ಅಭಿಪ್ರಾಯ / ಸಲಹೆಗಳು

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ. 71/2021 ಕಲಂ. 279,337 ಐಪಿಸಿ :-

    ದಿನಾಂಕ: 15-03-2021 ರಂದು ಪಿರ್ಯಾದಿದಾರರಾದ ಶ್ರೀಮತಿ ಜಯಮ್ಮ ಕೋಂ ಮುನಿಶ್ಯಾಮಪ್ಪ, 30 ವರ್ಷ, ನಾಯಕರು, ಕೂಲಿ ಕೆಲಸ, ವಾಸ: ಜಿ ಚೆರ್ಲೋಪಲ್ಲಿ ಗ್ರಾಮ ಗೂಳೂರು ಹೋಬಳಿ ಬಾಗೇಪಲ್ಲಿ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನನ್ನ ಗಂಡನಾದ ಮುನಿಶ್ಯಾಮಪ್ಪ ರವರು ದಿನಾಂಕ:13-03-2021 ರಂದು ಮದ್ಯಾಹ್ನ ಸುಮಾರು 2-45 ಗಂಟೆ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಬಾಗೇಪಲ್ಲಿ ಪುರದ ಎಪಿಎಂಸಿ  ಮಾರುಕಟ್ಟೆಯಿಂದ ಐಬಿ ಮುಂಭಾಗ ಬರುತ್ತಿರುವಾಗ ಕಸಬಾ ಹೋಬಳಿ ಪಾಕಪಟ್ಲಪಲ್ಲಿ ಗ್ರಾಮದ ವಾಸಿಯಾದ ಆಟೋ ಚಾಲಕ ಬುಚ್ಚಿರೆಡ್ಡಿ ರವರು ಕೆಎ-40 ಬಿ-1163 ನೋಂದಣಿ ಸಂಖ್ಯೆಯ ತನ್ನ ಆಟೋವನ್ನು   ಹಿಂಬದಿಯಿಂದ  ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಗಂಡನ ಕೆಎ-40 5052 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದರ ಪರಿಣಾಮ ನನ್ನ ಗಂಡನು ಕೆಳಗೆ ಬಿದ್ದಿರುವಾಗ ಸದರಿ ಆಟೋದವರು ನೋಡದೆ ಸ್ವಲ್ಪ ದೂರ ಎಳೆದುಕೊಂಡು ಹೋಗಿರುತ್ತಾರೆ. ನನ್ನ ಗಂಡನಿಗೆ ಎಡಗೈ ಹಾಗೂ ಎಡ ಕಾಲು ಮತ್ತು ಸೊಂಟಕ್ಕೆ ಪ್ರಾಕ್ಚರ್ ಆಗಿರುತ್ತವೆ. ನಂತರ ನನ್ನ ಗಂಡನನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಈದ ದಿನ ತಡವಾಗಿ ಠಾಣೆಗೆ ಬಂದು ನನ್ನ ಗಂಡನಿಗೆ  ಹಿಂಬದಿಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದು, ಗಾಯಪಡಿಸಿದ ಆಟೋ ಚಾಲಕನಾದ ಬುಚ್ಚಿರೆಡ್ಡಿರವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

 

2. ಚೇಳೂರು ಪೊಲೀಸ್‌ ಠಾಣೆ ಮೊ.ಸಂ. 15/2021 ಕಲಂ. ಮನುಷ್ಯ ಕಾಣೆ :-

    ದಿನಾಂಕ 16/03/2021 ರಂದು ಬೆಳಗ್ಗೆ 08:30 ಗಂಟೆಗೆ ಪಿರ್ಯಾಧಿದಾರರಾದ ರಾಜಪ್ಪ ಎನ್ ಬಿನ್ ಲೇಟ್ ನರಸಿಂಹಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ ನಾನು ಎಗುವನೆಟ್ಟಕುಂಟಪಲ್ಲಿ ಗ್ರಾಮದ ವಾಸಿಯಾಗಿದ್ದು   ನಮ್ಮ ತಂದೆ ತಾಯಿಗೆ ಒಟ್ಟು 8 ಜನ ಮಕ್ಕಳಿದ್ದು ನಾನು 2ನೇ ಮಗನಾಗಿದ್ದು  ಹರೀಶ್ (30 ವರ್ಷ)  ನಮ್ಮ ತಂದೆ ತಾಯಿಗೆ ಕೊನೆಯ ಮಗನಾಗಿರುತ್ತಾನೆ. ನನ್ನ ತಮ್ಮ  ಹರೀಶ್ ಸುಮಾರು 5 ವರ್ಷಗಳ ಹಿಂದೆ ನಮ್ಮ ಭಾವನಾದ ಕೃಷ್ಣಾಪುರ ಗ್ರಾಮದ ವಾಸಿಯಾದ ನಂಜುಂಡಪ್ಪ ರವರ ಹೆಸರಿನಲ್ಲಿದ್ದ  ಟಯೋಟಾ ಇಟಿಯೋಸ್ ವಾಹನ ಕೆಎ 05 ಎಎಫ್ 3973 ವಾಹನಕ್ಕೆ ಕಾರ್ ಡ್ರೈವರ್ ಆಗಿ ಬೆಂಗಳೂರಲ್ಲಿ ಕಾರ್ ಓಡಿಸಿಕೊಂಡು ಜೀವನ ಮಾಡಿಕೊಂಡಿದ್ದು ಆಗಾಗ ನಮ್ಮ ಗ್ರಾಮಕ್ಕೆ ಬಂದು ಹೋಗುತ್ತಿದ್ದನು. ಇತ್ತೀಚೆಗೆ ಒಂದು ತಿಂಗಳ  ಹಿಂದೆ ಹರೀಶ್ ರವರಿಗೆ ಮದುವೆಯ ಮಾತುಕತೆಗಳಾಗಿದ್ದರಿಂದ  ಈಗ್ಗೆ ದಿನಾಂಕ:10/03/2021  ಮದುವೆಯ ಕೆಲಸ ಕಾರ್ಯಗಳಿದ್ದುದರಿಂದ   ನಮ್ಮ ಗ್ರಾಮಕ್ಕೆ ಬಂದಿದ್ದು  ದಿನಾಂಕ:12/03/2021 ರಂದು ಸಂಜೆ 4:30 ಗಂಟೆ ಸಮಯದಲ್ಲಿ  ಯಾವುದೋ ಕಾರ್ ಬಾಡಿಗೆ ಇದೆಯೆಂದು ರಾತ್ರಿ ವಾಪಸ್ಸು ಬರುತ್ತೇನೆಂದು  ಕೆಎ 05 ಎಎಫ್ 3973 ಟಯೋಟಾ ಇಟಿಯೋಸ್  ಕಾರ್ ನಲ್ಲಿ  ಹೇಳಿ ಹೊರಟು ಹೋಗಿದ್ದು ಮೂರು ದಿನಗಳಾದರೂ ಮನೆಗೆ ವಾಪಸ್ಸು ಬಂದಿರುವುದಿಲ್ಲ. ಅವನ  ಫೋನ್ ನಂಬರ್ 8660259565 ಗೆ ಫೋನ್ ಮಾಡಿದರೆ ಸ್ವಿಚ್ ಆಫ್ ಎಂದು ಬರುತ್ತಿದ್ದು, ನಾವು ಕೂಡ ಮೂರು ದಿನಗಳಿಂದ ನಮ್ಮ ಸಂಬಂಧಿಕರ ಮನೆಗಳಲ್ಲಿ ಆತನ ಸ್ನೇಹಿತರ ಮನೆಗಳಲ್ಲಿ  ಹುಡುಕಾಡಿದರೂ ಯಾವುದೇ ಮಾಹಿತಿ ಲಭ್ಯವಾಗಿರುವುದಿಲ್ಲ. ಆದ್ದರಿಂದ  ಈ ದಿನ ದಿನಾಂಕ:16/03/2021 ರಂದು ಬೆಳಗ್ಗೆ 08:15 ಗಂಟೆಗೆ  ತಡವಾಗಿ ಠಾಣೆಗೆ ಹಾಜರಾಗಿ ಕಾಣೆಯಾದ ನನ್ನ ತಮ್ಮ ಹರೀಶ್ ರವರನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊಸಂ:15/2021 ಕಲಂ ಮನುಷ್ಯ ಕಾಣೆ ರೀತ್ಯ ಪ್ರಕರಣ ದಾಖಲಿಸಿರುತ್ತೇನೆ.

 

3. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ. 12/2021 ಕಲಂ. 143,144,147,148,323,324,504 ರೆ/ವಿ 149 ಐಪಿಸಿ :-

    ದಿನಾಂಕ: 15-03-2021 ರಂದು ರಾತ್ರಿ ಈ ಕೇಸಿನ ಪಿರ್ಯಾಧಿ ಶ್ರೀ ನಿಜಾಮ್ ಪಾಷಾ ಎಂಬುವವರು ಆಸ್ಪತ್ರಯಲ್ಲಿ  ಕೊಟ್ಟ ಹೇಳಿಕೆ ಏನೆಂದರೆ,   ಈ ದಿನ ರಾತ್ರಿ 10-00 ಗಂಟೆಯಲ್ಲಿ   ತಮ್ಮ ತಂದೆ  ಜೀವನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಅವರಿಗೆ ಊಟವನ್ನು ತೆಗೆದುಕೊಂಡು ಹೋಗುವಾಗ ಅದೇ ದರ್ಗಾ ಮೊಹಲ್ಲಾದ ವಾಸಿಯಾದ 2  ನೇ ಕ್ರಾಸ್ ನಲ್ಲಿ ವಾಸವಾಗಿರುವ  ಮುಜು ಬಿನ್ ಬಾಬು  ಎಂಬುವವನು ಹುಟ್ಟು  ಹಬ್ಬದ ಆಚರಣೆ ಸಲುವಾಗಿ ಮೊಟ್ಟೆಗಳನ್ನು ಹೊಡೆದು ಕೊಳ್ಳುತ್ತಿದ್ದರು. ಅದೇ ಸಮಯದಲ್ಲಿ  ತಮ್ಮ ಮಾವ ಶಬ್ಬೀರ್ ರವರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮೊಟ್ಟೆ ಅವರ ಭುಜಕ್ಕೆ ಬಿದ್ದಿರುತ್ತದೆ.  ಅದಕ್ಕೆ ನಮ್ಮ ಮಾವ ಸಾರ್ವಜನಿಕ ಸ್ಥಳದಲ್ಲಿ ಈಗೆಲ್ಲಾ ಮೊಟ್ಟೆಗಳನ್ನು ಹೊಡೆದು ತೊಂದರೆ ಕೊಡಬಾರದು ಎಂದು ಹೇಳಿದ್ದಕ್ಕೆ  ಮುಜು ಹಾಗೂ ಅವರ ತಮ್ಮ ಸಿದ್ದೀಕ್ ಎಂಬುವವರು ನಮ್ಮ ಮಾವನ ಮೇಲೆ ಗಲಾಟೆಗೆ ಹೋಗಿ ತಳ್ಳಾಡುತ್ತಿದ್ದಾಗ ಪಿರ್ಯಾಧಿ ಮತ್ತು ಅವರ ತಾಯಿ ಅಲ್ಲಿಗೆ ಹೋಗಿ ನಮ್ಮ ಮಾವನನ್ನು ಬಿಡಿಸಲು ಹೋದಾಗ ಸಿದ್ದೀಕ್ ಎಂಬುವವನು ಅಲ್ಲೆ ಇದ್ದ ಕಲ್ಲಿನಿಂದ ತನ್ನ ಎಡ ಕಣ್ಣಿನ ಹುಬ್ಬಿನ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಹಾಗೂ  ಬರ್ತಡೇ ಕೇಕ್ ಕತ್ತರಿಸುವ ಪ್ಲಾಸ್ಟಿಕ್ ಚಾಕುವಿನಿಂದ ಬೀಸಿದ್ದು ಅದು ಕೆನ್ನೆಗೆ  ತರಚಿಕೊಂಡು ಗಾಯವಾಗಿರುತ್ತದೆ. ಆ ಸಮಯದಲ್ಲಿ ತಮ್ಮ ತಾಯಿ ಜರೀನಾ ಬಿಡಿಸಲು ಬಂದಾಗ  ಅವರನ್ನು ತಳ್ಳಿದಾಗ ಬುಜಕ್ಕೆ ಮೂಗೇಟು ಉಂಟಾಗಿರುತ್ತದೆ.  ಅಷ್ಟರಲ್ಲಿ ಅವರ ಕುಟುಂಭದವರಾದ ಮುಜು ರವರ ತಾಯಿ ನಸ್ರೀನ್ ತಾಜ್, ತಂದೆ ಬಾಬು ತಂಗಿ ಹೀನಾ, ಶಬೀನಾ ರವರು ಕೆಟ್ಟ ಮಾತುಗಳಿಂದ  ಬೈದು  ಕೈಗಳಿಂದ ಗುದ್ದಿ ಮೂಗೇಟುಗಳನ್ನುಂಟು ಮಾಡಿದ್ದು ಅಷ್ಟರಲ್ಲಿ ಅಲ್ಲೆ ಇದ್ದ  ಅಪ್ರೋಸ್ ಪಾಷಾ, ಅಕ್ರಮ್ ಪಾಷಾ ರವರು  ಬಂದು ಜಗಳವನ್ನು ಬಿಡಿಸಿ  ನಮ್ಮನ್ನು ಆಸ್ಪತ್ರೆಗೆ  ಕಳುಹಿಸಿಕೊಟ್ಟಿದ್ದಾಗಿ ಕೊಟ್ಟ ಹೇಳಿಕೆಯನ್ನು ಪಡೆದುಕೊಂಡು  ಪ್ರಕರಣವನ್ನು ದಾಖಲಿಸಿಕೊಂಡಿರುತ್ತೇನೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 110/2021 ಕಲಂ. 454,457,380 ಐಪಿಸಿ :-

    ದಿನಾಂಕ:15/03/2021 ರಂದು ಮದ್ಯಾಹ್ನ 1.30 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಶ್ರೀಮತಿ.ಪ್ರಭಾವತಿ.ಎ ಕೋಂ ನರಸಿಂಹ ನಾಯಕ, 46 ವರ್ಷ, ಮುಖ್ಯೋಪಾಧ್ಯಾಯರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ, ಕೋಟಗಲ್ ಗ್ರಾಮ, ಚಿಂತಾಮಣಿ ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 22 ವರ್ಷಗಳಿಂದ  ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದು ಹಾಲಿ ತಾನು ಪ್ರಭಾರಿ ಮುಖ್ಯಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿರುತ್ತೇನೆ. ತಮ್ಮ ಶಾಲೆಯಲ್ಲಿ ಅಕ್ಷರ ದಾಸೋಹ ಅಡಿಯಲ್ಲಿ ಶಾಲೆಯ ಮಕ್ಕಳಿಗೆ ಅಡುಗೆ ಮಾಡುವ ಸಲುವಾಗಿ ಸಿಲಿಂಡರ್ ಮತ್ತಿತರೆ ಅಡುಗೆ ಬೇಕಾದ ಸಾಮಗ್ರಿಗಳನ್ನು ತಮ್ಮ ಶಾಲೆಯಲ್ಲಿನ ಅಡುಗೆ ಕೋಣೆಯ ಬಾಗಿಲು ಸರಿಯಿಲ್ಲದೆ ಇದ್ದುದ್ದರಿಂದ ಅಡುಗೆ ಮನೆಯ ಎಲ್ಲಾ ಸಾಮಗ್ರಿಗಳನ್ನು 6 ನೇ ತರಗತಿಯ ಕೋಣೆಯಲ್ಲಿ ಇಟ್ಟಿರುತ್ತೇವೆ. ದಿನಾಂಕ:13/03/2021 ರಂದು ಮದ್ಯಾಹ್ನ 12.30 ಗಂಟೆಗೆ ಶಾಲೆಯನ್ನು ಮುಗಿಸಿಕೊಂಡು ಎಲ್ಲಾ ತರಗತಿಯ ಬಾಗಿಲುಗಳಿಗೆ ಬೀಗಗಳನ್ನು ಹಾಕಿರುತ್ತೇವೆ. ದಿನಾಂಕ:15/03/2021 ರಂದು ತಾನು ಸ್ವಂತ ಕೆಲಸದ ನಿಮಿತ್ತ ರಜೆಯನ್ನು ಪಡೆದಿರುತ್ತೇನೆ. ಈ ದಿನ ದಿನಾಂಕ: 15/03/2021 ರಂದು ಬೆಳಿಗ್ಗೆ 10.30 ಗಂಟೆಯಲ್ಲಿ ತಾನು ಶಾಲೆಯ ಪ್ರಭಾರವನ್ನು ಸದರಿ ಶಾಲೆಯ ಸಹ ಶಿಕ್ಷಕರಾದ ಕೆ.ಸಿ.ಅಶ್ವತ್ಥನಾರಾಯಣ ರವರಿಗೆ ವಹಿಸಲು ಶಾಲೆಯ ಬಳಿ ಹೋಗಿ ನೋಡಲಾಗಿ ಶಾಲೆಯ 6ನೇ ತರಗತಿಯ ಬಾಗಿಲಿನ ಚಿಲಕವನ್ನು ಮತ್ತು ಟವರ್ ಬೋಲ್ಟ್ ಅನ್ನು ಕಿತ್ತಿದ್ದು ಒಳಗೆ ಹೋಗಿ ನೋಡಿದಾಗ ಸದರಿ ಕೋಣೆಯಲ್ಲಿ ಇಟ್ಟಿದ್ದ 2 ಗ್ಯಾಸ್ ಸಿಲಿಂಡರ್ ಪೈಕಿ ಒಂದು ಗ್ಯಾಸ್ ತುಂಬಿದ ಪುಲ್ ಸಿಲಿಂಡರ್ ಕಳ್ಳತನವಾಗಿರುತ್ತೆ. ತಾನು ಸದರಿ ವಿಚಾರವನ್ನು ಸಹ ಶಿಕ್ಷಕರಾದ ಕೆ.ಸಿ.ಅಶ್ವತ್ಥನಾರಾಯಣ ರವರಿಗೆ ತಿಳಿಸಿದ್ದು ಅವರು ಸಹ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿರುತ್ತಾರೆ. ದಿನಾಂಕ:13/03/2021 ಮದ್ಯಾಹ್ನ 12.30 ರಿಂದ ಈ ದಿನ ದಿನಾಂಕ:15/03/2021 ರಂದು ಬೆಳಿಗ್ಗೆ 10.30 ಗಂಟೆ ಮದ್ಯೆ ಯಾರೋ ಕಳ್ಳರು 6ನೇ ತರಗತಿಯ ಬಾಗಿಲಿನ ಚಿಲಕವನ್ನು ಮುರಿದು ಅದರಲ್ಲಿದ್ದ ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ಗ್ಯಾಸ್ ಸಿಲಿಂಡರ್ ಸುಮಾರು 3,000/- ರೂ ಬೆಲೆಬಾಳುತ್ತೆ. ಆದ್ದರಿಂದ ಕಳುವಾಗಿರುವ ಸಿಲಿಂಡರ್ ಅನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿರುವುದಾಗಿರುತ್ತೆ.

 

5. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 111/2021 ಕಲಂ. 379 ಐಪಿಸಿ :-

    ದಿನಾಂಕ: 15/03/2021 ರಂದು ಮದ್ಯಾಹ್ನ 2.30 ಗಂಟೆಗೆ ಫಕೃದ್ದೀನ್ ಬಿನ್ ಮಹಮ್ಮದ್ ಹುಸೇನ್ ಸಾಬ್, 44 ವರ್ಷ, ಮುಸ್ಲಿಂ ಜನಾಂಗ, ನಗರಸಭೆಯಲ್ಲಿ ಕೆಲಸ, ನಿಮ್ಮಾಕುಲಕುಂಟೆ, ಮಿಲ್ಕ್ ಡೈರಿ ಹಿಂಭಾಗ, ಗಂಗನಮಿದ್ದಿರಸ್ತೆ, ಚಿಕ್ಕಬಳ್ಳಾಪುರ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು 2018 ನೇ ಸಾಲಿನಲ್ಲಿ ಕೆಎ-40 ಇಡಿ-1345 ನಂಬರಿನ ಸ್ಪೆಂಡರ್ ಪ್ಲಸ್ ದ್ವಿ-ಚಕ್ರ ವಾಹನವನ್ನು ಖರೀದಿಸಿದ್ದು, ಈ ವಾಹನದ ಎಲ್ಲಾ ದಾಖಲೆಗಳು ನನ್ನ ಹೆಸರಿ ನಲ್ಲಿರುತ್ತವೆ. ಈ ವಾಹನದ ಇಂಜಿನ್ ನಂ HA10AGJHGE9714 ಹಾಗೂ ಚಾರ್ಸಿಸ್ ನಂ MBLHAR 072JHG79678 ಆಗಿರುತ್ತದೆ. ದಿನಾಂಕ: 06-03-2021 ರಂದು ಚಿಂತಾಮಣಿ ತಾಲ್ಲೂಕಿನ ಕರಿಯಪಲ್ಲಿಯ ಬಳಿ ಇರುವ ರಜಾಕ್ ಫಾತಿಮಾ ಶಾದಿ ಮಹಲ್ ನಲ್ಲಿ ತಮ್ಮ ಸಂಬಂಧಿಕರ ಮದುವೆ ಇದ್ದು, ಈ ಮದುವೆಗೆ ತಾನು ಮೇಲ್ಕಂಡ ತನ್ನ ಬಾಬತ್ತು ದ್ವಿ ಚಕ್ರ ವಾಹನದಲ್ಲಿ ಮದ್ಯಾಹ್ನ 12.30 ಗಂಟೆಗೆ ಶಾದಿ ಮಹಲ್ ಗೆ ಬಂದಿದ್ದೆನು. ಸದರಿ ದ್ವಿ-ಚಕ್ರ ವಾಹನವನ್ನು ಮಹಲ್ ನ ಮುಂಭಾಗ ರಸ್ತೆಯ ಬದಿಯಲ್ಲಿ ನಿಲ್ಲಿಸಿ, ಶಾದಿ ಮಹಲ್ ನಲ್ಲಿ ಊಟ ಮುಗಿಸಿಕೊಂಡು ಅದೇ ದಿನ ಮದ್ಯಾಹ್ನ ಸುಮಾರು 3.30 ಗಂಟೆಗೆ ಹೊರಗಡೆ ಬಂದು ನೋಡಲಾಗಿ ತಾನು ನಿಲ್ಲಿಸಿದ್ದ ದ್ವಿ ಚಕ್ರ ವಾಹನ ಸ್ಥಳದಲ್ಲಿ ಇಲ್ಲದೆ ಕಳುವಾಗಿರುತ್ತೆ. ಕಳುವಾಗಿರುವ ದ್ವಿ-ಚಕ್ರ ವಾಹನದ ಬೆಲೆ ಸುಮಾರು 44,000/- ರೂಗಳಾಗುತ್ತೆ. ಇದೂವರೆವಿಗೂ ಕಳುವಾಗಿರುವ ದ್ವಿ ಚಕ್ರ ವಾಹನವನ್ನು ಹುಡುಕಾಡಲಾಗಿ ಎಲ್ಲಿಯೂ ಪತ್ತೆಯಾಗದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ಕಳುವಾಗಿರುವ ನನ್ನ ಬಾಬತ್ತು ಕೆಎ-40 ಇಡಿ-1345 ಸ್ಪೆಂಡರ್ ಪ್ಲಸ್ ದ್ವಿ ಚಕ್ರ ವಾಹನವನ್ನು ಪತ್ತೆ ಮಾಡಿ ಕಳ್ಳರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿದೆ.

 

6. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 112/2021 ಕಲಂ. 323,341 ರೆ/ವಿ 34 ಐಪಿಸಿ :-

    ದಿನಾಂಕ: 15/03/2021 ರಂದು ಸಂಜೆ 6.00 ಗಂಟೆಗೆ ಠಾಣೆಯ ನ್ಯಾಯಾಲಯದ ಕರ್ತವ್ಯದ ಮ.ಪಿ.ಸಿ-03 ಶ್ರೀಮತಿ ಶೀಲಾ ರವರು ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣೆಯಲ್ಲಿ ಹಾಜರುಪಡಿಸಿದ ಮನವಿ ಪತ್ರದ ಸಾರಾಂಶವೇನೆಂದರೆ, ದಿನಾಂಕ:14/03/2021 ರಂದು ರಾತ್ರಿ ಪಿರ್ಯಾಧಿದಾರರಾದ ರಾಮಾಂಜಿ ಬಿನ್ ರಾಮದಾಸ್, 32 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿಕೆಲಸ, ಮಾಳಪಲ್ಲಿ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಎಂದಿನಂತೆ ಈ ದಿನ ದಿನಾಂಕ: 14/03/2021 ರಂದು ಕೂಲಿಕೆಲಸ ಮುಗಿಸಿಕೊಂಡು ತಮ್ಮ ಮನೆಗೆ ವಾಪಸ್ ಬರಲು ರಾತ್ರಿ ಸುಮಾರು 9.00 ಗಂಟೆ ಸಮಯದಲ್ಲಿ ಕನ್ನಂಪಲ್ಲಿ ಗ್ರಾಮದ ಬಳಿ ಇರುವ ಆರ್.ಆರ್ ಪೆಟ್ರೋಲ್ ಬಂಕ್ ನಿಂದ ಸ್ವಲ್ಪ ಮುಂದೆ ಬಂದಾಗ ಯಾರೋ ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿದಾಗ ತಾನು ತನ್ನ ವಾಹನವನ್ನು ನಿಲ್ಲಿಸಿ ಯಾರೆಂದು ನೋಡಲಾಗಿ ಸದರಿ ವ್ಯಕ್ತಿಗಳು ನಾರಾಯಹಳ್ಳಿ ಗ್ರಾಮದ ಶ್ರೀಕಾಂತ್ ಹಾಗೂ ಆತನ ಜೊತೆ ಇನ್ನುಇಬ್ಬರಿದ್ದು, ಸದರಿಯವರು ತನ್ನನ್ನು ಕುರಿತು ನೀನು ನಮ್ಮ ಊರಿನಲ್ಲಿ ಬಂದು ಗಲಾಟೆ ಮಾಡಿದಿಯಾ ಎಂದು ತನ್ನನ್ನು ಕೆಳಕ್ಕೆ ತಳ್ಳಿ ಎಳೆದಾಡಿ ತನ್ನ ಟಿ ಶರ್ಟ್ ನ್ನು ಹರಿದು ಹಾಕಿರುತ್ತಾರೆ. ನಂತರ ತಾನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ನಂತರ ಠಾಣೆಗೆ ವಾಪಸ್ಸಾಗಿ ಮೇಲ್ಕಂಡವರನ್ನು ಠಾಣೆಗೆ ಕರೆಸಿ ತಮ್ಮ ತಂಟೆ ತಕರಾರಿಗೆ ಬಾರದಂತೆ ಸೂಕ್ತ ಬಂದೋಬಸ್ತ್ ಮಾಡಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಎನ್.ಸಿ.ಆರ್ ದಾಖಲಿಸಿಕೊಂಡಿರುತ್ತೆ. ಸದರಿ ಪ್ರಕರಣವು ಸಂಜ್ಞೇಯ ಪ್ರಕರಣವಾಗಿದ್ದು ಪ್ರಕರಣವನ್ನು ದಾಖಲು ಮಾಡಲು ಘನ ನ್ಯಾಯಾಲಯದ ಅನುಮತಿಗಾಗಿ ಮನವಿಯನ್ನು ಸಲ್ಲಿಸಿಕೊಂಡಿದ್ದು ಘನ ನ್ಯಾಯಾಲಯವು ಅನುಮತಿಯನ್ನು ನೀಡಿರುವುದಾಗಿರುತ್ತೆ. ಸದರಿ ಅನುಮತಿಯ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವುದಾಗಿರುತ್ತೆ.

 

7. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 113/2021 ಕಲಂ. 143,147,148,323,324,341,504,506(B), ರೆ/ವಿ 149 ಐಪಿಸಿ :-

    ದಿನಾಂಕ: 16/03/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಕಲ್ಲೇಗೌಡ ಬಿನ್ ಈರಪ್ಪ, 47 ವರ್ಷ, ಕುರುಬರು, ಜಿರಾಯ್ತಿ, ಗುನ್ನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬೆಳಿಗ್ಗೆ 10.30 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡು ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮ್ಮ ತಂದೆಯವರ ಹೆಸರಿನಲ್ಲಿ ಸರ್ವೇ ನಂಬರ್ 123/ಪಿ13 ರಲ್ಲಿ ಒಂದು ಎಕರೆ ಐದು ಗುಂಟೆ ಜಮೀನಿದ್ದು, ಇದಕ್ಕೆ ಹೊಂದಿಕೊಂಡಂತೆ ತಮ್ಮ ಗ್ರಾಮದ ಒಕ್ಕಲಿಗ ಜನಾಂಗದ ನಾರಾಯಣಸ್ವಾಮಿ ರವರಿಗೆ ಸಂಬಂದಿಸಿದಂತೆ ಮನೆಯ ವಿಚಾರವಾಗಿ ತಮ್ಮಗಳ ಮದ್ಯೆ ತಕರಾರು ಇರುತ್ತದೆ. ಸದರಿಯವರು ಕೊಳಚೆ ನೀರನ್ನು ತಮ್ಮ ಜಮೀನಿನ ಕಡೆಗೆ ಬಿಡುವ ವಿಚಾರದಲ್ಲಿ ನಿನ್ನೆ ಬೆಳಿಗ್ಗೆ ಬಾಯಿ ಮಾತಿನ ಜಗಳವಾಗಿರುತ್ತೆ. ಹೀಗಿರುವಾಗ ದಿನಾಂಕ: 16/03/2021 ರಂದು ಬೆಳಿಗ್ಗೆ 07.00 ಗಂಟೆ ಸಮಯದಲ್ಲಿ ತಾವು ಮನೆಯಲ್ಲಿದ್ದಾಗ ಜಿ.ಸಿ.ನಾರಾಯಣಸ್ವಾಮಿ ಬಿನ್ ಲೇಟ್ ಚೊಕ್ಕಪ್ಪ, ಅವರ ಮಕ್ಕಳಾದ ಮಂಜುನಾಥ, ವಿಜಯ್ ಕುಮಾರ್, ದೇವರಾಜ ಮತ್ತು ತಮ್ಮನಾದ ಮುನಿಯಪ್ಪ ಬಿನ್ ಲೇಟ್ ಚೊಕ್ಕಪ್ಪ, ಇವರ ಮಗ ಸುನೀಲ್ ಹಾಗೂ ಶಾರದಮ್ಮ ಕೋಂ ಮಂಜುನಾಥ ರವರು ಕೈಗಳಲ್ಲಿ ದೊಣ್ಣೆಗಳನ್ನು ಹಿಡಿದುಕೊಂಡು ಅಕ್ರಮ ಗುಂಪುಕಟ್ಟಿಕೊಂಡು ಬಂದು “ನೀವು ನಮ್ಮ ಮೇಲೆ ಠಾಣೆಯಲ್ಲಿ ದೂರು ನೀಡುತ್ತೀರಾ” ಎಂದು ಗಲಾಟೆ ತೆಗೆದು ಆ ಪೈಕಿ ಮಂಜುನಾಥ ದೊಣ್ಣೆಯಿಂದ ತನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದನು. ಎರಡು ತುಟಿಗಳಿಗೆ ರಕ್ತಗಾಯವಾಯಿತು. ಎಡಕೈ ತೋರು ಬೆರಳಿಗೆ ರಕ್ತಗಾಯ ಪಡಿಸಿದನು. ವಿಜಯ್ ಕುಮಾರ್ ರವರು ದೊಣ್ಣೆಯಿಂದ ತನ್ನ ತಮ್ಮನಾದ ಶ್ರೀನಿವಾಸ ರವರಿಗೆ ತಲೆಯ ಮೇಲ್ಬಾಗಕ್ಕೆ, ಎಡಗೈ ಮುಂಗೈಗೆ ಹೊಡೆದು ರಕ್ತಗಾಯಪಡಿಸಿದನು. ಶಾರದಮ್ಮ ಕಲ್ಲಿನಿಂದ ತನ್ನ ಹೆಂಡತಿಯಾದ ಶೈಲಮ್ಮ ರವರವ ಬಲಗೈಗೆ ಹಾಗೂ ಬಾಯಿಗೆ ಹೊಡೆದು ತರಚಿದ/ಊತದ ಗಾಯಪಡಿಸಿದರು. ಮೇಲ್ಕಂಡವರೆಲ್ಲರೂ ತಮ್ಮನ್ನು ಮನೆಯ ಹೊರಗೆ ಕರೆದು ಮುಂದಕ್ಕೆ ಹೋಗದಂತೆ ಅಡ್ಡಗಟ್ಟಿ ತೆಗೆದು, ಲೋಫರ್ ನನ್ನ ಮಕ್ಕಳೇ ಎಂದು ಅವಾಚ್ಯ ಶಬ್ದಗಳಿಂದ ಬೈದರು. ಮೇಲ್ಕಂಡವರೆಲ್ಲರೂ ತಮ್ಮನ್ನು ಸುತ್ತುವರೆದು ಕೈಗಳಿಂದ ಮೈ ಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿರುತ್ತಾರೆ ಹಾಗೂ ನೀವು ನಮಗೆ ಕೊಳಚೆ ನೀರು ಜಮೀನಿನೊಳಗೆ ಬಿಡಿಸದೆ ಇದ್ದಲ್ಲಿ ನಿಮ್ಮನ್ನು ಸಾಯಿಸದೆ ಬಿಡುವುದಿಲ್ಲವೆಂದು ಪ್ರಾಣಬೆದರಿಕೆಯನ್ನು ಹಾಕಿದರು. ಆ ಪೈಕಿ ಮಂಜುನಾಥ, ವಿಜಯ್ ಕುಮಾರ್, ಸುನಿಲ್ ರವರು ದೊಣ್ಣೆಯನ್ನು ತೋರಿಸಿ ಇದರಿಂದಲೇ ನಿಮ್ಮನ್ನು ಹೊಡೆದು ಸಾಯಿಸುತ್ತೇವೆಂದು ಪ್ರಾಣಬೆದರಿಕೆಯನ್ನು ಹಾಕಿರುತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

8. ಚಿಂತಾಮಣಿ‌ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 114/2021 ಕಲಂ. 143,147,148,323,324,341,504,506(B) ರೆ/ವಿ 149 ಐಪಿಸಿ :-

    ದಿನಾಂಕ: 16/03/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಮಂಜುನಾಥ ಬಿನ್ ಜಿ.ಸಿ.ನಾರಾಯಣಸ್ವಾಮಿ, 38 ವರ್ಷ, ವಕ್ಕಲಿಗರು, ಜಿರಾಯ್ತಿ, ಗುನ್ನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬೆಳಿಗ್ಗೆ 11.45 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡು ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮ್ಮ ಮನೆಯ ಪಕ್ಕದಲ್ಲಿ ಕುರುಬ ಜನಾಂಗದ ಈರಪ್ಪ ರವರ ಜಮೀನು ಇರುತ್ತೆ. ತಮ್ಮ ಮನೆಯ ಮುಂಭಾಗ ಕೊಳಚೆ ನೀರು ಹೋಗಲು ಚರಂಡಿ ಇದ್ದು, ಅದರ ಪೈಪ್ ಲೈನ್ ಹೊಡೆದು ಹೋಗಿದ್ದು, ಇದನ್ನು ರಿಪೇರಿ ಮಾಡುವ ವಿಚಾರದಲ್ಲಿ ನಿನ್ನೆ ಬಾಯಿ ಮಾತಿನ ಜಗಳಗಳಾಗಿದ್ದವು. ಹೀಗಿರುವಾಗ ಈ ದಿನ ದಿನಾಂಕ: 16/03/2021 ರಂದು ಬೆಳಿಗ್ಗೆ ಸುಮಾರು 07.30 ಗಂಟೆ ಸಮಯದಲ್ಲಿ ಶ್ರೀನಿವಾಸ ಬಿನ್ ಈರಪ್ಪ, ಕಲ್ಲೇಗೌಡ ಬಿನ್ ಈರಪ್ಪ. ಶೈಲ ಕೋಂ ಕಲ್ಲೇಗೌಡ, ರಾಮು ಬಿನ್ ಈರಪ್ಪ, ಈರಪ್ಪ ಬಿನ್ ಚಿಕ್ಕಣ್ಣ ರವರುಗಳು ಅಕ್ರಮ ಗುಂಪುಕಟ್ಟಿಕೊಂಡು ತಮ್ಮ ಮನೆಯ ಬಳಿ ಬಂದು ರಸ್ತೆಯಲ್ಲಿ ನಿಂತುಕೊಂಡು ಅಲ್ಲಿ ಕಟ್ಟಿಹಾಕಿದ್ದ ದನಕರುಗಳನ್ನು ಬಿಟ್ಟು ಓಡಿಸುತ್ತಿದ್ದು, ಕೇಳಲು ಹೋದ ತನಗೆ ಕಲ್ಲೇಗೌಡ ರವರು ಕುಡುಗೋಲಿನಿಂದ ತನ್ನ ಹಣೆಯ ಎಡ ಮೇಲ್ಬಾಗಕ್ಕೆ ರಕ್ತ ಗಾಯಪಡಿಸಿದನು. ಶ್ರೀನಿವಾಸ ರವರು ತನ್ನ ನಾದಿನಿಯಾದ ನಾಗಮಣಿ ಕೋಂ ವಿಜಯಕುಮಾರ್ ರವರಿಗೆ ಅದೇ ಕುಡುಗೋಲಿನಿಂದ ಎಡಗೈಯ ಎರಡು ಬೆರಳುಗಳಿಗೆ ಕೋಯ್ದು ರಕ್ತಗಾಯಪಡಿಸಿದನು. ರಾಮು ರವರು ತನ್ನ ಹೆಂಡತಿಯಾದ ಶಾರದ ರವರಿಗೆ ಅದೇ ಕುಡುಗೋಲಿನಿಂದ ಎಡಕೈ ಹೆಬ್ಬೆರಳಿನ ಮೇಲೆ ಕೋಯ್ದು ರಕ್ತಗಾಯ ಪಡಿಸಿದನು. ಮೇಲ್ಕಂಡವರೆಲ್ಲರೂ ತಮ್ಮನ್ನು ಕುರಿತು ನೀವು ಇಲ್ಲಿ ಪೈಪು ಚರಂಡಿಗೆ ಹಾಕಿದರೆ ಸಾಯಿಸದೆ ಬಿಡುವುದಿಲ್ಲ. ಈ ರಸ್ತೆ ನಮಗೆ ಸೇರಿದ್ದು ಎಂದು ಪ್ರಾಣಬೆದರಿಕೆ ಹಾಕಿದರು. ಲೋಫರ್ ನನ್ನ ಮಕ್ಕಳೇ ಇಲ್ಲಿಂದ ನಿಮ್ಮನ್ನು ಓಡಿಸದೆ ಬಿಡುವುದಿಲ್ಲವೆಂದು ಅವಾಚ್ಯಶಬ್ದಗಳಿಂದ ಬೈದರು ಹಾಗೂ ಎಲ್ಲರೂ ತಮಗೆ ಕೈಗಳಿಂದ ಮೈ ಮೇಲೆ ಹೊಡೆದು ಮೂಗೇಟು ಪಡಿಸಿದರು. ಮೇಲ್ಕಂಡವರೆಲ್ಲರೂ ತಮ್ಮನ್ನು ಮುಂದಕ್ಕೆ ಹೋಗದಂತೆ ಅಡ್ಡಗಟ್ಟಿ ತಡೆದರು. ಆ ಪೈಕಿ ಕಲ್ಲೇಗೌಡ, ರಾಮು, ಶ್ರೀನಿವಾಸರವರು ಕುಡುಗೋಲನ್ನು ತೋರಿಸಿ ಇದರಿಂದ ನಿಮ್ಮನ್ನು ಸಾಯಿಸದೆ ಬಿಡುವುದಿಲ್ಲವೆಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

9. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ. 37/2021 ಕಲಂ. 504 ಐಪಿಸಿ :-

    ದಿನಾಂಕ 15/03/2021 ರಂದು ಸಂಜೆ 5-00 ಗಂಟೆಗೆ ಘನ ನ್ಯಾಯಾಲಯ ಕರ್ತವ್ಯದ ಪಿಸಿ 367 ರವರು  ಠಾಣಾ ಎನ್ ಸಿ.ಆರ್ ನಂ 37/2021 ರ ಅಸಂಜ್ಞಾ ಅಪರಾಧವನ್ನು ಘನ ನ್ಯಾಯಾಲಯದ ಅದೇಶದಂತೆ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪಡೆದು ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ ದಿನಾಂಕ: 08/03/2021 ರಂದು ಅರ್ಜಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿ: 06/03/2021 ರಂದು ನಡೆದ ಜೆ ಡಿ ಎಸ್ ಪಕ್ಷದವರ ಡಿ.ಸಿ.ಸಿ ಬ್ಯಾಂಕ್ ಗೆ  ಸಂಬಂಧಿಸಿದಂತೆ ನಡೆದ ಧರಣಿಯಲ್ಲಿ ಅಗ್ರಹಾರ ನಗರದ  ವಾರ್ಡ್ ನಂ  26 ರ ನಗರಸಭೆ ಸದ್ಯಸರು ಅಗ್ರಹಾರ ಮುರಳಿ ರವರು ಮತ್ತು ಅವರ ಬೆಂಬಲಿಗರು ಧರಣಿ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಿಗೆ ಸಂಬಂಧವಿಲ್ಲದ ಪ್ರಸ್ತಾಪವನ್ನು ತಂದು ಅಗ್ರಹಾರ ಮುರಳಿ ಮಾತನಾಡುತ್ತಾ ರೋಷ ವೇಷದಿಂದ ಮುಠಾಳನಾದ ಮಾಜಿ ಶಾಸಕರ ಮನೆಯಲ್ಲಿ ಡಿ.ಸಿ.ಸಿ ಬ್ಯಾಂಕ್ ನ ಚೆಕ್ ಗಳನ್ನು ವಿತರಿಸುತ್ತೇನೆಂದು ಮಾಜಿ ಶಾಸಕರ  ಯೋಗ್ಯತೆ ಏನೆಂದು ನನಗೆ ಚೆನ್ನಾಗಿ ಗೊತ್ತು ಎಂದು ಅದು ಅವನ  ಅಪ್ಪನ  ಆಸ್ತನ , ತಾತನ ಗಂಟ ಎಂದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ, ಮತ್ತು ಡಿ.ಸಿ.ಸಿ ಬ್ಯಾಂಕ್ ನ ನಿರ್ದೇಶಕರಾದ ನಾಗಿರೆಡ್ಡಿ ರವರನ್ನು ಅವರ ಮನಸ್ಸಿಗೆ ಬಂದಂತೆ ಏಕವಚನದಲ್ಲಿ ಬೈದು ಹಲ್ಲೆ ಮಾಡಲು ಸಹ ಪ್ರಯತ್ನಿಸಿರುತ್ತಾರೆ, ಡಿ.ಸಿ .ಸಿ ಬ್ಯಾಂಕ್ ನ   ಅಧ್ಯಕ್ಷರಾದ ಬ್ಯಾಲಹಳ್ಳಿ ಗೋವಿಂದಗೌಡ ರವರನ್ನು ನೀರಿನ ವಾಟರ್ ಪ್ಯಾಕೇಟ್ ನ್ನು ಅವರ ಮೇಲೆ ಎಸೆದು ಅವಾಚ್ಯ ಶಬ್ದಗಳಿಂದ ನಿಂಧಿಸಿರುತ್ತಾರೆ, ಹಲ್ಲೆ ಮಾಡಲು ಸಹ ಪ್ರಯತ್ನಿಸಿರುತ್ತಾರೆ, ಈ ವಿಚಾರವು ಎಲ್ಲಾ ಮಿಡಿಯಾ ಪ್ರತಿಕೆಯಲ್ಲಿ ಪ್ರಕಟವಾಗಿರುತ್ತದೆ. ಸರ್ಕಾರಿ ಅಧಿಕಾರಿಗಳ ಮೇಲೆ ಮತ್ತು ಸಾರ್ವಜನಿಕರ ಮೇಲೆ ಇಂತ ಕೃತ್ಯಗಳನ್ನು ನಡೆಸಿರುತ್ತಾನೆಂದು ದೂರು ನೀಡಿರುತ್ತಾರೆ, ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಕಲಂ 504 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 

10. ಗೌರಿಬಿದನೂರು ಪುರ ಪೊಲೀಸ್‌ ಠಾಣೆ ಮೊ.ಸಂ. 34/2021 ಕಲಂ. 87 ಕೆ.ಪಿ. ಆಕ್ಟ್‌ :-

    ದಿನಾಂಕ:15/03/2021 ರಂದು ಬೆಳಿಗ್ಗೆ 11-30 ಗಂಟೆಯಲ್ಲಿ ಘನ ನ್ಯಾಯಾಲಯದ ಮ.ಪಿಸಿ-364 ರವರು ಕ್ರಿಮಿನಲ್ ಮೊಕದ್ದಮೆಯನ್ನು ದಾಖಲು ಮಾಡಿಕೊಳ್ಳಲು ಅನುಮತಿಯನ್ನು ಪಡೆದು ತಂದು ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ:08/03/2021 ರಮದು ಸಂಜೆ 5-50 ಗಂಟೆ ಸಮಯದಲ್ಲಿ ಮಾನ್ಯ ಶ್ರೀ ಪ್ರಸನ್ನ ಕುಮಾರ್ PSI ರವರು ಠಾಣೆಗೆ ನೀಡಿದ ವರದಿಯ ಸರಾಂಶವೆನೆಂದರೆ ದಿನಾಂಕ:08/03/2021 ರಂದು ಸಂಜೆ 4-00 ಗಂಟೆಯಲ್ಲಿ ತಾನು ಠಾಣೆಯಲ್ಲಿದ್ದಾಗ ಬಾತ್ಮಿದಾರರು ತನಗೆ ಪೊನ್ ಹಿರೇಬಿದನೂರು ಗ್ರಾಮದ ಪಕ್ಕದ ಕೆರೆಯ ಅಂಗಳದಲ್ಲಿರುವ ಜಾಲಿ ಮರದ ಕೆಳಗೆ ಯಾರೋ ಕೆಲವು ಮಂದಿ ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವನ್ನು ಆಡುತ್ತೀರುವುದಾಗಿ ಮಾಹಿತಿಯನ್ನು ತಿಳಿಸಿದ್ದು ಅದರಂತೆ ತಮ್ಮ ಠಾಣೆಯ ಸಿಬ್ಬಂದಿಯಾದ ಹೆಚ್ ಸಿ-12 ಶಿವಶಂಕರ್, ಹೆಚ್ ಸಿ-134 ಲೋಕೇಶ್ ಪಿಸಿ-102 ಪ್ರತಾಪ್ ಕುಮಾರ್, ಮತ್ತು ಸಿಪಿಸಿ-507 ಹನುಮಂತರಾಯಪ್ಪ ರವರಿಗೆ ಮಾಹಿತಿಯನ್ನು ತಿಳಿಸಿ ಅವರನ್ನು ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ-281 ರಲ್ಲಿ  ಎ.ಪಿಸಿ-105 ಅಶ್ವತ್ಥರೆಡ್ಡಿ ರವರು ಚಾಲನೆ ಮಾಡಿಕೊಂಡು ಸಂಜೆ 4-10 ಗಂಟೆಗೆ ಹಿರೇಬಿದನೂರು ಗ್ರಾಮದ ಆಟೋ ನಿಲ್ದಾಣದ ಬಿಳಿ ಹೋಗಿ ಅಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿ ಸದರಿ ದಾಳಿಗೆ ಪಂಚರು ಒಪ್ಪಿದರು. ಅವರನ್ನು ತಮ್ಮ ಜೀಪ್ನಲ್ಲಿ ಕರೆದುಕೊಂಡು ಸಂಜೆ 4-15 ಗಂಟೆಗೆ ಹಿರೇಬಿದನೂರು ಕೆರೆಯ ಅಂಗಳಕ್ಕೆ ಹೋಗಿ ಮರೆಯಲ್ಲಿ ಜೀಪ್ ನ್ನು ನಿಲ್ಲಿಸಿ ಜಾಲಿ ಮರದ ಮರೆಯಲ್ಲಿ ನಿಂತು ನೋಡಲಾಗಿ ಜಾಲಿ ಮರದ ಕೆಳಗೆ ಕೆಲವು ಮಂದಿ ಗುಂಪಾಗಿ ಕೊಳಿತುಕೊಂಡು ಅಂದರ್- 200 ಬಾಹರ್-200 ಎಂದು ಕೂಗಾಡುತ್ತಾ ಇಸ್ಪೀಟ್ ಜೂಜಾಟವನ್ನು ಅಡುತ್ತೀರುವುದು ಕಂಡು ಬಂದಿದ್ದು ಅಡುತ್ತೀದ್ದವರ ಮೇಲೆ ದಾಳಿ ಮಾಡಲು ಹೋದಾಗ ಕೆಲವರು ಓಡಿ ಹೋಗಿದ್ದು ಅದರಲ್ಲಿ ಮೂರು ಜನರನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ರವಿ ಬಿನ್ ಲೇಟ್ ಬಸವರಾಜು, 27 ವರ್ಷ, ಗಾರೆ ಕೆಲಸ, ಆದಿ ಕರ್ನಾಟಕ ಜನಾಂಗ, ವಾಸ: ಗಂಗಮ್ಮ ದೇವಸ್ಥಾನ ಹತ್ತಿರ, ಹಿರೇಬಿದನೂರು ಗ್ರಾಮ, ಗೌರಿಬಿದನೂರು ನಗರ, 2) ನಂದಮೂರಿ ಬಿನ್ ಲೇಟ್ ನರಸಿಂಹಪ್ಪ, 25 ವರ್ಷ, ಗಾರೆ ಕೆಲಸ,  ವಾಸ: ಹಿರೇಬಿದನೂರು ಗ್ರಾಮ, ಗೌರಿಬಿದನೂರು ನಗರ, ಮತ್ತು 3) ರಮೇಶ್ ಬಿನ್ ಲೇಟ್ ಗೊರ್ಲಪ್ಪ, 26 ವರ್ಷ, ಆದಿ ಕರ್ನಾಟಕ ಜನಾಂಗ, ವಾಸ: ಹಿರೇಬಿದನೂರು ಗ್ರಾಮ, ಗೌರಿಬಿದನೂರು ನಗರ, ಎಂದು ತಿಳಿಸಿದ್ದು ನಂತರ ಓಡಿ ಹೋದವರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 4) ನವೀನ್ ಬಿನ್ ಕೃಷ್ಣಪ್ಪ, 22 ವರ್ಷ, ಆದಿ ಕರ್ನಾಟಕ ಜನಾಂಗ, ವಾಸ: ಹಿರೇಬಿದನೂರು ಗ್ರಾಮ, ಗೌರಿಬಿದನೂರು ನಗರ, 5) ನರಸಿಂಹಮೂರ್ತಿ @ ಮೂರ್ತಿ ಬಿನ್ ಪೂಜಾರಪ್ಪ, 35 ವರ್ಷ, ಆದಿ ಕರ್ನಾಟಕ ಜನಾಂಗ, ವಾಸ: ಹಿರೇಬಿದನೂರು ಗ್ರಾಮ, ಗೌರಿಬಿದನೂರು ನಗರ, 6) ನಾರಾಯಣಸ್ವಾಮಿ ಬಿನ್ ರಾಮಕೃಷ್ಣಪ್ಪ, 29 ವರ್ಷ, ಆದಿ ಕರ್ನಾಟಕ ಜನಾಂಗ, ಗಾರೆ ಕೆಲಸ ವಾಸ: ಹಿರೇಬಿದನೂರು ಗ್ರಾಮ, ಗೌರಿಬಿದನೂರು ನಗರ, 7) ಗಂಗರಾಜು ಬಿನ್ ಗಂಗಾಧರಪ್ಪ, 28 ವರ್ಷ, ಡ್ರೈವರ್ ಕೆಲಸ, ಆದಿ ಕರ್ನಾಟಕ ಜನಾಂಗ, ವಾಸ: ಹಿರೇಬಿದನೂರು ಗ್ರಾಮ, ಗೌರಿಬಿದನೂರು ನಗರ, ಮತ್ತು 8) ಮದು ಬಿನ್ ಜಂಗಲಪ್ಪ, 23 ವರ್ಷ, ಕೂಲಿ ಕೆಲಸ, ಆದಿ ಕರ್ನಾಟಕ ಜನಾಂಗ, ವಾಸ: ಹಿರೇಬಿದನೂರು ಗ್ರಾಮ, ಗೌರಿಬಿದನೂರು ನಗರ, ಎಂದು ತಿಳಿಸಿದ್ದು ನಂತರ ಸ್ಥಳದಲ್ಲಿ  ಪಂಚರ ಸಮಕ್ಷಮ ಪರಿಶೀಲನೆ ಮಾಡಲಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಇಸ್ಪೀಟ್ ಎಲೆಗಳನ್ನು ಲೆಕ್ಕ ಮಾಡಲಾಗಿ ಓಟ್ಟು 52 ಇಸ್ಫೀಟ್ ಎಲೆಗಳು ಇದ್ದು ಅಲ್ಲಲ್ಲಿ ಬಿದ್ದಿದ್ದ ಹಣವನ್ನು ಲೆಕ್ಕ ಮಾಡಲಾಗಿ ಓಟ್ಟು 1580/- ರೂಗಳು ಇರುತ್ತೆ. ಮತ್ತು ನಂತರ ಪಂಚರ ಸಮಕ್ಷಮ ಸ್ಥಳದಲ್ಲಿದ್ದ ಇಸ್ಫೀಟ್ ಜೂಜಾಟದಲ್ಲಿ ಪಣವಾಗಿಟ್ಟಿದ್ದ ದ್ವಿ ಚಕ್ರ ವಾಹನಗಳ ನಂಬರ್ನ್ನು ಪರಿಶೀಲನೆ ಮಾಡಲಾಗಿ 1) ಕೆ.ಎ-40 ಇಎ-8720 ನೊಂದಣಿ ಸಂಖ್ಯೆ ಹಿರೋ ಕಂಪನಿಯ ಸ್ಪ್ಲೇಂಡರ್ ಪ್ಲಾಸ್ 2) ಕೆ.ಎ- 43 ಆರ್- 4452 ನೊಂದಣಿ ಸಂಖ್ಯೆ ಹಿರೋ ಕಂಪನಿಯ ಸ್ಪ್ಲೇಂಡರ್ ಪ್ಲಾಸ್ ಮತ್ತು 3) ಕೆ.ಎ- 40 ಇಡಿ- 7804 ಹೊಂಡ ಕಂಪನಿಯ ಡಿಯೊ ದ್ವಿ ಚಕ್ರ ವಾಹನಗಳು ಆಗಿದ್ದು ಮತ್ತು ಸ್ಥಳದಲ್ಲಿದ್ದ ಜೂಜಾಟಕ್ಕೆ ಪಣವಾಗಿಟ್ಟಿದ್ದ ಮೊಬೈಲ್ಗಳನ್ನು ಪರಿಶೀಲನೆ ಮಾಡಲಾಗಿ 1) ರವಿ ಬಾಬತ್ತು Redmi ಕಂಪನಿಯ ಮೋಬೈಲ್ ಇದ್ದು ಇದರ IMEI 863081044313662 ಆಗಿರುತ್ತೆ, 2) ನಂದಮೂರಿ ರವರ ಬಾಬತ್ತು VIVO   ಕಂಪನಿಯ Y-19  ಮೋಬೈಲ್ ಇದ್ದು ಇದು ಪೊನ್ ಸ್ವೀಚ್ ಆಫ್ ಆಗಿರುತ್ತೆ, ಮತ್ತು  3) ರಮೇಶ್ ರವರ ಬಾಬತ್ತು VIVO   ಕಂಪನಿಯ Y-19 ಮೋಬೈಲ್ ಇದ್ದು ಇದರ IMEI 865203041254297  ಮತ್ತು IMEI 865203041254289 ಆಗಿರುತ್ತೆ ಇವುಗಳನ್ನು ಸಮಕ್ಷಮ ಸಂಜೆ 4-15 ಗಂಟೆಯಿಂದ 5-15 ಗಂಟೆಯವರೆಗೆ ಜರುಗಿಸಿದ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಮೇಲ್ಕಂಡ ಆರೋಪಿತರನ್ನು ಮತ್ತು ಮಾಲುಗಳನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 5-30 ಗಂಟೆಗೆ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ 5-50 ಗಂಟೆಗೆ ಹಾಜರುಪಡಿಸಿ ಸದರಿ ಆರೋಪಿತರ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದೆ.

 

11. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 62/2021 ಕಲಂ. 323,355,504,506 ರೆ/ವಿ 34 ಐಪಿಸಿ :-

    ದಿನಾಂಕ: 15-03-2021 ರಂದು ಸಂಜೆ 7-30 ಗಂಟೆಯಲ್ಲಿ  ಪಿರ್ಯಾದಿದಾರರಾದ ಶ್ರೀಮತಿ ಶೈಲಾ ಕೋಂ ಗವಿವೀರಭದ್ರ 35 ವರ್ಷ, ಲಿಂಗಾಯಿತರು, ಗೃಹಿಣಿ,ವಾಸ-ಯಣ್ಣೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ತನ್ನ ಸ್ವಂತ ಗ್ರಾಮ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಬಪ್ಪನಹಳ್ಳಿ ಗ್ರಾಮವಾಗಿದ್ದು, ತನಗೆ ಈಗ್ಗೆ ಸುಮಾರು 13 ವರ್ಷಗಳ ಹಿಂದೆ ಇದೇ ಶಿಡ್ಲಘಟ್ಟ ತಾಲ್ಲೂಕು ಯಣ್ಣೂರು ಗ್ರಾಮದ ವಾಸಿ ಬಸವರಾಜು.ಬಿ ರವರ ಮಗನಾದ ಗವಿವೀರಭದ್ರಪ್ಪ ರವರೊಂದಿಗೆ ಮದುವೆಯಾಗಿದ್ದು, ತನಗೆ ಸುಮಾರು 13 ವರ್ಷದ ಶ್ರೇಯಸ್ ಎಂಬ ಗಂಡು ಮಗನಿದ್ದು, ತನಗೂ ಮತ್ತು ತನ್ನ ಗಂಡನಿಗೂ ಈಗ್ಗೆ ಸುಮಾರು 4 ವರ್ಷಗಳ ಹಿಂದೆ ಸಂಸಾರದ ವಿಷಯದಲ್ಲಿ ಗಲಾಟೆಗಳಾಗಿದ್ದು, ಅಂದಿನಿಂದಲೂ ತಾನು ತನ್ನ ಗಂಡನನ್ನು ಬಿಟ್ಟು ಯಣ್ಣೂರು ಗ್ರಾಮದಲ್ಲಿಯೇ ನನ್ನ ಗಂಡನ ಮನೆಯ ಮುಂಭಾಗದಲ್ಲಿ ತನ್ನ ಮಾವನಾದ ಚೀಮಂಗಲ ಶಂಕರಪ್ಪ ರವರು ಕಟ್ಟಿಸಿ ಕೊಟ್ಟಿರುವ ಮನೆಯಲ್ಲಿ ವಾಸವಾಗಿರುತ್ತೇನೆ. ತನ್ನ ಗಂಡ ಗವಿವೀರಭದ್ರಪ್ಪ ಹಾಗು ತನ್ನ ಮಗನಾದ ಶ್ರೇಯಸ್ ರವರು ತನ್ನ ಮನೆಯ ಮುಂಭಾಗದಲ್ಲಿ ಬೇರೆ ಮನೆಯಲ್ಲಿ ವಾಸವಾಗಿರುತ್ತಾರೆ. ಹೀಗಿರುವಾಗ ತನ್ನ ಮಗನಾದ ಶ್ರೇಯಸ್ ಹಾಗು ತನ್ನ ಗಂಡ ಗವಿವೀರಭದ್ರಪ್ಪ ರವರು ತಮ್ಮ ಮನೆಯ ಮುಂಭಾಗದಲ್ಲಿ ತಮ್ಮ ದ್ವಿ ಚಕ್ರ ವಾಹನವನ್ನು ನಿಲ್ಲಿಸಿ ತನಗೆ ಓಡಾಡದಂತೆ ತೊಂದರೆಯನ್ನು ಕೊಡುತ್ತಿರುತ್ತಾರೆ. ಅಲ್ಲದೇ ಇನ್ನು ಸಣ್ಣ ಪುಟ್ಟ ವಿಚಾರಗಳಲ್ಲಿ ತನಗೆ ವಿನಾ ಕಾರಣ ತೊಂದರೆಯನ್ನು ಕೊಟ್ಟು, ತನ್ನ ಮೇಲೆ ಜಗಳವನ್ನು ಮಾಡುತ್ತಿದ್ದು, ಆ ಸಮಯದಲ್ಲಿ ತಾನು, ತನ್ನ ಗಂಡ ಹಾಗು ಅವರ ಮನೆಯವರಿಗೆ ತಾನು ತನ್ನ ಪಾಡಿಗೆ ಬದುಕುತ್ತಿದ್ದು, ನನ್ನ ಸುದ್ದಿಗೆ ಯಾಕೆ ಬರುತ್ತೀರಾ ಎಂದು ಕೇಳಿದಾಗ ಅವರುಗಳು ವಿನಾ ಕಾರಣ ತನ್ನ ಮೇಲೆ ಜಗಳವನ್ನು ಮಾಡಿರುತ್ತಾರೆ. ದಿನಾಂಕ 08/03/2021 ರಂದು ಮದ್ಯಾಹ್ನ ಸುಮಾರು 12-00 ಗಂಟೆ ಸಮಯದಲ್ಲಿ ತಾನು ನಮ್ಮ ಮನೆಯ ಮುಂಭಾಗದಲ್ಲಿ ಕೆಲಸ ಮಾಡಿಕೊಂಡಿದ್ದಾಗ ಆ ಸಮಯದಲ್ಲಿ ತನ್ನ ಗಂಡನಾದ ಗವಿವೀರಭದ್ರಪ್ಪ, ತನ್ನ ಮಾವ ಬಸವರಾಜು.ಬಿ, ತನ್ನ ಅತ್ತೆ ರತ್ನಮ್ಮ ರವರು ತನ್ನ ಬಳಿ ಬಂದು ತನ್ನನ್ನು ಕುರಿತು ಅವಾಚ್ಯ ಶಬ್ಧಗಳಿಂದ ಬೈದು ನೀನು ಈ ಮನೆಯನ್ನು ಖಾಲಿ ಮಾಡಿಕೊಂಡು ಹೋಗೇ ಎಂದು ಏಕಾಏಕಿ ತನ್ನ ಮೇಲೆ ಜಗಳವನ್ನು ತೆಗೆದು ಕೆಟ್ಟ ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಮೈ ಮೇಲೆ ಹೊಡೆದು, ಆ ಪೈಕಿ ತನ್ನ ಗಂಡನಾದ ಗವಿವೀರಭದ್ರಪ್ಪ ರವರು ತನ್ನ ಕಾಲಿನಲ್ಲಿದ್ದ ಚಪ್ಪಲಿಯನ್ನು ತೆಗೆದು ತನಗೆ ಹೊಡೆದು ಅವಮಾನವನ್ನುಂಟು ಮಾಡಿ, ಮೇಲ್ಕಂಡವರೆಲ್ಲರೂ ಸೇರಿ ನೀನು ಈ ಮನೆ ಮತ್ತು ಈ ಊರನ್ನು ಬಿಟ್ಟು ಹೋಗದಿದ್ದರೆ ನಿನಗೆ ಸಾಯಿಸಿ ನಿನ್ನ ಶವ ಸಿಗದಂತೆ ಮಾಡುತ್ತೇವೆಂದು ಪ್ರಾಣ ಬೆದರಿಕೆಯನ್ನು ಹಾಕಿ ಗಲಾಟೆಯನ್ನು ಮಾಡುತ್ತಿದ್ದಾಗ ಆ ಸಮಯದಲ್ಲಿ ತಮ್ಮ ಗ್ರಾಮದ ವಾಸಿಗಳಾದ ನಾಗರಾಜ್ ಬಿನ್ ಮುನಿಯಪ್ಪ, ನಾಗರಾಜ್ ಬಿನ್ ವೆಂಕಟೇಶಪ್ಪ ಹಾಗು ಇತರರು ಅಡ್ಡ ಬಂದು ಜಗಳವನ್ನು ಬಿಡಿಸಿರುತ್ತಾರೆ. ನಂತರ ಈ ವಿಷಯದ ಬಗ್ಗೆ ತಮ್ಮ ಗ್ರಾಮದ ಹಿರಿಯರು ಗ್ರಾಮದಲ್ಲಿ ನ್ಯಾಯ ಪಂಚಾಯ್ತಿ ಮಾಡೋಣವೆಂದು ತಿಳಿಸಿದ್ದು, ಇದುವರೆವಿಗೂ ಸಹ ಮೇಲ್ಕಂಡವರು ನ್ಯಾಯ ಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೋರಿ ಕೊಟ್ಟ ದೂರಿನ ಮೇರಗೆ ಠಾಣಾ ಮೊ ಸಂ:62/2021 ಕಲಂ 323,355,504,506 ರೆ/ವಿ 34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

12. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 62/2021 ಕಲಂ. 323,324,506,504 ರೆ/ವಿ 34 ಐಪಿಸಿ :-

    ದಿನಾಂಕ:-16/03/2021 ರಂದು ಮದ್ಯಾಹ್ನ 1-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಗವಿವೀರಭದ್ರಪ್ಪ ಬಿನ್ ಬಸವರಾಜು, 40 ವರ್ಷ, ಲಿಂಗಾಯಿತರು, ಜಿರಾಯ್ತಿ, ವಾಸ-ಯಣ್ಣೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ಈಗ್ಗೆ ಸುಮಾರು 13 ವರ್ಷಗಳ ಹಿಂದೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಬಪ್ಪನಹಳ್ಳಿ ಗ್ರಾಮದ ವಾಸಿ ಪುಟ್ಟಣ್ಣ ರವರ ಮಗಳಾದ ಶೈಲಾ ರವರೊಂದಿಗೆ ಮದುವೆಯಾಗಿದ್ದು, ತಮಗೆ ಶ್ರೇಯಸ್ ಎಂಬ ಮಗನಿದ್ದು, ಮದುವೆಯಾದ ನಂತರ ತಾನು ಮತ್ತು ತನ್ನ ಹೆಂಡತಿ ಶೈಲಾ ರವರು 4 ವರ್ಷಗಳ ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡು ಬಂದಿದ್ದು ನಂತರದ ದಿನಗಳಲ್ಲಿ ಸಂಸಾರದ ವಿಚಾರದಲ್ಲಿ ತಮ್ಮ ಮದ್ಯೆ ಹೊಂದಾಣಿಕೆ ಇಲ್ಲದೇ ನಾವಿಬ್ಬರು ಬೇರೆ-ಬೇರೆಯಾಗಿ ವಾಸವಾಗಿರುತ್ತೇವೆ. ಹೀಗಿರುವಾಗ ದಿನಾಂಕ 08/03/2021 ರಂದು ಮದ್ಯಾಹ್ನ ಸುಮಾರು 12-00 ಗಂಟೆ ಸಮಯದಲ್ಲಿ ತಾನು ತಮ್ಮ ಮನೆಯ ಬಳಿ ಇದ್ದಾಗ ತನ್ನ ಹೆಂಡತಿಯಾದ ಶೈಲಾ ಹಾಗು ಈಕೆಯ ಮಾವನಾದ ಚೀಮಂಗಲ ಗ್ರಾಮದ ವಾಸಿ ಶಂಕರಪ್ಪ ಬಿನ್ ಬಸವರಾಜು, ಈತನ ಹೆಂಡತಿ ಗೀತಾ ರವರು ತಮ್ಮ ಮನೆಯ ಬಳಿ ಬಂದು ಲೋಫರ್ ನನ್ನ ಮಗನೇ, ಬೋಳಿ ನನ್ನ ಮಗನೇ, ಈ ಮನೆ ನಮಗೆ ಸೇರ ಬೇಕು ನೀನು ಖಾಲಿ ಮಾಡಿಕೊಂಡು ಹೋಗು ಎಂದು ಅವಾಚ್ಯ ಶಬ್ದಗಳಿಂದ ಬೈದಾಗ ತಾನು ಈ ಮನೆ ನನ್ನದು ನಾನು ಯಾಕೇ ಮನೆಯನ್ನು ಬಿಟ್ಟು ಹೋಗ ಬೇಕು ಎಂದು ಹೇಳುತ್ತಿದ್ದಂತೆ ಮೇಲ್ಕಂಡವರು ಕೈಗಳಿಂದ ತನ್ನ ಮೈ ಮೇಲೆ ಹೊಡೆದು ನೋವುಂಟು ಮಾಡಿದಾಗ ಶಂಕರ್ ರವರು ಅಲ್ಲಿಯೇ ಬಿದ್ದಿದ್ದ ಕೋಲನ್ನು ತೆಗೆದುಕೊಂಡು ತನ್ನ ಮೈ ಮೇಲೆ ಹೊಡೆದು ನೋವುಂಟು ಮಾಡಿ ಜಗಳವನ್ನು ಮಾಡುತ್ತಿದ್ದಾಗ ತಮ್ಮ ಅಕ್ಕ ಪಕ್ಕದ ಮನೆಯವರು ಅಡ್ಡ ಬಂದು ಜಗಳವನ್ನು ಬಿಡಿಸಿದಾಗ ಮೇಲ್ಕಂಡವರು ತನ್ನನ್ನು ಕುರಿತು ನೀನು ಮನೆಯನ್ನು ಖಾಲಿ ಮಾಡದಿದ್ದರೆ ನಿನಗೆ ಒಂದು ಗತಿ ಕಾಣಿಸುತ್ತೇನೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ನಂತರ ತನ್ನ ಮೈಯಲ್ಲಿ ನೋವು ಇದ್ದ ಕಾರಣ ತಾನು ಶಿಡ್ಲಘಟ್ಟ ಆಸ್ಪತ್ರೆಗೆ ಬಂದು ಚಿಕಿತ್ಸೆಯನ್ನು ಪಡೆಸಿಕೊಂಡು ಹೋಗಿದ್ದು, ಈ ವಿಷಯದ ಬಗ್ಗೆ ತಮ್ಮ ಗ್ರಾಮದ ಹಿರಿಯರು ಗ್ರಾಮದಲ್ಲಿ ನ್ಯಾಯ ಪಂಚಾಯ್ತಿ ಮಾಡೋಣವೆಂದು ತಿಳಿಸಿದ್ದು, ಇದುವರೆವಿಗೂ ಸಹ ಮೇಲ್ಕಂಡವರು ಯಾವುದೇ ನ್ಯಾಯ ಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

ಇತ್ತೀಚಿನ ನವೀಕರಣ​ : 16-03-2021 05:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080