ಅಭಿಪ್ರಾಯ / ಸಲಹೆಗಳು

 

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.42/2021 ಕಲಂ. ಮನುಷ್ಯ ಕಾಣೆ:-

     ದಿನಾಂಕ:16-02-2021 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿದಾರಾದ ವೆಂಕಟೇಶ ಬಿನ್ ಲೇಟ್ ನಾರಾಯಣಪ್ಪ, 30 ವರ್ಷ, ಆದಿ ಕರ್ನಾಟಕ ಜನಾಂಗ, ಬಿ.ಎಫ್.ಟಿ ಕೆಲಸ, ವಾಸ: ಮಲ್ಲಸಂದ್ರ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂಧರೆ- ನನ್ನ ತಂದೆ ನಾರಾಯಣಪ್ಪರವರಿಗೆ 1 ನೇಅಶ್ವತಮ್ಮ, 2 ನೇ ನೀಡುಮಾಮಿಡಮ್ಮ, ಎಂಬ ಇಬ್ಬರು ಹೆಂಡತಿಯರು ಇರುತ್ತಾರೆ. ನಮ್ಮ ತಾಯಿ ಅಶ್ವತಮ್ಮ ಆಗಿದ್ದು, ನಮ್ಮ ತಾಯಿಯ ಸ್ವಂತ ತಂಗಿಯೇ ನಿಡುಮಾಮಿಡಮ್ಮ ಆಗಿರುತ್ತಾರೆ. ನಮ್ಮ ತಾಯಿಗೆ 1 ನೇ ಲಕ್ಷ್ಮೀನರಸಮ್ಮ, 2 ನೇ ವೆಂಕಟೇಶ್ ಆದ ನಾನು ಇಬ್ಬರು ಮಕ್ಕಳಿರುತ್ತೇವೆ. ನಮ್ಮ ಚಿಕ್ಕಮ್ಮಳಿಗೆ 1 ನೇ ವೆಂಕಟರಮಣಮ್ಮ, 2 ನೇ ರಾಮಚಂದ್ರ ಎಂಬ ಇಬ್ಬರು ಮಕ್ಕಳಿರುತ್ತಾರೆ. ನಮ್ಮ ಅಕ್ಕಂದಿರಿಬ್ಬರಿಗೂ ಮದುವೆಗಳಾಗಿದ್ದು, ನಾನು ನನ್ನ ತಾಯಿ, ನನ್ನ ಚಿಕ್ಕಮ್ಮ ನಿಡುಮಾಮಿಡಮ್ಮ, ನನ್ನ ತಮ್ಮ ರಾಮಚಂದ್ರ ರವರು ಒಂದೇ ಮನೆಯಲ್ಲಿ ವಾಸವಾಗಿರುತ್ತೇವೆ. ನನ್ನ ತಮ್ಮನಾದ ರಾಮಚಂದ್ರನು ಚಿಕ್ಕಬಳ್ಳಾಪುರದ ವಿಶ್ವವಿವೇಕ ಕಾಲೇಜಿನಲ್ಲಿ ಲೆಕ್ಚರರ್ ಆಗಿ ಕೆಲಸಕ್ಕೆ ಹೋಗಿ ಬರುತ್ತಿದ್ದನು. ದಿನಾಂಕ;14-02-2021 ರಂದು ಬೆಳಿಗ್ಗೆ ಸುಮಾರು 11-00 ಗಂಟೆಯಲ್ಲಿ ಮನೆಯಿಂದ ಹೊರಗೆ ಹೋದವನು ಇದುವರೆವಿಗೂ ಮನೆಗೆ ವಾಪಸ್ಸಾಗದೆ ಕಾಣೆಯಾಗಿರುತ್ತಾನೆ. ನಾನು ನಮ್ಮ ನೆಂಟರು ಮತ್ತು ಸ್ನೇಹಿತರ ಮನೆಗಳಲ್ಲಿ ಇದುವರೆವಿಗೂ ಹುಡುಕಾಡಲಾಗಿ ಎಲ್ಲಿಯೂ ಪತ್ತೆಯಾಗದ ಕಾರಣ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತಿದ್ದು, ಕಾಣೆಯಾಗಿರುವ ನನ್ನ ತಮ್ಮ ಪತ್ತೆ ಮಾಡಿಕೊಡಲು ಕೋರಿ ನೀಡಿದ ದೂರಾಗಿರುತ್ತೆ.

 

2. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.43/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ.16/02/2021 ರಂದು ಮದ್ಯಾಹ್ನ 1-30 ಗಂಟೆಗೆ ಫಿರ್ಯಾಧಿದಾರರಾದ ವಲ್ಲಂ ಗೋವಿಂದ ರಾಜು ಬಿನ್ ವಲ್ಲಂ ಕೃಷ್ಣಯ್ಯ, 58 ವರ್ಷ, ಮುದುರಾಜು ಜನಾಂಗ, ವ್ಯಾಪಾರ, ವಾಸ ಮನೆ ನಂ 6-3-82 ರಾಮನಗರ, ಅನಂತಪುರಂ ಟೌನ್. ಅನಂತಪುರಂ ಜಿಲ್ಲೆ, ಆಂಧ್ರಪ್ರದೇಶ.ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಆಟೋ ಕನ್ಸ್ಲೇಟೆನ್ಸಿ ಕೆಲಸದಿಂದ ಜೀವನ ಮಾಡಿಕೊಂಡಿರುತ್ತೆನೆ. ದಿನಾಂಕ 19/12/2020 ರಂದು ನಾನು ಬಾಗೇಪಲ್ಲಿ ಟೌನ್ ನಲ್ಲಿ ಯಾವುದೋ ಕಾರನ್ನು ವ್ಯಾಪಾರಕ್ಕಾಗಿ ನೋಡಲು ಬಂದಿದ್ದು, ಮದ್ಯಾಹ್ನ ಸುಮಾರು 2-15 ಗಂಟೆಯಲ್ಲಿ ಬಾಗೇಪಲ್ಲಿ ಟಿ.ಬಿ ಕ್ರಾಸ್ ಬಳಿ ಇರುವ ಆನಂದ ವೈನ್ಸ್ ಮುಂಭಾಗದಲ್ಲಿ ಹೈವೆಯಲ್ಲಿ ಬೆಂಗಳೂರು-ಹೈದ್ರಾಬಾದ್ ರಸ್ತೆಯನ್ನು ದಾಟಿಕೊಂಡು ರಸ್ತೆಯ ಎಡಬಾಗದಲ್ಲಿ ಹೋಗುತ್ತಿರುವಾಗ ಬೆಂಗಳೂರು ಕಡೆಯಿಂದ ಬಂದ ಕೆ.ಎ-05-ಎನ್.ಎ-6086 ಕಾರಿನ ಚಾಲಕ ತನ್ನ ಕಾರನ್ನು ಅತಿವೇಗವಾಗಿ ಚಾಲನೆ ಮಾಡಿಕೊಂಡು ನನಗೆ ಡಿಕ್ಕಿ ಹೊಡೆದು ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುತ್ತಾನೆ. ಡಿಕ್ಕಿ ಹೊಡೆದ ಪರಿಣಾಮ  ನನ್ನ ಎಡಕಾಲಿಗೆ ರಕ್ತಗಾಯ, ಮತ್ತು ಎಡಕೈಗೆ, ಎಡಕಣ್ಣಿನ ಬಳಿ ರಕ್ತ ಗಾಯವಾಗಿ ರಸ್ತೆಯಲ್ಲಿ ಬಿದ್ದಿದ್ದು ಸ್ಥಳೀಯರು ನನಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ  ಆಂಧ್ರಪ್ರದೇಶದ ಅನಂತಪುರದ ಸವೇರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತೇನೆ. ನಾನು ಕೋಮದಲ್ಲಿದ್ದರಿಂದ ಈ ದಿನ ಬಂದು ತಡವಾಗಿ ದೂರು ನೀಡುತ್ತಿರುತ್ತೇನೆ. ಆದ್ದರಿಂದ ನನಗೆ ಅಪಘಾತವನ್ನುಂಟು ಮಾಡಿದ ಕೆ.ಎ-05-ಎನ್.ಎ-6086 ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರಾಗಿರುತ್ತೆ.

 

3. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.09/2021 ಕಲಂ. 279,337 ಐ.ಪಿ.ಸಿ & 185 ಐ.ಎಂ.ವಿ ಆಕ್ಟ್:-

     ದಿನಾಂಕ:-15/02/2021 ರಂದು ರಾತ್ರಿ 8-00 ಗಂಟೆಗೆ ಪಿರ್ಯಾಧಿದಾರರಾದ ಶ್ರೀ. ರಮೇಶ್ ಬಿನ್ ನರಸಿಂಹಪ್ಪ 30 ವರ್ಷ, ಗೊಲ್ಲರು, ಕೂಲಿ ಜನಾಂಗ, ಜಾತವಾರ ಹೊಸಹಳ್ಳಿ ಗ್ರಾಮ, ನಂದಿ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ತಮ್ಮ ಅಣ್ಣನ ಮಗನಾದ ಶ್ರೀ.ನವೀನ್ ಕುಮಾರ್ ಬಿನ್ ನರಸಿಂಹಮೂರ್ತಿ 22 ವರ್ಷ, ಇಂಜಿನೀಯರಿಂಗ್ ವಿದ್ಯಾರ್ಥಿ, ಜಾತವಾರ ಹೊಸಹಳ್ಳಿ ಗ್ರಾಮ ರವರು ದಿನಾಂಕ:-15/02/2021 ರಂದು ಮೋಟ್ಲೂರು ಗ್ರಾಮದಲ್ಲಿನ ತನ್ನ ಅತ್ತೆಯ ಮನೆಗೆ ಹೋಗಿ ಬರುವುದಾಗಿ ಹೇಳಿ ತನ್ನ ತಂದೆಯ ಬಾಬತ್ತು KA-40-H-8751 ರ ದ್ವಿಚಕ್ರವಾಹನವನ್ನು ಚಾಲನೆ ಮಾಡಿಕೊಂಡು ಹೋಗಿದ್ದು, ದಿನಾಂಕ:-15/02/2021 ರಂದು ಸುಮಾರು ಸಂಜೆ 7-20 ಗಂಟೆಯ ಸಮಯದಲ್ಲಿ ತಮ್ಮ ಅಣ್ಣನ ಮಗನಾದ ಶ್ರೀ.ನವೀನ್ ಕುಮಾರ್ ರವರಿಗೆ ಪಿರ್ಯಾಧಿದಾರರು ಮೊಬೈಲ್ ಕರೆಮಾಡಿದಾಗ ಅವನ ಮೊಬೈಲ್ ಅನ್ನು ಯಾರೋ ರಿಸಿವ್ ಮಾಡಿ ಚಿಕ್ಕಬಳ್ಳಾಪುರ ನಗರದ ನಿಮ್ಮಾಕಲಕುಂಟೆ ಬಳಿ ಶ್ರೀ.ನವೀನ್ ಕುಮಾರ್ ರವರಿಗೆ ಅಪಘಾತವಾಗಿ ಅವರ ಕಾಲಿಗೆ ಗಾಯವಾಗಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು, ಪಿರ್ಯಾಧಿದಾರರು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು, ತಮ್ಮ ಅಣ್ಣನ ಮಗನಾದ ಶ್ರೀ.ನವೀನ್ ಕುಮಾರ್ ರವರನ್ನು ನೋಡಲಾಗಿ ಅವರ ಬಲ ಮೊಣಕಾಲಿನ ಬಳಿ ಹಾಗೂ ಎಡ ಮೊಣಕೈ ಬಳಿ ರಕ್ತ ಗಾಯಗಳಾಗಿದ್ದು, ಸದರಿ ಅಪಘಾತದ ಬಗ್ಗೆ ಕೇಳಲಾಗಿ ದಿನಾಂಕ:-15/02/2021 ರಂದು ತಮ್ಮ ಅಣ್ಣನ ಮಗನಾದ ಶ್ರೀ.ನವೀನ್ ಕುಮಾರ್ ಕುಮಾರ್ ರವರು ತಮ್ಮ ಅತ್ತೆಯ ಊರಿನಿಂದ ತಮ್ಮ ಗ್ರಾಮಕ್ಕೆ ಬರಲು ಸಂಜೆ ಸುಮಾರು 7-00 ಗಂಟೆಯ ಸಮಯದಲ್ಲಿ ಗೌರಿಬಿದನೂರು - ಚಿಕ್ಕಬಳ್ಳಾಪುರ ಎನ್.ಎಚ್-234 ಎಂ.ಜಿ ರಸ್ತೆಯ ನಿಮ್ಮಾಕಲಕುಂಟೆ ಚೆಕ್ ಪೋಸ್ಟ್ ಬಳಿ ತನ್ನ ತಂದೆಯ ಬಾಬತ್ತು KA-40-H-8751 ರ ದ್ವಿಚಕ್ರವಾಹನವನ್ನು ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಎದುರಿಗೆ ಚಿಕ್ಕಬಳ್ಳಾಪುರ ಕಡೆಯಿಂದ ಬಂದ KA-43-H-5670 ರ ದ್ವಿಚಕ್ರವಾಹನವನ್ನು ವಾಹನ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ತಮ್ಮ ಅಣ್ಣನ ಮಗನಾದ ಶ್ರೀ.ನವೀನ್ ಕುಮಾರ್ ರವರು ದ್ವಿಚಕ್ರವಾಹನ ಸಮೇತ ಠಾರ್ ರಸ್ತೆಯಲ್ಲಿ ಬಿದ್ದಾಗ ಬಲ ಮೊಣಕಾಲಿನ ಬಳಿ ಹಾಗೂ ಎಡ ಮೊಣಕೈ ಬಳಿ ರಕ್ತ ಗಾಯಗಳಾಗಿ ಅಲ್ಲಿನ ಸ್ಥಳಿಯರು ತನ್ನನ್ನು ಉಚರಿಸಿ ಅಲ್ಲಿಗೆ ಬಂದ 108 ಆಂಬ್ಯೂಲೆನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಲಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಯನ್ನು ಪಡೆಯುತ್ತಿದ್ದ ಅಪಘಾತ ಪಡಿಸಿದ ದ್ವಿಚಕ್ರವಾಹನ ಸವಾರನನ್ನು ನೋಡಲಾಗಿ ಸದರಿ ಸವಾರ ಮೇಲ್ನೋಟಕ್ಕೆ ಪಾನಮತ್ತನಾಗಿರುವುದಾಗಿ ಕಂಡು ಬಂದಿದ್ದು, ಸದರಿ ಸವಾರನಿಗೂ ಸಹಾ ಬಲ ಕೈಗೆ ಹಾಗೂ ಬಲಕಾಲಿನ ಹಿಮ್ಮಡಿಗೆ ಗಾಯಗಳಾಗಿದ್ದು, ಸದರಿ ಅಪಘಾತ ಪಡಿಸಿದ ದ್ವಿಚಕ್ರವಾಹನ ಸವಾರನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ನಟರಾಜ್ ಬಿನ್ ರಾಜೇಂದ್ರ 28 ವರ್ಷ, ಬೋವಿ ಜನಾಂಗ,ಕಾರ್ಪೆಂಟರ್ ಕೆಲಸ, ತಿಪ್ಪೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದ್ದು, ಮಧ್ಯಪಾನ ಮಾಡಿ ದ್ವಿಚಕ್ರವಾಹನವನ್ನು ಚಾಲನೆ ಮಾಡಿ ಅಪಘಾತ ಪಡಿಸಿದ KA-43-H-5670  ರ ದ್ವಿಚಕ್ರವಾಹನ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಸಿಕೊಂಡಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.71/2021 ಕಲಂ. 15(ಎ) ಕೆ.ಇ  ಆಕ್ಟ್:-

     ದಿನಾಂಕ: 16/02/2021 ರಂದು ಬೆಳಿಗ್ಗೆ 10.45 ಗಂಟೆಗೆ ಠಾಣೆಯ ಎ.ಎಸ್.ಐ, ಶ್ರೀ.ಅಶ್ವಥನಾರಾಯಣಸ್ವಾಮಿ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ: 16/02/2021 ರಂದು ಬೆಳಿಗ್ಗೆ ತಾನು ಮತ್ತು ಠಾಣೆಯ ಬೀಟ್ ಸಿಬ್ಬಂದಿ ಶ್ರೀ.ನರಸಿಂಹಮೂರ್ತಿ, ಸಿ.ಹೆಚ್.ಸಿ-124 ರವರು ಮಾನ್ಯ ಪಿ.ಎಸ್.ಐ ರವರ ಸೂಚನೆಯಂತೆ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಗಸ್ತು ಕರ್ತವ್ಯಕ್ಕೆ ಹೋಗಿದ್ದು, ಅದರಂತೆ ತಾವು ಠಾಣಾ ವ್ಯಾಪ್ತಿಯ ದೊಡ್ಡಹಳ್ಳಿ ಗ್ರಾಮದ ಕಡೆ ಗಸ್ತು ಕರ್ತವ್ಯವನ್ನು ನಿರ್ವಹಿಸಿಕೊಂಡು ಇದೇ ದಿನ ಬೆಳಿಗ್ಗೆ 09.00 ಗಂಟೆಗೆ ಸುಜ್ಜನಹಳ್ಳಿ ಗ್ರಾಮಕ್ಕೆ ಹೋದಾಗ ಸದರಿ ಗ್ರಾಮದ ವಾಸಿ ವೆಂಕಟೇಶಪ್ಪ ಬಿನ್ ಲೇಟ್ ಯರ್ರವೆಂಕಟಪ್ಪ ಎಂಬುವರು ಗ್ರಾಮದಲ್ಲಿ ಅವರ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಾತ್ಮೀದಾರರಿಂದ ತಮಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಾವು ಪಂಚಾಯ್ತಿದಾರರೊಂದಿಗೆ ಸದರಿ ಸ್ಥಳಕ್ಕೆ ಹೋಗಿ ಧಾಳಿ ಮಾಡಲಾಗಿ ಸ್ಥಳದಲ್ಲಿದ್ದವರು ಹಾಗೂ ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ಸ್ಥಳದಿಂದ ಓಡಿ ಹೋಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವರ ಬಗ್ಗೆ ಬಾತ್ಮಿದಾರರಲ್ಲಿ ವಿಚಾರಿಸಲಾಗಿ ಸದರಿಯವರ ಹೆಸರು ವೆಂಕಟೇಶಪ್ಪ ಬಿನ್ ಲೇಟ್ ಯರ್ರವೆಂಕಟಪ್ಪ, 50 ವರ್ಷ, ಆದಿಕರ್ನಾಟಕ ಜನಾಂಗ, ಜಿರಾಯ್ತಿ ಮತ್ತು ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ, ವಾಸ ಸುಜ್ಜನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ.  ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ 1).ಹೈವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 90 ML ನ 04 ಟೆಟ್ರಾ ಪ್ಯಾಕೆಟ್ ಗಳು, 2).ಹೈವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಓಪನ್ ಆಗಿರುವ 90 ML ನ 02 ಮದ್ಯದ ಟೆಟ್ರಾ ಪಾಕೇಟ್ ಗಳು, 3).ಒಂದು ಲೀಟರ್ ಸಾಮರ್ಥ್ಯದ ಓಪನ್ ಆಗಿರುವ ಒಂದು ಖಾಲಿ ಪ್ಲಾಸ್ಟಿಕ್ ಬಾಟಲ್ 4) 02 ಪ್ಲಾಸ್ಟಿಕ್ ಗ್ಲಾಸ್ ಗಳಿದ್ದು, ಸದರಿಯವುಗಳನ್ನು ಇದೇ ದಿನ ಬೆಳಿಗ್ಗೆ 09.15 ಗಂಟೆಯಿಂದ ಬೆಳಿಗ್ಗೆ 10.00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೇನೆ. ಆದ್ದರಿಂದ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಮೇಲ್ಕಂಡ  ವೆಂಕಟೇಶಪ್ಪ ಬಿನ್ ಲೇಟ್ ಯರ್ರವೆಂಕಟಪ್ಪ ರವರ ವಿರುದ್ದ ಕಾನೂನು ರೀತ್ಯ ಸೂಕ್ತ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

5. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.41/2021  ಕಲಂ. 143,147,148,323,324,504,506,149 ಐ.ಪಿ.ಸಿ :-

     ದಿನಾಂಕ:15/02/2021 ರಂದು  ಸಂಜೆ 17-30 ಗಂಟೆಗೆ ಪಿರ್ಯಾದಿದಾರರಾದ ಮುದ್ದುಕೃಷ್ಣ ಬಿನ್ ಲೇಟ್ ಗಂಗಪ್ಪ, 30 ವರ್ಷ,ಆದಿ ಕರ್ನಾಟಕ, ಕೂಲಿ ಕೆಲಸ ವಾಸ ಹೊಸೂರು ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರು ತನ್ನ ಅಣ್ಣ ನಾಗರಾಜು, ಅತ್ತಿಗೆ ಪುಷ್ಪ, ಮತ್ತು ತಾಯಿ ಗಂಗಮ್ಮ ರವರೊಂದಿಗೆ ಒಂದೇ ಮನೆಯಲ್ಲಿ ಒಟ್ಟಿಗೆ ವಾಸವಾಗಿದ್ದು,  ದಿನಾಂಕ:12/02/2021 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ  ಅಶ್ವತ್ಥಪ್ಪ ರವರ ಮಗ ವರ್ದನ ಹೊಸೂರು ಗ್ರಾಮದ ಜಾಲಪ್ಪನಕುಂಟೆ ಸಮೀಪ ದ್ವಿ ಚಕ್ರವಾಹನವನ್ನು ವೇಗವಾಗಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದರಿಂದ ಪಿರ್ಯಾದಿದಾರರು ನಿದಾನವಾಗಿ ಚಾಲನೆ ಮಾಡಿಕೊಂಡು ಹೋಗೋ ಎಂದು ಹೇಳಿದ್ದಕ್ಕೆ ನೀನೂ ಯಾರೋ ಕೇಳೋದಕ್ಕೆ ಎಂದು ಹೇಳಿ ವರ್ಧನ ಅವರ ಮನೆಗೆ ಹೋಗಿಪಿರ್ಯಾದಿದಾರರ ಬಗ್ಗೆ ಅವರ ತಂದೆ ಅಶ್ವತ್ಥಪ್ಪ ರವರಿಗೆ ಇಲ್ಲ ಸಲ್ಲದ ಚಾಡಿ ಮಾತುಗಳನ್ನು ಹೇಳಿದ್ದು,  ನಂತರ ದಿನಾಂಕ:14/02/2021 ರಂದು ರಾತ್ರಿ  ಸುಮಾರು 8-30 ಗಂಟೆ ಸಮಯದಲ್ಲಿ ಪಿರ್ಯಾದಿದಾರರ ಅಣ್ಣ ಮತ್ತು ಅತ್ತಿಗೆ ಪುಷ್ಪ ರವರು ದರ್ಮಸ್ಥಳ ಸಂಘಕ್ಕೆ ಚೀಟಿ ಕಟ್ಟಲು ಹೋಗಿದ್ದಾಗ ಮನೆಯಲ್ಲಿ ಪಿರ್ಯಾದಿದಾರರು ಒಬ್ಬರೇ ಇರುವುದನ್ನು ನೋಡಿಕೊಂಡು ಅಶ್ವತ್ಥಪ್ಪ ಬಿನ್ ಮುದಗಂಗಪ್ಪ, ರವಿ ಬಿನ್ ವೆಂಕಟರವಣಪ್ಪ @ ಬಜ್ಜೇರಂಗಪ್ಪ  ಮಂಜು ಬಿನ್ ವೆಂಕಟರವಣಪ್ಪ @ ಬಜ್ಜೆರಂಗಪ್ಪ,  ನಾಗರಾಜು ಬಿನ್ ಗಂಗಪ್ಪ,  ರಾಮ ಬಿನ್ ವೆಂಕಟ್ರೋಣಪ್ಪ,  ಮತ್ತು ವೆಂಕಟೇಶ ಬಿನ್ ಚಿಕ್ಕ ವೆಂಕಟಪ್ಪ ರವರು ಅಕ್ರಮ ಗುಂಪು ಕಟ್ಟಿಕೊಂಡು ಕೈಗಳಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ಪಿರ್ಯಾದಿದಾರರ ಮನೆಯ ಬಳಿ ಬಂದು ಆ ಪೈಕಿ ಮಂಜು @ ಕಮ್ಮ  ಕಲ್ಲಿನಿಂದ ಪಿರ್ಯಾದಿದಾರರ ತಲೆಗೆ ಹೊಡೆದು ರಕ್ತಗಾಯ ಮಾಡಿದ, ನಂತರ ಅಶ್ವತ್ಥಪ್ಪ ಅಲ್ಲೇ ಬಿದ್ದಿದ್ದ ಮತ್ತೊಂದು ಕಲ್ಲಿನಿಂದಿ ಪಿರ್ಯಾದಿದಾರರ ಬಲ ಕಾಲಿನ ಮೊಣಕಾಲಿಗೆ ಹೊಡೆದು ರಕ್ತಗಾಯ ಮಾಡಿದ, ರವಿ, ನಾಗರಾಜು, ರಾಮ ಮತ್ತು ವೆಂಕಟೇಶ ರವರು ಕೈಗಳಿಂದ ಪಿರ್ಯಾದಿದಾರರ ಮೈ ಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿ ಇವನಮ್ಮನ್ನೇ ಕೇಯ ಈಲೋಫರ್ ನನ್ನ ಮಗನದು ಅತಿಯಾಗಿದೆ,ಇವನನ್ನು ಮುಗಿಸಿಬಿಡೋಣ ಎಂದು  ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿದರು. ಅಲ್ಲಿಯೇ ಇದ್ದ ನಮ್ಮ ಗ್ರಾಮದ ನಾಗಮ್ಮ ಮತ್ತು ಶ್ರೀರಾಮ ಜಗಳ ಬಿಡಿಸಿದ್ದು, ಪಿರ್ಯಾದಿದಾರರ ಅಣ್ಣ ನಾಗರಾಜು ರವರಿಗೆ ಪೋನ್ ಮಾಡಿ ವಿಚಾರ ತಿಳಿಸಿದಾಗ ಅಣ್ಣ ನಾಗರಾಜು ರವರು ಸ್ಥಳಕ್ಕೆ ಬಂದು ಗಾಯಗೊಂಡಿದ್ದ ಪಿರ್ಯಾದಿದಾರರನ್ನು ಯಾವುದೋ ದ್ವಿ ಚಕ್ರ ವಾಹನದಲ್ಲಿ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದು ದಾಖಲು ಮಾಡಿದ್ದು ಪಿರ್ಯಾದಿದಾರರಿಗೆ ಕಲ್ಲುಗಳಿಂದ ಹಲ್ಲೇ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುವ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ದೂರು.

 

6. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.19/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ 15/02/2021  ರಂದು ಸಂಜೆ 05-15 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಮಾಲು ಮತ್ತು ಮಹಜರ್ ನ್ನು ಹಾಜರುಪಡಿಸಿ ನೀಡಿದ ವರದಿಯ ಸಾರಾಂಶವೇನೆಂದರೆ,  ದಿನಾಂಕ:15/02/2021 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿದ್ದಾಗ ಯರಮರೆಡ್ಡಿಹಳ್ಳಿ ಗ್ರಾಮದ ವೆಂಕಟರೆಡ್ಡಿ ಬಿನ್ ವೆಂಕಟರಾಯಪ್ಪ ರವರ ಚಿಲ್ಲರೆ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಅದರಂತೆ ಸದರಿ ಚಿಲ್ಲರೆ ಅಂಗಡಿ ಬಳಿ ದಾಳಿ ನಡೆಸುವ ಸಲುವಾಗಿ ತಾನು ಸಿಬ್ಬಂದಿಯಾದ ಸಿಹೆಚ್ಸಿ-56 ಅಶ್ವಥಪ್ಪ, ಸಿಪಿಸಿ-101 ಶ್ರೀನಿವಾಸ ರವರೊಂದಿಗೆ ಸರ್ಕಾರಿ ವಾಹನ ಸಂಖ್ಯೆ ಕೆಎ-40-ಜಿ-539 ಜೀಪ್ ನಲ್ಲಿ ಯರಮರೆಡ್ಡಿಹಳ್ಳಿ ಗ್ರಾಮದ ಬಳಿ ಹೋಗಿ ಅಲ್ಲಿನವರಿಗೆ ವಿಚಾರವನ್ನು ತಿಳಿಸಿ ಅವರನ್ನು ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರೊಂದಿಗೆ ಯರಮರೆಡ್ಡಿಹಳ್ಳಿ ಗ್ರಾಮದ ವೆಂಕಟರೆಡ್ಡಿ ಬಿನ್ ವೆಂಕಟರಾಯಪ್ಪ ರವರ ಚಿಲ್ಲರೆ ಅಂಗಡಿ ಬಳಿ ಹೋಗಿ ನೋಡಲಾಗಿ ಅಂಗಡಿಯಲ್ಲಿರುವ ಆಸಾಮಿ ಚಿಲ್ಲರೆ ಅಂಗಡಿ ಮುಂದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಪೊಲೀಸರನ್ನು ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು ಮತ್ತು ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟ  ಚಿಲ್ಲರೆ ಅಂಗಡಿಯಲ್ಲಿದ್ದಾತ ಸಮವಸ್ತ್ರದಲ್ಲಿದ್ದ ತಮ್ಮನ್ನು ನೋಡಿ ಓಡಿಹೋಗಿದ್ದು, ಆತನನ್ನು ಹಿಂಬಾಲಿಸಿದರೂ ಸಿಕ್ಕಿರುವುದಿಲ್ಲ. ಆತನ ಹೆಸರು ಮತ್ತು ವಿಳಾಸ ಕೇಳಗಾಗಿ  ವೆಂಕಟರೆಡ್ಡಿ ಬಿನ್ ವೆಂಕಟರಾಯಪ್ಪ, 45 ವರ್ಷ, ಕುರಬರು, ಅಂಗಡಿ ವ್ಯಾಪಾರ, ವಾಸ ಯರಮರೆಡ್ಡಿಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದುಬಂದಿರುತ್ತದೆ. ಸ್ಥಳದಲ್ಲಿ ಪರಿಶೀಲಿಸಲಾಗಿ ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 02 ಪ್ಲಾಸ್ಟಿಕ್ ಗ್ಲಾಸ್ ಗಳು, ಖಾಲಿ ಇದ್ದ ಎರಡು HAYWARDS CHEERS WHISKY 90 ಎಂ.ಎಲ್ ಟೆಟ್ರಾ ಪ್ಯಾಕೆಟ್ ಇದ್ದು, ಸ್ಥಳದಲ್ಲಿಯೇ  90 ಎಂ.ಎಲ್ ನ HAYWARDS CHEERS WHISKY ಮಧ್ಯದ 06 ಟೆಟ್ರಾ ಪ್ಯಾಕೆಟ್ ಗಳು ಇದ್ದು, ಒಂದರ ಬೆಲೆ 35.13/- ರೂ  ಆಗಿದ್ದು, 06 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 210/-ರೂ ಆಗಿರುತ್ತೆ. ಮದ್ಯ ಒಟ್ಟು 480 ಮೀಲಿ ಆಗಿರುತ್ತೆ. ಮಧ್ಯವನ್ನು ಕುಡಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೇ ಇರುವುದರಿಂದ ಚಿಲ್ಲರೆ ಅಂಗಡಿ ಮಾಲೀಕ ವೆಂಕಟರೆಡ್ಡಿ ಓಡಿಹೋಗಿರುತ್ತಾನೆ.  ಮೇಲ್ಕಂಡ ಎಲ್ಲಾ ಮಾಲುಗಳನ್ನು ಮಧ್ಯಾಹ್ನ 3-30 ರಿಂದ 4-30 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡು ಸದರಿ ಮಾಲನ್ನು  ಮತ್ತು ಮಹಜರನ್ನು ವರದಿ ದೂರಿನೊಂದಿಗೆ ಹಾಜರುಪಡಿಸಿ  ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ವೆಂಕಟರೆಡ್ಡಿ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೊಟ್ಟ ದೂರು ಆಗಿರುತ್ತದೆ.

 

7. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.35/2021 ಕಲಂ. 279,337,304(A)  ಐ.ಪಿ.ಸಿ:-

     ದಿನಾಂಕ:16/02/2021 ರಂದು ಪಿರ್ಯಾದಿದಾರರಾದ ಗಂಗಾಧರಪ್ಪ ಬಿನ್ ಲೇಟ್ ನರಸಿಂಹಯ್ಯ, 55 ವರ್ಷ, ಕೂಲಿ ಕೆಲಸ, ಪ.ಜಾತಿ, ಪೋತೇನಹಳ್ಳಿ ಗ್ರಾಮ ತೊಂಡೇಬಾವಿ ಹೋಬಳಿ ಗೌರೀಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 15-02-2021 ರಂದು ಸಂಜೆ ಸುಮಾರು 07.30 ಗಂಟೆಯ ಸಮಯದಲ್ಲಿ  ತನ್ನ  ಮಗನಾದ ನರೇಂದ್ರ 18 ವರ್ಷ, ನಮ್ಮ ಗ್ರಾಮದ ಅಶ್ವತ್ಥ ಬಿನ್ ಲೇಟ್ ಪಾಪಣ್ಣ, ಹಾಗೂ ಪ್ರಭು ಬಿನ್ ನರಸಿಂಹಮೂರ್ತಿ ರವರುಗಳು ಪ್ರಭು ರವರ ದ್ವಿಚಕ್ರ ವಾಹನ ಸಂಖ್ಯೆ ಕೆಎ-51-ಇಬಿ-690 ಅಪಾಚಿ ದ್ವಿಚಕ್ರ ವಾಹನದಲ್ಲಿ ಕೆಲಸದ ನಿಮಿತ್ತ ವರವಣಿಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು ತೊಂಡೇಬಾವಿ ಮಂಚೇನಹಳ್ಳಿ ರಸ್ತೆಯ ಎಸ್.ಹೆಚ್-94 ಬೆಳ್ತೂರು ಕ್ರಾಸ್ ಬಳಿ ರಸ್ತೆಯನ್ನು ಅಗೆದಿರುವ ಸ್ಥಳದಲ್ಲಿ ಅಪಘಾತವಾಗಿ ನರೇಂದ್ರರವರಿಗೆ ತಲೆಗೆ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ವಾಹನ ಚಾಲನೆ ಮಾಡುತ್ತಿದ್ದ ಪ್ರಭು ರವರಿಗೆ ಮತ್ತು ಅಶ್ವತ್ಥರವರಿಗೆ ಗಾಯಗಳಾಗಿರುವುದಾಗಿ ನಮ್ಮ ಗ್ರಾಮದ ಮೂರ್ತಿ ಬಿನ್ ಚಿಕ್ಕನರಸಿಂಹಪ್ಪ ರವರಿಂದ ಮಾಹಿತಿ ತಿಳಿದು ಸ್ಥಳಕ್ಕೆ ಬಂದು ನೋಡಲಾಗಿ ವಿಷಯ ನಿಜವಾಗಿದ್ದು ನನ್ನ ಮಗ ನರೇಂದ್ರನಿಗೆ ತಲೆಗೆ ತೀವ್ರ ತರವಾದ ಗಾಯದಿಂದ ಮೃತಪಟ್ಟಿದ್ದು ಅಪಘಾತಕ್ಕೆ ಕೆಎ-51-ಇಬಿ-690 ರ ವಾಹನ ಸವಾರ ಪ್ರಭು ಬಿನ್ ನರಸಿಂಹಮೂರ್ತಿ ರವರು ವಾಹನವನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದು ರಸ್ತೆಯನ್ನು ಹಗೆದಿದ್ದು ಮುಚ್ಚಿರುವ ಸ್ಥಳದಲ್ಲಿ ಬಿದ್ದು ಅಪಘಾತಕ್ಕೆ ಕಾರಣರಾಗಿದ್ದು ಸದರಿ ಕೆಎ-51-ಇಬಿ-690 ರ ಅಪಾಚಿ ದ್ವಿಚಕ್ರ ವಾಹನ ಸವಾರ ಪ್ರಭುರವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿಬೇಕಾಗಿ ಕೋರಿ ನೀಡಿದ ಪ್ರ.ವ.ವರದಿ.

 

8. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.19/2021 ಕಲಂ. 341,448,504,324,506,34 ಐ.ಪಿ.ಸಿ:-

     ದಿನಾಂಕ: 15.02.2021 ರಾತ್ರಿ 19-00 ಗಂಟೆಗೆ ಪಿರ್ಯಾದಿ  ಅರುಣಮ್ಮ ಕೋಂ ನಾರಾಯಣಸ್ವಾಮಿ, 45 ವರ್ಷ, ವಕ್ಕಲಿಗರು, ಗೃಹಿಣಿ, ಕೊತ್ತನೂರು ಗ್ರಾಮ, ನಂದಿ ಹೋಬಳಿ,  ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಾನು ನನ್ನ ಗಂಡ ಕೆ.ಎಂ.ನಾರಾಯಣಸ್ವಾಮಿ ಮತ್ತು ಮಗಳು ರಶ್ಮಿ ಎಂಬುವರೊಂದಿಗೆ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನ್ನ ಗಂಡನ ತಂಗಿ ಮುನಿರತ್ಮಮ್ಮ ರವರು ಗಂಡನನ್ನು ಬಿಟ್ಟು ಬಂದು ಪಿತ್ರಾರ್ಜಿತ ಆಸ್ತಿಯಲ್ಲಿ ಭಾಗ ಬೇಕೆಂದು ಪದೇ ಪದೇ ಮನೆಯ ಹತ್ತಿರ ಜಗಳ ಮಾಡುತ್ತಿದ್ದಳು ಹಾಗೂ ಈ ಕುರಿತು ಚಿಕ್ಕಬಳ್ಳಾಪುರ ಸಿವಿಲ್ ನ್ಯಾಯಾಲಯದ ಒಎಸ್ ನಂಬರ್ 364/2011 ರಂತೆ ಕೇಸು ಹಾಕಿರುತ್ತಾರೆ. ಈಗಿರುವಾಗ ದಿನಾಂಕ: 14.02.2021 ರಂದು ನಾವು ಮನೆಗೆ ಸುಣ್ಣ ಬಣ್ಣ ಹಚ್ಚುತ್ತಿರುವಾಗ  ತನಗೂ ಮನೆಯಲ್ಲಿ ಭಾಗವಿದೆ ಎಂದು ಅಡ್ಡಪಡಿಸಿದ್ದು, ನ್ಯಾಯಾಲಯದ ಆದೇಶವನ್ನು ತಂದಾಗ ಬಿಡುವುದಾಗಿ ಹೇಳಿ ಕಳುಹಿಸಿದೆವು. ಆದರೆ ಸಂಜೆ ಸುಮಾರು 4-0 ಗಂಟೆ ಸಮಯದಲ್ಲಿ ಮುನಿರತ್ನಮ್ಮ ತನ್ನೊಂದಿಗೆ ಶ್ರೀರಾಮಪುರದ ನಾಗೇಶ ಬಿನ್ ಚಿಕ್ಕಪಿಳ್ಳಪ್ಪ ರವರನ್ನು ಕರೆದುಕೊಂಡು ಬಂದು ಏಕಾಏಕಿ ನಮ್ಮ ಮನೆಗೆ ಅತಿಕ್ರಮ ಪ್ರವೇಶ ಮಾಡಿ ನಮ್ಮಗಳ ಮೇಲೆ ಜಗಳ ತೆಗೆದು, ಹೀನಾಯವಾದ ಮಾತುಗಳಿಂದ ಬೈದು ಮುನಿರತ್ನಮ್ಮಳು ಈ ಸೂಳೆ ಮಗ ಬದುಕಿರುವವರೆಗೆ ಭಾಗ ಕೊಡುವುದಿಲ್ಲ ಇವನನ್ನು ಸಾಯಿಸಿದರೆ ಭಾಗ ಬರುತ್ತದೆ ಎಂದು ಕಲ್ಲಿನಿಂದ ನನ್ನ ಗಂಡನ ಎದೆಗೆ ಹೊಡೆದಳು, ಹಾಗೂ ನಾಗೇಶ ನು ಕಲ್ಲಿನಿಂದ ನನ್ನ ಗಂಡನ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯಪಡಿಸಿದಾಗ,  ನೆಲದ ಮೇಲೆ ಬಿದ್ದಿದ್ದ ನನ್ನ ಗಂಡನನ್ನು ನಾನು ಮತ್ತು ನನ್ನ ಮಗಳು ಉಪಚರಿಸುತ್ತಿದ್ದೆವು.  ಇನ್ನು ಒಂದು ವಾರದ ಒಳಗೆ ಕೊಲೆ ಮಾಡಿ ಮುಗಿಸುವುದಾಗಿ ಬೆದರಿಕೆ ಹಾಕಿ ಜಗಳ ಮಾಡುತ್ತಿದ್ದಾಗ  ನಮ್ಮ ಗ್ರಾಮದ ಕೇಶವರೆಡ್ಡಿ ಬಿನ್ ಮುನಿಯಪ್ಪ ಮತ್ತು ಪ್ರಭಾಕರ ಬಿನ್ ಹನುಮಂತಪ್ಪ ರವರು ಬಂದು ಜಗಳ ಬಿಡಿಸಿ ಅವರನ್ನು ಹೊರಗೆ ಕಳುಹಿಸಿದರು. ನಾವು ನನ್ನ ಗಂಡನನ್ನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ  ವೈದ್ಯರ ಸಲಹೆಯಂತೆ ಜಯದೇವ ಆಸ್ಪತ್ರೆ  ಮತ್ತು ವಿಕ್ಟೋರಿಯಾ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಈ ಗಲಾಟೆಗೆ ಕಾರಣರಾದ ಮುನಿರತ್ನಮ್ಮ ಮತ್ತು ನಾಗೇಶ್ ಎಂಬುವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.37/2021 ಕಲಂ. 279,304(A) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ: 15-02-2021 ರಂದು ಬೆಳಿಗ್ಗೆ 10.15 ಗಂಟೆಯಲ್ಲಿ ಸಿ.ಹೆಚ್.ಸಿ-117 ಚನ್ನಕೇಶವ ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಪಿ.ಎಸ್.ಐ. ಸಾಹೇಬರು ತನಗೆ 1ನೇ ಬೀಟ್ ಕರ್ತವ್ಯಕ್ಕೆ ನೇಮಕ ಮಾಡಿದ್ದು, ದಿನಾಂಕ: 14-02-2021 ರಂದು ರಾತ್ರಿ 10.00 ಗಂಟೆಯಲ್ಲಿ ತಾನು ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರು ತನಗೆ ಪೋನ್ ಮಾಡಿ ಹಂಡಿಗನಾಳ ಗ್ರಾಮದಿಂದ ಲಕ್ಕಹಳ್ಳಿ ಗ್ರಾಮದ ಮದ್ಯದಲ್ಲಿ ಅಪಘಾತವಾಗಿ ಯಾರೋ ಒಬ್ಬ ಮಹಿಳೆ ಮೃತಪಟ್ಟಿರುವುದಾಗಿ ತಿಳಿಸಿದ್ದು, ಕೂಡಲೇ ನಾನು ಸ್ಥಳಕ್ಕೆ ಬೇಟಿ ಮಾಡಿ ವಿಚಾರ ಮಾಡಲಾಗಿ ದಿನಾಂಕ: 14-02-2021 ರಂದು ರಾತ್ರಿ ಸುಮಾರು 9.30 ಗಂಟೆ ಸುಮಾರಿನಲ್ಲಿ ಸುಮಾರು 45-50 ವರ್ಷದ ಅಪರಿಚಿತ ಮಹಿಳೆಯು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೋ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅಪರಿಚಿತ ಮಹಿಳೆಗೆ ಡಿಕ್ಕಿ ಹೊಡೆಸಿ ಅಪಘಾತವುಂಟುಮಾಡಿದ್ದು ಅಪಘಾತದಲ್ಲಿ ಸದರಿ ಮಹಿಳೆಗೆ ತಲೆಗೆ, ಮುಖಕ್ಕೆ ಹಾಗೂ ಕೈ ಕಾಲುಗಳಿಗೆ ರಕ್ತ ಗಾಯಗಳಾಗಿದ್ದು, ತಲೆಗೆ ತೀವ್ರತರವಾದ ರಕ್ತಗಾಯಗಳಾಗಿದ್ದು, ಆಕೆ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ, ಅಪಘಾತವನ್ನು ಉಂಟುಮಾಡಿದ ವಾಹನವನ್ನು ಅದರ ಚಾಲಕ ಸ್ಥಳದಲ್ಲಿ ನಿಲ್ಲಿಸದೆ ಹೊರಟು ಹೋಗಿರುವುದಾಗಿ ವಿಚಾರ ತಿಳಿದಿಬಂದಿರುತ್ತೆ. ಸುಮಾರು 45-50 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯಾಗಿದ್ದು, ಸುಮಾರು 5 ಅಡಿ ಎತ್ತರವಿದ್ದು, ಸಾದಾರಣ ಮೈಕಟ್ಟು, ಕಪ್ಪು ಮೈ ಬಣ್ಣದ, ಕೋಲು ಮುಖ, ತಲೆಯಲ್ಲಿ ಸುಮಾರು ಒಂದುವರೆ ಅಡಿ ಉದ್ದದ ಕಪ್ಪು ಕೂದಲು ಇದ್ದು, ಮೃತಳ ಮೈ ಮೇಲೆ ಕೆಂಪು ಬಣ್ಣದ ಸೀರೆ, ನೀಲಿ ಬಣ್ಣದ ಡಿಸೈನ್ ಬ್ಲೌಸ್ ಇದ್ದು, ಮೃತಳ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ, ಅಪರಿಚಿತ ಮಹಿಳೆಯು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಯಾವುದೋ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಅಪಘಾತವುಂಟುಮಾಡಿದ ಪರಿಣಾಮ ಗಾಯಗೊಂಡು ಮೃತಪಟ್ಟಿರುತ್ತಾಳೆ, ಅಪರಿಚಿತ ಮಹಿಳೆಯ ಹೆಸರು ವಿಳಾಸ ಮತ್ತು ವಾರುಸುದಾರರ ಪತ್ತೆ ಬಗ್ಗೆ ಹಂಡಿಗನಾಳ, ಲಕ್ಕಹಳ್ಳಿ, ಶಿಲೇಮಾಕಲಹಳ್ಳಿ, ನೆಲಮಾಕನಹಳ್ಳಿ, ಎಲ್.ಮುತ್ತುಕದಹಳ್ಳಿ ಹಾಗೂ ಇತರೆ ಕಡೆಗಳಲ್ಲಿ ತಲಾಷೆಮಾಡಿದರೂ ಸಹ ಪತ್ತೆಯಾಗಿರುವುದಿಲ್ಲ ಅಪರಿಚಿತ ಮಹಿಳೆಯು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೋ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅಲ್ಲಿಯೇ ಇದ್ದ ಸಾರ್ವಜನಿಕರು ಅಪರಿಚಿತ ಮಹಿಳೆಯ ಮೃತದೇಹವನ್ನು ಯಾವುದೋ ಒಂದು ವಾಹನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದು, ಅಪರಿಚಿತ ಮೃತಳ ಹೆಸರು ವಿಳಾಸ ತಿಳಿಯದೆ ಇದ್ದು ಮೃತಳ ಹೆಸರು ವಿಳಾಸವನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿಯ ಮೇರಗೆ ಠಾಣಾ ಮೊ.ಸಂ. 37/2021 ಕಲಂ 279, 304(ಎ) ಐಪಿಸಿ ರ/ಜೊ 187 ಐಎಂವಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 16-02-2021 05:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080