ಅಭಿಪ್ರಾಯ / ಸಲಹೆಗಳು

 

1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 108/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ:14-07-2021 ರಂದು ರಾತ್ರಿ 8-00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ತಾನು ಟಿ.ಎನ್ 52 ಜೆ 1974 ಲಾರಿಯ ಚಾಲಕನಾಗಿ ಸುಮಾರು 15 ವರ್ಷಗಳಿಂದ ಆಲ್ ವಿನ್ ಟ್ರಾನ್ಸ್ ಪೋರ್ಟ್ನಲ್ಲಿ ಕೆಲಸ ಮಾಡಿಕೊಂಡಿದ್ದು. ದಿನಾಂಕ:12-07-2021 ರಂದು ಮದ್ಯ ಪ್ರದೇಶದಿಂದ ಕೇರಳಾದ ಕೊಚ್ಚಿನ್ ಗೆ ಹೋಗಲು ಎನ್.ಹೆಚ್-44 ರಸ್ತೆಯಲ್ಲಿ ಬಾಗೇಪಲ್ಲ ಕಡೆಯಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ದಿನಾಂಕ:14-07-2021 ರಂದು ಸಂಜೆ: 6-00 ಸಮಯದಲ್ಲಿ ಲಿಂಗಶೆಟ್ಟಿಪುರ ಗೇಟ್ ಸಮೀಪ ಬರುತ್ತಿರುವಾಗ ತನ್ನ ಲಾರಿಯ ಟೈರ್ ಪಂಚರ್ ಆಗಿ ಟೈರ್ ಬದಲಿಸಲು ಲಾರಿಯನ್ನು ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿದ್ದು.ಬಾಗೇಪಲ್ಲಿ ಕಡೆಯಿಂದ ಯಾವುದೋ ಒಂದು ಕಾರಿನ ಚಾಲಕ ಅತಿವೇಗ ಮತ್ತು ಅಜಾರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಿಲ್ಲಿಸಿದ್ದ ತನ್ನ ಲಾರಿಗೆ ಹಿಂದೆಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರು ರಸ್ತೆಗೆ ಅಡ್ಡಲಾಗಿ ನಿಂತಿತ್ತು. ಅದೇ ಸಮಯಕ್ಕೆ ಬಾಗೇಪಲ್ಲಿ ಕಡೆಯಿಂದ  ಬಂದ ಕಂಟೈನರ್ ಲಾರಿ ಕಾರಿನ ಹಿಂಬಾಗಕ್ಕೆ ಡಿಕ್ಕಿ ಹೊಡೆಸಿದ್ದು ತಾನು ಹೋಗಿ ನೋಡಲಾಗಿ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಕಾರು ಸಹ ಹಿಂಬಾಗ ಮುಂಬಾಗ ಜಖಂಗೊಂಡಿದ್ದು ಕಾರಿನ ನಂಬರ್ ನೋಡಲಾಗಿ ಕೆ.ಎ.02 ಎಮ್.ಎ 6685 ಆಗಿರುತ್ತದೆ ಮತ್ತು ತನ್ನ ಲಾರಿಗೆ ಹಿಂದೆ ಜಖಂ ಆಗಿರುತ್ತದೆ ಹಾಗೂ ಕಾರಿಗೆ ಡಿಕ್ಕಿ ಹೊಡೆದ ಕಂಟೈನರ್ನೋಡಲಾಗಿ ಸಂಖ್ಯೆ HR 55 W 4986 ಕಂಟೈನರ್ ಲಾರಿ ಮುಂಬಾಗದ ಎಡಭಾಗ ಸಹ ಜಖಂಗೊಂಡಿತ್ತದೆ. ಅಪಘಾತಕ್ಕೆ ಕಾರಣವಾದ ಚಾಲಕ ಕಾರನ್ನು ಬಿಟ್ಟು ಹೊರಟು ಹೋಗಿರುತ್ತಾನೆಂದು ಸದರಿ ಅಪಘಾತ ಮಾಡಿ ಜಖಂಗೊಳಿಸಿದ ಕಾರಿನ ಚಾಲಕನನ್ನು ಪತ್ತೆ ಮಾಡಿ ಕಾರು ಮತ್ತು ಕಾರಿನ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 

2. ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆ ಮೊ.ಸಂ. 52/2021 ಕಲಂ. 417,419,420,465,34 ಐ.ಪಿ.ಸಿ:-

     ದಿನಾಂಕ: 14-07-2021 ರಂದು ಸಂಜೆ 6-30 ಗಂಟೆಯಲ್ಲಿ ಈ ಕೇಸಿನ ಪಿರ್ಯಾಧಿಯಾದ ಶ್ರೀಮತಿ ಅಶ್ವತ್ತಮ್ಮ ರವರು ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶವೇನೆಂದರೆ, ತನಗೆ ಚಿಕ್ಕಬಳ್ಳಾಪುರ ನಗರದಲ್ಲಿ ಕೆಲವು ಸ್ನೇಹಿತರಿದ್ದು  ನಾವು ಅಗಾಗ್ಗೆ  ಪುಣ್ಯ ಕ್ಷೇತ್ರಗಳಿಗೆ  ಹೋಗುವ ಹವ್ಯಾಸವಿರುತ್ತದೆ ಅದರಂತೆ  ನಾವು 2019 ಸಾಲಿನನಲ್ಲಿ  ತಾನು ಹಾಗೂ ರತ್ನಮ್ಮ ರವರು  ಸಿಗಂದೂರು  ಚೌಡೇಶ್ವರಿ ದೇವಾಲಯಕ್ಕೆ ಕೆಎಸ್ಅರ್ಟಿಸಿ ಬಸ್ ನಲ್ಲಿ ಹೋಗಿದ್ದಾಗ ಬಸ್ ಕಂಡೆಕ್ಟರ್ ಕೆ.ಜಿ.ರಮೇಶ್ ಕುಮಾರ್ ಎಂಬುವವರು ಪರಿಚಯವಾಗಿ ನಾನು  ನಿಮ್ಮ ಜಿಲ್ಲೆಯವನು  ಎಂದು ಪರಿಚಯ ಮಾಡಿಕೊಂಡು ತನ್ನನ್ನು  ವಿಶ್ವಾಸವಾಗಿ ನನಗೆ  ನಂಬಿಕೆ ಬರುವಂತೆ ಮಾತನಾಡಿಕೊಂಡು ಪರಿಚಯ ವಾಗಿ ನನ್ನ ಕಷ್ಟ ಸುಖಗಳ ಬಗ್ಗೆ ಮಾತನಾಡಿಕೊಂಡು ಪರಿಚಯವಾಗಿ  ನಂತರ ತಾನು ದೇವಸ್ಥಾನವನ್ನು  ಮುಗಿಸಿಕೊಂಡು  ಮನೆಗೆ ವಾಪಸ್ಸು ಬರುವಾಗ ನನ್ನ ಪೋನ್ ಸಂಖ್ಯೆಯನ್ನು ಪಡೆದುಕೊಂಡ ನಂತರ ನಾನು  ಮನೆಗೆ ಬಂದಾಗ  ರಮೇಶಕುಮಾರ್ ತನ್ನೊಂದಿಗೆ ಸಮಯವಿದ್ದಾಗ ಪೋನ್ ಮಾಡಿ ಮಾತನಾಡುತ್ತಿದ್ದು  ತನ್ನ  ಮನೆಯ ಪರಿಸ್ಥಿಯ ಬಗ್ಗೆ ತಿಳಿದುಕೊಂಡು ಅಗಾಗ ಮನೆಗೆ ಬಂದು ತನ್ನ ಕಷ್ಟಗಳ ಬಗ್ಗೆ ಮಾತನಾಡುವಂತೆ ನಟಿಸಿ ಒಂದು ದಿನ  ಸದರಿ ರಮೇಶ್ ಕುಮಾರ್ ಹಾಗೂ ಅತನ ತಮ್ಮ ಶ್ರೀನಿವಾಸ ಆತನು ಬಿಎಂಟಿಸಿಯ ನೌಕರನು ಇಬ್ಬರೂ ಮನೆಗೆ ಬಂದು ನನ್ನ ಬಳಿ ನಾವು ಚಿಂತಾಮಣಿಯಲ್ಲಿ  ಲಕ್ಷಾಂತರ ರೂಗಳ ಪೈನಾನ್ಸ್ ಮಾಡುತ್ತೇವೆ. ನಮಗೆ ಪ್ರತಿತಿಂಗಳು ಬಡ್ಡಿಯೇ ಲಕ್ಷಾಂತರ ರೂಗಳು ಬರುತ್ತದೆ ಹಾಗೂ ಸಂಬಳ ಸಹ ಇಬ್ಬರಿಗೂ ಸೇರಿ 1 ಲಕ್ಷ ಬರುತ್ತದೆ. ನಮ್ಮ  ಬಳಿ ನಿಮ್ಮಂತಹವರು  ಲಕ್ಷಂತರ ರೂ ಹಣ ಕೊಟ್ಟಿದ್ದು ಅದನ್ನು ಪೈನಾನ್ಸ್ ಮಾಡಿ  ಪ್ರತಿತಿಂಗಳು ಬಡ್ಡಿಯನ್ನು  ಕೊಡುತ್ತೇವೆ. ನಿನ್ನ ಬಳಿ ಹಣವಿದ್ದರೆ ಕೊಡಿ ಪ್ರತಿತಿಂಗಳು ಬಡ್ಡಿಕೊಡುತ್ತೇವೆ ಎಂದು ಹೇಳಿ ನಂಬಿಸಿದ. ಆಗ ನನ್ನ ಬಳಿ ಹಣವಿಲ್ಲ ನನಗೆ  ಸಂಸಾರ ನಡೆಯುವುದು ಕಷ್ಟವಿದ್ದು ನನ್ನ ಬಳಿ ಹಣವೆಲ್ಲಿದೆ ಅಣ್ಣ ಎಂದು ಹೇಳಿದ್ದೆ ಅದಕ್ಕೆ ಅವರು ರಮೇಶ್ ಕುಮಾರ್ ಮನೆ ನಿಮ್ಮ ಸ್ವಂತದ್ದೆ ಅಲ್ಲವೇ ಅಕ್ಕ ಅದನ್ನು  ಯಾರಿಗಾದರೂ  ಅಡವಿಡು ನಾನು  ಒಂದು ವರ್ಷದಲ್ಲಿ  ನಿಮ್ಮ ಬಡ್ಡಿ ಅಸಲು ವಾಪಸ್ಸು ಕೊಡುತ್ತೇವೆ. ನಿನಗೆ ಪ್ರತಿ ತಿಂಗಳು ಆಸ್ಪತ್ರೆ ಕಚರ್ಿಗೆ ಎಂದು 10,000/- ರೂನಂತೆ ಕೊಡುತ್ತೇವೆ ಎಂದು ನಂಬಿಸಿದರು.  ತನಗೆ ಸಹ ಯಾವುದೇ ಅದಾಯವಿಲ್ಲದೆ ಇದ್ದರಿಂದ ತಾನು ಸಹ ಅವರನ್ನು ನಂಬಿದೆ ಅದರಂತೆ ಅವರೆ ಚಿಕ್ಕಬಳ್ಳಾಪುರ ನಕ್ಕಲಕುಂಟೆಯ ಷೇಕ್ ಬರಕತ್ತುಲ್ಲಾ ಬಿನ್ ಷೇಕ್ ಗುಲಾಬ್ ಜಾನ್ ಎಂಬುವವರನ್ನು  ಮಾತನಾಡಿ ನನ್ನ ಮನೆ ಮುನ್ಸಿಪಲ್ ಖಾತೆ: 2555ಯನ್ನು ದಿನಾಂಕ:09-08-2019 ರಂದು ಚಿಕ್ಕಬಳ್ಳಾಪುರ ನಕ್ಕಲಕುಂಟೆಯ ಷೇಕ್ ಬರಕತುಲ್ಲಾ ಎಂಬುವವರಿಗೆ ರೂ,10,00,000/-(ಹತ್ತು  ಲಕ್ಷಕ್ಕೆ) ಅಡವಿಡಿಸಿಕೊಂಡು ಒಂದು ವರ್ಷದ ಒಳಗಾಗಿ ಬಿಡಿಸಿಕೊಡುವುದಾಗಿ  ರೂ 10 ಲಕ್ಷ ರೂಗಳನ್ನು ನನ್ನಿಂದ ಪಡೆದುಕೊಂಡಿರುತ್ತಾರೆ. ನಂತರ ನನ್ನ ಮಗ ದರ್ಶನ್ ಎಂಬುವವನು ಪಿಯೂಸಿವರೆಗೆ ವ್ಯಾಸಂಗ ಮಾಡಿದ್ದು  ಅತನಿಗೆ ಕೆಎಸ್ ಅರ್ ಟಿಸಿಯಲ್ಲಿ  ಕೆಲಸ ಕೊಡುವುದಾಗಿ ನಂಬಿಸಿ  ನಾನು  ಉಳಿಸಿಕೊಂಡಿದ್ದ 5 ಲಕ್ಷರೂಗಳನ್ನು ಸಹ ನನ್ನಿಂದ ಪಡೆದುಕೊಂಡಿದ್ದು ನನ್ನ  ಮಗನಿಗೆ ಕೆಲಸವನ್ನು ಕೊಡಿಸದೆ ಮೋಸ ಮಾಡಿರುತ್ತಾರೆ. ಹಾಗೂ ನಮ್ಮ ಮನೆಗೆ ಅಗಾಗ  ನನ್ನ ಸ್ನೇಹಿತರಾದ ಶ್ರೀಮತಿ ರಾಧ, ಶ್ರೀಮತಿ  ಶಾರದ, ಶ್ರೀಮತಿ ರತ್ನಮ್ಮ ರವರನ್ನು  ಪರಿಚಯ ಮಾಡಿಕೊಂಡು  ನನಗೆ ತಿಳಿಯದಂತೆ  ಶ್ರೀಮತಿ ರತ್ನಮ್ಮ ರವರಿಗೆ ಸಹ ಇದೇರೀತಿಯಾಗಿ ಸುಳ್ಳು ಹೇಳಿ ಪ್ರತಿತಿಂಗಳು ಬಡ್ಡಿಕೊಡುವುದಾಗಿ ನಂಬಿಸಿ ಅವರು ಸಹ ಅವರ ಬಾಬತ್ತು ನಗರಸಭಾ ಖಾತೆ/ ಅಸೆಸ್ಮೆಂಟ್ ನಂ:1174/1038/9/9. ನ್ನು ಶ್ರೀಮತಿ ಅರ್ ಸುಬ್ಬಲಕ್ಷ್ಮಿರವರಿಗೆ ಅಡವಿರಿಸಿ 10,00,000/-(ಹತ್ತು ಲಕ್ಷರೂ)ಗಳನ್ನು  ರಮೇಶ್ ಕುಮಾರ್ ಹಾಗೂ ಆತನ ತಮ್ಮ ಶ್ರೀನಿವಾಸನು ಪಡೆದುಕೊಂಡಿರುತ್ತಾನೆ. ಹಾಗೂ ಇನ್ನೊಬ್ಬ ಸ್ನೇಹಿತೆಯಾದ ಶ್ರೀಮತಿ ಶಾರದಾರವರನ್ನು ಪರಿಚಯ ಮಾಡಿಕೊಂಡು ರಮೇಶ್ ಕುಮಾರ್ ಹಾಗೂ ಶ್ರೀನಿವಾಸ ರವರು ಭುವನೇಶ್ವರಿ ಪೈನಾನ್ಸ್ ಬಳಿ ರೂ 12,50,000/- ಚೀಟಿಗಳನ್ನು ನನ್ನ ಮುಖಾಂತರ  ಹಾಕಿಸಿಕೊಂಡು  ಚೀಟಿಯನ್ನು ಕೂಗಿ ಹಣವನ್ನು ಪಡೆದುಕೊಂಡಿದ್ದು  ಸದರಿ ಹಣಕ್ಕೆ ಜಾಮೀನುಧಾರರಾಗಿ  ಶ್ರೀಮತಿ ಶಾರದರವರನ್ನು ಹಾಕಿಕೊಂಡು ಭುವನೇಶ್ವರಿ ಪೈನಾನ್ಸ್ ಬಳಿ ರೂ 12,50,000/- ಪಡೆದುಕೊಂಡು  ಚೀಟಿ ಹಣವನ್ನು ಸರಿಯಾಗಿ ಕಟ್ಟದೆ ಇದ್ದರಿಂದ ಇನ್ನೂ 6,00,000/- ರೂಗಳನ್ನು  ಕಟ್ಟಬೇಕಾಗಿದ್ದು ಜಾಮೀನು ಹಾಕಿದ್ದ ಶ್ರೀಮತಿ ಶಾರದಾರವರು ಕಟ್ಟುವಂತೆ ಮಾಡಿ ಅಕೆಗೆ ಸಹ ಮೋಸ ಮಾಡಿರುತ್ತಾರೆ. ಹಾಗೂ ಶ್ರೀಮತಿ ರಾಧ ರವರನ್ನು  ಸಹ ನನ್ನ ಮುಖಾಂತರ ಪರಿಚಯ ಮಾಡಿಕೊಂಡು  ಅಕೆ ಮನೆಯನ್ನು  ಮಾರಿದ್ದ ಹಣ 5 ಲಕ್ಷರೂಗಳನ್ನು ಇಟ್ಟುಕೊಂಡಿದ್ದು ಅಕೆಗೆ ಸಹ ಬಡ್ಡಿ ಕೊಡುವ ಅಸೆ ತೋರಿಸಿ ಹಾಗೂ ನಾನು ಅವರಿಗೆ ಹಣಕೊಟ್ಟಿರುವ ಬರವಸೆಯ ಮೇರೆಗೆ ಅಕೆ ಸಹ ನನ್ನ ಸಮಕ್ಷಮ ಕೊಟ್ಟಿರುತ್ತಾಳೆ.  ಮೇಲ್ಕಂಡ ಆರೋಪಿಗಳಾದ ಕೆಎಸ್ಅರ್ಟಿಸಿ ಕಂಡೆಕ್ಟರ್ ರಮೇಶ್ ಕುಮಾರ್ ಕೆ.ಜಿ, ಹಾಗೂ ಬಿಎಂಟಿಸಿ ಕಂಡೆಕ್ಟರ್ ಶ್ರೀನಿವಾಸರವರು ತಾವು ಸರ್ಕಾರಿ ನೌಕರರೆಂದು ತಮ್ಮ ವೇತನದ ಸ್ಲಿಪ್ ಗಳನ್ನು ಆಧಾರ ಕಾರ್ಡ,  ಲಕ್ಷಾಂತರ ರೂಗಳ ಚೆಕ್ ಗಳನ್ನು ತೋರಿಸಿ ನಾವು ಸರ್ಕಾರಿ ದಿಂದ ಪೈನಾನ್ಸ್ ಮಾಡಲು ಪರವಾನಿಗೆ ಪಡೆದುಕೊಂಡಿದ್ದು  ಲಕ್ಷಾಂತರ ರೂಗಳ ಪೈನಾನ್ಸ್ ವ್ಯವಹಾರವನ್ನು  ಮಾಡುತ್ತೇವೆ ಎಂದು ನಂಬಿಸಿ ಅವರೆ ನಮ್ಮ ಆಸ್ತಿಗಳನ್ನು ಅಡವಿಡಲು ಗಿರಾಕಿಗಳನ್ನು ಸೃಷ್ಠಸಿ ಆಸ್ತಿಗಳನ್ನು ಅಡವಿಡಿಸಿ ಹಾಗೂ ನಮ್ಮ ಸ್ನೇಹಿತರಿಗೆ ಪ್ರತಿ ತಿಂಗಳು ಬಡ್ಡಿಯನ್ನು ಕೊಡುತ್ತೇವೆ ಎಂದು  ಸುಳ್ಳು ದಾಖಲೆ ಹಾಗೂ ಮಾತುಗಳನ್ನು  ಹೇಳಿ ನಂಬಿಸಿ 2019 ನೇ ಸಾಲಿನಲ್ಲಿ ಸುಮಾರು 41 ಲಕ್ಷರೂಗಳನ್ನು ಪಡೆದುಕೊಂಡು ಹಣ ಕೊಡದೆ ಮೋಸ ಮಾಡಿ ನಮ್ಮನ್ನು ವಂಚಿಸಿರುವ  ಕೆಎಸ್ಅರ್ಟಿಸಿ ಕಂಡೆಕ್ಟರ್ ರಮೇಶ್ ಕುಮಾರ್ ಕೆ.ಜಿ, ಹಾಗೂ ಬಿಎಂಟಿಸಿ ಕಂಡೆಕ್ಟರ್ ಶ್ರೀನಿವಾಸರವರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಂಡು ನಮ್ಮ ಹಣವನ್ನು ವಾಪಸ್ಸು ಕೊಡಿಸುವಂತೆ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತೆ.

 

3. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 308/2021 ಕಲಂ. 15(ಎ) ಕೆ.ಇ ಆಕ್ಟ್:-

     ದಿನಾಂಕ: 14/07/2021 ರಂದು ಸಂಜೆ 4.30 ಗಂಟೆಗೆ ಠಾಣೆಯ ಶ್ರೀ. ಕೃಷ್ಣಪ್ಪ, ಎ.ಎಸ್.ಐ ರವರು ಮಾಲು ಮತ್ತು ಪಂಚಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:14/07/2021 ರಂದು ಪಿ.ಎಸ್.ಐ ಸಾಹೇಬರ ನೇಮಕದಂತೆ ತಾನು, ಸಿ.ಹೆಚ್.ಸಿ-41 ಜಗದೀಶ್ ರವರು ಠಾಣಾ ಸರಹದ್ದಿನ ನಾರಾಯಣಹಳ್ಳಿ, ಚಿಕ್ಕಕೊಂಡ್ರಹಳ್ಳಿ, ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 3.00 ಗಂಟೆಯ ಸಮಯದಲ್ಲಿ ದೊಡ್ಡಕೊಂಡ್ರಹಳ್ಳಿ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ಮಂಜುಳ ಕೋಂ ಮಂಜುನಾಥರವರು ತನ್ನ ಅಂಗಡಿಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ದೊಡ್ಡಕೊಂಡ್ರಹಳ್ಳಿ ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಅಂಗಡಿಯ ಮುಂದೆ ನೋಡಲಾಗಿ 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 2 ಟೆಟ್ರಾ ಪಾಕೆಟ್ ಗಳು, ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ನೀರಿನ ಬಾಟಲಿಗಳನ್ನು ಪರಿಶೀಲಿಸಲಾಗಿ ಸದರಿ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಮಂಜುಳ ಕೋಂ ಮಂಜುನಾಥ, 40 ವರ್ಷ, ಕುರುಬರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ದೊಡ್ಡಕೊಂಡ್ರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಮದ್ಯಾಹ್ನ 3.15 ರಿಂದ 4.00 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಮಂಜುಳ ಕೋಂ ಮಂಜುನಾಥರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

4. ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 309/2021 ಕಲಂ. 15(ಎ) ಕೆ.ಇ ಆಕ್ಟ್:-

     ದಿನಾಂಕ: 14/07/2021 ರಂದು ಸಂಜೆ 5.00 ಗಂಟೆಗೆ ಠಾಣೆಯ ಶ್ರೀ. ಸಂದೀಪ್ ಕುಮಾರ್, ಸಿ.ಹೆಚ್.ಸಿ-249 ರವರು ಮಾಲು ಮತ್ತು ಪಂಚಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 14/07/2021 ರಂದು ಪಿ.ಎಸ್.ಐ ಸಾಹೇಬರ ಆದೇಶದಂತೆ ತಾನು ಹಾಗೂ ಸಿ.ಪಿ.ಸಿ- 504 ಸತೀಶ.ಕೆ.ಎ ರವರು ಠಾಣಾ ಸರಹದ್ದಿನ ಉಪ್ಪಾರಪೇಟೆ, ಕೋನಪಲ್ಲಿ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 3.30 ಗಂಟೆಯ ಸಮಯದಲ್ಲಿ ತಿಮ್ಮಸಂದ್ರ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ಪ್ರಮೀಳಮ್ಮ ಕೋಂ ಬೈರೆಡ್ಡಿ ರವರು ಅವರ ಚಿಲ್ಲರೆ ಅಂಗಡಿ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ತಿಮ್ಮಸಂದ್ರ ಗ್ರಾಮದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಅಂಗಡಿಯ ಮುಂದೆ  ನೋಡಲಾಗಿ 1).90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 4 ಟೆಟ್ರಾ ಪಾಕೆಟ್ ಗಳು, 2).90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಓಪನ್ ಆಗಿರುವ 2 ಟೆಟ್ರಾ ಪಾಕೆಟ್ ಗಳು 3).ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಹಾಗೂ 4).ಒಂದು ಲೀಟರ್ ಸಾಮರ್ಥ್ಯದ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ ಓಪನ್ ಆಗಿರುವ ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ ಹಾಗೂ ನೀರಿನ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಪ್ರಮೀಳಮ್ಮ ಕೋಂ ಬೈರೆಡ್ಡಿ, 50 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ತಿಮ್ಮಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಮದ್ಯಾಹ್ನ 3.45 ರಿಂದ ಸಂಜೆ 4.30 ಗಂಟೆಯವರೆಗೆ ಪಂಚನಾಮೆಯ ಮೂಲಕ ಮೇಲ್ಕಂಡ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಪ್ರಮೀಳಮ್ಮ ಕೋಂ ಬೈರೆಡ್ಡಿ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 

5. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 163/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ 14-07-2021 ರಂದು 14-30 ಗಂಟೆಗೆ  ಪಿರ್ಯಾದಿದಾರರಾದ  ಸತೀಶ ಬಿನ್ ನಾಗಪ್ಪ, 22 ವರ್ಷ,  ಆದಿ ಕರ್ನಾಟಕ,  ಖಾಸಗಿ ಕೆಲಸ, ವಾಸ ವಡ್ಡರಹಳ್ಳಿ ಗ್ರಾಮ,  ಹಾಡೋನಹಳ್ಳಿ  ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ  ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನಮ್ಮ  ದೊಡ್ಡಪ್ಪನ ಮಗನಾದ  ನಾಗೇಶ ಬಿನ್ ಕದಿರಪ್ಪ, 45 ವರ್ಷ, ರವರು ಗಾತರ ಕೆಲಸವನ್ನು ಮಾಡಿಕೊಂಡಿದ್ದು  ದಿನಾಂಕ 11-07-2021 ರಂದು  ಬೆಳಿಗ್ಗೆ ಸುಮಾರು 10-30 ಗಂಟೆಯಲ್ಲಿ  ಗೌರಿಬಿದನೂರು ತಾಲ್ಲೂಕು ಮಿಣಕನಗುರ್ಕಿ ಗ್ರಾಮದ ವಾಸಿ ಅವರ ಅಕ್ಕನವರಾದ ಭಾಗ್ಯಮ್ಮರವರನ್ನು  ನೋಡಿಕೊಂಡು ಬರಲು  ಗೌರಿಬಿದನೂರು ಮಾರ್ಗವಾಗಿ  ಮಿಣಕನಗುರ್ಕಿ ಗ್ರಾಮಕ್ಕೆ  ಮಧ್ಯಾಹ್ನ ಸುಮಾರು 12-00-01-00 ಗಂಟೆ ಸಮಯದಲ್ಲಿ  ಗೌರಿಬಿದನೂರು– ಚಿಕ್ಕಬಳ್ಳಾಪುರ ಮಾರ್ಗದಲ್ಲಿರುವ  ವಡ್ಡರಬಂಡೆಯ ಬ್ರಿಡ್ಜ್ ಬಳಿ  ತನ್ನ ಬಾಬತ್ತು  ಕೆ.ಎ.-43-ಯು-8233  ದ್ವಿಚಕ್ರವಾಹನದಲ್ಲಿ  ಆಯಾತಪ್ಪಿ  ಕೆಳಗೆ ಬಿದ್ದು  ಹಣೆಗೆ, ಎಡಭಾಗದ ಮುಖಕ್ಕೆ ರಕ್ತಗಾಯಗಳಾಗಿದ್ದು  ಮತ್ತು ಮೈಮೇಲೆ , ಕೈಕಾಲುಗಳಿಗೆ ತರಚಿದ ಗಾಯಗಳಾಗಿರುತ್ತೆ. ಅವರನ್ನು ಯಾರೋ  ಆಂಬ್ಯುಲೆನ್ಸ್ ನಲ್ಲಿ  ಚಿಕ್ಕಬಳ್ಳಾಪುರ  ಸರ್ಕಾರಿ ಆಸ್ಪತ್ರೆಗೆ  ಕಳುಹಿಸಿದ್ದು  ಅಲ್ಲಿನ ವೈದ್ಯರು  ಹೆಚ್ಚಿನ ಚಿಕಿತ್ಸೆಗಾಗಿ  ಬೆಂಗಳೂರಿಗೆ  ಕಳುಹಿಸಿದ್ದು ನಾಗೇಶರವರನ್ನು ಬೆಂಗಳೂರಿನ ಎಂ.ಎಸ್. ರಾಮಯ್ಯಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದರಿಂದ ತಡವಾಗಿ ಬಂದು ದೂರು ನೀಡಿದ್ದು ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಾಗಿರುತ್ತೆ.

 

6. ಗೌರಿಬಿದನೂರು ಗ್ರಾಮಾಂತರ ಪೊಲೀಸ್‌ ಠಾಣೆ ಮೊ.ಸಂ. 164/2021 ಕಲಂ. 447,323,504,506,149 ಐ.ಪಿ.ಸಿ:-

     ದಿನಾಂಕ 14-07-2021 ರಂದು 17-00 ಗಂಟೆಗೆ ಗೌರಿಬಿದನೂರು ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುಇವ ಪಿ.ಸಿ. 129 ರಾಮಚಂದ್ರರವರು ಪಿರ್ಯಾದಿದಾರರಾದ  ವೆಂಕಟೇಶಪ್ಪ ಬಿನ್ ಲೇಟ್ ಆಂಜಿನಪ್ಪ, 50 ವರ್ಷ, ಆನೂಡಿ ಗ್ರಾಮ, ಹೊಸೂರು ಹೋಬಳಿ,  ಗೌರಿಬಿದನೂರು ತಾಲ್ಲೂಕುರವರು ಸಲ್ಲಿಸಿರುವ ದೂರನ್ನು ಘನ ನ್ಯಾಯಾಲಯವು ಸಾದರುಪಡಿಸಿದ್ದರ ಪಿ.ಸಿ. ಆರ್. ಸಂಖ್ಯೆ 106/2021 ರ ದೂರಿನ ಸಾರಾಂಶವೇನೆಂದರೆ  ಪಿರ್ಯಾದಿದಾರರ  ತಂದೆಯವರ ಹೆಸರಿನಲ್ಲಿರುವ ಜಮೀನು ಸರ್ವೇ ನಂ. 35/2 ರ ಜಮೀನು ಆಂಜಿನಪ್ಪರವರ ಹೆಸರಿನಲ್ಲಿದ್ದು ಪಿರ್ಯಾದಿದಾರರ ತಂದೆಯವರು ಮರಣ ಹೊಂದಿದ ನಂತರ ಸದರಿ ಜಮೀನನ್ನು ಘನ ಪಿ.ಸಿ.ಜೆ. ಮತ್ತು  ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ   ಸಿವಿಲ್ ಕೇಸು ದಾಖಲಿಸಿದ್ದು ಆರೋಪಿಗಳಿಗೆ  ಸದರಿ ಜಮೀನಿನಲ್ಲಿ ಬರದಂತೆ ಇಂಜೆಕ್ಷನ್  ನೀಡಿ ಪಿರ್ಯಾದಿದಾರರ  ತಂದೆಯವರಿಗೆ ಡಿಕ್ರಿಯನ್ನು ಮಾಡಿರುತ್ತೆ. ಪಿರ್ಯಾದಿದಾರರು  ಅನುಭವದಲ್ಲಿದ್ದು  ಆರೋಪಿಗಳು  ಪಿರ್ಯಾದಿದಾರರ  ಜಮೀನಿನಲ್ಲಿ ಅಕ್ರಮ ಪ್ರವೇಶ  ಮಾಡಿ  ತೊಂದರೆ ಕೊಡುವುದು,  ಕಸ ಕಡ್ಡಿಗಳನ್ನು ಹಾಕುವುದು, ಕಲ್ಲು ಕಂಬಗಳನ್ನು ಜಖಂ ಮಾಡಿದ್ದು  ದಿನಾಂಕ 30-05-2021 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ಪಿರ್ಯಾದಿದಾರರು ಆರೋಪಿಗಳನ್ನು ಕೇಳಿದ್ದಕ್ಕೆ  ಗುಂಪು ಕಟ್ಟಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು  ಹೊಡೆದು  ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆಂದು  ಘನ ನ್ಯಾಯಾಲಯದಲ್ಲಿ ದೂರು ಸಲ್ಲಿಸಿರುವುದಾಗಿರುತ್ತೆ.

 

7. ಗುಡಿಬಂಡೆ ಪೊಲೀಸ್‌ ಠಾಣೆ ಮೊ.ಸಂ. 156/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ 14/07/2021 ರಂದು ಘನ ನ್ಯಾಯಾಲಯದ ಪೇದೆ 89 ಮಂಜುನಾಥ ರವರು ಠಾಣಾ ಎನ್,ಸಿ.ಆರ್ 180/2021 ರಲ್ಲಿ ಪ್ರಕರಣ ದಾಖಲಿಸಲು ಅನುಮತಿ ಪಡೆದುಕೊಂಡು ಠಾಣೆಯಲ್ಲಿ ಹಾಜರುಪಡಿಸಿದ ಆದೇಶವನ್ನು ಸ್ವೀಕರಿಸಿ ದಿನಾಂಕ:11/07/2021 ರಂದು ಸಹಾಯಕ ಪೊಲೀಸ್ ಸಬ್ ಇನ್ಸಪೆಕ್ಟರ್ ಶ್ರೀ ನಂಜುಂಡಶರ್ಮ ರವರು ಸಂಜೆ 6-30  ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:11/07/2021 ರಂದು ಮದ್ಯಾಹ್ನ 3-00 ಗಂಟೆಯಲ್ಲಿ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿದ್ದಾಗ ಗುಡಿಬಂಡೆ ಪೊಲೀಸ್ ಠಾಣೆಯ ಗುಪ್ತ ಮಾಹಿತಿ ಸಿಬ್ಬಂದಿ ಹನುಂಮತರಾಯಪ್ಪ ಸಿ.ಹೆಚ್.ಸಿ-73  ರವರು ನನಗೆ ಪೋನ್ ಮಾಡಿ ಗುಡಿಬಂಡೆ  ತಾಲ್ಲೂಕು ಗೇರುಮರದಹಳ್ಳಿ  ಗ್ರಾಮದಲ್ಲಿ  ಗುರುಮೂತರ್ಿ ದೇವಸ್ಥಾನದ ಹಿಂಬಾಗದಲ್ಲಿ  ಸಾರ್ವಜನಿಕ ರಸ್ತೆಯಲ್ಲಿ  ಕೆಲವರು ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ನನಗೆ ಮಾಹಿತಿ ನೀಡಿದರ ಮೇರೆಗೆ, ಠಾಣಾ ಸಿಬ್ಬಂದಿ ಸಿ,ಎಚ್,ಸಿ-102 ಆನಂದ,  ಹೆಚ್.ಸಿ-73 ಹನುಮಂತರಾಯಪ್ಪ, ಹೆಚ್.ಸಿ-29 ಶ್ರೀನಿವವಾಸ, ಪಿ.ಸಿ-141 ಸಂತೋಷ್. ರವರನ್ನು ಕರೆದುಕೊಂಡು ಸಿಬ್ಬಂದಿಯವರಿಗೆ ಮಾಹಿತಿಯನ್ನು ತಿಳಿಸಿ ಸಕರ್ಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎ,ಎಚ್,ಸಿ-43 ವೆಂಕಟಾಚಲ  ರವರೊಂದಿಗೆ ಮದ್ಯಾಹ್ನ 3-10  ಗಂಟೆಗೆ ಗುಡಿಬಂಡೆ ಪೊಲೀಸ್ ಠಾಣೆಯಿಂದ ಬಿಟ್ಟು ಮದ್ಯಾಹ್ನ 3-30 ಗಂಟೆಗೆ ಗುಡಿಬಂಡೆ ಟೌನ್ ನಲ್ಲಿರುವ ರಾನಪಟ್ಟಣ ವೃತ್ತದಲ್ಲಿ ಪಂಚರನ್ನು ಬರ ಮಾಡಿಕೊಂಡು ಮಾಹಿತಿಯನ್ನು ತಿಳಿಸಿ ನಮ್ಮ ಜೀಪಿನಲ್ಲಿ ಕರೆದುಕೊಂಡು ಮದ್ಯಾಹ್ನ 4-00 ಗಂಟೆಗೆ ಗೇರುಮರದಹಳ್ಳಿ  ಗ್ರಾಮಕ್ಕೆ  ಹೋಗಿ, ಗೇರುಮರದಹಳ್ಳಿ  ಗ್ರಾಮದಲ್ಲಿ  ಜೀಪ್ ನ್ನು ನಿಲ್ಲಿಸಿ ನಡೆದುಕೊಂಡು ಹೊಗಿ ಮರೆಯಲ್ಲಿ ನಿಂತು ನೋಡಲಾಗಿ, ಗ್ರಾಮದಲ್ಲಿ ಗುರುಮೂತರ್ಿ ದೇವಸ್ಥಾನದ ಹಿಂಬಾಗದಲ್ಲಿ  ಸಾರ್ವಜನಿಕ ರಸ್ತೆಯಲ್ಲಿ  ಕೆಲ ಮಂದಿ ಗುಂಪಾಗಿ ಕುಳಿತುಕೊಂಡು ಅಂದರ್-100 ಬಾಹರ್-100 ಎಂದು ಕೂಗುತ್ತಾ ಇಸ್ಪೀಟ್ ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಮದ್ಯಾಹ್ನ 4-00  ಗಂಟೆಗೆ ದಾಳಿ ಮಾಡಿದಾಗ, ಜೂಜಾಟವನ್ನು ಆಡುತ್ತಿದ್ದವರನ್ನು  ನಾವುಗಳು ಕೆಲವರನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ 1) ವೆಂಕಟೇಶಪ್ಪ ಬಿನ್ ಪಾಪನ್ಣ,  46  ವರ್ಷ, ಕುರುಬ ಜನಾಂಗ, ಜಿರಾಯ್ತಿ,  ವಾಸ:  ಗೇರುಮರದಹಲ್ಳಿ   ಗ್ರಾಮ, ಗುಡಿಬಂಡೆ ತಾಲ್ಲುಕು , 2) ವೆಮಕಟೆಶ್ ಬಿನ್ ಕೃಷ್ನಪ್ಪ  ,   21 ವರ್ಷ, ಕುರುಬ ಜನಾಂಗ, ಜಿರಾಯ್ತಿ,  ವಾಸ:  ಗೇರುಮರದಹಲ್ಳಿ   ಗ್ರಾಮ, ಗುಡಿಬಂಡೆ ತಾಲ್ಲುಕು , ಎಂದು ತಿಳಿಸಿದ್ದು,  ಓಡಿ ಹೋದ ಆಸಾಮಿಗಳು ಹೆಸರು ಮತ್ತು ವಿಳಾಸ ಕೇಳಿ ತಿಳಿಯಲಾಗಿ 3) ನವೀನ್ ಬಿನ್ ಅಶ್ವತ್ಥಪ್ಪ,  22 ವರ್ಷ, ನಾಯಕ, ಕೂಲಿ ಕೆಲಸ, ವಾಸ:  ಗೇರುಮರದಹಲ್ಳಿ   ಗ್ರಾಮ, ಗುಡಿಬಂಡೆ ತಾಲ್ಲುಕು , 4)  ಶ್ರೀನಿವಾಸ ಬಿನ್ ಬಾಲಪ್ಪ,  22 ವರ್ಷ,  ಕುರುಬ ಜನಾಂಗ, ಜಿರಾಯ್ತಿ,  ವಾಸ:  ಗೇರುಮರದಹಲ್ಳಿ   ಗ್ರಾಮ, ಗುಡಿಬಂಡೆ ತಾಲ್ಲುಕು , 5) ಶ್ರೀರಾಮರೆಡ್ಡಿ ಬಿನ್ ವೆಂಕಟೇಶಪ್ಪ, 23 ವರ್ಷ, ಕುರುಬ ಜನಾಂಗ, ಜಿರಾಯ್ತಿ,  ವಾಸ:  ಗೇರುಮರದಹಲ್ಳಿ   ಗ್ರಾಮ, ಗುಡಿಬಂಡೆ ತಾಲ್ಲುಕು , 6) ಸುಬ್ರಮಣಿ ಬಿನ್ ಕೃಷ್ನಪ್ಪ, 22 ವರ್ಷ, ನಾಯಕರು, ಜಿರಾಯ್ತಿ,  ವಾಸ:  ಗೇರುಮರದಹಲ್ಳಿ   ಗ್ರಾಮ, ಗುಡಿಬಂಡೆ ತಾಲ್ಲುಕು , 7) ವೆಂಕಟರೆಡ್ಡಿ ಬಿನ್ ಲೇಟ್ ನಾರಾಯಣಪ್ಪ, 55 ವರ್ಷ, ಕುರುಬ ಜನಾಂಗ, ಜಿರಾಯ್ತಿ,  ವಾಸ:  ಗೇರುಮರದಹಲ್ಳಿ   ಗ್ರಾಮ, ಗುಡಿಬಂಡೆ ತಾಲ್ಲುಕು , ಎಂದು ತಿಳಿದುಬಂದಿರುತ್ತೆ. ನಂತರ ಪಂಚರ ಸಮಕ್ಷಮ ವಶದಲ್ಲಿ ಸ್ಥಳದಲ್ಲಿ ಬಿಸಾಡಿದ್ದ ಜೂಜಾಟ ಪಣಕ್ಕೆ ಇಟ್ಟಿದ್ದ ಮಾಲನ್ನು ಪರಿಶೀಲನೆ ಮಾಡಲಾಗಿ 1070 ರೂ ಹಣ,  52 ಇಸ್ಪೀಟ್ ಎಲೆಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ನಂತರ 1070/- ರೂ & 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಸಂಜೆ 4-30   ಗಂಟೆಯಿಂದ 5-30  ಗಂಟೆಯವರೆಗೆ  ಜರುಗಿಸಿದ ಧಾಳಿ ಪಂಚನಾಮೆ ಕಾಲದಲ್ಲಿ ಅಮಾನತ್ತುಪಡಿಸಿಕೊಂಡಿರುತ್ತೆ. ಮೇಲ್ಕಂಡ ಇಬ್ಬರು  ಆರೋಪಿತರನ್ನು & ಮಾಲುಗಳನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 6-00 ಗಂಟೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ 6-30 ಗಂಟೆಗೆ  ಠಾಣಾಧಿಕಾರಿಗಳಿಗೆ ಸದರಿ ಆರೋಪಿಗಳು  & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪ್ರಕರಣ   ದಾಖಲು ಮಾಡಿಕೊಂಡಿರುತ್ತೆ.

 

8. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 72/2021 ಕಲಂ. 143,144,147,148,323,324,427,504,149 ಐ.ಪಿ.ಸಿ & 3(1)(r),3(1)(s) The SC & ST (Prevention of Atrocities) Amendment Act 2015:-

     ದಿನಾಂಕ 14-07-2021 ರಂದು ರಾತ್ರಿ 08.00 ಗಂಟೆಗೆ ಸಿ.ಹೆಚ್.ಸಿ-56 ಅಶ್ವಥಪ್ಪ ರವರು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ವೆಂಕಟಲಕ್ಷ್ಮಮ್ಮ ಕೋಂ ಪಾಪಣ್ಣ, 50 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ವಾಸ ನಂದನಹೋಸಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದು ಠಾಣೆಗೆ ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ 13-07-2021 ರಂದು ರಾತ್ರಿ ಸುಮಾರು 10.00 ಗಂಟೆ ಸಮಯದಲ್ಲಿ ಯಾವುದೋ ಕಲ್ಲು ಹೊಡೆಯುವ ಶಬ್ದ ಕೇಳಿ ಏನೆಂದು ನೋಡಲು ಆಚೆ ಬಂದು ನೋಡಲಾಗಿ ಬಲಜಿಗ ಜನಾಂಗಕ್ಕೆ ಸೇರಿದ ನರಸಿಂಹಪ್ಪ ಬಿನ್ ಚಲಪತಿ, ಮಂಜು, ರಮೇಶ, ನಾಗೇಶು ಮತ್ತು ಶೋಭಾ ಎಂಬುವವರು ಕಲ್ಲು ಹೊಡೆಯುವ ದೊಡ್ಡ ಸುತ್ತಿಗೆಯಿಂದ ಕಾಂಪೌಂಡ್ ಗೆ ಹಾಕಿದ್ದ ಕಲ್ಲು ಚಪ್ಪಡಿಯನ್ನು ಹೊಡೆಯುತ್ತಿದ್ದರು. ಆಗ ತಾನು ಏಕೆ ಈ ರೀತಿ ಹೊಡೆಯುತ್ತಿದ್ದೀರೆಂದು ಕೇಳುತ್ತಿದ್ದಂತೆ ಅವರಿಗೂ ತನಗೂ ಗಲಾಟೆಗಳಾಗಿ ನಿನ್ನನ್ನು ಈ ಊರಿನಿಂದ ಕಳುಹಿಸಿಬೇಕೆಂದು ತನ್ನ ಜಾತಿಯ ಬಗ್ಗೆ ಅವಹೇಳನ ಮಾಡಿ ತನ್ನನ್ನು ಹೀನಾಯವಾಗಿ ನಿಂದಿಸಿ ಹೊಡೆಯುತ್ತಿದ್ದಾಗ ಆಗ ತಾನು ಕಿರುಚಿಕೊಂಡಾಗ ತನ್ನ ಗಂಡನಾದ ಪಾಪಣ್ಣ ಮತ್ತು ತನ್ನ ತಾಯಿಯಾದ ನಾರಾಯಣಮ್ಮ ರವರು ಓಡಿ ಬರಲಾಗಿ ಮೇಲ್ಕಂಡ ಎಲ್ಲರೂ  ಸೇರಿಕೊಂಡು ತಮ್ಮನ್ನು ಮನಬಂದಂತೆ ಹೊಡೆದು, ಕಲ್ಲಿನಿಂದ ತನಗೆ ಹೊಡೆದು ರಸ್ತೆಯಲ್ಲಿ ತಳ್ಳಿ ಹಿಗ್ಗಾಮುಗ್ಗಾ ಹೊಡೆದಿದ್ದರಿಂದ ತನಗೆ ಮೂಗೇಟುಗಳಾಗಿರುತ್ತದೆ. ತನ್ನ ಗಂಡ ಪಾಪಣ್ಣ ರವರಿಗೆ ಶೋಭಾ ರವರು ಚಾಕು ತೆಗೆದುಕೊಂಡು ಹಾಕಿದಾಗ ಎಡಗೈ ತೋರು ಬೆರಳಿಗೆ ಮತ್ತು ಮದ್ಯದ ಬೆರಳಿಗೆ ರಕ್ತಗಾಯವಾಗಿ ಕೆಳಗೆ ತಳ್ಳಿದಾಗ ಬಿದ್ದು ಮೊಣಕಾಲಿಗೆ ತರಚಿದ ಗಾಯಗಳಾಗಿರುತ್ತದೆ. ಹಾಗೂ ಮೇಲ್ಕಂಡವರು ಹೊಡೆದಿದ್ದರಿಂದ ಮೈಕೈ ನೋವು ಜಾಸ್ತಿ ಇರುತ್ತದೆ. ಹಾಗೂ ತನ್ನ ತಾಯಿಯಾದ ನಾರಾಯಣಮ್ಮ ರವರಿಗೆ ಅದೇ ಗುಂಪಿನಲ್ಲಿದ್ದ ಯಾರೋ ಕಲ್ಲಿನಿಂದ ಹೊಟ್ಟೆಯ ಭಾಗಕ್ಕೆ ಹೊಡೆದಿದ್ದರಿಂದ ಮೂಗೇಟಾಗಿದ್ದು, ನೋವು ಹೆಚ್ಚಾಗಿದ್ದು ವೈದ್ಯರು X-RAY ತೆಗೆಯಬೇಕೆಂದು ತಿಳಿಸಿರುತ್ತಾರೆ. ತಾವು ಮೇಲ್ಕಂಡವರಿಂದ ಹಲ್ಲೆಗೆ ಒಳಗಾಗಿದ್ದಾಗ ತನ್ನ ಮಕ್ಕಳು ಮತ್ತು ತನ್ನ ಅಣ್ಣನಿಗೆ ದೂರವಾಣಿ ಕರೆ ಮಾಡಿದ್ದು, ಸದರಿಯವರು ಪೊಲೀಸ್ ಠಾಣೆಗೆ ಕರೆಮಾಡಿದ್ದರಿಂದ ಪೊಲೀಸರು ಗ್ರಾಮಕ್ಕೆ ಬರುವುದನ್ನು ತಿಳಿದು ಈ ಮೇಲ್ಕಂಡವರು ಓಡಿಹೋಗಿರುತ್ತಾರೆ.  ನಂತರ 108 ಅಂಬ್ಯೂಲೇನ್ಸ್ ವಾಹನದಲ್ಲಿ ತಾವೆಲ್ಲರೂ  ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಚಿಕಿತ್ಸೆಗೆ ದಾಖಲಾಗಿರುತ್ತೇವೆ. ಈ ಮೇಲ್ಕಂಡವರ ಮೇಲೆ ಕೂನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು ಹೇಳಿಕೆಯ ಸಾರಾಂಶವಾಗಿರುತ್ತೆ.

 

9. ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆ ಮೊ.ಸಂ. 73/2021 ಕಲಂ. 143,144,147,148,323,324,307,149 ಐ.ಪಿ.ಸಿ:-

     ದಿನಾಂಕ 14/07/2021 ರಂದು ಎ.ಎಸ್.ಐ ಶ್ರೀನಿವಾಸಗೌಡ ರವರು ಕೋಲಾರದ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶೋಭಾ ಕೋಂ ಲೇಟ್ ಕ್ರೀಷ್ಣಪ್ಪ, 48 ವರ್ಷ, ಬಲಜಿಗರು, ಕೂಲಿ ಕೆಲಸ, ವಾಸ ನಂದನಹೊಸಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ರಾತ್ರಿ 10-00 ಗಂಟೆಗೆ ಹಾಜರಾಗಿ ಹಾಜರುಪಡಿಸಿದ ಹೇಳಿಕೆಯ ಸಾರಾಂಶವೇನೆಂದರೆ: ತಮಗೂ ಮತ್ತು ತಮ್ಮ ಗ್ರಾಮದ ಪಕ್ಕದ ಮನೆಯವರಾದ ಪಾಪಣ್ಣ ಮತ್ತು ಅವರ ಹೆಂಡತಿ ವೆಂಕಟಲಕ್ಷ್ಮಮ್ಮ ರವರಿಗೆ ಈಗ್ಗೆ ಸುಮಾರು 3 ವರ್ಷಗಳಿಂದ ದಾರಿ ವಿಚಾರವಾಗಿ ಹಾಗೂ ಖಾಲಿ ನಿವೇಶನ ವಿಚಾರವಾಗಿ ಅನೇಕ ಸಲ ಜಗಳ ನಡೆದು ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿರುತ್ತದೆ. ದಿನಾಂಕ 13/07/2021 ರಂದು ರಾತ್ರಿ 9-30 ಗಂಟೆ ಸಮಯದಲ್ಲಿ ತಾನು ಮತ್ತು ತನ್ನ ತಾಯಿಯಾದ ಲಲಿತಮ್ಮ ರವರು ತಮ್ಮ ಮನೆಯ ಬಳಿ ಕುಳಿತಿದ್ದಾಗ ಪಾಪಣ್ಣ, ವೆಂಕಟಲಕ್ಷ್ಮಮ್ಮ, ನಾರಾಯಣಮ್ಮ, ಈರಯ್ಯ,ಚಿನ್ನಮ್ಮಯ್ಯ ಹಾಗೂ ಪಲ್ಲವಿ ರವರು ಗುಂಪು ಕಟ್ಟಿಕೊಂಡು ಏಕಾಏಕಿ ತಮ್ಮ ಮೇಲೆ ದೌರ್ಜನ್ಯ ಮಾಡಿ ಅಪೈಕಿ ಪಾಪಣ್ಣ ಮನೆ ಜಾಗದ ವಿಚಾರವಾಗಿ ಬಂದರೆ ನಿಮ್ಮನ್ನು ಸಾಯಿಸಿಯಾದರೂ ಬಿಡಿಸಿಕೊಳ್ಳುತ್ತೇನೆಂದು ತಮ್ಮನ್ನು ಸಾಯಿಸುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ವಂಕಿಯಿಂದ ತನ್ನ ಎಡಕೆನ್ನೆಗೆ ಹೊಡೆದು ರಕ್ತಗಾಯಪಡಿಸಿದ್ದು, ಅಷ್ಠರಲ್ಲಿ ತಮ್ಮ ತಾಯಿ ಲಲಿತಮ್ಮ ಅಡ್ಡ ಬಂದಾಗ ಅವರಿಗೂ ಸಹ ಅದೇ ವಂಕಿಯಿಂದ ಬಲಕೆನ್ನೆಗೆ ಹಾಗೂ ಎಡಗೈಗೆ ಹೊಡೆದು ರಕ್ತಗಾಯಪಡಿಸಿದ. ಉಳಿದ ವೆಂಕಟಲಕ್ಷ್ಮೀ, ನಾರಾಯಣಮ್ಮ, ಈರಯ್ಯ ರವರು ಕೋಲಿನಿಂದ ಹೊಡೆದು ಕಾಲುಗಳಿಂದ ಒದ್ದು, ಮೈಕೈ ನೋವು ಉಂಟುಮಾಡಿರುತ್ತಾರೆ. ಆಗ ತಮ್ಮ ಗ್ರಾಮದ ವಾಸಿಗಳಾದ ನಾರಾಯಣಸ್ವಾಮಿ, ಪ್ರಕಾಶ, ನರಸಿಂಹಮೂರ್ತಿ ರವರು ಅಡ್ಡಬಂದು ಜಗಳ ಬಿಡಿಸಿ ಅಂಬ್ಯೂಲೆನ್ಸ್ ಕರೆಸಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಅಲ್ಲಿನ ವೈದ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆ ಬಗ್ಗೆ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ಕಳುಹಿಸಿದ್ದರಿಂದ ಎಸ್.ಎನ್.ಆರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುತ್ತೇವೆ. ತಮ್ಮನ್ನು ಸಾಯಿಸುವ ಉದ್ದೇಶದಿಂದ ಹಲ್ಲೆ ಮಾಡಿದ ಸದರಿಯವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಹೇಳಿಕೆ ದೂರು.

 

10. ಪಾತಪಾಳ್ಯ ಪೊಲೀಸ್‌ ಠಾಣೆ ಮೊ.ಸಂ.65/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ:15-07-2021 ರಂದು ಬೆಳಿಗ್ಗೆ 11-45 ಗಂಟೆಗೆ ಠಾಣೆಯ ಎ.ಎಸ್.ಐ ಶ್ರೀ ಲಕ್ಷ್ಮಿನಾರಾಯಣರವರು ಮಾಲು, ಆರೋಪಿ ಹಾಗೂ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ:15-07-2021 ರಂದು ಪಿ.ಎಸ್.ಐರವರ ನೇಮಕದಂತೆ ತಾನು ಹಾಗೂ ಸಿಬ್ಬಂದಿಯವರಾದ ಸಿಪಿಸಿ-119 ಗಿರೀಶ್ ರವರು ಬೆಳಿಗ್ಗೆ 10-30 ಗಂಟೆಯ ಸಮಯದಲ್ಲಿ ಬೆಸ್ತಲಪಲ್ಲಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಬೆಸ್ತಲಪಲ್ಲಿ ಗ್ರಾಮದ ವಿನೋದ್ ಕುಮಾರ್ ಬಿನ್ ಲೇಟ್ ವೆಂಕಟರವಣಪ್ಪ ಎಂಬುವವರು ತಮ್ಮ ಚಿಲ್ಲರೆ ಅಂಗಡಿಯ ಬಳಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ದಾಳಿ ಮಾಡುವ ಸಲುವಾಗಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಮೇಲ್ಕಂಡ ಸಿಬ್ಬಂದಿ ಹಾಗೂ ಪಂಚಾಯ್ತಿದಾರರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮೇಲ್ಕಂಡ ವಿನೋದ್ ಕುಮಾರ್ ರವರು ತಮ್ಮ ಚಿಲ್ಲರೆ ಅಂಗಡಿಯ ಬಳಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ನಂತರ ತಾವುಗಳು ಅಲ್ಲಿಗೆ ಹೋಗುತ್ತಿದ್ದಂತೆ ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಆಸಾಮಿಗಳು ಅಲ್ಲಿಂದ ಓಡಿ ಹೋಗಿದ್ದು, ಸ್ಥಳದಲ್ಲಿದ್ದ ಅಂಗಡಿಯ ಮಾಲೀಕರ ಹೆಸರು ಮತ್ತು ವಿಳಾಸ ಕೇಳಿ ಕೇಳಲಾಗಿ ವಿನೋದ್ ಕುಮಾರ್ ಬಿನ್ ಲೇಟ್ ವೆಂಕಟರವಣಪ್ಪ, 24 ವರ್ಷ, ಬೋವಿ ಜನಾಂಗ, ವ್ಯಾಪಾರ, ವಾಸ:ಬೆಸ್ತಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಪರಿಶೀಲಿಸಲಾಗಿ 90 ಎಂ.ಎಲ್.ನ ಓಲ್ಡ್ ಟಾವೆರ್ನ್ ವಿಸ್ಕಿಯ 15 ಟೆಟ್ರಾ ಪ್ಯಾಕೆಟ್ ಗಳಿದ್ದು, (1 ಲೀಟರ್ 350 ಎಂ.ಎಲ್, ಅದರ ಬೆಲೆ 526/-ರೂಗಳು), ಒಂದು ಲೀಟರ್ ನ ಒಂದು ಖಾಲಿ ಪ್ಲಾಸ್ಟಿಕ್ ವಾಟರ್ ಬಾಟಲ್, 1 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಮತ್ತು 90 ಎಂ.ಎಲ್ ನ ಒಂದು ಖಾಲಿ ಓಲ್ಡ್ ಟಾವೆರ್ನ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಇದ್ದು, ಆರೋಪಿಯನ್ನು ವಶಕ್ಕೆ ಪಡೆದು ಮೇಲ್ಕಂಡ ಮಾಲುಗಳನ್ನು ಪಂಚಾಯ್ತಿದಾರರ ಸಮಕ್ಷಮ ಪಂಚನಾಮೆ ಮೂಲಕ ಬೆಳಿಗ್ಗೆ 10-30 ಗಂಟೆಯಿಂದ 11-15 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡು ಅಸಲು ಪಂಚನಾಮೆ, ಆರೋಪಿ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸೂಕ್ತ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

ಇತ್ತೀಚಿನ ನವೀಕರಣ​ : 15-07-2021 05:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080