ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.190/2021 ಕಲಂ. 323,324,504,34 ಐ.ಪಿ.ಸಿ:-

     ದಿನಾಂಕ: 15/07/2021 ರಂದು ಬೆಳಿಗ್ಗೆ 6-15 ಗಂಟೆಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಆದಿನಾರಾರಾಯಣ ಬಿನ್ ವೆಂಕಟೇಶಪ್ಪ 28 ವರ್ಷ, ಆಟೋಚಾಲಕ, ಆದಿಕರ್ನಾಟಕ, ವಾಸ: ಆಚೇಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ದಿನಾಂಕ: 14/07/2021 ರಂದು ಸಂಜೆ ಸುಮಾರು 7-00 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ನವೀನ ಬಿನ್ ಸೀನಪ್ಪ ಮತ್ತು ನಮ್ಮ ಅಣ್ಣ ಸೀನಾ ರವರಿಗೂ ಜಮೀನು ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದು ಇದೇ ವಿಚಾರವಾಗಿ ಈ ದಿನ 7-30 ಗಂಟೆಯ ಸಮಯದಲ್ಲಿ ನಾನು ನಮ್ಮ ಮನೆಯ ಬಳಿ ಇದ್ದಾಗ ಇದೇ ಗ್ರಾಮದ ವಾಸಿಗಳಾದ 1. ನವೀನ, 2.ಪ್ರವೀಣ, 3.ಶ್ರೀನಿವಾಸಪ್ಪ, 4. ರತ್ನಮ್ಮ, ರವರು ಬಂದು ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಶ್ರೀನಿವಾಸ ರವರು ನನ್ನ ತಲೆಯ ಎಡಭಾಗಕ್ಕೆ ಮಚ್ಚಿನಿಂದ ಹೊಡೆದು ರಕ್ತಗಾಯ ಮಾಡಿರುತ್ತಾನೆ. ನವೀನ, ಪ್ರವೀಣ ರವರು ಕೈಗಳಿಂದ ಹೊಡೆದು ಮೂಗೇಟುಗಳನ್ನುಂಟು ಮಾಡಿರುತ್ತಾರೆ. ರತ್ನಮ್ಮ ಕೋಂ ಶ್ರೀನಿವಾಸಪ್ಪ ರವರು ಅವಾಚ್ಯಶಬ್ದಗಳಿಂದ ಬೈದಿರುತ್ತಾರೆ. ಅಷ್ಟರಲ್ಲಿ ನಮ್ಮ ತಂದೆ ವೆಂಕಟೇಶಪ್ಪ ಮತ್ತು ತಾಯಿ ವೆಂಕಟಲಕ್ಷ್ಮಮ್ಮ ರವರು ಬಂದು ಜಗಳವನ್ನು ಬಿಡಿಸಿರುತ್ತಾರೆ. ನಂತರ ನಾನು ಮತ್ತು ನನ್ನ ಅಣ್ಣ ಸೀನಾ ರವರು  ಯಾವುದೋ ಆಟೋದಲ್ಲಿ ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿರುತ್ತೇವೆ. ನನಗೆ ಮತ್ತು ನಮ್ಮ ಅಣ್ಣನಿಗೆ ಅವಾಚ್ಯ ಶಬ್ದಗಳಿಂದ ಬೈದು  ಕೈಗಳಿಂದ , ಮಚ್ಚಿನಿಂದ ಹೊಡೆದು ರಕ್ತಗಾಯವನ್ನುಂಟು ಮಾಡಿದ ಮೇಲ್ಕಂಡವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.191/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 15/07/2021 ರಂದು ಮದ್ಯಾಹ್ನ 2-15 ಗಂಟೆಗೆ ಶ್ರೀ ನಾಗರಾಜ್ ಡಿ.ಆರ್ ಆರಕ್ಷಕ ನಿರೀಕ್ಷಕರು, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲುಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ; 15-07-2021 ರಂದು ಮದ್ಯಾಹ್ನ 1-00 ಗಂಟೆ ಸಮಯದಲ್ಲಿ ನಾನು ಮತ್ತು ಅಪರಾಧ ದಳದ ಸಿಬ್ಬಂದಿಯಾದ ಸಿ ಹೆಚ್ ಸಿ-156 ನಟರಾಜ್ ಹಾಗೂ ಜೀಪ್ ಚಾಲಕ ಎ ಹೆಚ್ ಸಿ-54 ನೂರ್ ಭಾಷ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-1444 ವಾಹನದಲ್ಲಿ ಬಾಗೇಪಲ್ಲಿ ತಾಲ್ಲೂಕು ರಾಮಸ್ವಾಮಿಪಲ್ಲಿ, ಪೋತೇಪಲ್ಲಿ, ಯಗವ ಬಂಡ್ಲಕೆರೆ ಗ್ರಾಮಗಳ ಕಡೆ ಗಸ್ತು ಮಾಡುತ್ತಿದ್ದಾಗ ಯಾರೋ ಅಸಾಮಿಯು ಬಾಗೇಪಲ್ಲಿ ತಾಲ್ಲೂಕು, ಗೂಳೂರು ಹೋಬಳಿ, ನಲ್ಲಪರೆಡ್ಡಿಪಲ್ಲಿ ಗ್ರಾಮದ ಬಳಿ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಅಪರಾಧ ಸಿಬ್ಬಂದಿಯಾದ ಸಿ ಹೆಚ್ ಸಿ-156 ನಟರಾಜ್ ರವರೊಂದಿಗೆ ಸರ್ಕಾರಿ ಜೀಪ್ ನಲ್ಲಿ ಹೊರಟು, ನಲ್ಲಪರೆಡ್ಡಿಪಲ್ಲಿ ಗ್ರಾಮದ ಬಳಿ ಇದ್ದ ಪಂಚರನ್ನು ಕರೆದು ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಮದ್ಯಾಹ್ನ 1-15 ಗಂಟೆಗೆ ನಲ್ಲಪರೆಡ್ಡಿಪಲ್ಲಿ ಗ್ರಾಮದ ಬಳಿ ಜೀಪ್ ನಲ್ಲಿ ಹೋಗುತ್ತಿದ್ದದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಚಿಲ್ಲರೇ ಅಂಗಡಿ ಮುಂಭಾಗದಲ್ಲಿದ್ದ ಅಸಾಮಿಯು ಓಡಿ ಹೋಗುತ್ತಿದ್ದವನ್ನು ಸಿಬ್ಬಂದಿಯಾದ ನಟರಾಜ್ ರವರು ಹಿಡಿಯಲು ಪ್ರಯತ್ನಿಸಿದ್ದು, ಆಸಾಮಿಯು ಕೈಗೆ ಸಿಗದೇ ಓಡಿಹೋಗಿದ್ದು, ಓಡಿ ಹೋದ ಅಸಾಮಿಯ ಹೆಸರು ತಿಳಿಯಲಾಗಿ ರಾಮಪ್ಪ ಬಿನ್ ಲೇಟ್ ಈರಪ್ಪ, 50 ವರ್ಷ, ಆದಿ ಕರ್ನಾಟಕ ಜನಾಂಗ, ಚಿಲ್ಲರೇ ಅಂಗಡಿ ವ್ಯಾಪಾರ, ವಾಸ: ನಲ್ಲಪರೆಡ್ಡಿಪಲ್ಲಿ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿದು ಬಂದಿದ್ದು. ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 1) 90 ML ನ HAYWARDS CHEERS WHISKY  ಯ 12 ಮದ್ಯದ ಟೆಟ್ರಾ ಪಾಕೇಟ್ ಗಳು  ಗಳಿದ್ದು,  2) 90 ML ನ HAYWARDS CHEERS WHISKY ಯ 02 ಟೆಟ್ರಾ ಖಾಲಿ ಪಾಕೇಟ್ ಗಳು, 3) ಮದ್ಯ ಕುಡಿದಿರುವ ಖಾಲಿ 04 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ.  ಇವುಗಳು  ಒಟ್ಟು 1 ಲೀಟರ್ 80 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ – 421/-ರೂ ಗಳಾಗಿರುತ್ತೆ. ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ  ಮೂಲಕ ಅಮಾನತ್ತು ಪಡಿಸಿಕೊಂಡು,ಅಸಲು ದಾಳಿ ಪಂಚನಾಮೆ, ಮಾಲನ್ನು ಮದ್ಯಾಹ್ನ 2-15 ಗಂಟೆಗೆ ಠಾಣೆಯಲ್ಲಿ ನಿಮ್ಮ ವಶಕ್ಕೆ ನೀಡುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

3. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.192/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 15/07/2021 ರಂದು ಮದ್ಯಾಹ್ನ 4-00 ಗಂಟೆಗೆ ಶ್ರೀ ನಾಗರಾಜ್ ಡಿ.ಆರ್ ಆರಕ್ಷಕ ನಿರೀಕ್ಷಕರು, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲುಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ; 15-07-2021 ರಂದು ಮದ್ಯಾಹ್ನ 2-45 ಗಂಟೆ ಸಮಯದಲ್ಲಿ ನಾನು ಮತ್ತು ಅಪರಾಧ ದಳದ ಸಿಬ್ಬಂದಿಯಾದ ಸಿ ಹೆಚ್ ಸಿ-103 ಶಂಕರರೆಡ್ಡಿ ಹಾಗೂ ಜೀಪ್ ಚಾಲಕ ಎ ಹೆಚ್ ಸಿ-57 ನೂರ್ ಭಾಷ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-1444 ವಾಹನದಲ್ಲಿ ಬಾಗೇಪಲ್ಲಿ ತಾಲ್ಲೂಕು ಗೂಳೂರು, ಚೆನ್ನರಾಯನಪಲ್ಲಿ, ಜಿಲಾಜಿರ್ಲಾ ಗ್ರಾಮಗಳ ಕಡೆ ಗಸ್ತು ಮಾಡುತ್ತಿದ್ದಾಗ, ಯಾರೋ ಅಸಾಮಿಯು ಬಾಗೇಪಲ್ಲಿ ತಾಲ್ಲೂಕು, ಗೂಳೂರು ಹೋಬಳಿ, ನಲ್ಲಪರೆಡ್ಡಿಪಲ್ಲಿ ಗ್ರಾಮದ ಬಳಿ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಅಪರಾಧ ದಳದ ಸಿಬ್ಬಂದಿಯಾದ ಸಿ ಹೆಚ್ ಸಿ-103 ಶಂಕರರೆಡ್ಡಿ ರವರೊಂದಿಗೆ ಸರ್ಕಾರಿ ಜೀಪ್ ನಲ್ಲಿ ಹೊರಟು, ನಲ್ಲಪರೆಡ್ಡಿಪಲ್ಲಿ ಗ್ರಾಮದ ಬಳಿ ಇದ್ದ ಪಂಚರನ್ನು ಕರೆದು ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಮದ್ಯಾಹ್ನ 3-00 ಗಂಟೆಗೆ ನಲ್ಲಪರೆಡ್ಡಿಪಲ್ಲಿ ಗ್ರಾಮದ ಬಳಿ ಜೀಪ್ ನಲ್ಲಿ ಹೋಗುತ್ತಿದ್ದದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಚಿಲ್ಲರೇ ಅಂಗಡಿ ಮುಂಭಾಗದಲ್ಲಿದ್ದ ಅಸಾಮಿಯು ಓಡಿ ಹೋಗುತ್ತಿದ್ದವನ್ನು ಸಿಬ್ಬಂದಿಯಾದ ಶಂಕರರೆಡ್ಡಿ ರವರು ಹಿಡಿಯಲು ಪ್ರಯತ್ನಿಸಿದ್ದು, ಆಸಾಮಿಯು ಕೈಗೆ ಸಿಗದೇ ಓಡಿಹೋಗಿದ್ದು, ಓಡಿ ಹೋದ ಅಸಾಮಿಯ ಹೆಸರು ತಿಳಿಯಲಾಗಿ ನಾರಾಯಣಪ್ಪ ಬಿನ್ ಲೇಟ್ ನರಸಪ್ಪ, 60 ವರ್ಷ, ಆದಿ ಕರ್ನಾಟಕ ಜನಾಂಗ, ಚಿಲ್ಲರೇ ಅಂಗಡಿ ವ್ಯಾಪಾರ, ವಾಸ: ನಲ್ಲಪರೆಡ್ಡಿಪಲ್ಲಿ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿದುಬಂದಿದ್ದು, ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 1) 90 ML ನ HAYWARDS CHEERS WHISKY  ಯ 12 ಮದ್ಯದ ಟೆಟ್ರಾ ಪಾಕೇಟ್ ಗಳು  ಗಳಿದ್ದು,  2) 90 ML ನ HAYWARDS CHEERS WHISKY ಯ 02 ಟೆಟ್ರಾ ಖಾಲಿ ಪಾಕೇಟ್ ಗಳು, 3) ಮದ್ಯ ಕುಡಿದಿರುವ ಖಾಲಿ 04 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ.  ಇವುಗಳು  ಒಟ್ಟು 1 ಲೀಟರ್ 80 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ – 421/-ರೂ ಗಳಾಗಿರುತ್ತೆ. ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ  ಮೂಲಕ ಅಮಾನತ್ತು ಪಡಿಸಿಕೊಂಡು ಅಸಲು ದಾಳಿ ಪಂಚನಾಮೆ, ಮಾಲನ್ನು  ಮದ್ಯಾಹ್ನ 4-00 ಗಂಟೆ ಠಾಣೆಯಲ್ಲಿ   ನಿಮ್ಮ ವಶಕ್ಕೆ ನೀಡುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 

4. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ.53/2021 ಕಲಂ. 323,324,353,504,34 ಐ.ಪಿ.ಸಿ :-

     ದಿನಾಂಕ; 15-07-2021 ರಂದು ಜಿಲ್ಲಾಸ್ಪತ್ರೆಯಿಂದ ರವಾನಿಸಿಕೊಂಡಿರುವ ಆಸ್ಪತ್ರೆಯ ಮೆಮೋವನ್ನು ಸ್ವೀಕರಿಸಿ, ನಂತರ ಪಿ.ಸಿ-541 ರವರು ಜಿಲ್ಲಾಸ್ಪತ್ರೆಗೆ ಬೇಟಿ ನೀಡಿ ವೈದ್ಯರ ಸಮಕ್ಷಮದಲ್ಲಿ ಗಾಯಾಳುವಿನ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ತಾನು ಕೋಲಾರ ಜಿಲ್ಲೆಯ ಮುಳಬಾಗಿಲು ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ಬಸ್ ನ ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ; 15-07-2021 ರಂದು ಕೆ.ಎ-07-ಎಫ್-1608 ರ ಬಸ್ ನಲ್ಲಿ ಬಾಷಾ ಮತೀನ್ ರವರಿಗೆ ಚಾಲಕನಾಗಿ, ತನಗೆ ನಿರ್ವಾಹಕನಾಗಿ ನೇಮಿಸಿ, ಮುಳಬಾಗಿಲು ನಿಂದ-ವಯಾ-ಕೋಲಾರ-ಚಿಕ್ಕಬಳ್ಳಾಪುರಕ್ಕೆ ಹೋಗಿ ಬರಲು ನೇಮಿಸಿದ್ದು, ಅದರಂತೆ ನಾವುಗಳು ಮದ್ಯಾಹ್ನ ಮುಳಬಾಗಿಲು ಬಿಟ್ಟು ಕೋಲಾರ ಮಾರ್ಗವಾಗಿ-ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾಗ ಚದಲಪುರದ ಬಳಿ ಇಬ್ಬರು ಹುಡುಗರು ಬಸ್ ಹತ್ತಿದರು. ಅವರು ಬಸ್ ನ ಡೋರ್ ಬಳಿ ನಿಂತಿದ್ದು, ಮಾಸ್ಕ್ ಅನ್ನು ಸಹ ಧರಿಸಿರುವುದಿಲ್ಲ. ತಾನು ಟಿಕೇಟ್ ಅನ್ನು ಪಡೆದುಕೊಂಡು ಅವರ ಬಳಿ ಬಂದು ಯಾಕೆ ಡೋರ್ ನಲ್ಲಿ ನಿಂತಿದ್ದೀರಿ? ಸೀಟುಗಳಿವೆ ಒಳಗಡೆ ಬನ್ನಿ, ಕೆಳಗಡೆ ಬಿದ್ದು ಹೋದರೆ ಅಪಘಾತ ಉಂಟಾಗುವ ಸಂಭವಿರುತ್ತೆ. ಎಂದು ಹೇಳುತ್ತಿದ್ದಾಗ, ಅವರು ಬಸ್ ನಲ್ಲಿ ಉಗುಳುತ್ತಿದ್ದರು, ಆಗ ತಾನು ಕೊರೋನಾ ಸಾಂಕ್ರಾಮಿಕ ರೋಗ ಇದೆ ಬೇರೆಯವರಿಗೆ ತೊಂದರೆ ಮಾಡಬೇಡಿ, ಯಾಕೇ ಈ ರೀತಿ ಕೆಟ್ಟದಾಗಿ ವರ್ತನೆ ಮಾಡುತ್ತಿದ್ದೀರಿ? ಒಳಗಡೆ ಬನ್ನಿ ಎಂದು ಹೇಳುತ್ತಿದ್ದಾಗ ಅವರಿಬ್ಬರು ಏ ನನ್ನ ಮಗನೇ ಲೋಫರ್ ನನ್ನ ಮಗನೇ ತಿಕ ಮುಚ್ಚಿಕೊಂಡು ಇರೋ ಏನು ನಿನ್ಯಾವನೋ ನಮಗೆ ಹೇಳೋಕೆ ಎಂದು ಅವಾಚ್ಯ ಶಬ್ದಗಳಿಂದ ಬೈದು, ಚಿಕ್ಕಬಳ್ಳಾಪುರ ನಗರದ ಜೂನಿಯರ್ ಕಾಲೇಜ್ ಬಳಿ ಬಸ್ ಬರುತ್ತಿದ್ದಂತೆ ಸಂಜೆ ಸುಮಾರು 4.30 ಗಂಟೆ ಸಮಯದಲ್ಲಿ” ನನ್ನ ಮಗನೇ ನಮ್ಮಿಷ್ಟದಂತೆ ಇರ್ತಿವಿ ಎಂದು ಬೈದು ಆಪೈಕಿ ಒಬ್ಬನು ತನ್ನನ್ನುಗಟ್ಟಿಯಾಗಿ ಹಿಡಿದುಕೊಂಡು ಕೈಯಲ್ಲಿನ ಊಟದ ಬಾಕ್ಸ್ ನಿಂದ ತನ್ನ ಮೂತಿಗೆ , ಬಾಯಿಗೆ ಗಟ್ಟಿಯಾಗಿ ಗುದ್ದಿದರು. ಇದರಿಂದ ತನಗೆ ಬಾಯಿಯಲ್ಲಿ ರಕ್ತ ಬಂದಿದ್ದು, ತುಟಿಗಳು ಊದಿಕೊಂಡಿದ್ದು,  ನಂತರ ಅಲ್ಲಿದ್ದ ಜನರು, ಅವರಿಬ್ಬರನ್ನು ಹಿಡಿದುಕೊಂಡು ಆ ಪೈಕಿ ಒಬ್ಬ ಹುಡುಗನ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಚಿರಂಜೀವಿ ಬಿನ್ ಲೇಟ್ ಕನಕರೆಡ್ಡಿ, 22 ವರ್ಷ, ಪ.ಜಾತಿ, ಕೂಲಿ ಕೆಲಸ, ವಾಸ; ಕುಪ್ಪಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಇನ್ನೊಬ್ಬನನ್ನು ಹೆಸರು ವಿಳಾಸ ಕೇಳುತ್ತಿದ್ದಂತೆ ಆತನು ಜನರ ಮದ್ಯದಲ್ಲಿ ತಪ್ಪಿಸಿಕೊಂಡು ಓಡಿ ಹೋಗಿರುತ್ತಾನೆ. ತಾನು ಕೆ.ಎಸ್.ಆರ್.ಟಿ.ಸಿ ಬಸ್ ನ ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ತನಗೆ ಅವಾಚ್ಯ ಶಬ್ದಗಳಿಂದ ಬೈದು, ಊಟದ ಡಬ್ಬಿಯಿಂದ ಮೂತಿಗೆ ಗುದ್ದಿರುವ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಹೇಳಿಕೆಯ ದೂರಿನ ಮೇರೆಗೆ ರಾತ್ರಿ 8.00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಹಾಜರುಪಡಿಸಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.310/2021 ಕಲಂ. 323,324,504,506 ಐ.ಪಿ.ಸಿ :-

     ದಿನಾಂಕ: 16/07/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಆಂಜಪ್ಪ ಬಿನ್ ಲೇಟ್ ಚಿಕ್ಕ ತಿಮ್ಮಣ್ಣ, 30 ವರ್ಷ, ಕೂಲಿಕೆಲಸ, ಬೋವಿ ಜನಾಂಗ, ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಬೆಳಿಗ್ಗೆ 09.30 ಗಂಟೆಗೆ ಠಾಣೆಗೆ ವಾಪಸ್ಸಾಗಿದ್ದು ಸದರಿ ಹೇಳೀಕೆಯ ಸಾರಾಂಶವೇನೆಂದರೆ, ದಿನಾಂಕ: 15/07/2021 ರಂದು ತಾನು ಮತ್ತು ತಮ್ಮ ಗ್ರಾಮದ ದೇವಪ್ಪ ಮತ್ತು ಮಂಜುನಾಥ ಹಾಗೂ ಇತರರು ಕೂಲಿಕೆಲಸಕ್ಕೆಂದು ನಂದಗುಡಿಗೆ ಹೋಗಿ ವಾಪಸ್ ರಾತ್ರಿ ಸುಮಾರು 7.00 ಗಂಟೆಗೆ ಬಂದಿದ್ದು, ಸದರಿ ನಂದಗುಡಿಯ ಮಾಲಿಕರು ತಮಗೆ ಚಿಕನ್ ಕೊಟ್ಟಿದ್ದು, ಅದನ್ನು ದೇವಪ್ಪ ರವರ ಮನೆಯಲ್ಲಿ ಅಡುಗೆ ಮಾಡಿ ಊಟ ಮಾಡಿದೆವು. ನಂತರ ಅವರ ಮನೆಯಿಂದ ತಾನು ಮತ್ತು ಮಂಜು @ ಮಂಜುನಾಥ ಬಿನ್ ಲೇಟ್ ಮುನಿಯಪ್ಪ ರವರು ಮನೆಗಳಿಗೆ ಹೋಗಲು ಆಚೆ ಬಂದಿದ್ದು, ಆಗ ಮಂಜುನಾಥ ರವರು ತನ್ನ ಮತ್ತು ತನ್ನ ಹೆಂಡತಿಯಾದ ರಾಣಿ ರವರ ಸಂಸಾರದಲ್ಲಿ ಅನ್ಯೋನ್ಯತೆ ಇಲ್ಲದ ವಿಚಾರ ತೆಗೆದು ಲೇ ಲೋಫರ್ ನನ್ನ ಮಗನೇ ನಿನ್ನ ಹೆಂಡತಿಯನ್ನು ಸರಿಯಾಗಿ ನೋಡಿಕೊಳ್ಳಲು ಆಗುವುದಿಲ್ವವಾ, ಅದಕ್ಕೆ ಆಕೆ ತವರು ಮನೆಗೆ ಹೊರಟು ಹೋಗಿರುತ್ತಾಳೆಂದು ಬೈದು ಅಲ್ಲಿಯೇ ಬಿದ್ದಿದ್ದ ಕಲ್ಲಿನಿಂದ ತನ್ನ ತಲೆಯ ಮೇಲ್ಬಾಗಕ್ಕೆ ಹೊಡೆದು ರಕ್ತ ಗಾಯಪಡಿಸಿದನು. ಆಗ ತಾನು ಆತನಿಗೆ ನನ್ನ ಸಂಸಾರದ ವಿಚಾರ ಮಾತನಾಡಬೇಡ ಎಂದು ಹೇಳುತ್ತಿದ್ದರೂ ಸಹ ಆತನು ಕೈಗಳಿಂದ ತನ್ನ ಮೈ ಮೇಲೆ ಹೊಡೆದು ನಿನ್ನನ್ನು ಸಾಯಿಸದೆ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆಯನ್ನು ಹಾಕಿದನು. ಆದ್ದರಿಂದ ಮಂಜು @ ಮಂಜುನಾಥ ಬಿನ್ ಲೇಟ್ ಮುನಿಯಪ್ಪ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.311/2021 ಕಲಂ. 143,147,148, 323, 324, 504, 506, 448, 427,149 ಐ.ಪಿ.ಸಿ :-

     ದಿನಾಂಕ: 16/07/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಮಂಜು @ ಮಂಜುನಾಥ ಬಿನ್ ಲೇಟ್ ಮುನಿಯಪ್ಪ, 38 ವರ್ಷ, ಕೂಲಿಕೆಲಸ, ಬೋವಿ ಜನಾಂಗ, ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಬೆಳಿಗ್ಗೆ 10.30 ಗಂಟೆಗೆ ಠಾಣೆಗೆ ವಾಪಸ್ಸಾಗಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ: 15/07/2021 ರಂದು ತಾನು ಮತ್ತು ತಮ್ಮ ಗ್ರಾಮದ ದೇವಪ್ಪ ಮತ್ತು ಆಂಜಪ್ಪ ಹಾಗೂ ಇತರರು ಕೂಲಿಕೆಲಸಕ್ಕೆಂದು ನಂದಗುಡಿಗೆ ಹೋಗಿ ರಾತ್ರಿ ವಾಪಸ್ ಬಂದೆವು. ರಾತ್ರಿ ಚಿಕನ್ ತಂದಿದ್ದು ಅದನ್ನು ದೇವಪ್ಪ ರವರ ಮನೆಯಲ್ಲಿ ತಾನು ಮತ್ತು ಆಂಜಪ್ಪ ಮಾಡಿಕೊಂಡು ತಿಂದೆವು. ಊಟ ಮಾಡಿದ ಮೇಲೆ ದೇವಪ್ಪ ರವರ ಮನೆಯಿಂದ ಹೊರಗಡೆ ಬಂದಾಗ ಆಂಜಪ್ಪ ರವರು ತನ್ನನ್ನು ಕುರಿತು ಏನೋ ನನ್ನ ಮಗನೇ ಹಣ ಕೊಡು, ಬೀಡಿ ತೆಗೆದುಕೊಳ್ಳಬೇಕು ಎಂದು ಕೇಳಿದ್ದು, ತಾನು ಆತನನ್ನು ಕುರಿತು ನನಗೆ ಏನೋ ಅಂತ ಕರೀತೀಯಾ ಎಂದು ಅವನನ್ನು ಪಕ್ಕಕ್ಕೆ ತಳ್ಳಿ ಮನೆಗೆ ಹೊರಟು ಹೋದೆನು. ನಂತರ ರಾತ್ರಿ 8.40 ಗಂಟೆಗೆ ಆಂಜಪ್ಪ ಬಿನ್ ಲೇಟ್ ಚಿಕ್ಕ ತಿಮ್ಮಣ್ಣ, ಮತ್ತು ಅವರ ಕಡೆಯವರಾದ ನಾರಾಯಣಸ್ವಾಮಿ, ಮುನಿವೆಂಕಟರಾಮ, ನಾರಾಯಣಸ್ವಾಮಿ ರವರ ಮಗ ಹರೀಶ್ ಮತ್ತು ಆತನ ತಮ್ಮ (ಹೆಸರು ಗೊತ್ತಿಲ್ಲ) ರವರು ಗುಂಪು ಕಟ್ಟಿಕೊಂಡು ಮನೆಯ ಬಳಿ ಬಂದು ಹೊರಗಡೆ ಬಾರೋ ಲೋಫರ್ ನನ್ನ ಮಗನೇ ಎಂದು ಅವಾಚ್ಯಶಬ್ದಗಳಿಂದ ಬೈಯ್ಯುತ್ತಾ ಗಲಾಟೆ ತೆಗೆದು ಮೇಲ್ಕಂಡ ಎಲ್ಲರೂ ತಾನು ಹೊರಗಡೆ ಬಂದ ತಕ್ಷಣ ಕೈಗಳಿಂದ ಮೈ ಮೇಲೆ ಗುದ್ದಿದರು. ಕಾಲುಗಳಿಂದ ಒದ್ದರು. ಆ ಪೈಕಿ ನಾರಾಯಣಸ್ವಾಮಿ ರವರ ಮಗನಾದ ಹರೀಶ್ ನ ತಮ್ಮ ಕೋಲಿನಿಂದ ತನ್ನ ಎಡಗಣ್ಣಿನ ಬಳಿ ಹೊಡೆದು ರಕ್ತ ಗಾಯಪಡಿಸಿದನು. ಮೇಲ್ಕಂಡವರೆಲ್ಲರೂ ನಿನ್ನನು ಈ ಸಲ ಬಿಟ್ಟಿದ್ದೇವೆ ನಮ್ಮ ತಂಟೆಗೆ ಬಂದರೆ ಪ್ರಾಣ ತೆಗೆಯದೆ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿದರು. ಹರೀಶ ರವರು ತಮ್ಮ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ಬಾಗಿಲನ್ನು ಹಾಗೂ ಟಿ.ವಿ ಶೋಕೇಸ್ ಅನ್ನು ಹೊಡೆದು ನಷ್ಠ ಪಡಿಸಿರುತ್ತಾನೆ. ಆದ್ದರಿಂದ ಮೇಲ್ಕಂಡವರ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

7. ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.88/2021 ಕಲಂ. 120B,420,417 ಐ.ಪಿ.ಸಿ :-

     ದಿನಾಂಕ:15/07/2021 ರಂದು ಮಧ್ಯಾಹ್ನ 15-00 ಗಂಟೆಗೆ ನ್ಯಾಯಾಲಯ ಕರ್ತವ್ಯದ ಸಿಬ್ಬಂದಿಯಾದ ಸಿ.ಪಿ.ಸಿ 490 ಸೋಮಶೇಖರ ರವರು ಘನ ನ್ಯಾಯಾಲಯದಿಂದ ಪಡೆದುಕೊಂಡು ಬಂದು ಹಾಜರು ಪಡಿಸಿದ ಪಿ.ಸಿ.ಆರ್ ನಂಬರ್:15/2020 ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ ಶ್ರೀರಾಮಪ್ಪ ಬಿನ್ ಗಂಗುಲಪ್ಪ, ವಾಸ: ತಲಕಾಯಲ ಬೆಟ್ಟ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರಿಗೆ ಮುಚ್ಚಟಲ ದಿನ್ನೆ ಸರ್ವೆ ನಂಬರ್: 35/ಪಿ24 ರಲ್ಲಿ 1 ಎಕರೆ 14 ಗುಂಟೆ ಜಮೀನು ಇದ್ದು ಸದರಿ ಜಮೀನನ್ನು  ತಲಕಾಯಲಬೆಟ್ಟ ಗ್ರಾಮದ  ಗಿರೀಶ್ ಬಿನ್ ರಾಮಕೃಷ್ಣಪ್ಪ, ಮತ್ತು ನಾಗಮಣಿ ಕೊಂ ರಾಮಕೃಷ್ಣಪ್ಪ ರವರುಗಳು ಅಡಮಾನ ಇಟ್ಟಿಕೊಳ್ಳಲು ವರ್ಷಕ್ಕೆ 15 ಸಾವಿರ ರೂ ನಂತೆ  10 ವರ್ಷಕ್ಕೆ 1,50,000 ರೂಗಳೆಂದು  ತೀರ್ಮಾನ ಮಾಡಿ  ಪಿರ್ಯಾದಿಗೆ  ಒಂದು ಲಕ್ಷ ರೂಗಳನ್ನು ನೀಡಿ  50 ಸಾವಿರ ರೂಗಳನ್ನು ಬಾಕಿ ಇಟ್ಟಿಕೊಂಡು ಗುತ್ತಿಗೆ ಪತ್ರವನ್ನು ತಯಾರು ಮಾಡುತ್ತೇವೆಂದು ಅನಕ್ಷರಸ್ಥನಾದ ದೂರುದಾರರನ್ನು ಶಿಡ್ಲಘಟ್ಟ ನೊಂದಣಿ ಕಛೇರಿಗೆ ಕರೆದುಕೊಂಡು ಹೋಗಿ ದೂರುದಾರ ಶ್ರೀರಾಮಪ್ಪ ರವರು  ವಯಸ್ಸಾದ ವ್ಯೆಕ್ತಿ ಹಾಗೂ ಅನಕ್ಷರಸ್ಥರಾದ  ಕಾರಣ ಪಿರ್ಯಾದಿಯ  ಆಸ್ತಿಯನ್ನು ದೋಚಲು  ಒಳಸಂಚು ಮಾಡಿ ವಂಚನೆ ಮಾಡುವ  ಉದ್ದೇಶದಿಂದ ಅಡಮಾನ ಪತ್ರಕ್ಕೆ ಪಿರ್ಯಾದಿಯಿಂದ ಸಹಿಯನ್ನು ಆರೋಪಿಗಳಾದ ಗಿರೀಶ್ ಬಿನ್ ರಾಮಕೃಷ್ಣಪ್ಪ ಮತ್ತು ನಾಗಮಣಿ ಕೊಂ ರಾಮಕೃಷ್ಣಪ್ಪ ರವರುಗಳು  ಪಡೆದು ಕೊಂಡು ಪಿರ್ಯಾದಿದಾರರ ಜಮೀನಿನ ಮೇಲೆ ದಿಬ್ಬೂರಹಳ್ಳಿ ಕೆನರಾ ಬ್ಯಾಂಕ್ ಬ್ರಾಂಚ್ ನಲ್ಲಿ 28,50,000 ಸಾವಿರ ರೂ ಬ್ಯಾಂಕ್ ಸಾಲವನ್ನು  ಪಡೆದು ಪಿರ್ಯಾದಿದಾರರ ಜಮೀನಿನಲ್ಲಿ ಕೋಳಿ ಫಾರಂನ್ನು ನಿರ್ಮಾಣ ಮಾಡಲು ಪ್ರಾರಂಭ ಮಾಡಿರುತ್ತಾರೆ. ಪಿರ್ಯಾದಿ ಶ್ರೀರಾಮಪ್ಪರವರಿಗೆ  ವಂಚಿಸುವ ಉದ್ದೇಶದಿಂದ ಆರೋಪಿಗಳಾದ ಗಿರೀಶ್ ಬಿನ್ ರಾಮಕೃಷ್ಣಪ್ಪ, ಮತ್ತು ನಾಗಮಣಿ ಕೊಂ ರಾಮಕೃಷ್ಣಪ್ಪ ರವರುಗಳು ಒಳಸಂಚು ರೂಪಿಸಿ ಪಿರ್ಯಾದಿ ಜಮೀನಿನ ಮೇಲೆ  ಬ್ಯಾಂಕ್  ಸಾಲ ಮಾಡಿ ಮೋಸ  ಮಾಡಿರುವವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಪಿರ್ಯಾದಿ ಶ್ರೀರಾಮಪ್ಪ ರವರು ಘನ ನ್ಯಾಯಾಲಯದಲ್ಲಿ ನೀಡಿದ ಪಿ.ಸಿ.ಆರ್ ನಂ:15/2020 ದೂರನ್ನು ಪಡೆದು  ಠಾಣಾ ಮೊ.ಸಂಖ್ಯೆ:88/2021 ಕಲಂ:417,420,120(ಬಿ) ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

8. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.66/2021 ಕಲಂ. 34,504,307,323,324 ಐ.ಪಿ.ಸಿ :-

     ದಿನಾಂಕ:15/07/2021 ರಂದು ರಾತ್ರಿ 10-30 ಗಂಟೆಗೆ ಪಿರ್ಯಾದುದಾರರಾದ ಶ್ರೀಮತಿ ಸುಜಾತ ಕೋಂ ಸುಧಾಕರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ, ನಮ್ಮ ಗ್ರಾಮದ ವಾಸಿ ನರಸಿಂಹಪ್ಪ ಬಿನ್ ನಂಜಪ್ಪ ರವರಿಗೆ ಇಬ್ಬರು ಗಂಡು ಮಕ್ಕಳಿದ್ದು 1 ನೇಯವನು ಸುಧಾಕರ 2 ನೇಯವನು ನಾಗೇಶ ಎಂಬುವವರಿದ್ದು ನನ್ನನ್ನು ನರಸಿಂಹಪ್ಪನ 1 ನೇ ಮಗ ಸುಧಾಕರನಿಗೆ ಕೊಟ್ಟು ವಿವಾಹ ಮಾಡಿರುತ್ತಾರೆ, ನನಗೆ ಇಬ್ಬರು ಮಕ್ಕಳಿದ್ದು ಒಂದು ಹೆಣ್ಣು ಒಂದು ಗಂಡು ಮಗು ಇರುತ್ತೆ, ನಮ್ಮ ಮೈದನಿಗೆ ನಾಗಮಣಿ ಎಂಬುವವಳೊಂದಿಗೆ ವಿವಾಹವಾಗಿರುತ್ತೆ, ಹೀಗಿರುವಾಗ ನಮ್ಮ ಮಾವ ನಮ್ಮ ಗಂಡ ಮತ್ತು ಮೈದುನ ನಾಗೇಶ ಬೇರೆ ಹೋದಾಗ ನಮ್ಮ ಮಾವ ಕಟ್ಟಿಸಿದ ಮನೆಯಲ್ಲಿ ನಮಗೆ ವಾಸ ಮಾಡಲು ಒಂದು ರೂಂ ಮಾತ್ರ ಕೊಟ್ಟಿದ್ದು, ಉಳಿದದ್ದನ್ನೇಲ್ಲಾ ನನ್ನ ಮೈದನಾದ ನಾಗೇಶನಿಗೆ ಕೊಟ್ಟಿದ್ದ, ನಾನು ನನ್ನ ಗಂಡ ಇಬ್ಬರು ಮಕ್ಕಳು ರೂಂನಲ್ಲಿ ವಾಸ ಮಾಡುವುದು ತುಂಬಾ ಕಷ್ಟವಾಗಿದ್ದು ಮನೆಯ ಬಾಗದ ವಿಚಾರದಲ್ಲಿ ಆಗಾಗ ನನ್ನ ಗಂಡ ನಮ್ಮ ಮಾವನಿಗೆ ಮನೆ ಸಾಕಾಗುವುದಿಲ್ಲ ವಾಸ ಮಾಡಲು ಮನೆಯಲ್ಲಿ ಇನ್ನು ಸ್ವಲ್ಪ ಜಾಗ ಕೊಡು ಎಂದು ಕೇಳಿದಾಗಲೆಲ್ಲಾ ನಮ್ಮ ಮಾವ ನರಸಿಂಹಪ್ಪ ನನ್ನ ಗಂಡನ ಮೇಲೆ ಗಲಾಟೆ ಮಾಡುತ್ತಿದ್ದನು ನಾನು ನನ್ನ ಗಂಡ ನಮ್ಮ ವಾಸ ಮಾಡುವ ಮನೆಯ ಪಕ್ಕದಲ್ಲಿ ಸ್ವಲ್ಪ ಜಾಗವಿದ್ದು ನಾನು ನನ್ನ ಗಂಡ ಸಾಲ ಮಾಡಿ ಆ ಖಾಲಿ ಜಾಗದಲ್ಲಿ ಒಂದು ಮನೆಯನ್ನು ಹೊಸದಾಗಿ ಕಟ್ಟಿಕೊಂಡಿದ್ದೆವು, ನನ್ನ ಗಂಡ ದಿನಾಂಕ:14/07/2021 ರಂದು ರಾತ್ರಿ ಸುಮಾರು 08-00 ಗಂಟೆ ಸಮಯದಲ್ಲಿ ನನ್ನ ಗಂಡ ಮನೆಯ ಮುಂದೆ ಕುಳಿತು ನಮಗೆ ಯಾರು ಸಹಾಯ ಮಾಡುವುದಿಲ್ಲ ಅವರ ಪಾಡಿಗೆ ಅವರು ಮನೆಯಲ್ಲಿ ಹೆಚ್ಚಿನ ಬಾಗ ತೆಗೆದುಕೊಂಡು ಆರಾಮಾಗಿದ್ದಾರೆ ಈಗ ನಾನು ಸಾಲಗಾರನಾಗಿದ್ದೇನೆ ಸಾಲಗಾರರು ದಿನಾಲು ಬಂದು ನನ್ನನ್ನು ಸಾಲ ಹಿಂತಿರುಗಿಸುವಂತೆ ಕೇಳುತ್ತಿದ್ದಾರೆ ಎಂದು ತನ್ನ ಪಾಡಿಗೆ ತಾನು ಮಾತನಾಡಿಕೊಳ್ಳುತ್ತಿದ್ದಾಗ, ನನ್ನ ಮೈದನಾದ ನಾಗೇಶನ ಹೆಂಡತಿ ನಾಗಮಣಿ ಮತ್ತು ನಮ್ಮ ಅತ್ತೆ ವೆಂಕಟರವಣಮ್ಮ ರವರು ಏಕಾ ಏಕಿ ಬಂದು ನನ್ನ ಗಂಡನ ಮೇಲೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ನನ್ನ ನಾದಿನಿ ನನ್ನ ಗಂಡನಿಗೆ ಗಲ್ಲಪಟ್ಟಿ ಹಿಡಿದು ಎಳೆದಾಡುತ್ತಿದ್ದಾಗ ಅಲ್ಲಿಯೇ ಇದ್ದ ನಾನು ಏಕೆ ನನ್ನ ಗಂಡನ ಮೇಲೆ ಜಗಳ ಮಾಡುತ್ತಿದ್ದೀಯಾ ಎಂದು ಕೇಳಿದಾಗ ನೀನು ಬಂದಿದ್ದೀಯಾ ಎಂದು ನಮ್ಮ ಅತ್ತೆ ಮತ್ತು ನನ್ನ ನಾದಿನಿ ನನ್ನ ಜುಟ್ಟು ಹಿಡಿದುಕೊಂಡು ಅವರ ಮನೆಯೊಳಕ್ಕೆ ಎಳೆದುಕೊಂಡು ಹೋಗಿ ಇಬ್ಬರೂ ಸೇರಿ ನನ್ನನ್ನು ಹೊಡೆಯುತ್ತಿದ್ದಾಗ ನನ್ನ ಗಂಡ ಸುದಾಕರ ಜಗಳ ಬಿಡಿಸುತ್ತಿದ್ದಾಗ ನಮ್ಮ ಮಾವ ನರಸಿಂಹಪ್ಪ ಮನೆಯಲ್ಲಿದ್ದ ತರಕಾರಿ ಕತ್ತರಿಸುವ ಚಾಕುವಿನಿಂದ ನನ್ನ ಗಂಡನನ್ನು ಸಾಯಿಸುವ ಉದ್ದೇಶದಿಂದ ಎಡಬಾಗದ ಎದೆಗೆ  ಬಲ ಬಾಗದ ಕತ್ತಿಗೆ ಮತ್ತು ಬೆನ್ನಿನ ಮೇಲೆ ಚಾಕುವಿನಿಂದ ತಿವಿದು ರಕ್ತ ಗಾಯಪಡಿಸಿದ್ದು ನಾನು ಜೋರಾಗಿ ಚೀರಿಕೊಂಡಾಗ ನಮ್ಮ ಗ್ರಾಮದ ಮಧು ಬಿನ್ ಶ್ರೀನಿವಾಸ ಮತ್ತು ನಜೀರ್ ಬಿನ್ ಖಾಸೀಂಸಾಬ್ ರವರು ಬಂದು ಜಗಳವನ್ನು ಬಿಡಿಸಿ ಯಾವುದೋ ಒಂದು ಕಾರಿನಲ್ಲಿ ನಾನು ಮತ್ತು ಮಧು ಮತ್ತು ನಜೀರ್ ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯಾಧಿಕಾರಿಗಳು ಪ್ರಥಮ ಚಿಕಿತ್ಸೆ ನೀಡಿ ಚಿಕ್ಕಬಳ್ಳಾಪುರ ಆಸ್ಪತ್ರೆಗೆ ಹೋಗಲು ತಿಳಿಸಿರುತ್ತಾರೆ ನಾವು 108 ಆಂಬುಲೆನ್ಸಿನಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಕೊಡಿಸಿದ್ದು ಅಲ್ಲಿನ ವೈದ್ಯಾಧಿಕಾರಿಗಳು ಬೆಂಗಳೂರಿಗೆ ಹೋಗಲು ತಿಳಿಸಿದ್ದು ನಾವು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳ ರೋಗಿಯಾಗಿ ಚಿಕಿತ್ಸೆಗೆ ದಾಖಲು ಮಾಡಿರುತ್ತೇವೆ, ನನ್ನ ಗಂಡನ ಯೋಗ ಕ್ಷೇಮ ನೋಡಿಕೊಂಡು ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ನನ್ನ ಗಂಡನನ್ನು ಸಾಯಿಸಲು ಪ್ರಯತ್ನಿಸಿದ ನಮ್ಮ ಮಾವ ನರಸಿಂಹಪ್ಪ ನಮ್ಮ ನಾದಿನಿ ನಾಗಮಣಿ ನಮ್ಮ ಅತ್ತೆ ವೆಂಕಟರವಣಮ್ಮನ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ದೂರು.

ಇತ್ತೀಚಿನ ನವೀಕರಣ​ : 16-07-2021 06:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080