Feedback / Suggestions

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.157/2021 ಕಲಂ. 15(A),32(3) ಕೆ.ಇ ಆಕ್ಟ್ :-

     ದಿನಾಂಕ: 15/06/2021 ರಂದು ಸಂಜೆ 4-15 ಗಂಟೆಗೆ ಶ್ರೀ ನಾರಾಯಣಸ್ವಾಮಿ ಎಎಸ್ಐ ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು,ಆರೋಪಿ, ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ,  ದಿನಾಂಕ; 15-06-2021 ರಂದು ಮದ್ಯಾಹ್ನ 2-00 ಗಂಟೆ ಸಮಯದಲ್ಲಿ ಕೋವಿಡ್-19 ಇರುವುದರಿಂದ ಬಾಗೇಪಲ್ಲಿ ಪುರದಲ್ಲಿ ಗಸ್ತಿನಲ್ಲಿ ಇದ್ದಾಗ ಯಾರೋ ಅಸಾಮಿಯು ಬಾಗೇಪಲ್ಲಿ ತಾಲ್ಲೂಕು ಮಿಟ್ಟೇಮರಿ ಹೋಬಳಿ, ಕಾನಗಮಾಕಲಪಲ್ಲಿ ಗ್ರಾಮದ ಬಳಿ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಪಿಸಿ-19 ಮಣಿಕಂಠರವರೊಂದಿಗೆ ದ್ವಿಚಕ್ರ ವಾಹನದಲ್ಲಿ ಹೊರಟು, ಕಾನಗಮಾಕಲಪಲ್ಲಿ ಗ್ರಾಮದ ಕ್ರಾಸ್ ಬಳಿ ಇದ್ದ ಪಂಚರನ್ನು ಕರೆದು ಮೇಲ್ಕಂಡ ದಾಳಿ ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಮದ್ಯಾಹ್ನ 2-30 ಗಂಟೆಗೆ ಕಾನಗಮಾಕಲಪಲ್ಲಿ ಗ್ರಾಮದ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದದಂತೆ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಮನೆಯ ಮುಂಭಾಗದಲ್ಲಿದ್ದವನು ಓಡಿ ಹೋಗಲು ಪ್ರಯತ್ನಸುತ್ತಿದ್ದವನ್ನು ನಾವು ಮತ್ತು ಪಂಚರು ಸುತ್ತುವರೆದು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ಅನಿಲ್ ಕುಮಾರ್ ಬಿನ್ ಲೇಟ್ ಹನುಮಂತಪ್ಪ, 25 ವರ್ಷ, ಕುರುಬ ಜನಾಂಗ, ಕೂಲಿ, ವಾಸ: ಕಾನಗಮಾಕಲಪಲ್ಲಿ ಗ್ರಾಮ, ಮಿಟ್ಟೇಮರಿ ಹೋಬಳಿ, ಬಾಗೇಫಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 1) 90 ML ನ HAYWARDS CHEERS WHISKY  ಯ 12 ಮದ್ಯದ ಟೆಟ್ರಾ ಪಾಕೇಟ್ ಗಳು  ಗಳಿದ್ದು,  2) 90 ML ನ HAYWARDS CHEERS WHISKY ಯ 02 ಟೆಟ್ರಾ ಖಾಲಿ ಪಾಕೇಟ್ ಗಳು, 3) ಮದ್ಯ ಕುಡಿದಿರುವ ಖಾಲಿ 04 ಪ್ಲಾಸ್ಟಿಕ್ ಗ್ಲಾಸ್ ಗಳು ಇರುತ್ತವೆ.  ಇವುಗಳು  ಒಟ್ಟು 1 ಲೀಟರ್ 80 ಎಂ.ಎಲ್ ಮದ್ಯವಿದ್ದು, ಒಟ್ಟು ಬೆಲೆ – 421/-ರೂ ಗಳಾಗಿರುತ್ತೆ. ಸದರಿ ಆಸಾಮಿಯನ್ನು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ನಿಮ್ಮ ಬಳಿ ಪರವಾನಗಿ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಗೆ ಇಲ್ಲವೆಂದು ತಿಳಿಸಿದ್ದು, ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆ  ಮೂಲಕ ಅಮಾನತ್ತು ಪಡಿಸಿಕೊಂಡು ಅಸಲು ದಾಳಿ ಪಂಚನಾಮೆ, ಮಾಲು ಮತ್ತು ಆರೋಪಿಯೊಂದಿಗೆ ಮದ್ಯಾಹ್ನ 4-15 ಗಂಟೆ ಠಾಣೆಗೆ ಹಾಜರಾಗಿ,  ನಿಮ್ಮ ವಶಕ್ಕೆ ನೀಡುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.158/2021 ಕಲಂ. 143,323,324,448,504,506,149 ಐ.ಪಿ.ಸಿ:-

     ದಿನಾಂಕ – 16/06/2021 ರಂದು ASI ರಾಮಚಂದ್ರ ರವರು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆ ಭೇಟಿ ನೀಡಿ ಗಾಯಾಳು ಹೆಚ್ ಇಂತಿಯಾಜ್  ಬಿನ್ ಹೈದರವಲಿ, 30ವರ್ಷ, ಆಟೋ ಕನ್ಸಲಟೆಂಟ್ ಕೆಲಸ , ಕೊತ್ತಕೋಟೆ ಗ್ರಾಮ , ಪರಗೋಡು ಪಂಚಾಯ್ತಿ , ಬಾಗೇಪಲ್ಲಿ ತಾಲ್ಲೂಕು ಹೇಳಿಕೆಯನ್ನು ಪಡೆದುಕೂಂಡು , ಮದ್ಯಾಹ್ನ 12-30 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಹಾಜರುಪಡಿಸಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ. ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಮ್ಮ ತಂದೆ ಹೈದರವಲ್ಲಿ ರವರು ಒಂದು ವರ್ಷದ ಹಿಂದೆ ಬಾಗೇಪಲ್ಲಿಯ 15ನೇ ವಾರ್ಡನಲ್ಲಿ ವಾಸವಾಗಿರುವ ಸಪೂರಾಬೀ ರವರಿಂದ 26*42 ಅಡಿಗಳ ಎರಡು ಮನೆಗಳಲ್ಲಿ ಖರೀದಿಸಿ ನಮ್ಮ ಅಕ್ಕನ ಹೆಸರಿಗೆ ಮಾಡಿರುತ್ತಾರೆ. ಸದರಿ ಮನೆಗಳಲ್ಲಿ ಒಂದು ಮನೆಯನ್ನು ಕಾರಕೂರು  ಗ್ರಾಮದ ಬಾಬಾಜಾನ ರವರಿಗೆ 2 ವರ್ಷಗಳು ಲೀಜಗೆ ಸಪೋರಾಬೀ ರವರು ನೀಡಿದ್ದರು. ಬಾಬಾಜಾನ ರವರು ಮನೆಯಲ್ಲಿ ವಾಸವಾಗಿದ್ದರು. 2 ಮನೆಗಳಲ್ಲಿ ಒಂದು ಮನೆಯನ್ನು ತಳ್ಳಿಹಾಕಿ ಹೂಸ ಮನೆಯನ್ನು ನಾವು ಕಟ್ಟಬೇಕಾಗಿದ್ದರಿಂದ ಬಾಬಾಜಾನ್ ರವರಿಗೆ ಮನೆಯನ್ನು ಖಾಲಿಮಾಡುವಂತೆ ನಾವು ಹೇಳಿದ್ದೆವು. ಬಾಬಾಜಾನ್ ರವರು ನಾನು ಮನೆಯನ್ನು ಖಾಲಿ ಮಾಡುವುದಿಲ್ಲ ನಿನ್ನ ಕೈಯಲ್ಲಿ ಏನಾಗುತ್ತೂ ಮಾಡಿಕೋ ಎಂದು ನಮಗೆ ಧಮಕಿ ಹಾಕಿದ್ದನು. ನಾವು ನಿನ್ನ ಮೇಲೆ ಪೊಲೀಸರಿಗೆ ದೂರು ಕೊಡುತ್ತೇವೆಂದು ಹೇಳಿದ್ದೇವು. ನಂತರ ಬಾಬಾಜಾನ್ ಮನೆ ಖಾಲಿ ಮಾಡಿರುತ್ತಾನೆ. ನಾನು ಮತ್ತು ನಮ್ಮ ತಂದೆಯು ಹೊಸದಾಗಿ  ಮನೆ ಕಟ್ಟಲು ಇಟ್ಟಿಗೆ, ಸಿಮೆಂಟ್, ಕಂಬಿ ತರಲು  180000/- ರೂ ಗಳನ್ನು ಗಾರೆ ಮೇಸ್ತ್ರಿಗೆ ನೀಡಲು ದಿನಾಂಕ- 15/06/2021 ರಂದು ಸಂಜೆ 4-00 ಗಂಟೆಯಲ್ಲಿ ಬಾಗೇಪಲ್ಲಿಯ 15ನೇ  ವಾರ್ಡನಲ್ಲಿರುವ ನಮ್ಮ ಅಕ್ಕನ ಮನೆಗೆ ಹೋಗಿ ಅಲ್ಲಿ ಇದ್ದಾಗ ಬಾಬಾಜಾನ್ ರವರ ಕಡೆಯವರಾದ 15ನೇ ವಾರ್ಡಿನಲ್ಲಿ  ವಾಸವಾಗಿರುವ 1) ಬಾಬಾಜಾನ್ ಬಿನ್ ಮಟ್ಕಾ ಅನ್ವರ್ 2) ಜಬೀವುಲ್ಲಾ ಬಿನ್ ಮಟ್ಕಾ ಅನ್ವರ್ 3) ರಫೀಕ್ ಬಿನ್ ಆಲಿ 4) ಬಾಬಾಜಾನ್ ಬಿನ್ ಆಲಿ ಹಾಗೂ ಬಿಳ್ಳೂರು ಗ್ರಾಮದ ನಾಲ್ಕು ಜನರು ಒಟ್ಟು 8 ಜನರು. ಏಕಾಏಕಿ ನಮ್ಮ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಹೇ ನನ್ನ ಮಕ್ಕಳೇ ನಿಮ್ಮಮ್ಮನ ಕೇಯಾ ಹೇ ಲೋಪರ ನನ್ನ ಮಕ್ಕಳಾ ಬಾಬಾಜಾನ್ ರವರಿಗೆ ಮನೆ ಖಾಲಿ ಮಾಡುವಂತೆ ಹೇಳಿದ್ದೀಯಾ ಎಂದು ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಿಮ್ಮನ್ನು ಸಾಯಿಸದೇ ಬಿಡುವುದಿಲ್ಲ ಎಂದು ಹೇಳಿ ನಂತರ ನನ್ನನ್ನು ಎಲ್ಲರೂ ಹಿಡಿದುಕೊಂಡು ಕೆಳಕ್ಕೆ ತಳ್ಳಿ ಕೈಕಾಲುಗಳಿಂದ ಒದ್ದು ಮೈಕೈನೋವುಂಟು ಮಾಡಿದರು. ನಂತರ ಜಬಿ ರವರು ದೊಣ್ಣೆಯಿಂದ ನನ್ನ ಎದೆಗೆ ಹೊಡೆದನು. ಬಾಬಾಜಾನ ಬಿನ ಮಟ್ಕಾ ಅನ್ವರ್ ರವರು ಒಂದು ದೊಣ್ಣೆಯಿಂದ ನನ್ನ ಮೂತ್ತಕೋಶಕ್ಕೆ ಹೊಡೆದು ಮೂಗೇಟು ಮಾಡಿದನು. ಬಾಬಾಜಾನ್ ಬಿನ್ ವಲಿ ರವರು ಇಟ್ಟಿಗೆ ಪೀಸ್ ನಿಂದ ನನ್ನ ತಲೆಗೆ ಹೊಡೆದು ಮೂಗೇಟು ಮಾಡಿದನು. ರಫೀಕ್ ರವರು ತನ್ನ ಕೈಗಳಿಂದ ಹೊಡೆದನು. ನಂತರ ಬಿಳ್ಳೂರಿನ 4 ಜನರು ನನ್ನನ್ನು ಮತ್ತು ನಮ್ಮ ತಂದೆಯನ್ನು ಕೈಗಳಿಂದ ಮತ್ತು  ಕಾಲುಗಳಿಂದ ಒದ್ದು ಮೈಕೈ ನೋವುಂಟು ಮಾಡಿ ನಂತರ ಅಲ್ಲಿಂದ ಹೊರಟು ಹೋದರು. ನನ್ನ ಬಳಿ ಜೇಬಿನಲ್ಲಿಟ್ಟುಕೊಂಡಿದ್ದ 180000/- ರೂ ಗಳ ಹಣ ನನ್ನ ಬಳಿ ಇಲ್ಲದೇ ಇದ್ದು ಎಲ್ಲಿಯೂ ಕಾಣಿಸಲಿಲ್ಲ. ಸದರಿ ಹಣವನ್ನು ಮೆಲ್ಕಂಡವರು ತೆಗೆದುಕೊಂಡು ಹೋಗಿರಬಹುದೆಂದು ನನಗೆ ಅವರ ಮೇಲೆ ಅನುಮಾನ ಇರುತ್ತದೆ. ಈ ಘಟನೆಯನ್ನು ನೋಡಿದ ಮುಬಾರಕ್ ಮತ್ತು ನನ್ನ ಭಾವ ಮುಸ್ತಾಫ ರವರು ಒಂದು ಕಾರಿನಲ್ಲಿ ನನ್ನನ್ನು ಕರೆದುಕೊಂಡು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದರು. ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತೇನೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿರುತ್ತೇನೆ. ನಾನು ಬಾಬಾಜಾನ್ ರವರಿಗೆ ಲೀಜಗೆ ಕೊಟ್ಟಿರುವ ಮನೆಯನ್ನು ಖಾಲಿ ಮಾಡುವಂತೆ ತಿಳಿಸಿದ್ದರಿಂದ ಬಾಬಾಜಾನ್ ಕಡೆಯವರು ನನ್ನನ್ನು ಹೊಡೆದು ನಾಯಿಸ ಬೇಕೆಂಬ ಉದ್ದೇಶದಿಂದ ನಮ್ಮ ಮನೆಯ ಬಳಿಗೆ ಬಂದು ಮನೆಯೊಳಗೆ ನುಗ್ಗಿ ನನ್ನ ಮೇಲೆ ಗಲಾಟೆ ಮಾಡಿ ಹೊಡೆದು ರಕ್ತಗಾಯಪಡಿಸಿ ನಮ್ಮನ್ನು ಅವಾಚ್ಯ ಶಬ್ದಗಳಿಂದ ಬೈದು ನಮಗೆ ಪ್ರಾಣ ಬೆದರಿಕೆ ಹಾಕಿರುವವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

3. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.137/2021 ಕಲಂ. 302 ಐ.ಪಿ.ಸಿ:-

     ದಿನಾಂಕ -15-06-2021 ರಂದು ಬೆಳಿಗ್ಗೆ 11-00 ಗಂಟೆಗೆ  ಈ ಕೇಸಿನ ಪಿರ್ಯಾದಿದಾರರಾದ ಬಿಎಸ್ ಸುನಿಲ್ ಬಿನ್ ಶ್ರೀನಿವಾಸ ಮೂರ್ತಿ, 30ವರ್ಷ, ಸಾದರ ಗೌಡರು, ಲಕ್ಷೀ ಇಂಡೆನ್ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ವಾಸ: ಜೋಡಿ ಬಿಸಲಹಳ್ಳಿ ಗ್ರಾಮ , ಹೊಸೂರು ಹೋಬಳಿ ಗೌರಿಬಿದನೂರು ತಾಲ್ಲೂಕು, ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತನ್ನ ತಂದೆ ಶ್ರೀನಿವಾಸ ಮೂರ್ತಿ ತಾಯಿ ಭಾಗ್ಯಮ್ಮ ಆಗಿದ್ದು ನಮ್ಮ ತಂದೆ ತಾಯಿಗೆ ಇಬ್ಬರು ಮಕ್ಕಳಿರುತ್ತೇವೆ, ಒಂದನೆ ನನ್ನ ಅಣ್ಣ ರೋಹಿತ್ 32 ವರ್ಷ, ಎರಡನೆ ನಾನಾಗಿರುತ್ತೇನೆ. ನನ್ನ ಅಣ್ಣ ರೋಹಿತ್ ಲಕ್ಷ್ಮೀ ಇಂಡೆನ್ ಗ್ಯಾಸ್ ನಲ್ಲಿ ಪ್ರೊಪರೇಟರ್ ಆಗಿ ಕೆಲಸ ಮಾಡಿಕೊಂಡಿರುತ್ತಾನೆ. ನಮ್ಮತಾಯಿ ಭಾಗ್ಯಮ್ಮರವರು  06 ವರ್ಷಗಳ ಹಿಂದೆ ಮೃತ ಪಟ್ಟಿರುತ್ತಾರೆ. ನಮ್ಮ ಗ್ರಾಮದಲ್ಲಿ ಸರ್ವೆ ನಂ 97 ರಲ್ಲಿ 4ಎಕರೆ 10 ಗಂಟೆ ಜಮೀನಿದ್ದು ಸದರಿ ಜಮೀನಿನಲ್ಲಿ ರೇಷ್ಮೇ ಬೆಳೆಯನ್ನಿಟ್ಟಿರುತ್ತಾರೆ. ನಮ್ಮ ತಂದೆಯವರು ಜಮೀನಿನ ಕೆಲಸವನ್ನು ಮಾಡಿಕೊಂಡಿದ್ದು, ನಮ್ಮ ತಂದೆಯವರು ಜಮೀನಿನಲ್ಲಿರುವ ಕೊಳವೇ ಬಾವಿಯಲ್ಲಿ  ಪ್ರತಿ ದಿನ ರಾತ್ರಿ 10-00ಗಂಟೆಗೆ ನೀರು ಹಾಯಿಸಲು ಹೋಗುತ್ತಿದ್ದರು. ಎಂದಿನಂತೆ ದಿನಾಂಕ-14-06-2021 ರಂದು ರಾತ್ರಿ 10-00ಗಂಟೆಗೆ ನಮ್ಮ ಮನೆಯಿಂದ ಜಮೀನಿನ ಬಳಿಗೆ ರೇಷ್ಮೇಗೆ ನೀರು ಹಾಯಿಸಲು ನಮ್ಮ ತಂದೆ ಹೋಗಿದ್ದು ರಾತ್ರಿ ಮನೆಗೆ ಬಂದಿರಲಿಲ್ಲ, ನಾವುಗಳು ನಮ್ಮ ತಂದೆ ಜಮೀನಿನ ಬಳಿಯೇ ಇರಬಹುದು ಎಂದುಕೊಂಡಿದ್ದೆವು, ಮಾರನೇ ದಿನ ದಿನಾಂಕ-15-06-2021 ರಂದು ಬೆಳಿಗ್ಗೆ ಸುಮಾರು 07-00 ಗಂಟೆಗೆ ನಮ್ಮೂರಿನ ವಾಸಿಯಾದ ಗೋವಿಂದಪ್ಪ ಬಿನ್ ನರಸಪ್ಪ, ಸಾದರ ಗೌಡರು, 65 ವರ್ಷ, ರವರು ನಮ್ಮ ಮನೆಯ ಬಳಿ ಬಂದು ತಾನು ನಿಮ್ಮ ಜಮೀನಿನ ಬಳಿ ಮೇವು ಕುಯ್ಯಲು ಹೋಗಿದ್ದಾಗ ನಿಮ್ಮ ಜಮೀನಿನ ಕೊಳವೇ ಬಾವಿಯ ಬಳಿ ನಿಮ್ಮ ತಂದೆಯು ರಕ್ತದ ಮಡುವಿನಲ್ಲಿ ಬಿದ್ದು ಸತ್ತು ಹೋಗಿರುತ್ತಾನೆ ಎಂದು ತಿಳಿಸಿದ ಕೂಡಲೆ ನಾನು ನಮ್ಮ ಅಣ್ಣ ರೋಹಿತ ನಮ್ಮಜೊತೆ ಕೆಲಸ ಮಾಡುವ ಚರಣ್ ಕುಮಾರ್, ಮಂಜುನಾಥ, ಮತ್ತು ನಮ್ಮೂರಿನ ವಾಸಿಗಳು ನಮ್ಮ ಜಮೀನಿನ ಕೊಳವೇ ಬಾವಿ ಬಳಿ ಬಂದು ನೋಡಿದಾಗ ವಿಚಾರ ನಿಜವಾಗಿರುತ್ತೆ. ಯಾರೋ ದುರಾತ್ಮರು ಯಾವುದೋ ಕಾರಣಕ್ಕಾಗಿ , ಯಾವುದೋ ಆಯುಧದಿಂದ ನಮ್ಮ ತಂದೆಯವರ ತಲೆಯ ಭಾಗಕ್ಕೆ ಹೊಡೆದು ಕೊಲೆ ಮಾಡಿರುತ್ತಾರೆ. ನಮ್ಮ ತಂದೆಯನ್ನು ಕೊಲೆ ಮಾಡಿದ ದುರಾತ್ಮರನ್ನು ಪತ್ತೆ ಮಾಡಿ  ಕಾನೂನು ಕ್ರಮ ಕೈಗೊಳ್ಳಲು  ಕೋರಿ ನೀಡಿದ ದೂರಾಗಿರುತ್ತೆ.

 

4. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.122/2021 ಕಲಂ. 15(A),32(3) ಕೆ.ಇ ಆಕ್ಟ್ :-

     ದಿನಾಂಕ:16/06/2021 ರಂದು ಬೆಳಿಗ್ಗೆ 8-15 ಗಂಟೆ ಸಮಯದಲ್ಲಿ ಠಾಣಾ ನ್ಯಾಯಾಲಯದ ಪಿ,ಸಿ 89 ಮಂಜುನಾಥ ರವರು ಠಾಣಾ ಎನ್,ಸಿ,ಆರ್ 140/2021 ರಲ್ಲಿ ಘನ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲು ಅನುಮತಿಯನ್ನು ಪಡೆದುಕೊಂಡು ಬಂದು ಹಾಜರುಪಡಿಸಿದ ವರದಿಯ ಸಾರಾಂಶವೇನೆಂದರೆ. ದಿ:13.06.2021 ರಂದು ರಾತ್ರಿ 8-15 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ಉಪವಿಭಾಗ ಡಿವೈಎಸ್ಪಿ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್.ಸಿ. 205. ರವರು ಮತ್ತು ಹೆಚ್.ಸಿ. 59, ಶ್ರೀನಿವಾಸ್ ರವರಿಗೆ ಡಿವೈಎಸ್ ಪಿ, ಸಾಹೇಬರು ಗುಡಿಬಂಢೆ ತಾಲ್ಲೂಕಿನ ಕಡೆ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆ ಮತ್ತು ದಾಳಿ ಮಾಡಲು ನೇಮಿಸಿ ಕಳುಹಿಸಿದ್ದು, ಅದರಂತೆ ನಾವು  ಗುಡಿಬಂಡೆ ಪಟ್ಟಣದಲ್ಲಿ  ಸಂಜೆ ಸುಮಾರು 6 ಗಂಟೆಯ ಸಮಯದಲ್ಲಿ ಮುಖ್ಯ ರಸ್ತೆಯ ಪಶು ಆಸ್ಪತ್ರೆಯ ಬಳಿ ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಅಲ್ಲಿಯೇ ಮೆಡಿಕಲ್ ಸ್ಟೋರ್ ಬಳಿ ಇದ್ದ ಪಂಚಾಯ್ತಿದಾರರನ್ನು ಬರಮಾಡಿಕೊಂಡು ರೂರಲ್ ಗುಡಿಬಂಢೆ ವಾಸಿ ರಾಮಕೃಷ್ಣ ಬಿನ್ ಲೇಟ್ ತಿರುಮಲಕೊಂಡಪ್ಪ, 48 ವರ್ಷ, ಬಲಜಿಗರು. ಕೂಲಿ ಕೆಲಸ, ರೂರಲ್ ಗುಡಿಬಂಢೆಯವರ ವಾಸದ ಮನೆಯ ಮುಂಬಾಗ ಈತನ ಬಾಬತ್ತು ಖಾಲಿ ನಿವೇಶನದಲ್ಲಿ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ಬಗ್ಗೆ ದಾಳಿ ಮಾಡಿ, ಆರೋಪಿತನನ್ನು ಮತ್ತು ಸ್ಥಳದಲ್ಲಿದ್ದ 90 ML ನ HYWARDS CHEERS WHISKY    ಕಂಪನಿಯ ಒಟ್ಟು 24 ಮದ್ಯದ ಟೆಟ್ರಾ ಪಾಕೇಟ್ ಗಳನ್ನು, ಎರೆಡು 90 ML ನ HYWARDS CHEERS WHISKY ಕಂಪನಿಯ ಖಾಲಿ ಟೆಟ್ರಾ ಪಾಕೇಟ್ ಗಳು. ಎರೆಡು ಖಾಲಿ ನೀರಿನ ಪ್ಲಾಸ್ಟೀಕ್ ಪಾಕೇಟ್ ಗಳನ್ನು, ಹಾಗೂ 120 ರೂ ನಗದು ಹಣವನ್ನು ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಸದರಿ ಆರೋಪಿ ಮತ್ತು ಮಾಲುಗಳನ್ನು ನಿಮ್ಮ ವಶಕ್ಕೆ ನೀಡಿದ್ದು ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದೆ. ಇದರೊಂದಿಗೆ ಅಸಲು ಮಹಜರ್ ನ್ನು ಲಗತ್ತಿಸಿಕೊಂಡಿರುತ್ತೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

5. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.199/2021 ಕಲಂ. 143,114,323,324,342,504,506,149 ಐ.ಪಿ.ಸಿ & 3(1)(r),3(1)(s) The SC & ST (Prevention of Atrocities) Amendment Act 2015:-

     ದಿನಾಂಕ: 15-06-2021 ರಂದು ಸಂಜೆ 5.00 ಗಂಟೆಯಲ್ಲಿ ಫಿರ್ಯಾದಿದಾರರಾದ ವೀರಾಂಜನೇಯ ಬಿನ್ ಲೇಟ್ ನಾರಾಯಣಪ್ಪ, 48 ವರ್ಷ, ನಾಯಕರು, ವ್ಯಾಪಾರ, ಮುದ್ದಲೋಡು ಗ್ರಾಮ,ಜೀಲಾಕುಂಟೆ ಪೋಸ್ಟ್, ನಗರಗೇರೆ ಹೋಬಳಿ, ಗೌರಿಬಿದನೂರು  ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಮನೆ ಕಟ್ಟುವವರಿಗೆ ಡಸ್ಟ್ ಪೌಡರ್ ಮತ್ತು ಸಣ್ಣ ಜಲ್ಲಿಯನ್ನು ಕ್ರಷರ್ ಗಳಲ್ಲಿ ತೆಗೆದುಕೊಂಡು ಲಾಭಕ್ಕೆ  ಮಾರಾಟ ಮಾಡಿಕೊಂಡಿರುತ್ತೇನೆ. ಈಗ್ಗೆ ಸುಮಾರು 4 ತಿಂಗಳ ಹಿಂದೆ ನಾನು ಹಳೆ ದ್ವಿಚಕ್ರವಾಹನವನ್ನು ತೆಗೆದುಕೊಳ್ಳುವ ಸಲುವಾಗಿ ದೇವನಹಳ್ಳಿ ತಾಲ್ಲೂಕು ವಿಜಯಪುರಕ್ಕೆ ಬಂದಿದ್ದಾಗ ಅಲ್ಲಿ ತನಗೆ ಶಿಡ್ಲಘಟ್ಟ ತಾಲ್ಲೂಕು ಕಾಕಚೊಕ್ಕಂಡಹಳ್ಳಿ ಗ್ರಾಮದ ವಕ್ಕಲಿಗರ ಜಾತಿಗೆ ಸೇರಿದ ನಾಗರಾಜ ಬಿನ್ ಮುನಿನಾಗಪ್ಪ ರವರು ಪರಿಚಯವಾಗಿರುತ್ತಾರೆ ನಾವು ಆಗಾಗ ಪೋನ್ನಲ್ಲಿ ಮಾತನಾಡಿಕೊಳ್ಳುತ್ತಿದ್ದೇವೆ ಈಗಿರುವಲ್ಲಿ ಈಗ್ಗೆ 20 ದಿನಗಳ ಹಿಂದೆ ಕಾಕಚೊಕ್ಕಂಡಹಳ್ಳಿ ಗ್ರಾಮದ ನಾಗರಾಜ ರವರು ತನಗೆ ಪೋನ್ ಮಾಡಿ ತಾನು ಮನೆಕಟ್ಟುತ್ತಿರುವುದಾಗಿ ತನಗೆ ಡಸ್ಟ್ ಪೌಡರ್ ಮತ್ತು ಜಲ್ಲಿ ಬೇಕು ಎಂದು ಹೇಳಿದ್ದು, ಆಗ ತಾನು ಕಾಕಚೊಕ್ಕಂಡಹಳ್ಳಿ ಗ್ರಾಮಕ್ಕೆ ಬಂದು ಮುಂಗಡವಾಗಿ 70,000/- ರೂಗಳನ್ನು ನಾಗರಾಜ ರವರ ಬಳಿ ತೆಗೆದುಕೊಂಡು ಹೋಗಿರುತ್ತೇನೆ. ನಂತರ ನಾಗರಾಜ ರವರು ತನಗೆ ಆಗಾಗ ಪೋನ್ ಮಾಡಿ ಡಸ್ಟ್ ಪೌಡರ್ ಮತ್ತು ಜಲ್ಲಿ ಹೊಡೆಯುವಂತೆ ಕೇಳಿದ್ದು ಆಗ ತನಗೆ ಅರೋಗ್ಯ ಸರಿಯಿಲ್ಲ ತೊಂದರೆಯಾಗಿದೆ ಸ್ವಲ್ಪ ದಿನ ಕಾಲವಕಾಶ ಕೊಡು ಎಂದು ಹೇಳಿರುತ್ತೇನೆ ಆಗ ನಾಗರಾಜ ತನ್ನ ಹಣ ತನಗೆ ವಾಪಸ್ಸು ಕೊಟ್ಟುಬಿಡು ಎಂದು ಕೇಳಿದ್ದು ಆಗ ತಾನು ಕೊಡುತ್ತೇನೆಂದು ಹೇಳಿರುತ್ತೇನೆ ಈಗಿರುವಲ್ಲಿ ದಿನಾಂಕ: 14-06-2021 ರಂದು ಕಾಕಚೊಕ್ಕಂಡಹಳ್ಳಿ ಗ್ರಾಮದ ವಕ್ಕಲಿಗ ಜಾತಿಗೆ ಸೇರಿದ ನಾಗರಾಜ ತನಗೆ ಪೋನ್ ಮಾಡಿ  ತನ್ನ ಬಳಿ ಹಣವನ್ನು ಕೇಳಿದ್ದು ಆಗ ತಾನು ಸ್ವಲ್ಪದಿನ ಕಾಲವಕಾಶ ಕೊಡು ನಿನ್ನ ಹಣ ನಿನಗೆ  ಕೊಟ್ಟುಬಿಡುತ್ತೇನೆಂದು ಹೇಳಿದಾಗ ನಾಗರಾಜ ಸರಿ ನೀನು ಕಾಕಚೊಕ್ಕಂಡಹಳ್ಳಿ ಗ್ರಾಮದ ನಮ್ಮ ಮನೆಗೆ ಬಂದು ಮಾತನಾಡಿ ನಿನಗೆ ಎಷ್ಠು ಕಾಲವಕಾಶ ಬೇಕೋ ಕೇಳಿಕೊಂಡು ಹೋಗು ಎಂದು ಕರೆದಿದ್ದು ಆಗ ತಾನು ಮದ್ಯಾಹ್ನ ಸುಮಾರು 2-20 ಗಂಟೆಯಲ್ಲಿ ಕಾಕಚೊಕ್ಕಂಡಹಳ್ಳಿ ಗ್ರಾಮದ ನಾಗರಾಜ ರವರ ಮನೆಗೆ ಬಂದಿರುತ್ತೇನೆ ಆಗ ಮನೆಯಲ್ಲಿ ನಾಗರಾಜ ಮತ್ತು ಆತನ ಹೆಂಡತಿ ಪದ್ಮಮ್ಮ ರವರು ಇದ್ದರು ಆಗ ನಾಗರಾಜ ಯಾರಿಗೂ ಪೋನ್ ಮಾಡಿದ್ದು ಆಗ ನಾಗರಾಜ ಮನೆಯ ಹತ್ತಿರ ಒಂದು ಕಾರು ಬಂದಿದ್ದು ಅದರಲ್ಲಿ ಮೂರು ಜನರು ಬಂದರು ಅವರ ಹೆಸರುಗಳು ತಿಳಿದುಕೊಳ್ಳಲಾಗಿ ದೇವನಹಳ್ಳಿ ತಾಲ್ಲೂಕು ದಾಸರಹಳ್ಳಿ ಗ್ರಾಮದ ಪ್ರಸನ್ನ ಮತ್ತು ಇತರೆ ಇಬ್ಬರು ಎಂದು ತಿಳಿಯಿತು, ನಂತರ ಕಾಕಚೊಕ್ಕಂಡಹಳ್ಳಿ ಗ್ರಾಮದ ರಾಜಣ್ಣ, ರಾಮಾಚಾರಿ @ ಜಯಕೃಷ್ಣ ರವರುಗಳು ಸಹ ನಾಗರಾಜನ ಮನೆಗೆ ಬಂದರು  ಆಗ ಎಲ್ಲರೂ ಸೇರಿ ತನ್ನ ಬಳಿ ನಾಗರಾಜನಿಗೆ ಕೊಡಬೇಕಾದ ಹಣವನ್ನು ಕೇಳಿದ್ದು ಆಗ ತಾನು ತನಗೆ 5 ದಿನ ಸಮಯ ಕೊಡಿ  ಹಣವನ್ನು ವಾಪಸ್ಸು ಕೊಡುತ್ತೇನೆಂದು ಹೇಳಿದಾಗ ಮೇಲ್ಕಂಡವರು ತನಗೆ ಏ ಸಣ್ಣ ಜಾತಿ ನನ್ನ ಮಗನೇ ಎಂದು ಕೆಟ್ಟ ಕೆಟ್ಟ ಮಾತುಗಳಿಂದ ಬೈದು ಜಾತಿನಿಂದನೇ ಮಾಡಿ ನಂತರ ಎಲ್ಲರೂ ಸೇರಿ ತನ್ನ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿರುತ್ತಾರೆ ಆಗ ತಾನು ಓಡಿ ಹೋಗಲು ಪ್ರಯತ್ನಿಸಿದ್ದು ಆಗ ತನ್ನನ್ನು ಎಲ್ಲರೂ ಸೇರಿ ಹಿಡಿದುಕೊಂಡು ಮನೆಯಲ್ಲಿದ್ದ ಕಬ್ಬಿಣದ  ಚೈನ್ ಅನ್ನು ಎತ್ತಿಕೊಂಡು ಬಂದು ಸದರಿ ಚೈನ್ ನಿಂದ ತನ್ನ ಎಡಕಾಲಿಗೆ ಹಾಕಿ ಕಟ್ಟಿ ಮನೆಯಲ್ಲಿ ಶಿಟ್ ಗಳನ್ನು ಅಳವಡಿಸಲು ಹಾಕಿದ್ದ ಕಬ್ಬಿಣದ ಪೋಲ್ ಗೆ ತನ್ನನ್ನು ಕಟ್ಟಿಹಾಕಿ ಸದರಿ ಚೈನ್ ಗೆ ಬೀಗ ಹಾಕಿ ತನ್ನನ್ನು ಮನೆಯಲ್ಲಿ ಆದಿನ ರಾತ್ರಿಯಲ್ಲಾ ತನಗೆ ಊಟ ನೀರು ಕೊಡದೇ ಅಕ್ರಮವಾಗಿ ಕೂಡಿಹಾಕಿರುತ್ತಾರೆ, ನೀನು ಹಣವನ್ನು ಕೊಡಲಿಲ್ಲವೆಂದರೇ ನಿನ್ನನ್ನು ಇಲ್ಲಿಯೇ ಸಾಯಿಸಿಬಿಡುತ್ತೇವೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ. ನಂತರ ಚನ್ನರಾಯಪಟ್ಟಣದ ಮಂಜುನಾಥ ಮತ್ತು ಮಳಮಾಚನಹಳ್ಳಿ ಗ್ರಾಮದ ಅಶ್ವತ್ಥ ರವರುಗಳು ನಾಗರಾಜ ರವರಿಗೆ ಪೋನ್ ಮಾಡಿ ತನ್ನನ್ನು ಕಟ್ಟಿಹಾಕಿ ಹಣ ಕೊಡುವವರೆಗೂ ಹೊಡೆಯುವಂತೆ ಕುಮ್ಮಕ್ಕು ನೀಡಿರುತ್ತಾರೆ, ನಂತರ ದಿನಾಂಕ:15-06-2021 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ  ಮೇಲ್ಕಂಡವರು ತನ್ನ ಬಳಿ ನಿಮ್ಮ ಮನೆಯವರಿಗೆ ಪೋನ್ ಮಾಡಿ ಹಣ ತರಿಸಿಕೋ ನಿನ್ನನ್ನು ಬಿಟ್ಟುಬಿಡುತ್ತೇವೆಂದು ಹೇಳಿದ್ದು ಆಗ ತಾನು ತನ್ನ ಹೆಂಡತಿ ವೆಂಕಟಲಕ್ಷ್ಮಮ್ಮ ರವರಿಗೆ ವಿಚಾರವನ್ನು ತಿಳೀಸಿದಾಗ ಆಗ ತನ್ನ ಹೆಂಡತಿ, ನನ್ನ ಮಗನಾದ ಆನಂದ, ಅಳಿಯ ನರೇಶ್ ರವರುಗಳು ಕಾಕಚೊಕ್ಕಂಡಹಳ್ಳಿ  ಗ್ರಾಮಕ್ಕೆ ಬಂದು ನನ್ನನ್ನು ಕರೆದುಕೊಂಡು ತಮ್ಮ ಗ್ರಾಮಕ್ಕೆ ಹೋಗಿರುತ್ತಾರೆ ಆಗ ತಾನು ನಮ್ಮ ಗ್ರಾಮಕ್ಕೆ ವಾಪಸ್ಸು ಹೋಗಿ ನಡೆದ ವಿಚಾರವನ್ನು ಮನೆಯವರಿಗೆ ತಿಳಿಸಿ ನಂತರ ಠಾಣೆಗೆ ಬಂದು ದೂರು ನೀಡುತ್ತಿದ್ದು ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

Last Updated: 16-06-2021 06:07 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080