Feedback / Suggestions

1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 154/2021 ಕಲಂ. 323,324,504,506  ಐಪಿಸಿ :-

     ದಿನಾಂಕ: 15/04/2021 ರಂದು ರಾತ್ರಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀಮತಿ ಅಮ್ಮಾಜಾನ್ ಕೋಂ ಜಬೀವುಲ್ಲಾ, 35 ವರ್ಷ, ಮಸ್ಲೀಂ ಜನಾಂಗ, ಸಮಾಜ ಸೇವಕಿ, ಡೆಕ್ಕನ್ ಆಸ್ಪತ್ರೆ ಹಿಂಭಾಗ, ಅಶ್ವಿನಿ ಬಡಾವಣೆ, ಚಿಂತಾಮಣಿ ನಗರ ರವರ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 9.45 ಗಂಟೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಾನು ಈಗ್ಗೆ ಸುಮಾರು 15 ವರ್ಷಗಳ ಹಿಂದೆ ಶ್ರೀನಿವಾಸಪುರ ತಾಲ್ಲೂಕು, ಗೌನಪಲ್ಲಿ ಗ್ರಾಮದ ವಾಸಿಯಾದ ಕಲೀಂ ಪಾಷಾ ಬಿನ್ ಅಮೀರ್ ಸಾಬ್ ರವರನ್ನು ಮದುವೆಯಾಗಿದ್ದು, ತಮಗೆ ಇಬ್ಬರು ಮಕ್ಕಳು ಸಹ ಇರುತ್ತಾರೆ. ನಂತರ ತಮಗೆ ಸಂಸಾರದಲ್ಲಿ ಹೊಂದಾಣಿಕೆಯಾಗದ ಕಾರಣ ತಾವಿಬ್ಬರು ಬೇರೆ ಬೇರೆಯಾಗಿ ವಾಸವಾಗಿದ್ದು, ತಾವಿಬ್ಬರೂ ವಿಚ್ಚೇದನೆ ತೆಗೆದುಕೊಂಡಿರುತ್ತೇವೆ. ಹೀಗಿರುವಾಗ 5 ವರ್ಷಗಳ ಹಿಂದೆ ಚಿಂತಾಮಣಿ ನಗರದ ಆಶ್ರಯ ಬಡಾವಣೆಯ ವಾಸಿಯಾದ ಜಜೀವುಲ್ಲಾ ಬಿನ್ ಪಕೃದ್ದಿನ್ ರವರನ್ನು ಪರಸ್ಪರ ಪ್ರೀತಿಸಿ ಮದುವೆ ಮಾಡಿಕೊಂಡಿರುತ್ತಾರೆ. ಮದುವೆಯಾದ ಮೊದಲು ತಾವು ಸಂಸಾರದಲ್ಲಿ ಅನ್ಯೋನ್ಯವಾಗಿದ್ದು ನಂತರ ಈಗ್ಗೆ ಸುಮಾರು 2 ವರ್ಷಗಳಿಂದ ಜಬೀವುಲ್ಲಾ ರವರು ವಿನಾ ಕಾರಣ ತನ್ನ ಮೇಲೆ ಜಗಳ ತೆಗೆದು ಗಲಾಟೆ ಮಾಡುತ್ತಿರುತ್ತಾರೆ. ಹೀಗಿರುವಾಗ ಈಗ್ಗೆ ಸುಮಾರು ಒಂದು ವರ್ಷದ ಹಿಂದೆ ಸರ್ಕಾರದಿಂದ ಅಮ್ಮ ಎಂಬ ಹೆಸರಿನ ವೃದ್ದಾಶ್ರಮವನ್ನು ನೊಂದಣಿ ಮಾಡಿಕೊಂಡು ಚಿನ್ನಸಂದ್ರ ಗ್ರಾಮದಲ್ಲಿ ಒಂದು ವೃದ್ದಾಶ್ರಮವನ್ನು ನಡೆಸುತ್ತಿದ್ದೆ. ನಂತರ ಅಲ್ಲಿ ಮೂಲಭೂತ ಸೌಕರ್ಯ ಇಲ್ಲದ ಕಾರಣ ಇದೇ ಚಿಂತಾಮಣಿ ತಾಲ್ಲೂಕು ಕಟಮಾಚನಹಳ್ಳಿ ಗೇಟ್ ಮುಂದೆ ರಾಮು ರವರಿಗೆ ಸೇರಿದ ಕೊಠಡಿಗಳಲ್ಲಿ ಲೀಜ್ ಗೆ  ಪಡೆದು ವೃದ್ದಾಶ್ರಮವನ್ನು ಚಿನ್ನಸಂದ್ರ ಗ್ರಾಮದಿಂದ ಕಟಮಾಚನಹಳ್ಳಿ ಗೇಟ್ ಗೆ ಸ್ಥಳಾಂತರಿಸಿ ತಾನು ತಮ್ಮ ವೃದ್ದಾಶ್ರಮದಲ್ಲಿ ಜನರನ್ನು ನೋಡಿಕೊಂಡು ತನ್ನ ಮಕ್ಕಳೊಂದಿಗೆ ಅಲ್ಲಿಯೇ ಇರುತ್ತಾರೆ. ಹೀಗಿರುವಾಗ ಈ ದಿನ ದಿನಾಂಕ: 15/04/2021 ರಂದು ಸಂಜೆ 4.00 ಗಂಟೆ ಸಮಯದಲ್ಲಿ ತಾನು ತಮ್ಮ ವೃದ್ದಾಶ್ರಮದ ಮುಂದೆ ಇದ್ದಾಗ ತನ್ನ ಗಂಡ ಜಬೀವುಲ್ಲಾ ರವರು ತನ್ನ ಬಳಿ ಬಂದು ತನ್ನನ್ನು ಕುರಿತು “ನೀನು ನಿನ್ನ ಮಕ್ಕಳನ್ನು ಇಲ್ಲಯೇ ಬಿಟ್ಟು ನನ್ನ ಜೊತೆ ಬಂದು ಸಂಸಾರ ಮಾಡು” ಎಂದು ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಮೈ ಮೇಲೆ ಹೊಡೆದು ನಂತರ ಅಲ್ಲಿಯೇ ಬಿದ್ದಿದ್ದ ದೊಣ್ಣೆಯನ್ನು ತೆಗೆದುಕೊಂಡು ತನ್ನ ಬಲಭುಜಕ್ಕೆ, ಬೆನ್ನಿನ ಹಿಂದೆ ಹೊಡೆದು ನೋವನ್ನುಂಟು ಮಾಡಿ, “ನೀನು ವೃದ್ದಾಶ್ರಮ ಮಾಡಿಕೊಂಡು ಸಮಾಜ ಸೇವೆ ಮಾಡಿಕೊಂಡರೆ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲ, ಇಲ್ಲಿಯೇ ಸಾಯಿಸಿ ಬಿಡುತ್ತೇನೆ” ಎಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ತನ್ನ ಗಂಡ ಜಬೀವುಲ್ಲಾ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

2. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 58/2021 ಕಲಂ. 87 ಕೆ.ಪಿ ಆಕ್ಟ್ :-

     ದಿನಾಂಕ: 15/04/2021 ರಂದು ಸಂಜೆ 18:00 ಗಂಟೆಗೆ ನ್ಯಾಯಾಲಯದ ಪಿ.ಸಿ 367 ರವರು ಎನ್ ಸಿ ಆರ್ 53/2021 ರಲ್ಲಿ ಅನುಮತಿ ಪಡೆದು ಹಾಜರುಪಡಿಸಿದ್ದನ್ನು ಪಡೆದು ಸಾರಾಂಶವೇನೆಂದರೆ  ದಿನಾಂಕ:14/04/2021 ರಂದು ಸಂಜೆ 04.30 ಗಂಟೆಯ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಬಂದ ಖಚಿತ ಮಾಹಿತಿಯೇನೆಂದರೆ, ಚಿಂತಾಮಣಿ ನಗರದ ಕೆ.ಆರ್.ಬಡಾವಣೆಯ ಆರ್.ಕೆ.ನರ್ಸಿಂಗ್ ಆಸ್ಪತ್ರೆಯ ಪಕ್ಕದಲ್ಲಿರುವ ಆಸ್ಪತ್ರೆಯ ಖಾಲಿ ಜಾಗದಲ್ಲಿ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಹಣವನ್ನು ಪಣಕ್ಕಿಟ್ಟು ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ಖಚಿತಿ ಮಾಹಿತಿಯ ಮೇರೆಗೆ ನಾನು ಮತ್ತು ಸಿಬ್ಬಂದಿಗಳಾದ ನಾಗಭೂಷನ್, ಸಿ.ಹೆಚ್.ಸಿ-126, ಶ್ರೀ.ಸೋಮಶೇಖರಾಚಾರಿ, ಸಿ.ಹೆಚ್.ಸಿ-245, ಶ್ರೀ.ಸರ್ವೇಶ ಸಿ.ಪಿಸಿ-426, ಶ್ರೀ.ವೇಣು ಸಿಪಿಸಿ-190, ಮತ್ತು ಜೀಪ್ ಜಾಲಕರಾದ ಶ್ರೀ.ಆಂಜನೇಯಪ್ಪ ಎ.ಹೆಚ್.ಸಿ ರವರು ಕೆಎ-40-ಜಿ-138 ಸಂಖ್ಯೆ ಸರ್ಕಾರಿ ಜೀಪ್ ನಲ್ಲಿ ಮಾರುತಿ ವೃತ್ತದ ಬಳಿ ಪಂಚರನ್ನು ಬರಮಾಡಿಕೊಂಡು ವಿಚಾರ ತಿಳಿಸಿ ಅದೇ ವಾಹನದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಹಿಂಭಾಗದ ಮೈದಾನಕ್ಕೆ ಹೋಗಿ ಕಾಲ್ನಡಿಗೆಯಲ್ಲಿ ನಾವು ಹಾಗೂ ಪಂಚರು ಕೆ.ಆರ್.ಬಡಾವಣೆಯ ಆರ್.ಕೆ.ಆಸ್ಪತ್ರೆಯ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ 7 ಜನರು ಸ್ಥಳದಲ್ಲಿ ಕುಳಿತುಕೊಂಡು ಅಂದರ್ 100 ಬಾಹರ್ 100 ಎಂತ ಕೂಗುತ್ತಾ ಹಣವನ್ನು ಪಣಕ್ಕಿಟ್ಟು ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟವಾಡುತ್ತಿದ್ದು, ಪಂಚರ ಸಮಕ್ಷಮ ಅವರನ್ನು ಸುತ್ತುವರೆದು ಅವರಿಗೆ ಓಡಿಹೋಗದಂತೆ ಎಚ್ಚರಿಕೆ ನೀಡಿ ಅವರನ್ನು ಹಿಡಿದುಕೊಂಡು ಆವರ ಹೆಸರು ಮತ್ತು ವಿಳಾಸ ಕೇಳಲಾಗಿ 1] ಸಂದೀಪ್ ಬಿನ್ ರಾಮಚಂದ್ರಪ್ಪ, 34ವರ್ಷ, ಬಲಜಿಗರು, ಆಟೋ ಚಾಲಕ, ವಾಸ ಭಜನಗುಡಿ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಶಂಕರಮಠ, ಚಿಂತಾಮಣಿ ನಗರ ಸ್ವಂತ ಸ್ಥಳ ಕಟ್ಟಿಗೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು. 2] ಚಂದ್ರಬಾಬು ಬಿನ್ ಲೇ. ನಾರಾಯಣಪ್ಪ, 40ವರ್ಷ, ದೋಬಿ ಜನಾಂಗ, ಲಾರಿಡ್ರೈವರ್, ವಾಸ ಟ್ಯಾಂಕ್ ಬಂಡ್ ರಸ್ತೆ, ಕೆ.ಎಂ.ಕೃಷ್ಣಾರೆಡ್ಡಿ ರವರ ಮನೆಯ ರಸ್ತೆ, ಚಿಂತಾಮಣಿ ನಗರ. 3] ಗಂಗಾಧರ ಬಿನ್ ಕೃಷ್ಣಪ್ಪ, 42ವರ್ಷ, ಪ.ಜಾತಿ, ಗಾರೆಕೆಲಸ, ವಾಸ ಆಶ್ರಯ ಬಡಾವಣೆ, ವೆಂಕಟಾದ್ರಿ ಕಾಲೇಜು ಹಿಂಭಾಗ, ಚಿಂತಾಮಣಿ ನಗರ. 4] ಕುಬೇರ್ ಸಿಂಗ್ @ ಕುಮಾರ್ ಬಿನ್ ಲೇ. ಲಕ್ಷ್ಮಣ್ ಸಿಂಗ್, 32ವರ್ಷ,ರಜಫೂಥರು, ತಳ್ಳೋಬಂಡಿಯಲ್ಲಿ ಅಡಿಗೆ ಕೆಲಸ, ವಾಸ ಪಟಾಲಮ್ಮ ದೇವಸ್ಥಾನದ ಪಕ್ಕ ಅಗ್ರಹಾರ, ಚಿಂತಾಮಣಿ ನಗರ. 5] ನರಸಿಂಹರೆಡ್ಡಿ ಬಿನ್ ಲೇ. ನಾರಾಯಣಪ್ಪ, 40ವರ್ಷ, ವಕ್ಕಲಿಗರು, ಕಲ್ಲಹಳ್ಳಿಯಲ್ಲಿರುವ ಸಾಯಿಮಿತ್ರ ಪೈಪ್ ಫ್ಯಾಕ್ಟರಿಯಲ್ಲಿ ಕೆಲಸ, ವಾಸ 1ನೇ ಕ್ರಾಸ್ ಟ್ಯಾಂಕ್ ಬಂಡ್ ರಸ್ತೆ, ಚಿಂತಾಮಣಿ ನಗರ. 6] ಮೋಹನ್ ರೆಡ್ಡಿ ಬಿನ್ ಲೇ. ಮದ್ದೇರಿ ರಾಮಯ್ಯ, 45ವರ್ಷ, ವಕ್ಕಲಿಗರು, ಹೂವಿನ ವ್ಯಾಪಾರ, ವಾಸ ಕೆ.ಆರ್.ಬಡಾವಣೆ, ನಾರೆಪ್ಪಕುಂಟೆ ಚಿಂತಾಮಣಿ ನಗರ 7] ವೆಂಕಟೇಶ್ ಬಿನ್ ಲೇ. ಮುನಿರಾಜು, 29ವರ್ಷ, ಪ.ಜಾತಿ, ಆಟೋ ಡ್ರೈವರ್ ಕೆಲಸ, ವಾಸ ಟ್ಯಾಂಕ್ ಬಂಡ್ ರಸ್ತೆ, ಚಿಂತಾಮಣಿ ನಗರ ಎಂದು ತಿಳಿಸಿದ್ದು ಸ್ಥಳದಲ್ಲಿ ಪರಿಶೀಲಿಸಲಾಗಿ ಒಂದು ಪ್ಲಾಸ್ಟಿಕ್ ಚೀಲ ಹಾಕಿದ್ದು, ಅದರ ಮೇಲೆ ಇಸ್ಪೀಟು ಎಲೆಗಳು, ಹಣ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಇಸ್ಪೀಟು ಎಲೆಗಳನ್ನು ಎಣಿಸಲಾಗಿ ಒಟ್ಟು 52 ಇಸ್ಪೀಟು ಎಲೆಗಳು ಇದ್ದು, ಹಣ ಒಟ್ಟು 3570-00 ರೂ.ಗಳ ನಗದು ಹಣ ವಿರುತ್ತೆ. ಪಂಚರ ಸಮಕ್ಷಮ ಸದರಿ ಮಾಲುಗಳನ್ನು ಈ ದಿನ ಸಂಜೆ 05.00 ಗಂಟೆಯಿಂದ 06.30 ಗಂಟೆಯ ವರೆಗೆ ಪಂಚನಾಮೆಯನ್ನು ಜರುಗಿಸಿ ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ವರದಿಯನ್ನು ಪಡೆದು ಠಾಣಾ ಎನ್ ಸಿ ಆರ್ ನಂ  53/2021 ರಂತೆ ದಾಖಲಿಸಿ ನಂತರ ಅಸಂಜ್ಞೇಯ ಅಪರಾಧವಾಗಿರುದರಿಂದ ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ  ದಾಖಲಿಸಿಕೊಂಡಿರುತ್ತೆ.

 

3. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 42/2021 ಕಲಂ. 87 ಕೆ.ಪಿ ಆಕ್ಟ್ :-

     ದಿನಾಂಕ:15/04/2021 ರಂದು ಸಂಜೆ 18-45 ಗಂಟೆಗೆ ಡಿಸಿಬಿ –ಸಿಇಎನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವರಾದ ರಾಜಣ್ಣ ನ್ ರವರು ಆಸಾಮಿಗಳು, ಮಾಲುಹಾಗೂ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ಗಣಕಯಂತ್ರ ಮುದ್ರಿತ ವರದಿಯ ಸಾರಾಂಶವೆನೇಂದರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರವರಾದ ರಾಜಣ್ಣ.ಎನ್ ಆದ ನಾನು ಮತ್ತು ಸಿಬ್ಬಂದಿಯವರೊಂದಿಗೆ ಈ ದಿನ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ಗಸ್ತು ಕರ್ತವ್ಯದಲ್ಲಿ ಗಸ್ತು ಮಾಡಿಕೊಂಡು ದ್ಯಾವಪ್ಪಗುಡಿ ಗ್ರಾಮಕ್ಕೆ ಸಂಜೆ 04-30 ಗಂಟೆಗೆ ಬಂದಾಗ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ, ಶಿಡ್ಲಘಟ್ಟ ತಾಲ್ಲೂಕಿನ ಮದ್ದಯ್ಯಗಾರಪಲ್ಲಿ ಗ್ರಾಮದ ಬಳಿ ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ಕೋಳಿ ಪಂದ್ಯ ನಡೆಯುತ್ತಿರುವುದಾಗಿ ಮಾಹಿತಿ ಬಂದಿದ್ದು, ನಂತರ ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ಕರೆಯನ್ನು ಮಾಡಿ ಕೃಷ್ಣಪ್ಪ, ಎ.ಎಸ್.ಐ ಮತ್ತು ಚಂದ್ರಶೇಖರ್, ಪಿಸಿ-200 ರವರುಗಳನ್ನು ಸ್ಥಳಕ್ಕೆ ಬರಮಾಡಿಕೊಂಡು ನಂತರ ದ್ಯಾವಪ್ಪಗುಡಿ ಬಸ್ ನಿಲ್ದಾಣದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ಬಂದ ಮಾಹಿತಿಯನ್ನು ತಿಳಿಸಿ ನಂತರ ನಾವು ಮತ್ತು ಪಂಚರು ಮೇಲ್ಕಂಡ ಸ್ಥಳಕ್ಕೆ ಹೋಗಿ ಕೋಳಿ ಪಂದ್ಯ ಜೂಜಾಟದ ಮೇಲೆ ದಾಳಿ ಮಾಡಿದ್ದು, ದಾಳಿಯಲ್ಲಿ 08 ಜನ ಆರೋಪಿತರು ಸಿಕ್ಕಿಬಿದ್ದಿರುತ್ತಾರೆ. ಕೋಳಿ ಪಂದ್ಯ ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 24,400/- ರೂ ನಗದು ಹಣ ಮತ್ತು ಜೂಜಾಟಕ್ಕೆ ಬಳಸಿದ್ದ 2 ಜೀವಂತ ಕೋಳಿ ಹುಂಜಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ಸಿಕ್ಕಿ ಬಿದ್ದ 08 ಜನ ಆರೋಪಿತರನ್ನು, ಮಾಲು ಮತ್ತು ಅಸಲು ಪಂಚನಾಮೆಯೊಂದಿಗೆ ವರದಿಯನ್ನು ನೀಡುತ್ತಿದ್ದು, ಈ ಬಗ್ಗೆ ಮುಂದಿನ ಕ್ರಮಜರುಗಿಸಲು ಕೋರಿ ನೀಡಿದ ವರದಿಯನ್ನು ಪಡೆದು ಠಾಣಾ ಮೊ.ಸಂಖ್ಯೆ:42/2020 ಕಲಂ:87 ಕೆ.ಪಿ.ಆಕ್ಟ್ ರೀತ್ಯಾ  ಪ್ರಕರಣ ದಾಖಲಿಸಿರುತ್ತೆ.

 

4. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 69/2021 ಕಲಂ. 279,304(A) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್ :-

     ದಿನಾಂಕ:16/04/2021 ರಂದು ಪಿರ್ಯಾದಿದಾರರಾದ ಶ್ರೀ ಚಂದ್ರಶೇಖರ್ ಬಿನ್ ರಂಗಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ತಂದೆಯಾದ ರಂಗಪ್ಪ ರವರಿಗೆ ಇಬ್ಬರೂ ಹೆಂಡತಿಯರಿದ್ದು, 1ನೇ ತಿಪ್ಪಕ್ಕ ಹಾಗೂ 2ನೇ ನಮ್ಮ ತಾಯಿ ಪಾಪಮ್ಮ ರವರಾಗಿರುತ್ತಾರೆ. ನಮ್ಮ ದೊಡ್ಡಮ್ಮಳಾದ ತಿಪ್ಪಕ್ಕ ಮತ್ತು ನಮ್ಮ ತಂದೆ ತಾಯಿ ಹಾಗೂ ನಾವೆಲ್ಲರು ಒಟ್ಟಿಗೆ ಇರುತ್ತೇವೆ. ಹೀಗಿರುವಾಗ ನಮ್ಮ ದೊಡ್ಡಮ್ಮಳಾದ ತಿಮ್ಮಕ್ಕ ರವರು ಈ ದಿನ ದಿನಾಂಕ:16/04/2021 ರಂದು ಮುಂಜಾನೆ 1-30 ಗಂಟೆಯ ಸಮಯದಲ್ಲಿ ಶೌಚಾಲಯಕ್ಕೆಂದು ನಮ್ಮ ಮನೆಯಿಂದ ಎಸ್.ಹೆಚ್-9 ರಸ್ತೆಯ ಮದ್ದೂರಮ್ಮ ದೇವಸ್ಥಾನದ ಕಡೆಗೆ ಹೋಗಿದ್ದು, ವಾಪಾಸ್ ಎಷ್ಟು ಸಮಯವಾದರೂ ಮನೆಗೆ ಬಾರದೆ ಇರುವ ಕಾರಣ ನಾವು ಸುಮಾರು 2-30 ಗಂಟೆಯ ಸಮಯದಲ್ಲಿ ಹುಡುಕಿಕೊಂಡು ಹೋದಾಗ ನಮ್ಮ ದೊಡ್ಡಮ್ಮಳಾದ ತಿಪ್ಪಕ್ಕ ರವರು ಎಸ್.ಹೆಚ್-9 ರಸ್ತೆಯ ಮದ್ದೂರಮ್ಮ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ರಸ್ತೆಯಲ್ಲಿ ಬಿದ್ದಿದ್ದು, ಹೋಗಿ ನೋಡಲಾಗಿ ನಮ್ಮ ದೊಡ್ಡಮ್ಮಳಿಗೆ ಎರಡೂ ಕಾಲುಗಳಿಗೆ ಮತ್ತು ತಲೆಗೆ ರಕ್ತಗಾಯವಾಗಿದ್ದು, ಯಾವುದೋ ವಾಹನದ ಚಾಲಕ ಯಾವುದೋ ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ದೊಡ್ಡಮ್ಮಳಿಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಹೊರಟು ಹೋಗಿದ್ದು, ಸದರಿ ಅಪಘಾತದಿಂದ ನಮ್ಮ ದೊಡ್ಡಮ್ಮ ಸ್ಥಳದಲ್ಲೇ ಮೃತಪಟ್ಟಿದ್ದು, ಮೃತ ದೇಹವನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದ್ದು, ನಮ್ಮ ದೊಡ್ಡಮ್ಮಳಿಗೆ ಅಪಘಾತಪಡಿಸಿ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಹೊರಟು ಹೋದ ವಾಹನ ಮತ್ತು ವಾಹನದ ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 

5. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 70/2021 ಕಲಂ. 143,147,323,324,354,504,506,149 ಐ.ಪಿ.ಸಿ :-

          ದಿನಾಂಕ:16/04/2021 ರಂದು ಹೆಚ್.ಸಿ.76 ಶ್ರೀ ಹನುಮಂತಪ್ಪ ರವರು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಗಾಯಾಳುವಾದ ಶ್ರೀ ಮಂಜುನಾಥ ಬಿನ್ ಈರಕೊಂಡಪ್ಪ ರವರಿಂದ ಹೇಳಿಕೆಯನ್ನು ತಂದು ಹಾಜರುಪಡಿಸಿದರ ಸಾರಾಂಶವೇನೆಂದರೆ ತಾನು ಈ ಹಿಂದೆ ಆಟೋ ಓಡಿಸುತ್ತಿದ್ದಾಗ ತನ್ನ ಆಟೋದ ಟಾರ್ಪಲ್ ಹರಿದು ಹಾಕಿರುವ ವಿಚಾರದಲ್ಲಿ ನಮಗೂ ನಮ್ಮ ಗ್ರಾಮದ ಆನಂದ ಮತ್ತು ಇತರರಿಗೆ ಗಲಾಟೆಗಳಾಗಿದ್ದು, ಆಗ ನಾನು ಸುಮ್ಮನಾಗಿಬಿಟ್ಟಿದ್ದು, ಹೀಗಿರುವಾಗ ಇದೇ ವಿಚಾರದಲ್ಲಿ ದಿನಾಂಕ:15/04/2021 ರಂದು ಸಂಜೆ 7-00 ಗಂಟೆಗೆ ತಾನು ತಮ್ಮ ಮನೆಯಲ್ಲಿ ಊಟ ಮಾಡುತ್ತಿದ್ದಾಗ ತಮ್ಮ ಗ್ರಾಮದ 1) ಪ್ರದೀಪ ಬಿನ್ ಗಂಗಣ್ಣ, 2) ಸತೀಶ ಬಿನ್ ಮುದ್ದಮ್ಮ 3) ಭರತ್ ಬಿನ್ ನರಸಿಂಹಪ್ಪ, 4) ಆನಂದ ಬಿನ್ ಗಂಗಣ್ಣ ಹಾಗೂ 5) ಸೀನಾ ಎಲ್ಲರೂ ಆದಿ ಕರ್ನಾಟಕ ಜನಾಂಗ ರವರ ನಮ್ಮ ಮನೆಯ ಬಳಿ ಬಂದು ತನ್ನನ್ನು ಹೊರಗೆ ಕರೆದು ಏಕಾಏಕಿ ಹಳೇ ದ್ವೇಷದಿಂದ ತನ್ನ ಮೇಲೆ ಗಲಾಟೆ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಅದರಲ್ಲಿ ಪ್ರದೀಪ ಎಂಬುವನು ಒಂದು ಮಚ್ಚಿನಿಂದ ತನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ಉಳಿದವರು ದೊಣ್ಣೆಗಳಿಂದ ಮತ್ತು ಕೈಗಳಿಂದ ತನ್ನ ಮೈಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿದ್ದು, ಆಗ ನಾನು ಕಿರುಚಿಕೊಂಡಾಗ ತನ್ನ ತಾಯಿಯಾದ ಅಂಜಮ್ಮ ಕೊಂ ಈರಕೊಂಡಪ್ಪರವರು ಬಿಡಿಸಲು ಬಂದಾಗ ಸತೀಶ ಮತ್ತು ಭರತ್ ರವರು ನಮ್ಮ ತಾಯಿಯನ್ನು ಅವಾಚ್ಯ ಶಬ್ದಗಳಿಂದ ಬೈದು ತನ್ನ ತಾಯಿಯ ಜುಟ್ಟನ್ನು ಹಿಡಿದು ಎಳೆದಾಡಿ ಕೈಗಳಿಂದ ಮೈಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿ ತನ್ನನ್ನು ಕುರಿತು ನೀನು ನಮ್ಮ ತಂಟೆಗೆ ಬಂದರೆ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆಯನ್ನು ಹಾಖಿದ್ದು, ಅಷ್ಟರಲ್ಲಿ ತಮ್ಮ ಗ್ರಾಮದ ಮಂಜುನಾಥ ಬಿನ್ ಸೋಮಪ್ಪ, ಮುನೇಂದ್ರ ಬಿನ್ ಆದಿನಾರಾಯಣಪ್ಪ ಮತ್ತು ಗಂಗಾಧರ ಬಿನ್ ಹನುಮಂತಪ್ಪ ರವರು ಬಂದು ಜಗಳವನ್ನು ಬಿಡಿಸಿ ಗಾಯಗೊಂಡಿದ್ದ ನಮ್ಮನ್ನು ಯಾವುದೋ ಒಂದು ಆಟೋದಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿರುತ್ತಾರೆ. ವಿನಾ ಕಾರಣ ನಮ್ಮ ಮೇಲೆ ಜಗಳ ತೆಗೆದು ಹಲ್ಲೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 

6. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 71/2021 ಕಲಂ. 87 ಕೆ.ಪಿ ಆಕ್ಟ್ :-

          ದಿನಾಂಕ:16/04/2021 ರಂದು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ದಾಖಲಿಸಿದ ಪ್ರಕರಣದ ಸಾರಾಂಶವೇನೆಂದರೆ ಲಕ್ಷ್ಮಿನಾರಾಯಣ ಪಿ.ಎಸ್.ಐ ಮಂಚೇನಹಳ್ಳಿ ಪೊಲೀಸ್ ಠಾಣೆ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ನಾನು ಈ ದಿನ ದಿನಾಂಕ:15/04/2021 ರಂದು ಮದ್ಯಾಹ್ನ 2-30 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ತೊಂಡೇಬಾವಿ ಹೋಬಳಿ ಜಿ.ಬೊಮ್ಮಸಂದ್ರ ಗ್ರಾಮದ ಬಳಿ ಇರುವ ಸರ್ಕಾರಿ ಹಳ್ಳದ ಹೊಂಗೆ ಮರದ ಕೆಳಗೆ ಯಾರೋ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು & ಮಂಚೇನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ.219 ಶ್ರೀನಿವಾಸಮೂರ್ತಿ, ಪಿಸಿ-537 ಆನಂದ್ ಕುಮಾರ್, ಪಿ.ಸಿ.111 ಲೋಕೇಶ, ಪಿ.ಸಿ.175 ನವೀನ್ ಕುಮಾರ್, ಪಿ.ಸಿ.483 ರಮೇಶ್, ಪಿ.ಸಿ.283 ಅರವಿಂದ ಮತ್ತು ಜೀಪ್ ಚಾಲಕ ಎಪಿಸಿ 120  ನಟೇಶ್ ರವರು ಮತ್ತು ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40, ಜಿ-395 ರಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಮದ್ಯಾಹ್ನ 3-00 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಪಂಚರು ಮತ್ತು ನಾವು ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಂದರ್ 100/- ಬಾಹರ್ 100/- ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿಯವರನ್ನು ನಾವು ಸುತ್ತುವರೆದು ಜೂಜಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿ ಅವರನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ನಾಗರಾಜ ಬಿನ್ ಲೇಟ್ ಚಿಕ್ಕಬಡಿಗಪ್ಪ, 42 ವರ್ಷ, ಕೂಲಿ ಕೆಲಸ, ಆದಿಕರ್ನಾಟಕ ಜನಾಂಗ, ವಾಸ ಜಿ.ಬೊಮ್ಮಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು 2) ಗಂಗಾಧರಪ್ಪ ಬಿನ್ ಲೇಟ್ ಮೈಲಾರಪ್ಪ, 57 ವರ್ಷ, ಆದಿಕರ್ನಾಟಕ ಜನಾಂಗ, ಕೂಲಿ ಕೆಲಸ, ವಾಸ ಜಿ.ಬೊಮ್ಮಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು 3) ಕೃಷ್ಣಪ್ಪ ಬಿನ್ ಲೇಟ್ ಅಂಜಿನಪ್ಪ, 41 ವರ್ಷ, ಆದಿಕರ್ನಾಟಕ ಜನಾಂಗ, ಕೂಲಿ ಕೆಲಸ ವಾಸ ಜಿ.ಬೊಮ್ಮಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು  4) ನರಸಿಂಹಪ್ಪ ಬಿನ್ ಗಂಗಪ್ಪ, 55 ವರ್ಷ, ಆದಿಕರ್ನಾಟಕ, ವ್ಯಾಪಾರ ವಾಸ ಜಿ.ಬೊಮ್ಮಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು 5) ಶಂಕರ ಬಿನ್ ಮೈಲಾರಪ್ಪ, 38 ವರ್ಷ, ಆದಿಕರ್ನಾಟಕ, ಪೆಂಟಿಂಗ್ ಕೆಲಸ, ವಾಸ ಜಿ.ಬೊಮ್ಮಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು, 6) ಶಂಕರಪ್ಪ ಬಿನ್ ಜಿ.ಗಂಗಪ್ಪ, 43 ವರ್ಷ, ಕ್ಲಿನರ್  ಕೆಲಸ, ಆದಿಕರ್ನಾಟಕ, ವಾಸ ಜಿ.ಬೊಮ್ಮಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಸದರಿಯವರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದ್ದು, ನಂತರ ಪಂಚನಾಮೆಯ ಮೂಲಕ ಸ್ಥಳದಲ್ಲಿ ದೊರೆತ 2400/- ( ಎರಡು ಸಾವಿರದ ನಾಲ್ಕು ನೂರು ರೂಪಾಯಿಗಳು ಮಾತ್ರ.)  ರೂ ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಪೇಪರ್ ಅನ್ನು ಮದ್ಯಾಹ್ನ 3-30 ಗಂಟೆಯಿಂದ 4-30 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಮಾಲನ್ನು ವಶಪಡಿಸಿಕೊಂಡು ಮಾಲು, ಮಹಜರ್ & ಆರೋಪಿತರೊಂದಿಗೆ ಸಂಜೆ 5-00 ಗಂಟೆಗೆ ಠಾಣೆಗೆ ವಾಪಾಸ್ ಬಂದು ಆರೋಪಿತರ ಮೇಲೆ ಮುಂದಿನ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಲು ಸ್ವತಃ ಠಾಣಾ ಎನ್.ಸಿ.ಆರ್ ನಂಬರ್ 111/2021 ರಂತೆ ದಾಖಲಿಸಿಕೊಂಡು ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಮೇಲ್ಕಂಡ ಕಲಂ ರೀತ್ಯ ಪ್ರಕರಣ ದಾಖಲಿಸಿರುತ್ತದೆ.

 

7. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 40/2021 ಕಲಂ. 143,147,323,427,447,504,506,149 ಐ.ಪಿ.ಸಿ:-

          ದಿನಾಂಕ:15/04/2021 ರಂದು ಸಂಜೆ 5:00 ಗಂಟೆಗೆ ಪಿರ್ಯಾದಿ ಬಿ. ಮಹೇಶ್ ಬಾಬು ಬಿನ್ ಎಂ. ಬಸವರಾಜು, 40 ವರ್ಷ, ಒಕ್ಕಲಿಗರು, ಜಿರಾಯ್ತಿ, ವಾಸ: ಬೀಡಿಗಾನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನ್ನ ತಂದೆ ಬಸವರಾಜು ರವರ ಹೆಸರಿನಲ್ಲಿರುವ ಚಿಕ್ಕಬಳ್ಳಾಪುರ ತಾಲ್ಲೂಕು, ನಂದಿ ಹೋಬಳಿ, ಬೀಡಿಗಾನಹಳ್ಳಿ ಗ್ರಾಮದ ಸರ್ವೆ ನಂ:88/2 ರಲ್ಲಿ 1 ಎಕರೆ 7 ಗುಂಟೆ ಜಮೀನು ಇದ್ದು ಪಕ್ಕದ ಜಮೀನು ಮಾಲಿಕರಾದ ಶ್ರೀಮತಿ ಅಶ್ವಥ್ಥಮ್ಮ ಎಂಬುವರು ಮತ್ತು ಈಕೆಯ ಗಂಡ ಗಂಗಾಧರ್ ರವರುಗಳು ತಮ್ಮ ಜಮೀನಿನಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಒತ್ತುವರಿ ಮಾಡಿಕೊಂಡಿರುವ ಜಮೀನು ನಮ್ಮದೆಂದು ತಕರಾರು ತೆಗೆದಿದ್ದರಿಂದ ತಮ್ಮ ತಂದೆ ಮತ್ತು ತಾನು ಸೇರಿ ಅಶ್ವಥ್ಥಮ್ಮ ಮತ್ತು ಗಂಗಾಧರ್ ರವರ ವಿರುದ್ದ ಚಿಕ್ಕಬಳ್ಳಾಪುರ ಸಿವಿಲ್ ನ್ಯಾಯಾಲಯದಲ್ಲಿ ಓ.ಎಸ್ ನಂ:457/2019 ರಂತೆ ದಾವೆ ಹೂಡಿದ್ದು ಸದರಿ ದಾವೆಯು ವಿಚಾರಣೆ ನಡೆದು ತಮ್ಮ ಪರವಾಗಿ ಆದೇಶವಾಗಿರುತ್ತೆ. ಸದರಿ ಆದೇಶದ ಮೇರೆಗೆ ದಿನಾಂಕ:15/04/2021 ರಂದು ಸರ್ವೆ ಮಾಡಿ ಜಮೀನಿನ ಗಡಿಯನ್ನು ಸರ್ವೆ ಅಧಿಕಾರಿಗಳು ಗುರ್ತಿಸಿ ಗುರ್ತು ಕಲ್ಲು ಮತ್ತು ಕಲ್ಲು ಕೂಚಗಳನ್ನು ಹಾಕಿಸಿರುತ್ತಾರೆ. ಜಮೀನಿನ ಗಡಿ ಗುರ್ತಿಸಿದ ಕಲ್ಲುಗಳನ್ನು ಮತ್ತು ಕಲ್ಲು ಕೂಚಗಳನ್ನು ಇದೇ ದಿನ ಮದ್ಯಾಹ್ನ 3:00 ಗಂಟೆಗೆ ಅಶ್ವಥ್ಥಮ್ಮ, ಗಂಗಾಧರ್, ಇವರ ಮಕ್ಕಳಾದ ವಿಜಯ್ ಕುಮಾರ್, ಸುನೀಲ್ ಕುಮಾರ್, ಸುಭಾಷಿಣಿ ರವರುಗಳು ಹಾಗೂ ಕಮಲಮ್ಮ ಕೋಂ ಲೇಟ್ ಅಶ್ವಥ್ಥಪ್ಪ ರವರುಗಳು ಸೇರಿಕೊಂಡು ಸದರಿ ತಮ್ಮ ಜಮೀನಿನೊಳಕ್ಕೆ ಅಕ್ರಮ ಪ್ರವೇಶ ಮಾಡಿ ಸುಮಾರು 5-6 ಸರ್ವೆ ಮಾಡಿ ಗುರ್ತಿಸಿ ಕೊಟ್ಟಿದ್ದ ಗುರ್ತು ಕಲ್ಲುಗಳನ್ನು ಮತ್ತು ಕಲ್ಲು ಕೂಚಗಳನ್ನು ಜಖಂಗೊಳಿಸಿ ನಷ್ಟ ಉಂಟು ಮಾಡಿರುತ್ತಾರೆ. ಇದನ್ನು ಕೇಳಲು ಹೋಗಿದ್ದಕ್ಕೆ ಮೇಲ್ಕಂಡವರು ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ತನಗೆ ಮತ್ತು ತಮ್ಮ ತಂದೆಗೆ ಮೈಮೇಲೆ ಹೊಡೆದು, ಕಾಲುಗಳಿಂದ ಒದ್ದು ಇನ್ನೊಮ್ಮೆ ಈ ಜಾಗದಲ್ಲಿ ಸರ್ವೆ ಕಲ್ಲುಗಳನ್ನು ಹಾಕಿಸಿದ್ದೇ ಆಗಿದ್ದಲ್ಲಿ ನಿಮ್ಮನ್ನು ಪ್ರಾಣ ಸಹಿತ  ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಈ ಕತ್ಯವನ್ನು ತಮ್ಮ ಗ್ರಾಮದ ಮುನಿರಾಜು ಬಿನ್ ಮುನಿನಾರಾಯಣಪ್ಪ, ವಿಜಯ ಕುಮಾರ್ ಬಿನ್ ದ್ಯಾವಪ್ಪ, ರಘು ಬಿನ್ ದ್ಯಾವಪ್ಪ ರವರು ನೋಡಿರುತ್ತಾರೆ. ಆದ್ದರಿಂದ ತಮ್ಮ ಜಮೀನಿನಲ್ಲಿ  ಅಕ್ರಮ ಪ್ರವೇಶ ಮಾಡಿ ಸರ್ವೆ ಕಲ್ಲುಗಳನ್ನು ಮತ್ತು ಕಲ್ಲು ಕೂಚಗಳನ್ನು ಜಖಂಗೊಳಿಸಿ ನಷ್ಟು ಉಂಟು ಮಾಡಿ ತಮ್ಮನ್ನು ಬೈದು, ಹೊಡೆದು, ಪ್ರಾಣ ಬೆದರಿಕೆ ಹಾಕಿರುವ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ.

 

8. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ. 25/2021 ಕಲಂ. 323,504,506,34 ಐ.ಪಿ.ಸಿ:-

          ದಿನಾಂಕ:15-04-2021 ರಂದು ಸಂಜೆ 16-30 ಗಂಟೆಗೆ ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿಯವರಾದ CPC-174 ಯಮನೂರಪ್ಪ.ಜಿ.ಹದರಿ ರವರು NCR NO.29/2021 ರಲ್ಲಿ ಘನ ನ್ಯಾಯಾಲಯದ ಅನುಮತಿ ಆದೇಶ ಪತ್ರವನ್ನು ಪಡೆದುಕೊಂಡು ಬಂದು ಹಾಜರುಪಡಿಸಿದ್ದು, ಘನ ನ್ಯಾಯಾಲಯದ ಆದೇಶದಂತೆ ದಾಖಲಿಸಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ಶ್ರೀಮತಿ.ರೇಣುಕ ಕೋಂ ನರಸಿಂಹಮೂರ್ತಿ, ಆರ್.ನಲ್ಲಗುಟ್ಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ತಮ್ಮ ತಂದೆಗೆ ಕಾಲಿಗೆ ಚಿಕಿತ್ಸೆ ಕೊಡಿಸಲು ಚಿಕ್ಕಬಳ್ಳಾಪುರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ತಮ್ಮ ಅಕ್ಕನ ಮನೆಯಲ್ಲಿ ತಮ್ಮ ತಂದೆಯನ್ನು ಬಿಟ್ಟು ತಾನು ತನ್ನ ಸ್ವಂತ ಊರಾದ ಆರ್.ನಲ್ಲಗುಟ್ಲಪಲ್ಲಿಗೆ ದಿನಾಂಕ:15/03/2021 ರಂದು ಸಂಜೆ ಬಂದಿರುವುದಾಗಿ, ಆಗ ತನ್ನ ಅಜ್ಜಿಯಾದ ರಾಮಕ್ಕರವರು “ನನ್ನ ಮಗನನ್ನೂ ಸಹ ನಿಮ್ಮ ತಾಯಿಯಂತೆ ಸಾಯಿಸಲು ಕರೆದುಕೊಂಡು ಹೋಗಿದ್ದಿಯಾ” ಎಂದು ಮನೆಗೆ ಬಂದು ಗಲಾಟೆ ಮಾಡಿರುವುದಾಗಿ,  ತಮ್ಮ ಚಿಕ್ಕಪ್ಪನಾದ ವೆಂಕಟರಮಣಪ್ಪ ಬಿನ್ ವೆಂಕಟರಾಯಪ್ಪ, ಅವರ ಮಕ್ಕಳಾದ ಕಾಮೇಶ ಮತ್ತು ಕಾರ್ತಿಕ್ ಹಾಗೂ ನಮ್ಮ ಚಿಕ್ಕಮ್ಮ ದೇವಮ್ಮರವರು ಎಲ್ಲರೂ ಸೇರಿ ಗುಂಪು ಕಟ್ಟಿಕೊಂಡು ಬಂದು ತನ್ನ ಚಿಕ್ಕಪ್ಪ ವೆಂಕಟರಮಣಪ್ಪ ಕಟ್ಟಿಗೆಯಿಂದ ತನ್ನ ಎಡಗೈ ಭುಜ, ತಲೆ ಮೇಲೆ ಹೊಡೆದು ನಂತರ ತನ್ನ ಬಲಗೈ ಬೆರಳು ಸಹ ತಿರುಚಿರುವುದಾಗಿ, ತಮ್ಮ ಚಿಕ್ಕಮ್ಮನಾದ ದೇವಮ್ಮರವರು ತನ್ನ ಕೂದಲನ್ನು ಹಿಡಿದು ಎಳೆದಾಡಿ ಕೆಳಗಡೆ ತಳ್ಳಿರುವುದಾಗಿ, ಹಾಗೂ ಅವರ ಮಕ್ಕಳೂ ಸಹ ಕಾಲಿನಿಂದ ಒದ್ದು ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ, ಹೀಗಾಗಿ ಈ ಮೇಲ್ಕಂಡರವರನ್ನು ಠಾಣೆಗೆ ಕೆರೆಯಿಸಿ ವಿಚಾರಣೆ ಮಾಡಿ ತನ್ನ ತಂಟೆಗೆ ಬಾರದಂತೆ ಬಂದೋಬಸ್ತ್ ಮಾಡಿಕೊಡಲು ಕೋರಿ ಪಿರ್ಯಾದು.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 106/2021 ಕಲಂ. 153A,295A,34 ಐ.ಪಿ.ಸಿ & 3(1)(r),3(1)(s),3(1)(t),3(1)(z) The SC & ST (Prevention of Atrocities) Amendment Act 2015:-

          ದಿನಾಂಕ:16.04.2021 ರಂದು ಬೆಳಿಗ್ಗೆ 11.30 ಗಂಟೆಗೆ ಪಿರ್ಯಾದಿದಾರರಾದ ನರಸಿಂಹಮೂರ್ತಿ ಬಿನ್ ಮುನಿಯಪ್ಪ, 41 ವರ್ಷ, ಪರಿಶಿಷ್ಟ ಜಾತಿ, ಇದ್ಲೂಡು ಗ್ರಾಮ ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತಾನು ಶಿಡ್ಲಘಟ್ಟ ತಾಲ್ಲೂಕು ಕಸಬಾ ಹೋಬಳಿ ಇದ್ಲೂಡು ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದವನಾಗಿದ್ದು ತಮ್ಮ ಗ್ರಾಮದಲ್ಲಿ ಸುಮಾರು 10 ವರ್ಷಗಳಿಂದ ಡಾ.ಬಿ.ಆರ್ ಅಂಬೇಡ್ಕರ್ ನಾಮಫಲಕವನ್ನು ಇದ್ಲೂಡು ಕುತಾಂಡಹಳ್ಳಿ ರಸ್ತೆಯ ಪಕ್ಕದಲ್ಲಿ ಕಾಲೋನಿಯ ಬಳಿ ಸ್ಥಾಪಿಸಿರುತ್ತೇವೆ. ಹೀಗಿರುವಾಗ ದಿನಾಂಕ:14/04/2021 ರಂದು ಡಾ.ಬಿ.ಆರ್ ಅಂಬೇಡ್ಕರ್ ಜಯಂತಿಯ ಪ್ರಯುಕ್ತ ತಾನು ಫಲಕವನ್ನು ಆಲಂಕಾರ ಮಾಡಿದ್ದೆವು, ಜೊತೆಗೆ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವ ಚಿತ್ರವುಳ್ಳ ಪ್ಲೇಕ್ಸ್ ಗಳನ್ನು ಸಹ ಹಾಕಿ ಜಯಂತಿಯನ್ನು ಆಚರಣೆ ಮಾಡುತಿದ್ದಾಗ ಇದೇ ಗ್ರಾಮದ ಗೊಲ್ಲರ ಜಾತಿಗೆ ಸೇರಿದ ಮುನಿರಾಜು ಬಿನ್ ನರಸಿಂಹಪ್ಪ, ನಾಗರಾಜು ಬಿನ್ ನರಸಿಂಹಪ್ಪ, ಅಶೋಕ್ ಬಿನ್ ಬಾಷ@ವೆಂಕಟರಾಮಪ್ಪ, ಗಜೇಂದ್ರ ಬಿನ್ ಮುನಿಯಪ್ಪ @ ಮುದ್ದಲಪ್ಪ ಇತರರು ನಮ್ಮ ಕಾಲೋನಿಯ ಬಳಿ ಬಂದು ರಸ್ತೆಯ ವಿಚಾರವನ್ನು ನೆಪ ಮಾಡಿ ಜಗಳ ತೆಗೆದು ತಮಗೆ ಬೆದರಿಕೆ ಹಾಕಿದ್ದರು ಮತ್ತು ಈ ದಿನ ನೀವು ಡಾ.ಬಿ.ಆರ್ ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡಿದರೆ ಮತ್ತು ಈ ಜಾಗದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ಲೇಕ್ಸ್ ಹಾಕಬಾರದೆಂದು ಅಡ್ಡಿಪಡಿಸಿ ಒಂದು ವೇಳೆ ಹಾಕಿದರೆ ನಿಮ್ಮ ಪರಿಸ್ಥಿತಿ ನೆಟ್ಟಗೆ ಇರುವುದಿಲ್ಲ ನಿನ್ನ ಅಮ್ಮನ್ ಹೊಲೆಮಾದಿಗರನಾ ಕೇಯಾ ಅಂತ ಬೆದರಿಗೆ ಹಾಕಿ ಈ ಊರಿನಲ್ಲಿ ನೀವು ಕಮ್ಮಿ ಜಾತಿ ನನ್ನ ಮಕ್ಕಳು ನಿಮ್ಮದು ಅತಿಯಾಗಿದೆ ಎಂದು ನಿಂದಿಸಿ ಅವಾಚ್ಯ ಶಬ್ದಗಳಿಂದ ಬೈದು ನೀವು ಹೀಗೆ ಮುಂದುವರೆಸಿದರೆ ಈ ಊರಿನಿಂದ ನಿಮ್ಮೆಲ್ಲರನ್ನು ಸಾಮಾಜಿಕವಾಗಿ ಬಹಿಸ್ಕಾರ ಮಾಡುತ್ತೆವೆಂದು, ನಿಮ್ಮಲ್ಲಿ ಒಬ್ಬೋಬ್ಬರನ್ನೇ ಹೇಗೆ ಮಟ್ಟ ಹಾಕಬೆಕೆಂದು ನಮಗೆ ಗೊತ್ತಿದೆ ಎಂದು ಹೆದರಿಸಿದ್ದರು. ನಾವು ಇದು ಯಾವುದನ್ನೂ ಲೆಕ್ಕಿಸದೇ ತಮ್ಮ ಪಾಡಿಗೆ ತಾವುಗಳು ಜಯಂತಿಯನ್ನು ಆಚರಣೆ ಮಾಡಿದೆವು ಆ ನಂತರ ಮೇಲ್ಕಂಡವರು ದಿನಾಂಕ:14/4/2021 ಮತ್ತು ದಿನಾಂಕ:15/4/2021 ರಂದು ಅದೇ ರಸ್ತೆಯಲ್ಲಿ ಬೈಕ್ಗಳನ್ನು ಅತಿವೇಗವಾಗಿ ಓಡಿಸಿಕೊಂಡು ಜೋರಾಗಿ ಕೂಗು ಹಾಕಿಕೊಂಡು ತಮ್ಮನ್ನು ಗುರಾಯಿಸಿಕೊಂಡು ಸುಮಾರು 5-6 ಬಾರಿ ಓಡಾಡಿದರು. ತಾವು ದಿನಾಂಕ:16/4/2021 ರಂದು ಬೆಳಿಗ್ಗೆ 5.00 ಗಂಟೆ ಸಮಯದಲ್ಲಿ ಹೋಗಿ ನೋಡಿದಾಗ ಡಾ.ಬಿ.ಆರ್ ಅಂಬೇಡ್ಕರ್ ಪ್ಲೆಕ್ಸ್ನ್ನು ಹರಿದು ಹಾಕಿ ನಾಮ ಫಲಕಕ್ಕೆ ಸಗಣಿ ಬಳಿದು ವಿರೂಪಗೊಳಿಸಿ ಅವಮಾನಗೊಳಿಸಿರುತ್ತಾರೆ. ಈ ಕೃತ್ಯವನ್ನು ಮೇಲ್ಕಂಡವರು ಮಾಡಿರುತ್ತಾರೆಂದು ತಮಗೆ ಅನುಮಾನ ಇರುತ್ತೆ.  ಆದ್ದರಿಂದ ಈ ದೇಶ ಕಂಡ ಮಹಾ ಮಾನವತಾವಾದಿ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವ ಚಿತ್ರವಿರುವ ನಾಮ ಫಲಕವನ್ನು ಮತ್ತು ಪ್ಲೆಕ್ಸ್ ನ್ನು ವಿರೂಪಗೊಳಿಸಿ ದೇಶದ್ರೋಹ ಎಸಗಿರುವ ಮೇಲ್ಕಂಡ ಕಿಡಿಗೇಡಿಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಿ ನಮಗೆ ನ್ಯಾಯ ಹಾಗೂ ಸೂಕ್ತ ರಕ್ಷಣೆ ಕೊಡಸಿಕೊಡಬೇಕಾಗಿ ನೀಡಿದ ದೂರನ್ನು ಪಡೆದು ಪ್ರ.ವ.ವರದಿಯನ್ನು ದಾಖಲಿಸಿರುತ್ತೆ.

Last Updated: 16-04-2021 07:12 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Chikkaballapura District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080