ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.238/2021 ಕಲಂ. 447,427,506 ಐ.ಪಿ.ಸಿ :-

    ದಿನಾಂಕ; 15/08/2021 ರಂದು ಸಂಜೆ 6-15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಚಿರತಪಲ್ಲಿ ಈರನ್ನ ಬಿನ್ ಹನುಮಪ್ಪ, 32 ವರ್ಷ, ಬೋಯಿ ಜನಾಂಗ, ಜಿರಾಯ್ತಿ, ವಾಸ: ಗಾನೇಕಲ್ ಗ್ರಾಮ ಆದೋನಿ ತಾಲ್ಲೂಕು, ಕರ್ನೂಲು ಜಿಲ್ಲೆ ಆಂದ್ರಪ್ರದೇಶ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ಬಿ ಪುರುಷೋತ್ತಮರೆಡ್ಡಿ ಹೈಕೋರ್ಟ್ ಸೀನಿಯರ್ ಅಡ್ವೋಕೇಟ್ ರವರ ಪಿಎ ಆಗಿ ಕೆಲಸ ಮಾಡುತ್ತಿರುತ್ತೇನೆ, ಆದರೆ ಬಾಗೇಪಲ್ಲಿ ತಾಲ್ಲೂಕು, ಕಸಬಾ ಹೋಬಳಿ, ಪಾತಬಾಗೇಪಲ್ಲಿ ಗ್ರಾಮದ ಸ ನಂ-36/1 ರಲ್ಲಿ 4 ಎಕರೆ 19 ಗುಂಟೆ ಜಮೀನು ರವೀಂದ್ರರೆಡ್ಡಿ ಬಿನ್ ಪುರುಷೋತ್ತಮರೆಡ್ಡಿ ರವರ ಹೆಸರಿನಲ್ಲಿ ಇದ್ದು ದಿನಾಂಕ: 11/08/2021 ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ಕಲ್ಲು ಬಂಡೆ ಮತ್ತು ಮುಳ್ಳು ತಂತಿಹಾಕುತ್ತಿದ್ದಾಗ ಸದರಿ ಗ್ರಾಮದ ವಾಸಿಯಾದ ನರಸಿಂಹಪ್ಪ ಬಿನ್ ಚಿನ್ನಾಯಪ್ಪ ರವರು ನನ್ನ ಮೇಲೆ ಗಲಾಟೆ ಮಾಡಿ ಸದರಿ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಕುಚಗಳನ್ನು ದಬ್ಬಿ ಹಾಕಿ ಗಲಾಟೆ ಮಾಡಿ ಕೆಲಸ ಮಾಡಿಸದೆ ನನಗೆ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಈಗ್ಗೆ 25 ದಿನಗಳ ಹಿಂದೆಯೇ ಕಂಬಗಳನ್ನು ಬಂಡೆಗಳನ್ನು ಸಹಾ ಮುರಿದು ಹಾಕಿರುತ್ತಾರೆ. ಆದ್ದರಿಂದ ತಾವುಗಳು ದಯೆ ತೋರಿ ಸದರಿಯವರನ್ನು ಠಾಣೆಗೆ ಕರೆಸಿ ಇವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಿ ನಮಗೆ ಸೂಕ್ತ ನ್ಯಾಯ ದೊರಕಿಸಿಕೊಡಲು ಕೋರಿ ನೀಡಿದ ದೂರು.

 

2. ಚೇಳೂರು ಪೊಲೀಸ್‌ ಠಾಣೆ ಮೊ.ಸಂ.77/2021 ಕಲಂ. 279,337 ಐ.ಪಿ.ಸಿ :-

     ದಿನಾಂಕ:15-08-2021 ರಂದು  ರಂದು  ಬಾಗೇಪಲ್ಲಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳುವು ನೀಡಿದ ಹೇಳಿಕೆಯ ಸಾರಾಂಶವೆನೆಂದರೆ ಗಾಯಾಳು ಮತ್ತು ಆಕೆಯ ಗಂಡನಾದ ನೀಲಕಂಠಚಾರಿ ರವರು ಇದೇ ದಿನ ಚೇಳೂರು ಗ್ರಾಮದಲ್ಲಿ ಯರೋ ಬಬ್ಬರ ಹತ್ತಿರ  ಒಂದು ಹಳೆಯ  ಸ್ಕೂಟಿಯನ್ನು ಖರೀದಿಸಿ  ತೆಗೆದುಕೊಂಡು ಚೇಳೂರುನಿಂದ ಬಾಗೇಪಲ್ಲಿ ಕಡೆಗೆ ಸ್ಕೂಟಿ ಸಂಖ್ಯೆ  KA 50 U 2993  ಹೋಗುತ್ತಿದ್ದಾಗ  ನಮ್ಮ ಎದುರು ಗಡೆಯಿಂದ ಬಾಗೇಪಲ್ಲಿಯಿಂದ ಚೇಳೂರು ಕಡೆಗೆ  ಬರುತ್ತಿದ್ದ  ಕಾರ್ ಸಂಖ್ಯೆ  AP 39 HM 8074 ರ ಚಾಲಕ ಅತಿ ವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ನಮಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರವಾಹನವನ್ನು ಚಲಾಯಿಸುತ್ತಿದ್ದಾ ನಾನು   ಮತ್ತು ಹಿಂಬದಿಯಲ್ಲಿ ಕುಳಿತಿದ್ದ ನನ್ನ  ಗಂಡ ಕೆಳಗೆ ಬಿದ್ದಿದ್ದು ನನ್ನ   ತಲೆಯ ಹಿಂಭಾಗ ಮತ್ತು  ಮುಖದ ಎರಡೂ ಕಡೆ ರಕ್ತಗಾಯವಾಗಿರುತ್ತೆ ಮತ್ತು ನನ್ನ ಗಂಡನಾದ ನೀಲಕಂಠಚಾರಿಗೆ ಬಲಕಾಲು  ಮುರಿದು ಗಾಯವಾಗಿರುತ್ತೆ ಮತ್ತು  ಬಲಕೈ ಮುರಿದಂತೆ ಕಂಡುಬಂದಿರುತ್ತೆ ನಂತರ ನಾವು  108 ಅಂಬುಲೇಸ್ಸ್ ನಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ವತ್ರೆಗೆ ಹೋಗುತ್ತಿದ್ದು ಅಪಘಾತ ಮಾಡಿದ ಕಾರಿನ ಚಾಲಕನ ವಿರುದ್ದ  ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರು.

 

3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.123/2021 ಕಲಂ. 87 ಕೆ.ಪಿ ಆಕ್ಟ್ :-

   ದಿನಾಂಕ;15.08.2021 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಮಾನ್ಯ ಪಿ.ಎಸ್.ಐ ರವರುಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಸಾರಾಂಶವೆನೆಂದರೆ ಈ ದಿನ ದಿನಾಂಕ:15.08.2021 ರಂದು ಸಂಜೆ 4-30 ಗಂಟೆ ಸಮಯದಲ್ಲಿ ತನಗೆ ಚಿಕ್ಕಬಳ್ಳಾಪುರ ತಾಲ್ಲೂಕು ನಲ್ಲಕದಿರೇನಹಳ್ಳಿ ಗ್ರಾಮದ ಹೊರವಲಯದಲ್ಲಿ ಸರ್ಕಾರಿ ಕಾಲುವೆಯ ಪಕ್ಕದಲ್ಲಿರುವ ಹಳ್ಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಅಂದರ್ ಬಾಹರ್ ಇಸ್ಪೀಟಿನ ಜೂಜಾಟವಾಡುತ್ತಿರುವುದಾಗಿ ಬಂದ ಬಾತ್ಮಿ ಮೇರೆಗೆ ತಾನು, ಚಾಲಕ ಎ.ಹೆಚ್.ಸಿ 23 ಮಂಜುನಾಥ. ಸಿಬ್ಬಂದಿಯಾದ ಹೆಚ್.ಸಿ 38 ಸುರೇಶ್, ಹೆಚ್.ಸಿ 208 ಗಿರೀಶ , ಪಿಸಿ 359 ಶ್ರೀನಿವಾಸ, ಪಿ,ಸಿ 138 ಮುರಳಿ ರವರೊಂದಿಗೆ ಪೊಲೀಸ್ ಜೀಪು ಸಂಖ್ಯೆ ಕೆ.ಎ-40, ಜಿ-567 ರಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ನಲ್ಲಕದಿರೆನಹಳ್ಳಿ ಕಾಲುವೆಯ ಪಕ್ಕದಲ್ಲಿರುವ ಹಳ್ಳದ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಪಂಚರು ಮತ್ತು ಸಿಬ್ಬಂದಿಯೊಂದಿಗೆ ತನಗೆ ಮಾಹಿತಿ ಬಂದ ಸ್ಥಳವಾದ ಕಾಲುವೆಯ ಪಕ್ಕದಲ್ಲಿರುವ ಹಳ್ಳದ ಬಳಿ ನಡೆದುಕೊಂಡು ಹೋಗಿ ನಿಂತು ನೋಡಲಾಗಿ ಸುಮಾರು 6 ಜನರು ಗುಂಪು ಸೇರಿದ್ದು, ಗುಂಪಿನಲ್ಲಿದ್ದವರು ಅಂದರ್ 200/- ರೂ. ಬಾಹರ್ 200/- ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಂದರ್ ಬಾಹರ್ ಜೂಜಾಟವಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ತಾನು ಮತ್ತು ಸಿಬ್ಬಂದಿಯವರು ಅವರನ್ನು ಸುತ್ತುವರೆದು ಓಡಿ ಹೋಗದಂತೆ ಎಚ್ಚರಿಕೆ ನೀಡಿದರೂ ಸಹ ಓಡಿ ಹೋಗಲು ಪ್ರಯತ್ನಿಸಿದ್ದು, ತಾನು ಮತ್ತು ಸಿಬ್ಬಂದಿಗಳು ಓಡಿ ಹೋಗಿ ಹಿಡಿದು ಕೊಂಡು ಸದರಿ ಆಸಾಮಿಗಳ ಹೆಸರು ವಿಳಾಸ ಕೇಳಲಾಗಿ 1. ಸತೀಶ ಬಿನ್ ಲೇಟ್ ಯಲ್ಲಪ್ಪ. 40 ವರ್ಷ. ದೋಬಿ ಜನಾಂಗ. ಜಿರಾಯ್ತಿ. ನಲ್ಲಕದಿರೇನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು, 2. ದಯಾನಂದ ಬಿನ್ ಚಿಕ್ಕ ಹನಮೇಗೌಡ 40 ವರ್ಷ. ವಕ್ಕಲಿಗರು. ಜಿರಾಯ್ತಿ ನಲ್ಲಕದಿರೇನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ,ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ 3. ರಾಜ್ ಕುಮಾರ್ ಬಿನ್ ರಾಮಪ್ಪ. 35 ವರ್ಷ, ಗೊಲ್ಲರು, ಜಿರಾಯ್ತಿ ನಲ್ಲಕದಿರೇನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು , 4. ಲಕ್ಕೆಗೌಡ ಬಿನ್ ದೊಡ್ಡ ಹನಮೇಗೌಡ, 50 ವರ್ಷ,ವಕ್ಕಲಿಗರು, ನಲ್ಲಕದಿರೇನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು 5. ಮುನೇಗೌಡ ಬಿನ್ ಮುನಿಯಪ್ಪ, 35 ವರ್ಷ, ಗೊಲ್ಲರು, ಜಿರಾಯ್ತಿ, ನಲ್ಲಕದಿರೇನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು 6] ಸುರೇಶ ಬಿನ್ ನಾಗರಾಜ ,35 ವರ್ಷ, ಅದಿ ಕರ್ನಾಟಕ ಜನಾಂಗ, ಜಿರಾಯ್ತಿ, ನಲ್ಲಕದಿರೇನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ್ದು, ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳು, ಜೂಜಾಟಕ್ಕೆ ಪಣವಾಗಿಟ್ಟಿದ್ದ ನಗದು ಹಣ ಎಣಿಸಲಾಗಿ 2,400/- ರೂ. ಗಳಿದ್ದು, ಮೇಲ್ಕಂಡ 6 ಜನ ಆಸಾಮಿಗಳು, 52 ಇಸ್ಪೀಟ್ ಎಲೆಗಳು, ಪಂದ್ಯಕ್ಕೆ ಪಣವಾಗಿಟ್ಟಿದ್ದ 2,400/-ರೂ. ನಗದು ಹಣವನ್ನು ಸಂಜೆ 5-30 ಗಂಟೆಯಿಂದ 6-30 ಗಂಟೆಯವರೆಗೆ ವಿವರವಾದ ಪಂಚನಾಮೆ ಕೈಗೊಂಡು ವಶಕ್ಕೆ ಪಡೆದುಕೊಂಡಿರುತ್ತೆ. ಮೇಲ್ಕಂಡ ಆರೋಪಿಗಳ ವಿರುದ್ಧ ಕಲಂ:87 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲು ಸೂಚಿಸಿದರ ಮೇರೆಗೆ ಈ ಪ್ರ.ವ.ವರದಿ.

 

4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.124/2021 ಕಲಂ. 87 ಕೆ.ಪಿ ಆಕ್ಟ್ :-

    ದಿನಾಂಕ;16.08.2021 ರಂದು ಮದ್ಯಾಹ್ನ 2-00 ಗಂಟೆ ಸಮಯದಲ್ಲಿ ಮಾನ್ಯ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಸಾರಾಂಶವೆನೆಂದರೆ ಈ ದಿನ ದಿನಾಂಕ:16.08.2021 ರಂದು ಮದ್ಯಾಹ್ನ 12-00 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ಚಿಕ್ಕಬಳ್ಳಾಪುರ ತಾಲ್ಲೂಕು ರಾಮಗಾನಪರ್ತಿ ಗ್ರಾಮದ ಹೊರವಲಯದ ಸರ್ಕಾರಿ ಖಾಲಿ ಜಾಗದಲ್ಲಿರುವ ಹುಣಸೆ ಮರದ ಕೆಳಗೆ ಹಣವನ್ನು ಯಾರೋ ಅಸಾಮಿಗಳು ಹಣವನ್ನು ಪಣವಾಗಿಟ್ಟುಕೊಂಡು ಅಂದರ್ ಬಾಹರ್ ಇಸ್ಪೀಟಿನ ಜೂಜಾಟವಾಡುತ್ತಿರುವುದಾಗಿ ಬಂದ ಬಾತ್ಮಿ ಮೇರೆಗೆ ತಾನು, ಚಾಲಕ ಎ.ಹೆಚ್.ಸಿ 23 ಮಂಜುನಾಥ. ಹಾಗೂ ಸಿಬ್ಬಂದಿಯಾದ ಹೆಚ್.ಸಿ 38 ಸುರೇಶ್, ಪಿಸಿ 359 ಶ್ರೀನಿವಾಸ, ಪಿ.ಸಿ 138 ಮುರಳಿ ಮತ್ತು ಪಿಸಿ-264 ನರಸಿಂಹಮೂರ್ತಿ ರವರೊಂದಿಗೆ ಪೊಲೀಸ್ ಜೀಪು ಸಂಖ್ಯೆ ಕೆ.ಎ-40, ಜಿ-567 ರಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ರಾಮಗಾನಪರ್ತಿ ಗ್ರಾಮದ ಹೊರವಲಯದ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಪಂಚರು ಮತ್ತು ಸಿಬ್ಬಂದಿಯೊಂದಿಗೆ ತನಗೆ ಮಾಹಿತಿ ಬಂದ ಸ್ಥಳವಾದ ಸರ್ಕಾರಿ ಖಾಲಿ ಜಾಗದ ಹುಣಸೆ ಮರದ ಬಳಿ ನಡೆದುಕೊಂಡು ಹೋಗಿ ನಿಂತು ನೋಡಲಾಗಿ ಸುಮಾರು 5 ಜನರು ಗುಂಪು ಸೇರಿದ್ದು, ಗುಂಪಿನಲ್ಲಿದ್ದವರು ಅಂದರ್ 200/- ರೂ. ಬಾಹರ್ 200/- ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಂದರ್ ಬಾಹರ್ ಜೂಜಾಟವಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ತಾನು ಮತ್ತು ಸಿಬ್ಬಂದಿಯವರು ಅವರನ್ನು ಸುತ್ತುವರೆದು ಓಡಿ ಹೋಗದಂತೆ ಎಚ್ಚರಿಕೆ ನೀಡಿದರೂ ಸಹ ಓಡಿ ಹೋಗಲು ಪ್ರಯತ್ನಿಸಿದ್ದು, ತಾನು ಮತ್ತು ಸಿಬ್ಬಂದಿಗಳು ಓಡಿ ಹೋಗಿ ಹಿಡಿದು ಕೊಂಡು ಸದರಿ ಆಸಾಮಿಗಳ ಹೆಸರು ವಿಳಾಸ ಕೇಳಲಾಗಿ 1.ಶ್ರೀನಿವಾಸ ಬಿನ್ ಚಿಕ್ಕ ವೆಂಕಟಪ್ಪ, 33 ವರ್ಷ, ಪ.ಜಾತಿ, ಕೂಲಿ ಕೆಲಸ, ರಾಮಗಾನಪರ್ತಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು, 2. ರಾಘವೇಂದ್ರ ಬಿನ್ ನಾರಾಯಣಪ್ಪ, 25 ವರ್ಷ, ಪ.ಜಾತಿ, ಕೂಲಿ ಕೆಲಸ, ರಾಮಗಾನಪರ್ತಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಸದರಿರವರನ್ನು ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ 3. ಶ್ರೀನಿವಾಸ ಬಿನ್ ನರಸಿಂಹಪ್ಪ, 26 ವರ್ಷ, ಭೋವಿ  ಜನಾಂಗ, ಕೂಲಿ ಕೆಲಸ, ರಾಮಗಾನಪರ್ತಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು  4. ಅಶೋಕ ಬಿನ್ ನರಸಿಂಹಪ್ಪ, 26 ವರ್ಷ, , ಆದಿದ್ರಾವಿಡ ಜನಾಂಗ, ಕೂಲಿ ಕೆಲಸ, ರಾಮಗಾನಪರ್ತಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 5. ರಾಜಣ್ಣ ಬಿನ್ ಅಶ್ವಥ್ಥಪ್ಪ, 40 ವರ್ಷ, ಬಲಜಿಗರು, ಕೂಲಿ ಕೆಲಸ, ರಾಮಗಾನಪರ್ತಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು. ಎಂದು ತಿಳಿಸಿದ್ದು, ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ನೋಡಲಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳು, ಹಳೆಯ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲ ಮತ್ತು ಜೂಜಾಟಕ್ಕೆ ಪಣವಾಗಿಟ್ಟಿದ್ದ ನಗದು ಹಣ ಎಣಿಸಲಾಗಿ 840/- ರೂ. ಗಳಿದ್ದು, ಮೇಲ್ಕಂಡ 5 ಜನ ಆಸಾಮಿಗಳು, 52 ಇಸ್ಪೀಟ್ ಎಲೆಗಳು, ಪಂದ್ಯಕ್ಕೆ ಪಣವಾಗಿಟ್ಟಿದ್ದ 840/-ರೂ. ನಗದು ಹಣವನ್ನು ಮದ್ಯಾಹ್ನ 12-30 ಗಂಟೆಯಿಂದ 1-30 ಗಂಟೆಯವರೆಗೆ ವಿವರವಾದ ಪಂಚನಾಮೆ ಕೈಗೊಂಡು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತೆ. ಮೇಲ್ಕಂಡ ಆರೋಪಿಗಳ ವಿರುದ್ಧ ಕಲಂ:87 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲು  ಸೂಚಿಸಿದರ ಮೇರೆಗೆ ಈ ಪ್ರ.ವ.ವರದಿ.

 

5. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್‌ ಠಾಣೆ ಮೊ.ಸಂ.45/2021 ಕಲಂ. 279,336 ಐ.ಪಿ.ಸಿ & 184,189 INDIAN MOTOR VEHICLES ACT, 1988:-

    ದಿನಾಂಕ;15-08-2021 ರಂದು 16-00 ಗಂಟೆಗೆ ಸ.ಆ.ಉ.ನಿ ರವರು 8 ದ್ವಿಚಕ್ರ ವಾಹನಗಳೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ಸಾಹೇಬರು ಇದೆ ದಿನ ಮದ್ಯಾಹ್ನ 13-30 ಗಂಟೆಯ ಸಮಯದಲ್ಲಿ    ಠಾಣೆಯಲ್ಲಿದ್ದಾಗ ಅವರಿಗೆ ಬಂದ ಖಚಿತ ಮಾಹಿತಿ ಎನೆಂದರೆ  ಈ ದಿನ ರಜೆ ದಿನವಾಗಿದ್ದು ಚದಲಪುರ ಗೇಟಿನ ಬಳಿ ಬೆಂಗಳೂರು ಕಡೆಯಿಂದ ದ್ವಿಚಕ್ರ ವಾಹನದ ಸವಾರರು ವೀ;ಲಿಂಗ್ ಮಾಡಿಕೊಂಡು ಬರುತ್ತಿರುವು ದಾಗಿ ಮಾಹಿತಿ ಬಂದಿದ್ದು ಮಾಹಿತಿಯಂತೆ ವೀಲಿಂಗ್ ಮಾಡುವ ದ್ವಿಚಕ್ರ ವಾಹನಗಳನ್ನು ಹಿಡಿಯಲು ಠಾಣೆಯಲ್ಲಿದ್ದ ಸಿಬ್ಬಂದಿಯಾದ ಸಿ.ಪಿ.ಸಿ-243 ಶ್ರೀ. ನಾಗರಾಜ್ ನಾಯಕ್ ಮತ್ತು ಪಿಸಿ 121 ನವೀನ್ ಕುಮಾರ್  ಹಾಗೂ  ಚಾಲಕ  ಶ್ರೀನಿವಾಸ ರವ ರೊಂದಿಗೆ  ಸರ್ಕಾರಿ ಜೀಪು ಸಂಖ್ಯೆ ಕೆಎ-03-ಜಿ-925  ರಲ್ಲಿ ಮದ್ಯಾಹ್ನ 14-00 ಗಂಟೆಗೆ ಚದಲಪುರ ಗೇಟಿನ ಸಮೀಪದ  ಎನ್ –ಎಚ್-7 ರಸ್ತೆಯ ಕೊತ್ತನೂರು ಗ್ರಾಮದ ಗೇಟಿನಲ್ಲಿರುವ ಶ್ರೀ,ಆಂಜನೇಯಯಸ್ವಾಮಿ ದೇವಾಲಯದ ಬಳಿ ಹೋಗಿ ಕಾಯುತ್ತಿರುವಾಗ ಬೆಂಗಳೂರು ಕಡೆಯಿಂದ ಬಾಗೇಪಲ್ಲಿ ಕಡೆಗೆ 4 ದ್ವಿಚಕ್ರ ವಾಹನಗಳು ಅತಿವೇಗದಿಂದ ನಿರ್ಲಕ್ಷತೆಯಿಂದ ವ್ಹೀಲಿಂಗ್ ಮಾಡಿಕೊಂಡು ಬಂದಿದ್ದು ಅವುಗಳನ್ನು ನಿಲ್ಲಿಸುತ್ತಿದ್ದಂತೆ ಅವುಗಳ  ಸವಾರರು ವಾಹನಗಳನ್ನು ನಿಲ್ಲಿಸಿ ಸ್ಥಳದಿಂದ ಓಡಿಹೋದರು ಅವರನ್ನು ಹಿಡಿಯಲು ಪ್ರಯತ್ನಿಸದರೂ ಸಹಃ ಸಿಗದೆ ಓಡಿಹೋದರು,  ವ್ಹೀಲಿಂಗ್ ಮಾಡಿದ್ದ ದ್ವಿಚಕ್ರ ವಾಹನಗಳ  ಸಂಖ್ಯೆಯನ್ನು ನೋಡಲಾಗಿ1)ಬಜಾಜ್ ಕಂಪನಿಯ ಎನ್.ಎಸ್-200 ಪಲ್ಸರ್ ದ್ವಿಚಕ್ರ ವಾಹನವಾಗಿದ್ದು ಅದರ ನೊಂದಣಿ ಸಂಖ್ಯೆ ಕೆಎ-40-ವಿ-4554  ಆಗಿರುತ್ತದೆ,  2) ಇದು ಹೊಂಢಾ ಕಂಪನಿಯ ಡಿಯೋ ಮಾಡಲಿನ ಕೆಎ-05-ಕೆಎಪ್-9311 ಆಗಿದ್ದು 3) ಕೆಎ40-ಇಇ-6089 ನೊಂದಣಿಯ ಡಿಯೋ ಕಂಪನಿಯದ್ದಾಗಿರುತ್ತದೆ,4) ಕೆಎ-40-ಇಇ-1343  ನೊಂದಣಿಯ ಹೊಂಡಾ ಡಿಯೋ ಸ್ಕೂಟಿಯಾಗಿರುತ್ತದೆ, ಇವುಗಳನ್ನು ಠಾಣೆಯ ಬಳಿ ತರಲು ಒಂದು ಟೆಂಪೋವನ್ನು ಕರೆಯಿಸಿಕೊಂಡು ಅದರಲ್ಲಿ ಎತ್ತಿಹಾಕಿಕೊಂಡು ಠಾಣೆಗೆ ಹೊರಡಲು ಸಿದ್ದವಾಗುತ್ತಿದ್ದಂತೆ ಅದೇ ಸಮಯಕ್ಕೆ ಬೆಂಗಳೂರು ಕಡೆಯಿಂದ  4 ದ್ವಿಚಕ್ರ ವಾಹನಗಳು ವ್ಹೀಲಿಂಗ್ ಮಾಡಿಕೊಂಡು ಬಂದಿದ್ದು ಸದರಿಯವುಗಳನ್ನು ಜೊತೆಯಲ್ಲಿ ಇರುವ ಸಿಬ್ಬಂದಿಯೊಂದಿಗೆ ನಿಲ್ಲಿಸುತ್ತಿ ದ್ದಂತೆ  ಅವುಗಳ ಚಾಲಕರುಗಳೂ ಸಹಃ ತಮ್ಮ ವಾಹನಗಳನ್ನು ಬಿಟ್ಟು ಸ್ಥಳದಿಂದ ಓಡಿಹೋದರು. ಅವುಗಳ ನೊಂದಣಿ ಸಂಖ್ಯೆಯನ್ನು ನೋಡಲಾಗಿ  ಸದರಿ  ವಾಹನಗಳಿಗೆ ನೊಂದಣಿ ಸಂಖ್ಯೆಗಳು ಇಲ್ಲದೆ ಇದ್ದು ಅವುಗಳ ಇಂಜನ್ ಮತ್ತು ಚಾಸ್ಸಿ ನಂಬರುಗಳನ್ನು ನೋಡಲಾಗಿ 1) ಇದು ಕಪ್ಪು ಬಣ್ಣದ ಹೊಂಡಾ ಡಿಯೋ ವಾಹನವಾಗಿದ್ದುENGINENo;-JF39E70291075 CHASSIENO :-ME-4JF392BF 7291 056 ಆಗಿರುತ್ತದೆ, ಮತ್ತೊಂದು ವಾಹನವನ್ನು ಪರಿಶೀಲಿಸಲಾಗಿ 2) ಇದು ಹೊಂಡಾ ಕಂಪನಿಯ ಡಿಯೋ ವಾಹನವಾಗಿದ್ದು ಇದರ  ENGINE No;-JF39ET4119457  CHASSIE NO :-ME4JF39KKJ1043567 ಆಗಿರುತ್ತದೆ, ಮತ್ತೊಂದು ವಾಹನವನ್ನು ಪರಿಶೀಲಿಸಲಾಗಿ ಇದು 3) APRILA SCOOTY ಆಗಿದ್ದು  ಇದರ  ENGINE No;-M911M3023052.CHASSIE NO:-MET0001AAVD022653 ಆಗಿರುತ್ತದೆ 4) ಮತ್ತೊಂ ದು ಸ್ಕೂಟಿಯನ್ನು ಪರಿಶೀಲಿಸಲಾಗಿ ಇದು  TVS ಕಂಫನಿಯ NTORQ  ಮಾಡಲಿನ ಸ್ಕೂಟಿಯಾಗಿದ್ದು ಇದರ ಚಾಸ್ಸಿ ನಂ ;MD626AK39M2B00883  ಆಗಿರುತ್ತದೆ, ಇಂಜನ್ ನಂ ;AK3BM2401045  ಆಗಿರುತ್ತದೆ, ಈ ವಾಹನಗಳನ್ನೂ ಸಹಃ ಸ್ಥಳಕ್ಕೆ ಮತ್ತೊಂದು ಟೆಂಪೋವನ್ನು ಕರೆಯಿಸಿಕೊಂಡು ಅವುಗಳಲ್ಲಿ ತುಂಬಿಕೊಂಡು ಠಾಣೆಯ ಬಳಿ ತಂದು ಇಳಿಸಿ ವರದಿಯನ್ನು ನೀಡುತ್ತಿದ್ದು  ಸದರಿ ದ್ವಿಚಕ್ರ ವಾಹನಗಳ ಸವಾರರು   ಅತಿವೇಗದಿಂದ ಮತ್ತು ನಿರ್ಲಕ್ಷ ತನದಿಂದ ವಾಹನಗಳನ್ನು ವ್ಹೀಲಿಂಗ್ ಮಾಡುತ್ತಾ  ವ್ಹೀಲಿಂಗ್ ಮಾಡುವುದು ಅಪರಾದವೆಂದು ತಿಳಿದಿದ್ದರೂ ಸಹಃ ಇದರಿಂದ  ಜನರ ಮನುಷ್ಯನ ಪ್ರಾಣಕ್ಕೆ  ಅಪಾಯ  ಎಂದು ತಿಳಿದಿದ್ದರೂ ಎನ್ –ಎಚ್-7 ರಸ್ತೆಯಲ್ಲಿ  ವ್ಹೀಲಿಂಗ್ ಮಾಡಿಕೊಂಡು ಬೆಂಗಳೂರು ಕಡೆಯಿಂದ ಬಂದಂತಹ   ಈ ಮೇಲ್ಕಂಡ 8 ದ್ವಿಚಕ್ರ ವಾಹನಗಳ ಸವಾರರ ಮೇಲೆ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕೆಂದು  ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.361/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ: 15/08/2021 ರಂದು ಸಂಜೆ 6.30 ಗಂಟೆಗೆ ನ್ಯಾಯಾಲಯ ಕರ್ತವ್ಯದ CPC-339 ರವರು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣೆಯಲ್ಲಿ ಹಾಜರುಪಡಿಸಿದ ಅನುಮತಿಯ ಪತ್ರದ ಸಾರಾಂಶವೇನೆಂದರೆ, ಈ ದಿನ ದಿನಾಂಕ: 15/08/2021 ರಂದು ಮದ್ಯಾಹ್ನ 3.00 ಗಂಟೆಯಲ್ಲಿ ಠಾಣೆಯ ಶ್ರೀ.ನಾರಾಯಣಸ್ವಾಮಿ.ಕೆ, ಪಿ.ಎಸ್.ಐ ರವರು ಠಾಣೆಯಲ್ಲಿದ್ದಾಗ ಠಾಣಾ ಸರಹದ್ದಿಗೆ ಸೇರಿದ ನಾರಾಯಣಹಳ್ಳಿ ಗ್ರಾಮದ ಮಾಸ್ಟ್ರು ವೆಂಕಟಪ್ಪ ರವರ ಜಮೀನಿನ ಪಕ್ಕದಲ್ಲಿರುವ ಸರ್ಕಾರಿ ಜಮೀನಿನಲ್ಲಿ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಕಾನೂನು ಬಾಹಿರವಾಗಿ ಇಸ್ಪೇಟ್ ಜೂಜಾಟ ಆಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಸದರಿ ಜೂಜಾಟವಾಡುತ್ತಿದ್ದವರ ಮೇಲೆ ದಾಳಿ ಮಾಡುವ ಸಲುವಾಗಿ ಪಂಚರನ್ನು ಮತ್ತು  ಸಿಬ್ಬಂದಿಯವರಾದ  ಸಿ.ಹೆಚ್.ಸಿ-41 ಜಗದೀಶ್, ಸಿ.ಹೆಚ್.ಸಿ-57 ಸುರೇಶ್, ಸಿ.ಹೆಚ್.ಸಿ-249 ಸಂದೀಪ್ ಕುಮಾರ್, ಸಿ.ಪಿ.ಸಿ-16 ಲೊಕೇಶ್, ಸಿ.ಪಿ.ಸಿ-544 ವೆಂಕಟರವಣ, ಸಿ.ಪಿ.ಸಿ-02 ಅರುಣ್ ರವರೊಂದಿಗೆ KA-40 G-326 ನಂಬರಿನ ಸರ್ಕಾರಿ ಜೀಪಿನಲ್ಲಿ ನಾರಾಯಣಹಳ್ಳಿ ಗ್ರಾಮದ ಮಾಸ್ಟ್ರು ವೆಂಕಟಪ್ಪ ರವರ ಜಮೀನಿನ ಬಳಿಗೆ ಹೋಗಿ ಜೀಪನ್ನು ನಿಲ್ಲಿಸಿ ಅಲ್ಲಿಂದ ಪಕ್ಕದಲ್ಲಿರುವ ಸರ್ಕಾರಿ ಜಮೀನಿನ ಬಳಿಗೆ ಹೋಗಿ ನೋಡಲಾಗಿ ಸದರಿ ಜಮೀನಿನಲ್ಲಿ ನೆಲದ ಮೇಲೆ ಸುಮಾರು 10 ರಿಂದ 12 ಜನರು  ಗುಂಪು ಕಟ್ಟಿಕೊಂಡು ಗೋಣಿ ಚೀಲದ ಮೇಲೆ ಇಸ್ಪೇಟ್ ಜೂಜಾಟ ಆಡುತ್ತಿದ್ದು ಸದರಿಯವರ ಮೇಲೆ ಧಾಳಿ ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದು ಪೊಲೀಸರು ಸುತ್ತುವರಿದು ಹಿಡಿದು ಕೊಳ್ಳುವಷ್ಟರಲ್ಲಿ ಕಲವರು ಓಡಿ ಹೋಗಿದ್ದು ಉಳಿದವರ ಹೆಸರು ವಿಳಾಸ ಕೇಳಲಾಗಿ (1) ಶ್ರೀನಿವಾಸ ಬಿನ್ ಲೇಟ್ ವೆಂಕಟರವಣಪ್ಪ, 25 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ, ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, (2) ವೆಂಕಟರವಣ @ ರೆಡ್ಡಿ ಬಿನ್ ವೆಂಕಟಸ್ವಾಮಿ, 30 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ, ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, (3) ನ್ಯಾತಪ್ಪ ಬಿನ್ ವೆಂಕಟರವಣಪ್ಪ, 20 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ, ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, (4) ಮುನೇಶ್ ಬಿನ್ ಲೇಟ್ ವೆಂಕಟೇಶಪ್ಪ, 25 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ, ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತಲೂ ಓಡಿ ಹೋದವರ ಹೆಸರು ಮತ್ತು ವಿಳಾಸ ತಿಳಿಯಲಾಗಿ (5) ಮಂಜುನಾಥ ಬಿನ್ ವೆಂಕಟಪ್ಪ, 35 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ, ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು (6) ಚಿಕ್ಕಪ್ಪಯ್ಯ ಬಿನ್ ಲೇಟ್.ರಾಮರೆಡ್ಡಿ, 30 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ, ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು. (7) ಸುಬ್ರಮಣಿ ಬಿನ್ ವೆಂಕಟೇಶಪ್ಪ, 25 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ, ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು (8) ಮಂಜುನಾಥ ಬಿನ್ ಲೇಟ್ ವೆಂಕಟಪ್ಪ, 35 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ, ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, (9) ನಾರಾಯಣಸ್ವಾಮಿ ಬಿನ್ ಲೇಟ್ ಹಳೇ ರಾಮಪ್ಪ, 20 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ, ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, (10) ಮುನಿರಾಜು @ ಅಪ್ಸರ್ ಬಿನ್ ನಾರಾಯಣಸ್ವಾಮಿ, 25 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ, ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, (11) ವೆಂಕಟರವಣ @ ಅಂಕಣ್ಣ ಬಿನ್  ವೆಂಕಟೇಶಪ್ಪ, 20 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ, ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, (12) ಶ್ರೀನಿವಾಸ @ ಗೊರ್ಲು ಬಿನ್ ಪೂಜಾರಪ್ಪ, 25 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ, ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಯಿತು. ಸ್ಥಳದಲ್ಲಿ ಪರಿಶೀಲಿಸಲಾಗಿ 52 ಇಸ್ಪೇಟ್ ಎಲೆಗಳು, ಒಂದು ಗೋಣಿ ಚೀಲ ಹಾಗೂ ಪಂದ್ಯಕ್ಕೆ ಇಟ್ಟಿದ್ದ  1320/- ರೂಗಳಿದ್ದು, ಸದರಿಯವುಗಳನ್ನು ಸಂಜೆ 4.00 ರಿಂದ 5.00 ಗಂಟೆಯವರೆಗೆ ಪಂಚನಾಮೆಯ ಮೂಲಕ  ಅಮಾನತ್ತು ಪಡಿಸಿಕೊಂಡು ಠಾಣೆಗೆ ವಾಪಸ್ಸಾಗಿದ್ದು ಮೇಲ್ಕಂಡಂತೆ ಕಾನೂನು ಬಾಹಿರವಾಗಿ ಜೂಜಾಟವಾಡುತ್ತಿದ್ದವರ ಆಸಾಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಎನ್.ಸಿ.ಆರ್ ದಾಖಲಿಸಿಕೊಂಡು ಕಲಂ 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಘನ ನ್ಯಾಯಾಯದ ಅನುಮತಿಯನ್ನು ಕೋರಿದ್ದು, ಘನ ನ್ಯಾಯಾಲಯವು ಪ್ರಕರಣವನ್ನು ದಾಖಲು ಮಾಡಲು ಅನುಮತಿಯನ್ನು ನೀಡಿರುವುದಾಗಿದ್ದು, ಸದರಿ ಆದೇಶದ ಮೇರೆಗೆ ಪ್ರಕರಣ ದಾಖಲಿಸಿರುವುದಾಗಿರುತ್ತೆ.

 

7. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ.113/2021 ಕಲಂ. 279,337 ಐ.ಪಿ.ಸಿ:-

       ದಿ:16/08/2021 ರಂದು ಬೆಳಿಗ್ಗೆ 8-30 ಗಂಟೆ ಸಮಯದಲಿ ಗೌರಿಬಿದನೂರು ಸರ್ಕಾರಿ ಆಸ್ಪತೆಯಿಂದ ಬಂದ ಮೇಮೋವನ್ನು ಪಡೆದು ಕೊಂಡು  ಈ ದಿನ ಬೆಳಗ್ಗೆ 08-35 ಗಂಟೆಗೆ ಗೌರಿಬಿದನೂರು ಸರ್ಕಾರಿ ಅಸ್ಪತ್ರೆಗೆ ಹೋಗಿ ಅಸ್ಪತೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಗಾಯಾಳು ಶ್ರೀನಿವಾಸಮೂರ್ತಿ ಬಿನ್ ಚಿಕ್ಕಗಂಗಪ್ಪ, 45 ವರ್ಷ, ಆದಿ ಕರ್ನಾಟಕ ಜನಾಂಗ, ಸೆಕ್ಯೂರಿಟಿ ಗಾರ್ಡ್ ಕೆಲಸ, ವಾಸ:ರಮಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ನೀಡಿದ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಸದರಿ ಹೇಳಿಕೆಯ ಸಾರಾಂಶವೆನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ದಿ:16/08/2021 ರಂದು ಬೆಳಿಗ್ಗೆ 6-30 ಗಂಟೆ ಸಮಯ ದಲ್ಲಿ ತಾನು, ತನ್ನ ಹೆಂಡತಿಯಾದ ಭಾಗ್ಯಮ್ಮ 38 ವರ್ಷ ಮತ್ತು ತನ್ನ ಮಗ ಪೂರ್ಣ ಚಂದ್ರ , 07 ವರ್ಷ ರವರೊಂದಿಗೆ ಕೆ.ಎ-40 ವಿ-2565 ನೊಂದಣೀ ಸಂಖ್ಯೆಯ ದ್ವಿ ಚಕ್ರ ವಾಹನದಲ್ಲಿ ಪೂಜೆ ಮಾಡಿಸಿಕೊಂಡು ಬರಲು ಮುದಗಾನಕುಂಟೆಗೆ ಹೊರಟು 7-00 ಗಂಟೆ ಸಮಯ ದಲ್ಲಿ ಮುದುಗಾನಕುಂಟೆಗೆ ಹೋಗಿ ಪೂಜೆಯನ್ನು ಮುಗಿಸಿಕೊಂಡು ವಾಪಸ್ಸು ಮನೆಗ ಬರಲು ಆದೇ ದ್ವಿ ಚಕ್ರ ವಾಹನದಲ್ಲಿ ಗೌರಿಬಿದ ನೂರು ನಗರದ ಬೈಪಾಸ್ ರಸ್ತೆಯ ಗಂಗಸಂದ್ರ ಗ್ರಾಮಕ್ಕೆ ಹೋಗುವ ರಸ್ತೆಯ ತಿರುವಿನಲ್ಲಿ ಬರುತ್ತಿದ್ದಾಗ  ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ಹಿಂದೂಪುರ ಕಡೆಯಿಂದ ಬಂದ ಕಾರಿನ ಚಾಲಕ ತನ್ನ ಕಾರನ್ನು ಅತೀವೇಗ  ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಾನು ಚಾಲನೆ ಮಾಡಿಕೊಂಡು ಬರುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ತಾವು ದ್ವಿ ಚಕ್ರ ವಾಹನದ ಸಮೇತ ಕೆಳಗೆ ಬಿದ್ದಿದ್ದು ತನಗೆ ಬಲ ಮೊಣಕಾಲಿನ ಬಳಿ ಮೂಳೆ ಮುರಿತದ ರಕ್ತಗಾಯವಾಗಿರುತ್ತೆ. ತನ್ನ ಹೆಂಡತಿ ಭಾಗ್ಯಮ್ಮ ರವರಿಗೆ ತಲೆಗೆ ಮತ್ತು ಇತರೆ ಭಾಗಗಳಲ್ಲಿ ರಕ್ತ ಗಾಯವಾಗಿದ್ದು ತನ್ನ ಮಗನಿಗೆ ಬಲ ಮೊಣಕಾಲಿಗೆ  ರಕ್ತ ಗಾಯವಾಗಿರುತ್ತೆ. ನಂತರ ತಮಗೆ ಅಪಘಾತ ಪಡಿಸಿದ ಕಾರಿನ ನಂಬರ್ ನ್ನು ನೋಡಲಾಗಿ ಎ.ಪಿ-02 ಸಿ.ಎ-8184 ಕಾರು ಆಗಿರುತ್ತೆ. ಅಲ್ಲಿದ್ದ ಸಾರ್ವಜನಿಕರು ಅಂಬುಲೇನ್ಸ್ ಗೆ ಕರೆ ಮಾಡಿ ಅಂಬುಲೇನ್ಸ್ ಬಂದ ನಂತರ ನಮ್ಮನ್ನು ಗೌರಿಬಿದನೂರು ಸರ್ಕಾರಿ ಅಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟುತ್ತಾರೆ.  ಆದ್ದರಿಂದ ತಮಗೆ ಅಪಘಾತ ಮಾಡಿದ ಎ.ಪಿ-02 -ಸಿ.ಎ-8184 ಕಾರು   ಮತ್ತು ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರುತ್ತೇನೆಂದು ನೀಡಿದ ಹೇಳಿಕೆಯಾಗಿರುತ್ತೆ.  ಗಾಯಾಳುವಿನ ಹೇಳಿಕೆಯನ್ನು ಪಡೆದುಕೊಂಡು ನಂತರ ಬೆಳಿಗ್ಗೆ 9-30 ಗಂಟೆ ಸಮಯಕ್ಕೆ ಠಾಣೆಗೆ ವಾಪಸ್ಸು ಬಂದು ಠಾಣೆಯಲ್ಲಿ ಮೊ.ಸಂ:113/2021 ಕಲಂ 279,337 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 

8. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.269/2021 ಕಲಂ. 427 ಐ.ಪಿ.ಸಿ:-

      ದಿನಾಂಕ: 16/08/2021 ರಂದು ಬೆಳಿಗ್ಗೆ 10:30 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀ ಪಿ.ಎಸ್ ಕಿರಣ್, ಸಹಾಯಕ ಇಂಜಿನಿಯರ್(ವಿ), ಬೆಸ್ಕಾಂ ಇಲಾಖೆ, ಶಿಡ್ಲಘಟ್ಟ ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಬೆಸ್ಕಾಂ ಇಲಾಖೆಯ ಕಾರ್ಯ ಮತ್ತು ಪಾಲನಾ ಘಟಕ-1, ಶಿಡ್ಲಘಟ್ಟ ನಗರ ಉಪವಿಭಾಗ ವ್ಯಾಪ್ತಿಯಲ್ಲಿರುವ ಗೊರಮಡುಗು-ಕುಪ್ಪೇನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಕುಪ್ಪೇನಹಳ್ಳಿ ಜಂಕ್ಷನ್ ಬಳಿ ಇರುವ ಹುಜಗೂರು ಗ್ರಾಮದ ಶ್ರೀ ರಾಮಚಂದ್ರಪ್ಪ ಎಂಬುವವರ ಕೃಷಿ ಜಮೀನಿನಲ್ಲಿರುವ 63ಕೆ.ವಿ.ಎ ಪರಿವರ್ತಕದ ಸೆಂಟರ್ ನ ಆರ್.ಸಿ.ಸಿ ಕಂಬಕ್ಕೆ ದಿನಾಂಕ: 15/08/2021 ರಂದು ಮದ್ಯಾಹ್ನ 1-30 ಗಂಟೆ ಸುಮಾರಿಗೆ ಯಾವುದೋ ವಾಹನವು ಡಿಕ್ಕಿಹೊಡೆದ ಪರಿಣಾಮ 11 ಕೆ.ವಿ ವಿದ್ಯುತ್ ಮಾರ್ಗವು ನೆಲಕ್ಕೆ ಬಾಗಿಹೋಗಿ ಅಪಾಯಕರ ಸ್ಥಿತಿಯಲ್ಲಿರುವುದಾಗಿಯೂ ಮತ್ತು ಆರ್.ಸಿ.ಸಿ ಕಂಬವು ಮುರಿದಿರುವುದಾಗಿ ಮದ್ಯಾಹ್ನ 2-00 ಗಂಟೆಯಲ್ಲಿ ತಮ್ಮ ಶಾಖೆಯ ಪವರ್ ಮೆನ್ ಗಳಾದ ಆರ್.ಮಂಜುನಾಥ ಮತ್ತು ಪ್ರವೀಣ್ ಗಜ್ಜಿಮನಿ ರವರು ನನಗೆ ದೂರವಾಣಿ ಮೂಲಕ ತಿಳಿಸಿದ ಹಿನ್ನಲೆಯಲ್ಲಿ ತಾನು ಸದರಿ ಜಾಗಕ್ಕೆ ಹೋಗಿ, ಜಾಗವನ್ನು ಪರಿಶೀಲಿಸಲಾಗಿ, 63 ಕೆ.ವಿ.ಎ ಪರಿವರ್ತಕದ ಸೆಂಟರ್ನ ಆರ್.ಸಿ.ಸಿ ಕಂಬವು ಮುರಿದಿರುವುದು ಕಂಡುಬಂದಿರುತ್ತದೆ. ಇಲಾಖೆಯ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಈ ದಿನ ತಡವಾಗಿ ದೂರು ನೀಡುತ್ತಿದ್ದು, ಯಾವುದೋ ವಾಹನವು ಬೆಸ್ಕಾಂ ಇಲಾಖೆಯ 63ಕೆ.ವಿ.ಎ ಪರಿವರ್ತಕದ ಸೆಂಟರ್ ನ ಆರ್.ಸಿ.ಸಿ ಕಂಬಕ್ಕೆ ಡಿಕ್ಕಿ ಹೊಡೆದು ಬೆಸ್ಕಾಂ ಇಲಾಖೆಗೆ ಸುಮಾರು 25,000/- ರೂಗಳಷ್ಠು ಆರ್ಥಿಕ ನಷ್ಠವುಂಟು ಮಾಡಿರುವವರನ್ನು ಪತ್ತೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ಕೋರಿದ್ದರ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 16-08-2021 06:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080