ್.ಐ ಮಂಚೇನಹಳ್ಳಿ ಪೊಲೀಸ್ ಠಾಣೆ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ನಾನು ಈ ದಿನ ದಿನಾಂಕ:13/09/2021 ರಂದು ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ತೊಂಡೇಬಾವಿ  ಹೋಬಳಿ ಚಿಕ್ಕರ್ಯಾಗಡಹಳ್ಳಿ ಗ್ರಾಮದ ಬಳಿ ಇರುವ ದೊಡ್ಡಮ್ಮ ಮರಿಗಮ್ಮ ದೇವಸ್ಥಾನದ ಬಳಿ ಯಾರೋ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಮಂಚೇನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಪಿ.ಸಿ-311 ಗೂಳಪ್ಪ ನಿಂಗನೂರ್, ಪಿ.ಸಿ-283 ಅರವಿಂದ, ಪಿಸಿ-336 ಉಮೇಶ್.ಬಿ.ಶಿರಶ್ಯಾಡ್, ಪಿ.ಸಿ-483 ರಮೇಶ್, ಪಿ.ಸಿ.97 ರವಿ ಕುಮಾರ್ ಮತ್ತು ಜೀಪ್ ಚಾಲಕ ಎಪಿಸಿ-120 ನಟೇಶ್ ರವರು ಮತ್ತು ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40, ಜಿ-395 ರಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಸಂಜೆ 4-00 ಗಂಟೆಗೆ ಮೇಲ್ಕಂಡ ಸ್ಥಳದಿಂದ ಸ್ವಲ್ಪ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಕಾಲು ನಡುಗೆಯಲ್ಲಿ ಹೋಗಿ ಪಂಚರು ಮತ್ತು ನಾವು ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಂದರ್ ಗೆ 100/- ಬಾಹರ್ 100/- ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿಯವರನ್ನು ನಾವು ಸುತ್ತುವರೆದು ಜೂಜಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆ ನೀಡಿ ಸ್ಥಳದಲ್ಲಿದ್ದವರನ್ನು  ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ಸಕ್ಲೇನ್ ಬಿನ್ ಪರಾಸತ್ ಆಲಿ, 28 ವರ್ಷ, ಮುಸ್ಲಿಂ ಜನಾಂಗ, ಗಾರೆ ಕೆಲಸ, ಅಲ್ಲೀಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು 2) ರಣೋಜಿ ರಾವ್ ಬಿನ್ ಚಿಕ್ಕಜಟೋಜಿರಾವ್ 43 ವರ್ಷ, ಮರಾಠರು, ಪೆಂಟಿಂಗ್ ಕೆಲಸ, ವಾಸ ಚಿಕ್ಕರ್ಯಾಗಡಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು. 3) ಮಹೇಶ ಬಿನ್ ಲೇಟ್ ಲಿಂಗಪ್ಪ, 45 ವರ್ಷ, ಬಲಜಿಗರು, ಚಾಲಕ ವೃತ್ತಿ, ವಾಸ ಚಿಕ್ಕರ್ಯಾಗಡಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು. 4) ಅಶ್ವತ್ಥರಾವ್ ಬಿನ್ ನಾರಾಯಣರಾವ್ 45 ವರ್ಷ, ಮರಾಠಿ ಜನಾಂಗ, ಜಿರಾಯ್ತಿ, ವಾಸ ಚಿಕ್ಕರ್ಯಾಗಡಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು ಸದರಿ ಎಲ್ಲರನ್ನೂ  ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಸೇರಿಕೊಂಡು ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದ್ದು, ಸ್ಥಳದಲ್ಲಿ ದೊರೆತ 2800/- (ಎರಡು ಸಾವಿರದ ಎಂಟು ನೂರು ರೂಪಾಯಿಗಳು ಮಾತ್ರ.) ರೂ ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಪೇಪರ್ ಅನ್ನು ಸಂಜೆ 4-15 ಗಂಟೆಯಿಂದ 5-15 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಮಾಲನ್ನು ವಶಪಡಿಸಿಕೊಂಡು ಮಾಲು, ಮಹಜರ್ & ಆರೋಪಿತರೊಂದಿಗೆ ಸಂಜೆ 5-45 ಗಂಟೆಗೆ ಠಾಣೆಗೆ ವಾಪಾಸ್ ಬಂದು ಆರೋಪಿತರ ಮೇಲೆ ಮುಂದಿನ ಕ್ರಮ ಜರುಗಿಸಲು ಸ್ವತಃ ಠಾಣಾ ಎನ್.ಸಿ.ಆರ್ ನಂಬರ್ 278/2021 ರಂತೆ ದಾಖಲಿಸಿಕೊಂಡು ಘನ ನ್ಯಾಯಾಲಯದ ಅನುಮತಿಯನ್ನು ಪಡೆಉ ಮೇಲ್ಕಂಡ ಕಲಂ ರೀತ್ಯ ಪ್ರಕರಣ ದಾಖಲಿಸಿರುತ್ತದೆ.

 

16. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.289/2021 ಕಲಂ. 447,427 ಐ.ಪಿ.ಸಿ:-

     ದಿನಾಂಕ:15-09-2021 ರಂದು  ಮದ್ಯಾಹ್ನ 3-00  ಗಂಟೆಯಲ್ಲಿ ಪಿರ್ಯಾದಿದಾರರಾದ ಬಿ.ಎನ್. ವೇಣುಗೋಪಾಲ್ ಬಿನ್ ಲೇಟ್ ಇ.ನಾರಾಯಣಸ್ವಾಮಿ,ಸುಮಾರು 45 ವರ್ಷ,ವಕೀಲ ವೃತ್ತಿ ವಾಸ:ಬಸವನಪರ್ತಿ ಗ್ರಾಮ, ರವರು ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತಾನು  ವಕೀಲ ವೃತ್ತಿ ಮತ್ತು ಜಿರಾಯ್ತಿ ಮಾಡಿಕೊಂಡಿದ್ದು,  ಶಿಡ್ಲಘಟ್ಟ  ತಾಲ್ಲೂಕು ಕಸಬಾ ಹೋಬಳಿ ,ಬಸವನಪತರ್ಿ ಗ್ರಾಮಕ್ಕೆ ಸೇರಿದ ಸರ್ವೆ ನಂ:1/ಪಿ8 ವಿಸ್ತೀರ್ಣ 4-00 ಎಕರೆ ಜಮೀನಿಗೆ ತಾನು ಸಂಪೂರ್ಣ ಮಾಲೀಕನಾಗಿ ತನ್ನ ಶಾಂತಯುತ ಸ್ವಾಧೀನತೆಯನ್ನು ಮುಂದುವರೆಸಿಕೊಂಡು ಬಂದಿದ್ದು ಸದರಿ ಒಟ್ಟು ವಿಸ್ತೀರ್ಣದ ಜಮೀನಿನ ಪೈಕಿ 2-00 ಎಕರೆ ಜಮೀನಲ್ಲಿ ತಾನು ಸುಮಾರು ಒಂದು ವಾರದ ಹಿಂದೆ ಹನಿ ನೀರಾವರಿ ಪೈಪುಗಳನ್ನು ಅಳವಡಿಸಿ ಹೊಸದಾಗಿ ಹಿಪ್ಪುನೇರಳೆ ಬೆಳೆಯನ್ನು ಇಟ್ಟಿರುತ್ತಾರೆ. ಹೀಗಿರುವಲ್ಲಿ ದಿನಾಂಕ:14-09-2021 ರಂದು ರಾತ್ರಿ ಸದರಿ ಜಮೀನಿನ ಬಳಿ ತಾನು ಇಲ್ಲದ ಸಮಯ ನೋಡಿಕೊಂಡು ಯಾರೋ ಕಿಡಿಗೇಡಿಗಳು  ಮೇಲ್ಮಂಡ 2-00 ಎಕರೆ ಜಮೀನಿಗೆ ಅಕ್ರಮಪ್ರವೇಶ ಮಾಡಿ ಸದರಿ ಜಮೀನಿನಲ್ಲಿ ತಾನು ಅಳವಡಿಸಿದ್ದ ಹನಿ ನೀರಾವರಿ ಪೈಪುಗಳನ್ನು ಸಂಪೂರ್ಣವಾಗಿ ನಾಶಪಡಿಸಿ ತನಗೆ ಸುಮಾರು 50,000-00 ರೂಗಳಷ್ಠು ನಷ್ಠವುಂಟುಮಾಡಿರುತ್ತಾರೆ ಅದ್ದರಿಂದ ಖಾವಂದಿರು ಮೇಲ್ಕಂಡ ವಿಷಯದ ಬಗ್ಗೆ ಸೂಕ್ತ ತನಿಖೆ ನಡೆಸಿ ತನ್ನ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ನೀರಾವರಿ ಪೈಪುಗಳನ್ನು ನಾಶಪಡಿಸಿರುವ ಕಿಡಿಗೇಡಿಗಳನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರಗೆ ಠಾಣಾ ಮೊ.ಸಂ:289/2021 ಕಲಂ:447,427 ಐ.ಪಿ.ಸಿಸ ರೀತ್ಯಾ  ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 16-09-2021 06:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080