ಅಭಿಪ್ರಾಯ / ಸಲಹೆಗಳು

1. ಬಾಗೇಪಲ್ಲಿ ಪೊಲೀಸ್‌ ಠಾಣೆ ಮೊ.ಸಂ.237/2021 ಕಲಂ. 279 ಐ.ಪಿ.ಸಿ:-

     ದಿನಾಂಕ: 14/08/2021 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿದಾರರಾದ ಶ್ರೀನಿವಾಸ.ವಿ ಬಿನ್ ವೆಂಕಟೇಶಪ್ಪ, 34 ವರ್ಷ, ಆದಿಕರ್ನಾಟಕ ಜನಾಂಗ, ಚಾಲಕ ವೃತ್ತಿ, ವಾಸ ಆಚೆಪಲ್ಲಿ ಗ್ರಾಮ, ಮಿಟ್ಟೆಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ. 07/08/2021 ರಂದು ರಾತ್ರಿ ನಾನು ಮತ್ತು ನನ್ನ ಸ್ನೇಹಿತನಾದ ಸುರೇಂದ್ರ ಬಾಬು ರವರು ಸುರೇಂದ್ರ ಬಾಬು ರವರ ಬಾಬತ್ತು ಕೆ.ಎ-40-ಬಿ-0482 ನೊಂದಣಿ ಸಂಖ್ಯೆಯ ಕ್ರೂಸರ್ ಟ್ರಾಕ್ಸ್ ನಲ್ಲಿ ಬಾಗೇಪಲ್ಲಿ ಯಿಂದ ಚೇಳೂರಿಗೆ ಹೋಗಲು ಸುಮಾರು 8-45 ಗಂಟೆಯಲ್ಲಿ ಬಾಗೇಪಲ್ಲಿಯಿಂದ ಹೊರಟು, ರಾತ್ರಿ ಸುಮಾರು 9-00 ಗಂಟೆಯಲ್ಲಿ ಪೆದ್ದತುಂಕೆಪಲ್ಲಿ - ಲಘುಮದ್ದೇಪಲ್ಲಿ ಗ್ರಾಮದ ಮದ್ಯದಲ್ಲಿ ಹೋಗುವಾಗ ಸುರೇಂದ್ರ ಬಾಬುರವರು ಕ್ರೂಸರ್ ಟ್ರಾಕ್ಸ್ ವಾಹನವನ್ನು ಅತಿವೇಗವಾಗಿ ಚಾಲನೆ ಮಾಡಿಕೊಂಡು ಹೋದ ಪರಿಣಾಮ, ವಾಹನ ನಿಯಂತ್ರಣ ತಪ್ಪಿ ರಸ್ತೆಯ ಎಡ ಭಾಗದ ಮೈಲಿಕಲ್ಲಿಗೆ ಡಿಕ್ಕಿ ಹೊಡೆದು ಕೆಳಗೆ ಉರುಳಿ ಬಿದ್ದು ವಾಹನವು ಸಂಪೂರ್ಣ ಜಖಂಗೊಂಡಿರುತ್ತದೆ. ನನಗೆ ಮತ್ತು ಚಾಲಕನಿಗೆ ಯಾವುದೇ ತರಹದ ಗಾಯಗಳು ಆಗಿರುವುದಿಲ್ಲ. ಆದ್ದರಿಂದ ಕೆ.ಎ-40-ಬಿ-0482 ನೊಂದಣಿ ಸಂಖ್ಯೆಯ ಕ್ರೂಸರ್ ಟ್ರಾಕ್ಸ್ ವಾಹನವನ್ನು ಅತಿವೇಗವಾಗಿ ಚಾಲನೆ ಮಾಡಿ ಅಪಘಾತನ್ನುಂಟು ಮಾಡಿದ ಚಾಲಕ ಸುರೇಂದ್ರ ಬಾಬು ಬಿನ್ ಸುಬ್ಬರಾಮಶೆಟ್ಟಿ, 33 ವರ್ಷ, ಯಲ್ಲಂಪಲ್ಲಿ ಗ್ರಾಮ ರವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರು.

 

2. ಬಟ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.111/2021 ಕಲಂ.323,324,448,504,506 34 ಐ.ಪಿ.ಸಿ:-

    ದಿನಾಂಕ 14/08/2021 ರಂದು ಸಂಜೆ 06-30 ಗಂಟೆ ಸಮಯದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಅನಿಲ್ ಕುಮಾರ್ ಬಿನ್ ಗಂಗಾರಂ 30 ವರ್ಷ ಆದಿಕರ್ನಾಟಕ ಜನಾಂಗ ಕೂಲಿಕೆಲಸ ವಾಸ ಮುದ್ದಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಠಾಣೆಯ ಹೆಚ್.ಸಿ 176 ರವರು ಪಡೆದುಕೊಂಡು ಬಂದು ಹಾಜರುಪಡಿಸಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ನಮ್ಮ ಗ್ರಾಮದ ವಾಸಿಯಾದ ನರಸಿಂಹಪ್ಪ ಬಿನ್ ವೆಂಕಟರಮಣಪ್ಪ  ರವರು ನಮ್ಮ ಗ್ರಾಮದ ಶಾಲೆಯ ಬಳಿ ಹುಡುಗರನ್ನು ಜೊತೆಯಲ್ಲಿ ಸೇರಿಸಿಕೊಂಡು ಮದ್ಯಪಾನ ಮಾಡುವುದು ಬಾಟಲಿಗಳನ್ನು ಅಲ್ಲಿಯೇ ಬಿಸಾಡಿ ಬರುವುದು ಮಾಡುತ್ತಿದ್ದನು ಅದಕ್ಕೆ ನಾನು ನೆನ್ನೆ ದಿನ ದಿನಾಂಕ 13/08/2021 ರಂದು ಸಂಜೆ 05-00 ಗಂಟೆ ಸಮಯದಲ್ಲಿ ನರಸಿಂಹಪ್ಪ ರವರನ್ನು ಶಾಲೆಯ ಕಡೆಗೆ ಹೋಗಬೇಡ ಎಂದು ಹೇಳಿದ್ದಕ್ಕೆ ನರಸಿಂಹಪ್ಪ ರವರು ನನ್ನನ್ನು ಅವಾಚ್ಯವಾಗಿ ಬೈದನು ಆಗ ನಾವಿಬ್ಬರು ಬಾಯಿ ಮಾತಿನ ಜಗಳ ಮಾಡಿಕೊಂಡು ಮನೆಗೆ ಹೊರಟು ಹೋದೆವು ನಂತರ ರಾತ್ರಿ ಸುಮಾರು 8-00 ಗಂಟೆ ಸಮಯದಲ್ಲಿ ನಾನು ನಮ್ಮ ಮನೆಯಲ್ಲಿ ಇದ್ದಾಗ ನಮ್ಮ ಗ್ರಾಮದ ವಾಸಿಗಳಾದ ನರಸಿಂಹಪ್ಪ ಬಿನ್ ವೆಂಕಟರಮಣಪ್ಪ ಮತ್ತು ಮುನಿರಾಜು ಬಿನ್ ವೆಂಕಟರಮಣಪ್ಪ ರವರು ನಮ್ಮ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ಮನೆಯ ಒಳಗೆ ಇದ್ದ ನನ್ನನ್ನು ಇಬ್ಬರೂ ಸೇರಿ ಎಳೆದುಕೊಂಡು ಮನೆಯಿಂದ ಹೊರಗೆ ಬಂದು ನರಸಿಂಹಪ್ಪ ರವರು ನನ್ನನ್ನು ಕುರಿತು ಲೋಫರ್ ನನ್ನ ಮಗನೇ ನಿನ್ನಮ್ಮನೇ ಕೇಯ ನೀನು ಯಾರು ನನಗೆ ನೀತಿಪಾಠ ಮಾಡಲು ಎಂದು ಅವಾಚ್ಯವಾಗಿ ಬೈದು ನನ್ನ ಮೈಕೈ ಮೇಲೆ ಕೈಗಳಿಂದ ಹೊಡೆದನು ಮುನಿರಾಜು ರವರು ಅಲ್ಲಿಯೇ ಇದ್ದ ಒಂದು ದೊಣ್ಣೆಯನ್ನು ತೆಗೆದುಕೊಂಡು ನನ್ನ ತಲೆಯ ಎಡ ಭಾಗದಲ್ಲಿ ನನ್ನ ಮೈಕೈ ಮೇಲೆ ಹೊಡೆದು ಗಾಯಪಡಿಸಿದನು ಆಗ ಮನೆಯಲ್ಲಿ ಇದ್ದ ನಮ್ಮ ತಾಯಿ ರಾಧಮ್ಮ ಮತ್ತು ನಮ್ಮ ಅತ್ತಿಗೆ ಶೋಭಾ ರವರು ಜಗಳ ಬಿಡಿಸಲು ಅಡ್ಡ ಬಂದಿದ್ದಕ್ಕೆ ಮುನಿರಾಜು ಮತ್ತು ನರಸಿಂಹಪ್ಪ ರವರು ಅವರನ್ನು ಸಹ ಹೊಡೆದು ಗಾಯಪಡಿಸಿದರು ನಂತರ ಮುನಿರಾಜು ಮತ್ತು ನರಸಿಂಹಪ್ಪ ರವರು ನನ್ನನ್ನು ಕುರಿತು ಲೋಫರ್ ನನ್ನ ಮಗನೇ ಹೆಚ್ಚಿಗೆ ಮಾತನಾಡಿದರೆ ನಿನ್ನನ್ನು ಸಾಯಿಸಿ ಬಿಡುತ್ತೇನೆ ಎಂದು ಪ್ರಾಣ ಬೆದರಿಕೆಯನ್ನು ಹಾಕಿದರು ಅಷ್ಟರಲ್ಲಿ ನಮ್ಮ ಗ್ರಾಮದ ನಾಗೇಶ ಬಿನ್ ಆಂಜಪ್ಪ ಮತ್ತು ವೆಂಕಟೇಶ ಬಿನ್ ನಾರಾಯಣಪ್ಪ ರವರು ಅಡ್ಡ ಬಂದು ಜಗಳ ಬಿಡಿಸಿದರು ನಂತರ ಗಾಯಗೊಂಡಿದ್ದ ನಾನು ನಮ್ಮ ತಾಯಿ ಮತ್ತು ನಮ್ಮ ಅತ್ತಿಗೆ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿರುತ್ತೇವೆ ಮೇಲ್ಕಂಡಂತೆ ನಮ್ಮ ಮೇಲೆ ಗಲಾಟೆ ಮಾಡಿ ಹೊಡೆದು ಹಲ್ಲೆ ಮಾಡಿರುವ ನರಸಿಂಹಪ್ಪ ಮತ್ತು ಮುನಿರಾಜು ರವರ ಮೇಲೆ ಕಾನೂನುರೀತ್ಯ ಕ್ರಮ ಕೈಗೊಳ್ಳಲು ಕೋರಿ ನೀಡಿದ ಹೇಳಿಕೆಯ ದೂರಾಗಿದೆ.

 

3. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್‌ ಠಾಣೆ ಮೊ.ಸಂ.44/2021 ಕಲಂ.279 ಐ.ಪಿ.ಸಿ & 184, 196, 177,181 INDIAN MOTOR VEHICLES ACT, 1988:-

   ದಿನಾಂಕ 15-05-2021 ರಂದು ಬೆಳಗ್ಗೆ 10-10 ಗಂಟೆಗೆ ಸ ಆ ಉ ನಿ ರವರು 2 ದ್ವಿಚಕ್ರ ವಾಹನಗಳನ್ನು ಮತ್ತು ಇಬ್ಬರು ಸವಾರರನ್ನು ಠಾಣೆಯಲ್ಲಿ ಹಾಜರ್ಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ ಸಾಹೇಬರು ಇಧೇ ದಿನ ಬೆಳಗ್ಗೆ  9-30 ಗಂಟೆಯ ಸಮಯದಲ್ಲಿ ಸಿಬ್ಬಂದಿರವರಾದ ಸಿ.ಪಿ.ಸಿ-243 ಶ್ರೀ. ನಾಗರಾಜ್ ನಾಯಕ್  ಹಾಗೂ ಚಾಲಕ ಎಪಿಸಿ 178 ಶ್ರೀನಿವಾಸ ರವರೊಂದಿಗೆ ಸ್ವತಂತ್ರ ದಿನಾಚರಣೆಯ ಅಂಗವಾಗಿ ಚಿಕ್ಕಬಳ್ಳಾಪುರ ನಗರದ  ಬಿಬಿ ರಸ್ತೆಯ ವಿಶಾಲ್ ಮಾರ್ಟ್ ಬಳಿ ಬಂದೋಬಸ್ತಿನಲ್ಲಿದ್ದಾಗ  ಬೆಂಗಳೂರು ಕಡೆಯಿಂದ ಎರಡು ದ್ವಿಚಕ್ರವಾಹನಗಳಲ್ಲಿ ಅವುಗಳ ಸವಾರರು ಅತಿವೇಗದಿಂದ ಸಾರ್ವಜನಿಕರ  ಪ್ರಾಣಕ್ಕೆ ಹಾನಿ ಉಂಟಾಗುವ ರೀತಿಯಲ್ಲಿ ವೇಗವಾಗಿ  ಚಾಲನೆ ಮಾಡಿಕೊಂಡು ಬರುತ್ತಿದ್ದ ವಾಹನಗಳನ್ನು ಸಿಬ್ಬಂದಿ ಸಹಾಯದಿಂದ  ನಿಲ್ಲಿಸಿ ನೊಂದಣಿ ಸಂಖ್ಯೆ ಯನ್ನು ನೋಡಲಾಗಿ 1) KA-03-KF-6220 ನೊಂದಣಿಯ ವಾಹನ ವಾಗಿದ್ದು ಇದು ಕೆಟಿಎಂ ವಾಹನವಾಗಿರುತ್ತದೆ, ಸದರಿ ವಾಹನದ ಚಾಲಕನ ಹೆಸರು ಮತ್ತು ವಿಳಾಸ ಕೇಳಲಾಗಿ  ಧನುಷ್ ಬಿನ್  ರವಿ 19 ವರ್ಷ  ಪ ಜಾತಿ ಜನಾಂಗ  ಪೈಂಟರ್ ಕೆಲಸ  ಮನೆ ನಂ ನ್ಯೂ 88/104 ಮಾರಿಯಮ್ಮ  ಬ್ಲಾಕ್  ರಾಮಚಂದ್ರ ಪುರ  ಜಾಲಹಳ್ಳಿ ಪೋಸ್ಟ್ ಎಂತ ತಿಳಿಸಿದ್ದು ಮತ್ತೊಂದು ವಾಹನದ ನೊಂದಣಿ ಸಂಖ್ಯೆಯನ್ನು ಪರಿಶಿಲಿಸಲಾಗಿ 2) KA-04-KD-2647  ನೊಂದಣಿಯ  ಕೆಟಿಎಂ  ದ್ವಿಚಕ್ರ ವಾಹನವಾಗಿದ್ದು  ಸದರಿ ವಾಹನದ ಚಾಲಕನ ಹೆಸರು ವಿಳಾಸವನ್ನು ಕೇಳಲಾಗಿ  ಬ್ರೈಟ್  ಬಿನ್ ಚಿನ್ನದುರೈ 19 ವರ್ಷ ಮನೆ ನಂ #22 7 ನೇ ಮುಖ್ಯರಸ್ತೆ ಸಿಂಗಪುರ  ಲೇ ಔಟ್   ವಿದ್ಯಾರಣ್ಯ ಪುರಂ ಪೋಸ್ಟ್ ಬೆಂಗಳೂರು ನಗರ ಎಂತ ತಿಳಿಸಿದ್ದು ಸದರಿ ಚಾಲಕರುಗಳ ಬಳಿ  ವಾಹನದ ದಾಖಲೆಗಳನ್ನು ಹಾಗೂ ಚಾಲಕರುಗಳ ಚಾಲನಾ ಪರವಾನಿಗೆಯನ್ನು ಕೇಳಲಾಗಿ ವಾಹನದ ದಾಖಲೆಗಳು ನನ್ನ ಬಳಿ ಇಲ್ಲವೆಂತ ತಿಳಿಸಿದ್ದು ಸದರಿಯವರು ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಮೇಲ್ಕಂಡ KA-03-KF-6220 ನೊಂದಣಿಯ ದ್ವಿಚಕ್ರ ವಾಹನಗಳನ್ನು  ಚಾಲಕರುಗಳ ಸಮೇತ  ಬೆಳಗ್ಗೆ 10-00 ಗಂಟೆಗೆ ಸಿಪಿಸಿ-243 ನಾಗರಾಜ ನಾಯ್ಕ್ ಮತ್ತು ಚಾಲಕ ಶ್ರೀನಿವಾಸ  ರವರೊಂದಿಗೆ ಠಾಣೆಗೆ ತೆಗೆದುಕೊಂಡು ಬಂದು ಆವರಣದಲ್ಲಿ  ನಿಲ್ಲಿಸಿ ವರದಿಯನ್ನು ನೀಡುತ್ತಿದ್ದು ದ್ವಿಚಕ್ರ ವಾಹನಗಳ  ಸವಾರರಾಧ  ದನುಷ್ ಮತ್ತು ಬ್ರೈಟ್ ರವರುಗಳ ಮೇಲೆ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕೆಂದು  ನೀಡಿದ ದೂರಿನ ಮೇರೆಗ  ಈ ಪ್ರವವರದಿ .

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.360/2021 ಕಲಂ.323,341,504,506,34 ಐ.ಪಿ.ಸಿ:-

   ದಿನಾಂಕ: 14/08/2021 ರಂದು ಸಂಜೆ 6.30 ಗಂಟೆಗೆ ಪಿರ್ಯಾಧಿದಾರರಾದ ಮನೋಹರ್ ಬಿನ್ ವೆಂಕಟೇಶ್, 21 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ: ಸಿಂಗಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ತಂದೆಯವರು ಒಟ್ಟು ನಾಲ್ಕು ಜನ ಗಂಡು ಮಕ್ಕಳಿದ್ದು, ಮೊದಲನೇ ಶಿವಾರೆಡ್ಡಿ, ಎರಡನೇ ತಮ್ಮ ತಂದೆ ವೆಂಕಟೇಶಪ್ಪ, ಮೂರನೇ ನಾಗರಾಜು ಮತ್ತು ನಾಲ್ಕನೇ ಆಂಜನೇಯರೆಡ್ಡಿರವರಾಗಿರುತ್ತಾರೆ. ಎಲ್ಲರೂ ಬೇರೆ ಬೇರೆಯಾಗಿ ವಾಸವಾಗಿರುತ್ತೇವೆ. ತಮ್ಮ ಪಿತ್ರಾರ್ಜಿತ ಆಸ್ತಿ ಇನ್ನೂ ವಿಭಾಗಗಳು ಆಗದೇ ಇದ್ದು, ಎಲ್ಲಾ ಆಸ್ತಿ ತಮ್ಮ ತಾತನ ಹೆಸರಿನಲ್ಲಿಯೇ ಇರುತ್ತದೆ. ತಮ್ಮ ತಾತ ವೆಂಕಟರೆಡ್ಡಿರವರು ಎಲ್ಲರಿಗೂ ಜಮೀನಿನ ವಿಚಾರದಲ್ಲಿ ಬಾಯಿ ಮಾತಿನಲ್ಲಿ ಭಾಗಗಳನ್ನು ಇಟ್ಟಿರುತ್ತಾರೆ. ಆದರೆ ಈ ಭಾಗಗಳ ವಿಚಾರದಲ್ಲಿ ತನ್ನ ದೊಡ್ಡಪ್ಪ ಶಿವಾರೆಡ್ಡಿ ರವರಿಗೆ ಅಸಮದಾನ ಇರುವುದರಿಂದ ಶಿವಾರೆಡ್ಡಿ ಮತ್ತು ಆತನ ಮಗ ಅನಿಲ್ ಕುಮಾರ್ ತಕರಾರುಗಳನ್ನು ತೆಗೆದು ಆಗ್ಗಾಗ್ಗೆ ಗಲಾಟೆಗಳನ್ನು ಮಾಡುತ್ತಿರುತ್ತಾರೆ. ಅದರಂತೆ ದಿನಾಂಕ: 07/08/2021 ರಂದು ಸಂಜೆ 4.00 ಗಂಟೆಯಲ್ಲಿ ತಾನು ತನ್ನ ಚಿಕ್ಕಪ್ಪ ಆಂಜನೇಯರೆಡ್ಡಿರವರ ಬಾಬತ್ತು ಟ್ರ್ಯಾಕ್ಟರ್ ನಲ್ಲಿ ತಮ್ಮ ಹೊಲವನ್ನು ಉಳುಮೆ ಮಾಡಲು ಟ್ರಾಕ್ಟರ್ ನ್ನು ಚಲಾಯಿಸಿಕೊಂಡು ತಮ್ಮ ಗ್ರಾಮದ ಕರೆಯ ಬಳಿ ಜಮೀನಿನ ಕಡೆಗೆ ಹೋಗಿ ಜಮೀನನ್ನು ಉಳುಮೆ ಮಾಡಿಕೊಂಡು ವಾಪಸ್ಸು ಬರುತ್ತಿದ್ದಾಗ ತಮ್ಮ ಜಮೀನಿನ ಮುಂದೆ ಇರುವ ರಸ್ತೆಯ ಬಳಿ ತನ್ನ ದೊಡ್ಡಪ್ಪ ಶಿವಾರೆಡ್ಡಿ ಮತ್ತು ಆತನ ಮಗನಾದ ಅನಿಲ್ ಕುಮಾರ್ ರವರು ತನ್ನನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಶಿವಾರೆಡ್ಡಿರವರು ತನ್ನನ್ನು ಕುರಿತು “ಲೋಫರ್ ಸೂಳೆ ನನ್ನ ಮಗನೇ ಏಕೆ ಈ ದಾರಿಯಲ್ಲಿ ಬಂದಿದ್ದು, ನಿಮಗೆ ಈ ದಾರಿಯಲ್ಲಿ ಹೋಗಲು ಬಿಡುವುದಿಲ್ಲ” ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿದ್ದು ನಂತರ ಅಲ್ಲಿಯೇ ಇದ್ದ ತಮ್ಮ ತಾತ ವೆಂಕಟರೆಡ್ಡಿ ಮತ್ತು ತನ್ನ ಚಿಕ್ಕಪ್ಪ ಅಂಜನೇಯರೆಡ್ಡಿರವರು ಗಲಾಟೆ ಬಿಡಿಸಲು ಬಂದಾಗ ಅವರಿಗೂ ಸಹ ಶಿವಾರೆಡ್ಡಿ ಮತ್ತು ಅನಿಲ್ ಕುಮಾರ್ ಕೈಗಳಿಂದ ಮೈ ಮೇಲೆ ಹೊಡೆದು ಮೂಗೇಟುವನ್ನುಂಟು ಮಾಡಿದರು. ನಂತರ ಅನಿಲ್ ಕುಮಾರ್ ರವರು ಸ್ಥಳದಿಂದ ಹೋಗುವಾಗ ತನ್ನನ್ನು ಕುರಿತು “ಇನ್ನೊಂದು ಸಲ ಈ ಜಮೀನಿನ ಬಳಿ ಬಂದರೆ ನಿನ್ನನ್ನು ಸಾಯಿಸಿ ಇಲ್ಲಿಯೇ ಊತಿಬಿಡುತ್ತೇನೆ” ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಅಷ್ಟರಲ್ಲಿ ತಮ್ಮ ಗ್ರಾಮದ ಮುನಿರಾಜು ಬಿನ್ ಕೃಷ್ಣಾರೆಡ್ಡಿ ಮತ್ತು ವೆಂಕಟರೆಡ್ಡಿ ಬಿನ್ ವೆಂಕಟೇಶಪ್ಪ ರವರುಗಳು ಬಂದು ಗಲಾಟೆಯನ್ನು ಬಿಡಿಸಿರುತ್ತಾರೆ. ಸದರಿ ಗಲಾಟೆಯ ವಿಚಾರವಾಗಿ ಗ್ರಾಮದ ಹಿರಿಯರು ನ್ಯಾಯ ಪಂಚಾಯ್ತಿ ಮಾಡುವುದಾಗಿ ಹೇಳಿದ್ದು ಇದುವರೆಗೂ ಸಹ ಮೇಲ್ಕಂಡವರು ನ್ಯಾಯ ಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ತಮ್ಮ ಮೇಲೆ ಗಲಾಟೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

5. ಚಿಂತಾಮಣಿ ನಗರ ಪೊಲೀಸ್‌ ಠಾಣೆ ಮೊ.ಸಂ.147/2021 ಕಲಂ.87 ಕೆ.ಪಿ ಆಕ್ಟ್:-

  ದಿನಾಂಕ: 14/08/2021 ರಂದು ಪಿ.ಸಿ 367 ಚೇತನ್ ರೆಡ್ಡಿ ರವರು   ಘನ ನ್ಯಾಯಾಲಯದಿಂದ ಎನ್.ಸಿ.ಆರ್ ನಂ: 103/2021 ರ ಅನುಮತಿ ಪ್ರತಿಯನ್ನು  ಹಾಜರುಪಡಿಸಿದ ಸಾರಾಂಶವೆನೆಂದರೆ ದಿನಾಂಕ 14/08/2021 ರಂದು ಚಿಕ್ಕಬಳ್ಳಾಪುರ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವರಾದ ಶ್ರೀ ಎನ್ ರಾಜಣ್ಣ ರವರು ಮ.ಪಿ.ಎಸ್.ಐ ಶ್ರೀಮತಿ ಸರಸ್ವತಮ್ಮ ಆದ ತನಗೆ ಮತ್ತು ನಮ್ಮ ಠಾಣೆಯ ಸಿಬ್ಬಂದಿಗಳಾದ  ಹೆಚ್.ಸಿ 239 ಮಲ್ಲಿಕಾರ್ಜುನ, ಹೆಚ್.ಸಿ 198 ಮಂಜುನಾಥ, ಹೆಚ್,ಸಿ 110 ವೇಣು, ಹೆಚ್.ಸಿ 195 ಹೆಚ್. ಮುರುಳಿಧರ ಮತ್ತು ಹೆಚ್.ಸಿ 50 ನರಸಿಂಹಮೂರ್ತಿ, ಜೀಪ್ ಚಾಲಕನಾದ ಎ.ಹೆಚ್.ಸಿ 13 ಸುಶೀಲ್ ಕುಮಾರ್ ರವರು ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ಮಾಡುವಂತೆ ನೇಮಿಸಿದ್ದು ಅದರಂತೆ  ಠಾಣೆಯ ಜೀಪ್ ಸಂಖ್ಯೆ ಕೆಎ-07 ಜಿ -58 ರಲ್ಲಿ ನಾವು ಈ ದಿನ  ಚಿಂತಾಮಣಿ ನಗರದಲ್ಲಿ ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ಗಸ್ತಿನಲ್ಲಿದ್ದಾಗ ನಗರದ ಸಾಲಿಪೇಟೆಯ ಅರಳೇ ಕಟ್ಟೆ ಬಳಿಯ ಖಾಲಿ ಜಾಗದಲ್ಲಿ ಯಾರೋ ಕೆಲವರು ಗುಂಪು ಸೇರಿ ಹಣವನ್ನು ಪಣಕ್ಕಿಟ್ಟು ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ  ಬಂದ ಖಚಿತಿ ಮಾಹಿತಿಯ ಮೇರೆಗೆ ದಾಳಿ ಮಾಡಲು ನಮ್ಮಗಳೊಂದಿಗೆ ಚಿಂತಾಮಣಿ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ನಾರಾಯಣಸ್ವಾಮಿ ಹಾಗೂ  ಸಿಬ್ಬಂದಿಗಳಾದ  ಹೆಚ್.ಸಿ 245 ಸೋಮಶೇಖರಾಚಾರಿ, ಹೆಚ್.ಸಿ 177 ಸರ್ವೇಶ್, ಪಿಸಿ 190 ವೇಣು ರವರೊಂದಿಗೆ ಮಾರುತಿ ವೃತ್ತದಲ್ಲಿ ಪಂಚರನ್ನು ಬರಮಾಡಿಕೊಂಡು  ನಮ್ಮ ಠಾಣೆಯ ಮತ್ತು ಚಿಂತಾಮಣಿ ನಗರ ಠಾಣೆಯ ಜೀಪ್ ಸಂಖ್ಯೆ ಕೆಎ-40- ಜಿ-3699 ರಲ್ಲಿ  ಹೋಗಿ ಸ್ವಲ್ಪ ದೂರದಲ್ಲಿ ಜೀಪ್ ಗಳನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಹೋಗಿ ಮೊರೆಯಲ್ಲಿ ನಿಂತು ನೋಡಲಾಗಿ 10-11 ಜನರು ಸ್ಥಳದಲ್ಲಿ ಕುಳಿತುಕೊಂಡು ಅಂದರ್ 100 ಬಾಹರ್ 100 ಎಂತ ಕೂಗುತ್ತಾ ಹಣವನ್ನು ಪಣಕ್ಕಿಟ್ಟು ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟವಾಡುತ್ತಿದ್ದು, ಪಂಚರ ಸಮಕ್ಷಮ ಅವರನ್ನು ಸುತ್ತುವರೆದು ಅವರಿಗೆ ಓಡಿಹೋಗದಂತೆ ಎಚ್ಚರಿಕೆ ನೀಡಿ ಅವರನ್ನು ಹಿಡಿದುಕೊಂಡು ಆವರ ಹೆಸರು ಮತ್ತು ವಿಳಾಸ ಕೇಳಲಾಗಿ 1] ಯೇಸು @ ಎನ್ ಬಾಬು ಬಿನ್ ನರಸಯ್ಯ, 40 ವರ್ಷ, ಪರಿಶಿಷ್ಟ ಜಾತಿ,  ಹಾಸ್ಟೇಲ್ ನಲ್ಲಿ ಕೂಲಿ ಕೆಲಸ, ವಾಸ: ಬಂಬೂ ಬಜಾರ್, ಚಿಂತಾಮಣಿ ನಗರ. 2] ಸತೀಶ್ @ ಸತ್ತಿ ಬಿನ್ ಶೇಖರ್, 32 ವರ್ಷ, ಪರಿಶಿಷ್ಟ ಜಾತಿ, ಕೂಲಿ ಕೆಲಸ, ಶಾಂತಿ ನಗರ, ಚಿಂತಾಮಣಿ ನಗರ 3] ಶೇಖರ್ ಬಿನ್ ಶ್ರೀನಿವಾಸ, 30 ವರ್ಷ, ವಕ್ಕಲಿಗರು, ಸೆಂಟ್ರಿಂಗ್ ಕೆಲಸ, ನಾರಸಿಂಹಪೇಟೆ, ಚಿಂತಾಮಣಿ ನಗರ 4] ಸುನೀಲ್ ಬಿನ್ ಚಲಪತಿ, 30 ವರ್ಷ, ಕೊರಚರು, ಗಾರೆ ಮೇಸ್ತ್ರೀ, ವಾಸ: ಎನ್ ಎನ್ ಟಿ ದೇವಸ್ಥಾನ ರಸ್ತೆ, ಚಿಂತಾಮಣಿ ನಗರ,5] ಗೋವಿಂದರಾಜ ಬಿನ್ ಶ್ರೀನಿವಾಸ, 32 ವರ್ಷ, ಪರಿಶಿಷ್ಟ ಜಾತಿ, ಗಾರೆ ಮೇಸ್ತ್ರೀ, ಸಾಲಿ ಪೇಟೆ, ಚಿಂತಾಮಣಿ ನಗರ 6] ನರೇಶ್ ಬಿನ್ ವಿನಾಯಕ ರೆಡ್ಡಿ, 32 ವರ್ಷ, ವಕ್ಕಲಿಗರು, ಡೆಕೋರೇಷನ್ ಕೆಲಸ, ನಾರಸಿಂಹಪೇಟೆ, ಚಿಂತಾಮಣಿ ನಗರ 7]ಮುನಿರಾಜು ಬಿನ್ ಎಂ ಶಿವಣ್ಣ, 39 ವರ್ಷ, ಪರಿಶಿಷ್ಟ ಜಾತಿ, ಅಮಾಲಿ ಕೆಲಸ, ವಿನೋಭಾ ಕಾಲೋನಿ, ಚಿಂತಾಮಣಿ ನಗರ 8] ಆನಂದ ಬಿನ್ ಲೋಕೇಶ್, 28 ವರ್ಷ, ಪರಿಶಿಷ್ಟ ಜಾತಿ, ಟ್ಯಾಂಕರ್ ನೀರು ಹೊಡೆಯುವುದು, ಅಶ್ರಯ ಬಡಾವಣೆ, ಚಿಂತಾಮಣಿ ನಗರ, 9] ಅನ್ವರ್  ಬಿನ್ ಹುಸೇನ್ ಸಾಬ್, 40 ವರ್ಷ, ಮುಸ್ಲಿಂ ಜನಾಂಗ, ಚಾಲಕ ವೃತ್ತಿ, ನೆಕ್ಕುಂದಿಪೇಟೆ 10] ರಘು ಬಿನ್ ವೆಂಕಟೇಶಪ್ಪ, 38 ವರ್ಷ, ಪರಿಶಿಷ್ಟ ಜಾತಿ ಆಟೋ ಚಾಲಕ, ಸಾಲಿಪೇಟೆ, ಚಿಂತಾಮಣಿ ನಗರ 11] ಅಭಿಲಾಷ್ ಎನ್ ಬಿನ್ ನರಸಿಂಹಪ್ಪ, 26 ವರ್ಷ, ಪರಿಶಿಷ್ಟ ಜಾತಿ, ಸೆಂಟ್ರಿಂಗ್ ಕೆಲಸ, ಸಾಲಿಪೇಟೆ, ಚಿಂತಾಮಣಿ ನಗರ ಎಂದು ತಿಳಿಸಿದ್ದು  ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಪರಿಶೀಲಿಸಲಾಗಿ ಒಂದು ಪ್ಲಾಸ್ಟಿಕ್ ಚೀಲ ಹಾಕಿದ್ದು, ಅದರ ಮೇಲೆ ಇಸ್ಪೀಟು ಎಲೆಗಳು, ಹಣ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಇಸ್ಪೀಟು ಎಲೆಗಳನ್ನು ಎಣಿಸಲಾಗಿ ಒಟ್ಟು 52 ಇಸ್ಪೀಟು ಎಲೆಗಳು ಇದ್ದು, ಹಣ ಒಟ್ಟು 15020-00 ರೂಗಳಿರುತ್ತೆ. ಸದರಿ ಮಾಲುಗಳನ್ನು ಈ ದಿನ ಮದ್ಯಾಹ್ನ 4-00 ಗಂಟೆಯಿಂದ 5-00 ಗಂಟೆಯ ವರೆಗೆ ಪಂಚರ ಸಮಕ್ಷಮ ಪಂಚನಾಮೆಯನ್ನು ಜರುಗಿಸಿ ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ವರದಿಯನ್ನು ನೀಡಿದ ಮೇರೆಗೆ ಆಸಂಜ್ಞೇಯ ಅಪರಾಧವಾಗಿದ್ದ ರಿಂದ ಠಾಣಾ ಎನ್.ಸಿ.ಆರ್ ನಂ: 103/2021 ರಂತೆ ದಾಖಲಿಸಿ ಮುಂದಿನ ಕ್ರಮಕ್ಕಾಗಿ ಘನ ನ್ಯಾಯಾಲಯಕ್ಕೆ ನಿವೇದಿಸಿಕೊಂಡು ಅನುಮತಿಯನ್ನು ಪಡೆದ ನಂತರ ಮೊ ಸ: 147/202 ಕಲಂ: 87 ಕೆಪಿ ಆಕ್ಟ್ ರಿತ್ಯಾ ಪ್ರಕರಣ ದಾಖಲಿಸಿರುತ್ತೇ.

 

  6. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ.187/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:15/08/2021 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಘನ ನ್ಯಾಯಾಲಯದ ಪಿಸಿ-430 ಪ್ರದೀಪ್ ರವರು ಠಾಣಾ NCR:231/2021 ರಲ್ಲಿ ಕ್ರಿಮೀನಲ್ ಪ್ರಕರಣ ದಾಖಲಿಸಲು   ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು  ಹಾಜರುಪಡಿಸಿದ ದೂರಿನ ಸಾರಾಂಶವೇನೆಂದರೆ:  ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎ,ಎಸ್,ಐ ಗಂಗಾಧರಪ್ಪ  ಆದ ನಾನು ಈ ದಿನ ದಿನಾಂಕ:13.08.2021 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಗುಡಿಬಂಢೆ ಪೊಲೀಸ್ ಠಾಣೆಯ ಬೀಟ್ ಸಿಬ್ಬಂದಿ ಪಿ.ಸಿ. 141. ಸಂತೋಷಕುಮಾರ್ ರವರು ನನಗೆ ಪೋನ್ ಮಾಡಿ ಬೊಮ್ಮಗಾನಹಳ್ಳಿಯಲ್ಲಿ ಗಂಗರಾಜ ಎಂಬುವರ ಮನೆಯ ಬಳಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು, ಹೆಚ್.ಸಿ.222, ನಾಗರಾಜ್ ರವರನ್ನು ಜೊತೆಯಲ್ಲಿ ಕರೆದುಕೊಂಡು ದ್ವಿಚಕ್ರವಾಹನದಲ್ಲಿ ಬೆಳಿಗ್ಗೆ 11-30 ಗಂಟೆ ಸಮಯಕ್ಕೆ ಬೊಮ್ಮಗಾನಹಳ್ಳಿ ಗ್ರಾಮದ ಬಳಿಗೆ ಹೋಗಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು, ಪಂಚರು ದಾಳಿಗೆ ಒಪ್ಪಿಕೊಂಡಿರುತ್ತಾರೆ. ನಂತರ ನನಗೆ ಮಾಹಿತಿಯನ್ನು ನೀಡಿದ ಬೀಟ್ ಕರ್ತವ್ಯದ ಪಿ.ಸಿ. 141. ಸಂತೋಷಕುಮಾರ್ ರವರನ್ನು ಕರೆದುಕೊಂಡು, ಪಂಚರೊಂದಿಗೆ ಬೊಮ್ಮಗಾನಹಳ್ಳಿ ಗ್ರಾಮದ ಗಂಗರಾಜ್ ರವರ ಮನೆಯ ಕಡೆಗೆ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ದ್ವಿ ಚಕ್ರವಾಹನಗಳನ್ನು ನಿಲ್ಲಿಸಿ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಬೆಳಿಗ್ಗೆ 11-45 ಗಂಟೆಗೆ ಪಂಚರೊಂದಿಗೆ ನಾವು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿ ಸ್ಥಳದಲ್ಲಿಯೇ ಇದ್ದು, ಸದರಿ ಆಸಾಮಿಯನ್ನು ಹಿಡಿದು ಹೆಸರು & ವಿಳಾಸವನ್ನು ಕೇಳಿ ತಿಳಿಯಲಾಗಿ ಗಂಗರಾಜ ಬಿನ್ ಲೇಟ್ ವೆಂಕಟರಾಮಪ್ಪ, 28 ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ಬೊಮ್ಮಗಾನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು, ಮೊಬೈಲ್ ನಂ: 636337088 ಎಂದು ತಿಳಿಸಿರುತ್ತಾನೆ. ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯವನ್ನು ಸೇವನೆಗೆ ಸ್ಥಳಾವಕಾಶ ನೀಡಲಿಕ್ಕೆ ನಿನ್ನ ಬಳಿ ಪರವಾನಗಿ ಇದೆಯೇ ಎಂದು  ಕೇಳಲಾಗಿ, ಇಲ್ಲವೆಂದು ತಿಳಿಸಿರುತ್ತಾನೆ. ಸದರಿ ಆರೋಪಿಯು ಯಾವುದೇ ಪರವಾನಗಿ ಇಲ್ಲದೆ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುತ್ತಾನೆ.  ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ  1) ಹೈ ವಾಡ್ರ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 10 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾಡ್ರ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್,ಎಲ್ ಅಳತೆಯ 03 ಖಾಲಿ ಟೆಟ್ರಾ ಪಾಕೆಟ್ ಗಳು 3) ಮದ್ಯವನ್ನು ಕುಡಿದು  ಬಿಸಾಡಿರುವಂತಹ 03 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಅರ್ದ ಲೀಟರ್ ಸಾಮರ್ಥ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದವು.  ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 900 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*10=351.3/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಮದ್ಯಾಹ್ನ 12-00 ಗಂಟೆಯಿಂದ ಮದ್ಯಾಹ್ನ 1-00 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಮೇಲ್ಕಂಡ ಮಾಲು,  ಅಸಲು ಪಂಚನಾಮೆ ಮತ್ತು ಆರೋಪಿಯೊಂದಿಗೆ ಮದ್ಯಾಹ್ನ 1-30 ಗಂಟೆಗೆ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಮದ್ಯಾಹ್ನ 2-00 ಗಂಟೆಗೆ ಠಾಣಾಧಿಕಾರಿಗಳಿಗೆ ವರದಿ ನೀಡುತ್ತಿದ್ದು ಸದರಿ ಆರೋಪಿ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ. ಎಂದು ನೀಡಿದ ದೂರಾಗಿರುತ್ತೆ.

 

7. ಮಂಚೇನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ.138/2021 ಕಲಂ. 279,337 ಐ.ಪಿ.ಸಿ:-

   ದಿನಾಂಕ:15/08/2021 ರಂದು ಪಿರ್ಯಾದಿದಾರರಾದ ಶ್ರೀ ಸುಬ್ಬರಾಯಪ್ಪ ಬಿನ್ ಲೇಟ್ ಹನುಮಂತಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಮತ್ತು ನಮ್ಮ ಕುಟುಂಬದವರಾದ ನಮ್ಮ ತಾಯಿ ಗಂಗಮ್ಮ ಕೊಂ ಲೇಟ್ ಹುನುಮಂತಪ್ಪ, 80 ವರ್ಷ, ನನ್ನ ಮಗ ಪೆದ್ದಪ್ಪಯ್ಯ ಬಿನ್ ಸುಬ್ಬರಾಯಪ್ಪ, 40 ವರ್ಷ, ಪೆದ್ದಪ್ಪಯ್ಯನ ಹೆಂಡತಿ ಕಾರ್ತಿಕ 35 ವರ್ಷ, ಇನ್ನೊಬ್ಬ ಮಗ ಅನಿಲ್ ಕುಮಾರ್, 25 ವರ್ಷ, ನಮ್ಮ ಅಣ್ಣನ ಮಗ ಶಿವಕುಮಾರ್ ಬಿನ್ ಗನುಮಂತರಾಐಪ್ಪ, 21 ವರ್ಷ, ನಮ್ಮ ಅತ್ತಿಗೆ ರತ್ನಮ್ಮ ಕೊಂ ಲೇಟ್ ಹನುಮಂತರಾಯಪ್ಪ 60 ವರ್ಷ, ರವರುಗಳು ದಿನಾಂಕ:14/08/2021 ರಂದು ಹಿಂದೂಪುರ ಬಳಿ ಇರುವ ಸಂತೇಬಿದನೂರಿನ ಬಳಿ ಇರುವ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಪೂಜೆಗೆ ಹೋಗಲು ಗುಯ್ಯಲಹಳ್ಳಿ ಗ್ರಾಮದ ಲಕ್ಷ್ಮೀಪತಿ ಬಿನ್ ಸುಬ್ಬಣ್ಣಚಾರಿ ರವರ ಆಟೋ ನಂಬರ್ KA-64, 1703 ರಲ್ಲಿ ಬೆಳಿಗ್ಗೆ 10-00ಗ ಗಂಟೆಗೆ ಹೋಗಿ ದೇವಸ್ಥಾನದ ಪೂಜೆಯನ್ನು ಮುಗಿಸಿಕೊಂಡು ವಾಪಾಸ್ ಮನೆಗೆ ಬರಲು ಗೌರಿಬಿದನೂರು ಮಂಚೇನಹಳ್ಳಿ ರಸ್ತೆಯ ಬಿಸಲಹಳ್ಳಿ ಗ್ರಾಮದ ಬಳಿ ಆಟೋ ಚಾಲಕ ಮದ್ಯಾಹ್ನ 1-00 ಗಂಟೆಗೆ ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಬಲ ಭಾಗ ಕಾಲುವೆಯಲ್ಲಿ ಉರುಳಿಸಿದ ಪರಿಣಾಮ ನಮಗೆ ಗಾಯಗಳಾಗಿದ್ದು, ಅಲ್ಲಿಗೆ ಬಂದ ಸಾರ್ವಜನಿಕರು ನಮಗೆ ಉಪಚರಿಸಿ 108 ಅಂಬ್ಯೂಲೇನ್ಸ್ ನಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದ್ದು, ನಮ್ಮ ತಾಯಿ ಗಂಗಮ್ಮ ಮತ್ತು ಪೆದ್ದಪ್ಪಯ್ಯ ರವರಿಗೆ ಹೆಚ್ಚಿನ ಗಾಯಗಳಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಿದ್ದು, ನನಗೆ ಮತ್ತು ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಘಾತ ಪಡಿಸಿದ ಆಟೋ ಚಾಲಕ ಲಕ್ಷ್ಮೀಪತಿ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 

8. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.267/2021 ಕಲಂ. 279,337 ಐ.ಪಿ.ಸಿ:-

   ದಿನಾಂಕ:14-08-2021 ರಂದು ಸಂಜೆ 6-30 ಗಂಟೆಯಲ್ಲಿ ಪಿರ್ಯಾದಿದಾರರಾದ ಗಂಗಾಧರ ಎನ್ ಬಿನ್ ನಾರಾಯಣಸ್ವಾಮಿ ಎ, 34 ವರ್ಷ,ಚನ್ನದಾಸರ್ , ಸೆಕ್ಯೂರಿಟಿ ಗಾರ್ಡ್  ಕೆಲಸ,ವಾರ್ಡ ನಂ:19 ಪುಟ್ಟಪ್ಪಗುಡಿ ಬೀದಿ, ಗಂಗಮ್ಮ ದೇವಸ್ಥಾನದ ಹಿಂಭಾಗ, ದೇವಹಳ್ಳಿ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ  ತನ್ನ  ತಂದೆ ಎ.ನಾರಾಯಣಸ್ವಾಮಿ ತಾಯಿ: ವೆಂಕಟಮ್ಮ  ಇವರಿಗೆ ತಾವು ಮೂರು ಜನ ಮಕ್ಕಳು 1ನೇ  ಜ್ಯೋತಿ, 2ನೇ ಗಂಗಾಧರ ಆದ ತಾನು, 3ನೇ ಮುರಳಿ.ಎನ್ ರವರಾಗಿರುತ್ತಾರೆ ಎಲ್ಲರಿಗೂ ಮದುವೆಗಳಾಗಿರುತ್ತೆ, ತನ್ನ ತಮ್ಮನಾದ ಮುರಳಿ.ಎನ್ ರವರು ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡಿರುತ್ತಾನೆ ತನ್ನ ತಮ್ಮನಿಗೆ ಶಿಡ್ಲಘಟ್ಟ ತಾಲ್ಲೂಕು ಕುಂದಲಗುರ್ಕಿ  ಗ್ರಾಮದ ಬಳಿ ಇರುವ ಗೊಲ್ಲಹಳ್ಳಿ ಗ್ರಾಮದ ಕಾವ್ಯ ರವರೊಂದಿಗೆ ಮದುವೆ ಮಾಡಿರುತ್ತೇವೆ ಅವರಿಗೆ 1 ನೇ ಚಂದನ್ ಮತ್ತು 2ನೇ 6 ತಿಂಗಳ ಚಿಕ್ಕ ಮಗು ಇರುತ್ತೆ. ಹೀಗಿರುವಲ್ಲಿ ದಿನಾಂಕ:12-08-2021 ರಂದು ಮದ್ಯಾಹ್ನ 1-30 ಗಂಟೆಯಲ್ಲಿ  ತನ್ನ ತಮ್ಮನಾದ ಮುರಳಿ ರವರು ಶಿಡ್ಲಘಟ್ಟ ತಾಲ್ಲೂಕು  ಗೊಲ್ಲಹಳ್ಳಿ ಗ್ರಾಮದಲ್ಲಿರುವ ಆತನ ಹೆಂಡತಿ ಮಕ್ಕಳನ್ನು ನೋಡಿಕೊಂಡು ಬರುತ್ತೇನೆಂದು ಹೇಳಿ ಕೆಎ-50 ಇ.ಜಿ-1632 ಪಲ್ಸರ್ ದ್ವಿಚಕ್ರವಾಹನದಲ್ಲಿ ಹೋಗಿರುತ್ತಾನೆ. ನಂತರ ಮದ್ಯಾಹ್ನ  2-40 ಗಂಟೆಯಲ್ಲಿ ತನ್ನ ತಮ್ಮನಾದ ಮುರಳಿ ತನಗೆ ಪೋನ್ ಮಾಡಿ ವಿಜಯಪುರ-ಶಿಡ್ಲಘಟ್ಟ ರಸ್ತೆಯ ಕೇಶವರಪುರ-ಹಂಡಿಗನಾಳ ಮದ್ಯೆ ಇರುವ ಕೆರೆಯ ಕಟ್ಟೆಯ ಮೇಲೆ ಅಪಘಾತವಾಗಿರುವುದಾಗಿ ಗಾಯಗಳಾಗಿದ್ದ ತನ್ನನ್ನು ಯಾರೋ ಸಾರ್ವಜನಿಕರು ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿರುವುದಾಗಿ ತಿಳಿಸಿದ್ದು ಆಗ ತಕ್ಷಣ ನಾನು ಶಿಡ್ಲಘಟ್ಟ ಸರ್ಕಾರಿ  ಆಸ್ಪತ್ರೆಗೆ ಬಂದು ತನ್ನ ತಮ್ಮನಿಂದ ವಿಚಾರ ತಿಳಿದುಕೊಳ್ಳಲಾಗಿ ತನ್ನ ತಮ್ಮನಾದ ಮುರಳಿ ದಿನಾಂಕ:12-08-2021 ರಂದು ಮದ್ಯಾಹ್ನ 2-30 ಗಂಟೆಯಲ್ಲಿ ಕೆಎ-50 ಇ.ಜಿ-1632 ಪಲ್ಸರ್ ದ್ವಿಚಕ್ರವಾಹನದಲ್ಲಿ ವಿಜಯಪುರ-ಶಿಡ್ಲಘಟ್ಟ ರಸ್ತೆಯ ಕೇಶವರಪುರ-ಹಂಡಿಗನಾಳ ಮದ್ಯೆ ಇರುವ ಕೆರೆಯ ಕಟ್ಟೆಯ ಮೇಲೆ ಹೋಗುತ್ತಿದ್ದಾಗ ಶಿಡ್ಲಘಟ್ಟ ಕಡೆಯಿಂದ ಬಂದ ನಂ ಕೆಎ-03 ಎ.ಇ-9998 ಟೊಯೋಟೊ ಇಟಿಯಾಸ್ ಕಾರನ್ನು ಅದರ  ಚಾಲಕ ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ತಮ್ಮನ ದ್ವಿಚಕ್ರವಾಹನಕ್ಕೆ ಡಿಕ್ಕಿಹೊಡೆಸಿದ ಪರಿಣಾಮ ಮುರಳಿ.ಎನ್ ಕೆಳಗಡೆ ಬಿದ್ದು ಹೋಗಿ ಮುರಳಿಗೆ ಬಲಕೈಗೆ, ಬಲಕಾಲು ಮೊಣಕಾಲಿನ ಬಳಿ ರಕ್ತಗಾಯಗಳಾಗಿದ್ದ,ಬಲಭಾಗದ ಎದೆಗೆ, ತಲೆಗೆ ತರುಚಿದಗಾಯಗಳಾಗಿರುತ್ತೆ ಆಗ ಅಲ್ಲಿಯೇ ಇದ್ದ ಸಾರ್ವಜನಿಕರು ತನ್ನ ತಮ್ಮ ಮುರಳಿ.ಎನ್ ರವರನ್ನು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆಂದು ತಿಳಿದು ಬಂದಿರುತ್ತೆ, ತನ್ನ ತಮ್ಮನಿಗೆ  ಆದ ಗಾಯಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಪಡಿಸಿಕೊಂಡಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ತನ್ನ ತಮ್ಮನಾದ ಮುರಳಿ.ಎನ್ ರವರ ದ್ವಿಚಕ್ರವಾಹನಕ್ಕೆ ಅಪಘಾತವುಂಟುಮಾಡಿದ ಕೆಎ-03 ಎ.ಇ-9998 ಟೊಯೋಟೊ ಇಟಿಯಾಸ್ ಕಾರಿನ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಮೊ.ಸಂ. 267/2021 ಕಲಂ 279, 337 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

9. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ.268/2021 ಕಲಂ. 324,504,506 ಐ.ಪಿ.ಸಿ:-

   ದಿನಾಂಕ:14-08-2021 ರಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀ ಭಾಸ್ಕರ್ ಸಿ.ಜಿ ಬಿನ್ ಗೋಪಾಲ್ ಸಿ.ಎಂ., 34 ವರ್ಷ, ವಕ್ಕಲಿಗರು, ವಕೀಲರು, ಚೀಮನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ತಾನು ವಕೀಲ ವೃತ್ತಿಯೊಂದಿಗೆ ಜಿರಾಯ್ತಿ ಕೆಲಸ ಮಾಡಿಕೊಂಡು ವಾಸವಾಗಿದ್ದು ಈ ದಿನ ದಿನಾಂಕ: 14-08-2021 ರಂದು ಸಂಜೆ ಸುಮಾರು 7.00 ಗಂಟೆ ಸಮಯದಲ್ಲಿ ತಮ್ಮ ಪಕ್ಕದ ಮನೆಯ ವಾಸಿಯಾದ ಬಸವರಾಜ ಸಿ ಬಿ ಬಿನ್ ಲೇಟ್ ಬೈರಪ್ಪ ರವರು ತಮ್ಮ ರೇಷ್ಮೆ ಹುಳು ಸಾಕಾಣಿಕೆ ಮನೆಯ ಬಳಿ ಕಳೆ ನಾಶಕ ಔಷದಿ ಸಿಂಪಡಿಸುತ್ತಿದ್ದು, ಕಳೆ ನಾಶಕ ಔಷದಿಯಿಂದ ರೇಷ್ಮೆ ಹುಳುಗಳಿಗೆ ತೊಂದರೆಯಾಗುವ ಸಾದ್ಯತೆಯಿದ್ದರಿಂದ ತಾನು ಬಸವರಾಜಪ್ಪ ರವರನ್ನು ರೇಷ್ಮೆ ಹುಳು ಮನೆಯ ಬಳಿ ಏಕೆ ಔಷದಿ ಹೊಡೆಯುತ್ತಿದ್ದರೀ ಎಂದು ಕೇಳಿದ್ದಕ್ಕೆ ಬಸವರಾಜಪ್ಪ ರವರು ತನ್ನನ್ನು ಕುರಿತು ನೀನು ಯಾವನೋ ಅದನ್ನು ಕೇಳುವುದಕ್ಕೆ ಲೋಪರ್ ನನ್ನ ಮಗನೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಆತನ ಕೈಯಲ್ಲಿದ್ದ ಔಷದಿ ಸಿಂಪಡಿಸುವ ಯಂತ್ರದ ಕಬ್ಬಿಣದ ಪೈಪ್ ನಿಂದ ತನ್ನ ತಲೆಯ ಎಡಭಾಗದ ಹಣೆಯ ಮೇಲ್ಬಾಗಕ್ಕೆ ಹೊಡೆದು ಗಾಯಗೊಳಿಸಿ ನೀನೇನಾದರೂ ತಮ್ಮ ತಂಟೆಗೆ ಬಂದರೆ ನಿನ್ನನ್ನು ಜೀವಸಹಿತ ಉಳಿಸುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿದ್ದು ಆ ಸಮಯದಲ್ಲಿ ತಮ್ಮ ಗ್ರಾಮದ ಅಂಬರೀಷ ಬಿನ್ ಕರಗಪ್ಪ ಮತ್ತು ಮಂಜುನಾಥ ರವರು ಗಲಾಟೆ ಬಿಡಿಸಿದ್ದು ಅಷ್ಟರಲ್ಲಿ ಅಲ್ಲಿಗೆ ಬಂದ ತನ್ನ ತಮ್ಮ ಹರಿಪ್ರಸಾದ್ ರವರು ತನ್ನನ್ನು ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುವುದಾಗಿ ತಮ್ಮ ರೇಷ್ಮೆ ಹುಳು ಮನೆಯ ಬಳಿ ಔಷದಿ ಸಿಂಪಡಿಸುತ್ತಿದ್ದನ್ನು ಕೇಳಿದ್ದಕ್ಕೆ ತನ್ನ ಮೇಲೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ಪೈಪ್ ನಿಂದ ಹೊಡೆದು ಗಾಯಗೊಳಿಸಿ ಪ್ರಾಣ ಬೆದರಿಕೆ ಹಾಕಿರುವ ಬಸವರಾಜ ಬಿನ್ ಲೇಟ್ ಬೈರಪ್ಪ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ಹೇಳಿಕೆಯನ್ನು ಪಡೆದು ರಾತ್ರಿ 8.30 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಠಾಣಾ ಮೊ.ಸಂ: 268/2021 ಕಲಂ: 324, 504, 506 ಐ.ಪಿ.ಸಿ. ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಇತ್ತೀಚಿನ ನವೀಕರಣ​ : 15-08-2021 07:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080