ಅಭಿಪ್ರಾಯ / ಸಲಹೆಗಳು

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 138/2021 ಕಲಂ. 279,337 ಐಪಿಸಿ :-

     ದಿನಾಂಕ 16/05/2021 ರಂದು ಮದ್ಯಾಹ್ನ 12-10 ಗಂಟೆಗೆ ಫಿರ್ಯಾಧಿದಾರರಾದ ಆದಿನಾರಾಯಣರೆಡ್ಡಿ ಬಿನ್ ರಘುನಾಥರೆಡ್ಡಿ 46 ವರ್ಷ, ವಕ್ಕಲಿಗ ಜನಾಂಗ, ವಾಸ ಮಲ್ಲಸಂದ್ರ ಗ್ರಾಮ, ಬಾಗೇಪಲ್ಲಿತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ 16/05/2021 ರಂದು ಬೆಳೀಗ್ಗೆ  8-50 ಗಂಟೆಯಲ್ಲಿ ನನ್ನ ಬಾಬತ್ತು KA-40-M-2565 ನೊಂದಣಿ ಸಂಖ್ಯೆಯ ಸ್ವೀಫ್ಟ್ ಕಾರಿನಲ್ಲಿ ಅದರ ಚಾಲಕ ಮಂಜುನಾಥ ಬಿನ್  ವೆಂಕಟರಾಯಪ್ಪ ಮಲ್ಲಸಂದ್ರ ಗ್ರಾಮ ರವರು ಕಾರಿನಲ್ಲಿ ಮಲ್ಲಸಂದ್ರ ದಿಂದ ಗೂಳೂರಿಗೆ ಹೋಗಿ ಮಾತ್ರೆಗಳನ್ನು ತೆಗೆದುಕೊಂಡು ವಾಪಸ್ ಮಲ್ಲಸಂದ್ರಕ್ಕೆ ಬರುವಾಗ ಸಡ್ಲಪಲ್ಲಿವಾರಪಲ್ಲಿ ಕ್ರಾಸ್ ಬಳಿ ಕಾರನ್ನು ಅತಿವೇಗವಾಗಿ ಚಾಲನೆ ಮಾಡಿದ್ದರ ಪರಿಣಾಮ ಕಾರು ನಿಯಂತ್ರಣ ಸಿಗದೇ ರಸ್ತೆಯ ಪಕ್ಕಕ್ಕೆ ಉರುಳಿ ಬಿದ್ದು ವಾಹನವು ಜಖಂಗೊಂಡು ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ಪಡೆದುಕೊಂಡಿರುತ್ತಾರೆ. ಆದ್ದರಿಂದ ಕಾರಿನ ಚಾಲಕನಾದ ಮಂಜುನಾಥ ಬಿನ್ ವೆಂಕಟರಾಯಪ್ಪ ರವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ನೀಡಿದ ದೂರಾಗಿರುತ್ತದೆ.

 

2. ಚೇಳೂರು ಪೊಲೀಸ್ ಠಾಣೆ ಮೊ.ಸಂ. 43/2021 ಕಲಂ. ಮನುಷ್ಯ ಕಾಣೆ :-

     ದಿನಾಂಕ 15/05/2021 ರಂದು  ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರರ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆಂದರೆ   ದಿನಾಂಕ :- 10-04-2021 ರಂದು ಬೆಳಿಗ್ಗೆ 08:00 ಗಂಟೆ ಸಮಯದಲ್ಲಿ ಮನೆಯಿಂದ  ಕೆಲಸಕ್ಕೆ ಹೊರ ಹೋದ ನನ್ನ ಗಂಡ ರವಿ ಎಂಬುವರು ಒಂದು ತಿಂಗಳಾದರು ಮನೆಗೆ ಬರಲಿಲ್ಲ. ಫೋನ್ ಸ್ವಿಚ್ ಆಫ್ ಆಗಿರುತ್ತೆ.  ನಮ್ಮ ಸಂಬಂದಿಕರ ಮನೆಗಳಲ್ಲಿ ಮತ್ತು ಅಕ್ಕ ಪಕ್ಕದ ಗ್ರಾಮಗಳಲ್ಲಿ ಹುಡುಕಾಡಿದರು ಪತ್ತೆ ಯಾಗಿರುವುದಿಲ್ಲ.ಅದ್ದರಿಂದ ಕಾಣೆಯಾದ ನನ್ನ ಗಂಡನಾದ ರವಿ ರವರನ್ನು ಪತ್ತೆಮಾಡಿ ಕೊಡಲು ಕೋರಿ ಕೊಟ್ಟ ದೂರಿನ ಮೆರೆಗೆ ಪ್ರಕರಣ ದಾಖಲಿಸಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 213/2021 ಕಲಂ. 269,270,188 ಐಪಿಸಿ ಮತ್ತು ಸೆಕ್ಷನ್ 51(b) THE DISASTER MANAGEMENT ACT, 2005 :-

     ದಿನಾಂಕ: 15/05/2021 ರಂದು ಸಂಜೆ 5.45 ಗಂಟೆಗೆ ಠಾಣೆಯ ಶ್ರೀ ಸುರೇಶ್, ಸಿ.ಹೆಚ್.ಸಿ-57 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 15/05/2021 ರಂದು ಸಂಜೆ 4.00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ಸಿ.ಪಿ.ಸಿ-464 ಅರುಣ್ ಕುಮಾರ್ ರವರು ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಸೀಕಲ್ಲು ಗ್ರಾಮದ ವೀರಭದ್ರಪ್ಪ ಬಿನ್ ಲೇಟ್ ಮುನಿಶಾಮಪ್ಪ ರವರು ಅವರ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಸಂಜೆ 4.30 ಗಂಟೆಗೆ ಸೀಕಲ್ಲು ಗ್ರಾಮದ ವೀರಭದ್ರಪ್ಪ ರವರ ಚಿಲ್ಲರೆ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ, ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ವೀರಭದ್ರಪ್ಪ ಬಿನ್ ಲೇಟ್ ಮುನಿಶಾಮಪ್ಪ, 50 ವರ್ಷ, ಗಾಣಿಗ ಜನಾಂಗ, ಚಿಲ್ಲರೆ ಅಂಗಡಿ ಮಾಲೀಕರು, ಸೀಕಲ್ಲು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 214/2021 ಕಲಂ. 279, 337 ಐಪಿಸಿ :-

     ದಿನಾಂಕ: 15/05/2021 ರಂದು ಸಂಜೆ 7.30 ಗಂಟೆಗೆ ಪಿರ್ಯಾಧಿದಾರರಾದ ನಾರಾಯಣಸ್ವಾಮಿ ಬಿನ್ ಲೇಟ್ ನಾರಾಯಣಪ್ಪ, 62 ವರ್ಷ, ಗೊಲ್ಲರು ಜನಾಂಗ, ಜಿರಾಯ್ತಿ, ಚಿಕ್ಕದಾಸೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಈ ದಿನ ದಿನಾಂಕ:15/05/2021 ರಂದು ಮದ್ಯಾಹ್ನ 3.00 ಗಂಟೆ ಸಮಯದಲ್ಲಿ ಕೆಲಸದ ನಿಮಿತ್ತ ಚಿಂತಾಮಣಿ ತಾಲ್ಲೂಕು, ಕೈವಾರ ಗ್ರಾಮಕ್ಕೆ ಹೋಗುವ ಸಲುವಾಗಿ ತಾನು ತನ್ನ ಬಾಬತ್ತು ಕೆಎ-40 ಎಸ್-2613 ನೊಂದಣಿ ಸಂಖ್ಯೆಯ ಹಿರೋ ಗ್ಲಾಮರ್ ದ್ವಿಚಕ್ರ ವಾಹನದಲ್ಲಿ ತಮ್ಮ ಗ್ರಾಮವನ್ನು ಬಿಟ್ಟು ತಾನು ಸದರಿ ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಕೈವಾರ-ಶಿಡ್ಲಘಟ್ಟ ರಸ್ತೆಯ ಮೂಲಕ ಹೋಗುತ್ತಿದ್ದಾಗ ಮದ್ಯಾಹ್ನ 3.30 ಗಂಟೆ ಸಮಯದಲ್ಲಿ ಕೈವಾರ ಗುಡಿಸಲು ಗೇಟ್ ಬಳಿ ಬಂದಾಗ ಅದೇ ಸಮಯದಲ್ಲಿ ತನ್ನ ಎದುರುಗಡೆಯಿಂದ ಅಂದರೆ ಕೈವಾರ ಗ್ರಾಮದ ಕಡೆಯಿಂದ ಬಂದ ಕೆಎ-01 ಎಂ.ಹೆಚ್-9919 ನೊಂದಣಿ ಸಂಖ್ಯೆಯ ಟಯೋಟಾ ಪಾರ್ಚುನರ್ ಕಾರಿನ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರ ವಾಹನಕ್ಕೆ ದುರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ತಾನು ತನ್ನ ದ್ವಿಚಕ್ರ ವಾಹನ ಸಮೇತ ಕೆಳಕ್ಕೆ ಬಿದ್ದು ಹೋಗಿದ್ದು, ತನ್ನ ಬಲ ಭುಜಕ್ಕೆ ರಕ್ತಗಾಯ, ಎರಡೂ ಮೊಣಕಾಲುಗಳಿಗೆ ತರಚಿದ ರಕ್ತಗಾಯವಾಗಿರುತ್ತೆ. ಅಷ್ಟರಲ್ಲಿ ರಸ್ತೆಯಲ್ಲಿ ಬರುತ್ತಿದ್ದ ತನಗೆ ಪರಿಚಯಸ್ಥರಾದ ಪ್ರತಾಪ್ ಬಿನ್ ನಡಿಪನ್ನ, ಅಂಬರೀಶ ಬಿನ್ ದೊಡ್ಡ ನಾರಾಯಣಸ್ವಾಮಿರವರು ತನ್ನನ್ನು ಉಪಚರಿಸಿ ಯಾವುದೋ ವಾಹನದಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ನಗರದ ಡೆಕ್ಕನ್ ಆಸ್ಪತ್ರೆಗೆ ಬಂದು ದಾಖಲಿಸಿದ್ದು ಅಲ್ಲಿಯ ವೈದ್ಯರು ತನಗೆ ಚಿಕಿತ್ಸೆಯನ್ನು ನೀಡಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿಕೊಟ್ಟಿರುತ್ತಾರೆ. ನಂತರ ತಾನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ಠಾಣೆಗೆ ಬಂದು ತನ್ನ ದೂರನ್ನು ನೀಡುತ್ತಿದ್ದು, ಈ ಅಪಘಾತಕ್ಕೆ ಕಾರಣನಾದ ಕೆಎ-01 ಎಂ.ಹೆಚ್-9919 ನೊಂದಣಿ ಸಂಖ್ಯೆಯ ಟಯೋಟಾ ಪಾರ್ಚುನರ್ ಕಾರಿನ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 215/2021 ಕಲಂ. 269,270,188 ಐಪಿಸಿ ಮತ್ತು ಸೆಕ್ಷನ್ 51(b) THE DISASTER MANAGEMENT ACT, 2005 :-

     ದಿನಾಂಕ: 15/05/2021 ರಂದು ಸಂಜೆ 7.45 ಗಂಟೆಗೆ ಚಿಂತಾಮಣಿ ಗ್ರಾಮಾಂತರ ವೃತ್ತದ ಸಿ.ಪಿ.ಐ ಶ್ರೀ.ಕೆ.ಎಂ.ಶ್ರೀನಿವಾಸಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 15/05/2021 ರಂದು ಸಂಜೆ 6.30 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ತನ್ನ ಸಿಬ್ಬಂದಿಯವರಾದ ಸಿ.ಹೆಚ್.ಸಿ-190 ವೀರಭದ್ರಸ್ವಾಮಿ ರವರು ಜೀಪ್ ಚಾಲಕ ವೇಣುಗೋಪಾಲ್, ಸಿ.ಪಿ.ಸಿ-24 ನರೇಶ್ ಮತ್ತು ಸಿ.ಪಿ.ಸಿ-440 ಆನಂದಕುಮಾರ್ ರವರೊಂದಿಗೆ ತನಗೆ ಒದಗಿಸಿರುವ ಜೀಪ್ ಸಂಖ್ಯೆ ಕೆ.ಎ-40-ಜಿ-3339 ಜೀಪ್ ನಲ್ಲಿ ವೃತ್ತದ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಂಜೆ 7.00 ಗಂಟೆ ಸಮಯದಲ್ಲಿ ಬೊಮ್ಮೇಕಲ್ಲು ಗ್ರಾಮದಲ್ಲಿ ಚೌಡೇಶ್ವರಿ ಪ್ರಾವಿಜನ್ ಸ್ಟೋರ್ ಅಂಗಡಿಯನ್ನು ಶಿವಕುಮಾರ್ ರವರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ 3-4 ಜನರನ್ನು ಅಂಗಡಿಯಲ್ಲಿ ಅಕ್ಕಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಕಾನೂನು ಬಾಹಿರವಾಗಿ ಅಂಗಡಿ ತೆರೆದು ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದವರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಶಿವಕುಮಾರ್ ಬಿನ್ ಮುನಿರೆಡ್ಡಿ, 30 ವರ್ಷ, ಪ್ರಾವಿಜನ್ ಸ್ಟೋರ್ ಮಾಲಿಕ, ಬೊಮ್ಮೇಕಲ್ಲು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ, ಲಾಕ್ ಡೌನ್ ಆದೇಶ ಇದ್ದರೂ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿರುತ್ತೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 216/2021 ಕಲಂ. 269,270,188 ಐಪಿಸಿ ಮತ್ತು ಸೆಕ್ಷನ್ 51(b) THE DISASTER MANAGEMENT ACT, 2005 :-

     ದಿನಾಂಕ: 15/05/2021 ರಂದು ರಾತ್ರಿ 8.15 ಗಂಟೆಗೆ ಚಿಂತಾಮಣಿ ಗ್ರಾಮಾಂತರ ವೃತ್ತದ ಸಿ.ಪಿ.ಐ ಶ್ರೀ.ಕೆ.ಎಂ.ಶ್ರೀನಿವಾಸಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 15/05/2021 ರಂದು ಸಂಜೆ 6.30 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ಮತ್ತು ತನ್ನ ಸಿಬ್ಬಂದಿಯವರಾದ ಸಿ.ಹೆಚ್.ಸಿ-190 ವೀರಭದ್ರಸ್ವಾಮಿ ರವರು ಜೀಪ್ ಚಾಲಕ ವೇಣುಗೋಪಾಲ್, ಸಿ.ಪಿ.ಸಿ-24 ನರೇಶ್ ಮತ್ತು ಸಿ.ಪಿ.ಸಿ-440 ಆನಂದಕುಮಾರ್ ರವರೊಂದಿಗೆ ತನಗೆ ಒದಗಿಸಿರುವ ಜೀಪ್ ಸಂಖ್ಯೆ ಕೆ.ಎ-40-ಜಿ-3339 ಜೀಪ್ ನಲ್ಲಿ ವೃತ್ತದ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಂಜೆ 7.10 ಗಂಟೆ ಸಮಯದಲ್ಲಿ ಬೊಮ್ಮೇಕಲ್ಲು ಗ್ರಾಮದಲ್ಲಿ ಚೊಕ್ಕಪ್ಪ ರವರು ಅವರ ಪ್ರಾವಿಜನ್ ಸ್ಟೋರ್ ಅಂಗಡಿಯನ್ನು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ 3-4 ಜನರನ್ನು ಅಂಗಡಿಯಲ್ಲಿ ಅಕ್ಕಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಕಾನೂನು ಬಾಹಿರವಾಗಿ ಅಂಗಡಿ ತೆರೆದು ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಆಸಾಮಿ ಓಡಿ ಹೋಗಿದ್ದು, ಓಡಿ ಹೋದ ಆಸಾಮಿಯ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಚೊಕ್ಕಪ್ಪ ಬಿನ್ ಲೇಟ್ ಮುನಿಶಾಮಪ್ಪ, 30 ವರ್ಷ, ವಕ್ಕಲಿಗರು, ಪ್ರಾವಿಜನ್ ಸ್ಟೋರ್ ಮಾಲಿಕ, ಬೊಮ್ಮೇಕಲ್ಲು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ, ಲಾಕ್ ಡೌನ್ ಆದೇಶ ಇದ್ದರೂ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿರುತ್ತೆ.

 

7. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 217/2021 ಕಲಂ. 269,270,188 ಐಪಿಸಿ ಮತ್ತು ಸೆಕ್ಷನ್ 51(b) THE DISASTER MANAGEMENT ACT, 2005 :-

     ದಿನಾಂಕ: 16/05/2021 ರಂದು ಮದ್ಯಾಹ್ನ 12.15 ಗಂಟೆಗೆ ಠಾಣೆಯ ಶ್ರೀ. ನಾರಾಯಣಸ್ವಾಮಿ.ಕೆ, ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 16/05/2021 ರಂದು ಬೆಳಗ್ಗೆ 11.00 ಗಂಟೆ ಸಮಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ತಾನು ತಮ್ಮ ಸಿಬ್ಬಂದಿಯವರಾದ ಸಿ.ಪಿ.ಸಿ-430 ನರಸಿಂಹಯ್ಯ ರವರೊಂದಿಗೆ ಠಾಣಾ ಜೀಪ್ ಸಂಖ್ಯೆ ಕೆ.ಎ-40-ಜಿ-326 ರಲ್ಲಿ ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಐಮರೆಡ್ಡಿಹಳ್ಳಿ ಗ್ರಾಮದ ಲಘುಮರೆಡ್ಡಿ ಬಿನ್ ಲೇಟ್ ನಾರೆಪ್ಪ ರವರು ಅವರ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಬೆಳಗ್ಗೆ 11.15 ಗಂಟೆಗೆ ಐಮರೆಡ್ಡಿಹಳ್ಳಿ ಗ್ರಾಮದ ಲಘುಮರೆಡ್ಡಿ ಬಿನ್ ಲೇಟ್ ನಾರೆಪ್ಪ ರವರು ಅವರ ಚಿಲ್ಲರೆ ಅಂಗಡಿಯ ಬಳಿ ಹೋದಾಗ ಸದರಿ ಅಂಗಡಿಯಲ್ಲಿ ಅದರ ಮಾಲೀಕರು ಸರ್ಕಾರದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಇರುವ ಆದೇಶಗಳನ್ನು ಪಾಲಿಸದೇ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಕೋವಿಡ್ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹಾ ಕಾನೂನು ಬಾಹಿರವಾಗಿ 3-4 ಜನರನ್ನು ಅಂಗಡಿಯ ಬಳಿ ನಿಲ್ಲಿಸಿಕೊಂಡು ಸಾಮಾಜಿಕ ಅಂತರವನ್ನು ಮರೆತು ಅಂಗಡಿಯ ಮಾಲೀಕರು ಮಾಸ್ಕ್ ಧರಿಸದೇ ಸರ್ಕಾರದ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಸದರಿ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಲಘುಮರೆಡ್ಡಿ ಬಿನ್ ಲೇಟ್ ನಾರೆಪ್ಪ, 60 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ಮಾಲೀಕರು, ವಾಸ: ಐಮರೆಡ್ಡಿಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಆದ ಕಾರಣ ಕೋವಿಡ್ ರೋಗಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿದಿದ್ದರೂ ಸಹ ಮುಖಕ್ಕೆ ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಆದೇಶಗಳನ್ನು ಉಲ್ಲಂಘನೆ ಮಾಡಿರುವ ಸದರಿ ಚಿಲ್ಲರೆ ಅಂಗಡಿಯ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿರುತ್ತೆ.

 

8. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 218/2021 ಕಲಂ. 15(A),32(3) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ: 16/05/2021 ರಂದು ಮದ್ಯಾಹ್ನ 1.45 ಗಂಟೆಗೆ ಠಾಣೆಗೆ ಶ್ರೀ.ನಾರಾಯಣಸ್ವಾಮಿ.ಕೆ, ಪಿ.ಎಸ್.ಐ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 16/05/2021 ರಂದು ಮದ್ಯಾಹ್ನ 12.30 ಗಂಟೆ ಸಮಯದಲ್ಲಿ ತಾನು  ಠಾಣಾ ಸಿಬ್ಬಂದಿಯವರಾದ ಸಿ.ಪಿ.ಸಿ-430 ನರಸಿಂಹಯ್ಯ ರವರೊಂದಿಗೆ ಠಾಣಾ ಜೀಪ್ ಸಂಖ್ಯೆ ಕೆಎ-40 ಜಿ-326 ರಲ್ಲಿ ಠಾಣಾ ವ್ಯಾಪ್ತಿಯ ಊಲವಾಡಿ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ರಾಜೇಶ್ ಬಿನ್ ನಾಗೇಶ ರವರು ಚಿಲ್ಲರೆ ಅಂಗಡಿ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಊಲವಾಡಿ ಗ್ರಾಮದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಚಿಲ್ಲರೆ ಅಂಗಡಿ ಮುಂದೆ  ನೋಡಲಾಗಿ  1)500 ಎಂಎಲ್ ನ ಕಿಂಗ್ ಪಿಶರ್ ಸ್ಟ್ರಾಂಗ್ ಪ್ರೀಮಿಯಂ ಬೀರ್ ಟಿನ್ ಗಳು – 04, 2)180 ಎಂಎಲ್ ನ ಬ್ಯಾಗ್ ಪೈಪರ್ ವಿಸ್ಕಿ ಟೆಟ್ರಾ ಪ್ಯಾಕೆಟ್ ಗಳು- 02, 3)180 ಎಂಎಲ್ ನ  ಮೆಕ್ ಡೋವೆಲ್ಸ್ ನಂ.1 ರಮ್ ಟೆಟ್ರಾ ಪ್ಯಾಕೆಟ್ ಗಳು – 02, 4)ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಹಾಗೂ 5)ಒಂದು ಲೀಟರ್ ಸಾಮರ್ಥ್ಯದ ಎರಡು ನೀರಿನ ಬಾಟಲಿಗಳಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ ಹಾಗೂ ನೀರಿನ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ರಾಜೇಶ್ ಬಿನ್ ನಾಗೇಶ್, 23 ವರ್ಷ, ಬಲಜಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಊಲವಾಡಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಮದ್ಯಾಹ್ನ 12.45 ರಿಂದ ಮದ್ಯಾಹ್ನ 1.30 ಗಂಟೆಯವರೆಗೆ ಪಂಚನಾಮೆಯ ಮೂಲಕ ಮೇಲ್ಕಂಡ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ರಾಜೇಶ್ ಬಿನ್ ನಾಗೇಶ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 

9. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 70/2021 ಕಲಂ. 15(A),32(3) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ:15/05/2021 ರಂದು ಸಂಜೆ 4-30 ಗಂಟೆಯಲ್ಲಿ ನ್ಯಾಯಾಲಯದ ,ಮ.ಪಿ.ಸಿ-364 ರವರು ಎನ್.ಸಿ ಆರ್ 98/2021 ರಲ್ಲಿ ಕ್ರಿಮಿನಲ್ ಕೇಸನ್ನು ದಾಖಲು ಘನ ನ್ಯಾಯಾಲಯದಿಂದ ಅನುಮತಿ ಪತ್ರವನ್ನು ತಂದು ಹಾಜರ್ ಪಡಿಸಿದ್ದ ಸಾರಾಂಶವೆನೆಂದರೆ ದಿನಾಂಕ;02/05/2021 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ  ವರಧಿಯ ಸಾರಾಂಶವೇನೇಂಧರೆ ದಿನಾಂಕ:02/05/2021 ರಂದು ಬೆಳಿಗ್ಗೆ 9-30 ಗಂಟೆಯಲ್ಲಿ ನಾನು ಗೌರಿಬಿದನೂರು ನಗರದಲ್ಲಿ ಗಸ್ತಿನಲ್ಲಿ ಇದ್ದಾಗ ಸಾರ್ವಜನಿಕರು ಪೋನ್ ಮಾಡಿ ಗೌರಿಬಿದನೂರು ನಗರದ  ನಾಗರೆಡ್ಡಿ ಬಡಾವಣೆಯ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಪಕ್ಕದಲ್ಲಿ  ಯಾರೋ ಆಸಾಮಿ ಸಾರ್ವಜನಿಕರಿಗೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿದರು .ಕೂಡಲೇ ನಾನು ಠಾಣೆಗೆ ಪಂಚಾಯ್ತಿದಾರರನ್ನು ಕರೆಯಿಸಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ನಮ್ಮ ಠಾಣಾ ಸಿಬ್ಬಂದಿಯವರಾದ ಪಿ.ಸಿ 282 ರಮೇಶ್ ರವರನ್ನು ಕರೆದುಕೊಂಡು ಮಾಹಿತಿಯಂತೆ ಸರ್ಕಾರಿ ಜೀಪಿನಲ್ಲಿ  ಪದ್ಮಾವತಿ ಕಲ್ಯಾಣ ಕ್ಕಿಂತ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಯಾರೋ ಆಸಾಮಿಗಳು ಪದ್ಮಾವತಿ ಕಲ್ಯಾಣ ಮಂಟಪದ  ಪಕ್ಕದ ಸಾರ್ವಜನಿಕ ಸ್ಥಳದಲ್ಲಿ  ಮದ್ಯ ಸೇವನೆ ಮಾಡುತ್ತಿರುವುದು ಖಚಿತ ಪಡಿಸಿಕೊಂಡು ಪಂಚರೊಂದಿಗೆ ಮದ್ಯ ಸೇವನೆ ಮಾಡುತ್ತಿದ್ದವರ ಮೇಲೆ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿ ಇದ್ದ ನಮ್ಮನ್ನು ಕಂಡು ಮದ್ಯ ಸೇವನೆ ಮಾಡುತ್ತಿದ್ದ ಆಸಾಮಿಗಳು ಓಡಿ ಹೋದರು ಮಾಹಿತಿಯಂತೆ ಮದ್ಯ ಸರಬರಾಜು ಮಾಡುತ್ತಿದ್ದ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ಅಶ್ವತ್ಥನಾರಾಯಣ ಬಿನ್ ಲೇಟ್ ನಂಜುಡಪ್ಪ.58 ವರ್ಷ, ಸಾದರು ಗೌಡರು ವಾಸ;ಹುದೂತಿ ಗ್ರಾಮ ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದನು ಆಸಾಮಿಗೆ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಯಾವುದದಾರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ರೀತಿಯ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮ ಸ್ಥಳವನ್ನು ಪರಿಶೀಲಿಸಲಾಗಿ 1) 90 ಎಮ್ ಎಲ್ ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿ ಕಂಪನಿಯ 16 ಟೆಟ್ರಾ ಪಾಕೆಟ್ ಗಳು 2)  90 ಎಮ್ ಎಲ್ ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿ ಕಂಪನಿಯ 04 ಖಾಲಿ ಟೆಟ್ರಾ ಪಾಕೆಟ್ ಗಳು 3) 03 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು 4)ಎರಡು ಲೀಟರ್ ಸಾಮರ್ಥ್ಯದ ಒಂದು ಖಾಲಿ ಪ್ಲಾಸ್ಟಿಕ್  ವಾಟರ್ ಬಾಟಲ್ ಇರುತ್ತೆ. ಮದ್ಯವಿರುವ ಪಾಕೆಟ್ಗಗಳ ಮೇಲೆ ಇರುವ ಬೆಲೆಯನ್ನು ನೋಡಲಾಗಿ 35.13 ರೂಪಾಯಿಗಳೆಂತ ಇರುತ್ತೆ ಇದರ ಒಟ್ಟು ಬೆಲೆ 562 ರೂ ಗಳಾಗಿರುತ್ತೆ. ಇದರ ಒಟ್ಟು ಮದ್ಯೆ ಪ್ರಮಾಣ 1440 ಎಮ್,ಎಲ್,ಆಗಿರುತ್ತೆ. ಆಸಾಮಿ ಮತ್ತು ಮಾಲುಗಳನ್ನು ಪಂಚನಾಮೆಯ ಮೂಲಕ ಬೆಳಿಗ್ಗೆ 11-00 ಗಂಟೆಗೆ ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿ ನೀಡಿದ ವರಧಿಯನ್ನು ಪಡೆದು ಎನ್,ಸಿ,ಆರ್ ದಾಖಲಿಸಿರುತ್ತೆ ಘನ ನ್ಯಾಯಾಲಯದ ಅನುಮತಿ ಪಡೆದು ಕ್ರಿಮಿನಲ್ ಕೇಸು ದಾಖಲು ಮಾಡಿಕೊಂಡಿರುತ್ತೆ.

 

10. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 71/2021 ಕಲಂ. 15(A),32(3) ಕರ್ನಾಟಕ ಅಬಕಾರಿ ಕಾಯ್ದೆ :-

     ದಿನಾಂಕ:15/05/2021 ರಂದು ಸಂಜೆ 5-30 ಗಂಟೆಯಲ್ಲಿ ನ್ಯಾಯಾಲಯದ ,ಮ.ಪಿ.ಸಿ-364 ರವರು ಎನ್.ಸಿ ಆರ್ 101/2021 ರಲ್ಲಿ ಕ್ರಿಮಿನಲ್ ಕೇಸನ್ನು ದಾಖಲು ಘನ ನ್ಯಾಯಾಲಯದಿಂದ ಅನುಮತಿ ಪತ್ರವನ್ನು ತಂದು ಹಾಜರ್ ಪಡಿಸಿದ್ದ ಸಾರಾಂಶವೆನೆಂದರೆ ದಿನಾಂಕ;05/05/2021 ರಂದು ಬೆಳಿಗ್ಗೆ 11-30 ಗಂಟೆಯಲ್ಲಿ ಪಿರ್ಯಾದಿದಾರರು ಠಾನೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶವೇನೆಂಧರೆ ದಿನಾಂಕ:05/05/2021 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ನಾನು ಗೌರಿಬಿದನೂರು ನಗರದಲ್ಲಿ ಗಸ್ತಿನಲ್ಲಿ ಇದ್ದಾಗ ಸಾರ್ವಜನಿಕರು ಪೋನ್ ಮಾಡಿ ಗೌರಿಬಿದನೂರು ನಗರದ  ನಾಗಪ್ಪ ಬ್ಲಾಕ್ ನ ಬಳಿ  ರುಚಿಗಾರ್ಡನ್ ಡಾಬ ಮುಂಭಾಗ   ಯಾರೋ ಆಸಾಮಿ ಸಾರ್ವಜನಿಕರಿಗೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿದರು .ಕೂಡಲೇ ನಾನು ಠಾಣೆಗೆ ಪಂಚಾಯ್ತಿದಾರರನ್ನು ಕರೆಯಿಸಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ನಮ್ಮ ಠಾಣಾ ಸಿಬ್ಬಂದಿಯವರಾದ ಪಿ.ಸಿ 318  ದೇವರಾಜು ರವರನ್ನು ಕರೆದುಕೊಂಡು ಮಾಹಿತಿಯಂತೆ ಸರ್ಕಾರಿ ಜೀಪಿನಲ್ಲಿ  ನಾಗಪ್ಪ ಬ್ಲಾಕ್ ನ ಬಳಿ   ಕ್ಕಿಂತ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಯಾರೋ ಆಸಾಮಿಗಳು ನಾಗಪ್ಪ ಬ್ಲಾಕ್ ನ ಬಳಿ   ರುಚಿಗಾರ್ಡನ್ ಡಾಬ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ  ಮದ್ಯ ಸೇವನೆ ಮಾಡುತ್ತಿರುವುದು ಖಚಿತ ಪಡಿಸಿಕೊಂಡು ಪಂಚರೊಂದಿಗೆ ಮದ್ಯ ಸೇವನೆ ಮಾಡುತ್ತಿದ್ದವರ ಮೇಲೆ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿ ಇದ್ದ ನಮ್ಮನ್ನು ಕಂಡು ಮದ್ಯ ಸೇವನೆ ಮಾಡುತ್ತಿದ್ದ ಆಸಾಮಿಗಳು ಓಡಿ ಹೋದರು ಮಾಹಿತಿಯಂತೆ ಮದ್ಯ ಸರಬರಾಜು ಮಾಡುತ್ತಿದ್ದ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ಅಶ್ವತ್ಥ ಬಿನ್ ನಾಗಪ್ಪ.45 ವರ್ಷ, ನಾಯಕರು, ವ್ಯವಸಾಯ,ಚಿಕ್ಕಕುರುಗೋಡು ಗ್ರಾಮ ಗೌರಿಬಿದನೂರು ತಾಲ್ಲೂಕು  ತಿಳಿಸಿದನು ಆಸಾಮಿಗೆ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಯಾವುದದಾರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ರೀತಿಯ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮ ಸ್ಥಳವನ್ನು ಪರಿಶೀಲಿಸಲಾಗಿ 1) 90 ಎಮ್ ಎಲ್ ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿ ಕಂಪನಿಯ 16 ಟೆಟ್ರಾ ಪಾಕೆಟ್ ಗಳು 2)  90 ಎಮ್ ಎಲ್ ನ ಹೈವಾರ್ಡ್ಸ ಚಿಯರ್ಸ್ ವಿಸ್ಕಿ ಕಂಪನಿಯ 04 ಖಾಲಿ ಟೆಟ್ರಾ ಪಾಕೆಟ್ ಗಳು 3) 03 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು 4)ಎರಡು ಲೀಟರ್ ಸಾಮರ್ಥ್ಯದ ಒಂದು ಖಾಲಿ ಪ್ಲಾಸ್ಟಿಕ್  ವಾಟರ್ ಬಾಟಲ್ ಇರುತ್ತೆ. ಮದ್ಯವಿರುವ ಪಾಕೆಟ್ಗಗಳ ಮೇಲೆ ಇರುವ ಬೆಲೆಯನ್ನು ನೋಡಲಾಗಿ 35.13 ರೂಪಾಯಿಗಳೆಂತ ಇರುತ್ತೆ ಇದರ ಒಟ್ಟು ಬೆಲೆ 562 ರೂ ಗಳಾಗಿರುತ್ತೆ. ಇದರ ಒಟ್ಟು ಮದ್ಯೆ ಪ್ರಮಾಣ 1440 ಎಮ್,ಎಲ್,ಆಗಿರುತ್ತೆ. ಆಸಾಮಿ ಮತ್ತು ಮಾಲುಗಳನ್ನು ಪಂಚನಾಮೆಯ ಮೂಲಕ ಬೆಳಿಗ್ಗೆ 11-30 ಗಂಟೆಗೆ ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿ  ನೀಡಿದ ವರಧಿಯನ್ನು ಪಡೆದು ಎನ್,ಸಿ,ಆರ್ ದಾಖಲಿಸಿರುತ್ತೆ .ಈ ದಿನ  ಘನ ನ್ಯಾಯಾಲಯದ ಅನುಮತಿ ಪಡೆದು ಕ್ರಿಮಿನಲ್ ಕೇಸು ದಾಖಲು ಮಾಡಿಕೊಂಡಿರುತ್ತೆ.

 

11. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 159/2021 ಕಲಂ. 143,447,341,323,504,506 ರೆ/ವಿ 149 ಐಪಿಸಿ :-

     ದಿನಾಂಕ:-16/05/2021 ರಂದು ಮದ್ಯಾಹ್ನ 1-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಡಿ.ಸಂಪತ್ ಕುಮಾರ್ ಬಿನ್ ಎನ್.ದೇವರಾಜ್, 41 ವರ್ಷ, ವಕ್ಕಲಿಗರು, ವ್ಯಾಪಾರ, ವಾಸ-ಚನ್ನರಾಯಪಟ್ಟಣ ರಸ್ತೆ, ವಿಜಯಪುರ ಟೌನ್, ದೇವನಹಳ್ಳಿ ತಾಲ್ಲೂಕು, ಬೆಂಗಳೂರು (ಗ್ರಾ) ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಇದೇ ಶಿಡ್ಲಘಟ್ಟ ತಾಲ್ಲೂಕು ಹಾರಡಿ ಗ್ರಾಮದ ಸರ್ವೇ ನಂಬರ್ 169 ಮತ್ತು 3 ರಲ್ಲಿ ಒಟ್ಟು 50 ಎಕರೆ ಜಮೀನನ್ನು 2009 ನೇ ಸಾಲಿನಲ್ಲಿ ಬೆಂಗಳೂರಿನ ವಾಸಿಗಳಾದ ಸೈಯದ್ ನೂರ್ ರಫೀ ಉಲ್ಲಾ ಹಾಗು ಸಾದ್ ಸಲ್ಮಾನ್ ರವರು ಖರೀದಿ ಮಾಡಿದ್ದು, ಅಂದಿನಿಂದಲೂ ತಾನು ಸದರಿ ಜಮೀನಿನಲ್ಲಿ ಕೂಲಿ ಆಳುಗಳೊಂದಿಗೆ ಕೆಲಸ ಮಾಡಿಸಿಕೊಂಡು ಜಮೀನಿನ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುತ್ತೇನೆ. ಈ ಜಮೀನಿಗೆ ಹಾರಡಿ ಗ್ರಾಮದ ವಾಸಿ ಮುನಿಕೃಷ್ಣ ರವರನ್ನು ಕಾವಲುಗಾರನಾಗಿ ನೇಮಿಸಿದ್ದು, ದಿನಾಂಕ 15/05/2021 ರಂದು ಬೆಳಿಗ್ಗೆ ಸುಮಾರು 10-45 ಗಂಟೆ ಸಮಯದಲ್ಲಿ ಹಾರಡಿ ಗ್ರಾಮದ ವಾಸಿಯಾದ ನಾರಾಯಣಪ್ಪ ರವರ ಮಕ್ಕಳಾದ ರಾಮಪ್ಪ ಮತ್ತು ನಾರಾಯಣಸ್ವಾಮಿ @ ಸುರೇಶ್, ರಾಮಪ್ಪ ರವರ ಮಕ್ಕಳಾದ ಸುರೇಶ್ ಮತ್ತು ಮೋಹನ್ ರವರು ಹಾಗು ನಾರಾಯಣಸ್ವಾಮಿ @ ಸುರೇಶ್ ರವರ ಮಕ್ಕಳಾದ ಮಂಜುನಾಥ & ನಾಗಭೂಷಣ್ ರವರು ಅಕ್ರಮವಾಗಿ ಗುಂಪು ಕಟ್ಟಿಕೊಂಡು ತಮ್ಮ ಜಮೀನಿನ ಹಿಂಭಾಗದ ಬೇಲಿಯನ್ನು  ಕೆಡವಿ ನೊಂದಣಿ ಸಂಖ್ಯೆ ಇಲ್ಲದ ಟ್ರಾಕ್ಟರ್ ನಲ್ಲಿ ತಮ್ಮ ಜಮೀನಿನೊಳಗೆ ಅತೀ ಕ್ರಮ ಪ್ರವೇಶ ಮಾಡಿ ಉಳುಮೆ ಮಾಡಲು ಮುಂದಾಗಿದ್ದಾಗ ಕೂಲಿ ಆಳುವಾದ ಮುನಿಕೃಷ್ಣಪ್ಪ ರವರು ಮೇಲ್ಕಂಡವರಿಗೆ ಜಮೀನಿನಲ್ಲಿ ಯಾಕೇ ಬಂದಿದ್ದೀರಾ ಎಂದು ಕೇಳಿದ್ದಕ್ಕೆ ಆತನನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಮೈ ಮೇಲೆ ಹೊಡೆದು, ಲೋಫರ್ ನನ್ನ ಮಗನೇ ನೀನು ಮತ್ತು ನಿನ್ನ ಯಜಮಾನರು ಈ ಜಮೀನನ್ನು ಖಾಲಿ ಮಾಡದಿದ್ದರೆ ನಿಮಗೆ ಒಂದು ಗತಿ ಕಾಣಿಸುತ್ತೇವೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ನಂತರ ಮುನಿಕೃಷ್ಣಪ್ಪ ರವರು ತನಗೆ ಪೋನ್ ಮಾಡಿ ವಿಷಯವನ್ನು ತಿಳಿಸಿರುತ್ತಾರೆ. ನಂತರ ತಾನು ಈ ಗಲಾಟೆಯ ವಿಷಯವನ್ನು ತಮ್ಮ ಜಮೀನಿನ ಮಾಲೀಕರಿಗೆ ತಿಳಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

 

12. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 52/2021 ಕಲಂ. 457,511 ಐಪಿಸಿ :-

     ದಿನಾಂಕ.15.05.2021 ರಂದು ಮದ್ಯಾಹ್ನ 12-30 ಗಂಟೆಗೆ ಸತೀಶ್ ಹೆಚ್.ಎನ್, ಮ್ಯಾನೇಜರ್, ಯೂನಿಯನ್ ಬ್ಯಾಂಕ್, ಶಿಡ್ಲಘಟ್ಟ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ನಾನು ಶಿಡ್ಲಘಟ್ಟ ನಗರದ ರೇಷ್ಮೆ ಮಾರುಕಟ್ಟೆ ಬಳಿ ಇರುವ ಯೂನಿಯನ್ ಬ್ಯಾಂಕ್ ನಲ್ಲಿ ಸುಮಾರು 3 ವರ್ಷದಿಂದ ಬ್ಯಾಂಕ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ನಾನು ನನ್ನ ವೈಯುಕ್ತಿಕ ಕಾರಣಗಳಿಂದ ದಿನಾಂಕ-13.05.2021 ರಿಂದ 15.05.2021 ರವರೆಗೆ 03 ದಿನ ಆಕಸ್ಮಿಕ ರಜೆಯನ್ನು ಮೇಲಾಧಿಕಾರಿಗಳಿಂದ ಪಡೆದಿರುತ್ತೇನೆ. ಬ್ಯಾಂಕ್ ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ರವರ ಬಳಿ ಯೂನಿಯನ್ ಬ್ಯಾಂಕ್ ನ ಲಾಕರ್ ಗಳಿಗೆ ಸಂಬಂಧಪಟ್ಟ ಎರಡು ಮಾಸ್ಟರ್ ಕೀಗಳು ಇರುತ್ತೆ. ನಾನು ಬ್ಯಾಂಕಿನ ಉಸ್ತುವಾರಿಯನ್ನು ಅಸಿಸ್ಟೆಂಟ್ ಮ್ಯಾನೇಜರ್ ಮಿಥುನ್ ನಾಯಕ್ ರವರಿಗೆ ವಹಿಸಿ ನನ್ನ ಬಳಿ ಇದ್ದ ಬ್ಯಾಂಕ್ನ ಮಾಸ್ಟರ್ ಕೀ ಯನ್ನು ಮೋಹನ್ ನಾಯಕ್, ಕ್ಲರ್ಕ ರವರಿಗೆ ನೀಡಿ ರಜೆ ಹೋಗಿರುತ್ತೇನೆ. ದಿನಾಂಕ-14.05.2021 ರಂದು ರಂಜಾನ್ ಹಬ್ಬದ ಪ್ರಯುಕ್ತ ಬ್ಯಾಂಕ್ ರಜೆ ಇದ್ದು, ಈ ದಿನ ದಿನಾಂಕ-15.05.2021 ರಂದು ಬೆಳಿಗ್ಗೆ 9-50 ಗಂಟೆಯಲ್ಲಿ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ಮಿಥುನ್ ನಾಯಕ್ ರವರು ನನಗೆ ಪೋನ್ ಮಾಡಿ ನಾನು ಬೆಳಿಗ್ಗೆ ಬ್ಯಾಂಕ್ ನ ಬಾಗಿಲು ತೆರೆದಾಗ ರಾತ್ರಿ ಯಾರೋ ಕಳ್ಳರು ಮ್ಯಾನೇಜರ್ ರೂಂನಲ್ಲಿ ಗೋಡೆ ಹೊಡೆದಿದ್ದು, ಸ್ಟ್ರಾಂಗ್ ರೂಂ ನ ಬಾಗಿಲು ತೆರೆದಿರುತ್ತೆ ಮತ್ತು ಸಿಸಿ ಕ್ಯಾಮರಗಳ ಡಿವಿಆರ್ ನ್ನು ಕಿತ್ತು ಬ್ಯಾಂಕಿನ ಹಿಂಭಾಗದಲ್ಲಿ ಹೊಡೆದು ಹಾಕಿರುತ್ತಾರೆಂದು ತಿಳಿಸಿ ಬೇಗ ಬರುವಂತೆ ತಿಳಿಸಿದ್ದು. ನಾನು ಬೆಳಿಗ್ಗೆ 11.30ಗಂಟೆಗೆ ಬಂದು ನೋಡಿದಾಗ ವಿಚಾರ ನಿಜವಾಗಿದ್ದು, ಬ್ಯಾಂಕಿನ ಓಳಗಡೆ ಹೋಗಿ ನೋಡಿದಾಗ ರಾತ್ರಿ ಯಾರೋ ಕಳ್ಳರು ನನ್ನ ರೂಂನ ಗೋಡೆ ಹೋಡೆದ್ದು, ಸ್ವಾಂಗ್ ರೂಂನ ಕಬ್ಬಿಣದ ಗ್ರಿಲ್ಸ್ ಮತ್ತು ಬಾಗಿಲಿಗೆ ಹಾಕಿರುವ ಬೀಗ ಹೊಡೆದು ಕಿತ್ತು ಹಾಕಿ ಬಾಗಿಲು ತೆರೆದಿರುತ್ತೆ. ನಾನು ಸ್ಟ್ರಾಂಗ್ ರೂಂಗೆ ಹೋಗಿ ನೋಡಿದಾಗ ಯಾರೋ ಕಳ್ಳರು ಲಾಕರ್ ನ್ನು ತೆರೆಯುವ ಉದ್ದೇಶದಿಂದ ಸ್ಟ್ರಾಂಗ್ ರೂಂನಲ್ಲಿದ್ದ ಎರಡು ಲಾಕರ್ ಗಳ ಲಾಕಿನ ಸ್ಕ್ರ್ರೂಗಳನ್ನು ಬಿಚ್ಚಿ ತೆರೆಯಲು ಪ್ರಯತ್ನಿಸಿರುವುದು ಕಂಡು ಬಂದಿದ್ದು. ಆದರೆ ಲಾಕರ್ ನ್ನು ತೆರೆಯಲು ಸಾಧ್ಯವಾಗಿರುವುದಿಲ್ಲ. ನಾನು ಎರಡು ಲಾಕರ್ ಗಳನ್ನು ಮಾಸ್ಟರ್ ಕೀಗಳನ್ನು ಬಳಸಿ ತೆರೆದು ಪರಿಶೀಲಿಸಲಾಗಿ ಹಣ, ಆಭರಣಗಳು ಮತ್ತು ಬ್ಯಾಂಕಿನ ಯಾವುದೇ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿರುವುದಿಲ್ಲ. ಆದುದರಿಂದಾಗಿ ದಿನಾಂಕ-14.05.2021 ರಂದು ರಾತ್ರಿ ಸಮಯದಲ್ಲಿ ನಮ್ಮ ಯೂನಿಯನ್ ಬ್ಯಾಂಕ್ ನ ಗೋಡೆ ಹೊಡೆದು ಒಳ ಪ್ರವೇಶಿಸಿ. ಸಿಸಿ ಕ್ಯಾಮರಾಗಳ ಡಿವಿಆರ್ ಕಿತ್ತು ಹಾಕಿ, ಸ್ಟ್ರಾಂಗ್ ರೂಂನ ಗ್ರಿಲ್ ಮತ್ತು ಬಾಗಿಲಿಗೆ ಹಾಕಿರುವ ಬೀಗ ಹೊಡೆದು ಲಾಕರ್ ಗಳ ಸ್ಕ್ರೂ ಗಳನ್ನು ಬಿಚ್ಚಿ ಲಾಕರ್ ನಲ್ಲಿದ್ದ ಹಣ ಮತ್ತು ಆಭರಣಗಳನ್ನು ಕಳ್ಳತನ ಮಾಡಲು ಪ್ರಯತ್ನಿಸಿರುವವರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಿಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಇತ್ತೀಚಿನ ನವೀಕರಣ​ : 16-05-2021 05:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080