ಅಭಿಪ್ರಾಯ / ಸಲಹೆಗಳು

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 293/2021 ಕಲಂ. 15(A),32(3) KARNATAKA EXCISE ACT, 1965 :-

    ದಿನಾಂಕ:15/09/2021 ರಂದು ಬೆಳಿಗ್ಗೆ 11-40 ಗಂಟೆಗೆ ಶ್ರೀ ಗೋಪಾಲರೆಡ್ಡಿ ಜಿ.ಆರ್. ಪಿ.ಎಸ್.ಐ. ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಮಾಲು, ಆರೋಪಿ ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನಿಡಿದ ವರದಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ; 15.09.2021 ಬೆಳಿಗ್ಗೆ 10-00 ಗಂಟೆಯ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು, ಕದಿರನ್ನಗಾರಿಪಲ್ಲಿ ಗ್ರಾಮದ ಗಂಗಾಧರ ರವರ ಚಿಲ್ಲರೆ ಅಂಗಡಿಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಕುಳಿತುಕೊಂಡು ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಮದ್ಯಪಾನ ಮಾಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ  ಶ್ರೀಪತಿ ಹೆಚ್.ಸಿ. 178, ಮತ್ತು ಶ್ರೀ ಮೋಹನ್ ಸಿಪಿಸಿ-387 ಹಾಗೂ ಜೀಪ್ ಚಾಲಕ ಎ.ಹೆಚ್.ಸಿ-14 ವೆಂಕಟೇಶ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ; ಕೆಎ-40-ಜಿ-537 ವಾಹನದಲ್ಲಿ ಬಾಗೇಪಲ್ಲಿ ಪುರದ ಗೂಳೂರು ವೃತ್ತದ್ದಲ್ಲಿದ್ದ ಪಂಚರನ್ನು ಕರೆದು ಮೇಲ್ಕಂಡ ವಿಚಾರವನ್ನು ತಿಳಿಸಿ ಮೇಲ್ಕಂಡ ಸ್ಥಳದಲ್ಲಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಮೇಲ್ಕಂಡ ಸ್ಥಳಕ್ಕೆ ಬೆಳಿಗ್ಗೆ 10-20 ಗಂಟೆಗೆ ಹೋಗಿ ನೋಡಲಾಗಿ ಚಿಲ್ಲರೆ ಅಂಗಡಿಯ ಪಕ್ಕದಲ್ಲಿ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಮದ್ಯಪಾನವನ್ನು ಮಾಡಲು ಸ್ಥಳಾವಕಾಶ ಮಾಡಿಕೊಟ್ಟು ಮದ್ಯವನ್ನು ಪೂರೈಕೆ ಮಾಡುತ್ತಿದ್ದು,  ಕೆಲವರು ಸ್ಥಳದಲ್ಲಿ ಕುಳಿತುಕೊಂಡು ಮದ್ಯಪಾನ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ   ಸ್ಥಳದಿಂದ ಓಡಿ ಹೋಗಿದ್ದು,  ಮದ್ಯವನ್ನು ಪೂರೈಕೆ ಮಾಡುತ್ತಿದ್ದ ಆಸಾಮಿಯನ್ನು ನಾವು ಪಂಚರ ಸಮಕ್ಷಮ ಸುತ್ತುವರೆದು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ಗಂಗಾಧರಪ್ಪ ಬಿನ್ ಲೇಟ್ ಕೃಷ್ಣಪ್ಪ, 45 ವರ್ಷ,  ಬಲಜಿಗರು,  ಜಿರಾಯ್ತಿ ಮತ್ತು ಚಿಲ್ಲರೆ ಅಂಗಡಿ ವ್ಯಾಪಾರ,  ವಾಸ ಕದಿರನ್ನಗಾರಿಪಲ್ಲಿ ಗ್ರಾಮ,  ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿದರು. ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 90 ML ನ HAYWARDS CHEERS WHISKY ಯ 02 ಖಾಲಿ ಟೆಟ್ರಾ ಪಾಕೇಟ್ ಗಳು, 01 ಖಾಲಿ ವಾಟರ್ ಬಾಟಲ್, ಮದ್ಯಸೇವನೆ ಮಾಡಿರುವ 02 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, ಮದ್ಯ ತುಂಬಿರುವ 90 ಎಂ.ಎಲ್. HAYWARDS CHEERS WHISKY 12 ಟೆಟ್ರಾ ಪಾಕೇಟ್ ಇದ್ದು, ಒಟ್ಟು 1 ಲೀಟರ್ 080 ಎಂ.ಎಲ್. ಮದ್ಯವಿದ್ದು ಇವುಗಳ ಒಟ್ಟು ಬೆಲೆ 421/- ರೂ.ಗಳಾಗಿರುತ್ತೆ. ಸದರಿ ಆಸಾಮಿಗೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟು ಮದ್ಯವನ್ನು ಪೂರೈಕೆ ಮಾಡಲು ನಿನ್ನ ಬಳಿ ಯಾವುದಾದರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾನೆ, ನಂತರ ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ಬೆಳಿಗ್ಗೆ 11-40 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ ವರದಿಯನ್ನು ಪಡೆದು ಪ್ರಕರನಸವನ್ನು ದಾಖಲಿಸಿಕೊಂಡಿರುತ್ತೆ.

 

2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 156/2021 ಕಲಂ. 15(A),32(3) KARNATAKA EXCISE ACT, 1965 :-

    ದಿನಾಂಕ: 14/09/2021 ರಂದು  ಸಂಜೆ   4-10 ಗಂಟೆಯಲ್ಲಿ  ಶ್ರೀ. ಬಿ.ಪಿ.ಮಂಜು ಪಿ.ಎಸ್.ಐ. ಗ್ರಾಮಾಂತರ  ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಠಾಣೆಯಲ್ಲಿ  ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ: 14-09-2021 ರಂದು ಸಂಜೆ 4-00 ಗಂಟೆಯಲ್ಲಿ ತಾನು ಠಾಣೆಯಲ್ಲಿದ್ದಾಗ ಪೊಲೀಸ್ ಠಾಣಾ  ಸರಹದ್ದಿಗೆ ಸೇರಿದ  ದಿಬ್ಬೂರು ಗ್ರಾಮದ  ವಾಸಿ ಸಾಗರ್  ಬಿನ್ ರಾಜೇಗೌಡ 20ವರ್ಷ ವಕ್ಕಲಿಗ  ಜನಾಂಗ, ಬಾರ್ ನಲ್ಲಿ ಸಪ್ಲೆಯರ್ ಕೆಲಸ ವಾಸ: ದಿಬ್ಬೂರು ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು. ಸ್ವಂತಸ್ಥಳ: ಮಾದೇಗೌಡನಕೊಪ್ಪಲು ಗ್ರಾಮ  ಮಾರಚಕ್ಕನಹಳ್ಳಿ  ಪೋಸ್ಟ್  ಮಂಡ್ಯ  ತಾಲ್ಲೂಕು ಮತ್ತು  ಜಿಲ್ಲೆ ರವರು  ದಿಬ್ಬೂರು  ಗ್ರಾಮದಲ್ಲಿರುವ  ದೀಕ್ಷಾ ಹೋಟೆಲ್ ಹಿಂಭಾಗ  ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿ ಕೊಟ್ಟಿರುವುದಾಗಿ  ಖಚಿತ ಮಾಹಿತಿ ಬಂದಿರುತ್ತದೆ. ಈ ಬಗ್ಗೆ ಮೇಲ್ಕಂಡ ಆಸಾಮಿಯ ವಿರುದ್ದ  ಕಲಂ:15(ಎ). 32(3) ಕೆ.ಇ. ಆಕ್ಟ್ ರೀತ್ಯಾ ಪ್ರಕರಣ  ದಾಖಲಿಸಲು ಸೂಚಿಸಿದ್ದರ ಮೇರೆಗೆ  ಈ ಪ್ರ.ವ.ವರದಿ.   

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 408/2021 ಕಲಂ. 323,324,341,504,506 ರೆ/ವಿ 34 ಐಪಿಸಿ :-

    ದಿನಾಂಕ: 15/09/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ರಾಮಕೃಷ್ಣಪ್ಪ ಬಿನ್ ಲೇಟ್ ಮುನಿವೆಂಕಟರಾಯಪ್ಪ, 33 ವರ್ಷ, ಕೂಲಿಕೆಲಸ, ನಾಯಕ ಜನಾಂಗ, ಮಲ್ಲಿಕಾಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬೆಳಿಗ್ಗೆ 11.30 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡು ಗಾಯಾಳುವಿನ ಹೇಳಿಕೆ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದಲ್ಲಿ ತಮ್ಮ ಜಮೀನಿಗೆ ಹೋಗಿ ಬರಲು ದಾರಿ ಇದ್ದು, ಸದರಿ ದಾರಿಯಲ್ಲಿ ತಾವು ಓಡಾಡುತ್ತಿರುತ್ತೇವೆ. ಹೀಗಿರುವಾಗ ಸದರಿ ದಾರಿಯಲ್ಲಿ ಓಡಾಡಬಾರದೆಂದು ತಮ್ಮ ಗ್ರಾಮದ ತಮ್ಮ ಜನಾಂಗದ ವೆಂಕಟಕೃಷ್ಣಪ್ಪ ರವರು ಆಗಾಗ ತಕರಾರು ತೆಗೆಯುತ್ತಿರುತ್ತಾರೆ. ಹೀಗಿರುವಾಗ ಈ ದಿನ ದಿನಾಂಕ: 15/09/2021 ರಂದು ಬೆಳಿಗ್ಗೆ 07.30 ಗಂಟೆ ಸಮಯದಲ್ಲಿ ತಾನು ತಮ್ಮ ಜಮೀನಿನ ಬಳಿ ಹೋಗಲು ಮೇಲ್ಕಂಡ ವೆಂಕಟಕೃಷ್ಣಪ್ಪ ರವರ ಜಮೀನಿನ ಬಳಿ ಇರುವ ದಾರಿಯಲ್ಲಿ ಹೋಗುತ್ತಿದ್ದಾಗ ಮೇಲ್ಕಂಡ ವೆಂಕಟಕೃಷ್ಣಪ್ಪ ಬಿನ್ ವೆಂಕಟಸ್ವಾಮಿ, 58 ವರ್ಷ, ಜಿರಾಯ್ತಿ ಮತ್ತು ಆತನ ಮಕ್ಕಳಾದ ಸುರೇಶ, 33 ವರ್ಷ ಹಾಗೂ ಚಂದ್ರು, 30 ವರ್ಷ ರವರು ತನ್ನನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಆ ಪೈಕಿ ಸುರೇಶ ರವರು ತನ್ನನ್ನು ಕುರಿತು “ನನ್ನ ಮಗನೇ ನನಗೆ ಎಷ್ಟು ಸಾರಿ ಹೇಳುವುದು ಈ ದಾರಿಯಲ್ಲಿ ಓಡಾಡಬೇಡವೆಂತ” ಎಂದು ಅವಾಚ್ಯಶಬ್ದಗಳಿಂದ ಬೈದು, ಕೈಗಳಿಂದ ಮೈ ಮೇಲೆ ಹೊಡೆದು ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ತನ್ನ ತಲೆಗೆ ಹೊಡೆದು ರಕ್ತಗಾಯವನ್ನುಂಟು ಮಾಡಿದನು. ಚಂದ್ರು ರವರು ತನ್ನ ಕೈಯಲ್ಲಿದ್ದ ಕಲ್ಲಿನಿಂದ ತನ್ನ ಬಲ ಮೊಣಕಾಲಿಗೆ ಹೊಡೆದು ಗಾಯಪಡಿಸಿದನು. ವೆಂಕಟಕೃಷ್ಣಪ್ಪ ರವರು ತನ್ನನ್ನು ಕುರಿತು ಇನನ್ನೊಂದು ಸಲ ಇಲ್ಲಿ ಓಡಾಡಿದರೆ ನಿನ್ನನ್ನು ಸಾಯಿಸಿ ಬಿಡುತ್ತೇನೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 

4. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 237/2021 ಕಲಂ. 15(A),32(3) KARNATAKA EXCISE ACT, 1965 :-

    ದಿನಾಂಕ:14/09/2021 ರಂದು ಮಾನ್ಯ ಘನನ ನ್ಯಾಯಾಲಯದ ಪಿ.ಸಿ.582 ಮಂಜುನಾಥ ಕಾಳೇಲ ರವರು ತಂದು ಹಾಜರುಪಡಿಸಿದ ಅನುಮತಿಯ ಸಾರಾಂಶವೇನೆಂದರೆ: ದಿನಾಂಕ: 31/08/2021 ರಂದು  ಸಂಜೆ 4-00 ಗಂಟೆಯಲ್ಲಿ  ವೃತ್ತ ಕಛೇರಿಯಲ್ಲಿದ್ದಾಗ ಮುಸಲ್ಮನರಹಳ್ಳಿ ಗ್ರಾಮದ ಬಳಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು  ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ ಪಿಸಿ-532  ಚಿಕ್ಕಣ್ಣ ರವರೊಂದಿಗೆ  ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-1234ರಲ್ಲಿ  ಮುಸಲ್ಮನರಹಳ್ಳಿ ಗ್ರಾಮ ಬಳಿ ಸಂಜೆ 4-30 ಗಂಟೆಗೆ  ಹೋಗಿ ಅಲ್ಲಿ,  ಪಂಚಾಯ್ತಿದಾರರನ್ನು ಕರೆದುಕೊಂಡು  ಮಾಹಿತಿ ಇದ್ದ  ಸ್ಥಳಕ್ಕೆ  ನಡೆದುಕೊಂಡು  ಹೋಗಿ   ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ  ಸಾರ್ವಜನಿಕ ರಸ್ತೆಯಲ್ಲಿ ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ. ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ  ವ್ಯಕ್ತಿಯು ಸಹ ಓಡಿ ಹೋಗಿರುತ್ತಾರೆ ಓಡಿಹೋದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ,  ತನ್ನ ಹೆಸರು    ಶಾರದಮ್ಮ ಕೋಂ ಅಶ್ವತ್ಥಪ್ಪ, 40 ವರ್ಷ, ನಾಯಕರು, ಮುಸಲ್ಮಾನರಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ, ಅದರಲ್ಲಿ 90 ಎಂ.ಎಲ್.ಸಾಮರ್ಥ್ಯದ HAY WARDS CHEERS  WHISKY ಯ 15 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 350 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 526.95/- ರೂ.ಗಳಾಗಿರುತ್ತೆ.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು  ಯಾವುದೇ ಪರವಾನಗಿ  ಇದೆಯೇ ಎಂದು ಕೇಳಿದಾಗ ಯಾವುದೇ ಪರವಾನಗಿ ಇಲ್ಲವೆಂದು ತಿಳಿದು ಬಂದಿರುತ್ತದೆ. ಆದ್ದರಿಂದ  ಸ್ಥಳದಲ್ಲಿ ಸಂಜೆ 4-30 ಗಂಟೆಯಿಂದ 5-30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ  ಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ  90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY 15 ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ  04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಸಂಜೆ 6-00 ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು, ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ ದೂರನ್ನು ಪಡೆದು ಠಾಣಾ ಎನ್.ಸಿ.ಆರ್ ಸಂಖ್ಯೆ:388/2021 ರಂತೆ ದಾಖಲಿಸಿ ನಂತರ ಮಾನ್ಯ ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಈ ದಿನ ಪ್ರಕರಣ ದಾಖಲು ಮಾಡಿರುವುದಾಗಿದೆ.

 

5. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 238/2021 ಕಲಂ. 78(I),78(III) KARNATAKA POLICE ACT, 1963 :-

    ದಿನಾಂಕ: 15/09/2021 ರಂದು ಬೇಳಿಗ್ಗೆ 09-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿ.ಸಿ-582 ರವರು ತಂದು ಹಾಜರು ಪಡಿಸಿದ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ಗೌರೀಬಿದನೂರು ಪೊಲೀಸ್ ಠಾಣೆಯ, ಪೊಲೀಸ್ ಉಪನಿರೀಕ್ಷಕರಾದ ಶ್ರೀ ವಿಜಯ್ ಕುಮಾರ್ ಆದ ನಾನು ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ಸೂಚಿಸುವುದೇನೆಂದರೆ, ಈ ದಿನ ದಿನಾಂಕ 05/09/2021 ರಂದು ಬೆಳಿಗ್ಗೆ 11-30 ಗಂಟೆಯಲ್ಲಿ ಗೌರೀಬಿದನೂರು ಗ್ರಾಮಾಂತರ ಠಾಣೆಯಲ್ಲಿದ್ದಾಗ, ಗೌರೀಬಿದನೂರು ತಾಲ್ಲೂಕು, ನಗರಗೆರೆ ಗ್ರಾಮದ ಬಸ್ ನಿಲ್ದಾಣದಲ್ಲಿ ಬಳಿ ಯಾರೋ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಹಾಗು ಪೊಲೀಸ್ ಸಿಬ್ಬಂದಿಯವರಾದ ಸಿಪಿಸಿ 460 ಷೇಕ್ ಸನಾವುಲ್ಲಾ ಸಿ,ಪಿಸಿ 33 ಕೃಷ್ಣಪ್ಪ  ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ ನಂ. ಕೆ.ಎ.40-ಜಿ.538 ರಲ್ಲಿ ನಗರಗೆರೆ ಗ್ರಾಮಕ್ಕೆ ಮದ್ಯಾಹ್ನ 12-30  ಗಂಟೆಗೆ ಹೋಗಿ, ಅಲ್ಲಿ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ,  ಮರೆಯಲ್ಲಿ ನಿಂತು ನೋಡಲಾಗಿ,  ಯೋರೋ ಒಬ್ಬ ಆಸಾಮಿ ನಗರಗೆರೆ ಗ್ರಾಮದ ಬಸ್ ನಿಲ್ದಾಣದಲ್ಲಿ  ರಸ್ತೆಯಲ್ಲಿ  ಓಡಾಡುವ ಸಾರ್ವಜನಿಕರಿಗೆ  ಒಂದು ರೂಪಾಯಿಗೆ  ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ನಾನು ಮತ್ತು ಪೊಲೀಸ್ ಸಿಬ್ಬಂದಿಯವರು  ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ, ಆತ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು, ಆತನ  ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು ನರಸಿಂಹರೆಡ್ಡಿ ಬಿನ್ ಲೇಟ್ ಚಿನ್ನಪ್ಪ, 70 ವರ್ಷ,ವಕ್ಕಲಿಗ ಜನಾಂಗ, ನಗರಗೆರೆ ಗ್ರಾಮ,ಗೌರೀಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ಆತನ ಬಳಿ ಪರಿಶೀಲಿಸಲಾಗಿ  ನಗದು ಹಣ 2400/-  ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿ ನರಸಿಂಹರೆಡ್ಡಿ ಬಿನ್ ಲೇಟ್ ಚಿನ್ನಪ್ಪ  ಹಾಗು ಈತನ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್  ಮತ್ತು 2,400/-ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ಮದ್ಯಾಹ್ನ 12-45 ಗಂಟೆಯಿಂದ 13-45 ಗಂಟೆಯವರೆಗೆ  ಪಂಚನಾಮೆ ಕ್ರಮ ಜರುಗಿಸಿ ಕಾನೂನು ಕ್ರಮ ಜರುಗಿಸಲು ಸೂಚಿಸಿರುತ್ತೆ.

ಇತ್ತೀಚಿನ ನವೀಕರಣ​ : 15-09-2021 05:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080